ರಸ್ತೆ ಅಪಘಾತ:
ದಿ:3-9-2011 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಅಮ್ಮತ್ತಿ ಗ್ರಾಮದ ಕುಂಬೇರಿ ಎಂಬಲ್ಲಿ ಪಿರ್ಯಾದಿ ಶ್ರೀಮತಿ ಪಾರ್ವತಿ ರವರು ತನ್ನ ಮಕ್ಕಲೊಂದಿಗೆ ತನ್ನ ಅಣ್ಣನ ಮನೆಗೆ ಹೋಗಲೆಂದು ನಡೆದುಕೊಂಡು ಹೋಗುತ್ತಿರುವಾಗ ಬಿಳಿ ಬಣ್ಣದ ಕಾರಿನ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಸದರಿ ಪಿರ್ಯಾದಿರವರ ಮಗನಿಗೆ ಡಿಕ್ಕಿ ಪಡಿಸಿದ ಪರಿಣಾಮ ಫಾರ್ವತಿ ಮತ್ತು ಮಗನಿಗೆ ತಲೆ ತೊಡೆ, ಶರೀರಕ್ಕೆ ಗಾಯವಾಗಿದ್ದು ಕೊಟ್ಟ ಪುಕಾರಿನ್ವಯ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವನ್ನುದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.
ಆತ್ನಹತ್ಯೆಯ ಪ್ರಕರಣ:
ದಿ:02-09-2011 ರಂದು ಭಾಗಮಂಡಲ ಠಾಣಾ ವ್ಯಾಪ್ತಿಯ ಕುಂದಚೇರಿ ಗ್ರಾಮದ ನಿವಾಸಿ ಪಿರ್ಯಾದಿ ಸುಶೀಲಮ್ಮ ಮಗಳು ಸುನೀತಳು ಜೀವನದಲ್ಲಿ ಜಿಗುಪ್ಸೆ ಪಟ್ಟುಕೊಂಡು ಕುತ್ತಿಗೆಗೆ ವೇಲಿನಿಂದ ಬಿಗಿದು ಅತ್ಮಹತ್ಯೆ ಮಾಡಿಕೊಂಡಿವುದಾಗಿ ಕೊಟ್ಟ ಪುಕಾರಿನ್ವಯ ಭಾಗಮಂಡಲಠಾಣೆ ಯಲ್ಲಿ ಪ್ರಕರಣವನ್ನು ದಾಖಲಿಸಿರುವುದಾಗಿದೆ.
