Tuesday, November 30, 2010

ಗ್ರಾಮ ಪಂಚಾಯತಿಯಿಂದ ವಂಚನೆ, ಪ್ರಕರಣ ದಾಖಲು:
ಕಂದಾಯದ ಹಣ ಹೊಸ ಕಟ್ಟಡದ ಪರವಾನಗಿ ಶುಲ್ಕದಲ್ಲಿ ಕಿರಗಂದೂರು ಗ್ರಾಮ ಪಂಚಾಯ್ತಿಯವರು ವಂಚಿಸಿದ ಬಗ್ಗೆ ಸೋಮವಾಪೇಟೆ ಠಾಣೆಯಲ್ಲಿ ವರದಿಯಾಗಿದೆ. ಆರೋಪಿಗಳಾದ ಕೆ.ಕೆ.ಪೂಣಚ್ಚ, ಕಾರ್ಯದರ್ಶಿ ಹಾಗೂ ಹೆಚ್.ಬಿ. ಮೋಹನ್‌, ಬಿಲ್‌ ಕಲೆಕ್ಟರ್‌, ಕಿರಗಂದೂರು ಗ್ರಾಮ ಪಂಚಾಯಿತಿ ಇವರುಗಳು ಹೊಸ ಕಟ್ಟಡದ ಪರವಾನಗಿ ಶುಲ್ಕಪಡೆಯುವಲ್ಲಿ ಮತ್ತು ಮನೆ ಕಂದಾರ ಪಡೆಯುವಲ್ಲಿ ಹೆಚ್ಚಿಗೆ ಹಣವನ್ನು ಪಡೆದು ರಶೀದಿಯಲ್ಲಿ ಕಡಿಮೆಹಣ ನಮೂದಿಸಿ ಹಾಗೂ ಕಛೇರಿಯ ಕ್ಯಾಶ್‌ ಪುಸ್ತದಕಲ್ಲಿ ನಮೂದು ಮಾಡದೆ ಸುಮಾರು 9200/ ರೂಗಳನ್ನು ದುರುಪಯೋಗ ಪಡಿಸಿದ ಬಗ್ಗೆ ಸದರಿ ಪಂಚಾಯಿತಿಯ ಅಧ್ಯಕ್ಚರಾದ ಬೆಳ್ಯಪ್ಪ್ನವರು ನೀಡಿದ ದೂರಿನ ಮೇರೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ಅಸ್ವಾಭಾವಿಕ ಮರಣ ಪ್ರಕರಣ:
ದಿನಾಂಕ 29-11-2010 ರಂದು ಶನಿವಾರಸಂತೆ ಠಾಣಾ ವ್ಯಾಪ್ತಿಯ ಮುಳ್ಳೂರು ಗ್ರಾಮದ ವಾಸಿ ಶ್ರೀಮತಿ ಜಯರವರ ಪತಿ ಕೃಷ್ಣರವರು ಹೊಟ್ಟೆನೋವಿನಿಂದ ಬಳಲುತ್ತಿದ್ದು, ಔಷದಿಯ ಬದಲು ಯಾವುದೋ ಕ್ರಿಮಿನಾಶಕವನ್ನು ಸೇವಿಸಿ ಅಸ್ವಸ್ಥರಾಗಿ, ಸದರಿಯವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 30-11-2010 ರಂದು ಮೃತಪಟ್ಟಿದ್ದು, ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿ ಕ್ರಮ ಕೈಗೊಂಡಿದ್ದಾರೆ.
ಶಾಲೆಯಿಂದ ಗ್ಯಾಸ್‌ ಸಿಲೆಂಡರ್‌ ಕಳ್ಳತನ:
ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟೂರು ಗ್ರಾಮದ ಸ.ಹಿ.ಪ್ರಾ. ಶಾಲೆಯ ಕಟ್ಟಡದಿಂದ ರೂ. 1200 ಬೆಲೆಬಾಳುವ ಒಂದು ಗ್ಯಾಸ್‌ ಸಿಲೆಂಡರ್‌ನ್ನು ಯಾರೋ ಕಳ್ಳರು ಕಳುವುಮಾಡಿದ್ದು, ದಿನಾಂಕ 30-11-2010 ರಂದು ಶಾಲೆಯ ಮುಖ್ಯೋಪಾದ್ಯಾಯಿನಿಯವರಾದ ಶ್ರೀಮತಿ ಸಾವಿತ್ರಿಯವರ ಗಮನಕ್ಕೆ ಬಂದು ದೂರು ನೀಡಿದ್ದು, ಭಾಗಮಂಡಲ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

Monday, November 29, 2010

ವ್ಯಕ್ತಿಯ ದಾರಿ ತಡೆದು ಕೊಲೆ ಬೆದರಿಕೆ:

ದಿನಾಂಕ 27-11-2010 ರಂದು ಸಂಜೆ 7-00 ಗಂಟೆಯ ಸಮಯದಲ್ಲಿ ಶ್ರೀಮಂಗಲ ಠಾಣಾ ಸರಹದ್ದಿಗೆ ಸೇರಿದ ತೂಚಮಕೇರಿ ಗ್ರಾಮದಲ್ಲಿ ಸದರಿ ಗ್ರಾಮದ ವಾಸಿ ಪೆಮ್ಮಂಡ ಎಂ.ಗಣಪತಿರವರು ಪೊನ್ನಂಪೇಟೆಗೆ ಹೋಗಿ ವಾಪಾಸ್ಸು ಬರುತ್ತಿರುವಾಗ ಪೆಮ್ಮಂಡ ಅರುಣರವರ ಮನೆಯ ಬಳಿ ಆರೋಪಿ ಮೂಕಳಮಾಡ ರೇಮರವರು ದಾರಿ ತಡೆದು ಹಳೇ ವೈಮನಸ್ಸಿನಿಂದ ಕೊಲೆಮಾಡುವುದಾಗಿ ಬೆದರಿಸಿದ ಬಗ್ಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ 2 ಜನರಿಗೆ ಗಾಯ:

ದಿನಾಂಕ28-11-2010 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಿಟ್ಟಂಗಾಲ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಫಿರ್ಯಾದಿ ಶ್ರೀಮತಿ ಎ. ಸುಮತಿ ಮೇದಪ್ಪರವರು ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಆರೋಪಿ ಜೀಪು ಸಂ.ಕೆಎ-12-ಎಂ9167ರ ಚಾಲಕ ಅತೀ ವೇಗ ಮತ್ತು ಅಜಾರೂಕತೆಯಿಂದ ಓಡಿಸಿ ಆಟೋರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಫಿರ್ಯಾದಿ ಮತ್ತು ಇನ್ನೊಬ್ಬ ವ್ಯಕ್ತಿಗೆ ಗಾಯಗಳಾಗಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಆಟೋ ರಿಕ್ಷಾಕ್ಕೆ ಮಾರುತಿ ಕಾರು ಡಿಕ್ಕಿ, ವ್ಯಕ್ತಿಗೆ ಗಾಯ:

ದಿನಾಂಕ 28-11-2010 ರಂದು ಫಿರ್ಯಾದಿ ಬಿ.ಬಿ. ಪ್ರಭಾಕರರವರು ಬಿಳುಗುಂದ ಗ್ರಾಮದಿಂದ ವಿರಾಜಪೇಟೆಯ ಕಡೆಗೆ ತಮ್ಮ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಆರೋಪಿ ಮಾರೂತಿ-800 ವಾಹನದ ಚಾಲಕ ತನ್ನ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿ ಆಟೋ ರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ಫಿರ್ಯಾದಿಯವರಿಗೆ ಗಾಯಗಳಾಗಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ವ್ಯಕ್ತಿಯ ಕೊಲೆಗೆ ಯತ್ನ, ಪ್ರಕರಣ ದಾಖಲು:

ದಿನಾಂಕ 28-11-2010 ರಂದು ಕಾವಾಡಿ ಗ್ರಾಮದಲ್ಲಿ ಫಿರ್ಯಾದಿ ಎಂ. ಸುಬ್ರಮಣಿಯವರು ತಮ್ಮ ಬಾಪ್ತು ಕಾರಿನಲ್ಲಿ ಹೋಗುತ್ತಾ ಭಗವತಿ ದೇವಾಲಯದ ಬಳಿ ಕಾರನ್ನು ಮುಖ್ಯ ರಸ್ತೆಗೆ ತಿರುಗಿಸುತ್ತಿರುವಾಗ ಆರೋಪಿ ಸುರೇಶ ಎಂಬವರು ತನ್ನ ಕೈಯಲ್ಲಿದ್ದ ಕಲ್ಲಿನಿಂದ ಸುಬ್ರಮಣಿಯವರ ತಲೆಗೆ ಬೀಸಿ ಹೊಡೆದ ಪರಿಣಾಮ ಸುಬ್ರಮಣಿಯವರು ಪ್ರಜ್ಞೆ ತಪ್ಪಿದ್ದು, ಸ್ಥಳದಲ್ಲಿದ್ದ ಸುರೇಶ ಮತ್ತು ವಿಜು ರವರುಗಳು ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿದ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

Saturday, November 27, 2010

ಕ್ಷುಲ್ಲಕ ಕಾರಣ ವ್ಯಕ್ತಿಯ ಮೇಲೆ ಹಲ್ಲೆ:

ದಿನಾಂಕ 24-11-2010 ರಂದು ಸಿ.ಎಂ. ಅಮೀನ, ಗಂಡ ಮಾಹೀನ ರವರನ್ನು ಆರೋಪಿಯಾದ ಇಸ್ಮಾಯಿಲ್‌ರವರು ಬಟ್ಟೆಗೆ ಬಣ್ಣ ಬಿದ್ದ ವಿಷಯದಲ್ಲಿ ಜಗಳ ತೆಗೆದು ಕೈಯಿಂದ ಹಲ್ಲೆನಡೆಸಿದ್ದಲ್ಲದೇ ಫಿರ್ಯಾದಿಯವರನ್ನು ನೂಕಿ ಬೀಳಿಸಿ ನೋವನ್ನುಂಟು ಮಾಡಿದ್ದು, ಈ ಕುರಿತು ಈ ದಿನ ಫಿರ್ಯಾದಿಯವರು ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆಯ ಮೇರೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ವ್ಯಕ್ತಿಯ ದುರ್ಮರಣ:

ದಿನಾಂಕ 26-11-2010 ರಂದು ಫಿರ್ಯಾದಿಯವರ ಡಿ.ಹೆಚ್‌. ರಘು, ಸೋಮವಾರಪೇಟೆ ಇವರ ಮಾವ ಸೋಮಣ್ಣನವರನ್ನು ಯಾರೋ ವ್ಯಕ್ತಿ ತನ್ನ ಮೋಟಾರು ಸೈಕಲ್‌ನಲ್ಲಿ ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಸೋಮಣ್ಣನವರು ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ದಿನಾಂಕ 27-11-2010 ರಂದು ಮೃತಪಟ್ಟಿದ್ದು, ಈ ಸಂಬಂಧ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮಕೈಗೊಂಡಿರುತ್ತಾರೆ.

ಜೀವನದಲ್ಲಿ ಜಿಗುಪ್ಸೆ, ವ್ಯಕ್ತಿಯ ಆತ್ಮಹತ್ಯೆ:

ದಿನಾಂಕ 26-11-2010 ರಂದು ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಪಾಲೂರು ಗ್ರಾಮದಲ್ಲಿ ಬಿ.ಜಿ. ವೆಂಕಪ್ಪ, ಪ್ರಾಯ 75 ವರ್ಷ ಇವರು ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷ ಪದಾರ್ಥ ಸೇವಿಸಿದ್ದು, ಸದರಿಯವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಫಲಕಾರಿಯಾಗದೆ ಇಂದು ದಿನಾಂಕ 27-11-2010ರಂದು ಮೃತಪಟ್ಟಿದ್ದು, ಈ ಸಂಬಂಧ ನಾಪೋಕ್ಲು ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Friday, November 26, 2010

ಕುಲಕ್ಷ ಕಾರಣದಿಂದ ವ್ಯಕ್ತಿಮೇಲೆ ಹಲ್ಲೆ:
ಬಿ.ಎ. ಮೊಹಿದ್ದೀನ್‌ ಪಿಡಬ್ಲ್ಯೂ ಗುತ್ತಿಗೆದಾರರಾಗಿ ಕೆಲಸಮಾಡುತ್ತಿದ್ದು ದಿ: 21-11-2010 ರಂದು ಪಿರ್ಯಾದಿಯು ಎಮ್ಮೆಮಾಡು ಗ್ರಾಮದ ಬಂಡೆಕಲ್ಲು ರಸ್ತೆಯಲ್ಲಿ ರಸ್ತೆ ಕೆಲಸಮಾಡುತ್ತಿರುವಾಗ್ಗೆ ಆರೋಪಿಯಾದ ಸಾದಲಿ ಎಮ್ಮೆಮಾಡು ಗ್ರಾಮದವರು ರಸ್ತೆಗೆ ಬಂದು ಜಾಗದ ವಿಷಯದಲ್ಲಿ ಜಗಳ ತೆಗೆದು ಪಿರ್ಯಾದಿಯವರಿಗೆ ಕೈಯಿಂದ ಹೊಡೆದು ಕಾಲಿನಿಂದ ಒದ್ದು ನೋವು ಪಡಿಸಿ, ಜೀವ ಬೆದರಿಕೆ ಹಾಕಿರುವುದಾಗಿ ಕೊಟ್ಟ ಪುಕಾರಿನ್ವಯ ನಾಪೋಕ್ಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ: ದಿ; 26-11-2010 ರಂದು ನಡಿಕೇರಿ ಗ್ರಾಮದ ಮಾಪಂಡ ಸೂರಪ್ಪ ಎಂಬವರು ಠಾಣೆಗೆ ಹಾಜರಾಗಿ ತಂದೆಯವರು ಮಾನಸಿಕವಾಗಿ ಅಸ್ಪಸ್ಥರಾಗಿದ್ದು ಮನೆ ಬಿಟ್ಟು ಐದು ದಿನ ಕಳೆದರು ಮನೆಗೆ ಬರದೆ ಇದ್ದು ಅವರನ್ನು ಪತ್ತೆ ಹಚ್ಚಿಕೊಡಬೇಕೆಂದು ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

Thursday, November 25, 2010

ಕಳ್ಳತನ ಪ್ರಕರಣ:
ದಿ: 21-11-2010 ರಂದು ಪಿರ್ಯಾದಿಯವರಾದ ಪಿ.ಎಂ. ಸುಬ್ಬಯ್ಯನವರು ಕುಟುಂಬ ಸಮೇತ ಹುತ್ತರಿ ಹಬ್ಬಕ್ಕೆ ಸ್ವಂತ ಊರಾದ ಶನಿವಾರ ಸಂತೆಗೆ ಮನೆಗೆ ಬೀಗ ಹಾಕಿ ಹೋಗಿ ಹಬ್ಬ ಮುಗಿಸಿ ದಿ: 24-11-2010 ರಂದು ಮನೆಗೆ ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಬೀಗ ಮುರಿದು ಗಾಡ್ರೇಜ್‌ ನಲ್ಲಿ ಇಟ್ಟಿದ ಒಟ್ಟು ರೂ 9,000/- ಮತ್ತು 14,000/- ಚಿನ್ನಾಭರಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಕೊಟ್ಟ ಪುಕಾರಿನ್ವಯ ಕುಟ್ಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.
ರಸ್ತೆ ಅಪಘಾತ
ದಿ: 23-11-2010 ರಂದು ಪಿರ್ಯಾದಿಯಾವರಾದ ಹರಿಜನರ ಚೋಮಿ ಎಂಬವರು ಬಸ್ಸಿನಿಂದ ಇಳಿಯುವಾಗ ನಿಲ್ಲಿಸಿದ್ದ ಬಸ್ಸನ್ನು ಅದರ ಚಾಲಕ ಚಾಲನೆ ಮಾಡಿದಾಗ ಬಸ್ಸಿನ ಬಾಗಿಲು ಪಿರ್ಯಾದಿಯವರಿಗೆ ತಗಲಿ ರಸ್ತೆಗೆ ಬಿದ್ದ ಪರಿಣಾಮ ಬಲಗೈ ಹಿಂಬಾಗ ಹಾಗೂ ಬಲದ ಕಿವಿಯ ಬಾಗಕ್ಕೆ ಗಾಯವಾಗಿರುವುದಾಗಿದೆ ಕೊಟ್ಟ ಪುಕಾರಿನ್ವಯ ನಾಪೋಕ್ಲು ಪೊಲೀಸ್‌ ಠಾಣೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

Wednesday, November 24, 2010

ವ್ಯಕ್ತಿಯ ಮೇಲೆ ಹಲ್ಲೆ:- ದಿ: 23-11-2010 ರಂದು ನಾಪೋಕ್ಲು ಪೊಲೀಸ್ ಠಾಣೆಯ ವ್ಯಾಪ್ತಿಯ ಬೇತು ಗ್ರಾಮ ದ ನಿವಾಸಿಯಾದ ಎಂ.ಡಿ. ವರ್ಗಿಸ್‌ ರವರು ಮನೆಯಲ್ಲಿರುವಾಗ್ಗೆ ಅರೋಪಿಯಾದ ಎನ್‌.ಐ.ಸುರೇಶ್‌ ಪಕ್ಕದ ಮನೆಯ ಮಂಜುಳಾ ಎಂಬುವರೊಂದಿಗೆ ಜಗಳವಾಡುತ್ತಿದ್ದುದನ್ನು ಕೇಳಲು ಹೋದ ಪಿರ್ಯಾಧಿ ಗೆ ಆರೋಪಿಯಾದ ಎನ್‌.ಐ.ಸುರೇಶ್‌ನ್ನು ಕಲ್ಲಿನಿಂದ ಹೊಡೆದು ಗಾಯ ಪಡಿಸಿರುವುದಲ್ಲದೇ ಹಾಗೂ ಜೀವ ಬೆದರಿಕೆ ಹಾಕಿರುವುದಾಗಿ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುವುದಾಗಿದೆ.
2)
ಪಿರ್ಯಾದಿದಾರರಾದ ಹ್ಯಾರೀಶ್ ಕೊಳಕೇರಿ ಮುಸ್ಲಿ ಜಮಾಯತ್‌ನ ಅಧ್ಯಕ್ಷರಾಗಿದ್ದು ದಿ: 23-11-2010 ರಂದು ಜಮಾಯತ್‌ ನ ಆಫೀಸಿನ ಕಾರ್ಯದರ್ಶಿವರಾದ ಸಂಷುದ್ದೀನ್‌ ಎಂಬವರೊಂದಿಗೆ ಅಪೀಸಿನ ಲೆಕ್ಕಚಾರವನ್ನು ನೋಡುತ್ತಿರುವಾಗ್ಗೆ ಆರೋಪಿಯಾದ ಟಿ.ಎ. ಅನೀಫ್‌ ರವರು ಅಪೀಸಿಗೆ ಅಕ್ರಮ ಪ್ರವೇಶ ಮಾಡಿ ಹಣಕಾಸಿನ ವಿಷಯದಲ್ಲಿ ಜಗಳ ತೆಗೆದು ಕೈಯಿಂದ ಹೊಡೆದು , ಅವಾಚ್ಯ ಶಬ್ದಗಳಿಂದ ಬೈದು , ಕಲ್ಲಿನಿಂದ ಹೊಡೆದು, ಕೊಲೆ ಬೆದರಿಕೆ ಹಾಕಿರುವುದಾಗಿ ಕೊಟ್ಟ ಪುಕಾರಿನನ್ವಯ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ

ಅಕಸ್ಮಿಕ ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿಯ ದುರ್ಮರಣ : ದಿ: 21-11-2010ರಂದು ಪಿರ್ಯಾದಿಯವರಾದ ಪಂಜರಿ ಎರವರ ಚೀತೆ ಗಂಡ ಮುತ್ತ ರವರು ಸ್ಧಾನ ಮಾಡಲೆಂದು ಕರೆಗೆ ಹೋದವರು ಅಕಸ್ಮಿಕ ವಾಗಿ ಕಾಲು ಜಾರಿ ಕರೆಗೆ ಬಿದ್ದು ಮೃತ ಪಟ್ಟಿರುವುದಾಗಿ ಕೊಟ್ಟ ಪುಕಾರಿನನ್ವಯ ಪೊನ್ನಂಪೇಟೆ ಪೊಲೀಸ್‌ ಠಾಣೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.

ಆತ್ಮಹತ್ಯೆಯ ಪ್ರಕರಣ: ಸೋಮವಾರಪೇಟೆಯ ಸುಳಿಮಳೆ ಗ್ರಾಮದ ಬೋಜ ರವರ ತಮ್ಮ ಮೃತ ಮಣಿ ಎಂಬುವರು ಹೊಟೆನೋವು ಇದ್ದ ಕಾರಣ ಯಾವುದೇ ಕ್ರಿಮಿನಾಶಕ ಜೌಷದಿಯನ್ನು ಸೇವಿಸಿ ಚಿಕಿತ್ಸೆ ಗಾಗಿ ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ 22-11-2010 ರಂದು ಮೃತಪಟ್ಟಿರುವುದಾಗಿ ಕೊಟ್ಟ ಪುಕಾರಿನ ಮೇರೆ ಪ್ರಕರಣವನ್ನು ಸೋಮವಾರಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.Saturday, November 20, 2010

ಮಾನಸಿಕ ರೋಗಿಯ ಆತ್ಮಹತ್ಯೆ:

ಶ್ರೀಮತಿ ಬಿಂದು, ಗಂಡ ಮನುಮಾದಪ್ಪ, ಪ್ರಾಯ 31 ವರ್ಷ, ಬಿಳುಗುಂದ ಗ್ರಾಮ ಇವರು ಬುದ್ದಿ ಭ್ರಮಣೆಯಿಂದಾಗಿ ಚಿಕಿತ್ಸೆಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇದ್ದು, ಸದರಿಯವರು ದಿನಾಂಕ 19-11-2010 ರಂದು ಬೆಳಿಗ್ಗೆ 7-30 ಗಂಟೆಗೆ ಬಿಳುಗುಂದ ಗ್ರಾಮದ ತಮ್ಮ ಮನೆಯ ಹತ್ತಿರ ವಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರ ಸಹೋದರಿಯಾದ ಫಿರ್ಯಾದಿ ಮಾತಂಡ ಶೋಭಾ ಮನು ಇವರು ನೀಡಿದ ದೂರಿನನ್ವಯ ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮಕೈಗೊಂಡಿರುತ್ತಾರೆ.

ಅಕ್ರಮ ಚಕ್ಕೆ ವಶ, ಪ್ರಕರಣ ದಾಖಲು:

ದಿನಾಂಕ 19-11-2010 ರಂದು 16-30 ಗಂಟೆಗೆ ಫಿರ್ಯಾದಿ ಎ.ಪಿ ರಮೇಶ್‌, ಪಿಎಸ್‌ಐ, ನಾಪೋಕ್ಲು ಠಾಣೆ ಇವರಿಗೆ ಬಂದ ಖಚಿತ ವರ್ತಮಾನದ ಮೇರೆ ಜಿಲ್ಲಾ ಅಪರಾಧ ಪತ್ತೆದಳ ಹಾಗೂ ಸಿಬ್ಬಂದಿಯವರೊಂದಿಗೆ ಆರೋಪಿ ಎಂ.ಎಂ. ಉಸ್ಮಾನ್‌, ಹೊದವಾಡ ಗ್ರಾಮ ಇವರ ಮನೆಗೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟ 10 ಚೀಲ ಕುಳಿರ್‌ ಮಾವು ಚಕ್ಕೆಯನ್ನು ವಶಪಡಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Friday, November 19, 2010

ಜೀವನದಲ್ಲಿ ಜಿಗುಪ್ಸೆ ವ್ಯಕ್ತಿ ಆತ್ಮ ಹತ್ಯೆ, ಪ್ರಕರಣ ದಾಖಲು:
ದಿನಾಂಕ 13-11-2010 ರಂದು ದೇವಯ್ಯ ಗುಮ್ಮನಕೊಲ್ಲಿ, ಕುಶಾಲನಗರ ಇವರು ಮನೆಯಿಂದ ಹೊರಗೆ ಹೋದವರು ಕಾಣೆಯಾಗಿದ್ದು, ದಿನಾಂಕ 18-11-2010 ರಂದು ಸದರಿಯವರ ಮ್ಋತ ಹೇಹವು ಕೂಡ್ಲೂರು ಗ್ರಾಮದ ಕಾವೇರಿ ಹೊಳೆಯಲ್ಲಿ ದೊರೆತಿದ್ದು, ಸದರಿಯವರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ನಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಪತ್ನಿಯವರು ನೀಡಿದ ದೂರಿನ ಮೇರೆ ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.
ಕ್ಷುಲ್ಲಕ ಕಾರಣ ವ್ಯಕ್ತಿಯ ನಿಂದನೆ ಮತ್ತು ಕೊಲೆ ಭೆದರಿಕೆ:
ದಿನಾಂಕ 15-11-2010 ರಂದು ಶನಿವಾರಸಂತೆಯ ಹುಲುಕೋಡು ಗ್ರಾಮದಲ್ಲಿ ಫಿರ್ಯಾದಿ ಹೆಚ್‌.ಬಿ. ಮಲ್ಲಪ್ಪ ಎಂಬುವರು ತಮ್ಮ ಮನೆಯಲ್ಲಿರುವಾಗ ಆರೋಪಿ ಫಿರ್ಯಾದಿಯ ಅಳಿಯ ಧರ್ಮಪ್ಪ ಎಂಬವರು ಕೈಯಲ್ಲಿ ದೊಣ್ಣೆಯನ್ನು ಹಿಡಿದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಯನ್ನು ತೋರಿಸಿ ಇದೇ ದೊಣ್ಣೆಯಿಂದ ಹೊಡೆದು ಕೊಲೆ ಮಾಡುವುದಾಗಿ ಬೆಧರಿಕೆ ಹಾಹಿರುವುದಾಗಿ ನೀಡಿದ ದೂರಿನನ್ವಯ ಶನಿವಾರಸಂತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಜೀವನದಲ್ಲಿ ಜಿಗುಪ್ಸೆ ವ್ಯಕ್ತಿಯ ಆತ್ಮಹತ್ಯೆ:
ದಿನಾಂಕ 18-11-2010 ರಂದು ಸಮಯ 4-00 ಗಂಟೆಗೆ ಕಟ್ಟೆಮಾಡು ಗ್ರಾಮದಲ್ಲಿ ಫಿರ್ಯಾದಿ ಜೇನುಕುರುಬರ ಕಡ್ಡಿ ಎಂಬವರ ಮಗ ಜೇನುಕುರುಬರ ರಾಜ ಎಂಬವನು ಕೆಲದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಫಿರ್ಯಾದಿಯವರು ನೀಡಿದ ದೂರಿನ ಮೇರೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

Thursday, November 18, 2010

ಆಟೋರಿಕ್ಷಾ ಡಿಕ್ಕಿ, ಪಾದಾಚಾರಿಗೆ ಗಾಯ.

ವ್ಯಕ್ತಿಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆಟೋರಿಕ್ಷಾ ಡಿಕ್ಕಿಯಾಗಿ ಗಾಯಗೊಂಡ ಪ್ರಕರಣ ಶನಿವಾರಸಂತೆ ಠಾಣಾ ವ್ಯಾಪ್ತಿಯ ಕೊಡ್ಲಿಪೇಟೆ ನಗರದಿಂದ ವರದಿಯಾಗಿದೆ. ದಿನಾಂಕ 17-11-2010 ರಂದು ಫಿರ್ಯಾದಿ ಮುಹಮ್ಮದ್‌ ಯೂನಿಸ್‌ ರವರ ತಮ್ಮನಾದ ಮುಜೀಬ್‌ ರವರು ಕೊಡ್ಲಿಪೇಟೆ ನಗರದ ಮಸೀದಿ ಬಳಿ ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ಆಟೀ ರಿಕ್ಷಾ ಸಂಖ್ಯೆ ಕೆಎ-12-8468ರ ಚಾಲಕ ಸದರಿ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ ಕೊಂಡು ಬಂದು ಮುಜೀಬ್‌ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಸೊಂಟದ ಭಾಗಕ್ಕೆ ತೀವ್ರತರಹದ ನೋವುಂಟಾಗಿರುವುದಾಗಿ ಫಿರ್ಯಾದಿಯವರು ನೀಡಿದ ದೂರಿನ ಮೇರೆ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಹಣದ ವ್ಯವಹಾರ, ವ್ಯಕ್ತಿಯ ಮೇಲೆ ಹಲ್ಲೆ.

ಹಣದ ವಿಚಾರದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಮನೆಯ ಕಿಟಕಿ ಗಾಜುಗಳನ್ನು ಹೊಡೆದು ನಷ್ಟಪಡಿಸಿದ ಪ್ರಕರಣ ಶನಿವಾರಸಂತೆ ಠಾಣಾ ವ್ಯಾಪ್ತಿಯ ಕೋಟೆಯೂರು ಗ್ರಾಮದಿಂದ ವರದಿಯಾಗಿದೆ. ದಿನಾಂಕ 16-11-2010 ರಂದು ಫಿರ್ಯಾದಿ ಕೆ.ಜೆ. ಉಮೇಶ್‌, ಪ್ರಾಯ 24 ವರ್ಷ ಇವರು ಮನೆಯಲ್ಲಿರುವಾಗ ಆರೋಪಿಗಳಾದ ಬಸವನಕೊಪ್ಪ ಗ್ರಾಮದ ವಾಸಿಗಳಾದ ಸೋಮಶೇಖರ ಮತ್ತು ಪ್ರಕಾಶ ಎಂಬವರು ಬಂದು ಫಿರ್ಯಾದಿಯವರನ್ನು ಮನೆಯಿಂದ ಹೊರಗೆ ಕರೆದು ಹಣದ ವಿಚಾರದಲ್ಲಿ ಜಗಳ ಮಾಡಿ ಕೈಯಿಂದ ಹಾಗೂ ಬಾಟಲಿಯಿಂದ ಹಲ್ಲೆನಡೆಸಿ ಗಾಯಪಡಿಸಿದ್ದು, ಅಲ್ಲದೇ ಮನೆಯ ಕಿಟಕಿ ಗಾಜುಗಳನ್ನು ಕಲ್ಲು ಎಸೆದು ಪುಡಿ ಮಾಡಿ ನಷ್ಟಪಡಿಸಿರುವ ಬಗ್ಗೆ ನೀಡಿದ ದೂರಿನನ್ವಯ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಆಕಸ್ಮಿಕ ಬೆಂಕಿ ತಗುಲಿ ಮಹಿಳೆಯೋರ್ವರ ದುರ್ಮರಣ.

ದಿನಾಂಕ 11-11-2010 ರಂದು ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಐಗೂರು ಗ್ರಾಮ ನಿವಾಸಿ ರಾಜೇಶ್‌ರವರ ಪತ್ನಿ ರಮ್ಯ ಎಂಬಾಕೆಯು ತನ್ನ ಮನೆಯಲ್ಲಿ ಒಲೆಗೆ ಬೆಂಕಿ ಹಚ್ಚುವ ಸಮಯ ಸೀಮೆಣ್ಣೆ ದೀಪವು ಆಕಸ್ಮಿಕವಾಗಿ ಧರಿಸಿದ ಬಟ್ಟೆಗೆ ಬೆಂಕಿ ತಗುಲಿ ಸೊಂಟದವರೆಗೆ ಸುಟ್ಟ ಗಾಯಗಳಾದ ಪರಿಣಾಮ ಆಕೆಯನ್ನು ಮೈಸೂರಿನ ಕೆ.ಆರ್‌. ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿ ಯಾಗದೆ ದಿನಾಂಕ 16-11-2010 ರಂದು ಮೃತಪಟ್ಟಿದ್ದು ಈ ಸಂಬಂಧ ಫಿರ್ಯಾದಿ ತಮಿಳರ ವಸಂತಿ ರವರು ನೀಡಿದ ದೂರಿನ ಮೇರೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

ಕಾರಿಗೆ ಬಸ್ಸು ಡಿಕ್ಕಿ, ವ್ಯಕ್ತಿಗೆ ಗಾಯ ಹಾಗೂ ಕಾರು ಜಖಂ:

ದಿನಾಂಕ 16-11-2010 ರಂದು ಫಿರ್ಯಾದಿ ಶ್ರೀನಿವಾಸ ಎಂಬವರು ಕುಶಾಲನಗರದಿಂದ ಮಡಿಕೇರಿ ಕಡೆಗೆ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಮಯ ಗಂಧದ ಕೋಟೆ ಎಂಬಲ್ಲಿ ಎದುರುಗಡೆಯಿಂದ ಆರೋಪಿ ಬಸ್‌ ಚಾಲಕ (ಕೆಎ-45-2827) ಹೆಚ್‌.ಡಿ. ಮಂಜುನಾಥ ರವರು ಸದರಿ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ ಫಿರ್ಯಾದಿಯವರ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಫಿರ್ಯಾದಿಯವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅಲ್ಲದೆ ಕಾರು ಜಖಂ ಗೊಂಡಿರುವುದಾಗಿ ನೀಡಿದ ದೂರಿನ ಮೇರೆ ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ನತಖೆ ಕೈಗೊಂಡಿರುತ್ತಾರೆ.

ವಿನಾ ಕಾರಣ ವ್ಯಕ್ತಿಯ ಮೇಲೆ ಹಲ್ಲೆ, ಪ್ರಕರಣ ದಾಖಲು:

ದಿನಾಂಕ 14-11-2010 ರಂದು ಫಿರ್ಯಾದಿ ಎಂ.ಎ. ಮಜೀದ್‌ ಎಂಬವರು ಸಂಜೆ 5-30 ಗಂಟೆ ಸಮಯದಲ್ಲಿ ಕುಶಾಲನಗರದ ತಟ್ಟಮ್ಮ ಎಂಬುವರ ಮನೆಯ ಮುಂದೆ ಕುಳಿತುಕೊಂಡಿರುವ ಸಮಯದಲ್ಲಿ ಆರೋಪಿತರಾದ ಹರೀಶ್‌ ಮತ್ತು ಇತರರು ಸೇರಿ ಅವಾಚ್ಯ ಶಬ್ದದಿಂದ ನಿಂದಿಸಿ, ಕೈಯಿಂದ ಹಲ್ಲೆ ನಡೆಸಿರುವುದಲ್ಲದೇ ಕತ್ತಿ ತೋರಿಸಿ ಕೊಲ್ಲುವುದಾಗಿ ಜೀವ ಭೆದರಿಕೆ ಹಾಕಿರುವುದಾಗಿ ಫಿರ್ಯಾದಿಯವರು ನೀಡಿದ ದೂರಿನ ಮೇರೆ ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

Tuesday, November 16, 2010

ಹಣದ ವಿಚಾರ, ವ್ಯಕ್ತಿಯ ಮೇಲೆ ಹಲ್ಲೆ:

ದಿನಾಂಕ 15-11-೨೦೧೦ ರಂದು ರಾತ್ರಿ 7-00 ಗಂಟೆಗೆ ಆರೋಪಿ ಕೆ.ಟಿ. ಅನುಕೂಲ್‌, ಮಕ್ಕಂದೂರು ಗ್ರಾಮ ಹಾಗೂ ಇತರೆ ಮೂರು ಜನರು ಸೇರಿ ಫಿರ್ಯಾದಿ ಟಿ.ಅ.ಮನೊರಂಜನ್‌, ಚೈನ್‌ ಗೇಟ್‌, ಮಡಿಕೇರಿ ಇವರನ್ನು ಮಡಿಕೇರಿಯ ಸಂಪಿಗೆಕಟ್ಟೆಗೆ ಟಿಂಬರ್‌ ವ್ಯವಹಾರ ಮಾತನಾಡಲು ಕರೆಸಿಕೊಂಡು ಏಕಾಎಕಿ ಸ್ಟಿಕ್‌ನಿಂದ ಹೊಡೆದು ಹಾಗೂ ಕೋವಿಯಿಂದ ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಹುಡುಗಿ ಕಾಣೆ:

ದಿ: 16-11-2010 ರಂದು ಪಿ.ಯು ಶಿವಣ್ಣರವರು ಮಡಕೇರಿ ಠಾಣೆಗೆ ಹಾಜರಾಗಿ ತನ್ನ ಮಗಳು ಪಿ.ಎಸ್‌ ಅನಂತಿ ದಿ: 7-11-2010 ರಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ತನ್ನ ಬಟ್ಟೆ ಮತ್ತು ಒಂದು ಜೊತೆ ಒಲೆ ಹಾಗೂ ಒಂದು ಸಾವಿರ ಹಣವನ್ನು ತೆಗೆದು ಕೊಂಡು ಮನೆ ಬಿಟ್ಟು ಹೋಗಿರುವುದಾಗಿ ಕೊಟ್ಟ ಪುಕಾರಿನ್ವಯ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

ಆತ್ಮಹತ್ಯೆ ಪ್ರಕರಣ:

ದಿನಾಂಕ 15-11-2010 ರಂದು ಮೃತ್ತ ಕೆ.ಆರ್‌. ಮೊಣ್ಣಪ್ಪ ಕಾರುಗುಂದವರು ಜೀವನದಲ್ಲಿ ಜಗುಪ್ಸೆ ಗೊಂಡು ವಿಷ ಸೇವಿಸಿ , ಚಿಕಿತ್ಸೆಯ ಬಗ್ಗೆ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಲಕಾರಿಯಾಗದೆ ಮೃತಪಟ್ಟಿರುವುದಾಗಿ ಕೊಟ್ಟ ಪುಕಾರಿನ್ವಯ ನಾಪೋಕ್ಲು ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊನ್ದಿರುವುದಾಗಿದೆ

ಕಳ್ಳತನ ಪ್ರಕರಣ:

ದಿನಾಂಕ: 15-11-2010 ರಂದು ಬೆಳಿಗ್ಗೆ 8>00 ಗಂಟೆಗೆ ಪಿರ್ಯಾದಿದಾರರಾದ ಸಿ.ಕೆ. ಯೂಸಫ್‌ ಮತ್ತು ಅವತ ಪತ್ನಿ ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದು , ಕೆಲಸ ಮುಗಿಸಿ ಮನೆಗೆಬಂದಾಗ ಮನೆಯ ಬೀಗವನ್ನು ಮುರಿದು ಯಾರೋ ಕಳ್ಳರು ಗಾಡ್ರೇಜಿನ ಬಾಗಿಲನ್ನು ತೆಗೆದು ಅದರೊಳಗೆ ಇಟ್ಟಿದ ನಗದು ರೂ 5000=00 ಹಾಗೂ 18000 ಮೌಲ್ಯದ ಚಿನ್ನಭರಣ ಗಳು ಒಟ್ಟು 23,000=00 ಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಕೊಟ್ಟ ಪುಕಾರಿನ್ವಯ ನಾಪೋಕ್ಲು ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ .

Monday, November 15, 2010

ಆತ್ಮಹತ್ಯೆ ಪ್ರಕರಣ: ದಿ: 13-11-2010 ರಂದು ಮೃತ್ತ ಶ್ಯಾಮ್‌ನ್ನು ಊಟ ಮುಗಿಸಿ ಮಲಗಲು ಹೋಗಿದ್ದು ಆತನ ತಾಯಿಯು ಕುಡಿಯಲು ಹಾಲು ಕೊಡಲು ಹೋದಾಗ ಮಗ ಕೋಣೆಯಲ್ಲಿ ಕಾಣದಿದ್ದು ಎಲ್ಲಯೂ ಹುಡಿಕಿ ಸೀಗದ ಕಾರಣ ದಿ:14-11-2010 ರ ಬೆಳಿಗ್ಗೆ ಮಗನ ಶವವು ಕರೆಯಲ್ಲಿ ಕಂಡು ಬಂದು ಮೃತ್ತನ ತಂದೆ ಕೊಟ್ಟ ಪುಕಾರಿನ ಮೇಲೆ ಶನಿವಾರ ಸಂತೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿರುವುದಾಗಿದೆ.

ವಿನಾಹ: ಕಾರಣ ವ್ಯಕ್ತಿಯ ಮೇಲೆ ಹಲ್ಲೆ:
ದಿ: 14-11-2010 ರಂದು ಸಮಯ 9:15 ಗಂಟೆ ಪಿರ್ಯಾದಿಯವರಾದ ಎನ್‌.ಎಮ್‌ ದಿವಾಕರ, ಕರ್ಕಳ್ಳಿ ಗ್ರಾಮ ದವರು ಚಿಕ್ಕಪ್ಪನ ಮನೆಗೆ ನಡೆದು ಕೊಂಡು ಹೋಗುತ್ತಿರುವಾಗ ಆರೋಪಿಗಳಾದ ವೆಂಕಟೇಶ್‌, 2) ಶರತ್‌ರವರು ಜಗಳ ತೆಗೆದು ಕಲ್ಲಿನಿಂದ ,ದೊಣ್ಣೆಯಿಂದ ಹೊಡೆದು ನೋವು ಪಡಿಸಿದ ಪರಿಣಾಮ ಪಿರ್ಯಾದಿಯವರು ಕೊಟ್ಟ ಪುಕಾರಿನ ಮೇಲೆ ಪ್ರಕರಣವನ್ನು ಸೋಮವಾರ ಪೇಟೆ ಠಾಣೆಯಲ್ಲಿ ಧಾಖಲಿಸಿ ಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.
ಹೊಳೆಯಲ್ಲಿ ಆಕಸ್ಮಿಕ ಕಾಲು ಜಾರಿ ವ್ಯಕ್ತಿಯ ಮರಣ:
ದಿ: 15-11-2010 ರಂದು ಪಿರ್ಯಾದಿಯಾವರಾದ ಚೌಡಪ್ಪನವರ ದೊಡ್ಡಪ್ಪ ನವರು ಸ್ಥಾನ ಮಾಡಲು ಹಾರಂಗಿ ಹೊಳೆಗೆ ಹೋಗಿದ್ದು ಆಕಸ್ಮಿಕ ವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತ್ತಪಟ್ಟ ಪರಿಣಾಮ ಪಿರ್ಯಾದಿಯವರು ಕೊಟ್ಟ ಪುಕಾರಿನ ಮೇಲೆ ಕುಶಾಲನಗರ ಠಾಣೆ ಯಲ್ಲಿ ಪ್ರಕರನವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

Sunday, November 14, 2010

ಟ್ಯೂಷನ್‌ಗೆಂದು ಹೋದ ಹುಡುಗ ಕಾಣೆ
 • ಟ್ಯೂಷನ್‌ಗೆಂದು ಹೋದ ಹುಡುಗನೋರ್ವ ಮನೆಗೆ ಹಿಂತಿರುಗದೆ ಕಾಣೆಯಾಗಿರುವ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರ ಠಾಣಾ ವ್ಯಾಪ್ತಿಯ ದೇವಸ್ಥಾನ ರಸ್ತೆಯ ವೇದಾಂತ ಸಂಘದ ಬಳಿಯ ನಿವಾಸಿ ಎಸ್‌.ರಮೇಶ್ ಎಂಬವರ ಮಗ 16 ವರ್ಷದ ಅಭಿಲಾಷ್‌ ಎಂಬಾತ ದಿನಾಂಕ 11/11/2010ರಂದು ಟ್ಯೂಷನ್‌ಗೆಂದು ನಗರದ ಗೌಳಿ ಬೀದಿಯಲ್ಲಿರುವ ಚಿಂತನಗಂಗಾ ಟ್ಯುಟೋರಿಯಲ್ಸ್‌ಗೆ ಹೋದವನು ಮನೆಗೆ ಹಿಂತಿರುಗಿ ಬಾರದೇ ಇದ್ದು, ಸಂಬಂಧಿಕರಲ್ಲಿ ವಿಚಾರಿಸಿದರೂ ಪತ್ತೆಯಾಗಿರುವುದಿಲ್ಲವೆಂದು ಫಿರ್ಯಾದಿ ರಮೇಶ್ ನೀಡಿದ ದೂರಿನ ಮೇರೆಗೆ ನಗರ ಠಾಣೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಕಾಣೆಯಾದ ಹುಡುಗನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ವರದಕ್ಷಿಣೆ ಕಿರುಕುಳ, ಮಹಿಳೆಯ ಮೇಲೆ ಹಲ್ಲೆ, ಕೊಲೆ ಬೆದರಿಕೆ
 • ವರದಕ್ಷಿಣೆಗಾಗಿ ಪೀಡಿಸಿ ಮಹಿಳೆಯೋರ್ವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುವ ಘಟನೆ ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಕೂಗೆಕೋಡಿ ಗ್ರಾಮದಲ್ಲಿ ನಡೆದಿದೆ. ಕೂಗೆಕೋಡಿ ಗ್ರಾಮದ ಸರಳಾ ಎಂಬವರು ಅದೇ ಗ್ರಾಮದ ಶಂಕರ ಎಂಬವರನ್ನು 1990ನೇ ಇಸವಿಯಲ್ಲಿ ಬೆಂಗಳೂರಿನ ಚರ್ಚ್‌ ಒಂದರಲ್ಲಿ ಮದುವೆಯಾಗಿದ್ದರು. ನಂತರ 5 ವರ್ಷದ ಬಳಿಕ ಆರೋಪಿ ಶಂಕರನು ಪತ್ನಿಯ ಶೀಲ ಶಂಕಿಸಿ ಕಿರುಕುಳ ನೀಡುವುದು ಮತ್ತು ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಬಗ್ಗೆ ಬೆಂಗಳೂರಿನ ಮಹದೇವಪುರ ಠಾಣೆಯಲ್ಲಿ ಇದೇ ವರ್ಷ ಜುಲೈ ತಿಂಗಳಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ದಿನಾಂಕ 12/11/2010ರಂದು ಆರೋಪಿಯು ಪುನಃ ತನ್ನ ಪತ್ನಿಯಾದ ಸರಳಳೊಂದಿಗೆ ಇದೇ ಕಾರಣವಾಗಿ ಜಗಳವಾಡಿ ಕೈಯಿಂದ ಹಲ್ಲೆ ನಡೆಸಿ ಪೊಲೀಸರಿಗೆ ದೂರು ನೀಡಿದರೆ ಕೊಲ್ಲುವುದಾಗಿ ಬೆದರಿಸಿದ ಬಗ್ಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಜೀವನದಲ್ಲಿ ಜುಗುಪ್ಸೆ, ವಿಷ ಸೇವಿಸಿ ಆತ್ಮಹತ್ಯೆ

 • ವ್ಯಕ್ತಿಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಪೋಕ್ಲು ಠಾಣಾ ವ್ಯಾಪ್ತಿಯ ಕುಂಜಿಲ ಗ್ರಾಮದಲ್ಲಿ ವರದಿಯಾಗಿದೆ. ಕುಂಜಿಲ ಗ್ರಾಮದ ಗಣಪತಿ ಎಂಬವರು ಜೀವನಲದಲಿ ಜುಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮೃತರ ಮಗ ಪೊನ್ನಪ್ಪನವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

Saturday, November 13, 2010

ಆಸ್ತಿ ವಿಚಾರ ತಂದೆಯ ಮೇಲೆ ಮಗನ ಹಲ್ಲೆ, ಪ್ರಕರಣ ದಾಖಲು:

 • ದಿನಾಂಕ 11-11-೨೦೧೦ ರಂದು ಮಾಲಂಬಿ ಗ್ರಾಮದ ವಾಸಿ ಫಿರ್ಯಾದಿ ಬಿ.ಕೆ. ಸುಬ್ಬಯ್ಯರವರು ದನಗಳನ್ನು ಮೇಯಿಸಲೆಂದು ಕಾಡಿಗೆ ಹೋದಾಗ ಅವರ ಮಗ ಆರೋಪಿ ಗಣೇಶ ಕುಮಾರನು ಆಸ್ತಿ ವಿಚಾರದ ವೈಮನಸ್ಸಿನಿಂದ ತಂದೆಯ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದ ಬಗ್ಗೆ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಪರಿಚಿತ ವ್ಯಕ್ತಿಗಳೊಂದ ಹಲ್ಲೆ, ವ್ಯಕ್ತಿಯೋರ್ವನಿಗೆ ಗಾಯ:

 • ದಿನಾಂಕ 12-11-2010 ರಂದು ರಾತ್ರಿ ವೇಳೆಯಲ್ಲಿ ಫಿರ್ಯಾದಿ ಚೆರುವಾಳಂಡ ಕೆ. ಲವರವರು ಅಂಗಡಿಯಿಂದ ಮಡಿಕೇರಿ ನಗರದ ಗೌಳಿಬೀದಿಯ ಮುನೀಶ್ವರ ದೇವಾಲಯದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ 3 ಜನ ಅಪರಿಚಿತ ವ್ಯಕ್ತಿಗಳು ಹಿಂದಿನಿಂದ ಬಂದು ಲವರವರ ತಲೆಗೆ ದೊಣ್ಣೆಯಿಂದ ಹೊಡೆದು ಗಾಯಪಡಿಸಿದ್ದು, ಈ ಸಂಬಂಧ ಫಿರ್ಯಾದಿಯವರು ಮಡಿಕೇರಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಹಳೇ ವೈಷಮ್ಯದಿಂದ ಮಹಿಳೆಯ ಮೇಲೆ ಹಲ್ಲೆ, ಪ್ರಕರಣದ ದಾಖಲು:

 • ದಿನಾಂಕ 12-11-2010 ರಂದು ರಾತ್ರಿ 21-00 ಗಂಟೆಗೆ ತಿತಿಮತಿ ಗ್ರಾಮದ ವಿನಾಯಕ ನಗರದಲ್ಲಿ ಆರೋಪಿಗಳಾದ ಯಶೋಧ, ಸತ್ಯ ಮತ್ತು ಪ್ರಮೋಧರವರು ಫಿರ್ಯಾದಿ ಶ್ರೀಮತಿ ಕೆ.ಎನ್‌. ಪ್ರವಿಧ, ಗಂಡ ಕೆ.ಆರ್‌. ನಾರಾಯಣ ಇವರನ್ನು ಮನೆಯಿಂದ ಹೊರಗೆ ಕರೆದು ಹಳೇ ವೈಷಮ್ಯದಿಂದ ಜಗಳವಾಡಿ ಅಲ್ಲೇ ಬಿದ್ದಿದ್ದ ಮರದ ದೊಣ್ಣೆಯಿಂದ ಪ್ರವಿಧರವರ ಮೇಲೆ ಹಲ್ಲೆ ಮಾಡಿ ಸೀಮೆಣ್ನೆಯನ್ನು ಸುರಿದು ಕೊಲ್ಲುತ್ತೇವೆಂದು ಬೆದರಿಸಿದ್ದು, ಜಗಳ ಬಿಡಿಸಲು ಬಂದ ಪ್ರವಿಧರವರ ಪತಿ ನಾರಾಯಣರವರ ಮೇಲೂ ಹಲ್ಲೆ ನಡೆಸಿ ಗಾಯಗೊಳಿಸಿರುವ ಬಗ್ಗೆ ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಶಾಲಾ ವಿದ್ಯಾರ್ಥಿ ನೀಣುಬಿಗಿದುಕೊಂಡು ಆತ್ಮಹತ್ಯೆ:

 • ದಿನಾಂಕ 12-11-2010 ರಂದು ಕಂಬಿಬಾಣೆ ನಿವಾಸಿ ಶ್ರೀಮತಿ ಲಿಲ್ಲಿ ಎಂಬವರ ಮಗ ರೋನಿ ಎಂಬಾತನು ತಲೆನೋವಿನಿಂದ ಮಾನಸಿಕ ನೊಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣುಬಿಗಿದುಕೊಂಡು ಆತ್ನಹತ್ಯೆ ಮಾಡಿಕೊಂಡಿರುವ ಬಗ್ಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Friday, November 12, 2010

21 ವರ್ಷದ ಹುಡುಗಿ ಕಾಣೆ, ಪ್ರಕರಣದ ದಾಖಲು:

ಕು: ತುಳಸಿ, ತಂದೆ ಕೆ.ನಾರಾಯಣ, 21 ವರ್ಷ, ಕೂರ್ಗಳ್ಳಿ ಎಸ್ಟೇಟ್‌, ಕೊಡಗರಳ್ಳಿ ಗ್ರಾಮ, ಈಕೆ ದಿನಾಂಕ 11-11-2010 ರಂದು ಮೂಹುಷಾರಿಲ್ಲವೆಂದು ಕೆಲಸಕ್ಕೆ ಹೋಗದೇ ಮನೆಯಲ್ಲಿದ್ದು ಸಂಜೆ ಆಕೆಯ ತಂಡೆ ನಾರಾಯಣರವರು ಕೆಲಸದಿಂದ ಬಂದು ನೋಡಿದಾಗ ಆಕೆಯು ಮನೆಯಲ್ಲಿ ಇಲ್ಲದೇ ಇರುವುದು ಕಂಡುಬಂದಿದ್ದು, ಪೆಟ್ಟಿಗೆಯಲ್ಲಿಟ್ಟಿದ್ದ ಚಿನ್ನಾಭರಣಗಳು ಸಹ ಕಾಣೆಯಾಗಿದ್ದು ಆಕೆಯನ್ನು ಪತ್ತೆಹಚ್ಚಿ ಕೊಡುವಂತೆ ಫಿರ್ಯಾದಿ ಕೆ. ನಾರಾಯಣರವರು ನೀಡಿದ ದೂರಿನನ್ವಯ ಸುಂಟಿಕೊಪ್ಪ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ವಂಚನೆ ಪ್ರಕರಣ:

ದಿನಾಂಕ 11-11-2010 ರಂದು ಆರೋಪಿ ಧರ್ಮಪಾಲ, ಆಶ್ರಮಶಾಲೆಯ ವಾರ್ಡನ್‌, ಚೆಂಬುಗ್ರಾಮ ಇವರು ಸಮಾಜ ಕಲ್ಯಾಣ ಇಲಾಖೆಯಿಂದ 8 ಜೀಲ ಅಕ್ಕಿಯನ್ನು ಪಡೆದುಕೊಂಡು ಅದರಲ್ಲಿ 4 ಚೀಲ ಅಕ್ಕಿಯನ್ನು ನೀಡಿ ಉಳಿದ 4 ಚೀಲ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಿ ಇಲಾಖೆಗೆ ವಂಚಿಸುವ ಉದ್ದೇಶದಿಂದ ಸಂಪಾಜೆಯ ಅಂಬಾ ಟ್ರೇಡರ್ಸ್‌ ಅಂಗಡಿಗೆ ನೀಡಿದ್ದು, ಈ ಬಗ್ಗೆ ಫಿರ್ಯಾದಿ ಅರುಣ್‌ ಕುಮಾರ್‌, ಚೆಂಬು ಗ್ರಾಮಪಂಚಾಯ್ತಿ ಉಪಾದ್ಯಕ್ಷರು ನೀಡಿದ ದೂರಿನ ಮೇರೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಕ್ಷುಲ್ಲಕ ಕಾರಣ ವ್ಯಕ್ತಿಯೋರ್ವರ ಮೇಲೆ ಹಲ್ಲೆ:

ದಿನಾಂಕ 10-11-2010 ರಂದು ಫಿರ್ಯಾದಿ ಅಯ್ಯರಣಿಯಂಡ ಅಯ್ಯಣ್ಣ ಇವರು ಮಡಿಕೇರಿಯಿಂದ ಗಾಳಿಬೀಡು ಗ್ರಾಮದ ಒಣಚಲು ಎಂಬಲ್ಲಿಗೆ ಆಟೋ ರಿಕ್ಷಾವನ್ನು ಬಾಡಿಗೆಗೆ ಪಡೆದುಕೊಂಡು ಹೋಗಿದ್ದು, ಗಾಳಿಬೀಡುವಿನ ಶಾಲೆ ಬಳಿಗೆ ತಲುಪುವಾಗ ಆಟೀ ರಿಕ್ಷಾ ಚಾಲಕನು ಮುಂದಕ್ಕೆ ಹೋಗಲು ನಿರಾಕರಿಸಿ ಫಿರ್ಯಾದಿಯವರನ್ನು ಕೆಳಗೆ ಇಳಿಸಿದಾಗ ಅವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು, ಆರೋಪಿತ ಆಟೋಚಾಲಕ ಕಲ್ಲಿನಿಂದ ಫಿರ್ಯಾದಿಗೆ ಹಲ್ಲೆ ಮಾಡಿ ಗಾಯಪಡಿಸಿದ್ದು, ಈ ಸಂಬಂಧ ಫಿರ್ಯಾದಿಯವರು ನೀಡಿದ ದೂರಿನ ಮೇರೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Thursday, November 11, 2010

14 ವರ್ಷ ಪ್ರಾಯದ ಹುಡುಗ ಕಾಣೆ, ಪ್ರಕರಣ ದಾಖಲು:

ವಿರಾಜಪೇಟೆ ನಗರದ ಮೀನುಪೇಟೆಯ ನಿವಾಸಿ ಒ.ಪಿ. ಮಹಮ್ಮದಾಲಿ ಇವರ ಮಗನಾದ 14 ವರ್ಷ ಪ್ರಾಯದ ಸಪ್ವಾನ್‌ ಎಂಬಾತ ದಿನಾಂಕ 8-11-2010 ರಂದು ಸಮಯ 6-30 ಗಂಟೆಗೆ ಎಂದಿನಂತೆ ಅರಬ್ಬಿಶಾಲೆಗೆ ಹೋಗುತ್ತೇನೆಂದು ಹೇಳಿ ಹೋದವನು ಶಾಲೆಗೂ ಹೋಗದೆ ಮನೆಗೂ ಬಾರದೆ ಕಾಣೆಯಾಗಿರುತ್ತಾನೆಂದು ಫಿರ್ಯಾದಿ ಒ.ಪಿ ಮಹಮ್ಮದಾಲಿರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪಾದಾಚಾರಿಗೆ ಗಾಯ:

ದಿನಾಂಕ 10-11-2010 ರಂದು ಫಿರ್ಯಾದಿ ಟಿ.ಕೆ. ಅಬ್ದುಲ್ಲಾ, ಕೂಲಿ ಕೆಲಸ, ಕೊಂಡಂಗೇರಿ ಗ್ರಾಮ ಇವರು ವಿರಾಜಪೇಟೆ ನಗರದ ಸ್ಕ್ಯೆಗೋಲ್ಡ್‌ ಅಂಗಡಿಯ ಮುಂಬಾಗ ನಡೆದುಕೊಂಡು ಹೋಗುತ್ತಿರುವಾಗ ಗಡಿಯಾರ ಕಂಬದ ಕಡೆಯಿಂದ ಆರೋಪಿತ ಬಿಷನ್‌, ಮೋಟಾರ್‌ ಸೈಕಲ್‌ ಚಾಲಕ (ಕೆಎ-13-ಕೆ-9779) ಸದರಿ ಮೋಟಾರ್‌ ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಿಸಿಕೊಂಡು ಬಂದು ಫಿರ್ಯಾದಿಯವರಿಗೆ ಡಿಕ್ಕಿಪಡಿಸಿದ ಪರಿಣಾಮ ಫಿರ್ಯಾದಿಯವರು ಗಾಯಗೊಂಡಿದ್ದು, ಈ ಬಗ್ಗೆ ಸದರಿಯವರು ನೀಡಿದ ದೂರಿನನ್ವಯ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

ಕ್ಷುಲ್ಲಕ ಕಾರಣ ವ್ಯಕ್ತಿಯ ಮೇಲೆ ಹಲ್ಲೆ.

ದಿನಾಂಕ 9-11-2010 ರಂದು ಫಿರ್ಯಾದಿ ಟಿ.ಸಿ. ಚಂದ್ರ ಎಂಬವರು ನಾಲ್ಕೇರಿ ಗ್ರಾಮದ ಕೆ. ರಮೇಶ್‌ ಎಂಬವರ ಅಂಗಡಿಗೆ ಸಾಮಾಗ್ರಿ ತರಲೆಂದು ಹೋಗಿ ಅಲ್ಲಿರುವಾಗ ಆರೋಪಿಗಳಾದ ಕೆ. ರಮೇಶ್‌ ಮತ್ತು ಎ. ಗಿಣಿ ಎಂಬವರು ಫಿರ್ಯಾದಿಯವರೊಂದಿಗೆ ಜಗಳ ತೆಗೆದು ದೊಣ್ಣೆಯಿಂದ ಹಲ್ಲೆ ಮಾಡಿ ಗಾಯಪಡಿಸಿದ್ದು, ನಂತರ ಫಿರ್ಯಾದಿಯವರು ಚಿಕಿತ್ಸೆಗೆ ಗೋಣಿಕೊಪ್ಪ ಆಸ್ಪತ್ರೆಗೆ ದಾಖಲಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

ಮಹಿಳೆಯ ಮೇಲೆ ಮಾನಭಂಗಕ್ಕೆ ಯತ್ನ, ಪ್ರಕರಣ ದಾಖಲು:

ದಿನಾಂಕ 9-11-2010 ರಮಧೂ ಪೀರ್ಯಾದಿ ಶ್ರೀಮತಿ ಬಿ.ಎಲ್‌. ಗಿರಿಜಾ, ಗಂಡ ಲಿಂಗರಾಜು, ಪ್ರಾಯ 30 ವರ್ಷ, ವಾಸ ಗುದ್ದಳ್ಳಿ ಶಾಂತಳ್ಳಿ ಗ್ರಾಮ ಇವರು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ಮಧು ಎಂಬವನು ಹಿಂದಿನಿಂದ ಬಂದು ಫಿರ್ಯಾದಿಯವರ ಕೈಯನ್ನು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಯತ್ನಿಸಿರುತ್ತಾರೆಂದು ನೀಡಿದ ದೂರಿನನ್ವಯ ದಿನಾಂಕ 11-11-2010 ರಂದು ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ.

ದಿನಾಂಕ 10-11-2010 ರಂದು ಫಿರ್ಯಾದಿ ಪಿ. ಮಣಿಕಂಠ ಎಂಬವರು ಐಗೂರು ಗ್ರಾಮದ ಆಟೋ ನಿಲ್ದಾಣದಲ್ಲಿ ತನ್ನ ಆಟೋ ರಿಕ್ಷಾವನ್ನು ನಿಲ್ಲಿಸಿದ್ದು, ಸದರಿ ಗ್ರಾಮ ಒಬ್ಬರು ಬಾಡಿಗೆಗೆ ಮಾತನಾಡಿಕೊಂಡಿರುವಾಗ ಆರೋಪಿಗಳಾದ ಭರತ ಮತ್ತು ಚಂದ್ರ ಎಂಬ ವ್ಯಕ್ತಿಗಳು ಅಲ್ಲಿಗೆ ಬಂದು ನಮ್ಮನ್ನು ಮೊದಲು ನಮ್ಮ ಗ್ರಾಮಕ್ಕೆ ಬಿಡು ಎಂದು ಜಗಳ ತೆಗೆದು ಕಲ್ಲಿನಿಂದ ಫಿರ್ಯಾದಿಯವರ ಮೇಲೆ ಹಲ್ಲೆ ನಡೆಸಿ ಕೈಗಳಿಂದ ಎದೆಗೆ ಗುದ್ದಿ ನೋವನ್ನುಂಟುಮಾಡಿದ್ದು, ಈ ಸಂಬಂಧ ಪಿರ್ಯಾದಿಯವರು ನೀಡಿದ ದೂರಿನ ಮೇರೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

Wednesday, November 10, 2010

ಕಾಡು ಜೇನು ಹುಳು ಕಚ್ಚಿ ವ್ಯಕ್ತಿಯ ದುರ್ಮರಣ:

 • ಕಾಡು ಜೇನುಹುಳುಗಳು ಕಡಿದು ಚಿಕಿತ್ಸೆ ಫಲಕಾರಿಯಾಗದ ವ್ಯಕ್ತಿಯೋರ್ವ ಮೃತಪಟ್ಟಿರುವ ಪ್ರಕರಣ ಶನಿವಾರಸಂತೆ ಠಾಣಾ ವ್ಯಾಪ್ತಿಯ ನಿಲುವಾಗಿಲು ಗ್ರಾಮದಿಂದ ವರದಿಯಾಗಿದೆ. ದಿನಾಂಕ 9-11-2010 ರಂದು 13-15 ಗಂಟೆಗೆ ನಿಲುವಾಗಿಲು ಗ್ರಾಮದಲ್ಲಿ ದೊಡ್ಡಯ್ಯ, 70 ವರ್ಷ ಪ್ರಾಯ ಇವರು ದನಗಳನ್ನು ಮೇಯಿಸುತ್ತಿದ್ದಾಗ ಕಾಡು ಜೇನುಗಳು ಕಚ್ಚಿದ ಪರಿಣಾಮ ತೀವ್ರತರಹದ ನೋವುಂಟಾಗಿದ್ದು, ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸದರಿಯವರು ಮೃತಪಟ್ಟಿದ್ದು, ಈ ಸಂಬಂಧ ಮೃತರ ಪತ್ನಿ ಫಿರ್ಯಾದಿ ಶ್ರೀಮತಿ ಸಾವಿತ್ರಮ್ಮ ಇವರು ನೀಡಿದ ದೂರಿನನ್ವಯ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಅಕ್ರಮ ಪ್ರವೇಶ, ವ್ಯಕ್ತಿಯೊಬ್ಬರ ಮೇಲೆ ಹಲ್ಲೆ.

 • ವ್ಯಕ್ತಿಯೋರ್ವರಿಂದ ಮನೆಗೆ ಅಕ್ರಮ ಪವೇಶ ಮಾಡಿ ಹಲ್ಲೆನಡೆಸಿದ ಪ್ರಕರಣ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ನಲ್ಲೂರು ಗ್ರಾಮದಿಂದ ವರದಿಯಾಗಿದೆ. ದಿನಾಂಕ 9-11-2010 ರಂದು ಸಮಯ 18-30 ಗಂಟೆ ಆರೋಪಿ ಮುತ್ತ ಎಂಬವರು ಫಿರ್ಯಾದಿ ಸೀತಾ ಎಂಬುವರ ಮನೆಗೆ ನಿಶಾಮತ್ತನಾಗಿ ಬಂದು ಅಕ್ರಮ ಪ್ರವೇಶ ಮಾಡಿ ತನ್ನ ಹೆಂಡತಿಯ ಬಗ್ಗೆ ಜಗಳ ಮಾಡಿ ಫಿರ್ಯಾದಿಗೆ ಕತ್ತಿಯಿಂದ ಕಡಿದು ಗಾಯಪಡಿಸಿದ್ದು, ಫಿರ್ಯಾದಿಯವರು ಗೋಣಿಕೊಪ್ಪ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ದೂರಿನನ್ವಯ ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಒಬ್ಬನಿಗೆ ಗಾಯ.

 • ದಿನಾಂಕ 9-11-2010 ರಂದು ಸಂಜೆ ತಾವೂರು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಆರೋಪಿತ ತನ್ನ ಮೋಟಾರ್‌ ಸೈಕಲ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಿಸಿದ ಪರಿಣಾದ ಆತ ತಾರು ರಸ್ತೆಯಲ್ಲಿ ಬಿದ್ದು ಗಾಯಗಳಾಗಿದ್ದು, ಆತನನ್ನು ಕಂಡ ಫಿರ್ಯಾದಿ ಎಂ.ಎಂ. ಉತ್ತಪ್ಪ, ಚೆಟ್ಟಿಮಾನಿ ಗ್ರಾಮ ಇವರು ಆಸ್ಪತ್ರೆಗೆ ದಾಖಲಿಸಿದ್ದು, ಈ ಸಂಬಂಧ ಭಾಗಮಂಡಲ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತರಾರೆ.

ಕಾರು ಡಿಕ್ಕಿ, ಪಾದಾಚಾರಿಗಳಿಗೆ ಗಾಯ.

 • ದಿನಾಂಕ 9-11-2010 ರಂದು ಸಮಯ 11-30 ಗಂಟೆಗೆ ಮುನಾಡು ನಗರದ ಸಿಂಡಿಕೇಟ್‌ ಬ್ಯಾಂಕ್‌ ಬಳಿ ಫಿರ್ಯಾದಿ ಟಿ.ವಿ. ಸುಭಾಷ್‌ ಹಾಗೂ ಕಾರ್ಯಪ್ಪ ಎಂಬುವರು ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ಗೋಪಾಲಕೃಷ್ಣ, ಕೆಎ-12-ಎನ್‌-7377ರ ಸ್ಯಾಂಟ್ರೋ ಕಾರು ಚಾಲಕನು ಸದರಿ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಿಸಿ ಡಿಕ್ಕಿಪಡಿಸಿದ ಪರಿಣಾಮ ಫಿರ್ಯಾದಿ ಮತ್ತು ಕಾರ್ಯಪ್ಪ ಎಂಬುವರಿಗೆ ಗಾಯಗಳಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ, ಪ್ರಕರಣ ದಾಖಲು:

 • ದಿನಾಂಕ 9-11-2010 ರಂದು ಬೆಳಿಗ್ಗೆ ಫಿರ್ಯಾದಿ ಹೆಚ್‌.ಆರ್‌. ಶಿವಪ್ಪ, ಸಂಚಾರಿ ನಿಯಂತ್ರಕರು, ಕೆಎಸ್‌ಆರ್‌ಟಿಸಿ ಸಂಸ್ಥೆ ಇವರು ಪ್ರಯಾಣಿಕರು ತಂಗುವ ಸ್ಥಳವನ್ನು ಗಮನಿಸಿದಾಗ ಅಲ್ಲಿ ಒಬ್ಬ ಅಪರಿಚಿತ ಅನಾಥ ವ್ಯಕ್ತಿಯು ಮೃತಪಟ್ಟಿರುವುದು ಕಂಡು ಬಂದು, ಈ ಸಂಬಂಧ ನೀಡಿದ ದೂರಿನ ಮೇರೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Tuesday, November 9, 2010

ಭೀಕರ ರಸ್ತೆ ಅಪಘಾತ ಇಬ್ಬರು ವ್ಯಕ್ತಿಗಳ ದುರ್ಮರಣ:

 • ದಿನಾಂಕ 9-12-2010 ರಂದು ಸಮಯ ರಾತ್ರಿ 10:45 ಗಂಟೆಗೆ ಆರೋಪಿತ ಚೆಪ್ಪುಡೀರ ಮೋಹನ್‌ ಕಾವೇರಪ್ಪ, ಕಿರಗೂರು ಗ್ರಾಮ, ಪೊನ್ನಂಪೇಟೆ ಇವರು ತಮ್ಮ ಹೊಸದಾಗಿ ಖರೀದಿಸಿದ ಟಾಟಾ ಎಸ್‌ ಕಾರನ್ನು ಮಡಿಕೇರಿ ಗ್ರಾಮಾಂತರ ಪೊಲೀಸ್‌‌ ಠಾಣಾ ಸರಹದ್ದಿನ ಹಾಕತ್ತೂರು ಎಂಬಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿದ ಚಾಲಕನ ಹತೋಟಿ ಕಳೆದುಕೊಂಡು ರಸ್ತೆಬದಿಯಲ್ಲದ್ದ ಮರವೊಂದಕ್ಕೆ ಡಿಕ್ಕಿಗೊಂಡು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಪ್ಪುಡೀರ ಮೋಹನ್‌ ಹಾಗೂ ಮಣಿ ಎಂಬ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಚಾಲಕ ಚೆಪ್ಪಡೀರ ಮೋಹನ್‌ ಹಾಗೂ ಇತರೆ 3 ಜನರಿಗೆ ತೀವ್ರತರಹದ ಗಾಯಗಳಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಹಳೇ ವೈಷಮ್ಯದಿಂದ ವ್ಯಕ್ತಿಯೋರ್ವರ ದಾರಿ ತಡೆದು ಹಲ್ಲೆ:
 • ವ್ಯಕ್ತಿಯೊಬ್ಬರ ದಾರಿ ತಡೆದು ಹಲ್ಲೆ ನಡೆಸಿದ ಪ್ರಕರಣ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಚೆಂಬು ಗ್ರಾಮದಿಂದ ವರದಿಯಾಗಿದೆ. ಈ ದಿನ ದಿನಾಂಕ 9-11-2010 ರಂದು ಬೆಳಿಗ್ಗೆ 8-00 ಗಂಟೆಗೆ ಚೆಂಬು ಗ್ರಾಮದಲ್ಲಿ ಫಿರ್ಯಾದಿ ಕೊಡೆಕಲ್ಲು ವಿಶ್ವನಾಥ ಎಂಬವರು ತಮ್ಮ ಇಬ್ಬರು ಮಕ್ಕಳನ್ನು ಶಾಲೆಗೆ ಜೀಪಿನಲ್ಲಿ ಕರೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಆರೋಪಿಗಳಾದ ಹೊದ್ದೋಟಿ ಶಿವರಾಮ, ಪ್ರಮೋದ್‌ ಮತ್ತು ಗೀತ ರತ್ನ ಇವರುಗಳು ಸೇರಿ ಫಿರ್ಯಾದಿಯ ದಾರಿ ತಡೆದು ದೊಣ್ಣೆ ಹಾಗೂ ಕತ್ತಿಯಿಂದ ಕಡಿದು ಗಾಯ ಪಡಿಸಿದ್ದು ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಈ ಸಂಬಂಧ ಫಿರ್ಯಾದಿಯವರು ನೀಡಿದ ದೂರಿನನ್ವಯ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

Monday, November 8, 2010

ಆಸ್ತಿ ವಿವಾದ, ದಾರಿ ತಡೆದು ಹಲ್ಲೆ, ಕೊಲೆ ಬೆದರಿಕೆ
 • ಆಸ್ತಿ ವಿವಾದದಿಂದ ವ್ಯಕ್ತಿಯೋರ್ವನನ್ನು ದಾರಿ ತಡೆದು ಕತ್ತಿಯಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಒಡ್ಡಿರುವ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಬೆಟ್ಟತ್ತೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 06/11/2010ರಂದು ಬೆಟ್ಟತ್ತೂರು ಗ್ರಾಮದ ರಮೇಶ ಎಂಬವರು ತೋಟದ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿರುವಾಗ ಆರೋಪಿಗಳಾದ ಅದೇ ಗ್ರಾಮದ ಧರ್ಮಪಾಲ ಮತ್ತು ಸಿ.ಕೆ.ಗೋಪಾಲ ಎಂಬವರು ಬೇಲಿ ಕಡಿದ ವಿಷಯದಲ್ಲಿ ದಾರಿ ತಡೆದು ಜಗಳವಾಡಿ ಕತ್ತಿಯಿಂದ ಹಲ್ಲೆ ಮಾಡಿ ಕೋವಯಿಂದ ಗುಂಡು ಹೊಡೆದು ಸಾಯಿಸುವುದಾಗಿ ಬೆದರಿಸಿರುವ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ

 • ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿದ ಘಟನೆ ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಕಾಗಡಿಕಟ್ಟೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 7/11/2010ರಂದು ಫಿರ್ಯಾದಿ ವಿಜಯರವರು ಮಾಂಸ ತರಲು ಕಾಗಡಿಕಟ್ಟೆಗೆ ನಡೆದುಕೊಂಡು ಹೋಗುತ್ತಿರುವಾಗ ಆರೋಪಿಗಳಾದ ಉದಯ, ಗೌತಮ್, ಲೋಕೇಶ ಮುಂತಾದವರು ಸೇರಿ ಕ್ಷುಲ್ಲಕ ಕಾರಣಕ್ಕೆ ವಿಜಯರವರೊಂದಿಗೆ ಜಗಳವಾಡಿ ಕೈಯಿಂದ ಮುಖಕ್ಕೆ ಹೊಡೆದು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಸೋಮವಾರಪೇಟೆ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಣಕ್ಕಾಗಿ ಪತ್ನಿಯ ಮೇಲೆ ಪತಿಯಿಂದ ಹಲ್ಲೆ

 • ಹಣಕ್ಕಾಗಿ ಪೀಡಿಸಿ ಪತ್ನಿಯ ಮೇಲೆ ಹಲ್ಲೆ ನಡೆಸಿದ ಘಟನೆ ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಕಲ್ಕಂದೂರು ಗ್ರಾಮದಲ್ಲಿ ಈ ದಿನ ನಡೆದಿದೆ. ಈ ದಿನ ದಿನಾಂಕ 08/11/2010ರಂದು ಅಪರಾಹ್ನ ಕಲ್ಕಂದೂರು ಗ್ರಾಮದ ಶ್ರೀಮತಿ ಜಯಮ್ಮ ಎಂಬವರು ಮನೆಯಲ್ಲಿರುವಾಗ ಆಕೆಯ ಪತಿ ಕೃಷ್ಣಪ್ಪ ಎಂಬವರು ಹಣಕ್ಕಾಗಿ ಆಕೆಯೊಂದಿಗೆ ಜಗಳವಾಡಿ ಕೈಯಿಂದ ಮುಖಕ್ಕೆ ಹೊಡೆದುದಲಲ್ಲದೆ ಆಕೆಯ ತಾಯಿ ಹಾಗೂ ತಂಗಿಯರಿಗೆ ದೊಣ್ಣೆಯಿಂದ ಹೊಡೆದು ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಪ್ರವೇಶ, ವ್ಯಕ್ತಿಯ ಮೇಲೆ ಹಲ್ಲೆ, ಕೊಲೆ ಬೆದರಿಕೆ

 • ಮನೆಗೆ ಅಕ್ರಮ ಪ್ರವೇಶ ಮಾಡಿ ವ್ಯಕ್ತಿಯೋರ್ವರನ್ನು ಅಶ್ಲೀಲ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ ಘಟನೆ ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಕಾರೆಕೊಪ್ಪ ಎಂಬಲ್ಲಿ ನಡೆದಿದೆ. ದಿನಾಂಕ 07/11/2010ರಂದು ರಾತ್ರಿ ಫಿರ್ಯಾದಿ ತಮಿಳರ ರಾಜಮ್ಮ ಎಂಬವರು ಮನೆಯಲ್ಲಿರುವಾಗ ಆರೋಪಿಗಳಾದ ತಮಿಳರ ರಾಜು ಮನೆಗೆ ಅಕ್ರಮ ಪ್ರವೇಶ ಮಾಡಿ ಆಕೆಯನ್ನು ಅಶ್ಲೀಲ ಶಬ್ದಗಳಿಂದ ನಿಂದಿಸಿ ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, November 7, 2010

ರಸ್ತೆ ಅಫಘಾತ, ವ್ಯಕ್ತಿಯೋರ್ವರ ಸಾವು
 • ರಸ್ತೆ ಅಫಘಾತವೊಂದರಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕುಶಾಲನಗರ ಠಾಣಾ ವ್ಯಾಪ್ತಿಯ ಗುಡ್ಡೆ ಹೊಸೂರುವಿನಲ್ಲಿ ಈ ದಿನ ವರದಿಯಾಗಿದೆ. ದಿನಾಂಕ 11/11/2010ರ ರಾತ್ರಿ 11 ಘಂಟೆಗೆ ಫಿರ್ಯಾದಿ ಗುಡ್ಡೆಹೊಸೂರು ನಿವಾಸಿ ಬಿ.ವೈ.ದೇವೇಂದ್ರರವರ ತಾಯಿ ಮನೆಯಲ್ಲಿರುವಾಗ್ಗೆ ಪಕ್ಕದ ಮನೆಯ ಶಿವಣ್ಣ ಎಂಬವರು ಬಂದು ದೇವೇಂದ್ರರ ಅಣ್ಣ ಧನಂಜಯರವರು ರಸ್ತೆ ಅಫಘಾತದಿಂದ ಮೃತಪಟ್ಟ ವಿಷಯವನ್ನು ತಿಳಿಸಿದ್ದು, ಕೂಡಲೇ ಸಿದ್ದಾಪುರ ರಸ್ತೆಯ ಕೊಳಂಬೆ ಪೊನ್ನಪ್ಪನವರ ಮನೆಯ ಮುಂದಿನ ಸ್ಥಳಕ್ಕೆ ತೆರಳಿದಾಗ ಧನಂಜಯನವರು ಯಾವುದೋ ವಾಹನವು ಡಿಕ್ಕಿಪಡಿಸಿದ ಪರಿಣಾಮ ರಸ್ತೆಯಲ್ಲಿಯೇ ಮೃತರಾಗಿರುವುದು ಕಂಡು ಬಂತು ಎಂಬ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಈ ದಿನ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಜಾತಿ ನಿಂದನೆ ಮತ್ತು ಹಲ್ಲೆ, ಪ್ರಕರಣ ದಾಖಲು
 • ಜಾತಿ ನಿಂದನೆ ಮತ್ತು ಕೊಲೆ ಬೆದರಿಕೆ ಪ್ರಕರಣವೊಂದು ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಯಲಕನೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 06/11/2010ರ ಸಂಜೆ ಪ್ರಕರಣದ ಫಿರ್ಯಾದಿ ತಮಿಳರ ನಾಗರಾಜು ಎಂಬವರು ಗ್ರಾಮದ ಶಿವಕುಮಾರ ಎಂಬವರ ಅಂಗಡಿಯಿಂದ ದಿನ ನಿತ್ಯದ ಸಾಮಾನುಗಳನ್ನು ಖರೀದಿಸಿ ಮನೆಗೆ ಹೋಗುತ್ತಿದ್ದಾಗ, ಆರೋಪಿಗಳಾದ ಅದೇ ಗ್ರಾಮದ ದೀಪು ಮತ್ತು ಶಶಿ ಎಂಬವರು ನಾಗರಾಜುರವರನ್ನು ದಾರಿ ತಡೆದು ಅಶ್ಲೀಲ ಶಬ್ದಗಳಿಂದ ಅವರ ಜಾತಿಯನ್ನು ನಿಂದಿಸಿ ಊರು ಬಿಟ್ಟು ಹೋಗದಿದ್ದರೆ ಗುಂಡು ಹೊಡೆದು ಸಾಯಿಸುವುದಾಗಿ ಬೆದರಿಸಿ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದು ನಾಗರಾಜುರವರು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ದೀಪು ಮತ್ತು ಶಶಿ ತಲೆಮರೆಸಿಕೊಂಡಿದ್ದು ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಮೇಲೆ ಹಲ್ಲೆ

 • ಕ್ಷುಲ್ಲಕ ಕಾರಣಕ್ಕೆ ಮಹಿಳೆಯೋರ್ವರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಪ್ರಕರಣ ಶನಿವಾರಸಂತೆ ಠಾಣಾ ವ್ಯಾಪ್ತಿಯ ಕೈಸರವಳ್ಳಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 06/11/2010ರಂದು ಫಿರ್ಯಾದಿ ಚನ್ನೇಗೌಡರು ಕೈಸರವಳ್ಳಿ ಗ್ರಾಮದ ತಮ್ಮ ಮನೆಯಲ್ಲಿದ್ದಾಗ ಆರೋಪಿಗಳಾದ ಲವ ಮತ್ತು ದೇವರಾಜು ಎಂಬವರು ಬಂದು ದೇವರಾಜುರವರ ಮಗಳು ಪವಿತ್ರ ಚನ್ನೇಗೌಡರ ಮಗ ಪುರುಷರಾಜುವನ್ನು ಮಾತನಾಡಿಸಿದ ಬಗ್ಗೆ ಜಗಳವಾಡಿ ಚನ್ನೇಗೌಡರ ಮೇಲೆ ಹಲ್ಲೆ ಮಾಡಿದುದಲ್ಲದೆ ಪಾರ್ವತಮ್ಮ ಎಂಬವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ ಬಗ್ಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ, ಪ್ರಕರಣ ದಾಖಲು

 • ದನ ಹೊಲ ಮೇಯ್ದ ವಿಚಾರದಲ್ಲಿ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿದ ಘಟನೆ ಕುಶಾಲನಗರ ಠಾಣಾ ವ್ಯಾಪ್ತಿಯ ಹೆಬ್ಬಾಲೆ ಗ್ರಾಮದ 6ನೇ ಹೊಸಕೋಟೆಯಲ್ಲಿ ನಡೆದಿದೆ. ದಿನಾಂಕ 06/11/2010ರಂದು ಗ್ರಾಮದ ದಶರಥ ಎಂಬವರ ಒಂದು ಹೋರಿ ಕರುವು ಆರೋಪಿ ಮಂಜುನಾಥ ಎಂಬವರ ಹೊಲದಲ್ಲಿ ಮೇಯುತ್ತಿದ್ದು, ಅದನ್ನು ಮಂಜುನಾಥರವರು ತಮ್ಮ ಮನೆಯಲ್ಲಿ ಕಟ್ಟಿಹಾಕಿದುದನ್ನು ಕೇಳಲು ಹೋದ ದಶರಥರವರಿಗೆ ಮಂಜುನಾಥರವರು ಅಶ್ಲೀಲ ಶಬ್ದಗಳಿಂದ ನಿಂದಿಸಿ ಅವರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಬಗ್ಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, November 6, 2010

ಕತ್ತಿಯಿಂದ ಹಲ್ಲೆ, ಓರ್ವನ ಬಂಧನ
 • ಹಳೆ ವೈಷಮ್ಯದಿಂದ ವ್ಯಕ್ತಿಯೋರ್ವನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಮಡಿಕೇರಿ ನಗರ ಠಾಣಾ ಸರಹದ್ದಿನ ರಾಣಿಪೇಟೆಯಲ್ಲಿ ನಡೆದಿದೆ. ದಿನಾಂಕ 05/11/2010ರಂದು ರಾಣಿಪೇಟೆ ನಿವಾಸಿ ಕೇಶವರವರು ಮನೆಯಲ್ಲಿರುವಾಗ ಆರೋಪಿ ರಮೇಶನು ಹಳೆ ವೈಷಮ್ಯದಿಂದ ಕೇಶವರವರ ಮೇಲೆ ಹಲ್ಲೆ ನಡೆಸಿ ಕತ್ತಿಯಿಂದ ಕಡಿದು ಗಾಯಗೊಳಿಸಿದ್ದು, ಕೇಶವರವರು ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿ ರಮೇಶನನ್ನು ಮಡಿಕೇರಿ ನಗರ ಠಾಣಾ ಪೊಲೀಸರು ಬಂಧಿಸಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬಾಗಿಲು ಮುರಿದು ಹಣ, ವಸ್ತು ಕಳವು

 • ಮನೆಯ ಬಾಗಿಲು ಮುರಿದು ಹಣ ಹಾಗೂ ವಸ್ತುಗಳನ್ನು ಕಳವು ಮಾಡಿದ ಪ್ರಕರಣ ನಾಪೋಕ್ಲು ಠಾಣಾ ವ್ಯಾಪ್ತಿಯ ಪಾಲೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 5/11/2010ರಂದು ಪಾಲೂರು ಗ್ರಾಮದ ಬಿ.ಎ.ರಾಮಣ್ನ ಎಂಬವರು ಮನೆಯಲ್ಲಿರದಿರುವಾಗ ಯಾರೋ ಕಳ್ಳರು ಮನೆ ಬಾಗಿಲನ್ನು ಮುರಿದು ಒಳ ಪ್ರವೇಶಿಸಿ ಸುಮಾರು ರೂ.3500 ಬೆಲೆಯ ಸಿಗರೇಟು, ತಿಂಡಿ ತಿನಿಸು ಮತ್ತು ಹಣ ರೂ.1,500/-ಗಳನ್ನು ಕಳವು ಮಾಡಿದ್ದು, ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅನೈತಿಕ ಸಂಬಂಧ ಶಂಕೆ, ವ್ಯಕ್ತಿಯ ಕೊಲೆ

 • ಅನೈತಿಕ ಸಂಬಂಧದ ಶಂಕೆಯಿಂದ ವ್ಯಕ್ತಿಯೋರ್ವನನ್ನು ಕತ್ತಿಯಿಂದ ಕಡಿದು ಕೊಲೆ ಗೈದಿರುವ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮೂರ್ನಾಡು ಸಮೀಪದ ಕೋಡಂಬೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಸಂಜು ಎಂಬಾತನಿಗೂ ಪ್ರಕರಣದ ಆರೋಪಿ ಸೋಮಯ್ಯ ಎಂಬಾತನ ಪತ್ನಿಗೂ ಅಕ್ರಮ ಸಂಬಂಧವಿರುವ ಬಗ್ಗೆ ಶಂಕೆಯಿಂದ ಆರೋಪಿ ಸೋಮಯ್ಯ ದಿನಾಂಕ 5/11/2010ರಂದು ಬೆಳಿಗ್ಗೆ ಕೋಡಂಬೂರು ಗ್ರಾಮದ ಭದ್ರಕಾಳಿ ದೇವಸ್ಥಾನದ ಬಳಿ ಸಂಜುವನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದುದಲ್ಲದೆ ತನ್ನ ಮನೆಗೆ ಹೋಗಿ ತನ್ನ ಪತ್ನಿ ಮೇನಳನ್ನು ಕೊಲೆ ಮಾಡುವ ಉದ್ದೇಶದಿಂದ ಕತ್ತಿಯಿಂದ ಕಡಿದು ಗಾಯಗೊಳಿಸಿದ್ದು ನಂತರ ಸ್ಥಳದಿಂದ ತಲೆಮರೆಸಿಕೊಂಡಿರುತ್ತಾನೆ. ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು, ಆರೋಪಿ ಸೋಮಯ್ಯನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

Friday, November 5, 2010

ಕಳ್ಳತನ ಪ್ರಕರಣ: ದಿ: 4-11-2010 ರಂದು ಪಿರ್ಯಾದಿಯವರಾದ ಉದಿಯಂಡ ಸುನಿಲ್‌ , ಬಾರ್‌ ಮಾಲೀಕರವರು, ಕುಟ್ಟ ಪೊಲೀಸ್‌ ಠಾಣೆಗೆ ಹಾಜರಾಗಿ ದಿ: 3-11-2010 ರಂದು ಎಂದಿನಂತೆ ವ್ಯಾಪಾರ ಚಿಲ್ಲರೆ ರೂಪಾಯಿ 650/-ನ್ನು ಕ್ಯಾಷ್‌ ಕೌಂಟರ್‌ ಡ್ರಾಯರ್‌‌ನಲ್ಲಿ ಇಟ್ಟು ಬಾಗಿಲು ಮುಚ್ಚಿ ಬೀಗ ಹಾಕಿ ಕೀ ಯನ್ನು ಕ್ಯಾಷಿಯರ್‌ ಜಯರಾಂರವರ ಕೈಯಲ್ಲಿ ಕೊಟ್ಟು ಮನಗೆ ಹೋಗಿದ್ದು , ಕ್ಯಾಷಿಯರ್ ಜಯರಾಂರವರು ದಿ: 4-11-2010 ರ ಬೆಳಿಗ್ಗೆ 8:00 ಗಂಟೆ ಬಂದು ಬೀಗ ತೆರೆದು ನೋಡಲಾಗಿ ಯಾರೋ ಕಳ್ಳರು ಮುಂಭಾಗಿಲಿನ ಗಾಜನ್ನು ಒಡೆದು ಒಳನುಗ್ಗಿ ಬ್ರಾಂಡಿ ಬಾಟಲ್‌ ಮತ್ತು ಕ್ಯಾಷ್‌ 650/-ನ್ನು ಕಳವು ಮಾಡಿರುವುದಾಗಿ ಕೊಟ್ಟ ಪಿರ್ಯಾದಿ ಮೇರೆಗೆ ಪ್ರಕರಣವನ್ನು ದಾಖಲಿಸಿರುವುದಾಗಿದೆ.

ಆತ್ಮಹತ್ಯೆ ಪ್ರಕರಣ: ಮಡಿಕೇರಿ ನಗರ ದ ಕನಕ ದಾಸ ರಸ್ತೆಯಲ್ಲಿ ವಾಸಮಾಡಿಕೊಂಡಿದ್ದ ಮೃತ್ತ ಆಶೋಕಕುಮಾರ್‌ರವರಿಗೆ ತನ್ನ ಸಂಸಾರದಲ್ಲಿ ಗಂಡ ಹೆಂಡತಿ ಮದ್ಯೆ ವಿರಸ ಉಂಟಾಗಿ, ಮೃತ್ತ ಆಶೋಕರವರು ಮಾನಸಿಕವಾಗಿ ಆಸ್ವಸ್ಧಗೊಂಡಿದ್ದು ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿ: 3-11-2010ರಂದು ತನ್ನ ವಾಸದ ಮನೆಯ ಒಳಗಡೆ ನೇಟು ಬಿಗಿದುಕೊಂಡು ಆತ್ಮಹತ್ಯ ಮಾಡಿಕೊಂಡಿರುವುದಾಗಿದೆ. ಈ ಸಂಬಂಧ ಪಿರ್ಯಾದಿಯವರು ನೀಡಿದ ಪುಕಾರಿನ್ವಯ ಮಡಿಕೇರಿ ಠಾಣೆಯಲ್ಲಿ ನಗರ ಪ್ರಕರಣವನ್ನು ಠಾಣೆಯಲ್ಲಿ ದಾಖಲಿಸಲಾಗಿದೆ.

ಕಳ್ಳತನಕ್ಕೆ ಪ್ರಯತ್ನ: ದಿ: 5-11-2010 ರಂದು ಪಿರ್ಯಾದಿಯವರು ನಾಪೋಕ್ಲು ಠಾಣೆಗೆ ಹಾಜರಾಗಿ ದಿ: 4-11-2010 ರ 22:00 ಗಂಟೆಯಿಂದ 5-11-2010 ರ 5:30 ಗಂಟೆಯ ಮಧ್ಯದಲ್ಲಿ ಯಾರೋ ಕಳ್ಳರು ಮಹಾಲಿಂಗೇಶ್ವರ ದೇವಾಲಯದ ಬಾಗಿಲನ್ನು ಮುರಿದು ಒಳನುಗ್ಗಿ ಕಳ್ಳತನಕ್ಕೆ ಪ್ರಯತ್ನಿಸಿರುವುದಾಗಿದೆ .ಪ್ರಕರಣವನ್ನು ನಾಪೋಕ್ಲು ಠಾಣೆಯಲ್ಲಿ ದಾಖಲಿಸಿದೆ.

Thursday, November 4, 2010

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ, ಪ್ರಕರಣ ದಾಖಲು:

 • ದಿನಾಂಕ 3-11-2010 ರಂದು 17-00 ಗಂಟೆಗೆ ಫಿರ್ಯಾದಿ ಪಿ.ಎಂ. ಅಬ್ದುಲ್‌ ಕರೀಂ , ಬೇತು ಗ್ರಾಮ ಇವರು ಕೊಟ್ಟಮುಡಿ ಕಡೆಗೆ ತನ್ನ ಕಾರಿನಲ್ಲಿ ಹೋಗುತ್ತಿರುವಾಗ ಕಾವೇರಿ ಹೊಳೆಯ ಕೆಳಬಾಗದಲ್ಲಿ ಸುಮಾಋಉ ಜನರು ನಿಂತು ನೋಡುತ್ತಿದ್ದು ನಾನೂ ಸಹ ಇಳಿದು ನೋಡಲಾಗಿ ಕಾವೇರಿ ಹೊಳೆಯ ಹತ್ತಿರ ಒಂದು ಮರಕ್ಕೆ ನೇಣುಬಿಗಿದುಕೊಂಡ ಸತ್ತಿರುವ ಅನಾಮದೇಯ ಗಂಡಸಿನ ಮೃತದೇಹವನ್ನು ನೋಡಿದ್ದು, ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ದೂರು ನೀಡಿದ್ದು ಅದರಂತೆ ನಾಪೋಕ್ಲು ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರನ ಜರುಗಿಸಿರುತ್ತಾರೆ.


Wednesday, November 3, 2010

ಜೀವನದಲ್ಲಿ ಜಿಗುಪ್ಸೆ ವ್ಯಕ್ತಿಯ ಆತ್ಮಹತ್ಯೆ:

ದಿನಾಂಕ 2-11-2010 ರಂದು ಸೋಮವಾರಪೇಟೆ ತಾಲೋಕಿನ ಬೇಳೂರು ಗ್ರಾಮದಲ್ಲಿ ರಮೇಶ ಎಂಬವರು ಸಾಲದ ಹೊರೆಯನ್ನು ತೀರಿಸಲು ಸಾಧ್ಯವಾಗದೆ ಜೀವನದಲ್ಲಿ ಜಿಗುಪ್ಸೆಗೊಂಡು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತನ ಸಹೋದರ ರಾಮಸ್ವಾಮಿ ಎಂಬವರು ನೀಡಿದ ದೂರಿನನ್ವಯ ಸೋಮವಾರಪೇಟೆ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

ಮನುಷ್ಯಕಾಣೆ, ಪ್ರಕರಣದ ದಾಖಲು:

ದಿನಾಂಕ 17-10-2010 ರಂದು ಕುಶಾಲನಗರ ಠಾಣಾ ವ್ಯಾಪ್ತಿಯ ಹೆಬ್ಬಾಲೆ ಗ್ರಾಮದ ವಾಸಿ 40 ವರ್ಷ ಪ್ರಾಯದ ಅಂಗವಿಕಲ ಮರೀಗೌಡ ಎಂಬವರು ತನಗೆ ಹುಷಾರಿಲ್ಲ, ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ಕಾಣೆಯಾದ ವ್ಯಕ್ತಿಯ ಸಹೋದರ ಹೆಚ್.ಎನ್‌. ದೇವೇಗೌಡರವರು ನೀಡಿದ ದೂರಿನನ್ವಯ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಹಳೇ ದ್ವೇಷ, ವ್ಯಕ್ತಿಯ ಮೇಲೆ ಹಲ್ಲೆ ಮತ್ತು ಕೊಲೆ ಬೆಧರಿಕೆ, ಪ್ರಕರಣ ದಾಖಲು.

ದಿನಾಂಕ 2-11-2010 ರಂದು ಕಡಂಗ ಮರೂರು ಗ್ರಾಮದಲ್ಲಿ ಫಿರ್ಯಾದಿ ಚೋಳಂಡ ಮುದ್ದಯ್ಯ @ ಡಾಲು ಎಂಬವರು ಸಮಯ 16-30 ಗಂಟೆಗೆ ಕಡಂಗ ಮರೂರು ಜಂಕ್ಷನ್‌ ಬಳಿ ನಿಂತಿರುವಾಗ ಆರೋಪಿ ಚೋಳಂಡ ದಿನ ಬೆಳ್ಯಪ್ಪ ಎಂಬವರು ಏಕಾಎಕಿ ಕತ್ತಿಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದು, ಪಿರ್ಯಾದಿಯವರು ಆಸ್ಪತ್ರೆಗೆ ಜಿಕಿತ್ಸೆಗೆ ದಾಖಲಾಗಿ ನೀಡಿದ ದೂರಿನನ್ವಯ ವಿರಾಜಪೇಟೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡುರುತ್ತಾರೆ.

Tuesday, November 2, 2010

ಕಳ್ಳತನ ಪ್ರಯತ್ನ, ಪ್ರಕರಣ ದಾಖಲು

 • ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆ ನುಗ್ಗಿ ಕಳವು ಮಾಡಲು ಯತ್ನಿಸಿದ ಪ್ರಕರಣವೊಂದು ಮಡಿಕೇರಿ ನಗರ ಠಾಣೆಯಲ್ಲಿ ದಾಖಲಾಗಿದೆ. ದಿನಾಂಕ 30/10/2010ರಂದು ಮಡಿಕೇರಿ ನಗರದ ಮುನೀಶ್ವರ ದೇವಸ್ಥಾನ ರಸ್ತೆಯ ನಿವಾಸಿ ಎಂ.ಎಂ.ಪೂವಯ್ಯ ಎಂಬವರು ತಮ್ಮ ಕುಟುಂಬದೊಂದಿಗೆ ಬೆಂಗಳೂರಿಗೆ ಹೋಗಿದ್ದು, ದಿನಾಂಕ 01/11/2010ರಂದು ಮನೆಯ ಕೆಲಸದಾಕೆ ಬಂದು ನೋಡುವಾಗ್ಗೆ ಮನೆಯ ಹಿಂದಿನ ಮತ್ತು ಮುಂದಿನ ಬೀಗವನ್ನು ಯಾರೋ ಮುರಿದು ಕಳವು ಮಾಡಲು ಪ್ರಯತ್ನಿಸಿರುವುದು ಕಂಡು ಬಂದಿದ್ದು, ಈ ಬಗ್ಗೆ ಪೂವಯ್ಯನವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿ ಅವರು ಬಂದು ನೋಡಿದಾಗ ಯಾವುದೇ ವಸ್ತುಗಳು ಕಳುವಾಗದಿರುವುದು ಕಂಡು ಬಂದಿದ್ದು, ಮಡಿಕೇರಿ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, November 1, 2010

ಪ್ರತ್ಯೇಕ ರಸ್ತೆ ಅಪಘಾತಗಳು, 7 ಜನರಿಗೆ ಗಾಯ:

 • ದಿನಾಂಕ 31-10-2010 ರಂದು ಫಿರ್ಯಾಧಿ ಜಿ.ಕೆ. ಸುಧೀರ್‌, ಕೋಳ್ತಿಗೆ ಗ್ರಾಮ, ಪುತ್ತೂರು ರವರು ತಮ್ಮ ಪಿಕ್‌ಅಪ್‌ ಜೀಪು ಸಂಖ್ಯೆ ಕೆ-12-5848ರಲ್ಲಿ ಸುಳ್ಯದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದು, ಮಡಿಕೇರಿ ನಗರದ ಮೈಸೂರು ರಸ್ತೆಯಲ್ಲಿ ಸಂಚರಿಸುತ್ತಿರುವಾಗ ಎದುರುಗಡೆಯಿಂದ ಆರೋಪಿ ಶ್ರೀನಿವಾಸ ಎಂಬವರು ತಮ್ಮ ಇಂಡಿಕಾ ಕಾರು ಸಂ.ಕೆಎ-04-ಬಿ-5137ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಫಿರ್ಯಾದಿಯವರ ಜೀಪಿಗೆ ಡಿಕ್ಕಿ ಪಡಿಸಿದ ಪರಿಣಾಮ ಫಿರ್ಯಾದಿ, ಜೀಪಿನಲ್ಲಿದ್ದ ಸುಜಿತ್‌ ಮತ್ತು ಕಾರಿನಲ್ಲಿ ಪ್ರಯಾಣಿಸುತ್ತಿದ್ದ 4 ಜನರಿಗೆ ಗಾಯಗಳಾಗಿದ್ದು ಅಲ್ಲದೆ ಜೀಪು ಮತ್ತು ಕಾರು ಜಖಂ ಗೊಂಡಿದ್ದು, ಈ ಸಂಬಂಧ ಫಿರ್ಯಾಧಿಯವರು ನೀಡಿದ ದೂರಿನನ್ವಯ ಮಡಿಕೇರಿ ಸಂಚಾರಿ ಪೊಲೀಸರು ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
 • ದಿನಾಂಕ 31-10-2010 ರಂದು ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ದೇವರಪುರ ಗ್ರಾಮದ ಸಾರ್ವಜನಕ ರಸ್ತೆಯಲ್ಲಿ ಶ್ರೀಮಂಗಲ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಹೆಡ್‌ ಕಾನ್ಸ್‌ಟೇಬಲ್‌ ಮಲ್ಲೇಶ ಆಚಾರಿ ಎಂಬವರು ಮೋಟಾರ್‌ ಸೈಕಲ್‌ನಲ್ಲಿ ಹೋಗುತ್ತಿರುವ ಸಮಯ ಆರೋಪಿ ಬಯವಂಡ ನವೀನ್‌, ಕಾರು ಚಾಲಕ, ಕೆಎ-12-ಎನ್‌-2833, ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿ ಮೋಟಾರ್‌ ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಮಲ್ಲೇಶ ಆಚಾರಿಯವರ ತಲೆಗೆ ಹಾಗೂ ಕಾಲಿಗೆ ಗಾಯಗಳಾಗಿದ್ದು ಸದರಿಯವರನ್ನು ತಿತಿಮತಿ ವಿವೇಕಾನಂದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಅಪಘಾವನ್ನು ನೋಡಿವ ವ್ಯಕ್ತಿ ಹೆಚ್‌.ಎಸ್‌. ಆನಂದ ಎಂಬವರು ಈ ಬಗ್ಗೆ ದೂರು ನೀಡಿದ್ದು, ಶ್ರೀಮಂಗಲ ಠಾಣೆಯಲ್ಲೊ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಕಳ್ಳತನ ಪ್ರಕರಣಗಳು:

 • ಮನೆಯ ಬಾಗಿಲನ್ನು ಮುರಿದು ರೂ.22,000 ಗಳನ್ನು ಕಳ್ಳತನ ಮಾಡಿದ ಪ್ರಕರಣ ವಿರಾಜಪೇಟೆ ನಗರ ಠಾಣೆಯಲ್ಲಿ ವರದಿಯಾಗಿದೆ. ಫಿರ್ಯಾದಿ ಖಲೀಲ್‌ ಆಹಮ್ಮದ್‌, ಸುಣ್ಣದ ಬೀದಿ, ವಿರಾಜಪೇಟೆ ನಗರ ಇವರು ದಿನಾಂಕ 30-10-2010 ರಂದು ಸದರಿಯವರ ಅಕ್ಕನ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಮನೆಯ ಹಿಂಬಾಗಿಲನ್ನು ಯಾರೋ ಕಳ್ಳರು ಒಡೆದು ಒಳಪ್ರವೇಶಿಸಿ ಗಾದ್ರೇಜ್‌ನಲ್ಲಿಟ್ಟಿದ್ದ ರೂ.22,000 ಗಳನ್ನು ಕಳ್ಳತನ ಮಾಡಿರುತ್ತಾರೆ. ಈ ಸಂಬಂಧ ಫಿರ್ಯಾದಿಯವರು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಅಂಗಡಿ ಮಾಲಿಕನೊಬ್ಬನಿಂದ ಗ್ರಾಹಕನಿಗೆ ವಂಚನೆ:

 • ದಿನಾಂಕ 31-10-2010 ರಂದು ವಿರಾಜಪೇಟೆ ನಗರದ ಶಭರಿ ಪ್ಯಾನ್ಸಿ ಅಂಗಡಿ ಮಾಲಿಕ ಪಿರ್ಯಾದಿ ಎಂಪಿ. ಉತ್ತಯ್ಯ, ನಿವ್ಋತ್ತ ಪೊಲೀಸ್‌ ಇನ್ಸ್‌ಪೆಕ್ಟರ್‌,ಶ್ರೀಮಂಗಲ ಇವರಿಗೆ 40-00 ರೂ ಬೆಲೆಬಾಳುವ ಬೊಂಬೆಯನ್ನು ರೂ.285/-ಬೆಲೆಗೆ ಮಾರಾಟ ಮಾಡಿದ್ದು, ಪ್ಯಾಕೇಟ್‌ನಲ್ಲಿ ನಮೂದಿಸಿದ ಬೆಲೆಕ್ಕಿಂತಲೂ ಹೆಚ್ಚಿಗೆ ಹಣಕ್ಕೆ ಮಾರಾಟ ಮಾಡಿರುವ ಬಗ್ಗೆ ಫಿರ್ಯಾದಿಯವರು ವಿರಾಜಪೇಟೆ ನಗರ ಪೊಲೀಸ್‌ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ, ಪ್ರಕರಣ ದಾಖಲು:

 • ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವರ ಮೇಲೆ ಹಲ್ಲೆ ಮಾಡಿದ ಪ್ರಕರಣ ಪೊನ್ನಂಪೇಟೆ ಠಾಣೆಯಲ್ಲಿ ವರದಿಯಾಗಿದೆ. ದಿನಾಂಕ 31-10-2010 ರಂದು ಫಿರ್ಯಾದಿ ಕೋಡಿಯಿಲ್‌ ಮೂಸಾ, ಲಾರಿ ಚಾಲಕ ಇವರು ಲಾರಿ ಸಂ. ಕೆಎಲ್‌-11-ಯು-9094ನ್ನು ಕುಶಾಲನಗರ ಕಡೆಗೆ ಹೋಗುತ್ತಿರುವ ಸಂದರ್ಬ ಅವರು ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರಿ ಬಳಿ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ ಆರೋಪಿ ಕೆಎ-03 ಎಂಎಂ 2765ರ ಚಾಲಕ ತನ್ನ ಕಾರನ್ನು ಹಿಂದೆಯಿಂದ ಚಲಿಸಿ ಲಾರಿಗೆ ತಾಗಿಸಿ ನಂತರ ಲಾರಿಯ ಮುಂದೆ ಸದರಿ ಕಾರನ್ನು ನಿಲ್ಲಿಸಿ ಬಂದು ಫಿರ್ಯಾದಿಯನ್ನು ಲಾರಿಯಿಂದ ಎಳೆದು ಹಲ್ಲೆ ನಡೆಸಿದ್ದು ಅಲ್ಲದೆ ಇನ್ನೊಬ್ಬ ವ್ಯ್ಕಕ್ತಿಯೂ ಸಹ ಬಂದು ಹಲ್ಲೆನಡಿಸಿದ್ದು ಗುಂಡು ಹೊಡೆದು ಕೊಲೆಮಾಡುವುದಾಗಿ ಬೆದರಿಸಿರುತ್ತಾರೆಂದು ದೂರು ನೀಡಿದ್ದು, ಸದರಿ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.