Saturday, October 15, 2011

ರಸ್ತೆ ಅಪಘಾತ:


ದಿ: 14-10-2011 ರಂದು ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಟ್ಟಗೇರಿ ನಿವಾಸಿ ಹೆಚ್‌.ಬಿ.ಬೀರರವರುಮಡಿಕೇರಿಗೆ ಸಂತೆಗೆ ಬಂದು ಸಾಮಾನು ತೆಗೆದುಕೊಂಡು ವಾಪಾಸು ಬಸ್ಸಿನಲ್ಲಿ ಹೋಗಿ ಇಳಿದು ರಸ್ತೆ ಬದಿಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಸಮಯ 14-00 ಗಂಟೆಗೆ ನಾಪೋಕ್ಲು ಕಡೆಯಿಂದ ಅಂದರೆ ಪಿರ್ಯದಿಯವರ ಹಿಂದಿನಿಂದ ಬಂದ ಕೆಎ-03-ವಿ-9396 ರ ಮೋಟಾರು ಸೈಕಲನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿ ಮತ್ತು ಅವರ ಹೆಂಡತಿಗೆ ಗಾಯ ನೋವುಂಟಗಿದ್ದು ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಾಗಿ ಕೊಟ್ಟ ಹೇಳಿಕೆಗೆ ತಯಾರಿಸಿದ ಪ್ರ.ವ.ವಾರಡಿ


ವ್ಯಕ್ತಿಯ ಮೇಲೆ ಹಲ್ಲೆ ಮತ್ತು ಜೀವ ಬೆದರಿಕೆ


ದಿ: 14-10-2011 ರಂದು ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮುಕೋಡ್ಲು ನಿವಾಸಿ ದಿನೇಶ್‌ರವರು ಸಾಯಂಕಾಲ 7-00 ಗಂಟೆಯ ಸಮಯದಲ್ಲಿ ಮುಕ್ಕೋಡ್ಲು ಗ್ರಾಮದಲ್ಲಿರುವ ಅಂಗಡಿಗೆ ಬಂದು ಮನೆಗೆ ಬೇಕಾದ ಸಾಮಾನುಗಳನ್ನು ಖರೀದಿಸಿಕೊಂಡು ವಾಪಾಸು ಮನೆಗೆ ಹೋಗುತ್ತಿರುವಾಗ್ಗೆ ಆರೋಪಿಯು ಪಿರ್ಯಾದಿಯವರನ್ನು ದಾರಿ ತಡೆದು ಬಾಯಿಗೆ ಬಂದಂತೆ ಬೈದು ಏಕಾ ಏಕಿ ಕಾಲಿನಿಂದ ಮರ್ಮಾಂಗಕ್ಕೆ ಒದ್ದು ಕೈಯಿಂದ ಹೊಟ್ಟೆಗೆ ಗುದ್ದಿ, ಬಲ ಕೈಗೆ ಕಚ್ಚಿ ನೋವುಂಟು ಪಡಿಸಿದ್ದು ಈ ಬಗ್ಗೆ ಆರೋಪಿಯ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಾಗಿ ಕೊಟ್ಟ ಹೇಳಿಕೆಗೆ ತಯಾರಿಸಿದ ಪ್ರ.ವ.


ಹುಡುಗಿ ಕಾಣೆ;


ದಿ: 15-10-2011 ರಂದು ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಶಿವಾಜಿ ರಸ್ತೆ, ಸೋಮವಾರಪೇಟೆ ನಗರದ ನಿವಾಸಿಯಾದ ಶ್ರೀಮತಿ ವೀಣಾರವರ ಮಗಳು ರಮ್ಯ ಎಂಬವಳು ಮನೆಯಲ್ಲಿ ಯಾರು ಇಲ್ಲದಿರುವಾಗ ಹೋಗಿದ್ದು ಎಲ್ಲಾ ನೆಂಟರಿಷ್ಟರ ಮನೆ , ಗೆಳತಿಯರ ಮನೆ ಹುಡುಕಾಡಿದರೂ ಪತ್ತೆಯಾಗದೇ ಇರುವುದರಿಂದ ಕೊಟ್ಟ ಪುಕಾರಿನ್ವಯ ಸೋಮವಾರಪೇಟೆ ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿರುವುದಾಗಿದೆ.