Saturday, October 13, 2018

ನಕಲಿ ಚಿನ್ನ ಅಡವಿಟ್ಟು ಮೋಸ
ಮಡಿಕೇರಿಯ ಜಿ.ಟಿ.ರಸ್ತೆಯಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಶಾಖೆಯ ಹಿರಿಯ ವ್ಯವಸ್ಥಾಪಕರಾದ ಗೌರದೇವಿಯವರು ದಿನಾಂಕ 12/09/2018ರಂದು ಚಿನ್ನಾಭರಣ ಸಾಲಗಳಿಗೆ ಸಂಬಂಧಿಸಿದಂತೆ ಚಿನ್ನಾಭರಣಗಳ ಮೌಲ್ಯಮಾಪನವನ್ನು ಮಾಡಿಸುತ್ತಿರುವಾಗ ಒಂದನೇ ಮೊಣ್ಣಂಗೇರಿ ನಿವಾಸಿ ರಾಮ ಮೂರ್ತಿ ಎಂಬವರು ಸುಮಾರು ರೂ.5,34,600/- ರೂಗಳ ಸಾಲಕ್ಕೆ ಅಡವಿಟ್ಟಿದ್ದ ಚಿನ್ನಾಭರಣಗಳ ಪೈಕಿ 129 ಗ್ರಾಂ ತೂಕದ ಒಂದು ಜೋಮಾಲೆ ಸರವು ನಕಲಿಯಾಗಿದ್ದು ಸದ್ರಿ ಚಿನ್ನಾಭರಣಗಳನ್ನು ಮಡಿಕೇರಿಯ ಎ.ವಿ.ಶಾಲೆ ಬಳಿಯ ಕೆ.ಎನ್.ಪ್ರವೀಣ್‌ ಎಂಬವರು ಮೌಲ್ಯ ಮಾಪನ ಮಾಡಿ ಅಸಲಿ ಚಿನ್ನ ಎಂದು ಪ್ರಮಾಣ ಪತ್ರ ನೀಡಿದ್ದು ಇಬ್ಬರೂ ಸೇರಿ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಬ್ಯಾಂಕಿಗೆ ಮೋಸ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
ದಿನಾಂಕ 11/10/2018ರಂದು ಅಮ್ಮತ್ತಿ ನಿವಾಸಿ ಮನೆಯಪಂಡ ಮಧು ಮಾದಪ್ಪ ಎಂಬವರು ಅವರ ಮನೆಯ ಅಂಗಳದಲ್ಲಿ ಅವರ ಚಿಕ್ಕಪ್ಪ ಎಂ.ಎಂ.ಬೆಳ್ಯಪ್ಪ ಮತ್ತು ಚಿಕ್ಕಪ್ಪನ ಮಗ ದೇವಯ್ಯನವರೊಂದಿಗೆ ಮಾತನಾಡುತ್ತಾ ನಿಂತಿರುವಾಗ ಮಧು ಮಾದಪ್ಪರವರ ದೊಡ್ಡಪ್ಪನ ಮಗ ಎಂ.ಜಿ.ಪೊನ್ನಪ್ಪ ಎಂಬವರು ಏಕಾ ಏಕಿ ಅಲ್ಲಿಗೆ ಬಂದು ಮಧು ಮಾದಪ್ಪನವರಿಗೆ ಹೊಡೆದು ಹಲ್ಲೆ ಮಾಡಿದ್ದು ಪತ್ನಿ ಮಕ್ಕಳಿಗೆ ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, October 12, 2018

ವ್ಯಕ್ತಿ ಸಾವು ಪ್ರಕರಣ
ದಿನಾಂಕ 11/10/2018ರಂದು ಅಮ್ಮತ್ತಿ ಬಳಿಯ ಪುಲಿಯೇರಿ ನಿವಾಸಿ ವಿಜೇಶ್ ಎಂಬವರು ಕಾವಾಡಿ ಗ್ರಾಮದ ಐನಂಡ ಪ್ರಕಾಶ್‌ ಎಂಬವರ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ನೀರಿನ ಬಾಟಲಿ ಎಂದು ಭಾವಿಸಿ ಯಾವುದೋ ವಿಷ ದ್ರವವನ್ನು ಸೇವಿಸಿ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ದಿನಾಂಕ 11/10/2018ರಂದು ಮಡಿಕೇರಿ ಬಳಿಯ ಮೇಕೇರಿ ನಿವಾಸಿ ನಾರಾಯಣ ಎಂಬವರು ಮನೆಯಲ್ಲಿ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ನಾರಾಯಣ ಅತೀವ ಮದ್ಯ ವ್ಯಸನಿಯಾಗಿದ್ದು ಮದ್ಯಪಾನದ ಅಮಲಿನಲ್ಲಿ ಯಾವುದೋ ವಿಚಾರಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, October 9, 2018

ವ್ಯಕ್ತಿ ಆತ್ಮಹತ್ಯೆ
ದಿನಾಂಕ 07/10/2018ರಂದು ಕುಶಾಲನಗರ ಸಮೀಪದ ಬಸವನಹಳ್ಳಿ ನಿವಾಸಿ ಭೀಮಯ್ಯ ಎಂಬವರು ವಿಷ ಸೇವಿಸಿ ಮನೆಯ ಬಳಿ ಇರುವ ಚಿಕ್ಲಿಹೊಳೆ ಕಾಲುವೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಮೃತ ಭೀಮಯ್ಯ ಮೂಲತಃ ಸೂರ್ಲಬ್ಬಿ ಗ್ರಾಮದ ನಿವಾಸಿಯಾಗಿದ್ದು ಆಗಸ್ಟ್ ತಿಂಗಳಿನಲ್ಲಿ ಸುರಿದ ಭಾರೀ ಮಳೆಗೆ ಅವರ ಮನೆಗೆ ಹಾನಿಯಾಗಿ ಬಿದ್ದು ಹೋದ ಕಾರಣಕ್ಕೆ ಬಸವನಹಳ್ಳಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರೆನ್ನಲಾಗಿದೆ. ಭಿಮಯ್ಯನವರು ಮಾಡಿದ್ದ ಸಾಲಗಳನ್ನು ತೀರಿಸಲಾಗದೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೆಳೆ ನಾಶ, ಕೊಲೆ ಬೆದರಿಕೆ
ಮಡಿಕೇರಿ ಬಳಿಯ ಬಿಳಿಗೇರಿ ನಿವಾಸಿ ಕೆ.ಬಿ.ರಾಣಿ ಎಂಬವರ ತೋಟಕ್ಕೆ ದಿನಾಂಕ 05/10/2018ರಂದು ಅಚ್ಚಯ್ಯ ಎಂಬವರು ಅಕ್ರಮವಾಗಿ ಪ್ರವೇಶಿಸಿ ರಾಣಿಯವರು ಹಾಕಿದ್ದ ತಂತಿ ಬೇಲಿಯನ್ನು ಕಿತ್ತು, ಕೆಲವು ಕಾಫಿ ಗಿಡಗಳನ್ನು ನಾಶಗೊಳಿಸಿದ್ದು ಈ ಬಗ್ಗೆ ವಿಚಾರಿಸಿದ ರಾಣಿಯವರಿಗೆ ಕತ್ತಿಯಿಂದ ಕಡಿದು ಕೊಲೆ ಮಾಡುವುದಾಗಿ ಬೆದರಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
ದಿನಾಂಕ 07/10/2018ರಂದು ಓಂನಾಥ್ ಶರ್ಮಾ ಎಂಬವರು 1ನೇ ಮೊಣ್ಣಂಗೇರಿ ಗ್ರಾಮದ ತಾಜ್ ರೆಸಾರ್ಟಿನಲ್ಲಿ ಕಾವಲು ಕೆಲಸ ಮಾಡುತ್ತಿರುವಾಗ ಒಂದು ಜೀಪಿನಲ್ಲಿ ಸುಮಾರು 6-7 ಜನರು ಬಂದು ವಿನಾ ಕಾರಣ ಓಂನಾಥ್‌ ಶರ್ಮಾರವರ ಮೇಲೆ ಹಲ್ಲೆ ಮಾಡಿದ್ದು ತಡೆಯಲು ಬಂದ ತೀರ್ಥಕುಮಾರ್ ಎಂಬವರಿಗೂ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬಸ್‌ ಡಿಕ್ಕಿ; ಸಾಕಾನೆ ಸಾವು
ದಿನಾಂಕ 08/10/2018ರಂದು ಬೆಳಗಿನ ಜಾವ ಪೊನ್ನಂಪೇಟೆ ಬಳಿಯ ತಿತಿಮತಿಯಿಂದ ಹುಣಸೂರಿಗೆ ಹೋಗುತ್ತಿದ್ದ ಕೆಎ-01-ಎಇ-7573ರ ಖಾಸಗಿ ಬಸ್ಸನ್ನು ಅದರ ಚಾಲಕ ಕೇರಳದ ನಿವಾಸಿ ಇಸ್ಮಾಯಿಲ್ ನಲಕಾತ್ ಎಂಬವರು ಮತ್ತಿಗೋಡು ಆನೆ ಶಿಬಿರದ ಬಳಿ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಹೋಗಿ ರಸ್ತೆಯ ಬಳಿ ಮೇಯುತ್ತಿದ್ದ ರಂಗ ಎಂಬ ಸಾಕಾನೆಗೆ ಡಿಕ್ಕಿಪಡಿಸಿದ ಪರಿಣಾಮ ಸಾಕಾನೆಯು ಸ್ಥಳದಲ್ಲೇ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, October 7, 2018

ಕಳವು ಪ್ರಕರಣ
ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದ ಕೊಠಡಿಗಳಲ್ಲಿ ಸಂಗ್ರಹಿಸಿಡಲಾಗಿದ್ದ ಸುಮಾರು ರೂ. 15,000/- ಬೆಲೆ ಬಾಳುವ ಕ್ಷ-ಕಿರಣ ಯಂತ್ರದ ಬಿಡಿಭಾಗಗಳನ್ನು ಮತ್ತು ಇತರೆ ಪರಿಕರಗಳನ್ನು ಸುಮಾರು 25 ದಿನಗಳ ಹಿಂದೆ ಯಾರೋ ಕಳವು ಮಾಡಿದ್ದು ಆಸ್ಪತ್ರೆಯ ನೌಕರ ಹರೀಶ್ ಎಂಬಾತನು ಇತರರೊಂದಿಗೆ ಸೇರಿಕೊಂಡು ಈ ಸಾಮಗ್ರಿಗಳನ್ನು ಕಳವು ಮಾಡಿರುವ ಸಂಶಯವಿರುವುದಾಗಿ ಆಸ್ಪತ್ರೆಯ ನಿರ್ದೇಶಕರಾದ ಕಾರ್ಯಪ್ಪ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
ದಿನಾಂಕ 06/10/2018ರಂದು ನಾಪೋಕ್ಲು ಬಳಿಯ ಬಾವಲಿ ಗ್ರಾಮದ ನಿವಾಸಿ ಪಿ.ಪಿ.ಸೋಮಯ್ಯ ಎಂಬ ವ್ಯಕ್ತಿಯು ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತ ಸೋಮಯ್ಯನವರ ಪತ್ನಿ ರುಕ್ಮಿಣಿ ಹಾಗೂ ಮಗ ತೀರ್ಥ ಪ್ರಸಾದ್‌ ಮೃತರಾಗಿದ್ದು ಇದರಿಂದ ಜುಗುಪ್ಸೆಗೊಂಡ ಸೋಮಯ್ಯನವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, October 5, 2018

ಬೈಕಿಗೆ ಕಾರು ಡಿಕ್ಕಿ
ದಿನಾಂಕ 04/10/2018ರಂದು ಸಿದ್ದಾಪುರ ಬಳಿಯ ನೆಲ್ಲಿಹುದಿಕೇರಿ ನಿವಾಸಿ ಥಾಮಸ್ ಡಿಸೋಜಾ ಎಂಬವರು ಅವರ ಬೈಕಿನಲ್ಲಿ ನೆಲ್ಲಿಹುದಿಕೇರಿಯಿಂದ ಮಾಲ್ದಾರೆಗೆ ಹೋಗುತ್ತಿರುವಾಗ ಸಿದ್ದಾಪುರ ನಗರದ ಮಧುರ ಬಟ್ಟೆ ಅಂಗಡಿಯ ಬಳಿ ಎದುರಿನಿಂದ ಒಂದು ಕಾರನ್ನು ಅದರ ಚಾಲಕ ರಾಜ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಥಾಮಸ್ ಡಿಸೋಜಾರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಥಾಮಸ್ ಡಿಸೋಜಾರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಣ ವಂಚನೆ 
ದಿನಾಂಕ 21/09/2018ರಂದು ಸುಂಟಿಕೊಪ್ಪದ ಗುಡ್ಡಪ್ಪ ರೈ ಬಡಾವಣೆ ನಿವಾಸಿ ಸುನಿಲ್ ಎಂಬವರಿಗೆ ಓರ್ವ ಅಪರಿಚಿತ ವ್ಯಕ್ತಿ ಕರೆ ಮಾಡಿ ಅವರ ಎಟಿಎಂ ಕಾರ್ಡ್‌ ಬ್ಲಾಕ್‌ ಆಗಿದ್ದು ಸರಿಪಡಿಸಿಕೊಡವುದಾಗಿ ಹೇಳಿ ಎಟಿಎಂ ನ ಮಾಹಿತಿ ಪಡೆದುಕೊಂಡು ಸುನಿಲ್‌ರವರ ಬ್ಯಾಂಕ್ ಖಾತೆಯಿಂದ ರೂ.20,000/- ಹಣವನ್ನು ಪಡೆದುಕೊಂಡು ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಕಾಣೆ ಪ್ರಕರಣ
ವಿರಾಜಪೇಟೆ ಪಟ್ಟಣದ ನೆಹರುನಗರ ನಿವಾಸಿ ಟಿ.ಎಸ್.ಶಿವ ಎಂಬವರ ಮಗ ಶಶಿ ಎಂಬಾತನು ದಿನಾಂಕ 25/09/2018ರಂದು ಆತನ ಅಣ್ಣನ ಪತ್ನಿ ಆಶಾರವರ ಮನಯಿಂದ ಹೊರಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದು ಇದುವರೆಗೂ ಮರಳಿ ಬಂದಿರುವುದಿಲ್ಲ ಎಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣದ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಚಿನ್ನಾಭರಣ ಕಳವು ಪ್ರಕರಣ
ದಿನಾಂಕ 04/10/2018ರಂದು ವಿರಾಜಪೇಟೆ ನಗರದ ಗಣಪತಿ ದೇವಸ್ಥಾನ ಬಳಿಯ ನಿವಾಸಿ ಎ.ಆರ್.ಕುಸುಮಾ ಎಂಬ ಮಹಿಳೆಯು ಮನೆಯಲ್ಲಿರುವಾಗ ಮೂರು ಜನ ಅಪರಿಚಿತ ಹೆಂಗಸರು ಒಂದು ಮಗುವಿನೊಂದಿಗೆ ಮನೆಗೆ ಬಂದು ಅವರಿಗೆ ತಿನ್ನಲು ಏನಾದರೂ ಕೊಡುವಂತೆ ಬೇಡಿದ್ದು ಕುಸುಮಾರವರು ನಿರಾಕರಿಸಿದಾಗ ಕುಡಿಯಲು ನೀರು ಕೊಡುವಂತೆ ಬೇಡಿದ್ದಾರೆ. ಕುಸುಮಾರವರು ನೀರು ತಂದು ಕೊಡುವಾಗ ನೆಲದ ಮೇಲೆ ಮುಳ್ಳಿನ ನೆಪವೊಡ್ಡಿ ಕುಸುಮಾರವರನ್ನು ಸ್ವಲ್ಪ ಮುಂದಕ್ಕೆ ಕರೆದಿದ್ದು ಕುಸುಮಾರವರು ಇದ್ದಲ್ಲಿಂದ ಮುಂದೆ ಹೋಗಿ ನೀರು ನೀಡಿದ್ದು ಮಹಿಳೆಯರು ನಿಧಾನವಾಗಿ ನೀರು ಕುಡಿದು ಹೋದ ನಂತರ ಕುಸುಮಾರವರು ಮನೆಯೊಳಗೆ ಹೋಗಿ ನೋಡಿದಾಗ ಅವರು ಆಭರಣಗಳನ್ನು ಇಟ್ಟಿದ್ದ ಚೀಲದ ಖಾಲಿ ವ್ಯಾಗ್ ಮೇಜಿನ ಮೇಲಿದ್ದು ಗಾಬರಿಯಿಂದ ಬೀರುವನ್ನು ತೆರೆದು ನೋಡಿದಾಗ ಅದರೊಳಗಿಟ್ಟಿದ್ದ ಸುಮಾರು 2,00,000/- ಮೌಲ್ಯದ 92 ಗ್ರಾಂ ಚಿನ್ನಾಭರಣಗಳು ಕಳವಾಗಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, October 3, 2018

ವ್ಯಕ್ತಿ ಆತ್ಮಹತ್ಯೆ
ದಿನಾಂಕ 01/10/2018ರಂದು ಸಿದ್ದಾಪುರ ಬಳಿಯ ಮೂಲೆತೋಡು ನಿವಾಸಿ ಸಿ.ಎನ್.ಚಂದ್ರ ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಮೃತ ಚಂದ್ರರವರು ಹಲವಾರು ವರ್ಷದಿಂದ ಎದೆನೋವಿನಿಂದ ಬಳಲುತ್ತಿದ್ದರೆಂದು ದೂರು ನೀಡಲಾಗಿದೆ. ಘಟನೆ ಸಂಬಂಧ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ
ದಿನಾಂಕ 01/10/2018ರಂದು ಕೊಟ್ಟಮುಡಿ ನಿವಾಸಿ ಕೆ.ಎ.ಖಾಸ್ಮಿ ಅಹಮದ್ ಎಂಬವರು ನಾಪೋಕ್ಲು ಸಮೀಪದ ಚೋನಕೆರೆ ಬಳಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಬಲ್ಲಮಾವಟಿ ನಿವಾಸಿ ಮಂಜು ಎಂಬಾತನು ಆತನ ಮೋಟಾರು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕೆ.ಎ.ಖಾಸ್ಮಿ ಅಹಮದ್‌ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾಸ್ಮಿ ಅಹಮದ್‌‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮದ್ಯ ಮಾರಾಟ ಪತ್ತೆ
ದಿನಾಂಕ 02/10/2018ರಂದು ಪೊನ್ನಂಪೇಟೆ ಬಳಿಯ ಶಿವಶಕ್ತಿ ಲಾಡ್ಜ್ ಬಳಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವಾಗಿ ದೊರೆತ ಸುಳೀವಿನ ಮೇರೆಗೆ ಪೊನ್ನಂಪೇಟೆ ಪಿಎಸ್‌ಐ ಬಿ.ಜಿ.ಕುಮಾರ್‌ರವರು ಸಿಬ್ಬಂದಿಗಳೊಂದಿಗೆ ಧಾಳಿ ನಡೆಸಿ ಹೆಚ್‌.ಎಸ್.ಅಣ್ಣಪ್ಪ ಎಂಬವರು ಸರ್ಕಾರದ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಸುಮಾರು ರೂ.1,152/- ಬೆಲೆಯ ಮದ್ಯವನ್ನು ವಶಪಡಿಸಿಕೊಂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, September 28, 2018

ರಸ್ತೆ ಅಪಘಾತ
ದಿನಾಂಕ 26/09/2018ರಂದು ಸಂಪಾಜೆ ಬಳಿಯ ಕೊಯನಾಡು ಗ್ರಾಮದ ರಸ್ತೆಯಲ್ಲಿ ಕೆಎ-19-ಎಂಬಿ-3211ರ ಸಂಖ್ಯೆಯ ಕಾರನ್ನು ಅದರ ಚಾಲಕ ಮಡಿಕೇರಿ ಕಡೆಯಿಂದ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಸ್ತೆ ಬದಿಯ ಮೋರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಸಂಪೂರ್ಣ ಸುಟ್ಟು ಹೋಗಿ ಗಾಯಾಳು ಚಾಲಕನನ್ನು ಸಾರ್ವಜನಿಕರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪಾದಚಾರಿಗೆ ಸ್ಕೂಟರ್ ಡಿಕ್ಕಿ
ದಿನಾಂಕ 26/09/2018ರಂದು ಮಡಿಕೇರಿ ನಗರದ ಸುಬ್ರಮಣ್ಯ ನಗರ ನಿವಾಸಿ ಕೆ.ಎಂ.ರಾಜು ಎಂಬವರು ನಗರದ ಪತ್ರಿಕಾ ಭವನದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಒಂದು ಸ್ಕೂಟರ್ ಅನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕೆ.ಎಂ.ರಾಜುರವರಿಗೆ ಡಿಕ್ಕಿಪಡಿಸಿ ನಿಲ್ಲಿಸದೆ ಹೋಗಿದ್ದು ರಾಜುರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಸ್ಕೂಟರಿಗೆ ಕಾರು ಡಿಕ್ಕಿ
ದಿನಾಂಕ 23/09/2018ರಂದು ವಿರಾಜಪೇಟೆ ಬಳಿಯ ಕದನೂರು ನಿವಾಸಿ ಪಿ.ಸಿ.ನಾಣಯ್ಯ ಎಂಬವರು ಅವರ ಸ್ಕೂಟರಿನಲ್ಲಿ ಕೈಕೇರಿಗೆ ಹೋಗುತ್ತಿರುವಾಗ ಮುಂದೆ ಹೋಗುತ್ತಿದ್ದ ಒಂದು ಟಾಟಾ ಸುಮೋ ಕಾರಿನ ಚಾಲಕನು ಯಾವುದೇ ಸೂಚನೆ ನೀಡದೆ ಏಕಾ ಏಕಿ ಬ್ರೇಕ್ ಹಾಕಿ ಕಾರನ್ನು ನಿಲ್ಲಿಸಿದ ಪರಿಣಾಮ ಹಿಂದೆ ಹೋಗುತ್ತಿದ್ದ ನಾಣಯ್ಯನವರ ಸ್ಕೂಟರ್ ಕಾರಿಗೆ ಡಿಕ್ಕಿಯಾಗಿ ನಾಣಯ್ಯನವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.