Sunday, January 16, 2011

ಅಕ್ರಮ ಪ್ರವೇಶ ಮತ್ತು ಜೀವ ಬೆದರಿಕೆ:

ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿ ಹೊದ್ದೂರು ಗ್ರಾಮ ನಿವಾಸಿ ಪಿರ್ಯಾದಿದಾರರಾದ ಎ.ಎ. ಚಿನ್ನಪ್ಪ ರವರ ಜಾಗದ ವಿಚಾರದಲ್ಲಿ ಆರೋಪಿ ಯಾದ ನೆರವಂಡ ಸುಭಾಷ್‌ ರವರಿಗೂ ಜಾಗದಲ್ಲಿ ತಕರಾರು ಇದ್ದು ಅರೋಪಿಯವರು ತೋಟಕ್ಕೆ ಪ್ರವೇಶ ಮಾಡದಂತೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ನೀಡಿದ್ದು ಪಿರ್ಯಾದಿಯವರು(ಎ.ಎ. ಚಿನ್ನಪ್ಪ) ತೋಟದಲ್ಲಿ ಕಾಪಿ ಕೊಯ್ಯುತಿರುವಾಗ್ಗೆ ಅರೋಪಿ ತೋಟಕ್ಕೆ ಅಕ್ರಮ ಪ್ರವೇಶಮಾಡಿ ಅವಾಚ್ಚ ಶಬ್ಬಗಳಿಂದ ಬೈದು ತೋಟದಿಂದ ಹೊರಗಡೆ ಹೋಗುವಂತೆ ಒತ್ತಾಯಿಸಿ ಇಲ್ಲದಿದ್ದರೆ ಕೊಲೆಮಾಡುವುದಾಗಿ ಕೊಟ್ಟ ಪುಕಾರಿನ್ವಯ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.

ಹಲ್ಲೆ ಮತ್ತು ಕೊಲೆ ಬೆದರಿಕೆ: ದಿ; 13-1-2011 ರಂದು ಅರೋಪಿ ಯಾದ ಎ.ಕೆ. ಕೃಷ್ಣಪ್ಪ ರವರು ಪಿರ್ಯಾದಿ ತಂದೆಯವರಾದ ಪಿಜಿನ ಮಕ್ಕಂದೂರು ಗ್ರಾಮ ರವರಿಗೆ ದೊಣ್ಣೆಯಿಂದ ಕೈಗೆ ಮತ್ತು ಕಾಲಿಗೆ ಹೊಡೆದು ಅವ್ಯಾಚ್ಚಶಬ್ಬಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುವುದಾಗಿ ಕೊಟ್ಟ ಪುಕಾರಿನ್ವಯ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.

ರಸ್ತೆ ಅಪಘಾತ: ದಿ: 15-1-11 ರಂದು ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ವಿರಾಜಪೇಟೆ ರಸ್ತೆಯ ಬಳಿ ಆರೋಪಿ ಚಂದ್ರ ಎಂಬವರು ಮಾರುತಿ ಅಲ್ಟೋ ಕಾರು ಮಡಿಕೇರಿ ನಗರದ ವಿರಾಜಪೇಟೆ ರಸ್ತೆಯಲ್ಲಿ ದುಡುಕು ಮತ್ತು ನಿರ್ಲಕ್ಷತೆಯಿಂದ ಓಡಿಸಿದ ಪರಿಣಾಮ ಪ್ರಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಚಾಲಕ ಚಂದ್ರರವರ ಪತ್ನಿ ಮತ್ತು ಮಕ್ಕಳಿಗೆ ಗಾಯಗಳಾಗಿರುವುದಾಗಿ ಕೊಟ್ಟ ಪುಕಾರಿನ್ವಯ ಮಡಿಕೇರಿ ಟ್ರಾಫಿಕ್‌ ಠಾಣೆ ಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.