Sunday, July 31, 2011

ಜೀವನದಲ್ಲಿ ಜುಗುಪ್ಸೆ, ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ
 • ಜೀವನದಲ್ಲಿ ಜುಗುಪಸ್ಎಗೊಂಡ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರಸಂತೆ ಠಾಣಾ ವ್ಯಾಪ್ತಿಯ ದೊಡ್ಡಕೊಡ್ಲಿ ಗ್ರಾಮದಲ್ಲಿ ಇಂದು ವರದಿಯಾಗಿದೆ. ದಿನಾಂಕ 24/07/2011ರಂದು ದೊಡ್ಡಕೊಡ್ಲಿ ಗ್ರಾಮದ ನಗೀನಾ ಎಂಬವರ ಪತಿ 36 ವರ್ಷ ಪ್ರಾಯದ ಅಕ್ಬರ್ ಎಂಬವರು ಜೀವನದಲ್ಲಿ ಜುಗುಪ್ಸೆಗೊಂಡು ಮನೆಯಲ್ಲಿ ಯಾರೂ ಇಲ್ಲದ ಸಮಯ ವಿಷ ಸೇವಿಸಿ ಆತ್ಹತ್ಯೆಗೆ ಪ್ರಯತ್ನಿಸಿದ್ದು, ಆಸ್ಪತ್ರೆಗೆ ದಾಖಲಾಗಿದ್ದವರು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 30/07/2011ರಂದು ಮೃತಪಟ್ಟಿರುವ ಬಗ್ಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ, ಕೊಲೆ ಬೆದರಿಕೆ
 • ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಕುಶಾಲನಗರ ಠಾಣಾ ವ್ಯಾಪ್ತಿಯ ಕೂಡು ಮಂಗಳೂರು ಬಳಿ ನಡೆದಿದೆ. ದಿನಾಂಕ 30/01/2011ರ ರಾತ್ರಿ ವೇಳೆ ಕುಶಾಲನಗರ ಸಮೀಪದ ಮಲ್ಲೇನಹಳ್ಳಿ ಗ್ರಾಮದ ನಾಗರಾಜರಾವ್ ಎಂಬವರು ತಮ್ಮ ಮೋಟಾರ್ ಬೈಕಿನಲ್ಲಿ ಗುಮ್ಮನಕೊಲ್ಲಿಯಿಂದ ತಮ್ಮ ಊರಿಗೆ ಹೋಗುತ್ತಿರುವಾಗ ಕೂಡುಮಂಗಳೂರು ಸರ್ಕಲ್ ಬಳಿ ಆರೋಪಿ ಕೂಡುಮಂಗಳೂರಿನ ಕಾಂತರಾಜ್ ಎಂಬವರು ಲಾರಿಯಲ್ಲಿ ಬಂದು ಬೈಕನ್ನು ಅಡ್ಡಗಟ್ಟಿ ಲಾರಿಗೆ ದಾರಿ ಕೊಡುವ ವಿಷಯಲ್ಲಿ ನಾಗರಾಜರಾವ್‌ರವರೊಂದಿಗೆ ಜಗಳವಾಡಿ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಫಘಾತ, ಸ್ಕೂಟರ್ ಸವಾರನಿಗೆ ಗಾಯ
 • ರಸ್ತೆ ಅಫಘಾತವೊಂದರಲ್ಲಿ ಸ್ಕೂಟರ್ ಸವಾರನೋರ್ವ ಗಾಯಗೊಂಡಿರುವ ಘಟನೆ ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಚೆನ್ನಂಗೊಲ್ಲಿ ಗ್ರಾಮದ ಬಳಿ ನಡೆದಿದೆ. ದಿನಾಂಕ 30/07/2011ರಂದು ಸಂಜೆ ಅರ್ವತೊಕ್ಲು ಗ್ರಾಮದ ಮೀನ ಎಂಬವರು ತಮ್ಮ ಪತಿ ಮಣಿ ಎಂಬವರೊಡನೆ ತಮ್ಮ ಸ್ಕೂಟರಿನಲ್ಲಿ ಮುದ್ದನಹಳ್ಳಿಯಲ್ಲಿರುವ ತಮ್ಮ ನೆಂಟರ ಮನೆಗೆ ಹೋಗಿ ವಾಪಾಸು ಬರುವಾಗ ಚೆನ್ನಂಗೊಲ್ಲಿಯ ಬಳಿ ಕೆಎ-45-2842ರ ಇಂಡಿಕಾ ಕಾರು ಚಾಲಕನು ತನ್ನ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಮೀನರವರ ಪತಿ ಮಣಿ ಚಾಲಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟರ್ ಮಗುಚಿಬಿದ್ದು ಮಣಿಯವರಿಗೆ ಗಾಯಗಳಾಗಿದ್ದು, ಕಾರು ಚಾಲಕ ಕಾರನ್ನು ನಿಲ್ಲಿಸದೆ ಹೋಗಿರುವ ಬಗ್ಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, July 28, 2011

ಕಳ್ಳತನ ಪ್ರಕರಣ:

ದಿ: 27-9-2011 ರಂದು ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಗರ್ವಾಲೆ ಗ್ರಾಮದ ಶ್ರೀಮತಿ ರಾಣಿ ಎಂಬವರು ಮನೆಗೆ ಬೀಗ ಹಾಕಿಕೊಂಡು ಹೊಸಮನೆ ಕಟ್ಟುತ್ತಿರುವ ಜಾಗಕ್ಕೆ ಹೋಗಿ ವಾಪಾಸ್ಸು ಮನೆಗೆ ಬಂದಾಗ ಮನೆಯ ಬಾಗಿಲು ಬೀಗವನ್ನು ಯಾರೋ ಕಳ್ಳರು ಬೀಗಮುರಿದು ಮನೆಯ ಬೆಡ್‌ರೂಂ ನ ಗಾರ್ಡೇಜ್‌ ಬಿರುವನ್ನು ತೆರೆದು ಅದರಲ್ಲಿ ಇಟ್ಟಿದ ಚಿನ್ನಭರಣ , ಬೆಳ್ಳಿಯ ನಾಣ್ಯಗಳನ್ನು ಅಂದಾಜು ಬೆಲೆ 1 ಲಕ್ಷವನ್ನು ಕಳುವು ಮಾಡಿಕೊಂಡು ಹೋಗಿರುವುದಾಗಿ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.


ಪೊನ್ನಂಪೇಟೆ ಠಾಣಾ ಸರಹದ್ದಿನ ಸುಳುಗೋಡು ಗ್ರಾಮ ಕ್ಕೆ ಹೋಗುವ ದಾರಿಗಾಗಿ ಗೇಟಿನ ಪಕ್ಕದಲ್ಲಿ ಒಂದು ತೇಗದ ಮರವಿದ್ದು ಪಿರ್ಯಾದಿ ಕಾವೇರಪ್ಪ ರವರು ಗೋಣಿಕೊಪ್ಪದಿಂದ ರಾತ್ರಿ 10:00 ಗಂಟೆಗೆ ಮರವು ನೆಟ್ಟಗೆ ಇದ್ದು ದಿ: 27-7-11 ರಂದು ಕಾವೇರಪ್ಪ ರವರು ವ್ಯಾಯಮ ಮಾಡುವುದಾಗಿನ ಮನೆಯಿಂದು ಹೊರಟು ಸಮಯ 6:30 ಗಂಟೆಗೆ ಗೇಟಿನ ಬಳಿ ಬಂದಾಗ ತೇಗದ ಮರವನ್ನು ಯಾರೋ ದುಸ್ಕರ್ಮಿಗಳು ಕಡಿದು ಬಿಳಿಸಿ ತುಂಡು ಮಾಡಿ ದಿಮ್ಮಿಗಳನ್ನು ಯಾವುದೋ ವಾಹನದಲ್ಲಿ ಕಳವು ಮಾಡಿಕೊಂಡು ಹೋಗಿರುವುದಾಗಿ ಇದರ ಬೆಲೆ ಸುಮಾರು 40 ರಿಂದ 50 ಸಾವಿರಗಳು ಆಗಬಹುದು ಎಂದು ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

ರಸ್ತೆ ಅಪಘಾತ :

ಕುಶಾಲನಗರ ಪೊಲೀಸ್ ಠಾಣಾ ಸರಹದ್ದಿನ ಆರ್‌.ಎಂಸಿ ಮುಂಬಾಗ ಬಿ.ಎಂ. ರಸ್ತೆಯಲ್ಲಿ ಪಿರ್ಯಾದಿ ಹರಿಂದ್ರ ತಾಕೂರು ತಮ್ಮ ಗಾಡಿಯಲ್ಲಿ ಮಗಳನ್ನು ಕೂರಿಸಿಕೊಂಡು ಹೋಗುತ್ತಿರುವಾಗ್ಗೆ ಕುಶಾಲನಗರ ಟೌನ್‌ ಕಡೆಯಿಂದ ಬಂದ ಮಾರುತಿ ವ್ಯಾನ್‌ ನ ಚಾಲಕ ಆರೋಪಿ ಮೊಹಿದ್ದೀನ್‌ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಮೋಟಾರ್‌ ಬೈಕಿ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿ ಹರಿಂದ್ರ ತಾಕೂರು ಬಲಗೈ ಮತ್ತು ಶರೀರದ ಇತೆ ಭಾಗಗಳಿಗೆ ಗಾಯವಾದ ಪರಿಣಾಮ ಕೊಟ್ಟ ಪುಕಾರಿನ್ವಯ ಕುಶಾಲನಗರ ಠಾಣೆ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿರುವುದಾಗಿದೆ.


ಮಹಿಳೆ ಕಾಣೆ:

ಕುಶಾಲನಗರ ಠಾಣಾ ಸರಹದ್ದಿನ ಹೊಸಪಟ್ಟಣದ ನಿವಾಸಿ ಶಿವಕುಮಾರ್‌ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಮನೆಯಲ್ಲಿ ಭಾರತಿಯವರು ಮನೆಯಲ್ಲಿ ಇರಲ್ಲಿಲ್ಲ ನಂತರ ಅಕ್ಕಪಕ್ಕ ದಲ್ಲಿ ಹಾಗೂ ನೆಂಟರಿಷ್ಟರಲ್ಲಿ ಹುಡುಕಾಡಿ ಎಲ್ಲಿಯೂ ಸಿಗದೇ ಇರುವ ಕಾರಣ ಕೊಟ್ಟ ಪುಕಾರಿನ್ವ ಕುಶಾಲನಗರ ಠಾಣೆ ಪ್ರಕಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿರುವುದಾಗಿದೆ.


Monday, July 25, 2011

ಕಳ್ಳತನ ಪ್ರಕರಣ
ದಿ: 23-7-2011ರಂದು ಕುಶಾಲನಗರ ಠಾಣಾ ವ್ಯಾಪ್ತಿಯ ಅದಿಶಕಂರಾಚಾರ್ಯ ಬಡಾವಣೆ ಮುರಳಿಧರ್‌ರವರು ಅವರ ಹೆಂಡತಿ ಸ್ನೇಹಿತ ರ ಜೊತೆ ಮಹಾರಾಷ್ಟ್ರ ಪ್ರವಾಸ ಹೋಗುವಾಗ ಮನೆಯಲ್ಲಿ ತನ್ನ ತಾಯಿ ಮತ್ತು ಅತ್ತೆ ಶಾಂತ ಲಕ್ಷ್ಮಿರವರ ಮನೆಗೆ ಬಂದಿದ್ದು ಅವರು ಕೊಳ್ಳೇಗಾಲಕ್ಕೆ ಹೋಗುವಾಗ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು ನಾಗೇಶರವರ ಅತ್ತೆ ಮತ್ತು ಅತ್ತಿಗೆ ವಾಪಸ್ಸು ನಾಗೇಶರವರ
ಮನೆಗೆ ಬಂದು ಮನೆಯ ಬೀಗ ತೆಗೆಯಲು ಆಗದೇ ಇದ್ದು ಈ ವಿಚಾರವನ್ನು ಪಿರ್ಯಾದಿಯವರಿಗೆ ಪೋನ್‌ ಮಾಡಿತಿಳೀಸಿದಾಗ ಪಿರ್ಯಾದಿ ತಮ್ಮನಾದ ಮುರಳೀಧರ್‌ ಮನೆಗೆ ಬಂದು ಪರಿಶೀಲಿಸಲಾಗಿ ಮನೆಯ ಮುಂಬಾಗಿಲಿಗೆ ಒಳಗಡೆಯಿಂದ ಬೋಲ್ಟ್‌ ಹಾಕಲಾಗಿದ್ದು ಮನೆಯ ಒಳಗಡೆ ಹೋಗಿ ನೋಡಲಾಗಿ ಯಾರೋ ಕಳ್ಳರು ಮನೆಯ ಮುಂಬಾಗಿಲನ್ನು ಯಾವುದೋ ಆಯುಧ ದಿಂದ ಮೀಟಿ ಒಳಗೆ ನುಗ್ಗಿ ಮನೆಯಲ್ಲಿ ಕಳವು ಮಾಡಿದ್ದು ಮನೆಯಲ್ಲಿ ಇದ್ದ ಚಿನ್ನಾಭರಣ ,ಬೆಳ್ಳಿಯ ವಸ್ತುಗಳು ನಾಲ್ಕು ವಾಚು ಮತ್ತು ನಗದು ಹಣ ರೂ 25.000 ಒಟ್ಟು ರೂ 26,80,900 /- ಗಳನ್ನು ಕಳ್ಳವು ಮಾಡಿಕೊಂಡು ಹೋಗಿರುವುದಾಗಿ ಕೊಟ್ಟ ಪುಕಾರಿನ್ವಯ ಕುಶಾಲನಗರ ಠಾಣೆ ಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಕೆಯನ್ನು ಕೈಗೊಂಡಿರುತ್ತಾರೆ.

2) ಕುಶಾಲನಗರ ಠಾಣಾ ವ್ಯಾಪ್ತಿಯ ಅದಿ ಶಂಕರಾಚಾರ್ಯ ಬಡಾವಣೆಯ ನಿವಾಸಿ ಪಿರ್ಯಾದಿ ಕಣ್ಣನ್‌ರವರ ದಿ: 23/7/11 ರಂದು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು ಸದರಿರವರ ಮಗ 24/7/11 ರಂದು ಮನೆಯ ಬೀಗ ನೋಡಲಾಗಿ ಯಾರೋ ಕಳ್ಳರು ಮನೆಯ ಬೀಗವನ್ನು ಮುರಿದು ಒಳಗೆ ಇದ್ದ ಅಲ್ಮೆರಾ ವನ್ನು ಒಡೆದು ಬೆಳ್ಳಿಯ ಆಭರಣಗಳನ್ನು ಹಾಗೂ ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಕೊಟ್ಟ ಪುಕಾರಿನ್ವ ಕುಶಾಲನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿರುವುದಾಗಿದೆ.

ಆಸ್ವಾಭಾವಿಕ ಮರಣ :
ದಿ: 23/7/2011 ರಂದು ಪೊನ್ನಂಪೇಟೆ ಠಾಣೆ ಸರಹದ್ದಿನ ನಲ್ಲೂರು ಗ್ರಾಮದ ಮಣಿ ಎಂಬವನ್ನು ಸಂಜೆಯಾದರು ಮನೆಗೆ ಬಂದಿರುವುದಿಲ್ಲ ದಿ: 27/7/11 ರಂದು ಬೆಳಿಗ್ಗೆ ಚೋಮ ಎಂಬ ಗದ್ದೆ ಪಕ್ಕ ಕಾಲುವೆ ನೀರಿನಲ್ಲಿ ಮಣಿಯ ಶವ ತೇಲುತ್ತಿದೆ ಎಂದು ತಿಳಿಸಿದ ಪಿರ್ಯಾದಿ ಮತ್ತು ಆಶೋಕರವರು ಹೋಗಿ ನೋಡಿದಾಗ ಮಣಿಯ ಶವ ನೀರಿನಲ್ಲಿ ತೇಲುತ್ತಿತ್ತು. ಆತನ ರಾತ್ರ ಬರುವಾಗ ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದು ಸತ್ತಿರುವುದಾಗಿದೆ ಎಂದು ಕೊಟ್ಟ ಪುಕಾರಿನ್ವಯ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

Saturday, July 23, 2011

ಹೆಂಗಸು ಕಾಣೆ: ದಿ: 22/7/2011 ರಂದು ಪೊನ್ನಂಪೇಟೆ ಠಾಣಾ ಮರುರೂ ಗ್ರಾಮದ ನಿವಾಸಿ ಲವ ರವರ ಹೆಂಡತಿ ಮಕ್ಕಳನ್ನು ಶಾಲೆಗೆ ಬಿಟ್ಟು ಬರುತ್ತೆನೆಂದು ಹೇಳಿಹೋದವಳು ವಾಪಾಸ್ಸು ಮನೆಗೆ ಬಂದಿರುವುದಿಲ್ಲ ಅಕ್ಕಪಕ್ಕ ಸ್ನೇಹಿತರ ಮನೆ ಮತ್ತು ನೆಂಟರಿಷ್ಟರ ಮನೆ ಹುಡುಕಾಡಿದರು ಎಲ್ಲಿಯು ಇರುವುದಿಲ್ಲ ಎಂದು ಕೊಟ್ಟ ಪುಕಾರಿನ್ವಯ ಪೊನ್ನಂಪೇಟೆ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

Friday, July 22, 2011


ರಸ್ತೆ ಅಪಘಾತ ವ್ಯಕ್ತಿಗೆ ಗಾಯ:


ದಿನಾಂಕ 20-7-2011 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕರಡ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿಯಲ್ಲಿ ಫಿರ್ಯಾದಿ ಶ್ರೀಮತಿ ಪೂವಪ್ಪರವರ 6 ವರ್ಷ ಪ್ರಾಯದ ಮಗಳು ರಸ್ತೆ ದಾಟುತ್ತಿರುವ ಸಮಯದಲ್ಲಿ ಆರೋಪಿ ಪ್ರವೀಣ ತನ್ನ ಬಾಪ್ತು ಸ್ಕೂಟಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ ಡಿಕ್ಕಿ ಪಡಿಸಿದ ಪರಿಣಾಮ ಗಾಯಗಳಾಗಿದ್ದು, ವಿರಾಜಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.


ಆತ್ಮಹತ್ಯೆ ಪ್ರಕರಣ:


ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಣಿವೆ ಗ್ರಾಮದಲ್ಲಿ ವಾಸಾಗಿರುವ ಶ್ರೀಮತಿ ಕಮಲರವರ ಮಗ ಕವನ್‌ ಎಂಬಾತ ಜೀವನದಲ್ಲಿ ಜಿಗುಪ್ಸೆಗೊಂಡು ಕಾವೇರಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.Tuesday, July 19, 2011

ರಸ್ತೆ ಅಪಘಾತ

ದಿ: 18.07.2011 ರಂದು ಕುಶಾಲನಗರ ಪೊಲೀಸ್‌ ಠಾಣಾ ಸರಹದ್ದಿನ ಕೂಡಿಗೆ ಡೈರಿ ಹತ್ತಿರ ರವಿಯವರು ನಿಂತುಕೊಂಡಿರುವಾಗ್ಗೆ ಕೆ.ಎ 12 ಎನ್‌ 8450 ಮಾರುತಿ ವ್ಯಾನ್‌ ಚಾಲಕ ಆನಂದ ಎಂಬುವನು ಅತೀ ವೇಗ ಮತ್ತು ಅಜಾಗರುಕತೆಯಿಂದ ಓಡಿಸಿಕೊಂಡು ಬೋರ್‌ ವೆಲ್‌ ಹೆಂಡ್‌ ಪಂಫ್‌ಗೆ ಡಿಕ್ಕಿ ಪಡಿಸಿದ ಪರಿಣಾಮ ವ್ಯಾನ್‌ ಮಗುಚಿ ಬಿದ್ದಿರುವುದಾಗಿ ಕೊಟ್ಟು ಪುಕಾರಿನ ಮೇಲೆ ಕುಶಾಲನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.


ಹಲ್ಲೆ ಪ್ರಕರಣ

ದಿ: 18.07.2011 ರಂದು ಶನಿವಾರಸಂತೆ ಪೊಲೀಸ್‌ ಠಾಣಾ ವ್ಯಾಪ್ತಿಯ ಸುಳುಗಳಲೆ ಕಾಲೋನಿಯ ಪಿರ್ಯಾದಿಯವರಾದ ಫಾತಿಮರವರು ತನ್ನ ಗಂಡನಿಂದ ಬೇರೆಯಾಗಿ ವಾಸಿಸುತ್ತಿದ್ದು ಆರೋಪಿಯಾದ ಶಾಹಿದ್‌ ಪಿರ್ಯಾದಿಯವರಿಗೆ ನಿನ್ನ ಗಂಡ ಜೊತೆಯಲ್ಲಿ ಇಲ್ಲದೆ ಇರುವುದರಿಂದ ನನ್ನನ್ನು ಮದುವೆಯಾಗು ಎಂದು ಪೀಡಿಸುತ್ತಿದ್ದು ಅದಕ್ಕೆ ಒಪ್ಪದಿದ್ದಾಗ ಅವ್ಯಾಚ್ವ ಶಬ್ದಗಳಿಂದ ಬೈದು ಕತ್ತಿಯಿಂದ ಬಲ ಕೈ ಹೆಬ್ಬರಳಿಗೆ ಕಡಿದು ಗಾಯ ಪಡಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ಪುಕಾರಿನ ಮೇಲೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿರುವುದಾಗಿದೆ.

ಕಳ್ಳತನ

ದಿ: 18.07.2011 ರಂದು ಸಿದ್ದಾಪುರ ಠಾಣಾ ವ್ಯಾಪ್ತಿಯ ಟಾಟಾ ಕಾಫಿ ಎಸ್ಟೇಟ್‌ ಪಾಲಿಬೆಟ್ಟ ಸುತ್ತ ಅಳವಡಿಸಿರುವ ಸುಮಾರು ರೂ. 13,000/- ಬೆಲೆ ಬಾಳುವ 23 ಸೋಲಾರ್‌ ಕಂಬಗಳನ್ನು ಯಾರೂ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ಎಂದು ಕೊಟ್ಟ ಪುಕಾರಿನ ಮೇರೆ ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಗೊಳ್ಳಲಾಗಿದೆ.

Saturday, July 16, 2011

ಪಾದಾಚಾರಿಗೆ ಮೋಟಾರ್‌ ಬೈಕ್‌ ಡಿಕ್ಕಿ, ವ್ಯಕ್ತಿಯ ದುರ್ಮರಣ:


ದಿನಾಂಕ 15-7-2011 ರಂದು ಸಂಜೆ 6-30 ಗಂಟೆಗೆ ವಿರಾಜಪೇಟೆ ನಗರ ಠಾಣಾ ಸರಹದ್ದಿನ ಆರ್ಜಿ ಗ್ರಾಮದ ಸಿ.ಕೆ. ಬ್ರದರ್ಸ್‌ ವರ್ಕಶಾಫ್‌ ಮುಂದುಗಡೆ ಚಂದ್ರ, ಪರುಂಬಾಡಿ ವಾಸ ಇವರು ನಡೆದುಕೊಂಡು ಹೋಗುತ್ತಿರುವಾಗ ವಿರಾಜಪೇಟೆ ನಗರದ ಕಡೆಯಿಂದ ಆರೋಪಿ ಕಿಸಾನ್‌ ಎಂಬಾತ ತನ್ನ ಮೋಟಾರ್‌ ಸೈಕಲ್‌ ಸಂಖ್ಯೆ ಕೆಎ-12 ಜೆ-8926ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿ ಡಿಕ್ಕಿ ಪಡಿಸಿದ ಪರಿಣಾಮ ಚಂದ್ರರವರು ಗಾಯಗೊಂಡು ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮೃತಪಟ್ಟಿದ್ದು, ವಿರಾಜಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.


ಪಾದಾಚಾರಿಗೆ ಬೈಕ್‌ ಡಿಕ್ಕಿಯಾಗಿ ಗಾಯ:


ದಿನಾಂಕ 14-5-2011 ರಂದು ಮಡಿಕೇರಿ ಸಂಚಾರಿ ಠಾಣಾ ಸರಹದ್ದಿನ ಮಡಿಕೇರಿ ನಗರದ ಕೆಇಬಿ ಕಛೇರಿಯ ಬಳಿ ಫಿರ್ಯಾದಿ ಜೆ.ಬಿ. ಮೊಣ್ಣಪ್ಪ ರವರು ತಮ್ಮ ಪತ್ನಿಯೊಂದಿಗೆ ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ವಿನೋದ್‌ ರಾಜ್‌ ತನ್ನ ಮೋಟಾರ್‌ ಸೈಕಲ್‌ನಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬಂದು ದಿಕ್ಕಿಪಡಿಸಿದ ಪರಿಣಾಮ ತಲೆಗೆ ನೋವಾಗಿದ್ದು, ಈ ಸಂಬಂಧ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.


Friday, July 15, 2011

ಜೀವನದಲ್ಲಿ ಜಿಗುಪ್ಸೆ ವ್ಯಕ್ತಿಯ ಆತ್ಮಹತ್ಯೆ:


ದಿನಾಂಕ 14-7-2011 ರಂದು ವಿರಾಜಪೇಟೆ ಠಾಣಾ ಸರಹದ್ದಿನ ಮೈತಾಡಿ ಗ್ರಾಮದಲ್ಲಿ ವಾಸವಾಗಿದ್ದು ತಮ್ಮು ಎಂಬ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆಗೊಂಡು ತಾನು ವಾಸವಾಗಿದ್ದ ಮನೆಯ ಕೌಕೋಲಿಗೆ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.


ಪಂಚಾಯ್ತಿ ವತಿಯಿಂದ ಸ್ಥಳಪರಿಶೀಲನೆ ನಡೆದ ಸಂದರ್ಭದಲ್ಲಿ ವ್ಯಕ್ತಿಗೆ ಹಲ್ಲೆ:

ದಿನಾಂಕ 14-7-2011 ರಂದು ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ಪಾಲೂರು ಗ್ರಾಮದಲ್ಲಿ ಫಿರ್ಯಾದಿ ಪುದಿನೆರವನೆ ಎಸ್‌. ಶೇಖರ್‌ ಎಂಬವರು ಗ್ರಾಮ ಪಂಚಾಯ್ತಿ ಸದಸ್ಯರೊಂದಿಗೆ ಸ್ಥಳ ಪರಿಶೀಲನೆ ನಡೆಸುತ್ತಿರುವ ಸಮಯದಲ್ಲಿ ಆರೋಪಿ ಪುದಿಯನೆರವನ ಬೋಪಯ್ಯ, ದಮಯಂತಿ, ನರೇಂದ್ರ ಕುಮಾರ್‌ ಹಾಗು ಪವನ್‌ ಕುಮಾರ್‌ ರವರುಗಳು ಪರಿಶೀಲನೆ ಮಾಡುತ್ತಿರುವ ಜಾಗ ನಮಗೆ ಸೇರಬೇಕೆಂದು ಜಗಳವಾಡಿ ದೊಣ್ಣೆಯಿಂದ ಫಿರ್ಯಾದಿಯ ಮೇಲೆ ಹಲ್ಲೆ ನಡೆಸಿದ್ದು, ನಾಪೋಕ್ಲು ಪೊಲೀಸರು ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.


ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ:


ದಿನಾಂಕ 9-7-2011 ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕಾಂತೂರು ಮುರ್ನಾಡು ಗ್ರಾಮದಲ್ಲಿ ನೆಲಸಿರುವ ರಾಜೇಶ್‌ ಎಂಬವರು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥರಾಗಿದ್ದು ಅವರನ್ನು ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ದಿನಾಂಕ 13-7-2011 ರಂದು ಮಂಗಳೂರಿನ ಸಿಟಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 14-7-2011 ರಂದು ರಾಜೇಶ್‌ ಮೃತಪಟ್ಟಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Thursday, July 14, 2011

ಹಳೇ ವೈಷಮ್ಯ, ವ್ಯಕ್ತಿಯ ಮೇಲೆ ಹಲ್ಲೆ:


ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ರುದ್ರಗುಪ್ಪೆ ಗ್ರಾಮದಲ್ಲಿ ಫಿರ್ಯಾದಿ ಪಣಿಎರವರ ಸುಬ್ಬರವರು ಅಟ್ಟಂಗಡ ಅಂಜನ್‌ ರವರ ಲೈನ್‌ ಮನೆಯಲ್ಲಿ ವಾಸವಾಗಿದ್ದು ಕೂಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 17-7-2011 ರಂದು ಸಂಜೆ 5-00 ಗಂಟೆಗೆ ಮನೆಯಲ್ಲಿರುವ ಸಮಯದಲ್ಲಿ ಆರೋಪಿಗಳಾದ ಪಣಿಎರವರ ಗೌರಿ, ಪಣಿಎರವರ ಪಾಪುರವರು ಅಲ್ಲಿಗೆ ಬಂದು ಅಹೇ ವೈಷಮ್ಯವನ್ನಿಟ್ಟುಕೊಂಡು ಜಗಳ ಮಾಡಿ ಕೈಯಿಂದ ಹಾಗೂ ಸೌದೆ ದೊಣ್ಣೆಯಿಂದ ಹಲ್ಲೆ ಮಾಡಿ ನೋವನ್ನುಂಟು ಮಾಡಿದ್ದು, ಚಿಕಿತ್ಡೆಗೆ ಆಸ್ಪತ್ರೆಗೆ ದಾಖಲಾಗಿದ್ದು, ವಿರಾಜಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.


ಅಕ್ರಮ ಪ್ರವೇಶ, ಹಲ್ಲೆ ಕೊಲೆ ಬೆದರಿಕೆ, ಪ್ರಕರಣ ದಾಖಲು:


ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕಂಡಂಗಾಲ ಗ್ರಾಮದಲ್ಲಿ ಫಿರ್ಯಾದಿ ಶ್ರೀಮತಿ ಪಣಿ ಎರವರ ಗೌರಿ ಎಂಬವರು ಸಂಜೆ 6-00 ಗಂಟೆಯ ಸಮಯದಲ್ಲಿ ತಮ್ಮ ಲೈನ್‌ ಮನೆಯಲ್ಲಿ ಒಬ್ಬರೇ ಇರುವಾಗ ಆರೋಪಿಗಳಾದ ಸುಬ್ರ್ರಮಣಿ, ಮಣಿ ರವರು ಬಂದು ಫಿರ್ಯಾದಿಯ ಮನೆಗೆ ಅಕ್ರಮ ಪ್ರವೇಶ ಮಾಡಿ ಫಿರ್ಯಾದಿಯವರ ಕೈಯನ್ನು ಹಿಡಿದು ಎಳೆದು ನಮ್ಮೊಂದಿಗೆ ಬಾ ಎಂದು ಕರೆದು ಬಾರದೇ ಇದ್ದುದಕ್ಕೆ ಫಿರ್ಯಾದಿಯ ನೈಟಿಯನ್ನು ಹರಿದು ಹಾಕಿ ಬಿಡಿಸಲು ಬಂದ ಫಿರ್ಯಾದಿಯ ಗಂಡನಿಗೂ ಹಾಗೂ ಫಿರ್ಯಾದಿಯ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ನೋವನ್ನುಂಟು ಮಾಡಿದ್ದು ಅಲ್ಲದೆ ಈ ವಿಚಾರವನ್ನು ಬೇರೆಯವರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಸಿದ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.


ಶಾಲೆಯ ಬೀಗ ಮುರಿದು ಗ್ಯಾಸ್‌ ಸಿಲೆಂಡರ್‌ ಮತ್ತು ಸ್ಟೌವ್‌ ಕಳವು:

ದಿನಾಂಕ 13-7-2011 ರಂದು ಸೋಮವಾರಪೇಟೆ ತಾಲೋಕಿನ ಗೋಣಿಮರೂರು ಸ.ಹಿ.ಪ್ರಾ.ಶಾಲೆಯ ಅಕ್ಷರ ದಾಸೋಹ ಕಟ್ಟಡದ ಬೀಗವನ್ನು ಯಾರೋ ಕಳ್ಳರು ಮುರಿದು ಒಳಗೆ ಪ್ರವೇಶಿಸಿ ಗ್ಯಾಸ್‌ ಸಿಲೆಂಡರ್‌ ಮತ್ತು ಸ್ಟೌವನ್ನು ಕಳವು ಮಾಡಿಕೊಂಡು ಹೋಗಿದ್ದು, ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.


ಜೀವನ್ಲದಲಿ ಜಿಗುಪ್ಸೆಗೊಂಡು ವಿಷಪದಾರ್ಥ ಸೇವಿಸಿ ಆತ್ಮಹತ್ಯೆ:

ದಿನಾಂಕ 1-7-2011 ರಂದು 8.30 ಪಿ.ಎಂ.ಗೆ ಕುಶಾಲನಗರ ಠಾಣಾ ಸರಹದ್ದಿನ ಚಿಕ್ಕತ್ತೂರು ಗ್ರಾಮದಲ್ಲಿ ಫಿರ್ಯಾದಿ ಶ್ರೀಮತಿ ಪಧ್ಮರವರ ಗಂಡ ಚನ್ನರಾಜು ರವರು ಮನಸ್ಸಿಗೆ ಬೇಜಾರು ಮಾಡಿಕೊಂಡು ಕೃಷಿಗೆ ಸಿಂಪಡಿಸಲು ಇಟ್ಟಿದ್ದ ಕ್ರಿಮಿನಾಶಕವನ್ನು ಸೇವಿಸಿ ಅಸ್ವಸ್ತಗೊಂಡು ಚಿಕಿತ್ಸೆಗೆ ಮೈಸೂರಿನ ಕೆ.ಆರ್‌. ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದು, ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

Tuesday, July 12, 2011

ರಸ್ತೆ ಅಪಘಾತ ವ್ಯಕ್ತಿಗೆ ಗಾಯ:


ದಿನಾಂಕ 10-7-11 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಬಿಟ್ಟಂಗಾಲ ಗ್ರಾಮದ ಆರ್‌.ಕೆ.ಎಫ್‌ ಹೊಟೇಲ್‌ ಬಳಿ ಆರೋಪಿ ಹಂಸ ಕೆ.ಎ.12-ಎಂ 6539ರ ಜೀಪು ಚಾಲಕ ರವರು ತಮ್ಮ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶಾಂಪಪ್ಪ ಎಂಬವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಶಾಂತಪ್ಪನವರ ತಲೆಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಮೈಸೂರಿನ ಅಪಲೋ ಆಸ್ಪತ್ರೆಗೆ ದಾಖಲು ಆಗಿದ್ದು, ಈ ಸಂಬಂಧ ವಿರಾಜಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯ ಆತ್ಮಹತ್ಯೆ:


ದಿನಾಂಕ 11-7-2011 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕದನೂರು ಗ್ರಾಮದ ವಾಸಿ ಮಣಿ ಅಯ್ಯಣ್ಣ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮ ಮನೆಯ ಕೌಕೋಲಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Saturday, July 9, 2011

ಮಗನಿಂದಲೇ ತಾಯಿಯ ಹತ್ಯೆ:


ದಿನಾಂಕ 8-7-2011 ರಂದು ನಾಪೋಕ್ಲು ಪೊಲೀಸ್‌ ಠಾಣಾ ಸರಹದ್ದಿನ ಬಲ್ಲಮಾವಟಿ ಗ್ರಾಮದಲ್ಲಿ ಫಿರ್ಯಾದಿ ಕೋಟೇರ ನಂಜಪ್ಪ ಎಂಬವರು ತನ್ನ ತಾಯಿ ಅಕ್ಕವ್ವ ಹಾಗೂ ಪತ್ನಿಯೊಂದಿಗೆ ಮಾತನಾಡಿಕೊಂಡಿರುವ ಸಮಯದಲ್ಲಿ ಅಕ್ಕವ್ವನವರ 2ನೇ ಮಗ ಭೀಮಯ್ಯ ಅಲ್ಲಿಗೆ ಬಂದು ಗದ್ದೆ ಕೆಲಸ ಮಾಡುವ ವಿಚಾರದಲ್ಲಿ ಜಗಳ ತೆಗೆದು ತಾಯಿ ಅಕ್ಕವ್ವನವರ ಮೇಲೆ ಗುಂಡು ಹಾರಿಸಿ ಗಾಯಪಡಿಸಿ ಕೋವಿಯೊಂದಿಗೆ ಸ್ಥಳದಿಂದ ಪರಾರಿಯಾಗಿದ್ದು, ಗಾಯಾಳು ಅಕ್ಕವ್ವನವರನ್ನು ಚಿಕಿತ್ಸೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲುಪಡಿಸುವ ಸಮಯದಲ್ಲಿ ಅಕ್ಕವ್ವನವರು ಮೃತಪಟ್ಟಿದ್ದು, ಈ ಪ್ರಕರಣದ ಬಗ್ಗೆ ನಾಪೋಕ್ಲು ಪೊಲೀಸರು ಠಾಣೆಯಲ್ಲಿ ಪ್ರಕರವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.


ವ್ಯಕ್ತಿಯಿಂದ ಅಕ್ರಮ ಮದ್ಯ ಮಾರಾಟ, ಪ್ರಕರಣ ದಾಖಲು:


ದಿನಾಂಕ 8-7-2011 ರಂದು ನಾಪೋಕ್ಲು ಠಾಣಾ ವ್ಯಾಪ್ತಿಯ ಕೋಣಂಜಗೇರಿ ಗ್ರಾಮದ ಬಸ್ಸು ತಂಗುದಾಣದ ಹತ್ತಿರ ಆರೋಪಿ ಚರ್ಮಂಡ ಮುತ್ತಪ್ಪ ಎಂಬವರು ಸರಕಾರದ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುಲು ತೆಗೆದುಕೊಂಡು ಹೋಗುತ್ತಿರುವುದನ್ನು ನಾಪೋಕ್ಲು ಪೊಲೀಸರು ಪತ್ತೆ ಹಚ್ಚಿ ರೂ.2400/- ಬೆಲೆಯ ಮದ್ಯವನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.


ವ್ಯಕ್ತಿ ಕಾಣೆ, ಪ್ರಕರಣ ದಾಖಲು:


ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಚೆಂಬು ಗ್ರಾಮದಲ್ಲಿ ವಾಸಮಾಡಿಕೊಂಡಿರುವ ಫಿರ್ಯಾದಿ ಶ್ರೀಮತಿ ಪಿ. ಪ್ರಮೀಳಾ ರವರ ಗಂಡ ಪುರಂದರ ಪಿ.ಎ. ಎಂಬವರು ದಿನಾಂಕ 5-7-2011 ರಿಂದ ಕಾಣೆಯಾಗಿದ್ದು, ಮಡಿಕೇರಿ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

Thursday, July 7, 2011

ಮಹಿಳೆಯ ಮೇಲೆ ಹಲ್ಲೆ:

ದಿನಾಂಕ 6-7-11 ರಂದು ವಿರಾಜಪೇಟೆ ನಗರ ಠಾಣಾ ವ್ಯಾಪ್ತಿ ಕಲ್ಲುಬಾಣೆ ನಿವಾಸಿಯಾದ ಶೀಮತಿ ರಸೀಯಾ ಎಂಬವರ ಮೇಲೆ ಆರೋಪಿತರಾದ ಹ್ಯಾರೀಸ್‌ ಮತ್ತು ರಮ್ಲ ಇವರು ಕಾಲಿನಿಂದ ಒದ್ದು ನೋವುಂಟು ಮಾಡಿದಲ್ಲದೇ ಕೈಯಿಂದ ಕುತ್ತಿಗೆಯ ಹಿಂಬಾಗಕ್ಕೆ ಹೊಡೆದು ನೋವುಂಟು ಮಾಡಿದ್ದಲ್ಲದೇ ಕೈಯಿಂದ ಕುತ್ತಿಗೆ ಹೊಡೆದು ನೋವು ಪಡಿಸಿದರುವುದಾಗಿ ಕೊಟ್ಟ ಪುಕಾರಿನ್ವಯ ವಿರಾಜಪೇಟೆ ನಗರ ಠಾಣೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

ಅತ್ಮಹತ್ಯೆಯ ಪ್ರಕರಣ:

ಸಿದ್ಥಾಪುರ ಠಾಣಾ ಸರಹದ್ದಿನ ಬಾಣಂಗಾಲ ಗ್ರಾಮ ನಿವಾಸಿ ಮಾರ ಎಂಬವರು ಪಾರ್ಶವಾಯು ರೋಗಕ್ಕೆ ತುತ್ತಾಗಿ ನಂತರ ಚಿಕಿತ್ಸೆ ಪಡೆದರೂ ಪಲಕಾರಿಯಾಗದೇ ಮನಸ್ಸಿಗೆ ಬೇಸರವಾಗಿ ಮನೆಯ ಕೌಕೊಲಿಗೆ ಕಟ್ಟಿ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿರುವುದಾಗಿ ಕೊಟ್ಟ ಪುಕಾರಿನ್ವ ಸಿದ್ಥಾಪುರ ಠಾಣೆ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.

ಹಳೆ ವೈಷ್ಯಮ ದಿಂದ ಜಗಳ ,ಹಲ್ಲೆ, ಜೀವಬೆದರಿಕೆ:
ದಿ: 6-7-2011 ರಂದು ಶನಿವಾರಸಂತೆ ಠಾಣಾ ವ್ಯಾಪ್ತಿಯ ದೊಡ್ಡ ಭಂಡಾರ ಗ್ರಾಮ ನಿವಾಸಿಯಾದ ಡಿ.ಎ. ಇಂದ್ರರವರು ನಲ್ಲಿ ನೀರಿಗೆ ನಲ್ಲಿಗೆ ನೀರು ಹಿಡಿಯಲು ಹೋಗಿದಾಗ ಆರೋಪಿಗಳಾದ ಕಾಮಾಕ್ಷಿ ಹಾಗೂ ಗೋವಿಂದಗೌಡ ನೀರು ಹಿಡಿಯಲು ಬಂದಿದ್ದು ಆರೋಪಿಗಳು ಹಳೆಯ ವೈಷ್ಯಮ್ಯದಿಂದ ಜಗಳ ತೆಗೆದು ಅವಾಚ್ಚ ಶಬ್ದಗಳಿಂದ ದೊಣ್ಣೆಯಿಂದ ಹೊಡೆದು ನೋವುಂಟು ಪಡಿಸಿರುವುದಾಗಿ ಕೊಟ್ಟ ಪುಕಾರಿನ್ವಯ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

ಗೋಮಾಂಸ ಮಾರಾಟ ಮಾಡಲು ಯತ್ನ:
ದಿನಾಂಕ 6-7-2011 ರಂದು ಮಡಿಕೇರಿ ನಗರ ಠಾಣೆ ಸರಹದ್ದಿನ ಕೆ.ಎಸ್‌.ಆರ್‌.ಟಿ.ಸಿ ಬಸ್ಸ್‌ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಮೈಸೂರು ಕಡೆಯಿಂದ ಬಂದ ಕೆ.ಎಸ್‌.ಆರ್.ಟಿ.ಸಿ ಬಸ್ಸಿನಿಂದ ರಶೀದ್‌ ಬೇಂಗಂ ಆರೋಪಿಯು 2 ಬಿಳಿ ಬಣ್ಣದ ಪ್ಲಾಸ್ಟಿಕ್‌ ಚೀಲದಲ್ಲಿ ಆಕ್ರಮವಾಗಿ ದನದ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ತಂದಿದ್ದನ್ನು ಪತ್ತಹಚ್ಚಿ ಪ್ರಕರಣವನ್ನು ಮಡಿಕೇರಿ ನಗರ ಠಾಣೆ ದಾಖಲಿಸಿಕೊಂಡಿರುವುದಾಗಿದೆ.

Monday, July 4, 2011ಅಸ್ವಾಭಾವಿಕ ಸಾವು, ಪ್ರಕರಣ ದಾಖಲು:ದಿನಾಂಕ 3-7-2011 ರಂದು ಶ್ರೀಮಂಗಲ ಠಾಣಾ ವ್ಯಾಪ್ತಿಯ ಹುದಿಕೇರಿ ಗ್ರಾಮದ ಕೊಡವ ಸಮಾಜದ ಎದುಗಡೆ ಇರುವ ಬಸ್ಸು ತಂಗುದಾಣದಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯ ಮೃತ ದೇಹ ಇರುವ ಬಗ್ಗೆ ಫಿರ್ಯಾದಿ ಚೇಂದೀರ ಲೋಕನಾಥ ಎಂಬವರು ತಿಳಿಸಿದ ಮೇರೆಗೆ ಶ್ರೀಮಂಗಲ ಪೊಲೀಸರು ಪರಿಶೀಲಿಸಿ ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯ ಆತ್ಮಹತ್ಯೆ:ದಿನಾಂಕ 4-7-2011 ರಂದು ಕುಶಾಲನಗರ ಠಾಣಾ ವ್ಯಾಪ್ತಿಯ ಕೂಡುಮಂಗಳೂರು ಗ್ರಾಮದ ವಿಜಯ ನಗರದ ನಿವಾಸಿ ಸಚಿನ್‌ ಎಂಬ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ ಕೆಲಸ ನಿರ್ವಹಿಸುತ್ತಿದ್ದ ಅಮೃತ್‌ ಕಾಫಿ ವರ್ಕ್ಸನ ಶೌಚಾಲಯದಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.


ಕಳ್ಳತನ ಪ್ರಕರಣ:


ದಿನಾಂಕ 3-7-2011 ರಂದು ಕುಶಾಲನಗರ ಪೊಲೀಸ್ ಠಾಣಾ ಸರಹದ್ದಿನ ಹೆಬ್ಬಾಲೆ ಗ್ರಾಮದಲ್ಲಿ ಫಿರ್ಯಾದಿ ದೇವರಾಜು ಎಂಬವರ ಮನೆಗೆ ಯಾರೂ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ಮನೆಯ ಬೀಗವನ್ನು ಮುರಿದು ಒಳ ಪ್ರವೇಶಿಸಿ ಮನೆಯಲ್ಲಿಟ್ಟದ್ದ ಚಿನ್ನಾಭರಣ, ಬೆಳ್ಳಿ ದೀಪಗಳು, ಒಂದು ಕ್ಯಾಮರಾ ಮತ್ತು ನಗದು ರೂ.2800( ಒಟ್ಟು 24,000-00 ) ಕಳವು ಮಾಡಿಕೊಂಡು ಹೋಗಿದ್ದು, ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆಗೆ ಕೈಗೊಂಡಿರುತ್ತಾರೆ.


ಹುಡುಗಿಯನ್ನು ಅಪಹರಿಸಿ ಅತ್ಯಾಚಾರ:


ದಿನಾಂಕ 3-7-2011 ರಂದು ಕುಶಾಲನಗರ ಠಾಣಾ ಸರಹದ್ದಿನ ಮಲ್ಲೇನಳ್ಳಿ ಗ್ರಾಮದ ವಾಸಿ ಫಿರ್ಯಾದಿ ಶ್ರೀಮತಿ ಮಾದೇವಿ ಎಂಬವರ ಮಗಳಾದ ಹೆಚ್‌,ಎನ್‌. ಪಲ್ಲವಿ, ಪ್ರಾಯ 18 ವರ್ಷ ಎಂಬಾಕೆಯನ್ನು ಆರೋಪಿಗಳಾದ ನಂದೀಶ ಹಾಗೂ ನರೇಂದ್ರ ಎಂಬವರು ಬಲಾತ್ಕಾರವಾಗಿ ಜೀಪಿನಲ್ಲಿ ಅಪಹರಿಸಿ ಸೋಮವಾರಪೇಟೆ ಕಾರೆಕೊಪ್ಪಲು ಗ್ರಾಮಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ವೆಸಗಿಸದ್ದು, ಈ ಬಗ್ಗೆ ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.


ನೇಣು ಬಿಗಿದುಕೊಂಡು ಆತ್ಮಹತ್ಯೆ:


ದಿನಾಂಕ 3-7-2011 ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕಡಗದಾಳು ಗ್ರಾಮದಲ್ಲಿ ವಾಸವಾಗಿರುವ ಮುಕ್ಕಾಟಿರ ಸಂಜು ಕಾವೇರಪ್ಪ (29) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಕೌಕೋಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.


ರಸ್ತೆ ಅಪಘಾತ 4 ಮಂದಿ ದುರ್ಮರಣ:


ದಿನಾಂಕ 3-7-2011 ರಂದು ಪೊನ್ನಂಪೇಟೆ ಠಾಣಾ ಸರಹದ್ದಿನ ಮುಗುಟಗೇರಿ ಗ್ರಾಮದ ಕಾನೂರು ಸಾರ್ವಜನಿಕ ರಸ್ತೆಯಲ್ಲಿ ಆರೋಪಿ ಕೆ.ಎಸ್‌.ಆರ್‌.ಟಿ.ಸಿ. ಬಸ್ಸ್ ಚಾಲಕ ತನ್ನ ಬಸ್ಸನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿ ಎದುಗುಗಡೆ ಯಿಂದ ಬರುತ್ತಿದ್ದ ಮಾರುತಿ ಓಮ್ನಿಗೆ ಡಿಕ್ಕಿ ಪಡಿಸಿದ ಪರಿಣಾದ ಮಾರುತಿ ಓಮ್ನಿಯಲ್ಲಿ ಪ್ರಯಾಣಿಸುತ್ತಿದ್ದ 4 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಹಾಗೂ 4 ಮಂದಿ ತೀವ್ರ ರೀತಿಯಲ್ಲಿ ಗಾಯಗೊಂಡಿದ್ದು, ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.


Sunday, July 3, 2011

ರಸ್ತೆ ಅಫಘಾತ, ವ್ಯಕ್ತಿಗೆ ಗಾಯ • ರಸ್ತೆ ಅಫಘಾತದಲ್ಲಿ ವ್ಯಕ್ತಿಯೊಬ್ಬ ತೀವ್ರವಾಘಿ ಗಾಯಗೊಂಡ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಪೊನ್ನಂಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 28/06/2011ರಂದು ಜೋಡುಬೆಟ್ಟಿಯ ಆಟೋ ಚಾಲಕ ವಿಜಯಕುಮಾರ ಎಂಬವರ ಮಗ ಪೊನ್ನಂಪೇಟೆಯ ಮಹಿಳಾ ಸಮಾಜದ ಬಳಿ ನಡೆದುಕೊಂಡು ಬರುವಾಗ್ಗೆ ಆರೋಪಿ ಸುಧಿ ಕುಮಾರ್ ಎಂಬಾತ ತನ್ನ ಜೀಪು ಸಂಖ್ಯೆ ಕೆಎ-12-ಎಂ-4562ರ ಜೀಪನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಳಿಸಿಕೊಂಡು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿಜಯಕುಮಾರ್‌ರ ಮಗನಿಗೆ ಡಿಕ್ಕಿಪಡಿಸಿದ ಪರಿಣಾಮ ವಿಜಯಕುಮಾರ್‌ರವರ ಮಗನ ಎರಡೂ ಕಾಳುಗಳಿಗೆ ತೀವ್ರತರವಾದ ಗಾಯಗಳಾದ ಬಗ್ಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, July 2, 2011

ಮನೆ ಕಳ್ಳತನ, 1.5 ಲಕ್ಷ ಮೌಲ್ಯದ ಚಿನ್ನಾಭರಣ ಕಳವು • ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆ ನುಗ್ಗಿ ಚಿನ್ನಾಭರಣಗಳನ್ನು ಕಳವು ಮಾಡಿದ ಘಟನೆ ಕುಶಾಲನಗರ ಠಾಣಾ ವ್ಯಾಪ್ತಿಯ ಬಾಳುಗೋಡು ಎಂಬಲ್ಲಿ ನಡೆದಿದೆ. ಗ್ರಾಮದ ನಿವಾಸಿ ಮೊಹಮದ್ ಎಂಬವರು ವಿರಾಜಪೇಟೆ ತಾಲೂಕಿನ ಕೊಂಡಂಗೇರಿಯಲ್ಲಿ ಆಶ್ರಮ ನಡೆಸಿಕೊಂಡಿದ್ದು, ಸುಮಾರು 15 ದಿನಗಳ ಹಿಂದೆ ಬಾಳುಗೋಡಿನ ತನ್ನ ಮನೆಗೆ ಬೀಗ ಹಾಕಿಕೊಂಡು ಕೆಲಸದ ನಿಮಿತ್ತ ಕೊಂಡಂಗೇರಿಗೆ ಹೋಗಿದ್ದು, ಇಂದು ಪಕ್ಕದ ಮನೆಯ ನಿವಾಸಿ ಉಮ್ಮರ್ ಎಂಬವರು ತಮ್ಮ ಮನೆಯ ಬಾಗಿಲನ್ನು ಯಾರೋ ಒಡೆದಿರುವ ಬಗ್ಗೆ ದೂರವಾಣಿ ಮೂಲಕ ತಿಳಿಸದ ಮೇರೆಗೆ ಮನೆಗೆ ಬಂದು ನೋಡುವಾಗ ಯಾರೋ ಕಳ್ಳರು ಮನೆಯ ಬಾಗಿಲು ಒಡೆದು ಒಳ ಪ್ರವೇಶಿಸಿ ಮನೆಯ ಒಳಗಿನ ಆಲ್ಮೆರಾದಲ್ಲಿದ್ದ ಅಂದಾಜು ರೂ. 1.5 ಲಕ್ಷ ಮೌಲ್ಯದ ಎರಡು ವಾಚು ಹಾಗೂ 120 ಗ್ರಾಂ ತೂಕದ ಚಿನ್ನದ ನೆಕ್ಲೇಸ್ ಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಳೆ ವೈಷಮ್ಯ, ಮನೆಗೆ ಹಾನಿ, ಕೊಲೆ ಬೆದರಿಕೆ • ಹಳೆ ವೈಷಮ್ಯದಿಂದ ಮಹಿಳೆಯೋರ್ವರನ್ನು ಅಶ್ಲೀಲ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದುದೇ ಅಲ್ಲದೆ ಮನೆಗೆ ಹಾನಿ ಮಾಡಿರುವ ಘಟನೆ ಭಾಗಮಂಡಲ ಠಾಣಾ ವ್ಯಾಪ್ತಿಯ ಚೆಟ್ಟಿಮಾನಿಯಲ್ಲಿ ನಡೆದಿದೆ. ದಿನಾಂಕ 30/06/2011ರಂದು ಚೆಟ್ಟಿಮಾನಿ ಗ್ರಾಮದ ಭುವನೇಶ್ವರಿ ಎಂಬವರು ಮನೆಯಲ್ಲಿರುವಾಗ ಪಕ್ಕದ ಮನೆಯ ಮೋಹನ್ ಎಂಬವರು ಪಾನಮತ್ತರಾಗಿ ಹಳೆ ವೈಷಮ್ಯದಿಂದ ಭುವನೇಶ್ವರಿಯವರನ್ನು ಅಶ್ಲೀಲ ಶಬ್ದಗಳಿಂದ ನಿಂದಿಸಿ ದೊಣ್ಣೆಯಿಂದ ಮನೆಯ ಮಾಡಿಗೆ ಹೊಡೆದು ಮಾಡಿಗೆ ಹೊದಿಸಿದ್ದ ಕಲ್ನಾರು ಶೀಟನ್ನು ಹಾನಿಗೊಳಿಸಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಭಾಗಮಂಡಲ ಪೊಲೀಸರು ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.

ಜೀವನದಲ್ಲಿ ಜುಗುಪ್ಸೆ, ನೇಣು ಬಿಗಿದು ಆತ್ಮಹತ್ಯೆ
 • ಜೀವನದಲ್ಲಿ ಜುಗುಪ್ಸೆಗೊಂಡು ಮಹಿಳೆಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಚೆನ್ನಕೋಟೆ ಗ್ರಾಮದ ನಿವಾಸಿ ವನಿತಾ ಎಂಬ ಮಹಿಳೆ ಮಗಳ ಮದುವೆಯ ವಿಷಯದಲ್ಲಿ ಜೀವನದಲ್ಲಿ ಜುಗುಪಸ್ಎಗೊಂಡು ಮನೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಹತ್ಯೆ ಮಾಡಿಕೊಂಡ ಬಗ್ಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


Friday, July 1, 2011

ಅನುಮಾನಾಸ್ಪದ ವ್ಯಕ್ತಿಯ ಬಂಧನ. • ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯೋರ್ವನನ್ನು ವಿರಾಜಪೇಟೆ ನಗರ ಪೊಲೀಸರು ಬಂಧಿಸಿ ಕ್ರಮ ಕೈಗೊಂಡಿದ್ದಾರೆ. ದಿನಾಂಕ 30/06/2011ರಂದು ರಾತ್ರಿ ವಿರಾಜಪೇಟೆ ನಗರ ಠಾಣಾಧಿಕಾರಿ ಅನೂಪ್ ಮಾದಪ್ಪ ರಾತ್ರಿ ಗಸ್ತು ಕರ್ತವ್ಯದಲ್ಲಿರುವಾಗ್ಗೆ ನಗರದ ಸ್ಟಾರ್ ಜಂಕ್ಷನ್ ಬಳಿ ಕೇರಳದ ಪೊನ್ನಾಣಿಯ ಶಾಪಿ ಎಂಬಾತನು ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದುದನ್ನು ಕಂಡು ಆತನನ್ನು ವಿಚಾರಿಸುವಾಗ ಆತನು ತನ್ನ ಹೆಸರು ಮತ್ತು ವಿಳಾಸವನ್ನು ಸರಿಯಾಗಿ ತಿಳಿಸದೆ ಆತನ ಇರುವಿಕೆಯ ಬಗ್ಗೆ ಸರಿಯಾದ ಮಾಹಿತಿ ನೀಡದ ಕಾರಣ ಆತನು ಯಾವುದೋ ಅಪರಾಧವನ್ನು ಎಸಗುವ ಉದ್ದೇಶದಿಂದ ಅಲ್ಲಿರಹುದೆಂದು ಶಂಕಿಸಿ ಆತನ್ನು ಬಂಧಿಸಿ ಮುಂದಿನ ಕ್ರಮ

ದಾರಿ ತಡೆದು ನಿಂದನೆ ಕೊಲೆ ಬೆದರಿಕೆ • ಮಹಿಳೆಯೋರ್ವರನ್ನು ದಾರಿ ತಡೆದು ಅಶ್ಲೀಲ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಶನಿವಾರಸಂತೆ ಠಾಣಾ ವ್ಯಾಪ್ತಿಯ ಗೋಪಾಲಪುರ ಗ್ರಾಮದಲ್ಲಿ ನಡೆದಿದೆ. ದಿನಾಂಕ 30/06/2011ರಂದು ಗೋಪಾಲಪುರ ಗ್ರಾಮದ ತೀರ್ಥಲಕ್ಷ್ಮಿ ಎಂಬವರು ತಮ್ಮ ಜಮೀನಿಗೆ ಕೆಲಸಕ್ಕೆಂದು ಹೋಗುತ್ತಿದ್ದ ಸಮಯದಲ್ಲಿ ಆರೋಪಿಗಳಾದ ಹರೀಶ ಮತ್ತು ದಿವ್ಯ ಎಂಬವರು ವಿನಾ ಕಾರಣ ಅಶ್ಲೀಲ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಯತ್ನ, ಕೊಲೆ ಬೆದರಿಕೆ • ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯೋರ್ವರ ಮೇಲೆ ಹಲ್ಲೆ ಯತ್ನ ನಡೆಸಿ ಕೊಲೆ ಬೆದರಿಕೆ ಹಾಕಿದ ಘಟನೆ ಭಾಗಮಂಡಲ ಠಾಣಾ ವ್ಯಾಪ್ತಿಯ ಚೇರಂಬಾಣೆಯಲ್ಲಿ ನಡೆದಿದೆ. ದಿನಾಂಕ 30/06/2011ರ ಅಪರಾಹ್ನ ವಿರಾಜಪೇಟೆ ಗ್ರಾಮಾಂತರ ಠಾಣೆಯ ಸಿಬ್ಬಂದಿ ಕೆ.ಜಿ.ಹೊನ್ನಪ್ಪ ಎಂಬವರು ಚೇರಂಬಾಣೆಯ ನಿವಾಸಿ ಪೊನ್ನಪ್ಪ ಎಂಬವರಿಗೆ ನ್ಯಾಯಾಲಯದಿಂದ ಜಾರಿಯಾಗಿದ್ದ ವಾರಂಟನ್ನು ಜಾರಿಗೊಳಿಸಲು ಚೇರಂಬಾಣೆಯ ಪೊನ್ನಪ್ಪನವರ ಮನೆಗೆ ಹೋಗಿದ್ದ ಸಂದರ್ಭ ಪೊನ್ನಪ್ಪ ಪೊಲೀಸ್ ಸಿಬ್ಬಂದಿ ಹೊನ್ನಪ್ಪನವರ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಲು ಯತ್ನಿಸಿ ಕೊಲೆ ಬೆದರಿಕೆ ಹಾಕಿರುವುದಲ್ಲದೆ ಹೊನ್ನಪ್ಪನವರ ಬಳಿ ಇದ್ದ ನ್ಯಾಯಾಲಯದ ವಾರಂಟುಗಳಿದ್ದ ಕೈಚೀಲವನ್ನು ಕಿತ್ತುಕೊಂಡು ಹೋಗಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲು
 • ಮಹಿಳೆಯೋರ್ವರ ಮೇಲೆ ವರದಕ್ಷಿಣೆಗಾಗಿ ಕಿರುಕುಳ ನೀಡಿದ ಪ್ರಕರಣವೊಂದು ಕುಶಾಲನಗರ ಠಾಣಾ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿ ನಡೆದಿದೆ. ಠಾಣಾ ವ್ಯಾಪ್ತಿಯ ಸೀಗೆ ಹೊಸೂರು ಗ್ರಾಮದ ಪಾರ್ವತಿ ಎಂಬವರು ಆ ಗ್ರಾಮದ ರವಿಕುಮಾರ್ ಎಂಬವರನ್ನು ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದು, ವಿವಾಹದ ಸಮಯದಲ್ಲಿ ರೂ 50,000/- ನಗದು ಹಾಗೂ ಒಡವೆಗಳನ್ನು ವರದಕ್ಷಿಣೆಯಾಘಿ ನೀಡಿದ್ದರೂ ಸಹ ಪುನಃ ವರದಕ್ಷಿಣೆಗಾಗಿ ರವಿಕುಮಾರ್ ಹಾಗೂ ಆತನ ಸೋದರ ಇಬ್ಬರೂ ಸೇರಿ ಪಾರ್ವತಿಯನ್ನು ಪೀಡಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿರುವ ಬಗ್ಗೆ ಪಾರ್ವತಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.