Monday, August 29, 2011


ರಸ್ತೆ ಅಪಘಾತ ವ್ಯಕ್ತಿಯ ದುರ್ಮರಣ:


ದಿನಾಂಕ 26-8-2011 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಮಾಕುಟ್ಟ ಎಂಬಲ್ಲಿ ಫಿರ್ಯಾದಿ ಟಿ.ಎ. ಸುರೇಶ್‌ ಕುಮಾರ್‌ ಹಾಗೂ ಮೊಹಿದ್ದೀನ್‌ ಕುಟ್ಟಿ ಎಂಬವರು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ಕೆ-12 ಎನ್‌ 6730 ರ ಚಾಲಕ ಸದರಿ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ ಮೊಹಿದ್ದೀನ್‌ ಕುಟ್ಟಿರವರರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರಿಗೆ ತೀವ್ರ ಗಾಯಗಳಾಗಿದ್ದು ಚಿಕಿತ್ಸೆಗೆ ಕೇರಳದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಚಿಕಿತ್ಸೆಯ ಸಮಯದಲ್ಲಿ ಮೊಹಿದ್ದೀನ್‌ ಕುಟ್ಟಿರವರು ಮೃಲಪಟ್ಟಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.


ಆಟೋ ರಿಕ್ಷಾ ಡಿಕ್ಕಿ ವ್ಯಕ್ತಿಗೆ ಗಾಯ:


ದಿನಾಂಕ 29-8-2011 ರಂದು ಸೋಮವಾರಪೇಟೆ ಠಾಣಾ ಸರಹದ್ದಿನ ಸೋಮವಾರಪೇಟೆ ನಗರದಲ್ಲಿ ಫಿರ್ಯಾದಿ ಜಿ.ಎಸ್‌. ರಮೇಶ್ ಎಂಬವರಿಗೆ ಆರೋಪಿ ನಾಗರಾಜ ಕೆ.ಎ12-ಎ 1599ರ ಆಟೋ ಚಾಲಕ ಸದರಿ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ ಫಿರ್ಯಾದಿಗೆ ಡಿಕ್ಕಿ ಪಡಿಸಿದ ಪರಿಣಾಮ ಫಿರ್ಯಾದಿ ಗಾಯಗೊಂಡಿದ್ದು, ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Sunday, August 28, 2011

ನಿಂದಿಸಿ ಕೊಲೆ ಬೆದರಿಕೆ:
ದಿ: 26/08/2011 ರಂದು ಕುಶಾಲನಗರ ಪೊಲೀಸ್‌ ಸರಹದ್ದಿನ ಟೌನ್‌ ಪಂಚಾಯಿತ್‌ ಮುಖ್ಯದ್ವಾರದ ಪಿರ್ಯಾದಿ ರೂಪ ಕೋದಂಡ ರಾಮ ಪಂಚಾಯ್ತಿಯ ಸಾಮಾನ್ಯ ಸಭೆಗೆ ಹಾಜರಾಗಲು ಪಟ್ಟಣ ಪಂಚಾಯಿತಿ ಮುಖ್ಯ ದ್ವಾರದ ಬಳಿ ಕಛೇರಿಗೆ ಹೋಗುತ್ತಿದ್ದಾಗ ಆರೋಪಿಗಳಾದ ಕೃಷ್ಣಪ್ಪ 2) ಮನು ಮತ್ತು ಇತರರು ಸೇರಿ ಪಿರ್ಯಾದಿದಾರರಿಗೆ ಅವಾಚ್ಚಶಬ್ದದಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿ ಹಲ್ಲೆ ನಡೆಸುವ ಸಂದರ್ಭಕ್ಕೆ ಪಟ್ಟಣ ಪಂಚಾಯ್ತತಿ ಸದಸ್ಯ ಮಹೇಶ ಹಾಗೂ ಇತರರು ಬಂದು ಸಮದಾನ ಪಡಿಸಿದಾಗಿ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ಕುಶಾಲನಗರ ಠಾಣೆ ದಾಖಲಿಸಿ್ರುವುದಾಗಿದೆ.

ಆತ್ಮಹತ್ಯೆ ಪ್ರಕರಣ:
ದಿ: 27/08/2011 ರಂದು ಮೇರಿಯಂಡ ಧರಣಿ ನಾಪೋಕ್ಲು ಠಾಣೆಗೆ ಹಾಜರಾಗಿ ಸದರಿರವರ ಗಂಡ ಪೂಣಚ್ಚರವರಿಗೆ ಜಾಗದ ವಿಷಯದಲ್ಲಿ ನ್ಯಾಯಾಲಯದಲ್ಲಿ ವ್ಯಾಜ್ಯವಿರುವ ಕಾರಣ ಮತ್ತು ಹಲವು ಕಡೆ ಸಾಲ ಮಾಡಿರುವ ಕಾರಣ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಕರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ನಾಪೋಕ್ಲು ಪೊಲೀಸ್‌ ಠಾಣೆ ಯಲ್ಲಿ ದಾಖಲಿಸಿರುವುದಾಗಿದೆ.

Tuesday, August 23, 2011


ಮಹಿಳೆ ಮೇಲೆ ದೌರ್ಜನ್ಯ:


ಫಿರ್ಯಾದಿ ಶ್ರೀಮತಿ ಎಸ್‌.ಬಿ. ತನ್ಮಯಿ 2009 ರಲ್ಲಿ ಮೋಹನ್‌ ಕುಶಾಲಪ್ಪರವರನ್ನು ಮದುವೆಯಾಗಿದ್ದು, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಫಿರ್ಯಾದಿಯ ಗಂಡ ಕುಶಾಲಪ್ಪ ವೇತನದ ಹಣವನ್ನು ಪಡೆಯುತ್ತಿದ್ದು ಫಿರ್ಯಾದಿಗೆ ಹಣ ಕೊಡಡೆ ತವರು ಮನೆಯಿಂದ ಹಣ ತರುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡುತ್ತಿದ್ದುದರಿಂದ ಫಿರ್ಯಾದಿ ಕೆಲಸವನ್ನು ಬಿಟ್ಟು ತವರು ಮನೆಗೆ ಹೋಗಿ ನೆಲೆಸಿದ್ದು ಫಿರ್ಯಾದಿಯು ಅಲ್ಲಿಗೂ ಹೋಗಿ ತವರು ಮನೆಯಿಂದ ಹಣವನ್ನು ತಂಡು ಕೊಡು ಇಲ್ಲದೇ ಇದ್ದರೆ ನಿನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿರುವ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.


ವ್ಯಕ್ತಿಯ ದಾರಿ ತಡೆದು ಹಲ್ಲೆ:


ದಿನಾಂಕ 22-8-2011 ರಂದು ಸೋಮವಾರಪೇಟೆ ಠಾಣೆ ಸರಹದ್ದಿನ ಸೋಮವಾರಪೇಟೆ ನಗರದ ಕ್ಲಬ್‌ ರಸ್ತೆಯಲ್ಲಿ ಫಿರ್ಯಾದಿ ಬಿ.ಎಂ. ಗಿರೀಶ ಎಂಬವರು ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ಉಮೇಶ ತಂದೆ ಅಯ್ಯಣ್ಣ ಇತರೆ 4 ಜನರನ್ನು ಸೇರಿಸಿಕೊಂಡು ಫಿರ್ಯಾದಿಯ ದಾರಿ ತಡೆದು ಅವಾಚ್ಯ ಶಬ್ದಗಳಿಂದಿ ನಿಂದಿಸಿ ಕಬ್ಬಿಣದ ರಾಡಿನಿಂಡ ಹೊಡೆದು ಗಾಯಪಡಿಸಿದ್ದೂ ಅಲ್ಲದೆ ಕೈಯಿಂದ ಸಹ ಹಲ್ಲೆನಡೆಸಿ ನೋವನ್ನುಂಟು ಮಾಡಿರುವ ಬಗ್ಗೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.


Friday, August 19, 2011


ದಾರಿ ತಡೆದು ಮಹಿಳೆಯ ಮೇಲೆ ಹಲ್ಲೆ:


ದಿನಾಂಕ 18-8-2011 ರಂದು ಸೋಮವಾರಪೇಟೆ ಠಾಣಾ ಸರಹದ್ದಿನ ಖಾಸಗಿ ಬಸ್ಸು ನಿಲ್ಲಾಣದ ಕಟ್ಟಡದ ಬಳಿ ಫಿರ್ಯಾದಿ ಶ್ರೀಮತಿ ಜಯಲಕ್ಷ್ಮಿ ಎಂಬವರನ್ನು ಆರೋಪಿ ನಂದ ಎಂಬಾತ ಏಕಾಎಕಿ ಬಂದು ಫಿರ್ಯಾದಿಯ ದಾರಿ ತಡೆದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿದ್ದು, ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿ ಕ್ರಮ ಕೈಗೊಂಡಿರುತ್ತಾರೆ.


ಜಾನುವಾರು ಕಳವು, ಪ್ರಕರಣ ದಾಖಲು:


ದಿನಾಂಕ 13.8.2011 ರಂದು ಸೋಮವಾರಪೇಟೆ ಠಾಣಾ ಸರಹದ್ದಿನ ಕುಂಬಾರ ಗಡಿಗೆ ಗ್ರಾಮದ ಬೆಟ್ಟದ ಹತ್ತಿರ ಫಿರ್ಯಾದ ಸುರೇಶ ಹಾಗು ಇತರೆ 2 ಜನರ ಒಟ್ಟು 13 ಕೋಣಗಳನ್ನು ಮೇಯಲು ಬಿಟ್ಟ ಸ್ಥಳದಿಂದ ಆರೋಪಿಗಳಾದ ಕೆ.ಎಸ್‌. ಕಾರ್ಯಪ್ಪ, ಸುಬ್ರಮಣಿ, ಮುದ್ದಯ್ಯ ಹಾಗೂ ಪೊನ್ನಪ್ಪ ರವರುಗಳು ಕಳವು ಮಾಡಿಕೊಂಡು ಹೋಗಿದ್ದು ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

Wednesday, August 17, 2011


ರಸ್ತೆ ಅಪಘಾತ ವಾಹನಗಳಿಗೆ ಜಖಂ:


ದಿನಾಂಕ 16-8-2011 ರಂದು ಕೇರಳದ ಎಂ.ಇ.ಸಿಜು ಎಂಬವರು ತಮ್ಮ ಲಾರಿಯನ್ನು ತೆಗೆದುಕೊಂಡು ಕೇರಳದಿಂದ ಹಾಸನಕ್ಕೆ ಹೋಗುವಾಗ ಮಾಕುಟ್ಟದ ಮೇವುನಕೊಲ್ಲಿ ಎಂಬಲ್ಲಿ ಆರೋಪಿ ಪ್ರಶಾಂತ್‌ ಎಂಬಾತನು ತನ್ನ ಕ್ವಾಲಿಸ್‌ ಕಾರನ್ನು ಅತೀ ವೇಗ ಹಾಘೂ ಅಜಾಗರೂಕತೆಯಿಂದ ಓಡಿಸಿದ ಪರಿಣಾಮ ಕಾರು ಲಾರಿಗೆ ಡಿಕ್ಕಿಯಾಗಿ ಲಾರಿಗೂ ಮತ್ತು ಕಾರಿಗೂ ಜಖಮ ಆಗಿರುವ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.


ಪಾದಾಚಾರಿಗೆ ಕಾರು ಡಿಕ್ಕಿ, ವ್ಯಕ್ತಿಯ ದುರ್ಮರಣ:


ದಿನಾಂಕ 17-8-11 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕಣ್ಣಂಗಾಲ ಗ್ರಾಮದಲ್ಲಿ ಫಿರ್ಯಾದಿ ಬೊಪ್ಪಂಡ ಡಿ. ಸುರೇಶ ಎಂಬವರ ಚಿಕ್ಕಪ್ಪರವರಾದ ಬಿ.ಎ. ಉತ್ತಪ್ಪನವರು ತನ್ನ ಸ್ನೇಹಿತರೊಂದಿಗೆ ಮಾತನಾಡಿಕೊಂಡು ರಸ್ತೆ ಬದಿಯಲ್ಲಿ ನಿಂತಿರುವಾಗ ಆರೋಪಿ ಹೆಚ್‌.ಸತೀಶ್‌ ಎಂಬವರು ಕಾರು ಸಂ.ಕೆಎ12-ಎಂ 8280ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಉತ್ತಪ್ಪನವರಿಗೆ ಡಿಕ್ಕಿಪಡಿಸಿದ ಪರಿಣಾಮ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.


Sunday, August 14, 2011

ಆತ್ಮಹತ್ಯೆ ಪ್ರಕರಣ:
ದಿ:13.08.2011 ರಂದು ಮೃತ್ತ ಮೊಣ್ಣಪ್ಪ ನವರು ಹೆಂಡತಿಯತ್ತಿರ ಮನೆಯ ವಿಚಾರದಲ್ಲಿ ಜಗಳಮಾಡಿಕೊಂಡು ಮನೆ ಬಿಟ್ಟು ಹೋದವರು ಮನೆಗೆ ಬರದೇ ಇದ್ದು ಆದೇ ದಿನ ಸಾಯಂಕಾಲ ಪಕ್ಕ ಕಾಡಿನಲ್ಲಿ ಯಾವುದೋ ವಿಷಕುಡಿದು ಮೃತ್ತಪಟ್ಟಿರುವುದಾಗಿ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ಸೋಮವಾರಪೇಟೆ ಠಾಣೆ ದಾಖಲಿಸಿರುವುದಾಗಿದೆ.

ಆಕ್ರಮವಾಗಿ ರಾಸುಗಳನ್ನು ಸಾಗಾಟ:
ದಿ: 13-08-2011 ರಂದು ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಚೂರಿಕಾಡು ಗ್ರಾಮದಲ್ಲಿ ಕೋತುರುವಿನಿಂದ ಕೇರಳದ ಕಸಾಯಿಖಾನೆಗೆ ಸರ್ಕಾರಕ್ಕೆ ಯಾವುಧೇ ಪರವಾನಿಗೆ ಇಲ್ಲದೇ ಸಾಗಾಟ ಮಾಡುತ್ತಿದ್ದ ರಾಸುಗಳನ್ನು , ಪಿರ್ಯಾದಿ ಎಎಸ್‌ಐ ,ಮುತ್ತರವರಿಗೆ ಸಿಕ್ಕಿದ ಮಾಹಿತಿ ಮೇರೆ ಗೆ ಪೊಲೀಸ್‌ ಸಿಬ್ಬಂದಿ ಮತ್ತು ಪಂಚಾಯ್ತಿದಾರರನ್ನು ಕರೆದು ಹೋಗಿ ಆರೋಪಿ ಮತ್ತು ಟಾಟಾ ಎನ್ ವಾಹನದಲ್ಲಿ ಆಕ್ರಮ ಸಾಗಾಟ ಮಾಡುತ್ತಿದಿ್ದು 2 ರಾಸುಗಳನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಮತ್ತುಸ್ವತ್ತು ವಶಕ್ಕೆ ತೆಗೆದುಕೊಂಡು ಕುಟ್ಟ ಪೊಲೀಸ್‌ ಠಾಣೆಯಲ್ಲಿ ಪ್ರಕರನವನ್ನುದಾಖಲಿಸಿ ತನಿಖೆಯನ್ನು ಕೈಗೊಂಡಿರುವುದಾಗಿದೆ.

Saturday, August 13, 2011


ಜೀವನದಲ್ಲಿ ಜಿಗುಪ್ಸೆ ವ್ಯಕ್ತಿಯ ಆತ್ಮಹತ್ಯೆ:


ದಿನಾಂಕ 12-8-2011 ರಂದು ಸಮಯ ಸಂಜೆ 8-30 ಗಂಟೆಗೆ ಅಮ್ಮತ್ತಿ ದೂರವಾಣಿ ಇಲಾಖೆಯ ವಸತಿ ಗೃಹದಲ್ಲಿ ವಾಸವಾಗಿದ್ದ ಮಲೆಯಾಳಿ ರಾಧಾಕೃಷ್ಣ ನಾಯರ್‌ ಎಂಬವರು ಜೀವನ್ಲದಲಿ ಜಿಗುಪ್ಸೆಗೊಂಡು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.


ಹಣದ ವಿಚಾರದಲ್ಲಿ ಕತ್ತಿಯಿಂದ ಕಡಿದು ವ್ಯಕ್ತಿಯ ಕೊಲೆ:


ದಿನಾಂಕ 12-8-11 ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮೇಕೇರಿ ಗ್ರಾಮದಲ್ಲಿ ಆರೋಪಿ ಬೋಪಣ್ಣ ಎಂಬಾತನು ಚಿನ್ನದ ಸರದ ವಿಚಾರಲ್ಲಿ ಲೋಹಿತ ಎಂಬಾತನ್ನು ತನ್ನ ಮನೆಗೆ ಕರೆದುಕೊಂಡು ಬಂದು ಕತ್ತಿಯಿಂದ ಕುತ್ತಿಗೆ ಭಾಗಕ್ಕೆ ಕಡಿದು ಕೊಲೆ ಮಾಡಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.


Friday, August 12, 2011

ಬುದ್ದಿಮಾಂದ್ಯತೆ ಮತ್ತು ಅಂಗಲಿಕಲತೆಯಿಂದ ಜಿಗುಪ್ಸೆಗೊಂಡು ವ್ಯಕ್ತಿಯ ಆತ್ಮಹತ್ಯೆ:

ದಿನಾಂಕ 11-8-2011 ರಂದು ಶನಿವಾರಸಂತೆ ಠಾಣಾ ಸರಹದ್ದಿನ ಚೌಡೇನಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ಫಿರ್ಯಾದಿ ಶ್ರೀಮತಿ ಕವಿತರವರ ಗಂಡ ಇಂದ್ರೇಶ ಎಂಬ ವ್ಯಕ್ತಿ ಬಿದ್ದಿ ಮಾಂದ್ಯತೆ ಹಾಗೂ ಅಂಗಲಿಕಲತೆಯಿಂದ ಬಳಲುತ್ತಿದ್ದು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಅಕ್ರಮವಾಗಿ ಪ್ಲೆಕ್ಸ್‌/ಬ್ಯಾನರ್‌ಗಳ ಅನಾವರಣ, ಪ್ರಕರಣ ದಾಖಲು:

ದಿನಾಂಕ 11-8-2011 ರಂದು ಮಡಿಕೇರಿ ನಗರ ಠಾಣಾ ಸರಹದ್ದಿ ನ ಐ.ಜಿ. ವೃತ್ತ ಹಾಗೂ ತ್ಯಾಗರಾಜ ಕಾಲೋನಿಗಳಲ್ಲಿ ಆರೋಪಿಗಳಾದ ಎಂ.ಎ. ಮಹಮ್ಮದ್‌ ರಫೀಕ್‌ ಹಾಗೂ ಪಿ.ಎಫ್‌.ಐ. ಕಾರ್ಯಕರ್ತರು ಫ್ರೀಡಂ ಪೆರೇಡ್‌ನಲ್ಲಿ ಬಾಗವಹಿಸುವ ಬಗ್ಗೆ ನಗರಸಭೆಯ ಅನುಮತಿ ಪಡೆಯದೇ ಪ್ಲೆಕ್ಸ್‌/ಬ್ಯಾನರ್‌ಗಳನ್ನು ಕಟ್ಟಿದ್ದು, ಮಡಿಕೇರಿ ಪೊಲೀಸರು ಈ ಬಗ್ಗೆ ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Wednesday, August 10, 2011


ಮೋಟಾರ್‌ ಸೈಕಲ್‌ಗೆ ಲಾರಿ ಡಿಕ್ಕಿ, ಸವಾರನಿಗೆ ಗಾಯ:


ದಿನಾಂಕ 9-8-2011 ರಂದು ವಿರಾಜಪೇಟೆ ನಗರ ಠಾಣಾ ಸರಹದ್ದಿನ ಮಟನ್‌ ಮಾರ್ಕೆಟ್‌ ಏಕಮುಕ ರಸ್ತೆಯಲ್ಲಿ ಫಿರ್ಯಾದಿ ನಂಬುಡಮಾಡ ಲಾಲ ಎಂಬವರು ಮೋಟಾರ್‌ ಸೈಕಲ್‌ನಲ್ಲಿ ಹೋಗುತ್ತಿರುವಾಗ ಹಿಂಬದಿಯಿಂದ 709ರ ಕೆಎ 19 ಎ 6767ರ ಲಾರಿ ಚಾಲಕ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿ ಮೋಟಾರ್‌ ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಫಿರ್ಯಾದಿಯ ಬಲಕಾಲಿನ ತೊಡೆಯಬಾಗಕ್ಕೆ ಮತ್ತು ಮಂಡಿಗೆ ಪೆಟ್ಟಾಗಿದ್ದು, ವಿರಾಜಪೇಟೆ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.


ಶ್ರೀಗಂಧದ ಮರ ಕಳವು ಪ್ರಕರಣ ದಾಖಲು:


ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕುಂಜಿಲಗೇರಿ ಗ್ರಾಮದ ಬೊಟ್ಲಪ್ಪ ದೇವರ ಬೆಟ್ಟದಲ್ಲಿದ್ದ ಶ್ರೀಗಂಧದ ಮರಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇದರ ಬೆಲೆ ಅಂದಾಜು ರೂ.15,000/- ಗಳಾಬಹುದೆಂದು ಫಿರ್ಯಾದಿ ಕೆ.ಎಂ. ಅಯ್ಯಪ್ಪ, ಅಧ್ಯಕ್ಷರು, ಕುಂಜಿಲಗೇರಿ ದೇವಸ್ಥಾನಗಳ ಯೂನಿಯನ್‌, ಬೆಳ್ಳುಮಾಡು ರವರು ದೂರನ್ನು ನೀಡಿದ್ದು, ಅದರಂತೆ ವಿರಜಾಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.


ಅಕ್ರಮ ಜಾನುವಾರುಗಳ ಸಾಗಾಟ, ಪ್ರಕರಣ ದಾಖಲು:


ದಿನಾಂಕ 9-8-2011 ರಂದು ಸಮಯ 20-00 ಗಂಟೆಗೆ ಫಿರ್ಯಾದಿ ಎನ್‌.ಎನ್‌. ರಾಮರೆಡ್ಡಿ, ಪಿಎಸ್‌ಐ ಪೊನ್ನಂಪೇಟೆ ಠಾಣೆ ಇವರಿಗೆ ದೊರೆತ ಖಚಿತ ವರ್ತಮಾದ ಮೇರೆಗೆ ತಿತಿಮತಿ ಜೂನಿಯರ್‌ ಕಾಲೇಜು ಬಳಿ ಅಕ್ರಮವಾಗಿ ಸರಕಾರದ ಪರವಾನಗಿ ಇಲ್ಲದೇ ಆರೋಪಿಗಳಾದ ಬಾಕಾಶ್‌, ಹುಣಸೂರು, ಅಮೀಲ್‌, ಹುಣಸೂರು ಹಾಗೂ ಸೈದು, ಹುಣಸೂರು ರವರುಗಳು ಕೆಎ-2, 5759ರ ಈಚರ್‌ ಲಾರಿಯಲ್ಲಿ ಜಾನುವಾರುಗಳನ್ನು ತುಂಬಿಸಿ ಕೇರಳದ ಖಸಾಯಿ ಖಾನೆಗೆ ಸಾಗಿಸುತ್ತಿದ್ದುದನ್ನು ಪತ್ತೆಹಚ್ಚಿ ಆರೋಪಿಗಳನ್ನು ಹಾಗೂ ಜಾನುವಾರುಗಳನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಜರುಗಿಸಿರುತ್ತಾರೆ.


Monday, August 8, 2011


ಕಾಡಾನೆ ದಾಳಿ ವ್ಯಕ್ತಿಯ ದುರ್ಮರಣ:


ಪೊನ್ನಂಪೇಟೆ ಠಾಣಾ ಸರಹದ್ದಿನ ನಿಟ್ಟೂರು ಗ್ರಾಮದಲ್ಲಿ ವಾಸವಾಗಿರುವ ಫಿರ್ಯಾದಿ ಕಳ್ಳಿಚಂಡ ಟಿ. ದೀಪಕ್‌ ರವರ ತಂದೆ ಎನ್‌. ತಮ್ಮಯ್ಯ ಎಂಬವರು ಪ್ರತಿ ದಿನದಂತೆ ಬೆಳಿಗ್ಗೆ 6-45 ಗಂಟೆಗೆ ಕಾಫಿ ತೋಟಕ್ಕೆ ಹೋಗಿದ್ದು ತೋಟದ ಸಮೀಪ ವಡ್ಡರಮಾಡು ಕಟ್ಟೆ ಎಂಬಲ್ಲಿಗೆ ತಲುಪುವಾಗ್ಗೆ ಕಾಡಾನೆಯೊಂದು ಅವರ ಮೇಲೆ ದಾಳಿ ಮಾಡಿದ ಪರಿಣಾಮ ತಮ್ಮಯ್ಯನವರು ತೀವ್ರವಾಗಿ ಗಾಯಗೊಂಡು ಅವರನ್ನು ಪೊನ್ನಂಪೇಟೆ ಆಶ್ರಮ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರು ಪರಿಶೀಲಿಸಿ ಸದರಿಯವರು ಮೃತಪಟ್ಟಿರುವ ಬಗ್ಗೆ ತಿಳಿಸಿದ್ದು, ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.


ನೇಣು ಬಿಗಿದು ವ್ಯಕ್ತಿಯ ಆತ್ಮಹತ್ಯೆ:


ದಿನಾಂಕ 8-8-11 ರಂದು ನಾಪೋಕ್ಲು ಠಾಣಾ ವ್ಯಾಪ್ತಿಯ ಕೊಳಕೇರಿ ಗ್ರಾಮದಲ್ಲಿ ಪಣಿ ಎರವರ ಖಾಲಿ ಎಂಬವರ ಮಗ ಗಣೇಶ ಎಂಬಾತನು ತನ್ನ ತಾಯಿ ಕಾಲಿ ಹಾಗು ತಂದೆ ಬೊಳ್ಳರವರು ಕುಡಿದು ಜಗಳ ಮಾಡುವ ಬಗ್ಗೆ ಮನನೊಂದು ಮನೆಯ ಮಾಡಿಗೆ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ನಾಪೋಕ್ಲು ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Friday, August 5, 2011


ಬೈಕ್‌ಗಳ ಮುಖಾಮುಖಿ ಡಿಕ್ಕಿ ಇಬ್ಬರಿಗೆ ಗಾಯ:


ದಿನಾಂಕ 4-8-2011 ರಂದು ಶನಿವಾರಸಂತೆ ಠಾಣಾ ಸರಹದ್ದಿನ ಹುಲುಸೆ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಫಿರ್ಯಾದಿ ಕೆ.ಎಸ್‌. ಗಣೇಶ ಎಂಬವರು ಮೋಟಾರ್‌ ಸೈಕಲ್‌ನಲ್ಲಿ ತನ್ನ ಪತ್ನಿಯೊಂದಿಗೆ ಪ್ರಯಾಣಿಸುತ್ತಿದ್ದಾಗ ಎದುಗಡೆಯಿಂದ ಆರೋಪಿ ಕೆಎ-12 ಜೆ-9316ರ ಸವಾರ ತನ್ನ ಮೋಟಾರ್‌ ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿ ಫಿರ್ಯಾದಿಯ ಬೈಕ್‌ಗೆ ದಿಕ್ಕಿಪಡಿಸಿದ ಪರಿಣಾಮ ಫಿರ್ಯಾದಿ ಹಾಗೂ ಅವರ ಪತ್ನಿಗೆ ಗಾಯಗಳಾಗಿದ್ದು, ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.


ಭಾರೀ ಮಳೆಗೆ ಮನೆಯ ಗೋಡೆ ಕುಸಿದು ವ್ಯಕ್ತಿಯ ದುರ್ಮರಣ:


ಈ ದಿನ ದಿನಾಂಕ 5-8-2011 ರಂದು ರಾತ್ರಿ 10-15 ಗಂಟೆಗೆ ಮಡಿಕೇರಿ ನಗರ ಠಾಣಾ ಸರಹದ್ದಿನ ಮಂಗಳ ದೇವಿ ನಗರದಲ್ಲಿ ವಾಸವಾಗಿರುವ ಫಿರ್ಯಾದಿ ಜೆಸಿತ ರವರು ತಮ್ಮ ತಂದೆ, ತಾಯಿ ಹಾಗೂ ತಮ್ಮ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಬಾರೀ ಮಳೆಗೆ ಮನೆಯ ಗೋಡೆ ಕುಸಿದು ಫಿರ್ಯಾದಿ ಹಾಗೂ ಅವರ ತಮ್ಮ ಪ್ರದೀಪ್‌ರವರ ಮೈಮೇಲೆ ಬಿದ್ದು ತೀವ್ರ ಗಾಯಗಳಾಗಿ ಪ್ರದೀಪ ಸ್ಥಳದಲ್ಲಿಯೇ ಮೃತಪಟ್ಟು, ಫಿರ್ಯಾದಿ ಜೆಸಿತ ರವರು ಸಹ ತೀವ್ರ ಗಾಯಗೊಂಡಿದ್ದು, ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Wednesday, August 3, 2011

ಜೀವನದಲ್ಲಿ ಜುಗುಪ್ಸೆ, ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ  • ಜೀವನದಲ್ಲಿ ಜುಗುಪ್ಸೆಗೊಂಡ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾಗಮಂಡಲ ಠಾಣಾ ವ್ಯಾಪ್ತಿಯ ಬಿ. ಬಾಡಗ ಗ್ರಾಮದಲ್ಲಿ ನಡೆದಿದೆ. ದಿನಾಂಕ 2/8/2011 ರಂದು ಬಿ.ಬಾಡಗ ಗ್ರಾಮದ ನೇತ್ರಾವತಿ ಎಂಬವರ ಪತಿ ಸುಂದರೇಶರವರು ಜೀವನದಲ್ಲಿ ಜುಗುಪ್ಸೆ ಹೊಂದಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ

ಕೊಲೆ ಬೆದರಿಕೆ ಪ್ರಕರಣ  • ವ್ಯಕ್ತಿಯೋರ್ವರ ಗದ್ದೆಗೆ ಅಕ್ರಮ ಪ್ರವೇಶ ಮಾಡಿ ಕೊಲೆ ಬೆದರಿಕೆ ಹಾಖಿರುವ ಘಟನೆ ಭಾಗಮಂಡಲ ಠಾಣಾ ವ್ಯಾಪ್ತಿಯ ಅಯ್ಯಂಗೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 01/08/2011ರಂದು ಅಯ್ಯಂಗೇರಿ ಗ್ರಾಮದ ಬೊಳಿಯಾಡಿರ ದೇವಯ್ಯ ಎಂಬವರು ತಮ್ಮ ಗದ್ದೆಯಲ್ಲಿ ಕೆಲಸ ಮಾಡಿಕೊಂಡಿರುವಾಗ ಆರೋಪಿ ಉದ್ದುಮಾಡಂಡ ಹರೀಶ ಎಂಬವರು ದೇವಯ್ಯನವರ ಗದ್ದೆಗೆ ಅಕ್ರಮ ಪ್ರವೇಶ ಮಾಡಿ ದನ ಕಟ್ಟುವ ವಿಚಾರದಲ್ಲಿ ಜಗಳವಾಡಿ ದೇವಯ್ಯನವರನ್ನು ಅಶ್ಲೀಲ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುವ ಕುರಿತು ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, August 1, 2011

ಮನೆ ನುಗ್ಗಿ ಚಿನ್ನಾಭರಣ ಕಳವು  • ಮನೆ ನುಗ್ಗಿ ಚಿನ್ನಾಭರಣ ಕಳವು ಮಾಡಿರುವ ಘಟನೆ ಕುಶಾಲನಗರ ಠಾಣಾ ವ್ಯಾಪ್ತಿಯ ದೊಡ್ಡತ್ತೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 31/07/2011ರಂದು ದೊಡ್ಡತ್ತೂರು ಗ್ರಾಮದ ರಾಮೇಗೌಡ ಎಂಬವರು ತಮ್ಮ ಪತ್ನಿ ಪಾರ್ವತಮ್ಮ ಎಂಬವರೊಂದಿಗೆ ಅಳುವಾರ ಗ್ರಾಮದಲ್ಲಿರುವ ಜಮೀನಿಗೆ ಕೆಲಸದವರೊಂದಿಗೆ ಹೋಗಿ ಸಂಜೆ ವಾಪಾಸು ಮನೆಗೆ ಬಂದು ನೋಡುವಾಗ್ಗೆ ಯಾರೋ ಅಪರಿಚಿತ ಕಳ್ಳರು ಮನೆ ನುಗ್ಗಿ ಮನೆಯ ಆಲ್ಮೆರಾದೊಳಗಿರುವ ನಗದು ಹಾಗೂ ಚಿನ್ನಾಭರಣಗಳು ಸೇರಿದಂತೆ ಒಟ್ಟು ರೂ.23,000/- ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.