Thursday, March 31, 2011

ವಿನಾ ಕಾರಣ ಹಲ್ಲೆ, ವ್ಯಕ್ತಿಗೆ ಗಾಯ
 • ವಿನಾ ಕಾರಣ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಕುಶಾಲನಗರ ಠಾಣಾ ವ್ಯಾಪ್ತಿಯ ಹೆಬ್ಬಾಲೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 30/3/2011ರಂದು ಹೆಬ್ಬಾಲೆ ಗ್ರಾಮದ ಹೆಚ್.ಎಸ್.ರಘು ಎಂಬವರು ಅದೇ ಗ್ರಾಮದ ಜವರಪ್ಪ ಎಂಬವರ ಅಕ್ಕಿ ಗಿರಣಿಯಲ್ಲಿ ಭಾರತ-ಪಾಕಿಸ್ಥಾನ ಕ್ರಿಕೆಟ್ ಪಂದ್ಯಾಟವನ್ನು ವೀಕ್ಷಿಸಿ ಭಾರತ ಜಯಗಳಿಸಿದ ಬಗ್ಗೆ ಸಂತೋಷ ಕೂಟದಲ್ಲಿರುವಾಗ ಅಲ್ಲಿಗೆ ಬಂದ ಹೆಬ್ಬಾಲೆ ಗ್ರಾಮದ ಶ್ರೀನಿವಾಸ ಎಂಬಾತನು ರಘುರವರ ಮೇಲೆ ವಿನಾ ಕಾರಣ ಕಲ್ಲಿನಿಂದ ಹೊಡೆದು ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಮಹಿಳೆ ನಾಪತ್ತೆ, ಪ್ರಕರಣ ದಾಖಲು
 • ಮನೆಯಿಂದ ಮಹಿಳೆಯೋರ್ವರು ನಾಪತ್ತೆಯಾಗಿರುವ ಪ್ರಕರಣ ಭಾಗಮಂಡಲ ಠಾಣಾ ವ್ಯಾಪ್ತಿಯ ಚೇರಂಗಾಲ ಗ್ರಾಮದಲ್ಲಿ ನಡೆದಿದೆ. ದಿನಾಂಕ 25/03/2011ರಂದು ಚೇರಂಗಾಲ ಗ್ರಾಮದ ಕೋಳಿಕಾಡು ಎಂಬಲ್ಲಿ ಕೆ.ಜಿ.ತಿಮ್ಮಯ್ಯ ಎಂಬವರು ಕೂಲಿ ಕೆಲಸಕ್ಕೆ ಹೋಗಿದ್ದು, ಇಬ್ಬರು ಮಕ್ಕಳು ಶಾಲೆಗೆ ಹೋಗಿದ್ದಾಗ, ತಿಮ್ಮಯ್ಯನವರ ಪತ್ನಿ ಧನಲಕ್ಷ್ಮಿ ಎಂಬಾಕೆಯು ಯಾರಿಗೂ ತಿಳಿಸದೆ ಮನೆ ಬಿಟ್ಟು ಹೋಗಿದ್ದು, ಹತ್ತಿರದ ಸಂಬಂಧಿಗಳಲ್ಲಿ ವಿಚಾರಿಸಿದರೂ ಪತ್ತೆಯಾಗದ ಕಾರಣ ತಿಮ್ಮಯ್ಯನವರ ದೂರಿನ ಮೇಲೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, March 29, 2011

ನಕಲಿ ವಿಸಿಡಿ ಮಾರಾಟ, ಪ್ರಕರಣ ದಾಖಲು
 • ನಕಲಿ ವಿಸಿಡಿ ಮತ್ತು ಡಿವಿಡಿಗಳನ್ನು ಮಾರಾಟ ಮಾಡುತ್ತಿದ್ದ ಪ್ರಕರಣವೊಂದು ವಿರಾಜಪೇಟೆ ನಗರ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ದಿನಾಂಕ 28/03/2011ರಂದು ಮೈಸೂರಿನ ಯೂನಿವರ್ಸಲ್ ಕಾಪಿ ರೈಟ್ ಸಂಸ್ಥೆಯ ಹಕ್ಕು ಸ್ವಾಮ್ಯವನ್ನು ಹೊಂದಿರುವ ವಿಸಿಡಿ ಹಾಗೂ ಡಿವಿಡಿಗಳನ್ನು ವಿರಾಜಪೇಟೆ ನಗರದ ಮ್ಯೂಸಿಕ್ ವರ್ಲ್ಡ್ ಅಂಗಡಿಯ ಜಂಶೇರ್ ಎಂಬವರು ಅಕ್ರಮವಾಗಿ ಅಕಲು ಮಾಡಿ ಮಾರಾಟ ಮಾಡುತ್ತಿದ್ದಾರೆಂದು ಸಂಸ್ಥೆಯ ಕಾರ್ಯ ನಿರ್ವಾಹಕ ಅಧಿಕಾರಿ ಜಗದೀಶ್ ಎಂಬವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣಾ ಪೊಲೀಸರು ಅಂಗಡಿಯ ಮೇಲೆ ಧಾಳಿ ನಡೆಸಿ ಆರೋಪಿ ಜಂಶೇರ್ ಮಾರಾಟ ಮಾಡಲೆಂದು ಇಟ್ಟಿದ್ದ ನಕಲಿ ಡಿವಿಡಿಗಳನ್ನು ವಶಪಡಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.
ಅಶ್ಲೀಲ ನಿಂದನೆ, ಕೊಲೆ ಬೆದರಿಕೆ
 • ಮಹಿಳೆಯೋರ್ವರನ್ನು ಅಶ್ಲೀಲವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಮಡಿಕೇರಿ ನಗರ ಠಾಣಾ ಸರಹದ್ದಿನ ಕೋಟೆ ಗಣಪತಿ ದೇವಸ್ಥಾನದ ಬಳಿ ನಡೆದಿದೆ. ದಿನಾಂಕ 28/03/2011ರಂದು ಬೆಂಗಳೂರಿನ ಲಗ್ಗೆರೆ ನಿವಾಸಿ ಮಮತಾ ಎಂಬವರು ಮಡಿಕೇರಿಯ ಸಿವಿಲ್ ನ್ಯಾಯಾಲಯಕ್ಕೆ ವಿಚಾರಣೆ ಬಗ್ಗೆ ಬಂದಿದ್ದು, ನ್ಯಾಯಾಲಯದ ವಿಚಾರಣೆ ಮುಗಿದ ನಂತರ ವಾಪಾಸು ಬಸ್ ನಿಲ್ದಾಣಕ್ಕೆ ಹೋಗುತ್ತಿರುವಾಗ ಅವರನ್ನು ಹಿಂಬಾಲಿಸಿಕೊಂಡು ಬಂದ ಆರೋಪಿಗಳಾದ ಮೆಣಸೆ ಗ್ರಾಮದ ತ್ಯಾಗರಾಜ ಮತ್ತು ಇನ್ನಿಬ್ಬರು ಮಮತಾರವರನ್ನು ಕುರಿತು ಅಶ್ಲೀಲವಾಗಿ ನಿಂದಿಸಿ ಮಮತಾರವರು ಇನ್ನು ಮುಂದೆ ಯಾವುದೇ ಕೇಸಿನ ವಿಷಯವಾಗಿ ಮಡಿಕೇರಿಗೆ ಬಂದರೆ ಕೊಲೆ ಮಾಡುವುದಾಗಿ ಬೆದರಿಸಿರುವ ಬಗ್ಗೆ ಮಮತಾರವರು ನೀಡಿದ ದೂರಿನ ಮೇರೆಗೆ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕಯಗೊಂಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ, ಗಾಯ
 • ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿದ ಘಟನೆ ಕುಟ್ಟ ಠಾಣಾ ವ್ಯಾಪ್ತಿಯ ಬಾಡಗ ಗ್ರಾಮದ ಕೇಂಬುಕೊಲ್ಲಿ ಎಂಬಲ್ಲಿ ನಡೆದಿದೆ. ದಿನಾಂಕ 28/03/2011ರಂದು ಕುಟ್ಟದ ಹೂವಿನ ಕಾಡು ತೊಟದ ನಿವಾಸಿ ಪ್ರಕಾಶ ಎಂಬವರು ತಮ್ಮ ಜೀಪಿನಲ್ಲಿ ಪಲ್ಲೇರಿಯಿಂದ ಕೆಲಸದ ಕಾರ್ಮಿಕರನ್ನು ಕರೆದುಕೊಂಡು ಬಂದು ಕೇಂಬುಕೊಲ್ಲಿಯ ಮೊಯಿದೀನ್ ಎಂಬವರ ಟಂಗಡಿಯಲ್ಲಿ ಚಹಾ ಕುಡಿಯಲು ಹೋಗುತ್ತಿರುವಾಗ ಆರೋಪಿ ಸುದೀಶ್ ಎಂಬಾತನು ಬಂದು ಆತನ ಜೀಪಿಗೆ ದಾರಿ ಬಿಡದ ವಿಚಾರದಲ್ಲಿ ಜಗಳವಾಡಿ ಪ್ರಕಾಶರವರ ಮುಖಕ್ಕೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ ಬಗ್ಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, March 28, 2011

ರೂ. 23,000 ಮೌಲ್ಯದ ಕರಿಮೆಣಸು ಕಳವು
 • ಒಣಗಿಸಲು ಹಾಕಿದ್ದ ಕರಿಮೆಣಸನ್ನು ಯಾರೋ ಕಳ್ಳರು ಕಳವು ಮಾಡಿದ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಪುಲಿಯೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 27/03/2011ರ ರ ರಾತ್ರಿ ವೇಳೆಯಲ್ಲಿ ಪುಲಿಯೇರಿ ಗ್ರಾಮದ ವರನಂದಿ ಎಸ್ಟೇಟಿನ ಕರಿಮೆಣಸು ಒನಗಿಸುವ ಕಣದಲ್ಲಿ ಒಣಗಿಸಲು ಹಾಕಿದ್ದ ಸುಮಾರು ರೂ.23,000 ಮೌಲ್ಯದ 480 ಕೆ.ಜಿ.ಗಳಷ್ಟು ಕರಿಮೆಣಸನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ಎಸ್ಟೇಟಿನ ರೈಟರ್ ಆಗಿರುವ ನಾಗೇಶ್ ಎಂಬವರು ನೀಡಿದ ದೂರಿನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಮೋಟಾರು ಸೈಕಲ್ ಕಳವು, ಪ್ರಕರಣ ದಾಖಲು
 • ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಮೋಟಾರು ಸೈಕಲ್ ಒಂದನ್ನು ಕಳವು ಮಾಡಿರುವ ಘಟನೆ ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ದಂಡಿನ ಮಾರಿಯಮ್ಮ ದೇವಸ್ಥಾನದ ಬಳಿ ನಡೆದಿದೆ. ದಿನಾಂಕ 26/03/2011ರಂದು ಮಡಿಕೇರಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವಸತಿ ಗೃಹದ ನಿವಾಸಿ ಕೆ.ಕೆ.ದಿನೇಶ್ ಎಂಬವರು ತಮ್ಮ ಮೋಟಾರು ಸೈಕಲ್ ಸಂ.ಕೆಎ-12-ಜೆ-3869 ನ್ನು ನಗರದ ಪೆನ್ಷನ್ ಲೇನಿನ ಬಳಿ ರಸ್ತೆಯ ಬದಿಯಲ್ಲಿ ನಿಲ್ಲಿಸಿ ತಮ್ಮ ತಂದೆಯ ಮನೆಗೆ ಹೋಗಿ ವಾಪಾಸು ಬರುವಾಗ ಅವರ ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಬೈಕು ಹಾಗೂ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಮಾನಭಂಗ ಯತ್ನ ಪ್ರಕರಣ ದಾಖಲು
 • ಮಹಿಳೆಯೋರ್ವರ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಮಾನ ಭಂಗಕ್ಕೆ ಯತ್ನಿಸಿದುದಲ್ಲದೆ ಕೊಲೆ ಬೆದರಿಕೆ ಹಾಕಿರುವ ಘಟನೆ ಶುಂಠಿಕೊಪ್ಪ ಠಾಣಾ ವ್ಯಾಪ್ತಿಯ ಮತ್ತಿಕಾಡು ಎಂಬಲ್ಲಿ ನಡೆದಿದೆ. ದಿನಾಂಕ 24/03/2011ರಂದು ಮತ್ತಿಕಾಡಿನ ವಿಜಯ ಎಸ್ಟೇಟ್ ನ ಕೂಲಿ ಕಾರ್ಮಿಕ ಮಹದೇವಪ್ಪ ಎಂಬವರ ಪತ್ನಿ ಪಾರ್ವತಿ ಎಂಬಾಕೆಯು ರಾತ್ರಿ ಸಮಯ ಮನೆಯಲ್ಲಿ ಒಬ್ಬಳೇ ಇದ್ದಾಗ ಅದೇ ತೋಟದ ಪ್ರಸನ್ನ ಎಂಬಾತನು ಮನೆಗೆ ಅಕ್ರಮವಾಗಿ ಪ್ರವೇಶಿಸಿ ಪಾರ್ವತಿಯ ಮಾನಭಂಗಕ್ಕೆ ಯತ್ನಿಸಿದ್ದು, ಆಕೆಯು ಕೂಗಿಕೊಂಡಾಗ ಪ್ರಸನ್ನನು ಮನೆಯಿಂದ ಹೊರಗೆ ಬಂದು ಪಾರ್ವತಿಗೆ ಕೊಲೆ ಬದರಿಕೆ ಒಡ್ಡಿ ಓಡಿ ಹೋಗಿರುತ್ತಾನೆಂದು ನೀಡಿದ ದೂರಿಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ರಸ್ತೆ ಅಫಘಾತ, ರಿಕ್ಷಾ ಚಾಲಕನಿಗೆ ಗಾಯ
 • ರಸ್ತೆ ಅಫಘಾತವೊಂದರಲ್ಲಿ ರಿಕ್ಷಾ ಚಾಲಕನೋರ್ವನಿಗೆ ಗಾಯವಾಗಿರುವ ಘಟನೆ ವಿರಾಜಪೇಟೆ ನಗರ ಠಾಣಾ ಸರಹದ್ದಿನ ಮಠದ ಗದ್ದೆಯ ಹತ್ತಿರ ನಡೆದಿದೆ. ದಿನಾಂಕ 26/03/2011ರಂದು ಕೆ.ಬೋಯಿಕೇರಿ ಗ್ರಾಮದ ನಾಗೇಶ್ ಎಂಬವರು ತಮ್ಮ ಆಟೋ ರಿಕ್ಷಾ ಸಂ.ಕೆಎ-12-ಎ-2047ರಲ್ಲಿ ವಿರಾಜಪೇಟೆ ನಗರದ ಕಡೆಗೆ ಬರುತ್ತಿರುವಾಗ ಮೂರ್ನಾಡು ರಸ್ತೆ ಬಳಿ ಇರುವ ಮಠದ ಗದ್ದೆ ಎಂಬ ಸ್ಥಳದಲ್ಲಿ ಆರೋಪಿ ಕಾಶಿ ಯಾನೆ ಕಾರ್ಯಪ್ಪ ಎಂಬಾತನು ತನ್ನ ಜೀಪು ಸಂ.ಕೆಎ-21-ಎಂ-7717ನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ನಾಗೇಶರವರ ರಿಕ್ಷಾಕ್ಕಿ ಡಿಕ್ಕಿಪಡಿಸಿದ್ದು, ನಾಗೇಶರವರಿಗೆ ಗಾಯಗಳಾಗಿದ್ದು, ರಿಕ್ಷಾ ಜಖಂಗೊಮಡಿರುವ ಬಗ್ಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Saturday, March 26, 2011

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ:
 • ದಿನಾಂಕ 25-3-2011 ರಂದು ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಶನಿವಾರಸಂತೆ ನಗರದ ಬೈಪಾಸ್‌ ರಸ್ತೆಯಲ್ಲಿ ಫಿರ್ಯಾದಿ ಶ್ರೀಮತಿ ಯಶೋಧಮ್ಮ (40) ರವರು ಶುಂಠಿಯನ್ನು ತೊಳೆಯುತ್ತಿರುವ ಸಮಯದಲ್ಲಿ ಆರೋಪಿ ಬಿಜ್ಜೇಶ್‌ ಎಂಬವನು ಫಿರ್ಯಾದಿ ತೊಳೆಯುತ್ತಿದ್ದ ಶುಂಠಿಗೆ ನೀರು ಹಾರಿಸುತ್ತಿದ್ದು ಫಿರ್ಯಾದಿಯ ಮೈಮೇಲೂ ನೀರನ್ನು ಹಾರಿಸಿದ್ದು ಇದನ್ನು ವಿಚಾರಿಸುವಾಗ ಆರೋಪಿಯು ಅವಾಚ್ಯ ಶಬ್ದಗಳಿಂದ ಬೈದು ಅಲ್ಲೇ ಇದ್ದ ಗುದ್ದಲಿನ ಕಾವಿನಿಂದ ಹಲ್ಲೆ ಮಾಡಿ ನೋವನ್ನುಂಟುಮಾಡಿದ್ದು ಫಿರ್ಯಾದಿಯವರು ಶನಿವಾರಸಂತೆ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಈ ಸಂಬಂಧ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಮೃತ ನವಜಾತ ಶಿಶು ಪತ್ತೆ, ಪ್ರಕರಣ ದಾಖಲು:

 • ಈ ದಿನ ದಿನಾಂಕ 26-3-2011 ರಂದು ಮಡಿಕೇರಿ ನಗರ ಠಾಣಾ ವ್ಯಾಪ್ತಿಗೆ ಸೇರಿದ ಮಡಿಕೇರಿ ನಗರದ ಹಿಲ್‌ಟೌನ್‌ ಹೊಟೇಲಿಗೆ ಸೇರಿದ ಖಾಲಿ ಜಾಗದಲ್ಲಿ ಒಂದು ನವಜಾತ ಶಿಶು ಇರುವುದಾಗಿ ಜಿ. ಮಣಿ ಎಂಬವರು ಹಿಲ್‌ಟೌನ್‌ ಹೋಟೇಲಿನಲ್ಲಿ ಪಿ.ಆರ್‌.ಒ. ಆಗಿ ಕೆಲಸ ನಿರ್ವಹಿಸಿಕೊಂಡಿರುವ ಫಿರ್ಯಾದಿ ರಮೀಜ್‌ ಎಂ.ಎಂ. ರವರಿಗೆ ವಿಷಯ ತಿಳಿಸಿದ್ದು, ಅದರಂತೆ ಫಿರ್ಯಾದಿಯವರು ಸ್ಥಳಕ್ಕೆ ಹೋಗಿ ನೋಡಿದಾಗ ಅಲ್ಲಿ ರಾಶಿ ಹಾಕಲಾಗಿರುವ ಕಲ್ಲು ಗುಡ್ಡೆಯ ಮೇಲೆ ವಾರಸುದಾರರಿಲ್ಲದೆ ಮೃತಪಟ್ಟಿರುವ ಒಂದು ನವಜಾತ ಶಿಶು ಕಂಡು ಬಂದು ಅವರ ದೂರಿನ ಮೇರೆ ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯ ಆತ್ಮಹತ್ಯೆ:

 • ದಿನಾಂಕ 25-3-2011 ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮುತ್ತಾರ್ಮುಡಿ ಗ್ರಾಮದಲ್ಲಿ ದೇರಜೆ ಮನೆ ಮಂದಣ್ಣ ಎಂಬವರು ಹೊಟ್ಟೆನೋವಿನಿಂದ ಬಳಲುತ್ತಿದ್ದು ಚಿಕಿತ್ಸೆಪಡೆದರೂ ವಾಸಿಯಾಗದೇ ಇರುವ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.


Friday, March 25, 2011

ಜಾನುವಾರು ಕಳ್ಳತನ ಪ್ರಕರಣ:
ದಿ: 23-3-2011ರಂದು ಶನಿವಾರಸಂತೆ ಠಾಣಾ ವ್ಯಾಪ್ತಿಯ ದೊಡ್ಡಕೊಡ್ಲಿ ಗ್ರಾಮ ದ ನಿವಾಸಿಯಾದ ಪ್ರವೀಣ ಎಂಬವರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ 8 ದಿನಗಳನ್ನು ಆರೋಪಿಗಳಾದ ಕುಮಾರ , ಪ್ರದೀಪ, ನವೀನ ಎಂಬವರು ಕೆ.ಎ-12 ಎ 3526 ವಾಹನದಲ್ಲಿ ದನಗಳನ್ನು ಕಳ್ಳತನ ಮಾಡಿ ತುಂಬಿಸಿಕೊಂಡು ಹೋಗಿದ್ದು ಸದರಿ ಧನಗಳ ಮೌಲ್ಯ 75,000/- ರೂ.ಗಳಾಗಿರುವುದಾಗಿ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ಶನಿವಾರಸಂತೆ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

ಆಕ್ರಮಕೂಟ ಸೇರಿ ರಸ್ತೆ ತಡೆ: ಈ ದಿನ ಸಿದ್ದಾಪುರ ಠಾಣಾ ವ್ಯಾಪ್ತಿಯ ಘಟದಳ ಜಂಕ್ಷಣ ಬಳಿ ರಸ್ತೆ ತಡೆ ಮಾಡುವುದಾಗಿ ಪಿಎಸ್‌ಐ ಸಿದ್ದಾಪುರ ಠಾಣೆರವರಿಗೆ ಯಾರೋ ದೂರವಾಣಿ ಕರೆಮಾಡಿ ನೀಡಿದ ಮಾಹಿತಿಯ ಮೇರೆಗೆ ಎಎಸ್‌ಐ ಬಿ.ಎಸ್‌ ಚಂದ್ರಶೇಖರ್‌ ಮತ್ತು ಸಿಬ್ಬಂದಿರವರು ಇಲಾಖಾ ಜೀಪಿನಲ್ಲಿ ಹೋಗಿ ನೋಡುವಾಗ್ಗೆ ಸರಕಾರ ದ ಯಾವುದೇ ಅನುಮತಿ ಇಲ್ಲದೇ ಮಾಲ್ದಾರೆ ಪಿರಯಾಪಟ್ಟಣ ರಸ್ತೆಯ ಸಂಚಾರಿಸುತ್ತಿರುವ ವಾಹನಗಳನ್ನು ಆರೋಪಿಗಳು ಅಕ್ರಮಕೂಟ ಸೇರಿಕೊಂಡು ತಡೆದು ನಿಲ್ಲಿಸಿ , ಸಾರ್ವಜನಿಕರ ವಾಹನ ಮತ್ತು ಸಾರ್ವಜನಿರ ಸಂಚಾರಕ್ಕೆ ಆಡ್ಡಿ ಪಡಿಸಿರುವುದು ಕಾನೂನು ಬಾಹಿರ ಕೃತ್ಯವಾಗಿರುವುದರಿಂದ ಆರೋಪಿ ಗಳಾದ ಜಾನ್ಸ್‌ ಮತ್ತು ಇತರರ ವಿರುದ್ದ ಸಿದ್ಧಾಪುರ ಠಾಣೆಯಲ್ಲಿಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

ಜೂಜಾಟ ಪ್ರಕರಣ
ದಿ: 24-3-2011 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಹೆಗ್ಗಳ ಗ್ರಾಮ ಮಾಕುಟ್ಟ ದ ಮುಂಬಡ್ಕ ಎಂಬಲ್ಲಿ ಪಿಎಸ್‌ಐ ಠಾಣೆಯಲ್ಲಿರುವಾಗ್ಗೆ ಸಿಕ್ಕಿದ ಖಚಿತ ವರ್ತಮಾನದ ಮೇರೆಗೆ ಪೊಲೀಸ್‌ ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪಿನಲ್ಲಿ ಹೋಗಿ ಮುಂಬಡ್ಕ ಎಂಬಲ್ಲಿ ಜೂಜಾಟ ವಾಡುತ್ತಿದ್ದ ಕನ್ನಿಲಿ ಕಾಟಿಲ್‌ ಜೆ ಜೈಸನ 2) ಪುದುಪರಂಬಿಲ್‌ ಜೋನನ್ಸ್‌, 3) ಎ.ಜೋನ್ಸ್‌ನ್‌ 4) ಟಿ ಜೋಸ್‌ ಎಂಬವರು ಅಂದರ್‌ ಬಾಹರ್‌ ಎಂಬ ಜೂಜಾಟ ವನ್ನು ಸರಕಾರದ ಯಾವುದೇ ರಹದಾರಿ ಇಲ್ಲದೆ ಆಡುತ್ತಿದ್ದನ್ನು ಪತ್ತೆ ಹಚ್ಚಿ 52 ಇಸ್ಪೇಟ್ ಎಲೆ ಹಾಗೂ 1950 ರೂ ಗಳನ್ನು ಹಾಗೂ ಅರೋಪಿಗಳನ್ನು ಠಾಣೆ ಹಾಜರು ಪಡಿಸಿ ಸದರಿ ಆರೋಫಿಗಳ ವಿರುದ್ದ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.

Thursday, March 24, 2011

ಅಕ್ರಮಕೂಟ ಸೇರಿ ವ್ಯಕ್ತಿಗಳಿಬ್ಬರ ಮೇಲೆ ಹಲ್ಲೆ, ಪ್ರಕರಣ ದಾಖಲು:
 • ದಿನಾಂಕ 23-3-2011 ರಂದು ಪೊನ್ನಂಪೇಟೆ ಪೊಲೀಸ್ ಠಾಣಾ ಸರಹದ್ದಿನ ಕಾನೂರು ಗ್ರಾಮದಲ್ಲಿ ಫಿರ್ಯಾದಿ ಟಿ.ಪಿ. ಉಸ್ಮಾನ್‌ ಹಾಗೂ ಅವರ ಸಹೋದರ ಮುನೀರ್‌ ಎಂಬವರು ತಮ್ಮ ಕಾಫಿ ಮಿಲ್ಲಿನ ಹೊರಗಡೆ ನಿಂತುಕೊಂಡು ಇರುವ ಸಮಯದಲ್ಲಿ ಆರೋಪಿಗಳಾದ ಚಿಮ್ಮಣ್ಣೀರ ಹರೀಶ್‌ ಮತ್ತು ಇತರೆ 5 ಜನರು ಅಕ್ರಮಕೂಟ ಸೇರಿಕೊಂಡು ಜೀಪಿನಲ್ಲಿ ಬಂದು ಹಳೆಯ ದ್ವೇಷದಿಂದ ದರೋಡೆ ಪ್ರಕರಣದಲ್ಲಿ ತಮ್ಮ ಹೆಸರನ್ನು ಪೊಲೀಸರಿಗೆ ಹೇಳಿದ ವಿಚಾರವಾಗಿ ಜಗಳ ಮಾಡಿ ಅವರುಗಳನ್ನು ಜೀಪಿನಲ್ಲಿ ಬಲಾತ್ಕಾರವಾಗಿ ಹತ್ತಿಸಿಕೊಂಡು ಹರಿಹರ ಗ್ರಾಮದಲ್ಲಿ ಬಾಣೆಜಾಗದಲ್ಲಿ ಅವರುಗಳನ್ನು ಇಳಿಸಿ ಅವರುಗಳ ಕೈಗಳನ್ನು ಕಟ್ಟಿಹಾಕಿ ದೊಣ್ಣೆಯಿಂದ ಶರೀರಕ್ಕೆ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ್ದು, ನಂತರ ಅವರುಗಳನ್ನು ಅಲ್ಲೇ ಬಿಟ್ಟು ಹೋಗಿದ್ದು, ನಂತರ ಫಿರ್ಯಾದಿಯ ಸ್ನೇಹಿತರ ಸಹಾಯದಿಂದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು ಈ ಸಂಬಂಧ ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ಪ್ರತ್ಯೇಕ ಪ್ರಕಣಗಳಲ್ಲಿ ಆಕಸ್ಮಿಕ ವಿದ್ಯುತ್‌ ಸ್ಪರ್ಷದಿಂದ ಮೂವರ ದುರ್ಮರಣ:
 • ದಿನಾಂಕ 24-3-2011 ರಂದು ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣಾ ಸರಹದ್ದಿನ ಹೆಮ್ಮೆತ್ತಾಳು ಗ್ರಾಮದಲ್ಲಿ ಸುಂದರ ಮತ್ತು ಲೋಕೇಶ್‌ ಎಂಬವರು ತೋಟದಲ್ಲಿ ನೀರುಹಾಯಿಸುವ ಸ್ಪಿಂಕ್ಲರ್‌ ಪೈಪುಗಳನ್ನು ಹೊತ್ತುಕೊಂಡು ಹೋಗುತ್ತಿರುವ ಸಮಯ ಆಕಸ್ಮಿಕವಾಗಿ ತೋಟದೊಳಗೆ ಹಾದು ಹೋಗಿರುವ 11 ಕೆ.ವಿ. ವಿದ್ಯುತ್‌ ತಂತಿಗೆ ತಗುಲಿ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿ ಕ್ರಮ ಕೈಗೊಂಡಿರುತ್ತಾರೆ.
 • ದಿನಾಂಕ 23-3-2011 ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮೇಕೇರಿ ಗ್ರಾಮದಲ್ಲಿ ಕೆ.ಎಂ. ಕುಶಾಲಪ್ಪ(30) ಎಂಬವರು ಮನೆಯಲ್ಲಿರುವ ಟಿ.ವಿ.ಯಲ್ಲಿ ಹೊಗೆ ಬರುತ್ತಿರುವುದನ್ನು ಗಮನಿಸಿ ಅದನ್ನು ಸರಿಪಡಿಸಲು ಹೋಗಿ ಆಕಸ್ಮಿಕವಾಗಿ ವಿದ್ಯುತ್‌ ಸ್ಪರ್ಷಗೊಂಡು ಮೃತಪಟ್ಟಿದ್ದು, ಈ ಸಂಬಂಧ ಮೃತರ ತಂದೆಯಾದ ಫಿರ್ಯಾದಿ ಕೋಟೇರ ಎ.ಎಸ್‌. ಮೇದಪ್ಪನವರು ನೀಡಿದ ದೂರಿನನ್ವಯ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ರಸ್ತೆ ಅಪಘಾತ ಇಬ್ಬರಿಗೆ ಗಾಯ:
 • ದಿನಾಂಕ 23-3-2011 ರಂದು ಕುಶಾಲನಗರ ಪೊಲೀಸ್‌ ಠಾಣಾ ಸರಹದ್ದಿನ ಆರ್‌.ಎಂ.ಸಿ.ಯ ಬಳಿ ಸಾರ್ವಜನಿಕ ರಸ್ತೆಯಲ್ಲಿ ಫಿರ್ಯಾದಿ ಜಾಯ್‌ ಎಂಬವರು ತಮ್ಮ ಬಾಪ್ತು ಬೈಕಿನಲ್ಲಿ ಸಹೋದ್ಯೋಗಿ ಅನಿಲ್‌ರಾಜ್‌ಅರಸ್‌ ಎಂಬವರೊಂದಿಗೆ ಕುಶಾಲನಗರದ ತಮ್ಮ ಮನೆಯ ಕಡೆಗೆ ಹೋಗುತ್ತಿರುವ ಸಮಯದಲ್ಲಿ ಆರೋಪಿ ಮಹದೇವ ಕೆಎ-12-6799ರ ಆಟೋರಿಕ್ಷಾ ಚಾಲಕ ತನ್ನ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಮೋಟಾರ್‌ ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್‌ ರಸ್ತೆಗೆ ಬಿದ್ದು ಸವಾರರಿಬ್ಬರಿಗೂ ರಕ್ತಗಾಯವಾಗಿದ್ದು ಚಿಕಿತ್ಸೆಗಾಗಿ ಕುಶಾಲನಗರ ಸರಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಸಂಬಂಧ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Wednesday, March 23, 2011

ಅಕ್ರಮ ಜೂಜಾಟ, 6 ಮಂದಿ ಬಂಧನ:

 • ದಿನಾಂಕ 22-3-2011 ರಂದು ವಿರಾಜಪೇಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ತೆಲುಗರ ಬೀದಿಯಲ್ಲಿರುವ ಸ್ಮಶಾನದ ಬಳಿ ಆರೋಪಿಗಳಾದ ಎಂ.ಡಿ. ಪವನ್‌, ಜೆ.ಎ. ರಮೇಶ್‌, ಟಿ.ಜೆ. ಗಣೇಶ್‌, ಕೆ.ಎ. ಮನು, ಪಿ ಅನಿಲ್‌ ಮತ್ತು ಶ್ರೀಕಾಂತ್‌ ಎಂಬವರು ಅಕ್ರಮವಾಗಿ ಜೂಜಾಡುತ್ತಿರುವುರ ಬಗ್ಗೆ ಫಿರ್ಯಾದಿ ಪಿ. ಅನೂಪ್‌ ಮಾದಪ್ಪ, ಪಿಎಸ್‌ಐ, ವಿರಾಜಪೇಟೆ ನಗರ ಠಾಣೆ ಇವರಿಗೆ ದೊರೆತ ಮಾಹಿತಿಯ ಮೇರೆಗೆ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಆರೋಪಿಗಳು ಜೂಜಾಡಲು ಬಳಸಿದ ರೂ. 8,340/ಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿಗಳನ್ನು ದಸ್ತಗಿರಿ ಮಾಡಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ:

 • ಈ ದಿನ ದಿನಾಂಕ 23-3-2011 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಅರಮೇರಿ ಗ್ರಾಮದಲ್ಲಿ ಫಿರ್ಯಾದಿ ಪಾಲೆಕಂಡ ನಾಚಪ್ಪನವರು ಶೇವಿಂಗ್‌ ಮಾಡುತ್ತಿರುವ ಸಮಯದಲ್ಲಿ 13 ವರ್ಷಗಳಿಂದ ಸದರಿಯವರು ಸಾಕಿದ ವ್ಯಕ್ತಿ ಜೇನುಕುರುಬರ ಬಸವ ಎಂಬಾತನು ಹಿಂದೆ ಬೈದ ವಿಚಾರದಲ್ಲಿ ಕತ್ತಿಯಿಂದ ಫಿರ್ಯಾದಿಯ ಬೆನ್ನು, ಹೊಟ್ಟೆಯ ಭಾಗಕ್ಕೆ ಕಡಿದು ಗಾಯಗೊಳಿಸಿ ಮನೆಯೊಳಗಿದ್ದ ಟಿ.ವಿ ಹಾಗೂ ಇತರೆ ಸಾಮಾಗ್ರಿಗಳನ್ನು ಕತ್ತಿಯಿಂದ ಕಡಿದು ನಾಶಪಡಿಸಿದ್ದು, ಈ ಬಗ್ಗೆ ಸದರಿಯವರು ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಕೊಲೆ ಪ್ರಕರಣದಲ್ಲಿ ಸಾಕ್ಷಿ ನುಡಿಯದಂತೆ ವ್ಯಕ್ತಿಗೆ ಬೆದರಿಕೆ:

 • ದಿನಾಂಕ 20-3-2011 ರಂದು ಸುಂಟಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ನಾಕೂರು ಗ್ರಾಮದ ವಾಸಿ ಫಿರ್ಯಾದಿ ಕೆ.ಜೆ. ಜಗಧೀಶ್‌ ಎಂಬವರಿಗೆ ಯಾರೋ ಅಪರಿಚಿತ ವ್ಯಕ್ತಿ ಮೊಬೈಲ್‌ ದೂರವಾಣಿ ಮೂಲಕ ಕರೆ ಮಾಡಿ ಕೊಲೆ ಪ್ರಕರಣವೊಂದರಲ್ಲಿ ಸಾಕ್ಚಿ ನುಡಿದರೆ ಫಿರ್ಯಾದಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಈ ಸಂಬಂಧ ಫಿರ್ಯಾದಿಯವರ ದೂರಿನ ಮೇರೆ ಸುಂಟಿಕೊಪ್ಪ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಪತಿಯಿಂದ ಪತ್ನಿಯ ಮೇಲೆ ಹಲ್ಲೆ:

 • ದಿನಾಂಕ 22-3-2011 ರಂದು ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಲಕ್ನಿಗ್ರಾಮದಲ್ಲಿ ಫಿರ್ಯಾದಿ ಶ್ರೀಮತಿ ಜಯಮ್ಮ ನವರು ರಾತ್ರಿ ತಮ್ಮ ಮನೆಯಲ್ಲಿರುವಾಗ ಆರೋಪಿಗಳಾದ ಫಿರ್ಯಾದಿಯ ಗಂಡ ರಾಜ @ ಕೊಡಗಿನ ರಾಜ, ಬಸವರಾಜು, ರವೀಶ ಎಂಬವರು ಬಂದು ಫಿರ್ಯಾದಿಯ ಗಂಡ ಬೇರೆ ಮಡುವೆಯಾಗುವುದಾಗಿ ಹೇಳಿದ್ದು ಈ ವಿಷಯದಲ್ಲಿ ಜಗಳವಾಗಿ, ಫಿರ್ಯಾದಿಯನ್ನು ರಾಜ ಬೈದು ಕೈಹಿಂದ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದು ಈ ಸಂಬಂಧ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಮಾರುತಿ-800 ಕಾರು ಕಳವು, ಪ್ರಕರಣ ದಾಖಲು:

 • ದಿನಾಂಕ 20-3-2011 ರಂದು ಮಡಿಕೇರಿ ನಗರದ ಜಿಲ್ಲಾ ಆಸ್ಪತ್ರೆಯ ಕಾರ್‌ ಶೆಡ್‌ನಲ್ಲಿ ಫಿರ್ಯಾದಿಯವರು ತಮ್ಮ ಬಾಪ್ತು ಮಾರುತಿ-800 ಕಾರು ಸಂಖ್ಯೆ ಕೆಎ-12-ಎಂ-2516ನ್ನು ನಿಲ್ಲಿಸಿದ್ದು ಸದರಿ ಕಾರನ್ನು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿದ್ದು, ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Monday, March 21, 2011

ಬಾಟಲಿಯಿಂದ ವ್ಯಕ್ತಿಯ ಮೇಲೆ ಹಲ್ಲೆ.

 • ಗಾಜಿನ ಬಾಟಲಿಯಿಂದ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿದ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಕಿರುಗೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 20/2011ರ ರಾತ್ರಿ ಕಿರುಗೂರು ಗ್ರಾಮದ ಕೋದೇಂಗಡ ಪೂಣಚ್ಚ ಎಂಬವರಲ್ಲಿ ಕೆಲಸ ಮಾಡುತ್ತಿದ್ದ ಕುಮಾರಿ ದಂಡಮ್ಮ ಎಂಬವರು ತಮ್ಮ ಮನೆಯ ಅಂಗಳದಲ್ಲಿದ್ದಾಗ ಆರೋಪಿ ಅದೇ ಗ್ರಾಮದ ಚುಬ್ರ ಎಂಬಾತನು ಅಲ್ಲಿಗೆ ಬಂದು ಆಕೆಯೊಂದಿಗೆ ಜಗಳವಾಡಿ ಕೈಯಲ್ಲಿದ್ದ ಬಾಟಲಿಯಿಂದ ತಲೆಗೆ ಹೊಡೆದಿದ್ದು ಬಿಡಿಸಲು ಬಮದ ಕಮಲ ಎಂಬಾಕೆಗೂ ಹೊಡದು ಗಾಯಗೊಳಿಸಿರುವ ಬಗ್ಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅನುಮಾನಾಸ್ಪದ ವ್ಯಕ್ತಿಯ ಬಂಧನ

 • ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ವ್ಯಕ್ತಿಯೋರ್ವನನ್ನು ಇಂದು ವಿರಾಜಪೇಟೆ ನಗರ ಠಾಣಾ ಪೊಲೀಸರು ಬಂಧಿಸಿ ಕ್ರಮ ಜರುಗಿಸಿದ್ದಾರೆ. ಇಂದು ಬೆಳಿಗ್ಗೆ ವಿರಾಜಪೇಟೆ ನಗರ ಠಾಣೆಯ ಪಿಎಸ್‌ಐ ಅನೂಪ್ ಮಾದಪ್ಪರವರು ನಗರದಲ್ಲಿ ಗಸ್ತು ಕರ್ತವ್ಯದಲ್ಲಿರುವಾಗ ನಗರದ ಮುಖ್ಯ ರಸ್ತೆಯಲ್ಲಿರುವ ಸ್ಕೈ ಗೋಲ್ಡ್ ಆಭರಣ ಮಳಿಗೆಯ ಬಳಿ ಆರೋಪಿ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಗಂಧನಹಳ್ಳಿಯ ಪುಟ್ಟಸ್ವಾಮಿ ಎಂಬಾತನು ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದುದನ್ನು ಕಂಡು ವಿಚಾರಿಸಲಾಗಿ ಆತನು ತನ್ನ ಇರುವಿಕೆಯ ಬಗ್ಗೆ ಸೂಕ್ತ ಕಾರಣಗಳನ್ನು ನೀಡದ್ದರಿಂದ ಆತನು ಯಾವುದೋ ಅಪರಾಧ ಎಸಗುವ ಉದ್ದೇಶದಿಂದ ಅಲ್ಲಿದ್ದಾನೆಂದು ಸಂಶಯಿಸಿ ಆತನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿರುತ್ತಾರೆ.

ಕ್ಷುಲ್ಲಕ ಕಾರಣಕ್ಕೆ ಮಹಿಳೆ ಮೇಲೆ ಹಲ್ಲೆ

 • ಕ್ಷುಲ್ಲಕ ಕಾರಣಕ್ಕೆ ಮಹಿಳೆಯೋರ್ವರ ಮೇಲೆ ಹಲ್ಲೆ ನಡೆಸಿದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮದೆನಾಡು ಗ್ರಾಮದಲ್ಲಿ ನಡೆದಿದೆ. ದಿನಾಂಕ 20/03/2011 ರಂದು ಸಂಜೆ ಮದೆನಾಡು ಗ್ರಾಮದ ವಿಮಲಾ ಎಂಬವರು ತಮ್ಮ ಗದ್ದೆಯಿಂದ ಮನೆಗೆ ಹೋಗುತ್ತಿರುವಾಗ ಅದೇ ಗ್ರಾಮದ ಮೋಹಿನಿ ಎಂಬವರು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ವಿಮಲರವರ ಮೇಲೆ ಕಾಡು ಮರದ ದೊಣ್ಣೆಯಿಂದ ಹಲ್ಲೆ ನಡೆಸಿರುವ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ

 • ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಅಮ್ಮತ್ತಿ ನಗರದಲ್ಲಿ ನಡೆದಿದೆ. ದಿನಾಂಕ 20/03/2011ರ ಅಪರಾಹ್ನ ಅಮ್ಮತ್ತಿನಗರದ ವಿ.ಎ.ಮ್ಯಾಥ್ಯೂ ಎಂಬವರು ತಮ್ಮ ಮನೆಯ ಮಲಗುವ ಕೋಣೆಯಲ್ಲಿ ಕೋಣೆಯ ಫ್ಯಾನ್‌ಗೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಅನಾರೋಗ್ಯದಿಂದ ವ್ಯಕ್ತಿಯ ಸಾವು

 • ಅನಾರೋಗ್ಯದಿಂದ ಅತಿಯಾಗಿ ನಿತ್ರಾಣಗೊಂಡಿದ್ದ ವ್ಯಕ್ತಿಯೋರ್ವರು ದಾರಿಯಲ್ಲೇ ಬಿದ್ದು ಮೃತಪಟ್ಟ ಘಟನೆ ಶನಿವಾರಸಂತೆ ಠಾಣಾ ವ್ಯಾಪ್ತಿಯ ಕಿತ್ತೂರುಕೊಪ್ಪಲು ಗ್ರಾಮದಲ್ಲಿ ನಡೆದಿದೆ. ದಿನಾಂಕ 20/03/2011ರಂದು ಕೊಡ್ಲಿಪೇಟೆಯ ತಾಳೂರು ಗ್ರಾಮದ ಮಹೇಂದ್ರ ಎಂಬವರು ಅನಾರೋಗ್ಯದಿಂದ ಬಳಲುತ್ತಿದ್ದು, ಕಿತ್ತೂರುಕೊಪ್ಪಲು ಗ್ರಾಮಕ್ಕೆ ಹೋಗಿದ್ದು ನಿತ್ರಾಣಗೊಂಡು ದಾರಿಯಲ್ಲೇ ಬಿದ್ದು ಮೃತಪಟ್ಟಿದ್ದು ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಮೃತರಿಗೆ ವಿಪರೀತವಾದ ಮದ್ಯಪಾನ ಮಾಡುವ ಚಟವಿತ್ತೆನ್ನಲಾಗಿದೆ.

Sunday, March 20, 2011

ಕ್ಷುಲ್ಲಕ ಕಾರಣಕ್ಕೆ ಕತ್ತಿಯಿಂದ ಕಡಿದು ಹಲ್ಲೆ

 • ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವರ ಮೇಲೆ ಕತ್ತಿಯಿಂದ ಕಡಿದು ಗಾಯಗೊಳಿಸಿರುವ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಅಮ್ಮತ್ತಿ ಒಂಟಿಯಂಗಡಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 19/03/2011ರಂದು ಪ್ರಕರಣದ ಫಿರ್ಯಾದಿ ರುದ್ರರವರ ಪತ್ನಿಯು ಅಮ್ಮತ್ತಿ ಒಂಟಿಯಂಗಡಿಯಲ್ಲಿರುವ ಆಕೆಯ ಅಣ್ಣನ ಮನೆಗೆ ಹೋಗಿದ್ದು, ಈ ವಿಚಾರದಲ್ಲಿ ಆರೋಪಿ ಒಕ್ಕಲಿಗರ ಸಿದ್ದಯ್ಯ ಎಂಬಾತನು ಆಕ್ಷೇಪಿಸಿದ್ದು, ಆಗ ತನ್ನ ಪತ್ನಿಯು ಆಕೆಯ ಅಣ್ಣನ ಮನೆಗೆ ಬಂದಿರುವುದರಲ್ಲಿ ತಪ್ಪೇನಿದೆ ಎಂದು ರುದ್ರರವರು ಹೇಳಿದ್ದು, ಈ ಬಗ್ಗೆ ಜಗಳವಾಗಿ ಒಕ್ಕಲಿಗರ ಸಿದ್ದಯ್ಯ ರುದ್ರರವರ ತಲೆಗೆ ಕತ್ತಿಯಿಂದ ಕಡಿದು ಗಾಯಗೊಳಿಸಿರುವ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾರು ಡಿಕ್ಕಿ, ವಿದ್ಯಾರ್ಥಿನಿಗೆ ಗಾಯ

 • ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯೋರ್ವಳಿಗೆ ಕಾರೊಂದು ಡಿಕ್ಕಿಪಡಿಸಿದ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಆನಂದಪುರ ಎಂಬಲ್ಲಿ ನಡೆದಿದೆ. ದಿನಾಂಕ 19/03/2011ರ ಸಂಜೆ ಪುಲಿಯೇರಿ ಗ್ರಾಮದ ಆನಂದಪುರ ಎಂಬಲ್ಲಿನ ನಿವಾಸಿ ಅರುಳ್ ರಾಜಕುಮಾರ್ ಎಂಬವರ ಪುತ್ರಿ ಎಂ.ಟೆಕ್ ವಿದ್ಯಾರ್ಥಿನಿ ಅಭಿಷಾ ಕ್ರಿಸ್ಟಲ್ ಎಂಬಾಕೆಯು ಚಿಟ್ಟಳ್ಳಿಯ ಸಂಶೋಧನಾ ಕೇಂದ್ರದಿಂದ ಬಂದು ಆನಂದಪುರದಲ್ಲಿ ಬಸ್ಸಿಳಿದು ತನ್ನ ಮನೆಯ ಕಡೆ ಹೋಗುತ್ತಿರುವಾಗ ಹಿಂದಿನಿಂದ ಕೆಎ-53-ಎನ್-638ರ ಮಾರುತಿ ಕಾರಿನ ಚಾಲಕ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ಹೋಗುತ್ತಿದ್ದ ಅಭಿಷಾ ಕ್ರಿಸ್ಟಲ್ ರವರಿಗೆ ಡಿಕ್ಕಿಪಡಿಸಿದುದಲ್ಲದೆ ಅಲ್ಲೇ ರಸ್ತೆ ಬದಿ ನಿಂತಿದ್ದ ಯಾವುದೋ ಜೀಪಿಗೂ ಡಿಕ್ಕಿಪಡಿಸಿರುವ ಬಗ್ಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಿಲಸಿ ತನಿಖೆ ಕೈಗೊಂಡಿದ್ದಾರೆ.

Friday, March 18, 2011

ಅಪರಿಚಿತ ಶವ ಪತ್ತೆ
 • ಅಪರಿಚಿತ ಮಹಿಳೆಯ ಶವವೊಂದು ಕುಶಾಲನಗರ ಠಾಣಾ ವ್ಯಾಪ್ತಿಯ ಹೆಬ್ಬಾಲೆ ಬಳಿಯ ಕಾವೇರಿ ನದಿಯಲ್ಲಿ ಪತ್ತೆಯಾಗಿದೆ. ದಿನಾಂಕ 17/03/2011ರಂದು ಹೆಬ್ಬಾಲೆಯ ಹೆಚ್.ಬಿ.ಚಂದ್ರಶೇಖರ್ ಎಂಬವರು ದನ ಮೇಯಿಸಲೆಂದು ಹೆಬ್ಬಾಲೆಯ ಕಾವೇರಿ ನದಿಯ ದಡದ ಕಡೆ ಹೋಗಿದ್ದಾಗ, ಕಾವೇರಿ ಹೊಳೆಯಲ್ಲಿ ಓರ್ವ ಅಪರಿಚಿತ ಮಹಿಳೆಯ ಶವ ನಗ್ನ ಸ್ಥಿತಿಯಲ್ಲಿ ತೇಲುತ್ತಿರುವುದು ಕಂಡು ಬಂದಿದ್ದು, ಈ ಬಗ್ಗೆ ಚಂದ್ರಶೇಖರ್ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆಸ್ತಿ ವಿವಾದ, ಕೊಲೆ ಬೆದರಿಕೆ ಪ್ರಕರಣ ದಾಖಲು

 • ಆಸ್ತಿ ವಿವಾದದ ಸಂಬಂಧ ವ್ಯಕ್ತಿಯೋರ್ವರಿಗೆ ಕೊಲೆ ಬೆದರಿಕೆ ಹಾಕಿರುವ ಪ್ರಕರಣ ನಾಪೋಕ್ಲು ಠಾಣಾ ವ್ಯಾಪ್ತಿಯ ಕಡಿಯತ್ತೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 17/03/2011ರಂದು ಕಡಿಯತ್ತೂರು ಗ್ರಾಮದ ಕೆ.ಸಿದೇವಯ್ಯ ಎಂಬವರು ಮನೆಯ ಮುಂದೆ ನಿಂತುಕೊಂಡಿರುವಾಗ ಅದೇ ಗ್ರಾಮದ ಕೊಪ್ಪುಡ ತಿಮ್ಮಯ್ಯ ಎಂಬವರು ಅಲ್ಲಿಗೆ ಬಂದು ಆಸ್ತಿ ವಿಚಾರದಲ್ಲಿ ಜಗಳವಾಡಿ ಗುದ್ದಲಿಯಿಂದ ದೇವಯ್ಯನವರಿಗೆ ಹೊಡೆಯಲು ಯತ್ನಿಸಿ ನಂತರ ಕೊಲೆ ಬೆದರಿಕೆ ಹಾಕಿರುವ ಕುರಿತು ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, March 17, 2011

ಹಳೇ ವೈಷಮ್ಯ, ವ್ಯಕ್ತಿಯ ಮೇಲೆ ಹಲ್ಲೆ

 • ಹಳೆ ದ್ವೇಷದಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿರುವ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಡಗದಾಳು ಗ್ರಾಮದಲ್ಲಿ ನಡೆದಿದೆ. ದಿನಾಂಕ 16/03/2011ರಂದು ರಾತ್ರಿ ಕಡಗದಾಳು ಗ್ರಾಮದ ಹೆಚ್.ಜಿ.ರಾಜೇಶ್ ಮತ್ತು ಇತರ ಗ್ರಾಮಸ್ಥರು ಸೇರಿ ಚೌಡೇಶ್ವರಿ ಉತ್ಸವ ನಡೆಸುವ ಬಗ್ಗೆ ಸಭೆ ನಡೆಸುತ್ತಿರುವಾಗ ಅಲ್ಲಿಗೆ ಬಂದ ಆರೋಪಿ ಹೆಚ್.ಎನ್.ಪವನ್ ಕುಮಾರ್ ಹಳೆ ದ್ವೇಷದಿಂದ ರಾಜೇಶ್ ರವರ ಮೇಲೆ ಕಲ್ಲಿನಿಂದ ಮುಖಕ್ಕೆ ಮತ್ತು ತಲೆಗೆ ಹೊಡೆದು ಗಾಯಗೊಳಿಸಿರುವ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಮೇಲೆ ಹಲ್ಲೆ, ಪ್ರಕರಣ ದಾಖಲು

 • ವ್ಯಕ್ತಿಯೊಬ್ಬರ ಮೇಲೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿರುವ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಬಾಳೆಲೆ ನಗರದಲ್ಲಿ ನಡೆದಿದೆ. ದಿನಾಂಕ 16/03/2011ರ ರಾತ್ರಿ ವೇಳೆ ಮುದ್ದಿಯಡ ಮಹೇಶ ಎಂಬವರು ಬಾಳೆಲೆ ನಗರದ ಪೋಡಮಾಡ ಬೋಪಣ್ಣನವರ ಅಂಗಡಿಯ ಮುಂದೆ ಕುಳಿತಿರುವಾಗ ಅಲ್ಲೇ ಇದ್ದ ಆರೋಪಿ ಅಳಮೇಂಗಡ ದಿಲ್ಲು ಎಂಬಾತನು ತಾನು ಮಹೇಶನಿಗೆ ರೂ 2,000 ಕೊಡಲು ಬಾಕಿ ಇದ್ದು ಅದನ್ನು ಕೊಡುವುದಾಗಿ ಹೇಳಿ ಮಹೇಶರವರನ್ನು ಹತ್ತಿರ ಕರೆದು ನಂತರ 13 ವರ್ಷದ ಹಿಂದೆ ಮಹೇಶರವರು ತನಗೆ ಹೊಡೆದಿದ್ದು, ಈಗ ತಾನು ಮಹೇಶನಿಗೆ ಹೊಡೆಯುವುದಾಗಿ ಹೇಳಿ ಮಹೇಶರವರ ಮೇಲೆ ಕೈಯಿಂದ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿರುವ ಬಗ್ಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸೀಗೇಕಾಯಿ ಫಸಲು ಕಳವು, ಪ್ರಕರಣ ದಾಖಲು

 • ಸೀಗೆ ಕಾಯಿ ಫಸಲನ್ನು ಕಳವು ಮಾಡಿರುವ ಪ್ರಕರಣ ಶನಿವಾರಸಂತೆ ಠಾಣಾ ವ್ಯಾಪ್ತಿಯ ನಾಗಾವಾರ ಗ್ರಾಮದಲ್ಲಿ ನಡೆದಿದೆ. ದಿನಾಂಕ 16/03/2011ರಂದು ನಾಗಾವಾರ ಗ್ರಾಮದ ಸರೋಜಮ್ಮ ಎಂಬವರ ಜಾಗದಲ್ಲಿ ಬಹಳ ವರ್ಷಗಳಿಂದ ಬೆಳೆದು ಬಂದಿದ್ದ ಸೀಗೇಕಾಯಿ ಫಸಲನ್ನು ಆರೋಪಿಗಳಾದ ಎನ್.ಎನ್.ವಸಂತ, ರಾಜೇಶ್ವರಿ, ಮಲ್ಲಿಕಾರ್ಜುನ, ರಾಧಾ ಎಂಬವರು ಕಳವು ಮಾಡಿರುವದಾಗಿ ಸರೋಜಮ್ಮನವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

ಸನ್ನಡತೆಗಾಗಿ ಮುಚ್ಚಳಿಕೆ

 • ಉತ್ತಮ ನಡತೆಗಾಗಿ ಮುಚ್ಚಳಿಕೆ ಬರೆಸಿಕೊಳ್ಳಲು ಕ್ರಮ ಕೈಗೊಂಡಿರುವ ಪ್ರಕರಣ ಕುಟ್ಟ ಠಾಣೆಯಲ್ಲಿ ಇಂದು ದಾಖಲಾಗಿದೆ. ಕುಟ್ಟ ಠಾಣಾ ವ್ಯಾಪ್ತಿಯ ಕೋತೂರು ಗ್ರಾಮದ ಎ.ಆರ್.ಕೃಷ್ಣ, ಎ.ಕೆ.ಗಣೇಶ್, ಶ್ರೀಮತಿ ಯಮುನ ಹಾಗೂ ಅದೇ ಗ್ರಾಮದ ನಿವಾಸಿಗಳಾದ ಎಂ.ಬಿ.ಗಣೇಶ, ಎಂ.ಜಿ.ಇಂದಿರಾ, ಎಂ.ಜಿ.ಸುನಿಲ್ ಮುಂತಾದವರ ನಡುವೆ ಆಸ್ತಿಯ ವ್ಯಾಜ್ಯವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಉಭಯ ಕಡೆಯವರೂ ತಮ್ಮ ಆಸ್ತಿಯ ವ್ಯಾಜ್ಯದ ವಿಚಾರದಲ್ಲಿ ಗ್ರಾಮದಲ್ಲಿ ಪರಸ್ಪರ ಗಲಾಟೆ ಮಾಡಿಕೊಂಡು ಅಶಾಂತಿಯ ವಾತಾವರಣ ನಿರ್ಮಾಣವಾಗುವ ಸಾಧ್ಯತೆಗಳಿರುವುದರಿಂದ ಉಭಯ ಕಡೆಯವರಿಂದ ಉತ್ತಮ ನಡತೆಯ ಬಗ್ಗೆ ಮುಚ್ಚಳಿಕೆ ಪಡೆಯುವಂತೆ ಕೋರಿ ಕಾರ್ಯ ನಿರ್ವಾಹಕ ಮ್ಯಾಜಿಸ್ಟ್ರೇಟರವರಿಗೆ ವರದಿಯನ್ನು ಸಲ್ಲಿಸಿ ಪ್ರಕರಣ ದಾಖಲಿಸಲಾಗಿದೆ.

Wednesday, March 16, 2011

ಕಾಡಾನೆ ಧಾಳಿ, ವಿದ್ಯಾರ್ಥಿನಿ ಸಾವು
 • ಕಾಡಾನೆ ಧಾಳಿಯಿಂದ ವಿದ್ಯಾರ್ಥಿನಿಯೋರ್ವಳು ಮೃತಪಟ್ಟಿರುವ ಘಟನೆ ಶನಿವಾರಸಂತೆ ಠಾಣಾ ವ್ಯಾಪ್ತಿಯ ನೀರುಗುಂದ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ನೀರುಗುಂದ ಗ್ರಾಮದ ನಿವಾಸಿ ಇಂದು ಶೇಖರ ಎಂಬವರ ಮಗಳು 16 ವರ್ಷ ಪ್ರಾಯದ ಸುಪ್ರೀತಾ ಎಂಬವಳು ಎಂದಿನಂತೆ ತನ್ನ ಗೆಳತಿ ಸುಷ್ಮಿತಾಳೊಂದಿಗೆ ಶಾಲೆಗೆ ಹೋಗುತ್ತಿರುವಾಗ ಮಾರ್ಗ ಮಧ್ಯೆ ಕಾಡಾನೆಯೊಂದು ಬಂದು ಈರ್ವರು ಹುಡುಗಿಯರನ್ನು ಅಟ್ಟಿಸಿಕೊಂಡು ಬಂದಾಗ ಸುಷ್ಮಿತಾ ಚರಂಡಿಯೊಳಗೆ ನೆಗೆದು ತಪ್ಪಿಸಿಕೊಂಡಿದ್ದು, ಆನೆಯು ಸುಪ್ರೀತಾಳನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಪರಿಣಾಮ ಸುಪ್ರೀತಾ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಾಹನ ಅಫಘಾತ, ಮಹಿಳೆಯ ದಾರುಣ ಸಾವು

 • ವಾಹನ ಅಫಘಾತದಲ್ಲಿ ಮಹಿಳೆಯೋರ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಪಾಲಿಬೆಟ್ಟ ಗ್ರಾಮದಲ್ಲಿ ನಡೆದಿದೆ. ದಿನಾಂಕ 15/03/2011ರ ರಾತ್ರಿ ಫಿರ್ಯಾದಿ ಪಿರಿಯಾಪಟ್ಟಣದ ವೆಂಕಟೇಶ್ ಎಂಬವರ ಅತ್ತೆ ಲಕ್ಷ್ಮಮ್ಮ ಎಂಬವರು ಪಾಲಿಬೆಟ್ಟದ ಟಾಟಾ ಕಂಪೆನಿಯ ತೋಟದಲ್ಲಿ ಕೂಲಿ ಕೆಲಸಕ್ಕೆಂದು ಬಂದಿದ್ದು, ಸಂಜೆ ಕೆಲಸ ಮುಗಿಸಿ ಮನೆಗೆ ಕೆಎ-04-7329ರ ಟೆಂಪೋ ಟ್ರ್ಯಾಕ್ಸ್ ವಾಹನದಲ್ಲಿ ಹೋಗುತ್ತಿರುವಾಗ ಪಾಲಿಬೆಟ್ಟದ ಟಾಟಾ ಕಂಪೆನಿಯ ಮುಂಭಾಗದ ರಸ್ತೆಯಲ್ಲಿ ಟೆಂಪೋ ಟ್ರ್ಯಾಕ್ಸ್ ಚಾಲಕ ಮಧು ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ವಾಹನದ ಬಾಗಿಲು ತೆರೆದುಕೊಂಡು ಲಕ್ಷ್ಮಮ್ಮನವರು ಕೆಳಗೆ ಬಿದ್ದು ಅವರ ಸೀರೆ ಜೀಪಿನ ಬಾಗಿಲಿಗೆ ಸಿಕ್ಕಿಕೊಂಡು ಸ್ವಲ್ಪ ದೂರ ರಸ್ತೆಯಲ್ಲಿ ಎಳೆದುಕೊಂಡು ಹೋಗಿದ್ದು, ಅತೀವ ಗಾಯಗೊಂಡಿದ್ದ ಲಕ್ಷ್ಮಮ್ಮನವರು ಸಾವನ್ನಪ್ಪಿರುವ ಬಗ್ಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿನಾ ಕಾರಣ ವ್ಯಕ್ತಿಯೋರ್ವನ ಮೇಲೆ ಹಲ್ಲೆ, ಗಾಯ

 • ವಿನಾ ಕಾರಣ ವ್ಯಕ್ತಿಯೋರ್ವರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿರುವ ಘಟನೆ ಶನಿವಾರಸಂತೆ ಠಾಣಾ ವ್ಯಾಪ್ತಿಯ ಮಾಲಂಬಿ ಹಾಡಿಯಲ್ಲಿ ನಡೆದಿದೆ. ದಿನಾಂಕ 14/03/2011ರಂದು ಮಾಲಂಬಿ ಹಾಡಿಯ ನಿವಾಸಿ ಗಂಟೆ ಎಂಬವರು ತಮ್ಮ ಮನೆಯ ಬಳಿ ನಿಂತಿರುವಾಗ ಆರೋಪಿ ಜಯೇಂದ್ರ ಎಂಬವರು ವಿನಾ ಕಾರಣ ಜಗಳ ತೆಗೆದು ಗಂಟೆಯವರನ್ನು ಅಶ್ಲೀಲ ಶಬ್ದಗಳಿಂದ ನಿಂದಿಸಿ ತಲೆಗೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿರುವ ಬಗ್ಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ನೀರಿನಲ್ಲಿ ಮುಳುಗಿ ವ್ಯಕ್ತಿಯ ಸಾವು
 • ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಕುಶಾಲನಗರ ಠಾಣಾ ವ್ಯಾಪ್ತಿಯ ಬಸವನತ್ತೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 15/03/2011 ರಂದು ಬಸವನತ್ತೂರು ಗ್ರಾಮದ ಆನೆಕೆರೆಯಲ್ಲಿ ಗ್ರಾಮದ ನಿವಾಸಿ ಮುತ್ತು ಎಂಬವರು ಸ್ನಾನ ಮಾಡಲೆಂದು ನೀರಿಗೆ ಇಳಿಯುವ ಸಂದರ್ಭ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಬಗ್ಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಪರಿಚಿತ ಮೃತದೇಹ ಪತ್ತೆ

 • ಅಪರಿಚಿತ ಗಂಡಸಿನ ಮೃತದೇಹವೊಂದು ಕುಶಾಲನಗರ ಠಾಣಾ ವ್ಯಾಪ್ತಿಯ ಇಂದಿರಾ ಬಡಾವಣೆಯ ಬಳಿ ಕಾವೇರಿ ನದಿ ತೀರದಲ್ಲಿ ಪತ್ತೆಯಾಗಿದೆ. ದಿನಾಂಕ 15/03/2011ರಂದು ಕುಶಾಲನಗರದ ಇಂದಿರಾ ಬಡಾವಣೆಯ ನಿವಾಸಿಗಳಾದ ರಫೀಕ್ ಮತ್ತು ಆತನ ಸ್ನೇಹಿತರು ಬಡಾವಣೆಯ ಬಳಿ ಕಾವೇರಿ ನದಿಯಲ್ಲಿ ಸ್ನಾನ ಮಾಡಲೆಂದು ತೆರಳಿದಾಗ ನದಿಯ ದಡದ ಪೊದೆಯಲ್ಲಿ ಓರ್ವ ಅಪರಿಚಿತ ಗಂಡಸಿನ ಶವವು ಪತ್ತೆಯಾಗಿದ್ದು, ಶವದ ಬದಿಯಲ್ಲಿ ಒಂದು ಚಿಕ್ಕ ಬಾಟಲಿ ಇದ್ದು, ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಮಡಿದ್ದಾರೆ.

Tuesday, March 15, 2011

ಜೀವನದಲ್ಲಿ ಜುಗುಪ್ಸೆ, ವ್ಯಕ್ತಿಯ ಆತ್ಮಹತ್ಯೆ
 • ಗ್ಯಾಸ್ಟ್ರಿಕ್ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಚೆನ್ನಂಗೊಲ್ಲಿಯಲ್ಲಿ ಇಂದು ವರದಿಯಾಗಿದೆ. ನಿನ್ನೆ ರಾತ್ರಿ ಸುಮಾರು 11:45 ಗಂಟೆಗೆ ಚೆನ್ನಂಗೊಲ್ಲಿಯ ನಿವಾಸಿ ರಾಮಕೃಷ್ಣ ಎಂಬವರು ತಮ್ಮ ಮನೆಯಲ್ಲಿ ಶೌಚಾಲಯಕ್ಕೆ ಹೋಗಿ ಬರುವುದಾಗಿ ತಿಳಿಸಿ ಹೋದವರು ಶೌಚಾಲಯದೊಳಗೆ ಮನೆಯ ಛಾವಣಿಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರಿಗೆ ತೀವ್ರತರವಾದ ಗ್ಯಾಸ್ಟ್ರಿಕ್ ಕಾಯಿಲೆಯಿದ್ದು, ಅದರಿಂದಾಗಿ ಈ ರೀತಿ ಮಾಡಿಕೊಂಡಿರಬಹುದೆಂದು ಅವರ ಪತ್ನಿ ಶ್ರೀಮತಿ ಸದಿರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಕಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
 • ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿದ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಾಕುಟ್ಟ ಗ್ರಾಮದಲ್ಲಿ ನಡೆದಿದೆ. ದಿನಾಂಕ 12/03/2011ರಂದು ಮಾಕುಟ್ಟ ಗ್ರಾಮದ ಸುರೇಶ್‌ ಬಾಬು ಎಂಬ ನ್ಯಾಯಬೆಲೆ ಅಂಗಡಿಯವರೊಂದಿಗೆ ಪಡಿತರ ನೀಡುವ ವಿಚಾರದಲ್ಲಿ ಅದೇ ಗ್ರಾಮದ ಅಶ್ರಫ್ ಎಂಬಾತನು ಜಗಳವಾಡಿ ನಂತರ ಅದೇ ದಿನ ಸಂಜೆ ಸುರೇಶ್‌ ಬಾಬುರವರನ್ನು ದಾರಿ ತಡೆದು ಹಲ್ಲೆ ನಡೆಸಿ ನೋವುಂಟು ಮಾಡಿರುವ ಬಗ್ಗೆ ಸುರೇಶ್‌ ಬಾಬು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಫಘಾತ ಮೋಟಾರು ಬೈಕ್ ಸವಾರನಿಗೆ ಗಾಯ

 • ರಸ್ತೆ ಅಫಘಾತವೊಂದರಲ್ಲಿ ಮೋಟಾರು ಬೈಕ್ ಸವಾರನೋರ್ವ ಗಾಯಗೊಂಡಿರುವ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಗ್ಗೋಡ್ಲು ಗ್ರಾಮದಲ್ಲಿ ನಡೆದಿದೆ. ದಿನಾಂಕ 14/03/2011ರಂದು ಕಗ್ಗೋಡ್ಲು ಗ್ರಾಮದ ನಿವಾಸಿ ಕೆ.ಎ.ಕಿಶೋರ್ ಎಂಬವರು ತಮ್ಮ ಮೋಟಾರು ಬೈಕ್ ಸಂಖ್ಯೆ ಕೆಎ-12-ಎ-7046ರಲ್ಲಿ ತಮ್ಮ ಮನೆಯಿಂದ ಮುಖ್ಯ ರಸ್ತೆ ಕಡೆಗೆ ಹೋಗುತ್ತಿರುವಾಗ ಎದುರುಗಡೆಯಿಂದ ಆರೋಪಿ ಸುರೇಶ ಎಂಬಾತನು ತನ್ನ ಟ್ರ್ಯಾಕ್ಟರ್ ಸಂಖ್ಯೆ ಕೆಎ-18-ಎನ್-17ನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕಿಶೋರ್‌ ರವರ ಮೋಟಾರು ಬೈಕ್‌ಗೆ ಡಿಕ್ಕಿಪಡಿಸಿದ ಪರಿಣಾಮ ಕಿಶೋರ್ ಗಾಯಗೊಂಡಿರವ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, March 14, 2011

ಇಲಿ ಔಷದಿ ಸೇವಿಸಿದ್ದ ಯುವಕನ ಸಾವು

 • ಇಲಿ ಔಷಧಿ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನೋರ್ವನು ಚಿಕಿತ್ಸೆ ಫಲಕಾರಿಯಾಗದೆ ಮರಣವನ್ನಪ್ಪಿದ ಪ್ರಕರಣ ಗೋಣಿಕೊಪ್ಪ ನಗರದ ಒಂದನೇ ವಿಭಾಗದಲ್ಲಿ ನಡೆದಿದೆ.
  ನಗರದ ಒಂದನೇ ವಿಭಾಗದ ನಿವಾಸಿ ದಾಮೋದರ ಎಂಬವರ ಮಗ ಭರತನು ದಿನಾಂಕ 04/03/2011 ರಂದು ಗ್ಯಾಸ್ಟ್ರಿಕ್ ಹೊಟ್ಟೆನೋವು ಜಾಸ್ತಿಯಾದ ಕಾರಣ ಮನೆಯಲ್ಲಿದ್ದ ಇಲಿ ಔಷಧಿಯನ್ನು ಅಕಸ್ಮಾತ್ ಸೇವಿಸಿ ನಂತರ ಚಿಕಿತ್ಸೆಗಾಗಿ ಮೈಸೂರಿನ ಮಿಷನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭರತನು ಈ ದಿನ ಬೆಳಿಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮದ್ಯಪಾನ ಮಾಡಿ ನೀರಿಗೆ ಬಿದ್ದು ವ್ಯಕ್ತಿಯ ಸಾವು

 • ವಿಪರೀತ ಮದ್ಯಪಾನ ಮಾಡಿ ವ್ಯಕ್ತಿಯೋರ್ವರು ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ಮೇಕೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 13/03/2011ರಂದು ರಾತ್ರಿ 8:45 ಗಂಟೆಗೆ ಮೇಕೇರಿ ಗ್ರಾಮದಲ್ಲಿ ಇಬ್ನಿವಳವಾಡಿ ಗ್ರಾಮದ ಶೋಭಾ ಎಂಬವರ ಪತಿ ರಾಜ ಯಾನೆ ಪದ್ಮನಾಭ ಎಂಬವರು ವಿಪರೀತ ಮದ್ಯಪಾನ ಮಾಡಿ ತಾವು ವಾಸವಿದ್ದ ಲೈನ್ ಮನೆಯ ತೋಡಿನ ಬಳಿ ಕುಳಿತುಕೊಂಡಿದ್ದವರು ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿರುವುದಾಗಿ ಪತ್ನಿ ಶೋಭಾರವರು ನೀಡಿದ ದೂರಿನ ಮೇಲೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸಂಶಯಾಸ್ಪದ ವ್ಯಕ್ತಿಯ ಬಂಧನ

 • ಸಂಶಯಾಸ್ಪದ ರೀತಿಯಲ್ಲಿ ಸುತ್ತಾಡುತ್ತಿದ್ದ ವ್ಯಕ್ತಿಯೋರ್ವನನ್ನು ವಿರಾಜಪೇಟೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಈ ದಿನ ಬೆಳಿಗ್ಗೆ 10 ಗಂಟೆಯ ಸಮಯದಲ್ಲಿ ವಿರಾಜಪೇಟೆ ಗ್ರಾಮಾಂತರ ಠಾನೆಯ ಸಿಬ್ಬಂದಿ ಪಿ.ವಿ.ಸುರೇಶ್ ಎಂಬವರು ಗುಪ್ತ ವಾರ್ತೆ ಸಂಗ್ರಹ ಕರ್ತವ್ಯದಲ್ಲಿದ್ದಾಗ ಬಿಟ್ಟಂಗಾಲ ಗ್ರಾಮದ ಮುಕ್ಕಾಟಿರ ಬೋಪಯ್ಯನವರ ಮನೆಯ ಬಳಿ ಓರ್ವ ವ್ಯಕ್ತಿಯು ಪೊಲೀಸ್ ಸಿಬ್ಬಂದಿ ಸುರೇಶರವರನ್ನು ಕಂಡು ಓಡಲು ಯತ್ನಿಸಿದಾತನನ್ನು ಹಿಡಿದು ವಿಚಾರಿಸಿದಾಗ ಆತನ ಇರುವಿಕೆ ಹಾಗೂ ವಿಳಾಸದ ಬಗ್ಗೆ ಸೂಕ್ತ ಮಾಹಿತಿ ನೀಡದ ಕಾರಣ ಠಾಣಾಧಿಕಾರಿಯ ಬಳಿ ಹಾಜರು ಪಡಿಸಿದಾತನನ್ನು ಬಂಧಿಸಿ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಆಸ್ತಿ ವೈಷಮ್ಯ, ಮಗನಿಂದಲೇ ತಂದೆಯ ಮೇಲೆ ಹಲ್ಲೆ

 • ಆಸ್ತಿ ವೈಷಮ್ಯದಿಂದ ಮಗನೇ ತಂದೆಯ ಮೇಲೆ ಹಲ್ಲೆ ಮಾಡಿದ ಘಟನೆ ಕುಶಾಲನಗರ ಸಮೀಪದ ಗೊಂದಿ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಪುಟ್ಟಸ್ವಾಮಿ ಮತ್ತು ಅವರ ಮಗ ಮಧು ಕುಮಾರ್‌ ರವರು ದಿನಾಂಕ 12/03/2011ರ ರಾತ್ರಿ ಆಸ್ತಿ ವಿಚಾರವಾಗಿ ಜಗಳವಾಡಿದ್ದು, ನಂತರ ಪುಟ್ಟಸ್ವಾಮಿಯವರು ಜಮೀನಿಗೆ ನೀರು ಬಿಡಲು ಹೋಗಿ ವಾಪಾಸು ಬರುತ್ತಿರುವಾಗ ಮಗ ಮಧು ಕುಮಾರ್ ಹಾಗೂ ಸೊಸೆ ಸುಚಿತ್ರ ಸೇರಿಕೊಂಡು ಪುಟ್ಟಸ್ವಾಮಿಯವರನ್ನು ದಾರಿ ತಡೆದು ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಕುರಿತು ನೀಡಿದ ದೂರಿಗೆ ಕುಶಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Saturday, March 12, 2011

ನಿಲ್ಲಿಸಿದ್ದ ಮೋಟಾರ್‌ ಸೈಕಲ್‌ಗೆ ಕಾರು ಡಿಕ್ಕಿ, ಒಬ್ಬನಿಗೆ ಗಾಯ:

 • ದಿನಾಂಕ 21-3-2011 ರಂದು ವಿರಾಜಪೇಟೆ ನಗರ ಪೊಲೀಸ್ ಠಾಣಾ ಸರಹದ್ದಿನ ವಿರಾಜಪೇಟೆ ನಗರದ ಗಡಿಯಾರ ಕಂಬದ ಬಳಿ ಫಿರ್ಯಾದಿ ಕೆ.ಎಸ್‌. ಬಷೀರ್‌ ಎಂಬವರು ತಮ್ಮ ಬಾಪ್ತು ಮೋಟಾರ್‌ ಸೈಕಲ್‌ನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದು, ಆರೋಪಿ ನಾಚಪ್ಪ, ಹಾಲುಗುಂದ ಗ್ರಾಮ ಇವರು ತಮಗೆ ಸೇರಿದ ಕಾರು ಸಂಖ್ಯೆ ಕೆಎ-12 ಎನ್‌ 8505ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಫಿರ್ಯಾದಿಯವರ ಮೋಟಾರ್‌ ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮ ಫಿರ್ಯಾದಿಗೆ ಗಾಯಗಳಾಗಿದ್ದು, ವಿರಾಜಪೇಟೆ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಎಟಿಎಂ ನಿಂದ ಹಣ ತೆಗೆದು ನೀಡದೆ ವಂಚಿನೆ:

 • ದಿನಾಂಕ 27-12-2011 ರಂದು ಫಿರ್ಯಾದಿ ಎಂ ಶೇಷಪ್ಪ, 58 ವರ್ಷ, ನಾಲ್ಕೇರಿ ಗ್ರಾಮ ಇವರು ಎಸ್‌ಬಿಐ ಬ್ಯಾಂಕಿನ ಎಟಿಎಂ ನಿಂದ ಹಣ ತೆಗೆಯಲು ಹೋಗಿದ್ದು, ಸದರಿಯವರಿಗೆ ಹಣ ತೆಗೆಯಲು ಸಹಾಯಕ್ಕೆಂದು ಬಂದ ಆರೋಪಿ ಗೌಡಂಡ ದರ್ಶನ್‌, ಅಮ್ಮತ್ತಿ ಗ್ರಾಮ ಇವರು ಎಟಿಎಂ ನಿಂದ ಹಣವನ್ನು ತೆಗೆಯುವ ನಾಟಕವಾಡಿ ನಂತರ ಹಣ ಬಂದಿರುವುದಿಲ್ಲ, ಈ ವಿಚಾರವನ್ನು ಬ್ಯಾಂಕಿನ ಅಧಿಕಾರಿಗೆ ತಿಳಿಸುವ ಬಗ್ಗೆ ಹೇಳಿ ಫಿರ್ಯಾದಿ ಬ್ಯಾಂಕಿನ ಒಳಗೆ ಹೋಗಿ ಬರುವಷ್ಟರಲ್ಲಿ ಆರೋಪಿ ಎಟಿಎಂನಿಂದ ರೂ. 8400 ಗಳನ್ನು ತೆಗೆದುಕೊಂಡು ಹೋಗಿ ವಂಚಿಸಿದ್ದು ಈ ಬಗ್ಗೆ ವಿರಾಜಪೇಟೆ ನಗರ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಪಾದಾಚಾರಿಗೆ ಕಾರು ಡಿಕ್ಕಿ, ಗಾಯ:

 • ದಿನಾಂಕ 21-3-2011 ರಂದು ಫಿರ್ಯಾದಿ ಎಂ.ಎಂ. ಸತೀಶ, 32 ವರ್ಷ, ರಾಣಿಪೇಟೆ ಮಡಿಕೇರಿ ಇವರು ಮಡಿಕೇರಿ ನಗರದ ಕಾಲೇಜು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಆರೋಪಿ ಕೆ. ಅನಿಲ್‌ಕುಮಾರ್‌, ಮಾರುತಿ ಕಾರು ಸಂಖ್ಯೆ ಕೆಎ-51-ಟಿಆರ್‌ 368ರ ಚಾಲಕ ಸದರಿ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿಯವರಿಗೆ ಹಿಂದಿನಿಂದ ಡಿಕ್ಕಿಪಡಿಸಿ ಬಲ ಕಾಲಿಗಿ ನೋವನ್ನುಂಟುಮಾಡಿದ್ದು, ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಬೈಕ್ ವಿದ್ಯುತ್‌ ಕಂಬಕ್ಕೆ ಡಿಕ್ಕಿ, ಇಬ್ಬರ ದುರ್ಮರಣ:

 • ದಿನಾಂಕ 21-3-2011ರಂದು ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೆಮ್ಮತ್ತಿ ಗ್ರಾಮದಲ್ಲಿ ಹರೀಶ್‌ ಹಾಗೂ ದಿನೇಶ್‌ ಎಂಬವರು ಮೊ.ಸೈಕಲ್‌ ಸಂ ಕೆಎ-12-ಜೆ-4617ರಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಹರೀಶನು ಬೈಕನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿ ರಸ್ತೆಬದಿಯಲ್ಲಿದ್ದ ವಿದ್ಯುತ್‌ ಕಂಬಕ್ಕೆ ಡಿಕ್ಕಿಪಡಿಸಿದ ಪರಿಣಾಮವಾಗಿ ಹರೀಶ ಹಾಗೂ ದಿನೇಶ್‌ ಎಂಬವರು ತೀವ್ರ ಸ್ವರೂಪದ ಗಾಯಗೊಂಡು ಅವರನ್ನು ಚಿಕಿತ್ಸೆಗೆಂದು ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಇಬ್ಬರೂ ಮೃಟಪಟ್ಟಿದ್ದು, ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಚಲಿಸುತ್ತಿದ್ದ ಮಾರುತಿ ವ್ಯಾನ್‌ ಉರುಳಿಬಿದ್ದು, ಪ್ರಯಾಣಿಕರ ದುರ್ಮರಣ:

 • ದಿನಾಂಕ 20-3-2011 ರಂದು ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಇಂಜಿನಿಯರಿಂಗ್‌ ಕಾಲೇಜಿನ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ 10 ಜನರ ತಂಡ ದುಬಾರೆಗೆ ಹೋಗಿ ವಾಪಾಸ್ಸು ಮಾರುತಿ ವ್ಯಾನ್‌ ಸಂಖ್ಯೆ ಕೆ-03-ಎಂ 6323ರಲ್ಲಿ ಬರುತ್ತಿದ್ದಾಗ ಚಾಲಕ ವಿಕ್ರಮ ಸಿಂಗ್‌ ರವರ ನಿಯಂತ್ರಣ ತಪ್ಪಿದ ಪರಿಣಾಮ ಮಾರುತಿ ವ್ಯಾನ್‌ ರಸ್ತೆಯ ಬದಿಯಲ್ಲಿ ಮಗುಚಿ ಬಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಅಮರ್‌ ಸಿಂಗ್‌ ಮೀರಾ ಹಾಗೂ ಸಿತಾರಾಂ ಎಂಬವರು ಸ್ಥಳದಲ್ಲಿ ಮೃತಪಟ್ಟಿದ್ದು, ಕುಶಾಲನಗರ ಪೊಲೀಸರು ಪ್ರಕರನವನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಜೂಜಾಟ ಪ್ರಕರಣ: ಈ ದಿನ ಶನಿವಾರ ಸಂತೆ ಠಾಣೆಗೆ ಯಾರೋ ದೂರವಾಣಿ ಕರೆಮಾಡಿ ಒಡೆಯನಪುರ ಗ್ರಾಮದ ಕೃಷ್ಣ ಶೆಟ್ಟಿಯವರ ಮೆನೆಯ ಹಿಂದಿ ಕಟ್ಟಂಗ್‌ ಬೇಲಿಯ ಪಕ್ಕದಲ್ಲಿ ಕೆಲವು ವ್ಯಕ್ತಿಗಳು ಜೂಜಾಡುತ್ತಿರುವುದಾಗಿ ತಿಳಿಸಿದ ಮೇರೆಗೆ ಶನಿವಾರಸಂತೆ ಠಾಣೆಯ ಪಿಎಸ್‌ಐ ಮತ್ತು ಸಿಬ್ಬಂದಿರೊಂದಿಗೆ ಇಲಾಖಾ ಜೀಪಿನಲ್ಲಿ ಸದ್ರಿ ಗ್ರಾಮಕ್ಕೆ ಹೋಗಿ ಜೂಜಾಡುತ್ತಿದ್ದ ಆರೋಪಿಗಳನ್ನು ದಸ್ತಗಿರಿ ಮಾಡಿ ಪಣವಾಗಿಟ್ಟಿದ್ದ ರೂ 2190/- ನ್ನು ಅಮಾನತ್ತು ಪಡಿಸಿಕೊಂಡು ಪ್ರಕರಣವನ್ನು ದಾಖಿಲಿಸಿಕೊಂಡಿರುವುದಾಗಿದೆ.

ಹೊಡೆದಾಟ ಪ್ರಕರಣ:ದಿ: 18-3-11 ರಂದು ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ಖಾಸಾಗಿ ನಿಲ್ದಾಣದ ಪಕ್ಕ ಸುರಭಿ ಬಾರ್‌ನ ಮುಂಭಾಗ ರಸ್ರೆಯಲ್ಲಿದ್ದಾಗ ಆರೋಪಿಯಾದ ಶೇಖರ್‌ @ ಚಂದ್ರಶೇಖರ್‌ ಎಂಬವರು ಪಿರ್ಯಾದಿಯವರಾದ ಕೆ.ಎಲ್‌ ರವಿ ರವರ ಹಿಂದೆ ಬಂದು ಬಾಟಲಿಯಿಂದ ಕೆ.ಎಲ್‌ .ರವಿರವರ ತಲೆಯ ಬಲ ಭಾಗಕ್ಕೆ ಮತ್ತು ತುಟಿಯ ಬಲಭಾಗಕ್ಕೆ ಹೊಡೆದು ಗಾಯಪಡಿಸಿರುವುದಾಗಿ ಕೊಟ್ಟ ಪುಕಾರಿನ್ವಯ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

2) ದಿ: 18-3-11 ರಂದು ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ಕೈಗಾರಿಕ ಬಡಾವಣೆ ಹತ್ತಿರ ಎಂ.ಎಂ. ಈಶ್ವರ ಕಾರ್‌ಕೇರ್‌ ವರ್ಕ್‌ಶಾಫ್‌ ನಲ್ಲಿ ಕೆಲಸ ಮಾಡಿಕೊಂಡು ಇರುವಾಗ ಆರೋಪಿ ರಾಜ @ ಪೆಯಿಂಟರ್‌ ರಾಜ ಎಂಬರೊಂದಿಗೆ ಕೊಡಲು ಬಾಕಿ ಇದ್ದ ಹಣವನ್ನು ಕೇಳಿದಾಗ ಹಣ ಕೊಡುವುದಿಲ್ಲ ಎಂದು ಹೇಳಿ ಆತನ ಕೈಯಲ್ಲಿದ್ದ ರಾಡ್‌ನಿಂದ ಈಶ್ವರ ಒಡೆದು ಗಾಯ ಪಡಿಸಿರುವುದಾಗಿ ಹಾಗೂ ಬಲದವಡೆಯ ಭಾಗಕ್ಕೆ ಮತ್ತು ಬಲ ಕಂಕುಳದ ಕೆಳಭಾಗಕ್ಕೆ ಹಲ್ಲಿನಿಂದ ಕಚ್ಚಿ ಗಾಯಪಡಿಸಿರುವುದಾಗಿ ಕೊಟ್ಟ ಪುಕಾರಿನ್ವ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

ಆತ್ಮಹತ್ಯೆ ಪ್ರಕರಣ:
ದಿ: 18-3-2011 ರಂದು ಮಡಿಕೇರಿ ಗ್ರಾಮಾಂತರ ವ್ಯಾಪ್ತಿಯ ಚೇರಳ ಶ್ರೀಮಂಗಲ ಗ್ರಾಮ , ಚೆಟ್ಟಳ್ಳಿ , ಈರಪ್ಪನಿಗೆ ವಾರದ ರಜೆಯಿದ್ದು ಆತನಿಗೆ ಬ್ಯಾಂಕ್‌ ನಲ್ಲಿ ಸಾಲವಿದ್ದು ಸಾಲತೀರಿಸಲು ಸಾಧ್ಯವಾಗದೇ ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮ ಕಾಫಿ ತೋಟದಲ್ಲಿ ಯಾವುದೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದಾಖಲಿಸಿಕೊಂಡಿರುವುದಾಗಿದೆ.

ರಸ್ತೆ ಅಪಘಾತ ಪ್ರಕರಣ:
ಕುಶಾಲನಗರ ಠಾಣಾ ವ್ಯಾಪ್ತಿಯ ಕೂಡು ಮಂಗಳೂರು ಗ್ರಾಮದಲ್ಲಿ ಈ ದಿನ ಶಿವಣ್ಣ ನವರು ಆಟೋರಿಕ್ಷಾ ದಲ್ಲಿ ಕೂಡ್ಲೂರು ಗ್ರಾಮಕ್ಕೆ ದಿನಸಿ ಸಾಮಾನುಗಳನ್ನು ಖರೀದಿಸಿಕೊಂಡು ವಾಪಾಸು ಮನೆಗೆ ಹೋಗುತ್ತಿರುವಾಗ್ಗೆ ಆಟೋರಿಕ್ಷಾ ಚಾಲಕನ್ನು ಆಟೋವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ದನಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಆಟೋ ಮಗುಚಿದ ಬಿದ್ದ ಪರಿಣಾಮ ಪಿರ್ಯಾದಿರಾದ ಶಿವಣ್ಣರವರ ಶರೀರಕ್ಕೆ ಹಾಗೂ ಎಡಕೈಗೆ ನೋವಾಗಿರುವುದಾಗಿ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

ಜೂಜಾಟ ಪ್ರಕರಣ: ಈ ದಿನ ಶನಿವಾರ ಸಂತೆ ಠಾಣೆಗೆ ಯಾರೋ ದೂರವಾಣಿ ಕರೆಮಾಡಿ ಒಡೆಯನಪುರ ಗ್ರಾಮದ ಕೃಷ್ಣ ಶೆಟ್ಟಿಯವರ ಮೆನೆಯ ಹಿಂದಿ ಕಟ್ಟಂಗ್‌ ಬೇಲಿಯ ಪಕ್ಕದಲ್ಲಿ ಕೆಲವು ವ್ಯಕ್ತಿಗಳು ಜೂಜಾಡುತ್ತಿರುವುದಾಗಿ ತಿಳಿಸಿದ ಮೇರೆಗೆ ಶನಿವಾರಸಂತೆ ಠಾಣೆಯ ಪಿಎಸ್‌ಐ ಮತ್ತು ಸಿಬ್ಬಂದಿರೊಂದಿಗೆ ಇಲಾಖಾ ಜೀಪಿನಲ್ಲಿ ಸದ್ರಿ ಗ್ರಾಮಕ್ಕೆ ಹೋಗಿ ಜೂಜಾಡುತ್ತಿದ್ದ ಆರೋಪಿಗಳನ್ನು ದಸ್ತಗಿರಿ ಮಾಡಿ ಪಣವಾಗಿಟ್ಟಿದ್ದ ರೂ 2190/- ನ್ನು ಅಮಾನತ್ತು ಪಡಿಸಿಕೊಂಡು ಪ್ರಕರಣವನ್ನು ದಾಖಿಲಿಸಿಕೊಂಡಿರುವುದಾಗಿದೆ.

ಹೊಡೆದಾಟ ಪ್ರಕರಣ:ದಿ: 18-3-11 ರಂದು ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ಖಾಸಾಗಿ ನಿಲ್ದಾಣದ ಪಕ್ಕ ಸುರಭಿ ಬಾರ್‌ನ ಮುಂಭಾಗ ರಸ್ರೆಯಲ್ಲಿದ್ದಾಗ ಆರೋಪಿಯಾದ ಶೇಖರ್‌ @ ಚಂದ್ರಶೇಖರ್‌ ಎಂಬವರು ಪಿರ್ಯಾದಿಯವರಾದ ಕೆ.ಎಲ್‌ ರವಿ ರವರ ಹಿಂದೆ ಬಂದು ಬಾಟಲಿಯಿಂದ ಕೆ.ಎಲ್‌ .ರವಿರವರ ತಲೆಯ ಬಲ ಭಾಗಕ್ಕೆ ಮತ್ತು ತುಟಿಯ ಬಲಭಾಗಕ್ಕೆ ಹೊಡೆದು ಗಾಯಪಡಿಸಿರುವುದಾಗಿ ಕೊಟ್ಟ ಪುಕಾರಿನ್ವಯ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

2) ದಿ: 18-3-11 ರಂದು ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ಕೈಗಾರಿಕ ಬಡಾವಣೆ ಹತ್ತಿರ ಎಂ.ಎಂ. ಈಶ್ವರ ಕಾರ್‌ಕೇರ್‌ ವರ್ಕ್‌ಶಾಫ್‌ ನಲ್ಲಿ ಕೆಲಸ ಮಾಡಿಕೊಂಡು ಇರುವಾಗ ಆರೋಪಿ ರಾಜ @ ಪೆಯಿಂಟರ್‌ ರಾಜ ಎಂಬರೊಂದಿಗೆ ಕೊಡಲು ಬಾಕಿ ಇದ್ದ ಹಣವನ್ನು ಕೇಳಿದಾಗ ಹಣ ಕೊಡುವುದಿಲ್ಲ ಎಂದು ಹೇಳಿ ಆತನ ಕೈಯಲ್ಲಿದ್ದ ರಾಡ್‌ನಿಂದ ಈಶ್ವರ ಒಡೆದು ಗಾಯ ಪಡಿಸಿರುವುದಾಗಿ ಹಾಗೂ ಬಲದವಡೆಯ ಭಾಗಕ್ಕೆ ಮತ್ತು ಬಲ ಕಂಕುಳದ ಕೆಳಭಾಗಕ್ಕೆ ಹಲ್ಲಿನಿಂದ ಕಚ್ಚಿ ಗಾಯಪಡಿಸಿರುವುದಾಗಿ ಕೊಟ್ಟ ಪುಕಾರಿನ್ವ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

ಆತ್ಮಹತ್ಯೆ ಪ್ರಕರಣ:
ದಿ: 18-3-2011 ರಂದು ಮಡಿಕೇರಿ ಗ್ರಾಮಾಂತರ ವ್ಯಾಪ್ತಿಯ ಚೇರಳ ಶ್ರೀಮಂಗಲ ಗ್ರಾಮ , ಚೆಟ್ಟಳ್ಳಿ , ಈರಪ್ಪನಿಗೆ ವಾರದ ರಜೆಯಿದ್ದು ಆತನಿಗೆ ಬ್ಯಾಂಕ್‌ ನಲ್ಲಿ ಸಾಲವಿದ್ದು ಸಾಲತೀರಿಸಲು ಸಾಧ್ಯವಾಗದೇ ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮ ಕಾಫಿ ತೋಟದಲ್ಲಿ ಯಾವುದೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದಾಖಲಿಸಿಕೊಂಡಿರುವುದಾಗಿದೆ.

ರಸ್ತೆ ಅಪಘಾತ ಪ್ರಕರಣ:
ಕುಶಾಲನಗರ ಠಾಣಾ ವ್ಯಾಪ್ತಿಯ ಕೂಡು ಮಂಗಳೂರು ಗ್ರಾಮದಲ್ಲಿ ಈ ದಿನ ಶಿವಣ್ಣ ನವರು ಆಟೋರಿಕ್ಷಾ ದಲ್ಲಿ ಕೂಡ್ಲೂರು ಗ್ರಾಮಕ್ಕೆ ದಿನಸಿ ಸಾಮಾನುಗಳನ್ನು ಖರೀದಿಸಿಕೊಂಡು ವಾಪಾಸು ಮನೆಗೆ ಹೋಗುತ್ತಿರುವಾಗ್ಗೆ ಆಟೋರಿಕ್ಷಾ ಚಾಲಕನ್ನು ಆಟೋವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ದನಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಆಟೋ ಮಗುಚಿದ ಬಿದ್ದ ಪರಿಣಾಮ ಪಿರ್ಯಾದಿರಾದ ಶಿವಣ್ಣರವರ ಶರೀರಕ್ಕೆ ಹಾಗೂ ಎಡಕೈಗೆ ನೋವಾಗಿರುವುದಾಗಿ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

ಜೂಜಾಟ ಪ್ರಕರಣ: ಈ ದಿನ ಶನಿವಾರ ಸಂತೆ ಠಾಣೆಗೆ ಯಾರೋ ದೂರವಾಣಿ ಕರೆಮಾಡಿ ಒಡೆಯನಪುರ ಗ್ರಾಮದ ಕೃಷ್ಣ ಶೆಟ್ಟಿಯವರ ಮೆನೆಯ ಹಿಂದಿ ಕಟ್ಟಂಗ್‌ ಬೇಲಿಯ ಪಕ್ಕದಲ್ಲಿ ಕೆಲವು ವ್ಯಕ್ತಿಗಳು ಜೂಜಾಡುತ್ತಿರುವುದಾಗಿ ತಿಳಿಸಿದ ಮೇರೆಗೆ ಶನಿವಾರಸಂತೆ ಠಾಣೆಯ ಪಿಎಸ್‌ಐ ಮತ್ತು ಸಿಬ್ಬಂದಿರೊಂದಿಗೆ ಇಲಾಖಾ ಜೀಪಿನಲ್ಲಿ ಸದ್ರಿ ಗ್ರಾಮಕ್ಕೆ ಹೋಗಿ ಜೂಜಾಡುತ್ತಿದ್ದ ಆರೋಪಿಗಳನ್ನು ದಸ್ತಗಿರಿ ಮಾಡಿ ಪಣವಾಗಿಟ್ಟಿದ್ದ ರೂ 2190/- ನ್ನು ಅಮಾನತ್ತು ಪಡಿಸಿಕೊಂಡು ಪ್ರಕರಣವನ್ನು ದಾಖಿಲಿಸಿಕೊಂಡಿರುವುದಾಗಿದೆ.

ಹೊಡೆದಾಟ ಪ್ರಕರಣ:ದಿ: 18-3-11 ರಂದು ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ಖಾಸಾಗಿ ನಿಲ್ದಾಣದ ಪಕ್ಕ ಸುರಭಿ ಬಾರ್‌ನ ಮುಂಭಾಗ ರಸ್ರೆಯಲ್ಲಿದ್ದಾಗ ಆರೋಪಿಯಾದ ಶೇಖರ್‌ @ ಚಂದ್ರಶೇಖರ್‌ ಎಂಬವರು ಪಿರ್ಯಾದಿಯವರಾದ ಕೆ.ಎಲ್‌ ರವಿ ರವರ ಹಿಂದೆ ಬಂದು ಬಾಟಲಿಯಿಂದ ಕೆ.ಎಲ್‌ .ರವಿರವರ ತಲೆಯ ಬಲ ಭಾಗಕ್ಕೆ ಮತ್ತು ತುಟಿಯ ಬಲಭಾಗಕ್ಕೆ ಹೊಡೆದು ಗಾಯಪಡಿಸಿರುವುದಾಗಿ ಕೊಟ್ಟ ಪುಕಾರಿನ್ವಯ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

2) ದಿ: 18-3-11 ರಂದು ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ಕೈಗಾರಿಕ ಬಡಾವಣೆ ಹತ್ತಿರ ಎಂ.ಎಂ. ಈಶ್ವರ ಕಾರ್‌ಕೇರ್‌ ವರ್ಕ್‌ಶಾಫ್‌ ನಲ್ಲಿ ಕೆಲಸ ಮಾಡಿಕೊಂಡು ಇರುವಾಗ ಆರೋಪಿ ರಾಜ @ ಪೆಯಿಂಟರ್‌ ರಾಜ ಎಂಬರೊಂದಿಗೆ ಕೊಡಲು ಬಾಕಿ ಇದ್ದ ಹಣವನ್ನು ಕೇಳಿದಾಗ ಹಣ ಕೊಡುವುದಿಲ್ಲ ಎಂದು ಹೇಳಿ ಆತನ ಕೈಯಲ್ಲಿದ್ದ ರಾಡ್‌ನಿಂದ ಈಶ್ವರ ಒಡೆದು ಗಾಯ ಪಡಿಸಿರುವುದಾಗಿ ಹಾಗೂ ಬಲದವಡೆಯ ಭಾಗಕ್ಕೆ ಮತ್ತು ಬಲ ಕಂಕುಳದ ಕೆಳಭಾಗಕ್ಕೆ ಹಲ್ಲಿನಿಂದ ಕಚ್ಚಿ ಗಾಯಪಡಿಸಿರುವುದಾಗಿ ಕೊಟ್ಟ ಪುಕಾರಿನ್ವ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

ಆತ್ಮಹತ್ಯೆ ಪ್ರಕರಣ:
ದಿ: 18-3-2011 ರಂದು ಮಡಿಕೇರಿ ಗ್ರಾಮಾಂತರ ವ್ಯಾಪ್ತಿಯ ಚೇರಳ ಶ್ರೀಮಂಗಲ ಗ್ರಾಮ , ಚೆಟ್ಟಳ್ಳಿ , ಈರಪ್ಪನಿಗೆ ವಾರದ ರಜೆಯಿದ್ದು ಆತನಿಗೆ ಬ್ಯಾಂಕ್‌ ನಲ್ಲಿ ಸಾಲವಿದ್ದು ಸಾಲತೀರಿಸಲು ಸಾಧ್ಯವಾಗದೇ ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮ ಕಾಫಿ ತೋಟದಲ್ಲಿ ಯಾವುದೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದಾಖಲಿಸಿಕೊಂಡಿರುವುದಾಗಿದೆ.

ರಸ್ತೆ ಅಪಘಾತ ಪ್ರಕರಣ:
ಕುಶಾಲನಗರ ಠಾಣಾ ವ್ಯಾಪ್ತಿಯ ಕೂಡು ಮಂಗಳೂರು ಗ್ರಾಮದಲ್ಲಿ ಈ ದಿನ ಶಿವಣ್ಣ ನವರು ಆಟೋರಿಕ್ಷಾ ದಲ್ಲಿ ಕೂಡ್ಲೂರು ಗ್ರಾಮಕ್ಕೆ ದಿನಸಿ ಸಾಮಾನುಗಳನ್ನು ಖರೀದಿಸಿಕೊಂಡು ವಾಪಾಸು ಮನೆಗೆ ಹೋಗುತ್ತಿರುವಾಗ್ಗೆ ಆಟೋರಿಕ್ಷಾ ಚಾಲಕನ್ನು ಆಟೋವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ದನಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಆಟೋ ಮಗುಚಿದ ಬಿದ್ದ ಪರಿಣಾಮ ಪಿರ್ಯಾದಿರಾದ ಶಿವಣ್ಣರವರ ಶರೀರಕ್ಕೆ ಹಾಗೂ ಎಡಕೈಗೆ ನೋವಾಗಿರುವುದಾಗಿ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

ಹುಡುಗಿಯನ್ನು ಅಪಹರಿಸಿ ಅತ್ಯಾಚಾರ:

 • ದಿನಾಂಕ 10-3-2011 ರಂದು ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲೂರು ಅಂದಗೋವೆ ಗ್ರಾಮದ ಗ್ರೀನ್‌ವ್ಯಾಲಿ ಎಸ್ಟೇಟ್‌ನ ಲೈನ್‌ಮನೆಯಲ್ಲಿ ವಾಸಿಸುತ್ತಿದ್ದ ಫಿರ್ಯಾದಿ ಎಂ.ಎ. ಹಸೈನಾರ್‌ ರವರ ಮನೆಗೆ ಅದೇ ಗ್ರಾಮದ ಆರೋಪಿ ವಿನೋದ, ತಂದೆ ಗಿರಿಯಪ್ಪ ಎಂಬವನು ಜೀಪಿ ಸಂಖ್ಯೆ ಕೆ-12 ಎನ್‌ 193ರಲ್ಲಿ ಫಿರ್ಯಾದಿಯವರ ಮನೆಗೆ ಬಂದು ಫಿರ್ಯಾದಿಯವರ ಮಗಳಾದ 17 ವರ್ಷಪ್ರಾಯದ ಜೀನತ್‌ಳನ್ನು ಅಪಹರಿಸಿಕೊಂಡು ಹೋಗಿ ಸದರಿ ಜೀಪನ್ನು ಅಂದಗೋವೆ ಪೈಸಾರಿಯ ಪಾಜಿರವರ ಮನೆಯ ಬಳಿ ನಿಲ್ಲಿಸಿ ಅಲ್ಲಿಂದ ಒಂದು ಮೋಟಾರ್‌ ಸೈಕಲ್‌ನಲ್ಲಿ ಬೈಲುಕೊಪ್ಪದ ತಿಮುಲಾಪುರಕ್ಕೆ ರವಿ ಎಂಬವರ ಮನೆಗೆ ಕರೆದುಕೊಂಡು ಹೋಗಿ ಅಕ್ರಮ ಬಂಧನದಲ್ಲಿಸಿ ದಿನಾಂಕ 10-3-2011 ರಂದು ರಾತ್ರಿವೇಳೆಯಲ್ಲಿ ಜೀನತ್‌ಳ ಮೇಲೆ ಬಲತ್ಕಾರವಾಗಿ ಅತ್ಯಾಚಾರವೆಸಗಿರುವುದಾಗಿ ನೀಡಿದ ದೂರಿನ ಮೇಲೆ ಸುಂಟಿಕೊಪ್ಪ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮರಳು ದಾಸ್ತಾನು ಪ್ರಕರಣ ದಾಖಲು:

 • ದಿನಾಂಕ 11-3-2011 ರಂದು ಶನಿವಾರಸಂತೆ ಪೊಲೀಸ್‌ ಠಾಣಾ ವ್ಯಾಪ್ತಿಯ ಕೊಡ್ಲಿಪೇಟೆ ಹೋಬಳಿಯ ಕ್ಯಾತೆ ಹೊಳೆಯಿಂದ ಆರೋಪಿಗಳಾದ ನಾರಾಯಣ, ಊರುಗುತ್ತಿ ಗ್ರಾಮ ಹಾಗೂ ಇತರೆ 8 ಜನ ಅಕ್ರಮವಾಗಿ ಸರಕಾರದ ಪರವಾನಗಿ ಇಲ್ಲದೆ ಸುಮಾರು 440 ಮೆಟ್ರಿಕ್‌ ಟನ್‌ ಮರಳನ್ನು ಆರೋಪಿಗಳ ಸ್ವಂತ ಜಮೀನಿನಲ್ಲಿ ದಾಸ್ತಾನು ಮಾಡಿ ಸರಕಾರದ ಬೊಕ್ಕಸಕ್ಕೆ ನಷ್ಟಪಡಿಸಿರುವ ಬಗ್ಗೆ ಫಿರ್ಯಾದಿ ಎನ್‌.ಎ. ಹ್ಯಾರಿ, ಹಿರಿಯ ಭೂ ವಿಜ್ಞಾನಿ, ಅಂತರ್ಜಲ ಮತ್ತು ಝನಿಜ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ , ಮಡಿಕೇರಿ ಕೊಡಗು ಇವರು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯ ಆತ್ಮಹತ್ಯೆ:

 • ದಿನಾಂಕ 10-3-2011 ರಂದು ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ತಿತಿಮತಿ ಗ್ರಾಮದಲ್ಲಿ ನಂಜೇಗ್ಔಡ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮ ಮನೆಯ ಪಕ್ಕದ ಪಾಫಿ ತೋಟದಲ್ಲಿ ಸಿಲ್ವರ್‌ ಮರದ ಕೊಂಬೆ ಲುಂಗಿಯಿಂದ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

Friday, March 11, 2011

ಅಪ್ರಾಪ್ತ ಯುವತಿಯ ಅಪಹರಣ, ಪ್ರಕರಣ ದಾಖಲು
 • ಅಪ್ರಾಪ್ತ ಯುವತಿಯೋರ್ವಳನ್ನು ಪುಸಲಾಯಿಸಿ ಅಪಹರಣ ಮಾಡಿರುವ ಪ್ರಕರಣ ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಅಂದಗೋವೆ ಗ್ರಾಮದ ಕಲ್ಲೂರು ಎಂಬಲ್ಲಿ ನಡೆದಿದೆ. ದಿನಾಂಕ 10/03/2011ರ ರಾತ್ರಿ 8:00 ಗಂಟೆಗೆ ಅಂದಗೋವೆ ಕಲ್ಲೂರು ಗ್ರಾಮದ ನಿವಾಸಿ ಹಸೈನಾರ್‌ ಎಂಬವರ ಮಗಳು 17 ವರ್ಷ ಪ್ರಾಯದ ಜೀನತ್‌ ಎಂಬಾಕೆಯನ್ನು ಅದೇ ಗ್ರಾಮದ ಗಿರಿಯಪ್ಪ ಎಂಬವರ ಮಗ ವಿನೋದ್‌ ಎಂಬಾತನು ಪುಸಲಾಯಿಸಿ ಬಲಾತ್ಕಾರವಾಗಿ ಎಲ್ಲಿಗೋ ಕರೆದುಕೊಂಡು ಹೋಗಿದ್ದಾನೆಂದು ಯುವತಿ ಜೀನತ್‌ಳ ತಂದೆ ಹಸೈನಾರ್‌ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಕತ್ತಿಯಿಂದ ಕಡಿದು ಹಲ್ಲೆ
 • ಕ್ಷುಲ್ಲಕ ಕಾರಣಕ್ಕಾಗಿ ಕತ್ತಿಯಿಂದ ಕಡಿದು ಹಲ್ಲೆ ಮಾಡಿದ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೊಳತ್ತೋಡು ಬೈಗೋಡು ಎಂಬಲ್ಲಿ ನಡೆದಿದೆ. ದಿನಾಂಕ 10/03/2011ರ ರಾತ್ರಿ 8:00 ಗಂಟೆಗೆ ಕೊಳತ್ತೋಡು ಬೈಗೋಡು ಗ್ರಾಮದ ಕೇಳಪಂಡ ಪದ್ಮ ಎಂಬವರ ಲೈನ್‌ ಮನೆಯ ಅಕ್ಕ ಪಕ್ಕದ ನಿವಾಸಿಗಳಾದ ದಿನೇಶ್‌ ಹಾಗೂ ಫಿರ್ಯಾದಿ ಪಣಿ ಎರವರ ರತಿ ಎಂಬವರ ತಂದೆ ಜಗಳವಾಡುತ್ತಿದ್ದು, ರತಿಯವರು ತನ್ನ ತಂದೆಯನ್ನು ಕರೆದುಕೊಂಡು ಬರಲು ಹೋದಾಗ ದಿನೇಶನು 7 ತಿಂಗಳ ರತಿಯವರ ಮೇಲೆ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿದ್ದು, ಬಿಡಿಸಲು ಬಂದ ರತಿಯವರ ಅತ್ತೆ ಕಾವೇರಿಯವರ ಮೇಲೂ ಹಲ್ಲೆ ನಡೆಸಿ ರತಿಯವರ ಗಮಡ ಮಂಜು ಎಂಬವರ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿರುವ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ರಸ್ತೆ ಅಫಘಾತ, ಇಬ್ಬರಿಗೆ ಗಾಯ
 • ರಸ್ತೆ ಅಫಘಾತವೊಂದರಲ್ಲಿ ಈರ್ವರು ಗಾಯಗೊಂಡಿರುವ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕದನೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 19/03/2011ರ ಅಪರಾಹ್ನ ಫಿರ್ಯಾದಿ ಪೊನ್ನಂಪೇಟೆಯ ಪ್ರಶಾಂತ್‌ ಹಾಗೂ ಸುಬ್ರಮಣಿ ಎಂಬವರು ಸುಬ್ರಮಣಿಯವರ ಮೋಟಾರು ಬೈಕು ಸಂ.ಕೆಎ-12-ಜೆ-8285 ರಲ್ಲಿ ಮಡಿಕೇರಿಯಿಂದ ವಿರಾಜಪೇಟೆ ಕಡೆಗೆ ಹೋಗುತ್ತಿರುವಾಗ ಕದನೂರು ಸೇತುವೆ ಬಳಿ ಎದುರುಗಡೆಯಿಂದ ಓರ್ವ ಪಿಕ್‌ಅಪ್‌ ಜೀಪು ಚಾಲಕ ರಹೀಂ ಎಂಬಾತನು ಕೆಎ-12-ಎ-445ರ ಜೀಪನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮೋಟಾರು ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮ ಪ್ರಶಾಂತ್‌ ಹಾಗೂ ಸುಬ್ರಮಣಿರವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗೆ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿ ಜೀಪು ಚಾಲಕನ ವಿರುದ್ದ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, March 10, 2011

ಒಂದು ಲಕ್ಷ ಮೌಲ್ಯದ ಅಕ್ರಮ ಕರ್ಪಚಕ್ಕೆ ವಶ:

 • ದಿನಾಂಕ 9-3-2011 ರಂದು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ನಲ್ವತ್ತೊಕ್ಲು ಗ್ರಾಮದ ಫ್ರಡ್ಲಿ ಮಾಸ್ಟರ್‌ರವರ ಕಾಡು ಜಾಗದಲ್ಲಿ ಆರೋಪಿಗಳಾದ ಐರಿಮಟ್ಟಾ ಎ. ಹಂಸ, ಮುಕ್ಕಾಟಿರ ಫ್ರಡ್ಲಿ ಮಾಸ್ಟರ್‌, ಉಮ್ಮರ್‌ ಕೊಂಡಂಗೇರಿ ಹಾಗೂ ಅಬೂಬಕರ್‌ ಎಂಬವರು ಅಕ್ರಮವಾಗಿ ಸರಕಾರದ ಪರವಾನಗಿ ಇಲ್ಲದೆ ಸುಮಾರು ಒಂದು ಲಕ್ಷ ರೂ. ಬೆಲೆಬಾಳುವ ಕರ್ಪಚಕ್ಕೆ ಯನ್ನು ಫಿರ್ಯಾದಿ ಕೆ.ವೈ. ಪ್ರವೀಣ್‌, ಪಿಎಸ್‌ಐ, ವಿರಾಜಪೇಟೆ ಗ್ರಾಮಾಂತರ ಠಾಣೆ ಹಾಗೂ ಸಿಬ್ಬಂದಿಯವರು ದಾಳಿನಡೆಸಿ ವಶಕ್ಕೆ ತೆಗೆದುಕೊಂಡು ಆರೋಪಿಗಳನ್ನು ದಸ್ತಿಗಿರಿ ಮಾಡಿ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಚಲಿಸುತ್ತಿರುವ ಬಸ್ಸಿನಿಂದ ಬಿದ್ದು ಮಹಿಳೆಗೆ ಗಾಯ:

 • ದಿನಾಂಕ 9-3-2011 ರಂದು ಪೊನ್ನಂಪೇಟೆ ಪೊಲೀಸ್ ಠಾಣಾ ಸರಹದ್ದಿನ ದೇವರಪುರ ಗ್ರಾಮದಲ್ಲಿ ಫಿರ್ಯಾದಿ ಅಪಟ್ಟೀರ ಕಾವೇರಮ್ಮ ಎಂಬವರು ಮೈಸೂರಿನಿಂದ ಕೆ.ಎಸ್‌.ಆರ್‌.ಟಿ.ಸಿ. ಬಸ್ಸಿನಲ್ಲಿ ದೇವರಪುರಕ್ಕೆ ಬಂದು ಬಸ್ಸಿನಿಂದ ಕೆಳಗೆ ಇಳಿಯುವ ಸಮಯದಲ್ಲಿ ಆರೋಪಿ ಕೆಎಸ್‌ಆರ್‌ಟಿಸಿ ಬಸ್‌ ಸಂಖ್ಯೆ ಕೆಎ-09-ಎಫ್‌-4038ರ ಚಾಲಕ ಸದರಿ ಬಸ್ಸನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಿಸಿದ ಪರಿಣಾಮ ಫಿರ್ಯಾದಿ ಬಸ್ಸಿನಿಂದ ಕೆಳಗೆ ಬಿದ್ದು ಗಾಯಗಳಾಗಿದ್ದು, ಈ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ವ್ಯಕ್ತಿಯ ಕೊಲೆ, ಪ್ರಕರಣ ದಾಖಲು:

 • ದಿನಾಂಕ 10-3-2011 ರಂದು ಮಡಿಕೇರಿ ನಗರ ಠಾಣಾ ಸರಹದ್ದಿನ ವಿದ್ಯಾನಗರದಲ್ಲಿ ಫಿರ್ಯಾದಿ ಕೆ.ಯು. ರವೀಂದ್ರ, ಮೇಸ್ತ್ರಿಕೆಲಸ ಇವರಲ್ಲಿ ಬಿಲ್ಡಿಂಗ್‌ ಕೆಲಸ ಮಾಡುತ್ತಿದ್ದ ಅಪ್ಪುಣಿ @ ಶಿವು ಎಂಬ ವ್ಯಕ್ತಿಯನ್ನು ತಾನು ವಾಸಿಸುತ್ತಿದ್ದ ಶೆಡ್‌ನಲ್ಲಿ ಯಾವುದೋ ಹರಿತವಾದ ಆಯುಧದಿಂದ ಕುತ್ತಿಗೆಯನ್ನು ಕುಯ್ದು ಯಾರೋ ಕೊಲೆ ಮಾಡಿ ಪರಾರಿಯಾಗಿರುವುದು ಕಂಡುಬಂದಿದ್ದು, ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿರುತ್ತಾರೆ.

ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯ ಆತ್ಮಹತ್ಯೆ:

 • ದಿನಾಂಕ 9-3-2011 ರಂದು ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಕುಟ್ಟ ತೈಲ ಗ್ರಾಮದಲ್ಲಿ ಪಾಕಾ ಎಂಬ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ವಾಸದ ಮೆನಯ ಕೌಕೋಲಿಗೆ ಪ್ಲಾಸ್ಟಿಕ್‌ ಹಗ್ಗದಿಂದ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡುದ್ದು, ಕುಟ್ಟ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಮನೆಯಿಂದ ಚಿನ್ನಾಭರಣ ಹಾಗು ನಗದುಹಣ ಕಳವು:

 • ದಿನಾಂಕ 10-3-2011 ರಂದು ಕುಶಾಲನಗರ ಪೊಲೀಸ್‌ ಠಾಣಾ ಸರಹದ್ದಿನ ವಿನಾಯಕ ಬಡಾವಣೆಯಲ್ಲಿ ಫಿರ್ಯಾದಿ ಮೋಹನ್ ಕುಮಾರ್‌ ರವವರು ತಮ್ಮ ಮನೆಯಿಂದ ಸ್ವಂತ ಊರಾದ ಪಿರಿಯಾಪಟ್ಟಣಕ್ಕೆ ಹೋದ ಸಮಯದಲ್ಲಿ ಯಾರೋ ಕಳ್ಳರು ಮನೆಯ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿ ಬೀರುವಿನಲ್ಲಿಟ್ಟಿದ್ದ 6ವರೆ ಗ್ರಾಂ ತೂಕದ ಚಿನ್ನಾಭರಣ ಮತ್ತು 15000 ರೂ ನಗದು ಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಮಹಿಳೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ ಡಿಕ್ಕಿ:

 • ದಿನಾಂಕ 8-3-2011 ರಂದು ಗೋಣಿಕೊಪ್ಪ ಠಾಣಾ ಸರಹದ್ದಿನ ಗೋಣಿಕೊಪ್ಪ ನಗರದ ಮಹಿಳಾ ಸಮಾಜದ ಬಳಿ ಫಿರ್ಯಾದಿ ಹೈದರ್‌ ಆಲಿರವರ ತಾಯಿಯವರು ನಡೆದುಕೊಂಡು ಮನೆಯ ಕಡೆಗೆ ಹೋಗುತ್ತಿದ್ದಾಗ ಆರೋಪಿ ಮಹೇಂದ್ರ ಎಂಬವರು ತಮ್ಮ ಮೋ.ಸೈಕಲ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮವಾಗಿ ಫಿರ್ಯಾದಿಯವರ ತಾಯಿಗೆ ಗಾಯಗಳಾಗಿದ್ದು, ಗೋಣಿಕೊಪ್ಪ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

Wednesday, March 9, 2011

ವಾಹನ ಅಪಘಾತ ವ್ಯಕ್ತಿಗೆ ಗಾಯ:

ಈ ದಿನ ದಿನಾಂಕ 9-3-2011 ರಂದು ವಿರಾಜಪೇಟೆ ನಗರ ಠಾಣಾ ಸರಹದ್ದಿನ ತೆಲುಗರಬೀದಿ ಸಾರ್ವಜನಿಕ ರಸ್ತೆಯಲ್ಲಿ ಫಿರ್ಯಾದಿ ಉಳ್ಳಿಯದ ಮೋಹನ್‌ ಎಂಬವರು ತಮ್ಮ ಮಾರುತಿ ವ್ಯಾನ್‌ನಲ್ಲಿ ಮನೆಯ ಕಡೆಗೆ ಹೋಗುತ್ತಿದ್ದಾಗ ಆರೋಪಿ ಆಲೀಲ್‌ ಪಾಷಾ ಎಂಬವರು ಜೀಪು ಸಂ.ಕೆಎ-19 ಎಂ.35106ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಫಿರ್ಯಾದಿಯವರ ವ್ಯಾನಿಗೆ ಡಿಕ್ಕಿಪಡಿಸಿದ್ದು, ಪರಿಣಾಮವಾಗಿ ಫಿರ್ಯಾದಿಗೆ ಗಾಯಗಳಾಗಿರುತ್ತದೆ. ಈ ಸಂಬಂಧ ವಿರಾಜಪೇಟೆ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

Tuesday, March 8, 2011

ಜೀಪು ಆಟೋರಿಕ್ಷಾಕ್ಕೆ ಡಿಕ್ಕಿ ಇಬ್ಬರಿಗೆ ಗಾಯ:

 • ದಿನಾಂಕ 7-3-2011 ರಂದು ವಿರಾಜಪೇಟೆ ನಗರ ಠಾಣಾ ಸರಹದ್ದಿನ ಆರ್ಜಿ ಗ್ರಾಮದ ಅಮ್ಮಣಕುಟ್ಟಂಡ ಬೋಪಣ್ಣರವರ ಗದ್ದೆಹ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಆರೋಪಿ ವಿಜು @ ಈರಪ್ಪ ತನ್ನ ಪಿಕ್‌ಅಪ್‌ ಜೀಪು ಸಂ.ಕೆಎ-12 7053 ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿ ಫಿರ್ಯಾದಿ ಎಂ.ಎಂ. ರಂಶಾದ್‌ ಎಂಬವರ ಆಟೋರಿಕ್ಷಾಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಆಟೋ ಚಾಲಕ ಎಂ.ಎಂ. ರಂಶಾದ್‌ ಹಾಗೂ ಅವರ ತಾಯಿಯವರಿಗೆ ತೀವ್ರ ಗಾಯಗಳಾಗಿದ್ದು, ವಿರಾಜಪೇಟೆ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಪ್ರವೇಶ ಮಾಡಿ ಕರ್ತವ್ಯಕ್ಕೆ ಅಡ್ಡಿ.

 • ದಿನಾಂಕ 8-3-2011 ರಂದು ಸಿದ್ದಾಪುರ ಠಾಣಾ ಸರಹದ್ದಿನ ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯ್ತಿ ಕಛೇರಿಯಲ್ಲಿ ಪಿಡಿಓ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಫಿರ್ಯಾದಿ ಬಿ.ಎಂ. ಕಲ್ಪ ಎಂಬವರು ಎಂದಿನಂತೆ ಕರ್ತವ್ಯಕ್ಕೆ ಕಚೇರಿಗೆ ತೆರಳಿದಾಗ ಆರೋಪಿಗಳಾದ ದೀಪಿಕಾ, ಗ್ರಾಮ ಪಂಚಾಯ್ತಿ ಸದಸ್ಯರು, ತ್ಯಾಗತ್ತೂರು, ಚಂದನ್‌, ಕೆ.ಆರ್‌. ವಿಶ್ವನಾಥ, ಬಿ.ಪಿ. ವಿಠಲ, ಬಿ.ಬಿ. ವಸಂತ, ಹೆಚ್‌.ಆರ್‌. ದೇವಯ್ಯ ಹಾಗೂ ಇತರರು ಸೇರಿ ಅಕ್ರಮಕೂಟವನ್ನು ಸೇರಿಕೊಂಡು ಪಂಚಾಯ್ತಿ ಆವರಣಕ್ಕೆ ಅಕ್ರಮ ಪ್ರವೇಶ ಮಾಡಿ ಕಛೇರಿಗೆ ಬೀಗ ಜಡಿದು ಬಾಗಿಲನ್ನು ತೆರೆಯಲು ಬಿಡದೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸಂಬಂಧ ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ರಸ್ತೆ ಬದಿಯಲ್ಲಿ ನಿಂತ ವ್ಯಕ್ತಿಗೆ ಮೋಟಾರ್‌ ಸೈಕಲ್‌ ಡಿಕ್ಕಿಯಾಗಿ ಗಾಯ.

 • ದಿನಾಂಕ 7-3-2011 ರಂದು ಕುಶಾಲನಗರ ಪೊಲೀಸ್ ಠಾಣಾ ಸರಹದ್ದಿನ ಕಾಳಮ್ಮ ಕಾಲೋನಿಯಲ್ಲಿ ಸೋಮಚ್ಚಮ ಎಂಬವರು ರಸ್ತೆಯ ಬದಿಯಲ್ಲಿ ನಿಂತಿರುವಾಗ ಆರೋಪಿ ಕೆ.ಎ.02 ಎಕ್ಸ್‌ 9062 ಮೋಟಾರ್‌ ಸೈಕಲ ಸವಾರನು ಅದನ್ನು ಅತೀ ವೇಗ ಹಾಗೂ ಅಜಾಗರೂಪತೆಯಿಂದ ಓಡಿಸಿಕೊಂಡು ಬಂದು ಸೋಮಚ್ಚಮ ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ಕಾಲುಗಳಿಗೆ ತೀವ್ರ ಗಾಯಗಳಾಗಿದ್ದು, ಈ ಬಗ್ಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Monday, March 7, 2011

ಆತ್ಮಹತ್ಯೆಗೆ ಪ್ರೇರಣೆ, ಪ್ರಕರಣ ದಾಖಲು:

ದಿನಾಂಕ 5-3-2011 ರಂದು ಪೊನ್ನಂಪೇಟೆ ಪೊಲೀಸ್ ಠಾಣಾ ಸರಹದ್ದಿನ ನೋಕ್ಯ ಗ್ರಾಮದ ಫಿರ್ಯಾದಿ ಐನಂಡ ಮಂದಣ್ಣ ರವರ ಮಗಳಾದ ರಮ್ಯ ಆಕೆಯ ಗಂಡ ಆರೋಪಿ ಪುಲಿಯಂಡ ಕುಶಾಲಪ್ಪ ಜಗಳ ತೆಗೆದು ನೀನು ತವರು ಮನೆಗೆ ಹೋಗಬೇಕು ಎಂದು ಬೈದು ಹಿಂಸೆ ನೀಡಿದ್ದು ಹಾಗೂ ನೀನು ನನ್ನೊಂದಿಗೆ ಸಂಸಾರ ಮಾಡಲು ಯೋಗ್ಯಳಲ್ಲ ಎಂಬುದಾಗಿ ನಿಂದಿಸಿದ ಪರಿಣಾದ ರಮ್ಯಾಳು ಬಾವಿಗೆ ಹಾರಿ ಆತ್ಯಹತ್ಯೆ ಮಾಡಿಕೊಂಡಿದ್ದು, ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ವರದಕ್ಷಿಣೆ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರೇರಣೆ:

ದಿನಾಂಕ 3-3-2011 ರಂದು ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಕೊಡ್ಲಿಪೇಟೆ ಯಲ್ಲಿ ವಾಸಮಾಡಿಕೊಂಡಿರುವ ರಿಜಿನಾ ಬಾನು ಎಂಬವಳ ಗಂಡ ಆರೋಪಿ ಹಮೀದ್‌ , ಕೊಡ್ಲಿಪೇಟೆ ಹಾಗೂ ಇತರೆ 5 ಮಂದಿ ಆರೋಪಿಗಳು ಸೇರೆ ಹಣ ಕೊಡುವಂತೆ ಪೀಡಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡಿದ್ದು, ಇದರಿಂದ ಬೇಸರಗೊಂಡ ರಿಜಿನಾಬಾನು ದಿನಾಂಕ 3-3-2011 ರಂದು ಸಂಜೆ ಮನೆಯಲ್ಲಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಸಾಯಲು ಪ್ರಯತ್ನಿಸಿದ್ದು, ಈಕೆಯನ್ನು ಚಿಕಿತ್ಸೆಗೆ ಹಾಸನದ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 6-3-2011 ರಂದು ಬೆಳಿಗ್ಗೆ 02-00 ಗಂಟೆ ,ಮೃತಪಟ್ಟಿದ್ದು, ಈ ಸಂಬಂಧ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಪಾದಾಚಾರಿಗೆ ಜೀಪು ಡಿಕ್ಕಿ, ಗಾಯ:

ದಿನಾಂಕ 6-3-2011 ರಂದು ಸಿದ್ದಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಸಿದ್ದಾಪುರ ನಗರದ ಮೈಸೂರು ರಸ್ತೆಯಲ್ಲಿ ಫಿರ್ಯಾದಿ ಕೆ. ಸುಂದರ ಎಂಬವರು ನಿಂತುಕೊಂಡಿರುವಾಗ ಆರೋಪಿ ಕೆ.ಟಿ. ಮಂಜೇಶ್‌ ಜೀಪು ಸಂ.ಎಂವೈಜೆಡ್‌-7017ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಹಿಂಬದಿಗೆ ಚಲಿಸಿ ಫಿರ್ಯಾದಿಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಫಿರ್ಯಾದಿ ಕೆಳಕ್ಕೆ ಬಿದ್ದು ಕಾಲಿನ ಮೇಲೆ ಜೀಪು ಹರಿದು ತೀವ್ರ ಗಾಯಗೊಂಡಿದ್ದು ಸಿದ್ದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲುಗೊಂಡಿದ್ದು, ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

Saturday, March 5, 2011

ಕ್ಷುಲ್ಲಕ ಕಾರಣಕ್ಕೆ ದಾರಿ ತಡೆದು ಹಲ್ಲೆ
 • ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವರನ್ನು ದಾರಿ ತಡೆದು ಹಲ್ಲೆ ಮಾಡಿದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಗಾಳಿಬೀಡು ಗ್ರಾಮದ ವಿದ್ಯಾನಗರದಲ್ಲಿ ನಡೆದಿದೆ. ದಿನಾಂಕ 04/03/2011ರ ರಾತ್ರಿ 8:00 ಗಂಟೆ ಸುಮಾರಿಗೆ ಫಿರ್ಯಾದಿ ಗಾಳಿಬೀಡು ಗ್ರಾಮದ ಧನಂಜಯ ಎಂಬವರು ಬೊಲೆರೋ ವಾಹನದಲ್ಲಿ ಮಡಿಕೇರಿ ಕಡೆಗೆ ಬರುತ್ತಿರುವಾಗ ವಿದ್ಯಾನಗರದ ಬಳಿ ಒಂದು ಎಂ.ಎಂ.540 ಜೀಪಿನಲ್ಲಿ ಬಂದ ಮೂರು ಜನರು ಜೀಪನ್ನು ಧನಂಜಯನವರ ವಾಹನಕ್ಕೆ ಅಡ್ಡಲಾಗಿ ನಿಲ್ಲಿಸಿ ಜೀಪಿನಿಂದ ಇಳಿದು ಬಂದು ವಿನಾ ಕಾರಣ ಧನಂಜಯನವರನ್ನು ಕುರಿತು ಅಶ್ಲೀಲ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಹೊರಟುಹೋಗಿರುವ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕಗೊಂಡಿರುತ್ತಾರೆ.
ಎರಡು ವರ್ಷದ ಮಗು ಕಾಣೆ, ಪ್ರಕರಣ ದಾಖಲು
 • ಎರಡು ವರ್ಷ ಪ್ರಾಯದ ಮಗುವೊಂದು ಕಾಣೆಯಾಗಿರುವ ಪ್ರಕರಣ ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಗೋಣಿಕೊಪ್ಪ ನಗರದಲ್ಲಿ ವರದಿಯಾಗಿದೆ. ದಿನಾಂಕ 2/3/2011 ರಂದು ನಗರದ ನಿವಾಸಿ ಆರ್ಮುಗಂ ಎಂಬವರ ಪತ್ನಿ ರೇಖಾರವರು ತಮ್ಮ ಎರಡನೇ ಮಗು 2 ವರ್ಷ ಪ್ರಾಯದ ಶಿವಪ್ರಸಾದ್‌ ಎಂಬವನೊಂದಿಗೆ ಗೋಣಿಕೊಪ್ಪ ನಗರದ ಔಷದಿ ಅಂಗಡಿಯೊಂದಕ್ಕೆ ಹೋಗಿ ಮಾತ್ರಗಳನ್ನು ಖರೀದಿಸುತ್ತಿರುವಾಗ ಕೆಳಗೆ ಬಿಟ್ಟಿದ್ದ ಮಗು ಜನ ಜಂಗುಳಿಯಲ್ಲಿ ಕಳೆದು ಹೋಗಿದ್ದು ಈ ಬಗ್ಗೆ ಆರ್ಮುಗಂರವರು ನೀಡಿದ ದೂರಿನ ಮೇಲೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಜೀವನದಲ್ಲಿ ಜುಗುಪ್ಸೆ, ವ್ಯಕ್ತಿಯ ಆತ್ಮಹತ್ಯೆ

 • ಜೀವನದಲ್ಲಿ ಜುಗುಪ್ಸೆಗೊಂಡ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಟ್ಟ ಠಾಣಾ ವ್ಯಾಪ್ತಿಯ ನಾಲ್ಕೇರಿ ಗ್ರಾಮದಲ್ಲಿ ನಡೆದಿದೆ. ನಾಲ್ಕೇರಿ ಗ್ರಾಮದ ನಿವಾಸಿ ಪಣಿ ಎರವರ ನಂಜ ಎಂಬಾತನ ಪತ್ನಿಯು ಸುಮಾರು ಒಂದು ವರ್ಷದ ಹಿಂದೆ ನಂಜನನ್ನು ಬಿಟ್ಟು ಬೇರೆ ಯಾರೊಂದಿಗೋ ಹೋಗಿದ್ದು, ಈ ಬಗ್ಗೆ ನಂಜನು ತುಂಬಾ ಬೇಸರಗೊಂಡಿದ್ದನೆನ್ನಲಾಗಿದೆ. ದಿನಾಂಕ 23/2/2011ರಿಂದ ನಂಜನು ಮನೆ ಬಿಟ್ಟು ಹೋದವನು ವಾಪಾಸು ಬಾರದೇ ಇದ್ದು, ಈತನು ಕೂಲಿ ಕೆಲಸಕ್ಕಾಗಿ ಬೇರೆ ಕಡೆ ಹೋಗಿರಬಹುದೆಂದು ಮನೆಯವರು ಭಾವಿಸಿದ್ದರು. ಆದರೆ ದಿನಾಂಕ 4/3/2011ರಂದು ನಂಜನು ಗ್ರಾಮದ ದೇಯಂಡ ಪೊನ್ನಪ್ಪ ಎಂಬವರ ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕಂಡ ಫಿರ್ಯಾದಿ ಪಣಿ ಎರವರ ಚಿಮ್ಮ ಎಂಬವರು ನೀಡಿದ ದೂರಿನ ಮೇರೆಗೆ ಕುಟ್ಟ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Thursday, March 3, 2011

ಹೆಂಗಸು ಮತ್ತು ಮಗು ಕಾಣೆ:
ವಿರಾಜಪೇಟೆ ನಗರದ ಠಾಣಾ ವ್ಯಾಪ್ತಿ ಮುರ್ನಾಡು ರಸ್ತೆಯ ಪಿರ್ಯಾದಿಯವರಾದ ಎ.ಎನ್‌. ಧನೇಂಧ್ರ ರವರ ಪತ್ನಿ ಪದ್ಮಾವತಿ ಪ್ರಾಯ 30 ವರ್ಷ ರವರು ಹಿರಿಯಮಗಳು ಹರ್ಷಿತಳನ್ನು ಶಾಲೆಗೆ ಬಿಡುವ ಸಲುವಾಗಿ ಕಿರಿಯ ಮಗಳು ವರ್ಷಿತಳೊಂದಿಗೆ ಮನೆ ಹೋದವಳು ವಾಪಾಸ್ಸು ಮನೆಗೆ ಬಂದಿಲ್ಲವೆಂದು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದೇ ಇದ್ದ ಕಾರಣ ಕೊಟ್ಟ ಪುಕಾರಿನ್ವಯ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ತನಿಖೆಯನ್ನು ಕೈಗೊಂಡಿರುತ್ತಾರೆ.

ಗಂಡಸು ಕಾಣೆ :
ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಚೆಂಬೆ ಬೆಳ್ಳೂರು ಗ್ರಾಮದ ವಾಸಿ ಪಿರ್ಯಾದಿದಾರರಾದ ಶ್ರೀಮತಿ ಸುಮತಿ ರವರ ಗಂಡ ಸುಬ್ರಮಣಿರವರು ದಿನನಿತ್ಯ ಮದ್ಯಪಾನ ಮಾಡಿಕೊಂಡು ಮನೆಗೆ ಬಂದು ಸಾಲದ ವಿಚಾರ, ಅಡುಗೆ ವಿಚಾರ ಹಾಗೂ ಚಿಕ್ಕಪುಟ್ಟ ವಿಚಾರದಲ್ಲಿ ಜಗಳ ಮಾಡುತ್ತಿದ್ದು ಕಳೆದ ಅಕ್ಟೋಬರ್‌ ತಿಂಗಳಿನ ಕಾವೇರಿ ಸಂಕ್ರಮಣಕ್ಕೆ ಒಂದು ವಾರದ ಮುಂದೆ ಹೋದವರು ವಾಪಾಸ್ಸು ಮನೆಗೆ ಬಂದಿರುವುದಿಲ್ಲ ಈ ಬಗ್ಗೆ ನೆಂಟರಿಸ್ಟರಲ್ಲಿ ಅಕ್ಕಪಕ್ಕದಲ್ಲಿ ವಿಚಾರಿಸಲಾಗಿ ಪತ್ತೆಯಾಗದೆ ಇರುವುದರಿಂದ ಅವರನ್ನು ಪತ್ತೆ ಹಚ್ಚಿಕೊಡಬೇಕಾಗಿ ಕೊಟ್ಟ ಪುಕಾರಿನ್ವ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

ಆತ್ಮಹತ್ಯೆಯ ಪ್ರಕರಣ:

ಸಿದ್ಥಾಪುರ ಠಾಣಾ ವ್ಯಾಪ್ತಿಯ ಇಂಜಿಲಗೆರೆ ನಿವಾಸಿ ಸಿಂಧು ರವರ ಗಂಡ ಪ್ರದೀಪ್‌ ತನ್ನ ತಂದೆ ತಾಯಿಯವರು ನೆಲ್ಲಿಹುದಿಕೇರಿಯಲ್ಲಿ ಅವರ ಮನೆಯನ್ನು ಮಾರಾಟಾಮಾಡಿ ಕುಶಾಲನಗರದ ಕಡೆ ಹೋಗುತ್ತಾರೆಂದು ಬೇಸರದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕೊಟ್ಟ ದೂರಿನ್ವಯ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.

Wednesday, March 2, 2011

ಹುಡುಗಿ ಕಾಣೆ, ಪ್ರಕರಣದ ದಾಖಲು:

 • ಫಿರ್ಯಾದಿ ಶ್ರೀಮತಿ ಕುಮಾರಿ, ಗಂಡ ಮೋಹನ, ಕೂಲಿ ಕೆಲಸ ಶಿರಂಗಾಲ ಗ್ರಾಮ ಇವರ ಮಗಳು ಶಾಂಭವಿ ಸುಮಾರು 8 ತಿಂಗಳ ಹಿಂದೆ ಧರ್ಮರಾಜ್‌ರವರಲ್ಲಿಗೆ ಶುಂಠಿ ಕೆಲಸಕ್ಕೆಂದು ಹೋಗಿ ನಂತರ ಸಂಬಳವನ್ನು ಪಡೆದುಕೊಂಡು ಬರುವುದಾಗಿ ಪಕ್ಕದ ಮನೆಯ ವೇದಾವತಿ ಎಂಬವಳೊಂದಿಗೆ ಹೋದವಳು ಮತ್ತೆ ಮನೆಗೆ ಬಾರದೇ ಇದ್ದು, ನಂತರ ವಿಚಾರಿಸಿದಲ್ಲಿ ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿರುವುದಾಗಿ ತಿಳಿದು ಬಂದು ತದನಂತರ ಆಕೆ ಕಾಣೆಯಾಗಿರುವುದಾಗಿ ಠಾಣೆಗೆ ದೂರನ್ನು ನೀಡಿದ್ದು, ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಅಕಸ್ಮಿಕ ಗುಂಡು ತಗಲು ವ್ಯಕ್ತಿಗೆ ಗಾಯ:

 • ದಿನಾಂಕ 18-2-2011 ರಂದು ಭಾಗಮಂಡಲ ಠಾಣಾ ಸರಹದ್ದಿನ ಚೆರಂಡೆಟ್ಟಿ ಗ್ರಾಮದಲ್ಲಿ ಫಿರ್ಯಾದಿ ಚಿರುಕನ ಪೆಮ್ಮಯ್ಯ ರವರನ್ನು ಆರೋಪಿ ಬೇಟೆಗಾಗಿ ಕಾಡಿಗೆ ಕರೆದುಕೊಂಡು ಹೋದ ಸಮಯದಲ್ಲಿ ಆರೋಪಿಯ ಬಂದೂಕಿನಿಂದ ಆಕಸ್ಮಿಕ ಗುಂಡು ಹಾರಿ ಫಿರ್ಯಾದಿಯ ಕಾಲಿಗೆ ತಗುಲಿ ತೀವ್ರ ಗಾಯವಾಗಿದ್ದು, ಈ ಸಂಬಂಧ ಭಾಗಮಂಡಲ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

Tuesday, March 1, 2011

ಆಕಸ್ಮಿಕ ನೀರಿಗೆ ಬಿದ್ದು ವ್ಯಕ್ತಿಯ ಸಾವು:

ದಿನಾಂಕ 28-2-2011 ರಂದು ಭಾಗಮಂಡಲ ಪೊಲೀಸ್‌ ಠಾಣಾ ಸರಹದ್ದಿನ ಬಾಡಗ ಗ್ರಾಮದಲ್ಲಿ ಫಿರ್ಯಾದಿ ಹೆಚ್‌.ಶಾರದ ರವರ ಗಂಡ ಪಿ. ಕೋದ ಎಂಬವರು ಮಗನೊಂದಿಗೆ ಮೀನು ಹಿಡಿಯಲು ಕಾವೇರಿ ನದಿಗೆ ಹೋಗಿದ್ದು, ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದು ಈ ಸಂಬಂಧ ಭಾಗಮಂಡಲ ಪೊಲೀಸ್ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ:

ದಿನಾಂಕ 28-2-2011 ರಂದು ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಕೋತೂರು ಗ್ರಾಮದ ಲಕ್ಕುಂದ ಎಂಬಲ್ಲಿ ಶ್ರೀಪತಿ ಎಂಬವರ ಲೈನು ಮನೆಯಲ್ಲಿ ಫಿರ್ಯಾದಿ ಜೆ.ಎಸ್‌.ಬುರುಡರವರೊಂದಿಗೆ ಆರೋಪಿ ಗಣೇಶ ಎಂಬವನು ಜಗಳವಾಡಿ ಹಲ್ಲೆನಡೆಸಿದ್ದು ಈ ಸಂಬಂಧ ಕುಟ್ಟ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಅಕ್ರಮ ಪ್ರವೇಶ, ಆಸ್ತಿ ಹಾನಿ ಮತ್ತು ಕೊಲೆ ಬೆದರಿಕೆ:

ದಿನಾಂಕ 12-2-2011 ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಹೊದ್ದೂರು ಗ್ರಾಮದಲ್ಲಿ ಫಿರ್ಯಾದಿ ಎ.ಎ.ಚಿಣ್ಣಪ್ಪ ಎಂಬವರಿಗೆ ಸೇರಿದ ಕಾಫಿತೋಟಕ್ಕೆ ಆರೋಪಿಗಳಾದ ಎನ್‌.ಎಂ. ಸುಭಾಷ್‌, ಸುನಿತಾ ಸುಭಾಷ್‌,ಉಮಾ ಅಪ್ಪಚ್ಚು, ಮಾದಿಗರ ಆನಂದ ಹಾಗೂ ಸಿ.ಕೆ. ಸುಬ್ಬಯ್ಯ ಇವರುಗಳು ಸೇರಿ ಅಕ್ರಮ ಪ್ರವೇಶ ಮಾಡಿ ಸುಮಾರೂ 5 ಚೀಲ ಕಾಫಿಯನ್ನು ಕುಯ್ದು, ತೋಟದ ತಂತಿ ಬೇಲಿಯನ್ನು ಕತ್ತರಿಸಿ ಕಾಫಿ ಮತ್ತು ತಂತಿಯನ್ನು ಕಳವು ಮಾಡಿಕೊಂಡು ಹೋಗಿದ್ದು , ಕೊಲೆ ಬೆದರಿಕೆ ಸಹ ಹಾಕಿರುತ್ತಾರೆಂದು ಫಿರ್ಯಾದಿಯವರು ನೀಡಿದ ದೂರಿನ ಮೇರೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಮಹಿಳೆಗೆ ವರರದಕ್ಷೆಣೆ ಕಿರುಕುಳ:

ಈ ಪ್ರಕರಣದ ಫಿರ್ಯಾದಿ ಶ್ರೀಮತಿ ಶ್ವೇತ ಎಂಬವರು ದಿನಾಂಕ 18-4-2008ರಂದು ಆರೋಪಿ ಜೈ ಜಗಧೀಶ್‌ ರನ್ನು ಮದುವೆಯಾಗಿದ್ದು, ಮದುವೆಯ ಸಮಯದಲ್ಲಿ 25 ಗ್ರಾಂ ಚಿನ್ನ, ರೂ.80,000/-ಗಳನ್ನು ವರದಕ್ಷಿಣೆ ರೂಪದಲ್ಲಿ ನೀಡಿದ್ದು, ನಂತರ ಆರೋಪಿ ಹಾಗೂ ಮೀನಾಕ್ಷಿ, ರಾಮಕೃಷ್ಣ, ಮಾಲಿನಿ ಹಾಗೂ ಶಾಂಬಾ ಇವರುಗಳು ಸೇರಿ ಫಿರ್ಯಾದಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡುತ್ತಿದ್ದು ಈ ಸಂಬಂಧ ಫಿರ್ಯಾದಿಯು ಮನನೊಂದು ವಿಷವನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಈ ಸಂಬಂದ ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ ವರ್ಗಾಯಿಸಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣದ ತನಿಖೆಯನ್ನು ಕೈಗೊಂಡಿರುತ್ತಾರೆ.

ವಿಪರೀತ ಮದ್ಯಪಾನ ಮಾಡಿ ವ್ಯಕ್ತಿಯ ಮರಣ:

ದಿನಾಂಕ 27-2-2011 ರಂದು ಶನಿವಾರಸಂತೆ ಠಾಣೆಯ ಸರಹದ್ದಿನ ಯಶಸ್ವಿನಿ ಥಿಯೇಟರ್‌ ಬಳಿ ಶ್ರೀಮತಿ ಸಾಕಮ್ಮ ಎಂಬವರು ವಿಪರೀತ ಮದ್ಯವನ್ನು ಸೇವಿಸಿ ಮೃತಪಟ್ಟಿದ್ದು, ಅವರ ಶರೀರದಲ್ಲಿ ಸಣ್ಣಪುಟ್ಟ ಗಾಯಗಳಿದ್ದು, ಅವರ ಸಾವಿನ ಬಗ್ಗೆ ಸಂಶಯವಿರುವುದಾಗಿ ಫಿರ್ಯಾದಿ ಎಂ.ಬಿ. ಶ್ರೀಧರ ಎಂಬವರು ನೀಡಿದ ದೂರಿನ ಮೇರೆ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.