Wednesday, October 19, 2011

ರಸ್ತೆ ಅಪಘಾತ

ದಿನಾಂಕ 18-10-2011 ರಂದು ಶನಿವಾರಸಂತೆ ಠಾಣಾ ವ್ಯಾಪ್ತಿ ಶನಿವಾರಸಂತೆ ಯ ಕೆ.ಇ.ಬಿ. ಕಛೇರಿಯ ಸಾರ್ವಜನಿಕ ರಸ್ತೆ ಪಿರ್ಯಾದಿಯರಾದ ಶ್ರೀ ಜಯರಾಜ್‌ ಮತ್ತು ಇಬ್ಬರು ಸ್ನೇ»ತರು ಹಾಗೂ ಇತರ 12 ಜನರೊಂದಿಗೆ ಕಾವೇರಿ ಜಾತ್ರೆಗೆ ಹೋಗಲು ಕೆ.ಎ-19, ಡಿ-288 ರ ವ್ಯಾನಿನಲ್ಲಿ ಮಂಗಳೂರಿನಿಂದ ಹೊರಟು ಕೊಡಗು ಜಿಲ್ಲೆಯ ಶನಿವಾರಸಂತೆಯ ಕೆ.ಇ.ಬಿ. ಕಛೇರಿ ಸಮೀಪದ ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಿರುವಾಗ್ಗೆ, ಎದುರುಗಡೆಯಿಂದ ಒಂದು ಲಾರಿಯ ಅತೀ ವೇಗವಾಗಿ ಬರುತ್ತಿದ್ದನ್ನು ಕಂಡು ವ್ಯಾನಿನ ಚಾಲಕ ಪ್ರಶಾಂತನು ಗಾಬರಿಯಿಂದ ವ್ಯಾನಿಗೆ ತಕ್ಷಣ ಬ್ರೆಕ್‌ ಹಾಕಿದ ಪರಿಣಾಮ ವ್ಯಾನ್‌ ಮಗುಚಿಗೊಂಡು ರಸ್ತೆಯ ಮೇಲೆ ಬಿದ್ದ ಪರಿಣಾಮ ವ್ಯಾನಿನಲ್ಲಿದ್ದ ಜನರಿಗೆ ಯಾರಿಗೂ ನೋವು ಗಾಯಗಳಾಗದೇ ವ್ಯಾನ್‌ ಜಖಂ ಗೊಂಡಿದ್ದು ವ್ಯಾನಿನ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಕೊಟ್ಟ ಪುಕಾರಿನ್ವ ಶನಿವಾರಸಂತೆ ಠಾಣೆ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.

ರಸ್ತೆ ಅಪಘಾತ:
ದಿ: 18-10-2011 ರಂದು ಕುಶಾಲನಗರ ಠಾಣಾ ವ್ಯಾಪ್ತಿಯ ಕುಶಾಲನಗರ ಟೌನ್‌ನಲ್ಲಿರುವ ಆರ್.ಎಂ.ಸಿ. ಆವರಣದ ಹತ್ತಿರ
ಪಿರ್ಯಾದಿಯವರ ಸೋದರ ಮಾವನಾದ ಮಂಜುನಾಥ ಇವರು ಪಂಚಾಯಿತಿ ಕೆಲಸ ಮುಗಿಸಿಕೊಂಡು ತನ್ನ ಸಂಬಂಧಿಕರ ತಿಥಿ ಕಾರ್ಯ ಮುಗಿಸಿಕೊಂಡು ಹಾರಂಗಿಯಿಂದ ಅವರ ಸ್ಟಾರ್ ಸಿಟಿ ಮೋಟಾರ್ ಬೈಕ್ ಕೆ.ಎ.12 ಹೆಚ್. 8797 ರ ಬೈಕ್ ನಲ್ಲಿ ಕುಶಾಲನಗರಕ್ಕೆ ಬರುತ್ತಿರುವಾಗ ಕುಶಾಲನಗರ ಟೌನ್‌ನಲ್ಲಿರುವ ಆರ್.ಎಂ.ಸಿ. ಆವರಣದ ಹತ್ತಿರ ಎದುರುಗಡೆಯಿಂದ ಕೆ.ಎ.12 -4336 ರ ಅಂಬುಲೆನ್ಸ್ ಚಾಲಕ. ಜೆ.ಜೆ. ಸೋನ್ಸ್‌ ಇವರು ಅತಿವೇಗ ಮತ್ತು ಅಜಾಗೂರೂಕತೆಯಿಂದ ಚಲಾಯಿಸಿಕೊಂಡು ಡಿಕ್ಕಿಪಡಿಸಿದ ಪರಿಣಾಮ ರಕ್ತಗಾಯವಾಗಿರುವುದಾಗಿ ಈ ಸಂಬಂಧ ಕೊಟ್ಟ ಪುಕಾರಿನ್ವ ಶನಿವಾರಸಂತೆ ಠಾಣೆ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ