ಅಕಸ್ಮಿಕ ಮರಣ
ದಿ: 21-10-2011 ರಂದು ವಿರಾಜಪೇಟೆ ನಗರ ಠಾಣಾ ವ್ಯಾಪ್ತಿಯ ಮೂರ್ನಾಡ್ ಜಂಕ್ಷನ್ ಹತ್ತಿರ ಫಿರ್ಯಾದಿಯವರಾದ ಕೆ.ಎನ್ ಸುಚಿತ್ ತಮ್ಮ ಬಾಪ್ತು ಹೋಟೇಲ್‌ನ ಕ್ಯಾಶ್ ಕೌಂಟರ್‌ನಲ್ಲಿ ಕುಳಿತುಕೊಂಡಿರುವಾಗ್ಗೆ ಹೋಟೇಲ್ ಪಕ್ಕದಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯು ಗೋಡೆಗೆ ಒರಗಿ ಮಲಗಿರುವುದು ಕಂಡು ಬಂದಿದ್ದು ಸಾರ್ವಜನಿಕರು ಅವರನ್ನು ನೋಡುತ್ತಿದ್ದು, ಫಿರ್ಯಾದಿಯವರು ಸಹ ಹತ್ತಿರ ಹೋಗಿ ನೋಡುವಾಗ್ಗೆ ಸದರಿ ವ್ಯಕ್ತಿಯು ಮೃತ್ತಪಟ್ಟಿದ್ದು ಆತನ ಜೇಬಿನಿಂದ ಕೆಳಗೆ ಬಿದ್ದಿದ್ದ ಚೀಟಿಯನ್ನು ನೋಡಲಾಗಿ ವಿರಾಜಪೇಟೆ ಸರ್ಕಾರಿ ಅಸ್ಪತ್ರೆ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದು ಚೀಟಿಯಾಗಿದ್ದು ಸದರಿ ಚೀಟಿಯಲ್ಲಿ ಜಯದೇವ ಗೌಸ್ ಪ್ರಾಯ 53 ವರ್ಷ ಎಂದು ಬರೆದಿದ್ದು ಕಂಡುಬಂದಿದ್ದು ಸದರಿ ಮೃತ್ತ ವ್ಯಕ್ತಿ ಕಾಯಿಲೆಯಿಂದ ಅಥವಾ ಹೃದಯಾಘಾತದಿಂದ ಮೃತ್ತ ಪಟ್ಟಿರುವ ಬಗ್ಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ
ಅತ್ನಹತ್ಯೆಯ ಪ್ರಕರಣ
ದಿ: 20-10-2011 ರಂದು ವಿರಾಜಪೇಟೆ ಗ್ರಾಮಾಂತರ ಠಾಣೆಯ ಮೈತಾಡಿ ಗ್ರಾಮದ ನಿವಾಸಿ ಐಚ್ಚೆಟ್ಟಿರ ಸುಬ್ಬಯ್ಯನವರ ಲೈನ್ ಮನೆಯಲ್ಲಿ ವಾಸ ಮಾಡಿಕೊಂಡಿದ್ದ ಮಂಜ ಎಂಬಾತನು ಮದ್ಯಪಾನ ಮಾಡಿಕೊಂಡು ಬಂದು ಹೆಂಡತಿಯೊಂದಿಗೆ ಜಗಳ ಮಾಡಿದ್ದು, ಹೆಂಡತಿ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಪಕ್ಕದ ಮನೆಗೆ ಹೋಗಿದ್ದು ಈ ಕಾರಣದಿಂದ ಮಂಜ ಎಂಬಾತನು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು,ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ರಸ್ತೆ ಅಪಘಾತ
ದಿ:21-10-2011 ರಂದು ಪೊನ್ನಂಪೇಟೆಯ ವ್ಯಾಪ್ತಿಯ ಬಿಳೂರು ಮಸೀದಿಯಹತ್ತಿರ ಪಿರ್ಯಾದಿರವರಾದ ರಹೀಂರವರು ವ್ಯವಸಾಯ ವೃತ್ತಿ ಮಾಡಿಕೊಂಡು ಜೀವನ ಸಾಗುಸುತ್ತಿರುವುದಾಗಿದೆ. ರಹೀಂರವರು ಸೈಕಲನ್ನು ತೆಗೆದುಕೊಂಡು ಪ್ರಾರ್ಥನೆಗೊಂದು ಮಸೀದಿಗೆ ಬರುತ್ತಿದ್ದ ಸಮಯದಲ್ಲಿ ಒಂದು ಸಿಲ್ವರ್ ಅಲ್ಟೋ ಕೆ.ಎ 12 ಪಿ ಸುರೇಶ ನ್ನು ಕಾರು ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಅವರ ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಅವರಿಗೆ ರಕ್ತಮಯಗಾಯವಾಗಿದ್ದು ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.
ಕಾಣೆಯಾದ ಹುಡುಗಿ:
ದಿ: 21-10-2011 ರಂದು ಮಡಿಕೇರಿ ನಗರ ಠಾಣಾ ವ್ಯಾಪ್ತಿ ಚಾಮುಂಡೇಶ್ವರಿ ನಗರ ದ ಎಂ.ಜಿ ಜೀನತ್ ರವರ ಮಗಳು ಎಂಎಸ್ ಹಾಜಿರ ತಂದೆ ಸಮಿಉಲ್ಲ ಪ್ರಾಯ22 ವರ್ಷ ಎಂಬವಳು ಎಂದಿನಂತೆ ಟೈಲರಿಂಗ್ ಕ್ಲಾಸ್ ಗೆಂದು ಹೋದವಳು ಸಂಜೆಯಾದರು ವಾಪಾಸ್ಸು ಮನೆಗೆ ಬಂದಿರುವುದಿಲ್ಲ ಎಲ್ಲಾ ನೆಂಟರಿಷ್ಟರ ಮನೆಗಳಲ್ಲಿ ಮತ್ತು ಸ್ನೇಹಿತರ ಮನೆಗಳಲ್ಲಿ ವಿಚಾರಿಸಿದ್ದಲ್ಲು ಈವರೆಗೆ ಪತ್ತೆಯಾಗದೇ ಇದ್ದು ಈ ಸಂಬಂಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಆಕಸ್ಮಿಕ ಮರಣ:
ದಿ: 21-10-2011 ರಂದು ಮಡಿಕೇರಿ ನಗರಠಾಣಾ ವ್ಯಾಪ್ತಿಯ ರೇಸುಕೋಸ್ ರಸ್ತೆಯ ಇರುವ ತೋಡಿನಲ್ಲಿ ಪಿರ್ಯಾದಿ ಎಸ್.ಡಿ ಶಮ್ಮಿರವರ ತಾಯಿ ಸೂದನ ಸೀತಮ್ಮ ರವರು ಬಿ.ಪಿ , ಮಧುಮೇಹ ಅಲ್ಲದೇ ಹೃದಯ ಶಸ್ತ್ರಚಿಕಿತ್ಸೆಯಾಗಿದ್ದರಿಂದ ಅವರ ಮನಸ್ಸು ಸ್ಥಿಮಿತದಲ್ಲಿಲ್ಲದೆ ಜೀವನದಲ್ಲಿ ಜಿಗುಪ್ಸೆಗೊಂಡು ಬೆಳಗ್ಗಿನ ಸಮಯದಲ್ಲಿ ತೋಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ನಗರಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿರುವುದಾಗಿದೆ.
ಕಾಣೆಯಾದ ಮನುಷ್ಯ ಪ್ರಕರಣ:
ಶನಿವಾರಸಂತೆ ಠಾಣೆ ವ್ಯಾಪ್ತಿಯ ಮಾರುಕಟ್ಟೆ ಸಮೀಪ ಪಿರ್ಯಾದಿಯವರ ಪತಿ ಅರುಣಕುಮಾನು ದಿನಾಂಕ : 21-10-2011 ರಂದು ಬೆಳಿಗ್ಗೆ ಎಂದಿನಂತೆ ತನ್ನ ದಿನಸಿ ಅಂಗಡಿಗೆ ಹೋಗಿದ್ದು, ಬೆಳಿಗ್ಗೆ ತಿಂಡಿಗೆ ಮನೆಗೆ ಬಾರದ್ದರಿಂದ ಪಿರ್ಯಾದಿಯವರು ದೂರವಾಣಿ ಮುಖೇನ ವಿಚಾರಿಸುವಾಗ್ಗೆ, ಈಗ ನಾನು ಬರುವುದಿಲ್ಲ ಎಂದು ತಿಳಿಸಿದ್ದು, ಮದ್ಯಾಹ್ನ ಸಮಯ 14.00 ಗಂಟೆಗೆ ಊಟಕ್ಕೂ ಬಾರದೆ ಇದ್ದಾಗ ಈಚಲಬೀಡು ಗ್ರಾಮದ ಮೋಹನ್ ಎಂಬುವವರು ಪಿರ್ಯಾದಿಯವರ ಮನೆಯ ಬಳಿ ಬಂದು ಅರುಣ್‌ಕುಮಾರನು ಅಂಗಡಿಯಲ್ಲಿ ಇಲ್ಲ, ಮನೆಗೆ ಬಂದಿದ್ದಾರಾ ? ಎಂದು ವಿಚಾರಿಸಿದ್ದು, ರಾತ್ರಿಯದರೂ ಅರುಣ್‌ಕುಮಾರನು ಮನೆಗೆ ಬಂದಿರುವುದಿಲ್ಲ. ನೆಂಟರಿಷ್ಟರಲ್ಲಿ ವಿಚಾರಿಸಿದಲ್ಲೂ, ಯಾವುದೇ ಮಾಹಿತಿ ದೊರೆತಿರುವುದಿಲ್ಲ. ಈ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.
