ರಸ್ತೆ ಅಪಘಾತ ಪ್ರಕರಣ:-
ದಿ: 18-10-2011 ರಂದು ಬಾಗಮಂಡಲ ಠಾಣಾ ವ್ಯಾಪ್ತಿಯ ಕೋಪಟ್ಟಿಗ್ರಾಮದಗಣಫತಿ ಎಂಬುವರು ತನ್ನ ತಾಯಿ ಗಂಗಮ್ಮ ರವರೊಂದಿಗೆ ಅವರ ಬಾಪ್ತು ಕಾರು ಸಂ ಕೆಎ-3-ಎಂಸಿ 7677 ರಲ್ಲಿ ತಲಕಾವೇರಿಯ ತೀರ್ಥೊದ್ಬದ ಜಾತ್ರೆಹೋಗಿ ವಾಪಾಸ್ಸು ಬರುತ್ತಿರುವಾಗ್ಗೆ ಭಾಗಮಂಡಲ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಕೋಪಟ್ಟಿಗ್ರಾಮ ಎಂಬಲ್ಲಿ ಕಾರು ಅಯ ತಪ್ಪಿ ಅಪಘಾತವಾಗಿದ್ದು ಗಣಫತಿಯವರ ತಾಯಿ ಗಂಗಮ್ಮರವರಿಗೆ ತಲೆ ಮತ್ತು ಎದೆಯ ಭಾಗಗಳಿಗೆ ರಕ್ತಗಾಯವಾಗಿರುವುದಾಗಿ ಕೊಟ್ಟ ಪುಕಾರಿನ್ವಯ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿರುವುದಾಗಿದೆ.
ಆತ್ಮಹತ್ಯೆಯ ಪ್ರಕರಣ:
ದಿ: 18-10-2011 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕದನೂರುಗ್ರಾಮದ ಪಾಲೆಕಂಡ ಪಿ.ಕಾರ್ಯಪ್ಪ ಎಂಬವರ ಮನೆಗೆ ಬಸವರಾಜು ಮತ್ತು ಆತನ ಹೆಂಡತಿ ಹಾಗೂ ಮಗುವಿನೊಂದಿಗೆ ಕೂಲಿ ಕೆಲಸಕ್ಕೆ ಬಂದಿದ್ದು ಅವರ ಲೈನು ಮನೆಯಲ್ಲಿ ವಾಸವಿದ್ದು ದಿ: 18-10-2011 ರಂದು ಬಸವರಾಜು ತನ್ನ ಹೆಂಡತಿ ಯೊಂದಿಗೆ ಜಗಳ ಮಾಡಿಕೊಂಡು ಕೆಲಸಕ್ಕೆ ಬಾರದೇ ಲೈನು ಮನೆಯಲ್ಲಿಯೇ ಇದ್ದು ಆತನ ಹೆಂಡತಿ ಸೌಮ್ಯಳು ತನ್ನ ಮಗನೊಂದಿಗೆ ಮನೆ ಬಿಟ್ಟು ಹೋಗಿದ್ದರಿಂದ ಮನಸ್ಸಿಗೆ ಬೇಸರವಾಗಿದ್ದು ಲೈನು ಮನೆಯ ಮೇಲ್ಚಾವಣಿಗೆ ಪಂಚೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.
ಆತ್ಮಹತ್ಯೆಯ ಪ್ರಕರಣ:
2) 19-10-2011 ರಂದು ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ಕೃಪ ಕಾಂಪೌಂಡ್ ಡಿಹೆಚ್‌ಓ ಅಪೀಸ್ ಮುಂದೆ ಮಡಿಕೇರಿ ನಗರದ ನಿವಾಸಿ ಶ್ರೀಮತಿ ಮಮತ ಗಂಡ ಮೋಹನ್‌ರವರ ರವರ ಮಗಳಾದ ಆನುಶ್ರೀ ಎಂಬವಳು ಜೀವನದಲ್ಲಿ ಜಿಗುಪ್ಸೆಗೊಂಡು ಚೂಡಿದಾರ ವೇಲ್ ನಿಂದ ಮನೆಯ ಕೌಕೋಲಿಗೆ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿರುವುದಾಗಿ ಕೊಟ್ಟ ಪುಕಾರಿನ್ವ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.
ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ನಷ್ಟವುಂಟು ಮಾಡಿ ದಲ್ಲದೇ,ಜೀವಬೆದರಿಕೆ :
ದಿನಾಂಕ 19/10/2011 ರಂದು ¥ÉÆ£ÀßA¥ÉÃmÉ ಠಾಣಾ ವ್ಯಾಪ್ತಿಯ ಚೌಡಿಕಟ್ಟೆ , ಮರೂರು ಗ್ರಾಮ ಸಮಯ ರಾತ್ರಿ 8.15 ಗಂಟೆಗೆ ಪಿರ್ಯಾಧಿಯವರಾದ ಹೆಚ್.ಕೆ.ಬೋಜ, ತಂದೆ ಲೇಟ್ ಕಾಳಯ್ಯ, ಪ್ರಾಯ 57 ವರ್ಷ, ಮುಖ್ಯೋಪದ್ಯಾಯರು, ಚೌಡಿಕಟ್ಟೆ ಮರೂರು ಗ್ರಾಮ, ಠಾಣೆಗೆ ಹಾಜರಾಗಿ ಕೊಟ್ಟ ಲಿಖಿತ ಪುಕಾರಿನ್ವಯ ನಾನು ನನ್ನ ಸಂಸಾರದೊಂದಿಗೆ ವಾಸವಾಗಿದ್ದು ಚೆಟ್ಟಳ್ಳಿ ಪೌಡಶಾಲೆಯಲ್ಲಿ ಮುಖ್ಯೋಪದ್ಯಾಯರಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ಪ್ರತಿ ದಿನ ಕರ್ತವ್ಯಕ್ಕೆ ಹೋಗಿ ಬರುತ್ತಿರುವುದಾಗಿದೆ. ನನಗೆ ಸರ್ವೆ ನಂ 104/16 ರಲ್ಲಿ ಕಾಫಿ ಕಿತ್ತಳೆ, ಅಡಿಕೆ, ಬಾಳೆ, ಮಾವು ಇತ್ಯಾಧಿ ಬೆಳೆಗಳನ್ನು ಬೆಳೆದಿದ್ದು ಸುಮಾರು 2.50 ಎಕರೆ ತೋಟವಿರುತ್ತದೆ. ದಿನಾಂಕ 19/10/2011 ರ ಸಮಯ 10.30 ಗಂಟೆಗೆ ನಮ್ಮ ಪಕ್ಕದ ಮನೆಯ ವಾಸಿ ಮಲೆಯಾಳಿ ರಾಜೇಂದ್ರ , ಆತನ ಅಕ್ಕ ಕುಂಜ್ಞಮೋಳ್, ಮತ್ತು ತಂಗಮ್ಮ ಎಂಬುವವರು ಅಕ್ರಮವಾಗಿ ತೋಟಕ್ಕೆ ನುಗ್ಗಿ , ಬಾಳೆ, ಕಾಫಿ, ಅಡಿಕೆ, ಕಿತ್ತಳೆ, ಇತ್ಯಾಧಿ ಗಿಡಗಳನ್ನು ಕಡಿಯುತ್ತಿದ್ದು ಇದನ್ನು ನೋಡಿದ ನಮ್ಮ ಕೆಲಸಗಾರನಾದ ಎರವರ ಜೋಗಿ, ನನ್ನ ಹೆಂಡತಿ ಕೆ. ಡಿ. ಸರಸ್ವತಿ ಏಕೆ ಹೀಗೆ ಮಾಡುತ್ತೀರಾ ಎಂದು ಕೇಳುವಾಗ್ಗೆ ನೀವು ಯಾರು ಕೇಳಲಿಕ್ಕೆ ಎಂದು ಹೇಳಿ ರಾಜೇಂದ್ರ ತನ್ನ ಕೈಯಲ್ಲಿದ್ದ ಕತ್ತಿಯನ್ನು ಹಿಡಿದುಕೊಂಡು ನನ್ನ ಹೆಂಡತಿಗೆ ಕೊಲೆ ಮಾಡುವುದಾಗಿ ಬೆದರಿಕೆಯನ್ನು ಹಾಕಿರುತ್ತಾನೆ. ಈ ವಿಷಯವನ್ನು ನಾನು ಕರ್ತವ್ಯ ಮುಗಿಸಿ ಬಂದ ನಂತರ ನನ್ನ ಹೆಂಡತಿ ಮತ್ತು ನನ್ನ ಕೆಲಸಗಾರ ಘಟನೆಯ ವಿಷಯವನ್ನು ತಿಳಿಸಿದ್ದು.,ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಗಿಡಗಳನ್ನು ನಷ್ಟಪಡಿಸಿ ರೂಪಾಯಿ 3000 ವನ್ನು ನಷ್ಟಪಡಿಸಿ ಕೊಲೆ ಬೆದರಿಕೆ ಹಾಕಿರುವ ಆರೋಪಿಗಳಾದರಾಜೇಂದ್ರ , ಕುಂಜ್ಞಮೋಳ್, ತಂಗಮ್ಮ ಎಂಬುವವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ಪುಕಾರಿಗೆ ಪೊನ್ನಂಪೇಟೆ ಠಾಣೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.
ರಾಸು ಗಳ ಮಾರಾಟ ಯತ್ನ:
. ದಿನಾಂಕ : 19-10-2011 ರಂದು ಸೋಮಯ್ಯ ಎಎಸ್‌ಐರವರಿಗೆ ಸಿಕ್ಕಿದ ಖಚೀತ ವರ್ತಮಾನದ ಮೇರೆಗೆ ಮರೂರು ಗ್ರಾಮದಿಂದ ಅಕ್ರಮವಾಗಿ ಯಾರೋ ದನಗಳನ್ನು ಕೇರಳದ ಖಸಾಯಿ ಖಾನೆಗೆ ಸಾಗಿಸುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಇಲಾಖಾ ಜೀಪು ನಂ ಕೆಎ 12 ಜಿ 366 ರಲ್ಲಿ ಚಾಲಕ ಪೂವಯ್ಯ ಮತ್ತು ಹೆಚ್ ಸಿ 39, ಪಿಸಿ 85 , 404 ಮತ್ತು ಪಂಚಾಯ್ತುದಾರರೊಂದಿಗೆ ಮರೂರು ಗ್ರಾಮದ ನಳಪಾಕ ಹೋಟೇಲ್ ಹತ್ತಿರ ಕಾಯುತ್ತಿರುವಾಗ್ಗೆ ಸಮಯ 5.45 ಪಿ.ಎಂಗೆ ಮರೂರು ಗ್ರಾಮದಿಂದ ಒಂದು ಟಾಟ ಏಸ್ ಬರುತ್ತಿದ್ದು ಪರಿಶೀಲಿಸಲಾಗಿ ಕೆಎ 12 8363 ರ ಟಾಟ ಏಸ್ ರ ಹಿಂಬಾಗದಲ್ಲಿ 5 ರಾಸುಗಳ ಇರುವುದು ಕಂಡು ಬಂತು ಇವುಗಳ ಬಗ್ಗೆ ಸರ್ಕಾರದ ರಹದಾರಿ ಪತ್ರ ಇದೆಯೇ ಎಂದು ಕೇಳಿದಾಗ ಇರುವುದಿಲ್ಲ ಈ ದನಗಳನ್ನು ಹುಣಸೂರಿಗೆ ಸಾಗಿಸಿ ಕೇರಳದ ಕಸಾಯಿಖಾನೆಗೆ ಮಾಂಸ ಮಾಡಿ ಮಾರಟ ಮಾಡಲು ಸಾಗಿಸುತ್ತಿರುವುದಾಗಿ ಆರೋಪಿಗಳಾದ 1) ಮಕ್‌ಬಲ್ ತಂದೆ ಅಬ್ದುಲ್ ರಹಿಮಾಣ್ ಪ್ರಾಯ43 ವರ್ಷ ಕೆಎ12 8363 ಟಾಟಾ ಎಸ್ ಡ್ರೈವರ್ ವಿರಾಜಪೇಟೆ ಬಂಗಾಳ ಬೀದಿ 2) ಕೆಂಡಗಣ್ಣ ತಂದ ಕರಿಸಿದ್ದೆ ಗೌಡ ಪ್ರಾಯ32 ವರ್ಷ ವ್ಯವಸಾಯ ವೃತ್ತಿ ವಾಸ ಚಿಕ್ಕಬೀರನಹಳ್ಳಿ, ಹುಣುಸೂರು ತಾ: 3) ಲೋಕೇಶ್ ತಂದೆ ಸಿದ್ದಯ್ಯ ಪ್ರಾಯ33 ವರ್ಷ ವ್ಯವಸಾಯ ವೃತ್ತಿ ಹುಣುಸೂರು ತಾ: 4) ಜಯರಾಂ ತಂದೆ ಕರಿಸಿದ್ದೇಗೌಡ ಪ್ರಾಯ 28 ವ್ಯವಸಾಯ ಕೆಲಸ ಹುಣುಸೂರು ತಾ: ಹಾಗೂ ರಾಸುಗಳು ಮತ್ತು ವಾಹನ ವನ್ನು ಅಮಾನತ್ತು ಪಡಿಸಿದಕೊಂಡು ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.
