Sunday, October 16, 2011

ಕಳ್ಳತನ ಪ್ರಕರಣ


ದಿ:15-10-2011 ರಂದು ಗೋಣಿಕೊಪ್ಪ ಪೊಲೀಸ್ ಠಾಣಾಧಿಕಾರಿಯವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಗೋಣಿಕೊಪ್ಪದ ಸಾರ್ವಜನಿಕ ತಾರು ರಸ್ತೆ ಯಲ್ಲಿ ವಾಹನಗಳನ್ನು ಪರಿಶೀಲಿಸುತ್ತಿರುವಾಗ್ಗೆ ತಿತಿಮತಿ ಕಡೆಯಿಂದ ಗೋಣಿಕೊಪ್ಪದ ಕಡೆರಗೆ ಕೆಎ 45 ಕೆ 2061 ಹೀರೋಹೊಂಡ ಬೈಕ್‌ನಲ್ಲಿ ಒಬ್ಬ ವ್ಯಕ್ತಿಯು ಚಾಲನೆ ಮಾಡಿಕೊಂಡು ಬರುತ್ತಿದ್ದು ಸದರಿ ಬೈಕ್‌ನ್ನು ತಡೆದು ನಿಲ್ಲಿಸಿ ಬೈಕಿಗೆ ಸಂಬಂಧಪಟ್ಟ ದಾಖಲಾತಿಗಳನ್ನು ಕೇಳಲಾಗಿ ಯಾವುದೇ ದಾಖಲಾತಿಗಳನ್ರನು ಹಾಜರು ಪಡೆಸದೇ ಇರುವುದರಿಂದ ಬೈಕಿನ ಮಾಲೀಕತ್ವದ ಬಗ್ಗೆ ವಿಚಾರಿಸಲಾಗಿ ಆ ವ್ಯಕ್ತಿಯು ತೊದಲುತ್ತಾ ಮನಬಂದಂತೆ ಹೇಳುತ್ತಿದ್ದನು ಈ ಬಗ್ಗೆ ವಿಚಾರಿಸಲಾಗಿ ಪಿರಿಯಾಪಟ್ಟಣದ ರಿಜಿಸ್ಟರ್‌ ಕಛೇರಿಯ ಮುಂಭಾಗದಲ್ಲಿ ನಿಲ್ಲಿಸಿದ್ದ ಬೈಕನ್ನು ಸುಮಾರು 2 ತಿಂಗಳ ಹಿಂದೆ ತೆಗೆದಕೊಂಡು ಬಂದರುವುದಾಗಿ ಈತನ್ನು ಬೈಕನ್ನು ಕಳ್ಳತನ ಮಾಡಿ ತಂದಿರುಬಹುದೆಂದು ಸಂಶಗೊಂಡು ಬೈಕನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.


ಆವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ


ದಿ: 15-10-2011 ರಂದು ನಾಪೋಕ್ಲುನ ಚೆರಿಯಪರಂಬು ರ ನಿವಾಸಿ ಮಹಮ್ಮದ್‌ ರವರಿಗೆ ಆರೋಪಿಯಾದ ಅಬೂಬಕರ್‌ ರವರ ಆವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುವುದಲ್ಲದೇ ನಿನ್ನ ಸಂಸಾರವನ್ನು ಕುಡಿಯುವ ಬಾವಿ ನೀರಿಗೆ ವಿಷ ಹಾಕಿ ಕೊಲೆ ಮಾಡದೇ ಬಿಡುವುದಿಲ್ಲ ಎಂಬದಾಗಿ ಹೇಳಿ ಅಲ್ಲದೇ ಬೆಳಗ್ಗಿನ ಜಾವ ಆರೋಪಿಯು ಪಿರ್ಯಾದಿರವರ ಬಾವಿಗೆ ವಿಷ ಹಾಕಿರುವುದಾಗಿ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ನಾಪೋಕ್ಲು ಪೊಲೀಸ್‌ ಠಾಣೆ ದಾಖಲಿಸಿರುವುದಾಗಿದೆ.


ಹುಡುಗಿ ಕಾಣೆ ಪ್ರಕರಣ:


ದಿ: 15-10-2011 ರಂದು ಶನಿವಾರಸಂತೆ ಠಾಣಾ ವ್ಯಾಪ್ತಿಯ ಮಾದೆ ಹೊಸಳ್ಳಿ ಶನಿವಾರಸಂತೆಯ ನಿವಾಸಿ ಮಲ್ಲೇಶ್‌ ರವರ ಮಗಳು ಧನ್ಯಶ್ರೀ ದಿನಾಂಕ 15-10-2011 ರಂದು ಕಾಲೇಜು ಪ್ರವೇಶ ಪತ್ರ ತರುತ್ತೇನೆಂದು ಹೇಳಿ ಹೋದವಳು ಸಂಜೆಯಾದರು ಮನೆಗೆ ಬಂದಿರುವುದಿಲ್ಲ ಎಲ್ಲಾ ನೆಂಟರಿಷ್ಟರು, ಅಕ್ಕಪಕ್ಕ,ಗೆಳತಿಯರ ಮನೆಯಲ್ಲು , ಪೋನಿನಲ್ಲು ವಿಚಾರಿಸಿದಲ್ಲೂ ಮಗಳ ಮಾಹಿತಿ ಕೊಟ್ಟ ಪುಕಾರಿನ್ವಯ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣವನ್ನು ಖಲಿಸಿಕೊಂಡಿರುವುದಾಗಿದೆ.