Saturday, February 12, 2011

ಲಾರಿ ಬೈಕ್‌ಗೆ ಡಿಕ್ಕಿ ಸವಾರರಿಬ್ಬರಿಗೆ ಗಾಯ:

ದಿನಾಂಕ 11-2-2011 ರಂದು ಮಡಿಕೇರಿ ಸಂಚಾರಿ ಠಾಣಾ ವ್ಯಾಪ್ತಿಯ ಮಡಿಕೇರಿ ನಗರದ ಐಟಿಐ ಜಂಕ್ಷನ್‌ನಲ್ಲಿ ಫಿರ್ಯಾದಿ ನಂಜುಂಡ ಸ್ವಾಮಿ ಎಂಬವರು ಪುಟ್ಟ ಎಂಬವರ ಮೋಟಾರ್‌ ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಆರೋಪಿ ಲಾರಿ ಚಾಲಕ ಸುರೇಶ್‌ ತನ್ನ ಲಾರಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ ಮೋಟಾರ್‌ ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಮೋಟಾರ್‌ ಸೈಕಲ್‌ ಸವಾರ ಪುಟ್ಟ ಹಾಗೂ ಹಿಂಬದಿ ಸವಾರ ಫಿರ್ಯಾದಿ ಇವರಿಗೆ ಗಾಯಗಳಾಗಿದ್ದು, ಸಂಚಾರಿ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ವರದಕ್ಷಿಣೆ ಕಿರುಕುಳ, ಪ್ರಕರಣ ದಾಖಲು:

ಕುಶಾಲನಗರ ಠಾಣಾ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ವಾಸಿ ಫಿರ್ಯಾದಿ ಶ್ರೀಮತಿ ಸುಧಾ ಬಿ.ಎಸ್‌. ರವರು ದಿನಾಂಕ 15-10-2009 ರಂದು ಆರೋಪಿ ಕೆ.ಎಂ. ಮೋಹನ್‌ ರವರನ್ನು ಮದುವೆಯಾಗಿದ್ದು, ವರದಕ್ಷಿಣೆ ರೂಪದಲ್ಲಿ 1 ಲಕ್ಷ ರೂ.ಗಳನ್ನು, 150 ಗ್ರಾಮ ಚಿನ್ನ ಹಾಗೂ 05.00 ಸೆಂಟ್‌ ಜಾಗವನ್ನು ನೀಡಿ, ತದನಂತರ 10 ಸೆಂಟ್‌ ಜಾಗವನ್ನು ಆರೋಪಿಯ ಒತ್ತಾಯದ ಮೇರೆಗೆ ಫಿರ್ಯಾದಿಯ ಹೆಸರಿಗೆ ಫಿರ್ಯಾದಿಯ ತಂದೆಯ ಮನೆಯಿಂದ ಕೊಟ್ಟಿರುವುದಾಗಿದೆ. ಆರರೂ ಆರೋಪಿಗಳಾದ ಕೆ.ಎಂ. ಮೋಹನ್‌, ವಿಶಾಲಾಕ್ಷಿ, ಗಿರಿಜಮ್ಮ, ಲೀಲಾವತಿ ಮತ್ತು ಸಂತೋಷ ಇವರು ಸೇರಿ ಫಿರ್ಯಾದಿಗೆ ಮಾನಸಿಕ ಇನ್ನೂ ವರದಕ್ಷಿಣೆ ಹಣ ತರುವಂತೆ ಹಿಂಸಿಸುವುದು, ನಿನಗೆ ವಯಸ್ಸಾಗಿದೆ ಎಂದು ವಿವಾಹ ವಿಚ್ಚೇದನೆ ನೀಡುವಂತೆ ಮಾನಸಿಕ ಮತ್ತು ದೂಹಿಕ ಹಿಂಸೆ ನೀಡುತ್ತಿರುವುದಾಗಿ ಆಪಾದಿಸಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸ ಮುಂದಿನ ತನಿಖೆ ಕೈಗೊಂಡಿರುತ್ತಾರೆ.