Tuesday, August 23, 2011


ಮಹಿಳೆ ಮೇಲೆ ದೌರ್ಜನ್ಯ:


ಫಿರ್ಯಾದಿ ಶ್ರೀಮತಿ ಎಸ್‌.ಬಿ. ತನ್ಮಯಿ 2009 ರಲ್ಲಿ ಮೋಹನ್‌ ಕುಶಾಲಪ್ಪರವರನ್ನು ಮದುವೆಯಾಗಿದ್ದು, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಫಿರ್ಯಾದಿಯ ಗಂಡ ಕುಶಾಲಪ್ಪ ವೇತನದ ಹಣವನ್ನು ಪಡೆಯುತ್ತಿದ್ದು ಫಿರ್ಯಾದಿಗೆ ಹಣ ಕೊಡಡೆ ತವರು ಮನೆಯಿಂದ ಹಣ ತರುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡುತ್ತಿದ್ದುದರಿಂದ ಫಿರ್ಯಾದಿ ಕೆಲಸವನ್ನು ಬಿಟ್ಟು ತವರು ಮನೆಗೆ ಹೋಗಿ ನೆಲೆಸಿದ್ದು ಫಿರ್ಯಾದಿಯು ಅಲ್ಲಿಗೂ ಹೋಗಿ ತವರು ಮನೆಯಿಂದ ಹಣವನ್ನು ತಂಡು ಕೊಡು ಇಲ್ಲದೇ ಇದ್ದರೆ ನಿನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿರುವ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.


ವ್ಯಕ್ತಿಯ ದಾರಿ ತಡೆದು ಹಲ್ಲೆ:


ದಿನಾಂಕ 22-8-2011 ರಂದು ಸೋಮವಾರಪೇಟೆ ಠಾಣೆ ಸರಹದ್ದಿನ ಸೋಮವಾರಪೇಟೆ ನಗರದ ಕ್ಲಬ್‌ ರಸ್ತೆಯಲ್ಲಿ ಫಿರ್ಯಾದಿ ಬಿ.ಎಂ. ಗಿರೀಶ ಎಂಬವರು ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ಉಮೇಶ ತಂದೆ ಅಯ್ಯಣ್ಣ ಇತರೆ 4 ಜನರನ್ನು ಸೇರಿಸಿಕೊಂಡು ಫಿರ್ಯಾದಿಯ ದಾರಿ ತಡೆದು ಅವಾಚ್ಯ ಶಬ್ದಗಳಿಂದಿ ನಿಂದಿಸಿ ಕಬ್ಬಿಣದ ರಾಡಿನಿಂಡ ಹೊಡೆದು ಗಾಯಪಡಿಸಿದ್ದೂ ಅಲ್ಲದೆ ಕೈಯಿಂದ ಸಹ ಹಲ್ಲೆನಡೆಸಿ ನೋವನ್ನುಂಟು ಮಾಡಿರುವ ಬಗ್ಗೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.