Saturday, October 30, 2010

ಶಾಲೆಗೆ ಹೋದ ಹುಡುಗ ಕಾಣೆ
  • ಶಾಲೆಗೆಂದು ಹೋದ ಹುಡುಗನೋರ್ವ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಕುಶಾಲನಗರ ಠಾಣಾ ವ್ಯಾಪ್ತಿಯ ಕೂಡು ಮಂಗಳೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 28/10/2010 ರಂದು ಕೂಡು ಮಂಗಳೂರು ಗ್ರಾಮದ ಚಂದ್ರ ಶೇಖರ್ ಎಂಬವರ ಮಗ 16 ವರ್ಷ ಪ್ರಾಯದ ನವೀನ್ ಕುಮಾರ್ ಎಂಬವನು ಶಾಲೆಗೆ ಹೋಗಿ ಬರುವುದಾಗಿ ಕುಶಾಲನಗರಕ್ಕೆ ಹೋಗಿದ್ದು ವಾಪಾಸು ಬಾರದ ಕಾರಣ ನೆಂಟರಿಷ್ಟರಲ್ಲಿ ವಿಚಾರಿಸಿ ಪತ್ತೆಯಾಗದ ಬಗ್ಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.

ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ

  • ಮದ್ಯ ವ್ಯಸನಿ ವ್ಯಕ್ತಿಯೋರ್ವ ಜೀವನದಲ್ಲಿ ಜುಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಪೋಕ್ಲು ಠಾಣಾ ವ್ಯಾಪ್ತಿಯ ಚೋನಕೆರೆಯಲ್ಲಿ ನಡೆದಿದೆ. ಚೋನಕೆರೆಯ ಬಿ.ಎಂ.ಮಹೇಶ ಎಂಬಾತ ವಿಪರೀತ ಮದ್ಯವ್ಯಸನಿಯಾಗಿದ್ದು, ಮದ್ಯಪಾನ ಮಾಡಿ ಮನೆಯಲ್ಲಿ ಜಗಳವಾಡುವ ಅಭ್ಯಾಸವಿದ್ದು, ದಿನಾಂಕ 29/10/2010ರಂದು ಎಂದಿನಂತೆ ಕೂಲಿ ಕೆಲಸ ಮುಗಿಸಿ ಮದ್ಯಪಾನ ಮಾಡಿ ಮನೆಗೆ ಬಂದಿದ್ದು ಮಾರನೆ ದಿನ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದು, ಮನೆಯ ಪಕ್ಕದ ಕಾಡು ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ