Friday, November 4, 2011

ರಸ್ತೆ ಅಪಘಾತ:

1 ದಿನಾಂಕ 02-11-11 ರಂದು ಸಮಯ 12.30 ಗಂಟೆಗೆ ಸುಂಟಿಕೊಪ್ಪ ಠಾಣಾ ಸರಹದ್ದಿನ ಸುಂಟಿಕೊಪ್ಪ ನಗರದ ವಂದನ ಬಾರ್‌ ಬಳಿ ಈ ಕೇಸಿನ ಪಿರ್ಯಾಧಿ ಪಿ.ವಿ.ಧರ್ಮ ಇವರು ನಂ: ಕೆಎ-20-ಜಡ್‌-8844 ರ ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಟಯರ್ ಶಾಫ್‌ಗೆ ಹೋಗಿ ವಾಪಾಸ್ಸು ಬರುತ್ತಿರುವಾಗ ಸುಂಟಿಕೊಪ್ಪ ನಗರದ ಕಡೆಯಿಂದ ಮಡಿಕೇರಿ ಕಡೆಗೆ ನಂ: ಕೆಎ-19-ಎಫ್‌-2360 ರ ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ಅದರ ಚಾಲಕ ಮೇಲ್ಕಂಡ ಆರೋಪಿ ನಂಜುಂಡ ರವರು ಅತೀವೇಗ & ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಪಿರ್ಯಾಧಿದಾರರ ಕಾರಿಗೆ ಹಿಂಬಾಗಕ್ಕೆ ಡಿಕ್ಕಿಪಡಿಸಿದ ಪರಿಣಾಮ ಕಾರು ಜಖಂಗೊಂಡಿರುವುದಾಗಿ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ಸುಂಟಿಕೊಪ್ಪಠಾಣೆಯಲ್ಲಿ ದಾಖಲಿಸಿತನಿಖೆಯನ್ನುಕೈಗೊಂಡಿರುವುದಾಗಿದೆ.

ದಿ: 2-11-2011 ರಂದು ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಕಬಿನಸೇತುವೆ ಐಗೂರುಗ್ರಾಮದ ಬಳಿ ಪಿರ್ಯಾದಿರವರಾದ ಮಹೇಶ್‌ ಮತ್ತು ಸ್ನೇಹಿತರಾದ ಯತೀಶ್‌ ಕುಮಾರ್‌ ರವರು ತಮ್ಮ ಟೊಯೋಟ ಇನೋವ ಕಾರಿನಲ್ಲಿ ಮಡಿಕೇರಿಗೆ ಹೋಗಿ ವಾಪಾಸ್ಸು ಬರುತ್ತಿರುವಾಗ್ಗೆ ಎದುರುಗಡೆಯಿಂದ ಬಂದ ಮೋಟಾರ್‌ ಬೈಕನ್ನು ಅದರ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯವರ ಕಾರಿನ ಎಡಬಾಗದ ಬಂಪರಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನ ಮುಂಬಾಗ ಜಖಂಗೊಂಡಿರುವುದಾಗಿ ಕೊಟ್ಟ ಪುಕಾರಿನ್ವಯ ಸೋಮವಾರಪೊಲೀಸ್‌ ಠಾಣೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.

ವಿನಾ ಕಾರಣ ಜಗಳ
ಪೊನ್ನಂಪೇಟೆಠಾಣಾ ವ್ಯಾಪ್ತಿಯ ಪಂಜರಿ ಪೈಸಾರಿ , ಕಿರುಗೂರು ಗ್ರಾಮದ ನಿವಾಸಿ ಹಜಾಮರ ರಾಮು ಮತ್ತು ನನ್ನ ಅಣ್ಣ ಪುಟ್ಟಸ್ವಾಮಿ ನಮ್ಮ ತಾಯಿಯವರು ಮಾಡಿದ್ದ ಮನೆಯಲ್ಲಿ 2 ಭಾಗ ಮಾಡಿಕೊಂಡು ಬೇರೆ ಬೇರೆಯಾಗಿ ವಾಸವಾಗಿದ್ದು ,ನನ್ನ ಹೆಂಡತಿ ಮೀನಾ ನನ್ನ ಮಕ್ಕಳಾದ ಗಣೇಶ ಮತ್ತು ಸುಬ್ರಮಣಿ ಯವರೊಂದಿಗೆ ತನ್ನ ತವರು ಮನೆಯಾದ ಮುರ್ನಾಡಿನ ಬಲಮುರಿಯಲ್ಲಿ ವಾಸವಾಗಿರುತ್ತಾಳೆ. ಸದರಿರವರು ಒಬ್ಬನೆ ಮನೆಯಲ್ಲಿ ವಾಸವಿದ್ದು ನಿನ್ನೆ ದಿನ ರಾತ್ರಿ ಸಮಯ 8.30 ರ ಹೊತ್ತಿಗೆ ಪಿರ್ಯಾದಿರವರ ಅಣ್ಣ ಮತ್ತು ಅಣ್ಣನ ಮಕ್ಕಳಾದ ರಾಜೇಶ್, ಮತ್ತು ಮಹೇಶ ಸೇರಿ ಪಿರ್ಯಾದಿರವರ ವಾಸವಿರುವ ಮನೆಯಿಂದ ಹೊರಗಡೆ ಓಡಿಸಬೇಕೆಂಬ ಉದ್ದೇಶದಿಂದ ವಿನಾ ಕಾರಣ ಜಗಳ ತೆಗೆದು ಏಕಾಎಕಿ ಒಂದು ಕಾಡು ಮರದ ದೊಣ್ಣೆಯಿಂದ ಸದರಿರವರ ತಲೆಯ ಎಡಭಾಗಕ್ಕೆ ಹೊಡೆದು ರಕ್ತ ಗಾಯಪಡಿಸಿದ್ದಲ್ಲದೆ ಅಣ್ಣನ ಮಕ್ಕಳಾದ ರಾಜೇಶ್ ಮತ್ತು ಮಹೇಶ್ ರವರು ಸಹ ಬಲ ಮುಂಗೈಗೆ ಹೊಡೆದರು ಆಗ ತಲೆಗೆ ರಕ್ತ ಗಾಯವಾಗಿರುತ್ತದೆ. ಬಲ ಕೈ ಮತ್ತು ಎಡ ಕೈಗೆ ಸಹ ರಾಜೇಶ್ ಮತ್ತು ಮಹೇಶರವರು ಸಹ ಹೊಡೆದು ನೋವುಪಡಿಸಿ , ಪಿರ್ಯಾದಿರವರಿಗೆ ವಿನಾಕಾರಣ ದೊಣೆಯಿಂದ ಹೊಡೆದು ನೋವುಪಡಿಸಿದ ಅಣ್ಣ ಪುಟ್ಟಸ್ವಾಮಿ ಮತ್ತು ಮಕ್ಕಳಾದ ರಾಜೇಶ್ ಮತ್ತು ಮಹೇಶ್ ರವರ ಮೇಲೆ ಕೊಟ್ಟ ಪುಕಾರಿನ್ವಯ ಪೊನ್ನಂಪೇಟೆಠಾಣೆ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿರುವುದಾಗಿದೆ