Friday, October 28, 2011

ಕಲ್ಲಿನ ಮೇಲೆ ಆಕಸ್ಮಿಕ ಬಿದ್ದು ವ್ಯಕ್ತಿಯ ದುರ್ಮರಣ:


ದಿನಾಂಕ 27-10-2011 ರಂದು ನಾಪೋಕ್ಲು ಪೊಲೀಸ್‌ ಠಾಣಾ ಸರಹದ್ದಿನ ಚೆರಿಯಪರಂಬು ಬೇತು ಗ್ರಾಮದ ನಿವಾಸಿ ಫಿರ್ಯಾದಿ ಚಂದ್ರಶೇಖರ ಎಂಬವರ ಸಹೋದರನಾದ ಸುರೇಶ ಎಂಬಾತನು ಪಾನಮತ್ತನಾಗಿ ಸ್ನಾನ ಮಾಡುಯತ್ತಿದುವ ಸಂದರ್ಭದಲ್ಲಿ ಆತಸ್ಮಕವಾಗಿ ಕಲ್ಲಿನ ಮೇಲೆ ಬಿದ್ದ ಪರಿಣಾಮ ತೀವ್ರ ತರಹದ ಪೆಟ್ಟಾಗಿ ಮೃತಪಟ್ಟಿರುವ ಬಗ್ಗೆ ನಾಪೋಕ್ಲು ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.


ಮಾರುತಿ ಕಾರು ಮತ್ತು ಕೆ.ಎಸ್‌.ಆರ್‌ಟಿ ಸಿ ಬಸ್ಸು ಮುಖಾಮುಖಿ ಡಿಕ್ಕಿ ವ್ಯಕ್ತಿಗೆ ಗಾಯ:


ದಿನಾಂಕ 27-10-2011 ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ದೇವರಕೊಲ್ಲಿ ಗ್ರಾಮದ ಬಳಿ ಫಿರ್ಯಾದಿ ರ್ಶರೀ ಹರೀಶ್‌ ಎಂಬವರು ತಮ್ಮ ಮಾರುತಿ ಕಾರಿನಲ್ಲಿ ಮಂಗಳೂರಿನಿಂದ ಮಡಿಕೇರಿ ಕಡೆಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಎದುರುಗಡೆಯಿಂದ ಬಂದಂತಹ ಕೆ.ಎಸ್‌.ಆರ್‌.ಟಿ. ಸಿ ಬಸ್ಸಿನ ಚಾಲಕ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿದ ಪರಿಣಾಮವಾಗಿ ಬಸ್ಸು ಮಾರುತಿ ಕಾರಿಗೆ ಡಿಕ್ಕಿಯಾಗಿ ಫಿರ್ಯಾದಿಯ ಎದೆ ಹಾಗೂ ಕಾಲುಗಳಿಗೆ ನೋವು ಉಂಟಾಗಿದ್ದು ಅಲ್ಲದೆ ಕಾರು ಭಾಗಶಃ ಜಖಂಗೊಂಡಿದ್ದು ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.


ಹೆಣ್ಣು ಕಾಡಾನೆಯ ಸಂಶಯಾಸ್ಪದ ಸಾವು, ಪ್ರಕರಣ ದಾಖಲು:


ದಿನಾಂಕ 27-10-2011 ರಂದು ಕುಶಾಲನಗರ ಠಾಣಾ ಸರಹದ್ದಿನ ಚಿಕ್ಕಬೆಟ್ಟಗೇರಿ ಗ್ರಾಮದ ಆನೆಕಾಡು ಮೀಸಲು ಅರಣ್ಯದಲ್ಲಿ ಒಂದು ಕಾಡು ಹೆಣ್ಣಾನೆಯು ಸಾವನ್ನಪ್ಪಿದ್ದು ಇದು ಸದರಿ ಗ್ರಾಮದ ಮಾಚಯ್ಯ ಹಾಗೂ ಕಲ್‌ವೀರ್‌ ಎಂಬವರುಗಳ ಜೋಳದ ಹೊಲದಲ್ಲಿ ಅಳವಡಿಸಿದ ವಿದ್ಯುತ್‌‌ ತಂತಿಗೆ ಆನೆಯ ಸೊಂಡಿಲು ಸುತ್ತಿಕೊಂಡು ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟಿರಬಹುದೆಂದು ಸಂಶಯದಿಂದ ಫಿರ್ಯಾದಿ ಕಮಲಾಕ್ಷ, ವನಪಾಲಕ, ಕುಶಾಲನಗರ ಶಾಖೆ, ಕುಶಾಲನಗರ ಅರಣ್ಯ ವಲಯ ಇವರು ನೀಡಿದ ದೂರಿನ ಆದಾರದ ಮೇಲೆ ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.