Sunday, October 31, 2010

ವ್ಯಕ್ತಿ ಕಾಣೆ, ಪ್ರಕರಣ ದಾಖಲು
 • ಕೆಲಸಕ್ಕೆಂದು ಹೋದ ವ್ಯಕ್ತಿಯೋರ್ವ ಮನೆಗೆ ಹಿಂದಿರುಗದೆ ಕಾಣೆಯಾದ ಪ್ರಕರಣ ವಿರಾಜಪೇಟೆ ಠಾಣೆಯಲ್ಲಿ ನಿನ್ನೆ ದಿನ ದಾಖಲಾಗಿದೆ. ದಿನಾಂಕ 06/10/2010ರಂದು ವಿರಾಜಪೇಟೆಯ ನೆಹರು ನಗರ ನಿವಾಸಿ ಗಣೇಶ ಎಂಬಾತನು ಎಂದಿನಂತೆ ಗಾರೆ ಕೆಲಸಕ್ಕೆಂದು ಹೋಗಿ ವಾಪಾಸು ಮನೆಗೆ ಬಾರದಿದ್ದು, ಇಷ್ಟು ದಿನ ಎಲ್ಲಿ ಹುಡುಕಿದರೂ ಪತ್ತೆಯಾಗಿರುವುದಿಲ್ಲ ಎಂದು ಆತನ ಪತ್ನಿ ಸಿನಿ ಎಂಬವಳು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ, ಜೀವ ಬೆದರಿಕೆ

 • ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ನಲ್ವತೊಕ್ಲು ಗ್ರಾಮದಲ್ಲಿ ನಡೆದಿದೆ. ದಿನಾಂಕ 30/10/2010ರಂದು ಸಂಜೆ ನಲ್ವತೊಕ್ಲು ಗ್ರಾಮದ ವಾಟೇರಿರ ಬೋಪಣ್ಣ ಎಂಬವರು ಅಂಗಡಿಗೆ ಹೋಗುತ್ತಿದ್ದಾಗ ಅದೇ ಗ್ರಾಮದ ರಿಯಾಜ್ ಎಂಬಾತನು ದಾರಿ ತಡೆದು ವಿನಾ ಕಾರಣ ಅಶ್ಲೀಲ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುವ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, October 30, 2010

ಶಾಲೆಗೆ ಹೋದ ಹುಡುಗ ಕಾಣೆ
 • ಶಾಲೆಗೆಂದು ಹೋದ ಹುಡುಗನೋರ್ವ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಕುಶಾಲನಗರ ಠಾಣಾ ವ್ಯಾಪ್ತಿಯ ಕೂಡು ಮಂಗಳೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 28/10/2010 ರಂದು ಕೂಡು ಮಂಗಳೂರು ಗ್ರಾಮದ ಚಂದ್ರ ಶೇಖರ್ ಎಂಬವರ ಮಗ 16 ವರ್ಷ ಪ್ರಾಯದ ನವೀನ್ ಕುಮಾರ್ ಎಂಬವನು ಶಾಲೆಗೆ ಹೋಗಿ ಬರುವುದಾಗಿ ಕುಶಾಲನಗರಕ್ಕೆ ಹೋಗಿದ್ದು ವಾಪಾಸು ಬಾರದ ಕಾರಣ ನೆಂಟರಿಷ್ಟರಲ್ಲಿ ವಿಚಾರಿಸಿ ಪತ್ತೆಯಾಗದ ಬಗ್ಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.

ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ

 • ಮದ್ಯ ವ್ಯಸನಿ ವ್ಯಕ್ತಿಯೋರ್ವ ಜೀವನದಲ್ಲಿ ಜುಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಪೋಕ್ಲು ಠಾಣಾ ವ್ಯಾಪ್ತಿಯ ಚೋನಕೆರೆಯಲ್ಲಿ ನಡೆದಿದೆ. ಚೋನಕೆರೆಯ ಬಿ.ಎಂ.ಮಹೇಶ ಎಂಬಾತ ವಿಪರೀತ ಮದ್ಯವ್ಯಸನಿಯಾಗಿದ್ದು, ಮದ್ಯಪಾನ ಮಾಡಿ ಮನೆಯಲ್ಲಿ ಜಗಳವಾಡುವ ಅಭ್ಯಾಸವಿದ್ದು, ದಿನಾಂಕ 29/10/2010ರಂದು ಎಂದಿನಂತೆ ಕೂಲಿ ಕೆಲಸ ಮುಗಿಸಿ ಮದ್ಯಪಾನ ಮಾಡಿ ಮನೆಗೆ ಬಂದಿದ್ದು ಮಾರನೆ ದಿನ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದು, ಮನೆಯ ಪಕ್ಕದ ಕಾಡು ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ

Friday, October 29, 2010

ಜೀವನದಲ್ಲಿ ಜಿಗುಪ್ಸೆಗೊಂಡು ಮಹಿಳೆಯ ಆತ್ಮಹತ್ಯೆ:

ದಿನಾಂಕ 28-10-2010 ರಂದು ವಿರಾಜಪೇಟೆ ನಗರದ ಅಯ್ಯಪ್ಪಸ್ವಾಮಿ ರಸ್ತೆ ನಿವಾಸಿ ಎನ್‌.ಎಂ. ಮುತ್ತಪ್ಪ ಇವರ ಪತ್ನಿ ಶ್ರೀಮತಿ ಕಮಲ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆಯ ಪತಿ ಮುತ್ತಪ್ಪನವರು ನೀಡಿದ ದೂರಿನನ್ವಯ ವಿರಾಜಪೇಟೆ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಮದುವೆಯಾಗುವುದಾಗಿ ನಂಬಿಸಿ ವಂಚನೆ, ಪ್ರಕರಣ ದಾಖಲು:

ಮದುವೆಯಾಗುವುದಾಗಿ ನಂಬಿಸಿ ಹಣಪಡೆದು ನಂತರ ಮದುವೆಯಾಗದೆ ವಂಚಿಸಿರುವ ಪ್ರಕರಣ ಸೋಮವಾರಪೇಟೆ ಠಾಣೆಯಲ್ಲಿ ವರದಿಯಾಗಿರುತ್ತದೆ. ಹಾವೇರಿ ಜಿಲ್ಲೆ, ಹಾನಗಲ್ಲು ತಾಲೋಕು ಅಕ್ಕಿಹಾಲೂರು ಗ್ರಾಮದ ಆರೋಪಿ 1ನೇ ಸಂತೋಷ್‌ ಕುಮಾರ್‌ರವರು ಸೋಮವಾರಪೇಟೆಯ ಕಿರಗಂದೂರು ಗ್ರಾಮದ ವಾಸಿ ಫಿರ್ಯಾದಿ ಓ.ಬಿ. ಕಾಳಪ್ಪನವರ ಮಗಳಾದ ಸ್ಮಿತಾರವರನ್ನು 2ನೇ ಆರೋಪಿ ವಿದ್ಯಾರವರ ಮುಂದಾಳುತನದಲ್ಲಿ ಮದುವೆಗೆ ರೂ.2 ಲಕ್ಷಗಳನ್ನು ಪಡೆಯುವ ಮೂಲಕ ಒಪ್ಪಿಸಿ ಕೊನೆಗೆ ಫಿರ್ಯಾದಿಯ ಮಗಳಾದ ಸ್ಮಿತಾಳನ್ನು ಮದುವೆಯಾಗಲು ನಿರಾಕರಿಸಿದ್ದೂ ಅಲ್ಲದೆ 2ಲಕ್ಷ ರೂಗಳನ್ನು ಸಹ ವಾಪಾಸ್ಸು ಕೊಡದೆ ವಂಚಿಸಿರುವುದಾಗಿ ನೀಡಿದ ದೂರಿನನ್ವಯ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿರುತ್ತದೆ.

ಅಕ್ರಮ ಪ್ರವೇಶಮಾಡಿ ಬೆಳೆ ನಾಶ, ಪ್ರಕರಣ ದಾಖಲು

ದಿನಾಂಕ 27-10-2010 ರಂದು ಸಮಯ 14-30 ಗಂಟೆಗೆ ಫಿರ್ಯಾದಿ ಮೇಚಂಡ ಎಂ ಡಾಲಿ, ಕುಂಜಿಲ ಗ್ರಾಮ ಇವರ ಕಾಫಿ ತೋಟಕ್ಕೆ ಆರೋಪಿಗಳಾದ ಮೇಚಂಡ ಅಚ್ಚಯ್ಯ, ಮೇಚಂಡ ಕಿರಣ್‌ ಮತ್ತು ಮೇಷಂಡ ಚೇತನ್‌ (ಎಲ್ಲರೂ ಕುಂಜಿಲ ಗ್ರಾಮ ವಾಸಿಗಳು) ಸೇರಿಕೊಂಡು ಅಕ್ರಮ ಪ್ರವೇಶ ಮಾಡಿ ಸುಮಾರು 10 ಫಸಲಿರುವ ಕಾಫಿ ಗಿಡಗಳನ್ನು ಬುಡಸಮೇತ ಕತ್ತರಿಸಿದ್ದು ಅಲ್ಲದೆ ಸುಮಾರು 140 ಕಾಫಿ ಗಿಡಗಳ ರೆಂಬೆಗಳನ್ನು ಕತ್ತರಿಸುವ ಮೂಲಕ ಸುಮಾರು ರೂ 70,000/- ರಷ್ಟು ನಷ್ಟ ಪಡಿಸಿರುವುದಾಗಿ ದೂರು ನೀಡಿದ್ದು, ಅದರ ಮೇರೆಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿರುತ್ತದೆ.

ಅತ್ಯಾಚಾರ ಪ್ರಕರಣ:

ದಿನಾಂಕ 27-10-2010 ರಂದು ಫಿರ್ಯಾದಿ ಶ್ರೀಮತಿ ಪೂವಮ್ಮ ಎಂಬವರು ತಮ್ಮ ಮನೆಯಲ್ಲಿ ಬಟ್ಟೆಗಳನ್ನು ಬದಲಿಸುವ ಸಮಯದಲ್ಲಿ ಆರೋಪಿ ನಾಣಯ್ಯ ಎಂಬ ವ್ಯಕ್ತಿ ಆಕೆಯನ್ನು ಹಿಡಿದು ಅತ್ಯಾಚಾರ ಮಾಡಿರುವುದಾಗಿ ದೂರು ನೀಡುದ್ದು, ಭಾಗಮಂಡಲ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

Thursday, October 28, 2010

ಅಕ್ರಮಕೂಟ ಸೇರಿ ವ್ಯಕ್ತಿಯೋರ್ವರ ಕೊಲೆ ಬೆದರಿಕೆ, ಪ್ರಕರಣದ ದಾಖಲು:

ದಿನಾಂಕ 26-10-2010 ರಂದು ರಾತ್ರಿ 9-00 ಗಂಟೆಗೆ ವಿರಾಜಪೇಟೆ ನಗರದ ಮುಖ್ಯ ರಸ್ತೆಯಲ್ಲಿ ಆರೋಪಿಗಳಾದ ನೌಷದ್‌, ಇಬ್ರಾಹಿಂ, ಅಶ್ರಫ್‌, ಅಬ್ದುಲ್‌, ರೆಹಮಾನ್‌, ನೌಪಾಲ್‌ ಗಾಂಧಿನಗರ, ಜಮ್ಮಶೀರ್‌ ಗುಂಡಿಕೆಗೆ, ಅಫರವ್‌, ಸಲಾಮ್‌, ರಫೀಕ್‌ ಅಫ್‌ಪಾಖ್‌ ಮತ್ತು ಇತರೆ 50 ಜನ ಅಕ್ರಮಕೂಟ ಸೇರಿಕೊಂಡು ವಾಹನಗಳಲ್ಲಿ ಕಬ್ಬಿಣದ ಸಲಾಕೆ, ಕಲ್ಲು, ದೊಣ್ಣೆ , ಕತ್ತಿ ಲಾಂಗು ಹಿಡಿದುಕೊಂಡು ಫಿರ್ಯಾದಿ ಡಿ.ಎಂ. ಪಾರೂಖ್‌ ರಹೀಂ, ವ್ಯಾಪಾರ ಕೆಲಸ, ಮುಖ್ಯ ರಸ್ತೆ ವಿರಾಜಪೇಟೆ ನಗರ ಇವರ ಮನೆಯ ಹತ್ತಿರ ಬಂದು ಗಲಾಟೆ ಮಾಡಿ ಕೊಲೆಬೆದರಿಕೆ ಹಾಕಿದ್ದು ಈ ಬಗ್ಗೆ ಫಿರ್ಯಾದಿಯವರು ನೀಡಿದ ದೂರಿನನ್ವಯ ವಿರಾಜಪೇಟೆ ನಗರ ಪೊಲೀಸರು ಠಾಣೆಯಲ್ಲಿ ದೂರು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

ಮನೆ ಬೀಗ ಮುರಿದು 22,000 ರೂ. ಬೆಲೆಬಾಳುವ ಸಾಮಾಗ್ರಿ ಕಳವು:

ಫಿರ್ಯಾದಿ ಕೋಟೆರ ಕಾರ್ಯಪ್ಪ, ಮೂರ್ನಾಡು ಬಾಡಗ ಗ್ರಾಮ ಇವರು ತಮಗೆ ಸೇರಿದ ಕದನೂರು ಬೋಯಿಕೇರಿ ಗ್ರಾಮದಲ್ಲಿರುವ ಮನೆಗೆ ಯಾರೋಕಳ್ಳರು ಬಾಗಿಲು ಮುರಿದು ಒಳಗೆ ಪ್ರವೇಶಿಸಿ ಮನೆಯೊಳಗಿದ್ದ ರೂ. 22,000 ಬೆಲೆಬಾಳುವ ಮನೆ ಸಾಮಾಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನನ್ವಯ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂದು ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ.

(1) ದಿನಾಂಕ 12-10-2010 ರಂದು ಸುಂಟಿಕೊಪ್ಪದ ಅತ್ತೂರು ನಲ್ಲೂಲು ಗ್ರಾಮದಲ್ಲಿ ವಾಸವಾಗಿದ್ದ ವ್ಯಕ್ತಿ ಆರ್‌ ರಮೇಶ್‌ ಇವರು ಮನೆಯಿಂದ ಕೆಲಸಕ್ಕೆಂದು ಹೋದವರು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ಅವರ ಪತ್ನಿ ಶ್ರೀಮತಿ ಎ, ಅಶ್ವಿನಿ ಇವರು ನೀಡಿದ ದೂರಿನನ್ವಯ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

(2) 15 ವರ್ಷ ಪ್ರಾಯದ ಹುಡುಗಿ ಕಾಣೆ, ಪ್ರಕರಣದ ದಾಖಲು: ದಿನಾಂಕ 12-10-2010 ರಂದು ಪೊನ್ನಂಪೇಟೆ, ತೋರೆಬೀದಿಯಲ್ಲಿ ವಾಸವಾಗಿರುವ ಹೆಚ್‌.ಟಿ, ಸುರೇಶ ರವರ ಮಗಳಾದ 15 ವರ್ಷ ಪ್ರಾಯದ ಪೂಜಾ ಎಂದಿನಂತೆ ಮನೆಯಲ್ಲಿದ್ದವಳು ಸಾಯಂಕಾಲ ಆಕೆಯ ತಂದೆ ಯವರು ಬಂದು ನೋಡಿದಾಗ ಆಕೆ ಮನೆಯಲ್ಲಿರದ ಬಗ್ಗೆ ತಿಳಿದು ವಿಚಾರಿಸಿದಾದ ಪಕ್ಕದ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಹೋದವಳು ಮತ್ತೆ ಮನೆಗೆ ಬಾರದೇ ಕಾಣೆಯಾಗಿರುವುದಾಗಿ ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Tuesday, October 26, 2010

ಅಪರಿಚಿತ ವ್ಯಕ್ತಿಯ ಶವ ಪತ್ತೆ.

 • ಅಪರಿಚಿತ ವ್ಯಕ್ತಿಯ ಶವವೊಂದು ಈ ದಿನ ಗೋಣಿಕೊಪ್ಪ ನಗರದಲ್ಲಿ ಪತ್ತೆಯಾಗಿದೆ. ಗೋಣಿಕೊಪ್ಪ ನಗರದ ಫೆಡರೇಷನ್ ಕಟ್ಟಡದ ವೆರಾಂಡದಲ್ಲಿ ಅಪರಿಚಿತಿ ವ್ಯಕ್ತಿಯೋರ್ವನು ಮೃತಪಟ್ಟಿರುವುದಾಗಿ ಫೆಡರೇಷನ್ ಉದ್ಯೋಗಿ ಹೆಚ್.ಬಿ.ಉತ್ತಪ್ಪ ಎಂಬವರು ನೀಡಿದ ದೂರಿನನ್ವಯ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಪತಿಯಿಂದ ಪತ್ನಿಯ ಮೇಲೆ ಹಲ್ಲೆ

 • ವಿನಾ ಕಾರಣ ಮಹಿಳೆಯೋರ್ವರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿರುವ ಘಟನೆ ನಾಪೋಕ್ಲು ಠಾಣಾ ವ್ಯಾಪ್ತಿಯ ಬಲ್ಲಮಾವಟಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 25/10/2010 ರಂದು ಬಲ್ಲಮಾವಟಿ ಗ್ರಾಮದ ನಿವಾಸಿ ಕುಮಾರ ಎಂಬಾತನು ವಿನಾ ಕಾರಣ ತನ್ನ ಪತ್ನಿ ಪ್ರೇಮಾ ಎಂಬಾಕೆಯೊಡನೆ ಜಗಳವಾಡಿ ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ವಾಹನ ಅಫಘಾತ, ಗಾಯ

 • ಅಜಾಗರೂಕತೆಯ ವಾಹನ ಚಾಲನೆಯಿಂದ ವಾಹನ ಅಫಘಾತಕ್ಕೊಳಗಾದ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ತಿತಿಮತಿ ಗ್ರಾಮದ ಮತ್ತಿಗೋಡುವಿನಲ್ಲಿ ನಡೆದಿದೆ. ದಿನಾಂಕ 25/10/2010ರಂದು ಬೆಂಗಳೂರು ನಿವಾಸಿ ದಿಲೀಪ್‌ಕುಮಾರ್‌ ಎಂಬವರು ತಮ್ಮ ಮಾಲೀಕರಾದ ಸರೋಜ ಮತ್ತು ಕುಟುಂಬದವರೊಂದಿಗೆ ಕೆಎ-02-ಎಂಬಿ-3179ರ ಕಾರಿನಲ್ಲಿ ಪೊನ್ನಂಪೇಟೆಯಲ್ಲಿ ಮದುವೆ ಸಮಾರಂಭಕ್ಕೆ ಬರುತ್ತಿರುವಾಗ ಮತ್ತಿಗೋಡು ಬಳಿ ಹಿಂದಿನಿಂದ ಓರ್ವ ಮಾರುತಿ ವ್ಯಾನು ಚಾಲಕನು ತನ್ನ ಮಾರುತಿ ವ್ಯಾನು ಸಂ.ಕೆಎ-12-ಎನ್-7050ನ್ನು ಅತಿ ವೇಗ ಮತ್ತು ಅಜಾಗರೂಕತೆಯಿಮದ ಚಾಲಿಸಿ ಮುಂದೆ ಹೋಗುತ್ತಿದ್ದ ದಿಲೀಪ್‌ ಕುಮಾರ್‌ರವರ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರಿನಲ್ಲಿದ್ದ ದಿಲೀಪ್ ಕುಮಾರ್, ಸರೋಜ, ಅಕ್ಷಯ್, ಕಾರ್ಯಪ್ಪನವರಿಗೆ ಗಾಯಗಳಾಗಿದ್ದು, ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹುಡುಗಿ ಕಾಣೆ, ಪ್ರಕರಣ ದಾಖಲು

 • ಶೌಚಕ್ಕೆಂದು ತೆರಳಿದ ಹುಡುಗಿಯೋರ್ವಳು ಮನೆಯಿಂದ ನಾಪತ್ತೆಯಾದ ಪ್ರಕರಣ ಭಾಗಮಂಡಲ ಠಾಣಾ ವ್ಯಾಪ್ತಿಯ ಚೇರಂಗಾಲ ಗ್ರಾಮದಲ್ಲಿ ದಿ.24/10/2010ರಂದು ವರದಿಯಾಗಿದೆ. ಭಾಗಮಂಡಲದ ಚೇರಂಗಾಲ ಗ್ರಾಮದ ಪರಿವಾರ ಜಯಂತಿ ಎಂಬವರ ಮಗಳು 18 ವರ್ಷ ಪ್ರಾಯದ ಲಿಪಿಕಾ ಎಂಬಾಕೆಯು ದಿನಾಂಕ 24/10/2010ರ ರಾತ್ರಿ 9:30 ಗಂಟೆಯ ವೇಳೆಗೆ ಶೌಚಾಲಯಕ್ಕೆಂದು ಮನೆಯಿಂದ ಹೋದವಳು ಮರಳಿ ಬಾರದಿದ್ದು, ನೆರೆಹೊರೆಯವರಲ್ಲಿ ವಿಚಾರಿಸಿ ಪತ್ತೆಯಾಗದ ಕಾರಣ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Monday, October 25, 2010

ಸ್ಕೂಟರ್ ಕಳವು, ಪ್ರಕರಣ ದಾಖಲು
 • ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಸ್ಕೂಟರನ್ನು ಕಳವು ಮಾಡಿದ ಘಟನೆ ಪೊನ್ನಂಪೇಟೆ ಠಾಣಾ ಸರಹದ್ದಿನ ಕೋಟೂರು ಗ್ರಾಮದಲ್ಲಿ ಈ ದಿನ ನಡೆದಿದೆ. ಈ ದಿನ ದಿ.25/10/2010ರಂದು ಫಿರ್ಯಾದಿ ಎಂ.ಕೆ.ಮಾಚಯ್ಯನವರ ಮಾವನವರು ಕೋಟೂರು ಗ್ರಾಮದ ತಮ್ಮ ತೋಟದಲ್ಲಿ ಕೆಲಸ ಮಾಡಿಕೊಂಡಿರುವಾಗ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಯುಪಿ-14-ಡಿ-5905ರ ಬಜಾಜ್ ಸ್ಕೂಟರನ್ನು ಯಾರೋ ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ತಂದೆಯನ್ನು ಕತ್ತಿಯಿಂದ ಕಡಿದು ಕೊಲೆ.

 • ಕ್ಷುಲ್ಲಕ ಕಾರಣಕ್ಕೆ ತಂದೆಯನ್ನೇ ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಇಬ್ನಿವಳವಾಡಿ ಗ್ರಾಮದ ನೀರುಕೊಲ್ಲಿಯಲ್ಲಿ ದಿನಾಂಕ 24/10/2010ರಂದು ನಡೆದಿದೆ. ಗ್ರಾಮದ ನೀರುಕೊಲ್ಲಿಯ ನಿವಾಸಿ ರಘು ಎಂಬವರು ತಮ್ಮ ಪತ್ನಿಯೊಂದಿಗೆ ವಾಸವಿದ್ದು, ನಿನ್ನೆ ದಿನ ರಘುರವರ ಪತ್ನಿ ತನ್ನ ತವರು ಮನೆಗೆ ಹೋದ ಬಗ್ಗೆ ವಿಚಾರಿಸಿದ ತನ್ನ ತಂದೆ ಕಲ್ಲಳರವರನ್ನು ರಘು ಕತ್ತಿಯಿಂದ ಕಡಿದು ಕೊಲೆ ಮಾಡಿರುವುದಾಗಿ ಆರೋಪಿ ರಘುವಿನ ತಮ್ಮ ಚಂದ್ರರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, October 24, 2010

PÀ¼ÀîvÀ£À ¥ÀæPÀgÀt:
¢£ÁAPÀ 22-10-10 gÀAzÀÄ ¸ÀªÀÄAiÀÄ 12-00 UÀAmÉUÉ ¦gÁå¢ PÉ.J¸ï.ªÀiÁZÀAiÀÄå vÀAzÉ PÉ.JA.¸ÉÆêÀÄAiÀÄå, dA§ÆgÀÄ vÉÆÃl, dA§ÆgÀÄ UÁæªÀÄ, ¸ÉÆêÀĪÁgÀ¥ÉÃmÉ EªÀgÀÄ MAzÀÄ zÀÆgÀ£ÀÄß ¤Ãr, dA§ÆgÀÄ vÉÆÃlzÀ ¨ÁèPï £ÀA-14 gÀ°è ¸ÀĪÀiÁgÀÄ 10 vÁvÁÌ°PÀ ¯ÉÊ£ï ªÀÄ£ÉUÀ½zÀÄÝ PÁ¦ü PÀÄAiÀÄÄåªÀ ¸ÀªÀÄAiÀÄzÀ°è ºÉÆgÀV¤AzÀ §AzÀAvÀºÀ PÉ®¸ÀUÁgÀgÀÄ ¸À¢æ ªÀÄ£ÉUÀ¼À°è ªÁ¹¸ÀÄwÛgÀĪÀÅzÁVzÉ. ¸À¢æ ¯ÉÊ£ï ªÀÄ£ÉUÀ¼ÀÄ ºÁ° SÁ°AiÀiÁVzÀÄÝ ¢: 22-10-10 gÀ »A¢£À ¢£ÀUÀ¼À°è AiÀiÁgÉÆà PÀ¼ÀîgÀÄ ¸À¢æ ªÀÄ£ÉUÀ½UÉ C¼ÀªÀr¹zÀÝ ¹®égï ªÀÄgÀzÀ ºÀ®UÉUÀ¼À£ÀÄß PÀ¼ÀªÀÅ ªÀiÁrzÀÄÝ, CªÀgÀ «gÀÄzÀÝ ¸ÀÆPÀÛ PÀæªÀÄ dgÀÄV¸À¨ÉÃPÁV zÀÆj£À°è PÉÆÃjgÀÄvÁÛgÉ. CzÀgÀAzÀ ¸ÉÆêÀĪÁgÀ¥ÉÃmÉ oÁuÉAiÀįÉæè ¥ÀæPÀgÀtªÀ£ÀÄß zÁR°¹ ªÀÄÄA¢£À PÀæªÀÄ dgÀÄV¹¸À¯ÁVzÉ.
gÀ¸ÉÛ C¥ÀWÁvÀ ¥ÀæPÀgÀt:
¢£ÁAPÀ 04-09-2010 gÀAzÀÄ ¦gÁå¢ JA.©. zsÀªÀÄð¥Àà, vÀAzÉ J.PÉ. §¸ÀªÀgÁd¥Àà, ªÀÄtUÀ° UÁæªÀÄ, PÉÆrè¥ÉÃmÉ. gÀªÀgÀÄ ²gÀAUÁ® UÁæªÀÄzÀ gÀ¸ÉÛ §¢AiÀÄ°è ¤AwgÀĪÁUÉÎ, PÉJ-12, JA-4862 gÀ fÃ¥À£ÀÄß CzÀgÀ ZÁ®PÀ Cw ªÉÃUÀ ªÀÄvÀÄÛ CeÁUÀgÀÆPÀvɬÄAzÀ ZÁ°¹PÉÆAqÀÄ §AzÀÄ ¦gÁå¢AiÀĪÀjUÉ rQÌ¥Àr¹zÀ ¥ÀjuÁªÀÄ ¦gÁå¢AiÀĪÀjUÉ UÁAiÀÄUÀ¼ÁVgÀĪÀÅzÁV E°èAiÀĪÀgÉUÉ D¸ÀàvÉæAiÀÄ°è aQvÉì ¥ÀqÉAiÀÄÄwÛzÀÄÝzÀjAzÀ FUÀ CAZÉAiÀÄ ªÀÄÆ®PÀ gÀªÁ¤¹zÀ ¥ÀÄPÁgÀ£ÀÄß ±À¤ªÁgÀ¸ÀAvÉ ¥ÉưøÀgÀÄ ¥ÀæPÀgÀtªÀ£ÀÄß zÁR°¹ ªÀÄÄA¢£À PÀgÀªÀÄ dgÀÄV¹gÀÄvÁÛgÉ.

Saturday, October 23, 2010

C¥ÀWÁvÀ ¥ÀæPÀgÀt:
¢£ÁAPÀ : 04-09-2010 gÀAzÀÄ ¦gÁå¢ JA.©. zsÀªÀÄð¥Àà, vÀAzÉ J.PÉ. §¸ÀªÀgÁd¥Àà, ªÀÄtUÀ° UÁæªÀÄ, PÉÆrè¥ÉÃmÉ AiÀĪÀgÀÄ ²gÀAUÁ® UÁæªÀÄzÀ gÀ¸ÉÛ §¢AiÀÄ°è ¤AwgÀĪÁUÉÎ, PÉJ-12, JA-4862 gÀ fÃ¥À£ÀÄß CzÀgÀ ZÁ®PÀ ¥ÀÄlÖ¸Áé«Ä,Cw ªÉÃUÀ ªÀÄvÀÄÛ CeÁUÀgÀÆPÀvɬÄAzÀ ZÁ°¹PÉÆAqÀÄ §AzÀÄ ¦gÁå¢AiÀĪÀjUÉ rQÌ¥Àr¹zÀ ¥ÀjuÁªÀÄ ¦gÁå¢AiÀĪÀjUÉ UÁAiÀÄUÀ¼ÁVgÀĪÀÅzÁV E°èAiÀĪÀgÉUÉ D¸ÀàvÉæAiÀÄ°è aQvÉì ¥ÀqÉAiÀÄÄwÛzÀÄÝzÀjAzÀ FUÀ CAZÉAiÀÄ ªÀÄÆ®PÀ gÀªÁ¤¹zÀ ¥ÀÄPÁgÀ£ÀÄß ±À¤ªÁgÀ¸ÀAvÉ oÁuÉAiÀÄ°è ºÉÆA¢PÉÆAqÀÄ vÀAiÀiÁj¹zÀ ¥Àæ.ªÀ. ªÀgÀ¢.

zÁj vÀqÉzÀÄ ªÀåQÛMLªÀðgÀ ªÉÄÃ¯É ºÀ¯Éè, ¥ÀæPÀgÀt zÁR®Ä:
¢£ÁAPÀ 23/10/2010 gÀAzÀÄ ¦AiÀiÁð¢ü ºÀjd£ÀgÀ .PÉ.gÁªÀÄÄ vÀAzÉ PÀjAiÀÄ 32 ªÀµÀð ºÉªÀiÁäqÀÄ ¥ÉʸÁj ¨É¼ÀÆîgÀÄ , «gÁd¥sÉÃmÉ ¥ÉÆ£ÀßA¥ÉÃmÉ ªÀiÁ£Àå £ÁåAiÀiÁ®AiÀÄzÀ°è PÉøÀ£ÀÄß ªÀÄÄV¹PÉÆAqÀÄ ªÁ¥À¸ÀÄì §gÀÄwÛgÀĪÁUÉÎ ¸ÀªÀÄAiÀÄ 12.15 UÀAmÉUÉ ©.ºÉZï.J¯ï PÀlÖqÀzÀ ºÀwÛgÀzÀ gÀ¸ÉÛAiÀÄ°è PÀȵÀÚ¥Àà ¨É¼ÀÆîgÀÄ «gÁd¥ÉÃmÉ DgÉÆæüAiÀÄÄ zÁj vÀqÉzÀÄ CªÁZÀå ±À§ÝUÀ½AzÀ ¨ÉÊzÀÄ JzÉAiÀÄ ¨ÁUÀPÉÌ PÉʬÄAzÀ UÀÄ¢Ý , PÀwÛ¬ÄAzÀ PÀrzÀÄ PÉÆ¯É ªÀiÁqÀÄvÉÛÃ£É JAzÀÄ PÉÆ¯É ¨ÉzÀjPÉ ºÁQgÀÄvÁÛ£É JA§ÄzÁV ¦AiÀiÁð¢AiÀÄÄ ¤ÃrzÀ ¦AiÀiÁð¢üUÉ ¥ÉÆ£ÀßA¥ÉÃmÉ ¥ÉưøÀgÀÄ vÀAiÀiÁj¹zÀ ¥Àæ.ªÀ.ªÀgÀ¢ü

Thursday, October 21, 2010

ಮನೆಗೆ ಅಕ್ರಮ ಪ್ರವೇಶಮಾಡಿ ಕೊಲೆ ಬೆದರಿಕೆ, ಪ್ರಕರಣ ದಾಖಲು:

ಅಕ್ರಮಕೂಟ ಸೇರಿಕೊಂಡು ವ್ಯಕ್ತಿಯೋರ್ವರ ಮನೆಗೆ ಅಕ್ರಮ ಪ್ರವೇಶಮಾಡಿ ಮನೆಗೆ ಹಾನಿ ಹಾಗೂ ಕೊಲೆ ಮಾಡುವುದಾಗಿ ಬೆದರಿಸಿದ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 17-10-2010 ರಂದು ಆರೋಪಿಗಳಾದ ಬಿ.ಎ. ನಂಜಪ್ಪ ಮತ್ತು ಇತರರು ಅಕ್ರಮಕೂಟ ಸೇರಿಕೊಂಡು ಫಿರ್ಯಾದಿ ದುಲೀಪ್‌ ನಂಜಪ್ಪರವರ ಮನೆಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದದಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನನ್ವಯ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

ದಾರಿ ತಡೆದು ವ್ಯಕ್ತಿಯೋರ್ವರ ಮೇಲೆ ಹಲ್ಲೆ, ಪ್ರಕರಣ ದಾಖಲು:

ದಿನಾಂಕ 20-10-2010 ರಂದು ಫಿರ್ಯಾದಿ ಹೆಚ್‌.ಕೆ. ಮಹೇಶ ಇವರು ತಮ್ಮ ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದಾರ ಆರೋಪಿಗಳಾದ ಸುರೇಶ, ಚನ್ನಪ್ಪ ಮತ್ತು ರವಿ ಇವರುಗಳು ಪಿರ್ಯಾದಿಯನ್ನು ದಾರಿ ತಡೆದು ಅವಾಚ್ಯ ಶಬ್ದದಿಂದ ನಿಂದಿಸಿ ದೊಣ್ಣೆಯಿಂದ ಹೊಡೆದು ಕೈಗಳಿಂದ ಶರೀರಕ್ಕೆ ಗುದ್ದಿ ನೋವನ್ನುಂಟುಮಾಡಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Wednesday, October 20, 2010

ಮನೆ ಬಾಗಿಲು ಮುರಿದು ಚಿನ್ನಾಭರಣ ಕಳವು
 • ಮನೆ ಬಾಗಿಲು ಮುರಿದು ರೂ.85,000/- ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ಕುಶಾಲನಗರ ಪಟ್ಟಣದಲ್ಲಿ ನಡೆದಿದೆ. ಕುಶಾಲನಗರದ ರಾಧಾಕೃಷ್ಣ ಬಡಾವಣೆ ನಿವಾಸಿ ನಿಂಗರಾಜುರವರು ದಿನಾಂಕ 19/10/2010ರಂದು ಹಬ್ಬದ ಪ್ರಯುಕ್ತ ಹುಲುಸೆ ಗ್ರಾಮಕ್ಕೆ ಹೋಗಿದ್ದು, ಮನೆಯಲ್ಲಿ ಯಾರೂ ಇರದ ಸಮಯ ಮನೆಯ ಬೀಗ ಮುರಿದಿರುವ ಬಗ್ಗೆ ಪಕ್ಕದ ಮನೆಯ ಮೇರಿ ಎಂಬವರು ದೂರವಾಣಿ ಮೂಲಕ ತಿಳೀಸಿದ್ದು, ಈ ದಿನ ಬೆಳಿಗ್ಗೆ ಬಂದು ನೋಡಿದಾಗ ಯಾರೋ ಅಪರಿಚಿತ ಕಳ್ಳರು ಮನೆಯ ಬೀಗ ಮುರಿದು ಒಳಗೆ ಪ್ರವೇಶಿಸಿ ಮನೆಯಲ್ಲಿದ್ದ ಸುಮಾರು ರೂ.85,000/- ಮೊತ್ತದ ಚಿನ್ನಾಭರಣಗಳನ್ನು ಕಳವು ಮಾಡಿರುವ ಬಗ್ಗೆ ದೂರು ದಾಖಲಾಗಿದ್ದು, ಕುಶಾಲನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮನೆ ಮುರಿದು ರೂ.2 ಲಕ್ಷ ಮೌಲ್ಯದ ಚಿನ್ನಾಭರಣ ಕಳವು.

 • ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆ ಮುರಿದು ಪ್ರವೇಶಿಸಿದ ಕಳ್ಳರು ಸುಮಾರು ರೂ 2,15,000/- ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ಕುಶಾಲನಗರ ಪಟ್ಟಣದ ಆಸ್ಪತ್ರೆ ವಸತಿ ಗೃಹದಲ್ಲಿ ನಡೆದಿದೆ. ಕುಶಾಲನಗರದ ಆಸ್ಪತ್ರೆ ವಸತಿಗೃಹದಲ್ಲಿ ವಾಸವಿರುವ ಕೊಳಂದೆ ಸ್ವಾಮಿ ಎಂಬವರು ನೆಂಟರ ಮದುವೆಗೆಂದು ಕೊಯಮತ್ತೂರಿಗೆ ಹೋಗಿದ್ದ ಸಮಯದಲ್ಲಿ ದಿನಾಂಕ 19/10/2010ರ ರಾತ್ರಿ ಮನೆಯ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ಸುಮಾರು ರೂ.2,15,000/- ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಬಗ್ಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ವಾಹನ ಅಫಘಾತ, ವ್ಯಕ್ತಿಗೆ ಗಾಯ
 • ಅಜಾಗರೂಕತೆಯ ಚಾಲನೆಯಿಂದ ವಾಹನ ಚಾಲಿಸಿ ವ್ಯಕ್ತಿಯೋರ್ವರಿಗೆ ಡಿಕ್ಕಿಪಡಿಸಿದ ಘಟನೆ ನಾಪೋಕ್ಲು ಠಾಣಾ ವ್ಯಾಪ್ತಿಯ ಚೋನಕೆರೆ ಬಳಿ ನಡೆದಿದೆ. ದಿನಾಂಕ 19/10/2010ರಂದು ಸಂಜೆ ಎಮ್ಮೆಮಾಡು ಗ್ರಾಮದ ಪಿ.ಎ.ರಿಯಾಜ್ ಎಂಬವರು ತಮ್ಮ ಸ್ನೇಹಿತ ಶಾಕಿರ್ ಎಂಬವರೊಂದಿಗೆ ತಮ್ಮ ಮೋಟಾರು ಸೈಕಲ್ ನಲ್ಲಿ ಹೋಗುತ್ತಿದ್ದಾಗ ಚೋನಕೆರೆ ಬಳಿ ಓರ್ವ ಅಪರಿಚಿತ ಮೋಟಾರು ಸೈಕಲ್‌ ಸವಾರ ತನ್ನ ಮೋಟಾರು ಸೈಕಲ್‌ ಸಂ.ಕೆಎ-12-ಜೆ-5659ನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿ ರಿಯಾಜ್‌ರವರ ಮೋಟಾರು ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮ ರಿಯಾಜ್‌ ಮತ್ತು ಶಾಕಿರ್ ರವರಿಗೆ ಗಾಯಗಳಾದ ಬಗ್ಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಸಾಕ್ಷ್ಯ ನುಡಿಯದಂತೆ ಬೆದರಿಸಿ ಹಲ್ಲೆ, ವ್ಯಕ್ತಿಗೆ ಗಾಯ
 • ಸಾಕ್ಷ್ಯ ನುಡಿಯದಂತೆ ಬೆದರಿಸಿ ವ್ಯಕ್ತಿಯೋರ್ವರ ಮೇಲೆ ಹಲ್ಲೆ ಮಾಡಿರುವ ಘಟನೆ ಮಡಿಕೇರಿ ನಗರದ ಕಾಲೇಜು ರಸ್ತೆಯಲ್ಲಿ ನಿನ್ನೆ ಸಂಜೆ ನಡೆದಿದೆ. ಮಡಿಕೇರಿ ನಗರದ ನಿವಾಸಿ ಆನಂದ ಎಂಬವರು ಪ್ರಕರಣವೊಂದರ ಸಾಕ್ಷಿದಾರರಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆಯು ಮುಂದೂಡಿದ್ದರಿಂದ ಅವರ ಮೋಟಾರು ಸೈಕಲ್‌ನಲ್ಲಿ ಹೋಗುತ್ತಿದ್ದಾಗ ನಗರದ ಕಾಲೇಜು ರಸ್ತೆಯ ಕಾರ್ಪೋರೇಷನ್ ಬ್ಯಾಂಕಿನ ಬಳಿ ಆರೋಪಿಗಳಾದ ತುಳುನಾಡಂಡ ಮಹೇಶ, ಅರುಣ, ದಿನೇಶ, ಅಣ್ಣಿ, ದಿನೇಶ್, ಸನ್ನು, ಮುತ್ತಣ್ಣ ಮತ್ತು ಜಗನ್‌ರವರು ಆನಂದರವರನ್ನು ಅಡ್ಡಗಟ್ಟಿ ತಮ್ಮ ವಿರುದ್ದ ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯದಂತೆ ಬೆದರಿಸಿ ಅವರ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿದ್ದು, ಆನಂದರವರು ತೀವ್ರತರವಾದ ಗಾಯಗೊಂಡ ಬಗ್ಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Tuesday, October 19, 2010

ಅಕ್ರಮವಾಗಿ ಗೋಮಾಂಸ ಮಾರಾಟ, ಪ್ರಕರಣ ದಾಖಲು:

 • ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆಯಡಿ ವಿರಾಜಪೇಟೆ ನಗರ ಠಾಣೆಯಲ್ಲಿ ದಿನಾಂಕ 18-10-2010 ರಂದು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 18-10-2010 ರಂದು ವಿರಾಜಪೇಟೆ ನಗರದ ಪೊಲೀಸ್ ಉಪ ನಿರೀಕ್ಷಕರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಪಿಎಸ್‌ಐ ಮತ್ತು ಸಿಬ್ಬಂದಿಯವರು ಆರ್ಜಿ-ಬೇಟೋಳಿ ಗ್ರಾಮದ ಕಲ್ಲುಬಾಣೆ ಎಂಬಲ್ಲಿಗೆ ದಾಳಿ ನಡೆಸಿದ್ದು, ಅಕ್ರಮವಾಗಿ ಗೋವುಗಳನ್ನು ಕಡಿದು ಮಾರಾಟ ಮಾಡುತ್ತಿದ್ದ 4 ಜನ ಆರೋಪಿಗಳು ಪರಾರಿಯಾಗಿದ್ದು, ಕೃತ್ಯಕ್ಕೆ ಉಪಯೋಗಿಸಿದ ಸ್ವತ್ತುಗಳನ್ನು ಹಾಗೂ ಸ್ಥಳದಲ್ಲಿದ್ದ ಗೋಮಾಂಸವನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಅಸ್ವಾಬಾವಿಕ ಮರಣ ಪ್ರಕರಣಗಳು.

 • ವ್ಯಕ್ತಿಯೋರ್ವ ಜೀವನದಲ್ಲಿ ಜಿಗುಪ್ಸೆಗೊಂಡು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಿದ್ದಾಪುರ ಠಾಣೆಯಲ್ಲಿ ವರದಿಯಾಗಿದೆ. ದಿನಾಂಕ 18-10-2010 ರಂದು ಚೋಮಿ, ತಂದೆ ಮುತ್ತ, ಗುಹ್ಯಗ್ರಾಮದ ವಾಸಿ ಇವರು ಆರೋಗ್ಯ ಸರಿಯಿಲ್ಲದೇ ಇದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಕಾಫಿ ತೋಟದಲ್ಲಿ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಸಂಬಂಧ ಎರವರ ಮುತ್ತ ರವರ ದೂರಿನ ಮೇರೆ ಪ್ರಕರಣ ದಾಖಲಿಸಿ ಮುಂದಿ ಕ್ರಮ ಜರುಗಿಸಲಾಗಿದೆ.
 • ದಿನಾಂಕ 17-10-೨೦೧೦ ರಂದು ಹೆಚ್‌.ಸಿ. ದಂಡಯ್ಯ, ತಂದೆ ಪೌತಿ ಚಾಮ, 65 ವರ್ಷ ಪ್ರಾಯ, ಬಾಳೆಲೆ ಗ್ರಾಮ ಇವರು ಗದ್ದೆಗೆ ಕೆಲಸಕ್ಕೆಂದು ಹೋದವರು ಹೆಜ್ಜೇನು ಹುಳುಗಳು ಕಚ್ಚಿ ಜ್ಞಾನ ತಪ್ಪಿ ಬಿದ್ದಿರುವುದನ್ನು ಕಂಡು ಸದರಿಯವರನ್ನು ಗೋಣಿಕೊಪ್ಪ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್‌. ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ಹೆಚ್‌.ಡಿ. ಬೋಜರವರು ನೀಡಿದ ದೂರಿನನ್ವಯ ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮವನ್ನು ಜರುಗಿಸಿರುತ್ತಾರೆ.

ಅವಾಚ್ಯ ಶಬ್ದದಿಂದ ನಿಂದನೆ ಮತ್ತು ಕೊಲೆ ಬೆಧರಿಕೆ, ಪ್ರಕರಣ ದಾಖಲು:

 • ದಿನಾಂಕ 18-10-೨೦೧೦ ರಂದು ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಮಂಕ್ಯ ಗ್ರಾಮದಲ್ಲಿ ಫಿರ್ಯಾಧಿ ಸಿ.ಎಂ. ಲಕ್ಮಣ, 44 ವರ್ಷ ಇವರು ಗ್ರಾಮದ ದೇವರ ಸಲಹಾ ಸಮೀತಿ ಸಭೆಯ ಬಗ್ಗೆ ಮಾತನಾಡುತ್ತಿದ್ದಾಗ ಆರೋಪಿ ಸಿ.ಟಿ. ಲಕ್ಮಣ, ಮಂಕ್ಯ ಗ್ರಾಮ ಇವರು ಅಲ್ಲಿಗೆ ಕೋವಿಯನ್ನು ಹಿಡಿದುಕೊಂಡು ಬಂದು ಫಿರ್ಯಾಧಿಯವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಗುಂಡು ಹೊಡೆದು ಕೊಲೆ ಮಾಡುವುದಾಗಿ ಬೆದರಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಹಲ್ಲೆ ಪ್ರಕರಣಗಳು:

 • ದಿನಾಂಕ 18-10-2010 ರಂದು ಮಡಿಕೇರಿ ನಗರದ ಗಣಪತಿ ಬೀದಿಯಲ್ಲಿ ಫಿರ್ಯಾದಿ ಎ.ಪಿ. ಅರುಣ್‌ ಕುಮಾರ್‌, ಪತ್ರಿಕಾ ವರದಿಗಾರ ಇವರು ಹೆಂಡತಿ-ಮಕ್ಕಳನ್ನು ನೋಡಲೆಂದು ಅವರ ಹೆಂಡತಿ ಮನೆಗೆ ಹೋಗಿದ್ದಾಗ ಅವರ ಹೆಂಡತಿಯ ಅಣ್ಣ ತಮ್ಮಂದಿಯರಾದ ದಿನೇಶ್‌, ಲೋಕೇಶ್‌ ರವರುಗಳು ಮದ್ಯವನ್ನು ಕುಡಿದು ಬಂದು ಏಕಾಎಕಿ ಕೈಯಿಂದ ಹಲ್ಲೆನಡೆಸಿ ಕೊಲೆ ಮಾಡುವುದಾಗಿ ಬೆದರಿಸಿರುತ್ತಾರೆ ಎಂದು ನೀಡಿದ ದೂರಿನನ್ವಯ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

Monday, October 18, 2010

ರಸ್ತೆ ಅಫಘಾತ ಒಬ್ಬನ ದುರ್ಮರಣ:
ಟೆಂಪೋ ಟ್ರಾವಲರ್‌ ಮತ್ತು ಬೈಕ್‌ ನಡುವೆ ಅಪಘಾತ ಸಂಭವಿಸಿ ಒಬ್ಬ ಸಾವನ್ನಪ್ಪಿದ ಪ್ರಕರಣ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ದಿನಾಂಕ 17-10-2010 ರಂದು ಫಿರ್ಯಾಧಿ ಎಸ್‌.ಪಿ. ಯೋಗೇಶ್‌ ಸಿಂಡಗಳ್ಳಿ ಗ್ರಾಮ, ಹುಣಸೂರು ತಾಲೋಕು ಇವರು ತಮ್ಮ ಸ್ನೇಹಿತನೊಂದಿದೆ ತಲಕಾವೇರಿ ಜಾತ್ರೆಗೆ ಬೈಕ್‌ ಸಂ.ಸಿಟಿಕ್ಯು-6443ರಲ್ಲಿ ತೆರಳುತ್ತಿರುವ ಸಮಯ ಆರೋಪಿ ಯಶವಂತ ಕುಮಾರ್‌ ರವರು ತಮ್ಮ ಟೆಂಪೋ ಟ್ರಾವಲರ್‌ ಸಂ.ಕೆಎ-01-ಬಿ-5812 ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಿಸಿ ಬೈಕ್‌ಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರಿಗೂ ಗಾಯಗಳಾಗಿ ಆಸ್ಪತ್ರೆಗೆ ಚಿಕೆತ್ಸೆಗೆ ದಾಖಲಿಸಿ ಚಿಕಿತ್ಸಾ ಸಮಯದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಈ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಸ್ತೆ ಅಪಘಾತ ಒಬ್ಬನಿಗೆ ಗಾಯ:
ದಿನಾಂಕ 17-10-2010 ರಂದು ಮಸಗೋಡು ಗ್ರಾಮದಲ್ಲಿ ಫಿರ್ಯಾಧಿ ಹೆಚ್‌.ಎನ್‌. ಮಧು, ಗೋಣಿಮರೂರು ಗ್ರಾಮ ಇವರು ಆರೋಪಿತ ರಾಜೇಂದ್ರ ಇವರ ಓಮಿನಿ ವಾಹನದಲ್ಲಿ ಗೋಣಿ ಮರೂರು ಗ್ರಾಮದಿಂದ ಸೋಮವಾರಪೇಟೆ ನಗರದ ಕಡೆಗೆ ಪ್ರಯಾಣಿಸುತ್ತಿದ್ದ ಸಮಯ ಚಾಲಕ ರಾಜೇಂದ್ರರವರು ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಿಸಿದ ಪರಿಣಾಮ ವಾಹನವು ರಸ್ತೆಬದಿಯಲ್ಲಿದ್ದ ಒಂದು ಮರಕ್ಕೆ ಡಿಕ್ಕಿಯಾದ ಕಾರಣ ಫಿರ್ಯಾಧಿಯವರಿಗೆ ಗಾಯಗಳಾಗಿದ್ದು, ಈ ಸಂಬಂಧ ಫಿರ್ಯಾಧಿಯವರು ನೀಡಿದ ದೂರಿನನ್ವಯ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿ ಕ್ರಮ ಕೈಗೊಂಡಿರುತ್ತಾರೆ.
ಅಸ್ವಾಬಾವಿಕ ಸಾವು ಪ್ರಕರಣ:
ಆಕಸ್ಮಿಕವಾಗಿ ಬೆಂಕಿ ತಗುಲಿ ಸಾವನ್ನಪ್ಪಿದ ಪ್ರಕರಣ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ವರದಿಯಾಗಿದೆ. ದಿನಾಂಕ 14-10-2010 ರಂದು ಹೆರವನಾಡು ಗ್ರಾಮದ ಅಪ್ಪಂಗಳ ಕಾಲೋನಿಯಲ್ಲಿ ಪವಿತ್ರ ಎಂಬುವರು ಬಾತ್‌ರೂಂ ನಲ್ಲಿ ಒಲೆಗೆ ಬೆಂಕಿಹಚ್ಚುವ ಸಮಯದಲ್ಲಿ ಆಕಸ್ಮಿಕವಾಗಿ ಸೀಮೆಎಣ್ಣೆ ಮೈಗೆ ಚೆಲ್ಲಿ ಬೆಂಕಿ ಹೊತ್ತಿಕೊಂಡು ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗೆ ಮಡಿಕೇರಿಯ ಸರಕಾರಿ ಆಸ್ಪತ್ರೆಗೆ ದಾಖಲಿ, ನಂತರ ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 16-10-2010 ರಂದು ಆಕೆ ಮೃತಪಟ್ಟಿದ್ದು, ಈ ಸಂಬಂಧ ಮೃತಳ ತಾಯಿ ಶ್ರೀಮತಿ ಪೂರ್ಣಿಮ ಇವರು ನೀಡಿದ ದೂರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣದ ದಾಖಲಿಸಲಾಗಿದೆ.
ಕಳವು ಪ್ರಕರಣ:
ದಿನಾಂಕ 17-10-2010 ರಂದು ಕೆ. ಬಾಡಗ ಗ್ರಾಮದಲ್ಲಿ ಫಿರ್ಯಾದಿ ಬಿ.ಜಿ. ಮುದ್ದಪ್ಪ ಎಂಬವರು ಬೆಳಗ್ಗೆ 11-00 ಗಂಟೆಗೆ ತಮ್ಮ ಮನೆಗೆ ಬೀಗ ಹಾಕಿ ಹೊರಗಡೆ ತೆರಳಿದ್ದು, ಸಾಯಂಕಾಲ 6-00 ಗಂಟೆಗೆ ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಹಿಂಬಾಗದ ಶೀಟನ್ನು ತೆಗೆದು ಒಳಗೆ ಪ್ರವೇಶಿಸಿ ಮಲಗುವ ಕೋಣೆಯ ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿ ಬೀರುವಿನಲ್ಲಿಟ್ಟಿದ್ದ ಪೀಚೆಕತ್ತಿ, ಎರಡು ಕ್ಯಾಮರಾಗಳು, ಒಂದು ಬೆಳ್ಳಿಯ ಚೈನು, ಒಂದು ರಿಲಾಯನ್ಸ್‌ ಮೊಬೈಲ್‌ ಹಾಗೂ ಇತರೆ ಸಾಮಾಗ್ರಿ ಒಟ್ಟು ರೂ. 70,000-00 ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನನ್ವಯ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿತ್ತಾರೆ.

Sunday, October 17, 2010

gÀ¸ÉÛ C¥ÀWÁvÀ NªÀð£À zÀĪÀÄðgÀt:
gÀ¸ÉÛ C¥ÀWÁvÀzÀ°è NªÀð ªÀåQÛ ¸ÁªÀ£À¦àzÀ PÀÄjvÀÄ ¸ÀÄAnPÉÆ¥Àà ¥Éưøï oÁuÉAiÀÄ°è ªÀgÀ¢AiÀiÁVzÉ. ¢£ÁAPÀ 16-10-2010 gÀAzÀÄ gÁwæ ¦ügÁå¢ ²æà ºÉZï.«.CtÚ¥Àà vÀAzÉ ¥Ëw ¨Á§Ä, ªÁ¸À Vjd£À PÁ¯ÉÆä, PÀA©¨ÁuÉ gÀªÀgÀÄ ªÀÄvÀÄÛ vÀªÀÄä vÀAzÉ ¨Á§ÄgÀªÀgÀÄ ¸ÀÄAnPÉÆ¥ÀàPÉÌ DPÉÃð¸ÁÖç £ÉÆÃqÀ®Ä §A¢zÀÄÝ, ¸ÀªÀÄAiÀÄ gÁwæ 11-00 UÀAmÉAiÀÄ°è ¸ÀÄAnPÉÆ¥Àà £ÀUÀgÀzÀ PÉ£ÀgÁ ¨ÁåAPï ªÀÄÄA¨sÁUÀzÀ ¸ÁªÀðd¤PÀ gÀ¸ÉÛAiÀÄ°è ¸ÀzÀjAiÀĪÀgÀÄ ¤AvÀÄPÉÆAqÀÄ DPÉÃð¸ÁÖç £ÉÆÃrPÉÆArgÀĪÁUÉÎ PÀıÀ®£ÀUÀgÀ¢AzÀ ¸ÀÄAnPÉÆ¥Àà PÀqÉUÉ §gÀÄwÛzÀÝ ¯Áj £ÀA: PÉJ-12-J-1820 gÀ£ÀÄß CzÀgÀ ZÁ®PÀ UÀuÉñÀ JA§ÄªÀ£ÀÄ ¯ÁjAiÀÄ£ÀÄß CwªÉÃUÀ ªÀÄvÀÄÛ CeÁUÀgÀÆPÀvɬÄAzÀ Nr¹PÉÆAqÀÄ ¨Á§ÄgÀªÀjUÉ rüQÌ¥Àr¹zÀ ¥ÀjuÁªÀÄ vÀ¯ÉUÉ wêÀæ ¸ÀégÀÆ¥ÀzÀ UÁAiÀÄ GAmÁV ªÀÄÈvÀ¥ÀnÖzÀÄÝ, ¸ÀzÀj ¯Áj ZÁ®PÀ UÀuÉñÀ£À ªÉÄÃ¯É PÁ£ÀÆ£ÀÆ jÃw PÀæªÀÄ PÉÊUÉƼÀî¨ÉÃPÉAzÀÄ ¤ÃrzÀ zÀÆj£À£ÀéAiÀÄ ¸ÀÄAnPÉÆ¥Àà ¥ÉưøÀgÀÄ ¥ÀæPÀgÀt zÁR°¹ ªÀÄÄA¢£À PÀæªÀÄPÉÊUÉÆArgÀÄvÁÛgÉ.
CPÀæªÀÄ ¥ÀªÉò¹ PÉÆ¯É ¨ÉzÀjPÉ, ¥ÀæPÀgÀt zÁR®Ä:
¢£ÁAPÀ: 14-10-2010 gÀAzÀÄ ¸ÀªÀÄAiÀÄ ¨É¼ÀUÉÎ 10-30 UÀAmÉUÉ ¦gÁå¢ ²æêÀÄw ¨ÁgÀw UÀAqÀ: ¯ÉÃmï ²æäªÁ¸À vÀªÀÄä ¸ÉÆ¸É 1£Éà DgÉÆæUÀ¼ÁzÀ ¥À«vÀæ, «dAiÀÄ, vÀªÀÄäAiÀÄå, AiÀıÉÆÃzÀ, ¸À«vÀ, UÀÄgÀÄ, ¸ÀªÉð±À, ¥ÀÄlÖgÁdÄ ªÀÄvÀÄÛ C¤¯ïPÀĪÀiÁgï, PÀÆqÀĪÀÄAUÀ¼ÀÆgÀÄ EMªÀgÀÄUÀ¼ÀÄ ¸ÉÃj ¦gÁå¢AiÀĪÀgÀ ªÀÄ£ÉAiÀÄ ©ÃUÀ MqÉzÀÄ CPÀæªÀÄ ¥ÀæªÉñÀ ªÀiÁr, CªÁZÀå ±À§ÝUÀ½AzÀ ¨ÉÊAiÀÄÄÝ ºÁUÀÆ ¦gÁå¢AiÀĪÀgÀ ±ÀjÃgÀPÉÌ PÉÊUÀ½AzÀ ºÉÆqÉzÀÄ ©Ã½¹zÀÝ®èzÉÃ, ªÀÄ£ÉAiÀÄ ºÀwÛgÀ §AzÀgÉ PÀwÛ¬ÄAzÀ PÀrzÀÄ PÉÆ¯É ªÀiÁqÀĪÀÅzÁV fêÀ¨ÉzÀjPÉ ºÁQzÀÄÝ, F §UÉÎ ¦ügÁå¢AiÀĪÀgÀAiÀÄ ¤ÃrzÀ zÀÆj£À£ÀéAiÀÄ PÀıÁ®£ÀUÀgÀ ¥Éưøï oÁuÉAiÀÄ°è ¥ÀæPÀgÀt zÁR¯ÁVgÀÄvÀÛzÉ.zÁR°¹zÀ ¥ÀæPÀgÀt.
CªÁZÀå ±À§ÝUÀ½AzÀ ¨ÉÊzÀÄ ªÀåQÛAiÉÆêÀðgÀ ªÉÄÃ¯É ºÀ¯Éè.
CªÁZÀå ±À§ÝUÀ½AzÀ ¨ÉÊzÀÄ ªÀåQÛAiÀÄ ªÉÄÃ¯É ºÀ¯Éè£ÀqɹzÀ ¥ÀæPÀgÀt ±À¤ªÁgÀ¸ÀAvÉ oÁuÉAiÀÄ°è zÁR¯Á¢zÉ. ¢£ÁAPÀ 16-10-2010 gÀAzÀÄ ¦gÁå¢ PÉ.J¯ï. ¯ÉÆûvïAiÀĪÀgÀÄ PÉÆrè¥ÉÃmÉ £ÀUÀgÀzÀ ªÀÄĤ¹¥Á°nAiÀÄ ªÀÄÄAzÀÄUÀqÉ EgÀĪÀ ¸ÀħâAiÀÄåUËqÀ ªÀiÁ¸ÀÖgï gÀªÀgÀ ªÀÄ£ÉAiÀÄ ªÀÄÄAzÀÄUÀqÉ ¸ÁªÀðd¤PÀ gÀ¸ÉÛAiÀÄ°è PÉÆrè¥ÉÃmÉ £ÀUÀgÀPÉÌ §gÀ®Ä ªÁºÀ£ÀªÀ£ÀÄß PÁAiÀÄÄwÛgÀĪÁUÉÎ, DgÉÆæ £À«Ã£ï EA§ÄªÀªÀgÀÄ C°èUÉ §AzÀÄ ºÀ¼ÉÃAiÀÄ ªÀåµÀªÀÄåªÀ£ÀÄß ElÄÖ PÉÆAqÀÄ KPÁJQ ¦gÁå¢AiÀĪÀgÀ£ÀÄß PÀÄjvÀÄ CªÁZÀå ±À§ÝUÀ¼ÉÆAzÀ ¨ÉÊzÀÄ PÉÊAiÀÄ°èzÀÝ PÀwÛ¬ÄAzÀ ¦gÁå¢AiÀĪÀgÀ KqÀ PÉÊAiÀÄ ºÉ§âgÀ½UÉ PÀrzÀÄ UÁAiÀÄ ¥Àr¹zÀÄÝ, vÀqÉAiÀÄ®Ä §AzÀ ¸ÀAvÉÆõÀ JA§ÄªÀªÀjUÀÆ gÀªÀjUÀÆ PÉʬÄAzÀ ºÉÆqÉzÀÄ UÁAiÀÄ¥Àr¹zÀÄÝ F ¸ÀA§AzsÀ ±À¤ªÁgÀ¸ÀAvÉ oÁuÉAiÀÄ°è ¥ÀæPÀgÀt zÁR°¸À¯ÁVzÉ.
fêÀ£ÀzÀ°è fUÀÄ¥Éì¬ÄAzÀ ªÀåQÛAiÀÄ DvÀäºÀvÉå:
¢£ÁAPÀ 16-10-2010 gÀAzÀÄ «±Àé£ÁxÀ JA§ªÀgÀÄ fêÀ£ÀzÀ°è fUÀÄ¥ÉìUÉÆAqÀÄ «¥ÀjÃvÀ ªÀÄzÀåªÀ£ÀÄß ¸Éë¹ ¤vÁætUÉÆAqÀÄ ¸ÁªÀ£À¦àzÀÄÝ, F ¸ÀA§AzsÀ «±Àé£ÁxÀgÀªÀgÀ CtÚ£ÁzÀ ZÉÃzÀĪÀAqÀ ¹.¥ÀÆtZÀÑ, vÀAzÉ ¯ÉÃmï atÚ¥Àà ¥ÁæAiÀÄ60 ªÀµÀð , ªÀiÁf ¸ÉʤPÀ , ºÀÄzÀÆgÀÄ UÁæªÀÄ EªÀgÀÄ ¤ÃrzÀ zÀÆj£À£ÀéAiÀÄ ¥ÉÆ£ÀßA¥ÉÃmÉ ¥ÉưøÀgÀÄ ¥ÀæPÀgÀtªÀ£ÀÄß zÁR°¹ ªÀÄÄA¢£À PÀæªÀÄ PÉÊUÉÆArgÀÄvÁÛgÉ.
ªÀÄ£ÉUÉ ¥ÀæªÉò¹ PÉÆ¯É ¨ÉzÀjPÉ ¥ÀæPÀgÀt zÁR®Ä:
¢£ÁAPÀ 16/10/10 gÀAzÀÄ ¦AiÀiÁð¢ü ²æêÀÄw AiÀıÉÆÃzsÀ gÀªÀgÀÄ ªÀÄ£ÉAiÀÄ°è M§âgÉ EgÀĪÁUÀ, DgÉÆæUÀ¼ÁzÀÀ ªÀĺÉñÀ, ¤µÁðzï , ºÀµÁðzï ¦gÁå¢gÀªÀgÀ ªÀÄ£ÉUÉ £ÀÄVÎ ZÁPÀ£ÀÄß vÉÆÃj¹ PÉƯɪÀiÁqÀĪÀÅzÁV C®èzÉ CvÁåZÁgÀ ªÀiÁqÀÄvÉÛÃªÉ JAzÀÄ ºÉzÀj¹zÀÄÝ, C®èzÉà F »AzÉAiÀÄÆ ¸ÀºÀ ¸ÀzÀj DgÉÆæUÀ¼ÀÄ CªÁZÀå ±À§ÝUÀ½AzÀ ¨ÉÊAiÀÄÄåªÀÅzÀÄ, ªÀÄ£ÉUÉ PÀ®Äè J¸ÉAiÀÄĪÀÅzÀÄ ªÀiÁrzÀÄÝ, ¸ÀzÀjAiÀĪÀgÀ ªÉÄÃ¯É PÁ£ÀÆ£ÀÄ PÀæªÀÄ PÉÊUÉƼÀîªÀŪÀ §UÉÎ ¤ÃqÀÄzÀ zÀÆj£À£ÀéAiÀÄ ¥ÉÆ£ÀßA¥ÉÃmÉ ¥ÉưøÀgÀÄ ¥ÀæPÀgÀtªÀ£ÀÄß zÁR°¹ ªÀÄÄA¢£À PÀæªÀÄ dgÀÄV¹gÀÄvÁÛgÉ.

Friday, October 15, 2010

ಅಕ್ರಮ ಜೂಜಾಟ, ಮೂವರ ಬಂಧನ

 • ಅಕ್ರಮವಾಗಿ ಜೂಜಾಡುತ್ತಿದ್ದ ಮೂವರನ್ನು ಬಂಧಿಸಿ ವಾಹನಗಳೊಂದಿಗೆ ಜೂಜಾಡಲು ಬಳಸಿದ ಹಣವನ್ನು ವಶಪಡಿಸಿಕೊಂಡಿರುವ ಪ್ರಕರಣ ಸೋಮವಾರಪೇಟೆ ಠಾಣೆಯಲ್ಲಿ ಈ ದಿನ ದಾಖಲಾಗಿದೆ. ಇಂದು ಬೆಳಿಗ್ಗೆ ಸೋಮವಾರಪೇಟೆ ಠಾಣಾಧಿಕಾರಿ ಎಂ.ಮಹೇಶ್‌ರವರು ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯ ಯರಪಾರೆ ಮೀಸಲು ಅರಣ್ಯದಲ್ಲಿ ಮರವೊಂದರ ಕೆಳಗೆ ಕೆಲವು ವ್ಯಕ್ತಿಗಳು ಜೂಜಾಡುತ್ತಿರುವ ಕುರಿತು ಮಾಹಿತಿ ಪಡೆದ ಪಿಎಸ್‌ಐರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಧಾಳಿ ಮಾಡಿದಾಗ ಜೂಜಾಡುತ್ತಿದ್ದವರ ಪೈಕಿ ಮೂವರು ಓಡಿ ಹೋಗಿದ್ದು, ಉಳಿದ ಮೂವರು ಆರೋಪಿಗಳಾದ ಬಾಣಾವರ ಗ್ರಾಮದ ಮಂಜ, ಮಣಿ ಮತ್ತು ಧರ್ಮ ಎಂಬವರನ್ನು ಬಂಧಿಸಿದ್ದು, ಜೂಜಾಡಲು ಉಪಯೋಗಿಸಿದ್ದ 52 ಇಸ್ಪೀಟೆಲೆಗಳು, ಪಣವಾಗಿಟ್ಟಿದ್ದ ರೂ.2,876/- ಮತ್ತು ಕೆಎ-01-ಹೆಚ್-3895 ಮತ್ತು ಕೆಎ-12-ಹೆಚ್-5379ರ ಎರಡು ಮೋಟಾರು ಸೈಕಲ್‌ಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

ಬಾಲಕಿಯ ಮಾನಭಂಗ ಯತ್ನ, ಪ್ರಕರಣ ದಾಖಲು

 • ಅಪ್ರಾಪ್ತ ಬಾಲಕಿಯೋರ್ವಳ ಮಾನಭಂಗಕ್ಕೆ ಯತ್ನಿಸಿ ಕೊಲೆ ಬೆದರಿಕೆ ಒಡ್ಡಿರುವ ಪ್ರಕರಣ ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೆದಮುಳ್ಳೂರು ಗ್ರಾಮದಲ್ಲಿ ನಡೆದ ಘಟನೆ ಈ ದಿನ ವರದಿಯಾಗಿದೆ. ದಿನಾಂಕ 14/10/2010ರಂದು ಫಿರ್ಯಾದಿ ಮಹೇಶ ಪೂಜಾರಿರವರು ಅವರ ಮಗಳು 5 ವರ್ಷ ಪ್ರಾಯದ ಜಯಶ್ರೀ ಎಂಬಾಕೆಯನ್ನು ಮನೆಯಲ್ಲಿ ಬಿಟ್ಟು ಕೂಲಿ ಕೆಲಸಕ್ಕೆ ಹೋಗಿದ್ದು, ಮದ್ಯಾಹ್ನ ಊಟಕ್ಕೆಂದು ಮನೆಗೆ ಬಂದಾಗ ಕಿರಿಮಗಳು ಅರ್ಚನ ಮಾತ್ರ ಮನೆಯಲ್ಲಿದ್ದು ಜಯಶ್ರೀ ಮನೆಯಲ್ಲಿಲ್ಲದುದನ್ನು ಗಮನಿಸಿ ಅವಳನ್ನು ಹುಡುಕಿಕೊಂಡು ಹೋದಾಗ ಪಕ್ಕದ ಮನೆಯ ರೊಜಾರಿಯೋ ರಾಡ್ರಿಗಸ್‌ರವರ ಮನೆಯಲ್ಲಿ ಜಯಶ್ರೀ ಅಳುವ ಶಬ್ದ ಕೇಳಿ ಒಳಗೆ ಹೋಗಿ ನೋಡಿದಾಗ ಅವರ ಮನೆಯ ಮಲಗುವ ಕೋಣೆಯಲ್ಲಿ ಜಯಶ್ರೀಯನ್ನು ರೊಜಾರಿಯೋ ರಾಡ್ರಿಗಸ್‌ರವರ ಮಗ 16 ವರ್ಷ ಪ್ರಾಯದ ರೋಹಿತ್ ತಬ್ಬ ಹಿಡಿದುಕೊಂಡು ಮಾನಭಂಗ ಮಾಡುವ ಪ್ರಯತ್ನದಲ್ಲಿದ್ದವನು ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದು, ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಫಘಾತ, ವ್ಯಕ್ತಿಗೆ ಗಾಯ

 • ರಸ್ತೆ ಅಫಘಾತದಲ್ಲಿ ವ್ಯಕ್ತಿಯೋರ್ವರಿಗೆ ಗಾಯವಾಗಿರುವ ಘಟನೆ ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಸುಂಟಿಕೊಪ್ಪ ನಗರದಲ್ಲಿ ದಿನಾಂಕ 14/10/2010ರಂದು ನಡೆದಿದೆ. ಸುಂಟಿಕೊಪ್ಪ ನಗರದ ಕೆಇಬಿ ಬಳಿ ಸಂಜೆ ವೇಳೆ ಪ್ರಕರಣದ ಫಿರ್ಯಾದಿ ಮಹಮದ್ ಶಾಹೀರ್ ರವರ ತಂದೆ ನಸೀರ್ ರವರು ಅವರ ಮೋಟಾರ್ ಸೈಕಲ್‌ನಲ್ಲಿ ಕುಶಾಲನಗರದಿಂದ ಸುಂಟಿಕೊಪ್ಪದಲ್ಲಿರುವ ತಮ್ಮ ಮನೆಗೆ ಬರುತ್ತಿರುವಾಗ ಆರೋಪಿ ಶ್ರೀನಿವಾಸ್‌ರವರು ತಮ್ಮ ಇಂಡಿಗೋ ಕಾರು ಕೆಎ-05-ಎಎ-457ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿ ನಸೀರ್‌ರವರ ಮೋಟಾರು ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮ ನಸೀರ್ ರವರ ಕಾಲುಗಳಿಗೆ ಪೆಟ್ಟಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿರುವ ಬಗ್ಗೆ ಸುಂಟಿಕೊಪ್ಪ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Thursday, October 14, 2010

ವಾಹನ ಅವಘಡ, ಶಾಲಾ ವಿದ್ಯಾರ್ಥಿಗೆ ಗಾಯ
 • ಶಾಲಾ ಬಾಲಕನೊಬ್ಬನಿಗೆ ಆಟೋ ರಿಕ್ಷಾ ಡಿಕ್ಕಪಡಿಸಿ ಗಾಯಗೊಳಿಸಿದ ಘಟನೆ ಸುಂಟಿಕೊಪ್ಪ ಠಾಣಾ ಸರಹದ್ದಿನ ಭೂತನಕಾಡುವಿನಲ್ಲಿ ನಡೆದಿದೆ. ಈ ದಿನ ಬೆಳಿಗ್ಗೆ ಭೂತನಕಾಡುವಿನ ಟಿಸಿಎಲ್‌ ಸಂಸ್ಥೆಯ ಆರ್ ರಂಜಿತ ಎಂಬವರು ತನ್ನ ಮನೆಯ ಮುಂದೆ ರಸ್ತೆ ದಾಟುತ್ತಿದ್ದಾಗ ಆರೋಪಿ ಕೆ.ಮಣಿ ಎಂಬಾತನು ತನ್ನ ಆಟೋ ರಿಕ್ಷಾ ನಂ.ಕೆ-12-ಎ-256 ನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿ ರಂಜಿತರವರಿಗೆ ಡಿಕ್ಕಿಪಡಿಸಿದ್ದು ರಂಜಿತರವರಿಗೆ ಗಾಯಗಳಾದ ಬಗ್ಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
ಮನೆಯಲ್ಲಿದ್ದ ಹುಡುಗಿ ಕಾಣೆ
 • ಮನೆಯವರು ತೋಟ ಕೆಲಸಕ್ಕೆಂದು ಹೋದ ಹುಡುಗಿ ಮನೆಯಿಂದ ಕಾಣೆಯಾಗಿರುವ ಪ್ರಕರಣ ಸಿದ್ದಾಪುರ ಠಾಣೆಯಲ್ಲಿ ದಾಖಲಾಗಿದೆ. ದಿನಾಂಕ 12/10/2010ರಂದು ಕರಡಿಗೋಡು ಗ್ರಾಮದ ಫಿರ್ಯಾದಿ ಎಂ.ಮಣಿ ಎಂಬವರು ತಮ್ಮ ತಾಯಿ ಜಯಮ್ಮರವರೊಂದಿಗೆ ಮೂರ್ನಾಡಿನ ಚಾರಿಮಂಡ ತಮ್ಮಯ್ಯ ಎಂಬವರ ತೋಟದಲ್ಲಿ ಕೆಲಸಕ್ಕೆಂದು ಹೋಗಿದ್ದು ಅವರ ತಂಗಿ 17 ವರ್ಷದ ದೇವಿ ಎಂಬಾಕೆಯು ಮನೆಯಲ್ಲಿದ್ದು ಸಂಜೆ ಕೆಲಸದಿಂದ ವಾಪಾಸು ಬರುವಾಗ ದೇವಿಯು ಮನೆಗೆ ಬೀಗ ಹಾಕಿ ಎಲ್ಲಿಗೋ ಹೋಗಿರುತ್ತಾಳೆಂದು ತಿಳಿದು ಬಂದಿದ್ದು, ನಂತರ ಆಕೆಯು ಹಿಂದಿರುಗಿ ಬಾರದ ಕಾರಣ ಬಂಧು ಬಳಗದಲ್ಲಿ ಹುಡುಕಿಯೂ ಸಿಗದಿದ್ದು, ನಂತರ ಠಾಣೆಗೆ ನೀಡಿದ ಪುಕಾರಿಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, October 13, 2010

ದನ, ಕೋಣಗಳ ಚರ್ಮ ಅಕ್ರಮ ಸಾಗಾಟ, ಬಂಧನ
 • ಪರವಾನಗಿಯಿಲ್ಲದೆ ದನ, ಕೋಣಗಳ ಚರ್ಮಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣವನ್ನು ವಿರಾಜಪೇಟೆ ಗ್ರಾಮಾಂತರ ಪೊಲೀಸರು ಈ ದಿನ ಪತ್ತೆ ಹಚ್ಚಿದ್ದಾರೆ. ಕೊಂಡಗೇರಿಯಿಂದ ಅಕ್ರಮ ಮರ ಸಾಗಾಟವಾಗುತ್ತಿದ್ದು ಕ್ರಮ ಕೈಗೊಳ್ಳುವಂತೆ ಮಡಿಕೇರಿಯ ಅರಣ್ಯ ತನಿಖಾ ಘಟಕದ ಪೊಲೀಸ್‌ ಅಧೀಕ್ಷಕರು ತಿಳಿಸಿದ ಮೇರೆಗೆ ಠಾಣೆಯ ಪಿಎಸ್‌ಐ ಸಂತೋಷ್‌ ಮತ್ತು ಸಿಬ್ಬಂದಿಯವರು ದಿನಾಂಕ 12/10/2010ರಂದು ಮಧ್ಯರಾತ್ರಿ ಅಮ್ಮತ್ತಿ ಕೊಡವ ಸಮಾಜದ ಬಳಿ ಹೊಂಚು ಹಾಕಿ ಕಾಯುತ್ತಿದ್ದ ಸಮಯದಲ್ಲಿ ಕೊಂಡಂಗೇರಿ ಕಡೆಯಿಂದ ಬರುತ್ತಿದ್ದ ಒಂದು 407 ಗೂಡ್ಸ್ ವಾಹನವನ್ನು ನಿಲ್ಲಿಸಿ ಪರಿಶೀಲಿಸಿದಾಗ ವ್ಯಾನ್‌ನ ಹಿಂಭಾಗದಲ್ಲಿ ಸುಮಾರು 59 ಚೀಲಗಳಲ್ಲಿ ದನ, ಕೋಣಗಳ ಚರ್ಮ ಹಾಗೂ ಒಣಗಿದ ಮೂಳೆಗಳನ್ನು ತುಂಬಿಸಿದ್ದು, ಯಾವುದೇ ಪರವಾನಗಿಯಿಲ್ಲದೆ ಸಾಗಿಸುತ್ತಿರುವ ಬಗ್ಗೆ ಆರೋಪಿಗಳಾದ ಮಹಮ್ಮದ್‌ ಸುಜಾನ್‌, ಸೈಯದ್‌ ನಜೀರ್, ಆಸಿಫ್ ಆಲಿ ಮತ್ತು ಅರಾಫ್ ಉಲ್ಲಾ ರವರನ್ನು ವಿಚಾರಿಸಿದಾಗ ಸಮಂಜಸ ಉತ್ತರ ನೀಡದ ಕಾರಣ ಆರೋಪಿಗಳನ್ನು ಬಂಧಿಸಿ, ಮಾಲು ವಶಪಡಿಸಿಕೊಂಡು ಮುಂದಿನ ಕ್ರಮ ಜರುಗಿಸಿರುತ್ತಾರೆ.

ಅತಿವೇಗದ ಚಾಲನೆ, ಪೊಲೀಸ್ ವಾಹನ ಡಿಕ್ಕಿ

 • ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದಾಗಿ ಪೊಲೀಸ್‌ ವಾಹನವೊಂದು ರಸ್ತೆ ಬದಿಯ ಕಲ್ಲು ಗುಡ್ಡೆಗೆ ಡಿಕ್ಕಿಯಾದ ಘಟನೆ ಮಡಿಕೇರಿ ಸಂಚಾರಿ ಠಾಣಾ ವ್ಯಾಪ್ತಿಯ ಸುದರ್ಶನ ವೃತ್ತದ ಬಳಿ ನಡೆದಿದೆ. ದಿನಾಂಕ 12/10/2010ರ ರಾತ್ರಿ ಜಿಲ್ಲಾ ಪೊಲೀಸ್‌ ಇಲಾಖಾ ವಾಹನ ಕೆಎ-12-ಜಿ-547ರ ವ್ಯಾನ್‌ನಲ್ಲಿ ಕುಶಾಲನಗರದಿಂದ ಜಿಲ್ಲಾ ಸಶಸ್ತ್ರ ದಳದ ಸಿಬ್ಬಂದಿಗಳು ಬಂದೋಬಸ್ತು ಕರ್ತವಯ ಮುಗಿಸಿ ಬರುತ್ತಿದ್ದ ಸಮಯದಲ್ಲಿ ಮಡಿಕೇರಿ ನಗರದ ಸುದರ್ಶನ ವೃತ್ತದ ಬಳಿ ವ್ಯಾನ್‌ ಚಾಲಕ ಆಲ್ಬರ್ಟ್‌ ಡಿ'ಸೋಜಾ ವ್ಯಾನನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ವ್ಯಾನ್‌ ಚಾಲಕನ ಹತೋಟಿ ತಪ್ಪಿ ರಸ್ತೆ ಬದಿಯ ಕಲ್ಲು ಗುಡ್ಡೆಗೆ ಡಿಕ್ಕಿಯಾಗಿ ಜಖಂಗೊಂಡಿದ್ದು, ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿ ಸಾವು

ತೆಂಗಿನ ಮರ ಹತ್ತುತ್ತಿದ್ದ ವ್ಯಕ್ತಿಯೋರ್ವ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಬಿಳೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 12/10/2010ರಂದು ಫಿರ್ಯಾದಿ ಕನ್ನಂಬಾಡಿ ದೇವರಪುರ ಗ್ರಾಮದ ರವಿಯವರ ತಂದೆ ಅಪ್ಪಣಿ ಎಂಬವರು ಬಿಳೂರು ಗ್ರಾಮದ ಆದೇಂಗಡ ಅಯ್ಯಪ್ಪನವರ ಮನೆಯ ಕೂಲಿ ಕೆಲಸಕ್ಕೆ ಹೋಗಿದ್ದು, ಅಲ್ಲಿ ತೆಂಗಿನ ಮರ ಸ್ವಚ್ಛ ಮಾಡಲೆಂದು ಬಿದಿರಿನ ಏಣಿಯ ಮೇಲೆ ಹತ್ತಿ ಮರದ ಕೆಲಸ ಮಾಡುತ್ತಿದ್ದಾಗ ಕಾಲು ಜಾರಿ ಅಲ್ಲೆ ಪಕ್ಕದಲ್ಲಿರುವ ಕೆರೆಗೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದು ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, October 12, 2010

ದೇವಾಲಯದ ಬೇಗ ಮುರಿದು ಹುಂಡಿಯಲ್ಲಿದ್ದ ಹಣ ಕಳವು

 • ದೇವಾಲಯದ ಬಾಗಿಲು ಮುರಿದು ಹುಂಡಿಯಲ್ಲಿದ್ದ ಹಣ ಕಳವು ಮಾಡಿದ ಘಟನೆ ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಮಾದಾಪುರದಲ್ಲಿ ನಡೆದಿದೆ. ದಿನಾಂಕ 11/10/2010ರಂದು ರಾತ್ರಿ ಮಾದಾಪುರದ ಸಿದ್ದಿ ಬುದ್ದಿ ವಿನಾಯಕ ದೇವಸ್ಥಾನದ ಅರ್ಚಕ ಕೃಷ್ಣಭಟ್‌ರವರು ಎಂದಿನಂತೆ ದೇವಾಲಯದ ಪೂಜೆ ಮುಗಿಸಿ ಬಾಗಿಲು ಹಾಕಿಕೊಂಡು ಮನೆಗೆ ಹೋಗಿದ್ದು, ಈ ದಿನ ಬೆಳಿಗ್ಗೆ ಪೂಜೆಗೆಂದು ಬಂದು ನೋಡಿದಾಗ ದೇವಾಲಯದಲ್ಲಿದ್ದ ಕಾಣಿಕೆ ಹುಂಡಿಯನ್ನು ಯಾರೋ ಅಪರಿಚಿತ ಕಳ್ಳರು ಒಡೆದು ಅದರಲ್ಲಿದ್ದ ರೂ 2,000/-ಗಳನ್ನು ಕಳವು ಮಾಡಿದ್ದು, ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ, ವ್ಯಕ್ತಿಗೆ ಗಾಯ

 • ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವರ ಮೇಲೆ ಹಲ್ಲೆ ಮಾಡಿದ ಘಟನೆ ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಶಾಂತಳ್ಳಿ ಗ್ರಾಮದ ಬಸವನಕಟ್ಟೆಯಿಂದ ವರದಿಯಾಗಿದೆ. ದಿನಾಂಕ 11/10/2010ರಂದು ಸಂಜೆ ಪ್ರಕರಣದ ಆರೋಪಿ ಚಂದ್ರ ಫಿರ್ಯಾದಿ ಎಸ್‌.ಕೆ.ಅಣ್ಣಪ್ಪನವರ ಪತ್ನಿ ಸೋಮಕ್ಕನವರೊಂದಿಗೆ ಜಗಳವಾಡುತ್ತಿದ್ದುದನ್ನು ಕಂಡ ಅಣ್ಣಪ್ಪನವರು ಜಗಳದ ಕಾರಣವನ್ನು ಕೇಳಿದಾಗ ಚಂದ್ರ ಅಣ್ಣಪ್ಪನವರನ್ನು ಅಶ್ಲೀಲ ಶಬ್ದಗಳಿಂದ ನಿಂದಿಸಿ ಅವರ ಕುತ್ತಿಗೆಗೆ ಕತ್ತಿಯಿಂದ ಕಡಿದು ಗಾಯಗೊಳಿರುವ ಬಗ್ಗೆ ಸೋಮವಾರಪೇಟೆ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ವರದಕ್ಷಿಣೆ ಕಿರುಕುಳ, ಪ್ರಕರಣ ದಾಖಲು

 • ವರದಕ್ಷಿಣೆ ತರುವಂತೆ ಪೀಡಿಸಿ ಪತ್ನಿಯ ಮೇಲೆ ಹಲ್ಲೆ ಮಾಡಿರುವ ಘಟನೆ ಶನಿವಾರಸಂತೆ ಠಾಣಾ ವ್ಯಾಪ್ತಿಯ ಹೆಗ್ಗುಳ ಗ್ರಾಮದಲ್ಲಿ ವರದಿಯಾಗಿದೆ. ಹೆಗ್ಗುಳ ಗ್ರಾಮದ ಹೆಚ್‌.ಎ.ವಾಣಿ ಎಂಬವರು ಸುಮಾರು 3 ವರ್ಷಗಳ ಹಿಂದೆ ಅದೇ ಗ್ರಾಮದ ಗಿರೀಶ ಎಂಬವರನ್ನು ಮದುವೆಯಾಗಿದ್ದು, ಗಡಿ ಭದ್ರತಾ ಪಡೆಯಲ್ಲಿ ಉದ್ಯೋಗದಲ್ಲಿರುವ ಆಕೆಯ ಗಂಡ ಗಿರೀಶನು ವರ್ಷಕ್ಕೆರಡು ಬಾರಿ ಮನೆಗೆ ಬಂದು ಹೋಗುತ್ತಿದ್ದನು, ಹಾಗೆ ಮನೆಗೆ ಬಂದಾಗಲೆಲ್ಲಾ ತನ್ನ ಪತ್ನಿ ವಾಣಿಯನ್ನು ತನ್ನ ತವರು ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದು, ದಿನಾಂಕ 10/10/2010ರಂದು ವಾಣಿ ತನ್ನ ತವರು ಮನೆಯಲ್ಲಿರುವಾಗ್ಗೆ ಆರೋಪಿಗಳಾದ ಗಿರೀಶ, ಮತ್ತು ಪೊನ್ನಮ್ಮರವರುಗಳು ಬಂದು ವಾಣಿಯೊಂದಿಗೆ ಜಗಳ ಮಾಡಿ ವರದಕ್ಷಿಣೆ ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿ ಆಕೆ ಮೇಲೆ ಹಲ್ಲೆ ಮಾಡಿರುವುದಾಗಿ ವರದಿಯಾಗಿದ್ದು, ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

Monday, October 11, 2010

CPÀæªÀÄ ¥ÀæªÉñÀ ªÀÄvÀÄÛ PÀ¼ÀĪÀÅ ªÀiÁqÀ®Ä ¥ÀæAiÀÄvÀßzÀ ¥ÀæPÀgÀtUÀ¼ÀÄ:
 • ¦gÁå¢ ²æÃ.R°Ã¯ï,vÉÆÃlzÀ gÉÊlgï,¨ÉªÉ°ð J¸ÉÖÃmï,PÀÄað UÁæªÀÄ EªÀgÀÄ ¨ÉªÉ°ð J¸ÉÖÃmï£À°è vÉÆÃlzÀ gÉÊlgï DV PÉ®¸À ªÀiÁrPÉÆArzÀÄÝ ¸ÁºÀÄPÁgÀgÀÄ ¨ÉAUÀ¼ÀÆj£À°è ªÁ¸ÀªÁVgÀĪÀÅzÁVzÉ.¢:27-09-10 gÀAzÀÄ ¸ÀªÀÄAiÀÄ 04.30 ¦.JA.UÉ PÀÄað UÁæªÀÄzÀ ªÉÄîÌAqÀ DgÉÆæ ¨sÀ«vï PÀĪÀiÁgï vÀ£Àß 3 d£À D¼ÀÄUÀ¼ÉÆA¢UÉ ¦AiÀiÁð¢üAiÀĪÀgÀ vÉÆÃlPÉÌ ºÁQgÀĪÀ ¨ÉðAiÀÄ£ÀÄß 3 PÀqÉ vÀÄAqÀÄ ªÀiÁr £ÀµÀÖ¥Àr¹, vÉÆÃlzÉƼÀUÉ CPÀæªÀÄ ¥ÀæªÉñÀ ªÀiÁr, ¨É¼É¢gÀĪÀ ±ÀÄApAiÀÄ£ÀÄß PÀ¼ÀªÀÅ ªÀiÁqÀ®Ä ¥ÀæAiÀÄvÀߥÀnÖzÀÄÝ, ¦ügÁå¢üAiÀĪÀgÀ£ÀÄß PÀAqÀÄ PÀÆqÀ¯Éà ºÉÆgÀlÄ ºÉÆÃVgÀÄvÁÛgÉ. F ¸ÀA§AzsÀ ¦ügÁå¢üAiÀĪÀgÀÄ ¤ÃrzÀ zÀÆj£À£ÀéAiÀÄ ²æêÀÄAUÀ® oÁuÁ ¥ÉưøÀgÀÄ ¥ÀæPÀgÀt zÁR®Ä ¥Àr¹ ªÀÄÄA¢£À PÀæªÀÄ dgÀÄV¹gÀÄvÁÛgÉ.
 • ¦gÁå¢ J.J¸ï.ªÀÄÄvÀÛtÚ,¨ÉªÉ°ð J¸ÉÖÃmï,PÀÄað UÁæªÀÄ gÀªÀgÀÄ ¨ÉAUÀ¼ÀÆj£À°è ªÁ¸ÀªÁVzÀÄÝ,PÀÄað UÁæªÀÄzÀ°è D¹ÛAiÀÄ£ÀÄß ºÉÆA¢zÀÄÝ, ¦AiÀiÁð¢üAiÀĪÀgÀ vÉÆÃlzÀ ¥ÀPÀÌzÀ°è ªÁ¸ÀªÁVgÀĪÀ ªÉÄîÌAqÀ DgÉÆæ J.J¸ï.ªÉÄÃzÀ¥Àà vÀAzÉ :¯ÉÃmï ¸ÀħâAiÀÄå PÀÄað UÁæªÀÄ gÀªÀgÀÄ ¸É¥ÉÖA§gï wAUÀ½£À°è ¦AiÀiÁð¢üAiÀĪÀgÀ vÉÆÃlPÉÌ ºÁQgÀĪÀ ¨ÉðAiÀÄ 15 PÀA§UÀ¼À£ÀÄß ºÁUÀÆ vÀAwAiÀÄ£ÀÄß QvÀÄÛ ºÁQzÀ®èzÉ zÀ£ÀUÀ¼À£ÀÄß vÉÆÃlzÀ M¼ÀUÉ ©lÄÖ CAzÁdÄ 20,000 gÀÆUÀ¼À ¨É¼ÉUÀ¼À£ÀÄß £Á±À¥Àr¹gÀĪÀÅzÁV ¦ügÁå¢üAiÀĪÀgÀÄ ¢£ÁAPÀ 10-10-2010 gÀAzÀÄ PÉÆlÖ zÀÆj£À£ÀéAiÀÄ ²æêÀÄAUÀ® oÁuÉAiÀÄ°è zÁR°¹zÀ ¥ÀæPÀgÀt.

zÁjvÀqÉzÀÄ ªÀåQÛAiÉƧâgÀ ªÉÄÃ¯É ºÀ¯Éè:

 • ¢£ÁAPÀ 10-10-2010 gÀAzÀÄ ¸ÀªÀÄAiÀÄ 20-20 UÀAmÉUÉ ¦ügÁå¢ JA. ±ÀQÃgï vÀAzÉ ªÀĺÀªÀÄäzï 32 ªÀµÀð ZÉjAiÀÄ¥ÀgÀA§Ä £Á¥ÉÆÃPÀÄè UÁæªÀÄgÀªÀgÀÄ £Á¥ÉÆÃPÀÄè £ÀUÀgÀzÀ ªÀiÁgÀÄPÀmÉÖAiÀÄ ªÀÄÄAzÉ ªÀÄ£ÉUÉ ºÉÆÃUÀÄwÛgÀĪÁUÉÎ DgÉÆæ ¦. C§Äݯï gÀ¦üÃPï vÀAzÉ ¦. C§Äݯï gÀºÀĪÀiÁ£ï 25 ªÀµÀð ZÉjAiÀÄ¥ÀgÀA§Ä £Á¥ÉÆÃPÀÄè UÁæªÀÄ EªÀgÀÄ ¦ügÁåzÀÄzÁgÀgÀ£ÀÄß zÁj vÀqÉzÀÄ KPÁKQ dUÀ¼À PÀ°è¤AzÀ ¦gÁåzÀÄzÁgÀ vÀ¯ÉAiÀÄ ¨sÁUÀPÉÌ ºÉÆqÉzÀÄ UÁAiÀÄ ¥Àr¹zÀÝ®èzÉ PÉÆ®ÄèªÀÅzÁV ¨ÉzÀjPÉ ºÁQgÀĪÀÅzÁV ¤ÃrzÀ zÀÆj£ÀÀ ªÉÄÃgÉ £Á¥ÉÆÃPÀÄè ¥Éưøï oÁuÉAiÀÄ°è vÀAiÀiÁj¹zÀ ªÉÆPÀzÀݪÉÄ.
 • ¢£ÁAPÀ 10-10-10 gÀAzÀÄ ¸ÀªÀÄAiÀÄ 10-30 J.JªÀiï ¸ÀªÀÄAiÀÄzÀ°è gÀ¢Ã±ï JA.«. vÀAzÉ «±Àé£ï ¥ÁæAiÀÄ 27 ªÀµÀð, ZÉvÀÄÛPÀAiÀÄ, PÀjPÉ UÁæªÀÄ EªÀgÀÄ ¥ÁtvÀÆÛjUÉ ºÉÆÃUÀ®Ä ZÉvÀÄÛPÀAiÀÄ §¸ï ¤¯ÁÝtzÀ°è §¸ï UÁV PÁAiÀÄÄvÁÛ CªÀgÀ ¸ÉßûvÀgÁzÀ PÉ.PÉ ¨Á®£ï ªÀÄvÀÄÛ ±ËPÀvï C° gÀªÀgÉÆA¢UÉ ªÀiÁvÁ£ÁrPÉÆAqÀÄ EgÀĪÁUÀÀ CgÉÆæ ZÉvÀÄÛPÁÀAiÀÄ UÁæªÀÄzÀ ªÁ¹ PÉ.PÉ. ¹Ã£À¥Àà JA§ÄªÀgÀÄ ºÀ¼ÉªÉʵÀªÀÄå¢AzÀ dUÀ¼À, vÉUÉzÀÄ PÉÊAiÀÄ°èzÀÝ ZÀÆj¬ÄAzÀ ¦gÁå¢AiÀĪÀgÀ §®UÁ°£À ªÀÄArAiÀÄ ªÉÄïÁâUÀPÉÌ EjzÀÄ UÁAiÀÄUÉƽ¹gÀÄvÁÛgÉ. £ÀAvÀgÀ ¦gÁå¢AiÀĪÀgÀ£ÀÄß PÉÆ¯É ªÀiÁqÀĪÀÅzÁV ¨ÉzÀjPÉ ºÁQgÀÄvÁ£É. F ¸ÀA§AzsÀ ¦ügÁå¢AiÀĪÀgÀÄ ¤ÃrzÀ °ÃTvÀ ¥ÀÄPÁj£À ªÉÄÃgÉ ¨sÁUÀªÀÄAqÀ® ¥Éưøï oÁuÉAiÀÄ°è ¥ÀæPÀgÀt zÁR° ªÀÄÄA¢£À PÀæªÀÄ PÉÊUÉƼÀî¯ÁVzÉ.

Sunday, October 10, 2010

ಜೀವನದಲ್ಲಿ ಜುಗುಪ್ಸೆ, ವ್ಯಕ್ತಿ ಆತ್ಮಹತ್ಯೆ
 • ಜೀವನದಲ್ಲಿ ಜುಗುಪ್ಸೆಗೊಂಡ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ಸ್ಟುವರ್ಟ್‌ ಹಿಲ್ ರಸ್ತೆಯಲ್ಲಿ ನಡೆದಿದೆ. ದಿನಾಂಕ 08/10/2010ರಂದು ಸಂಜೆ ನಗರದ ಸ್ಟೋನ್ ಹಿಲ್ ನಿವಾಸಿ ಲೋಹಿತ್ ಎಂಬಾತನು ಆತನ ಪತ್ನಿ ರೂಪಾಳನ್ನು ಅವಳ ತಂದೆಯು ತನ್ನ ಮನೆಗೆ ಕರೆದುಕೊಂಡು ಹೋದುದಕ್ಕೆ ಜುಗುಪ್ಸೆಗೊಂಡು ನಗರದ ನ್ಯಾಯಾಧೀಶರ ವಸತಿಗೃಹಗಳ ಸಮೀಪದ ರಸ್ತೆಯಲ್ಲಿ ಯಾವುದೋ ವಿಷ ಸೇವಿಸಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತನು ದಿ.09/10/೨೦೧೦ ರಂದು ಅಪರಾಹ್ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗುಂಡೇಟಿನಿಂದ ಕಾಡಾನೆ ಗಾಯ

 • ಗುಂಡು ಹೊಡೆದು ಕಾಡಾನೆಯನ್ನು ಗಾಯಗೊಳಿಸಿದ ಪ್ರಕರಣ ಪೊನ್ನಂಪೇಟೆ ಠಾಣೆಯಲ್ಲಿ ವರದಿಯಾಗಿದೆ. ದಿನಾಂಕ 07/10/2010ರಂದು ಠಾಣಾ ವ್ಯಾಪ್ತಿಯ ಆನೆಚೌಕೂರು ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿಗಳು ವನ್ಯ ಪ್ರಾಣಿಗಳಿಂದ ಬೆಳೆ ನಷ್ಟವುಂಟಾದ ಬಗ್ಗೆ ಪರಿಶೀಲನೆಗೆ ತೆರಳಿದ್ದು, ತಾವರೆಕೆರೆ ಎಂಬ ಸ್ಥಳದಲ್ಲಿ ಕಂದಕದಲ್ಲಿ ಒಂದು ಗಂಡಾನೆಯು ತೀವ್ರವಾದ ಗಾಯಗಳಿಂದ ಬಳಲಿ ಬಿದ್ದಿದ್ದು, ಈ ಬಗ್ಗೆ ಪರಿಶೀಲಿಸಿದ ಅರಣ್ಯ ಇಲಾಖಾ ಪಶು ವೈದ್ಯಾಧಿಕಾರಿಗಳು ಆನೆಯು ಗುಂಡೇಟಿನಿಂದ ಗಾಯಗೊಂಡಿರುವುದಾಗಿ ತಿಳಿಸಿದ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ದೂರವಾಣಿ ಮೂಲಕ ಅಶ್ಲೀಲ ಪದಗಳಿಂದ ನಿಂದನೆ, ಪ್ರಕರಣ ದಾಖಲು

 • ದೂರವಾಣಿ ಮೂಲಕ ಕರೆ ಮಾಡಿ ಗ್ರಾಮ ಪಂಚಾಯಿತಿ ಸದಸ್ಯರೋರ್ವರಿಗೆ ಅಶ್ಲೀಲ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವ ಘಟನೆ ಭಾಗಮಂಡಲ ಠಾಣೆಯಲ್ಲಿ ವರದಿಯಾಗಿದೆ. ದಿನಾಂಕ 08/10/2010 ರಂದು ಭಾಗಮಂಡಲದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ತಲಕಾವೇರಿ ಜಾತ್ರಾ ಸಂಬಂಧ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಭಾಗವಹಿಸಿದ್ದ ಫಿರ್ಯಾದಿ ಸಿರಕಜೆ ಎಸ್ ನಾಗೇಶ ಎಂಬವರಿಗೆ ಚೇರಂಗಾಲ ಗ್ರಾಮದ ಡಿಪ್ಪು ಎಂಬಾತನು ಆತನ ಮೊಬೈಲ್ ಸಂ.9480557244 ರಿಂದ ಫಿರ್ಯಾದಿ ನಾಗೇಶರವರ ಮೊಬೈಲ್‌ಗೆ ಕರೆಮಾಡಿ ಕುಂಬನ ರವೀದ್ರ ಮತ್ತು ತಿಮ್ಮಯ್ಯನವರ ನಡುವಿನ ಗಲಾಟೆಗೆ ನಾಗೇಶರವರೇ ಕಾರಣವೆಂದು ಆರೋಪಿಸಿ ಅಶ್ಲೀಲ ಶಬ್ದಗಳಿಂದ ನಿಂದಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾನೆಂಬ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಭಾಗಮಂಡಲ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Saturday, October 9, 2010

ಅಕ್ರಮ ಮರ ಸಾಗಾಟ, ಆರೋಪಿಗಳ ಬಂಧನ, ಮರ ವಶ
 • ಸರ್ಕಾರದ ಪರವಾನಗಿಯಿಲ್ಲದೆ ಅಕ್ರಮವಾಗಿ ಮರಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದ ಪ್ರಕರಣ ವಿರಾಜಪೇಟೆ ನಗರ ಠಾಣೆಯಲ್ಲಿ ದಾಖಲಾಗಿದೆ. ದಿನಾಂಕ 08/10/2010ರಂದು ವಿರಾಜಪೇಟೆ ನಗರ ಠಾಣಾ ವ್ಯಾಪ್ತಿಯ ಪೆರುಂಬಾಡಿ ಬಳಿ ಅಕ್ರಮವಾಘಿ ಮರ ಸಾಗಾಟ ಮಾಡುತ್ತಿರುವ ಬಗ್ಗೆ ಸುಳಿವು ಪಡೆದ ವಿರಾಜಪೇಟೆ ನಗರ ಠಾಣಾಧಿಕಾರಿ ಅನೂಪ್‌ ಮಾದಪ್ಪ ಸಿಬ್ಬಂದಿಗಳೊಂದಿಗೆ ಧಾಳಿ ನಡೆಸಿ ಸರ್ಕಾರದ ಪರವಾನಿಗೆಯಿಲ್ಲದೆ ಮರ ಸಾಗಾಟ ಮಾಡುತ್ತಿದ್ದ ಪಿ.ಕೆ.ಹಂಸ, ಪಿ.ಕೆ.ಉದಯ, ವಿ.ಕೆ.ಆಲಿ, ಕೆ.ಪಿ.ರಾಫಿ ಎಂಬವರನ್ನು ಬಂಧಿಸಿ ರೂ.20,000 ಮೌಲ್ಯದ ನೊಗ ಮರ ಮತ್ತು ಒಂದು ಪಿಕಪ್ ಜೀಪನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲುಮಾಡಿ ಕ್ರಮ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಕತ್ತಿಯಿಂದ ಕಡಿದು ಹಲ್ಲೆ

 • ಕ್ಷುಲ್ಲಕ ಕಾರಣಕ್ಕೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿದ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಪಾಲಂಗಾಲ ಗ್ರಾಮದಲ್ಲಿ ನಡೆದಿದೆ. ದಿನಾಂಕ 13/09/2010ರಂದು ಪಾಲಂಗಾಲ ಗ್ರಾಮದ ಸಿ.ಎ.ಲಕ್ಷ್ಮಣ ಎಂಬವರು ತಮ್ಮ ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ ಆರೋಪಿಗಳಾದ ಪಾಲೆಯಂಡ ಮಾದಪ್ಪ, ರೋಹಿಣಿ, ಲೀಲಾವತಿ ಮತ್ತು ಪಿ.ಸಿ.ಮಾದಯ್ಯ ಎಂಬವರುಗಳು ಕ್ಷುಲ್ಲಕ ಕಾರಣಕ್ಕೆ ಲಕ್ಷ್ಮಣರವರೊಂದಿಗೆ ಜಗಳವಾಡಿ ಕತ್ತಿಯಿಂದ ಕಡಿದು ಹಲ್ಲೆ ಮಾಡಿದ್ದು, ಈ ಸಂಬಂಧ ಲಕ್ಷ್ಮಣರವರು ನ್ಯಾಯಾಲಯಕ್ಕೆ ದೂರು ನೀಡಿದ್ದು, ನ್ಯಾಯಾಲಯದ ನಿರ್ದೇಶನದ ಮೇರೆಗೆ ವಿರಾಜಫೇಟೆ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿನಾ ಕಾರಣ ಹಲ್ಲೆ, ವ್ಯಕ್ತಿಗೆ ಗಾಯ ಜೀವ ಬೆದರಿಕೆ

 • ವಿನಾ ಕಾರಣ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ಭಾಗಮಂಡಲ ಠಾಣಾ ವ್ಯಾಪ್ತಿಯ ಚೇರಂಗಾಲ ಗ್ರಾಮದಲ್ಲಿ ವರದಿಯಾಗಿದೆ. ದಿನಾಂಕ 08/10/2010 ರಂದು ಅಪರಾಹ್ನ ಚೇರಂಗಾಲ ಗ್ರಾಮದ ಕುಂಬನ ರವೀಂದ್ರರವರ ತಾಯಿ ಪಾತ್ರೆ ತೊಳೆಯುತ್ತಿದ್ದಾಗ ಆರೋಪಿಗಳಾದ ಅದೇ ಗ್ರಾಮದ ಪಾಂಡಿ ತಿಮ್ಮಯ್ಯ ಮತ್ತು ಸುಮಿತ್ರ ಎಂಬವರು ರವೀಂದ್ರರ ತಾಯಿಯನ್ನು ವಿನಾ ಕಾರಣ ದೂಡಿ ಹಾಕಿದ್ದು, ಈ ಬಗ್ಗೆ ವಿಚಾರಿಸಿದ ರವೀಂದ್ರರವರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿ ಗಾಯಗೊಳಿಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಜೇಬುಕಳವು, ಆರೋಪಿ ಬಂಧನ

 • ಜೇಬು ಕಳವು ಮಾಡಿದ ಕಳ್ಳನೊಬ್ಬನನ್ನು ಬಂಧಿಸಿ ಹಣ ವಶಪಡಿಸಿಕೊಂಡಿರುವ ಪ್ರಕರಣ ಮಡಿಕೇರಿ ನಗರ ಠಾಣೆಯಲ್ಲಿ ದಾಖಲಾಗಿದೆ. ದಿನಾಂಕ 08/10/2010ರಂದು ಸಂಜೆ ಪ್ರಕರಣದ ಫಿರ್ಯಾದಿ ಕಡಿಯತ್ತೂರು ಗ್ರಾಮದ ದೋರೆಯನ ಸೋಮಣ್ಣರವರು ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್‌ ಹತ್ತುತ್ತಿರುವಾಗ ಆರೋಪಿ ಪಾಂಡಿಚೆರಿಯ ಜೆ.ಜೆ.ಥೋಮಸ್‌ ಎಂಬವನು ಸೋಮಣ್ಣನವರ ಜೇಬಿನಿಂದ ಪರ್ಸನ್ನು ಕಳವು ಮಾಡಿ ಓಡಿ ಹೋಗುತ್ತಿರುವಾಗ ಸೋಮಣ್ಣ ಹಾಗೂ ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Thursday, October 7, 2010

ರಸ್ತೆ ಅಪಘಾತ ಪ್ರಕರಣಗಳು:
ದಿನಾಂಕ 12-5-2010 ರಂದು ವಿರಾಜಪೇಟೆ ನಗರದ ಡೆಂಟಲ್‌ ಕಾಲೇಜ್‌ ಬಳಿ ಫಿರ್ಯಾಧಿ ಸಿ.ರಾಜೀವನ್‌, ತಂದೆ: ಪೌತಿ ಚಾತು ಇವರು ನಡೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಆರೋಪಿ ಕೆ.ಎಸ್‌. ಮಂದಣ್ಣ, ಕೆ.ಎ.12-9442ರ ವ್ಯಾನ್‌ ಚಾಲಕ ಇವರು ಸದರಿ ವ್ಯಾನ್‌ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಫಿರ್ಯಾಧಿಯವರಿಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಫಿರ್ಯಾಧಿಯವರಿಗೆ ತೀವ್ರತರಹದ ಗಾಯಗಳಾಗಿದ್ದು, ನ್ಯಾಯಾಲಯಕ್ಕೆ ಸಲ್ಲಿಸಿದ ಖಾಸಗಿ ದೂರಿನನ್ವಯ ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುವುದಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣಗಳು:
ದಿನಾಂಕ 6-10-2010 ರಂದು ರಾಮನಗರ- ಬೇಟೋಳಿ ಗ್ರಾಮದ ವಾಸಿ ಭಾಲಕೃಷ್ಣ, ಪ್ರಾಯ-40 ವರ್ಷ ಇವರು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ರಸ್ತೆಯ ಬದಿಯಲ್ಲಿ ಬಿದ್ದಿರುವುದನ್ನು ಕಂಡು ಫಿರ್ಯಾಧಿ ಶ್ರೀಮತಿ ಪುಷ್ಪ, ಗಂಡ: ಭಾಲಕೃಷ್ಣ ಇವರು ವಿರಾಜಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಗೆ ಸಾಗಿಸುವ ಸಮಯ ಮೃತಪಟ್ಟಿದ್ದು, ಫಿರ್ಯಾಧಿಯವರ ದೂರಿನನ್ವಯ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಳ್ಳಲಾಗಿದೆ.
ಕನ್ನ ಕಳವು ಪ್ರಕರಣ:
ದಿನಾಂಕ 6-10-2010 ರಂದು ನೇತಾಜಿ ಬಡಾವಣೆ, ಕುಶಾಲನಗರದಲ್ಲಿ ಫಿರ್ಯಾದಿ ನೀಲಮ್ಮ ಗಂಡ: ಲೇಟ್‌ ರಂಗನಾಥ ಇವರು ತಮ್ಮ ಮನೆಗೆ ಬೀಗವನ್ನು ಹಾಕಿ ಮಾದಾಪಟ್ಟಣದಲ್ಲಿರುವ ಆಕೆಯ ಮಗಳ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಯಾರೋ ಕಳ್ಳವು ಮನೆಗೆ ಹಾಕಿದ ಬೀಗವನ್ನು ಮುರಿದು ಒಳ ಪ್ರವೇಶಿಸಿ ಬೀರುವಿನಲ್ಲಿಟ್ಟಿದ್ದ ರೂ.500/- ಮತ್ತು ಅರ್ಧ ಫವನಿನ ಉಂಗುರ ಹಾಗೂ ಒಂದು ಮೊಬೈಲ್‌ ಫೋನ್‌ನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನನ್ವನ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

Wednesday, October 6, 2010

ಸಂಶಯಾಸ್ಪದ ವ್ಯಕ್ತಿಯ ಬಂಧನ
 • ಸಂಶಯಾಸ್ಪದ ಚಲನವಲನಕ್ಕಾಗಿ ವ್ಯಕ್ತಿಯೋರ್ವನನ್ನು ಬಂಧಿಸಿದ ಪ್ರಕರಣ ಪೊನ್ನಂಪೇಟೆ ಠಾಣೆಯಲ್ಲಿ ವರದಿಯಾಗಿದೆ. ದಿನಾಂಕ 5/10/2010ರಂದು ರಾತ್ರಿ ವೇಳೆ ಸಮಯ ಮುಂಜಾನೆ 02:00 ಗಂಟೆಗೆ ಪೊನ್ನಂಪೇಟೆ ಪಿಎಸ್‌ಐ ಎನ್‌.ಎನ್‌.ರಾಮರೆಡ್ಡಿರವರು ರಾತ್ರಿ ಗಸ್ತಿನಲ್ಲಿರುವಾಗ ತಿತಿಮತಿ ನಗರದ ಬೇಕರಿಯೊಂದರ ಮುಂಭಾಗದಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಆರೋಪಿ ಶ್ರೀರಂಗಪಟ್ಟಣದ ಬೆಳಗೊಳ ಗ್ರಾಮದ ಕುಮಾರ ಎಂಬಾತನನ್ನು ವಿಚಾರಿಸಿದ್ದು, ಆತನು ಆ ಸಮಯದಲ್ಲಿ ತನ್ನ ಇರುವಿಕೆಯ ಬಗ್ಗೆ ಸೂಕ್ತ ಕಾರಣ ನೀಡಲು ವಿಫಲನಾದ ಕಾರಣ ಆತನು ಯಾವುದೋ ಅಪರಾಧವನ್ನು ಮಾಡುವ ಉದ್ದೇಶದಿಂದ ಅಲ್ಲಿದ್ದಾನೆಂಬ ಕಾರಣದಿಂದ ಪಿಎಸ್‌ಐರವರು ಆತನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ವಾಹನ ಸಾಲ ಮರುಪಾವತಿಸದೆ ಮೋಸ, ಪ್ರಕರಣ ದಾಖಲು

 • ಮೋಟಾರು ವಾಹನ ಸಾಲ ಪಡೆದು ವಾಹನ ಖರೀದಿಸಿ ಸಾಲವನ್ನು ಮರುಪಾವತಿ ಮಾಡದೆ ಮೋಸ ಮಾಡಿದ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿರಾಜಪೇಟೆ ತಾಲೂಕಿನ ಹಳ್ಳಿಗಟ್ಟು ಗ್ರಾಮದ ಆಲೀರ ಮಹಮದ್ ಮತ್ತು ನೊಕ್ಯ ಗ್ರಾಮದ ಸುಧೀರ್‌ ಎಂಬವರು ಮಡಿಕೇರಿಯ ಮಹದೇವಪೇಟೆಯಲ್ಲಿರುವ ಶ್ರೀರಾಮ ಮೋಟಾರ್ ಫೈನಾನ್ಸ್ ಕಂಪೆನಿಯಿಂದ ದಿನಾಂಕ 15/06/2007ರಂದು ರೂ 2,77,580 ಹಣವನ್ನು ವಾಹನ ಸಾಲವಾಗಿ ಪಡೆದು ಲಾರಿಯೊಂದನ್ನು ಖರೀದಿಸಿದ್ದು, ಸಾಲವನ್ನು ಮರುಪಾವತಿ ಮಾಡದೆ ಇದ್ದು ಕಂಪೆನಿಗೆ ಮೋಸ ಮಾಡಿರುವುದಾಗಿ ಕಂಪೆನಿಯ ಅಧಿಕಾರಿ ಶಿವಕುಮಾರ್‌ ಎಂಬವರು ನೀಡಿದ ಪುಕಾರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Tuesday, October 5, 2010

ಕಳವು ಪ್ರಕರಣಗಳು:
ದಿನಾಂಕ 4-10-2010 ರಂದು ಗುಂಡೂರಾವ್‌ ಬಡಾವಣೆಯಲ್ಲಿರುವ ಮನೆಗೆ ಫಿರ್ಯಾದಿ ಶ್ರೀಮತಿ ಶಾಹಿದಾಬಾನುರವರು ಬೀಗ ಹಾಕಿಕೊಂಡು ಸಮೀಪದಲ್ಲಿರುವ ತನ್ನ ತಮ್ಮನ ಮನೆಗೆ ಹೋಗಿ ದಿನಾಂಕ 5-10-2010 ರಂದು ಬೆಳಿಗ್ಗೆ 6-00 ಗಂಟೆಗೆ ವಾಪಾಸ್ಸು ತನ್ನ ಮನೆಗೆ ಬಂದು ನೋಡಲಾಗಿ ಮಂಚದ ಕೆಳಗೆ ಇಟ್ಟಿದ್ದ ಕಬ್ಬಿಣದ ಟ್ರಂಕ್‌ ಬಾಕ್ಸ್‌ನ್ನು ಎಳೆದು ಅದರಲ್ಲಿಟ್ಟಿದ್ದ ರೂ.2000 ಗಳನ್ನು, 2 ಸೀರೆ ಮತ್ತು ಒಂದು ಜೊತೆ ಬೆಳ್ಳಿಯ ಕಾಲು ಚೈನನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ಪುಕಾರಿನನ್ವಯ ಶನಿವಾರಸಂತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.
ಅಕ್ರಮ ಪ್ರವೇಶ ಮಾಡಿ ವ್ಯಕ್ತಿ ಯೊಬ್ಬರ ಮೇಲೆ ಹಲ್ಲೆ:
ದಿನಾಂಕ 4-10-2010 ರಂದು ಸೋಮವಾರಪೇಟೆಯ ವಳಗುಂದ ಗ್ರಾಮದಲ್ಲಿ ಆರೋಪಿತರಾದ ಮಂಜು, ಬೈರ, ಕುಮಾರ, ಸುರೇಶ ಮತ್ತು ಮಂಜ (ಎಲ್ಲರೂ ವಳಗುಂದ ಗ್ರಾಮದ ವಾಸಿಗಳು) ಇವರುಗಳು ಸೇರಿಕೊಂಡು ಫಿರ್ಯಾದಿ ಜೇನುಕುಬರ ಸೋಮಕ್ಕ, ಗಂಡ:ರಾಜು, ವಳಗುಂದ ಗ್ರಾಮ, ಕೂಲಿ ಕೆಲಸ ಇವರ ಮನೆಗೆ ಅಕ್ರಮ ಪ್ರವೇಶ ಮಾಡಿ ಹಳೆಯ ವೈಷಮ್ಯದಿಂದ ಜಗಳ ತೆಗೆದು ಫಿರ್ಯಾದಿಯವರ ಎದೆಗೆ ದೊಣ್ಣೆಯಿಂದ ಹೊಡೆದು ನೋವುಪಡಿಸಿರುವುದಾಗಿ ಫಿರ್ಯಾದಿಯವರು ನೀಡಿದ ದೂರಿನನ್ವಯ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುವುದಾಗಿದೆ.
ಮೋಟಾರು ಸೈಕಲ್‌ ಕಳವು:
(1) ದಿನಾಂಕ 3-10-2010 ರಂದು ಮಾದಾಪಟ್ಣ ಗ್ರಾಮದಲ್ಲಿ ಫಿರ್ಯಾದಿ ಐ.ಡಿ. ಜೈಸನ್‌ ಎಂಬುವವರು ತಮ್ಮ ಬಾಪ್ತು ಮೋಟಾರ್‌ ಸೈಕಲ್‌ ಸಂಖ್ಯೆ:ಕೆಎಲ್‌-59 4559ನ್ನು ರಸ್ತೆಯ ಬದಿ ನಿಲ್ಲಿಸಿ ಶುಂಠಿ ಕೆಲಸ ನೋಡಿಕೊಂಡು ವಾಪಾಸ್ಸು ಬಂದು ನೋಡುವಾಗ ಸದರಿಯವರ ಮೋಟಾರು ಸೈಕಲ್‌ನ್ನು ಯಾರೋ ಕಳ್ಳರು ಕಳವುಮಾಡಿ ಕೊಂಡು ಹೋಗಿದ್ದು, ಈ ಸಂಬಂಧ ಕುಶಾಲನಗರ ಪೊಲೀಸರಿಗೆ ದೂರು ನೀಡಿದ್ದು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

(2) ದಿನಾಂಕ 3-10-2010 ರಂದು ಫಿರ್ಯಾದಿ ಯವರು ತಮ್ಮ ಬಾಪ್ತು ಮೋಟಾರ್ ಸೈಕಲ್‌ ಸಂಖ್ಯೆ ಕೆಎ-12 ಜೆ-3392 ಮಳೆ ಬರುತ್ತಿರುವ ಕಾರಣ ತಾಳತ್‌ಮನೆಯ ಕಾವೇರಿ ಹೋಂಸ್ಟೇ ಹತ್ತಿರ ಅಪರಾಹ್ನ 3-00 ಗಂಟೆ ಸಮಯದಲ್ಲಿ ನಿಲ್ಲಿಸಿ ಅಲ್ಲಿಂದ ಮಡಿಕೇರಿಗೆ ಬಂದು ಸಂಜೆ 6-00 ಗಂಟೆಗೆ ಹೋಗಿ ನೋಡಿದಾರ ಯಾರೋ ಕಳ್ಳರು ಸದರಿ ಮೋಟಾರ್‌ ಸೈಕಲನ್ನು ಕಳವುಮಾಡಿ ಕೊಂಡು ಹೋಗಿರುವುದು ಕಂಡುಬಂದಿದ್ದು ಈ ಸಂಬಂಧ ಫಿರ್ಯಾದಿಯವರು ನೀಡಿದ ದೂರಿನನ್ವಯ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣ:
ದಿನಾಂಕ 4-10-2010 ರಂದು ಪೊನ್ನಂಪೇಟೆ ನಗರದ ಮೊಯ್ದುರವರ ಟೈಲರ್‌ ಅಂಗಡಿಯ ಮುಂದುಗಡೆ ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ಎಸ್‌.ಹರೀಶ್‌, ಜನತಾ ಕಾಲೋನಿ, ಪೊನ್ನಂಪೇಟೆ ರವರು ತಮ್ಮ ಮೋಟಾರು ಸೈಕಲ್‌ ಸಂಖ್ಯೆ ಕೆಎ-12 ಈ 2922ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಫಿರ್ಯಾದಿಗೆ ಗಾಯಗಳಾಗಿದ್ದು, ಈ ಸಂಬಂಧ ಸದರಿಯವರು ನೀಡಿದ ದೂರಿನನ್ವಯ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿರುತ್ತದೆ.

Monday, October 4, 2010

ಆತ್ಮಹತ್ಯೆ ಪ್ರಕರಣ:

ದಿನಾಂಕ 21-9-2010 ರಂದು ಸಿದ್ದ, ಕೊಳಗದಾಳು ಗ್ರಾಮ, ಚೇರಂಬಾಣೆ ಇವರು ಸಮಯ 21-15 ಗಂಟೆಗೆ ಬ್ರಾಂದಿ ಎಂದು ತಿಳಿದು ಹೂವಿನ ಗಿಡಗಳಿಗೆ ಸಿಂಪಡಿಸಿಲು ಇಟ್ಟಿದ್ದ ಔಷದಿಯನ್ನು ಕುಡಿದು ವಾಂತಿ ಮಾಡುತ್ತಿದ್ದುದನ್ನು ಕಂಡು ಫಿರ್ಯಾದಿ ಎಸ್‌. ದಿವ್ಯ ಇವರು ಸಿದ್ದರವರನ್ನು ಚಿಕಿತ್ಸೆಗಾಗಿ ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ವೆನ್‌ಲಾಕ್‌ ಆಸ್ಪತ್ರೆಗೆ ದಾಖಲಿಸಿದ್ದು. ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 3-10-2010 ರಂದು ಮೃತಪಟ್ಟಿದ್ದು ಈ ಬಗ್ಗೆ ಫಿರ್ಯಾಧಿಯವರ ದೂರಿನನ್ವಯ ಭಾಗಮಂಡಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಅಬ್ಕಾರಿ ಕಾಯ್ದೆ ಪ್ರಕರಣ:
ಅಕ್ರ ಮ ಸಾರಾಯಿ ಮಾರಾಟ ಮಾಡುತ್ತಿದ್ದ ಪ್ರಕರಣ ನಾಪೋಕ್ಲು ಪೊಲೀಸ್‌ ಠಾಣೆಯಲ್ಲಿ ವರದಿಯಾಗಿದೆ. ದಿನಾಂಕ 3-10-2010 ರಂದು ಫಿರ್ಯಾದಿ ಪಿಎಸ್‌ಐ ಎ.ಪಿ. ರಮೇಶ್‌ ರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಬಾಬಲಿ ಗ್ರಾಮಕ್ಕೆ ಸಿಬ್ಬಂದಿಯವರೊಂದಿಗೆ ತೆರಳಿ ಆರೋಪಿಯ ಅಂಗಡೆಗೆ ದಾಳಿ ನಡೆಸಿದ್ದು, ಆರೋಪಿ ಮುಕ್ಕಾಟಿರ ಗಣೇಶ್‌ ಎಂಬುವರು ಸರಕಾರದ ಪರವಾನಗಿ ಇಲ್ಲದೇ ಅಕ್ರಮವಾಗಿ ಮಾರಾಟ ಮಾಡಲು ಒಂದು ಗೋಣಿಚೀಲದಲ್ಲಿ ತುಂಬಿಸಿಟ್ಟಿದ್ದ ರೂ/1680/- ಬೆಲೆಯ ಓಸಿ ಡಿಲಕ್ಸ್‌ ವಿಸ್ಕೀಯ 48 ಬಾಟಲ್‌ಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುವುದಾಗಿದೆ.

Saturday, October 2, 2010

ರಸ್ತೆ ಅಪಘಾತ ಪ್ರಕರಣಗಳು:
ದಿನಾಂಕ 1-10-2010 ರಂದು ಫಿರ್ಯಾದಿ ಪವನ್‌, ಬಸ್‌ ಚಾಲಕ ಕೆ.ಎಸ್‌.ಆರ್‌.ಟಿ. ಬಸ್‌ ಇವರು ಮಡಿಕೇರಿ ನಗರದಲ್ಲಿ ಬಸ್‌ನ್ನು ಚಲಿಸಿಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಆರೋಪಿತ ವಸಂತ್‌ಕುಮಾರ್‌ ತಮ್ಮ ಬಾಪ್ತು ವಿಆರ್‌ಎಲ್‌ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿ ಫಿರ್ಯಾದಿಯ ಬಸ್‌ಗೆ ಡಿಕ್ಕಿಪಡಿಸಿದ್ದು ಕೆಎಸ್‌ಆರ್‌ಟಿಸಿ ಬಸ್‌ ಜಖಂಗೊಂಡಿದ್ದು, ಈ ಸಂಬಂಧ ನೀಡಿದ ದೂರಿನನ್ವಯ ಮಡಿಕೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುವುದಾಗಿದೆ.
ದಿನಾಂಕ 1-10-2010 ರಂದು ಮಡಿಕೇರಿ ನಗರದ ರೇಸ್‌ ಕೋರ್ಸ್‌ ರಸ್ತೆಯಲ್ಲಿ ಆರೋಪಿತ ಡಿ.ಡಿ. ಚಂಗಪ್ಪ ಎಂಬುವವರು ತಮ್ಮ ಬಾಪ್ತು ಕಾರ್‌ ಸಂ.ಕೆಎ-12 ಎನ್‌ 7752 ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ ರಸ್ತೆಬದಿಯಲ್ಲಿರುವ ವಿದ್ಯುತ್‌ ಕಂಬಕ್ಕೆ ಡಿಕ್ಕಿಪಡಿಸಿ ಕಂಬವು ಮುರಿದು ಬಿದ್ದಿದ್ದು ನಷ್ಟ ಉಂಟಾಗಿದ್ದು, ಅಲ್ಲದೆ ಆರೋಪಿಯ ಕಾರು ಹತ್ತಿರದ ಮಹೇಶ್‌ ಪಟೇಲ್‌ ಎಂಬುವರ ಮನೆಯ ಮೇಲೆ ಬಿದ್ದುದರಿಂದ ಕಾರು ಮತ್ತು ಮನೆ ಜಖಂ ಗೊಂಡಿದ್ದು ಸೂಕ್ತಕ್ರಮಕ್ಕಾಗಿ ಫಿರ್ಯಾದಿ ಪಿ.ಎಸ್‌. ಸುರೇಶ್‌ , ಸಹಾಯಕ ಇಂಜಿನಿಯರ್‌,ಸೆಸ್ಕ್‌ ಮಡಿಕೇರಿ ಇವರು ನೀಡಿದ ದೂರಿನನ್ವಯ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ 30-9-2010 ರಂದು ಸಂಜೆ 5-30 ಗಂಟೆಗೆ ಕಾಕೋಟುಪರಂಬು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಫಿರ್ಯಾದಿಯವರು ತಮ್ಮ ಮನೆಯಲ್ಲಿ ಇರುವ ಸಮಯ ಆರೋಪಿ ಸಿ.ಕೆ. ಸೋಮಣ್ಣ ಎಂಬುವವರು ಕೆ.ಎ.12 ಎನ್‌ 9055 ರ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ ಫಿರ್ಯಾದಿಯವರ ಮನೆಯ ಕಾಂಪೌಂಡ್‌ಗೆ ಡಿಕ್ಕಿಪಡಿಸಿದ ಪರಿಣಾಮ ಕಾಂಪೌಂಡ್‌ಗೆ ಹಾನಿ ಆಗಿದ್ದು ಕಾರು ಸಹ ಜಖಂ ಗೊಂಡಿರುತ್ತದೆ. ಈ ಬಗ್ಗೆ ಫಿರ್ಯಾದಿಯವರು ನೀಡಿದ ದೂರಿನನ್ವಯ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಅತ್ಯಾಚಾರ ಪ್ರಕರಣ:
ದಿನಾಂಕ 1-10-2010 ರಂದು ಗೋಣಿಕೊಪ್ಪ ಪೊಲೀಸ್‌ ಠಾಣೆಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆದ ಬಗ್ಗೆ ಪ್ರಕರಣ ದಾಖಲಾಗಿದೆ. ದಿನಾಂಕ 16-8-2010 ರಂದು ಫಿರ್ಯಾದಿ ಶ್ರೀಮತಿ ಸುನಿತ ಗಂಡ ತಿರುಮುರುಗನ್‌, ಅರುವತ್ತೊಕ್ಲು ಗ್ರಾಮ ಇವರು ತಮ್ಮಮನೆಯಲ್ಲಿ ಇರುವಾಗ ಆರೋಪಿತ ಲಕ್ಷೀಕಾಂತ, ಪೊಲೀಸ್ ಕಾನ್ಸ್‌ಟೇಬಲ್‌, ಗೋಣಿಕೊಪ್ಪ ಠಾಣೆ ಇವರು ಫಿರ್ಯಾದಿಯನ್ನು ಏಕಾಎಕಿ ಮನೆಯೊಳಗೆ ಎಳೆದುಕೊಂಡು ಹೋಗಿ ಪ್ರಜ್ಚಾಹೀನಳಾದ ಆಕೆಯ ಮೇಲೆ ಅತ್ಯಾಚಾರ ಎಸಗಿರುವುದಾಗಿಯೂ, ಅಲ್ಲದೆ ಆರೋಪಿಯು ಸದರಿ ಅತ್ಯಾಚಾರ ಎಸಗಿದ ವಿಡಿಯೋ ಚಿತ್ರೀಕರಿಸಿದ್ದು ಈ ವಿಚಾರವನ್ನು ಬೇರೆಯವರಿಗೆ ಹೇಳಿದರೆ ನಿನ್ನನ್ನು ಕೊಲೆ ಮಾಡುವುದಾಗಿಯೂ ಪದೇ ಪದೇ ದೈಹಿಕ ಸಂಬಂದಕ್ಕೆ ಒತ್ತಾಯಿಸುತ್ತಿದ್ದ ಬಗ್ಗೆ ನೀಡಿದ ದೂರಿನನ್ವಯ ಪೊಲೀಸ್ರು ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

Friday, October 1, 2010

ಕ್ಷುಲ್ಲಕ ಕಾರಣಕ್ಕೆ ಹಲ್ಲೆ, ವ್ಯಕ್ತಿಗೆ ಗಾಯ.

 • ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಟ್ಟೆಮಾಡು ಗ್ರಾಮದಲ್ಲಿ ನಡೆದಿದೆ. ದಿನಾಂಕ 30/09/2010 ರಂದು ಫಿರ್ಯಾದಿ ಕಟ್ಟೆಮಾಡು ಗ್ರಾಮದ ರುಕ್ಮಿಣಿ ಎಂಬವರು ರಾಮಚಂದ್ರ ಎಂಬವರ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾಗ ಆರೋಪಿಗಳಾದ ಅದೇ ಗ್ರಾಮದ ಸಿದ್ದಾರ್ಥ ಮತ್ತು ಲಲಿತ ಎಂಬವರು ಸ್ಥಳಕ್ಕೆ ಬಂದು ಸದ್ರಿ ಜಾಗವು ಅವರದೆಂದು ಹೇಳಿ ರುಕ್ಮಿಣಿಯವರನ್ನು ದೂಡಿ ಕೆಳಗೆ ಬೀಳಿಸಿದ್ದು, ಮತ್ತೋರ್ವ ಕಾರ್ಮಿಕ ಚಟ್ಟು ಎಂಬವನಿಗೆ ದೊಣ್ಣೆಯಿಂದ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಪ್ರಕರಣದ ದಾಖಲಿಸಿಕೊಂಡು ಮಡಿಕೇರಿ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ವ್ಯಾಪಾರ, ಮದ್ಯ ವಶ ಓರ್ವನ ಬಂಧನ

 • ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಮಡಿಕೇರಿ ಗ್ರಾಮಾಂತರ ಪೊಲೀಸರು ಓರ್ವನನ್ನು ಬಂಧಿಸಿ ಮದ್ಯವನ್ನು ವಶಪಡಿಸಿಕೊಂಡಿರುವ ಪ್ರಕರಣ ಮೂರ್ನಾಡುವಿನಿಂದ ವರದಿಯಾಗಿದೆ. ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮೂರ್ನಾಡು ನಗರದ ಸ್ವೀಪರ್‌ಗಳ ವಸತಿ ಗೃಹದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ದೂರವಾಣಿ ಮೂಲಕ ದೊರೆತ ಸುಳಿವಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಎಸ್‌.ಎನ್‌.ಶ್ರೀಕಾಂತ್‌ ಮತ್ತು ಸಿಬ್ಬಂದಿಯವರು ಆರೋಪಿ ಮೂರ್ನಾಡು ನಗರದ ಹೆಚ್‌.ಮಂಜು ಎಂಬವರ ವಸತಿಗೃಹದ ಮೇಲೆ ಧಾಳಿ ನಡೆಸಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಸುಮಾರು ರೂ.4,750 ಬೆಲೆಯ 95 ಕ್ವಾರ್ಟರ್ ಬಾಟಲಿ ಮದ್ಯವನ್ನು ವಶಪಡಿಸಿಕೊಂಡಿದ್ದು, ಆರೋಪಿ ಮಂಜುವನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಳೆ ವೈಷಮ್ಯದಿಂದ ಹಲ್ಲೆ, ವ್ಯಕ್ತಿಗೆ ಗಾಯ

 • ಹಳೆ ವೈಷಮ್ಯದಿಂದ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಕುಶಾಲನಗರ ಠಾಣೆಯಲ್ಲಿ ವರದಿಯಾಗಿದೆ. ದಿನಾಂಕ 30/09/2010ರ ರಾತ್ರಿ ವೇಳೆ ಹಾಸನ ಜಿಲ್ಲೆಯ ಹಾರನಹಳ್ಳಿ ಹೋಬಳಿಯ ಮರಟ್ಟಿಕೊಪ್ಪಲು ನಿವಾಸಿ ಎನ್‌.ಸಿ.ಗಣೇಶ್‌ ಎಂಬವರು ಠಾಣಾ ವ್ಯಾಪ್ತಿಯ ಕೂಡ್ಲೂರುವಿನ ಬಳಿ ಆಟೋ ಚಾಲಿಸಿಕೊಂಡು ಹೋಗುತ್ತಿರುವಾಗ್ಗೆ ಆರೋಪಿಗಳಾದ ಗುಡ್ಡೆಹೊಸೂರುವಿನ ನೌಷಾದ್‌ ಹಾಗೂ 7ನೇ ಹೊಸಕೋಟೆಯ ಮೋಹನ ಎಂಬವರು ಆಟೋ ರಿಕ್ಷಾವನ್ನು ಅಡ್ಡಗಟ್ಟಿ ಹಳೆ ವೈಷಮ್ಯದಿಂದ ಗಣೇಶ್‌ ರವರ ಮೇಲೆ ಕೈ ಹಾಗೂ ಕಲ್ಲಿನಿಂದ ಹೊಡೆದು ಗಾಯಗೊಳಿಸಿರುವ ಬಗ್ಗೆ ನೀಡಿದ ಪುಕಾರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.