Wednesday, November 16, 2011

ಆತ್ಮಹತ್ಯೆ ಪ್ರಕರಣ
ದಿ: 15-11 2011 ರಂದು ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ತಾಪಂಡ ಮುತ್ತಣ್ಣ ರವರ ಮಗ ಕಾಳಪ್ಪನವರು ಮೂರು ದಿನಗಳ ಹಿಂದೆ ಆತನ ಮೊಬೈಲ್‌ ಕಾಣೆಯಾಗಿದ್ದು ಇದರ ಬಗ್ಗೆ ಆತ ಎಲ್ಲಾ ಕಡೆ ಹುಡುಕಾಡಿದ್ದು ಪತ್ತೆಯಾಗದ ಕಾರಣ ಜೀವನದಲ್ಲಿ ಬೇಸರಗೊಂಡು ಕೋವಿಯಿಂದ ಗುಂಡು ಹೊಡೆದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕೊಟ್ಟ ಪುಕಾರಿನ್ವಯ ನಾಪೋಕ್ಲು ಠಾಣೆ ಯಲ್ಲಿ ಪ್ರಕರಣವನ್ನು ದಾಖಲಿಸಿರುವುದಾಗಿದೆ.

ಹುಡುಗ ಕಾಣೆ:
ಮಡಿಕೇರಿ ನಗರ ಠಾಣೆಯ ವ್ಯಾಪ್ತಿಯ ಇಂದಿರನಗರದ ನಿವಾಸಿ ಅಮ್ಮಯ್ಯ ರವರ ಮೊಮ್ಮಗಮದನ ವರ್ಷ10, ನಿತ್ಯದಂತೆ ಹಾಲು ತರಲು ಮನೆಯಿಂದ ಬೆಳಿಗೆ ಅಂಗಡಿಗೆ ಹೋದವನು ಸಂಜೆಯಾದರು ಮನೆಗೆ ಬಾರದೆ ಇದ್ದು ಎಲ್ಲಾ ಕಡೆ ಹುಡುಕಾಡಿದರೂ ಸಹ ಪತ್ತೆಯಾಗದೆ ಕೊಟ್ಟ ಪುಕಾರಿನ್ವಯ ಪ್ರಕರಣ ವನ್ನು ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿರುವುದಾಗಿದೆ

ಮಹಿಳೆ ಮೇಲೆ ದೌರ್ಜನ್ಯ:
ದಿನಾಂಕ 15-11-2011 ರಂದು ಸೋಮವಾರಪೇಟೆಠಾಣಾ ವ್ಯಾಪ್ತಿಯ ಬೆಟ್ಟದಳಿ ಗ್ರಾಮದ ಪಿರ್ಯಾದಿಯವರು ಬಿ.ಜಿ ಮೋಹಿನಿರವರು ಆರೋಪಿ ಸೋಮೇಶನನ್ನು ಕಳೆದ 4 ವರ್ಷಗಳ ಹಿಂದೆ ಮದುವೆಯಾಗಿದ್ದು ಕಳೆದ ಒಂದು ವರ್ಷದಿಂದ ಆರೋಪಿಯು ವಿಪರೀತ ಮದ್ಯ ಸೇವನೆ ಮಾಡಿಕೊಂಡು ಬಂದು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರಿಂದ 5 ತಿಂಗಳುಗಳಿಂದ ಮಕ್ಕಳೊಂದಿಗೆ ತನ್ನ ತವರು ಮನೆಯಲ್ಲಿದ್ದು ದಿನಾಂಕ 13-11-2011 ರಂದು ಸಂಜೆ 6:30 ಪಿ.ಎಂ ಗೆ ಆರೋಪಿಯು ಮಧ್ಯ ಸೇವನೆ ಮಾಡಿ ಪಿರ್ಯಾದಿಯ ತಂದೆ ತಾಯಿ ಇಲ್ಲದ ಸಮಯದಲ್ಲಿ ಪಿರ್ಯಾದಿಯ ತಾಯಿ ಮನೆಗೆ ಹೋಗಿ ಕುಡಿಯಲು ಹಣ ಕೋಡು ಎಂದು ಹೇಳಿ ಜಗಳ ತೆಗೆದು ಪಿರ್ಯಾದಿಯನ್ನು ಎಳೆದಾಡಿ ಕೈಯಿಂದ ಭುಜಕ್ಕೆ ಹೊಡೆದು ನೋವು ಪಡಿಸಿ ಈ ವಿಷಯವನ್ನು ನಿನ್ನ ತಂದೆ ತಾಯಿಗೆ ತಿಳಿಸಿದರೆ ನಿನ್ನನ್ನು ಮತ್ತು ಮಕ್ಕಳನ್ನು ಕುತ್ತಿಗೆ ಹಿಸುಕಿ ಸಾಯಿಸುತ್ತೇನೆಂದು ಜೀವ ಬೆದರಿಕೆ ಹಾಕಿರುವುದಾಗಿ ಕೊಟ್ಟ ಪುಕಾರಿನ್ವಯ ಸೋಮವಾರಪೇಟೆ ಠಾಣೆಯಲ್ಲಿ ದಾಖಲಿಸಿ ತನಿಖೆಯನ್ನು ಕೈಗೊಂಡಿರುವುದಾಗಿದೆ.