Friday, February 11, 2011

ದಾರಿ ತಡೆದು ವ್ಯಕ್ತಿಗೆ ಕೊಲೆ ಬೆದರಿಕೆ:
ದಿನಾಂಕ 10-2011 ರಂದು ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಗಣಗೂರು ಗ್ರಾಮದಲ್ಲಿ ಫಿರ್ಯಾದಿ ಎಂ.ಎಸ್‌. ಪ್ರದೀಪ್‌ ಎಂಬವರು ಅವರಿಗೆ ಸೇರಿದ ಆಟೋ ರಿಕ್ಷಾದಲ್ಲಿ ಮನೆಯ ಕಡೆಗೆ ಹೋಗುತ್ತಿರುವಾಗ ಆರೋಪಿಗಳಾದ ಶಿವರಾಜ್‌ ಹಾಗೂ ಮೋಹನ್‌ ಎಂಬವರು ಫಿರ್ಯಾದಿಯ ಆಟೋ ರಿಕ್ಷಾವನ್ನು ತಡೆದು ನಿಲ್ಲಿಸಿ ಕತ್ತಿ ದೊಣ್ಣೆಗಳನ್ನು ಹಿಡಿದುಕೊಂಡು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಮಹಿಳೆಗೆ ಕೊಲೆ ಬೆದರಿಕೆ, ಪ್ರಕರಣ ದಾಖಲು:
ದಿನಾಂಕ 10-2-2011 ರಂದು ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಹೆಮ್ಮನೆ ಗ್ರಾಮದ ಫಿರ್ಯಾದಿ ಶ್ರೀಮತಿ ಫಾತೀಮ ಎಂಬವರನ್ನು ಆರೋಪಿ ಶಾಹಿದ್‌ ಎಂಬವನು ತನ್ನನ್ನು ಮದುವೆ ಯಾಗು ಇಲ್ಲದೆ ಹೋದರೆ ನಿನ್ನನ್ನು ಕೊಲೆ ಮಾಡುತ್ತೇನೆಂದು ಜೀವ ಬೆದಕರಿ ಹಾಕಿದ್ದು, ಈ ಸಂಬಂಧ ಫಿರ್ಯಾದಿಯವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿರುತ್ತಾರೆ.