Thursday, February 28, 2013

ಅತಿ ವೇಗದ ಕಾರು ಚಾಲನೆ , ವಿದ್ಯಾರ್ಥಿ ಸಾವು 
 • ಅತಿ ವೇಗವಾಗಿ ಕಾರು ಚಾಲಿಸಿದ ವಿದ್ಯಾರ್ಥಿಯೋರ್ವ ಪ್ರಪಾತಕ್ಕೆ ಕಾರು ಸಮೇತ ಬಿದ್ದು ಸಾವಿಗೀಡಾದ ಘಟನೆ ಮಡಿಕೇರಿ ತಾಲೂಕಿನ ಮುಕ್ಕೋಡ್ಲು ಗ್ರಾಮದ ಮಾಂದಲಪಟ್ಟಿ ಎಂಬಲ್ಲಿ ನಡೆದಿದೆ. ದಿನಾಂಕ 27/02/2013ರಂದು ಸಂಜೆ ವೇಳೆಗೆ ಪುತ್ತೂರು ತಾಲೂಕಿನ ಪಡ್ನೂರು ಬಳಿಯ ವಿದ್ಯಾರ್ಥಿ ದೀಕ್ಷಿತ್ ಎಂಬಾತನು ತನ್ನ ಸ್ನೇಹಿತರಾದ ಶಿವಾನಂದ ನಾಯಕ್, ಪ್ರತಾಪ್, ಸಂದೀಪ ಮತ್ತು ಶಿವಪ್ರಸಾದ್ ಎಂಬವರೊಂದಿಗೆ ಮಾರುತಿ ಎಸ್ಟೀಮ್ ಕಾರು ಸಂ.ಕೆಎ-19-ಎನ್-2667ರಲ್ಲಿ ಮಡಿಕೇರಿಗೆ ಪ್ರವಾಸಕ್ಕೆಂದು ಬಂದಿದ್ದು, ಬರುವ ದಾರಿಯಲ್ಲಿ ಶಿವಾನಂದ ನಾಯಕನು ತಾನು ಸುಮಾರು 4 ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿ ಕೈ ಕೊಟ್ಟಿದ್ದು ತಾನು ಏನು ಮಾಡಲಿ ಎಂದು ದುಃಖಿಸುತ್ತಿದ್ದು, ಆತನನ್ನು ಎಲ್ಲರೂ ಸೇರಿ ಸಮಾಧಾನ ಪಡಿಸಿರುತ್ತಾರೆ. ನಂತರ ಸಂಜೆ ಸುಮಾರು 6 ಗಮಟೆ ವೇಳೆಗೆ ಎಲ್ಲರೂ ಮುಕ್ಕೋಡ್ಲು ಗ್ರಾಮದ ಬಳಿಯ ಪ್ರವಾಸಿ ತಾಣ ಮಾಂದಲಪಟ್ಟಿಗೆ ತಲುಪಿದ್ದು, ಅಲ್ಲೇ ಕಾರು ನಿಲ್ಲಿಸಿ ಎಲ್ಲರೂ ಕುಳಿತು ತಿಂಡಿ ತಿಂದಿದ್ದು, ಶಿವಾನಂದ ನಾಯಕನು ಎಲ್ಲರೂ ಅಲ್ಲೆ ಮಲಗುವಂತೆ ಹೇಳಿ ತಾನು ಕಾರಿನಿಂದ ದಿಂಬು ತರುವುದಾಗಿ ಹೇಳಿ ಕಾರಿಗೆ ಹೋಗಿ ಕಾರನ್ನು ಚಾಲಿಸಿ ಉಳಿದವರು ಕುಳಿತಿದ್ದ ಜಾಗಕ್ಕೆ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ಆತನ ಹತೋಟಿ ತಪ್ಪಿ ಮಾಂದಲಪಟ್ಟಿಯ ಸುಮಾರು 400 ಅಡಿ ಆಳದ ಪ್ರಪಾತಕ್ಕೆ ಉರುಳಿ ಶಿವಾನಂದ ನಾಯಕನು ಸ್ಥಳದಲ್ಲೇ ಮೃತಪಟ್ಟಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ಹಳೆ ದ್ವೇಷ, ಮಹಿಳೆಯ ಮೇಲೆ ಹಲ್ಲೆ 
 • ಹಳೆ ದ್ವೇಷದಿಂದ ಮಹಿಳೆಯೋರ್ವರ ಮೇಲೆ ಹಲ್ಲೆ ನಡೆಸಿದ ಘಟನೆ ಕುಶಾಲನಗರ ಪಟ್ಟಣದ ದಂಡಿನಪೇಟೆಯಲ್ಲಿ ನಡೆದಿದೆ. ದಿನಾಂಕ 27/02/2013ರಂದು ಮಡಿಕೇರಿಯ ನಿವಾಸಿ ಕಮರುನ್ನೀಸಾ ಎಂಬವರು ತನ್ನ ತಂಗಿ ದಿಲ್‌ಶಾದ್ ಎಂಬವರೊಂದಿಗೆ ಕುಶಾಲನಗರದ ದಂಡಿನಪೇಟೆಯಲ್ಲಿರುವ ತನ್ನ ಅಣ್ಣನ ಮಗನ ಆರೋಗ್ಯವನ್ನು ವಿಚಾರಿಸಲು ಬಂದಿದ್ದು, ಮನೆಯವರೊಂದಿಗೆ ಮಾತನಾಡಿಕೊಂಡಿರುವಾಗ ಆರೋಪಿ ಫರೋಜ್ ಮಹಮದ್ ಮನೆಯೊಳಗಿನಿಂದ ಬಂದು ಹಳೆ ದ್ವೇಷದಿಂದ ಕಮರುನ್ನೀಸಾರ ಇನ್ನೋರ್ವ ತಂಗಿ ತಾಜುನ್ನೀಸಾರ ಮೇಲೆ ಹಲ್ಲೆ ಮಾಡಿದ್ದು, ಬಿಡಿಸಲು ಹೋದ ಕಮರುನ್ನೀಸಾರವರಿಗೂ ಟಾರ್ಚಿನಿಂದ ಹಲ್ಲೆ ಮಾಡಿದ್ದು, ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Wednesday, February 27, 2013

 ಬಸ್ಸಿನಲ್ಲಿ ಪೆಟ್ರೋಲ್‌ ಬಾಂಬ್‌ ಪತ್ತೆ, ನಿರ್ವಾಹಕನ ಸಮಯ ಸ್ಫೂರ್ತಿಯಿಂದ ತಪ್ಪಿದ ಅನಾಹುತ 
 •  ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಜೀವಂತ ಪೆಟ್ರೋಲ್‌ ಬಾಂಬ್‌ ಪತ್ತೆಯಾಗಿದ್ದು, ಬಸ್‌ ನಿರ್ವಾಹಕನ ಸಮಯ ಸ್ಫೂರ್ತಿಯಿಂದ ಭಾರೀ ಅನಾಹುತ ತಪ್ಪಿದ ಘಟನೆ ಸೋಮವಾರಪೇಟೆ ನಗರದಲ್ಲಿ ಇಂದು ನಡೆದಿದೆ. ರಾಜ್ಯ ರಸ್ತೆ ಸಾರಿಗೆ ನಿಗಮದ ಮಡಿಕೇರಿ ಘಟಕದ ಸಂಖ್ಯೆ ಕೆಎ-09-ಎಫ್‌-ಕೆಎ-09-ಎಫ್‌-4392ರ ಬಸ್ಸೊಂದು ಇಂದು ಸಂಜೆ ದಾವಣಗೆರೆ ಜಿಲ್ಲೆಯ ಹರಿಹರದಿಂದ ಸೋಮವಾರಪೇಟೆ ಮಾರ್ಗವಾಗಿ ಮಡಿಕೇರಿಗೆ ಬರುತ್ತಿದ್ದು, ಸಂಜೆ ಸಮಯ ಸೋಮವಾರಪೇಟೆ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿ ಮಡಿಕೇರಿಗೆ ಹೋಗಲು ಇದ್ದ ಮೂರು ಜನ ಪ್ರಯಾಣಿಕರನ್ನು ಮುಂದೆ ಹೋಗುತ್ತಿದ್ದ ಬಸ್ಸಿನಲ್ಲಿ ಹತ್ತಿಸಿ ಬಸ್ಸಿನ ಚಾಲಕ ನಾಗರಾಜು ಮತ್ತು ನಿರ್ವಾಹಕ ಹರೀಶರವರು ಜನರು ಇಳಿದು ಹೋದ ನಂತರ ಪ್ರಯಾಣಿಕರು ಮರೆತು ಬಿಟ್ಟು ಹೋಗಿರಬಹುದಾದ ಲಗೇಜುಗಳಿಗಾಗಿ ಬಸ್ಸಿನಲ್ಲಿ ಪರಿಶೀಲಿಸಿ ನಂತರ ಟೀ ಕುಡಿಯಲೆಂದು ನಿಲ್ದಾಣದ ಹೋಟೆಲಿಗೆ ಹೋಗಿರುತ್ತಾರೆ. ನಂತರ ಸುಮಾರು ಸಮಯ ಸಂಜೆ 5:00 ಗಂಟೆ ಹೊತ್ತಿಗೆ ನಿರ್ವಾಹಕ ಹರೀಶ್‌ ಬಸ್ಸಿನ ಬಳಿ ಹೋದಾಗ ಬಸ್ಸಿನಲ್ಲಿ ಸಂತೋಷ್‌ ಎಂಬ ಹುಡುಗ ಕುಳಿತಿದ್ದು, ಬಸ್ಸಿನಲ್ಲಿ ಅಗರಬತ್ತಿ ಸುವಾಸನೆ ಬರುತ್ತಿರುವುದಾಗಿ ನಿರ್ವಾಹಕ ಹರೀಶ್‌ರವರಿಗೆ ತಿಳಿಸಿದ್ದು, ಕೂಡಲೇ ಹರೀಶ್‌ರವರು ಬಸ್‌ ಹತ್ತಿ ಪರಿಶೀಲಿಸಿದಾಗ ಬಸ್ಸಿನ ಬಲ ಬದಿಯಲ್ಲಿ ಐದನೇ ಸೀಟಿನ ಬಳಿ ಒಂದು ಹಳದಿ ಬಣ್ಣದ ಪ್ಲಾಸ್ಟಿಕ್ ಕವರಿನಲ್ಲಿ ಅಗರಬತ್ತಿ ಉರಿಯುತ್ತಿದ್ದ ಹೊಗೆ ಕಂಡು ಅವರು ಪ್ಲಾಸ್ಟಿಕ್ ಕವರನ್ನು ತೆಗೆದು ಪರಿಶೀಲಿಸಿದಾಗ ಎರಡು ಗಾಜಿನ ಬಾಟಲಿಗಳಲ್ಲಿ ಪೆಟ್ರೋಲ್ ತುಂಬಿದ್ದು ಅವುಗಳ ಮುಚ್ಚಳಗಳ ಮೂಲಕ ಪಟಾಕಿ ಸಿಡಿಸಲು ಉಪಯೋಗಿಸುವ ಬತ್ತಿಗಳನ್ನು ಅಳವಡಿಸಿದ್ದು ಅವುಗಳ ಕೊನೆಗಳಿಗೆ ಒಂದು ಅಗರಬತ್ತಿಯನ್ನು ಹೊಂದಿಸಿಇಟ್ಟಿದ್ದು ಅಗರಬತ್ತಿ ಉರಿಯುತ್ತಿತ್ತು. ಈ ಅಗರಬತ್ತಿಯ ಬೆಂಕಿಯು ಬಾಟಲಿಗೆ ಅಳವಡಿಸಿದ್ದ ಬತ್ತಿಗೆ ತಗುಲಿ ಅದರ ಮೂಲಕ ಬಾಟಲಿಗಳಲ್ಲಿದ್ದ ಪೆಟ್ರೋಲ್ ಸಿಡಿದು ದೊಡ್ಡದಾಗಿ ಬೆಂಕಿ ಹತ್ತಿ ಬಸ್ಸು ಮತ್ತು ಸಾರ್ವಜನಿಕ ಹಾನಿ ಆಗುವ ಸಾಧ್ಯತೆ ಇದ್ದುದರಿಂದ ಹರೀಶ್‌ರವರು ಕೂಡಲೇ ಅಗರಬತ್ತಿಯಲ್ಲಿದ್ದ ಬೆಂಕಿಯನ್ನು ನಂದಿಸಿ ನಂತರ ವಿಚಾರವನ್ನು ಸೋಮವಾರಪೇಟೆ ಬಸ್ಸು ನಿಲ್ದಾಣದ ಸಂಚಾರ ನಿಯಂತ್ರಕರಿಗೆ ವಿಷಯ ತಿಳಿಸಿ ನಂತರ ನಿರ್ವಾಹಕ ಹರೀಶ್‌ ಹಾಗೂ ನಿಲ್ದಾಣದ ಸಂಚಾರ ನಿಯಂತ್ರಕರು ಸೋಮವಾರಪೇಟೆ ಪೊಲೀಸ್ ಠಾಣೆಗೆ ಬಂದು ವಿಷಯ ತಿಳಿಸಿದ್ದು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರುಗಳನ್ನು ಸಾಯಿಸುವ ಮತ್ತು ಸಾರ್ವಜನಿಕ ಆಸ್ತಿಗೆ ನಷ್ಟ ಪಡಿಸುವ ಉದ್ದೇಶದಿಂದ ಯಾರೋ ಕಿಡಿಗೇಡಿಗಳು ಈ ಪ್ರಯತ್ನ ಮಾಡಿರುವ ಬಗ್ಗೆ ಸೋಮವಾರಪೇಟೆ ಪೊಲೀಸರು ಠಾಣಾ ಪ್ರಕರಣ ಸಂ. 51/2013 ವಿಧಿ 307, 436 ರೆ/ವಿ 511 ಐಪಿಸಿ ಮತ್ತು 2(1) ಕೆಪಿಎಇಎಲ್‌ಪಿ ಕಾಯ್ದೆ 1981 ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀ ಅನುಚೇತ್‌ರವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

 ಕಾಳು ಮೆಣಸು ಕಳವು ಯತ್ನ, ಕೊಲೆ ಬೆದರಿಕೆ 
 • ತೋಟದಿಂದ ಕಾಳುಮೆಣಸು ಕದಿಯಲು ಯತ್ನಿಸಿದ ವ್ಯಕ್ತಿಯೋರ್ವ ತೋಟದ ಮಾಲೀಕನಿಗೆ ಬೆದರಿಕೆ ಹಾಕಿರುವ ಘಟನೆ ಪೊನ್ನಂಪೇಟೆ ಸಮೀಪದ ನಲ್ಲೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 26/02/2013ರಂದು ನಲ್ಲೂರು ಗ್ರಾಮದ ತೀತರಮಾಡ ವಿಜಯ ಎಂಬವರ ತೋಟದಲ್ಲಿ ಅವರ ತೋಟದಲ್ಲೇ ಕಾರ್ಮಿಕನಾಗಿ ಕೆಲಸಮಾಡಿಕೊಂಡಿರುವ ಪಂಜರಿಎರವರ ಮುತ್ತ ಎಂಬಾತನ್ಉ ಸುಮಾರು ರೂ.600/- ಮೌಲ್ಯದ 5 ಕೆಜಿಯಷ್ಟು ಕರಿಮೆಣಸನ್ನು ಕದ್ದು ಕುಯ್ದುಕೊಂಡು ಹೋಗುತ್ತಿರುವಾಗ ಮಾಲೀಕ ವಿಜಯರವರಿಗೆ ಸಿಕ್ಕಿಬಿದ್ದಿದ್ದು, ವಿಜಯರವರು ಆತನನ್ನು ಹಿಡಿಯಲು ಹೋದಾಗ ಅವನು ಕತ್ತಿಯಿಂದ ವಿಜಯರವರನ್ನು ಕಡಿಯಲು ಬಂದ ಬಗ್ಗೆ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ವಿಷ ಕುಡಿದುಕೊಂಡು ವ್ಯಕ್ತಿಯ ಆತ್ಮಹತ್ಯೆ 
 • ವ್ಯಕ್ತಿಯೋರ್ವ ವಿಷ ಕುಡಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿ ನಗರದ ರಾಜಾಸೀಟು ಬಳಿ ನಡೆದಿದೆ. ದಿನಾಂಕ 26/02/2013ರಂದು ಸಂಜೆ ಮಡಿಕೇರಿ ಸಮೀಪದ ಕಾಂಡನಕೊಲ್ಲಿ ನಿವಾಸಿ ಮುದ್ದುರ ತಮ್ಮಯ್ಯ ಎಂಬವರು ತನ್ನ ಸ್ನೇಹಿತ ತನಗೆ ನೀಡಬೇಕಾದ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮನನೊಂದು ಮಡಿಕೇರಿ ನಗರದ ರಾಜಾಸೀಟು ಬಳಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ಬೈಕ್ ಅಫಘಾತ ವ್ಯಕ್ತಿಗೆ ಗಾಯ 
 • ಮೋಟಾರು ಬೈಕ್ ಅಫಘಾತವಾಗಿ ವ್ಯಕ್ತಿಯೋರ್ವ ಗಾಯಗೊಂಡ ಘಟನೆ ಶನಿವಾರಸಂತೆ ನಗರದ ರಾಮಮಂದಿರದ ಬಳಿ ನಡೆದಿದೆ. ದಿನಾಂಕ : 26-02-2013 ರಂದು ಹಂಡ್ಲಿ ಗ್ರಾಮದ ವಿಶ್ವನಾಥ ಎಂಬವರು ತಮ್ಮ  ನೆಂಟರಾದ ಮಿಥಿಲೇಶ್‌ ರವರ ಬಾಪ್ತು ಕೆಎ-12, ಕೆ-4885 ರ ಮೋಟಾರು ಬೈಕಿನ ಹಿಂಬದಿ ಸೀಟಿನಲ್ಲಿ ಕುಳಿತುಕೊಂಡು ಹೋಗುತ್ತಿರುವಾಗ ಮಿಥಿಲೇಶ್‌ರವರು ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿ ರಾಮಮಂದಿರದ ಸಮೀಪ ಒಂದು ಗುಂಡಿಗೆ ಬೈಕನ್ನು ಇಳಿಸಿದ ಪರಿಣಾಮ ವಿಶ್ವನಾಥರವರು  ಕೆಳಗೆ ಬಿದ್ದು ಗಾಯಗಳಾದ ಬಗ್ಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 ಹೊಳೆಯಲ್ಲಿ ಮುಳುಗಿ ವ್ಯಕ್ತಿಯ ಸಾವು 
 • ಕಾವೇರಿ ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಯುವಕನೋರ್ವ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವಿಗೀಡಾದ ಘಟನೆ ಕುಶಾಲನಗರದ ಮಾದಾಪಟ್ಟಣದ ಬಳಿ ನಡೆದಿದೆ. ದಿನಾಂಕ 26-02-2013 ರಂದು ಸಮಯ 3.30 ಪಿ.ಎಂ.ಗೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮದ ರೇಣುಕ ಎಂಬವರ  ಮಗ ಪ್ರಾಯ 20 ವರ್ಷದ ದಿಲೀಪನು ತನ್ನ ಸ್ನೇಹಿತರೊಂದಿಗೆ ಕುಶಾಲನಗರ ಕಾವೇರಿ ನಿಸರ್ಗಧಾಮಕ್ಕೆ ಹೋಗಿ, ನಂತರ ಮಾದಾಪಟ್ಟಣದ ಚೂಡಿಬಾನ ಕಾವೇರಿ ಹೊಳೆಯಲ್ಲಿ ಸ್ನೇಹಿತರಾದ ಶಿವಜಲೇಂದ್ರ, ಅರುಣ್‌ಕುಮಾರ್, ಕೆ.ಎನ್.ಪ್ರದೀಪ್‌, ಕೆ.ಪಿ. ಅಕ್ಷಯ್‌ರವರೊಂದಿಗೆ ಸ್ನಾನ ಮಾಡುತ್ತಿದ್ದಾಗ ದಿಲೀಪನು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವ ಬಗ್ಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 ಜೀವನದಲ್ಲಿ ಜುಗುಪ್ಸೆ, ನೇಣು ಬಿಗಿದು ವ್ಯಕ್ತಿಯ ಆತ್ಮಹತ್ಯೆ 
 • ಜೀವನದಲ್ಲಿ ಜುಗುಪ್ಸೆಗೊಂಡ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನ ಪೊನ್ನಂಪೇಟೆ ಬಳಿಯ ನಲ್ಲೂರು ಗ್ರಾಮದಲ್ಲಿ ನಡೆದಿದೆ. ನಲ್ಲೂರು ಗ್ರಾಮದ ತೀತರಮಾಡ ರಘುರವರ ಲೈನ್ ಮನೆಯಲ್ಲಿ ಕೂಲಿಕೆಲಸ ಮಾಡಿಕೊಂಡು ವಾಸವಿರುವ ಪಂಜರಿಎರವರ ಸುಬ್ಬ ಎಂಬವರ  ಹಿರಿಯ ಮಗ ಚಾತ ಮದುವೆಯಾಗಿ ತನ್ನ ಹೆಂಡತಿ ಬೊಳ್ಳಚ್ಚಿಯೊಂದಿಗೆ ವಾಸವಾಗಿದ್ದು ಚಾತನಿಗೆ ಮಕ್ಕಳಿಲ್ಲವೆಂದು  ಬೇಸರದಿಂದ ವಿಪರೀತ ಮಧ್ಯಪಾನ ಮಾಡುತ್ತಿದ್ದನು. ದಿನಾಂಕ 25/02/2013 ರಂದು ರಾತ್ರಿ ಸಹ ವಿಪರೀತ ಮಧ್ಯಪಾನ ಮಾಡಿ ತನ್ನ ಹೆಂಡತಿಗೆ ಹೇಳದೆ ಲೈನ್ ಮನೆಯಿಂದ ಹೊರಗಡೆ ಹೋಗಿದ್ದು ಈ ದಿನ ದಿನಾಂಕ 26/02/2013 ರಂದು ಬೆಳಿಗ್ಗೆ 6.00 ಗಂಟೆಗೆ ಅವರ ಲೈನ್ ಮನೆಯ ಪಕ್ಕದ ವಾಸಿ ತಮ್ಮು ಎಂಬವನು ಬಹಿರ್ದೇಸೆ ಮಾಡಲು ಗದ್ದೆಗೆ ಹೋಗುತ್ತಿರುವಾಗ್ಗೆ ಮಹೇಶರವರ ಜಾಗದ ಮರದಲ್ಲಿ ಚಾತನು ಸೀರೆಯಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಸತ್ತು ತೂಗಾಡುತ್ತಿರುವುದಾಗಿ    ಸುಬ್ಬರವರಿಗೆ ತಿಳಿಸಿದ್ದು, ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 ಜಾತಿ ನಿಂದನೆ ಮತ್ತು ಕೊಲೆ ಬೆದರಿಕ, ಪ್ರಕರಣ ದಾಖಲು 
 • ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯೋರ್ವರಿಗೆ ಕೊಲೆ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿರುವ ಪ್ರಕರಣ ಪೊನ್ನಂಪೇಟೆ ಸಮೀಪದ ನಿಟ್ಟೂರು ಗ್ರಾಮದಲ್ಲಿ ನಡೆದಿದೆ. ಗ್ರಾ.ಪಂ.ಉಪಾಧ್ಯಕ್ಷೆಯಾಗಿ ನಿಟ್ಟೂರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೆಯಾಗಿರುವ ಹೆಚ್‌ಡಿ ರಾಧ ಎಂಬವರು ದಿನಾಂಕ 25/02/2013 ರಂದು ಬೆಳಿಗ್ಗೆ 9.30 ಗಂಟೆಗೆ ವಡ್ಡರಮಾಡು ಕಾಲೋನಿ ರಸ್ತೆಯಲ್ಲಿ  ಪಂಚಾಯ್ತಿ ಕೆಲಸ ಮಾಡುತ್ತಿದ್ದಾಗ ತೀತಿರ ಅದೇ ಗ್ರಾಮದ ತೀತಿರ ಜಯ ಎಂಬವರು ಕಾರಿನಲ್ಲಿ ಬಂದು ಕೆಲಸ ಮಾಡುತ್ತಿದ್ದ  ಆಳುಗಳಿಗೆ  ಬೈದು ಅಲ್ಲಿಂದ ಹೊರಟು ಹೋಗಿದ್ದು . ಪುನಃ ಸಂಜೆ 4.30 ರ ಸಮಯದಲ್ಲಿ  ತೀತಿರ ಜಯರವರ ಪತ್ನಿ ಚೊಂದಮ್ಮ ರವರು ಕೈಯಲ್ಲಿ ಕೋವಿಯನ್ನು ಹಿಡಿದುಕೊಂಡು ಬಂದು ರಾಧರವರನ್ನು  ಮತ್ತು ಅವರ ಹಸುಗಳನ್ನು ಗುಂಡು ಹೊಡೆದು ಕೊಲ್ಲುವುದಾಗಿ ಬೆದರಿಸಿದ್ದು ಜಾತಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಅವಮಾನ ಮಾಡಿದ್ದು, ಈ ಬಗ್ಗೆ ರಾಧರವರು  ದಿನಾಂಕ 26/02/2013 ರಂದು ಸಂಜೆ 5.00 ಗಂಟೆ ಸಮಯದಲ್ಲಿ ಪೊಲೀಸ್ ಠಾಣೆಗೆ ಪುಕಾರು ಕೊಡಲು ಬಂದಾಗ ಪೊಲೀಸ್ ಠಾಣೆ ಮೈದಾನದ ಬಳಿ ಬಂದಿದ್ದಾಗ ಬಸವರಾಜು ಮತ್ತು ಮಲ್ಲೇಶ್ ರವರ ಮುಂದೆ ತೀತಿರ ಜಯರವರು ಪುನಃ ಅವರನ್ನು ಗುಂಡು ಹೊಡೆದು ಕೊಲ್ಲುವುದಾಗಿ   ಬೆದರಿಕೆ ಹಾಕಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, February 26, 2013


ಜೀವನದಲ್ಲಿ ಜಿಗುಪ್ಸೆ, ವ್ಯಕ್ತಿಯ ಆತ್ಮಹತ್ಯೆ:

ತಿತಿಮತಿ ನೊಕ್ಯ ಸಿದ್ಧಾಪುರ ಗ್ರಾಮದ ಜಂಗಲಾಡಿಯಲ್ಲಿ ವಾಸವಾಗಿದ್ದ ಮಣಿ, ಪ್ರಾಯ 35 ವರ್ಷ ಎಂಬಾತ ಜೀವನದಲ್ಲಿ ಜಿಗುಪ್ಸೆಗೊಂಡು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಪೊನ್ನಂಪೇಟೆ ಠಾಣೆಯಲ್ಲಿ ವರದಿಯಾಗಿದೆ. ಮಣಿ ಪ್ರತಿದಿನ ವಿಪರೀತವಾಗಿ ಮದ್ಯಪಾನ ಮಾಡುತ್ತಿದ್ದು, ಅದನ್ನು ಬಿಡುವಂತೆ ಫಿರ್ಯಾದಿ (ಮಣಿಯ ತಂದೆ) ಮತ್ತು ಮನೆಯವರು ಬುದ್ದಿ ಹೇಳಿದ್ದು, ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 25-2-2013 ರಂದು ಬೆಳಿಗ್ಗೆ ಪಕ್ಕದ ಕಾಡಿಗೆ ಹೋಗಿ ಒಂದು ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಫಿರ್ಯಾದಿ ಜೆ.ಕೆ. ಬೋಜರವ್ರು ನೀಡಿದ ಪುಕಾರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

 
ಆಟೋರಿಕ್ಷಾ ಮೋಟಾರು ಸೈಕಲ್‌ಗೆ ಡಿಕ್ಕಿ, ಸವಾರರಿಬ್ಬಿರಿಗೆ ಗಾಯ:

ದಿನಾಂಕ 21-02-2013 ರಂದು ಸಮಯ 7.30 ಪಿ.ಎಂ.ಗೆ ಕೂಡಿಗೆ ಗ್ರಾಮದ ವರದರಾಜುರವರ ಮನೆ ಮುಂದೆ ರಸ್ತೆಯಲ್ಲಿ ಫಿರ್ಯಾದಿ ಎ.ವೈ. ಮೂರ್ತಿರವ್ರ ಚಿಕ್ಕಪ್ಪ ಹೆಚ್.ಸಿ. ಕುಮಾರರವರು ಅವರ ಬಾಪ್ತು ಮೋಟಾರ್ ಸೈಕಲ್ ನಂ. ಕೆಎ 12 ಜೆ 1560 ರ ಹಿಂಬದಿಯಲ್ಲಿ ಎಂ.ಕೆ. ಕುಮಾರ ಎಂಬುವವರನ್ನು ಕೂರಿಸಿಕೊಂಡು ಕುಶಾಲನಗರ ಕಡೆಗೆ ಬರುತ್ತಿದ್ದಾಗ, ಕುಶಾಲನಗರ ಕಡೆಯಿಂದ ಕೂಡಿಗೆ ಕಡೆಗೆ ಹೋಗುತ್ತಿದ್ದ ಆಟೋರಿಕ್ಷ ನಂ. ಕೆಎ 12-6740 ರ ಚಾಲಕ ಹೆಚ್.ಎನ್.ರಾಜುರವರು ಆಟೋರಿಕ್ಷವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಹೋಗಿ ಹೆಚ್.ಸಿ. ಕುಮಾರರವರ ಮೋಟಾರ್‌ ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮ ಹೆಚ್.ಸಿ. ಕುಮಾರ ಮತ್ತು ಮೋಟಾರ್ ಸೈಕಲ್‌ನ ಹಿಂಬದಿ ಕುಳಿತಿದ್ದ ಎಂ.ಕೆ. ಕುಮಾರ ಎಂಬುವವರಿಗೆ ಗಾಯಗಳಾಗಿದ್ದು, ಈ ಅಪಘಾತದ ಬಗ್ಗೆ ಯಾರು ದೂರು ಸಲ್ಲಿಸದೆ ಇರುವ ವಿಚಾರ ತಿಳಿದು ಫಿರ್ಯಾದಿಯವರು ದಿನಾಂಕ 25-2-2013 ರಂದು ಕುಶಾಲನಗರ ಠಾಣೆಯಲ್ಲಿ ದೂರು ನೀಡಿದ್ದು ಕುಶಾಲನಗರ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

 
Monday, February 25, 2013

ಲಾರಿ ಹಿಂಚಲಿಸಿ ವ್ಯಕ್ತಿಯ ಸಾವು 
 • ಚಾಲಕನ ಅಜಾಗರೂಕತೆಯಿಂದ ನಿಂತಿದ್ದ ಲಾರಿ ಹಿಂಚಲಿಸಿ ವ್ಯಕ್ತಿಯೋರ್ವ ಸಾವಿಗೀಡಾದ ಘಟನೆ ಅಮ್ಮತ್ತಿ ಗ್ರಾಮದಲ್ಲಿ ನಡೆದಿದೆ. ದಿನಾಂಕ: 25-02-13ರಂದು ಸಮಯ 9-45ಗಂಟೆಗೆ ವಿರಾಜಪೇಟೆಯ ಸುಂಕದಕಟ್ಟಡ ನಿವಾಸಿ ಮಧುರ ಎಂಬವರ ಅಣ್ಣ  ಅಣ್ಣ ರಾಜುಎಂಬವರು  ಅಮ್ಮತ್ತಿಯ ಸಿದ್ದಾಪುರ ರಸ್ತೆಯಲ್ಲಿರುವ ಲಕ್ಷ್ಮಿ ಹಾರ್ಡ್ ವೇರ್ ನ ಗೋಡೌನ್ ನಲ್ಲಿ ಆಸ್ಬೆಸ್ಟಾಸ್  ಶೀಟನ್ನು ಇಳಿಸಲು  ಕೆಎ.04.ಬಿ.8229 ಲಾರಿಯ ಬಾಡಿಯ ಹಿಂಭಾಗ  ನಿಂತಿದ್ದು, ಆರೋಪಿ ಲಾರಿ ಚಾಲಕ ಮಂಜುನಾಥ್‌ ಎಂಬವನು  ಲಾರಿಯನ್ನು ಅತೀವೇಗ ಹಾಗೂ ಅಜಾಗರೂಕತೆ ಯಿಂದ ಚಾಲಿಸಿ ಗೋಡೌನ್ ಒಳಕ್ಕೆ ರಿವರ್ಸ್ ತೆಗೆದಾಗ ಲಾರಿಯ ಹಿಂಭಾಗದ ಬಾಡಿಯಲ್ಲಿದ್ದ ರಾಜು ರವರಿಗೆ ಗೋಡೌನ್ ನ ಆರ್.ಸಿ.ಸಿ.ಯ ಭೀಮ್ ತಲೆ ಹಾಗೂ ಮುಖ ಭಾಗಕ್ಕೆ ತಾಗಿ ಅಲ್ಲೇ ಕುಸಿದು ಬಿದ್ದು, ಮೃತಪಟ್ಟಿರುವ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.  
 

Sunday, February 24, 2013

ಗಾಳಿಯಲ್ಲಿ ಗುಂಡು ಕೊಲೆ ಬೆದರಿಕೆ 
 • ಗಾಳಿಯಲ್ಲಿ ಗುಂಡು ಹಾರಿಸಿ ಕೊಲೆ ಬೆದರಿಕೆ ಒಡ್ಡಿರುವ ಘಟನೆ ಭಾಗಮಂಡಲ ಸಮೀಪದ ಸಿಂಗತ್ತೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 19/02/2013 ರಂದು ಸಮಯ ರಾತ್ರಿ 10.15 ಗಂಟೆಗೆ ಸಿಂಗತ್ತೂರು ಗ್ರಾಮದ ಮಂಜುನಾಥ್ ಎಂಬುವವರು ಪೀಕಪ್ ಜೀಪಿನಲ್ಲಿ ಅದೇ ಗ್ರಾಮದ ಪಿ.ಪಿ.ಪಾರ್ವತಿ ಎಂಬವರ ಮನೆಗೆ  ಕೋವಿಯನ್ನು ತೆಗೆದುಕೊಂಡು ಬಂದು ಮನೆಯ ಅಂಗಳದಲ್ಲಿ ನಿಂತು, ಅವಾಚ್ಯ ಶಬ್ದಗಳಿಂದ ನಿಂದಿಸಿ  ಗಾಳಿಯಲ್ಲಿ ಎರಡು ಗುಂಡು ಹಾರಿಸಿ,  ಸಿಕ್ಕಿದರೆ ಗುಂಡು ಹೊಡೆದು ಕೊಲ್ಲದೆ ಬಿಡುವುದಿಲ್ಲ ಎಂದು ಹೇಳಿ ಜೀಪನ್ನು ತೆಗೆದುಕೊಂಡು ಹೋದ ಬಗ್ಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ಮದುವೆ ಸಮಾರಂಭದಲ್ಲಿ ಗಲಾಟೆ, ಚಾಕಿವಿನಿಂದ ತಿವಿದು ಹಲ್ಲೆ 
 • ಮದುವೆ ಸಮಾರಂಭದಲ್ಲಿ ಗಲಾಟೆಯುಂಟಾಗಿ ಚಾಕುವಿನಿಂದ ತಿವಿದು ಹಲ್ಲೆ ಮಾಡಿರುವ ಘಟನೆ ಪೊನ್ನಂಪೇಟೆಯ ಕೊಡವ ಸಮಾಜದಲ್ಲಿ ನಡೆದಿದೆ. ದಿನಾಂಕ 23/02/2013 ರಂದು ರಾತ್ರಿ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆಯುತ್ತಿದ್ದ ಮದುವೆ  ಸಮಾರಂಭದಲ್ಲಿ ಊಟದ ನಂತರ ಕುಣಿಯುತ್ತಿರುವಾಗ್ಗೆ ಬಿರುನಾಣಿ ಗ್ರಾಮದ ಚೊಟ್ಟಂಗಡ ರಂಜಿ ಎಂಬವರಿಗೆ  ಹರಿಹರ ಗ್ರಾಮದ ಚಿಮ್ಮಚ್ಚಿರ ಮುತ್ತಪ್ಪ ಮತ್ತು ಇನ್ನೋರ್ವ ಸೇರಿಕೊಂಡು ಕ್ಷುಲ್ಲಕ ಕಾರಣಕ್ಕೆ ಚೂರಿಯಿಂದ ತಿವಿದು ಹಣೆ, ಮೂಗು ಮತ್ತು ಹೊಟ್ಟೆಯ ಭಾಗಕ್ಕೆ ಗಾಯಪಡಿಸಿರುವುದಾಗಿ ರಂಜಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ಜೀವನದಲ್ಲಿ ಜುಗುಪ್ಸೆ, ನೇಣು ಬಿಗಿದುಕೊಂಡು ಆತ್ಮಹತ್ಯೆ 
 • ವಿಪರೀತ ಸಾಲದಿಂದಾಗಿ ಜೀವನದಲ್ಲಿ ಜುಗುಪ್ಸೆಗೊಂಡ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗೋಣಿಕೊಪ್ಪ ನಗರದಲ್ಲಿ ನಡೆದಿದೆ. ಗೋಣಿಕೊಪ್ಪದ ಬಿಲ್ಲವರ  ಹೊನ್ನಪ್ಪ  ರವರು ಗೋಣಿಕೊಪ್ಪ ಸಹಕಾರ ಬ್ಯಾಂಕಿನಲ್ಲಿ ಕೆಲಸ ಮಾಡಿಕೊಂಡಿದ್ದು, ಕಳೆದ 3 ವರ್ಷದ ಹಿಂದೆ ಸ್ವ-ನಿವೃತ್ತಿ ಹೊಂದಿ ಮನೆಯಲ್ಲಿದ್ದು ಈತನಿಗೆ ಕೈಸಾಲ ವಿಪರೀತವಿದ್ದ ಕಾರಣ ಮದ್ಯಪಾನ ಮಾಡುವ ಅಭ್ಯಾಸ ಮಾಡಿಕೊಂಡಿದ್ದು, ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:22-02-13 ರ ರಾತ್ರಿ  ಗೋಣಿಕೊಪ್ಪ ನಗರದ ಭೀಮಣ್ಣಿ ಕಾಂಪ್ಲೆಕ್ಸ್‌ನ ತಾನು ವಾಸವಿದ್ದ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ  ಆತನ ತಂಗಿ ಲಲಿತಾ ಎಂಬಾಕೆಯು ನೀಡಿದ ದೂರನಿ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 

Saturday, February 23, 2013

ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಹಲ್ಲೆ 
 • ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ ಘಟನೆ ಭಾಗಮಂಡಲ ನಗರದಲ್ಲಿ ನಡೆದಿದೆ. ದಿನಾಂಕ  22-02-13 ರಂದು ಕೋರಂಗಾಲ ಗ್ರಾಮದ ನಂಗಾರು ಸುಂದರ  ಮತ್ತು ಅವರ ಮಗ ರಾಜೇಶ್ ಹಾಗೂ ಅದೇ ಗ್ರಾಮದ ಬಂಗಾರಕೋಡಿ ಈಶ್ವರ ಎಂಬವರು  ಮದುವೆ ಮನೆಗೆ ಹೋಗಿದ್ದು ಮದುವೆ ಸಮಾರಂಭದಲ್ಲಿ ಬಂಗಾರಕೋಡಿ ಈಶ್ವರ ರಾಜೇಶ್‌ನೊಂದಿಗೆ ಅನುಚಿತವಾಗಿ ಮಾತನಾಡಿದ್ದು, ಅದನ್ನು ಸುಂದರರವರು ಆಕ್ಷೇಪಿಸಿದ ಬಗ್ಗೆ ಅದೇ ದಿನ  ಸಂಜೆ 07-30 ಗಂಟೆ ಸುಂದರರವರು ಕರಿಕೆ ಜಂಕ್ಷನ್ ಬಳಿ ಬಂದಾಗ ಬಂಗಾರಕೋಡಿ ಈಶ್ವರ ಸುಂದರರವರೊಂದಿಗೆ  ಜಗಳ ಮಾಡಿ ಚಾಕುವಿನಿಂದ ಅವರ ಕುತ್ತಿಗೆಯ ಎಡ ಭಾಗಕ್ಕೆ  ಎಡ ಕೈಯ ಕಂಕುಳದ ಬಳಿಗೆ , ಮೂಗಿಗೆ ಮತ್ತು ಗಲ್ಲದ ಹತ್ತಿರ ಚಾಕುವಿನಿಂದ ಎಳೆದು ಗಾಯ ಪಡಿಸಿರುವುದಾಗಿ ನೀಡಿದ ದುರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 ಅಪ್ರಾಪ್ತ ಬಾಲಕಿಯ ಅಪಹರಣ ಶಂಕೆ, ಪ್ರಕರಣ ದಾಖಲು 
 • ಅಪ್ರಾಪ್ತ ಬಾಲಕಿಯೋರ್ವಳನ್ನು  ಅಪಹರಿಸಿರುವ ಪ್ರಕರಣ ಕಾಂತೂರು ಮೂರ್ನಾಡು ಗ್ರಾಮದಲ್ಲಿ ನಡೆದಿದೆ. ದಿನಾಂಕ 21/02/2013ರಂದು ಕಾಂತೂರು ಮೂರ್ನಾಡಿನ ತಮಿಳರ ಸುಬ್ರಮಣಿ ಎಂಬಾತನ 15 ವರ್ಷ ಪ್ರಾಯದ ಮಗಳು ಕಾಣೆಯಾಗಿದ್ದು, ಎಲ್ಲಿಯೂ ಪತ್ತೆಯಾಗಿರುವುದಿಲ್ಲ ಆದರೆ ಹುಡುಕಾಟದ ಸಮಯದಲ್ಲಿ ಪ್ರಿಯಾಳು ಆಕೆಯ ಅಕ್ಕ ಮೀನಾಕ್ಷಿ ಮತ್ತು ಆಕೆಯ ಗಂಡ ಅಯ್ಯಪ್ಪ ಮತ್ತು ಅಯ್ಯಪ್ಪನ ತಮ್ಮ ವೇಲುಮುರುಗನ್‌ರವರ ಜೊತೆಯಲ್ಲಿ ಮೂರ್ನಾಡು ನಗರದಲ್ಲಿ ಇದ್ದುದಾಗಿ ತಿಳಿದುಬಂದಿದ್ದು, ಪ್ರಿಯಾಳನ್ನು ಮೇಲ್ಕಂಡ ಮೂವರು ಅಪಹರಿಸಿರಬಹುದಾಗಿ ಆಕೆಯ ತಂದೆ ತಮಿಳರ ಸುಬ್ರಮಣಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Friday, February 22, 2013

94,400 ರೂ ನಗದು ಕನ್ನ ಕಳವು 
 •  ಖಾಸಗಿ ಸಂಸ್ಥೆಯ ಕಚೇರಿಯ ಬೀಗ ಮುರಿದು ಒಳಗೆ ಪ್ರವೇಶಿಸಿ ರೂ.94,400/- ನಗದನ್ನು ಕಳವು ಮಾಡಿದ ಘಟನೆ ನಾಫೋಕ್ಲು ನಗರದಲ್ಲಿ ನಡೆದಿದೆ. ದಿನಾಂಕ 21/02/2013ರ ರಾತ್ರಿ ವೇಳೆ ನಾಪೋಕ್ಲು ನಗರದ ಟಾಟಾ ಕಾಫಿ ಲಿಮಿಟೆಡ್‌ ಸಂಸ್ಥೆಯ ಶಾಖಾ ಕಚೇರಿಯ ಹಿಂಬಾಗಿಲಿನ ಚಿಲಕವನ್ನು ಯಾರೋ ಕಳ್ಳರು ಮೀಟಿ ತೆಗೆದು ಒಳಗೆ ನುಗ್ಗಿ  ಗಾಡ್ರೇಜ್‌ನ  ಒಳಗಡೆಯಿಟ್ಟಿದ್ದ ಪೆಟ್ಟಿಗೆಯಿಂದ( ಸೇಫ್ ಲಾಕರ್)  ನಗದು ರೂ. 94400.00 ವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಪಾಲಿ ಬೆಟ್ಟ ಕಚೇರಿಯ ವ್ಯವಸ್ಥಾಪಕ ಪ್ರದೀಶ್‌ ಸುಬ್ಬಯ್ಯ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ಅಪ್ರಾಪ್ತ ಹುಡುಗಿ ಕಾಣೆ, ಅಪಹರಣ ಶಂಕೆ 
 •  ಒಂಬತ್ತನೇ ತರಗತಿ ಓದುತ್ತಿರುವ ಬಾಲಕಿಯೋರ್ವಳು ಕಾಣೆಯಾಗಿರುವ ಪ್ರಕರಣ ಪೊನ್ನಂಪೇಟೆ ನಗರದಲ್ಲಿ ನಡೆದಿದೆ.ದಿನಾಂಕ 19/02/2013 ರಂದು ಮಂಗಳವಾರ ದಿನ ಪೊನ್ನಂಪೇಟೆಯ ಕಾಟ್ರಕೊಲ್ಲಿಯ ನಿವಾಸಿ ಗೋಪಿ ಎಂಬಾಕೆಯು ಎಂದಿನಂತೆ ಕೂಲಿಕೆಲಸಕ್ಕೆ ಹೋಗಿ ಸಂಜೆ 6.00 ಗಂಟೆಗೆ ಮನೆಗೆ ಬಂದಾಗ ಆಕೆಯ ಮಗಳು 14 ವರ್ಷ ಪ್ರಾಯದ ಸುಮಾಳು ಮನೆಯಲ್ಲಿ ಇರಲಿಲ್ಲ. ಆಕೆಯು ಸುಮಳು ಎಲ್ಲಿ ಎಂದು ಇನ್ನೋರ್ವ ಮಗಳು ರೇಣುಕಾಳನ್ನು ಕೇಳಿದಾಗ ಅವಳು ಸಂಜೆ ತರಗತಿ ಮುಗಿದ ನಂತರ ತನ್ನೊಂದಿಗೆ ಬರದೆ ಶಾಲಾ ಮೈದಾನದ ಬಳಿ ಆಟವಾಡುತ್ತಿದ್ದು  ಅವಳು ಬರಬಹುದೆಂದು ತನಿಳಿದು ತಾನು ಮನೆಗೆ ಬಂದಿರುವುದಾಗಿ ಎಂದು ತಿಳಿಸಿದಳು. ನಂತರ  ಅಕೆಯು ತನ್ನ ಮಗಳನ್ನು  ನೆಂಟರಿಷ್ಟರ ಮನೆಗೆ ಹೋಗಿರಬಹುದೆಂದು ತಿಳಿದು ಮೈಸೂರು, ಕೆ.ಆರ್.ನಗರ, ಹುದುಬಾರು, ಜಾಬ್ ಗೆರೆ ಮುಂತಾದ ಕಡೆ ಹುಡುಕಾಡಿದಲ್ಲೂ ಪತ್ತೆಯಾಗಿರುವುದಿಲ್ಲ.  ನಂತರ  ಮಗಳ ಜೊತೆ ಹೆಚ್ಚಿನ ವೇಳೆ ಮಾತನಾಡುತ್ತಿದ್ದ ಪಕ್ಕದ ಮನೆಯ ಶೋಭಳನ್ನು ವಿಚಾರಿಸಿದಾಗ  ಸುಮಳು ಎಲೆಕ್ಟ್ರಿಕಲ್ ಕೆಲಸ ಮಾಡುವ ಗಣೇಶನ ಜೊತೆ ಮಾತನಾಡುತ್ತಿದ್ದಳು ಎಂದು ತಿಳಿಸಿದಳು. ನಂತರ ಅದೇ ಕಾಲೋನಿಯ  ನಾರಾಯಣ ಮೇಸ್ತ್ರಿಯವರ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ಗಣೇಶ ರವರ ಮನೆಗೆ ಹೋದಾಗ ಆತ ಮಂಗಳವಾರ ದಿವಸವೇ ಮನೆ ಖಾಲಿ ಮಾಡಿಕೊಂಡು ಹೋಗಿರುತ್ತಾರೆಂದು ತಿಳಿಯಿತು. ಅದರಿಂದಾಗಿ ಸುಮಾಳನ್ನು  ಆತನೇ ಕರೆದುಕೊಂಡು ಹೋಗಿರಬಹುದೆಂದು ಗುಮಾನಿ ಇರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 
ವರದಕ್ಷಿಣೆ ತರುವಂತೆ ಕಿರುಕುಳ,ಮಹಿಳೆಯ ಆತ್ಮಹತ್ಯೆ
 •  ವರದಕ್ಷಿಣೆ ಕಿರುಕುಳ ತಾಳಲಾರದೆ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಶನಿವಾರಸಂತೆಯ ಬಡಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಶನಿವಾರಸಂತೆಯ ಬಡಕನಹಳ್ಳಿ ಗ್ರಾಮದ ಹೆಚ್‌.ವಿ.ಬಸವರಾಜು ಎಂಬವರ ಹಿರಿಯ  ಮಗಳು 25 ವರ್ಷ ಪ್ರಾಯದ ಅನುಪಮಳನ್ನು ಬೆಂಗಳೂರಿನ ನಿವಾಸಿ ನಂದೀಶ ಎಂಬುವವನಿಗೆ ಸುಮಾರು 4 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು, ಪ್ರಾರಂಭದ ದಿನಗಳಲ್ಲಿ ಮಗಳು ಹಾಗೂ ಅಳಿಯ ಅನ್ಯೋನ್ಯವಾಗಿದ್ದು, ನಂತರದ ದಿನಗಳಲ್ಲಿ ಇನ್ನೊಂದು ವಾಹನ ತೆಗೆಯಲು 2 ಲಕ್ಷ ರೂ. ಗಳನ್ನು ತವರು ಮನೆಯಿಂದ ತರುವಂತೆ ಅಳಿಯ ನಂದೀಶನು ಅನುಪಮಳಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ಮಾಡುತ್ತಿದ್ದು, ಕಳೆದ ವರ್ಷ ಚಿನ್ನಾಭರಣಗಳನ್ನು ಬ್ಯಾಂಕಿನಲ್ಲಿ ಅಡವಿಟ್ಟು 2 ಲಕ್ಷ ರೂಗಳನ್ನು ಅಳಿಯನಿಗೆ ಕೊಟ್ಟಿದ್ದು, ನಂತರವೂ ಅನುಪಮಳನ್ನು ಸರಿಯಾಗಿ ನೋಡಿಕೊಳ್ಳದೆ  ಪ್ರತಿದಿನ ಕಿರುಕುಳ ನೀಡುತ್ತಿದ್ದು, ಬಸವರಾಜುರವರು  ಬುದ್ದಿವಾದ ಹೇಳಿ ಸಮಾಧಾನಪಡಿಸಿ ಬಂದಿದ್ದು, ಕಳೆದ ತಿಂಗಳು ಅನುಪಮಳಿಗೆ ಬೆಂಗಳೂರಿನಲ್ಲಿ ಪೈಲ್ಸ್‌ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ವಿಶ್ರಾಂತಿ ಸಲುವಾಗಿ ತವರು ಮನೆಗೆ ಬಂದಿದ್ದು 20 ದಿವಸಗಳಾದರೂ ಅಳಿಯ ಮಗಳನ್ನು ನೋಡಲು ಬಾರದೆ ಇದ್ದು, ದಿನಾಂಕ : 21-02-2013 ರಂದು ರಾತ್ರಿ ಅಳಿಯ ದೂರವಾಣಿ ಕರೆ ಮಾಡಿದಾಗ ಅನುಪಮ ಮಾತನಾಢಿ ಈಗಲಾದರೂ ಮನೆಗೆ ಬನ್ನಿ ಎಂದು ಕರೆದಿದ್ದು, ಅಳಿಯನು ನೀನು ಅಲ್ಲೇ ಸಾಯಿ, ನಿನ್ನ ಮಗು ನನಗೆ ಬೇಕಾಗಿಲ್ಲ. ಎಂದೆಲ್ಲಾ ಬೈಯ್ದಿದ್ದು, ಇದರಿಂದ ಅನುಪಮಳು ಜೀವನದಲ್ಲಿ ಜಿಗುಪ್ಸೆಗೊಂಡು ತಾನು ಮಲಗುವ ಕೋಣೆಯಲ್ಲಿ ಕೌಕೋಲಿಗೆ  ವೇಲನ್ನು ಕಟ್ಟಿ ತನ್ನ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಸಾವಿಗೆ ಅಳಿಯ ನಂದೀಶನು ನೀಡುತ್ತಿದ್ದ ದೈಹಿಕ ಹಾಗೂ ಮಾನಸಿಕ ಕಿರುಕುಳವೇ ಕಾರಣವಾಗಿರುತ್ತದೆಂದು ಬಸವರಾಜುರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, February 20, 2013

ಬೆಂಕಿ ಆಕಸ್ಮಿಕ, ಯುವತಿ ಸಾವು 
 • ಆಕಸ್ಮಿಕವಾಗಿ ಬಟ್ಟೆಗೆ ಬೆಂಕಿ ಹತ್ತಿಕೊಂಡ ಪರಿಣಾಮ ಯುವತಿಯೋರ್ವರು ಸಾವನ್ನಪ್ಪಿರುವ ಘಟನೆ ಕುಶಾಲನಗರ ಸಮೀಪದ ಹಕ್ಕೆಗ್ರಾಮದಲ್ಲಿ ನಡೆದಿದೆ. ದಿನಾಂಕ 15-02-2013 ರಂದು ಸಮಯ ರಾತ್ರಿ ಹಕ್ಕೆ ಗ್ರಾಮದಲ್ಲಿ ರತ್ನ ಎಂಬವರ ಮಗಳು ಪ್ರಾಯ 21 ವರ್ಷದ ದ್ರಾಕ್ಷಾಯಿಣಿ ಎಂಬುವವಳು ಊಟ ಮಾಡಿ ಮಲಗುವ ಸಮಯದಲ್ಲಿ ಕರೆಂಟ್ ಹೋದ ಕಾರಣ ಸೀಮೆಣ್ಣೆ ದೀಪವನ್ನು ಹತ್ತಿಸಿಕೊಂಡು ಗೋಡೆಯ ಮೇಲೆ ಇಟ್ಟಿದ್ದು, ನಂತರ ಕುಡಿಯುವ ನೀರು ತೆಗೆದುಕೊಂಡು ಬರಲು ಅಡುಗೆ ಮನೆ ಕಡೆ ಹೋಗುವ ಸಂದರ್ಭದಲ್ಲಿ ಗೋಡೆಯ ಮೇಲೆ ಇಟ್ಟಿದ್ದ ಸೀಮೆಣ್ಣೆ ದೀಪ ಆಕಸ್ಮಿಕವಾಗಿ ದ್ರಾಕ್ಷಾಯಿಣಿಯ ಮೈಮೇಲೆ ಬಿದ್ದ ಪರಿಣಾಮ  ಆಕೆ ಧರಿಸಿದ್ದ ಪಾಲಿಸ್ಟರ್ ಚೂಡಿದಾರಕ್ಕೆ ಹತ್ತಿಕೊಂಡು ಸುಟ್ಟ ಗಾಯಗಳಿಂದ ಒದ್ದಾಡುತ್ತಿದ್ದವಳನ್ನು ಅಳಿಯ ಮತ್ತು ಇತರರ ಸಹಾಯದಿಂದ ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ  ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದು, ದಿನಾಂಕ 19-02-2013 ರಂದು ರಾತ್ರಿ  ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಬಗ್ಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಅತಿಯಾದ ಮದ್ಯ ಸೇವನೆ, ವ್ಯಕ್ತಿಯ ಸಾವು 
 • ಅತಿಯಾದ ಮದ್ಯ ಸೇವನೆಯಿಂದ ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ಪೊನ್ನಂಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 19/02/2013ರಂದು ರಾತ್ರಿ ಪೊನ್ನಂಪೇಟೆ ನಗರದ ತೊರೆಬೀದಿಯಲ್ಲಿ ವಾಸವಿರುವ ಹೆಚ್‌.ರಾಜು ಎಂಬವರು ಪೊನ್ನಂಪೇಟೆ ನಗರದ ಶಬರಿ ಬ್ರಾಂದಿ ಅಂಗಡಿಯಲ್ಲಿ ಅತಿಯಾದ ಮದ್ಯ ಸೇವಿಸಿ ತಂಗಿದ್ದು, ಬೆಳಿಗ್ಗೆ ನೋಡುವಾಗ ಮಲಗಿದ್ದಲ್ಲೇ ಸಾವನ್ನಪ್ಪಿರುವ ಬಗ್ಗೆ ಆತನ ಪತ್ನಿ ಸುಶೀಳ ಎಂಬವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ಹಳೆ ವೈಷಮ್ಯ ದಾರಿ ತಡೆದು ಬ್ಯಕ್ತಿಯ ಮೇಲೆ ಹಲ್ಲೆ, ಕಾರಿಗೆ ಹಾನಿ 
 • ಹಳೆ ವೈಷಮ್ಯದಿಂದ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿ ಕರಿಗೆ ಹಾನಿಗೊಳಿಸಿದ ಘಟನೆ ವಿರಾಜಪೇಟೆಯ ಕಡಂಗದ ಮಸೀದಿಯ ಬಳಿ ನಡೆದಿದೆ. ದಿನಾಂಕ 19/02/2013ರಂದು ಪಾಲಂಗಾಲ ಗ್ರಾಮದ ನಡಿಕೇರಿಯಂಡ ರಕ್ಷಿತ್‌ ಹಾಗೂ ಆತನ  ಅಣ್ಣ ದೀಕ್ಷಿತ್‌ ಕಾರ್ಯಪ್ಪ ಮತ್ತು ಕೆ.ಕೆ. ಕಿರಣ್‌ರವರು , ಕಿರಣ್‌ರವರ ಸ್ನೇಹಿತನ ಬಾಪ್ತು  ಟವೇರಾ ಕಾರು ನಂ. ಎಂಹೆಚ್‌.05 ಎಜೆ-8144ರಲ್ಲಿ  ಕಿರಣ್‌ರವರು ಕಾರನ್ನು ಚಾಲನೆ ಮಾಡಿಕೊಂಡು ಕಡಂಗ ಗ್ರಾಮಕ್ಕೆ ಹೋಗುತ್ತಿರುವಾಗ್ಗೆ ಸಮಯ ಸಂಜೆ 06.45 ಗಂಟೆಗೆ ಕಡಂಗ ಗ್ರಾಮದ ಮಸೀದಿಯ ಮುಂದೆ  ಕಾರನ್ನು ಶೇಕಿಲ್‌ ಎಂಬವರು ತಡೆದು ನಿಲ್ಲಿಸಿ ಕಾರಿನಿಂದ ರಕ್ಷಿತ್‌ರವರನ್ನು ಕೆಳಗೆ ಇಳಿಸಿ ಅವರನ್ನು  ಹಿಡಿದುಕೊಂಡಾಗ ಶಾಕೀರ್‌, ಸಿದ್ದೀಕ್‌ರವರು ಕೈಯಿಂದ ಶರೀಕಕ್ಕೆ ಹೊಡೆದು ನೋವು ಉಂಟು ಪಡಿಸಿದ್ದು ತಡೆಯಲು ಬಂದ ಕಿರಣ್‌ರವರಿಗೆ ರೀಚು ರಿಯಾಸ್‌, ಯೂನಿಸ್‌ರವರು ಸೇರಿ ಕೈಯಿಂದ ಶರೀರಕ್ಕೆ ಹೊಡೆದು ನೋವು ಉಂಟು ಪಡಿಸಿದ್ದು ಅವರ ಜೊತೆಯಲ್ಲಿದ್ದ ಒಬ್ಬನು ಟವೇರ ವಾಹನದ ಗ್ಲಾಸನ್ನು ಹೊಡೆದು ಪುಡಿ ಮಾಡಿದ್ದು ಇನ್ನು ಉಳಿದ ಕೆಲವರು ದೊಣ್ಣೆಯನ್ನು ಹಿಡಿದುಕೊಂಡು ಅದರಲ್ಲಿ ಸಿದ್ದಿಕನು ಕತ್ತಿಯನ್ನು ಹಿಡಿದು ಇದೆ ದೊಣ್ಣೆ ಮತ್ತು ಕತ್ತಿಯಿಂದ ಹೊಡೆದು ಕೊಲೆ ಮಡುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

   

Tuesday, February 19, 2013

ರಸ್ತೆ ಅಫಘಾತ, ಪಾದಚಾರಿಗೆ ಗಾಯ 
 • ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ವ್ಯಕ್ತಿಯೋರ್ವರಿಗೆ ವಾಹನವೊಂದು ಡಿಕ್ಕಿಯಾಗಿ ಗಾಯಗೊಂಡ ಘಟನೆ ವಿರಾಜಪೇಟೆ ನಗರದ ನೆಹರುನಗರದಲ್ಲಿ ನಡೆದಿದೆ. ದಿನಾಂಕ 18/02/2013 ರಂದು ರಾತ್ರಿ 09.30 ಗಂಟೆಗೆ ನೆಹರುನಗರದ ನಿವಾಸಿ ಎಂ.ಬಿ.ಪೈಚಾನ್‌ ಎಂಬವರು  ತನ್ನ ಮನೆಯ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ನಿಂತು ಕೊಂಡಿರುವಾಗ್ಗೆ, ಮೊಗರಗಲ್ಲಿ ಕಡೆಯಿಂದ KA-12-N-9583 ರ ಬೊಲೆರೋ ವಾಹನವನ್ನು  ಅದರ ಚಾಲಕ ಲವ ಎಂಬುವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಪೈಚಾನ್‌ರವರಿಗೆ  ಡಿಕ್ಕಿ ಪಡಿಸಿದ ಪರಿಣಾಮ ಪೈಚಾನ್‌ರವರ ಬಲ ಕಾಲಿಗೆ ಗಾಯಗಳಾಗಿದ್ದು, ಆರೋಪಿ ಲವ  ವಾಹನವನ್ನು ನಿಲ್ಲಿಸದೇ ಹೊರಟು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ಪಾದಚಾರಿಗೆ ಕಾರು ಡಿಕ್ಕಿ, ಗಾಯ 
 • ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಕಾರು ಡಿಕ್ಕಿಯಾಗಿ ಗಾಯಗಳಾದ ಘಟನೆ ಮಡಿಕೇರಿ ನಗರದ ಬಾಲಭವನದ ಬಳಿ ನಡೆದಿದೆ. ದಿನಾಂಕ 18/02/2013ರಂದು ಮಡಿಕೇರಿ ನಿವಾಸಿ ಸಿ.ಸಿ.ಮಂಜುನಾಥ್‌ ಎಂಬವರು ತಮ್ಮ ಪತ್ನಿ ಕುಸುಮ ಎಂಬವರೊಂದಿಗೆ ತರಕಾರಿ ತೆಗೆದುಕೊಂಡು ನಡೆದುಕೊಂಡು ಹೋಗುತ್ತಿದ್ದಾಗ ನಗರದ ಮೋಣಪ್ಪ ಗ್ಯಾರೇಜ್‌ ಬಳಿಯಿಂದ ಕೆಎ 12 ಎ 2750ರ ಸ್ವಿಫ್ಟ್ ಕಾರಿನ ಜಾಲಕ ಜಗದೀಶ್‌ ಎಂಬಾತನು ತನ್ನ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಂಜುನಾಥ್‌ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಮಂಜುನಾಥ್‌ರವರು ಗಾಯಗೊಂಡ ಬಗ್ಗೆ ಮಡಿಕೇರಿ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕ್ಷುಲ್ಲಕ ಕಾರಣಕ್ಕೆ ಕಲ್ಲಿನಿಂದ ವ್ಯಕ್ತಿಯ ಮೇಲೆ ಹಲ್ಲೆ. 
 • ಕ್ಷುಲ್ಲಕ ಕಾರಣಕ್ಕೆ ಕಲ್ಲಿನಿಂದ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿದ ಘಟನೆ ಮಡಿಕೇರಿ ನಗರದ ಮೀನು ಮಾರುಕಟ್ಟೆ ಬಳಿ ನಡೆದಿದೆ. ದಿನಾಂಕ 18/02/2013ರಂದು ಮಡಿಕೇರಿಯ ಮೀನು ಮಾರುಕಟ್ಟೆಯ ಬಳಿ ಸಿಕಂದರ್‌ ಎಂಬಾತನು ನಿಶಾಮತ್ತನಾಗಿ ಎಂ. ಮಹಮದ್ ರಫೀಕ್ ಎಂಬವರ ಮೀನು ಅಂಗಡಿಗೆ ಬಂದು ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಅನ್ವರ್‌ ಎಂಬವನ ಜೊತೆ ವಿನಾ ಕಾರಣ ಜಗಳವಾಡುತ್ತಿದ್ದುದನ್ನು ಕೇಳಲು ಹೋದ ಮಹಮದ್‌ ರಫೀಕ್‌ರವರಿಗೆ ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿರುವ ಬಗ್ಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ಆಸ್ಪತ್ರೆಯಿಂದ ಮಹಿಳೆ ಕಾಣೆ 
 • ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದ ಮಹಿಳೆಯೋರ್ವರು ಕಾಣೆಯಾದ ಘಟನೆ ಮಡಿಕೇರಿ ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ನಡೆದಿದೆ. ದಿನಾಂಕ 15-02-2013 ರಂದು ಸಮಯ 14.15 ಗಂಟೆಗೆ ಕಾರುಗುಂದ ಗ್ರಾಮದ ನಿವಾಸಿ ದಿನೇಶ ಎಂಬವರು ತಮ್ಮ  ಪತ್ನಿ ಧರಣಿರವರನ್ನು ಅನಾರೋಗ್ಯದ ಕಾರಣ  ಚಿಕಿತ್ಸೆ ಬಗ್ಗೆ ಮಡಿಕೇರಿ ನಗರದ ಅಶ್ವಿನಿ ಆಸ್ಪತ್ರೆಗೆ ಕರೆ ತಂದು, ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯವರು ಇಲ್ಲದ್ದರಿಂದ ಪತ್ನಿಯನ್ನು ಅಲ್ಲಿಯೇ ಬಿಟ್ಟು  ಹೊರಗಡೆ ಹೋಗಿ ಸಮಯ ಸುಮಾರು 14.30 ಗಂಟೆಗೆ ವಾಪಾಸು ಬಂದು ನೊಡುವಾಗ್ಗೆ  ಪತ್ನಿ ಧರಣಿ ಆಸ್ಪತ್ರೆಯಲ್ಲಿರದೇ ಕಾಣೆಯಾಗಿದ್ದು, ಇವರನ್ನು ಎಲ್ಲಾ ಕಡೆ ಹುಡುಕಾಡಿದರು ಪತ್ತೆಯಾಗಿರುವುದಿಲ್ಲ ಎಂಬುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 

Monday, February 18, 2013

ವ್ಯಕ್ತಿಯ ಮೇಲೆ ಹಲ್ಲೆ ಪ್ರಕರಣ ದಾಖಲು 
 • ವ್ಯಕ್ತಿಯೋರ್ವರ ಮೇಲೆ ಗುಂಪು ಹಲ್ಲೆ ನಡೆಸಿದ ಘಟನೆ ಗೋಣಿಕೊಪ್ಪ ನಗರದ ಬಸ್‌ ನಿಲ್ದಾಣದ ಬಳಿ ನಡೆದಿದೆ. ದಿನಾಂಕ 17/02/2013 ರಂದು gÁwæ ¸ÀĪÀiÁgÀÄ 8.30 UÀAmÉ ¸ÀªÀÄAiÀÄzÀ°è UÉÆÃtÂPÉÆ¥Àà §¸ïì ¤¯ÁÝtzÀ°è PÁqÀåªÀiÁqÀ ºÀjñï @ PÁ¼À¥Àà JA§ÄªÀªÀjUÉ ಅಪರಿಚಿತ 2 jAzÀ 3 d£ÀgÀÄ C£ÁªÀ±ÀåPÀ ºÀ¯Éè ªÀiÁqÀÄwÛzÀÄÝzÀÝ£ÀÄß PÀAqÀÄ ಪ್ರಕರಣದ ಫಿರ್ಯಾದಿ ಪೊರ್ಕೊಂಡ ಪೂವಯ್ಯ ಎಂಬವರು  £ÉÆÃqÀ®Ä ºÉÆÃzÁUÀ EªÀjUÀÆ ¸ÀºÀ  ªÉÄîÌAqÀ  ªÀÄÆgÀÄ d£ÀgÀÄ »rzÀÄ PÉÆAqÀÄ ºÀ¯Éè ªÀiÁrzÀÄÝ EzÀjAzÀ ಪೂವಯ್ಯ ಹಾಗೂ  PÁ¼À¥Àà£ÀªÀjUÉ ªÀÄÆVUÉ ºÁUÀÆ ªÀÄÄRPÉ̯Áè vÀgÀazÀ UÁAiÀĪÁVgÀĪÀÅzÁV ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ಆಟೋ ಮತ್ತು ಬೈಕ್ ಡಿಕ್ಕಿ, ಓರ್ವನ ಸಾವು 
 • ಆಟೋ ಮತ್ತು ಬೈಕ್‌ ಡಿಕ್ಕಿಯಾಗಿ ಬೈಕ್‌ ಸವಾರ ಮೃತಪಟ್ಟು ಇತರರಿಗೆ ಗಾಯಗಳಾದ ಘಟನೆ ಕುಶಾಲನಗರದ ವೆಂಕಟೇಶ್ವರ ಚಿತ್ರಮಂದಿರದ ಬಳಿ ನಡೆದಿದೆ. ದಿನಾಂಕ 07-02-2012 ರಂದು ಬೈಲುಕೊಪ್ಪದ ಲಬ್‌ಸಾಂಗ್ ಟೆಂಟೇವ್  ಹಾಗು ರಿಂಚನ್‌ ಡೂನ್‌ಡೂಪ್‌,ಲಬ್‌ಸಾಂಗ್‌ಡೂನ್‌ಡೂಪ್‌,ಪೂರಪ್‌ವಾಂಗ್‌ದಿ,ಲಬ್‌ಸಾಂಗ್‌ ಟಾಶಿ, ಡಾವಸಿರಿಂಗ್‌ ಲಬ್‌ಸಾಂಗ್‌ ಟೇನ್‌ಟೇವ್‌ ಎಂಬುವವರು ಕುಶಾಲನಗರದಿಂದ ಬೈಲುಕೊಪ್ಪೆ 4 ನೇ ಕ್ಯಾಂಪ್‌ ಕಡೆಗೆ KA-12A-6569 ರ ಆಟೋದಲ್ಲಿ ಹೋಗುತ್ತಿರುವಾಗ್ಗೆ ಸಮಯ ರಾತ್ರಿ  20.30 ಗಂಟೆಗೆ ಕುಶಾಲನಗರದ ವೆಂಕಟೇಶ್ವರ ಚಿತ್ರಮಂದಿರದ ಬಳಿ ತಲುಪ್ಪುವಾಗ್ಗೆ ಆಟೋಚಾಲಕನು ಆಟೋವನ್ನು ಅತೀವೇಗ ಹಾಗು ಅಜಾಗರೂಕತೆಯಿಂದ ಚಾಲಿಸಿಕೊಂಡು ಎದುರುಗಡೆಯಿಂದ ಬಂದ KA 45 L 5752  ಟಿ.ವಿ.ಎಸ್‌. ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಆಟೋ ಮಗುಚಿಕೊಂಡು  ಅದರಲ್ಲಿದ್ದ ರಿಂಚಿನ್‌ಡಾನ್‌ಡಪ್‌ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಉಳಿದ 4 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಲ್ಲಿದ್ದ ಸಾರ್ವಜನಿಕರು ಯಾವುದೋ ಆಟೋರಿಕ್ಷಾದಲ್ಲಿ ಗಾಯಾಳುಗಳನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, February 17, 2013

ಅಕ್ರಮ ಜೂಜಾಟ, ಐವರ ಬಂಧನ 
 • ಅಕ್ರಮವಾಗಿ ಜೂಜಾಡುತ್ತಿದ್ದ ಐವರನ್ನು ಬಂಧಿಸಿರುವ ಘಟನೆ ಸೋಮವಾರಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 17/02/2013 ರ ನಡು ರಾತ್ರಿ 01:30 ಗಂಟೆಯ ವೇಳೆಗೆ ಸೋಮವಾರಪೇಟೆ ನಗರದ ಮಾರುಕಟ್ಟೆ ಬಳಿ ಅಕ್ರಮವಾಗಿ ಜೂಜಾಡುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ಸೋಮವಾರಪೇಟೆ ವೃತ್ತ ನಿರೀಕ್ಷಕ ಹೆಚ್‌.ಎನ್‌.ಸಿದ್ದಯ್ಯನವರು ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾಳಿನಡೆಸಿ ಅಕ್ರಮವಾಗಿ ಜೂಜಾಡುತ್ತಿದ್ದ ಶ್ರೀನಿವಾಸ, ಆನಂದಕುಮಾರ, ಮುರಳಿ, ಪ್ರಶಾಂತ ಹಾಗೂ ಶರಣ್ ಎಂಬವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ 
 • ಕ್ಷುಲ್ಲಕ ಕಾರಣೆಕ್ಕೆ ವ್ಯಕ್ತಿಯೋರ್ವರನ್ನು ದಾರಿ ತಡೆದು ಹಲ್ಲೆ ಮಾಡಿರುವ ಘಟನೆ ಕುಶಾಲನಗರ ಬಳಿಯ ಕುಡ್ಲೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 16-02-2013 ರಂದು ಸಮಯ 22.30 ಗಂಟೆಗೆ ಹಾರಂಗಿ ಗ್ರಾಮದ ಬಾಲಾಜಿ ಎಂಬವರು ತಮ್ಮ ಕೆಲಸ ಮುಗಿಸಿಕೊಂಡು ತನ್ನ ಮನೆಗೆ ಹೋಗುತ್ತಿರುವಾಗ್ಗೆ ಕೂಡ್ಲೂರು ಪೃಥ್ವಿ ಬಾರಿನ ಮುಂಬಾಗ   ಆರೋಪಿ ಶ್ರೀನಿವಾಸ ಎಂಬುವವನು ಅವರನ್ನು  ದಾರಿ ತಡೆದು ಕ್ಷುಲ್ಲಕ ಕಾರಣಕ್ಕೆ ಅಶ್ಲೀಲ ಶಬ್ದಗಳಿಂದ ಬೈದು  ಕುತ್ತಿಗೆ ಪಟ್ಟಿ ಹಿಡಿದು ಕೈಯಿಂದ ಮುಖಕ್ಕೆ ಹೊಡೆದು ಬಾಲಾಜಿಯವರನ್ನು  ಕೆಳಕ್ಕೆ ಬೀಳಿಸಿ ನಂತರ ಅಲ್ಲಿಯೇ ರಸ್ತೆ ಬದಿಯಲ್ಲಿ ಬಿದ್ದಿದ್ದ ಒಂದು ಹಿಡಿ ಗಾತ್ರದ ಕಲ್ಲನ್ನು ತೆಗೆದು  ತಲೆಯ ಹಿಂಬಾಗಕ್ಕೆ ಹೊಡೆದು ಗಾಯಪಡಿಸಿದ್ದುದಲ್ಲದೆ ಪಿರ್ಯಾದಿಗೆ ಕೊಲ್ಲುವುದಾಗಿ ಕೊಲೆ ಬೆದರಿಕೆ ಹಾಕಿರುವಬಗ್ಗೆ ನೀಡಿದ ದೂರಿಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ಮನೆ ಕನ್ನ ಕಳವು, ಪ್ರಕರಣ ದಾಖಲು 
 • ಮನೆಯ ಬೀಗ ಮುರಿದು ಬೆಲೆಬಾಳುವ ಸಾಮಾನುಗಳನ್ನು ಕಳವು ಮಾಡಿದ ಪ್ರಕರಣ ಮಡಿಕೇರಿ ನಗರದ ಕುಂಬಳಗೇರಿ ಉಕ್ಕಡ ಎಂಬಲ್ಲಿ ನಡೆದಿದೆ, ದಿನಾಂಕ 16/02/2013ರಂದು ಮಡಿಕೇರಿ ನಗರದ ಕುಂಬಳಗೇರಿ ಉಕ್ಕಡದ ನಿವಾಸಿ ಹೆಚ್‌.ಬಿ.ರಘು ಎಂಬವರು ಮನೆಯಲ್ಲಿಲ್ಲದ ಸಮಯದಲ್ಲಿ ಯಾರೋ ಅಪರಿಚಿತ ಕಳ್ಳರು ಮನೆಯ ಬೀಗ ಮುರಿದ ಒಳ ಪ್ರವೇಶಿಸಿ ಸುಮರು ರೂ. 15,000/- ಮೌಲ್ಯದ ಒಂದು ಕ್ಯಾಮೆರಾ, ಬೆಳ್ಲಿಯ ಕಾಲುಚೈನುಗಳು ಮತ್ತು ನಗದನ್ನು ಕಳವು ಮಾಡಿರುವ ಬಗ್ಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ಅಕ್ರಮ ಗಾಂಜಾ ಸಾಗಾಟ, ಇಬ್ಬರ ಬಂಧನ 
 • ಅಕ್ರಮವಾಗಿ ಮಾರಾಟ ಮಾಡಲು ಗಾಂಜಾ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿದ ಘಟನೆ ಮಡಿಕೇರಿ ನಗರದ ಅರಣ್ಯ ಭವನದ ಬಳಿ ನಡೆದಿದೆ. ಅಕ್ರಮವಾಗಿ ಗಾಂಜಾವನ್ನು ತಂದು ಮಡಿಕೇರಿ ನಗರದಲ್ಲಿ ಮಾರಾಟ ಮಾಡುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ಮಡಿಕೇರಿ ಉಪ ವಿಭಾಗದ ಡಿಎಸ್‌ಪಿ ರಾಜೀವ್ ಮಾಂಗ್‌ ಹಾಗೂ ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿಗಳು ದಿನಾಂಕ 16/02/2013ರಂದು ಮಡಿಕೇರಿ ನಗರದ ಅರಣ್ಯ ಭವನದ ಬಳಿ ಕೆಎ-05-ಇಎಕ್ಸ್-9272ರಲ್ಲಿ ಹುಣಸೂರಿನ ಮಹಮದ್‌ ಆಲಿ ಮತ್ತು ಪಿರಿಯಾಪಟ್ಟಣದ ಸೈಯದ್‌ ಅನ್ವರ್ ಎಂಬವರು ಎರಡು ಬ್ಯಾಗ್‌ಗಳಲ್ಲಿ ಸುಮಾರು ರೂ.60,000/- ಮೌಲ್ಯದ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ತಂದು ನಿಂತಿದ್ದುದನ್ನು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿ ಗಾಂಜಾವನ್ನು ವಶಪಡಿಸಿಕೊಂಡಿದ್ದು ಮಡಿಕೇರಿ ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Saturday, February 16, 2013

ಹಳೆ ವೈಷಮ್ಯ, ಕೊಲೆ ಬೆದರಿಕೆ 
 • ಹಳೆ ವೈಷಮ್ಯದಿಂದ ವ್ಯಕ್ತಿಯೋರ್ವರನ್ನು ದಾರಿತಡೆದು ಕೊಲೆ ಬೆದರಿಕೆ ಹಾಕಿರುವ ಘಟನೆ ನಾಪೋಕ್ಲು ಠಾಣಾ ವ್ಯಾಪ್ತಿಯ ಅಜ್ಜಿಮುಟ್ಟ ಎಂಬಲ್ಲಿ ನಡೆದಿದೆ. ದಿನಾಂಕ 15/02/2013ರ ಸಂಜೆ ನಾಪೋಕ್ಲುವಿನ ಅಜ್ಜಿಮುಟ್ಟದ ನಿವಾಸಿ ಬಾಳೆಯಡ ಮೇದಪ್ಪ ಎಂಬವರು ಅವರ ಮನೆಯಿಂದ ಕೆಲಸದವರೊಂದಿಗೆ ನಾಪೋಕ್ಲು ನಗರಕ್ಕೆ ಬರುತ್ತಿರುವಾಗ ಆರೋಪಿ ಬಾಳೆಯಡ ಶರಿ ಎಂಬಾತನು ಮೇದಪ್ಪನವರ ದಾರಿ ತಡೆದು ಹಳ ವೈಷಮ್ಯದಿಂದ ಅಶ್ಲೀಲ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ಆಸ್ತಿ ವಿವಾದ : ಕೊಲೆ ಬೆದರಿಕೆ 
 • ಆಸ್ತಿ ವಿವಾದದ ಸಂಬಂಧ ವ್ಯಕ್ತಿಯೋರ್ವರಿಗೆ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ನ್ಯಾಯಾಲಯದ ನಿರ್ದೇಶನದ ಮೇರೆಗೆ ಮೊಕದ್ದಮೆ ದಾಖಲಿಸಿರುವ ಘಟನೆ ಭಾಗಮಂಡಲ ಠಾಣೆಯಿಂದ ವರದಿಯಾಗಿದೆ. ಸಣ್ಣಪುಲಿಕೋಟು ಗ್ರಾಮದ ಕೆ.ಎಂ.ಭೀಮಯ್ಯ ಹಾಗೂ ಅದೇ ಗ್ರಾಮದ ಪುಷ್ಪಾವತಿ ಹಾಗೂ ಪ್ರೇಮ ಎಂಬವರ ನಡುವೆ ಆಸ್ತಿ ಸಂಬಂಧ ವ್ಯಾಜ್ಯವಿದ್ದು, ದಿನಾಂಕ 30/01/2013ರಂದು ಭೀಮಯ್ಯನವರು ತಮ್ಮ ಮನೆಯಲ್ಲಿ ಶಿವಣ್ಣ ಎಂಬವರೊಂದಿಗೆ ಮಾತನಾಡುತ್ತಾ ನಿಂತಿರುವಾಗ ಆರೋಪಿಗಳಾದ ಪುಷ್ಪಾವತಿ ಹಾಗೂ ಪ್ರೇಮರವರು ಭೀಮಯ್ಯನವರ ಮನೆಯ ಬಳಿ ಕತ್ತಿ ಹಿಡಿದುಕೊಂಡು ಬಂದು ಅಶ್ಲೀಲ ಶಬ್ದಗಳಿಂದ ನಿಂದಿಸಿ ಹೊಡೆದು ಕೊಲೆಮಾಡುವುದಾಗಿ ಬೆದರಿಸಿರುವ ಬಗ್ಗೆ ಭೀಮಯ್ಯನವರು ಮಾನ್ಯ ನ್ಯಾಯಾಲಯಕ್ಕೆ ನೀಡಿದ ಖಾಸಗಿ ದೂರಿನ ಬಗ್ಗೆ ತನಿಖೆ ನಡೆಸಿ ವರದಿ ಮಾಡುವಂತೆ ನ್ಯಾಯಾಲಯ ನೀಡಿದ ನಿರ್ದೇಶನದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ನಾಪೋಕ್ಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. 
ಅಕ್ರಮ ಗಾಂಜಾ ಮಾರಾಟ, ಇಬ್ಬರು ವ್ಯಕ್ತಿಗಳ ಬಂಧನ 
 • ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುವ ಘಟನೆ ಕುಟ್ಟ ಗ್ರಾಮದ ಸಿಂಕೋನ ಕಾಲೋನಿ ಎಂಬಲ್ಲಿ ನಡೆದಿದೆ. ದಿನಾಂಕ 15/02/2013ರಂದು ಗ್ರಾಮದ ಸಿಂಕೋನ ಕಾಲೋನಿಯಲ್ಲಿ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ಕುಟ್ಟ ಠಾಣೆಯ ಎಎಸ್‌ಐ ಪಿ.ಬಿ.ಮುತ್ತರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಸಿಂಕೋನ ಕಾಲೋನಿ ನಿವಾಸಿ ರಾಮು ಹಾಗೂ ಕೇರಳ ರಾಜ್ಯದ ವೈನಾಡು ಜಿಲ್ಲೆಯ ಮಾನಂದವಾಡಿ ತಾಲೂಕಿನ ಕಲ್ಲಾಡಿ ಗ್ರಾಮದ ಕುಮಾರ ಎಂಬವರನ್ನು ಬಂಧಿಸಿ ಅವರ ಬಳಿ ಇದ್ದ ಸುಮಾರು ರೂ. 1200/- ಮೌಲ್ಯದ 100 ಗ್ರಾಂ ಗಾಂಜಾ ಪ್ಯಾಕೆಟುಗಳು ಹಾಗೂ ರೂ.500/-ನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. 

Friday, February 15, 2013

 
ವಾಹನ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು 
 • ಮೋಟಾರು ಬೈಕಿಗೆ ಯಾವುದೋ ವಾಹನ ಡಿಕ್ಕಿಯಾಗಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಪೊನ್ನಂಪೇಟೆ ರಸ್ತೆಯಲ್ಲಿ ನಡೆದಿದೆ. ದಿನಾಂಕ 14/02/2013ರ ರಾತ್ರಿ ವೇಳೆ ಗೋಣಿಕೊಪ್ಪದ 1ನೇ ಬ್ಲಾಕ್ ನಿವಾಸಿ ಚೇತನ್ ಎಂಬವರು ತನ್ನ ಬಾಪ್ತು ಬೈಕ್ ನಂಬರು ಕೆಎ-10-ಹೆಚ್-2168 ರಲ್ಲಿ ಗೋಣಿಕೊಪ್ಪ ರಿಲೆಯನ್ಸ್ ಪೆಟ್ರೋಲ್ ಬಂಕ್ ಕಡೆಯಿಂದ ಗೋಣಿಕೊಪ್ಪ ಕಡೆಗೆ ಬರುತ್ತಿರುವಾಗ್ಗೆ ಪೊನ್ನಂಪೇಟೆ ರಸ್ತೆಯ ಪ್ರಭ ನರ್ಸರಿ ಹಾಗೂ ಎಸ್.ಜೆ.ಫರ್ನಿಚರ್ ಅಂಗಡಿ ಪಕ್ಕ ಗೋಣಿಕೊಪ್ಪ ಕಡೆಯಿಂದ ಯಾವುದೋ ಒಂದು ವಾಹನ ವೇಗವಾಗಿ ನಿಯಂತ್ರಣ ಇಲ್ಲದೆ ಬಂದು ಚೇತನ್ ರವರ ಮೋಟಾರ್ ಸೈಕಲ್ ಗೆ ಡಿಕ್ಕಿ ಪಡಿಸಿದ್ದು ಇದರಿಂದ ಚೇತನ್ ರವರ ತಲೆಯ ಬಲ ಭಾಗ ಹಾಗೂ ಕಿವಿಯ ಭಾಗಕ್ಕೆ ತೀವ್ರ ತರಹದ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅಫಘಾತ ಮಾಡಿದ ವಾಹನ ನಿಲ್ಲಿಸದೇ ಹೊರಟು ಹೋಗಿರುವುದಾಗಿ ಮೃತ ಚೇತನ್‌ರವರ ಅತ್ತೆಯ ಮಗ ಕುಮಾರ್ ರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ನಿಷೇಧಿತ ಮಾವೋವಾದಿ ನಕ್ಸಲರಿಂದ ಅಕ್ರಮ ಅರಣ್ಯ ಪ್ರವೇಶ 
 • ನಿಷೇಧಿತ ಮಾವೋವಾದಿ ಸಂಘಟನೆಯ ನಕ್ಷಲರು ಅಕ್ರಮವಾಗಿ ಅರಣ್ಯವನ್ನು ಪ್ರವೇಶಿಸಿ ಕರ್ತವ್ಯ ನಿರತ ಅರಣ್ಯ ರಕ್ಷಕನನ್ನು ಬೆದರಿಸಿದ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಉಡುಂಬೆ ಅರಣ್ಯ ಗಡಿ ಠಾಣೆ ಪ್ರದೇಶದಲ್ಲಿ ನಡೆದಿದೆ. ದಿನಾಂಕ 14/02/2013 ರಂದು  ವಿರಾಜಪೇಟೆ ಉಪ ವಿಭಾಗದ ಮಾಕುಟ್ಟ ವಲಯಕ್ಕೆ ಸೇರಿದ ಉಡುಂಬೆ ಮೀಸಲು ಅರಣ್ಯ ಗಡಿ ಠಾಣಾ ವ್ಯಾಪ್ತಿಗೆ ಸೇರಿದ ಉಡುಂಬೆ ಅರಣ್ಯ ಪ್ರದೇಶದಲ್ಲಿನ ಅರಣ್ಯ ರಕ್ಷಕನಾದ  ಎಂ.ವಿಜೇಂದ್ರ ಕುಮಾರ್ ರವರು  ಉಡುಂಬೆ ಮೀಸಲು ಅರಣ್ಯದ ಬೀಟು ಸಂಖ್ಯೆ 40ರಲ್ಲಿ ಗಸ್ತು ಕರ್ತವ್ಯ ಮುಗಿಸಿ ಗಸ್ತು ಸಂಖ್ಯೆ 43ರಲ್ಲಿರುವ ನರ್ಸರಿಗೆ ನೀರು ಹಾಯಿಸಿ ಸಮಯ ಸುಮಾರು 18.00 ಗಂಟೆಗೆ ತಮ್ಮ ವಾಸದ ಮನೆಗೆ ಹೋಗಲು ಕರ್ನಾಟಕದ ಅರಣ್ಯ ಗಡಿ ಭಾಗದಿಂದ ಕೇರಳ ರಾಜ್ಯದ ಚಿಟಾರಿ ಗ್ರಾಮಕ್ಕೆ ಪ್ರವೇಶಿಸುವ ಕಾಲು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ್ಗೆ ಅವರ ಹಿಂಭಾಗದಿಂದ ಸಶಸ್ತ್ರದಾರಿಗಳಾದ 4 ಜನ ಗಂಡಸರು ಮತ್ತು 1 ಹುಡುಗಿ ತನ್ನ ಬಳಿಗೆ ಬಂದು ಬಂದೂಕನ್ನು ತನ್ನ ಬೆನ್ನಿಗೆ ಇಟ್ಟು, ದಾರಿ ತಡೆದು ನಿಲ್ಲಿಸಿ ನಾವು ನಿಷೇದಿತ ಮಾವೋ ವಾದಿ ಸಂಘಟನೆಗೆ ಸೇರಿದ ನಕ್ಸಲರಾಗಿದ್ದು, ನಮಗೆ ನೀವು ಹೆಲ್ಪ್ ಮಾಡಬೇಕು ಎಂದು ಕೇಳಿದಾಗ, ವಿಜೇಂದ್ರ ಕುಮಾರ್ ರವರು ನಿಮಗೆ ನಾನು ಏನು ಸಹಾಯ ಮಾಡಲಿ ಎಂದು ಕೇಳಿದಾಗ ನಕ್ಸಲರೆಂದು ಹೇಳಿಕೊಂಡ ವ್ಯಕ್ತಿಗಳು ಪಕ್ಕದಲ್ಲಿ ಯಾವುದಾದರು ಒಂದು ಮನೆಗೆ ಕರೆದುಕೊಂಡು ಹೋಗಿ ಅವರನ್ನು ಪರಿಚಯ ಮಾಡಿಕೊಡಿ ಎಂದು ಬೆದರಿಸಿದರು. ಆಗ ಅರಣ್ಯ ರಕ್ಷಕನು ಹೆದರಿ ಅವರನ್ನು ಕರೆದುಕೊಂಡು ಅರಣ್ಯದೊಳಗಿನ ಬೇರೊಂದು ಕಾಲು ದಾರಿಯಲ್ಲಿ ನಕ್ಸಲರಲ್ಲಿ 3 ಜನ ಮುಂದೆ ಅರಣ್ಯ ರಕ್ಷಕನು ಮದ್ಯೆ ಮತ್ತು ಹಿಂಭಾಗದಲ್ಲಿ ಉಳಿದ ಇಬ್ಬರು ನಕ್ಸಲರು ನಡೆದುಕೊಂಡು ಚಿಟಾರಿ ಗ್ರಾಮದ ಕೇಳಪ್ಪ ಎಂಬವರ ಮನೆಯ ಅಂಗಳದ ಬಳಿ ತಲುಪುವಾಗ್ಗೆ ಚಿಟಾರೆ ಗ್ರಾಮದ ಬಾಬು ಎಂಬವರು ಮಾರ್ಗ ಮದ್ಯೆ ಸಿಕ್ಕಿದ್ದು, ನಕ್ಸಲರು ಆತನನ್ನು ತಡೆದು ಪಕ್ಕಕೆ ಕರೆದುಕೊಂಡು ಹೋಗಿ ಆತನಿಗೆ ಹಣ ನೀಡಿ ಅವರಿಗೆ  ಅಡುಗೆ ಮಾಡಲು ಅಕ್ಕಿ, ತರಕಾರಿ ಮತ್ತು ಇತರೆ ಸಾಮಾಗ್ರಿಗಳನ್ನು ತಂದು ಕೊಡುವಂತೆ ಹೇಳಿ ಕಳುಹಿಸಿದರು. ನಂತರ ಅರಣ್ಯ ರಕ್ಷಕರೊಂದಿಗೆ ಕೇಳಪ್ಪರವರ ಮನೆಯ ಅಂಗಳದಲ್ಲಿ ನಿಂತು ನಾವು ಜನರಿಗೆ ಒಳ್ಳೆಯದನ್ನು ಮಾಡಲಿಕ್ಕಾಗಿ ಬಂದಿದ್ದೇವೆ, ಇಲ್ಲಿ ಜನರಿಗೆ ಯಾವುದೇ ಮೂಲ ಬೂತ ಸೌಕರ್ಯಗಳು ಇರುವುದಿಲ್ಲ, ಈ ಮೂಲ ಬೂತ ಸೌಕರ್ಯಗಳನ್ನು ಜನರಿಗೆ ಒದಗಿಸಲು ನಾವು ಈ ರೀತಿಯ ಹೋರಾಟ ಮಾಡಿ ಸಹಾಯ ಮಾಡುತ್ತೇವೆ ಎಂದು ಹೇಳಿದಾಗ ಅರಣ್ಯ ರಕ್ಷಕನು ನನಗೆ ಸಮಯವಾಯಿತು, ನಾನು ಕರ್ತವ್ಯಕ್ಕೆ ಹೋಗಬೇಕು ಎಂದು ಹೇಳಿದಾಗ,  ನಕ್ಸಲರು ಅರಣ್ಯ ರಕ್ಷಕರನ್ನು ಹೆದರಿಸಿ, ಅಡಿಗೆ ಸಾಮಾನುಗಳನ್ನು ತೆಗೆಯಲು ಹೋದವನು ಬರುವವರೆಗೆ ನಮ್ಮೊಂದಿಗೆ ಇರು ಎಂದು ಗದರಿಸಿ ತನ್ನನ್ನು ತಡೆದು ನಿಲ್ಲಿಸಿದ್ದರೆಂದು, ನಂತರ ಸಮಯ ಸುಮಾರು 18.50 ಗಂಟೆಗೆ ಬಾಬು ಎಂಬುವವರು ಅಡಿಗೆ ಸಾಮಾನುಗಳನ್ನು ತಂದು ಅವರಿಗೆ ನೀಡಿದ ನಂತರ ಅವರು ಬಾಬು ಮತ್ತು ಅರಣ್ಯ ರಕ್ಷಕನನ್ನು ಅಲ್ಲೆ ಬಿಟ್ಟು, ಈ ವಿಚಾರವನ್ನು ಏನಾದರು ಪೊಲೀಸರಿಗೆ ಅಥವಾ ಬೇರೆಯಾರಿಗಾದರು ತಿಳಿಸಿದೆರೆ, ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿ ಅವರು ಬಂದ ದಾರಿಯಲ್ಲೇ ಅರಣ್ಯದ ಒಳಗಡೆಗೆ ಹೊರಟು ಹೋದರು. ಅವರುಗಳು  ಮಿಲಿಟರಿ ಗ್ರೀನ್‌ ಬಣ್ಣದ ಹಳೆಯ ಪ್ಯಾಂಟ್‌ ಮತ್ತು ಶರ್ಟ್‌ನ್ನು ದರಿಸಿದ್ದು 5 ಜನರ ಬಳಿಯು ಬಂದೂಕು ಇದ್ದು ಪ್ರತಿಯೊಬ್ಬರು ಒಂದು ಬ್ಯಾಗನ್ನು ಕಂಕುಳಿಗೆ ನೇತು ಹಾಕಿಕೊಂಡಿದ್ದರು. ಅವರುಗಳು ಅಂದಾಜು 25 ರಿಂದ 28 ವರ್ಷ ವಯಸ್ಸಿನವರಾಗಿದ್ದು ಕನ್ನಡ, ತಮಿಳು, ತೆಲುಗು ಮಲೆಯಾಳಂ ಬಾಷೆ ಮಾತನಾಡುತ್ತಿದ್ದು ಅವರ ಮುಖಗಳನ್ನು ನೋಡಿದರೆ ಗುರುತಿಸುವುದಾಗಿ ಅರಣ್ಯ ರಕ್ಷಕ ಶ್ರೀ. ಎಂ.ವಿಜೇಂದ್ರ ಕುಮಾರ್‌ರವರು ದೂರವಾಣಿ ಮುಖಾಂತರ ವಿರಾಜಪೇಟೆ ಅರಣ್ಯ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪುಟ್ಟಸ್ವಾಮಿಯವರಿಗೆ ತಿಳಿಸಿದ್ದು ಈ ಬಗ್ಗೆ ಪುಟ್ಟಸ್ವಾಮಿಯವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ 

Thursday, February 14, 2013

ನಕ್ಸಲರ ಭೇಟಿ ಶಂಕೆ, ಪ್ರಕರಣ ದಾಖಲು 
 • ಕೊಡಗು ಜಿಲ್ಲೆಯ ಕೇರಳ ಗಡಿ ಭಾಗದ ಮುಂಡ್ರೋಟು ಅರಣ್ಯ ವ್ಯಾಫ್ತಿಯಲ್ಲಿ ನಕ್ಸಲರು ಕಾಣಿಸಿಕೊಂಡಿರುವ ಶಂಕೆಯಿದ್ದು, ಈ ಸಂಬಂಧ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚೇರಂಗಾಲ ಗ್ರಾಮದ ಮಂಗುಂಡಿಯಲ್ಲಿ  ಪ್ರಭಾಕರ್ ಎಂಬುವವರ  ಎಸ್ಟೇಟ್‌ ಇದ್ದು ಅದನ್ನು ನೋಡಿಕೊಳ್ಳಲು ತೋಮಸ್ ಅಕ್ಕಚಾನ್ ಎಂಬುವವನು ಎಸ್ಟೇಟ್ ನಲ್ಲಿ ವಾಸವಿದ್ದು  ದಿನಾಂಕ 01/02/2013 ರಂದು ಸಂಜೆ ಸುಮಾರು 04.00 ಗಂಟೆಗೆ 8-10 ಜನರಿದ್ದ ಒಂದು ತಂಡ ತೋಮಸ್‌ರವರು  ವಾಸವಿರುವ ಮನೆಗೆ ಭೇಟಿ ನೀಡಿದ್ದು, ತಾವು ನಿಷೇಧಿತ ಮಾವೋವಾದಿ ಸಂಘಟನೆಗೆ ಸೇರಿದ ನಕ್ಸಲರಾಗಿದ್ದು ತಮಗೆ ತಿನ್ನಲು ಊಟವನ್ನು ಕೊಡಿ ಎಂದು ಕೇಳಿ ಮನೆಯಲ್ಲಿ ಕೆಲಸದವರಿಗೆ ಮಾಡಿಟ್ಟಿದ್ದ ಊಟವನ್ನು ತಿಂದಿರುತ್ತಾರೆ. ಅಲ್ಲದೆ ಮನೆಯವರಿಗೆ ಬಂದೂಕು ತೋರಿಸಿ ಹೆದರಿಸಿ ಮನೆಯಲ್ಲಿ ಕೂಡಿ ಹಾಕಿ ತಾವು 25 ಜನರಿದ್ದು ಅವರಿಗೆ 50 ಕೇಜಿ ಅಕ್ಕಿಯನ್ನು ಕೊಡುವಂತೆ ಕೇಳಿರುತ್ತಾರೆ. ತೋಮಸ್ ಮತ್ತು ಮನೆಯವರು ಮನೆಯಲ್ಲಿ  ಅಕ್ಕಿ ಇಲ್ಲವೆಂದು ತಿಳಿಸಿದ್ದುದರಿಂದ  ನಕ್ಸಲರು ಶಶಿ ಮತ್ತು ರಾಜೇಶ ಎಂಬುವವರಿಗೆ 800 ರೂ ಹಣವನ್ನು ನೀಡಿ 50 ಕೆಜಿ ಅಕ್ಕಿಯನ್ನು ತರುವಂತೆ ಕಾನಂಬೈಲಿಗೆ ಕಳುಹಿಸಿಕೊಟ್ಟಿರುತ್ತಾರೆ. ಶಶಿ ಮತ್ತು ರಾಜೇಶರವರುಗಳು ನಕ್ಸಲರ ಹೆದರಿಕೆಯಿಂದ ಕಾಣಂಬೈಲಿಗೆ ಬಂದು ನಕ್ಸಲರು ನೀಡಿದ ಹಣವನ್ನು ನೀಡಿ 25 ಕೇಜಿ ಅಕ್ಕಿಯನ್ನು ಖರೀದಿಸಿ ತಂದು ನಕ್ಸಲರಿಗೆ ನೀಡಿರುತ್ತಾರೆ. ಶಶಿ ಮತ್ತು ರಾಜೇಶ ರವರುಗಳು ಬರುವವರೆಗೆ ಮನೆಯವರನ್ನು ಮನೆಯಲ್ಲಿ ಕೂಡಿ ಹಾಕಿದ್ದು ಅಕ್ಕಿ ತರಲು ಹೋದಾಗ ಪೊಲೀಸರಿಗೆ ತಿಳಿಸಿದರೆ ಮನೆಯವರನ್ನು ಕೊಂದು ಹಾಕುವುದಾಗಿ ಹೆದರಿಸಿ ಶಶಿ ಮತ್ತು ರಾಜೇಶ ವಾಪಸ್ಸು ಬರುವವರೆಗೆ ಮನೆಯವರನ್ನು ಮನೆಯಲ್ಲಿ ಕೂಡಿ ಹಾಕಿರುತ್ತಾರೆ. ಈ ಬಗ್ಗೆ ಸುದ್ದಿ ತಿಳಿದ ಪೊಲೀಸರು ಜಿಲ್ಲಾ ಪೊಲೀಸ್‌ ಉನ್ನತಾಧಿಕಾರಿಯವರ ನಿರ್ದೇಶನದಂತೆ ಸ್ಥಳಕ್ಕೆ ಭೇಟಿ ನೀಡಿ ತೋಮಸ್ ಮತ್ತು ಅವರ ಮನೆಯವರಿಗೆ ನಕ್ಸಲರ ಭಾವ ಚಿತ್ರವನ್ನು ತೋರಿಸಲಾಗಿ ಮನೆಗೆ ಬಂದವರಲ್ಲಿ ನಿಷೇಧಿತ ಮಾವೋವಾದಿ ಸಂಘಟನೆಗೆ ಸೇರಿದ ನಕ್ಸಲರಾದ ವಿಕ್ರಮ್ ಗೌಡ, ಮಹೇಶ @ ಪ್ರದೀಪ, ಜಾನ್ @ ಜಯಣ್ಣ, ಸುಂದರಿ, ಪ್ರವೀಣ, ರೂಪೇಶ್ ಎಂದು ಗುರುತಿಸಿರುತ್ತಾರೆ. ಸದರಿ ನಕ್ಸಲರು ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಕೂಲಿಯವರನ್ನು ಒಟ್ಟುಗೂಡಿಸಿ ನಿಮಗೆ ಎಸ್ಟೇಟ್ ರವರಿಂದ ತೊಂದರೆ ಇದೆಯೇ, ನಿಮಗೆ ಕೂಲಿ ಎಷ್ಟು ಕೊಡುತ್ತಾರೆ. ನಾವು ಸರ್ಕಾರದ ವಿರುದ್ದ ಚಳುವಳಿ ಮಾಡುತ್ತಿರುವವರು ನಿಮ್ಮ ಪರವಾಗಿ ಹೋರಾಡುತ್ತೇವೆ ನಿಮಗೆ ಸಮಸ್ಯೆ ಇದ್ದರೆ ಹೇಳಿ ಎಂದು ತಿಳಿಸಿರುತ್ತಾರೆ. ಸದರಿ ನಕ್ಸಲರು ವಾಪಸ್ಸು ಹೋಗುವಾಗ ಮನೆಯವರಿಗೆ ನಕ್ಸಲರು ಬಂದ ವಿಚಾರವನ್ನು ನೀವು ಪೊಲೀಸರಿಗೆ ತಿಳಿಸಿದರೆ ನಿಮ್ಮನ್ನು ಬಂದೂಕಿನಿಂದ ಕೊಂದು ಹಾಕುತ್ತೇವೆ ಎಂದು ಕೊಲೆ ಬೆದರಿಕೆ ಹಾಕಿ ಹೋಗಿರುತ್ತಾರೆ. ಇದರಿಂದ ತೋಮಸ್ ಮತ್ತು ಮನೆಯವರಿಗೆ ಭಯದ ವಾತಾವರಣ ಉಂಟಾಗಿ ನಕ್ಸಲರು ಬಂದು ಹೋದ ಮಾಹಿಯನ್ನು ತಕ್ಷಣ ತಿಳಿಸಿರುವುದಿಲ್ಲ ಹಾಗೂ ಪೊಲೀಸ್ ಠಾಣೆಗೆ ಬಂದು ದೂರು ನೀಡಲು ಹೆದರಿರುತ್ತಾರೆ. ಈ ಬಗ್ಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕತ್ತು ಹಿಸುಕಿ ಅಪ್ರಾಪ್ತ ಬಾಲಕಿಯ ಹತ್ಯೆ 
 • ಕತ್ತು ಹಿಸುಕಿ ಅಪ್ರಾಪ್ತ ಬಾಲಕಿಯ ಹತ್ಯೆ ಮಾಡಿರುವ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಾಕೋಟುಪರಂಬುವಿನ ನಾಲ್ಕೇರಿ ಎಂಬಲ್ಲಿ ನಡೆದಿದೆ.  ದಿನಾಂಕ: 13-02-2013 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ಪಿಎಸ್‌ಐ ಮಹೇಶ್‌ರವರು  ಠಾಣೆಯಲ್ಲಿರುವಾಗ್ಗೆ, ಪ್ರಕರಣದ ಆರೋಪಿ ತೊತ್ತೇರ ಕಿರಣ್ ಎಂಬಾತನು ಸಮಯ ಮದ್ಯಾಹ್ನ 12-00ಗಂಟೆಗೆ ಠಾಣೆಗೆ ಬಂದು ತಾನು 12-02-13 ರಂದು ಕಾವಾಡಿ ಗ್ರಾಮದ ಸೋಮೆಯಂಡ ಶಾಲಿನಿರವರನ್ನು ಕೊಲೆ ಮಾಡಿ ತಾನು ಮೆಟಾಸಿಡ್ ಎಂಬ ಜೌಷಧಿಯನ್ನು ಸೇವಿಸಿ ಠಾಣೆಗೆ ಬಂದಿರುವುದಾಗಿ ಹೇಳಿದ ಮೇರೆ ಆತನನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ ವೈದ್ಯಾಧಿಕಾರಿಯವರ ಮುಂದೆ ಆತನ ಹೇಳಿಕೆಯನ್ನು ಪಡೆದಿದ್ದು, ಆತನ ಹೇಳಿಕೆಯಂತೆ ಆತನು ಸೋಮೆಯಂಡ ಶಾಲಿನಿ ಎಂಬುವವರನ್ನು ಸುಮಾರು 2 ತಿಂಗಳಿನಿಂದ ಪ್ರೀತಿಸುತ್ತಿದ್ದು, ದಿನಾಂಕ: 12-02-13ರಂದು ಶಾಲಿನಿಯು ಕಂಪ್ಯೂಟರ್ ತರಗತಿಗೆ ಬೆಳಿಗ್ಗೆ ಬಂದಿದ್ದು, ನಂತರ ಕಂಪ್ಯೂಟರ್ ಕ್ಲಾಸ್ ಮುಗಿಸಿ ಆತನೊಂದಿಗೆ ಯಾವುದೋ ಒಂದು ಬಾಡಿಗೆ ಆಟೋರಿಕ್ಷಾದಲ್ಲಿ ಕಾಕೋಟುಪರಂಬುಗೆ ಹೋಗಿ ಐಚೆಟ್ಟಿರ ಬಾಣೆಯ ಬಳಿ ಇಳಿದು ನಂತರ ಕಾಲ್ನಡಿಗೆಯಲ್ಲಿ ಕಳ್ಳೀರ ಜಾನ್ಸಿಯವರ ಕಾಫಿ ತೋಟ ದಾಟಿ ಮುಂದೆ ಏಲಕ್ಕಿ ತೋಟದಲ್ಲಿರುವ ಬಿದಿರು ಹಿಂಡಿನ ಪಕ್ಕದಲ್ಲಿರುವ ಯಾವುದೋ ಮರದ ಕೆಳಗೆ ಕುಳಿತುಕೊಂಡಿರುವಾಗ  ಶಾಲಿನಿಯು ತನ್ನನ್ನು ಕಿರಣನೇ  ಮದುವೆಯಾಗಬೇಕು ಎಂದು ಒತ್ತಾಯಿಸಿದ್ದು ಈ ಬಗ್ಗೆ ಕಿರಣನಿಗೂ ಶಾಲಿನಿಗೂ ಮಾತು ಮಾತಿನ ಜಗಳ ಶುರುವಾಗಿ ಶಾಲಿನಿಯು ಕಿರಣನಿಗೆ ಕೈಯಿಂದ ಎರಡು ಮೂರು ಏಟು ಹೊಡೆದಾಗ ಕಿರಣನು ಅವಳ ಕುತ್ತಿಗೆಯನ್ನು ಹಿಡಿದು ಬಲವಾಗಿ ಅಮುಕಿದ್ದಾಗಿ ತಕ್ಷಣ ಆಕೆ ಅಲ್ಲೇ ನೆಲದ ಮೇಲೆ ಕುಸಿದು ಬಿದ್ದಳೆಂದು ನಂತರ ಆಕೆಯನ್ನು ನೋಡಿದಾಗ ಆಕೆ ಸತ್ತು ಹೋಗಿದ್ದಾಳೆಂದು ತಿಳಿದು ಆತನು ಮೂರ್ನಾಡಿಗೆ ಹೋಗಿ ಮೆಟಾಸಿಟ್ ವಿಷದ ಬಾಟಲಿಯನ್ನು ಖರೀದಿಸಿಕೊಂಡು ವಾಪಾಸ್ಸು ಜಾನ್ಸಿರವರ ತೋಟ ದೊಳಗೆ ಹೋಗಿ ಬ್ರಾಂಡಿಯೊಳಗೆ ವಿಷವನ್ನು ಸೇರಿಸಿ ಕುಡಿದು ಮನೆಯಲ್ಲಿ ಮಲಗಿ ಈ ದಿನ ಬೆಳಿಗ್ಗೆ 07-00ಎ.ಎಂ.ಗೆ ಉಳಿದ ವಿಷವನ್ನು ಕುಡಿದಿದ್ದು ಆತನ  ಗೆಳೆಯ ನವೀನ್ ತಮ್ಮ ಮನೆಗೆ ಬಂದಾಗ ವಿಚಾರವನ್ನು ಆತನಿಗೆ ತಿಳಿಸಿದ ಮೇರೆ ಆತನು ಕಿರಣನನ್ನು  ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿರುವುದಾಗಿ ಹೇಳಿಕೆಯನ್ನು ನೀಡಿದ್ದು ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ಆಸ್ಪತ್ರಯಲ್ಲಿ ವೈದ್ಯರ ಮೇಲೆ ವೈದ್ಯರಿಂದ ಹಲ್ಲೆ, ಪ್ರಕರಣ ದಾಖಲು 
 • ಮಡಿಕೇರಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಡುವೆ ಜಗಳವಾಗಿ ಹಲ್ಲೆಯಲ್ಲಿ ಪರ್ಯವಸಾನಗೊಂಡ ಘಟನೆ ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ಜಿಲ್ಲಾ ಸರ್ಕಾರಿ ಆಶಪತ್ರೆಯಲ್ಲಿ ನಡೆದಿದೆ. ದಿನಾಂಕ 13/02/2013ರಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ದಂತ ವೈದ್ಯ ಡಾ. ಅನಿಲ್‌ ಧಾವನ್ ಮತ್ತು ಸ್ಥಾನೀಯ ವೈದ್ಯಾಧಿಕಾರಿ ಡಾ. ವಿಶ್ವನಾಥ ಶಿಂಪಿಯವರು ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಮುತ್ತಪ್ಪನವರ ಬಳಿ ಹೋಗಿ ಬೆಂಗಳೂರಿನಲ್ಲಿ ನಡೆದ ವೈದ್ಯರ ಮುಷ್ಕರದ ಬಗ್ಗೆ ವಿವರಿಸುತ್ತಿದ್ದಾಗ ಡಾ. ಮುತ್ತಪ್ಪನವರು ಡಾ.ಅನಿಲ್‌ ಧಾವನ್‌ರವರನ್ನು ಅಶ್ಲೀಲ ಶಬ್ದಗಳಿಂದ ನಿಂದಿಸಿ ಅವರನ್ನು ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದು ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಮಡಿಕೇರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ನೇಣುಬಿಗಿದುಕೊಂಡು ಮಹಿಳೆಯ ಸಂಶಯಾಸ್ಪದ ಸಾವು
 • ಮಹಿಳೆಯೋರ್ವಳು ಸಂಶಯಾಸ್ಪದವಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಅರೆಯೂರು ಗ್ರಾಮದಲ್ಲಿ ನಡೆದಿದೆ.ತೋಳೂರು ಶೆಟ್ಟಳ್ಳಿ ಗ್ರಾಮದ ಜೋಯಪ್ಪನವರ ಮಗಳಾದ ರಮ್ಯಳನ್ನು 5  ವರ್ಷಗಳ ಹಿಂದೆ ಅರೆಯೂರು ಗ್ರಾಮದ ಮುತ್ತಪ್ಪನವರ ಮಗ ಮನೋಹರರವರಿಗೆ ವಿವಾಹ ಮಾಡಿ ಕೊಟ್ಟಿದ್ದು,. ದಿನಾಂಕ 13/02/2013 ರಂದು ಮನೋಹರರವರ ಚಿಕ್ಕಪ್ಪ ಮುತ್ತಣ್ಣನವರು ಬೆಳಿಗ್ಗೆ ದೂರವಾಣಿ ಕರೆ ಮಾಡಿ ನಿನ್ನೆ ದಿನ ದಿನಾಂಕ 12/02/2013  ರಂದು ರಮ್ಯ ಗದ್ದೆಯಲ್ಲಿ ಕೆಲಸ ಮಾಡಲಿಕ್ಕೆ ಹೋದವಳು ರಾತ್ರಿ ಮನೆಗೆ  ಹಿಂತಿರಿಗಿರುವುದಿಲ್ಲ ಎಂದು ತಿಳಿಸಿದ್ದು ಈ ದಿನ ಬೆಳಿಗ್ಗೆ ರಮ್ಯಳನ್ನು ಹುಡುಕುತ್ತಿದ್ದಾಗ ಅರೆಯೂರು ಗ್ರಾಮದ ಜಿ.ಎಂ. ಲೋಕಿ ಪ್ರಸಾದ್‌ರವರ ಕಾಫಿ ತೋಟದ ಮದ್ಯೆ ಇರುವ ಅರಳಿ ಮರದಲ್ಲಿ ಕುತ್ತಿಗೆಗೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆಂದು ತಿಳಿಸಿದರು. ಈ ಬಗ್ಗೆ ಜೋಯಪ್ಪನವರ ತಮ್ಮ ವಿನೋದ್  ಮತ್ತು ರಮ್ಯಳ ತಾಯಿ ಮಣಿ ಹಾಗೂ ಸುರೇಶರವರು ಲೋಕಿ ಪ್ರಸಾದ್‌ರವರ ತೋಟಕ್ಕೆ ಹೋಗಿ ನೋಡಿದಾಗ ನೇಣು ಬಿಗಿದುಕೊಂಡು ಮೃತ ಪಟ್ಟಿರುವುದು ಕಂಡು ಬಂದಿದ್ದು ರಮ್ಯಳ ಮರಣದ ಬಗ್ಗೆ ಸಂಶಯವಿರುತ್ತದೆ ಎಂದು ನೀಡಿದ ದೂರಿನ ಮೇರೆಗೆಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.