Monday, August 29, 2011


ರಸ್ತೆ ಅಪಘಾತ ವ್ಯಕ್ತಿಯ ದುರ್ಮರಣ:


ದಿನಾಂಕ 26-8-2011 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಮಾಕುಟ್ಟ ಎಂಬಲ್ಲಿ ಫಿರ್ಯಾದಿ ಟಿ.ಎ. ಸುರೇಶ್‌ ಕುಮಾರ್‌ ಹಾಗೂ ಮೊಹಿದ್ದೀನ್‌ ಕುಟ್ಟಿ ಎಂಬವರು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ಕೆ-12 ಎನ್‌ 6730 ರ ಚಾಲಕ ಸದರಿ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ ಮೊಹಿದ್ದೀನ್‌ ಕುಟ್ಟಿರವರರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರಿಗೆ ತೀವ್ರ ಗಾಯಗಳಾಗಿದ್ದು ಚಿಕಿತ್ಸೆಗೆ ಕೇರಳದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಚಿಕಿತ್ಸೆಯ ಸಮಯದಲ್ಲಿ ಮೊಹಿದ್ದೀನ್‌ ಕುಟ್ಟಿರವರು ಮೃಲಪಟ್ಟಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.


ಆಟೋ ರಿಕ್ಷಾ ಡಿಕ್ಕಿ ವ್ಯಕ್ತಿಗೆ ಗಾಯ:


ದಿನಾಂಕ 29-8-2011 ರಂದು ಸೋಮವಾರಪೇಟೆ ಠಾಣಾ ಸರಹದ್ದಿನ ಸೋಮವಾರಪೇಟೆ ನಗರದಲ್ಲಿ ಫಿರ್ಯಾದಿ ಜಿ.ಎಸ್‌. ರಮೇಶ್ ಎಂಬವರಿಗೆ ಆರೋಪಿ ನಾಗರಾಜ ಕೆ.ಎ12-ಎ 1599ರ ಆಟೋ ಚಾಲಕ ಸದರಿ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ ಫಿರ್ಯಾದಿಗೆ ಡಿಕ್ಕಿ ಪಡಿಸಿದ ಪರಿಣಾಮ ಫಿರ್ಯಾದಿ ಗಾಯಗೊಂಡಿದ್ದು, ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.