Thursday, February 24, 2011

ಲಾರಿ ಬೈಕಿಗೆ ಡಿಕ್ಕಿ ಇಬ್ಬರಿಗೆ ಗಾಯ:

ಈ ದಿನ ಬೆಳಿಗ್ಗೆ 7-30 ಗಂಟೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ತಾಳತ್‌ಮನೆ ಎಂಬಲ್ಲಿ ಫಿರ್ಯಾದಿ ತನ್ನ ಬಾಪ್ತು ಮೋಟಾರ್‌ ಸೈಕಲ್‌ನಲ್ಲಿ ಮಡಿಕೇರಿ ಕಡೆಗೆ ಬರುತ್ತಿರುವಾಗ ಆರೋಪಿ ಅಶೋಕ ಕೆಎ-25 ಸಿ7157ರ ಟ್ಟಿಪ್ಪರ್‌‌ ಲಾರಿಯ ಚಾಲಕ ಸದರಿ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಫಿರ್ಯಾದಿ ಎನ್‌.ಎ. ರೆಹಮತ್‌ ಆಲಿರವರ ಮೋಟಾರ್‌ ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಸದರಿ ಫಿರ್ಯಾದಿ ಹಾಗೂ ಅವರ ಜೊತೆಯಲ್ಲಿ ಪ್ರಯಾಣಿಸುತ್ತಿದ್ದ ರಿಜ್ವಾನ್‌ರವರಿಗೆ ಗಾಯಗಳಾಗಿರುತ್ತದೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಮಹಿಳೆಯ ಆತ್ಮಹತ್ಯೆ, ಪ್ರಕರಣದ ದಾಖಲು:

ದಿನಾಂಕ 23-2-2011 ರಂದು ಮಡಿಕೇರಿ ನಗರ ಠಾಣಾ ಸರಹದ್ದಿನ ಮಹದೇವಪೇಟೆಯಲ್ಲಿ ವಾಸಿಸುತ್ತಿರುವ 32 ವರ್ಷ ಪ್ರಾಯದ ರೀನಾ ಉತ್ತಪ್ಪ ಎಂಬವರು ಮನೆಯ ಬಚ್ಚಲು ಮನೆಯಲ್ಲಿ ಸುಟ್ಟ ಗಾಯಗಳಿಂದ ಮೃತ್ತಪಟ್ಟಿದ್ದು ಇವರು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿದೆ ಹಾಗೂ ಇವರ ಸಾವಿನ ಬಗ್ಗೆ ಸಂಶಯವಿರುದಾಗಿ ಮೃತಳ ತಾಯಿ ಶ್ರೀಮತಿ ಬಿ.ಎ. ಗಂಗಮ್ಮ ಎಂಬವರು ದೂರನ್ನು ನೀಡಿದ್ದು, ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಅನಾರೋಗ್ಯದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯ ಆತ್ಮಹತ್ಯೆ:

ದಿನಾಂಕ 23-2-2011 ರಂದು ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಚೂರಿಕಾಡು-ಬಾಡಗ ಗ್ರಾಮದ ನಿವಾಸಿ ರಮೇಶ ಎಂಬವನು ಗ್ಯಾಸ್ಟಿಕ್‌ ಕಾಯಿಲೆಯಿಂದ ಬಳಲುತ್ತಿದ್ದು, ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮದ್ಯವನ್ನು ಸೇವಿಸಿ ನಂತರ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟ್ಟ ಪೊಲೀಸರು ಈ ಸಂಬಂಧ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ಮುಂದಿ ಕ್ರಮವನ್ನು ಜರುಗಿಸಿರುತ್ತಾರೆ.