Friday, November 11, 2011

ವ್ಯಕ್ತಿಯ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮತ್ತು ಜೀವ ಬೆದರಿಕೆ:
ದಿ: 10-11-2011 ರಂದು ವಿರಾಜಪೇಟೆ ನಗರ ಠಾಣಾ ವ್ಯಾಪ್ತಿಯ ದೊಡ್ಡಟ್ಟಿ ಚೌಕಿಯ ಪಿರ್ಯಾದಿ ದಿನೇಶ್‌ರವರು ನಿಂತುಕೊಂಡಿರುವಾಗ್ಗೆ ಆರೋಪಿ ರಾಜ ಎಂಬುವನ್ನು ಕತ್ತಿಯನ್ನು ತೋರಿಸಿ ಬಾಷರವರ ಮಾಲೀಕ ದಿನೇಶ್‌ ನೀವೇ ಎಂದು ಹೇಳಿ ಎಕಾಎಕಿಯಾಗಿ ದಿನೇಶ್‌ರವರಿಗೆ ಕತ್ತಿಯಿಂದ ಕಡಿದು ಗಾಯಪಡಿಸಿದ್ದು ಜೊತೆಯಲ್ಲಿ ಬಾಷನ್ನು ತಡೆಯಲ್ಲು ಬಂದಾಗ ಅವರಿಗೂ ಕತ್ತಿಯಿಂದ ಕಡಿದು , ಕೊಲೆ ಬೆದರಿಕೆ ಹಾಕಿರುವುದಾಗಿ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ವಿರಾಜಪೇಟೆ ನಗರ ಠಾಣೆಯಲ್ಲಿ ದಾಖಲಿಸಿ ತನಿಖೆಯನ್ನು ಕೈಗೊಂಡಿರುವುದಾಗಿದೆ. ‘’
ಹಲ್ಲೆ ಪ್ರಕರಣ:
ದಿ: 10-11-2011 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ತೆರ್ಮೆಮೊಟ್ಟೆ ಕೆದಮುಳ್ಳೂರು ಗ್ರಾಮದ ನಿವಾಸಿ ಬಿಲ್ಲವರ ಮುತ್ತಪ್ಪ ರವರ ಮಗ ರವಿ ಯು ಮಧ್ಯಪಾನ ಮಾಡಿ ಬಂದು ಆತನ ಹೆಂಡತಿ ವಿರಾಜಪೇಟೆಗೆ ಕೇಳದೆ ಹೋಗಿದಾಳೆಂದು ಜಗಳ ತೆಗೆದು ಕೈಯಿಂದ ಹೊಡೆಯಲು ಹೋದಾಗ ಮುತ್ತಪ್ಪರವರು ತಡೆಯಲು ಬಂದಾಗ ಆರೋಪಿ ರವಿಯ ಜೇಬಿನಿಂದ ಬ್ಲೇಡಿನಿಂದ ಮುತ್ತಪ್ಪರವರ ತುಟಿಗೆ ಗಾಯಪಡಿಸಿದ ಬಗ್ಗೆ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.
ರಸ್ತೆ ಅಪಘಾತ:
ಸೋಮವಾರಪೇಟೆ ಠಾಣಾ ವ್ಯಾಪ್ತಿಯಕುಸುಬೂರು ಗ್ರಾಮದ ಶಿವಕುಮಾರ್‌ ರವರು ತನ್ನ ಬಾಪ್ತು ಮೋಟಾರ್‌ ಸೈಕಲ್‌ ಭರತ್‌ ಎಂಬುವರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಮಾದಾಪುರ ದಿಂದ ಹೊರಟು ಕುಸುಬೂರು ಹತ್ತಿರ ಬರುವಾಗ್ಗೆ ಆರೋಪಿಯು ಮಾರುತಿ ವ್ಯಾನನ್ನು ಅತಿವೇಗ ಮತ್ತು ಆಜಾಗರೂಕತೆಯಿಂದ ಓಡಿಸಿಕೊಂಡು ಮೋಟಾರ್‌ ಬೈಕಿ ಡಿಕ್ಕಿ ಪಡಿಸಿದ ಪರಿಣಾಮ ಮೋಟಾರ್‌ ಸೈಕಲ್‌ ಜಖಂಗೊಂಡಿರುವುದಾಗಿ ಹಾಗೂ ಎಡಕಾಲು ಮತ್ತು ತೋಳಿಗೆ ಗಾಯವಾಗಿದ್ದು ಆರೋಪಿ ವ್ಯಾನನ್ನು ನಿಲ್ಲಿಸದೇ ಹೋಗಿರುವುದಾಗಿ ಕೊಟ್ಟ ಪುಕಾರಿನ್ವಯ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುವುದಾಗಿದೆ.