Monday, February 28, 2011

ಕಾಫಿ ಕಳ್ಳತನ ಹಾಗೂ ಕೊಲೆ ಬೆದರಿಕೆ:
 • ದಿನಾಂಕ 26-2-2011 ರಂದು ಭಾಗಮಂಡಲ ಪೊಲೀಸ್ ಠಾಣಾ ಸರಹದ್ದಿನ ಕೋರಂಗಾಲ ಗ್ರಾಮದಲ್ಲಿ ಫಿರ್ಯಾದಿ ಬಿ. ರಾಮಪ್ಪ ಎಂಬವರ ಕಾಫಿ ಕಣದಿಂದ ಅವರ ಮಗ ಆರೋಪಿ ಜೆ.ಆರ್‌.ನಾಗರಾಜು ಹಾಗೂ ಜೆ.ಆರ್‌.ಸುಂದರಿ ಸೇರಿಕೊಂಡು 2 ಚೀಲ ಕಾಫಿಯನ್ನು ಕಳವು ಮಾಡಿದ್ದು, ಇದನ್ನು ಆನತಲ್ಲಿ ವಿಚಾರಿಸಿದಾಗ ಆರೋಪಿ ನಾಗರಾಜು ಫಿರ್ಯಾದಿಯ ವಾಸದ ಮನೆಗೆ ಹಾಕಿದ್ದ 4 ಕಲ್ನಾರ್‌ ಶೀಟುಗಳನ್ನು ಕತ್ತಿಯಿಂದ ಕಡಿದು ಪುಡಿ ಪುಡಿ ಮಾಡಿದ್ದು ಅಲ್ಲದೆ ಕತ್ತಿಯಿಂದ ಕಡಿದು ಕೊಲೆ ಮಾಡುವುದಾಗಿ ಜೀವ ಬಿದರಿಕೆ ಹಾಕಿದ್ದು, ಭಾಗಮಂಡಲ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ಅವಾಚ್ಯ ಶಬ್ದಗಳಿಂದ ಬೈದು ವ್ಯಕ್ತಿಯ ಮೇಲೆ ಹಲ್ಲೆ:
 • ದಿನಾಂಕ 27-2-2011 ರಂದು ಕುಶಾಲನಗರ ಠಾಣಾ ಸರಹದ್ದಿನ ಕೂಡ್ಲೂರು ಸರ್ಕಲ್‌ ಬಳಿ ಫಿರ್ಯಾದಿ ಕೆ.ಟಿ. ನಾಗೇಂದ್ರ ಮತ್ತು ಆರೋಪಿ ರವಿ, ಕೂಡ್ಲೂರು ಗ್ರಾಮು ಇವರು ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡಿ ಆರೋಪಿ ರವಿ ಫಿರ್ಯಾದಿಯನ್ನು ಅವಾಚ್ಯ ಶಬ್ದಗಳಿಂದ ಬೈದು ದೂಡಿ ಕೆಳಗೆ ಬೀಳಿಸಿ ಗಾಯಗಳಾಗಿದ್ದು, ಸದರಿ ಫಿರ್ಯಾದಿ ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲುಗೊಂಡು ನೀಡಿದ ಪುಕಾರಿನನ್ವಯ ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ:
 • ದಿನಾಂಕ 27-2-2011 ರಂದು ಪೊನ್ನಂಪೇಟೆ ಪೊಲೀಸ್ ಠಾಣಾ ಸರಹದ್ದಿನ ಹೆಬ್ಬಾಲೆ ಭದ್ರಗೊಳ ಗ್ರಾಮದಲ್ಲಿ ಫಿರ್ಯಾದಿ ಜೇನುಕುರುಬರ ಕಾವೇರಿಯವರ ಪತಿ ಚಂದ್ರ @ ರಾಮ ಎಂಬಾತನು ಜೀವನದಲ್ಲಿ ಜಿಗುಪ್ಸೆಗೊಂಡು ಹೆಬ್ಬಾಲೆ ಪಟ್ಟಣದ ರಸ್ತೆಯ ಬದಿಯಲ್ಲಿರುವ ಒಂದು ಅಂಗಡಿಯ ಮುಂದಿನ ಕಬ್ಬಿಣದ ರಾಡಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿ ಕ್ರಮ ಜರುಗಿಸಿರುತ್ತಾರೆ.

Sunday, February 27, 2011

ಮನೆಗೆ ಅಕ್ರಮ ಪ್ರವೇಶಮಾಡಿ ಮಹಿಳೆಯ ಮೇಲೆ ಮಾನಭಂಗಕ್ಕೆ ಯತ್ನ:
ದಿ: 26-2-11 ರಂದು ಕುಶಾಲನಗರದ ಠಾಣಾ ಸರಹದ್ದಿನ ತೊರೆನೂರು ಅರಿಶಿನಗುಪ್ಪೆ ಗ್ರಾಮದ ಪಿರ್ಯಾದಿದವರಾದ ದಮಯಂತಿ ರವರು ಮತ್ತು ಅವರ ಮಗ (13 ವರ್ಷ)ಮನೆಯಲ್ಲಿರುವಾಗ್ಗೆ ಆರೋಪಿತನಾದ ಪಿ.ಡಿ. ರವಿ , ಅರಿಶಿನ ಗುಪ್ಪೆ ಗ್ರಾಮದವನ್ನು ರಾತ್ರಿ ಪಿರ್ಯಾದಿರವರ ಮನೆಗೆ ಏಕಾಏಕಿ ಅಕ್ರಮ ಪ್ರವೇಶ ಮಾಡಿ ಕತ್ತಿಯಿಂದ ಕಡಿಯುವುದಾಗಿ ಬೆದರಿಕೆ ಹಾಕಿರುವುದಾಗಿದಲ್ಲದೆ ಸದರಿಯವರ ಮಾನಭಂಗಕ್ಕೆ ಯತ್ನಿಸಿರುವುದಾಗಿ ಕೊಟ್ಟ ಪುಕಾರಿನ್ವಯ ಕುಶಾಲನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

Saturday, February 26, 2011

ಲಾರಿ ಬೈಕಿಗೆ ಡಿಕ್ಕಿ, ವಿದ್ಯಾರ್ಥಿ ಸಾವು:

 • ದಿನಾಂಕ 24-2-2011 ರಂದು ಕುಶಾಲನಗರ ಪೊಲೀಸ್‌ ಠಾಣಾ ಸರಹದ್ದಿನ ಬಿಟ್ಟಗೇರಿ ಗ್ರಾಮದಲ್ಲಿ ನ್ಯುನೀತ್‌ ಹಾಗೂ ಮಜ್‌ದುಲ್ಲಾ ಖಾನ್‌ ಎಂಬವರು ಬೈಕ್‌ ಸಂ.ಕೆಅ53 ಕೆ4122 ರಲ್ಲಿ ಕುಶಾಲನಗರ ಕಡೆಗೆ ಹೋಗುತ್ತಿದ್ದಾಗ ಎದುಗಡೆಯಿಂದ ಲಾರಿ ಸಂ.ಕೆಎ-12ಎ2354ನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಪತೆಯಿಂದ ಓಡಿಸಿ ಡಿಕ್ಕಿ ಪಡಿಸಿದ ಪರಿಣಾಮ ನ್ಯುನಿತ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮಜ್‌ದುಲ್ಲಾ ಖಾನ್‌ ಎಂಬಾತ ತೀವ್ರ ಗಾಯಗೊಂಡಿದ್ದು, ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಮಹಿಳೆಯಿಂದ ವ್ಯಾನಿಟಿ ಬ್ಯಾಗ್‌ನಿಂದ ಚಿನ್ನ ಕಳುವು:

 • ದಿನಾಂಕ 25-2-2011 ರಂದು ಮಡಿಕೇರಿ ನಗರದ ಕೆ.ಎಸ್‌ಆರ್‌ಟಿ.ಸಿ ಬಸ್‌ ನಿಲ್ದಾಣದಲ್ಲಿ ಫಿರ್ಯಾದಿ ರತಿ ಎಂಬವರು ಬಸ್ಸನ್ನು ಹತ್ತುತ್ತಿರುವ ಸಮಯದಲ್ಲಿ ಯಾರೋ ಕಳ್ಳರು ಫಿರ್ಯಾದಿಯವರ ವ್ಯಾನಿಟಿ ಬ್ಯಾಗ್‌ನಿಂದ 3 ಲಕ್ಷ ರೂ. ಬೆಲೆಬಾಳುವ ಚಿನ್ನದ ಆಬರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಆರೋಪಿಗಳನ್ನು ಪತ್ತೆಹಚ್ಚಿ ಕಳವು ಮಾಲನ್ನು ವಶಪಡಿಸಿಕೊಂಡಿರುತ್ತಾರೆ.

ಅಂಗಡಿಗೆ ನುಗ್ಗಿ ದಾಂದಲೆ ನಡೆಸಿ ಪೀಠೋಪಕರಣ ದ್ವಂಸ, ಹಲ್ಲೆ ಮತ್ತು ಕೊಲೆ ಬೆದರಿಕೆ:

 • ದಿನಾಂಕ 25-2-2011 ರಂದು ಮಡಿಕೇರಿ ನಗರದ ಮಹದೇವಪೇಟೆಯಲ್ಲಿರುವ ಫಿರ್ಯಾದಿ ಎನ್‌.ಕೆ. ಅಜಿತ್‌ ಎಂಬವರಿಗೆ ಸೇರಿದ ಮುಕಾಂಬಿಕ ಎಂಟರ್‌ ಪ್ರೈಸೆಸ್‌ಗೆ ಆರೋಪಿಗಳಾದ ಜಲೀಲ್‌ ತಂದೆ: ಎರ್ಮು, ಗಣಪತಿ ಬೀದಿ, ಮಡಿಕೇರಿ, ಬಷೀರ್‌, ಮನ್ಸೂರ್‌ ಆಲಿ, ಇದ್ರೀಸ್‌, ಪೈರೋಸ್‌ಮ ಸನಾವುಲ್ಲಾ, ಫಯಾಜ್‌ ಹಾಗೂ ರಿಹಾಜ್‌ ವಾಸ: ಶಾಸ್ತ್ರಿನಗರ ಇವರುಗಳು ಕೆಂಪು ಬಣ್ಣದ ಇಕೋ ಕಾರು ಮತ್ತು ಪಲ್ಸರ್‌ ಮೋಟಾರ್‌ ಸೈಕಲ್‌ನಲ್ಲಿ ಬಂದು ಕೈಯಲ್ಲಿ ಕತ್ತಿ, ದೊಣ್ಣೆ ಮತ್ತು ಕಲ್ಲುಗಳನ್ನು ಹಿಡಿದುಕೊಂಡು ದಾಂದಲೆ ನಡೆಸಿ 'ನಿನ್ನನ್ನು ಈಗ ಕೊಂದು ಬಿಡುತ್ತೇವೆ, ನಿನ್ನ ಹಾರಾಟ ಜಾಸ್ತಿಯಾಗಿದೆ, ನಿನ್ನ ಅಂಗಡಿಗೆ ಬೆಂಕಿ ಹಾಕುತ್ತೇವೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಂಗಡಿಯ ಗಾಜುಗಳನ್ನು ಮತ್ತು ಪಿಠೋಪಕರಣಗಳನ್ನು ದ್ವಂಸ ಮಾಡಿದ್ದು ಅಲ್ಲದೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದು, ಕೊಲೆ ಬೆಧರಿಕೆ ಹಾಕಿರುವ ಬಗ್ಗೆ ಫಿರ್ಯಾದಿಯವರ ದೂರಿನ ಮೇರೆ ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ವ್ಯಕ್ತಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಕೊಲೆ ಬೆದರಿಕೆ:

 • ದಿನಾಂಕ 25-2-2011 ರಂದು ಮಡಿಕೇರಿ ನಗರ ಠಾಣಾ ಸರಹದ್ದಿನ ಎ.ವಿ. ಶಾಲೆಯ ಬಳಿ ಆರೋಪಿಗಳಾದ ಖಜೀರ್‌ ಹಾಗೂ ಅವರ ಸಂಗಡಿಗರು ಎಸ್ಟೀಮ್‌ ಕಾರು ಸಂ.ಕೆಅ-09 1186ರಲ್ಲಿ ಬಂದು ಫಿರ್ಯಾದಿ ಪಿ. ಕುಲದೀಪ್‌ ಪೂಣಚ್ಚ ಹಾಗೂ ಅವರ ಮನೆಯವರಿಗೆ ಬಾಯಿಗೆ ಬಂದಂತೆ ಬೈದು ಇನ್ನುಮುಂದೆ ಹಿಂದೂ ಸಂಘಟನೆಯಲ್ಲಿ ಕಾರ್ಯನಿರ್ವಹಿಸುವುದು ಕಂಡು ಬಂದರೆ ನಿನ್ನನ್ನು ಕತ್ತಿಯಿಂದ ಕಡಿದು ಕೊಲೆ ಮಾಡುವುದಾಗಿ ಜೀವ ಬಿದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆ ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಮರದಿಂದ ಆಕಸ್ಮಿಕ ಬಿದ್ದು ವ್ಯಕ್ತಿಯ ದುರ್ಮರಣ:

 • ದಿನಾಂಕ 24-2-2011 ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕೊಯನಾಡು ಗ್ರಾಮದಲ್ಲಿ ಫಿರ್ಯಾದಿ ಶ್ರೀಮತಿ ತಾರಾ ಎಂಬವರ ಪತಿ ಕುಶ ಎಂಬವರು ತೆಂಗಿನ ಕಾಯಿ ಕುಯ್ಯಲು ಮರ ಹತ್ತಿದವರು ಆಕಸ್ಮಿಕವಾಗಿ ಬಿದ್ದು ದುರ್ಮರಣಗೊಂಡಿರುತ್ತಾರೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

ದಾರಿ ತಡೆದು ವ್ಯಕ್ತಿಯ ಮೇಲೆ ಹಲ್ಲೆ:

 • ದಿನಾಂಕ 25-2-2011 ರಂದು ಕುಟ್ಟ ಠಾಣಾ ಸರಹದ್ದಿನ ಪೂಜೆ ಕಲ್ಲು ಎಂಬಲ್ಲಿ ಫಿರ್ಯಾದಿ ಅಜ್ಜಮಾಡ ಸುಜಕಾರ್ಯಪ್ಪ ಎಂಬವರನ್ನು ಆರೋಪಿಗಳಾದ ಐಪುಮಾಡ ಸಂಜು, ಕೈಪಳೇರ ದಿನೇಶ ಮತ್ತು ಇರರ 4 ಜನರು ಸೇರಿ ದಾರಿ ತಡೆದು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದು, ಕುಟ್ಟ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.


Friday, February 25, 2011

ಬಸ್ಸಿಗಾಗಿ ಕಾಯುತ್ತಿದ್ದ ವ್ಯಕ್ತಿ ಎದೆನೋವಿನಿಂದ ಸಾವು:

 • ದಿನಾಂಕ 24-2-2011 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕದನೂರು ಗ್ರಾಮದ ಬಸ್ಸು ತಂಗುದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಜವರ ಎಂಬ ವ್ಯಕ್ತಿಗೆ ಎದೆ ನೋವುಬಂದು ಮೃತಪಟ್ಟಿದ್ದು ಈ ಸಂಬಂಧ ಫಿರ್ಯಾದಿ ಹೆಚ್‌.ಕೆ. ಕೃಷ್ಣ ಎಂಬವರು ನೀಡಿದ ದೂರಿನ ಮೇರೆ ವಿರಾಜಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

ಅಂಗಡಿಗೆ ಕಲ್ಲು ಎಸೆದು ನಷ್ಟ:

 • ದಿನಾಂಕ 24-2-2011 ರಂದು ಮಡಿಕೇರಿ ನಗರದಲ್ಲಿ ಹಿಂದೂ ಸಮಾಜೋತ್ಸವ ನಡೆದ ಸಂದರ್ಭದಲ್ಲಿ ಆರೋಪಿಗಳಾದ ಕುಲದೀಪಿ, ಮೋಹನ, ಹರೀಶ, ಜಯ, ದಾಮೋದರ, ಗಣೇಶ ಹಾಗೂ ಎತರೆ 10 ಜನರ ಗುಂಪು ಮಡಿಕೇರಿ ನಗರದ ಮಹದೇವಪೇಟೆಯಲ್ಲಿರುವ ಫಿರ್ಯಾದಿ ಎಫ್.ಎ. ಅಬೂಬಕರ್‌ ರವರ ಅಂಗಡಿಯ ಮೇಲೆ ಕಲ್ಲು ಎಸೆದು ಬೆಲೆಬಾಳುವ ವಸ್ತುಗಳನ್ನು ಹಾಳು ಮಾಡಿದ್ದು, ಈ ಸಂಬಂಧ ಮಡಿಕೇರಿ ನಗರ ಪೊಲೀಸರು ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
 • ದಿನಾಂಕ 24-2-2011 ರಂದು ಮಡಿಕೇರಿ ನಗರದಲ್ಲಿ ಹಿಂದೂ ಸಮಾಜೋತ್ಸವ ನಡೆದ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಮಡಿಕೇರಿ ನಗರದ ಮಹದೇವಪೇಟೆಯಲ್ಲಿರುವ ಫಿರ್ಯಾದಿ ಕೆ.ರಫಿಕ್ ರವರ ಅಂಗಡಿಯ ಮೇಲೆ ಕಲ್ಲು ಎಸೆದು ಬೆಲೆಬಾಳುವ ವಸ್ತುಗಳನ್ನು ಹಾಳು ಮಾಡಿದ್ದು, ಈ ಸಂಬಂಧ ಮಡಿಕೇರಿ ನಗರ ಪೊಲೀಸರು ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
 • ದಿನಾಂಕ 24-2-2011 ರಂದು ಮಡಿಕೇರಿ ನಗರದಲ್ಲಿ ಹಿಂದೂ ಸಮಾಜೋತ್ಸವ ನಡೆದ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಮಡಿಕೇರಿ ನಗರದ ಚೌಕಿ ಬಳಿ ಇರುವ ಫಿರ್ಯಾದಿ ಮೊಹಮ್ಮದ್‌ ಅತೀಫ್ ರವರ ಅಂಗಡಿಯ ಮೇಲೆ ಕಲ್ಲು ಎಸೆದು ಬೆಲೆಬಾಳುವ ವಸ್ತುಗಳನ್ನು ಹಾಳು ಮಾಡಿದ್ದು, ಈ ಸಂಬಂಧ ಮಡಿಕೇರಿ ನಗರ ಪೊಲೀಸರು ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಅಪರಿಚಿತ ವ್ಯಕ್ತಿಯ ಅತ್ಮಹತ್ಯೆ.

 • ದಿನಾಂಕ 24-2-2011 ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಇಬ್ನಿವಳವಾಡಿ ಗ್ರಾಮದ ನೀರುಕೊಲ್ಲಿ ಎಂಬಲ್ಲಿ ಫಿರ್ಯಾದಿ ಸಿ. ಶ್ರೀಪತಿ ಎಂಬವರು ತಮ್ಮ ಕುಟುಂಬದ ಸ್ಮಶಾನ ಜಾಗಕ್ಕೆ ಕಟ್ಟಿಗೆ ತರಲು ಹೋದಾಗ ಅಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಒಂದು ಮರದ ಕೊಂಬೆಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವು ಕಂಡು ಠಾಣೆಗೆ ದೂರು ನೀಡಿದ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

Thursday, February 24, 2011

ಲಾರಿ ಬೈಕಿಗೆ ಡಿಕ್ಕಿ ಇಬ್ಬರಿಗೆ ಗಾಯ:

ಈ ದಿನ ಬೆಳಿಗ್ಗೆ 7-30 ಗಂಟೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ತಾಳತ್‌ಮನೆ ಎಂಬಲ್ಲಿ ಫಿರ್ಯಾದಿ ತನ್ನ ಬಾಪ್ತು ಮೋಟಾರ್‌ ಸೈಕಲ್‌ನಲ್ಲಿ ಮಡಿಕೇರಿ ಕಡೆಗೆ ಬರುತ್ತಿರುವಾಗ ಆರೋಪಿ ಅಶೋಕ ಕೆಎ-25 ಸಿ7157ರ ಟ್ಟಿಪ್ಪರ್‌‌ ಲಾರಿಯ ಚಾಲಕ ಸದರಿ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಫಿರ್ಯಾದಿ ಎನ್‌.ಎ. ರೆಹಮತ್‌ ಆಲಿರವರ ಮೋಟಾರ್‌ ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಸದರಿ ಫಿರ್ಯಾದಿ ಹಾಗೂ ಅವರ ಜೊತೆಯಲ್ಲಿ ಪ್ರಯಾಣಿಸುತ್ತಿದ್ದ ರಿಜ್ವಾನ್‌ರವರಿಗೆ ಗಾಯಗಳಾಗಿರುತ್ತದೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಮಹಿಳೆಯ ಆತ್ಮಹತ್ಯೆ, ಪ್ರಕರಣದ ದಾಖಲು:

ದಿನಾಂಕ 23-2-2011 ರಂದು ಮಡಿಕೇರಿ ನಗರ ಠಾಣಾ ಸರಹದ್ದಿನ ಮಹದೇವಪೇಟೆಯಲ್ಲಿ ವಾಸಿಸುತ್ತಿರುವ 32 ವರ್ಷ ಪ್ರಾಯದ ರೀನಾ ಉತ್ತಪ್ಪ ಎಂಬವರು ಮನೆಯ ಬಚ್ಚಲು ಮನೆಯಲ್ಲಿ ಸುಟ್ಟ ಗಾಯಗಳಿಂದ ಮೃತ್ತಪಟ್ಟಿದ್ದು ಇವರು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿದೆ ಹಾಗೂ ಇವರ ಸಾವಿನ ಬಗ್ಗೆ ಸಂಶಯವಿರುದಾಗಿ ಮೃತಳ ತಾಯಿ ಶ್ರೀಮತಿ ಬಿ.ಎ. ಗಂಗಮ್ಮ ಎಂಬವರು ದೂರನ್ನು ನೀಡಿದ್ದು, ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಅನಾರೋಗ್ಯದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯ ಆತ್ಮಹತ್ಯೆ:

ದಿನಾಂಕ 23-2-2011 ರಂದು ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಚೂರಿಕಾಡು-ಬಾಡಗ ಗ್ರಾಮದ ನಿವಾಸಿ ರಮೇಶ ಎಂಬವನು ಗ್ಯಾಸ್ಟಿಕ್‌ ಕಾಯಿಲೆಯಿಂದ ಬಳಲುತ್ತಿದ್ದು, ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮದ್ಯವನ್ನು ಸೇವಿಸಿ ನಂತರ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟ್ಟ ಪೊಲೀಸರು ಈ ಸಂಬಂಧ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ಮುಂದಿ ಕ್ರಮವನ್ನು ಜರುಗಿಸಿರುತ್ತಾರೆ.

Wednesday, February 23, 2011

ಮನುಷ್ಯ ಕಾಣೆ, ಪ್ರಕರಣ ದಾಖಲು:

ಈ ಭಾವಚಿತ್ರದಲ್ಲಿರುವ 72 ವರ್ಷ ಪ್ರಾಯದ ಪಿ.ಐ. ಕುಕ್ಕ ಎಂಬ ವ್ಯಕ್ತಿಯು ದಿನಾಂಕ 15-2-2011 ರಂದು ಮನೆಯಿಂದ ಅಂಗಡಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ವಾಪಾಸು ಮನೆಗೆ ಬಂದಿರುವುದಿಲ್ಲ. ಇವರನ್ನು ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗದೇ ಇರುವ ಕಾರಣ ಫಿರ್ಯಾದಿ ಪಿ.ಕೆ. ಕಾಂತಪ್ಪನವರು ನೀಡಿದ ದೂರಿನನ್ವಯ ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Tuesday, February 22, 2011

ರಾಜರ ಗದ್ದುಗೆ ಕಟ್ಟಡದ ಮುಂಬಾಗಿಲಿಗೆ ಬೆಂಕಿ ಹಾಕಿ ಹಾನಿ:

 • ಈ ದಿನ ದಿನಾಂಕ 22-2-2011 ರಂದು ಮಡಿಕೇರಿ ನಗರ ಠಾಣಾ ಸರಹದ್ದಿಗೆ ಸೇರಿದ ಮಹದೇವಪೇಟೆಯಲ್ಲಿರುವ ರಾಜರ ಗದ್ದುಗೆಯ ಸಮಾದಿ ಕಟ್ಟಡದ ಬುಂಬಾಗಿಲಿಗೆ ಯಾರೋ ಕಿಡಿಗೇಡಿಗಳು ಬೆಂಕಿಯನ್ನು ಹಚ್ಚಿ ಬಾಗಿಲಿಗೆ ಅಳವಡಿಸಿರುವ ಲೋಕಹ ಗುಬ್ಬಿಗಳನ್ನು ಅಪಹರಿಸಲು ಪ್ರಯತ್ನಿಸಿದ್ದು, ಸದರಿ ಕಟ್ಟಡದ ಮುಂಬಾಗಿಲು ಭಾಗಶಃ ಸುಟ್ಟುಹೋಗಿ ನಷ್ಟ ಉಂಟಾಗಿರುತ್ತದೆ ಎಂದು ಫಿರ್ಯಾದಿ ಕು: ಬಿ.ಪಿ ರೇಖಾ, ಸಂಗ್ರಹಾಯಲ ಅಧಿಕಾರಿ, ಸರಕಾರಿ ವಸ್ತು ಸಂಗ್ರಹಾಲಯ, ಮಡಿಕೇರಿ ರವರು ದೂರನ್ನು ನೀಡಿದ್ದು, ಈ ಸಂಬಂಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ಮಹಿಳೆಯ ಜಾತಿ ನಿಂದನೆ ಮತ್ತು ಕೊಲೆ ಬೆದರಿಕೆ:

 • ದಿನಾಂಕ 20-2-2011 ರಂದು ಸಿದ್ದಾಪುರ ಪೊಲೀಸ್‌ ಠಾಣೆಗೆ ಸೇರಿದ ಪುಲಿಯೇರೆ ಗ್ರಾಮದಲ್ಲಿ ಫಿರ್ಯಾದಿ ಶ್ರೀಮತಿ ಲೀಲಾರವರು ತಮ್ಮ ಮನೆಯಲ್ಲಿರುವ ಸಮಯದಲ್ಲಿ ಆರೋಪಿ ಹರೀಶ ಎಂಬ ವ್ಯಕ್ತಿ ಅಲ್ಲಿಗೆ ಬಂದು ನೀವು ಎರವರ ಜಾತಿಗೆ ಸೇರಿ ಪೊಲೀಸ್‌ ಠಾಣೆಗೆ ಹೋಗಿ ದೂರನ್ನು ಕೊಟ್ಟು ನನ್ನನ್ನು ಏನು ಮಾಡಲು ಸಾದ್ಯವಾಯಿತು ಎಂದು ಹೇಳಿ ಫಿರ್ಯಾದಿಯವರ ಜಾತಿ ನಿಂದನೆ ಮಾಡಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಫಿರ್ಯಾದಿಯವರು ನೀಡಿದ ದೂರಿನ ಮೇರೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಅಂಗಡಿಯ ಬೀಗ ಮುರಿದು 24000ರೂ ಸಾಮಾಗ್ರಿ ಕಳವು:

 • ದಿನಾಂಕ 20-2-2011 ರಂದು ರಾತ್ರಿ 9-30 ಗಂಟೆಗೆ ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಂಜರಾಯಪಟ್ಟಣದಲ್ಲಿ ಫಿರ್ಯಾದಿ ಅಬ್ದುಲ್‌ರಹಿಮಾನ್‌ ತಮಗೆ ಸೇರಿದ ಅಂಗಡಿಯನ್ನು ಮುಚ್ಚಿ ಮನೆಗೆ ತೆರಳಿದ್ದು, ದಿನಾಂಕ 21-2-2011 ರಂದು ಬೆಳಿಗ್ಗೆ 07-00 ಗಂಟೆಗೆ ಬಂದು ನೋಡಲಾಗಿ ಯಾರೋ ಕಳ್ಳರು ಅಂಗಡಿಯ ಬಾಗಿಲಿನ ಬೀಗವನ್ನು ಮುರಿದು ಅಂಗಡಿಯಲ್ಲಿಟ್ಟಿದ್ದ ದಿನಸಿ ಸಾಮಾಗ್ರಿ ಹಾಗೂ ರೂ 5000 ಬೆಲೆಯ ಏರ್‌ಟೆಲ್‌ ಕರೆನ್ಸಿ (ಒಟ್ಟು ರೂ.24000)ಯನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಮೋಟಾರ್‌ ಸೈಕಲ್‌ ಡಿಕ್ಕಿ, ಸವಾರನಿಗೆ ಗಾಯ:

 • ದಿನಾಂಕ 21-2-2011 ರಂದು ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುಶಾಲನಗರದ ಗಣಪತಿ ಫೈನಾನ್ಸ್‌ ಹತ್ತಿರ ಫಿರ್ಯಾದಿ ಜಗಧೀಶ ತಮ್ಮ ಮನೆಗೆ ತಮ್ಮ ಮೋಟಾರ್‌ ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಎದುರುಗಡೆಯಿಂದ ಆರೋಪಿ ಕೃಷ್ಣ ಎಂಬವರು ತಮಗೆ ಸೇರಿ ಮೋಟಾರ್‌ ಸೈಕಲ್‌ ಸಂ.ಕೆಎ-13 ಹೆಚ್‌-872ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಫಿರ್ಯಾದಿಯವರ ಬೈಕ್‌ಗೆ ಡಿಕ್ಕಿಪಡಿಸಿದ ಪರಿಣಾಮ ಫಿರ್ಯಾದಿಗೆ ಗಾಯಗಳಾಗಿದ್ದು, ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಪ್ರವೇಶ, ನಿಂದನೆ, ಕೊಲೆ ಬೆದರಿಕೆ:

 • ದಿನಾಂಕ 19-2-2011 ರಂದು ಮಡಿಕೇರಿ ತಾಲೋಕಿನ ಕಟ್ಟೆಮಾಡು ಗ್ರಾಮದಲ್ಲಿ ಫಿರ್ಯಾದಿ ಶ್ರೀಮತಿ ಕೆ.ಜಿ.ಪ್ರೇಮರವರಿಗೆ ಸೇರಿದ ಕಾಫಿ ತೋಟಕ್ಕೆ ಆರೋಪಿಗಳಾದ ಸಿದ್ಧಾರ್ಥ, ಶ್ರೀಮತಿ ಲಲಿತ ಹಾಗೂ ರಾಜೇಶ್‌ ರವರು ಸೇರಿಕೊಂಡು ಅಕ್ರಮ ಪ್ರವೇಶ ಮಾಡಿ ತೋಟದಿಂದ ಸುಮಾರು 150 ಚೀಲ ಕಾಫಿಯನ್ನು ಕುಯ್ದಿರುವುದಲ್ಲದೇ ಈ ಬಗ್ಗೆ ಅವರನ್ನು ಪ್ರಶ್ನಿಸಿದಾದ ಆರೋಪಿಗಳು ಫಿರ್ಯಾದಿಯನ್ನು ಅವಾಚ್ಯ ಶಬ್ದದಿಂದ ನಿಂದಿಸಿದ್ದು ಅಲ್ಲದೆ ಪಾಯಿಂಟ್‌ 22 ಕೋವಿಯನ್ನು ತೋರಿಸಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ ದಿನಾಂಕ 21-2-2011ರಂದು ಫಿರ್ಯಾದಿಯವರು ದೂರನ್ನು ನೀಡಿದ್ದು , ಪೊಲೀಸರು ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

Monday, February 21, 2011

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ.
ದಿನಾಂಕ 20-2-2011 ರಂದು ಪೊನ್ನಂಪೇಟೆ ಪೊಲೀಸ್ ಠಾಣಾ ಸರಹದ್ದಿನ ಬೆಸಗೂರು ಗ್ರಾಮದಲ್ಲಿ ಫಿರ್ಯಾದಿ ಪಣಿಎರವರ ಬೊಳಕ ಎಂಬವನು ತನ್ನ ಮನೆಯಲ್ಲಿ ಮಲಗಿಕೊಂಡಿರುವಾಗ ಆರೋಪಿ ಪಣಿಎರವರ ರಾಜು ಎಂಬವರು ಅಲ್ಲಿಗೆ ಬಂದು ಫಿರ್ಯಾದಿಯನ್ನು ಹೊರಗಡೆಗೆ ಕರೆದು ವಿನಾಕಾರಣ ದೊಣ್ಣೆಯಿಂದ ಹೊಡೆದು, ಕತ್ತಿಯಿಂದ ಕಡಿದು ಗಾಯಪಡಿಸಿದ್ದು ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ವ್ಯಕ್ತಿಯಿಂದ ನೇಣುಬಿಗಿದು ಆತ್ಮಹತ್ಯೆ:
ದಿನಾಂಕ 21-2-2011 ರಂದು ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕೊಣಂಜಗೇರಿ ಗ್ರಾಮದಲ್ಲಿ ತಮ್ಮಯ್ಯ ಎಂಬವರು ಜೀವನ್ಲದಲಿ ಜಿಗುಪ್ಸೆಗೊಂಡು ತಮ್ಮ ಮನೆಯ ಹತ್ತಿರದ ದನದ ಕೊಟ್ಟಿಗೆಯಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ನಾಪೋಕ್ಲು ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಮೋಟಾರು ಸೈಕಲ್‌ ಡಿಕ್ಕಿ ಮಹಿಳೆಯ ಸಾವು.
ದಿನಾಂಕ 21-02-2011 ರಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಮರಗೋಡು ಗ್ರಾಮದ ಕತ್ತಲೆಕಾಡು ರಸ್ತೆಯಲ್ಲಿ ಫಿರ್ಯಾದಿಯವರ ಅತ್ತೆ ಮಾಚಮ್ಮನವರು ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ತಿಲಕರಾಜ ಎಂಬವನು ತನ್ನ ಬಾಪ್ತು ಮೋಟಾರು ಸೈಕಲ್‌ ಸಂ.ಕೆಎ-12 ಹೆಚ್‌-6410ನ್ನು ಅತೀ ವೇಗ ಹಾಗು ಅಜಾಗರೂಕತೆಯಿಂದ ಓಡಿಸಿ ಮಾಚಮ್ಮನವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಸದರಿಯವರು ತೀವ್ರ ಗಾಯಗೊಂಡು ಮೃತಪಟ್ಟಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Saturday, February 19, 2011

ರಸ್ತೆ ಅಪಘಾತ:

ಮಡಿಕೇರಿಗ್ರಾಮಾಂತರ ಠಾಣಾ ವ್ಯಾಪ್ತಿ ಕತ್ತಲೆ ಕಾಡು ಹತ್ತಿರ ಆಟೋಚಾಲಕನ್ನು ಅತೀವೇಗ ಮತ್ತು ಅಜಾರೂಕತೆಯಿಂದ ಓಡಿಸಿದ ಪರಿಣಾಮ ಅಟೋದಲ್ಲಿದ್ದ ಸುಬ್ರಮಣಿ ರವರಿಗೆ ಎಡ ಕಾಲಿಗೆ ರಕ್ತ ಗಾಯವಾಗಿದ್ದು ಕೊಟ್ಟ ಹೇಳಿಕೆಯ ಮೇಲೆ ಮಡಿಕೇರಿ ಗ್ರಾಮಾಂತರ ಠಾಣೆ ಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

ಅಕ್ರಮವಾಗಿ ಕಳ್ಳಬಟ್ಟಿ ಸಾರಾಯಿ ಮಾರಾಟ:

ದಿ: 19-2-11 ರಂದು ರಂದು ಶನಿವಾರಸಂತೆ ಠಾಣಾಧಿಕಾರಿಯವರಾದ (ಪಿಎಸ್‌‌ಐ) ಕರ್ತವ್ಯದಲ್ಲಿರುವಾಗ್ಗೆ ಕುರುಡುವಳ್ಳಿ ಒಡ್ಡರಹಳ್ಳಿ ಗ್ರಾಮದಲ್ಲಿ ಒಂದು ಹೆಂಗಸು ಆರೋಪಿ ಶ್ರಿಮತಿ ಯೆಶೋಧಮ್ಮ ಆಕ್ರಮವಾಗಿ ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡುತ್ತಿರುವುದಾಗಿ ದೊರೆತ ಖಚಿತ ವರ್ತಮಾನದ ಮೇರೆಗೆ ಹೋದಾಗ ಅಲ್ಲಿ ಬ್ರಾಂಡಿ ಬಾಟಲನ್ನು ತನ್ನ ಕೈಯಲ್ಲಿ ಹಿಡಿದುಕೊಂಡಿದ್ದ ಹೆಂಗಸು ಸದರಿ ಸ್ಥಳದಿಂದ ಓಡಿ ಹೋಗಿದ್ದು ಪರಿಶೀಲಿಸಲಾಗಿ ಅಲ್ಲಿ ಇದ್ದು ಚೀಲದಲ್ಲಿ 68 ಓರಿಜಿನಲ್‌ ಚಾಯ್ಸ್‌ ಬ್ರಾಂಡಿ ಬಾಟಲಿಗಳಿದ್ದು ಸದ್ರಿ ಮಾಲನ್ನು ಅಮಾನತ್ತು ಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

Thursday, February 17, 2011

ಭಾಗಮಂಡಲ ಠಾಣಾ ವ್ಯಾಪ್ತಿಯ ಬೆಂಗೂರು ಗ್ರಾಮದ ನಿವಾಸಿ ಪಿರ್ಯಾದಿದಾರರಾದ ಎಂ.ಎಂ.ಮಂದಣ್ಣ ರವರ ಮನೆಯ ಸ್ಥಿರ ದೂರವಾಣಿ ಗೆ ಯಾವುದೋ ಅನಾಮದೇಯ ಪುರುಷ ವ್ಯಕ್ತಿಯು ಹಲವಾರು ಬಾರಿ ಕರೆಮಾಡಿ ಮಂದಣ್ಣರವರಿಗೆ ಬೆದರಿಕೆ ಮತ್ತು ಅವಾಚ್ಚಶಬ್ದಗಳಿಂದ ಬೈದಿರುತಾರುವುದಾಗಿ ಕೊಟ್ಟ ಪುಕಾರಿನ್ವಯ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣ:

ಶನಿವಾರಸಂತೆ ಠಾಣಾ ವ್ಯಾಫ್ತಿಯ ಮಾದೆ ಗ್ರಾಮ ದಲ್ಲಿ ದೇವಸ್ಥಾನದ ಕೆಲಸ ನಡೆಯುತ್ತಿರುವುದರಿಂದ ಆರೋಪಿ ಚಾಲಕ ಲಾರಿ ಸಂ: ಕೆಎ 13 3402 ಸದ್ರಿಲಾರಿಯ ಹಿಂಭಾಗ ಪಿರ್ಯಾದಿ ಎಂಎಸ್‌ . ವೀರೇಂದ್ರ ರವರ ತಂದೆ ಸಿದ್ದಲಿಂಗಯ್ಯರವರು ಮಾತನಾಡಿಕೊಂಡು ನಿಂತಿರುವಾಗ್ಗೆ ಆರೋಪಿ ಲಾರಿ ಚಾಲಕನ್ನು ಎಕಾಎಕಿಯಾಗಿ ಯಾವುದೇ ಮುನ್ಸೂಚನೆ ನೀಡದೇ ಹಿಂದಕ್ಕೆ ದಿಡೀರನೆ ಚಾಲಿಸಿದ ಪರಿಣಾಮ ಹಿಂಬದಿಯಲ್ಲಿ ನಿಂತಿದ್ದ ಸಿದ್ದಲಿಂಗಯ್ಯರವರ ಕಾಲುಗಳ ಮೇಲೆ ಲಾರಿ ಹರಿದ ಪರಿಣಾಮ ಕಾಲಿನ ತೊಡೆ ಭಾಗವು ಮುರಿದು ಹೋಗಿರುವುದಾಗಿ ಕೊಟ್ಟ ಪುಕಾರಿನ್ವಯ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

2) ಮಡಿಕೇರಿ ಟ್ರಾಪಿಕ್‌ ಠಾಣಾ ಸರಹದ್ದಿನ ಕೊಯಿನೂರು ರಸ್ತೆ ಜಂಕ್ಷನ್‌ ಮಡಿಕೇರಿ ನಗರ ಪಿರ್ಯಾದಿಯವರಾದ ಎಂ.ಎಸ್‌. ಚಂಗಪ್ಪ ನಡೆದುಕೊಂಡು ಹೋಗುತ್ತಿರುವಾಗ್ಗೆ ಆರೋಪಿ ಯಾದ ಮಂಜುನಾಥ ಜೆಸಿಬಿ ಚಾಲಕ ಸಂ: ಕೆಎ 5-ಎಂಎನ್‌ 1314ನ್ನು ದುಡುಕು ಮತ್ತು ನಿರ್ಲಕ್ಷತೆಯಿಂದ ಓಡಿಸಿಕೊಂಡು ಬಂದು ಪಿರ್ಯಾದಿಯವರಿಗೆ ಹಿಂದಿನಿಂದ ಡಿಕ್ಕಿ ಪಡಿಸಿದ ಪರಿಣಾಮ ಗಾಯವಾಗಿದ್ದು ಕೊಟ್ಟ ಪುಕಾರಿನ್ವಯ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಕೈಗೊಂಡಿರುವುದಾಗಿದೆ .

Tuesday, February 15, 2011

ವ್ಯಕ್ತಿಯ ಮೇಲೆ ಹಲ್ಲೆ:
ಮಡಿಕೇರಿ ಗ್ರಾಮಾಂತರ ವ್ಯಾಪ್ತಿಯ ಮೇಕೇರಿಯಿಂದ ಮಡಿಕೇರಿಗೆ ಬರುವ ತಿರುವು ರಸ್ತೆಯಲ್ಲಿ ಪಿರ್ಯಾದಿರವರಾದ ಶ್ರೀಬಸಪ್ಪ ರವರು ಬಸ್ಸನ್ನು ಚಾಲಿಸಿಕೊಂಡು ಮಡಿಕೇರಿ ಕಡೆಗೆ ಬರುತ್ತಿರುವಾಗ್ಗೆ ಆರೋಪಿಗಳಾದ ಕೆಎ-12 ಬಿ-1556 ನಂಬರಿನ ಶಿವಲೈನ್‌ ಖಾಸಾಗಿ ಬಸ್‌ನ ಚಾಲಕ, ನಿರ್ವಾಹಕ, 3) ಕ್ಲೀನರ್‌ ಸೇರಿಕೊಂಡು ಎಕಾಏಕಿಯಾಗಿ ಪಿರ್ಯಾದಿಯವರಿಗೆ ಕೈಯಿಂದ ಎಡಕಣ್ಣಿಗೆ ಹೊಡೆದು , ಕಾಲಿಗೆ ಒದ್ದು ನೋವು ಪಡಿಸಿ ಅವಾಚ್ಚಶಬ್ದಗಳಿಂದ ಬೈದು ರುವುದಾಗಿ ಕೊಟ್ಟ ಪುಕಾರಿನ್ವಯ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

ಪೊನ್ನಂಪೇ ಟೆ ಠಾಣಾ ವ್ಯಾಪ್ತಿಯ ತ ಟ್ಟಗೇರಿ ಕಾಲೋನಿ, ನಿಟ್ಟೂರು ಗ್ರಾಮದ ನಿವಾಸಿ ಜೇನುಕುರುಬರ ರಾಮು ರವರ ತಾಯಿ ಬೋಜಿಯು ಅವರ ಪಕ್ಕದ ಮನೆಯಲ್ಲಿ ವಾಸವಿರುವ ಹರೀಶನನ್ನು ಕರೆದು ಅವರಿಗೆ ಕೊಡಲು ಬಾಕಿ ಇರುವ 1೦೦೦ ರೂ.ಗಳನ್ನು ಕೊಡು ಎಂದು ಕೇಳಿದಕ್ಕೆ ಹರೀಶನ್ನು ಬೋಜಿಯೊಂದಿಗೆ ಜಗಳ ತೆಗೆದು ಕತ್ತಿಯಿಂದ ಕಡೆಯಲು ಬಂದು ತಾಯಿಯನ್ನು ತಡೆಯಲು ಹೋದ ರಾಮುವಿಗೆ ತಲೆಯ ಮುಂಭಾಗಕ್ಕೆ ತಾಗಿ ಗಾಯವಾಗಿದ್ದು ಕೊಟ್ಟ ಪುಕಾರಿನ್ವಯ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ,

Monday, February 14, 2011

ಕಳ್ಳತನ ಪ್ರಕರಣ:

ದಿ: 13-2-2011 ರಂದು ಪಿರ್ಯಾದಿ ಎಂ.ಪಿ.ಕೇಶವ್‌ ರವರ ತಮ್ಮ ಎಂ.ಪಿ ರವೀಂದ್ರ ಕಾಮತ್‌ ರವರು ಗೋಣಿಕೊಪ್ಪ ನಗರದ ಮನೋಹರರವರ ಮನೆಯಲ್ಲಿ ಬಾಡಿಗಗೆ ವಾಸವಾಗಿದ್ದು ದಿ: 11/02/11 ರಂದು ಅವರು ಸಂಸಾರದೊಂದಿಗೆ ಮಂಗಳೂರಿಗೆ ಹೋಗಿದ್ದು ರವೀಂದ್ರರವರ ಮನೆಯ ಬೀಗವನ್ನು ಯಾರೋ ಕಳ್ಳರು ಮುರಿದು ಗ್ರಾಡೇಜ್‌ ನಿಂದ 40,000/-ನಗದು ಹಾಗೂ 15 ಪೌನಿನಷ್ಟು ಚಿನ್ನಭರಣ ಒಟ್ಟು ಮೌಲ್ಯ 2,00,000/- ಗಳಾಗಿದ್ದು ಯಾರೋಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ಗೋಣಿಕೊಪ್ಪ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

ಆತ್ಮಹತ್ಯೆಯ ಪ್ರಕರಣ:

ದಿ: 13.2.11 ರಂದು ಸಿದ್ಥಾಪುರ ಠಾಣಾ ವ್ಯಾಪ್ತಿಯ ನೆಲ್ಲಿಹುದಿಕೇರಿ ಗ್ರಾಮದ ಪ್ರೇಮ ರವರ ಮಗಳು ಸುಮಿ ಪ್ರಾಯ 21 ವರ್ಷ ಎಂಬವಳು ನೀನು ಯಾರನ್ನು ಪ್ರೀತಿಸಬೇಡ ನಾವು ನೋಡುವ ಹುಡುಗ ಮದುವೆಯಾಗು ತಾಯಿ ಬುದ್ಧಿವಾದ ಹೇಳಿದ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆ ಗೊಂಡು ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿರುವುದಾಗಿ ಕೊಟ್ಟ ಪುಕಾರಿನ್ವಯ ಸಿದ್ಧಾಪುರ ಠಾಣೆ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ..

Saturday, February 12, 2011

ಲಾರಿ ಬೈಕ್‌ಗೆ ಡಿಕ್ಕಿ ಸವಾರರಿಬ್ಬರಿಗೆ ಗಾಯ:

ದಿನಾಂಕ 11-2-2011 ರಂದು ಮಡಿಕೇರಿ ಸಂಚಾರಿ ಠಾಣಾ ವ್ಯಾಪ್ತಿಯ ಮಡಿಕೇರಿ ನಗರದ ಐಟಿಐ ಜಂಕ್ಷನ್‌ನಲ್ಲಿ ಫಿರ್ಯಾದಿ ನಂಜುಂಡ ಸ್ವಾಮಿ ಎಂಬವರು ಪುಟ್ಟ ಎಂಬವರ ಮೋಟಾರ್‌ ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಆರೋಪಿ ಲಾರಿ ಚಾಲಕ ಸುರೇಶ್‌ ತನ್ನ ಲಾರಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ ಮೋಟಾರ್‌ ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಮೋಟಾರ್‌ ಸೈಕಲ್‌ ಸವಾರ ಪುಟ್ಟ ಹಾಗೂ ಹಿಂಬದಿ ಸವಾರ ಫಿರ್ಯಾದಿ ಇವರಿಗೆ ಗಾಯಗಳಾಗಿದ್ದು, ಸಂಚಾರಿ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ವರದಕ್ಷಿಣೆ ಕಿರುಕುಳ, ಪ್ರಕರಣ ದಾಖಲು:

ಕುಶಾಲನಗರ ಠಾಣಾ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ವಾಸಿ ಫಿರ್ಯಾದಿ ಶ್ರೀಮತಿ ಸುಧಾ ಬಿ.ಎಸ್‌. ರವರು ದಿನಾಂಕ 15-10-2009 ರಂದು ಆರೋಪಿ ಕೆ.ಎಂ. ಮೋಹನ್‌ ರವರನ್ನು ಮದುವೆಯಾಗಿದ್ದು, ವರದಕ್ಷಿಣೆ ರೂಪದಲ್ಲಿ 1 ಲಕ್ಷ ರೂ.ಗಳನ್ನು, 150 ಗ್ರಾಮ ಚಿನ್ನ ಹಾಗೂ 05.00 ಸೆಂಟ್‌ ಜಾಗವನ್ನು ನೀಡಿ, ತದನಂತರ 10 ಸೆಂಟ್‌ ಜಾಗವನ್ನು ಆರೋಪಿಯ ಒತ್ತಾಯದ ಮೇರೆಗೆ ಫಿರ್ಯಾದಿಯ ಹೆಸರಿಗೆ ಫಿರ್ಯಾದಿಯ ತಂದೆಯ ಮನೆಯಿಂದ ಕೊಟ್ಟಿರುವುದಾಗಿದೆ. ಆರರೂ ಆರೋಪಿಗಳಾದ ಕೆ.ಎಂ. ಮೋಹನ್‌, ವಿಶಾಲಾಕ್ಷಿ, ಗಿರಿಜಮ್ಮ, ಲೀಲಾವತಿ ಮತ್ತು ಸಂತೋಷ ಇವರು ಸೇರಿ ಫಿರ್ಯಾದಿಗೆ ಮಾನಸಿಕ ಇನ್ನೂ ವರದಕ್ಷಿಣೆ ಹಣ ತರುವಂತೆ ಹಿಂಸಿಸುವುದು, ನಿನಗೆ ವಯಸ್ಸಾಗಿದೆ ಎಂದು ವಿವಾಹ ವಿಚ್ಚೇದನೆ ನೀಡುವಂತೆ ಮಾನಸಿಕ ಮತ್ತು ದೂಹಿಕ ಹಿಂಸೆ ನೀಡುತ್ತಿರುವುದಾಗಿ ಆಪಾದಿಸಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

Friday, February 11, 2011

ದಾರಿ ತಡೆದು ವ್ಯಕ್ತಿಗೆ ಕೊಲೆ ಬೆದರಿಕೆ:
ದಿನಾಂಕ 10-2011 ರಂದು ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಗಣಗೂರು ಗ್ರಾಮದಲ್ಲಿ ಫಿರ್ಯಾದಿ ಎಂ.ಎಸ್‌. ಪ್ರದೀಪ್‌ ಎಂಬವರು ಅವರಿಗೆ ಸೇರಿದ ಆಟೋ ರಿಕ್ಷಾದಲ್ಲಿ ಮನೆಯ ಕಡೆಗೆ ಹೋಗುತ್ತಿರುವಾಗ ಆರೋಪಿಗಳಾದ ಶಿವರಾಜ್‌ ಹಾಗೂ ಮೋಹನ್‌ ಎಂಬವರು ಫಿರ್ಯಾದಿಯ ಆಟೋ ರಿಕ್ಷಾವನ್ನು ತಡೆದು ನಿಲ್ಲಿಸಿ ಕತ್ತಿ ದೊಣ್ಣೆಗಳನ್ನು ಹಿಡಿದುಕೊಂಡು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಮಹಿಳೆಗೆ ಕೊಲೆ ಬೆದರಿಕೆ, ಪ್ರಕರಣ ದಾಖಲು:
ದಿನಾಂಕ 10-2-2011 ರಂದು ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಹೆಮ್ಮನೆ ಗ್ರಾಮದ ಫಿರ್ಯಾದಿ ಶ್ರೀಮತಿ ಫಾತೀಮ ಎಂಬವರನ್ನು ಆರೋಪಿ ಶಾಹಿದ್‌ ಎಂಬವನು ತನ್ನನ್ನು ಮದುವೆ ಯಾಗು ಇಲ್ಲದೆ ಹೋದರೆ ನಿನ್ನನ್ನು ಕೊಲೆ ಮಾಡುತ್ತೇನೆಂದು ಜೀವ ಬೆದಕರಿ ಹಾಕಿದ್ದು, ಈ ಸಂಬಂಧ ಫಿರ್ಯಾದಿಯವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿರುತ್ತಾರೆ.

Thursday, February 10, 2011

ವಿನಾಹ ಕಾರಣಕ್ಕಾಗಿ ವ್ಯಕ್ತಿಯ ಮೇಲೆ ಹಲ್ಲೆ:
ದಿ: 8-2-11 ರಂದು ಭಾಗಮಂಡಲ ಠಾಣಾ ವ್ಯಾಪ್ತಿಯ ಎಳ್ಳುಕೊಚ್ಚಯಲ್ಲಿ ಪಿರ್ಯಾದರವರಾದ ಪಿ..ಟಿ. ರಾಜು ಸ್ನೇಹಿತರೊಂದಿಗೆ ಮಾತ್ತನಾಡುತ್ತಿರುವಾಗ್ಗೆ ಆರೋಪಿಗಳಾದ ರೀಯಾಜ್‌, ಲತೀಪ್‌, ಪ್ರಸನ್ನ ಪಿರ್ಯಾದಿಯವರಿಗೆ ಹೊಡೆದು ನೋವುಪಡಿಸಿರುವುದಲ್ಲದೇ ಕೊಲೆ ಬೆದರಿಕೆ ಹಾಕಿರುವುದಾಗಿ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ಭಾಗಮಂಡಲ ಪೊಲೀಸ್‌ ಠಾಣೆ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

2) ವಿರಾಜಪೇಟೆ ಗ್ರಾಮಾಂತರ ವ್ಯಾಪ್ತಿಯ ದೇವಣಗೇರಿ ಹರಿಜನ ಕಾಲೋನಿಯ ಪೊನ್ನಕ್ಕಿ ಎಂಬವರು ಕೂಲಿಕೆಲಸ ಮುಗಿಸಿ ಕೊಂಡು ಬರುತ್ತಿರುವಾಗ್ಗೆ ಆರೋಪಿಯಾದ ಲೋಕೇಶ್‌ ಮತ್ತು ಆತನ ತಾಯಿ ಚುಚ್ದು ಎಂಬವರು ಹಳೆಯ ವೈಷಮದಿಂದ ದೊಣ್ಣೆಯಿಂದ ಪೊನ್ನಕಿ ರವರಿಗೆ ಹೊಡೆದು ನೋವುಂಟು ಮಾಡಿರುವುದರಿಂದ ಕೊಟ್ಟ ಪುಕಾರಿನ್ವಯ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.

ಹುಡುಗ ಕಾಣೆ ಪ್ರಕರಣ:
ಶನಿವಾರಸಂತೆ ಪೊಲೀಸ್‌ ಠಾಣಾ ವ್ಯಾಪ್ತಿ ಬೀಟಿಕಟ್ಟೆ ಗ್ರಾಮದ ಪಿರ್ಯಾದಿ ಬಿ.ಎನ್‌ ರಾಜುರವರ ಮಗ ಬಿ.ಆರ್‌. ಪ್ರದೀಪನ್ನು ಗೌಡಹಳ್ಲಿ ಪೌಡ ಶಾಲೆಯಲ್ಲಿ 10 ನೇ ತರಗತಿ ವಿದ್ಯಾಬ್ಯಾಸ ಮಾಡುತ್ತಿದ್ದು ದಿ: 8-2-11 ರಂದು ಶಾಲೆಗೆ ಹೋಗುವುದಾಗಿ ತಿಳಿಸಿ ಶಾಲೆಗೆ ಹೋಗದೇ ವಾಪಾಸ್ಸು ಮನೆಗೆ ಬಾರದೆ ಎಲ್ಲಿಯೂ ಹುಡುಕಿದ್ದಲ್ಲೂ ಪತ್ತೆಯಾಗದೇ ಪಿರ್ಯಾದಿ ರಾಜುರವರು ಕೊಟ್ಟ ಪುಕಾರಿನ್ವಯ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

Wednesday, February 9, 2011

ರಸ್ತೆ ಅಪಘಾತ ಪ್ರಕರಣ:

ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಅಪ್ಪಂಗಳ ಗ್ರಾಮದ ಬಳಿ ಮಾದಯಂಡ ಟಿ.ಶಂಬು ರವರು ತನ್ನ ಮೋಟಾರ್‌ ಸೈಕಲ್‌ ನಲ್ಲಿ ಮಡಿಕೇರಿ ಬರುತ್ತಿರುವಾಗ್ಗೆ ಅಪ್ಪಂಗಳ ಎಲಕ್ಕಿ ಸಂಶೋಧನಾ ಕೇಂದ್ರದ ಬಳಿ ಆರೋಪಿ ಕೆ.ಎ.19 ಬಿ 7799 ಬಸ್ಸಿನ ಚಾಲಕ ಆತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಬೈಕ್‌ಗೆ ಡಿಕ್ಕಿ ಪಡಿಸಿದ ಪರಿಣಾಮ ಬೈಕ್‌ ಜಖಂಗೋಡು ಪಿರ್ಯಾದಿರವರ ಬಲ ಕಾಲು ,ತೊಡೆ ಹಾಗೂ ಬಲ ಕೈ ಗಾಯವಾದ ಪರಿಣಾಮ ಮಡಿಕೇರಿ ಗ್ರಾ ಮಾಂತರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

ವ್ಯಕ್ತಿಯ ಮೇಲೆ ಹಲ್ಲೆ:

ದಿ: 8-2-೧೧ ರಂದು ಸಿದ್ದಾಪುರ ಪೊಲೀಸ್‌ ಠಾಣೆಯ ಪಿಎಸ್‌ಐರವರು ಪಾಲಿಬೆಟ್ಟ ಟೌನ್‌ನಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಆರೋಪಿಗಳಾದ ಜೆ.ಎ ಗಣೇಶ ಮತ್ತು ರಾಜಪ್ಪನವರಗಳು ಕೆಎ 12 ರರ86 ರ ಆಟೋವಿನಲ್ಲಿ ಆರೋಪಿ ಗಣೇಶನ್ನು ಕೆಲಸಮಾಡುತ್ತಿದ್ದ ಮೆಕೂರು ಹೋಸ್ಕೇರಿ ಗ್ರಾಮದ ಸಾಹುಕಾರರಾದ ರಾಮ್‌ದಾಸ್‌‌ ಸುಬ್ರಮಣಿ ಕಾಫಿ ಎಸ್ಟೇಟ್‌‌ ಗೋಡಾನ್‌ ನಿಂದ ರೂ 10000/- ಮೌಲ್ಯದ ಕಾಫಿಯನ್ನು ಕಳುವು ಮಾಡಿಕೊಂಡು ಅಂಗಡಿ ಮಾರಾಟಾ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ ಮೇರೆಗೆ ಕಳವು ಮಾಲುನ್ನು ವಶಕ್ಕೆ ತೆಗೆದುಕೊಂಡು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

Tuesday, February 8, 2011

ಅಕ್ರಮ ಕೂಟ ಸೇರಿ ವ್ಯಕ್ತಿಯ ಮೇಲೆ ಹಲ್ಲೆ:

ದಿನಾಂಕ 7-2-2011 ರಂದು ಶ್ರೀಮಂಗಲ ಪೊಲೀಸ್‌‌ ಠಾಣಾ ವ್ಯಾಪ್ತಿಯ ಬಿರುನಾಣಿ ಗ್ರಾಮದಲ್ಲಿ ಆರೋಪಿಗಳಾದ ಕಲ್ಕಂಡ ಪೂಣಚ್ಚ ಹಾಗೂ ಇತರೆ 7 ಜನರು ಅಕ್ರಮ ಕೂಟ ಸೇರಿಕೊಂಡು ಕಲ್ಲು ದೊಣ್ಣೆಯಂತಹ ಮಾರಕ ಅಸ್ತ್ರಗಳನ್ನು ಹಿಡಿದುಕೊಂಡು ಫಿರ್ಯಾದಿ ಬೊಟ್ಟಂಗಡ ಪೆಮ್ಮಯ್ಯರವರನ್ನು ಕೊಲೆ ಮಾಡುವ ಉದ್ದೇಶದಿಂದ ಹೊಡೆದು ಕೊಲೆ ಮಾಡುವ ಬೆದರಿಕೆ ಹಾಕಿದ್ದು, ಈ ಸಂಬಂಧ ವಿರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಫಿರ್ಯಾದಿ ದಾಖಲಾಗಿದ್ದು, ಅಲ್ಲಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಅನಾರೋಗ್ಯದ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮಹಿಳೆಯ ಆತ್ಮಹತ್ಯೆ:

ದಿನಾಂಕ 28-1-2011 ರಂದು ವಿರಾಜಪೇಟೆ ಗ್ರಾಮಾಂತರ ಠಾಣೆ ವ್ಯಾಪ್ತಿಯ ಕೆದಮುಳ್ಳೂರು ಗ್ರಾಮದಲ್ಲಿ ಲೀನಾ ಎಂಬ ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದು ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥಳಾದ ಆಕೆಯನ್ನು ಕೇರಳದ ಪೆರಿಯಾರ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 8-2-2011 ರಂದು ಮೃತಪಟ್ಟಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Monday, February 7, 2011

ರಸ್ತೆ ಅಫಘಾತ, ವ್ಯಕ್ತಿಗೆ ಗಾಯ

 • ರಸ್ತೆ ಅಫಘಾತದಲ್ಲಿ ವ್ಯಕ್ತಿಯೋರ್ವ ಗಾಯಗೊಂಡಿರುವ ಘಟನೆ ವಿರಾಜಪೇಟೆ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದಿನಾಂಕ 6/2/2011ರ ರಾತ್ರಿ 10 ಗಂಟೆಗೆ ವಿರಾಜಪೇಟೆ ನಗರದ ಗಾಯತ್ರಿ ಪೆಟ್ರೋಲ್‌ ಬಂಕ್ ಬಳಿ ಪೊಲೀಸ್ ಜೀಪೊಂದು ನಿಲುಗಡೆಗೆಂದು ಬರುತ್ತಿದ್ದಾಗ ಜೀಪು ಚಾಲಕ ಆರೋಪಿ ಮೋಹನ ಎಂಬಾತನು ಅಜಾಗರೂಕತೆಯಿಂದ ಜೀಪನ್ನು ಒಮ್ಮೆಲೆ ಬಲಗಡೆಗೆ ತಿರುಗಿಸಿದ ಪರಿಣಾಮ ಜೀಪು ಎದುರುಗಡೆಯಿಂದ ಬರುತ್ತಿದ್ದ ಕೆಎ19ಕ್ಯು8624ರ ಮೋಟಾರು ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರು ಸೈಕಲ್ ಸವಾರರು ಗಾಯಗೊಂಡಿರುವ ಬಗ್ಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ

 • ಜೀವನದಲ್ಲಿ ಜುಗುಪ್ಸೆಗೊಂಡು ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಪಾಲಿಬೆಟ್ಟ ರಸ್ತೆಯಲ್ಲಿ ನಡೆದಿದೆ. ಇಂದು ಬೆಳಿಗ್ಗೆ ಪಾಲಿಬೆಟ್ಟ ರಸ್ತೆಯ ನಿವಾಸಿ ಚಂದ್ರಕುಮಾರ್ ಎಂಬವರು ಜೀವನದಲ್ಲಿ ಜುಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, February 5, 2011

ದಿ: 4-2-11 ರಂದು ಸಮಯ 4-30 ಗಂಟೆಗೆ ವಿರಾಜಪೇಟೆ ನಗರದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಬಳಿಮೋಹನ್‌ ಪೆಟ್ರೋಲ್‌ ಬಂಕ್‌ ಹತ್ತಿರ ಪಿರ್ಯಾದಿದವರಾದ ಕಾರ್ಯಪನವರು ನಿಂತಿರುವಾಗ್ಗೆ ಆರೋಫಿಯಾದ ಎಂ.ಕೆ. ನವಾಜ್‌ ವಿರಾಜಪೇಟೆ ಯವನ್ನು ಶಾಲಾ ವಿದ್ಯಾರ್ಥಿಯರನ್ನು ನೋಡಿಕೊಂಡು ತಮಾಷೆ ಮಾಡುತ್ತಿರುವಾಗ್ಗೆ ಪಿರ್ಯಾದಿಯವರು ಆರೋಪಿಯನ್ನು ಎಕೆ ತಮಾಷೆ ಮಾಡುತ್ತೀಯ ಎಂದು ಕೇಳಿದಾಗ ಸದರಿ ಆರೋಪಿಯು ಪಿರ್ಯಾದಿಯವರಿಗೆ ಕೈಯಿಂದ ಹೊಡೆದು ಕೊಲೆ ಬೆದರಿಕೆ ಹಾಕಿರುವುದಾಗಿ ಕೊಟ್ಟ ಪುಕಾರಿನ್ವಯ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

ಕಳ್ಳತನ ಪ್ರಕರಣ:
ಕುಟ್ಟ ಪೊಲೀಸ್ ಠಾಣಾ ವ್ಯಾಫ್ತಿಯ ಬಾಡಗ ಗ್ರಾಮ ಪಿರ್ಯಾದಿದವರಾಧ ಉದಿಯಂಡ ಸುನಿಲ್‌ ಸುಬ್ಬಯ್ಯ ಬಾರ್‌ ಮಾಲೀಕರು ದಿ: 4-2-11 ರ ರಾತ್ರಿ 9:30 ಗಂಡೆ ಬಾರಿನ ವ್ಯವಹಾರ ಮುಗಿಸಿ ಕ್ಯಾಷಿಯರ್‌ ಗಣೇಶ್‌ ಹಾಗೂ ಹೆಲ್ಪರ್‌ನೊಂದಿಗೆ ಮಾತು ಮುಗಿಸಿ ರೂ 20,000/-ನ್ನು ಕ್ಯಾಷ್‌ ಕೌಂಟರ್‌ನಲ್ಲಿಟ್ಟು ಬಾರ್‌ನ ಮುಂಭಾಗದ ಸೆಟರ್‌ಗೆ ಬೀಗ ಹಾಕಿ ಹೋಗಿದ್ದು 05-2-11 ರಂದು ಬೆಳಿಗ್ಗೆ 8:00 ಗಂಟೆಗೆ ಬಂದು ನೋಡಲಾಗಿ ಬಾರ್‌ನ ಮುಂಭಾಗದ ಶೆಟರ್ಸ್‌ನ ಬೀಗನವನು ಯಾರೋ ಕಳ್ಳರು ಆಯುಧದಿಂದ ಲಾಕ್‌ ತೆಗೆದು 20000/- ನಗದು ಹಣಮತ್ತು 2430/- ಬೆಲೆ ಬಾಳುವ ಮಧ್ಯವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಕೊಟ್ಟ ಪುಕಾರಿನ್ವ ಕುಟ್ಟ ಪೊಲೀಸ್‌ ಠಾಣೆ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿರುತ್ತಾರೆ.

Friday, February 4, 2011

ಭಗವಾಧ್ವಜವನ್ನು ಕಿತ್ತು ಹರಿದು ಹಾಕೆದ ಬಗ್ಗೆ ಪ್ರಕರಣ:

ದಿನಾಂಕ 4-2-2011 ರಂದು ಸೋಮವಾರಪೇಟೆ ಠಾಣೆಯ ಸರಹದ್ದಿನ ಹೊಸತೋಟ ಗ್ರಾಮದಲ್ಲಿ ಸುಮಾರು 10 ವರ್ಷದಿಂದ ಭಗವಾಧ್ವಜ ನಿರ್ಮಿಸಿದ್ದು ದಿನಾಂಕ 3-2-2011 ರಂದು ರಾತ್ರಿವೇಳೆ ಯಾರೋ ದುಷ್ಕರ್ಮಿಗಳು ಸದರಿ ಭಗವಾಧ್ವಜವನ್ನು ಕಂಬದಿಂದ ಕಿತ್ತು ಹರಿದು ಹಾಕಿದ್ದು ಫಿರ್ಯಾದಿ ಕೆ.ಕೆ. ಯೋಗಾನಂದ ರವರು ನೀಡಿಡ ದೂರಿನ ಮೇರೆ ಪ್ರಕರಣವನ್ನು ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.
ಅನಾರೋಗ್ಯದ ಕಾರದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯ ಆತ್ಮಹತ್ಯೆ.
ದಿನಾಂಕ 3-2-2011 ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕರ್ಣಂಗೇರಿ ಗ್ರಾಮದಲ್ಲಿ ತಿಮ್ಮಯ್ಯ ಎಂಬ ವ್ಯಕ್ತಿ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದರೂ ಯಾವುದೇ ಪ್ರಯೋಜನವಾಗಲಿಲ್ಲ ವೆಂದು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.
ಕಳವು ಪ್ರಕರಣ
ದಿನಾಂಕ 2-2-2011 ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕೆ.ಚಟ್ಟಳ್ಳಿ ಗ್ರಾಮದಲ್ಲಿ ಫಿರ್ಯಾದಿ ಕೆ. ಕೋಯ ಎಂಬವರಿಗೆ ಸೇರಿದ ಹೋಟೇಲ್‌ನ ಹಿಂಬಾಗಿಲಿನಿಂದ ಯಾರೋ ಕಳ್ಳರು ಒಳಗೆ ಪ್ರವೇಶಿಸಿ ಗ್ಯಾಸ್‌ ಸ್ಟೌ,ಸಿಂಲೆಂಡರ್‌ ಹಾಗೂ 4 ಪಾತ್ರೆಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

Thursday, February 3, 2011

ವಾಹನ ಅಪಘಾತ ಸ್ವರಾಜ್‌ ಮಜ್ದಾ ಜಖಂ:

ದಿನಾಂಕ 2-2-11 ರಂದು ವಿರಾಜಪೇಟೆ ನಗರ ಠಾಣಾ ಸರಹದ್ದಿನ ಆರ್ಜಿ ಗ್ರಾಮದಲ್ಲಿ ಫಿರ್ಯಾದಿ ಆಸೀಸ್‌ ಎಂಬವರು ತನ್ನ ಬಾಪ್ತು ಸ್ವರಾಜ್‌ ಮಜ್ದಾ ವಾಹನವನ್ನು ಮನೆಯ ಮುಂಬಾಗದಲ್ಲಿ ನಿಲ್ಲಿಸಿದ್ದು, ಸದರಿ ವಾಹನಕ್ಕೆ ಆರೋಪಿ ಅಬೂಬಕರ್‌ ಕೆಎ-12 ಎ1331 ರ ಅಪೆ ಟ್ರಕ್‌ ಚಾಲಕ ಸದರಿ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಿಸಿ ಡಿಕ್ಕಿಪಡಿಸಿದ ಪರಿಣಾಮ ಫಿರ್ಯಾದಿಯವರ ಸ್ವರಾಜ್‌ ಮಜ್ದಾ ವಾಹನವು ಜಖಂಗೊಂಡಿರುವ ಬಗ್ಗೆ ದೂರು ನೀಡಿದ್ದು, ಅದರ ಮೇರೆಗೆ ವಿರಾಜಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ದಾರಿ ತಡೆದು ವ್ಯಕ್ತಿಗಳ ಮೇಲೆ ಹಲ್ಲೆ:

ದಿನಾಂಕ 2-2-2011 ರಂದು ಮಡಿಕೇರಿ ನಗರ ಠಾಣಾ ಸರಹದ್ದಿನ ಐಟಿಐ ಜಂಕ್ಷನ್‌ ಬಳಿ ಫಿರ್ಯಾದಿ ಪಾಂಡೀರ ಪೂಣಚ್ಚ ಎಂಬವರ್ಉ ಟೋನ್‌ ಎಂಬವರ ಜೋತೆಯಲ್ಲಿ ನಿಂತಿದ್ದಾಗ ಆರೋಪಿಗಳಾದ ಅಶ್ರಫ್‌, ಜಾವಿದ್‌ ಮತ್ತು ಅಬ್ದುಲ್‌ ಖುರೇಶಿ ಎಂಬವರು ಮೋಟಾರ್‌ ಸೈಕಲ್‌ನಲ್ಲಿ ಅಲ್ಲಿಗೆ ಬಂದು ಫಿರ್ಯಾದಿಯವರನ್ನು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಾಗೂ ಕಬ್ಬಿಣದ ರಾಡಿನಿಂದ ಫಿರ್ಯಾದಿ ಮತ್ತು ಟೋನ್‌ರವರ ಮೇಲೆ ಹಲ್ಲೆನಡೆಸಿದ್ದು ಅಲ್ಲದೆ ಚೂರಿಯನ್ನು ತೋರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆ ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

Wednesday, February 2, 2011

ಆನಾರೋಗ್ಯದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ಮಹಿಳೆ ಆತ್ಮಹತ್ಯೆ.

ದಿನಾಂಕ 1-2-2011 ರಂದು ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ದೊಡ್ಡಕೊಡ್ಲಿ ಗ್ರಾಮದ ನಿವಾಸಿ ಶ್ರೀಮತಿ ಶಶಿಕಲ ಎಂಬವರು ಹಲವು ವರ್ಷಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಜೀವನದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ಮನೆಯ ಹತ್ತಿರದಲ್ಲಿದ್ದ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Tuesday, February 1, 2011

ಕೆರೆಯಲ್ಲಿ ಹಾರಿ ವ್ಯಕ್ತಿಯ ಆತ್ಮಹತ್ಯೆ:
ದಿ: 31-1-11 ರಂದು ಸಿದ್ದಾಪುರ ಪೊಲೀಸ್ ಠಾಣಾ ವ್ಯಾಫ್ತಿಯ ಚೌಡಿಕಾಡು ಎಸ್ಸೇಟ್‌, ಬಾಣಂಗಾಲ ಗ್ರಾಮದ ನಿವಾಸಿಪಿರ್ರ್ಯಾದಿ ಯವರಾದ ಗೋಪಾಲ ರವರ ತಂಗಿಯ ಮಗ ವಿನೋದ ಪ್ರಾಯ 27 ವರ್ಷ,ಸುಮಾರು ತಿಂಗಳಿನಿಂದ ಮಾನಸಿಕ ರೋಗದಿಂದ ಬಳಲುತ್ತಿದ್ದು ಅಸ್ಪತ್ರೆಗಳಲ್ಲಿ ಜೌಷದಿ ತೆಗೆದು ಕೊಂಡರು ವಾಸಿಯಾಗದೇ ಜೀವನದಲ್ಲಿ ಜಿಗುಪ್ಸೆ ಗೊಂಡು ಕರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.
ಕುಲಕ್ಷ ಕಾರಣಕ್ಕಾಗಿ ವ್ಯಕ್ತಿಯ ಮೇಲೆ ಹಲ್ಲೆ:
ದಿ: 31-1-2011 ರಂದು ಕುಟ್ಟ ಪೊಲೀಸ್‌ ಠಾಣಾ ವ್ಯಾಫ್ತಿಯ ಕೇಂಬುಕೊಲ್ಲಿ ಬಿಸಿ ಬಾರ್‌ ಪಕ್ಕ ಬಾಡಗ ಗ್ರಾಮ ಪಿರ್ಯಾದಿ ವರಾದ ಶ್ರೀಮತಿ ರಾಧ ಅವರ ಗಂಡ ವೇಲುಯುಧನ್‌ ಕೂಲಿ ಕೆಲಸ ಮುಗಿಸಿಕೊಂಡು ಜೀಪಿನಲ್ಲಿ ಬರುತ್ತಿರುವಾಗ ಜೀಪಿನ್ನು ನಿಲ್ಲಿಸಿ ತರಕಾರಿ ತರಲೆಂದು ಇಳಿದಾಗ ರಸ್ತೆಯಲ್ಲಿ ಬದಿಯಲ್ಲಿ ನಿಂತಿದ್ದ ಆರೋಪಿಯಾದ ಸುನೀಶನ್ನು ಅಲ್ಲಿ ಬಂದಾಗ ಪಿರ್ಯಾದಿ ತಮ್ಮ ಪ್ರಭಾರಕನ್ನ್ನೊಂದಿಗೆ ಮಾತಿಗೆ ಮಾತು ಬೆಳಸಿ ಜಗಳ ತೆಗೆದು ಜೀಪಿನಲ್ಲಿ ಇದ್ದ ದೊಣ್ಣೆಯಿಂದ ವೇಲಾಯುಧನ್‌ ಹೊಟ್ಟೆಗೆ ಎದೆಗೆ ಹೊಡೆದು ಕಾಲಿನಿಂದ ಒದ್ದು ನೋವು ಪಡಿಸಿರುವುದಾಗಿ ಕೊಟ್ಟ ಪುಕಾರಿನ ಮೇಲೆ ಕುಟ್ಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.