Tuesday, May 31, 2011

ಕೆಲಸಕ್ಕೆ ಹೋದ ಮಹಿಳೆ ನಾಪತ್ತೆ
 • ಕೂಲಿ ಕೆಲಸಕ್ಕೆಂದು ಹೋದ ಮಹಿಳೆಯೋರ್ವರು ನಾಪತ್ತೆಯಾಗಿರುವ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಮತ್ತೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 25/5/2011ರಂದು ಬೆಳಿಗ್ಗೆ ಮತ್ತೂರು ಗ್ರಾಮದ ಹೆಚ್‌.ಬಿ.ಮನು ಎಂಬವರ ಪತ್ನಿ ಗೀತಾ ಎಂಬಾಕೆಯು ಎಂದಿನಂತೆ ಕೂಲಿ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವರು ಇದುವರೆಗೂ ಮನೆಗೆ ಹಿಂತಿರುಗಿ ಬಾರದೇ ಇದ್ದು, ನೆಂಟರಿಷ್ಟರ ಮನೆಯಲ್ಲೆಲ್ಲಾ ವಿಚಾರಿಸಿದರೂ ಪತ್ತೆಯಾಗಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮಹಿಳೆಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

Sunday, May 22, 2011

ವರದಕ್ಚಿಣೆ ಕಿರುಕುಳ ಪ್ರಕರಣ ದಾಖಲು:


ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಅಂಬಟ್ಟಿ ಗ್ರಾಮದಲ್ಲಿ ವಾಸವಾಗಿರುವ ಫಿರ್ಯಾದಿ ಬೇಬಿರವರು 13 ವರ್ಷಗಳ ಹಿಂದೆ ಮದುವೆಯಾಗಿದ್ದು, ಆಕೆಯ ಗಂಡ ಆರೋಪಿ ವಿಜಯರವರು, ಚಂದ್ರಾವರಿ ಹಾಗೂ ಕಸ್ತೂರಿ ರವರುಗಳು ಫಿರ್ಯಾದಿಗೆ ತವರು ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, ದಿನಾಂಕ 20-5-2011 ರಂದು ಸಂಜೆ 5-00 ಗಂಟೆಗೆ ಆರೋಪಿಯು ಮದ್ಯಪಾನ ಮಾಡಿ ಬಂದು ನೀನು ತವರು ಮನೆಯಿಂದ ಏಕೆ ಹಣವನ್ನು ತರಲಿಲ್ಲವೆಂದು ಜಗಳವಾಡಿ ಕೈಯಿಂದ ಫಿರ್ಯಾದಿ ಶ್ರೀಮತಿ ಬೇತಿಗೆ ಹೊಡೆದು, ಫಿರ್ಯಾದಿಯ ಮಗ ನಿತಿನ್‌ಗು ಕೂಡ ಹೊಡೆದು ಮನೆಯಿಂದ ಹೊರಗೆ ಹಾಕಿದ್ದು ಅಲ್ಲದೆ ಕತ್ತಿಯಿಂದ ಕೊಚ್ಚಿ ಕೊಲೆಮಾಡುವುದಾಗಿ ಕೊಲೆ ಬೆದರಿಕೆ ಹಾಕಿದ್ದು, ಈ ಸಂಬಂಧ ವಿರಾಜಪೇಟೆ ಪೊಲೀಸ್ ಠಾಣೆಗೆ ಫಿರ್ಯಾದಿಯವರು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.


ಪಿಗ್ಮಿ ಕಲೆಕ್ಟರ್‌ನಿಂದ ಹಣ ದುರುಪಯೋಗ:


ಫಿರ್ಯಾದಿದಾರರಾದ ವ್ಯವಸ್ಥಾಪಕರು, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ನಿ. ಶನಿವಾರಸಂತೆ ಇವರು ದಿನಾಂಕ 13-5-2011 ರಂದು ಬ್ಯಾಂಕಿನ ಪಿಗ್ಮಿ ಖಾತೆಗಳನ್ನು ಪರಿಶೀಲನೆ ಮಾಡುವಾಗ ಪಿಗ್ಮಿ ಖಾತೆಯಲ್ಲಿ ಸುಮಾರು 70,532/- ರೂ ಅವ್ಯವಹಾರ ನಡೆದಿರುವುದು ಕಂಡು ಬಂದು, ಸದರಿ ಹಣದ ಬಹುತೇಕ ಪಾಲು ಹಣವು ಪಿಗ್ಮಿ ಕಲೆಕ್ಟರ್‌ ಕೆ.ಎನ್‌. ಗೌರಿಶಂಕರ ಅವರ ಖಾತೆಯಲ್ಲಿ ದುರುಪಯೋಗವಾಗಿರುವುದು ಕಂಡು ಬಂದಿರುತ್ತದೆ. ಈ ಕುರಿತು ಆರೋಪಿ ಕೆ.ಎನ್‌. ಗೌರಿಶಂಕರರವರ ವಿರುದ್ದ ಕ್ರಮಕ್ಕಾಗಿ ಫಿರ್ಯಾದಿಯವರು ದೂರನ್ನು ನೀಡಿದ್ದು ಅದರಂತೆ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.


ಕ್ಷುಲ್ಲಕ ಕಾರಣದ ಗಂಡನಿಂದ ಹೆಂಡತಿಗೆ ಹಲ್ಲೆ:


ದಿನಾಂಕ 21-5-2011 ರಂದು ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ನಿಡ್ತಕೊಪ್ಪಲು ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ಮಣಿ ಎಂಬವರಿಗೆ ಆಕೆಯ ಗಂಡ ವಿನಾಕಾರಣ ಜನಗಳ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ನೀನು ಸರಿಯಿಲ್ಲ, ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿ ಅಲ್ಲೆ ಬಿದ್ದಿದ್ದ ಕತ್ತಿಯಿಂದ ಫಿರ್ಯಾದಿಯವರ ಶರೀರದ ಭಾಗಕ್ಕೆ ಕಡಿದು ಗಾಯಪಡಿಸಿದ್ದು, ಅಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದು, ಫಿರ್ಯಾದಿ ಸೋಮವಾರಪೇಟೆ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು, ಶನಿವಾರಸಂತೆ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.


ಕ್ಷುಲ್ಲಕ ಕಾರಣ ವ್ಯಕ್ತಿಯ ಮೇಲೆ ಹಲ್ಲೆ:


ದಿನಾಂಕ 19-5-2011 ರಂದು ಸಂಜೆ 7-00 ಗಂಟೆಗೆ ಫಿರ್ಯಾದಿ ಸಿ.ಯು. ಇಬ್ರಾಹಿಂ ರವರ ಮಗ ನೌಫಲ್‌ ಎಮ್ಮೆಮಾಡು ಮಸೀದಿಗೆ ಹೋಗುತ್ತಿರುವಾಗ ಆರೋಪಿ ಸಿ.ಎ. ಮೊಯ್ದುಕುಂಜಿ ಎಂಬ ವ್ಯಕ್ತಿ ವಿನಾಕಾರಣ ಕಲ್ಲಿನಿಂದ ಹಲ್ಲೆನಡೆಸಿ ಗಾಯಪಡಿಸಿದ್ದು ಈ ಸಂಬಂಧ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೋಗೊಳ್ಳಲಾಗಿದೆ.

Friday, May 20, 2011

ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ವ್ಯಕ್ತಿಯ ದುರ್ಮರಣ:


ದಿನಾಂಕ 16-5-2011 ರಂದು ಸಿದ್ದಾಪುರ ಠಾಣಾ ಸರಹದ್ದಿನ ಗೂಡ್ಲೂರು ಗ್ರಾಮದ ವಾಸಿ ಕಿಟ್ಟು ಎಂಬವರು ಮದ್ಯಪಾನ ಮಾಡಿ ನಿಶಾಮತ್ತರಾಗಿ ರಾತ್ರಿ 19-00 ಗಂಟೆಗೆ ಮನೆಯ ಗೋಡೆಯ ಮೇಲೆ ಇಟ್ಟಿದ ಸೀಮೆಣ್ನೆ ದೀಪವನ್ನು ತೆಗೆಯಲು ಹೋದಾಗ ಆರಸ್ಮಿಕವಾಗಿ ಹುರಿಯುತ್ತಿರುವ ದೀಪವು ಅವರ ಮೈಮೇಲೆ ಬಿದ್ದ ಕಾರಣ ಸುಟ್ಟ ಗಾಯಗಳಾಗಿದ್ದು ಚಿಕಿತ್ಸೆಗೆ ಮಡಿಕೇರಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ನಂತರ ವೈದ್ಯರ ಸಲಹೆಯ ಮೇರೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 20-5-2011 ರಂದು ಮೃತಪಟ್ಟಿದ್ದು, ಈ ಸಂಬಂಧ ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.


ವಂಚನೆ ಪ್ರಕರಣ, ಕೇಸು ದಾಖಲು:

ಶ್ರೀಮತಿ ಸರೋಜ, ಗಂಡ ದೇವರಾಜ, ಸುದರ್ಶನ ಬಡಾವಣೆ ಮಡಿಕೇರಿ ಇವರಿಗೆ ಶ್ರೀ ಗುರು ಅಗ್ರಿ ಫಾರಂ ಪ್ರೈವೇಟ್‌ ಲಿ. ಎಂಬ ಕಂಪೆನಿಯಲ್ಲಿ ಹಣ ಹೂಡಿದರೆ ತುಂಬಾ ಲಾಭ ಬರುವುದಾಗಿ ತಿಳಿಸಿದ ಮೇರೆ ತಿಂಗಳಿಗೆ 1000 ರಂತೆ 6 ತಿಂಗಳು ಕಟ್ಟಿದರೆ 500/ ರೂ. ಬಡ್ಡಿಹಣ ಕೊಡುವುದಾಗಿ ತಿಳಿಸಿದ ಮೇರೆ ಅದರಂತೆ ಫಿರ್ಯಾದಿಯವರು ಸದರಿ ಕಂಪೆನಿಯಲ್ಲಿ 6000 ರೂ.ಗಳನ್ನು ಹೂಡಿದ್ದು ಅದಕ್ಕೆ ಸದರಿ ಕಂಪೆನಿಯವರು ಬಡ್ಡಿ ಹಣವನ್ನಾಗಲೀ ಬಾಂಡನ್ನಾಗಲೀ ನೀಡದೆ ಕಂಪೆನಿಯ ಕಛೇರಿಯ ಬಾಗಿಲಿಗೆ ಬೀಗವನ್ನು ಜಡಿದು ನಾಪತ್ತೆಯಾಗಿದ್ದು, ಸದರಿ ಕಂಪೆನಿಯವರು ವಂಚಿಸಿರುವ ಕುರಿತು ಫಿರ್ಯಾದಿಯವರು ನೀಡಿದ ದೂರಿನ ಮೇರೆ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

Thursday, May 19, 2011

ವ್ಯಕ್ತಿಯ ಮೇಲೆ ಹಲ್ಲೆ ಮತ್ತು ಕೊಲೆ ಪ್ರಕರಣ:
ದಿ: 18-5-2011 ರಂದು ಕುಶಾಲನಗರದ ವ್ಯಾಪ್ತಿಯ ವಿರೂಪಾಕ್ಷ ಪುರ, ರಂಗಸಮುದ್ರದ ನಿವಾಸಿ (ಪಿರ್ಯಾದಿ) ಭಾಗ್ಯ ರವರು ಮನೆಯಲ್ಲಿರುವಾಗ್ಗೆ ಆರೋಪಿಗಳಾದ ಕುಮಾರ,ಕುಳ್ಳ, ಈರಣ.ಗಿರಿಜಾ ಎಂಬವರು ಪಿರ್ಯಾದಿಯವರ ಮನೆಗೆ ಬಂದು ವಿನಾ:ಕಾರಣ ಬೈದು ಮಾತಿಗೆ ಮಾತು ಬೆಳೆದು ಆರೋಪಿಗಳು ಭಾಗ್ಯರವರಿಗೆ ಕೈಯಿಂದ ಹೊಡೆದು, ಒದ್ದು, ದೇಹಕ್ಕೆ ನೋವುಂಟು ಮಾಡಿದ ಪರಿಣಾಮ ಕೊಟ್ಟ ಪುಕಾರಿನ್ವಯ ಕುಶಾಲನಗರ ಠಾಣೆಯಲ್ಲಿ ಪ್ರಕರಣವನ್ಉ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

ನವಜಾತ ಶಿಶುವೊಂದರ ಶವ ಪತ್ತೆ:
ದಿ: 18-5-2011 ರಂದು ಮಡಿಕೇರಿ ನಗರದ ವ್ಯಾಪ್ತಿಯ ಲಯನ್ಸ್‌ ಕ್ಲಬ್‌ ಹಿಂಭಾಗ ಪಿರ್ಯಾದಿ ಜೀವನ್‌ ಎಂಬವರು ಮೂತ್ರ ವಿಸರ್ಜನೆ ಮಾಡಲೆಂದು ಹೋದಾಗ ಒಂದು ಬಟ್ಟೆಯಲ್ಲಿ ಮೃತಪಟ್ಟ ಅನಾಥ ಶಿಶು ಕಂಡು ಬಂದು ಮಡಿಕೇರಿ ನಗರ ಠಾಣೆಯಲ್ಲಿ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ. ರಸ್ತೆ ಅಪಘಾತ
ವಿರಾಜಪೇಟೆಯ ಗ್ರಾಮಾಂತರ ಠಾಣಾ ಸರಹದ್ದಿನ ಮಾಕುಟ್ಟದ ಕಾಕೇತೋಡು ದೇವಸ್ಥಾನ ದ ತಾರು ರಸ್ತೆಯಲ್ಲಿ ಪಿರ್ಯಾದಿ ಮನೋಹರವರು ಇಂಡಿಕಾ ಕಾರಿನಲ್ಲಿ ಹೋಗುತ್ತಿರುವಾಗ್ಗೆ ಆರೋಪಿ ಕೆಎ 09 ಎ8815 ರ ಕಾರಿನ ಚಾಲಕ ಅತಿವೇಗ ಮತ್ತು ಅಜಾರುಕತೆಯಿಂದ ಓಡಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ಇದರಿಂದ ಪಿರ್ಯಾದಿ ಮತ್ತು ಅವರ ತಾಯಿಗೆ ಗಾಯವಾಗಿದ್ದು ಎರಡು ಕೈಯ ಮುಳೆಯು ಮುರಿದು ಚಿಕಿತ್ಸೆಗಾಗಿ ತಲಚೇರಿಯ ಕೋಅಪರೇಟಿವ್‌ ಆಸ್ಪತ್ರೆಯಲ್ಲಿ ದಾಖಲಾಗಿ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

Tuesday, May 17, 2011

ಆನೆಯಿಂದ ದಾಳಿಯಿಂದ ವ್ಯಕ್ತಿಯ ದುರ್ಮರಣ
ದಿ: 17-5-2011 ರಂದು ಪೊನ್ನಂಪೇಟೆ ವ್ಯಾಪ್ತಿಯ ಹೆಬ್ಬಾಲೆ ಗ್ರಾಮ, ತಿತಿಮತಿ ಪಿರ್ಯಾದಿದಾರರಾದ ಅಣ್ಣಸ್ವಾಮಿ ರವರ ತಂದೆ 25 ವರ್ಷಗಳಿಂದ ಬಿ.ಸಿ.ಕೆ ತೋಟದಲ್ಲಿ ಕೂಲಿಕೆಲಸ ಮಾಡಿಕೊಂಡು ಒಬ್ಬರೇ ಇದ್ದು ರಜಾ ದಿನಗಳಲ್ಲಿ ನಮ್ಮನ್ನು ನೋಡಿಕೊಂಡು ಬಂದು ಹೋಗುತ್ತಿದ್ದರು ದಿ: 17-5-11 ರಂದು ನಾವು ಮನೆಯಲ್ಲಿರುವಾಗ್ಗೆ ತಿತಿಮತಿ ಯಲ್ಲಿ ವಾಸವಿರುವ ತನ್ನ ಸ್ನೇಹಿತ ರವರು ಪೋನ್ ಮಾಡಿ ನನ್ನ ತಂದೆ ತೋಟದಲ್ಲಿ ಕೆಲಸ ಮಾಡುತ್ತಿರುವಾಗ್ಗೆ ಆನೆ ದಾಳಿ ನಡೆಸಿ ಮೃತ್ತಪಟ್ಟಿರುವುದಾಗಿ ತಿಳಿಸಿರುತ್ತಾರೆ. ನಾನು ತಿತಿಮತಿಗೆ ಬಂದು ಮೃತದೇಹವನ್ನು ನೋಡಿ ಪೊನ್ನಂಪೇಟೆ ಠಾಣೆ ಯಲ್ಲಿ ಕೊಟ್ಟ ಪುಕಾರಿನ್ವ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

ಮದುವೆ ಮನೆಯಲ್ಲಿ ಹೊಡೆದಾಟ ಹಾಗೂ ಕೊಲೆ ಬೆದರಿಕೆ:

ದಿ: 16-5-2011 ರಂದು ವಿರಾಜಪೇಟೆ ನಗರ ಠಾಣಾ ವ್ಯಾಪ್ತಿಯ ಮಹಿಳಾ ಸಮಾಜದತ್ತಿರ ಪಿರ್ಯಾದಿದಾರರಾದ ಹೆಚ್‌.ವಿ ಸತ್ಯ ರವರು ಸಂಬಂಧಿಕರ ಮದುವೆಗೆ ಹೋಗಿದ್ದು ಊಟ ಮಾಡಿ ಕುಣಿಯುತ್ತಿರುವಾಗ್ಗೆ ಪಿರ್ಯಾದಿಯವರು ಆಕಸ್ಮಿಕವಾಗಿ ಆರೋಪಿ ರಾಮುರವರ ಕಾಲು ತುಳಿದಿದ್ದು ಈ ವಿಷಯವಾಗಿ ಪಿರ್ಯಾದಿ ಸತ್ಯ ಮತ್ತು ರಾಮುರವರಿಗೆ ಜಗಳವಾಗಿದ್ದು ಆರೋಪಿ ರಾಮುರವರ ಮಗ ರೋಷನ್‌ ನ್ನು ಸತ್ಯರವರಿಗೆ ಹೊಡೆದ್ದು , ಚಾಕುವಿನಿಂದ ಗಾಯಪಡಿಸಿದ್ದಲ್ಲದೇ ಕೊಲೆ ಬೆದರಿಕೆ ಹಾಕಿರುವುದಾಗಿ ಕೊಟ್ಟ ಪುಕರಿನ್ವಯ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

Monday, May 16, 2011

ವ್ಯಕ್ತಿಯ ಮೇಲೆ ಹಲ್ಲೆ ಮತ್ತು ಕೊಲೆ ಬೆದರಿಕೆ:


ದಿ: 15-5-11 ರಂದು ಶನಿವಾರಸಂತೆ ಠಾಣಾ ವ್ಯಾಪ್ತಿಯ ಬೆಳ್ಳಾರಳಿ ಗ್ರಾಮ ನಿವಾಸಿ ಹೆಚ್‌ವಿ.ಚಂದ್ರಶೇಖರ್‌ ತನ್ನ ಸ್ನೇಹಿತ ನಿಗೆ 12,000 /- ರೂ ಕೊಟ್ಟಿದ್ದು ಆ ಹಣವನ್ನು ಹೆಚ್‌.ವಿ. ಚಂದ್ರಶೇಖರ್‌ ನ್ನು ಕೇಳಲು ಆರೋಪಿನಾದ ಹರೀಶ ಕೇಳುವಾಗ ಸದರಿ ಆರೋಪಿಯು ಚಂದ್ರಶೇಖರ್‌ನಿಗೆ ಅವ್ಯಾಚ್ಚ ಶಬ್ದಗಳಿಂದ ಬೈದು ಮನೆಯೊಳಗೆ ಇದ್ದ ಚೇರ್‌ನಿಂದ ಹೊಡೆದು ಗಾಯಪಡಿಸಿದ್ದು, ಕೊಲೆ ಬೆದರಿಕೆ ಹಾಕಿರುವುದಾಗಿ ಕೊಟ್ಟ ಪುಕಾರಿನ್ವಯ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.


ಹೆಂಗಸಿನ ಮೇಲೆ ಮಾನಭಂಗಕ್ಕೆ ಯತ್ನ:


ದಿ: 13-5-2011 ರಂದು ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿ ಕಗ್ಗೋಡ್ಲು ಗ್ರಾಮದ ಪಿರ್ಯಾದಿ ದಾವರಾದ ಕುಮಾರಿ ಕೆ. ಪುಷ್ಪ ರವರು 3 ತಿಂಗಳ ಹಿಂದೆ ಅಕ್ಕನ ಮಗ ರವಿಯವರು ವಾಸ ವಿರುವ ಕಗ್ಗೋಡ್ಲು ಗ್ರಾಮದ ಬೀಷ್ಮರವರ ಲೈನು ಮನೆಗೆ ರವಿಯವರ ಮಗುವನ್ನು ನೋಡಿಕೊಳ್ಳಲು ಹೋಗಿದ್ದು ಸದರಿ ಅಂಗಡಿ ಸಾಮಾನು ತರಲೆಂದು ಹೋಗಿ ವಾಸಾಸ್ಸು ಬರುತ್ತಿರುವಾಗ್ಗೆ ದಾರಿಯಲ್ಲಿ ಅದೇ ಗ್ರಾಮದ ನಿವಾಸಿ ಜಯ ಎಂಬುವರು ಪಿರ್ಯಾದಿಯವರನ್ನು ಕೈ ಹಿಡಿದು ಎಳೆದು ಮಾನ ಭಂಗಕ್ಕೆ ಯತ್ನಿಸಿದ್ದು ಎದುಗಡೆಯಿಂದ ಗಣೇಶ ಎಂಬುವರು ಬರುವುದನ್ನು ನೋಡಿ ಆರೋಪಿಯು ಪಿರ್ಯಾದಿಯವರಿಗೆ ಕೊಲೆ ಬೆದರಿಕೆ ಹಾಕಿರುವುದಾಗಿ ಕೊಟ್ಟ ಪುಕಾರಿನ್ವ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

Saturday, May 14, 2011

ಜೀವನದಲ್ಲಿ ಜಿಗುಪ್ಸೆ ವ್ಯಕ್ತಿಯ ಆತ್ಯಹತ್ಯೆ:


ದಿನಾಂಕ 12-5-2011 ರಂದು ಭಾಗಮಂಡಲ ಠಾಣಾ ಸರಹದ್ದಿನ ಬಿ.ಬಾಡಗ ಗ್ರಾಮದ ನಿವಾಸಿ ಹರ್ಷವರ್ಧನ ಎಂಬ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆಗೊಂಡು ನೇಣುಬಿಗಿದುಕೊಂಡು ಆತ್ಯಹತ್ಯೆ ಮಾಡಿಕೊಂಡಿದ್ದು, ಭಾಗಮಂಡಲ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರತ್ತಾರೆ.


ಕೊಲೆ ಬೆದರಿಕೆ:


ದಿ: 12-5-2010 ರಂದು ಕುಶಾಲನಗರ ಠಾಣಾ ಸರಹದ್ದಿನ ಜೆ.ಪಿ.ಕಾಲೋನಿ ಹತ್ತಿರ ವಾಸವಿರುವ ಶ್ರೀಮತಿ ಗಿರಿಜಾ ಗಂಡ ಹೆಚ್‌.ಇ. ಕುಮಾರ್‌ ರವರಿಗೂ ಮತ್ತು ಆರೋಪಿಗಳಾದ ದಡಿಯಾ ಶೇಖರ್‌ @ ಹಂದಿ ಶೇಖರ್‌ ಇವರಿಗೂ ಹಿಂದೆ ಯಾವುದೋ ವಿಚಾರದಲ್ಲಿ ಗಲಾಟೆಯಾಗಿದ್ದು ಈ ಸಂಬಂಧ ಆರೋಪಿ ವಿರುದ್ದ ಪ್ರಕರಣದ ದಾಖಲಿದ್ದು ಪುನ: ಇದೇ ಉದ್ದೇಶದಿಂದ ಆರೋಪಿಯು ಪಿರ್ಯಾದಿಯವರ ಮನೆಗೆ ಬಂದು ಅವಾಚ್ಯ ಶಬ್ದದಿಂದು ಬೈದು ಕೊಲೆ ಬೆದರಿಕೆ ಹಾಕಿರುವುದಾಗಿ ಕೊಟ್ಟ ಪುಕಾರಿನ್ವ ಕುಶಾಲನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.


ವ್ಯಕ್ತಿಯ ಮೇಲೆ ಹಲ್ಲೆ ಮತ್ತು ಕೊಲೆ ಬೆದರಿಕೆ:


ದಿ: 12-5-2011 ರಂದು ಕುಶಾಲನಗರದ ಠಾಣಾ ಸರಹದ್ದಿನ ಹೆಬ್ಬಾಲೆ ಯ ಕೊಪ್ಪಲು ಬಡವಾಣೆಯ ಪಿರ್ಯಾದಿರಾದ ಹೆಚ್.ಎಸ್‌.ಮಂಜುನಾಥರವರು ಮನೆಯ ಮುಂದೆ ನಿಂತಿರುವಾಗ್ಗೆ ಆರೋಪಿಗಳಾದ ಪ್ರಕಾಶ್‌, ಸತೀಶ್‌ ರವರು ಅಲ್ಲಿಗೆ ಬಂದು ಜಮೀನು ವಿಚಾರದಲ್ಲಿ ಪಿರ್ಯಾದಿಯವರೊಂದಿಗೆ ಜಗಳ ತೆಗೆದು ಕತ್ತಿಯಿಂದ ಕಡಿದು ಕಾಲಿನಿಂದ ಒದ್ದು ರಕ್ತಗಾಯ ಮಾಡಿದ್ದು ಕೊಲೆಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.
Wednesday, May 11, 2011

ಆತ್ಮಹತ್ಯೆ ಪ್ರಕರಣ:
ದಿ:9-5-2011 ರಂದು ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಡಗದಾಳು ಗ್ರಾಮದ ಪಿರ್ಯಾದಿದಾರರಾದ ಸಿ ಚಿಂಗಪ್ಪ ಬೆಂಗಳೂರಿನಲ್ಲಿ ವಾಸವಾಗಿದ್ದು ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡಿಕೊಂಡಿದ್ದ ಮಗ ದೇವಯ್ಯನ್ನು ಅವನ ಅಜ್ಜಿ ಮನೆಗೆ ರಜೆಯಲ್ಲಿ ಬಂದಿದ್ದು ದೇವಯ್ಯನ್ನು ವೆಬ್‌ಸೈಟ್‌ ನಲ್ಲಿ ಪಿಯುಸಿ ಪಲಿತಾಂಶವನ್ನು ನೋಡಿದ್ದು ಅದರಲ್ಲಿ ಅನುತ್ತೀರ್ಣ ಹೊಂದಿದ್ದು ಬೇಸರಗೊಂಡು ನೇಣು ಬಿಗಿದು ಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದು ಮಡಿಕೇರಿ ಗ್ರಾಮಾಂತರ ಠಾಣೆ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.

Tuesday, May 10, 2011


ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಗೆ ಹಲ್ಲೆ:


ಮನೆಯ ಹೆಂಚುಗಳನ್ನು ಪಡೆದುಕೊಂಡ ವಿಚಾರವಾಗಿ ವ್ಯಕ್ತಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಶಿರಂಗಾಲ ಕಾಲೋನಿಯಿಂದ ವರದಿಯಾಗಿದೆ. ಈ ದಿನ ಸಮಯ ಬೆಳಿಗ್ಗೆ 08-30 ಗಂಟೆಗೆ ಶನಿವಾರಸಂತೆ ಶಿರಂಗಾಲ ಕಾಲೋನಿಯಲ್ಲಿ ಆರೋಪಿ ರವಿ ಎಂಬವರು ಹಂಚುಗಳನ್ನು ಪಡೆದುಕೊಂಡ ಬಗ್ಗೆ ಫಿರ್ಯಾದಿ ಶ್ರೀಮತಿ ಸುಶೀಲರವರೊಂದಿಗೆ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದು, ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.


ಮಾನಸ್ಸಿಗೆ ಬೇಸರವಾಗಿ ವ್ಯಕ್ತಿಯ ಆತ್ಮಹತ್ಯೆ:


ವ್ಯಕ್ತಿಯೋರ್ವ ವಿಷಪದಾರ್ಥ ಸೇವಿಸಿ ಮೃತಪಟ್ಟಿರುವ ಬಗ್ಗೆ ಪೊನ್ನಂಪೇಟೆ ಠಾಣಾ ಸರಹದ್ದಿನ ಬಾಳೆಲೆ ಗ್ರಾಮದ ರಾಜಾಪುರದಿಂದ ವರದಿಯಾಗಿದ್ದು, ದಿನಾಂಕ 9-5-2011 ರಂದು ಮೊಣ್ಣಪ್ಪ @ ಬೋಜ ಎಂಬವರು ಯಾವುದೋ ವಿಷ ಪದಾರ್ಥ ಸೇವಿಸಿದ್ದು ಅವರನ್ನು ಗೋಣಿಕೊಪ್ಪ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಫಲಕಾರಿಯಾಗದೇ ಸದರಿ ವ್ಯಕ್ತಿ ಮೃತಪಟ್ಟಿದ್ದು, ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.


ವರದಕ್ಷಿಣೆ ಕಿರುಕುಳ, ಮೈಗೆಬೆಂಕಿಹಚ್ಚಿಕೊಂಡು ಮಹಿಳೆ ಸಾವು:


ದಿನಾಂಕ 9-5-2011 ರಂದು ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ಇಂದಿರಾನಗರದಲ್ಲಿ ವಾಸಮಾಡಿಕೊಂಡಿರುವ ಶ್ರೀಮತಿ ಮಾಧುರಿ ಎಂಬವರನ್ನು ಅವರ ಗಂಡ ಆರೋಪಿ ಮಂಜುನಾಥರವರು ವಿಪರೀತ ಮದಯ ಸೇವಿಸಿ ಪ್ರತಿ ದಿನವೂ ಹೊಡೆದು ತವರು ಮನೆಯಿಂದ ವರದಕ್ಷಿಣೆ ತರುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು ಇದನ್ನು ಸಹಿಸದೇ ಮಾಧುರಿ ಮೈಮೇಲೆ ಸೀಮೆಣ್ಣೆ ಸುರಿದು ಬಿಂಕಿಹಚ್ಚಿಕೊಂಡ ಪರಿಣಾಮ ತೀವ್ರ ಸುಟ್ಟಗಾಯಗಳಾಗಿದ್ದು, ಆಕೆಯನ್ನು ಮಡಿಕೇರಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದು, ನಾಪೋಕ್ಲು ಪೊಲೀಸರು ಪ್ರಕರಣವನ್ನು ದಾಖಲಿಸಿ ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.


ರಸ್ತೆ ಅಪಘಾತ ಆಟೋರಿಕ್ಷಾ ಜಖಂ:


ಈ ದಿನ ಸಮಯ 11-44 ಗಂಟೆಗೆ ಫಿರ್ಯಾದಿ ಬಿ.ಆರ್‌. ಪ್ರಸಾದ್‌ ಎಂಬವರು ತನ್ನ ಆಟೋರಿಕ್ಷಾವನ್ನು ಮಡಿಕೇರಿಯಿಂದ ಮಕ್ಕಂದೂರು ಗ್ರಾಮಕ್ಕೆ ಬಾಡಿಗೆಗೆ ಹೋಗುತ್ತಿರುವ ಸಮಯದಲ್ಲಿ ಆರೋಪಿ ತಾನು ಚಾಲಿಸುತ್ತಿದ್ದ ಬಸ್ಸು ಸಂಖ್ಯೆ ಕೆಎ-19 ಎಡಿ 2255ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಫಿರ್ಯಾದಿಯವರ ಆಟೋ ರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ಆಟೋ ರಿಕ್ಷಾದ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಚರಂಡಿಗೆ ಮಗುಚಿಬಿದ್ದು ಪೂರ್ಣ ಹಾನಿಗೊಳಗಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.


ಮನೆಗೆ ನುಗ್ಗಿ 1,25000 ರೂ ಬೆಲೆಬಾಳುವ ವಸ್ತು ಕಳವು:


ದಿನಾಂಕ 7-5-2011 ರಂದು ಫಿರ್ಯಾದಿ ಹೆಚ್‌.ಎಸ್.ರಾಜಶೇಖರ, ಕೃಷಿ ಅಧಿಕಾರಿ, ಆರೋಗ್ಯ ಕೇಂದ್ರ, ಕೇಷಿ ಇಲಾಖೆ ಕೂಡಿಗೆ ಇವರು ಪುಣ್ಯ ಕ್ಷೇತ್ರಗಳಿಗೆ ಹೋಗಿ ದಿನಾಂಕ 9-5-11 ರಂದು ವಾಪಾಸ್ಸು ಮನೆಗೆ ಬಂದು ನೋಡಿದಾಗ ಯಾರೋ ಕಳ್ಳರು ಬಾತ್‌ ರೂಂನ ಹೆಂಚುಗಳನ್ನು ತೆಗೆದು ಅದರ ಮೂಲಕ ಮನೆಯೊಳಗೆ ನುಗ್ಗಿ ಮನೆಯೊಳಗಿಟ್ಟಿದ್ದ ಒಟ್ಟು 60 ಗ್ರಾಂ ವಿವಿಧ ಬಗೆಯ ಚಿನ್ನದ ಆಭರಣಗಳನ್ನು ಹಾಗೂ 25000 ನಗದನ್ನು ಒಟ್ಟು ಅಂದಾಜು ಮೌಲ್ಯ 1,25,000-00ಗಳನ್ನು ಕಳವುಮಾಡಿಕೊಂಡು ಹೋಗಿದ್ದು ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

Monday, May 9, 2011

ಜೀಪು ಚಾಲಕನ ಮೇಲೆ ಹಲ್ಲೆ:


ದಿ: 8-5-11 ರಂದು ಪೊನ್ನಂಪೇಟೆ ವ್ಯಾಪ್ತಿಯ ಬಾಳಲೆ ಗ್ರಾಮದ ಜೀಪು ಸ್ಯ್ಡಾಂಡಿನಿಂದ ಮನೆಗೆ ಜೀಪನ್ನು ತೆಗೆದುಕೊಂಡು ಹೊರಡುವಾಗ್ಗೆ ಆರೋಪಿಗಳಾದ ಲೋಕೇಶ 2) ಶರಿ @ ಗಣು ಕೊಟ್ಟಗೇರಿ ಗ್ರಾಮ ದವರ ಬಾಡಿಗೆ ಬಾ ಎಂದು ಕರೆದಾಗ ಸದರಿ ಪಿರ್ಯಾದಿದಾರಾದ ಪಿಎಸ್‌ ಶಶಿ ನನಗೆ ಬೇರೆ ಬಾಡಿಗೆ ಇದೆ ಬರಲು ಆಗುವುದಿಲ್ಲ ಎಂದು ತಿಳಿಸಿದ ಮೇರೆಗೆ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮುಖಕ್ಕೆ ಹೊಡೆದು ನೋವುಉಂಟು ಮಾಡಿರುವುದಾಗಿ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.


ದೌರ್ಜನ್ಯ ಪ್ರಕರಣ:


ದಿ: 8-5-೧೧ ರಂದು ಶನಿವಾರಸಂತೆ ಠಾಣಾ ವ್ಯಾಪ್ತಿಯ ಕಲ್ಲುಕೋರೆ, ಕೋಡ್ಲಿ ಪೇಟೆ ಯ ನಿವಾಸಿಯಾದ ನಗೀನ ರವರು ಸುಮಾರು 8 ವರ್ಷದ ಹಿಂದೆ ಅಕ್ಬರ್‌ ರವರನ್ನು ಮುಸ್ಲಿಂ ಸಂಪ್ರದಾಯದಂತೆ ವಿವಾಹವಾಗಿದ್ದು ಮದುವೆಯಾದ ನಂತರ 2 ವರ್ಷಗಳವರೆಗೆ ಅನ್ಯೋನ್ಯವಾಗಿದ್ದು ನಂತರದ ದಿನಗಳಲ್ಲಿ ಪಿರ್ಯಾದಿಯವರು ಕೂಲಿಕೆಲಸ ಮಾಡಿ ವಾಪಾಸ್ಸು ಮನೆ ಬರುತ್ತಿದ್ದಾಗಲೆಲ್ಲ ದಿನನಿತ್ಯ ಪಿರ್ಯಾದಿಯವರ ಮೇಲೆ ಸಂಶಯ ಪಟ್ಟು ಜಗಳ ತೆಗೆದು , ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದು ದಿ: 8-5-11 ರಂದು ಗಂಡನಾದ ಅಕ್ವರನ್ನು ಹೆಂಡತಿ ಪಿರ್ಯಾದಿಯವರಿಗೆ ಮುಖಕ್ಕೆ ಕೈಯಿಂದ ಹೊಡೆದು ಕತ್ತನ್ನು ಹಿಸುಕಿರುವುದಾಗಿ ಕೊಟ್ಟ ಪುಕಾರಿನ್ವಯ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.


ಆತ್ಮಹತ್ಯ ಪ್ರಕರಣ


ದಿ 8-5-2011 ರಂದು ಶ್ರೀಮಂಗಲ ಠಾಣಾ ವ್ಯಾಪ್ತಿಯ ಬೆಳ್ಳೂರು ಗ್ರಾಮದ ನಿವಾಸಿ ಶ್ರೀಮತಿ ಪಣಿ ಎರವರ ಸುಬ್ಬಿ ರವರ ಗಂಡ ಮೃತ ಕುರುಮ ಇಟ್ಟೀರ ಪೊನ್ನಣ್ಣರವರ ಮನೆಯಲ್ಲಿ ಒಂದು ವರ್ಷದಿಂದ ಕೂಲಿ ಕೆಲಸ ಮಾಡಿಕೊಂಡು ಅವರ ಲೈನ್‌ ಮನೆಯಲ್ಲಿ ವಾಸವಾಗಿದ್ದು ಈ ಹಿಂದೆ ಒಂದನೇ ಹೆಂಡತಿ ತೀರಿಕೊಂಡ ವಿಚಾರದಲ್ಲಿ ಮನಸ್ಸಿನಲ್ಲಿ ಬೇಜಾರು ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕೊಟ್ಟ ಪುಕರಿನ್ವಯ ಪ್ರಕರಣವನ್ನು ಶ್ರೀಮಂಗಲ ಠಾಣೆಯಲ್ಲಿ ದಾಖಲಿಸಿಕೊಂಡಿರುವುದಾಗಿದೆ.ದಿ: 8-5- ರಂದು ಶ್ರೀಮಂಗಲ ಠಾಣಾ ವ್ಯಾಪ್ತಿಯ ಕುರ್ಚಿ ಗ್ರಾಮದ ಲಕ್ಷ್ಮಿರವರು 5 ವರ್ಷದ ಹಿಂದೆ ಕೇರಳ ರಾಜ್ಯದ ಕುರುಬರ ರಾಜೇಶನ್ನು ಮದುವೆಯಾಗಿ 2 ಮಕ್ಕಳಿದ್ದು ಗಂಡ ಹೆಂಡತಿ ಅನ್ಯೋನ್ಯವಾಗಿದ್ದು 1 ವರ್ಷದ ಹಿಂದೆ ಗಂಡ ರಾಜೇಶನ್ನು ಪಿರ್ಯಾದಿಯವರ ಮೇಲೆ ಸಂಶಯ ಪಡುತ್ತಿದ್ದು ಈ ವಿಷಯಕ್ಕೆ ಜಗಳವಾಗುತ್ತಿದ್ದು ಪಿರ್ಯಾದಿ ಮಕ್ಕಳೊಂದಿಗೆ ತವರು ಮನೆಗೆ ಬಂದಿದ್ದು ನಂತರ ತವರು ಮನೆಯಿಂದ ಬಂದಿದ್ದು ಸದರಿರವರು ನೀರು ತರಲು ಹೋದಾಗ ರಾಜೇಶನ್ನು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಕೌಕೋಲಿಗೆ ನೇಣು ಬಿಗಿದು ಕೊಂಡು ಆತ್ಮಹತ್ಯ ಮಾಡಿಕೊಂಡಿರುವುದಾಗಿ ಕೊಟ್ಟ ಪುಕಾರಿನ್ವ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.

Saturday, May 7, 2011


ಅಕ್ರಮ ಪ್ರವೇಶ ಮಾಡಿ ಕಾಫಿ ಮೆಣಸು ಕುಯ್ದು ಕಳ್ಳತನ:


ವ್ಯಕ್ತಿಗೆ ಸೇರಿದ ಕಾಫಿ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಕಾಫಿ ಹಾಗೂ ಕರಿಮೆಣಸು ಕುಯ್ದು ಕಳ್ಳತನ ಮಾಡಿದ ಪ್ರಕರಣ ಸಿದ್ದಾಪುರ ಠಾಣಾ ವ್ಯಾಪ್ತಿಯ ಅರೆಕಾಡು ಗ್ರಾಮದಿಂದ ವರದಿಯಾಗಿದೆ. ಫಿರ್ಯಾದಿ ಜೋಸೆಫ್‌ರವರಿಗೆ ಸೇರಿದ ಕಾಫಿ ತೋಟಕ್ಕೆ ಆರೋಪಿಗಳಾದ ಜಾರ್ಜ್‌ ಜೋಸೆಫ್‌, ಜೋಸೆಫ್‌ ಮ್ಯಾಥ್ಯೂ ಎಂಬವರು ದಿನಾಂಕ 17-2-11 ರಿಂದ 21-02-2011ರ ಮದ್ಯೆ ಅಕ್ರಮ ಪ್ರವೇಶ ಮಾಡಿ ಕಾಫಿ ಹಾಗೂ ಕರಿಮೆಣಸನ್ನು ಕುಯ್ದು ಕಳ್ಳತನ ಮಾಡಿದ್ದು, ತದನಂತರ ದಿನಾಂಕ 6-4-2011 ರಂದು ಫಿರ್ಯಾದಿಯವರು ತನ್ನ ತೋಟಕ್ಕೆ ಜೀಪಿನಲ್ಲಿ ಹೋಗುತ್ತಿರುವಾಗ ಆರೋಪಿಗಳು ಅಲ್ಲಿಗೆ ಬಂದು ದಾರಿ ತಡೆದು ಕಾಫಿ ತೋಟಕ್ಕೆ ನುಗ್ಗಿದರೆ ಕೊಲೆಮಾಡುವುದಾಗಿ ಕೊಲೆ ಬೆದರಿಕೆ ಹಾಕಿದ್ದು, ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.


ಮಹಿಳೆಗೆ ಲೈಂಗಿಕ ಹಾಗೂ ಮಾನಸಿಕ ಕಿರುಕುಳ, ಪ್ರಕರಣ ದಾಖಲು:


ಸಹಕಾರಿ ಸಂಘದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳೆಯೊಬ್ಬರಿಗೆ ಅದೇ ಸಂಘದಲ್ಲಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಯಿಂದ ಲೈಂಗಿಕ ಹಾಗು ಮಾನಸಿಕ ಕಿರುಕುಳ ಆಗುತ್ತಿರುವ ಬಗ್ಗೆ ಹಂಡ್ಲಿ ಗ್ರಾಮದಿಂದ ವರದಿಯಾಗಿದೆ. ಫಿರ್ಯಾದಿ ಶ್ರೀಮತಿ ಗೀತ ಎಂಬವರು ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಹಂಡ್ಲಿ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ದ್ವಿ.ದ.ಸ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅದೇ ಸಂಘದಲ್ಲಿ ಲೆಕ್ಕಿಗನಾಗಿ ಕೆಲಸ ನಿರ್ವಹಿಸುತ್ತಿರುವ ಆರೋಪಿ ಯನ್‌.ಯು. ಲೋಕೇಶ ಎಂಬವನು ಕೆಲವು ದಿನಗಳಿಂದ ಅಂದರೆ ದಿನಾಂಕ 7-1-2011 ರಿಂದ 7-5-2011 ರ ಮದ್ಯೆಯಲ್ಲಿ , ಲೈಂಗಿಕ ಕ್ರಿಯೆಗಾಗಿ ಹಿಂಸೆ ನೀಡುತ್ತಿದ್ದು ಅಲ್ಲದೆ ಮಾನಸಿಕ ಕಿರುಕುಳ ನೀಡುತ್ತಿರುವ ಬಗ್ಗೆ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.


ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯ ಆತ್ಮಹತ್ಯೆ:


ದಿನಾಂಕ 6-5-2011 ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಚೇರಳ ಶ್ರೀಮಂಗಲ ಗ್ರಾಮದ ಚೆಟ್ಟಳ್ಳಿ ವಾಸಿ ಪೂಣಚ್ಚ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಶುಂಠಿಗೆ ಸಿಂಪಡಿಸುವ ಕ್ರಿಮಿನಾಶಕವನ್ನು ಸೇವಿಸಿ ಅಸ್ವಸ್ಥಗೊಂಡು ಜಿಕಿತ್ಸೆಯ ಸಮಯ ಮಡಿಕೇರಿ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.


ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಗೆ ಹಲ್ಲೆ, ಪ್ರಕರಣ ದಾಖಲು:


ಈ ದಿನ ದಿನಾಂಕ 7-5-2011 ರಂದು ಕುಶಾಲನಗರ ಠಾಣಾ ಸರಹದ್ದಿನ ಹೆಗ್ಗಡ ಹಳ್ಳಿ ಗ್ರಾಮದಲ್ಲಿ ಫಿರ್ಯಾದಿ ಕೆ.ಎಸ್‌.ಗುರುಪಾದಸ್ವಾಮಿರವರ ಪತ್ನಿ ತಮ್ಮ ಹೊಲದಲ್ಲಿ ಜೋಳದ ಬೆಳೆಯನ್ನು ದನಗಳು ತಿನ್ನುತ್ತಿರುವುದನ್ನು ಕಂಡು ಓಡಿಸಲು ಹೋದ ಸಮಯದಲ್ಲಿ ಆರೋಪಿಗಳಾದ ಕಮಲ, ರೇಖಾ, ರೇಣುಕಾರಾದ್ಯ ಇವರುಗಳು ಸೇರಿ ದೊಣ್ಣೆಯಿಂದ ಹೊಡೆದು ನೋವನ್ನುಂಟು ಮಾಡಿದ್ದು, ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.


Friday, May 6, 2011

ರಸ್ತೆ ಅಫಘಾತ, ಬೈಕ್ ಸವಾರನಿಗೆ ಪೆಟ್ಟು
 • ಮೋಟಾರು ಬೈಕಿಗೆ ಲಾರಿಯೊಂದು ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಾಯಗಳಾಗಿರುವ ಘಟನೆ ವಿರಾಜಪೇಟೆ ನಗರ ಠಾಣಾ ಸರಹದ್ದಿನ ಚಿಕ್ಕಪೇಟೆ - ಬೋಯಿಕೇರಿ ರಸ್ತೆಯಲ್ಲಿ ನಡೆದಿದೆ. ದಿನಾಂಕ 5/5/2011ರಂದು ದೀಪಕ್ ಕೇಬಲ್ಸ್ ಇಂಡಿಯಾ ಲಿಮಿಟೆಡ್‌ನ ಅಧಿಕಾರಿ ರಾಘವೇಂದ್ರ ಎಂಬವರು ರಾಜೀವಗಾಂಧಿ ಗ್ರಾಮೀಣ ವಿದ್ಯುತೀಕರಣ ಯೋಜನೆಯ ವಿದ್ಯುತ್ ಕಂಬಗಳನ್ನು ಕೆದಮುಳ್ಳೂರಿಗೆ ಸಾಗಿಸುವ ಸಲುವಾಗಿ ಕಂಬಗಳಿದ್ದ ಲಾರಿಗೆ ದಾರಿ ತೋರಿಸುತ್ತಾ ತಮ್ಮ ಮೋಟಾರು ಸೈಕಲ್ ನಲ್ಲಿ ಹೋಗುತ್ತಿರುವಾಗ ಚಿಕ್ಕಪೇಟೆ - ಬೋಯಿಕೇರಿ ರಸ್ತೆಯಲ್ಲಿ ಲಾರಿ ಸಂ.ಕೆಎ-01-ಡಿ-9957ರ ಚಾಲಕ ವೀರೇಶ್ ಲಾರಿಯನ್ನು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ರಾಘವೇಂದ್ರರವರ ಮೋಟಾರು ಬೈಕಿಗೆ ಲಾರಿ ಡಿಕ್ಕಿಯಾಗಿ ರಾಘವೇಂದ್ರರವರಿಗೆ ಗಾಯಗಳಾಗಿರುವ ಬಗ್ಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಲಾರಿ ಮಗುಚಿ ಅಫಘಾತ
 • ಮೊಟ್ಟೆ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ಅಜಾಗರೂಕತೆಯಿಂದ ಮಗುಚಿ ಲಾರಿ ಹಾಗೂ ಮೊಟ್ಟೆಗಳಿಗೆ ಹಾನಿಯಾದ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಮಾಕುಟ್ಟ ಗ್ರಾಮದಲ್ಲಿ ನಡೆದಿದೆ. ದಿನಾಂಕ 05/05/2011ರಂದು ಮೈಸೂರಿನ ಎಂ.ಕೆ.ಹೇಮಂತ್ ಎಂಬವರಿಗೆ ಸೇರಿದ ಕೆಎ-45-192 ರ ಲಾರಿಯಲ್ಲಿ ಲಾರಿಯ ಚಾಲಕ ಮಹದೇವಸ್ವಾಮಿ ಎಂಬವರು ಮೊಟ್ಟೆಗಳನ್ನು ಮೈಸೂರಿನಿಂದ ಕೇರಳಕ್ಕೆ ಸಾಗಿಸುತ್ತಿದ್ದು, ಮಾಕುಟ್ಟ ಬಳಿ ಚಾಲಕ ಮಹದೇವಸ್ವಾಮಿ ಲಾರಿಯನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಲಾರಿಯು ಮಗುಚಿ ಬಿದ್ದು, ಲಾರಿ ಹಾಗೂ ಮೊಟ್ಟೆಗಳಿಗೆ ಹಾನಿಯುಂಟಾಗಿರುವ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಹಲ್ಲೆ, ವ್ಯಕ್ತಿಗೆ ಗಾಯ
 • ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿದ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಬಾಳೆಲೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 5/5/2011ರಂದು ನಿಟ್ಟೂರು ಗ್ರಾಮದ ನಾರಾಯಣ ಎಂಬವರು ಬಾಳೆಲೆ ಗ್ರಾಮದ ತಟ್ಟೆಕೆರೆಯಲ್ಲಿರುವ ಚಂದ್ರು ಎಂಬವರ ಅಂಗಡಿಯ ಮುಂದೆ ಹೋಗುತ್ತಿರುವಾಗ ಆರೋಪಿ ಚಿಂಡಾಮಾಡ ಬೋಪಯ್ಯ ಎಂಬವರು ನಾರಾಯಣರವರನ್ನು ದಾರಿತಡೆದು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಕಲ್ಲಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದುದಲ್ಲದೆ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಹಳೆ ವೈಷಮ್ಯದಿಂದ ಹಲ್ಲೆ, ವ್ಯಕ್ತಿಗೆ ಗಾಯ
 • ಹಳೆ ವೈಷಮ್ಯದಿಂದ ವ್ಯಕ್ತಿಯೋರ್ವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ತಟ್ಟೆಕೆರೆ ನಿಟ್ಟೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 5/5/2011ರ ಸಂಜೆ ನಿಟ್ಟೂರು ಗ್ರಾಮದ ಕುಂದನಕೋಡಿ ಗೋಪಾಲ ಎಂಬವರು ತಟ್ಟೆಕೆರೆಯಿಂದ ತಮ್ಮ ಮನೆಗೆ ವಾಪಾಸು ಹೋಗುತ್ತಿರುವಾಗ ಕಾರ್ಮಾಡು ಗ್ರಾಮದ ಹೆಚ್‌.ಎಸ್.ಗೋಪಾಲಿ ಎಂಬವರು ಗೋಪಾಲರೊಂದಿಗೆ ಹಳೆ ವೈಷಮ್ಯದಿಂದ ಜಗಳವಾಡಿ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿರುವ ಬಗ್ಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, May 5, 2011

ರೂ 5 ಲಕ್ಷ ಮೌಲ್ಯದ ಚಿನ್ನಾಭರಣ ಸುಲಿಗೆ.
 • ಸುಮಾರು ಸೂ.5 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಸುಲಿಗೆ ಮಾಡಿದ ಘಟನೆ ಕುಶಾಲನಗರ ಠಾಣಾ ವ್ಯಾಪ್ತಿಯ ನಾಗೇಗೌಡ ಬಡಾವಣೆಯಲ್ಲಿ ನಡೆದಿದೆ. ಮೈಸೂರಿನ ಅರವಿಂದ ನಗರದ ನಿವಾಸಿ ಜಗದೀಶ್ ಎಂಬವರು ದಿನಾಂಕ 4/5/2011ರಂದು ಮದುವೆ ಸಮಾರಂಭಕ್ಕೆಂದು ಕುಶಾಲನಗರಕ್ಕೆ ಬಂದಿದ್ದು, ಅವರ ತಂಗಿಯ ಮನೆಯಲ್ಲಿ ತಂಗಲು ಎಂದು ಹೋಗಿದ್ದು ತಂಗಿಯ ಮನೆಯಲ್ಲಿ ಜಗದೀಶ್ ಮತ್ತು ಅವರೊಂದಿಗೆ ಬಂದಿದ್ದ ಸುಮಾರು 13 ಜನರು ಮಲಗಿದ್ದಾಗ ರಾತ್ರಿ ಸಮಯ ಸುಮಾರು 1 ಗಂಟೆ ಸಮಯದಲ್ಲಿ ಜಗದೀಶ್ ರವರ ಪತ್ನಿ ಕುಸುಮ ಮತ್ತು ಅವರ ತಂಗಿ ಮಲಗಿಕೊಂಡಿದ್ದ ಕೋಣೆಗೆ ಯಾರೋ ನುಗ್ಗಿ ಅಲ್ಲಿದ್ದ ಸೂಟ್‌ಕೇಸನ್ನು ತೆಗೆದುಕೊಂಡಿದ್ದು, ಆಗ ಎಚ್ಚರಗೊಂಡ ಕುಸುಮರವರು ಕಿರುಚಿಕೊಂಡಾಗ ಆ ವ್ಯಕ್ತಿಯು ಆಕೆಯ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಸಹಾ ಕಿತ್ತುಕೊಂಡು ಓಡಿ ಹೋಗಿರುವುದಾಗಿದೆ. ಘಟನೆಯಲ್ಲಿ ಒಟ್ಟು ಸುಮಾರು ರೂ 5 ಲಕ್ಷ ಮೌಲ್ಯದ ಚಿನ್ನಾಭರಣಗಳು ಸುಲಿಗೆಯಾಗಿದ್ದು, ಕುಶಲನಗರ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ರಾತ್ರಿ ವೇಳೆ ಮನೆ ನುಗ್ಗಿ ಚಿನ್ನಾಭರಣ ಸುಲಿಗೆ
 • ರಾತ್ರಿ ವೇಳೆಯಲ್ಲಿ ಮನೆ ನುಗ್ಗಿ ಚಿನ್ನಾಭರಣ ಸುಲಿಗೆ ಮಾಡಿದ ಘಟನೆ ಕುಶಾಲನಗರ ಠಾಣಾ ವ್ಯಾಪ್ತಿಯ ಬಸವೇಶ್ವರ ಬಡಾವಣೆಯಲ್ಲಿ ನಡೆದಿದೆ. ದಿನಾಂಕ 4/5/2011ರ ರಾತ್ರಿ ಕುಶಾಲನಗರದ ಬಸವೇಶ್ವರ ಬಡಾವಣೆಯ ನಿವಾಸಿ ಪ್ರಕಾಶ್ ಎಂಬವರು ತಮ್ಮ ಕುಟುಂಬದವರೊಂದಿಗೆ ಮನೆಯಲ್ಲಿದ್ದಾಗ ರಾತ್ರಿ 12:30 ಗಂಟೆಯ ವೇಳೆಗೆ ಯಾರೋ ಅಪರಿಚಿತ ವ್ಯಕ್ತಿಗಳು ಮನೆಯ ಹಿಂಬಾಗಿಲನ್ನು ಮೀಟಿ ಪ್ರಕಾಶ್‌ರವರ ತಾಯಿ ಜಾಜಮ್ಮರವರು ಮಲಗಿದ್ದ ಕೋಣೆಗೆ ನುಗ್ಗಿ ಅವರ ಕತ್ತಿನಲ್ಲಿದ್ದ ಸುಮಾರು ರೂ 15,000 ಮೌಲ್ಯದ ಚಿನ್ನದ ಸರವನ್ನು ಬಲಾತ್ಕಾರವಾಗಿ ಕಿತ್ತುಕೊಂಡು ಹೋಗಿರುವ ಬಗ್ಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಹಳೆ ದ್ವೇಷ ವ್ಯಕ್ತಿಯೋರ್ವರಿಗೆ ಚಾಕುವಿನಿಂದ ಇರಿದು ಗಾಯ
 • ಹಳೆ ವೈಷಮ್ಯದಿಂದ ವ್ಯಕ್ತಿಯೋರ್ವರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ಗದ್ದಿಗೆ ಬಳಿ ನಡೆದಿದೆ. ದಿನಾಂಕ 4/5/2011ರ ಅಪರಾಹ್ನ ಮಡಿಕೇರಿಯ ಗದ್ದಿಗೆಯ ಬಳಿ ಫಿರ್ಯಾದಿ ಮಕ್ಕಂದೂರು ಗ್ರಾಮದ ಸಾಬುದ್ದೀನ್ ಎಂಬವರು ಸುಲೇಲ್ ಎಂಬವರೊಂದಿಗೆ ಮಾತನಾಡಿಕೊಂಡು ನಿಂತಿರುವಾಗ ಅಲ್ಲಿಗೆ ಬಂದ ಆರೋಪಿ ಪೀಲ್ಡ್ ಸಿರಾಜ್ ಎಂಬಾತನು ಹಳೇ ದ್ವೇಷದಿಂದ ಸಾಬುದ್ದೀನ್ ರವರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಬಗ್ಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
 • ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಚೆನ್ನಂಗಿ ಗ್ರಾಮದ ಚೊಟ್ಟೆಪಾರೆ ಗಿರಿಜನ ಕಾಲೋನಿಯಲ್ಲಿ ನಡೆದಿದೆ. ದಿನಾಂಕ 4/5/2011ರ ರಾತ್ರಿ ಚೊಟ್ಟೆಪಾರೆ ಗಿರಿಜನ ಕಾಲೋನಿಯ ಜೆ.ಕೆ.ನಾಗರಾಜು ಎಂಬವರು ಅವರ ಪಕ್ಕದ ಮನೆಯ ಜಾನು ಎಂಬ ಮಹಿಳೆಯೊಡನೆ ಮಾತನಾಡಿಕೊಂಡಿರುವಾಗ ಅಲ್ಲಿಗೆ ಬಂದ ಜಾನುಳ ತಮ್ಮ ಮಂಜು ಹಾಗೂ ಆಕೆಯ ಮಗ ರಾಜಣ್ಣ ನಾಗರಾಜುರವರು ಜಾನುಳೊಂದಿಗೆ ಮಾತನಾಡಿದ ಬಗ್ಗೆ ಆಕ್ಷೇಪಿಸಿ ಜಗಳವಾಡಿ ದೊಣ್ಣೆಯಿಂದ ನಾಗರಾಜುರವರ ಮೇಲೆ ಹಲ್ಲೆ ನಡೆಸಿದೆ ಬಗ್ಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಗಾಯಾಳು ನಾಗರಾಜುವನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

Tuesday, May 3, 2011


ಹಾವು ಕಚ್ಚಿ ವ್ಯಕ್ತಿಯ ದುರ್ಮರಣ:


ರಾತ್ರಿವೇಳೆಯಲ್ಲಿ ಮೂತ್ರವಿಸರ್ಜನೆಗೆಂದು ಹೋದ ವ್ಯಕ್ತಿಗೆ ಹಾವು ಕಚ್ಚಿ ಮೃತಪಟ್ಟ ಬಗ್ಗೆ ಪೊನ್ನಂಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಕೋಣನಕಟ್ಟೆ ಗ್ರಾಮದಿಂದ ವರದಿಯಾಗಿದೆ. ದಿನಾಂಕ 2-5-2011 ರಂದು ರಾತ್ರಿ 7-30 ಗಂಟೆಗೆ ಧನುಂಗಾಲ ಗ್ರಾಮದಲ್ಲಿ ಪಂಜರಿ ಎರವರ ಮಣಿ ಎಂಬವರು ಮೂತ್ರ ವಿಸರ್ಜನೆಗೆಂದು ಮನೆಯಿಂದ ಹೊರಗಡೆ ಹೋದ ಸಮಯದಲ್ಲಿ ಹಾವೊಂದು ಕಚ್ಚಿದ್ದು ಸದರಿಯವರನ್ನು ಗೋಣಿಕೊಪ್ಪ ಆಸ್ಪತ್ರೆಗೆ ದಾಖಲಿಸಿ ವೈದ್ಯರ ಸಲಹೆಯ ಮೇರೆಗೆ ಮೈಸೂರಿನ ಕೆ.ಆರ್‌. ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಪಂಜರಿ ಎರವರ ಮಣಿ ಮೃತಪಟ್ಟಿದ್ದು, ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿ ಕ್ರಮ ಕೈಗೊಂಡಿರುತ್ತಾರೆ.


96 ಸಾವಿರದ ಚಿನ್ನಾಭರಣ ಕಳವು, ಪ್ರಕರಣ ದಾಖಲು:


ಮನೆಗೆ ನುಗ್ಗಿ ಸುಮಾರು 96000 ರೂ ಬೆಲೆಬಾಳುವ ಚಿನ್ನಾಭರಣ ಕಳವು ಮಾಡಿದ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕಡಗದಾಳು ಗ್ರಾಮದ ಕತ್ತಲೆಕಾಡು ಗ್ರಾಮದಿಂದ ವರದಿಯಾಗಿದೆ. ದಿನಾಂಕ 2-5-2011 ರಂದು ಫಿರ್ಯಾದಿ ಮಂಜುನಾಥರವರು ಬೆಳಿಗ್ಗೆ 8-00 ಗಂಟೆಗೆ ತಮ್ಮ ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗಿ ಸಾಯಂಕಾಲ 5-00 ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆಯ ಹಿಂಬದಿಯ ಬಾಗಿಲನ್ನು ಯಾರೋ ಕಳ್ಳರು ತೆರೆದು ಒಳಗೆ ಪ್ರವೇಶ ಮಾಡಿ ಮನೆಯೊಳಗಿಟ್ಟಿದ್ದ ಸುಮಾರು 96,000 ರೂ ಬೆಲೆಬಾಳುವ ಚಿನ್ನದ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
Sunday, May 1, 2011

ಆರ್ಥಿಕ ಮುಗ್ಗಟ್ಟು, ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ
 • ಆರ್ಥಿಕ ಮುಗ್ಗಟ್ಟಿನಿಂದಾಗಿ ಜುಗುಪ್ಸೆಗೊಂಡ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಘಟನೆ ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ಗೌಡ ಸಮಾಜದ ಬಳಿ ನಡೆದಿದೆ. ಗೌಡ ಸಮಾಜದ ಬಳಿಯ ನಿವಾಸಿ ಪಿ.ಟಿ.ಆನಂದ ಎಂಬವರು ಹಣಕಾಸು ಮುಗ್ಗಟ್ಟಿನಲ್ಲಿದ್ದು, ದಿನಾಂಕ 30/04/2011ರಂದು ಮೆಕಾನಿಕ್ ಕೆಲಸಕ್ಕೆ ಹೋಗುತ್ತೇನೆಂದು ಮನೆಯಿಂದ ಹೋಗಿದ್ದು, ಅವರ ಅಂಗಡಿ ಮಳಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ರೂ 33 ಲಕ್ಷಕ್ಕೆ ವಂಚನೆ, ಪ್ರಕರಣ ದಾಖಲು
 • ಸುಮಾರು ರೂ 33 ಲಕ್ಷಗಳನ್ನು ಮಹಿಳೆಯೋರ್ವರಿಂದ ಸಾಲವಾಗಿ ಪಡೆದು ವಂಚಿಸಿದ ಪ್ರಕರಣ ಮಡಿಕೇರಿ ನಗರ ಠಾಣೆಯಲ್ಲಿ ವರದಿಯಾಗಿದೆ. ಮಡಿಕೇರಿ ನಗರದ ಮ್ಯಾನ್ಸ್‌ ಕಾಂಪೌಂಡ್ ಬಳಿಯ ನಿವಾಸಿ ನಿವೃತ್ತ ಪ್ರಾಂಶುಪಾಲರಾದ ಕೆ.ಕೆ.ಬೊಳ್ಳಮ್ಮ ಎಂಬವರು ಆರೋಪಿ ಮಡಿಕೇರಿ ನಗರದ ಮಹಮದ್ ರಶೀದ್ ಎಂಬವರಿಗೆ 2009ನೇ ಇಸವಿಯಲ್ಲಿ ಮೋಟಾರ್ ಸೈಕಲ್ ಅಂಗಡಿ ಇಡಲು ರೂ. 4 ಲಕ್ಷಗಳನ್ನು ಸಾಲವಾಗಿ ನೀಡಿದ್ದು, ನಂತರ ಮಹಮದ್ ರಶೀದ್‌ರವರು ಪುನಃ ಸಾಲ ಕೇಳಿದಾಗ ಬೊಳ್ಳಮ್ಮರವರು ಚಿನ್ನಾಭರಣ ಹಾಗೂ ನಗದು ಸೇರಿದಂತೆ ಒಟ್ಟು ರೂ. 33 ಲಕ್ಷದಷ್ಟು ಹಣವನ್ನು ಸಾಲವಾಗಿ ನೀಡಿದ್ದು, ನಂತರ ಮಹಮದ್ ರಶೀದ್ ಬೊಳ್ಳಮ್ಮರವರಿಗೆ ಸಾಲವನ್ನು ಮರು ಪಾವತಿಸದೆ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.