Thursday, February 17, 2011

ಭಾಗಮಂಡಲ ಠಾಣಾ ವ್ಯಾಪ್ತಿಯ ಬೆಂಗೂರು ಗ್ರಾಮದ ನಿವಾಸಿ ಪಿರ್ಯಾದಿದಾರರಾದ ಎಂ.ಎಂ.ಮಂದಣ್ಣ ರವರ ಮನೆಯ ಸ್ಥಿರ ದೂರವಾಣಿ ಗೆ ಯಾವುದೋ ಅನಾಮದೇಯ ಪುರುಷ ವ್ಯಕ್ತಿಯು ಹಲವಾರು ಬಾರಿ ಕರೆಮಾಡಿ ಮಂದಣ್ಣರವರಿಗೆ ಬೆದರಿಕೆ ಮತ್ತು ಅವಾಚ್ಚಶಬ್ದಗಳಿಂದ ಬೈದಿರುತಾರುವುದಾಗಿ ಕೊಟ್ಟ ಪುಕಾರಿನ್ವಯ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣ:

ಶನಿವಾರಸಂತೆ ಠಾಣಾ ವ್ಯಾಫ್ತಿಯ ಮಾದೆ ಗ್ರಾಮ ದಲ್ಲಿ ದೇವಸ್ಥಾನದ ಕೆಲಸ ನಡೆಯುತ್ತಿರುವುದರಿಂದ ಆರೋಪಿ ಚಾಲಕ ಲಾರಿ ಸಂ: ಕೆಎ 13 3402 ಸದ್ರಿಲಾರಿಯ ಹಿಂಭಾಗ ಪಿರ್ಯಾದಿ ಎಂಎಸ್‌ . ವೀರೇಂದ್ರ ರವರ ತಂದೆ ಸಿದ್ದಲಿಂಗಯ್ಯರವರು ಮಾತನಾಡಿಕೊಂಡು ನಿಂತಿರುವಾಗ್ಗೆ ಆರೋಪಿ ಲಾರಿ ಚಾಲಕನ್ನು ಎಕಾಎಕಿಯಾಗಿ ಯಾವುದೇ ಮುನ್ಸೂಚನೆ ನೀಡದೇ ಹಿಂದಕ್ಕೆ ದಿಡೀರನೆ ಚಾಲಿಸಿದ ಪರಿಣಾಮ ಹಿಂಬದಿಯಲ್ಲಿ ನಿಂತಿದ್ದ ಸಿದ್ದಲಿಂಗಯ್ಯರವರ ಕಾಲುಗಳ ಮೇಲೆ ಲಾರಿ ಹರಿದ ಪರಿಣಾಮ ಕಾಲಿನ ತೊಡೆ ಭಾಗವು ಮುರಿದು ಹೋಗಿರುವುದಾಗಿ ಕೊಟ್ಟ ಪುಕಾರಿನ್ವಯ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

2) ಮಡಿಕೇರಿ ಟ್ರಾಪಿಕ್‌ ಠಾಣಾ ಸರಹದ್ದಿನ ಕೊಯಿನೂರು ರಸ್ತೆ ಜಂಕ್ಷನ್‌ ಮಡಿಕೇರಿ ನಗರ ಪಿರ್ಯಾದಿಯವರಾದ ಎಂ.ಎಸ್‌. ಚಂಗಪ್ಪ ನಡೆದುಕೊಂಡು ಹೋಗುತ್ತಿರುವಾಗ್ಗೆ ಆರೋಪಿ ಯಾದ ಮಂಜುನಾಥ ಜೆಸಿಬಿ ಚಾಲಕ ಸಂ: ಕೆಎ 5-ಎಂಎನ್‌ 1314ನ್ನು ದುಡುಕು ಮತ್ತು ನಿರ್ಲಕ್ಷತೆಯಿಂದ ಓಡಿಸಿಕೊಂಡು ಬಂದು ಪಿರ್ಯಾದಿಯವರಿಗೆ ಹಿಂದಿನಿಂದ ಡಿಕ್ಕಿ ಪಡಿಸಿದ ಪರಿಣಾಮ ಗಾಯವಾಗಿದ್ದು ಕೊಟ್ಟ ಪುಕಾರಿನ್ವಯ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಕೈಗೊಂಡಿರುವುದಾಗಿದೆ .