Tuesday, December 27, 2011


ರಸ್ತೆ ಅಪಘಾತ, ಯುವಕನ ದುರ್ಮರಣ:


ದಿನಾಂಕ 26-12-2011 ರಂದು ಫಿರ್ಯಾದಿ ಡಿ.ಎಂ. ಬೋಪಣ್ಣ ಹಾಗೂ ಮಧನ್‌ ಎಂಬವರು ಹೊಟೇಲ್‌ ವ್ಯಾಲಿವ್ಯೂವ್‌ನಲ್ಲಿ ಕೆಲಸ ಮುಗಿಸಿಕೊಂಡು ಮಡಿಕೇರಿ ನಗರದ ಕಾಫಿ ಕೃಪ ಕಟ್ಟಡದ ಬಳಿ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ಲಾರಿ ನಂ.ಕೆಎ-34, 5710ರ ಚಾಲಕ ಪೂರ್ಣೇಶ್‌ ಲಾರಿಯನ್ನು ಅಜಾಗರೂಕತೆ ಹಾಗು ನಿರ್ಲಕ್ಷ್ಯತನದಿಂದ ಓಡಿಸಿದ ಪರಿಣಾಮ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಧನ್‌ಗೆ ಡಿಕ್ಕಿಯಾಗಿ ಸ್ಥಳದಲ್ಲಿಯಲ್ಲೇ ಆತ ಮೃತಪಟ್ಟಿದ್ದು, ಮಡಿಕೇರಿ ಟ್ರಾಫಿಕ್‌ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿರುತ್ತಾರೆ.


ರಸ್ತೆ ಅಪಘಾತ ಪ್ರಯಾಣಿಕರಿಗೆ ಗಾಯ:


ಈ ದಿನ ಬೆಳಿಗ್ಗೆ 8-45 ಗಂಟೆಗೆ ಫಿರ್ಯಾದಿ ದೊಡ್ಡೇಗೌಡ ಹಾಗೂ ಇತರ 11 ಜನರು ಪೊನ್ನಂಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ದೇವರಪುರ ಗ್ರಾಮದಲ್ಲಿ ಎಸ್ಟೇಟ್‌ ಕೆಲಸಕ್ಕೆ ಆರೋಪಿ ಪ್ರಸನ್ನ ಎಂಬವರು ಓಡಿಸುತ್ತಿದ್ದ ಟಾಟಾ ಸುಮೋ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಆರೋಪಿ ತನ್ನ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ ರಸ್ತೆಬದಿಯ ಬೇಲಿಗೆ ಡಿಕ್ಕಿಪಡಿಸಿದ ಪರಿಣಾದ ಫಿರ್ಯಾದಿ ಹಾಗೂ ಇತರ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.


ಅಸ್ವಸ್ಥ ವೃದ್ದನ ಸಾವು, ಪ್ರಕರಣ ದಾಖಲು:


ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮುತ್ತಾರ್ಮುಡಿ ಗ್ರಾಮದ ವಾಸಿ ಫಿರ್ಯಾದಿ ಪಿ.ಪಿ. ಕಾರ್ಯಪ್ಪ ಎಂಬವರ ಮನೆ ಹಾಗೂ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 70 ವರ್ಷ ಪ್ರಾಯದ ತಮಿಳರ ರಂಜನ್‌ ಎಂಬವರು ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದು ದಿನಾಂಕ 26-12-2011ರಂದು ಬೆಳಿಗ್ಗೆ 8-00 ಗಂಟೆಗೆ ಮನೆಯ ಹತ್ತಿರ ಅಸ್ವಸ್ಥನಾಗಿದ್ದು ಆತನನ್ನು ಚಿಕಿತ್ಸೆಯ ಬಗ್ಗೆ ಮಡಿಕೇರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.