Friday, January 14, 2011

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ ಹಾಗೂ ನಿಂದನೆ:

ದಿನಾಂಕ 13-1-2011 ರಂದು ರಾತ್ರಿ 2000 ಗಂಟೆಗೆ ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಲಪುರ ಗ್ರಾಮದಲ್ಲಿ ವಾಸಿಸುತ್ತಿರುವ ಫಿರ್ಯಾದಿ ಜಿ.ಜಿ. ನಂದೀಶರವರ ತಂದೆಗೆ ಅವರ ಪತ್ನಿ ನೇತ್ರಾವತಿರವರು ಹಣದ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕತ್ತಿಯಿಂದ ಹಲ್ಲೆ ನಡೆಸಿದ್ದು, ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಬೈಕ್‌ ಸವಾರನಿಗೆ ಗಾಯ:

ದಿನಾಂಕ 13-1-2011 ರಂದು ಶನಿವಾರಸಂತೆ ಪೊಲೀಸ್‌ ಠಾಣಾ ಸರಹದ್ದಿನ ಚೆನ್ನಳ್ಳಿ ರಸ್ತೆಯಲ್ಲಿ ಫಿರ್ಯಾದಿ ಕೆ.ಬಿ.ರಾಜಶೇಖರ್‌ ರವರ ಚಿಕ್ಕಪ್ಪ ಪೊನ್ನಪ್ಪನವರು ತಮ್ಮ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಯಾವುದೋ ಒಂದು ವಾಹನವು ಸದರಿಯವರ ಬೈಕ್‌ಗೆ ಡಿಕ್ಕಿ ಪಡಿಸಿದ ಪರಿಣಾಮ ಸದರಿಯವರು ಗಾಯಗೊಂಡಿದ್ದು, ಆರೋಪಿ ತನ್ನ ವಾಹನವನ್ನು ನಿಲ್ಲಸದೇ ಹೋಗಿದ್ದು, ಈ ಸಂಬಂಧ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.