Thursday, October 28, 2010

ಅಕ್ರಮಕೂಟ ಸೇರಿ ವ್ಯಕ್ತಿಯೋರ್ವರ ಕೊಲೆ ಬೆದರಿಕೆ, ಪ್ರಕರಣದ ದಾಖಲು:

ದಿನಾಂಕ 26-10-2010 ರಂದು ರಾತ್ರಿ 9-00 ಗಂಟೆಗೆ ವಿರಾಜಪೇಟೆ ನಗರದ ಮುಖ್ಯ ರಸ್ತೆಯಲ್ಲಿ ಆರೋಪಿಗಳಾದ ನೌಷದ್‌, ಇಬ್ರಾಹಿಂ, ಅಶ್ರಫ್‌, ಅಬ್ದುಲ್‌, ರೆಹಮಾನ್‌, ನೌಪಾಲ್‌ ಗಾಂಧಿನಗರ, ಜಮ್ಮಶೀರ್‌ ಗುಂಡಿಕೆಗೆ, ಅಫರವ್‌, ಸಲಾಮ್‌, ರಫೀಕ್‌ ಅಫ್‌ಪಾಖ್‌ ಮತ್ತು ಇತರೆ 50 ಜನ ಅಕ್ರಮಕೂಟ ಸೇರಿಕೊಂಡು ವಾಹನಗಳಲ್ಲಿ ಕಬ್ಬಿಣದ ಸಲಾಕೆ, ಕಲ್ಲು, ದೊಣ್ಣೆ , ಕತ್ತಿ ಲಾಂಗು ಹಿಡಿದುಕೊಂಡು ಫಿರ್ಯಾದಿ ಡಿ.ಎಂ. ಪಾರೂಖ್‌ ರಹೀಂ, ವ್ಯಾಪಾರ ಕೆಲಸ, ಮುಖ್ಯ ರಸ್ತೆ ವಿರಾಜಪೇಟೆ ನಗರ ಇವರ ಮನೆಯ ಹತ್ತಿರ ಬಂದು ಗಲಾಟೆ ಮಾಡಿ ಕೊಲೆಬೆದರಿಕೆ ಹಾಕಿದ್ದು ಈ ಬಗ್ಗೆ ಫಿರ್ಯಾದಿಯವರು ನೀಡಿದ ದೂರಿನನ್ವಯ ವಿರಾಜಪೇಟೆ ನಗರ ಪೊಲೀಸರು ಠಾಣೆಯಲ್ಲಿ ದೂರು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

ಮನೆ ಬೀಗ ಮುರಿದು 22,000 ರೂ. ಬೆಲೆಬಾಳುವ ಸಾಮಾಗ್ರಿ ಕಳವು:

ಫಿರ್ಯಾದಿ ಕೋಟೆರ ಕಾರ್ಯಪ್ಪ, ಮೂರ್ನಾಡು ಬಾಡಗ ಗ್ರಾಮ ಇವರು ತಮಗೆ ಸೇರಿದ ಕದನೂರು ಬೋಯಿಕೇರಿ ಗ್ರಾಮದಲ್ಲಿರುವ ಮನೆಗೆ ಯಾರೋಕಳ್ಳರು ಬಾಗಿಲು ಮುರಿದು ಒಳಗೆ ಪ್ರವೇಶಿಸಿ ಮನೆಯೊಳಗಿದ್ದ ರೂ. 22,000 ಬೆಲೆಬಾಳುವ ಮನೆ ಸಾಮಾಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನನ್ವಯ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂದು ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ.

(1) ದಿನಾಂಕ 12-10-2010 ರಂದು ಸುಂಟಿಕೊಪ್ಪದ ಅತ್ತೂರು ನಲ್ಲೂಲು ಗ್ರಾಮದಲ್ಲಿ ವಾಸವಾಗಿದ್ದ ವ್ಯಕ್ತಿ ಆರ್‌ ರಮೇಶ್‌ ಇವರು ಮನೆಯಿಂದ ಕೆಲಸಕ್ಕೆಂದು ಹೋದವರು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ಅವರ ಪತ್ನಿ ಶ್ರೀಮತಿ ಎ, ಅಶ್ವಿನಿ ಇವರು ನೀಡಿದ ದೂರಿನನ್ವಯ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

(2) 15 ವರ್ಷ ಪ್ರಾಯದ ಹುಡುಗಿ ಕಾಣೆ, ಪ್ರಕರಣದ ದಾಖಲು: ದಿನಾಂಕ 12-10-2010 ರಂದು ಪೊನ್ನಂಪೇಟೆ, ತೋರೆಬೀದಿಯಲ್ಲಿ ವಾಸವಾಗಿರುವ ಹೆಚ್‌.ಟಿ, ಸುರೇಶ ರವರ ಮಗಳಾದ 15 ವರ್ಷ ಪ್ರಾಯದ ಪೂಜಾ ಎಂದಿನಂತೆ ಮನೆಯಲ್ಲಿದ್ದವಳು ಸಾಯಂಕಾಲ ಆಕೆಯ ತಂದೆ ಯವರು ಬಂದು ನೋಡಿದಾಗ ಆಕೆ ಮನೆಯಲ್ಲಿರದ ಬಗ್ಗೆ ತಿಳಿದು ವಿಚಾರಿಸಿದಾದ ಪಕ್ಕದ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಹೋದವಳು ಮತ್ತೆ ಮನೆಗೆ ಬಾರದೇ ಕಾಣೆಯಾಗಿರುವುದಾಗಿ ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.