Friday, December 31, 2010

ವ್ಯಕ್ತಿಯ ಮೇಲೆ ಹಲ್ಲೆ ಹಾಗೂ ಜಾತಿ ನಿಂದನೆ:

ಸೋಮವಾರಪೇಟೆ ಠಾಣಾ ಸರಹದ್ದಿನ ಬೆಟ್ಟದಳ್ಳಿಗ್ರಾಮದಲ್ಲಿ ವ್ಯಕ್ತಿಯನ್ನು ನಿಂದಿಸಿ ಹಲ್ಲೆನಡೆಸಿದ ಪ್ರಕರಣ ವರದಿಯಾಗಿದೆ. ದಿನಾಂಕ 30-12-2010 ರಂದು ಆರೋಪಿಗಳಾದ ಕೆ.ಎನ್‌.ಶಿವಣ್ಣ, ಕೆ.ಎನ್‌. ಪಾಪಣ್ಣ, ಕೆ.ಡಿ. ಧನಂಜಯ, ಕೆ.ಇ. ಪ್ರದೀಪ, , ಕೆ.ಇ. ದೇಶ್‌ರಾಜ್‌ ಹಾಗೂ ಇತರರು ಸೇರಿ ಫಿರ್ಯಾದಿ ಬಿ.ಸಿ. ಜಗಧೀಶ ಎಂಬವರ ಮನೆಯ ಹತ್ತಿರ ಬಂದು ಫಿರ್ಯಾದಿಯ ಮೇಲೆ ಹಲ್ಲೆ ನಡೆಸಿ ಸದರಿಯವರ ಜಾತಿ ನಿಂದನೆ ಮಾಡಿದ್ದು, ಸೋಮವಾರಪೇಟೆ ಪೊಲೀಸರು ಈ ಕುರಿತು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾರ ವ್ಯಕ್ತಿಗೆ ಗಾಯ:

ದಿನಾಂಕ 30-12-2010 ರಂದು ಬಸ್ಸಿಗಾಗಿ ಕಾಯುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿಯಾಗಿ ಗಾಯಗೊಂಡ ಬಗ್ಗೆ ಸೋಮವಾರಪೇಟೆ ಠಾಣಾ ಸರಹದ್ದಿನ ಬೆಟ್ಟದಳ್ಳಿ ಗ್ರಾಮದಿಂದ ವರದಿಯಾಗಿದೆ. ಫಿರ್ಯಾದಿ ಕೆ.ಎನ್‌. ಶಿವಣ್ಣ ಎಂಬವರು ಬೆಟ್ಟದಳ್ಳಿ ಗ್ರಾಮದ ಪಂಚಾಯಿತ್ತಿ ಕಛೇರಿಯ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ಸಮಯದಲ್ಲಿ ಆರೋಪಿ ಅನಿಲ್‌ ಕುಮಾರ್‌, ಕೆಎ-12-8919ರ ಕಾರು ಚಾಲಕ ಸದರಿ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ ಫಿರ್ಯಾದಿಯವರಿಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಫಿರ್ಯಾದಿಯವರ ಕಾಲಿನ ಮಂಡಿಗೆ ಹಾಗೂ ಎದೆಯ ಭಾಗಕ್ಕೆ ನೋವುಂಟಾಗಿದ್ದು, ಈ ಸಂಬಂಧ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Thursday, December 30, 2010

ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಮೇಲೆ ಹಲ್ಲೆ

 • ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಮಾದಾಪುರ ಗ್ರಾಮದಲ್ಲಿ ವರದಿಯಾಗಿದೆ. ಇಂದು ದಿನಾಂಕ 30/12/2010ರಂದು ಬೆಳಿಗ್ಗೆ 12 ಗಂಟೆಗೆ ಮಾದಾಪುರದ ಶೀಲಾ ಎಂಬಾಕೆಯು ತನ್ನ ಗಂಡನನ್ಉ ನೋಡಲೆಂದು ಮನೆಗೆ ಹೋದಾಗ ಮನೆಯಲ್ಲಿದ್ದ ಗೌರಿ ಮತ್ತು ಆಕೆಯ ಅಳಿಯ ಸೇರಿಕೊಂಡು ಶೀಲಾಳ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ ಬಗ್ಗೆ ನೀಡಿದ ಪುಕಾರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಮನೆಗೆ ಹಾನಿ

 • ಕ್ಷುಲ್ಲಕ ಕಾರಣಕ್ಕೆ ಮನೆಯ ಗೋಡೆ ಒಡೆದು ಹಾನಿ ಮಾಡಿರುವ ಘಟನೆ ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ಮಲ್ಲಿಕಾರ್ಜುನ ನಗರದಲ್ಲಿ ನಡೆದಿದೆ. ದಿನಾಂಕ 29/12/2010ರಂದು ಮಲ್ಲಿಕಾರ್ಜುನ ನಗರದ ವಾಸಿ ರತ್ನ ಎಂಬವರು ಈ ಹಿಂದೆ ಒಪ್ಪಂದವಾದಂತೆ ತನ್ನ ಮನೆಯ ಗೋಡೆಯನ್ನು ಸರಿಪಡಿಸಿಕೊಡುವಂತೆ ಆರೋಪಿಗಳಾದ ಕುಮಾರ ಮತ್ತು ಉಮೇಶ ಎಂಬವರನ್ನು ಕೇಳಿದಾಗ ಮತ್ತೋರ್ವ ಆರೋಪಿ ಯಶೋದ ಎಂಬಾಕೆಯು ರತ್ನರವರನ್ನು ಅಶ್ಲೀಲ ಶಬ್ದಗಳಿಂದ ನಿಂದಿಸಿ ರತ್ನರವರ ಮನೆಯ ಒತ್ತಿಗೆ ನಿರ್ಮಿಸಿದ್ದ ಎರಡು ಸಿಮೆಂಟ್ ಶೀಟಿನ ಗೋಡೆಯನ್ನು ಒಡೆದು ಹಾಕಿ ನಷ್ಟಪಡಿಸಿರುವ ಬಗ್ಗೆ ಮಡಿಕೇರಿ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ

ಚುನಾವಣಾ ಪ್ರಚಾರ ಸಂದರ್ಭ ಹಲ್ಲೆ ಮತ್ತು ಕೊಲೆ ಬೆದರಿಕೆ

 • ಚುನಾವಣಾ ಪ್ರಚಾರದ ಸಂದರ್ಭ ವ್ಯಕ್ತಿಯೋರ್ವರ ಮೇಲೆ ಹಲ್ಲೆ ಮಾಡಿದ ಪ್ರಕರಣ ಸೋಮವಾರಪೇಟೆ ಠಾಣೆ ವ್ಯಾಪ್ತಿಯ ಕಿರುಗಂದೂರು ಗ್ರಾಮದ ಊರುಬೆಟ್ಟ ಪೈಸಾರಿಯಲ್ಲಿ ನಡೆದಿದೆ. ದಿನಾಂಕ 29/12/2010ರಂದು ಊರು ಬೆಟ್ಟ ಪೈಸಾರಿಯಲ್ಲಿ ಫಿರ್ಯಾದಿ ಕುಶಾಲಪ್ಪ ಎಂಬವರು ಜೆಡಿಎಸ್ ಅಭ್ಯರ್ಥಿಯ ಪರ ಚುನಾವಣಾ ಪ್ರಚಾರ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಆರೋಪಿಗಳಾದ ಭರತ್ ಮತ್ತು ಲೋಕೇಶ್ ಎಂಬವರು ಕುಶಾಲಪ್ಪನವರನ್ನು ಅಶ್ಲೀಲ ಶಬ್ದಗಳಿಂದ ಬೈದು ಆರೋಪಿಗಳ ಪರ ಅಭ್ಯರ್ಥಿ ಸೋತರೆ ಕುಶಾಲಪ್ಪನವರನ್ನು ಗುಂಡು ಹೊಡೆದು ಕೊಲ್ಲುವುದಾಗಿ ಬೆದರಿಸಿದ ಬಗ್ಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, December 29, 2010

ರಸ್ತೆ ಅಪಘಾತ:
ದಿನಾಂಕ 28-12-2010 ರಂದು ಸೋಮವಾರಪೇಟೆ ಠಾಣಾ ಸರಹದ್ದಿಗೆ ಸೇರಿದ ಕುಂದಳ್ಳಿ ಗ್ರಾಮದಲ್ಲಿ ಆರೋಪಿ ಭೀಮ್‌ ಮೆಹತೂ ಎಂಬವರು ತಮ್ಮ ಟ್ರಾಕ್ಟರ್‌ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿದ ಪರಿಣಾಮ ನಿಯಂತ್ರಣ ಕಳೆದುಕೊಂಡು ಸದರಿಮ ಟ್ರಾಕ್ಟರ್‌ ಮಗುಚಿಕೊಂಡ ಪರಿಣಾಮವಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದ ಫಿರ್ಯಾದಿ ಟೇಕ್‌ಲಾಲ್‌ ಕುಮಾರ್‌ ಮತ್ತು ಅವರ ಜೊತೆಯಲ್ಲಿದ್ದವರು ಗಾಯಗೊಂಡಿದ್ದು, ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಮನೆ ಕಳವು:
ದಿನಾಂಕ 28-12-2010 ರಂದು ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಹಿಪ್ಪುಗಳಲೆ ಗ್ರಾಮದ ವಾಸಿ ಫಿರ್ಯಾದಿ ಹೆಚ್‌.ಕೆ ನಿಂಗೇಗೌಡ ಎಂಬವರ ಮನೆಯಲ್ಲಿ ಕೆಲಸಮಾಡಿಕೊಂಡಿದ್ದ ಅನಾಥ ವ್ಯಕ್ತಿಯು ಫಿರ್ಯಾದಿಯವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬೀರುವಿನಲ್ಲಿಟ್ಟಿದ್ದ ನಗದು ಹಣ ರೂ.8000/- ಹಾಗೂ ರೂ. 150000/- ರೂ ಬೆಲೆಬಾಳುವ ಚಿನ್ನದ ಆಭರಣ ಒಟ್ಟು 158000/-ಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ಅಕ್ರಮ ಮದ್ಯ ಮಾರಟ, ಪ್ರಕರಣ ದಾಖಲು:
ದಿನಾಂಕ 28-12-2010 ರಂದು ಪೊನ್ನಂಪೇಟೆ ಠಾಣಾ ಸರಹದ್ದಿನ ನಿಡುಗಂಬ ಗ್ರಾಮದಲ್ಲಿ ಫಿರ್ಯಾದಿ ಎನ್‌.ಎನ್‌. ರಾಮರೆಡ್ಡಿ, ಪಿಎಸ್‌ಐ, ಪೊನ್ನಂಪೇಟೆ ಠಾಣೆ ಇವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಆರೋಪಿ ಚಂದ್ರುರವರ ಅಂಗಡಿಯ ಮೇಲೆ ದಾಳಿ ನಡೆಸಿದಾಗ ಆರೋಪಿ ಚಂದ್ರು ಹಾಗೂ ಆತನ ಪತ್ನಿ ತಮ್ಮ ಕೈಯಲ್ಲಿದ್ದ ಚೀಲವನ್ನು ಬಿಟ್ಟು ಹೋಗಿದ್ದು ಸದರಿ ಚೀಲದಲ್ಲಿ ಅಕ್ರಮವಾಗಿ ಇಟ್ಟಿದ್ದ 180 ಎಂ.ಎಲ್‌.ನ 32 ಒರಿಜಿನಲ್‌ ಚಾಯ್ಸ್‌ ಡಿಲಕ್ಸ್‌ ವಿಸ್ಕಿ ಬಾಟಲಿಗಳನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಕನ್ನ ಕಳವು, ಪ್ರಕರಣ ದಾಖಲು:
ದಿನಾಂಕ 28-12-2010 ರಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಕಾಲೂರು ಗ್ರಾಮದಲ್ಲಿ ಫಿರ್ಯಾದಿ ಎನ್‌.ಟಿ. ಕಿರಣ್‌‌ ರವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯಾಗೋ ಕಳ್ಳರು ಮನೆಯ ಹಿಂಬಾಗದ ಮಹಡಿಯ ಹೆಂಚುಗಳನ್ನು ತೆಗೆದು ಮನೆಯ ಒಳಗೆ ಪ್ರವೇಶಿಸಿ ಮನೆಯ ಮಲಗುವ ಕೋಣೆಯಲ್ಲಿಟ್ಟಿದ್ದ ಬೀರು ಪೆಟ್ಟಿಗೆಯನ್ನು ಒಡೆದು ನಗದು ರೂ.1000/- ಮತ್ತು 24000 ರೂ ಬೆಲೆಬಾಳುವ ಚಿನ್ನದ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Tuesday, December 28, 2010

ದಾರಿ ತಡೆದು ಅಶ್ಲೀಲ ಶಬ್ದಗಳಿಂದ ನಿಂದನೆ

 • ಮಹಿಳೆಯೋರ್ವರನ್ನು ದಾರಿ ತಡೆದು ಅಶ್ಲೀಲ ಶಬ್ದಗಳಿಂದ ನಿಂದಿಸಿದ ಪ್ರಕರಣ ಭಾಗಮಂಡಲ ಠಾಣಾ ವ್ಯಾಪ್ತಿಯ ಚೇರಂಬಾಣೆಯಲ್ಲಿ ಈ ದಿನ ನಡೆದಿದೆ. ಇಂದು ಬೆಳಿಗ್ಗೆ 11 ಗಂಟೆಗೆ ಸಂಪಾಜೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ದಿಸಿದ್ದ ಕರ್ಣಂಗೇರಿ ಗ್ರಾಮದ ವಾಸಿ ಬಿ.ಸಿ.ನೀಲಮ್ಮ ಎಂಬವರು ಚುನಾವಣಾ ಪ್ರಚಾರಕ್ಕಾಗಿ ಚೇರಂಬಾಣೆ ನಗರದ ಮಾರ್ಕೆಟ್ ಬಳಿ ಹೋಗುತ್ತಿದ್ದಾಗ ಆರೋಪಿಗಳಾದ ಸುಮನ್ ಪೂವಣ್ಣ ಮತ್ತು ಇನ್ನಿಬ್ಬರು ನೀಲಮ್ಮನವರ ಜೀಪನ್ನು ಅಡ್ಡಗಟ್ಟಿ ನೀಲಮ್ಮನವರ ಮತಯಾಚನೆಗೆ ಅಡ್ಡಿಪಡಿಸಿದ್ದು ಅವರನ್ನು ಅಶ್ಲೀಲ ಶಬ್ದಗಳಿಂದ ನಿಂದಿಸಿರುವುದಾಗಿ ನೀಡಿದ ಪುಕಾರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ದಾರಿತಡೆದು ಕೊಲೆ ಬೆದರಿಕೆ, ಪ್ರಕರಣ ದಾಖಲು

 • ಕಾಫಿ ಕುಯ್ಯಲೆಂದು ಹೋಗುತ್ತಿದ್ದ ದಂಪತಿಗಳನ್ನು ದಾರಿ ತಡೆದು ಕೊಲೆ ಬೆದರಿಕೆ ಹಾಕಿದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಟ್ಟೆಮಾಡು ಗ್ರಾಮದಲ್ಲಿ ನಡೆದಿದೆ. ದಿನಾಂಕ 27/12/2010ರಂದು ಕಟ್ಟೆಮಾಡು ಗ್ರಾಮದ ಪಿ.ಎಂ.ಅಬ್ಬಾಸ್ ಎಂಬವರು ತಮ್ಮ ಪತ್ನಿ ಮರಿಯಮ್ಮರವರೊಂದಿಗೆ ಕಾಫಿ ಕುಯ್ಯಲೆಂದು ತಮ್ಮ ತೋಟಕ್ಕೆ ಹೋಗುತ್ತಿದ್ದಾಗ ಆರೋಪಿಗಳಾದ ಸಲಾಂ, ಹಸೈನಾರ್ ಮತ್ತು ಮೊಯ್ದು ಎಂಬವರು ಅವರನ್ನು ಕತ್ತಿ ದೊಣ್ಣೆಗಳನ್ನು ಹಿಡಿದುಕೊಂಡು ದಾರಿ ತಡೆದು ಕಾಫಿ ಕುಯ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಆಸ್ತಿ ವಿವಾದ ಬೇಲಿ ನಾಶ

 • ಆಸ್ತಿ ವಿವಾದದಿಂದ ತೋಟದ ಬೇಲಿ ಕಿತ್ತು ಹಾನಿಗೊಳಿಸಿದ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಹಳ್ಳಿಗಟ್ಟು ಗ್ರಾಮದಲ್ಲಿ ನಡೆದಿದೆ. ಮೂಲತಃ ಹಳ್ಳಿಗಟ್ಟು ನಿವಾಸಿಯಾಗಿದ್ದು ಪ್ರಸ್ತುತ ಮೈಸೂರಿನ ವಿಜಯನಗರದ ನಿವಾಸಿಯಾಗಿರುವ ಪುಷ್ಪ ಎಂಬವರು ಹಳ್ಳಿಗಟ್ಟು ಗ್ರಾಮದಲ್ಲಿ ತಾವು ಖರೀದಿಸಿದ್ದ ಜಾಗಕ್ಕೆ ಬೇಲಿಯನ್ನುಹಾಕಿದ್ದು, ದಿನಾಂಕ 26/12/2010 ರಂದು ಸದ್ರಿ ಬೇಲಿಯನ್ನು ಅವರ ತಮ್ಮಂದಿರಾದ ಲೋಹಿತ, ಉಮೇಶ ಮತ್ತು ತಾಯಿ ಕಾವೇರಮ್ಮನವರು ಮುರಿದು ಹಾನಿಗೊಳಿಸಿದ್ದು ಸುಮಾರು ರೂ.10,000/- ನಷ್ಟವಾಗಿರುವ ಬಗ್ಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, December 25, 2010

ಕಾರು - ಬೈಕ್ ಡಿಕ್ಕಿ ಬೈಕ್ ಸವಾರರಿಗೆ ಗಾಯ

 • ಕಾರು ಮತ್ತು ಬೈಕ್ ಡಿಕ್ಕಿಯಾಗಿ ಬೈಕಿನ ಸವಾರರಿಬ್ಬರಿಗೆ ಗಾಯವಾಗಿರುವ ಘಟನೆ ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಸೀಗೆತೋಡು ಎಂಬಲ್ಲಿ ನಡೆದಿದೆ. ದಿನಾಂಕ 24/12/2010ರಂದು ಅಪರಾಹ್ನ ಬಾಳೆಲೆಯ ನಿವಾಸಿ ಪಾರುವಂಡ ಕಾವೇರಪ್ಪ ಎಂಬವರು ತಮ್ಮ ಕಾರು ಕೆಎ-12-ಎನ್-6339 ರಲ್ಲಿ ಮನೆಗೆ ಹೋಗುತ್ತಿರುವಾಗ ಸೀಗೆ ತೋಡು ಎಂಬಲ್ಲಿ ಆರೋಪಿ ಕೆ-12-ಹೆಚ್-2935ರ ಬೈಕು ಚಾಲಕ ತನ್ನ ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಬೈಕು ಸವಾರ ಮತ್ತು ಹಿಂಬದಿ ಸವಾರರಿಬ್ಬರಿಗೂ ಗಾಯವಾಘಿರುವ ಬಗ್ಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಹಿಳೆಯ ಮೇಲೆ ಕೊಲೆ ಬೆದರಿಕೆ

 • ಕ್ಷುಲ್ಲಕ ಕಾರಣಕ್ಕೆ ಮಹಿಳೆಯೋರ್ವರ ಮೇಲೆ ಅಶ್ಲೀಲ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುವ ಘಟನೆ ಭಾಗಮಂಡಲ ಠಾಣಾ ವ್ಯಾಪ್ತಿಯ ಬೇಂಗೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 22/12/2010ರಂದು ಬೇಂಗೂರು ಗ್ರಾಮದ ಮಂದಪಂಡ ದಿವ್ಯ ಎಂಬವರು ರಾತ್ರಿ ಒಬ್ಬರೇ ಮನೆಯಲ್ಲಿರುವಾಗ ಅದೇ ಗ್ರಾಮದ ಆರೋಪಿ ಅಪ್ಪು ಎಂಬಾತನು ಮನೆಗೆ ಬಂದು ಕ್ಷುಲ್ಲಕ ಕಾರಣಕ್ಕೆ ಆಕೆಯೊಂದಿಗೆ ಜಗಳವಾಡಿ ಅಶ್ಲೀಲ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, December 24, 2010

ರಸ್ತೆ ಅಪಘಾತ ಒಬ್ಬರಿಗೆ ಗಾಯ:
ದಿನಾಂಕ 23-12-2010 ರಂದು ವಿರಾಜಪೇಟೆ ನಗರದ ಖಾಸಗಿ ಬಸ್ಸು ನಿಲ್ದಾಣದಲ್ಲಿ ಫಿರ್ಯಾದಿ ಎ.ಪಿ. ಮೊಹಿದ್ದೀನ್‌ ಕುಟ್ಟಿ ಎಂಬವರು ಬಸ್ಸನ್ನು ಹತ್ತಲು ಹೋಗುತ್ತಿದ್ದಾಗ ಆರೋಪಿ ಡಾ: ಮ್ಯಾಥ್ಯೂ ಎಂಬವರು ತಮ್ಮ ಕಾರು ಸಂ.ಟಿಎನ್‌66 ಎ0078ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ ಫಿರ್ಯಾದಿಯವರಿಗೆ ಡಿಕ್ಕಿಪಡಿಸಿದ ಪರಿಣಾಮ ಫಿರ್ಯಾದಿಗೆ ಗಾಯಗಳಾಗಿದ್ದು, ಈ ಸಂಬಂಧ ವಿರಾಜಪೇಟೆ ನಗರ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಜೀವನದಲ್ಲಿ ಜಿಗುಪ್ಸೆ ವ್ಯಕ್ತಿಯ ಆತ್ಮಹತ್ಯೆ:
ಈ ದಿನ ದಿನಾಂಕ 24-12-2010 ರಂದು ಚೋಕಂಡಳ್ಳಿ ನಲ್ವತ್ತೊಕ್ಲು ಗ್ರಾಮದಲ್ಲಿ ಹರೀಶ, 37 ವರ್ಷ ಪ್ರಾಯ ಇವರು ತನ್ನ ಕಾಯಿಲೆ ವಾಸಿಯಾಗಲಿಲ್ಲವೆಂಬ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯೊಳಗೆ ಕುತ್ತಿಗೆಗೆ ನೇಣಯ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಕಲುಷಿತ ನೀರು ಸೇವನೆಗೊಂಡು ಇಬ್ಬರ ದುರ್ಮರಣ:
ಸೋಮವಾರಪೇಟೆ ಠಾಣಾ ಸರಹದ್ದಿನ ವಳಗುಂದ ಗ್ರಾಮದ ಗಿರಿಜನ ಕಾಲೋನಿಯಲ್ಲಿ ಕಾಡಿನಿಂದ ಬರುವ ಜಲದ ನೀರನ್ನು ಟ್ಯಾಂಕ್‌ನಲ್ಲಿ ಸಂಗ್ರಹಿಸಿ ದೈನಂದಿನ ಬಳಕೆಗಾಗಿ ಉಪಯೋಗಿಸುತ್ತಿದ್ದು, ದಿನಾಂಕ 21-12-2010 ರಂದು ಸದರಿ ಟ್ಯಾಂಕಿನ ನೀರನ್ನು ಕುಡಿದು ಕಾಲೋನಿಯ ಸಣ್ಣಪ್ಪ, ಬಸವಿ, ರಾಜ ಮತ್ತು ಸುಮಾರು 16 ಜನರಿಗೆ ವಾಂತಿ ಭೇದಿಯಾಗಿ ಚಿಕಿತ್ಸೆಗಾಗಿ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅವರಲ್ಲಿ ಸಣ್ಣಪ್ಪ ಮತ್ತು ಬಸವಿ ಎಂಬಿಬ್ಬರು ಮೃತಪಟ್ಟಿದ್ದು, ಈ ಸಂಬಂಧ ಈ ದಿನ 24-12-2010 ರಂದು ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ಜೀವನದಲ್ಲಿ ಜಿಗುಪ್ಸೆ ಕೆರೆಗೆ ಹಾರಿ ವ್ಯಕ್ತಿಯ ಆತ್ಮಹತ್ಯೆ:
ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ನಿಟ್ಟೂರು ಗ್ರಾಮದ ವಾಸಿ ಮಣಿ ಎಂಬವರು ಮಾಪಂಗಡ ಮುತ್ತಣ್ಣನವರ ಲೈನ್‌ ಮನೆಯಲ್ಲಿ ವಾಸವಾಗಿದ್ದು, ಕುಡಿಯುವ ಚಟವಿದ್ದು ದಿನಾಂಕ 20-12-2010 ರಂದು ಮನೆಯಿಂದ ಹೋದವನು ಮತ್ತೆ ಬಾರದೆ ಇದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಕೆರೆಗೆ ಹಾರಿ ಆತ್ನಹತ್ಯೆ ಮಾಡಿಕೊಂಡಿದ್ದು, ದಿನಾಂಕ 24-12-2010 ರಂದು ಆತನ ಶವವು ಕೆರೆಯಲ್ಲಿ ತೇಲಾಡುತ್ತಿರುವುದ ಕಂಡು ಬಂದಿದ್ದು, ಈ ಸಂಬಂಧ ಪೊನ್ನಂಪೇಟೆ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಅಕ್ರಮ ಮದ್ಯ ವಶ ಪ್ರಕರಣ ದಾಖಲು:
ದಿನಾಂಕ 23-12-2010 ರಂದು ಶ್ರೀ ಜಯಪ್ರಕಾಶ್‌, ಡಿಎಸ್‌ಪಿ, ಕುಶಾಲನಗರ ಇವರಿಗೆ ದೊರೆತ ಖಚಿತ ವರ್ತಮಾನದ ಮೇರೆ ಕುಶಾಲನಗರ ಠಾಣಾ ಸರಹದ್ದಿಗೆ ಸೇರಿದ ಮುಳ್ಳುಸೋಗೆ ಗ್ರಾಮದಲ್ಲಿ ಆರೋಪಿ ಎಂ.ಎಸ್‌. ಕುಮಾರ ಎಂಬವರಿಗೆ ಸೇರಿದ ಶೆಡ್ಡ್‌ಗೆ ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ ಸುಮಾರು 20000 ರೂ. ಬೆಲೆಬಾಳುವ ಮದ್ಯವನ್ನು ವಶಪಡಿಸಿಕೊಂಡು ಆರೋಪಿಯನ್ನು ದಸ್ತಗಿರಿಮಾಡಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Wednesday, December 22, 2010

ಕಾನೂನು ಸುವ್ಯವಸ್ಥೆಗಾಗಿ ಭದ್ರತಾ ಕಾಯ್ದೆ ಪ್ರಕರಣಗಳು:

ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ನಾಲ್ಕೇರಿಗ್ರಾಮದ ವಾಸಿ ಪ್ರತಿವಾದಿ ಚೆರಿಯಪಂಡ ಸಚಿನ್‌ರವರು ಹಣ ಮತ್ತು ಜನ ಬಲವುಳ್ಳ ವ್ಯಕ್ತಿಯಾಗಿದ್ದು, ಮುಂಬರುವ ತಾಲೋಕು ಮತ್ತು ಜಿಲ್ಲಾ ಪಂಚಾಯತ್‌ ಚುನಾವಣಾ ಸಂದರ್ಭದಲ್ಲಿ ಸದರಿಯವರು ರಾಜಕೀಯ ಪುಡಾರಿಗಳೊಂದಿಗೆ ಸೇರಿ ಗ್ರಾಮದಲ್ಲಿ ಗಲಾಟೆ ವಗೈರೆ ಮಾಡಿ ಶಾಂತಿಭಂಗ ಮಾಡುವ ಬಗ್ಗೆ ದೊರೆತ ಮಾಹಿತಿಯ ಆದಾರದ ಮೇಲೆ ಸದರಿ ವ್ಯಕ್ತಿಯ ಮೇಲೆ ವಾದಿಯವರಾದ ಶ್ರೀ ಬಸವರಾಜು, ಪಿಎಸ್‌ಐ, ಕುಟ್ಟ ಪೊಲೀಸ್ ಠಾಣೆ ರವರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Tuesday, December 21, 2010

ಸಂಶಯಾದಕ ಮರಣ: ಸೋಮವಾರಪೇಟೆ ಠಾಣಾ ವ್ಯಾಫ್ತಿ ಶಿವಪುರದ ಗ್ರಾಮದ ದಿ: 20-12-2010 ರಂದು ಪಿರ್ಯಾಧಿ ಡಿ.ಬಿ. ಪ್ರಭುದೇವ್‌ ರವರ ತಮ್ಮ ಸುಧೀಪ್‌ ಕುಮಾರ್‌ನ್ನು ಊಟ ಮಾಡುವ ಸಲುವಾಗಿ ಬೈಕ್‌ ತೆಗೆದು ಕೊಂಡುಹೋಗಿದ್ದು ಶಿವಪುರ ಎಂಬಲ್ಲಿ ಮೋಟಾರ್‌ ಸೈಕಲ್‌ ಸಮೇತ ಸುಟ್ಟು ಕರಕಲಾಗಿದ್ದು ಈ ಬಗ್ಗೆ ಅನುಮಾನವಿರುತ್ತದೆ ಕೊಟ್ಟ ಮೃತ ಸುಧೀಪ್‌ ಕುಮಾರ್‌ರವರ ಅಣ್ಣ ಕೊಟ್ಟ ಪುಕಾರಿನ್ವಯ ಸೋಮವಾರ ಪೇಟೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ
ಹಳೆ ವೈಷಮದಿಂದ ವ್ಯಕ್ತಿಯ ಮೇಲೆ ಹಲ್ಲೆ: ದಿ: 20-12-10 ರಂದು ಶನಿವಾರ ಸಂತೆ ಠಾಣಾ ವ್ಯಾಪ್ತಿಯ ಬೆಂಬಳೂರು ಗ್ರಾಮದ ಪಿರ್ಯಾದಿದವರಾದ ಸುಪೀತ್‌ ರವರಿಗೆ ಆರೋಪಿಗಳಾದ ಮಹೇಶ್‌ ಪ್ರೀತಮ್‌, ನಾಗರಾಜು ಮತ್ತು ಇನ್ನು ಇತರರು ಸೇರಿ ಹಳೆಯ ವೈಷಮದಿಂದ ಪಿರ್ಯಾದಿಯವರಿಗೆ ಅವ್ಯಾಚ್ಚ ಶಬ್ದಗಳಿಂದ ಬೈದು ದೊಣ್ಣೆಯಿಂದ ಹೊಡೆದು ನೋವುಂಟು ಮಾಡಿರುವುದಾಗಿ ಕೊಟ್ಟ ಪುಕಾರಿನ್ವಯ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.

Monday, December 20, 2010

ಮಹಿಳೆಯ ಮಾನಭಂಗಕ್ಕೆ ಯತ್ನ, ಹಲ್ಲೆ ಮತ್ತು ಕೊಲೆ ಬೆದರಿಕೆ:

ದಿನಾಂಕ 19-11-2010 ರಂದು ವಿರಾಜಪೇಟೆ ನಗರ ಠಾಣಾ ಸರಹದ್ದಿಗೆ ಸೇರಿದ ಆರ್ಜಿ ಗ್ರಾಮದಲ್ಲಿ ಫಿರ್ಯಾದಿ ಶ್ರೀಮತಿ ಕುಞಂಮೀರವರು ಮನೆಲ್ಲಿರುವಾಗ ಆರೋಪಿ ಶಫಿಕ್‌ ಎಂಬವನು ಅಲ್ಲಿಗೆ ಬಂದು ಆಕೆಯ ಮಾನಭಂಗ ಮಾಡಲು ಯತ್ನಿಸಿದ್ದು ಅಲ್ಲದೆ ತನ್ನ ಕೈಯಲ್ಲಿದ್ದ ಕಲ್ಲಿನಿಂದ ಹಲ್ಲೆ ನಡೆಸಿ, ಕೊಲೆಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದು, ಈ ಸಂಬಂಧ ವಿರಾಜಪೇಠೆ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಜೀವನದಲ್ಲಿ ಜಿಗುಪ್ಸೆಗೊಂಡು ಮಹಿಳೆಯ ಆತ್ಮಹತ್ಯೆ:

ದಿನಾಂಕ 19-12-2010 ರಂದು ಸೋಮವಾರಪೇಟೆ ಠಾಣಾ ಸರಹದ್ದಿಗೆ ಸೇರಿದ ಆನೆಕೆರೆ ಎಂಬಲ್ಲಿ ಶ್ರೀಮತಿ ರಾಣಿ ಎಂಬವರು ತಮಗೆ ಹುಟ್ಟಿನಿಂದಲೇ ಮಂದತ್ವ ಇದ್ದುದರಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಆನೆಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

ಅಕ್ರಮ ಪ್ರವೇಶ, ನಿಂದನೆ ಮತ್ತು ಕೊಲೆ ಬೆಧರಿಕೆ, ಪ್ರಕರಣ ದಾಖಲು:

ದಿನಾಂಕ 14-12-2010 ರಂದು ಸಿದ್ದಾಪುರ ಠಾಣಾ ಸರಹದ್ದಿನ ಚೆನ್ನಂಗಿ ಗೂಡ್ಲೂರು ಗ್ರಾಮದಲ್ಲಿ ಫಿರ್ಯಾದಿ ಕೆ.ಕೆ. ಕೃಷ್ಣರವರ ಕಾಫಿತೋಟಕ್ಕೆ ಆರೋಪಿ ಸುಗು ಹಾಗೂ ಆತನ ಪತ್ನಿ ಪುಷ್ಪ ಎಂಬವರು ಅಕ್ರಮ ಪ್ರವೇಶ ಮಾಡಿ ಸುಮಾರೂ 3000 ರೂ ಬೆಲೆಬಾಳುವ ಕಾಫಿಯನ್ನು ಕುಯ್ದು ತೆಗೆದುಕೊಂಡು ಹೋಗಿದ್ದು, ವಿಚಾರಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಮಾಡುವುದಾಗಿ ಬೆದರಿಸಿದ ಬಗ್ಗೆ ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

Saturday, December 18, 2010

ರಸ್ತೆ ಅಪಘಾತ : ದಿ: 14-12-2010 ರಂದು ಪಿರ್ಯಾದಿ ಬಾಲಕೃಷ್ಣರವರು ಸಿದ್ಥಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಕಾರ್ಮಾಡು ಗ್ರಾಮ ರವರು ತಮ್ಮನೊಂದಿಗೆ ಮೊಟಾರ್‌ ಸೈಕಲ್‌ ನಲ್ಲಿ ಹೋಗುತ್ತಿದ್ದಾಗ ಲಾರಿ ಚಾಲಕ ಕೂಡಲೇ ಬ್ರೇಕ್‌ ಹಾಕಿದ ಪರಿಣಾಮ ಮೋಟಾರ್‌ ಸೈಕಲ್‌ ಬಲಬದಿಗೆ ತೆಗೆದುಕೊಂಡಾಗ ಬೈಕಿನ ಹ್ಯಾಂಡಲ್‌ ಲಾರಿಗೆ ತಾಗಿ ರಸ್ತೆಗೆ ತಾಗಿ ಮಗುಚಿಕೊಂಡಾಗ ಪಿರ್ಯಾದಿಯವರ ಮಡಗಾರ್ಡ್‌ ಎಡತೊಡೆಯ ಮೇಲೆ ಬಿದ್ದು ಮುಳೆ ಮುರಿದ ಪರಿಣಾಮ ದಿ: 16-12-2010 ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಗೆ ದಾಖಲಾಗಿ ಕೊಟ್ಟ ಪುಕಾರಿನ ಅನ್ವಯ ವಿರಾಜಪೇಟೆ ನಗರ ಠಾಣೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.

ವರದಕ್ಷಿಣೆಯ ಪ್ರಕರಣ: ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ರಾಜಾಸೀಟ್‌ ಹತ್ತಿರ ಕಾವೇರಿ ಗೆಸ್ಟ್‌ ಹೌಸ್‌ನಲ್ಲಿ ವಾಸವಿರುವ ಶ್ರೀಮತಿ ಬೋಜಮ್ಮ ಆರೋಪಿ ಮುರುಳಿ ರೈ ರವರು ದಿ: 13-9-2009 ರಂದು ಆರೋಪಿಯೊಂದಿಗೆ 2ನೇ ಮದುವೆಯಾಗಿರುತ್ತದೆ. ಮದುವೆಯಾದ ಕೆಲವು ತಿಂಗಳ ನಂತರ ಆರೋಪಿ ದಿನದ ಖರ್ಚಿಗಾಗಿ ಹೆಂಡತಿಗೆ ಹಿಂಸೆ ನೀಡು ಮತ್ತು ಅವಳನ್ನು ದುರುಪಯೋಗ ಪಡಿಸುತ್ತಿದ್ದು ಅಲ್ಲದೇ ತವರು ಮನೆಯಿಂದ ವರದಕ್ಷಿಣೆ ತರುವಂತೆ ಜೀವ ಬೆದರಿಕೆ ನೀಡುತಿದ್ದು ಹಾಗೂ ದೈಹಿಕವಾಗಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದುಲದೇ ವಿಚ್ಚೇದನೆ ನೀಡುವಂತೆ ಇಲ್ಲದಿದ್ದರೇ ನಿನ್ನನು ಕೊಲ್ಲುವುದಾಗಿ ಜೀವಬೆದರಿಕೆ ಹಾಕಿರುತ್ತಾನೆ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

ಬಟ್ಟೆ ತೊಳೆಯುತ್ತಿರುವ ವಿಷಯದಲ್ಲಿ ಹೆಂಗಸಿನ ಮೇಲೆ ಹಲ್ಲೆ: ನಾಪೋಕ್ಲು ಠಾಣಾ ವ್ಯಾಫ್ತಿಯಲ್ಲಿ ಎಡಪಾಲ ನರಿಯಂಡ ಗ್ರಾಮದ ಕುರಿಕಡ ಶ್ರೀಮತಿ ಅತೀಕ ರವರು ತಮ್ಮ ಮನೆಯ ಮುಂದೆ ಬಟ್ಟೆಯನ್ನು ತೊಳೆಯುತ್ತಿರುವಾಗ್ಗೆ ಆರೋಪಿ ಯಾದ ಕೆ.ಎ ಇರ್ಷಾದ್‌ ಮತ್ತು ಕೆ.ವೈ ಅಬ್ದುಲ್ಲಾ ಸಾರಮ್ಮ ಎಂಬವರು ಪಿರ್ಯಾದಿದಾರರಿಗೆ ತೊಳೆದ ಗಲೀಜು ನೀಡರನ್ನುರಸ್ತಗೆ ಹರಿಸುತ್ತಿಯ ಎಂದು ಹೇಳಿ ತಲೆ ಕೂದಲನ್ನು ಎಳೆದು ಕಾಲಿನಿಂದ ಒದ್ದು ಶರೀರ ಬೆನ್ನುಗೆ ನೋವು ಪಡಿಸಿದ್ದು ಅಲ್ಲದೇ ಆರೋಪಿ ಯಾದ ಸಾರಮ್ಮ ಳು ಅವಾಚ್ಯಶಬ್ದಗಳಿಂದ ಬೈದು , ಆರೋಪಿಗಳು ಜೀವಬೆದರಿಕೆ ಹಾಕಿರುವುದಾಗಿ ಕೊಟ್ಟ ಪುಕಾರಿನ್ವಯ ನಾಪೋಕ್ಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ

Friday, December 17, 2010

ಕಳ್ಳತನ ಮಾಡಲು ಪ್ರಯತ್ನ: ಮಡಿಕೇರಿ ಗ್ರಾಮಾಂತರ ಠಾಣೆ ಯ ಅಭಿಪಾಲ್ಸ್‌ ವ್ಯಾಪ್ತಿಯಲ್ಲಿ ಪಿರ್ಯಾದಿದಾರರಾದ ಹೆಚ್‌ಸಿ 85, ಸುಬ್ಬಯ್ಯ ಮತ್ತು ಇನ್ನಿತರ ಸಿಬ್ಬಂದಿಗಳು ಹೆಬ್ಬೆಟ್ಟಗೇರಿ ಚೆಕ್ಕಿಂಗ್‌ ಹೋದಾಗ ಬಸ್ಸ್‌ ತಂಗುದಾಣದ ಬಳಿ ಆರೋಪಿಗಳಾದ ರವಿ,ಮಧು ಪ್ರಸಾದ್‌ ಎಂಬರು ಒಂದು ಕಾರನ್ನು ನಿಲ್ಲಿಸಿಕೊಂಡು ನಂಬರ್‌ ಪ್ಲೇಟ್‌ ಬಿಚ್ಚುತ್ತಿರುವುದು ಕಂಡು ಬಂದ ಮೇರೆಗೆ ಪಿರ್ಯಾದಿ ದಾರರು ಅವರನ್ನು ಹಿಡಿದು ವಿಚಾರಿಸಲಾಗಿ ಕಳ್ಳತನ ಮಾಡಿಕೊಂಡು ತಂದಿರುವುದರ ಮೇರೆ ಅರೋಪಿಗಳನ್ನು ಮತ್ತು ಕಾರುನ್ನು ಸ್ವಾದೀನಕ್ಕೆ ತೆಗೆದು ಕೊಂಡು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಮಹಜರು ನಡೆಸಿ ಮುಂದಿನಕ್ರಮವನ್ನು ಕೈಗೊಂಡಿರುವುದಾಗಿದೆ.

ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಾಳುಗೋಡು ಗ್ರಾಮದ ನಿವಾಸಿ ಬಿ.ಎ.ವೋಹನ ರವರು ಬಸ್ಸಿಗೆಂದು ನಡೆದು ಕೊಂಡು ಹೋಗುತ್ತಿರುವಾಗ ಪಿರ್ಯಾದಿ ತಾಯಿಯ 2ನೇ ಅಣ್ಣರವರು ಆರೋಪಿ ಎ.ಸಿ. ಜಯರಾಜ್‌ ರವರ ಮನೆಗೆ ಹತ್ತಿರ ತಲುಪುವಾಗ್ಗೆ ಆರೋಪಿಯಾದ ಜಯರಾಮ್‌ ಪಿರ್ಯಾದಿಯರನ್ನು ನಿಲ್ಲಿಸಿ ಜಗಳ ತೆಗೆದು ಕಲ್ಲಿನಿಂದ ಹೊಡೆದು ನೋವುಂಟು ಮಾಡಿದ ಪರಿಣಾಮ ಪಿರ್ಯಾದಿಯವರು ಕೊಟ್ಟ ಪುಕಾರಿನ್ವಯ ವಿರಾಜಪೇಟೆ ಗ್ರಾಮಾಂತರ ಠಾಣೆ ಪ್ರಕಣದ ದಾಖಲಿಸಿ ಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

Thursday, December 16, 2010

ಮೋಟಾರ್‌ ಸೈಕಲ್‌ ದಿಕ್ಕಿ ಇಬ್ಬರಿಗೆ ಗಾಯ:

ದಿನಾಂಕ 15-12-2010 ರಂದು ವಿರಾಜಪೇಟೆ ನಗರ ಠಾಣಾ ಸರಹದ್ದಿಗೆ ಸೇರಿದ ಸುಂಕದಕಟ್ಟೆಯ ಬಳಿ ರಸ್ತೆಯಲ್ಲಿ ಫಿರ್ಯಾದಿ ಶ್ರೀಮತಿ ಕೆ.ಕೆ. ಬೋಜಮ್ಮರವರು ತಮ್ಮ ಮಗ ಮಾಚಯ್ಯನ ಜೊತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ಕೆಎ-02=ಇಡಿ8008ರ ಮೋಟಾರ್‌ ಸೈಕಲ್‌ ಸವಾರ ಸದರಿ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ ಡಿಕ್ಕಿ ಪಡಿಸಿದ ಪರಿಣಾಮ ಫಿರ್ಯಾದಿಗೂ ಮತ್ತು ಮಾಚಯ್ಯನಿಗೂ ಗಾಯಗಳಾಗಿದ್ದು, ಈ ಸಂಬಂಧ ವಿರಾಜಪೇಟೆ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ರಸ್ತೆಅಪಘಾತದಲ್ಲಿ ಪಿಎಸ್‌ಐ ದುರ್ಮರಣ, 3 ಜನ ಸಿಬ್ಬಂದಿಗಳಿಗೆ ತೀವ್ರ ಗಾಯ:

ದಿನಾಂಕ 15-12-2010 ರಂದು ಕುಶಾಲನಗರ ಠಾಣಾ ಸರಹದ್ದಿನ ಬಸವನಳ್ಳಿ ಗ್ರಾಮದ ಹೊಸೂರು ಜಂಕ್ಷನ್‌ ಬಳಿ ಸಭಾಪತಿ ರ್ಶರೀ ಕೆ.ಜಿ. ಬೋಪಯ್ಯನವರ ಬೆಂಗಾವಲು ಕರ್ತವ್ಯದ ವಾಹನ ಕೆಎ-12-ಜಿ-607ರ ವಾಹನ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಮರಗಳನ್ನು ತುಂಬಿಸಿದ್ದ ಲಾರಿಗೆ ಡಿಕ್ಕಿಯಾದ ಪರಿಣಾಮ ಸದರಿ ವಾಹನದಲ್ಲಿದ್ದ ಆರ್‌ಎಸ್‌ಐ ಮೊಣ್ಣಪ್ಪ ನವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇನ್ನು ಜೀಪು ಚಾಲಕ ಸೇರಿ 2 ಜನ ಸಿಬ್ಬಂದಿಗಳಿಗೆ ತೀವ್ರತರಹದ ಗಾಯಗಳಾಗಿದ್ದು, ಸದರಿಯವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕುಶಾಲನಗರ ಪೊಲೀಸ್ರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಮಹಿಳೆಯ ಮಾನಭಂಗಕ್ಕೆ ಪ್ರಯತ್ನಿಸಿ, ಹಲ್ಲೆ:

ದಿನಾಂಕ 16-12-2010 ರಂದು ಸೋಮವಾರಪೇಟೆ ಠಾಣಾ ವ್ಯಾಪ್ತಿಗೆ ಸೇರಿದ ಯಲಕನೂರು ಹೊಸಳ್ಳಿಗ್ರಾಮದ ವಾಸಿ ಪಿ.ಕೆ. ಯಮುನಾ ಎಂಬವರು ದನಗಳನ್ನು ಗದ್ದೆಗೆ ಬಿಡಲು ಹೋಗುತ್ತಿದ್ದಾಗ ಆರೋಪಿ ರಾಮು ತಂದೆ ಗುರುವಯ್ಯ ಎಂಬವರು ಫಿರ್ಯಾದಿಯ ಹತ್ತಿರ ಹೋಗಿ ಅವರ ಕೈಹಿಡಿದು ಮಾನಭಂಗಕ್ಕೆ ಯತ್ನಿಸಿ ಮುಖದ ಭಾಗಕ್ಕೆ ಹೊಡೆದು ನೋವನ್ನುಂಟುಮಾಡಿದ್ದು, ಇದನ್ನು ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Wednesday, December 15, 2010

16 ವರ್ಷಪ್ರಾಯದ ಹುಡುಗ ಕಾಣೆ, ಪ್ರಕರಣ ದಾಖಲು:
ದಿನಾಂಕ 12-12-2010 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಅರಪಟ್ಟು ಗ್ರಾಮದ ವಾಸಿ ಎಂ.ಕೆ. ಮುದ್ದಯ್ಯ ಎಂಬವರ ಮಗ 16 ವರ್ಷ ಪ್ರಾಯದ ಲೆನಿನ್‌ ಬೆಳ್ಳಿಯಪ್ಪ ಎಂಬವನು ತನ್ನ ಮನೆಯಿಂದ ಹೊರಗಡೆ ಹೋದವನು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾನೆಂದು ಫಿರ್ಯಾದಿಯವರು ಈ ದಿನ ದಿನಾಂಕ 15-12-2010 ರಂದು ದೂರನ್ನು ನೀಡಿದ್ದು, ಅದರಂತೆ ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಮನೆಗೆ ಅಕ್ರಮ ಪ್ರವೇಶ, ಅವಾಚ್ಯ ಶಬ್ದಗಳ ನಿಂದನೆ ಮತ್ತು ಕೊಲೆ ಬೆದರಿಕೆ:
ದಿನಾಂಕ 30-11-2010 ರಂದು ಸೋಮವಾರಪೇಟೆ ಠಾಣಾ ಸರಹದ್ದಿನ ಕಿರಗಂದೂರು ಗ್ರಾಮದ ನಿವಾಸಿ ಫಿರ್ಯಾದಿ ಎಸ್‌.ಕೆ. ರಂಜನ್‌ ರವರು ತಮ್ಮ ಮನೆಯಲ್ಲಿರುವಾಗ ಆರೋಪಿ ಎಸ್‌.ಕೆ. ಅಪ್ಪಚ್ಚು ಎಂಬವರು ಫಿರ್ಯಾದಿಯವರ ಮನೆಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಬಂದೂಕಿನಿಂದ ಗುಂಡು ಹಾರಿಸಿ ಕೊಲೆಮಾಡುವುದಾಗಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ದಾರಿತಡೆದು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ, ಪ್ರಕರಣ ದಾಖಲು:
ದಿನಾಂಕ 14-12-2010 ರಂದು ಸೋಮವಾರಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಬಜೆಗುಂಡಿ ಗ್ರಾಮದಲ್ಲಿ ಫಿರ್ಯಾದಿ ಆರ್‌ ಮೋಹನ್‌ ಕುಮಾರ್‌ ಎಂಬವರು ಅಂಗಡಿಯಿಂದ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ತಮ್ಮ ಮನೆಯ ಕಡೆಗೆ ಹೋಗುತ್ತಿರುವಾಗ ಆರೋಪಿ ವಿಜಯ ಎಂಬವರು ಫಿರ್ಯಾದಿಯ ದಾರಿ ತಡೆದು ಜಗಳ ಮಾಡಿ ಅಲ್ಲೇ ಬಿದ್ದಿದ್ದ ಕಲ್ಲಿನಿಂದ ಹಲ್ಲೆನಡೆಸಿ ಗಾಯಪಡಿಸಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Tuesday, December 14, 2010

ರಸ್ತೆ ಅಪಘಾತ, ಒಬ್ಬನ ದುರ್ಮರಣ, ಒಬ್ಬನಿಗೆ ಗಾಯ:
 • ದಿನಾಂಕ 14-12-2010 ರಂದು ಬೆಳಿಗ್ಗೆ 1-00 ಗಂಟೆಗೆ ಮಾಕುಟ್ಟ ಉಪ ಠಾಣೆಯ ಸೇತುವೆಯ ಹತ್ತಿರ ಆರೋಪಿತ ಬೈಜು, ಕೆಎಲ್‌-09-ಕೆ 2572ರ ಮಿನಿ ಲಾರಿ ಚಾಲಕ ಸದರಿ ಲಾರಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಮಗುಚಿ ಬಿದ್ದಿರುವ ಕಾರಣ ಚಾಲಕ ಹಾಗೂ ಕ್ಲೀನರ್‌ ತೀವ್ರವಾಗಿ ಗಾಯಗೊಂಡು ಅವರನ್ನು ಕಣ್ಣಾನೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ತೀವ್ರತರಹದ ಗಾಯಗಳಾಗಿದ್ದ ಲಾರಿ ಕ್ಲೀನರ್‌ ಮರಣಹೊಂದಿರುತ್ತಾನೆ. ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮಕೈಗೊಂಡಿರುತ್ತಾರೆ.
ಸಾಂಸಾರಿಕ ಜೀವನದಲ್ಲಿ ನೊಂದು ಮಹಿಳೆಯ ಆತ್ಮಹತ್ಯೆ:
 • ದಿನಾಂಕ 14-12-2010 ರಂದು ಮೊನ್ನಂಪೇಟೆ ಠಾಣಾ ವ್ಯಾಪ್ತಿಯ ಹಳ್ಳಿಗಟ್ಟು ಗ್ರಾಮದ ವಾಸಿ ಶ್ರೀಮತಿ ಮಮತ ಎಂಬುವರು ತನಗೆ ಮಕ್ಕಳಾಗಲಿಲ್ಲವೆಂದು ಮಾನಸಿಕವಾಗಿ ನೊಂದು ಯಾವುದೋ ವಿಷಪದಾರ್ಥ ಸೇವಿಸಿ ಅಸ್ವಸ್ಥಳಾದ ಆಕೆಯನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಲು ವಾಹನದಲ್ಲಿ ಸಾಗಿಸುವ ಸಮಯದಲ್ಲಿ ಆಕೆ ಮೃತಪಟ್ಟಿರುತ್ತಾರೆ. ಈ ಸಂಬಂಧ ಎಂ.ಜಿ. ನರೇಂದ್ರರವರು ನೀಡಿದ ದೂರಿನ ಮೇರೆ ಪೊನ್ನಂಪೇಟೆ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.
ಕ್ಷುಲ್ಲಕ ಕಾರಣ ವ್ಯಕ್ತಿಯ ಮೇಲೆ ಹಲ್ಲೆ:
 • ಈ ದಿನ ದಿನಾಂಕ 14-12-2010 ರಂದು ಕುಶಾಲನಗರ ನಗರದಲ್ಲಿ ಫಿರ್ಯಾದಿ ಟಿ.ಆರ್‌. ಪರಮೇಶ ಎಂಬವರು ತಮ್ಮ ಬಾಪ್ತು ಆಟೋರಿಕ್ಷಾವನ್ನು ಆಟೋ ನಿಲ್ದಾಣದಲ್ಲಿ ನಿಲ್ಲಿಸುತ್ತಿರುವಾಗ ಆರೋಪಿ ಸಾದಿಕ್‌ @ ಮೋಣು ಎಂಬವನು ತಾನು ತನ್ನ ಆಟೋ ರಿಕ್ಷಾವನ್ನು ಮೊದಲು ನಿಲ್ಲಿಸುತ್ತೇನೆಂದು ಹೇಳಿ ಜಗಳ ತೆಗೆದು ಕಲ್ಲಿನಿಂದ ಫಿರ್ಯಾದಿಯ ತಲೆಗೆ ಹೊಡೆದು ಗಾಯಪಡಿಸಿದ್ದು, ಕುಶಾಲನಗರ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Monday, December 13, 2010

ಪಾದಾಚಾರಿಗೆ ಆಟೋರಿಕ್ಷಾ ಡಿಕ್ಕಿಪಡಿಸಿ ಗಾಯ:

ದಿನಾಂಕ 11-12-2010ರಂದು ವಿರಾಜಪೇಟೆ ನಗರದ ದೊಡ್ಡಟ್ಟಿಚೌಕಿಬಳಿ ಫಿರ್ಯಾದಿ ಸೈಯದ್‌ ನೂರ್‌ರವರು ನಡೆದುಕೊಂಡು ಹೋಗುತ್ತಿರುವಾಗ ಹಿಂದುಗಡೆಯಿಂದ ಆರೋಪಿ ಆಟೋ ಚಾಲಕ ಆಟೋರಿಕ್ಷಾವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಫಿರ್ಯಾದಿಗೆ ಗಾಯಗಳಾಗಿದ್ದು, ವಿರಾಜಪೇಟೆ ನಗರ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಬತ್ತದ ಗದ್ದೆಗೆ ನೀರು ಬಿಡುವ ವಿಚಾರದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ:

ದಿನಾಂಕ 12-12-2010 ರಂದು ಕಣ್ಣಂಗಾಲ ಗ್ರಾಮದಲ್ಲಿ ಫಿರ್ಯಾದಿ ವಿ.ಎ. ಚಂದ್ರಶೇಖರರವರು ತಮ್ಮ ಬಾಪ್ತು ಭತ್ತದ ಗದ್ದೆಯಿಂದ ನೀರನ್ನು ಬಿಡಲು ತೆರಳಿರುವ ಸಮಯದಲ್ಲಿ ಆರೋಪಿ ವಿ.ಸಿ. ಕಾಳಪ್ಪ ಮತ್ತು ಲೋಹಿತಾಕ್ಷಿ ಎಂಬವರು ಅಲ್ಲಿಗೆ ಹೋಗಿ ತಮ್ಮ ಕೈಯಲ್ಲಿದ್ದ ಕತ್ತಿಯನ್ನು ತೋರಿಸಿ ನಿಮ್ಮ ಗದ್ದೆಯಿಂದ ನಮ್ಮ ಗದ್ದೆಗೆ ನೀರು ಬಿಟ್ಟರೆ ಇದೇ ಕತ್ತಿಯಿಂದ ಕಡಿದು ಕೊಲೆ ಮಾಡುವುದಾಗಿ ಬೆದರಿಸಿದ್ದು, ಅಲ್ಲದೆ ಲೋಹಿತಾಕ್ಷಿರವರು ಫಿರ್ಯಾದಿಗೆ ಕೈಯಿಂದ ಹಲ್ಲೆನಡೆಸಿದ್ದು, ಈ ಕುರಿತು ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ದಾರಿತಡೆದು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ:

ದಿನಾಂಕ 12-12-2010 ರಂದು ನೋಕ್ಯ ತಿತಿಮತಿ ಗ್ರಾಮದಲ್ಲಿ ಫಿರ್ಯಾದಿ ಎಸ್‌.ಜಿ. ರಾಜಶೇಖರರವರು ತನ್ನ ಮನೆಯ ಕಡೆಗೆ ಹೋಗುತ್ತಿರುವಾಗ ಆರೋಪಿ ಗುರುಮಲ್ಲೇಶ್‌ ಮತ್ತು ಶಾಂತ ಎಂಬವರು ಫಿರ್ಯಾದಿಯ ದಾರಿ ತಡೆದು ದೊಣ್ಣೆಯಿಂದ ಹಲ್ಲೆನಡೆಸಿ ಗಾಯಪಡಿಸಿದ್ದು, ಈ ಸಂಬಂಧ ಪೊನ್ನಂಪೇಟೆ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಮೋಟಾರ್‌ಸೈಕಲ್‌ಗೆ ಮಾರುತಿ ವ್ಯಾನು ಡಿಕ್ಕಿ, ಸವಾರನಿಗೆ ಗಾಯ:

ದಿನಾಂಕ 12-12-2010 ರಂದು ಫಿರ್ಯಾದಿ ಹೆಚ್‌.ಸಿ. ವೆಂಕಟೇಶ್‌, ಪೊಲೀಸ್‌ ಕಾನ್ಸ್‌ಟೇಬಲ್‌ ರವರು ತಮ್ಮ ಮೋಟಾರ್‌ ಸೈಕಲ್‌ನಲ್ಲಿ ಮಡಿಕೇರಿ ಕಡೆಯಿಂದ ವಿರಾಜಪೇಟೆ ಕಡೆಗೆ ಹೋಗುತ್ತಿರುವಾಗ ಕಗ್ಗೋಡ್ಲು ಗ್ರಾಮದ ಸೇತುವೆ ಬಳಿ ಆರೋಪಿ ಪಿ.ಪಿ. ಸೋಮಣ್ಣ ಎಂಬವರು ತಮ್ಮ ಬಾಪ್ತು ಮಾರುತಿ ವ್ಯಾನ್‌ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ ಡಿಕ್ಕಿಪಡಿಸಿದ ಪರಿಣಾಮ ಫಿರ್ಯಾದಿ ವೆಂಕಟೇಶ್‌ರವರಿಗೆ ಗಾಯಗಳಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿರುತ್ತದೆ.

Saturday, December 11, 2010

ಹಳೆ ವೈಷಮ್ಯ, ಕೊಲೆ ಬೆದರಿಕೆ

 • ಹಳೆ ವೈಷಮ್ಯದಿಂದ ವ್ಯಕ್ತಿಯೋರ್ವರ ಮೇಲೆ ಕೊಲೆ ಬೆದರಿಕೆ ಹಾಕಿರುವ ಘಟನೆ ವಿರಾಜಪೇಟೆ ನಗರ ಠಾಣಾ ವ್ಯಾಪ್ತಿಯ ಪಂಜರಪೇಟೆಯಲ್ಲಿ ನಡೆದಿದೆ. ದಿನಾಂಕ 10/12/2010ರಂದು ಸಂಜೆ ನಗರದ ಪಂಜರುಪೇಟೆಯ ನಿವಾಸಿ ಎ.ಆರ್.ಜನಾರ್ಧನ ಎಂಬವರ ಮನೆಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅಕ್ರಮವಾಘಿ ಪ್ರವೇಶಿಸಿದ ಆರೋಪಿ ಆನಂದ ಎಂಬವರು ಮನೆಯ ಮುಂದಿನ ಹೂಗಿಡಗಳನ್ನು ಕಡಿದು ನಾಶಪಡಿಸಿದ್ದು, ಈ ಬಗ್ಗೆ ಪ್ರಶ್ನಿಸಿದ ಜನಾರ್ಧನರವರನ್ನು ಕತ್ತಿಯಿಂದ ಕಡಿಯಲು ಯತ್ನಿಸಿದ್ದು, ಕೊಲೆ ಬೆದರಿಕೆ ಹಾಕಿರುವ ದೂರಿನ ಬಗ್ಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ದಾರಿ ತಡೆದು ಹಲ್ಲೆ

 • ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವರನ್ನು ದಾರಿ ತಡೆದು ಹಲ್ಲೆ ಮಾಡಿರುವ ಘಟನೆ ಶನಿವಾರಸಂತೆ ಠಾಣಾ ವ್ಯಾಪ್ತಿಯ ಹೆಗ್ಗುಳ ಗ್ರಾಮದಲ್ಲಿ ನಡೆದಿದೆ. ದಿನಾಂಕ 09/12/2010ರಂದು ಹಾಸನ ಜಿಲ್ಲೆಯು ಸಕಲೇಶಪುರದ ಖಲಂದರ್ ಎಂಬವರು ತಮ್ಮ ಆಟೋ ರಿಕ್ಷಾದಲ್ಲಿ ಸೋಮವಾರಪೇಟೆಗೆ ಬಂದು ಮೀನು ಇಳಿಸಿ ವಾಪಾಸು ಹೋಗುತ್ತಿರುವಾಗ ಆರೋಪಿಗಳಾದ ಶಾಂತಮಲ್ಲಪ್ಪ ಮತ್ತು ಹರೀಶ ಎಂಬವರು ಹೆಗ್ಗುಳ ಗ್ರಾಮದಲ್ಲಿ ಖಲಂದರ್ ರವರನ್ನು ಮೀನು ಕೇಳಿದ್ದು, ಇಲ್ಲ ಎಂದು ಹೇಳಿದ ಕಾರಣಕ್ಕೆ ಆರೋಪಿಗಳು ಆಟೋ ರಿಕ್ಷಾದ ಗಾಜುಗಳನ್ನು ಒಡೆದು ಪುಡಿಮಾಡಿ ಖಲಂದರ್ ರವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಳೆ ವೈಷಮ್ಯ, ವ್ಯಕ್ತಿಯೋರ್ವರ ಮೇಲೆ ಕತ್ತಿಯಿಂದ ಕಡಿದು ಹಲ್ಲೆ

 • ಹಳೆ ವೈಷಮ್ಯದಿಂದ ವ್ಯಕ್ತಿಯೋರ್ವರ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿರುವ ಘಟನೆ ಶನಿವಾರಸಂತೆ ಠಾಣಾ ವ್ಯಾಪ್ತಿಯ ಬಡುಬನ ಹಳ್ಳಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 10/12/2010ರ ರಾತ್ರಿ ಗ್ರಾಮದ ನಿವಾಸಿ ಬಿ..ಡಿ.ಮೂರ್ತಿ ಎಂಬವರು ಅಂಗಡಿಗೆ ಹೋಗುತ್ತಿರುವಾಗ ಆರೋಪಿಗಳಾದ ಗುರು ಮಲ್ಲೇಶ ಮತ್ತು ರಾಜಪ್ಪ ಎಂಬವರು ಹಳೆ ವೈಷಮ್ಯದಿಂದ ಮೂರ್ತಿಯವರೊಂದಿಗೆ ಜಗಳವಾಡಿ ದೊಣ್ಣೆ ಹಾಗೂ ಕತ್ತಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿರುವ ಬಗ್ಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಗಾಂಜಾ ಮಾರಾಟ ಯತ್ನ, ವ್ಯಕ್ತಿಯ ಬಂಧನ

 • ವಿಚಾರಣಾಧೀನ ಖೈದಿಯೊಬ್ಬರಿಗೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ನಗರ ಠಾಣಾ ಪೊಲೀಸರು ಬಂಧಿಸಿ ಕ್ರಮ ಕೈಗೊಂಡಿದ್ದಾರೆ. ದಿನಾಂಕ 10/12/2010ರಂದು ಮಡಿಕೇರಿಯ ಜೈಲಿನಲ್ಲಿರುವ ವಿಚಾರಣಾಧೀನ ಖಯದಿ ಗಣೇಶ ಎಂಬಾತನಿಗೆ ಗಾಂಜಾ ಮಾರಾಟ ಮಾಡಲು ವ್ಯಕ್ತಿಯೋರ್ವನು ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ನಗರ ಠಾಣಾಧಿಕಾರಿ ದುರ್ಗಾರವರು ನಗರದ ನ್ಯಾಯಾಲಯದ ಸಂಕೀರ್ಣದ ಬಳಿ ಹೊಂಚು ಹಾಕಿ, ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಗೊಂದಿ ಬಸವನಹಳ್ಳಿ ಗ್ರಾಮದ ವೆಂಕಟೇಶ ಎಂಬಾತನ್ನು ಬಂಧಿಸಿ ಆತನಿಂದ ಗಾಂಜಾವನ್ನು ವಶಪಡಿಸಿಕೊಂಡು ಆತನನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.

Friday, December 10, 2010

ಹಾವು ಕಚ್ಚಿ ವ್ಯಕ್ತಿಯ ಮರಣ:
ಕುಟ್ಟ ಠಾಣಾ ವ್ಯಾಪ್ತಿಯ ಬೊಮ್ಮಾಡು ಸಂಪಿಗೆ ಕಾಲೋನಿ, ಕೋತೂರು ಗ್ರಾಮದ ನಿವಾಸಿ ದಿ: 8-12-2010 ರಂದು ರಾಜಪ್ಪ ಮತ್ತು ಗಣಪತಿಯೊಂದಿಗೆ ಕೂಲಿ ಕೆಲಸಕ್ಕೆ ಹೋಗಿ ಕೆಲಸ ಮುಗಿಸಿ ಕೊಂಡು ವಾಪಾಸ್ಸು ಮನೆಗೆ ಬರುತ್ತಿರುವಾಗ ಠಾತ್ರಿ ಸಮ ಯ 19:15 ಗಂಟೆಗೆ ಸದರಿ ಕಾಲೋನಿಯ ಆಶ್ರಮ ಶಾಲೆಯ ತಾರು ರಸ್ತೆಯಲ್ಲಿ ವಿಷದ ಕಚ್ಚಿ ಆವರನ್ನು ಕೂಡಲೇ ಬಾಳಲೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮದ್ಯ ಮರಣಹೊಂದಿರುತ್ತಾರೆಂದು ಅವರ ಸಂಬಂಧಿಕರು ಕುಟ್ಟ ಠಾಣೆಗೆ ನೀಡಿದ ಪುಕಾರಿನ್ವಯ ಪ್ರಕರಣವನ್ನು ಧಾಖಲಿಸಿ ತನಿಖೆಯನ್ನು ಕೈಗೊಂಡಿರುತ್ತಾರೆ.
ಕುಲಕ್ಷ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ:
ದಿ: 10-12-2010 ರಂದು ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಕೊಡವ ಸಮಾಜದ ಮುಖ್ಯ ರಸ್ತೆಯಲ್ಲಿ ಪಿರ್ಯಾದಿಯಾರಾದ ಕಡೆಮಾಡ ಸೋಮಯ್ಯ ಬಿಶೆಟ್ಟಗೇರಿ ಗ್ರಾಮದವರು ಸಂಬಂದಿಕರ ಊರುಕೂಡುವ ಮದುವೆ ಸಮಾರಂಭವನ್ನು ಮುಗಿಸಿ ಬರುತ್ತಿದ್ದಾಗ ಆರೋಪಿಗಳಾದ ಅಯ್ಯಪ್ಪ ಮತ್ತು ಇತರರು 20 ಜನರು ಅವರೆಲ್ಲಾ ನಾಲ್ಕೇರಿ ಮತ್ತುಶ್ರೀಮಂಗಲ ಗ್ರಾಮದವರು ಎಕಾಎಕಿ ಜಗಳ ತೆಗೆದು ಗಾಜಿನ ಬಾಟಲಿನಿಂದ ಹೊಡೆದು, ಬಲ ಕೈ,ಎದೆಗೆ ಹೊಡೆದು ಗಾಯಗೊಳಿಸಿದ ಪರಿಣಾಮ ಕಡೆಮಾಡ ಸೋಮಯ್ಯನವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತಾ ನೀಡಿದ ಪುಕಾರಿನ್ವಯ ಪೊನ್ನಂಪೇಟೆ ಠಾಣೆ ಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿರುತ್ತಾರೆ.
ಹುಡುಗಿ ಕಾಣೆ
ದಿ: 10-12-2010 ರಂದು ಮಾದಪಟ್ಟಣ ವಾಸಿ ತಂಗವೇಲು ಎಂಬರ ಮಗಳು 13 ವರ್ಷದ ಪ್ರಾಯದ ಉಷಾ ಎಂಬಾಕೆಯು ಮನೆಯಿಂದ ಯಾರಿಗೂ ತಿಳಿಸದೇ ಎಲ್ಲಗೋ ಹೋಗಿದ್ದು ಈ ಬಗ್ಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಗಿ ಯ ಪತ್ತೆ ಕ್ರಮ ಕೈಗೊಂಡಿರುತ್ತಾರೆ.

Thursday, December 9, 2010

ಎಎಸ್‌ಐ ಎಂ ಸೋಮಯ್ಯನವರು ಪೊನ್ನಂಪೇಟೆ ನಗರದಲ್ಲಿ ಗಸ್ತು ಮತ್ತು ಬೀಟ್‌ ಚೆಕ್ಕಿಂಗ್‌ ಕರ್ತವ್ಯ ಮಾಡುತ್ತಿದ್ದಾಗ ರಾತ್ರಿ 2:00 ಗಂಟೆಗೆ ಯಾರೋ ದೂರವಾಣಿ ಕರೆಮಾಡಿ ಹುದ್ದೂರು ಗ್ರಾಮದಲ್ಲಿ ಪಿಕಪ್‌ ಜೀಪಿನಲ್ಲಿ ದನದ ರಾಸುಗಳನ್ನು ತುಂಬಿಸಿ ಮಾಂಸ ಮಾಡಿಮಾರಾಟ ಮಾಡುವ ಉದ್ದೇಶ ದಿಂದ ಕೇರಳ ರಾಜ್ಯದ ಕಸಾಯಿ ಖಾನೆಗೆ ಸಾಗಾಟ ಮಾಡುತ್ತಿರುವುದಾಗಿ ಸಿಕ್ಕಿದ ಖಚಿತ ವರ್ತಮಾನದ ವೇರೆ ಠಾಣಾ ಸಿಬ್ಬಂದಿಯವರೊಂದಿಗೆ ಇಲಾಖಾ ಜೀಪು ನಲ್ಲಿ ಪಂಚಾಯಿತ್ತಿದಾರರೊಂದಿಗೆ ಹುದ್ದೂರು ಗ್ರಾಮದ ಜಂಕ್ಷನ್‌ ನಲ್ಲಿದ್ದಾಗ ಆರೋಪಿಯವರ ಜೀಪು ಬರುತ್ತಿದ್ದು ತಡೆದು ನಿಲ್ಲಿಸಿದಾಗ ಆರೋಪಿಗಳಾದ ಚಾಲಕ ಮತ್ತು ಇನ್ನೊಬ್ಬ ಇಳಿದು ತಪ್ಪಿಸಿಕೊಂಡು ಹೋಗಿದ್ದು, ಆರೋಪಿ ಜೀಪಿನಲ್ಲಿ 7 ದನದ ರಾಸುಗಳು ಇದ್ದು ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿರುವುದಾಗಿದೆ .
ಕಳ್ಳತನ ಪ್ರಕರಣ:
ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಕುಂದಾ ಗ್ರಾಮದ ಸರ್ಕಾರಿ ಪ್ರಾಧಮಿಕ ಶಾಲೆ ಯ ಮುಖ್ಯೋಪದ್ಯಾಯರಾದ ಶ್ರಿಮತಿ ಪ್ರೇಮಾವತಿ ಪಿರ್ಯಾದಿವರು ಸಂಜೆ ಎಂದಿನಂತೆ ಶಾಲೆಗೆ ಕೊಠಡಿ ಬೀಗ ಹಾಕಿ ಹೋಗಿದ್ದು ಬೆಳಿಗ್ಗೆ 8:30 ಗಂಟೆ ಶಾಲೆಗೆ ಬಂದು ನೋಡಿದಾಗ ಅಕ್ಷರ ದಾಸೋಹ ಕೊಠಡಿಯ ಬಾಗಿಲಿನ ಬೀಗ ಮುರಿದು ಯಾರೋ ಕಳ್ಳರು ಒಳಗಡೆ ಇಟ್ಟಿದ್ದ 2 ಗ್ಯಾಸ್‌ ಸಿಲಿಂಡರನ್ನು ಕಳತನ ಮಾಡಿರುವುದಾಗಿದೆ. ಅಂದಾಜು ರೂ. 3000 ಗಳು ಕೊಟ್ಟ ಪುಕಾರಿನ್ವಯ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

Wednesday, December 8, 2010

ದಿ:7-12-10 ರಂದು ಪಿಎಸ್‌ಐ ರವರು ಠಾಣಾ ಕರ್ತವ್ಯದಲ್ಲಿ ಇರುವಾಗ್ಗೆ ಕೇರಳ ರಾಜ್ಯಕ್ಕೆ ಆಕ್ರಮವಾಗಿ ಜಾನುವಾರುಗಳನ್ನು ಕಸಾಯಿ ಖಾನೆಗೆ ಜೀಪಿನಲ್ಲಿ ಸಾಗಿಸುತ್ತಿರುವುದಾಗಿ ಸಿಕ್ಕಿದ ವರ್ತಮಾನದ ಮೇರೆಗೆ ಪಿಎಸ್‌ಐ & ಸಿಬ್ಬಂದಿಗಳು ಬಾಡಗ ಗ್ರಾಮದ ಬೊಳ್ಳೇರ ಗೇಟ್‌ ಜಂಕ್ಷನ್‌ ಬಳಿ ಇಲಾಖಾ ಜೀಪು ಹೋಗಿ ತಪಾಸಣೆ ಮಾಡಿಕೊಂಡಿದಾಗ ಕೆಎಲ್‌ -11 ಇ-5508 ರ ಜೀಪಿನಲ್ಲಿ ಧನಕರುಗಳನ್ನು ಆರೋಪಿಗಳು ಸಾಗಿಸುತ್ತಿದ್ದನ್ನು ಪತ್ತೆ ಹಚ್ಚಿ ಪ್ರಕರಣವನ್ನು ಧಾಖಲಿಸಿ ಆರೋಪಿಗಳನ್ನು ದಸ್ತಗಿರಿ ಮಾಡಿ ತನಿಖೆಯನ್ನು ಕೈಗೊಂಡಿರುವುದಾಗಿದೆ.

ಆಕ್ರಮ ಗಾಂಜಾ ಮಾರಟಾ: ದಿ: 8-12-10 ರಂದು ಶ್ರೀ ಟಿ.ಎಂ. ಪುನಿತ್‌,ಪಿಎಸ್‌ಐ ನಾಪೋಕ್ಲು ಠಾಣೆರವರು ಗಸ್ತು ಕರ್ತವ್ಯದಲ್ಲಿರುವಾಗ್ಗೆ ಸಮಯ 9-15 ಗಂಟೆಗೆ ನಾಪೋಕ್ಲ ನಗರ ಬಸ್ಸು ನಿಲ್ದಾಣದ ಹತ್ತಿರ ಆರೋಪಿಯು ನಾಸಿರ್‌ ಎಂಬವನ್ನು ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಸಿಕ್ಕಿದ ಖಚಿತ ವರ್ತಮಾನದ ಮೇರೆಗೆ ಹೋಗಿ ನೋಡಿದಾಗ ಆರೋಪಿ ಓಡಲು ಪ್ರಯತ್ನಿಸಿದ್ದು ಆತನ ಹಿಡಿದು ನೋಡಿದಾಗ 8 ಚಿಕ್ಕಚಿಕ್ಕ ಪೊಟ್ಟಣಗಳಿದ್ದು ಆರೋಪಿಮೇಲೆ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿರುವುದಾಗಿದೆ.

ಕುಲಕ್ಷ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ

ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮೈತಾಡಿ ಗ್ರಾಮದ ಪಿರ್ಯಾದಿಯರಾದ ಜೇನುಕುರುಬರ ರಾಜು ರವರು ವಾಸವಿರುವ ಲೈನ್‌ ಮನೆಯಲ್ಲಿ ಪಿರ್ಯಾದಿಯವರ ತಂಗಿಅವರ ಗಂಡ ಮುತ್ತರವರು ವಾಸವಿದ್ದು ಆರೋಪಿ ಮುತ್ತರವರು ಪಿರ್ಯಾದಿಯವರು ತಂಗಿಗೆ ಅವಾಚ್ಚ ಶಬ್ದಗಳಿಂದ ಬೈದು ಹೊಡೆಯುತ್ತಿದ್ದು ಈ ವಿಚಾರವನ್ನು ಪಿರ್ಯಾದಿದಾರರಾದ ರಾಜುರವರು ಕೇಳಲು ಹೋದಾಗ ಆರೋಪಿ ಯು ಕತ್ತಿಯಿಂದ ಕಿವಿಯ ಹಿಂಭಾಗಕ್ಕೆ ಕಡಿದು ಗಾಯ ಪಡಿಸಿದ್ದು ಸದ್ರಿ ರವರು ಚಿಕಿತ್ಸೆ ಗೆ ಸರಕಾರಿ ಆಸ್ಪತ್ರೆ ದಾಖಲಾಗಿದ್ದು ಕೊಟ್ಟ ಹೇಳಿಕೆಯ ಮೇಲೆ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿರುತ್ತಾರೆ.

Tuesday, December 7, 2010

ಜೀವನದಲ್ಲಿ ಜಿಗುಪ್ಸೆ ವ್ಯಕ್ತಿಯೋರ್ವನ ಆತ್ಮಹತ್ಯೆ:

ಉದ್ಯೋಗ ದೊರಕದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವನು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೆ. ಪೆರಾಜೆ ಗ್ರಾಮದಿಂದ ವರದಿಯಾಗಿದೆ. ಕೆ. ಪೆರಾಜೆ ಗ್ರಾಮದ ವಾಸಿ ಹರೀಶ್‌ ಪಿ.ರಾವ್‌ರವರ ಮಗ 21 ಪ್ರಾಯದ ರೋಹಿತ್‌ ಎಂಬವನು ಈ ಹಿಂದೆ ಮಂಗಳೂರಿನ ಇನ್‌ಫೋಸಿಸ್‌ನಲ್ಲಿ ಉದ್ಯೋಗಿಯಾಗಿದ್ದು, ಇತ್ತೀಚೆಗೆ ಆ ಕೆಲಸವನ್ನು ಬಿಟ್ಟು ಮನೆಯಲ್ಲಿದ್ದು, ಬೇರೆ ಕೆಲವನ್ನು ಹುಡುಕಿ ದೊರಕದೇ ಇರುವ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ಇಲಿ ಮದ್ದು ಸೇವಿಸಿ, ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಮಯ ಮರಣಹೊಂದಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಅಕ್ರಮ ಗಾಂಜಾ ಮಾರಾಟ, ಪ್ರಕರಣ ದಾಖಲು:

ದಿನಾಂಕ 6-12-2010 ರಂದು ಫಿರ್ಯಾದಿ ನಾಪೋಕ್ಲು ಪೊಲೀಸ್‌ ಠಾಣಾ ಪಿ.ಎಸ್‌.ಐ., ಎ.ಪಿ. ರಮೇಶ್‌ರವರು ನಗರದಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ನಗರದ ಬಸ್ಸು ತಂಗುದಾಣದ ಬಳಿ ಆರೋಪಿ ಕೆ. ನಾಸಿರ್‌ ಎಂಬವನು ತನ್ನ ಜೇಬಿನಲ್ಲಿ 8 ಗಾಂಜಾ ಪ್ಯಾಕೇಟ್‌‌ ಗಳನ್ನು ಅಕ್ರಮವಾಗಿ ಇಟ್ಟುಕೊಂಡು ಮಾರುತ್ತಿದ್ದು, ಈ ಸಬಂಧ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಕ್ಷುಲ್ಲಕ ಕಾರಣ ಸೊಸೆಯಿಂದ ಅತ್ತೆಯ ಮೇಲೆ ಹಲ್ಲೆ:

ದಿನಾಂಕ 6-12-2010 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಾರ್ಮಾಡು ಅಮ್ಮತ್ತಿ ಗ್ರಾಮದ ವಾಸಿ ಫಿರ್ಯಾದಿ ಶ್ರೀಮತಿ ಹೆಚ್‌.ಆರ್‌.ಗಂಗಮ್ಮರವರಿಗೆ ಆಕೆಯ ಸೊಸೆ ಆರೋಪಿ ಲತಾ ಎಂಬವರು ಕೈಯಿಂದ ಕೆನ್ನೆಗೆ ಹೊಡೆದು ಕಾಲಿನಿಂದು ಒದ್ದು ನೋವನ್ನುಂಟು ಮಾಡಿದ್ದು, ಚಿಕಿತ್ಸೆಗೆ ವಿರಾಜಪೇಟೆ ಸರಕಾರಿ ಆಸ್ಪತ್ರೆ ದಾಖಲಾಗಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Monday, December 6, 2010

ಮಾರುತಿ ಓಮಿನಿ ಕಳ್ಳತನ, ಪ್ರಕರಣ ದಾಖಲು:
ಸೋಮವಾರಪೇಟೆ ನಗರದ ಬಾರ್‌ ಮುಂದುಗಡೆ ನಿಲ್ಲಿಸಿದ ಮಾರುತಿ ಓಮಿನಿಯನ್ನು ಕಳ್ಳತನ ಮಾಡಿದ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ವರದಿಯಾಗಿದೆ. ದಿನಾಂಕ 3-11-2010 ರಂದು ಫಿರ್ಯಾದಿ ಎಂ. ರವಿಕುಮಾರ್‌ ಎಂಬವರು ತಮ್ಮ ಬಾಪ್ತು ಮಾರುತಿ ಓಮಿನಿ ಸಂಖ್ಯೆ ಕೆಎ-12-ಎಂ-4131ನ್ನು ಸೋಮವಾಪೇಟೆ ನಗರದ ಅಲೋಕ ಬಾರ್‌ ಬಳಿ ನಿಲ್ಲಿಸಿ ಸದರಿ ಬಾರಿನೊಳಗೆ ಹೋಗಿ ಸಮಯ 20-00 ಗಂಟೆಗೆ ಬಂದು ನೋಡಿದಾಗ ಸದರಿ ವ್ಯಾನನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಫಿರ್ಯಾದಿಯವರು ದಿನಾಂಕ 5-12-2010 ರಂದು ನೀಡಿದ ದೂರಿನ ಮೇರೆ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಕ್ಷುಲ್ಲಕ ಕಾರಣ ವ್ಯಕ್ತಿಯ ಮೇಲೆ ಹಲ್ಲೆ:
ದಿನಾಂಕ 30-11-2010 ರಂದು ಫಿರ್ಯಾದಿ ಸುಂದರ ಎಂಬವರ ಬಾಪ್ತು ಕೋಳಿಗಳಿಗೆ ಹೊಡೆದ ಪರಿಣಾಮ ಒಂದು ಕೋಳಿ ಮೃತಪಟ್ಟಿದ್ದು, ಈ ಬಗ್ಗೆ ವಿಚಾರಿಸಿದಾದ ಆರೋಪಿ ಸಿದ್ದರಾಜು ಎಂಬವರು ಅಲ್ಲೇ ಬಿದ್ದಿದ್ದ ದೊಣ್ಣೆಯಿಂದ ಫಿರ್ಯಾದಿಗೆ ಹೊಡೆದು ಗಾಯಗೊಳಿಸಿದ್ದು, ಚಿಕಿತ್ಸೆಯ ಖರ್ಚನ್ನು ಕೊಡುವುದಾಗಿ ಆರೋಪಿಯು ಒಪ್ಪಿ, ಇದುವರೆಗೂ ಖರ್ಚಿನ ಹಣವನ್ನು ನೀಡದಿರುವ ಬಗ್ಗೆ ದೂರು ನೀಡಿದ್ದು, ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಅಕ್ರಮ ಪ್ರವೇಶ, ಬೇಲಿಯ ತಂತಿ ಕಳವು ಮತ್ತು ಕಾಫಿಗಿಡಗಳ ನಾಶ:
ದಿನಾಂಕ 24-10-2010 ರಂದು ನಾಪೋಕ್ಲು ಪೊಲೀಸ್‌ ಠಾಣಾ ವ್ಯಾಪ್ತಿಯ ಕುಂಜಿಲ ಗ್ರಾಮದಲ್ಲಿ ಫಿರ್ಯಾದಿ ಮೇಚಂಡ ಕಿರಣ್‌ ರವರಿಗೆ ಸೇರಿದ ಕಾಫಿ ತೋಟಕ್ಕೆ ಆರೋಪಿಗಳಾದ ಮೇಚಂಡ ಅಪ್ಪಣ್ಣ, ಮೇಚಂಡ ನಿತಿನ್‌ ಬೋಪಣ್ಣ, ಮೇಚಂಡ ಕಮಲು ಗಂಗಮ್ಮ ಮತ್ತು ಇತರೆ ೬ ಜನರು ಸೇರಿ ಅಕ್ರಮ ಪ್ರವೇಶ ಮಾಡಿ ಕಾಫಿಗಿಡಗಳ ಕೊಂಬೆಗಳನ್ನು ಕಡಿದು ಹಾಕಿ ಕಾಫಿತೋದ ಬೇಲಿಗೆ ಹಾಕಿದ ತಂತಿಯನ್ನು ಕಳವುಮಾಡಿಕೊಂಡು ಹೋಗಿರುವ ಬಗ್ಗೆ ದಿನಾಂಕ 6-12-2010 ರಂದು ನೀಡಿದ ದೂರಿನನ್ವಯ ನಾಪೋಕ್ಲು ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

Saturday, December 4, 2010

ಟ್ರಾಕ್ಟರ್‌ - ಮೋಟಾರ್ ಸೈಕಲ್‌ ಡಿಕ್ಕಿ ನಾಲ್ವರಿಗೆ ಗಾಯ:

ದಿನಾಂಕ 2-12-2010 ರಂದು ಶನಿವಾರಸಂತೆ ನಗರದ ಮದ್ಯಪೇಟೆಯ ಶ್ರೀಕೃಷ್ಣಭವನ ಹೊಟೇಲ್‌ ಮುಂಭಾಗದಲ್ಲಿ ಫಿರ್ಯಾದಿ ಸೈಯದ್‌ ಅಬೂಬ್‌ ರವರ ಅಕ್ಕನ ಮಗಳಾದ ರೇಷ್ಮಾ ಹಾಗೂ ಆಕೆಯ ಗೆಳತಿ ಸರಿತಾರವರು ನಡೆದುಕೊಂಡು ಹೋಗುತ್ತಿರುವಾಗ ಕೆಎ-13-ಟಿಎ-5170ರ ಟ್ರಾಕ್ಟರ್‌ ಚಾಲಕ ಹಾಗೂ ಅದರ ಎದುಗಡೆಯಿಂದ ರಾಜುರವರು ತಮ್ಮ ಮೋಟಾರ್‌ ಸೈಕಲ್‌‌ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ ಒಂದಕ್ಕೊಂದು ಡಿಕ್ಕಿಯಾಗಿ ಮೋಟಾರು ಸೈಕಲ್‌ ಓಡಿಸುತ್ತಿದ್ದ ರಾಜು ಮತ್ತು ಹಿಂಬದಿ ಸವಾರ ದಾರಿಯಲ್ಲಿ ನಡೆದುಕೊಂಡುಹೋಗುತ್ತಿದ್ದ ರೇಷ್ಮಾ ಮತ್ತು ಸರಿತಾರವರ ಮೇಲೆ ಬಿದ್ದುದರ ಪರಿಣಾಮ ಅವರಿಬ್ಬರೂ ಸೇರಿ ಬೈಕ್‌ ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೂ ಗಾಯಗಳಾಗಿದ್ದು, ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಗುಂಡುಹೊಡೆದು ವ್ಯಕ್ತಿಯ ಕೊಲೆ:

ದಿನಾಂಕ 3-12-2010 ರಂದು ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಹೊದೂರು ಗ್ರಾಮದಲ್ಲಿ ಫಿರ್ಯಾದಿ ವಾಣಿ ಗಂಡ ಪೌಪಿ ಬೆಳ್ಯಪ್ಪ ರವರ ಮಗ ಷಚಿನ್‌ ಎಂಬವನನ್ನು ಆರೋಪಿ ತೀತಮಾಡ ಸುಗುಣ ಎಂಬವನು ಕೋವಿಯಿಂದ ಗುಂಡು ಹೊಡೆದು ಕೊಲೆ ಮಾಡಿರುವಬಗ್ಗೆ ನೀಡಿದ ದೂರಿನ ಮೇರೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

Friday, December 3, 2010

ಹುಡುಗಿ ಕಾಣೆ ಪ್ರಕರಣ: ದಿನಾಂಕ 01-12-2010 ರಂದು ಮಡಿಕೇರಿ ಗ್ರಾಮಾಂತರ ಠಾಣೆಯ ವ್ಯಾಪ್ತಿಯ ಮದೆನಾಡು ಗ್ರಾಮದ ನಿವಾಸಿ ಯಾದ ಕುಮಾರಿ: ವೀನಾಕುಮಾರಿ ಯು ಎಂದಿನಂತೆ ಕಾಲೇಜಿ ಹೋಗಿ ಬರುತ್ತೇನೆಂದು ಹೇಳಿ ಸಾಯಂಕಾಲವಾದರೂ ಮನೆಗೆ ಬರದೇ ಇದ್ದು , ಅಕ್ಕಪಕ್ಕದ ಮನೆ,ನೆಂಟರಿಷ್ಟ ಮನೆಯಕಡೆ ಹುಡುಕಾಡಿದರೂ ಸಿಕ್ಕದೇ ಕಾರಣ ಸದರಿ ಯವರ ತಾಯಿ ಕೆ.ಬಿ. ಜಯ, ಮದೆನಾಡು ಗ್ರಾಮದವರು ಕೊಟ್ಟ ಪುಕಾರಿನ ಮೇಲೆ ಮಡಿಕೇರಿ ಗ್ರಾಮಾಂತರ ಠಾಣೆರವರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

2) ಹುಡುಗ ಕಾಣೆ: ಮಡಿಕೇರಿ ಗ್ರಾಮಾಂತರ ಠಾಣೆಯ ವ್ಯಾಪ್ತಿಯ ಕುಗೋಡು ಗ್ರಾಮ ನಿವಾಸಿಯಾದ ಬಿ.ಎಸ್‌ ಮುತ್ತಪ್ಪ ರೈ ರವರ ಮಗನಾದ ವಿವೇಕನ್ನು ಶಾಲೆಗೆ ರಜೆಯಾದ ಕಾರಣ ಮುರ್ನಾಡಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದವನ್ನು ಇದುವರೆಗೂ ಬಾರದೇ ಇದ್ದು ಮಗನ್ನು ಎಲ್ಲಾ ಕಡೆ ಹುಡಕಾಡಿದರೂ ಪತ್ತೆಯಾಗದೇ ಇದ್ದ ಕಾರಣ ಪಿರ್ಯಾದಿಯವರು ಮಗನನ್ನು ಪತ್ತೆ ಹಚ್ಚಿ ಕೊಡಬೇಕೆಂದು ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ಮಡಿಕೇರಿ ಗ್ರಾಮಾಂತರ ಠಾಣೆ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕುದಿಯುವ ನೀರನ್ನುಸುರಿದು ಪತ್ನಿಯ ಮೇಲೆ ಮರಣಾಂತಿಕ ಹಲ್ಲೆ: ದಿ; 25-11- 10 ರಂದು ನಾಪೋಕ್ಲು ಠಾಣೆಯ ಕಿಕ್ಕರೆ ಕೊಕೇರಿ ಗ್ರಾಮ ನಿವಾಸಿಯಾದ ಶ್ರೀಮತಿ ಕೆ.ಆರ್‌.ಸಾರಾ ರ ಗಂಡ ಆರೋಪಿ ರಫೀಕ್‌ ನ್ನು ಪೋನ್‌ ಮಾಡುವಾಗ ಪೋನ್‌ ತೆಗೆಯಲಿಲ್ಲ ಎಂಬ ವಿಚಾರಕ್ಕೆ ಜಗಳ ತೆಗೆದು ಒಲೆಯ ಮೇಲೆ ಕುದಿಯುತ್ತಿದ್ದ ಬಿಸಿ ನೀರನ್ನು ತೆಗೆದು ಪಿರ್ಯಾದಿ ಆರೋಪಿ ಯ ಹೆಂಡತಿ ಸಾರಳ ಎದೆಯ ಭಾಗಕ್ಕೆ ಸುರಿದು , ಕೋಣೆಯಲ್ಲಿ ಕೂಡಿ ಹಾಕಿ , ಕೊಲೆಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಪಿರ್ಯಾದಿಯವರು ಕೊಟ್ಟ ಪುಕಾರಿನ್ವಯ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

Wednesday, December 1, 2010

ಕುಲ್ಲಕ್ಷ ಕಾರಣಕ್ಕಾಗಿ ವ್ಯಕ್ತಿಯ ಮೇಲೆ ಹಲ್ಲೆ:

ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಹೊಸ್ಕೇರಿ ಗ್ರಾಮದ ನಿವಾಸಿಯಾದಕಟ್ಟೆಮನೆ ರಾಮಚಂದ್ರ ಇವರು ದಿ : 30-11-2010 ರಂದು ತಮ್ಮ ಕಾಫಿತೋಟದಲ್ಲಿ ಕಾಫಿ ಕುಯ್ಯುತ್ತಿರುವಾಗ ಆರೋಪಿಗಳಾದ ಸಿದ್ಥಾರ್ಥ, ಪತ್ನಿ ಲಲಿತ, ಮಗನಾದ ರಾಕೇಶ್‌, ರವರು ಏಕಾಎಕಿ ಕಾಫಿ ತೋಟಕ್ಕೆ ನುಗ್ಗಿ ಬಾಯಿಗೆ ಬಂದಂತೆ ಪಿರ್ಯಾದಿಯವರಿಗೆ ಬೈದು ಕೈಯಲ್ಲಿದ್ದ ಕಾಡು ಮರದ ದೊಣ್ಣೆ ಯಿಂದ ಪಿರ್ಯಾದಿಯವರ ಎದೆಗೆ ಹಾಗೂ ಬಲ ಕೈ ಹೊಡೆದ ಪರಿಣಾಮ ನೋವುಂಟಾಗಿ, ಮಡಿಕೇರಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದು , ಪಿರ್ಯಾದಿಯವರು ಕೊಟ್ಟ ಪುಕಾರಿನ್ವಯ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ