Thursday, January 31, 2013

ಲಾರಿ ಡಿಕ್ಕಿ, ಪಾದಚಾರಿಗೆ ಗಾಯ 
  • ಪಾದಚಾರಿಗೆ ಲಾರಿ ಡಿಕ್ಕಿಯಾಗಿ ಗಾಯಗೊಂಡಿರುವ ಘಟನೆ ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಗೋಣಿಕೊಪ್ಪ ನಗರದ ಪಾಲಿಬೆಟ್ಟ ಜಂಕ್ಷನ್‌ನಲ್ಲಿ ನಡೆದಿದೆ. ದಿನಾಂಕ 30/1/2013 ರಂದು ಸಂಜೆ ಗೋಣಿಕೊಪ್ಪ ನಗರದ ಸಿ.ಪಿ.ಬಿದ್ದಪ್ಪ ಎಂಬವರು  ತಾನು ಕೆಲಸ ಮಾಡುತ್ತಿದ್ದ ಇಂಡಿಯಾ ಗ್ಯಾರೇಜ್‌ನಿಂದ ಟೀ ಕುಡಿಯಲು ಪಾಲಿಬೆಟ್ಟ ಜಂಕ್ಷನ್‌ ಕಡೆ  ನಡೆದುಕೊಂಡು ಹೋಗುತ್ತಿದ್ದು ಜಂಕ್ಷನ್‌ ಹತ್ತಿರ ತಲುಪುವಾಗ್ಗೆ ಹರಿಶ್ಚಂದ್ರಪುರ ಕಡೆಯಿಂದ ಕೆಎ-12 ಎ-6882 ರ ಮಿನಿಲಾರಿಯನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು  ಡಿಕ್ಕಿಪಡಿಸಿದ್ದರಿಂದ ಸಿ.ಪಿ.ಬಿದ್ದಪ್ಪನವರು ಕೆಳಗೆ ಬಿದ್ದು ಹೋಗಿದ್ದು, ಆಗ ಮಿನಿಲಾರಿಯ ಚಕ್ರವು ಅವರ ಎಡಕಾಲಿನ ಮಣಿಕಟ್ಟಿನ ಮೇಲೆ ಹತ್ತಿ ಕಾಲಿಗೆ ಗಾಯವಾಗಿರುವ ಬಗ್ಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 ಅಪ್ರಾಪ್ತ ಬಾಲಕಿಯ ಅಪಹರಣ, ಪ್ರಕರಣ ದಾಖಲು 
  • ಅಪ್ರಾಪ್ತ ಬಾಲಕಿಯೋರ್ವಳನ್ನು ಅಪಹರಿಸಿರುವ ಪ್ರಕರಣ ಮಡಿಕೇರಿ ನಗರ ಠಾಣಾ ವ್ಯಾಫ್ತಿಯ ಮಲ್ಲಿಕಾರ್ಜುನ ನಗರದಲ್ಲಿ ನಡೆದಿದೆ.ದಿನಾಂಕ 26/01/2013ರಂದು ಮಡಿಕೇರಿಯ ಮಲ್ಲಿಕಾರ್ಜುನ ನಗರದ ನಿವಾಸಿ ಧನು ಎಂಬಾಕೆಯ ಮಗಳು ಪ್ರಾಯ 14 ವರ್ಷ ಪ್ರಾಯದ ದಿವ್ಯ ಎಂಬಾಕೆಯು ಕಾಣೆಯಾಗಿದ್ದು ದಿನಾಂಕ 28/01/2013ರಂದು ಆಕೆಯನ್ನು ಹುಡುಕಾಡಿ ಮಧ್ಯಾಹ್ನ 2:30 ಗಂಟೆಯ ವೇಳೆಗೆ ಮನೆಗೆ ಬರುತ್ತಿರುವಾಗ ಅವರ ಮಗಳು ದಿವ್ಯ ಪಕ್ಕದ ಮನೆಯ ಇಮ್ರಾನ್‌ ಮತ್ತು ಆಕೆಯ ತಾಯಿಯೊಂದಿಗೆ ಮಾತನಾಡುತ್ತಿದ್ದು, ಫಿರ್ಯಾದಿ ಧನುರವರನ್ನು ಕಂಡು ಓಡಿ ಹೋಗಿದ್ದು, ತನ್ನ ಮಗಳನ್ನು ಇಮ್ರಾನ್‌ ಅಪಹರಣ ಮಾಡಿರಬಹುದೆಂದು ಶಂಕಿಸಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, January 30, 2013

ಹುಡುಗಿ ಕಾಣೆ 
  • ಮನೆಯಲ್ಲಿದ್ದ ಹುಡುಗಿಯೋರ್ವಳು ಕಾಣೆಯಾಗಿರುವ ಪ್ರಕರಣ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಚೇರಳ ಶ್ರೀಮಂಗಲ ಗ್ರಾಮದಲ್ಲಿ ನಡೆದಿದೆ. ಚೆಟ್ಟಳ್ಳಿ ಸಮೀಪದ ಚೇರಳ ಶ್ರೀಮಂಗಲ ಗ್ರಾಮದ ನಿವಾಸಿ ಮಹಮದ್ ಕುಟ್ಟಿ ಎಂಬವರ ಮಗಳು 19 ವರ್ಷ ಪ್ರಾಯದ ಹಸೀಬಾ ಎಂಬಾಕೆಯು ದಿನಾಂಕ 26/01/2013ರಂದು ರಾತ್ರಿ ಮನೆಯಲ್ಲಿ ಮಲಗಿದ್ದು, ಮಾರನೇ ದಿನ ಬೆಳಿಗ್ಗೆ ತಂದೆ ಮಹಮದ್ ಕುಟ್ಟಿಯವರು ಮಸೀದಿಗೆಂದು ತೆರಳುವ ಸಮಯದಲ್ಲಿ ನೋಡುವಾಗ್ಗೆ ಹಸೀಬಾಳು ಮನೆಯಲ್ಲಿ ಕಾಣದೆ ಇದ್ದು ಅಕ್ಕ ಪಕ್ಕದ ಮನೆ ಹಾಗೂ ನೆಂಟರಿಷ್ಟರಲ್ಲಿ ಹುಡುಕಾಡಿ ಪತ್ತೆಯಾಗದ ಕಾರಣ ಈ ದಿನ ಪೊಲೀಸ್ ಪುಕಾರು ನೀಡಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಈ ಭಾವಚಿತ್ರದಲ್ಲಿ ಕಾಣುವ ಯುವತಿ ಎಲ್ಲಿಯಾದರೂ ಪತ್ತೆಯಾದಲ್ಲಿ ಈ ಕೆಳಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಕೋರಲಾಗಿದೆ. 
ಮಡಿಕೇರಿ ಗ್ರಾಮಾಂತರ ಠಾಣೆ : 08272 - 228777 
ಮಡಿಕೇರಿ ಗ್ರಾಮಾಂತರ ವೃತ್ತ : 08272 - 220100
 ಪೊಲೀಸ್‌ ಕಂಟ್ರೋಲ್‌ ರೂಂ: 08272 - 228330
ಪೊಲೀಸ್ ಅಧೀಕ್ಷಕರು : 08272 - 229000 
ಬೈಕ್ ಡಿಕ್ಕಿ, ಬಸ್‌ ಜಖಂ 
  • ಮೋಟಾರು ಬೈಕ್ ಚಾಲಕನೋರ್ವ ಅಜಾಗರೂಕತೆಯಿಂದ ಬೈಕ್ ಚಾಲಿಸಿದ ಪರಿಣಾಮ ಬೈಕನ್ನು ಬಸ್‌ಗೆ ಡಿಕ್ಕಿಪಡಿಸಿದ ಘಟನೆ ಕುಟ್ಟ ಠಾಣಾ ವ್ಯಾಪ್ತಿಯ ಚೂರಿಕಾಡು ಎಂಬಲ್ಲಿ ನಡೆದಿದೆ. ದಿನಾಂಕ 29/01/2013ರ ಸಂಜೆ ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಮಂಡ್ಯ ಜಿಲ್ಲೆಯ ರವಿ ಎಂಬವರು ತಮ್ಮ ಬಸ್ಸನ್ನು ಚೂರಿಕಾಡಿನ ಪ್ರಭು ಎಂಬವರ ಮನೆಯ ಬಳಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತ್ತಿರುವಾಗ ಆರೋಪಿ ಕೋತೂರು ಗ್ರಾಮದ ಜಯ ಎಂಬಾತನು ತನ್ನ ಮೋಟಾರು ಬೈಕ್ ಕೆಎ-09-ವೈ-2392ನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಪಡಿಸಿ ಬಸ್ಸಿಗೆ ಜಖಂಗೊಳಿಸಿದ ಬಗ್ಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ಮೋಟಾರು ಬೈಕ್‌ ಡಿಕ್ಕಿ, ಬೈಕ್ ಸವಾರನಿಗೆ ಗಾಯ 
  •  ಮೋಟಾರು ಬೈಕ್‌ಗಳೆರಡು ಡಿಕ್ಕಿಯಾದ ಪರಿಣಾಮ ಓರ್ವ ಬೈಕ್ ಸವಾರ ಗಾಯಗೊಂಡ ಘಟನೆ ಗೋಣಿಕೊಪ್ಪ ನಗರದಲ್ಲಿ ನಡೆದಿದೆ. ದಿನಾಂಕ 29/01/2013 ರ ರಾತ್ರಿ ವೇಳೆ ಅತ್ತೂರು ಗ್ರಾಮದ ಹೆಚ್‌ ಗೋಪಾಲ ಎಂಬವರು ತಮ್ಮ ಮೋಟಾರು ಸೈಕಲ್ ನಂಬರು ಕೆಎ 12 9483ರಲ್ಲಿ ಪೊನ್ನಂಪೇಟೆ ಜಂಕ್ಷನ್  ಕಡೆಯಿಂದ ಗೋಣಿಕೊಪ್ಪದ ಮಾರುಕಟ್ಟೆಗೆ ತರಕಾರಿ ತರಲು ಬರುತ್ತಿದ್ದು,ಮಾರುಕಟ್ಟೆ ಕಡೆಗೆ ಹೋಗಲು ಬಲ ಬದಿಗೆ ಸೂಚನೆ ನೀಡಿ ಮುಂದೆ ಚಲಿಸುವಾಗ್ಗೆ  ಹಿಂಬದಿಯಿಂದ ಬರುತ್ತಿದ್ದ  ಕೆಎ-26 ಹೆಚ್-6928 ರ ಮೋಟಾರು ಸೈಕಲ್ ಸವಾರನು ಬೈಕನ್ನು ಅತಿ ವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿ ಪಿರ್ಯಾದಿಯ  ಬಲಕಾಲಿನ ಹಿಮ್ಮಡಿಯ ಮೇಲ್ಬಾಗಕ್ಕೆ ಡಿಕ್ಕಿಪಡಿಸಿ ರಕ್ತಗಾಯಪಡಿಸಿರುವ ಬಗ್ಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 ಚೆಕ್‌ ನೀಡಿ ಮೋಸ, ಪ್ರಕರಣ ದಾಖಲು 
  • ಸಾಲ ಪಡೆದು ಪ್ರತಿಯಾಗಿ ಚೆಕ್‌ ನೀಡಿ ಮೋಸ ಪಡಿಸಿದ ಘಟನೆಯ ಬಗ್ಗೆ ನ್ಯಾಯಾಲಯದ ಸೂಚನೆ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಿನಾಂಕ 12/10/2012 ರಂದು  ಪ್ರಕರಣದ ಆರೋಪಿಗಳಾದ ಬೆಂಗಳೂರಿನ ಕೆ.ನಾರಾಯಣ ಮತ್ತು ಎಂ.ಕೆ. ಪ್ರೇಮ ಎಂಬವರು ಸಿದ್ದಾಪುರ ಠಾಣಾ ವ್ಯಾಪ್ತಿಯ ಪುಲಿಯೇರಿ ಗ್ರಾಮದ ಬಿ.ಎ.ಕುಟ್ಟಪ್ಪ ಎಂಬವರಿಂದ ರೂ 10 ಲಕ್ಷ ಹಣವನ್ನು ವ್ಯವಹಾರ ಸಂಬಂಧವಾಗಿ ಪಡೆದುಕೊಂಡು ಅದಕ್ಕೆ ಪ್ರತಿಯಾಗಿ ಚೆಕ್ ನಂ 451868 ನ್ನು  ನೀಡಿದ್ದು  ಕುಟ್ಟಪ್ಪನವರು ಬ್ಯಾಂಕಿನಿಂದ ಹಣವನ್ನ ಪಡೆಯಲು ಹೋದಾಗ ಬ್ಯಾಂಕಿನವರು ಚೆಕ್ ನ್ನು ಪರೀಶಿಲಿಸಿ ಚೆಕ್ ನಲ್ಲಿ ನಮೂದಿಸಿರುವ ಖಾತೆ ಇರುವುದಿಲ್ಲ  ಎಂದು ತಿಳಿಸಿರುತ್ತಾರೆ. ಅದುರಿಂದ ಆರೋಪಿಗಳು ಮೋಸ   ಮಾಡುವ  ಉದ್ದೇಶದಿಂದ ಹಣವನ್ನು ಪಡೆದು ಚೆಕ್ ನೀಡಿದ್ದು ಆರೋಪಿಗಳ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸುವಂತೆ ನ್ಯಾಯಾಲಯಕ್ಕೆ ಸಲ್ಲಿಸದ ದೂರಿನ ಮೇಲೆ  ತನಿಖೆಯನ್ನು ನಡೆಸುವಂತೆ ನ್ಯಾಯಾಲಯದ ಸೂಚನೆ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
  

Tuesday, January 29, 2013

ಕ್ಲುಲ್ಲಕ ಕಾರಣಕ್ಕೆ ಮಹಿಳೆಯ ಮೇಲೆ ಹಲ್ಲೆ. 
  • ಕ್ಷುಲ್ಲಕ ಕಾರಣಕ್ಕೆ ಮಹಿಳೆಯೋರ್ವರ ಮೇಲೆ ಹಲ್ಲೆ ಮಾಡಿರುವ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮೇಘತ್ತಾಳು ಗ್ರಾಮದಲ್ಲಿ ನಡೆದಿದೆ. ದಿನಾಂಕ 28/01/2013 ರಂದು ಮೇಘತ್ತಾಳು ಗ್ರಾಮದ ಶ್ರೀಮತಿ ಸಿ.ಕೆ.ಕ್ಷಮ್ಮಿ ಎಂಬವರು ತಮ್ಮ ತೋಟದಲ್ಲಿ ಕಾಫಿ ಕುಯ್ಯುತ್ತಿರುವಾಗ ಆರೋಪಿ ಅದೇ ಗ್ರಾಮದ ನಾಣಿಯಪ್ಪ ಎಂಬಾತನು ಆಕೆಯೊಂದಿಗೆ ಜಗಳವಾಡಿ ಆಕೆಯನ್ನು ಎಳೆದಾಡಿ ಕತ್ತಿಯ ಹಿಂಭಾಗದಿಂದ ಆಕೆಯ ತಲೆಗೆ ಹೊಡೆದು ಗಾಯಗೊಳಿಸಿದ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಮೊಕದ್ದಮೆ ದಾಖಲು ಮಾಡಿ ತನಿಖೆ ಕೈಗೊಂಡಿದ್ದಾರೆ.
ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ. 
  • ಜೀವನದಲ್ಲಿ ಜುಗುಪ್ಸೆಗೊಂಡು ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾಗಮಂಡಲ ಠಾಣಾ ವ್ಯಾಪ್ತಿಯ ಕೊಳಗದಾಳು ಗ್ರಾಮದಲ್ಲಿ ನಡೆದಿದೆ. ದಿನಾಂಕ 28/01/2013ರ ರಾತ್ರಿ ಕೊಳಗದಾಳು ಗ್ರಾಮದ ಚಂಗೋಮಯ್ಯ ಎಂಬವರ ಕಾಫಿ ತೋಟದ ಶೆಡ್‌ನಲ್ಲಿ ವಾಸವಿರುವ ಪಿರಿಯಾಪಟ್ಟಣ ತಾಲೂಕಿನ ಪಂಚವಳ್ಳಿ ಉತ್ತನಳ್ಳಿ ಗ್ರಾಮದ ಜಯಶ್ರೀ ಎಂಬವರ ಗಂಡ ಕೀರ್ತಿ (24) ಎಂಬಾತನು ಜೀವನದಲ್ಲಿ ಜುಗುಪ್ಸೆಹೊಂದಿ ತಾವು ವಾಸಿಸುವ ಶೆಡ್‌ನ ಪಕ್ಕದಲ್ಲಿರುವ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 ಸಂಶಯಾಸ್ಪದ ವ್ಯಕ್ತಿಯ ಬಂಧನ  
  •  ರಾತ್ರಿ ವೇಳೆ ಅನುಮಾನಾಸ್ಪದವಾಗಿ ಸುತ್ತಾಡುತಿದ್ದ ವ್ಯಕ್ತಿಯೋರ್ವನನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿ ಕ್ರಮ ಕೈಗೊಂಡಿದ್ದಾರೆ. ದಿನಾಂಕ 28/01/2013 ರ ರಾತ್ರಿ ವೇಳೆ ಸೋಮವಾರಪೇಟೆ ಠಾಣಾ ಪಿಎಸ್‌ಐ ರವಿಕಿರಣ್‌ ಮತ್ತು ಸಿಬ್ಬಂದಿಯವರು ರಾತ್ರಿ ಗಸ್ತು ಕರ್ತವ್ಯದಲ್ಲಿರುವಾಗ ನಗರದ ಗಾಂಧಿ ವೃತ್ತದ ಬಳಿ ಆಭರಣ ಮಳಿಗೆಯೊಂದರ ಬಳಿ ಆರೋಪಿ ಸೋಮವಾರಪೇಟೆ ನಗರದ ಸಂಜಯ ಕುಮಾರ್‌ ಎಂಬಾತನು ತನ್ನ ಇರುವನ್ನು ಮರೆ ಮಾಚಲು ಯತ್ನಿಸುತ್ತ ನಿಂತಿದ್ದು ಆತನನ್ನು ಅವನ ಇರುವಿಕೆಯ ಬಗ್ಗೆ ವಿಚಾರಿಸಿದಾಗ ಸಮಂಜಸವಾದ ಉತ್ತರ ನೀಡದೆ ಇದ್ದು ಯಾವುದೋ ಅಪರಾಧ ಮಾಡುವ ಉದ್ದೇಶದಿಂದ ಆತನು ಅಲ್ಲಿದ್ದಾನೆಂದು ಅನುಮಾನಗೊಂಡು ಪಿಎಸ್‌ಐ ರವಿಕಿರಣ್‌ರವರು ಆತನನ್ನು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.