Monday, January 31, 2011

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ, ಪ್ರಕರಣ ದಾಖಲು:
ದಿನಾಂಕ 31-1-2011 ರಂದು ವಿರಾಜಪೇಟೆ ನಗರ ಠಾಣಾ ಸರಹದ್ದಿಗೆ ಸೇರಿದ ಗೌರಿಕೆರೆಯಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯ ಮೃತದೇಹ ದೊರೆತ ಬಗ್ಗೆ ವರದಿಯಾಗಿದ್ದು, ಫಿರ್ಯಾದಿ ಕೃಷ್ಣಪ್ರಸಾದ್‌, ಆರೋಗ್ಯ ನಿರೀಕ್ಷಕರು, ವಿರಾಜಪೇಟೆ ಪಟ್ಟಣ ಪಂಚಾಯ್ತಿರವರಿಗೆ ಅವರ ಕಛೇರಿಯ ನೌಕರರು ನೀಡಿದ ಮಾಹಿತಿಯ ಮೇರೆ ಅವರು ಸ್ಥಳಕ್ಕೆ ತೆರಳಿ ನೋಡಿದಾಗ ಒಬ್ಬ ಅಪರಿಚಿತ ವ್ಯಕ್ತಿಯ ಮೃತದೇಹವು ಗೌರಿ ಕೆರೆಯಲ್ಲಿ ತೇಲುತ್ತಿರುವುದನ್ನು ಕಂಡು ಠಾಣೆಗೆ ದೂರು ನೀಡಿದ್ದು ಅದರಂತೆ ವಿರಾಜಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.
ವ್ಯಕ್ತಿಯ ಮೇಲೆ ಹಲ್ಲೆ ಮತ್ತು ಕೊಲೆ ಬೆದರಿಕೆ:
ದಿನಾಂಕ 30-1-2011 ರಂದು ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಬಿರುನಾಣೆ ಗ್ರಾಮದಲ್ಲಿ ಫಿರ್ಯಾದಿ ಎಂ.ಜಿ. ಪ್ರಜೀತ್‌ ರವರು ಮಿಲಿಟರಿ ಸೇವೆಯಿಂದ ರಜೆಯಲ್ಲಿ ಬಂದವರು ತನ್ನ ಹೆಂಡತಿ ತನ್ನ ತವರು ಮನೆಯಲ್ಲಿದ್ದ ಕಾರಣ ಅಲ್ಲಿಗೆ ತನ್ನ ಅಣ್ಣ ಹಾಗೂ ಅತ್ತಿಗೆ ಯೊಂದಿಗೆ ಹೋಗಿದ್ದು ಅಲ್ಲಿ ಅವರಿಗೂ ಅವರ ಹೆಂಡತಿ ಕಡೆಯವರಿಗೂ ಜಗಳವಾಗಿ ಫಿರ್ಯಾಯ ಮತ್ತು ಅವರ ಅಣ್ಣ-ಅತ್ತಿಗೆಯವರ ಮೇಲೆ ಆರೋಪಿಗಳಾದ ಕುಪ್ಪಣಮಾಡ ಬೋಪಣ್ಣ, ಕುಪ್ಪಣಮಾಡ ಬೆಳ್ಯಪ್ಪ, ಶ್ರೀಮತಿ ಮೀನ ಮತ್ತು ಶ್ರೀಮತಿ ಪಧ್ಮಾಮತಿ ಸೇರಿ ಹಲ್ಲೆ ನಡೆಸಿ ಕೆಲೆ ಮಾಡುವುದಾಗಿ ಬೆದರಿದ್ದು, ಈ ಸಂಬಂಧ ಶ್ರೀಮಂಗಲ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಮೇಲೆ ಹಲ್ಲೆ.
ದಿನಾಂಕ 30-1-2011 ರಂದು ಸಿದ್ದಾಪುರ ಠಾಣಾ ವ್ಯಾಪ್ತಿಯ ವಾಲ್ನೂರು ಗ್ರಾಮದ ಬಾಳೆಗುಂಡಿ ಎಂಬಲ್ಲಿ ಫಿರ್ಯಾದಿ ಜೇನುಕುರುಬರ ನೀಲ ಎಂಬವರು ತಮ್ಮ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿರುವ ಸಮಯದಲ್ಲಿ ಆರೋಪಿಗಳಾದ ಜೇನುಕುರುಬರ ಜಾನಕಿ ಹಾಗೂ ಎಮ್ಮೆ ರಾಮ ಎಂಬವರು ಅಲ್ಲಿಗೆ ಬಂದು ವಿನಾ ಕಾರಣ ಜಗಳ ಮಾಡಿ ಕತ್ತಿಯಿಂದ ಕಡಿದು ಗಾಯಪಡಿಸಿದ್ದು, ಫಿರ್ಯಾದಿಯವರು ಚಿಕಿತ್ಸೆಗೆ ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಸಂಬಂಧ ಸದರಿಯವರ ಹೇಳಿಕೆಯಂತೆ, ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.
ಹಳೇ ದ್ವೇಷ, ವ್ಯಕ್ತಿಯ ಮೇಲೆ ಹಲ್ಲೆ.
ದಿನಾಂಕ 26-1-2011 ರಂದು ಪೊನ್ನಂಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ದೇವರಪುರ ಗ್ರಾಮದಲ್ಲಿ ಫಿರ್ಯಾದಿ ಜೇನುಕುರುವಗ ವಿಜಯ ಎಂಬಾತನು ಕೆಲಸ ಮುಗಿಸಿಕೊಂಡು ತನ್ನ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ, ಆರೋಪಿ ಒಂಜರಿ ಎರವರ ಮಂಜು ಇಂಬಾತನು ಅಲ್ಲಿಗೆ ಬಂದು ಹಳೇ ದ್ವೇಷದಿಂದ ದೊಣ್ಣೆಯಿಂದ ಹಲ್ಲೆ ಮಾಡಿ ನೋವನ್ನುಂಟು ಮಾಡಿದ್ದು, ಈ ಸಂಬಂಧ ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿ ತನಿಖೆ ಕೈಗೊಂಡಿರುತ್ತಾರೆ.

Saturday, January 29, 2011

ಪಾದಾಚಾರಿಗೆ ಜೀಪು ಡಿಕ್ಕಿ, ಪ್ರಕರಣ ದಾಖಲು:

ದಿನಾಂಕ 28-1-2011 ರಂದು ಕುಶಾಲನಗರ ಠಾಣಾ ವ್ಯಾಪ್ತಿಯ ಬಸವನಳ್ಳಿ ಗ್ರಾಮದ ಆನೆಕಾಡು ಬಳಿ ಫಿರ್ಯಾದಿ ರಾಜ ಎಂಬವರು ಬಸ್ಸಿನಿಂದ ಇಳಿದು ತಮ್ಮ ಮನೆಯ ಕಡೆಗೆ ಹೋಗಲೆಂದು ರಸ್ತೆಯನ್ನು ದಾಟುವ ಸಮಯದಲ್ಲಿ ಮಡಿಕೇರಿ ಕಡೆಯಿಂದ ಜೀಪನ್ನು ಓಡಿಸಿಕೊಂಡು ಬಂದ ಅದರ ಚಾಲಕ ಅತೀ ವೇಗ ಮತ್ತು ಅಜಾಗರೂತೆಯಿಂದ ಓಡಿಸಿ ಫಿರ್ಯಾದಿಯವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಫಿರ್ಯಾದಿಗೆ ರಕ್ತ ಗಾಯವಾಗಿದ್ದು, ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ವ್ಯಕ್ತಿಯನ್ನು ನಂಬಿಸಿ ವಂಚನೆ:

ವ್ಯಕ್ತಿಯೊಬ್ಬರಿಗೆ ಹೊರದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ ಪ್ರಕರಣ ಮಡಿಕೇರಿ ನಗರ ಠಾಣೆಯಲ್ಲಿ ವರದಿಯಾಗಿದೆ. ದಿನಾಂಕ 3-8-2010ರ ಹಿಂದಿನ ದಿನಗಳಲ್ಲಿ ಫಿರ್ಯಾದಿ ಅನ್ವರ್‌, ಗಣಪತಿ ಬೀದಿ, ಮಡಿಕೇರಿ ಇವರಿಗೆ ಆರೋಪಿ ಲತೀಪ್‌ ಎಂಬಾತನು ಹೊರದೇಶವಾದ ಮಲೇಷಿಯಾ, ಅರೇಬಿಯಾ ದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿ ರೂ. 1,25,000 ಗಳನ್ನು ಪಡೆದುಕೊಂಡು ನಂತರ ಕೆಲಸವನ್ನು ಕೊಡಿಸದೇ ಹಾಗೂ ಹಣವನ್ನು ನೀಡದೆ ವಂಚಿಸಿರುವುದಾಗಿ ದೂರು ನೀಡಿದ ಮೇರೆ ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

Friday, January 28, 2011

ಕಾಫಿ ತೋಟಕ್ಕೆ ಆಕ್ರಮ ಪ್ರವೇಶ ಮತ್ತು ವ್ಯಕ್ತಿ ಮೇಲೆ ಹಲ್ಲೆ

ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಹೊದ್ದೂರು ಗ್ರಾಮದ ಪಿರ್ಯಾದಿದವರಾದ ಶ್ರೀ ಕ್ಯಾಪ್ಟನ್‌ ಎನ್‌.ಎಂ. ಸುಭಾಶ್‌ ಇವರು ಹಾಲಿ ಬೆಂಗಳೂರಿನಲ್ಲಿ ವಾಸವಾಗಿದ್ದು ಇವರಿಗೆ ಸದರಿ ಗ್ರಾಮದಲ್ಲಿ ಆಸ್ತಿ ಇದ್ದುಆದರಲ್ಲಿ ಕಾಫಿ ವ್ಯವಸಾಯ ಮಾಡಿಕೊಂಡು ತಾನೆ ಅದರ ಉಸ್ತುವಾರಿ ನೋಡಿಕೊಂಡಿರುವಾಗ ಆರೋಪಿ ಗಳಾದ ಚಿಣ್ಣಪ್ಪ & ಇತ್ತರರು 6 ಜನರು ಕಾಫಿ ತೋಟಕ್ಕೆ ಆಕ್ರಮ ಪ್ರವೇಶ ಮಾಡಿ ಕಾಫಿ ಕುಯ್ಯುದುಕಳವು ಮಾಡಿದ್ದು , ನಷ್ಟಪಡಿಸಿರುವುದಾಗಿಯೂ , ಕೊಲೆ ಬೆದರಿಕೆ ಹಾಕಿರುವುದಾಗಿ ನ್ಯಾಯಾಲಯದಿಂದ ಬಂದ ಖಾಸಾಗಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

Thursday, January 27, 2011

ಕಾಫಿ ತೋಟದ ಉಪಕರಣಗಳ ಕಳವು: ದಿ: 25-1-11 ರಂಧು ಶ್ರೀಮಂಗಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪಿರ್ಯಾದಿ ಶ್ರೀ ಕಿರಣ್‌ ಕುಮಾರ್‌ ಟಾಟಾ ಕಾಫಿತೋಟ ಇವರ ತೋಟದಿಂದ ನೀರಾವಾರಿಗೆ ಆಳವಡಿಸಿದ ಉಪಕರಣಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಶ್ರೀಮಂಗಳ ಪೊಲೀಸ್‌ ಠಾಣೆ ಪ್ರಕರಣ ವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.
ವಿನಾ ಕಾರಣ ಕ್ಕಾಗಿ ವ್ಯಕ್ತಿಯ ಮೇಲೆ ಹಲ್ಲೆ
ದಿ: 26-1-11 ರಂದು ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಇಗ್ಗೋಡ್ಲು ಗ್ರಾಮದಲ್ಲಿ ಪಿರ್ಯಾದಿ ಸುಬ್ಬಯ್ಯ ರವರು ಅವರ ಭತ್ತದ ಕಣದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಮಯದಲ್ಲಿ ಆರೋಪಿ ಶಂಬುವೆಂಬವರು ಸದ್ರಿ ಸ್ಥಳಕ್ಕೆ ಬಂದು ಜಗಳ ತೆಗೆದು ಕೈಯಿಂದ ಚಾಕುವಿನಿಂದ ತಿವಿದು ಗಾಯಗೊಳಿಸಿ ,ಜೀವ ಬೆದರಿಕೆ ಹಾಕಿರುವುದಾಗಿದ ಕೊಟ್ಟ ಪುಕಾರಿನ್ವಯ ಸೋಮವಾರಪೇಟೆ ಠಾಣೆ ಪ್ರಕರಣವನ್ನು ದಾಖಲಿಸಿಕೊಂಡು ಪ್ರಕರಣವನ್ನು ಕೈಗೊಂಡಿರುವುದಾಗಿದೆ.
ಅಪಘಾತ ಪ್ರಕರಣ: ದಿ: 26-1-11 ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ತಾಳತ್ತ ಮನೆ ಬಳಿ ಪಿರ್ಯಾದಿ ಬಲ್ಲಮಾವುಟಿ ಗ್ರಾಮದ ರಾಮಯ್ಯ ಎಂಬವರು ತಮ್ಮ ಕಾರು ಸಂ: ಕೆಎ 03 ಎನ್‌ಸಿ 6200 ರಲ್ಲಿ ಮನೆ ಗೆ ಹೋಗುತ್ತಿರುವಾಗ ಕಾರಿನ ಚಾಲಕ ಮಹೇಶಕುಮಾರ್‌ ಎಂಬವರು ಕಾರನ್ನು ಅತೀ ವೇಗ ಆಜಾಗುಕತೆಯಿಂದ ಚಾಲಿಸಿದ ಪರಿಣಾಮ ಕಾರು ರಸ್ತೆ ಬದಿ ಮಗಚ್ಚಿ ಬಿದ್ದು ಗಾಯ ಗಳಾದ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಯನ್ನು ಕೈಗೊಂಡಿರುವುದಾಗಿದೆ.

Tuesday, January 25, 2011

ವ್ಯಕ್ತಿಯ ಆತ್ಮಹತ್ಯೆ ಪ್ರಕರಣ: ಭಾಗಮಂಡಲ ಠಾಣಾ ಸರಹದ್ದಿನ ಕರಿಕೆ ಗ್ರಾಮದ ಜೋಸೇಫ್‌ ನಿಗೆ ಸಾರಾಯಿ ಕುಡಿಯುವ ಆಭ್ಯಾಸವಿದ್ದು ಹೊಟ್ಟೆನೋವು ಹಾಗೂ ಕಿಡ್ನಿ ವೈಪಲ್ಯದಿಂದ ಬಳಲುತಿದ್ದು ಈ ಬಗ್ಗೆ ಚಿಕಿತ್ಸೆ ಪಡೆದರು ಗುಣಮುಖವಾಗದೆ ಇರುವ ಕಾರಣ ಮನನೊಂದು ಯಾರು ಇಲ್ಲದ ಸಮಯದಲ್ಲಿ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಕೊಟ್ಟ ಪುಕಾರಿನ್ವಯ ಬಾಗಮಂಡಲ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.

ರಸ್ತೆ ಅಪಘಾತದಿಂದ ವ್ಯಕ್ತಿಯ ರ್ದುಮರಣ: ದಿ: 23-1-2010 ರಂದುಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಫ್ತಿಯ ಕುಂಬಳ ಚೇರಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಶರತ್‌ ಎಂಬುವರು ಮಾರುತಿ ಓಮಿನಿ ವ್ಯಾನನ್ನು ಅತಿವೇಗ ಮತ್ತುಆಜಾಗರೂತೆಯಿಂದ ಚಾಲಿಸಿಕೊಂಡ ಪರಿಣಾಮ ಪೊನ್ನಪ್ಪ ರವರಿಗೆ ತಲೆಗೆ ತೀವ್ರ ಪೆಟ್ಟಾಗಿ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆ ಚಿಕಿತ್ಸೆ ಪಡೆದರೂ ಚಿಕಿತ್ಸೆ ಪಲಕಾರಿಯಾಗದೇ ಈ ದಿನ ಮೃತ್ತಪಟ್ಟಿರುವುದಾಗಿ ಕೊಟ್ಟ ಪುಕಾರಿನ್ವಯ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

Monday, January 24, 2011

ಶನಿವಾವರ ಸಂತೆ ಠಾಣಾ ವ್ಯಾಪ್ತಿಯ ನಾಗುವಾರ ಗ್ರಾಮದಲ್ಲಿ 44.98 ಜಾಗವನ್ನು ಸಾರ್ವಜನಿಕ ಜಾನುವಾರುಗಳ ಮೇವಿಗಾಗಿ ಕಾಯ್ದಿರಿಸಿದ್ದು ಸದರಿ ಜಾಗವನ್ನು ಆರೋಪಿಗಳಾದ ಚಂದ್ರಶೇಖರ್‌, ಕಾಂತರಾಜು, ಶಾಂತಮಲ್ಲಪ್ಪ ಚಂದ್ರಕಲಾ, ಪುಟ್ಟಸ್ವಾಮಿ ಲೀಲಾವತಿ ಅತಿಕ್ರಮ ಪ್ರವೇಶ ಮಾಡಿ ಬೇಲಿ ಹಾಕಿಕೊಂಡು ಜಾನುವಾರುಗಳ ಮೇವಿಗೆ ಅಡ್ಡಿ ಪಡಿಸಿದ್ದರಿಂದ ಪಿರ್ಯಾದಿವರಾದ ಎನ್‌.ಎನ್‌ ವಸಂತ ಮತ್ತು ಗ್ರಾಮಸ್ಥರು ಮಾನ್ಯ ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದು ಈ ಸಂಬಂಧ ಪಿರ್ಯಾದಿಯವರಿಗೆ ಆರೋಪಿಗಳು ಪಿರ್ಯಾದಿಯವರ ಮನೆಯ ಬಳಿಗೆ ಬಂದು ಹೀನಮಾನವಾಗಿ ಬೈದು ಕೊಲೆ ಬೆದರಿಕೆ ಹಾಕಿರುವುದರಿಂದ ಮಾನ್ಯ ಎಸ್‌.ಪಿ ಸಾಹೇಬರ ಕಛೇರಿ ಕೊಟ್ಟ ಪುಕಾರಿನ್ವಯ ಪ್ರಕರವನ್ನು ಶನಿವಾರ ಸಂತೆ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

ದಿ: 21-1-11 ರಂದು ಶನಿವಾರ ಸಂತೆ ಪೊಲೀಸ್‌ ಠಾಣಾ ವ್ಯಾಪ್ತಿಯ ಬಡುಬನಹಳ್ಳಿ ಗ್ರಾಮದ ಪಿರ್ಯಾದಿ ಮದುಸೂದನ್‌ ರವರ ಅಣ್ಣ ಶಶಿ ಎಂಬುವವನಿಗೆ ಜಗಳದಲ್ಲಿ ತಲೆಗೆ ಚಿಕ್ಕಪುಟ್ಟ ಗಾಯವಾಗಿದ್ದು ದಿ: 23-1-11 ರಂದು ಶನಿವಾರಸಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಆಸ್ಪತ್ರೆಯಿಂದ ಪೊಲೀಸ್‌ ಠಾಣೆಗೆ ಬಂದಿದ್ದು ಠಾಣೆಯಿಂದ ಪುನ: ಆಸ್ಪತ್ರೆಗೆ ಹೋದಾಗ ಸಮಯ ಸುಮಾರು 16:45 ಗಂಟೆಗೆ ಶಶಿಯು ಮೃತಪಟ್ಟಿರುತ್ತಾನೆ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ಶನಿವಾರಸಂತೆ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆಯನ್ನುಕೈಗೊಂಡಿರುತ್ತಾರೆ.

ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಎಂ ಚೆಂಬು ಗ್ರಾಮದ ಪಿರ್ಯಾದಿಯವರಾದ ಶ್ರೀಮತಿ ವೇದಾವತಿ ತಂದೆಯ ತಿಧಿ ಗೆ ಆಗಿರುವಂತಹ ಖರ್ಚುವೆಚ್ಚಗಳ ತೀರ್ಮಾನ ಮಾಡಲು ಕೊರಗಪ್ಪ ನಾಯ್ಕ ಎಂಬುವರು ಪಿರ್ಯಾದಿರವರು ಬರುವಂತೆ ಹೇಳಿದ್ದು ತಿಮ್ಮಕ್ಕನವರ ಮನೆಯಲ್ಲಿ8 ತಿಥಿಯ ವೆಚ್ಚದ ಬಗ್ಗೆ ಮಾತುಕತೆ ನಡೆಯುತ್ತಿರುವಾಗ್ಗೆ ಆರೋಪಿಗಳಾದ ಶ್ರೀಮತಿ ಭಾಗೀರಥಿ, 2) ಪುಟ್ಟಣ್ಣ ರವರು ಜಗಳ ತೆಗೆದು ಅಡಿಕೆ ಮರದ ದೊಣ್ಣೆಯಿಂದ ತಲೆಗೆ, ಬಲಕೈಗೆ ಸೊಂಟಕ್ಕೆ ಹೊಡೆದು ಗಾಯ ಪಡಿಸಿರುವುದಾಗಿ ಕೊಟ್ಟ ಪುಕಾರಿನ್ವಯ ಮಡಿಕೇರಿಗ್ರಾಮಾಂತರ ಠಾಣೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನುಕೈಗೊಂಡಿರುತ್ತಾರೆ.

Friday, January 21, 2011

ದೂರವಾಣಿ ಕರೆಮೂಲಕ ಕೊಲೆ ಬೆಧರಿಕೆ, ಪ್ರಕರಣ ದಾಖಲು:

ದಿನಾಂಕ 19-1-2011 ರಂದು ಶ್ರೀಮಂಗಲ ಪೊಲೀಸ್ ಠಾಣಾ ಸರಹದ್ದಿನ ಬಲ್ಯಮಂಡೂರು ಗ್ರಾಮದಲ್ಲಿ ಫಿರ್ಯಾದಿ ದೇಯಂಡ ತಿಮ್ಮಯ್ಯ ಎಂಬುವರಿಗೆ ಆರೋಪಿ ದೇಯಂಡ ತಮ್ಮಯ್ಯ ಎಂಬವರು ಕೆರೆಯ ನೀರಿನ ವಿಚಾರದಲ್ಲಿ ದೂರವಾಣಿ ಕರೆ ಮಾಡಿ ಕೋವಿಯಿಂದ ಗುಂಡು ಹೊಡೆದು ಕೊಲೆಮಾಡುವುದಾಗಿ ಬೆದರಿಕೆ ಹಾಕಿದ್ದು ಅಲ್ಲದೆ ಫಿರ್ಯಾದಿಯವರ ತೋಟಕ್ಕೆ ಹೋಗುವ ಸಾರ್ವಜನಿಕ ರಸ್ತೆಗೆ ಅಡ್ಡವಾಗಿ ಬೇಲಿ ಹಾಕಿ ಕಿರುಕುಳ ನೀಡುತ್ತಿರುವುದಾಗಿ ನೀಡಿದ ದೂರಿನ ಮೇರೆ ಶ್ರೀಮಂಗಲ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ವ್ಯಕ್ತಿಯ ನಿಂದನೆ ಹಾಗೂ ಆಸ್ತಿ ನಷ್ಟ, ಪ್ರಕರಣ ದಾಖಲು:

ದಿನಾಂಕ 20-1-2011 ರಂದು ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಗುಡುಗಳಲೆ ಗ್ರಾಮದಲ್ಲಿ ಫಿರ್ಯಾದಿ ಶ್ರೀಮತಿ ಭಾಗ್ಯ ರವರು ತನ್ನ ಮಗನ ಹಣ್ಣಿನ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿರುವ ಸಮಯದಲ್ಲಿ ಆರೋಪಿಗಳಾದ ಬಾಗ್ದಾಳು ಗ್ರಾಮದ ಸಾಸಿಗಳಾದ ಸುಧಾಕರ ಮತ್ತು ಪ್ರಶಾಂತ್‌ ಎಂಬವರು ಅಲ್ಲಿಗೆ ಆಗಮಿಸಿ ಫಿರ್ಯಾದಿಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅಂಗಡಿಯಲ್ಲಿಟ್ಟಿದ್ದ ವಸ್ತುಗಳನ್ನು ಹೊಡೆದು ಹಾಕಿ ನಷ್ಟಪಡಿಸಿರುವ ಬಗ್ಗೆ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

ವ್ಯಕ್ತಿಯ ದಾರಿ ತಡೆದು ಹಲ್ಲೆ.

ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ಭಗವತಿ ನಗರದ ನೀರಿನ ಟ್ಯಾಂಕಿನ ಬಳಿ ಈ ದಿನ ಫಿರ್ಯಾದಿ ಎಂ ಚಂದ್ರರವರು ನೀರಿಗಾಗಿ ಹೋದ ಸಂದರ್ಭದಲ್ಲಿ ಆರೋಪಿಗಳಾದ ಶೇಖ್‌ ಅಬ್ದುಲ್‌ ರೆಹಮಾನ್‌ ಮತ್ತು ಅಸ್ಮ ಎಂಬವರು ನೀರಿನ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ, ಕಾಲಿನಿಂದ ಒದ್ದು ನೋವನ್ನುಂಟುಮಾಡಿ, ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

Thursday, January 20, 2011

ಮಡಿಕೇರಿ ಗ್ರಾಮಾಂತರ ವ್ಯಾಪ್ತಿಯ ಅಭಿಪಾಲ್ಸ್‌ ಬಳಿ ದಿ: 19-1-2011 ರಂದು ಪಿರ್ಯಾದಿದವರಾದ ಟಿ.ಟಿ. ಸತೀಶ್‌ ಶುಂಕ ವಸೂಲಿ ಕೆಲಸ ಮಡಿಕೇರಿ ನಗರ ದವರು ಶುಂಕವನ್ನು ವಸೂಲಿ ಮಾಡುತ್ತಿರುವಾಗ್ಗೆ ಆರೋಪಿಯಾದ ಕೆ.ಕೆ. ಅಯ್ಯಪ್ಪ , ಗ್ರಾಮಾ ಪಂಚಾಯ್ತಿ ಅಧ್ಯಕ್ಷರು ಪಿರ್ಯಾದಿಯವರ ಕೈಯಲ್ಲಿ ಇದ್ದು ವಾಹನ ನಿಲುಗಡೆ ರಶೀದಿ ಪುಸ್ತಕ ಮತ್ತು ವಸೂಲಿ ಹಣವನ್ನು ಸುಮಾರು 5000/-ನ್ನು ಕಿತ್ತುಕೊಂಡು ಸದರಿ ಸ್ಥಳದಲ್ಲಿ ವಾಹನ ವಸೂಲಿ ಮಾಡಬಾರದು ಮಾಡಿದರೆ ಕೊಲೆ ಮಾಡುವುದಾಗಿ ಕೊಟ್ಟ ಪುಕಾರಿನ್ವಯ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

ದಿ: 19-1-2011 ರಂದು ಕುಶಾಲನಗರ ಠಾಣಾ ವ್ಯಾಪ್ತಿಯ ಕಬ್ಬಿನಗದ್ದೆ ರಂಗಸಮುದ್ರ ಪಿರ್ಯಾದಿಯವರಾದ ಬಿ.ಎಲ್‌ ಮುತ್ತಮ್ಜ ಕುಟುಂಬವರೊಂದಿಗೆ ಮನೆಯಲ್ಲಿ ರುವಾಗ್ಗೆ ಮಾವನಾದ ಸಿದ್ದ (ಆರೋಪಿ)ಯು ತಂದೆ ತಿಥಿಯ ಹಣದ ವಿಚಾರದಲ್ಲಿ ಜಗಳ ತೆಗೆದು ಪಿರ್ಯಾದಿಯವರಾದ ಮುತ್ತಮ್ಮನವರಿಗೆ ಸೌದೆ ದೊಣ್ಣೆಯಿಂದ ಹೊಡೆದು ರಕ್ತ ಗಾಯ ಮಾಡಿರುವುದಾಗಿ ಕೊಟ್ಟ ಪುಕಾರಿನ್ವಯ ಕುಶಾಲನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

Wednesday, January 19, 2011

ಆಕ್ರಮ ಪ್ರವೇಶ ವ್ಯಕ್ತಿಯ ಮೇಲೆ ಹಲ್ಲೆ:

ದಿ: 19-1-201 ರಂದು ಪಿರ್ಯಾದಿದವರಾದ ಅಳಮೇಗಡ ಬೋಸ್‌ ನಿಟ್ಟೂರು ಗ್ರಾಮ,ಪೊನ್ನಂಪೇಟೆ ರವರ ತನ್ನ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಆರೋಪಿಗಳಾದ ಬಿ.ಎನ್‌ ಕೇಶವಮೂರ್ತಿ ರವರು ಆಕ್ರಮ ಪ್ರವೇಶ ಮಾಡಿ ತೋಟದಲ್ಲಿ ಬಿದ್ದಿದ ಮುಳ್ಳು ತಂತಿಯನ್ನು ತೆಗೆದು ತನ್ನ ಎಡದ ಮತ್ತು ಬಲದ ಕಾಲಿಗೆ ಹೊಡೆದು ಗಾಯ ಪಡಿಸಿದ್ದು ಕತ್ತಿಯಿಂದ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿ ಕೊಟ್ಟ ಪುಕಾರಿನ್ವಯ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿರುವುದಾಗಿದೆ.

ರಸ್ತೆ ಅಪಘಾತ: ಬಾಗಮಂಡಲ ಠಾಣಾ ವ್ಯಾಪ್ತಿಯ ಭಗಂಡೇಶ್ವರ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಆರೋಪಿ ವಿಠಲ , ಬಸ್‌‌ ನಂ. ಕೆಎ 12 6299 ರ ಚಾಲಕ ಸದರಿ ವಾಹನವನ್ನು ಅತೀವೇಗ ಮತ್ತು ನಿರ್ಲಕ್ಷತೆಯಿಂದ ಓಡಿಸಿ ಅದೇ ಬಸ್‌ ನಲ್ಲಿ ಕರ್ತವ್ಯ ಮಾಡುತ್ತಿದ್ದ ಕ್ಲೀನರ್‌ ಟಿ.ಎಂ. ತಿಮ್ಮಯ್ಯ ಎಂಬತನಿಗೆ ಡಿಕ್ಕಿ ಪಡಿಸಿದ ಪರಿಣಾಮ ತ್ರೀವ ಸ್ವರೂಪ ಗಾಯ ವಾಗಿರುವುದರಿಂದ ಭಾಗಮಂಡಲ ಠಾಣೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

ಸರ್ಕಾರ ಹಣ ದುರುಪಯೋಗ ದ ಪ್ರಕರಣ ದಾಖಲು: ದಿ: 1-10-2009 ಈಚೆಗೆ ಆರೋಪಿ ಪ್ರದೀಪ್‌ ಕುಮಾರ್‌ , ಕಾರ್ಯದರ್ಶಿ ಕುಶಾಲನಗರ ಇವರು ಆಶಾ ಕಿರಣ ಕೇಂದ್ರವನ್ನು ಪ್ರಾರಂಭಿಸಿ 52 ಮಕ್ಕಳನ್ನು ದಾಖಲು ಮಾಡಿ ಈ ಬಗ್ಗೆ ಸರ್ಕಾರದಿಂದ 1 ಲಕ್ಷ ರೂಪಾಯಿ ಹಣವನ್ನು ಮುಂಗಡವಾಗಿ ಪಡೆದುಕೊಂಡು 12 ತಿಂಗಳು ನಡೆಸಬೇಕಾದವರು ಕೇವಲ 2 ತಿಂಗಳು ಮಾತ್ರ ನಡೆಸಿ ಹಣ ದುರುಪಯೋಗ ಮಾಡಿ ನಾಪತ್ತೆಯಾಗಿರುವ ಬಗ್ಗೆ ಕೊಟ್ಟ ಪುಕಾರಿನ್ವಯ ಕುಶಾಲನಗರ ಠಾಣೆ ಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

Tuesday, January 18, 2011

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ.
ದಿನಾಂಕ 17-1-2011 ರಂದು ವಿರಾಜಪೇಟೆ ನಗರ ಪೊಲೀಸ್ ಠಾಣಾ ಸರಹದ್ದಿನ ದೊಡ್ಡಟ್ಟಿ ಚೌಕಿಯ ಬಳಿ ಫಿರ್ಯಾದೊ ಆರ್‌ ಮಂಜುನಾಥ ಎಂಬವರು ನಿಂತುಕೊಂಡಿರುವಾಗ ಆರೋಪಿ ಕಳಿಯಪಂಡ ರವಿ ಎಂಬವರು ಅಲ್ಲಿಗೆ ಬಂದು ನೀನು ಲೋಡಿಂಗ್‌ ಕೆಲಸಕ್ಕೆ ಕರೆದರೂ ಬಾರದೆ ಬೇರೆಯವರಲ್ಲಿಗೆ ಹೋಗುತ್ತೀಯ ಎಂದು ಹೇಳಿ ಕೈಯಿಂದ ಮುಖಕ್ಕೆ ಮತ್ತು ಶರೀರಕ್ಕೆ ಹೊಡೆದು ನೋವನ್ನುಂಟುಮಾಡಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ವಿರಾಜಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಅಕ್ರಮ ಪ್ರವೇಶ, ಮಹಿಳೆಯ ಮಾನಭಂಗಕ್ಕೆ ಯತ್ನ ಮತ್ತು ದರೋಡೆ ಪ್ರಕರಣ.
ದಿನಾಂಕ 18-1-2011 ರಂದು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಕಣ್ಣಂಗಾಲ ಗ್ರಾಮದಲ್ಲಿ ಫಿರ್ಯಾದಿ ಶ್ರೀಮತಿ ಹೆಚ್‌.ಪಿ. ಕಮಲ ತನ್ನ ಅತ್ತೆ ಲಕ್ಷ್ಮಮ್ಮ ಹಾಗೂ ಆಳುಗಳೊಂದಿಗೆ ತಮ್ಮ ಬಾಪ್ತು ಕಾಫಿ ತೋಟದಲ್ಲಿ ಕಾಫಿ ಕುಯ್ಯುತ್ತಿದ್ದಾಗ ಆರೋಪಿಗಳಾದ ವಿ.ಸಿ. ತಮ್ಮಯ್ಯ, ವಿ.ಸಿ. ರವಿ, ಜಾನಕಿ, ಪ್ರಭಾವತಿ, ಹತೀಶ, ಬಾಲ, ಹಾಗೂ ಬೆನ್ನು ಎಂಬವರು ಫಿರ್ಯಾದಿಯವರು ಕಾಫಿ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಅವರ ಮೇಲೆ ಹಲ್ಲೆ ನಡೆಸಿದ್ದು, ಅಲ್ಲದೆ ಫಿರ್ಯಾದಿಯವರ ಸೀರೆಯನ್ನು ಹರಿದು ಹಾಕಿದ್ದು, ಕತ್ತಿಯಿಂದ ಹಲ್ಲೆ ನಡೆಸಿ, ಸುಮಾರು 10 ಚೀಲ ಕುಯ್ದಿಟ್ಟ ಕಾಫಿಯನ್ನು ಮತ್ತು ಕತ್ತಿನಲ್ಲಿದ್ದ ತಾಳಿ ಚೈನನ್ನು ಎಳೆದುಕೊಂಡು ಹೋಗಿರುವುದಾಗಿ ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.
ಕಾಡು ನೊಣ ಕಚ್ಚಿ ವ್ಯಕ್ತಿಯ ಸಾವು:
ದಿನಾಂಕ 13-1-2011 ರಂದು ಸೋಮವಾರಪೇಟೆ ಠಾಣಾ ಸರಹದ್ದಿನ ಕಿರಗಂದೂರು ಗ್ರಾಮದಲ್ಲಿ ಲೋಕೇಶ್‌ ಎಂಬವರಿಗೆ ಯಾವುದೋ ಕಾಡು ನೊಣ ಕಟ್ಟಿದ ಪರಿಣಾಮ ಸದರಿಯವರನ್ನು ಸೋಮವಾರಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ವೈದ್ಯರ ಸಲಹೆಯ ಮೇರೆ ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಯ ಸಮಯದಲ್ಲಿ ಸದರಿ ಲೋಕೇಶ್‌ ರವರು ದಿನಾಂಕ 18-1-2011ರಂದು 01-00 ಗಂಟೆಗೆ ಮೃತಪಟ್ಟಿದ್ದು, ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

Monday, January 17, 2011

ಬಸ್ಸು ಕಾರಿಗೆ ಡಿಕ್ಕಿ, ಕಾರು ಜಖಂ:
ದಿನಾಂಕ 16-1-2011 ರಂದು ಪೊನ್ನಂಪೇಟೆ ಪೊಲೀಸ್‌ ಠಾಣಾ ಸರಹದ್ದಿನ ಪೊನ್ನಂಪೇಟೆ ನಗರದ ಬಿಹೆಚ್‌ಇಎಲ್‌ ಪ್ಯಾಕ್ಟರಿಯ ಮುಂಭಾಗ ಫಿರ್ಯಾದಿ ಶ್ರೀಮತಿ ಮೋಂಗೇರ ಶಾಂತಿ, ಪೊನ್ನಂಪೇಟೆ ನಗರ ಇವರು ತನ್ನ ಅಣ್ಣನ ಬಾಪ್ತು ಕಾರು ಸಂಖ್ಯೆ ಕೆ-12-8348ರಲ್ಲಿ ಗೋಣಿಕೊಪ್ಪ ಕಡೆಯಿಂದ ಪೊನ್ನಂಪೇಟೆ ಕಡೆಗೆ ಬರುತ್ತಿರುವಾಗ ಆರೋಪಿ ರಂಜಿ ಸಿ.ಜೆ. ಕೆಎ-12-1828ರ ಬಸ್‌ ಚಾಲಕ ಸದರಿ ಬಸ್ಸನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ ಕಾರಿಗೆ ಡಿಕ್ಕಿಪಡಿಸಿ ಜಖಂಪಡಿಸಿದ್ದು, ಪೊನ್ನಂಪೇಟೆ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಗಂಡನಿಂದ ಹೆಂಡತಿ ಮೇಲೆ ಕಿರುಕುಳ:
ದಿನಾಂಕ 16-1-2011 ರಂದು ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ಎಡಪಾಲ ಗ್ರಾಮದ ಶ್ರೀಮತಿ ಸಿ.ಎ. ಜೀನತ್‌ ರವರಿಗೆ ಅವರ ಗಂಡ ಆರೋಪಿ ಅಬ್ದುಲ್‌ ರಹಿಮಾನ್‌ ರವರು ಬೇರೆ ಮದುವೆಯಾಗುತ್ತೇನೆ, ನಿನಗೆ ವಿಚ್ಛೇದನೆ ನೀಡುತ್ತೇನೆ ಎಂದು ಜಗಳ ಮಾಡುತ್ತಾ ಮಾನಸಿಕ ಹಿಂಸೆ ನೀಡುತ್ತಿದ್ದು, ಫಿರ್ಯಾದಿ ಸಿ.ಎ. ಜೀನತ್‌ ಇದರಿಂದ ಮನನೊಂದು ಮೈಮೇಲೆ ಸೀಮೆಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರಿಂದ ಸುಟ್ಟ ಗಾಯಗಳಾಗಿ ವಿರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದು, ನಾಪೋಕ್ಲು ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Sunday, January 16, 2011

ಅಕ್ರಮ ಪ್ರವೇಶ ಮತ್ತು ಜೀವ ಬೆದರಿಕೆ:

ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿ ಹೊದ್ದೂರು ಗ್ರಾಮ ನಿವಾಸಿ ಪಿರ್ಯಾದಿದಾರರಾದ ಎ.ಎ. ಚಿನ್ನಪ್ಪ ರವರ ಜಾಗದ ವಿಚಾರದಲ್ಲಿ ಆರೋಪಿ ಯಾದ ನೆರವಂಡ ಸುಭಾಷ್‌ ರವರಿಗೂ ಜಾಗದಲ್ಲಿ ತಕರಾರು ಇದ್ದು ಅರೋಪಿಯವರು ತೋಟಕ್ಕೆ ಪ್ರವೇಶ ಮಾಡದಂತೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ನೀಡಿದ್ದು ಪಿರ್ಯಾದಿಯವರು(ಎ.ಎ. ಚಿನ್ನಪ್ಪ) ತೋಟದಲ್ಲಿ ಕಾಪಿ ಕೊಯ್ಯುತಿರುವಾಗ್ಗೆ ಅರೋಪಿ ತೋಟಕ್ಕೆ ಅಕ್ರಮ ಪ್ರವೇಶಮಾಡಿ ಅವಾಚ್ಚ ಶಬ್ಬಗಳಿಂದ ಬೈದು ತೋಟದಿಂದ ಹೊರಗಡೆ ಹೋಗುವಂತೆ ಒತ್ತಾಯಿಸಿ ಇಲ್ಲದಿದ್ದರೆ ಕೊಲೆಮಾಡುವುದಾಗಿ ಕೊಟ್ಟ ಪುಕಾರಿನ್ವಯ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.

ಹಲ್ಲೆ ಮತ್ತು ಕೊಲೆ ಬೆದರಿಕೆ: ದಿ; 13-1-2011 ರಂದು ಅರೋಪಿ ಯಾದ ಎ.ಕೆ. ಕೃಷ್ಣಪ್ಪ ರವರು ಪಿರ್ಯಾದಿ ತಂದೆಯವರಾದ ಪಿಜಿನ ಮಕ್ಕಂದೂರು ಗ್ರಾಮ ರವರಿಗೆ ದೊಣ್ಣೆಯಿಂದ ಕೈಗೆ ಮತ್ತು ಕಾಲಿಗೆ ಹೊಡೆದು ಅವ್ಯಾಚ್ಚಶಬ್ಬಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುವುದಾಗಿ ಕೊಟ್ಟ ಪುಕಾರಿನ್ವಯ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.

ರಸ್ತೆ ಅಪಘಾತ: ದಿ: 15-1-11 ರಂದು ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ವಿರಾಜಪೇಟೆ ರಸ್ತೆಯ ಬಳಿ ಆರೋಪಿ ಚಂದ್ರ ಎಂಬವರು ಮಾರುತಿ ಅಲ್ಟೋ ಕಾರು ಮಡಿಕೇರಿ ನಗರದ ವಿರಾಜಪೇಟೆ ರಸ್ತೆಯಲ್ಲಿ ದುಡುಕು ಮತ್ತು ನಿರ್ಲಕ್ಷತೆಯಿಂದ ಓಡಿಸಿದ ಪರಿಣಾಮ ಪ್ರಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಚಾಲಕ ಚಂದ್ರರವರ ಪತ್ನಿ ಮತ್ತು ಮಕ್ಕಳಿಗೆ ಗಾಯಗಳಾಗಿರುವುದಾಗಿ ಕೊಟ್ಟ ಪುಕಾರಿನ್ವಯ ಮಡಿಕೇರಿ ಟ್ರಾಫಿಕ್‌ ಠಾಣೆ ಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

Friday, January 14, 2011

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ ಹಾಗೂ ನಿಂದನೆ:

ದಿನಾಂಕ 13-1-2011 ರಂದು ರಾತ್ರಿ 2000 ಗಂಟೆಗೆ ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಲಪುರ ಗ್ರಾಮದಲ್ಲಿ ವಾಸಿಸುತ್ತಿರುವ ಫಿರ್ಯಾದಿ ಜಿ.ಜಿ. ನಂದೀಶರವರ ತಂದೆಗೆ ಅವರ ಪತ್ನಿ ನೇತ್ರಾವತಿರವರು ಹಣದ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕತ್ತಿಯಿಂದ ಹಲ್ಲೆ ನಡೆಸಿದ್ದು, ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಬೈಕ್‌ ಸವಾರನಿಗೆ ಗಾಯ:

ದಿನಾಂಕ 13-1-2011 ರಂದು ಶನಿವಾರಸಂತೆ ಪೊಲೀಸ್‌ ಠಾಣಾ ಸರಹದ್ದಿನ ಚೆನ್ನಳ್ಳಿ ರಸ್ತೆಯಲ್ಲಿ ಫಿರ್ಯಾದಿ ಕೆ.ಬಿ.ರಾಜಶೇಖರ್‌ ರವರ ಚಿಕ್ಕಪ್ಪ ಪೊನ್ನಪ್ಪನವರು ತಮ್ಮ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಯಾವುದೋ ಒಂದು ವಾಹನವು ಸದರಿಯವರ ಬೈಕ್‌ಗೆ ಡಿಕ್ಕಿ ಪಡಿಸಿದ ಪರಿಣಾಮ ಸದರಿಯವರು ಗಾಯಗೊಂಡಿದ್ದು, ಆರೋಪಿ ತನ್ನ ವಾಹನವನ್ನು ನಿಲ್ಲಸದೇ ಹೋಗಿದ್ದು, ಈ ಸಂಬಂಧ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

Thursday, January 13, 2011

ಸಾಲಬಾದೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯ ಆತ್ಮಹತ್ಯೆ:
ಈದಿನ ದಿನಾಂಕ 13-1-2011 ರಂದು ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಚಿಕ್ಕಕೊಳತ್ತೂರು ಗ್ರಾಮದ ವಾಸಿ ಶ್ರೀಮತಿ ಸಿ.ಎಸ್‌. ರತ್ನ ಎಂಬವರ ಪತಿ ಶಿವಕುಮಾರ್‌ ವ್ಯವಸಾಯ ಮಾಡುವ ಉದ್ದೇಶದಿಂದ ಬ್ಯಾಂಕುಗಳಿದ ಸಾಲವನ್ನು ಪಡೆದು ಸದರಿ ಸಾಲವನ್ನು ತೀರಿಸಲಾಗದೆ ಜೀವನದಲ್ಲಿ ಜಿಗುಪ್ಸೆಗೊಂದ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕೌಕೋಲಿಗೆ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಆಕಸ್ಮಿಕ ಬೆಂಕಿ ಅವಘಡ. ಮಹಿಳೆಯ ಸಾವು:
ಈ ದಿನ ದಿನಾಂಕ 13-1-2011 ರಂದು ಮಡಿಕೇರೆ ಗ್ರಾಮಾಂತರ ಠಾಣಾ ಸರಹದ್ದಿನ ಹೆರವನಾಡು ಗ್ರಾಮದ ಅಪ್ಪಂಗಳದಲ್ಲಿ ಫಿರ್ಯಾದಿ ಹಚ್ಚುರವರ ತಂಗಿ ಜಾನಕಿ ಮನೆಯಲ್ಲಿ ಒಲೆಗೆ ಬಿಂಕಿ ಹಚ್ಚಿ ಅಡುಗೆ ಮಾಡುತ್ತಿವಾಗ ಆಕಸ್ಮಿಕವಾಗಿ ಧರಿಸಿದ್ದ ಸೀರೆಗೆ ಬೆಂಕಿ ತಗುಲಿ ಆಕೆಯ ಮೈಗೆ ಸುಟ್ಟಗಾಯಗಳಾಗಿದ್ದು, ಚಿಕಿತ್ಸೆಗಾಗಿ ಮಡಿಕೇಸಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಯ ಸಮಯ ಆಕೆಯು ಮೃತಪಟ್ಟಿದ್ದು, ಈ ಸಂಬಂದ ಮಡಿಕೇರಿ ಗ್ರಾಮಾಂತರ ಪೋಲಿಸರು ಮುಂದಿನ ಕ್ರಮ ಜರುಗಿಸಿರುತ್ತಾರೆ.
ಅಪರಿಚಿರ ವ್ಯಕ್ತಿಯ ಮೃತದೇಹ ಪತ್ತೆ, ಪ್ರಕರಣ ದಾಖಲು:
ದಿನಾಂಕ 12-1-2011 ರಂದು ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಪ್ಪ ಗೇಟ್‌‌ ಹೊಳೆಯ ಹತ್ತಿರ ಫಿರ್ಯಾದಿ ಕುಶಾಲನಗರ ಪೊಲೀಸ್ ಠಾಣಾ ಸಿಬ್ಬಂದಿ ರಾಘವೇಂದ್ರ ಎಂಬವರು ಕರ್ತವ್ಯದ ನಿಮಿತ್ತ ಹೋದಾಗ ಕಾವೇರಿ ಹೊಳೆಯ ದಡದಲ್ಲಿ ಒಬ್ಬ ಅಪರಿಚೆತ ವ್ಯಕ್ತಿಯ ಮೃತ ದೇಹವು ಕಂಡುಬಂದು ಈ ಸಂಬಂಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ವ್ಯಕ್ತಿಯ ಆತ್ಮಹತ್ಯೆ:
ದಿನಾಂಕ 12-1-2011 ರಂದು ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೀಸಲು ಅರಣ್ಯದ ಡಿಪೋದೊಳಗಡೆ ಬೈಚನಳ್ಳಿ ಗ್ರಾಮ ವಾಸಿ ಶಿವಣ್ಣ ಎಂಬವರು ವಿಷವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಶಾಲನಗರ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.
ವರದಕ್ಷಿಣೆ ಗಾಗಿ ಕಿರುಕುಳ ಮತ್ತು ಕೊಲೆಬೆದರಿಕೆ:
ಮಹಿಳೆಯೊಬ್ಬರಿಂದ ವರದಕ್ಷಿಣೆ ಹಣಕ್ಕಾಗಿ ಕಿರುಕುಳ ನೀಡಿ ಆಕೆಯನ್ನು ಕೊಲೆ ಮಾಡುವುದಾಗಿ ಬೆದರಿಸಿರುವ ಬಗ್ಗೆ ಕುಶಾಲನಗರ ಠಾಣಾ ವ್ಯಾಪ್ತಿಯ ದೊಡ್ಡ ಅಳುವಾರ ಗ್ರಾಮದಿಂದ ವರದಿಯಾಗಿದೆ. ಫಿರ್ಯಾದಿ ಶಾಂತಮ್ಮ ಎಂಬವರು ತಮ್ಮ ಗಂಡ ಮಂಜುನಾಥ ಹೆಚ್‌.ಎನ್‌ ರವರ ವಿರುದ್ದ ವರದಕ್ಷಿಣೆ ಹಣಕ್ಕಾಗಿ ಕಿರುಕುಳ ನೀಡುತ್ತಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ಅರ್ಜಿ ಸಲ್ಲಸಿದ್ದು, ಈ ಸಂಬಂದ ಆಕೆಯನ್ನು ತನ್ನ ಗಂಡನ ಮನೆಗೆ ಕಳುಹಿಸುವ ಬಗ್ಗೆ ತೀಮಾನ ಮಾಡಿ ಮಂಜುನಾಥನ ತಂದೆಯ ಜೊತೆ ಫಿರ್ಯಾದಿಯನ್ನು ತನ್ನ ಗಂಡನ ಮನೆಗೆ ಬಾರದೇ ಇರುವ ಕಾರಣ ಫಿರ್ಯಾದಿ ತನ್ನ ತವರು ಮನೆಗೆ ಹೋಗಿ ನೆಲಸಿ, ಆರೋಪಿತರಾದ ತನ್ನ ಗಂಡ ಮಂಜುನಾಥ, ಸಣ್ಣಯ್ಯ, ಪುಟ್ಟಮ್ಮ ಹಾಗೂ ಇತರೆ 13 ಜನರ ವಿರುದ್ದ ದೂರಿ ನೀಡಿದ್ದು, ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Wednesday, January 12, 2011

ರಸ್ರೆ ಅಪಘಾತದಿಂದ ವ್ಯಕ್ತಿರಿಬ್ಬರಿಗೆ ಗಾಯ:

ಈದಿನ ಮಡಿಕೇರಿ ನಗರ ಠಾಣೆ ವ್ಯಾಪ್ತಿಯ ಆರ್ಮಿಕ್ಯಾಂಟಿನ್‌ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಪಿರ್ಯಾದಿ ಪಿಪಿಲೀಪ್‌ ಎಂಬವರು ತಮ್ಮ ಮೊ.ಸೈಕಲ್‌ ನಲ್ಲಿ ಐಟಿಐ ಕಡೆಗೆ ಹೋಗುತ್ತಿದಾಗ ಎದುರು ಗಡೆಯಿಂದ ಅರೋಪಿ ಜೀಪು ಸಂ: ಕೆಎ12 186 ರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿದ ಪಿರ್ಯಾದಿಯವರ ಮುಂದೆ ಹೋಗುತ್ತಿದ್ದ ಸ್ಕೂಟರ್‌ ಕ್ಕೆ ಡಿಕ್ಕಿ ಪಡಿಸಿ ನಂತರ ಪಿರ್ಯಾದಿಯವರ ಮೊ.ಸೈಕಲ್‌ ಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿ ಮತ್ತು ಸ್ಕೂಟರ್‌ ಚಾಲಕಿ ರವರಿಗೆ ಗಾಯ ನೋವುಂಟಾಗಿರುವುದಾಗಿಯೂ ಕೊಟ್ಟ ಪುಕಾರಿನ್ವಯ ಮಡಿಕೇರಿ ಟ್ರಾಪಿಕ್‌ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

ವಂಚನೆ ಪ್ರಕರಣ :- ದಿ: 5-5-2010 ರಂದು ಅರಫೊಇಯು ಮಡಿಕೇರಿ ತಾಲ್ಲೂಕಿನ ಬಿಳಿಗೇರಿ ಗ್ರಾಮದ ವಾಸಿ ಶ್ರೀಮತಿ ಮಾಲತಿ ಎಂಬವರಿಂದ 160 ಸಿಲ್ವರ್‌ ಮತ್ತು ಓಕ್‌ ಮರಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡು ಅದೀ ಒಪ್ಪಂದಲ್ಲಿ ಆರೋಫಿಯಾದ ಸುಲೈಮಾನ್‌ , ಮಂಗಳೂರು ಸದರಿ ಮರಗಳನ್ನು ಪಿರ್ಯಾದಿಯವರಿಗೆ ಲಾರಿಗೆ ಲೋಡ್‌ ಮಾಡಿದ್ದು ಮರದ ಬಾಪ್ತು ರೂ 2,00,000/- ರೂ.ಗಳನ್ನು ಅರೋಪಿಯು ಪಿರ್ಯಾದಿಯವರಿಂದ ಹೊಂದಿಕೊಂಡು ಒಪ್ಪಂದಂತೆ ಅರೋಪಿಯು ಪಿರ್ಯಾದಿಯವರಿಗೆ ಮರವನ್ನು ಕೊಡದೇ 3ನೇ ವ್ಯಕ್ತಿಗೆ ಮಾರಾಟ ಮಾಡಿ ಮೋಸ ಮಾಡಿರುವುದಾಗಿ ಪಿರ್ಯಾದಿಯವರು ನ್ಯಾಯಾಲಯದಲ್ಲಿ ಖಾಸಾಗಿ ಪ್ರಕರಣವನ್ನು ದಾಖಲಿಸಿ ತನಿಖೆ ಬಗ್ಗೆ ಕಳುಹಿಸಿಕೊಟ್ಟದನ್ನು ಹೊಂದಿಕೊಂಡು ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಯನ್ನು ಕೈಗೊಂಡಿರುವುದಾಗಿದೆ.

Tuesday, January 11, 2011

ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಸ್ವತುಗಳನ್ನು ನಷ್ಟಪಡಿಸಿದ ಬಗ್ಗೆ: ಸೋಮವಾರ ಫೇಟೆ ಠಾಣಾ ವ್ಯಾಪ್ತಿಯ ಕುಂಬುರು ಗ್ರಾಮದ ಶ್ರೀ ಮತಿ ಬಾನು ಗಂಡ ರಶೀದ್‌ ಕಾಣ್‌ ಗರಗಂದೂರು ಗ್ರಾಮದವರು 3.50 ಎಕರೆಯ ಪೈಸಾರಿ ಜಾಗವಿದ್ದು ಇದು ಪಿರ್ಯಾದಿಯವರಾದ ಶ್ರೀಮತಿ ಬಾನು ರವರ ಸ್ವಾದೀನದಲ್ಲಿ ಇರುತ್ತದೆ. ಸದರಿ ಜಾಗಕ್ಕೆ ಆರೋಪಿಗಳಾದ ಕೆ.ಬಾಸ್ಕರ, ಕೆಎಂ ಹನೀಪ್‌ ರವರು ಅಕ್ರಮ ಪ್ರವೇಶ ಮಾಡಿದ್ದು ಮರಗಳನ್ನು ಕಡಿದು ಶ್ರಿಮತಿ ಬಾನುರವರಿಗೆ ಅವ್ಯಾಚ್ಚ ಶಬ್ಗಗಳಿಂದ ಬೈದು ,ಕೊಲೆ ಬೆದರಿಕೆ ಹಾಕಿರುವುದಾಗಿ ಕೊಟ್ಟ ಪುಕರಿನ್ವಯ ಪ್ರಕರಣವನ್ನು ಸೋಮವಾರಪೇಟೆ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯ ಆತ್ಮಹತ್ಯೆ: 10-1-10 ರಂದು ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಿಳಿಗೇರಿ ಗ್ರಾಮದ ಪಿ.ಎಂ. ತಂಗಮ್ಮ ರವರ ಮಗ ರಮೇಶ @ ಮನು ಎಂಬುವರು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಮರದ ಬಿಟ್ಟಕ್ಕೆ ಹಗ್ಗದಿಂದ ಕಟ್ಟ ಕುತ್ತಿಗೆ ನೇಣು ಬಿಗಿದು ಆತ್ಮಹತ್ಯೆಮಾಡಿ ಕೊಂಡ ಬಗ್ಗೆ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.

ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮುರ್ನಾಡು ನಗರದ ವ್ಯಾಪ್ತಿಯ ವಿ.ಟಿ. ಮಂಜುನಾಥ ಆತನ ಹೆಂಡತಿ ಕ್ಯಾಂಟಿನ್‌ ಕೆಲಸ ಮುಗಿಸಿ ಕೊಂಡು ಮನೆಗೆ ಹಿಂತಿರುಗುವಾಗ್ಗೆ ಆರೋಪಿಗಳಾದ ತಂಗರಾಜು , ಮಣಿ, ರೇಖ ಎಲ್ಲಾರೂ ಮುರ್ನಾಡು ನವರರಾಗಿದ್ದು ಇವರು ಪಿರ್ಯಾದಿಯವರಾದ ಮಂಜುನಾಥ ಅವರ ಹೆಂಡತಿಗೆ ಕಬ್ಬಿಣದ ರಾಡಿನಿಂದ ಹೊಡೆದು ರಕ್ತಗಾಯ ಮಾಡಿದ್ದು ಗಾಯಪಡಿಸಿದ ಪರಿಣಾಮ ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಕೊಟ್ಟ ಪುಕಾರಿನ್ವಯ ಮಡಿಕೇರಿ ಗ್ರಾಮಾಂತರ ಠಾಣೆ ಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

Monday, January 10, 2011

ವಾಹನ ಅಪಘಾತ, ವ್ಯಕ್ತಿಯ ಸಾವು.

ಖಾಸಗಿ ವಾಹನವು ಮೋಟಾರ್‌ ಸೈಕಲ್‌ಗೆ ಡಿಕ್ಕಿಯಾಗಿ ಸವಾರ ದುರ್ಮರಣ ಹೊಂದಿದ ಬಗ್ಗೆ ವಿರಾಜಪೇಟೆ ನಗರ ಠಾಣಾ ಸರಹದ್ದಿನ ವಿರಾಜಪೇಟೆ ನಗರದಿಂದ ವರದಿಯಾಗಿದೆ. ಈ ದಿನ ದಿನಾಂಕ 10-1-2011 ರಂದು ನಗರದ ಎಫ್‌.ಎಂ.ಸಿ. ರಸ್ತೆಯಲ್ಲಿರುವ ಜಯಪ್ರಕಾಶ್‌ರವರ ಟೈಲರ್‌ ಅಂಗಡಿಯ ಮುಂಭಾಗ ಆರೋಪಿ ಖಾಸಗಿ ಬಸ್ಸನ ಚಾಲಕ ತನ್ನ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆ ಯಿಂದ ಚಲಾಯಿಸಿ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಪಡಿಸಿದ ಪರಿಣಾಮ ಮೋ.ಸೈಕಲ್‌ ಸವಾರ ತೀವ್ರ ತರಹದ ಗಾಯಗೊಂಡು, ಆಸ್ಪತ್ರೆಗೆ ಸಾಗಿಸುವ ಸಮಯ ಮೃತಪಟ್ಟಿದ್ದು, ವಿರಾಜಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯ ಆತ್ಮಹತ್ಯೆ.

ದಿನಾಂಕ 9-1-2011 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ನಾಂಗಾಲ ಗಾಮದಲ್ಲಿ ಬ್ಯಾರ ಎಂಬ ವ್ಯಕ್ತಿಯು ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿರುತ್ತಾರೆ.

ದಾರಿ ತಡೆದು ವ್ಯಕ್ತಿಯ ಮೇಲೆ ಹಲ್ಲೆ.

ದಿನಾಂಕ 9-1-2011 ರಂದು ಪೊನ್ನಂಪೇಟೆ ಠಾಣಾ ಸರಹದ್ದಿನ ನಡಿಕೇರಿ ಗ್ರಾಮದಲ್ಲಿ ಫಿರ್ಯಾದಿ ಎಂ.ಕೆ. ಗಣಪತಿ ತಮ್ಮ ಗದ್ದೆಯಿಂದ ಕಣಕ್ಕೆ ಭತ್ತದ ಹೊರೆಗಳನ್ನು ತುಂಬಿಸಿಕೊಂಡು ಹೋಗುತ್ತಿವಾಗ ಆರೋಪಿಗಳಾದ ಸೂರಪ್ಪ ಹಾಗು ಸೂರಪ್ಪನ ಅತ್ತಿಗೆ ಸೇರಿ ಫಿರ್ಯಾದಿಯ ದಾರಿ ತಡೆದು ಹಳೇ ವೈಷಮ್ಯದಿಂದ ಜಗಳ ಮಾಡಿ ದೊಣ್ಣೆಯಿಂದ ಹಲ್ಲೆ ಮಾಡಿ ನೋವನ್ನುಂಟುಮಾಡಿದ್ದು, ಚಿಕಿತ್ಸೆಗೆ ಗೋಣಿಕೊಪ್ಪ ಆಸ್ಪತ್ರೆಗೆ ದಾಖಲಾಗಿದ್ದು, ಈ ಸಂಬಂಧ ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

ಅಕ್ರಮ ಪ್ರವೇಶ, ಆಸ್ತಿ ನಷ್ಟ.

ದಿನಾಂಕ 9-1-2011 ರಂದು ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಬೇಂಗೂರು ಗ್ರಾಮದಲ್ಲಿ ಫಿರ್ಯಾದಿ ಎಂ.ಎಂ. ಅಯ್ಯಣ್ಣ ಎಂಬವರ ತೋಟಕ್ಕೆ ಆರೋಪಿಗಳಾದ ಎಂ.ಯು.ಅಯ್ಯಣ್ಣ ಹಾಗೂ ಎಂ.ಕೆ. ವೀರರಾಜು ರವರುಗಳು ಅಕ್ರಮಪ್ರವೇಶ ಮಾಡಿ ತೋಟದ ತಂತಿಬೇಲಿಯನ್ನು ಕುತ್ತು ನಷ್ಟಪಡಿಸಿದ್ದೂ ಅಲ್ಲದೆ ಅವಾಚ್ಯ ಸಂಬ್ದಗಳಿಂದ ನಿಂದಿಸಿದ್ದು ಈ ಬಗ್ಗೆ ಭಾಗಮಂಡಲ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತರಾರೆ.

Saturday, January 8, 2011

ಗೋ ಹತ್ಯೆ ಪ್ರಕರಣ: ದಿ: 7-1-11 ರಂದು ವಿರಾಜಪೇಟೆ ನಗರ ಠಾಣಾ ವ್ಯಾಪ್ತಿಯ ಪರೆಂಬಡಿ ಚೆಕ್‌ ಪೋಸ್ಟ್‌ಬಳಿ ಪಿರ್ಯಾದಿಯವರಾದ ಅನುಪ್‌ ಮಾದಪ್ಪ ಪಿಎಸ್‌‌ಐ ರವರಿಗೆ ಖಚಿತ ವರ್ತಮಾನದ ಮೇರೆಗೆ ಅರ್ಜಿ ಗ್ರಾಮದ ಪರೆಂಬಡಿಯ ಚೆಕ್‌ ಪೋಸ್ಟ್‌ ನ ಬಳಿ ದನಗಳನ್ನು ಸರ್ಕಾರದ ಯಾವುದೇ ಪರವಾನಗಿ ಇಲ್ಲದೇ ಕೇರಳದ ಕಸಾಯಿಖಾನೆಗೆ ಸಾಗಿಸುತ್ತಿದ್ದುದ್ದನ್ನು ಪಿರ್ಯಾದಿ ಮತ್ತು ಸಿಬ್ಬಂದಿಯೊಂದಿಗೆ ಪತ್ತೆ ಹಚ್ಚಿ ಆರೋಪಿತರನ್ನು ದಸ್ತಗಿರಿ ಮಾಡಿ ದನಗಳನ್ನು ಸ್ವಾಧೀನಕ್ಕೆ ತೆಗೆದು ಕೊಂಡು ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.

ರಸ್ತೆ ಅಪಘಾತದಲ್ಲಿ ವ್ಯಕ್ತಿಯ ರ್ದುಮರಣ: ಈ ದಿನ ಬೆಳ್ಳಿಗೆ 8:45 ಎ.ಏಂ.ಗೆ ವಿರಾಜಪೇಟೆ ನಗರದ ಮೂರ್ನಾಡ್‌ ರಸ್ತೆಯಲ್ಲಿರುವ ಬಿಎಸ್‌ಎನ್‌ಎಲ್‌ ಕಛೇರಿಯ ಮುಂಭಾಗ ಸಾರ್ವಜನಿಕ ರಸ್ತೆಯಲ್ಲಿ ಪಿರ್ಯಾದಿಯವರಾಧ ಎಂ.ಆರ್‌. ಪೊನ್ನಪ್ಪ ರವರು ಬಿ.ಎಸ್‌.ಎನ್‌.ಎಲ್‌ ಕಛೇರಿಯ ಮುಂದುಗಡೆ ನಿಂತುಕೊಂಡಿರುವಾಗ್ಗೆ ಸ್ವರಾಜ್‌ ಮಜ್ಡಾ ವಾಹನ ಸಂ: ಕೆ.ಎ. 12 5410 ರ ವಾಹನ ಮುರ್ನಾಡ್‌ ರಸ್ತೆಯಲ್ಲಿ ಹೋಗುತ್ತಿದ್ದು ಅದನ್ನು ಹಿಂದಿಕ್ಕುವ ಸಲುವಾಗಿ ಸ್ಕೂಟರ್‌ ಸವಾರ ಧರ್ಮಜ ಸ್ಕೂಟರ್‌ನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ್ಗೆ ಸ್ವರಾಜ್‌ ಮಜ್ಡಾ ಚಾಲಕ ಒಮ್ಮಲೆ ಬಲಕ್ಕೆ ತಿರುಗಿಸಿದ ಪರಿಣಾಮ ಸ್ಕೂಟರ್‌ ಸವಾರನಿಗೆ ಡಿಕ್ಕಿ ಪಡಿಸಿದ ಪರಿಣಾಮ ಆತ ರಸ್ತೆಗೆ ಬಿದ್ದು ತಲೆಗೆ ತೀವ್ರ ಸ್ವರೂಪದ ಗಾಯ ಉಂಟಾಗಿ ಸ್ಥಳದಲ್ಲೇ ritt ಪಟ್ಟಿರುವುದಾಗಿ ಕೊಟ್ಟ ಪುಕಾರಿನ್ವ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.

ರಸ್ತ

Friday, January 7, 2011

ದಿ: 6-1-2011 ರಂದು ಸಿದ್ಥಾಪುರ ಠಾಣಾ ವ್ಯಾಪ್ತಿಯ ಮಡಿಕೇರಿ ರಸ್ತೆಯ ಬಳಿ ಪಿರ್ಯಾದಿ ವರಾದ ಎಂಎ. ಸಮೀರ್‌ ಜೀಪಿನಲ್ಲಿ ಹೋಗುತ್ತಿರುವಾಗ್ಗೆ ಎದುರಿಗೆ ಬಂದ ಆರೋಪಿ ಜೀಪಿನ ಚಾಲಕ ತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿಯವರ ತಾಯಿ ಬಲಕಾಲಿನ ಮೊಣಕಾಲಿಗೆ ರಕ್ತ ಗಾಯ ವಾಗಿವುದಾಗಿ ಕೊಟ್ಟ ಪುಕಾರಿನ್ವ ಪ್ರಕರಣವನ್ನು ಸಿದ್ಥಾಪುರ ಠಾಣೆ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

ದಿ: 6-1-2011 ರಂದು ಸಿದ್ಥಾಪುರ ಠಾಣಾ ವ್ಯಾಪ್ತಿಯ ದುಬಾರೆ ಕಾಲೋನಿಯ ಜೇನುಕುರುಬರ ಶುಶೀಲ ರವರ ಮನೆ ಮುಂದುಗಡೆ ಆರೋಪಿರಾಜು ಮತ್ತು ರವಿ ಎಂಬವರು ಜಗಳ ಮಾಡುತ್ತಿದ್ದು ಪಿಯಾ್ದಿಯವರು ಎಕೆ ಜಗಳ ಮಾಡುತ್ತಿದ್ದೀರಾ ? ಹೇಳಿದಾಗ ಆರೋಪಿಗಳು ಪಿರ್ಯಾದಿಯವರಾದ ಸುಶೀಲ ಎಂಬವರಿಗೆ ದೊಣ್ಣೆಯಿಂದ ತಲೆಗೆ ಹೊಡೆದು ಗಾಯ ಪಡಿಸಿದ್ದು ಅವರು ಕುಶಾಲನಗರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಕೊಟ್ಟ ಪುಕಾರಿನ್ವಯ ಸಿದ್ಥಾಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.

Thursday, January 6, 2011

ಮಡಿಕೇರಿ ನಗರದ ಮೊಣ್ಣಪ್ಪ ಗ್ಯಾರೆಂಜ್‌ ಬಳಿ ಪಿರ್ಯಾದಿ ಯಾದ ಶ್ರೀಮತಿ ಡಿ.ಬಿ. ಪ್ರೀತಾ ಪತಿಯು ಹಳೆಯ ಕೇಸಿನ ಸಾಕ್ಷಿ ಹೇಳುವ ವಿಚಾರದಲ್ಲಿ ತನ್ನ ಮಕ್ಕಳನ್ನು ದಾರಿ ತಡೆದು ಶ್ರೀಮತಿ ಪ್ರೀತಾ ಮತ್ತು ಮಕ್ಕಳಿಗೆ ಆರೋಪಿಗಳಾದ ಡಿ.ಬಸಪ್ಪ ಎಂ. ಬಾಡಗ ಗ್ರಾಮ ದವರು ಅವಾಚ್ಚ ಶಬ್ದಗಳಿಗೆ ಬೈದು , ಕೊಲೆಬೆದರಿಕೆ ಹಾಕಿರುವುದು ಕೊಟ್ಟ ಪುಕಾರಿನ್ವಯ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಧೀ: 03/01/2011 ರಂದು ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಧನುಂಗಾಲ ಗ್ರಾಮದ ನಿವಾಸಿ ಯಾದ ನಾಗರಾಜು ಎಂಬು ಬಾಳಲೆ ಸಂತೆಗೆ ಹೋಗಿ ವಾಪಾಸ್ಸು ತಮ್ಮ ಲೈನ್ ಮನೆಗೆ ಹೋದಾಗ ಅಲ್ಲೆ ಪಕ್ಕದಲ್ಲಿ ತೆಂಗಿನಕಾಯಿ ಸುಲಿಯುತ್ತ ಕುಳಿತ್ತಿದ್ದ ಆರೋಪಿ ಗಳಾದ ರವಿ, 2) ಗಣೇಶ ಧನುಂಗಾಲ ಗ್ರಾಮದವರು ವಿನಾಹ ಕಾರಣ ಜಗಳ ತೆಗೆದು ಹಲ್ಲಿನಿಂದ ಕಚ್ಚಿ ಬೆರಳನ್ನು ತುಂಡು ಮಾಡಿ ನೋವುಂಟು ಮಾಡಿದ ಪರಿಣಾಮ ಕೊಟ್ಟ ಪುಕಾರಿನ್ವಯ ಪೊನ್ನಂಪೇಟೆ ಪೊಲೀಸ್‌ ಠಾಣೆ ಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.

Tuesday, January 4, 2011

ಕಾರು ಬೈಕಿಗೆ ಡಿಕ್ಕಿ, ಸವಾರನಿಗೆ ಗಾಯ:

ದಿನಾಂಕ 1-1-2011 ರಂದು ಸೋಮವಾರಪೇಟೆ ನಗರದ ಗನಫತಿ ದೇವಾಲಯದ ಮುಂಭಾಗ ಫಿರ್ಯಾದಿ ತನ್ನ ಬಾಪ್ತು ಬೈಕಿನಲ್ಲಿ ಹೋಗುತ್ತಿರುವಾಗ ಇದುರುಗಡೆಯಿಂದ ಆರೋಪಿ ತನ್ನ ಬಾಪ್ತು ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಫಿರ್ಯಾದಿಗೆ ಗಾಯಗಳಾಗಿ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು, ಈ ಸಂಬಂಧ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ವ್ಯಕ್ತಿಯ ಮೇಲೆ ವಿನಾಕಾರಣ ಹಲ್ಲೆ:

ದಿನಾಂಕ 3-1-2011 ರಂದು ರುಧ್ರಬೀಡು ಗ್ರಾಮದಲ್ಲಿ ಫಿರ್ಯಾದಿ ನಾಗರಾಜು ಎಂಬವರು ತಮ್ಮ ಮನೆಯಲ್ಲಿರುವಾಗ ಆರೋಪಿಗಳಾದ ಅನುಕುಮಾರ್‌ ಮತ್ತು ವಿನುಕುಮಾರ್‌ ಎಂಬವರು ವಿನಾಕಾರಣ ಫಿರ್ಯಾದಿಗೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ್ದು ರಕ್ತಗಾಯವಾಗಿದ್ದು, ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

Monday, January 3, 2011

ವ್ಯಕ್ತಿಯ ಮೇಲ್ ಹಲ್ಲೆ ಮತ್ತು ಜಾತಿ ನಿಂದನೆ:

ದಿನಾಂಕ 3-1-2011 ರಂದು ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಫಿರ್ಯಾದಿ ಎನ್‌.ಎಲ್‌.ಕೆಂಚಪ್ಪ, ಮುಖ್ಯಾಧಿಕಾರಿ ರವರು ಕಛೇರಿಯಲ್ಲಿರುವಾಗ ಕೆಲವು ಜನ ಸಾರ್ವಜನಿಕರು ಕಛೇರಿಗೆ ಬಂದು ಮಾಂಸ ಮತ್ತು ಮೀನು ವ್ಯಾಪಾರಿಗಳು ದುಬಾರಿ ಬೆಲೆಯಲ್ಲಿ ಮಾರಾಟ ಮಢುತ್ತಿರುವ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಫಿರ್ಯಾದಿಯ ಮೇಲೆ ಹಲ್ಲೆನಡೆಸಿರುವ ಬಗ್ಗೆ ಸೋಮವಾರಪೇಟೆ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ರಸ್ತೆ ಅಫಘಾತ, ಮಹಿಳೆಗೆ ಗಾಯ

  • ರಸ್ತೆ ಅಫಘಾತವೊಂದರಲ್ಲಿ ಮಹಿಳೆಯೋರ್ವರು ಗಾಯಗೊಂಡಿರುವ ಘಟನೆ ಮಡಿಕೇರಿ ನಗರ ಸಂಚಾರಿ ಠಾಣಾ ವ್ಯಾಪ್ತಿಯ ಮಹದೇವಪೇಟೆ ಬಳಿ ನಡೆದಿದೆ. ದಿನಾಂಕ 02/01/2011ರಂದು ಸಂಜೆ ಗಣಪತಿ ಬೀದಿಯ ನಿವಾಸಿ ಫಾತಿಮಾ ಎಂಬವರು ತಮ್ಮ ಮಗಳಾದ ಸೌದತ್‌ರೊಂದಿಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಸಭೆ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಓರ್ವ ರಿಕ್ಷಾ ಚಾಲಕನು ತನ್ನ ಕೆಎ-12-5691ನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಫಾತಿಮಾರವರಿಗೆ ಡಿಕ್ಕಿಪಡಿಸಿದ ಪರಿಣಾಮ ಫಾತಿಮಾರವರಿಗೆ ಗಾಯಗಳಾಗಿದ್ದು, ರಿಕ್ಷಾ ಚಾಲಕನು ರಿಕ್ಷಾವನ್ನು ನಿಲ್ಲಿಸದೆ ಹೋಗಿರುವ ಬಗ್ಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ, ವ್ಯಕ್ತಿಗೆ ಗಾಯ

  • ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿದ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಅಬ್ಬೂರು ತಾರಿಕಟ್ಟೆ ಎಂಬಲ್ಲಿ ನಡೆದಿದೆ. ದಿನಾಂಕ 02/01/2011ರಂದು ತಾರಿಕಟ್ಟೆ ನಿವಾಸಿ ಉಪ್ಪಂಡಿರ ಪ್ರಸನ್ನ ಕುಮಾರ್ ಎಂಬವರ ಜೊತೆ ಅದೇ ಗ್ರಾಮದ ಉಪ್ಪಂಡಿರ ಮೇದಪ್ಪ ಎಂಬವರು ನಾಯಿಯ ವಿಚಾರದಲ್ಲಿ ಜಗಳವಾಡಿ ಕೈಯಿಂದ ಹಲ್ಲೆ ಮಾಡಿದ್ದು, ಜಗಳ ಬಿಡಿಸಲು ಬಂದ ಕೇಶವಯ್ಯ ಎಂಬವರಿಗೂ ಸಹಾ ದೊಣ್ಣೆಯಿಂದ ಹಲ್ಲೆ ನಡೆಸಿರುವ ಬಗ್ಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹುಡುಗಿ ಕಾಣೆ, ಪ್ರಕರಣ ದಾಖಲು

  • ತರಗತಿಗೆಂದು ತೆರಳಿದ ಹುಡುಗಿಯೋರ್ವಳು ಮನೆಗೆ ತೆರಳದೆ ಕಾಣೆಯಾಗಿರುವ ಪ್ರಕರಣ ಮಡಿಕೇರಿ ನಗರ ಠಾಣೆಯಲ್ಲಿ ವರದಿಯಾಗಿದೆ. ದಿನಾಂಕ 24/12/2010ರಂದು ಮರಗೋಡಿನ ನಿವಾಸಿ ಉಷಾ ಎಂಬವರ ಮಗಳು 16 ವರ್ಷ ಪ್ರಾಯದ ರಷ್ಮಿತಾ ಎಂಬಾಕೆಯು ತರಗತಿಗೆಂದು ಮಡಿಕೇರಿಯ ಸ್ವಾಮಿ ಟ್ಯುಟೋರಿಯಲ್ಸ್‌ಗೆ ಬಂದವಳು ಇದುವರೆಗೂ ಮನೆಗೆ ವಾಪಾಸು ಬಾರದೇ ಇದ್ದು ಸಂಬಂಧಿಕರ ಮನೆಗಳಲ್ಲಿ ಹುಡುಕಿ ಪತ್ತೆಯಾಗದ ಕಾರಣ ದಿನಾಂಕ 02/01/2011ರಂದು ನೀಡಿದ ಪುಕಾರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ಕಾಣೆಯಾದ ಹುಡುಗಿಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

Sunday, January 2, 2011

ಕೌಟುಂಬಿಕ ವೈಷಮ್ಯ, ಪತ್ನಿಯ ಮೇಲೆ ಹಲ್ಲೆ
  • ಕೌಟುಂಬಿಕ ವೈಷಮ್ಯದಿಂದ ಪತಿಯೇ ಪತ್ನಿಯ ಮೇಲೆ ಹಲ್ಲೆ ನಡೆಸಿದ ಘಟನೆ ಶನಿವಾರಸಂತೆ ಠಾಣಾ ವ್ಯಾಪ್ತಿಯ ಬಡುಬನಹಳ್ಳಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 31/12/2010ರಂದು ಫಿರ್ಯಾದಿ ರೀನಾರವರು ಮತ ಚಲಾಯಿಸಲು ತನ್ನ ಗಂಡನ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಕೌಟುಂಬಿಕ ವಿಷಯದಲ್ಲಿ ಮಾತಿಗೆ ಮಾತು ಬೆಳೆದು ಆಕೆಯ ಪತಿ ಚೆನ್ನಪ್ಪ ರೀನಾರವರ ಮೇಲೆ ಕಬ್ಬಿಣದ ರಾಡಿನಿಂದ ಹೊಡೆದು ಗಾಯಪಡಿಸಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಾಹನ ಡಿಕ್ಕಿಪಡಿಸಿ, ಕಲ್ಲಿನಿಂದ ಜಜ್ಜಿ ದಂಪತಿಗಳ ಕೊಲೆ

  • ಕಾರಿನಿಂದ ಡಿಕ್ಕಿಪಡಿಸಿ ನಂತರ ಕಲ್ಲಿನಿಂದ ತಲೆಯನ್ನು ಜಜ್ಜಿ ಭೀಕರವಾಗಿ ಕೊಲೆ ಮಾಡಿದ ಘಟನೆ ಶನಿವಾರಸಂತೆ ಠಾಣಾ ವ್ಯಾಪ್ತಿಯ ಅವರೆದಾಳು ಗ್ರಾಮದಲ್ಲಿ ನಡೆದಿದೆ. ದಿನಾಂಕ 01/01/2011 ರಂದು ಅವರೆದಾಳು ಗ್ರಾಮದ ಶಂಭುಲಿಂಗಪ್ಪ ಮತ್ತು ಅವರ ಪತ್ನಿ ಶಾರದಮ್ಮ ಎಂಬವರು ದಾರಿಯ ವಿಚಾರದ ವಿವಾದದ ಬಗ್ಗೆ ದೂರು ನೀಡಲೆಂದು ಶನಿವಾರಸಂತೆ ಠಾಣೆಗೆ ಮಹೇಶಾಚಾರಿ ಎಂಬವರ ಜೊತೆ ಅವರ ಕೈನಟಿಕ್ ಹೋಂಡಾ ಸ್ಕೂಟರಿನಲ್ಲಿ ಹೋಗುತ್ತಿರುವಾಗ ಆರೋಪಿಗಳಾದ ಸುಮಂತ್, ರಮೇಶ ಮತ್ತು ಸರೋಜ ಎಂಬವರು ಕೆಎ-12-ಎಂ-9456ರ ಮಾರುತಿ ಓಮ್ನಿ ವ್ಯಾನಿನಲ್ಲಿ ಬಂದು ಹಿಂದಿನಿಂದ ಸ್ಕೂಟರಿಗೆ ಡಿಕ್ಕಿಪಡಿಸಿ ಮೂವರೂ ಸ್ಕೂಟರಿನಿಂದ ಕೆಳಗೆ ಬಿದ್ದ ಮೇಲೆ ಮೂವರೂ ಆರೋಪಿಗಳು ಕಲ್ಲಿನಿಂದ ಶಂಭುಲಿಂಗಪ್ಪ ಮತ್ತು ಶಾರದಮ್ಮನವರ ತಲೆಯನ್ನು ಕೊಲೆ ಮಾಡಿದ್ದು, ನಂತರ ತಲೆಮರೆಸಿಕೊಂಡಿರುತ್ತಾರೆ. ಮಹೇಶಾಚಾರಿಯವರು ಸ್ಥಳದಿಂದ ಓಡಿ ಹೋಗಿರುತ್ತಾರೆ. ಘಟನೆಯ ಬಗ್ಗೆ ಮೃತ ಶಂಭುಲಿಂಗಪ್ಪನವರ ತಮ್ಮ ನಾಗರಾಜುರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.