Friday, October 28, 2011

ಕಲ್ಲಿನ ಮೇಲೆ ಆಕಸ್ಮಿಕ ಬಿದ್ದು ವ್ಯಕ್ತಿಯ ದುರ್ಮರಣ:


ದಿನಾಂಕ 27-10-2011 ರಂದು ನಾಪೋಕ್ಲು ಪೊಲೀಸ್‌ ಠಾಣಾ ಸರಹದ್ದಿನ ಚೆರಿಯಪರಂಬು ಬೇತು ಗ್ರಾಮದ ನಿವಾಸಿ ಫಿರ್ಯಾದಿ ಚಂದ್ರಶೇಖರ ಎಂಬವರ ಸಹೋದರನಾದ ಸುರೇಶ ಎಂಬಾತನು ಪಾನಮತ್ತನಾಗಿ ಸ್ನಾನ ಮಾಡುಯತ್ತಿದುವ ಸಂದರ್ಭದಲ್ಲಿ ಆತಸ್ಮಕವಾಗಿ ಕಲ್ಲಿನ ಮೇಲೆ ಬಿದ್ದ ಪರಿಣಾಮ ತೀವ್ರ ತರಹದ ಪೆಟ್ಟಾಗಿ ಮೃತಪಟ್ಟಿರುವ ಬಗ್ಗೆ ನಾಪೋಕ್ಲು ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.


ಮಾರುತಿ ಕಾರು ಮತ್ತು ಕೆ.ಎಸ್‌.ಆರ್‌ಟಿ ಸಿ ಬಸ್ಸು ಮುಖಾಮುಖಿ ಡಿಕ್ಕಿ ವ್ಯಕ್ತಿಗೆ ಗಾಯ:


ದಿನಾಂಕ 27-10-2011 ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ದೇವರಕೊಲ್ಲಿ ಗ್ರಾಮದ ಬಳಿ ಫಿರ್ಯಾದಿ ರ್ಶರೀ ಹರೀಶ್‌ ಎಂಬವರು ತಮ್ಮ ಮಾರುತಿ ಕಾರಿನಲ್ಲಿ ಮಂಗಳೂರಿನಿಂದ ಮಡಿಕೇರಿ ಕಡೆಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಎದುರುಗಡೆಯಿಂದ ಬಂದಂತಹ ಕೆ.ಎಸ್‌.ಆರ್‌.ಟಿ. ಸಿ ಬಸ್ಸಿನ ಚಾಲಕ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿದ ಪರಿಣಾಮವಾಗಿ ಬಸ್ಸು ಮಾರುತಿ ಕಾರಿಗೆ ಡಿಕ್ಕಿಯಾಗಿ ಫಿರ್ಯಾದಿಯ ಎದೆ ಹಾಗೂ ಕಾಲುಗಳಿಗೆ ನೋವು ಉಂಟಾಗಿದ್ದು ಅಲ್ಲದೆ ಕಾರು ಭಾಗಶಃ ಜಖಂಗೊಂಡಿದ್ದು ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.


ಹೆಣ್ಣು ಕಾಡಾನೆಯ ಸಂಶಯಾಸ್ಪದ ಸಾವು, ಪ್ರಕರಣ ದಾಖಲು:


ದಿನಾಂಕ 27-10-2011 ರಂದು ಕುಶಾಲನಗರ ಠಾಣಾ ಸರಹದ್ದಿನ ಚಿಕ್ಕಬೆಟ್ಟಗೇರಿ ಗ್ರಾಮದ ಆನೆಕಾಡು ಮೀಸಲು ಅರಣ್ಯದಲ್ಲಿ ಒಂದು ಕಾಡು ಹೆಣ್ಣಾನೆಯು ಸಾವನ್ನಪ್ಪಿದ್ದು ಇದು ಸದರಿ ಗ್ರಾಮದ ಮಾಚಯ್ಯ ಹಾಗೂ ಕಲ್‌ವೀರ್‌ ಎಂಬವರುಗಳ ಜೋಳದ ಹೊಲದಲ್ಲಿ ಅಳವಡಿಸಿದ ವಿದ್ಯುತ್‌‌ ತಂತಿಗೆ ಆನೆಯ ಸೊಂಡಿಲು ಸುತ್ತಿಕೊಂಡು ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟಿರಬಹುದೆಂದು ಸಂಶಯದಿಂದ ಫಿರ್ಯಾದಿ ಕಮಲಾಕ್ಷ, ವನಪಾಲಕ, ಕುಶಾಲನಗರ ಶಾಖೆ, ಕುಶಾಲನಗರ ಅರಣ್ಯ ವಲಯ ಇವರು ನೀಡಿದ ದೂರಿನ ಆದಾರದ ಮೇಲೆ ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

Monday, October 24, 2011

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ:


ದಿನಾಂಕ 22-10-2011 ರಂದು ಶನಿವಾರಸಂತೆ ಪೊಲೀಸ್‌ ಠಾಣಾ ವ್ಯಾಪ್ತಿಯ ಒಡ್ಡರಕೊಪ್ಪಲು ಗ್ರಾಮದ ನಿವಾಸಿ ಎನ್.ಎಸ್‌. ದಾಸಯ್ಯ ಎಂಬವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ದಾರಿಯಲ್ಲಿ ನಿಂತಿದ್ದ ಆರೋಪಿ ದಿವಾ, ಶಿವ, ರವಿ, ಸಣ್ಣಯ್ಯ ಮತ್ತು ವಾಸುದೇವ ಎಂಬವರು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ದೊಣ್ಣೆಯಿಂದ ಹಲ್ಲೆನಡೆಸಿ ನೋವನ್ನುಂಟು ಮಾಡಿರುವ ಬಗ್ಗೆ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿರುತ್ತಾರೆ.


ದಿನಾಂಕ 22-10-2011 ರಂದು ಶನಿವಾರಸಂತೆ ಪೊಲೀಸ್‌ ಠಾಣಾ ವ್ಯಾಪ್ತಿಯ ರಾಮೇನಹಳ್ಳಿ ಗ್ರಾಮದ ಕುಮಾರ ಎಂಬವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ದಾರಿಯಲ್ಲಿ ನಿಂತಿದ್ದ ಆರೋಪಿ ಆನಂದ , ಅರುಣ, ಸತೀಶ ಎಂಬವರು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ದೊಣ್ಣೆಯಿಂದ ಹಲ್ಲೆನಡೆಸಿ ರಕ್ತಗಾಯ ಪಡಿಸಿರುವ ಬಗ್ಗೆ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿರುತ್ತಾರೆ.


Sunday, October 23, 2011

ವಾಹನ ಅಫಘಾತ, ಬೈಕ್ ಸವಾರನಿಗೆ ಗಾಯ.  • ಕಾರು ಹಾಗೂ ಮೋಟಾರು ಸೈಕಲ್ ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಾಯಗಳಾದ ಘಟನೆ ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಕೈಕೇರಿಯಲ್ಲಿ ನಡೆದಿದೆ. ದಿನಾಂಕ 22/10/2011ರಂದು ಕೈಕೇರಿಯ ಪಡಿಕಲ್ ಜಂಕ್ಷನ್ ಬಳಿ ಕಳತ್ಮಾಡು ಗ್ರಾಮದ ಸತೀಶ್ ಎಂಬವರು ಅವರ ಕಾರಿನಲ್ಲಿ ಗೋಣಿಕೊಪ್ಪದ ಕಡೆಗೆ ಬರುತ್ತಿರುವಾಗ ಅರುತೊಕ್ಲು ಗ್ರಾಮದ ಶರತ್ ಎಂಬಾತನು ಆತನ ಮೋಟಾರು ಸೈಕಲ್ ಸಂ.ಕೆಎ-16-ಹೆಚ್-4652ನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕಾರಿನ ಬಲ ಭಾಗಕ್ಕೆ ಡಿಕ್ಕಿಪಡಿಸಿದ ಪರಿಣಾಮ ಕಾರಿಗೆ ಹಾನಿಯುಂಟಾಗಿದ್ದು, ಬೈಕ್ ಸವಾರ ಶರತ್‌ಗೂ ಸಹ ಗಾಯಗಳಾದ ಬಗ್ಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆಸ್ತಿ ವಿವಾದದಲ್ಲಿ ಮಹಿಳೆಯ ಮೇಲೆ ಹಲ್ಲೆ, ಕೊಲೆ ಬೆದರಿಕೆ
  • ಆಸ್ತಿ ವಿವಾದದಿಂದ ತಮ್ಮನೇ ಅಕ್ಕನ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಕುಶಾಲನಗರ ಠಾಣಾ ವ್ಯಾಪ್ತಿಯ ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 21/10/2011ರಂದು ರಾತ್ರಿ ಚಿಕ್ಕಬೆಟ್ಟಗೇರಿ ಗ್ರಾಮದ ನಿವಾಸಿ ಸಿ.ಕೆ.ಗಣೇಶ ಎಂಬಾತನು ತನ್ನ ಅಕ್ಕ ಸಿ.ಕೆ.ಪಾರ್ವತಿ ಎಂಬಾಕೆಯೊಂದಿಗೆ ಆಸ್ತಿ ವಿಚಾರದಲ್ಲಿ ಜಗಳವಾಡಿ ಕೈಯಿಂದ ಆಕೆಯ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನಗರ ಸಭಾಧ್ಯಕ್ಷರಿಗೆ ದೂರವಾಣಿ ಮೂಲಕ ನಿಂದನೆ, ಬೆದರಿಕೆ
  • ದಿನಾಂಕ 22/10/2011ರಂದು ಮಡಿಕೇರಿ ನಗರ ಸಭಾಧ್ಯಕ್ಷ ಹೆಚ್‌.ಎಂ.ನಂದಕುಮಾರ್‌ರವರಿಗೆ ಅಪರಿಚಿತ ವ್ಯಕ್ತಿಯೋರ್ವ ದೂರವಾಣಿ ಮೂಲಕ ಅಶ್ಲೀಲ ಶಬ್ದಗಳಿಂದ ವಿನಾಕಾರಣ ನಿಂದಿಸೆ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನಂಬಿಕೆ ದ್ರೋಹ, ಪ್ರಕರಣ ದಾಖಲು
  • ಮಡಿಕೇರಿಯ ಕಾವೇರಿ ಹಾಲ್ ಮುಂಭಾಗದಲ್ಲಿರುವ ಅರಸ್ ಕಾರ್ ಸರ್ವೀಸ್ ಸೆಂಟರ್ ನಲ್ಲಿ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡಿಕೊಂಡಿದ್ದ ಅನೀಶ್‌ ಪೂವಯ್ಯ ಎಂಬಾತನು ವಿವಿಧ ಗ್ರಾಹಕರಿಂದ ಕಾರ್ ಖರೀದಿಸುವ ಬಗ್ಗೆ ಮುಂಗಡವಾಘಿ ಹಣ ಪಡೆದುಕೊಂಡು ಅದನ್ನು ಸಂಸ್ಥೆಗೆ ಪಾವತಿಸದೆ ಸುಮಾರು ರೂ 14 ಲಕ್ಷದಷ್ಟು ಹಣಕ್ಕೆ ಮೋಸ ಮಾಡಿರುವುದಾಗಿ ಸದ್ರಿ ಸಂಸ್ಥೆಯ ವ್ಯವಸ್ಥಾಪಕ ಅಪ್ಪಣ್ಣ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.Saturday, October 22, 2011


ಅಕಸ್ಮಿಕ ಮರಣ
ದಿ: 21-10-2011 ರಂದು ವಿರಾಜಪೇಟೆ ನಗರ ಠಾಣಾ ವ್ಯಾಪ್ತಿಯ ಮೂರ್ನಾಡ್‌ ಜಂಕ್ಷನ್‌ ಹತ್ತಿರ ಫಿರ್ಯಾದಿಯವರಾದ ಕೆ.ಎನ್‌ ಸುಚಿತ್‌ ತಮ್ಮ ಬಾಪ್ತು ಹೋಟೇಲ್‌ನ ಕ್ಯಾಶ್‌ ಕೌಂಟರ್‌ನಲ್ಲಿ ಕುಳಿತುಕೊಂಡಿರುವಾಗ್ಗೆ ಹೋಟೇಲ್‌ ಪಕ್ಕದಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯು ಗೋಡೆಗೆ ಒರಗಿ ಮಲಗಿರುವುದು ಕಂಡು ಬಂದಿದ್ದು ಸಾರ್ವಜನಿಕರು ಅವರನ್ನು ನೋಡುತ್ತಿದ್ದು, ಫಿರ್ಯಾದಿಯವರು ಸಹ ಹತ್ತಿರ ಹೋಗಿ ನೋಡುವಾಗ್ಗೆ ಸದರಿ ವ್ಯಕ್ತಿಯು ಮೃತ್ತಪಟ್ಟಿದ್ದು ಆತನ ಜೇಬಿನಿಂದ ಕೆಳಗೆ ಬಿದ್ದಿದ್ದ ಚೀಟಿಯನ್ನು ನೋಡಲಾಗಿ ವಿರಾಜಪೇಟೆ ಸರ್ಕಾರಿ ಅಸ್ಪತ್ರೆ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದು ಚೀಟಿಯಾಗಿದ್ದು ಸದರಿ ಚೀಟಿಯಲ್ಲಿ ಜಯದೇವ ಗೌಸ್‌ ಪ್ರಾಯ 53 ವರ್ಷ ಎಂದು ಬರೆದಿದ್ದು ಕಂಡುಬಂದಿದ್ದು ಸದರಿ ಮೃತ್ತ ವ್ಯಕ್ತಿ ಕಾಯಿಲೆಯಿಂದ ಅಥವಾ ಹೃದಯಾಘಾತದಿಂದ ಮೃತ್ತ ಪಟ್ಟಿರುವ ಬಗ್ಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ
ಅತ್ನಹತ್ಯೆಯ ಪ್ರಕರಣ
ದಿ: 20-10-2011 ರಂದು ವಿರಾಜಪೇಟೆ ಗ್ರಾಮಾಂತರ ಠಾಣೆಯ ಮೈತಾಡಿ ಗ್ರಾಮದ ನಿವಾಸಿ ಐಚ್ಚೆಟ್ಟಿರ ಸುಬ್ಬಯ್ಯನವರ ಲೈನ್‌ ಮನೆಯಲ್ಲಿ ವಾಸ ಮಾಡಿಕೊಂಡಿದ್ದ ಮಂಜ ಎಂಬಾತನು ಮದ್ಯಪಾನ ಮಾಡಿಕೊಂಡು ಬಂದು ಹೆಂಡತಿಯೊಂದಿಗೆ ಜಗಳ ಮಾಡಿದ್ದು, ಹೆಂಡತಿ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಪಕ್ಕದ ಮನೆಗೆ ಹೋಗಿದ್ದು ಈ ಕಾರಣದಿಂದ ಮಂಜ ಎಂಬಾತನು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು,ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ
ದಿ:21-10-2011 ರಂದು ಪೊನ್ನಂಪೇಟೆಯ ವ್ಯಾಪ್ತಿಯ ಬಿಳೂರು ಮಸೀದಿಯಹತ್ತಿರ ಪಿರ್ಯಾದಿರವರಾದ ರಹೀಂರವರು ವ್ಯವಸಾಯ ವೃತ್ತಿ ಮಾಡಿಕೊಂಡು ಜೀವನ ಸಾಗುಸುತ್ತಿರುವುದಾಗಿದೆ. ರಹೀಂರವರು ಸೈಕಲನ್ನು ತೆಗೆದುಕೊಂಡು ಪ್ರಾರ್ಥನೆಗೊಂದು ಮಸೀದಿಗೆ ಬರುತ್ತಿದ್ದ ಸಮಯದಲ್ಲಿ ಒಂದು ಸಿಲ್ವರ್‌ ಅಲ್ಟೋ ಕೆ.ಎ 12 ಪಿ ಸುರೇಶ ನ್ನು ಕಾರು ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಅವರ ಸೈಕಲ್‌ ಗೆ ಡಿಕ್ಕಿ ಪಡಿಸಿದ ಪರಿಣಾಮ ಅವರಿಗೆ ರಕ್ತಮಯಗಾಯವಾಗಿದ್ದು ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

ಕಾಣೆಯಾದ ಹುಡುಗಿ:
ದಿ: 21-10-2011 ರಂದು ಮಡಿಕೇರಿ ನಗರ ಠಾಣಾ ವ್ಯಾಪ್ತಿ ಚಾಮುಂಡೇಶ್ವರಿ ನಗರ ದ ಎಂ.ಜಿ ಜೀನತ್‌ ರವರ ಮಗಳು ಎಂಎಸ್‌ ಹಾಜಿರ ತಂದೆ ಸಮಿಉಲ್ಲ ಪ್ರಾಯ22 ವರ್ಷ ಎಂಬವಳು ಎಂದಿನಂತೆ ಟೈಲರಿಂಗ್‌ ಕ್ಲಾಸ್‌ ಗೆಂದು ಹೋದವಳು ಸಂಜೆಯಾದರು ವಾಪಾಸ್ಸು ಮನೆಗೆ ಬಂದಿರುವುದಿಲ್ಲ ಎಲ್ಲಾ ನೆಂಟರಿಷ್ಟರ ಮನೆಗಳಲ್ಲಿ ಮತ್ತು ಸ್ನೇಹಿತರ ಮನೆಗಳಲ್ಲಿ ವಿಚಾರಿಸಿದ್ದಲ್ಲು ಈವರೆಗೆ ಪತ್ತೆಯಾಗದೇ ಇದ್ದು ಈ ಸಂಬಂಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಆಕಸ್ಮಿಕ ಮರಣ:


ದಿ: 21-10-2011 ರಂದು ಮಡಿಕೇರಿ ನಗರಠಾಣಾ ವ್ಯಾಪ್ತಿಯ ರೇಸುಕೋಸ್‌ ರಸ್ತೆಯ ಇರುವ ತೋಡಿನಲ್ಲಿ ಪಿರ್ಯಾದಿ ಎಸ್‌.ಡಿ ಶಮ್ಮಿರವರ ತಾಯಿ ಸೂದನ ಸೀತಮ್ಮ ರವರು ಬಿ.ಪಿ , ಮಧುಮೇಹ ಅಲ್ಲದೇ ಹೃದಯ ಶಸ್ತ್ರಚಿಕಿತ್ಸೆಯಾಗಿದ್ದರಿಂದ ಅವರ ಮನಸ್ಸು ಸ್ಥಿಮಿತದಲ್ಲಿಲ್ಲದೆ ಜೀವನದಲ್ಲಿ ಜಿಗುಪ್ಸೆಗೊಂಡು ಬೆಳಗ್ಗಿನ ಸಮಯದಲ್ಲಿ ತೋಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ನಗರಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿರುವುದಾಗಿದೆ.
ಕಾಣೆಯಾದ ಮನುಷ್ಯ ಪ್ರಕರಣ:


ಶನಿವಾರಸಂತೆ ಠಾಣೆ ವ್ಯಾಪ್ತಿಯ ಮಾರುಕಟ್ಟೆ ಸಮೀಪ ಪಿರ್ಯಾದಿಯವರ ಪತಿ ಅರುಣಕುಮಾನು ದಿನಾಂಕ : 21-10-2011 ರಂದು ಬೆಳಿಗ್ಗೆ ಎಂದಿನಂತೆ ತನ್ನ ದಿನಸಿ ಅಂಗಡಿಗೆ ಹೋಗಿದ್ದು, ಬೆಳಿಗ್ಗೆ ತಿಂಡಿಗೆ ಮನೆಗೆ ಬಾರದ್ದರಿಂದ ಪಿರ್ಯಾದಿಯವರು ದೂರವಾಣಿ ಮುಖೇನ ವಿಚಾರಿಸುವಾಗ್ಗೆ, ಈಗ ನಾನು ಬರುವುದಿಲ್ಲ ಎಂದು ತಿಳಿಸಿದ್ದು, ಮದ್ಯಾಹ್ನ ಸಮಯ 14.00 ಗಂಟೆಗೆ ಊಟಕ್ಕೂ ಬಾರದೆ ಇದ್ದಾಗ ಈಚಲಬೀಡು ಗ್ರಾಮದ ಮೋಹನ್‌ ಎಂಬುವವರು ಪಿರ್ಯಾದಿಯವರ ಮನೆಯ ಬಳಿ ಬಂದು ಅರುಣ್‌ಕುಮಾರನು ಅಂಗಡಿಯಲ್ಲಿ ಇಲ್ಲ, ಮನೆಗೆ ಬಂದಿದ್ದಾರಾ ? ಎಂದು ವಿಚಾರಿಸಿದ್ದು, ರಾತ್ರಿಯದರೂ ಅರುಣ್‌ಕುಮಾರನು ಮನೆಗೆ ಬಂದಿರುವುದಿಲ್ಲ. ನೆಂಟರಿಷ್ಟರಲ್ಲಿ ವಿಚಾರಿಸಿದಲ್ಲೂ, ಯಾವುದೇ ಮಾಹಿತಿ ದೊರೆತಿರುವುದಿಲ್ಲ. ಈ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

Friday, October 21, 2011

ಕುಲಕ್ಷ ಕಾರಣಕ್ಕಾಗಿ ಹಲ್ಲೆ ಮತ್ತು ಜೀವ ಬೆದರಿಕೆ:
ದಿನಾಂಕ: 20-10-2011 ರಂದು 10.00 ಎ.ಎಂಗೆ ಮಡಿಕೇರಿ ಗ್ರಾಮಾಂತರ ಠಾಣಾ ಮರಗೋಡು ಗ್ರಾಮದ ಫಿರ್ಯಾದಿದಾರರಾದಪಿ.ಜಿ ಶಂಭು ಪೌತಿ ಗಣಪತಿ, 40 ವರ್ಷ, ಕೃಷಿಕ, ಮತ್ತು ಅವರ ಹೆಂಡತಿ ಚಿತ್ರಾ ಎಂಬವರು ಅವರ ಮನೆಯ ಬಾತ್‌ ರೂಂ ರೀಪೇರಿ ಮಾಡುತ್ತಿರುವಾಗ್ಗೆ ಆರೋಪಿಗಳಾದ 1. ಪಿ.ಬಿ ಭರತ್‌ 2. ಪಿ.ಬಿ ಶೈಲಾ ಮರಗೋಡು ಗ್ರಾಮ, ಅವರ ಬಾಪ್ತು ಕೆ.ಎ 12 ಎನ್‌ 9238 ರ ಕಾರಿನಲ್ಲಿ ಬಂದು ಫಿರ್ಯಾದಿಯವರೊಂದಿಗೆ ಹಸು ಕಾರುವಿನ ವಿಚಾರದಲ್ಲಿ ಜಗಳ ತೆಗೆದು ಹೀನಾಮಾನವಾಗಿ ಬೈದು, ಆರೋಪಿ ಶೈಲಾಜಳು ಫಿರ್ಯಾದಿಯ ಹೆಂಡತಿಯ ಬೆನ್ನಿಗೆ ಚಪ್ಪಲಿಯಿಂದ ಹೊಡೆದು ಮತ್ತು ಆರೋಪಿ ಭರತ್‌ ಫಿರ್ಯಾದಿಯವರಿಗೆ ಹಾಕಿಸ್ಟಿಕ್‌ನಿಂದ ಹೊಡೆಯಲು ಬಂದುರುವುದಾಗಿ ಹಾಗೂ ನಂತರ ಕಾರನ್ನು ಫಿರ್ಯಾದಿದಾರರ ಕಾಳಿನ ಬೆರಳಿನ ಮೇಲೆ ಹತ್ತಿಸಿರುವುದಾಗಿ, ಆದುದರಿಂದ ಆರೋಪಿಗಳ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ ನೀಡಿದ ಪುಕಾರಿಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.
ಮುಸ್ಲಿಂ ಜಮಾಯತ್‌ ಮಸೀದಿಯ ಲೆಕ್ಕ ಪತ್ರದ ವಿಚಾರದಲ್ಲಿ ಹಲ್ಲೆ ಮತ್ತು ಕೊಲೆಬೆದರಿಕೆ

ದಿನಾಂಕ: 20-10-2011 ರಂದು ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ವಕ್ಷ್‌ ಅಫೀಸ್‌ ಮಡಿಕೇರಿ ನಗರ , ಪಿರ್ಯಾದಿದಾರುರಾದ ಎ.ಎ. ಅಬ್ದುಲ್‌ರವರು ಮತ್ತು ಜಮ್ಮ ಮಸೀದಿಯ ಕಾರ್ಯದರ್ಶಿ ಮತ್ತು ಸದಸ್ಯರೊಂದಿಗೆ ಜಮಾಯತ್‌ ಮಸೀದಿಯ ಲೆಕ್ಕ ಪತ್ರದ ವಿಚಾರದಲ್ಲಿ ಚರ್ಚೆ ನಡೆಸಲು ಆಕ್ಷೇಪಿಸುತ್ತಿದ್ದ ಸದಸ್ಯರನ್ನು ಮಡಿಕೇರಿಯ ವಕ್ಸ್‌ ಕಛೇರಿಗೆ ಕರೆಸಿಕೊಂಡು ಚರ್ಚೆ ನಡೆಸುತ್ತಿದ್ದ ಸಮಯದಲ್ಲಿ ಸಮಯ 11-30 ಗಂಟೆಗೆ ಆರೋಪಿಗಳು ಅಕ್ರಮ ಕೂಟ ಸೇರಿಕೊಂಡು ಕಬ್ಬಿಣದ ಕುರ್ಚಿಯಿಂದ ಪಿರ್ಯಾದಿ ಮತ್ತು ಇತರಿಗೆ ಹೊಡೆದು ಗಾಯಕೊಳಿಸಿದಲ್ಲದೆ ನೀವು ಊರಿಗೆ ಬನ್ನಿ ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿರುವುದಾಗಿ ಕೊಟ್ಟ ಪುಕಾರಿನ್ವಯ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.


ಕಳುವು ಪ್ರಕರಣ:
ದಿ: 20-10-2011 ರಂದು ವಿರಾಜಪೇಟೆ ನಗರ ಠಾಣಾ ವ್ಯಾಪ್ತಿಯ ಗಣಫತಿ ದೇವಸ್ಥಾನ ವಿರಾಜಪೇಟೆ ನಗರ ,ಪಿರ್ಯಾದಿ ವರಾದ ಪ್ರಮೋಧ ರವರು ಎಂದಿನಂತೆ ಪೂಜೆ ಮುಗಿಸಿ ದೇವಸ್ಥಾನದ ಮುಂಬಾಗಿಲನ್ನು ಹಾಗೂ ಗರ್ಭಗುಡಿಯ ಬಾಗಿಲನ್ನು ಹಾಕಿಕೊಡು ಹೋಗಿದ್ದು ದಿ: 21-10-2011 ರಂದು ಬೆಳ್ಳಿಗೆ 4-45 ಗಂಟೆಗೆ ಪೂಜೆಗೆಂದು ದೇವಸ್ಥಾನಕ್ಕೆ ಬಂದಾಗ ಗರ್ಬಗುಡಿಯ ಮುಂಬಾಗಿಲು ತೆರೆದಿ್ದು ಗರ್ಭಗುಡಿಯ ಮುಂಭಾಗದ ವೆರಾಂಡದಲ್ಲಿ ಇಟ್ಟದ್ದ ಸುಮಾರು 2 1/2 ಅಡಿ ಎತ್ತರದ ಹಿತ್ತಾಳೆ ಕಾಣಿಕೆ ಹುಂಡಿಯ ಕಳುವಾಗಿದ್ದು ಅದರಲ್ಲಿ ಅಂದಾಜು 2,000/- ಹಣವಿರಬಹುದೆಂದು ಕಳುವು ಮಾಡಿರುವುದಾಗಿ ಕೊಟ್ಟ ಪುಕಾರಿನ್ವಯ ವಿರಾಜಪೇಟೆ ನಗರ ಠಾಣೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

Thursday, October 20, 2011

ರಸ್ತೆ ಅಪಘಾತ ಪ್ರಕರಣ:-
ದಿ: 18-10-2011 ರಂದು ಬಾಗಮಂಡಲ ಠಾಣಾ ವ್ಯಾಪ್ತಿಯ ಕೋಪಟ್ಟಿಗ್ರಾಮದಗಣಫತಿ ಎಂಬುವರು ತನ್ನ ತಾಯಿ ಗಂಗಮ್ಮ ರವರೊಂದಿಗೆ ಅವರ ಬಾಪ್ತು ಕಾರು ಸಂ ಕೆಎ-3-ಎಂಸಿ 7677 ರಲ್ಲಿ ತಲಕಾವೇರಿಯ ತೀರ್ಥೊದ್ಬದ ಜಾತ್ರೆಹೋಗಿ ವಾಪಾಸ್ಸು ಬರುತ್ತಿರುವಾಗ್ಗೆ ಭಾಗಮಂಡಲ ಪೊಲೀಸ್‌ ಠಾಣಾ ಸರಹದ್ದಿಗೆ ಸೇರಿದ ಕೋಪಟ್ಟಿಗ್ರಾಮ ಎಂಬಲ್ಲಿ ಕಾರು ಅಯ ತಪ್ಪಿ ಅಪಘಾತವಾಗಿದ್ದು ಗಣಫತಿಯವರ ತಾಯಿ ಗಂಗಮ್ಮರವರಿಗೆ ತಲೆ ಮತ್ತು ಎದೆಯ ಭಾಗಗಳಿಗೆ ರಕ್ತಗಾಯವಾಗಿರುವುದಾಗಿ ಕೊಟ್ಟ ಪುಕಾರಿನ್ವಯ ಭಾಗಮಂಡಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿರುವುದಾಗಿದೆ.

ಆತ್ಮಹತ್ಯೆಯ ಪ್ರಕರಣ:
ದಿ: 18-10-2011 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕದನೂರುಗ್ರಾಮದ ಪಾಲೆಕಂಡ ಪಿ.ಕಾರ್ಯಪ್ಪ ಎಂಬವರ ಮನೆಗೆ ಬಸವರಾಜು ಮತ್ತು ಆತನ ಹೆಂಡತಿ ಹಾಗೂ ಮಗುವಿನೊಂದಿಗೆ ಕೂಲಿ ಕೆಲಸಕ್ಕೆ ಬಂದಿದ್ದು ಅವರ ಲೈನು ಮನೆಯಲ್ಲಿ ವಾಸವಿದ್ದು ದಿ: 18-10-2011 ರಂದು ಬಸವರಾಜು ತನ್ನ ಹೆಂಡತಿ ಯೊಂದಿಗೆ ಜಗಳ ಮಾಡಿಕೊಂಡು ಕೆಲಸಕ್ಕೆ ಬಾರದೇ ಲೈನು ಮನೆಯಲ್ಲಿಯೇ ಇದ್ದು ಆತನ ಹೆಂಡತಿ ಸೌಮ್ಯಳು ತನ್ನ ಮಗನೊಂದಿಗೆ ಮನೆ ಬಿಟ್ಟು ಹೋಗಿದ್ದರಿಂದ ಮನಸ್ಸಿಗೆ ಬೇಸರವಾಗಿದ್ದು ಲೈನು ಮನೆಯ ಮೇಲ್ಚಾವಣಿಗೆ ಪಂಚೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.
ಆತ್ಮಹತ್ಯೆಯ ಪ್ರಕರಣ:
2) 19-10-2011 ರಂದು ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ಕೃಪ ಕಾಂಪೌಂಡ್‌ ಡಿಹೆಚ್‌ಓ ಅಪೀಸ್‌ ಮುಂದೆ ಮಡಿಕೇರಿ ನಗರದ ನಿವಾಸಿ ಶ್ರೀಮತಿ ಮಮತ ಗಂಡ ಮೋಹನ್‌ರವರ ರವರ ಮಗಳಾದ ಆನುಶ್ರೀ ಎಂಬವಳು ಜೀವನದಲ್ಲಿ ಜಿಗುಪ್ಸೆಗೊಂಡು ಚೂಡಿದಾರ ವೇಲ್‌ ನಿಂದ ಮನೆಯ ಕೌಕೋಲಿಗೆ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿರುವುದಾಗಿ ಕೊಟ್ಟ ಪುಕಾರಿನ್ವ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.

ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ನಷ್ಟವುಂಟು ಮಾಡಿ ದಲ್ಲದೇ,ಜೀವಬೆದರಿಕೆ :
ದಿನಾಂಕ 19/10/2011 ರಂದು ¥ÉÆ£ÀßA¥ÉÃmÉ ಠಾಣಾ ವ್ಯಾಪ್ತಿಯ ಚೌಡಿಕಟ್ಟೆ , ಮರೂರು ಗ್ರಾಮ ಸಮಯ ರಾತ್ರಿ 8.15 ಗಂಟೆಗೆ ಪಿರ್ಯಾಧಿಯವರಾದ ಹೆಚ್.ಕೆ.ಬೋಜ, ತಂದೆ ಲೇಟ್ ಕಾಳಯ್ಯ, ಪ್ರಾಯ 57 ವರ್ಷ, ಮುಖ್ಯೋಪದ್ಯಾಯರು, ಚೌಡಿಕಟ್ಟೆ ಮರೂರು ಗ್ರಾಮ, ಠಾಣೆಗೆ ಹಾಜರಾಗಿ ಕೊಟ್ಟ ಲಿಖಿತ ಪುಕಾರಿನ್ವಯ ನಾನು ನನ್ನ ಸಂಸಾರದೊಂದಿಗೆ ವಾಸವಾಗಿದ್ದು ಚೆಟ್ಟಳ್ಳಿ ಪೌಡಶಾಲೆಯಲ್ಲಿ ಮುಖ್ಯೋಪದ್ಯಾಯರಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ಪ್ರತಿ ದಿನ ಕರ್ತವ್ಯಕ್ಕೆ ಹೋಗಿ ಬರುತ್ತಿರುವುದಾಗಿದೆ. ನನಗೆ ಸರ್ವೆ ನಂ 104/16 ರಲ್ಲಿ ಕಾಫಿ ಕಿತ್ತಳೆ, ಅಡಿಕೆ, ಬಾಳೆ, ಮಾವು ಇತ್ಯಾಧಿ ಬೆಳೆಗಳನ್ನು ಬೆಳೆದಿದ್ದು ಸುಮಾರು 2.50 ಎಕರೆ ತೋಟವಿರುತ್ತದೆ. ದಿನಾಂಕ 19/10/2011 ರ ಸಮಯ 10.30 ಗಂಟೆಗೆ ನಮ್ಮ ಪಕ್ಕದ ಮನೆಯ ವಾಸಿ ಮಲೆಯಾಳಿ ರಾಜೇಂದ್ರ , ಆತನ ಅಕ್ಕ ಕುಂಜ್ಞಮೋಳ್, ಮತ್ತು ತಂಗಮ್ಮ ಎಂಬುವವರು ಅಕ್ರಮವಾಗಿ ತೋಟಕ್ಕೆ ನುಗ್ಗಿ , ಬಾಳೆ, ಕಾಫಿ, ಅಡಿಕೆ, ಕಿತ್ತಳೆ, ಇತ್ಯಾಧಿ ಗಿಡಗಳನ್ನು ಕಡಿಯುತ್ತಿದ್ದು ಇದನ್ನು ನೋಡಿದ ನಮ್ಮ ಕೆಲಸಗಾರನಾದ ಎರವರ ಜೋಗಿ, ನನ್ನ ಹೆಂಡತಿ ಕೆ. ಡಿ. ಸರಸ್ವತಿ ಏಕೆ ಹೀಗೆ ಮಾಡುತ್ತೀರಾ ಎಂದು ಕೇಳುವಾಗ್ಗೆ ನೀವು ಯಾರು ಕೇಳಲಿಕ್ಕೆ ಎಂದು ಹೇಳಿ ರಾಜೇಂದ್ರ ತನ್ನ ಕೈಯಲ್ಲಿದ್ದ ಕತ್ತಿಯನ್ನು ಹಿಡಿದುಕೊಂಡು ನನ್ನ ಹೆಂಡತಿಗೆ ಕೊಲೆ ಮಾಡುವುದಾಗಿ ಬೆದರಿಕೆಯನ್ನು ಹಾಕಿರುತ್ತಾನೆ. ಈ ವಿಷಯವನ್ನು ನಾನು ಕರ್ತವ್ಯ ಮುಗಿಸಿ ಬಂದ ನಂತರ ನನ್ನ ಹೆಂಡತಿ ಮತ್ತು ನನ್ನ ಕೆಲಸಗಾರ ಘಟನೆಯ ವಿಷಯವನ್ನು ತಿಳಿಸಿದ್ದು.,ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಗಿಡಗಳನ್ನು ನಷ್ಟಪಡಿಸಿ ರೂಪಾಯಿ 3000 ವನ್ನು ನಷ್ಟಪಡಿಸಿ ಕೊಲೆ ಬೆದರಿಕೆ ಹಾಕಿರುವ ಆರೋಪಿಗಳಾದರಾಜೇಂದ್ರ , ಕುಂಜ್ಞಮೋಳ್, ತಂಗಮ್ಮ ಎಂಬುವವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ಪುಕಾರಿಗೆ ಪೊನ್ನಂಪೇಟೆ ಠಾಣೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.
ರಾಸು ಗಳ ಮಾರಾಟ ಯತ್ನ:
. ದಿನಾಂಕ : 19-10-2011 ರಂದು ಸೋಮಯ್ಯ ಎಎಸ್‌‌ಐರವರಿಗೆ ಸಿಕ್ಕಿದ ಖಚೀತ ವರ್ತಮಾನದ ಮೇರೆಗೆ ಮರೂರು ಗ್ರಾಮದಿಂದ ಅಕ್ರಮವಾಗಿ ಯಾರೋ ದನಗಳನ್ನು ಕೇರಳದ ಖಸಾಯಿ ಖಾನೆಗೆ ಸಾಗಿಸುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಇಲಾಖಾ ಜೀಪು ನಂ ಕೆಎ 12 ಜಿ 366 ರಲ್ಲಿ ಚಾಲಕ ಪೂವಯ್ಯ ಮತ್ತು ಹೆಚ್ ಸಿ 39, ಪಿಸಿ 85 , 404 ಮತ್ತು ಪಂಚಾಯ್ತುದಾರರೊಂದಿಗೆ ಮರೂರು ಗ್ರಾಮದ ನಳಪಾಕ ಹೋಟೇಲ್ ಹತ್ತಿರ ಕಾಯುತ್ತಿರುವಾಗ್ಗೆ ಸಮಯ 5.45 ಪಿ.ಎಂಗೆ ಮರೂರು ಗ್ರಾಮದಿಂದ ಒಂದು ಟಾಟ ಏಸ್ ಬರುತ್ತಿದ್ದು ಪರಿಶೀಲಿಸಲಾಗಿ ಕೆಎ 12 8363 ರ ಟಾಟ ಏಸ್ ರ ಹಿಂಬಾಗದಲ್ಲಿ 5 ರಾಸುಗಳ ಇರುವುದು ಕಂಡು ಬಂತು ಇವುಗಳ ಬಗ್ಗೆ ಸರ್ಕಾರದ ರಹದಾರಿ ಪತ್ರ ಇದೆಯೇ ಎಂದು ಕೇಳಿದಾಗ ಇರುವುದಿಲ್ಲ ಈ ದನಗಳನ್ನು ಹುಣಸೂರಿಗೆ ಸಾಗಿಸಿ ಕೇರಳದ ಕಸಾಯಿಖಾನೆಗೆ ಮಾಂಸ ಮಾಡಿ ಮಾರಟ ಮಾಡಲು ಸಾಗಿಸುತ್ತಿರುವುದಾಗಿ ಆರೋಪಿಗಳಾದ 1) ಮಕ್‌ಬಲ್‌ ತಂದೆ ಅಬ್ದುಲ್‌ ರಹಿಮಾಣ್‌ ಪ್ರಾಯ43 ವರ್ಷ ಕೆಎ12 8363 ಟಾಟಾ ಎಸ್‌ ಡ್ರೈವರ್‌ ವಿರಾಜಪೇಟೆ ಬಂಗಾಳ ಬೀದಿ 2) ಕೆಂಡಗಣ್ಣ ತಂದ ಕರಿಸಿದ್ದೆ ಗೌಡ ಪ್ರಾಯ32 ವರ್ಷ ವ್ಯವಸಾಯ ವೃತ್ತಿ ವಾಸ ಚಿಕ್ಕಬೀರನಹಳ್ಳಿ, ಹುಣುಸೂರು ತಾ: 3) ಲೋಕೇಶ್‌ ತಂದೆ ಸಿದ್ದಯ್ಯ ಪ್ರಾಯ33 ವರ್ಷ ವ್ಯವಸಾಯ ವೃತ್ತಿ ಹುಣುಸೂರು ತಾ: 4) ಜಯರಾಂ ತಂದೆ ಕರಿಸಿದ್ದೇಗೌಡ ಪ್ರಾಯ 28 ವ್ಯವಸಾಯ ಕೆಲಸ ಹುಣುಸೂರು ತಾ: ಹಾಗೂ ರಾಸುಗಳು ಮತ್ತು ವಾಹನ ವನ್ನು ಅಮಾನತ್ತು ಪಡಿಸಿದಕೊಂಡು ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.

Wednesday, October 19, 2011

ರಸ್ತೆ ಅಪಘಾತ

ದಿನಾಂಕ 18-10-2011 ರಂದು ಶನಿವಾರಸಂತೆ ಠಾಣಾ ವ್ಯಾಪ್ತಿ ಶನಿವಾರಸಂತೆ ಯ ಕೆ.ಇ.ಬಿ. ಕಛೇರಿಯ ಸಾರ್ವಜನಿಕ ರಸ್ತೆ ಪಿರ್ಯಾದಿಯರಾದ ಶ್ರೀ ಜಯರಾಜ್‌ ಮತ್ತು ಇಬ್ಬರು ಸ್ನೇ»ತರು ಹಾಗೂ ಇತರ 12 ಜನರೊಂದಿಗೆ ಕಾವೇರಿ ಜಾತ್ರೆಗೆ ಹೋಗಲು ಕೆ.ಎ-19, ಡಿ-288 ರ ವ್ಯಾನಿನಲ್ಲಿ ಮಂಗಳೂರಿನಿಂದ ಹೊರಟು ಕೊಡಗು ಜಿಲ್ಲೆಯ ಶನಿವಾರಸಂತೆಯ ಕೆ.ಇ.ಬಿ. ಕಛೇರಿ ಸಮೀಪದ ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಿರುವಾಗ್ಗೆ, ಎದುರುಗಡೆಯಿಂದ ಒಂದು ಲಾರಿಯ ಅತೀ ವೇಗವಾಗಿ ಬರುತ್ತಿದ್ದನ್ನು ಕಂಡು ವ್ಯಾನಿನ ಚಾಲಕ ಪ್ರಶಾಂತನು ಗಾಬರಿಯಿಂದ ವ್ಯಾನಿಗೆ ತಕ್ಷಣ ಬ್ರೆಕ್‌ ಹಾಕಿದ ಪರಿಣಾಮ ವ್ಯಾನ್‌ ಮಗುಚಿಗೊಂಡು ರಸ್ತೆಯ ಮೇಲೆ ಬಿದ್ದ ಪರಿಣಾಮ ವ್ಯಾನಿನಲ್ಲಿದ್ದ ಜನರಿಗೆ ಯಾರಿಗೂ ನೋವು ಗಾಯಗಳಾಗದೇ ವ್ಯಾನ್‌ ಜಖಂ ಗೊಂಡಿದ್ದು ವ್ಯಾನಿನ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಕೊಟ್ಟ ಪುಕಾರಿನ್ವ ಶನಿವಾರಸಂತೆ ಠಾಣೆ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.

ರಸ್ತೆ ಅಪಘಾತ:
ದಿ: 18-10-2011 ರಂದು ಕುಶಾಲನಗರ ಠಾಣಾ ವ್ಯಾಪ್ತಿಯ ಕುಶಾಲನಗರ ಟೌನ್‌ನಲ್ಲಿರುವ ಆರ್.ಎಂ.ಸಿ. ಆವರಣದ ಹತ್ತಿರ
ಪಿರ್ಯಾದಿಯವರ ಸೋದರ ಮಾವನಾದ ಮಂಜುನಾಥ ಇವರು ಪಂಚಾಯಿತಿ ಕೆಲಸ ಮುಗಿಸಿಕೊಂಡು ತನ್ನ ಸಂಬಂಧಿಕರ ತಿಥಿ ಕಾರ್ಯ ಮುಗಿಸಿಕೊಂಡು ಹಾರಂಗಿಯಿಂದ ಅವರ ಸ್ಟಾರ್ ಸಿಟಿ ಮೋಟಾರ್ ಬೈಕ್ ಕೆ.ಎ.12 ಹೆಚ್. 8797 ರ ಬೈಕ್ ನಲ್ಲಿ ಕುಶಾಲನಗರಕ್ಕೆ ಬರುತ್ತಿರುವಾಗ ಕುಶಾಲನಗರ ಟೌನ್‌ನಲ್ಲಿರುವ ಆರ್.ಎಂ.ಸಿ. ಆವರಣದ ಹತ್ತಿರ ಎದುರುಗಡೆಯಿಂದ ಕೆ.ಎ.12 -4336 ರ ಅಂಬುಲೆನ್ಸ್ ಚಾಲಕ. ಜೆ.ಜೆ. ಸೋನ್ಸ್‌ ಇವರು ಅತಿವೇಗ ಮತ್ತು ಅಜಾಗೂರೂಕತೆಯಿಂದ ಚಲಾಯಿಸಿಕೊಂಡು ಡಿಕ್ಕಿಪಡಿಸಿದ ಪರಿಣಾಮ ರಕ್ತಗಾಯವಾಗಿರುವುದಾಗಿ ಈ ಸಂಬಂಧ ಕೊಟ್ಟ ಪುಕಾರಿನ್ವ ಶನಿವಾರಸಂತೆ ಠಾಣೆ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ

Sunday, October 16, 2011

ಕಳ್ಳತನ ಪ್ರಕರಣ


ದಿ:15-10-2011 ರಂದು ಗೋಣಿಕೊಪ್ಪ ಪೊಲೀಸ್ ಠಾಣಾಧಿಕಾರಿಯವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಗೋಣಿಕೊಪ್ಪದ ಸಾರ್ವಜನಿಕ ತಾರು ರಸ್ತೆ ಯಲ್ಲಿ ವಾಹನಗಳನ್ನು ಪರಿಶೀಲಿಸುತ್ತಿರುವಾಗ್ಗೆ ತಿತಿಮತಿ ಕಡೆಯಿಂದ ಗೋಣಿಕೊಪ್ಪದ ಕಡೆರಗೆ ಕೆಎ 45 ಕೆ 2061 ಹೀರೋಹೊಂಡ ಬೈಕ್‌ನಲ್ಲಿ ಒಬ್ಬ ವ್ಯಕ್ತಿಯು ಚಾಲನೆ ಮಾಡಿಕೊಂಡು ಬರುತ್ತಿದ್ದು ಸದರಿ ಬೈಕ್‌ನ್ನು ತಡೆದು ನಿಲ್ಲಿಸಿ ಬೈಕಿಗೆ ಸಂಬಂಧಪಟ್ಟ ದಾಖಲಾತಿಗಳನ್ನು ಕೇಳಲಾಗಿ ಯಾವುದೇ ದಾಖಲಾತಿಗಳನ್ರನು ಹಾಜರು ಪಡೆಸದೇ ಇರುವುದರಿಂದ ಬೈಕಿನ ಮಾಲೀಕತ್ವದ ಬಗ್ಗೆ ವಿಚಾರಿಸಲಾಗಿ ಆ ವ್ಯಕ್ತಿಯು ತೊದಲುತ್ತಾ ಮನಬಂದಂತೆ ಹೇಳುತ್ತಿದ್ದನು ಈ ಬಗ್ಗೆ ವಿಚಾರಿಸಲಾಗಿ ಪಿರಿಯಾಪಟ್ಟಣದ ರಿಜಿಸ್ಟರ್‌ ಕಛೇರಿಯ ಮುಂಭಾಗದಲ್ಲಿ ನಿಲ್ಲಿಸಿದ್ದ ಬೈಕನ್ನು ಸುಮಾರು 2 ತಿಂಗಳ ಹಿಂದೆ ತೆಗೆದಕೊಂಡು ಬಂದರುವುದಾಗಿ ಈತನ್ನು ಬೈಕನ್ನು ಕಳ್ಳತನ ಮಾಡಿ ತಂದಿರುಬಹುದೆಂದು ಸಂಶಗೊಂಡು ಬೈಕನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.


ಆವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ


ದಿ: 15-10-2011 ರಂದು ನಾಪೋಕ್ಲುನ ಚೆರಿಯಪರಂಬು ರ ನಿವಾಸಿ ಮಹಮ್ಮದ್‌ ರವರಿಗೆ ಆರೋಪಿಯಾದ ಅಬೂಬಕರ್‌ ರವರ ಆವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುವುದಲ್ಲದೇ ನಿನ್ನ ಸಂಸಾರವನ್ನು ಕುಡಿಯುವ ಬಾವಿ ನೀರಿಗೆ ವಿಷ ಹಾಕಿ ಕೊಲೆ ಮಾಡದೇ ಬಿಡುವುದಿಲ್ಲ ಎಂಬದಾಗಿ ಹೇಳಿ ಅಲ್ಲದೇ ಬೆಳಗ್ಗಿನ ಜಾವ ಆರೋಪಿಯು ಪಿರ್ಯಾದಿರವರ ಬಾವಿಗೆ ವಿಷ ಹಾಕಿರುವುದಾಗಿ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ನಾಪೋಕ್ಲು ಪೊಲೀಸ್‌ ಠಾಣೆ ದಾಖಲಿಸಿರುವುದಾಗಿದೆ.


ಹುಡುಗಿ ಕಾಣೆ ಪ್ರಕರಣ:


ದಿ: 15-10-2011 ರಂದು ಶನಿವಾರಸಂತೆ ಠಾಣಾ ವ್ಯಾಪ್ತಿಯ ಮಾದೆ ಹೊಸಳ್ಳಿ ಶನಿವಾರಸಂತೆಯ ನಿವಾಸಿ ಮಲ್ಲೇಶ್‌ ರವರ ಮಗಳು ಧನ್ಯಶ್ರೀ ದಿನಾಂಕ 15-10-2011 ರಂದು ಕಾಲೇಜು ಪ್ರವೇಶ ಪತ್ರ ತರುತ್ತೇನೆಂದು ಹೇಳಿ ಹೋದವಳು ಸಂಜೆಯಾದರು ಮನೆಗೆ ಬಂದಿರುವುದಿಲ್ಲ ಎಲ್ಲಾ ನೆಂಟರಿಷ್ಟರು, ಅಕ್ಕಪಕ್ಕ,ಗೆಳತಿಯರ ಮನೆಯಲ್ಲು , ಪೋನಿನಲ್ಲು ವಿಚಾರಿಸಿದಲ್ಲೂ ಮಗಳ ಮಾಹಿತಿ ಕೊಟ್ಟ ಪುಕಾರಿನ್ವಯ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣವನ್ನು ಖಲಿಸಿಕೊಂಡಿರುವುದಾಗಿದೆ.

Saturday, October 15, 2011

ರಸ್ತೆ ಅಪಘಾತ:


ದಿ: 14-10-2011 ರಂದು ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಟ್ಟಗೇರಿ ನಿವಾಸಿ ಹೆಚ್‌.ಬಿ.ಬೀರರವರುಮಡಿಕೇರಿಗೆ ಸಂತೆಗೆ ಬಂದು ಸಾಮಾನು ತೆಗೆದುಕೊಂಡು ವಾಪಾಸು ಬಸ್ಸಿನಲ್ಲಿ ಹೋಗಿ ಇಳಿದು ರಸ್ತೆ ಬದಿಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಸಮಯ 14-00 ಗಂಟೆಗೆ ನಾಪೋಕ್ಲು ಕಡೆಯಿಂದ ಅಂದರೆ ಪಿರ್ಯದಿಯವರ ಹಿಂದಿನಿಂದ ಬಂದ ಕೆಎ-03-ವಿ-9396 ರ ಮೋಟಾರು ಸೈಕಲನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿ ಮತ್ತು ಅವರ ಹೆಂಡತಿಗೆ ಗಾಯ ನೋವುಂಟಗಿದ್ದು ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಾಗಿ ಕೊಟ್ಟ ಹೇಳಿಕೆಗೆ ತಯಾರಿಸಿದ ಪ್ರ.ವ.ವಾರಡಿ


ವ್ಯಕ್ತಿಯ ಮೇಲೆ ಹಲ್ಲೆ ಮತ್ತು ಜೀವ ಬೆದರಿಕೆ


ದಿ: 14-10-2011 ರಂದು ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮುಕೋಡ್ಲು ನಿವಾಸಿ ದಿನೇಶ್‌ರವರು ಸಾಯಂಕಾಲ 7-00 ಗಂಟೆಯ ಸಮಯದಲ್ಲಿ ಮುಕ್ಕೋಡ್ಲು ಗ್ರಾಮದಲ್ಲಿರುವ ಅಂಗಡಿಗೆ ಬಂದು ಮನೆಗೆ ಬೇಕಾದ ಸಾಮಾನುಗಳನ್ನು ಖರೀದಿಸಿಕೊಂಡು ವಾಪಾಸು ಮನೆಗೆ ಹೋಗುತ್ತಿರುವಾಗ್ಗೆ ಆರೋಪಿಯು ಪಿರ್ಯಾದಿಯವರನ್ನು ದಾರಿ ತಡೆದು ಬಾಯಿಗೆ ಬಂದಂತೆ ಬೈದು ಏಕಾ ಏಕಿ ಕಾಲಿನಿಂದ ಮರ್ಮಾಂಗಕ್ಕೆ ಒದ್ದು ಕೈಯಿಂದ ಹೊಟ್ಟೆಗೆ ಗುದ್ದಿ, ಬಲ ಕೈಗೆ ಕಚ್ಚಿ ನೋವುಂಟು ಪಡಿಸಿದ್ದು ಈ ಬಗ್ಗೆ ಆರೋಪಿಯ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಾಗಿ ಕೊಟ್ಟ ಹೇಳಿಕೆಗೆ ತಯಾರಿಸಿದ ಪ್ರ.ವ.


ಹುಡುಗಿ ಕಾಣೆ;


ದಿ: 15-10-2011 ರಂದು ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಶಿವಾಜಿ ರಸ್ತೆ, ಸೋಮವಾರಪೇಟೆ ನಗರದ ನಿವಾಸಿಯಾದ ಶ್ರೀಮತಿ ವೀಣಾರವರ ಮಗಳು ರಮ್ಯ ಎಂಬವಳು ಮನೆಯಲ್ಲಿ ಯಾರು ಇಲ್ಲದಿರುವಾಗ ಹೋಗಿದ್ದು ಎಲ್ಲಾ ನೆಂಟರಿಷ್ಟರ ಮನೆ , ಗೆಳತಿಯರ ಮನೆ ಹುಡುಕಾಡಿದರೂ ಪತ್ತೆಯಾಗದೇ ಇರುವುದರಿಂದ ಕೊಟ್ಟ ಪುಕಾರಿನ್ವಯ ಸೋಮವಾರಪೇಟೆ ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿರುವುದಾಗಿದೆ.