Thursday, February 10, 2011

ವಿನಾಹ ಕಾರಣಕ್ಕಾಗಿ ವ್ಯಕ್ತಿಯ ಮೇಲೆ ಹಲ್ಲೆ:
ದಿ: 8-2-11 ರಂದು ಭಾಗಮಂಡಲ ಠಾಣಾ ವ್ಯಾಪ್ತಿಯ ಎಳ್ಳುಕೊಚ್ಚಯಲ್ಲಿ ಪಿರ್ಯಾದರವರಾದ ಪಿ..ಟಿ. ರಾಜು ಸ್ನೇಹಿತರೊಂದಿಗೆ ಮಾತ್ತನಾಡುತ್ತಿರುವಾಗ್ಗೆ ಆರೋಪಿಗಳಾದ ರೀಯಾಜ್‌, ಲತೀಪ್‌, ಪ್ರಸನ್ನ ಪಿರ್ಯಾದಿಯವರಿಗೆ ಹೊಡೆದು ನೋವುಪಡಿಸಿರುವುದಲ್ಲದೇ ಕೊಲೆ ಬೆದರಿಕೆ ಹಾಕಿರುವುದಾಗಿ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ಭಾಗಮಂಡಲ ಪೊಲೀಸ್‌ ಠಾಣೆ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

2) ವಿರಾಜಪೇಟೆ ಗ್ರಾಮಾಂತರ ವ್ಯಾಪ್ತಿಯ ದೇವಣಗೇರಿ ಹರಿಜನ ಕಾಲೋನಿಯ ಪೊನ್ನಕ್ಕಿ ಎಂಬವರು ಕೂಲಿಕೆಲಸ ಮುಗಿಸಿ ಕೊಂಡು ಬರುತ್ತಿರುವಾಗ್ಗೆ ಆರೋಪಿಯಾದ ಲೋಕೇಶ್‌ ಮತ್ತು ಆತನ ತಾಯಿ ಚುಚ್ದು ಎಂಬವರು ಹಳೆಯ ವೈಷಮದಿಂದ ದೊಣ್ಣೆಯಿಂದ ಪೊನ್ನಕಿ ರವರಿಗೆ ಹೊಡೆದು ನೋವುಂಟು ಮಾಡಿರುವುದರಿಂದ ಕೊಟ್ಟ ಪುಕಾರಿನ್ವಯ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.

ಹುಡುಗ ಕಾಣೆ ಪ್ರಕರಣ:
ಶನಿವಾರಸಂತೆ ಪೊಲೀಸ್‌ ಠಾಣಾ ವ್ಯಾಪ್ತಿ ಬೀಟಿಕಟ್ಟೆ ಗ್ರಾಮದ ಪಿರ್ಯಾದಿ ಬಿ.ಎನ್‌ ರಾಜುರವರ ಮಗ ಬಿ.ಆರ್‌. ಪ್ರದೀಪನ್ನು ಗೌಡಹಳ್ಲಿ ಪೌಡ ಶಾಲೆಯಲ್ಲಿ 10 ನೇ ತರಗತಿ ವಿದ್ಯಾಬ್ಯಾಸ ಮಾಡುತ್ತಿದ್ದು ದಿ: 8-2-11 ರಂದು ಶಾಲೆಗೆ ಹೋಗುವುದಾಗಿ ತಿಳಿಸಿ ಶಾಲೆಗೆ ಹೋಗದೇ ವಾಪಾಸ್ಸು ಮನೆಗೆ ಬಾರದೆ ಎಲ್ಲಿಯೂ ಹುಡುಕಿದ್ದಲ್ಲೂ ಪತ್ತೆಯಾಗದೇ ಪಿರ್ಯಾದಿ ರಾಜುರವರು ಕೊಟ್ಟ ಪುಕಾರಿನ್ವಯ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.