Thursday, June 30, 2011


ಮಹಿಳೆಯ ಮೇಲೆ ದೌರ್ಜನ್ಯ ಪ್ರಕರಣ ದಾಖಲು:


ಫಿರ್ಯಾದಿ ಶ್ರೀಮತಿ ಜೆಸೀಲಾ ಎಂಬವರು ದಿನಾಂಕ 9-3-2003 ರಂದು ಅಬ್ಬಾಸ್‌ ಎಂಬವರನ್ನು ಮದುವೆಯಾಗಿದ್ದು, ಇಲ್ಲಿಯ ತನಕ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಆಕೆಯ ಗಂಡ ಆರೋಪಿತ ಅಬ್ಬಾಸ್‌ರವರು ಖಾಲಿದ್‌, ಇಸ್ಮಾಯಿಲ್‌ ಜೋತೆ ಸೇರಿಕೊಂಡು ಫಿರ್ಯಾದಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದುದಲ್ಲದೆ ಈ ಕೃತ್ಯಕ್ಕೆ ಫಿರ್ಯಾದಿಯ ಮಾವ ಪಕ್ರು ಎಂಬವರು ಪ್ರಚೋದಿಸುತ್ತಿದ್ದು, ದಿನಾಂಕ 17-6-2011 ರಂದು ಫಿರ್ಯಾದಿ ವಿರಾಜಪೇಟೆ ನಗರದ ರೋಟರಿ ಶಾಲೆಯಿಂದ ಬರುತ್ತಿರುವಾಗ ಆರೋಪಿಗಳು ಕಾರಿನಲ್ಲಿ ಬಂದು ಫಿರ್ಯಾದಿಯ ದಾರಿ ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಮಾಡುವುದಾಗಿ ಜೀವಬೆದರಿಕೆ ಹಾಕಿದ್ದು, ವಿರಾಜಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.


ನೀರಿನಲ್ಲಿ ಬಿದ್ದು ವ್ಯಕ್ತಿ ಸಾವು:


ಈ ದಿನ ದಿನಾಂಕ 30-6-2011 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಅರಪಟ್ಟು ಗ್ರಾಮದ ಪೊದ್ದಮಾನಿ ಎಂಬಲ್ಲಿ ಫಿರ್ಯಾದಿ ಶ್ರೀಮತಿ ಮುನಿಯಮ್ಮ ಎಂಬವರ ಪತಿ ಪಿ. ಕರಿಯಪ್ಪ ಎಂಬವರು ತಾನು ವಾಸವಾಗಿರುವ ಸುಧೀರ್‌ರವರ ಮನೆಯಿಂದ ಹಣ ಪಡೆದುಕೊಂಡು ಬರುವುದಾಗಿ ಹೋದವರು ದಾರಿಯಲ್ಲಿ ಗದ್ದೆಯ ನೀರಿನಲ್ಲಿ ಬಿದ್ದು ಸಾವನ್ನಪ್ಪಿದ್ದು, ಸದರಿಯವರಿಗೆ ತಲೆ ಸುತ್ತು ಖಾಯಿಲೆ ಇದ್ದು, ನೀರಿನಲ್ಲಿ ಬಿದ್ದು ಮೃತಪಟ್ಟಿರುವ ಬಗ್ಗೆ ದೂರನ್ನು ನೀಡಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.


ಮೋಟಾರು ಸೈಕಲ್‌ ಕಳವು:


ದಿನಾಂಕ29-6-2011 ರಂದು ರಾತ್ರಿ 21-30 ಗಂಟೆಗೆ ಕುಶಾಲನಗರ ಠಾಣಾ ಸರಹದ್ದಿನ ಗುಡ್ಡೆಹೊಸೂರು ಗ್ರಾಮದಲ್ಲಿ ಫಿರ್ಯಾದಿ ಕೆ.ಪಿ. ಪುರುಷೋತ್ತಮ ಎಂಬವರು ತಮ್ಮ ಬಾಪ್ತು ಮೋಟಾರ್‌ ಸೈಕಲ್ ಸಂಖ್ಯೆ ಕೆಎ-12 ಹೆಚ್‌-1616 ಎಲ್‌ಎಂಎಲ್‌ ನ್ನು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.Wednesday, June 29, 2011

ಗೊಮಾಂಸ ಮಾರಾಟಾ ಪ್ರಯತ್ನ:
ದಿ: 29-6-11 ರಂದು ಸಿಧ್ಥಾಪುರ ಠಾಣಾ ವ್ಯಾಪ್ತಿಯ ಸಿದ್ಧಾಪುರ ನಗರದ ಸೌಂಡ್ಸ್‌ ಅಂಗಡಿಯ ಮುಂಭಾಗ ಸಾರ್ವಜನಿಕ ರಸ್ತೆ ಬಿ.ಟಿ. ಪೊನ್ನಪ್ಪ ಹೆಚ್‌ಸಿ -98 ರವರು ಕರ್ತವ್ಯದಲ್ಲಿರುವಾಗ್ಗೆ ಬಾತ್ಮಿದಾರರ ಮಾಹಿತಿ ಯಂತೆ ಸಿದ್ದಾಪುರ ನಗರದಿಂದ ಮಡಿಕೇರಿ ರಸ್ತೆ ಕಡೆ ಬರುತ್ತಿರುವ ಜೀಪನ್ನು ತಡೆದು ನಿಲ್ಲಿಸಿ ಜೀಪಿನ ಪರಿಶೀಲಿಸಲಾಗಿ ಪ್ಲಾಸ್ಟಿಕ್‌ ಚೀಲದಲ್ಲಿ ಸುಮಾರು 5 ಕೆ.ಜಿ ದನದ ಮಾಂಸವಿದ್ದು ಮಾರಾಟಾ ಮಾಡಲು ಸರ್ಕಾರದ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದ ಮೇರೆ 5ಕೆ.ಜೆ. ದನದ ಮಾಂಸ, ತೂಗುವ ತಕ್ಕಡಿ, ತಟ್ಟೆ ಆಳತೆಯ ಕಲ್ಲುಗಳು 2 ಮೀನಿನ ಪ್ಲಾಸ್ಟಿಕ್‌ ಡಬ್ಬಗಳನ್ನು ಅಮಾನತ್ತು ಪಡಿಸಿಕೊಂಡು ಸಿದ್ದಾಪುರ ಠಾಣೆ ಪ್ರಕಣವನ್ನು ದಾಖಲಿಸಿಕೊಂಡಿರುವುದಾಗಿದೆ.


ವಂಚನೆಯ ಪ್ರಕರಣ:
ದಿ: 28-6-2011 ರಂದು ಕುಶಾಲನಗರ ಠಾಣಾ ಸರಹದ್ದಿನ ಬೈಚನಹಳ್ಳಿ ಗ್ರಾಮದಲ್ಲಿರುವ ವಿಲ್ಕೋ ಗೋಲ್ಡ್‌ ಸೊಕ್‌, ಪಿರ್ಯಾದಿ ವಿನಯ್‌ ರವರು ಚಿನ್ನದ ಅಂಗಡಿಯಲ್ಲಿರುವಾಗ್ಗೆ 2 ಹೆಂಗಸರು ಅಂಗಡಿಗೆ ಬಂದು ಹಳೆಯ ಮಾದರಿ ಯಂತಿದ್ದ ಆಭರಣಗಳನ್ನು ನೀಡಿ ಕೊಟ್ಟು ಹೊಸ ಮಾದರಿಯ ಚೈನ್‌ ಹಾಗೂ ಬಳೆಗಳನ್ನು ನೀಡುವಂತೆ ಕೋರಿದ್ದು ಅಂಗಡಿಯ ಮಾಲೀಕ ಚಿನ್ನದ ಆಭರಣಗಳನ್ನು ಪರಿಶೀಲಿಸಲಾಗಿ 72 ಗ್ರಾಂ ಚಿನ್ನದ ತೂಕವಿರುವುದಾಗಿ ನಂತರ ಸದರಿ ಚಿನ್ನದಂತಿದ್ದ ಆಭರಣಗಳನ್ನು ಪಡೆದುಕೊಂಡು ಅಂಗಡಿಯಲ್ಲಿದ್ದ ಹೊಸ ಮಾದರಿಯ 35 ಗ್ರಾಂ ಸಿಕೊಚೈನ್‌ 2 ಗ್ರಾಂ ತೂಕದ ಚಿನ್ನದ ಮಾಟಿ, 10 ಗ್ರಾಂ ತೂಕವಿರುವ ಬಳೆಗಳು, ಒಟ್ಟು 57 ಗ್ರಾಂ ತೂಕದ ಚಿನ್ನ (ರೂ 1,34,000) ಹೊಸ ಮಾದರಿಯ ಆಭರಣಗಳನ್ನು ನೀಡಿ ನಂತರ ಹೆಂಗಸರು ಕೊಟ್ಟ ಚಿನ್ನ ನಕಲಿ ಎಂದು ತಿಳಿದು ಬಂದು ಈ ಬಗ್ಗೆ ನೀಡಿದ ದೂರಿನ್ವಯ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ:
ದಿ: 29-6-11 ರಂದು ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಅತ್ತೂರು ಗ್ರಾಮದ ನಿವಾಸಿ ಕಟ್ಟೇರ ಉತ್ತರೆ ರವರು ತನ್ನ ಗಂಡ ಕಟ್ಠೇರ ಅಪ್ಪಚ್ಚು ರವರಿಗೆ ಗ್ರಾಮದಲ್ಲಿ ಮಾಲಿಂಗ ಎಂಬುವರ ತಾಯಿ ಮೃತ್ತ ಪಟ್ಟ ಕಾರಣ ಸಾವಿಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದು ನಾನು ಮನೆಗೆ ಬಂದು ಗಂಡ ಅಪ್ಪಚ್ದುರವರು ಮನೆಯಲ್ಲಿ ಇರಲ್ಲಿಲ್ಲ ಗಂಡ ಹೊರಗೆ ಹೋಗಿರಬಹುದೆಂದು ತಿಳಿದು ಸಂಜೆಯಾದರೂ ಮನಗೆ ಬಾರದೇ ಇದ್ದು ಅಕ್ಕಪಕ್ಕದಲ್ಲಿ ನೆಂಟರಿಷ್ಟರಲ್ಲಿ ಹುಡುಕಾಡಿದಲ್ಲೂ ಈವರೆಗೂ ಪತ್ತೆಯಾಗದೆ ಇದ್ದು ಕಾರಣ ಕಾಣೆಯಾದ ನನ್ನಗಂಡು ಹುಡುಕಿ ಕೊಡಬೇಕಾಗಿ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

Tuesday, June 28, 2011

ವ್ಯಕ್ತಿಯ ಮೇಲೆ ಹಲ್ಲೆ:


ದಿ: 27-6-11 ರಂದು ಪಿರ್ಯಾದಿ ಮಿಥುನ್‌ ರವರ ಮಾವ ಕೃಷ್ಣರವರು ಮನೆಗೆ ಹೋಗಿ ವಾಪಾಸು ಹಾಲು ತರುತ್ತಿರುವಾಗ್ಗೆ ಆರೋಪಿಯಾದ ಆಶೋಕನ್ನು ಪಿರ್ಯಾದಿಯವರಿಗೆ ಆವಾಚ್ಚಶಬ್ದಗಳಿಂದ ಬೈದು ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿರುವುದಾಗಿ ಕೊಟ್ಟ ಪುಕಾರಿನ್ವ ವಿರಾಜಪೇಟೆ ಗ್ರಾ ಠಾಣೆ ಪ್ರಕರಣವನ್ನುದಾಖಲಿಸಿ ತನಿಖೆಯನ್ನು ಕೈಗೊಂಡಿರುವುದಾಗಿದೆ.ರಸ್ತೆ ಅಪಘಾತ: ಕುಶಾಲನಗರ ಠಾಣಾ ವ್ಯಾಪ್ತಿಯ ಬಸವನ ಹಳ್ಳಿಯ ಮುಖ್ಯ ರಸ್ತೆಯಲ್ಲಿ ಕೆ.ಎ. 12 ಟಿ 4332 ರ ಮತ್ತುಟ್ರಿಲ್ಲರ್‌ ಕೆ.ಎ.12 4333 ರಲ್ಲಿ ಪಾನವಾಳ ಮರವನ್ನು ತುಂಬಿಸಿಕೊಂಡು ಕುಶಾಲನಗರಕ್ಕೆ ಬಂದು ಅನ್‌ಲೋಡ್‌ ಮಾಡಿ ವಾಪಾಸ್ಸು ಹೋಗುತ್ತಿರುವಾಗ್ಗೆ ಎದುಗಡೆಯಿಂದ ಬಂದ ಮಾರ್ಷಲ್‌ ಜೀಪು ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಟ್ರಾಕ್ಟರ್‌ಗೆ ಡಿಕ್ಕಿ ಪಡಿಸಿರುವುದಾಗಿ ಕೊಟ್ಟ ಪುಕಾರಿನ್ವಯ ಕುಶಾಲನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

Monday, June 27, 2011


ಬೀಟೆ ಮರ ಕಳ್ಳತನ ಪ್ರಕರಣ ದಾಖಲು:


ದಿನಾಂಕ 18-6-2011 ರಂದು ರಾತ್ರಿ ವೇಳೆಯಲ್ಲಿ ಸಿದ್ದಾಪುರ ಠಾಣಾ ಸರಹದ್ದಿನ ಮೇಕೂರು ಗ್ರಾಮದಲ್ಲಿರುವ ಟಾಟಾ ಕಾಫಿ ಸಂಸ್ಥೆಗೆ ಸೇರಿದ ಎಮ್ಮೆಗುಂಡಿ ಕಾಫಿ ತೋಟದಿಂದ ಒಣಗಿ ನಿಂತಿದ್ದ ಬೀಟೆ ಮರವನ್ನು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿದ್ದು, ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.


ಮೋಟಾರು ಸೈಕಲ್‌ಗೆ ಕಾರ್‌ ಡಿಕ್ಕಿ ಇಬ್ಬರಿಗೆ ಗಾಯ:


ದಿನಾಂಕ 26-6-2011 ರಂದು ಪೊನ್ನಂಪೇಟೆ ಠಾಣಾ ಸರಹದ್ದಿನ ನಲ್ಲೂರು ಗ್ರಾಮದಲ್ಲಿ ಸುರೇಶ ಹಾಗೂ ಅವರ ಪತ್ನಿ ಮೋಟಾರು ಸೈಕಲ್‌ನಲ್ಲಿ ನಲ್ಲೂರಿಗೆ ಪ್ರಯಾಣಿಸುತ್ತಿದ್ದ ಸಮಯದಲ್ಲಿ ಆರೋಪಿ ಪಾರುವಂಗಡ ರಾಜುರವರು ತಮ್ಮ ಬಾಪ್ತು ಮಾರುತಿ ಇಂಡಿಗೋ ಕಾರ್‌ ಸಂಖ್ಯೆ ಕೆಎ-12 ಎನ್‌-1837ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿ ಮೋಟಾರು ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮ ಸುರೇಶ ಹಾಗು ಅವರ ಪತ್ನಿ ಸೀಜಿನಾರವರಿಗೆ ಗಾಯಗಳಾಗಿದ್ದು, ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.


ಮನೆ ಬಾಗಿಲು ಮುರಿದು 85000 ರೂ ಚಿನ್ನಾಭರಣ ಕಳವು:


ದಿನಾಂಕ 25-6-11 ರಂದು 20-00 ಗಂಟೆಗೆ ಫಿರ್ಯಾದಿ ವಿ.ಎ. ಎರುಮು ಎಂಬವರು ಕಕ್ಕಬೆಗೆ ಮದುವೆ ಸಮಾರಂಭರಕ್ಕೆ ಹೋಗಿ ಮದುವೆ ಮುಗಿಸಿ ಸಮಯ 23-45 ಗಂಟೆಗೆ ವಾಪಾಸ್ಸು ಮನೆಗೆ ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಹಿಂಬದಿಯ ಬಾಲಿಲನ್ನು ಮುರಿದು ಒಳಗೆ ಪ್ರವೇಶಿಸಿ ಬೀರುವಿನ ಬಾಗಿಲನ್ನು ಮುರಿದು ತೆರೆದು ಒಗಗೆ ಇಟ್ಟಿದ್ದ 32,000 ನಗದು ಹಾಘೂ 53000 ರೂ ಬೆಲೆಯ ಬಿನ್ನಾಭರಣ ಒಟ್ಟು 85,000 ರೂ ಗಳಷ್ಟು ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ನಾಪೋಕ್ಲು ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

Sunday, June 26, 2011

ವ್ಯಕ್ತಿಯ ಮೇಲೆ ಹಲ್ಲೆ ಮತ್ತು ಜೀವ ಬೆದರಿಕೆ:


ಶನಿವಾರಸಂತೆ ಠಾಣಾ ವ್ಯಾಪ್ತಿಯ ಬೆಳ್ಳಿರಳ್ಳಿಗ್ರಾಮದ ಪಿರ್ಯಾದಿ ಕೆ.ಬಿ ಹರೀಶ್‌ ತನ್ನ ಮನೆಯಲ್ಲಿ ರುವಾಗ್ಗೆ ಆರೋಪಿಗಳಾದ ವಿಜಯಕುಮಾರ್‌ ಪಿರ್ಯಾದಿಯೊಂದಿಗೆ ರೂ 5000 /- ಸಾಲ ಕೊಡು ಎಂದು ಕೇಳಿದಾಗ ಪಿರ್ಯಾದಿ ರವರು ನನ್ನತ್ತಿರ ಹಣವಿಲ್ಲ ಎಂದು ಹೇಳಿದಕ್ಕೆ ಸದರಿ ಆರೋಪಿಯು ಪಿರ್ಯಾದಿಯವರಿಗೆ ದೊಣ್ಣೆಯಿಂದ ಹೊಡೆದು ರಕ್ತ ಗಾಯವಾಗಿರುವುದರಿಂದ ಅಲ್ಲದೇ ಅದನ್ನು ಬಿಡಿಸಲು ಬಂದ ಪಿರ್ಯಾದಿಯವರ ತಾಯಿ ಚಂದ್ರಿಕರವರಿಗೆ ಆರೋಪಿಗಳಾದ ಪ್ರಸದ್ ಹಾಗೂ ಚಂದ್ರುರವರು ಕೈಯಿಂದ ಶರೀರ ಬಾಗಕ್ಕೆ ಗುದ್ದಿ ನೋವುಪಡಿಸಿದ್ದು ಅಲ್ಲದೇ ಕೊಲೆಬೆದರಿಕೆ ಹಾಕಿರುವುದಾಗಿ ಕೊಟ್ಟ ಪುಕಾರಿನ್ವಯ ಶನಿವಾರಸಂತೆ ಠಾಣೆ ಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿರುವುದಾಗಿದೆ,

Saturday, June 25, 2011

ಮೋಟಾರು ಸೈಕಲ್‌ ಡಿಕ್ಕಿಯಾಗಿ ಬಾಲಕನಿಗೆ ಗಾಯ:


ದಿನಾಂಕ 19-6-2011 ರಂದು ಶನಿವಾರಸಂತೆ ಪೊಲೀಸ್‌ ಠಾಣಾ ಸರಹದ್ದಿನ ಶಿಹರ ಗ್ರಾಮದಲ್ಲಿ ಫಿರ್ಯಾದಿ ದಯಾನಂದ ಎಂಬವರು ತನ್ನ ಪತ್ನಿ ಹಾಗು 7 ವರ್ಷ ಪ್ರಾಯದ ಮಗ ಆದಿತ್ಯನೊಂದಿಗೆ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯದಲ್ಲಿ ಆರೋಪಿ ಶರತ್‌ ಎಂಬವರು ಕೆಎ-51, ಹೆಚ್‌-9830ರ ಮೋಟಾರಯ ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಹಿಂಬದಿಯಿಂದ ಫಿರ್ಯಾದಿಯವರ ಮಗ ಆದಿತ್ಯನಿಗೆ ಡಿಕ್ಕಿಪಡಿಸಿದ ಪರಿಣಾಮ ಆದಿತ್ಯ ಗಾಯಗೊಂಡು, ಚಿಕಿತ್ಸೆಯ ವೆಚ್ಚವನ್ನು ಭರಿಸುವುದಾಗಿ ಆರೋಪಿಯು ತಿಳಿಸಿದ್ದು ನಂತರ ಚಿಕಿತ್ಸೆಯ ವೆಚ್ಚವನ್ನು ಭರಿಸದೇ ಇರುವ ಕಾರಣ ಫಿರ್ಯಾದಿಯವರು ಶನಿವಾರಸಂತೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.


ಮನೆಗೆ ಅಕ್ರಮ ಪ್ರವೇಶ ಮಾಡಿ ವ್ಯಕ್ತಿಯ ಮೇಲೆ ಹಲ್ಲೆ:


ದಿನಾಂಕ 20-6-2011 ರಂದು ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ಕುಂಜಿಲ ಗ್ರಾಮದಲ್ಲಿ ಫಿರ್ಯಾದಿ ಶ್ರೀಮತಿ ಕತೀಜಾ ಎಂಬವರ ಮನೆಗೆ ಆರೋಪಿ ಕುಂಜಿಲ ಗ್ರಾಮದ ಹಸೈನಾರ್‌ ಅಕ್ರಮ ಪ್ರವೇಶ ಮಾಡಿ ಹಸು-ಕರುವಿನ ವಿಚಾರದಲ್ಲಿ ಜಗಳವಾಡಿ ದೊಣ್ಣೆಯಿಂದ ಹೊಡೆದು ನೋವನ್ನುಂಟು ಮಾಡಿದ್ದು, ನಾಪೋಕ್ಲು ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.


ಆರ್‌.ಟಿ.ಒ ಅಧೀಕ್ಷಕರಿಂದ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಜೀವಬೆದರಿಕೆ:


ದಿನಾಂಕ 24-5-2011 ರಂದು ಮಡಿಕೇರಿ ನಗರದ ಆರ್‌.ಟಿ.ಒ. ಕಛೇರಿಯಲ್ಲಿ ಫಿರ್ಯಾದಿ ಮಹಮ್ಮದ್‌ ಹಬೀಬುಲ್ಲಾ ಖಾನ್‌, ಪ್ರಾದೇಶಿಕ ಸಾರಿಗೆ ಅಧಿಕಾರಿರವರು ಕರ್ತವ್ಯದಲ್ಲಿದ್ದಾಗ ಅದೇ ಕಛೇರಿಯಲ್ಲಿ ಅಧೀಕ್ಷಕರಾಗಿರುವ ಆರೋಪಿ ಎಸ್‌. ಯೋಗಾಚಾರಿರವರು ಕರ್ತವ್ಯ ಹಂಚಿಕೆಯ ವಿಷಯದಲ್ಲಿ ತಕರಾರು ತೆಗೆದು ಅಸಭ್ಯವಾಗಿ ವರ್ತಿಸಿ ಸಿಬ್ಬಂದಿಯವರ ಮುಂದೆ ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿ ಕ್ರಮ ಕೈಗೊಂಡಿರುತ್ತಾರೆ.


ಮೋಟಾರ್‌ ಸೈಕಲ್‌ ಕಳವು ಪ್ರಕರಣ ದಾಖಲು:


ಮನೆಯ ಮುಂದುಗಡೆ ನಿಲ್ಲಿಸಿದ್ದ ಮೋಟಾರು ಸೈಕಲ್‌ ಕಳವು ಆದ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ವರದಿಯಾಗಿದೆ. ದಿನಾಂಕ 23-6-2011 ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಅರ್ವತ್ತೋಕ್ಲು ಗ್ರಾಮದಲ್ಲಿ ಫಿರ್ಯಾದಿ ಚಂದ್ರಶೇಖರ ಎಂಬವರು ತಮ್ಮ ಬಾಪ್ತು ಸ್ಪೆನ್‌ಡರ್‌ ಮೋಟಾರು ಸೈಕಲ್‌ ಸಂಖ್ಯೆ:ಕೆಎ-12-ಇ-8554ನ್ನು ರಾತ್ರಿ 8-00 ಗಂಟೆಗೆ ತಮ್ಮ ಮೆನಯ ಮುಂದುಗಡೆ ನಿಲ್ಲಿಸಿದ್ದು, ಬೆಳಿಗ್ಗೆ 6-00 ಗಂಟೆಗೆ ನೋಡಿದಾಗ ಮೋಟಾರ್‌ ಸೈಕಲ್‌ ಅಲ್ಲಿರದೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
Friday, June 24, 2011

ರಸ್ತೆ ಅಪಘಾತ ವಾಹನ ಜಖಂ:

ದಿನಾಂಕ 23-6-2011 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಮಾಕುಟ್ಟ ಮೇಮನಕೊಲ್ಲಿ ಎಂಬಲ್ಲಿ ಇಬ್ರಾಹಿಂ ಕೆ.ಎ.12-ಎ3225ರ ಚಾಲಕ ತನ್ನ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಯಲ್ಲಿ ವಾಹನವು ಮಗುಚಿಕೊಂಡು ವಾಹನ ಜಖಂ ಗೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಮಹಿಳೆ ಮೇಲೆ ದೌರ್ಜನ್ಯ, ಪ್ರಕರಣ ದಾಖಲು:

ಫಿರ್ಯಾದಿ ಶ್ರೀಮತಿ ಜ್ಯೋತಿರವರು ಆರೋಪಿ ರವಿ ಎಂಬವರನ್ನು ಸುಮಾರು 23 ವರ್ಷಗಳ ಹಿಂದೆ ಮದುವೆಯಾಗಿದ್ದು ಇತ್ತೀಚೆಗೆ ಪ್ರತಿ ದಿನ ಮದ್ಯಪಾನ ಮಾಡಿ ಫಿರ್ಯಾದಿಯನ್ನು ಹೊಡೆಯುವುದು, ಬೈಯುವುದು ಮಾಡುತ್ತಿದ್ದು, ದಿನಾಂಕ 23-6-2011 ರಂದು ಸಂಜೆ 7-00 ಗಂಟೆಯ ಸಮಯದಲ್ಲಿ ಫಿರ್ಯಾದಿಯೊಂದಿ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಕೈಯಿಂದ ತಲೆಗೆ, ಹಣೆಗೆ ಹಾಗೂ ಶರೀರದ ಭಾಗಕ್ಕೆ ಹೊಡೆದು ನೋವನ್ನುಂಟು ಮಾಡಿದ್ದು, ಪ್ರತಿ ದಿನ ಮಾನಸಿಕ ದೈಹಿಕ ಹಿಂಸೆ ನೀಡುತ್ತಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.


Wednesday, June 22, 2011

ರಸ್ತೆ ಅಪಘಾತ:


ದಿ: 21-6-11 ರಂದು ಬಾಗಮಂಡಲ ನಿವಾಸಿ ಎ.ಎ. ಗಣೇಶ ರವರ ಬಾಪ್ತು ಮಾರುತಿ ಓಮಿನಿ ಕಾರಿನಲ್ಲಿ ಭಾಗಮಂಡಲ ದಿಂದ ಮಡಿಕೇರಿ ಕಡೆಗೆ ಹೋಗುತ್ತಿರುವಾಗ ಎದುಗಡೆಯಿಂದ ಅತಿವೇಗ ಮತ್ತುಅಜಾಗರುಕತೆಯಿಂದ ಬರುತ್ತಿದ್ದ ಕೆಎ10 ಏಪ್‌ 0090 ಕೆಎಸ್ಅರ್‌ಟಿಸಿ ಬಸ್ಸ್‌ ಸದರಿರವರ ಓಮಿನಿ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಓಮಿನಿ ಚಾಲಕನಿಗೆ ಗಾಯವಾಗಿದ್ದು ಅವರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಕೊಟ್ಟ ಪುಕಾರಿನ್ವ ಭಾಗಮಂಡಲ ಠಾಣೆ ರವರು ಪ್ರಕರಣವನ್ನು ದಾಖಲಿಸಿ ಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.


ವಂಚನೆ ,ಕೊಲೆ ಬೆದರಿಕೆ:


ದಿ: 22-6-2011 ರಂದು ಪಿರ್ಯಾದಿ ಆನೇರ ಸಿ ದೇವರಾಜ್‌ ಮನೆಯ ಪಕ್ಕಕ್ಕೆ ರೂಂ ಕಟ್ಟಲು ಆರೋಪಿಯಾದ ವೇಗೆಂದ್ರ ಕಂಟ್ರಾಕ್ಟ್‌ ಕೆಲಸಕ್ಕೆ 32 ಸಾವಿರ ರೂ ಗಳನ್ನು ಕೊಟ್ಟಿದ್ದು ಆರೋಪಿಯು ಹಣವನ್ನು ಪಡೆದು ಕೆಲಸವನ್ನು ಮಾಡದೇ ಹಣವನ್ನು ಕೇಳುವಾಗ ಪೋನ್‌ನಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಅಲ್ಲದೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ಕೊಟ್ಟ ಪುಕಾರಿನ್ವಯ ಭಾಗಮಂಡಲ ಠಾಣೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.


ರಸ್ತೆ ಅಪಘಾತ ವ್ಯಕ್ತಿಯ ದುರ್ಮರಣ:


ದಿ: 22-6-2011 ರಂದು ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಕೆ.ಇ.ಬಿ ಹತ್ತಿರ ಪಿರ್ಯಾದಿ ಕೆ. ಇ.ಉಮ್ಮಾರ್‌ ರವರು ಬೆಳಗಿನ ಜಾವ ಕೆ.ಇ.ಬಿ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ್ಗೆ ಆರೋಪಿ ಯು ಅತಿವೇಗ ಮತ್ತು ಅಜಾರುಕತೆಯಿಂದ ಒಡಿಸಿ ಕೊಂಡು ಬಂದು ಹಿಂಬಧಿಯಿಂದ ಡಿಕ್ಕಿ ಪಡಿಸಿದ್ದಲದೇ ಮುಂದೆ ಹೋಗುತ್ತಿರುವ ಸ್ಕೂಟರ್‌ ಗೂ ಡಿಕ್ಕಿ ಪಡಿಸಿ ಸ್ಕೂಟರ್‌ ಚಾಲಕನಿಗೆ ತೀವ್ರ ಸ್ವರೂಪದ ಗಾಯವಾಗಿದ್ದು ಮಾರ್ಗದ ಮದ್ಯೆ ಮೃತ್ತಪಟ್ಟದ್ದು ಆರೋಪಿ ಕಾರನ್ನು ನಿಲಿಸದೇ ಹೋಗಿರುವುದಾಗಿ ಅಲ್ಲದೇ ನಂ, ಬಣ್ಣವನ್ನು ನೋಡಲು ಸಾದ್ಯವಾಗಿರುವುದಿಲ್ಲ ಎಂದು ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ಸುಂಟಿಕೊಪ್ಪ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

Monday, June 20, 2011

ಮಹಿಳೆಗೆ ಕಿರುಕುಳ:  • ಮಡಿಕೇರಿ ನಗರ ಸರಹದ್ದಿನ ಮಂಗಳದೇವಿ ನಗರದ ವಾಸಿ ಪಿರ್ಯಾದಿ ಪಿ.ಎ.ಮನಿ ರವರವರಿಗೆ ಆರೋಪಿ ಟಿ.ಎಸ್‌. ಹರೀಶ್‌ ಮದುವೆಯಾಗಿದ್ದು ಪಿರ್ಯಾದಿಯವರಾದ ಮನಿರವರೊಂದಿಗೆ ವಿನಾ: ಕಾರಣ ಆರೋಪಿ ಯಾದ ಗಂಡ ಹರೀಶನು ಜಗಳ ಪ್ರಾರಂಬಿಸಿ ಇತರರಿಗೆ ಸಂಬಂಧ ಕಟ್ಟಿಕೊಡುವುದು ಅಲ್ಲದೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುವುದಾಗಿ ಕೊಟ್ಟ ಪುಕಾರಿನ್ವಯ ಮಡಿಕೇರಿ ನಗರ ಠಾಣೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

  • ಮಹಿಳೆಯ ಮೇಲೆ ಹಲ್ಲೆ ,ಜೀವ ಬೆದರಿಕೆ:

  • ಕುಶಾಲನಗರ ಠಾಣಾ ವ್ಯಾಪ್ತಿಯ ಗುಮ್ಮನಕೊಲ್ಲಿಯ ನಿವಾಸಿ ಸರಸ್ಪತಿ ರವರು ದಿ: 19-6-11 ರಂದು ಮನೆಯ ಹಿಂಭಾಗ ದಲ್ಲಿರುವ ವ್ಯಾಜ್ಯವಿರು ಜಾಗದಲ್ಲಿ ಈ ಮೊದಲೇ ಇಟ್ಟಿದ್ದ ಸೌದೆಯನ್ನು ಜೋಡಿಸುತ್ತಿದ್ದಾಗ ಆರೋಪಿಯಾದ ನಿಂಗ ರಾಜು ಅಲ್ಲಿಗೆ ಬಂದು ವಿನಾ: ಕಾರಣ ಜಗಳ ತೆಗೆದು ಕೈಯಿಂದ ಹೊಡೆದು ಕೊಲೆ ಬೆದರಿಕೆ ಹಾಕಿರುವುದಾಗಿ ಕೊಟ್ಟ ಪುಕಾರಿನ್ವ ಕುಶಾಲನಗರಠಾಣೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ

Friday, June 17, 2011


ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ:


ದಿನಾಂಕ 16-6-2011 ರಂದು ಮಡಿಕೇರಿ ನಗರ ಠಾಣಾ ಸರಹದ್ದಿನ ಹಿಲ್‌ರೋಡ್‌ ನಲ್ಲಿ ವಾಸವಿರುವ ಫಿರ್ಯಾದಿ ಶ್ರೀಮತಿ ಜೊಹರ ಹಾಗೂ ಆರೋಪಿ ಎನ್‌.ಎಂ. ಮಜೀದ್‌ ರವರುಗಳು ಒಂದೇ ಮನೆಯ ಎರಡು ಭಾಗದಲ್ಲಿ ವಾಸವಾಗಿದ್ದು ಫಿರ್ಯಾದಿಯವರು ಮನೆಯಲ್ಲಿರುವ ಸಮಯದಲ್ಲಿ ಕ್ಷುಲ್ಲಕ ಕಾರಣಕ್ಕೆ ಆರೋಪಿಯು ಫಿರ್ಯಾದಿಯ ಮೇಲೆ ಕೈಯಿಂದ ಹಾಗೂ ಮರದ ರೀಪರ್‌ನಿಂದ ಹಲ್ಲೆಮಾಡಿ ನೋವನ್ನುಂಟು ಮಾಡಿದ್ದು, ಈ ಬಗ್ಗೆ ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.


ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯ ಆತ್ಮ ಹತ್ಯೆ:


ದಿನಾಂಕ 15-6-2011 ರಂದು ಮಡಿಕೇರಿ ನಗರ ಠಾಣಾ ಸರಹದ್ದಿನ ಹಳೇ ಜೈಲು ವಸತಿಗೃಹದಲ್ಲಿ ಮಲ್ಲಿಗೆಗೌಡ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
Thursday, June 16, 2011

ವ್ಯಕ್ತಿಯ ಮೇಲೆ ಹಲ್ಲೆ:

ದಿ: 15-6-2011 ರಂದು ಪೊನ್ನಂಪೇಟೆ ವ್ಯಾಪ್ತಿಯ ರಾಯಲ್‌ ಗ್ರೌಂಡ್‌ ಬಾರ್‌ ,ತಿತಿಮತಿಯಲ್ಲಿ ಪಿರ್ಯಾದಿ ಕೆ.ಹಂಸ ರವರು ತಿತಿಮತಿಯಲ್ಲಿರುವ ರಾಯಲ್‌ ಗ್ರೌಂಡ್‌ ಬಾರಿಗೆ ಹೋಗಿದ್ದು ಬಾರನ್‌ ಕ್ಯಾಶಿಯರ್‌ಗೂ ಹಣದ ವಿಚಾರವಾಗಿ ಮಾತಿನ ಜಗಳವಾಗಿದ್ದು ಪಿರ್ಯಾದಿಯವರು ಸಣ್ಣ ವಿಚಾರಕ್ಕೆ ಎಕೆ ಜಗಳ ಮಾಡಿಕೊಳ್ಳತ್ತೀರಾ ? ಎಂದು ಕೇಳಿದಕ್ಕೆ ನೀನು ಯಾರು ಕೇಳಲಿಕ್ಕೆ ಎಂದು ಹೇಳಿ ಕಬಿಣ್ಣದ ರಾಡಿನಿಂದ ಹೊಡೆದು ಗಾಯಗೊಳಿಸಿದ ಪರಿಣಾಮ ಸದರಿರವರನ್ನು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿ ಕೊಟ್ಟ ಪ್ರಕರಣವನ್ನು ಪೊನ್ನಂಪೇಟೆ ಠಾಣೆ ದಾಖಲಿಸಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿರುವುದಾಗಿದೆ.


ಜೀವ ಬೆದರಿಕೆ:

ಕುಶಾಲನಗರ ಠಾಣೆ ವ್ಯಾಪ್ತಿ ಅದರ್ಶ ದ್ರಾವಿಡ ಕಾಲೋನಿ ಯ ಪಿರ್ಯಾದಿ ಯಶಸ್ವಿನಿ ರವರು ಮಡಿಕೇರಿಯ ಮಂಗಳದೇವಿ ನಗರ ನಿವಾಸಿ ರವಿಕುಮಾರ್‌ ಎಂಬವರೊಡನೆ ವಿವಾಹವಾಗಿದ್ದು ತಮ್ಮ ತಂದೆಯ ಮನೆಗೆ ಗಂಡನೊಂದಿಗೆ ಕುಶಾಳನಗರಕ್ಕೆ ಬಂದಿದ್ದು ಆರೋಪಿಯಾದ ನೌಷಾದ್‌ , ಎಂಬವನ್ನು ಪಿರ್ಯಾದಿರವರಿಗೆ ದೂರವಾಣಿ ಕರೆ ಮಾಡಿ ನಿನ್ನ ಗಂಡನ್ನು ಬಿಟ್ಟು ನನ್ನೊಡನೆ ಬರಬೇಕು ಇಲ್ಲವಾದರೆ ನಿನ್ನನು ಕೊಲೆ ಮಾಡುವುದಾಗಿ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ಕುಶಾಲನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿರುವುದಾಗಿದೆ.

Tuesday, June 14, 2011


ಮೊಬೈಲ್‌ ಅಂಗಡಿಗೆ ಅಕ್ರಮ ಪ್ರವೇಶ, ಹಲ್ಲೆ, ಕೊಲೆ ಬೆದರಿಕೆ:


ಹಣದ ವಿಚಾರದಲ್ಲಿ ಮೊಬೈಲ್‌ ಅಂಗಡಿಗೆ ನುಗ್ಗಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಮದ್ಯಪೇಟೆಯಿಂದ ವರದಿಯಾಗಿದೆ. ದಿನಾಂಕ 13-6-2011 ರಂದು ಸಮಯ 17-00 ಗಂಟೆಗೆ ಆರೋಪಿಗಳಾದ ಭುವನ್‌, ಜಯಂತ್‌ ಹಾಗೂ ಮತ್ತೊಬ್ಬ ಶನಿವಾರಸಂತೆ ನಗರದ ಮದ್ಯಪೇಟೆಯಲ್ಲಿರುವ ಫಿರ್ಯಾದಿ ಇಮ್ರಾನ್‌ ಖಾನ್‌ರವರ ಮೊಬೈಲ್‌ ಅಂಗಡಿಗೆ ನುಗ್ಗಿ ಹಣದ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಿಂದ ಫಿರ್ಯಾದಿಗೆ ಹೊಡೆದು ನೋವನ್ನುಂಟು ಮಾಡಿ ಈ ವಿಚಾರವಾಗಿ ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.


ವ್ಯಕ್ತಿಯ ಮೇಲೆ ಹಲ್ಲೆ:


ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯ ಮೇಲೆ ಹಲ್ಲೆನಡೆಸಿ ಗಾಯಪಡಿಸಿದ ಬಗ್ಗೆ ಪೊನ್ನಂಪೇಟೆ ಠಾಣಾ ಸರಹದ್ದಿನ ನಲ್ಲೂರು ಗ್ರಾಮದಿಂದ ವರದಿಯಾಗಿದೆ. ದಿನಾಂಕ 13-6-2011 ರಂದು ಫಿರ್ಯಾದಿ ಹೆಚ್‌.ಬಿ. ರವಿ ಎಂಬವರು ತಮ್ಮ ಮನೆಯ ಜಗುಲಿಯಲ್ಲಿ ಕುಳಿತುಕೊಂಡಿರುವ ಸಮಯದಲ್ಲಿ ಆರೋಪಿಗಳಾದ ವಿಜಯ, ಸುನೀತ, ಪಾರ್ವತಿ, ಕಲ್ಯಾಣಿ ಹಾಗೂ ರತ್ನ ಎಂಬವರು ಅಲ್ಲಿಗೆ ಬಂದು ಕ್ಷುಲ್ಲಕ ಕಾರಣಕ್ಕಾಗಿ ಜಗಳ ತೆಗೆದು ಫಿರ್ಯಾದಿಯ ಮೇಲೆ ಕತ್ತಿಯಿಂದ ಹಾಗೂ ಕೈಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.


ಮಹಿಳೆಗೆ ಮಾನಸಿಕ ದೈಹಿಕ ಹಿಂಸೆ ಪ್ರಕರಣ ದಾಖಲು:


ಫಿರ್ಯಾದಿ ಹೆಚ್‌.ಆರ್‌. ವಾರಿಜ ರವರು 8 ವರ್ಷದ ಹಿಂದೆ ರವೀಂದ್ರರವರನ್ನು ಮದುವೆಯಾಗಿದ್ದು, ಆಕೆಯ ಗಂಡ, ಪೂವಮ್ಮ ಹಾಗೂ ಮಂಜಪ್ಪ ರವರುಗಳು ಸೇರಿ ಫಿರ್ಯದಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, ಫಿರ್ಯಾದಿಯ ಗಂಡ ರವೀಂದ್ರ ರವರು ದಿನಾಂಕ 13-5-2011 ರಂದು ಮನೆಗೆ ಬಂದು ಜಗಳವಾಡಿ ಕೈಯಿಂದ ಹೊಡೆದು ಫಿರ್ಯಾದಿ ಹಾಗು ಆಕೆಯ ಮಗುವನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾರಿದ್ದು, ನಾಪೋಕ್ಲು ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.


ಸರಕಾರಿ ವಸತಿ ಗೃಹದ ಬಾಗಿಲನ್ನು ಮುರಿದು 12000 ರೂ ಕಳವು:


ದಿನಾಂಕ 14-4-2011 ರಂದು ಮಡಿಕೇರಿ ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಯ ವಸತಿ ಗೃಹದ ಬೀಗವನ್ನು ಯಾರೋ ಕಳ್ಳರು ಮುರಿದು ಒಳಗೆ ಪ್ರವೇಶಿಸಿ ಮನೆಯ ಮಲಗುವ ಕೋಣೆಯ ಬೀರುವಿನ ಬಾಗಿಲನ್ನು ತೆರೆದು ಅದರಲ್ಲಿಟ್ಟಿದ್ದ 12000 ರೂ.ಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಫಿರ್ಯಾದಿ ಕೆ. ಅಮೀನ ಗಂಡ ಪಿ.ಯು. ಅಹಮ್ಮದ್‌ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.


ಅಪರಿಚಿತ ವ್ಯಕ್ತಿಗಳಿಂದ ಆಟೋರಿಕ್ಷಾ ತಡೆದು ವ್ಯಕ್ತಿಯ ಮೇಲೆ ಹಲ್ಲೆ:


ದಿನಾಂಕ 13-6-2011 ರಂದು ಮಡಿಕೇರಿ ನಗರದ ಮಂಗಳೂರು ರಸ್ತೆಯಲ್ಲಿರುವ ಕಾವೇರಿ ಹೋಸ್ಟೇ ಬಳಿ ಫಿರ್ಯಾದಿಯವರು ಆಟೋ ರಿಕ್ಷಾವನ್ನು ಓಡಿಸಿಕೊಂಡು ಹೋಗುತ್ತಿದ್ದಾದ ಅಲ್ಲಿದ್ದ 8 ರಿಂದ 10 ಜನ ಅಪರಿಚಿತ ವ್ಯಕ್ತಿಗಳು ಫಿರ್ಯಾದಿಯ ಆಟೋ ರಿಕ್ಷಾವನ್ನು ತಡೆದು ಅವರ ಕೈಯಲ್ಲಿದ್ದ ಬಿಯರ್‌ ಬಾಟಲ್‌ಗಳನ್ನು ಒಡೆದು ಫಿರ್ಯಾದಿಯ ಎದೆಯ ಭಾಗಕ್ಕೆ ಹಾಗೂ ಮುಖಕ್ಕೆ ತಿವಿದು ಗಾಯಪಡಿಸಿ, ಕೈಯಿಂದ ಹಲ್ಲೆ ಮಾಡಿ, ಕಾಲಿನಿಂದ ಒದ್ದು ನೋವನ್ನುಂಟು ಮಾಡಿದ್ದು, ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

Thursday, June 9, 2011

14 ವರ್ಷದ ಹುಡುಗ ಕಾಣೆ:

ದಿನಾಂಕ 6-6-2011 ರಂದು ಸುಂಟಿಕೊಪ್ಪ ಠಾಣಾ ಸರಹದ್ದಿನ ಮದುರಮ್ಮ ಬಡಾವಣೆಯ ಶ್ರೀಮತಿ ವಳ್ಳಿರವರ ಮಗ ಎಂ. ಕಿರಣ್‌ ಎಂಬಾತನು ಕುಶಾಲನಗರಕ್ಕೆ ಹೋಗಿ ಶಾಲೆಯಿಂದ ಮಾರ್ಕ್ ಕಾರ್ಡ್ ತೆಗೆದುಕೊಂಡು ಬರುವುದಾಗಿ ತಿಳಿಸಿ ಮನೆಯಿಂದ 500 ರೂ.ಗಳನ್ನು ಪಡೆದುಕೊಂಡು ಹೋದವನು ಮನೆಗೆ ವಾಪಾಸ್ಸು ಬಂದಿರುವುದಿಲ್ಲ. ಈ ಬಗ್ಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ ದಾಖಲು:

ದಿನಾಂಕ 12-1-2011 ರಂದು ಫಿರ್ಯಾದಿ ಶ್ರೀಮತಿ ಮಾಲಿಂಗಮ್ಮ ಎಂಬವರ ಪತಿ ಹನುಮಂತಪ್ಪ ಶಬರಿಮಲೆ ಯಾತ್ರೆಗೆ ಹೋದವರು ದಿನಾಂಕ 14-1-2011 ರಂದು ತಲಚೇರಿಗೆ ಬಂದಿದ್ದು, ಅಲ್ಲಿಂದ ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದು, ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.


Friday, June 3, 2011

ವಾಹನ ಅಪಘಾತ:


ದಿ: 3-6-2011 ರಂದು ಮಡಿಕೇರಿ ನಗರ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆ ಹತ್ತಿರ ಪಿರ್ಯಾದಿದಾರರಾದ ಆರ್‌.ಸುದರ್ಶನ್‌ ತನ್ನ ಬಾಪ್ತು ಮೋಟಾರ್‌ ಬೈಕ್‌ ಜಿ,ಟಿ ವೃತ್ತದಿಂದ ಆರ್‌ಟಿಓ ಕಛೇರಿಗೆ ಕಡೆಗೆ ಹೋಗುತ್ತಿದ್ದಾಗ ಆರೋಪಿಯಾದ ಬಿ.ಕೆ.ಅರುಣ ಕಾರು ಸಂ : ಕೆಎ12ಎನ್‌8354 ರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರಿಗೆ ಗಾಯವಾದ ಕಾರಣ ಕೊಟ್ಟ ಪುಕಾರಿನ್ವಯ ಮಡಿಕೇರಿ ಟ್ರಾಪಿಕ್‌ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ಕೊಂಡಿರುವುದಾಗಿದೆ.


ಆತ್ಮಹತ್ಯೆ ಪ್ರಕರಣ:


ದಿ: 2-6-2011 ರಂದು ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ನಿಟ್ಟೂರು ಗ್ರಾಮ ನಿವಾಸಿ ಪಂಜರಿ ಎರವರ ಚಾಮಿ ರವರ ಮಗಳು ಶಾರದ ಅವರಳ ಗಂಡ ಚುಬ್ರ ಬಾಳೆಲೆಗೆ ಕರೆದು ಕೊಂಡು ಹೋಗಲಿಲ್ಲ ಎಂದು ಬೇಸರಗೊಂಡು ಯಾವುದೋ ವಿಷ ಸೇವಿಸಿ ದ್ದು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತ್ತಪಟ್ಟಿರುವುದಾಗಿ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ಪೊನ್ನಂಪೇಟೆ ಠಾಣೆ ದಾಖಲಿಸಿಕೊಂಡಿರುವುದಾಗಿದೆ.


ಕಳ್ಳತನ ಪ್ರಕರಣ:


ದಿ: 2-5-11 ಕುಶಾಲನಗರ ಠಾಣಾ ವ್ಯಾಪ್ತಿ ಕೆ.ಎಸ್‌.ಆರ್‌.ಟಿ. ಎಂ.ಎ ರಜಾಕ್‌ ಅಹಮ್ಮದ್‌ ತನ್ನ ಹೀರೋ ಹೊಂಡಾ ಬೈಕ್‌ ಸಂ: ಕೆ.ಎ 09 ವಿ 5822 ರನ್ನು ಕುಶಾಲನಗರ ಕೆಎಸ್‌ಆರ್‌ಟಿಸಿ ಬಸ್‌ ಸ್ಯಾಂಡಿನ ಹತ್ತಿರ ನಿಲ್ಲಿ ಎಸ್‌.ಬಿ.ಎಂ.ಬ್ಯಾಂಕ್‌ ಹತ್ತಿರ ಹೋಗಿ ವಾಪಾಸ್ಸು ಬಂದು ನೋಡುವಾಗ್ಗೆ ಯಾರೋ ಬೈಕ್‌ನ್ನು ಕಳುವು ಮಾಡಿಕೊಂಡು ಹೋಗಿರುವುದಾಗಿ ಕೊಟ್ಟ ಪುಕಾರಿನ್ವ ಕುಶಾಲನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

Thursday, June 2, 2011

ಕ್ಷುಲ್ಲಕ ಕಾರಣಕ್ಕೆ ಹಲ್ಲೆ, ಕೊಲೆ ಬೆದರಿಕೆ  • ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಶನಿವಾರಸಂತೆ ಠಾಣಾ ವ್ಯಾಪ್ತಿಯ ನಾಗಾವರ ಗ್ರಾಮದಲ್ಲಿ ನಡೆದಿದೆ. ದಿನಾಂಕ 01/06/2011ರಂದು ನಾಗಾವರ ಗ್ರಾಮದ ಭೋಜರಾಜ ಎಂಬವರು ತನ್ನ ಅಣ್ಣ ರವಿಯೊಂದಿಗೆ ಈರಯ್ಯ ಎಂಬವರ ಹೊಲದಲ್ಲಿ ದನಗಳನ್ನು ಮೇಯಿಸುತ್ತಿರುವಾಗ ಅಲ್ಲಿಗೆ ಬಂದ ಆರೋಪಿ ಬಡುಬನಹಳ್ಳಿ ಗ್ರಾಮದ ಕಾಂತರಾಜು ಎಂಬಾತನು ಭೋಜರಾಜುರವರೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಅಶ್ಲೀಲ ಪದಗಳಿಂದ ನಿಂದಿಸಿ ಕೈಯಿಂದ ಭೋಜರಾಜುರವರ ಮುಖಕ್ಕೆ ಹೊಡೆದ ಪರಿಣಾಮ ಅವರ ಮುಂದಿನ ಎರಡು ಹಲ್ಲುಗಳು ಮುರಿದಿದ್ದು, ಕಾಂತರಾಜುರವರು ಭೋಜರಾಜುರವರಿಗೆ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಿಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, June 1, 2011

ಪಾದಚಾರಿಗೆ ಬೈಕ್ ಡಿಕ್ಕಿ, ಬೈಕ್ ಸವಾರ ಪರಾರಿ  • ಪಾದಚಾರಿಯೊಬ್ಬರಿಗೆ ಬೈಕ್ ಡಿಕ್ಕಿಪಡಿಸಿ ಬೈಕ್ ಸವಾರ ಪರಾರಿಯಾಗಿರುವ ಘಟನೆ ವಿರಾಜಪೇಟೆ ನಗರ ಠಾಣಾ ವ್ಯಾಪ್ತಿಯ ಪೆರುಂಬಾಡಿಯ ಬಳಿ ನಡೆದಿದೆ. ದಿನಾಂಕ 29/05/2011ರಂದು ಸಂಜೆ ಆರ್ಜಿ ಗ್ರಾಮದ ನಿವಾಸಿ ಅಬ್ರಹಾಂ ಸೆಬಾಸ್ಟಿನ್ ಎಂಬವರು ರಸ್ತೆಯ ಬದಿ ನಡೆದುಕೊಂಡು ಹೋಗುತ್ತಿರುವಾಗ ಯಾರೋ ಒಬ್ಬ ಮೋಟಾರು ಸೈಕಲ್ ಸವಾರ ತನ್ನ ಮೋಟಾರು ಸೈಕಲನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಅಬ್ರಹಾಂರವರಿಗೆ ಹಿಂದಿನಿಂದ ಡಿಕ್ಕಿಪಡಿಸಿ ಬೈಕನ್ನು ನಿಲ್ಲಿಸದೆ ಹೋಗಿದ್ದು, ಅಬ್ರಹಾಂರವರಿಗೆ ಗಾಯಗಳಾಗಿರುವ ಬಗ್ಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ
  • ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಿಳುಗುಂದ ಗ್ರಾಮದಲ್ಲಿ ನಡೆದಿದೆ. ದಿನಾಂಕ 31/05/2011ರಂದು ರಾತ್ರಿ ಬಿಳುಗುಂದ ಗ್ರಾಮದ ಪಣಿಎರವರ ಚಾಮಿ ಎಂಬವರು ಮದ್ಯಪಾನ ಮಾಡಿಕೊಂಡು ಮನೆಗೆ ಬಂದಿದ್ದು, ತನ್ನ ಪತ್ನಿ ಕಾವೇರಿ ಹಾಗೂ ಅಳಿಯನ ಬಗ್ಗೆ ಕೇವಲವಾಗಿ ಮಾತನಾಡಿದ್ದು, ಈ ಬಗ್ಗೆ ತಮ್ಮ ಸಾಹುಕಾರರಿಗೆ ಪುಕಾರು ನೀಡುವುದಾಗಿ ಮಕ್ಕಳು ಹೇಳಿದ್ದು, ನಂತರ ರಾತ್ರಿ ಚಾಮಿಯು ಮನೆಯಿಂದ ಹೊರಗೆ ಹೋಗಿ ಮನೆಯ ಬಳಿ ಇದ್ದ ಮರವೊಂದಕ್ಕೆ ನೈಲಾನ್ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಿಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾರು - ಬೈಕ್ ಡಿಕ್ಕಿ ಇಬ್ಬರಿಗೆ ಗಾಯ
  • ಕಾರು ಮತ್ತು ಬೈಕ್ ಡಿಕ್ಕಿಯಾಗಿ ಬೈಕ್ ಸವಾರರಿಗೆ ಗಾಯಗಳಾದ ಘಟನೆ ಮಡಿಕೇರಿ ಸಂಚಾರಿ ಠಾಣಾ ವ್ಯಾಪ್ತಿಯ ಮಡಿಕೇರಿ ನಗರ ಎಫ್‌ಎಂಸಿ ಕಾಲೇಜು ಬಳಿ ನಡೆದಿದೆ. ದಿನಾಂಕ 31/05/2011ರಂದು ಸಂಜೆ ಚೇರಂಬಾಣೆಯ ಕೊಳಗದಾಳು ನಿವಾಸಿ ಎ.ಸಿ.ಭೀಮಯ್ಯ ಎಂಬವರು ತಮ್ಮ ಪತ್ನಿಯೊಂದಿಗೆ ತಮ್ಮ ಮೋಟಾರು ಸೈಕಲ್ ಸಂ.ಕೆಎ-12-ಹೆಚ್-3527ರಲ್ಲಿ ಗಾಳಿಬೀಡು ಕಡೆಗೆ ಹೋಗುತ್ತಿರುವಾಗ ಎಫ್‌ಎಂಸಿ ಕಾಲೇಜಿನ ಬಳಿ ತಿರುವು ರಸ್ತೆಯಲ್ಲಿ ಆರೋಪಿ ವಿರಾಜಪೇಟೆಯ ಜೋಕಿಂ ಎಂಬವರು ತಮ್ಮ ಕಾರು ಸಂ.ಕೆಎ-05-ಪಿ-6450ನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಭೀಮಯ್ಯನವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಭೀಮಯ್ಯ ಹಾಗೂ ಅವರ ಪತ್ನಿಗೆ ಗಾಯಗಳಾಗಿರುವ ಬಗ್ಗೆ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಪತಿಯಿಂದ ಪತ್ನಿಯ ಮೇಲೆ ಹಲ್ಲೆ
  • ಕ್ಷುಲ್ಲಕ ಕಾರಣಕ್ಕೆ ಪತಿಯೇ ಪತ್ನಿಯ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಧನುಗಾಲ ಗ್ರಾಮದಲ್ಲಿ ನಡೆದಿದೆ. ದಿನಾಂಕ 31/05/2011ರಂದು ಸಂಜೆ ಧನುಗಾಲ ಗ್ರಾಮದ ಮಾರಿಯಮ್ಮ ಕಾಲೋನಿಯ ನಿವಾಸಿ ಗಣೇಶ ಎಂಬವರು ಕ್ಷುಲ್ಲಕ ಕಾರಣಕ್ಕೆ ತನ್ನ ಪತ್ನಿ ಕಾವೇರಿ ಎಂಬಾಕೆಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ತಡೆಯಲು ಬಂದ ಕಾವೇರಿಯ ತಂದೆ ಹಾಗೂ ಅಣ್ಣನಿಗೂ ಸಹಾ ಕತ್ತಿಯಿಂದ ಕಡಿದು ಗಾಯಗೊಳಿಸಿದ ಬಗ್ಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.