Friday, October 21, 2011

ಕುಲಕ್ಷ ಕಾರಣಕ್ಕಾಗಿ ಹಲ್ಲೆ ಮತ್ತು ಜೀವ ಬೆದರಿಕೆ:
ದಿನಾಂಕ: 20-10-2011 ರಂದು 10.00 ಎ.ಎಂಗೆ ಮಡಿಕೇರಿ ಗ್ರಾಮಾಂತರ ಠಾಣಾ ಮರಗೋಡು ಗ್ರಾಮದ ಫಿರ್ಯಾದಿದಾರರಾದಪಿ.ಜಿ ಶಂಭು ಪೌತಿ ಗಣಪತಿ, 40 ವರ್ಷ, ಕೃಷಿಕ, ಮತ್ತು ಅವರ ಹೆಂಡತಿ ಚಿತ್ರಾ ಎಂಬವರು ಅವರ ಮನೆಯ ಬಾತ್‌ ರೂಂ ರೀಪೇರಿ ಮಾಡುತ್ತಿರುವಾಗ್ಗೆ ಆರೋಪಿಗಳಾದ 1. ಪಿ.ಬಿ ಭರತ್‌ 2. ಪಿ.ಬಿ ಶೈಲಾ ಮರಗೋಡು ಗ್ರಾಮ, ಅವರ ಬಾಪ್ತು ಕೆ.ಎ 12 ಎನ್‌ 9238 ರ ಕಾರಿನಲ್ಲಿ ಬಂದು ಫಿರ್ಯಾದಿಯವರೊಂದಿಗೆ ಹಸು ಕಾರುವಿನ ವಿಚಾರದಲ್ಲಿ ಜಗಳ ತೆಗೆದು ಹೀನಾಮಾನವಾಗಿ ಬೈದು, ಆರೋಪಿ ಶೈಲಾಜಳು ಫಿರ್ಯಾದಿಯ ಹೆಂಡತಿಯ ಬೆನ್ನಿಗೆ ಚಪ್ಪಲಿಯಿಂದ ಹೊಡೆದು ಮತ್ತು ಆರೋಪಿ ಭರತ್‌ ಫಿರ್ಯಾದಿಯವರಿಗೆ ಹಾಕಿಸ್ಟಿಕ್‌ನಿಂದ ಹೊಡೆಯಲು ಬಂದುರುವುದಾಗಿ ಹಾಗೂ ನಂತರ ಕಾರನ್ನು ಫಿರ್ಯಾದಿದಾರರ ಕಾಳಿನ ಬೆರಳಿನ ಮೇಲೆ ಹತ್ತಿಸಿರುವುದಾಗಿ, ಆದುದರಿಂದ ಆರೋಪಿಗಳ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ ನೀಡಿದ ಪುಕಾರಿಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.
ಮುಸ್ಲಿಂ ಜಮಾಯತ್‌ ಮಸೀದಿಯ ಲೆಕ್ಕ ಪತ್ರದ ವಿಚಾರದಲ್ಲಿ ಹಲ್ಲೆ ಮತ್ತು ಕೊಲೆಬೆದರಿಕೆ

ದಿನಾಂಕ: 20-10-2011 ರಂದು ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ವಕ್ಷ್‌ ಅಫೀಸ್‌ ಮಡಿಕೇರಿ ನಗರ , ಪಿರ್ಯಾದಿದಾರುರಾದ ಎ.ಎ. ಅಬ್ದುಲ್‌ರವರು ಮತ್ತು ಜಮ್ಮ ಮಸೀದಿಯ ಕಾರ್ಯದರ್ಶಿ ಮತ್ತು ಸದಸ್ಯರೊಂದಿಗೆ ಜಮಾಯತ್‌ ಮಸೀದಿಯ ಲೆಕ್ಕ ಪತ್ರದ ವಿಚಾರದಲ್ಲಿ ಚರ್ಚೆ ನಡೆಸಲು ಆಕ್ಷೇಪಿಸುತ್ತಿದ್ದ ಸದಸ್ಯರನ್ನು ಮಡಿಕೇರಿಯ ವಕ್ಸ್‌ ಕಛೇರಿಗೆ ಕರೆಸಿಕೊಂಡು ಚರ್ಚೆ ನಡೆಸುತ್ತಿದ್ದ ಸಮಯದಲ್ಲಿ ಸಮಯ 11-30 ಗಂಟೆಗೆ ಆರೋಪಿಗಳು ಅಕ್ರಮ ಕೂಟ ಸೇರಿಕೊಂಡು ಕಬ್ಬಿಣದ ಕುರ್ಚಿಯಿಂದ ಪಿರ್ಯಾದಿ ಮತ್ತು ಇತರಿಗೆ ಹೊಡೆದು ಗಾಯಕೊಳಿಸಿದಲ್ಲದೆ ನೀವು ಊರಿಗೆ ಬನ್ನಿ ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿರುವುದಾಗಿ ಕೊಟ್ಟ ಪುಕಾರಿನ್ವಯ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.


ಕಳುವು ಪ್ರಕರಣ:
ದಿ: 20-10-2011 ರಂದು ವಿರಾಜಪೇಟೆ ನಗರ ಠಾಣಾ ವ್ಯಾಪ್ತಿಯ ಗಣಫತಿ ದೇವಸ್ಥಾನ ವಿರಾಜಪೇಟೆ ನಗರ ,ಪಿರ್ಯಾದಿ ವರಾದ ಪ್ರಮೋಧ ರವರು ಎಂದಿನಂತೆ ಪೂಜೆ ಮುಗಿಸಿ ದೇವಸ್ಥಾನದ ಮುಂಬಾಗಿಲನ್ನು ಹಾಗೂ ಗರ್ಭಗುಡಿಯ ಬಾಗಿಲನ್ನು ಹಾಕಿಕೊಡು ಹೋಗಿದ್ದು ದಿ: 21-10-2011 ರಂದು ಬೆಳ್ಳಿಗೆ 4-45 ಗಂಟೆಗೆ ಪೂಜೆಗೆಂದು ದೇವಸ್ಥಾನಕ್ಕೆ ಬಂದಾಗ ಗರ್ಬಗುಡಿಯ ಮುಂಬಾಗಿಲು ತೆರೆದಿ್ದು ಗರ್ಭಗುಡಿಯ ಮುಂಭಾಗದ ವೆರಾಂಡದಲ್ಲಿ ಇಟ್ಟದ್ದ ಸುಮಾರು 2 1/2 ಅಡಿ ಎತ್ತರದ ಹಿತ್ತಾಳೆ ಕಾಣಿಕೆ ಹುಂಡಿಯ ಕಳುವಾಗಿದ್ದು ಅದರಲ್ಲಿ ಅಂದಾಜು 2,000/- ಹಣವಿರಬಹುದೆಂದು ಕಳುವು ಮಾಡಿರುವುದಾಗಿ ಕೊಟ್ಟ ಪುಕಾರಿನ್ವಯ ವಿರಾಜಪೇಟೆ ನಗರ ಠಾಣೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.