Tuesday, April 30, 2013

ನಿಂತಿದ್ದ ಲಾರಿಗೆ ಜೀಪು ಡಿಕ್ಕಿ, ಓರ್ವನಿಗೆ ಗಾಯ 
       ಚಾಲಕನ ಅಜಾಗರೂಕತೆಯಿಂದಾಗಿ ನಿಂತಿದ್ದ ಲಾರಿಯೊಂದಕ್ಕೆ ಜೀಪು ಡಿಕ್ಕಿಯಾಗಿ ಜೀಪು ಪ್ರಯಾಣಿಕನೋರ್ವನಿಗೆ ಗಾಯಗಳಾಗಿ ಜೀಪು ಹಾಗೂ ಲಾರಿಗೆ ಹಾನಿಯಾದ ಘಟನೆ ವಿರಾಜಪೇಟೆ ನಗರದ ಪೆರುಂಬಾಡಿ ಕೆರೆಯ ಬಳಿ ನಡೆದಿದೆ.
ದಿನಾಂಕ 30/04/2013 ರಂದು ಬೆಳಗಿನ ಜಾವ 02:15 ಗಂಟೆಗೆ ವಿರಾಜಪೇಟೆಯ ಮಾಕುಟ್ಟ ರಸ್ತೆಯ ಪೆರುಂಬಾಡಿ ಕೆರೆಯ ಹತ್ತಿರ ಹೊಟೇಲ್ ಮುಂಭಾಗ  ಕೆಎ-12-ಎನ್-4194 ರ ಜೀಪನ್ನು ಅದರ ಚಾಲಕ ವಿಜಯನ್ ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಹೋಗಿ ರಸ್ತೆ ಬದಿಯಲ್ಲಿ ನಿಂತಿದ್ದ ಕೆ-ಎಲ್-14-ಎಲ್-2079 ರ ಲಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಜೀಪಿನ ಮುಂಭಾಗ ಜಖಂಗೊಂಡಿದ್ದು, ಜೀಪಿನಲ್ಲಿ ಕುಳಿತಿದ್ದ ಕರುಣಾಕರನ್ ಎಂಬುವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Saturday, April 27, 2013

ಅಕ್ರಮ ಮದ್ಯ ಮಾರಾಟ, ಓರ್ವನ ಬಂಧನ 
       ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಸೋಮವಾರಪೇಟೆ ವೃತ್ತ ನಿರೀಕ್ಷಕರು ಓರ್ವನನ್ನು ಬಂಧಿಸಿದ್ದಾರೆ. ದಿನಾಂಕ 26/04/2013ರಂದು ಶನಿವಾರಸಂತೆಯ ಗುಡುಗಳಲೆಯಲ್ಲಿ ಗೂಡ್ಸ್ ರಿಕ್ಷಾವೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆನ್ನುವ ಸುಳಿವಿನ ಮೇರೆಗೆ ಸೋಮವಾರಪೇಟೆ ವೃತ್ತ ನಿರೀಕ್ಷಕರಾದ ಹೆಚ್‌.ಎನ್.ಸಿದ್ದಯ್ಯನವರು ಸಿವ್ವಂದಿಗಳೊಂದಿಗೆ ಸ್ಥಳಕ್ಕೆ ತೆರಳಿದಾಗ ಗುಡುಗಳಲೆಯ ಗಣೇಶ್‌ ಎಂಬವರ ಮನೆಯ ಹಿಂಭಾಗದ ರಸ್ತೆಯಲ್ಲಿ ಕೆಎ-13-ಎ-5003ರ ಗೂಡ್ಸ್ ಆಟೋ ರಿಕ್ಷಾವೊಂದರಲ್ಲಿ ಹಾಸನ ಹಿಲ್ಲೆಯ ಮಲ್ಲಿಪಟ್ಟಣದ ಆಲದಹಳ್ಳಿ ಗ್ರಾಮದವರಾದ ಎ.ಡಿ.ಉಮೇಶ ಮತ್ತು ಎ.ಬಿ.ಧನಂಜಯ ಎಂಬವರು ಅಕ್ರಮವಾಗಿ ಸರ್ಕಾರದ ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದುದನ್ನು ಕಂಡು ಅವರುಗಳನ್ನು ಸುತ್ತುವರೆದಾಗ ಓರ್ವನು ತಪ್ಪಿಸಿಕೊಂಡಿದ್ದು, ಮತ್ತೊಬ್ಬನನ್ನು ಬಂಧಿಸಿ ಆತನಿಂದ ರೂ.2,700/0 ಮೌಲ್ಯದ ಅಕ್ರಮ ಮದ್ಯವನ್ನು ವಶಪಡಿಸಿಕೊಂಡು ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


ಬೈಕಿಗೆ ಕಾರು ಡಿಕ್ಕಿ, ಸವಾರರಿಗೆ ಗಾಯ
       ಮೋಟಾರು ಬೈಕ್‌ವೊಂದಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಬೈಕ್ ಸವಾರರು ಗಾಯಗೊಂಡಿರುವ ಘಟನೆ ಮಡಿಕೇರಿ ಸಮೀಪದ ಮೇಕೇರಿಯಲ್ಲಿ ನಡೆದಿದೆ. ದಿನಾಂಕ 26/04/2013ರಂದು ಶ್ರೀಮಂಗಲದ ಪಿಯುಸಿ ಕಾಲೇಜು ಉದ್ಯೋಗಿ ವಿಜಯ್ ಎಂಬವರು ಕಾಲೇಜು ಕೆಲಸ ನಿಮಿತ್ತ ಅವರ ಮೋಟಾರ್‌ ಸೈಕಲ್‌ ನಂ ಕೆಎ-12 ಜೆ- 1242 ರಲ್ಲಿ ಶ್ರೀಮಂಗಲದಿಂದ ಮಡಿಕೇರಿ ಡಿ.ಡಿ.ಪಿ.ಐ. ಕಚೇರಿಗೆ ಬರುತ್ತಿರುವಾಗ, ದಾರಿ ಮಧ್ಯದಲ್ಲಿ ಕಗ್ಗೋಡ್ಲು ಬಳಿ ಒಬ್ಬ ಹುಡುಗ ಮೋಟಾರ್‌ ಬೈಕನ್ನು ಕೈ ತಡೆದು ನಿಲ್ಲಿಸಿ ಮಡಿಕೇರಿಗೆ ಬರುವುದಾಗಿ ಹೇಳಿ  ಮೋಟಾರ್‌ ಸೈಕಲ್‌ನ್ನು ಹತ್ತಿಕೊಂಡಿದ್ದು, ಮೇಕೇರಿ ಗ್ರಾಮದ ಬಳಿ  ಮಡಿಕೇರಿ ಕಡೆಯಿಂದ ವಿರಾಜಪೇಟೆ ಕಡೆಗೆ ಹೋಗುತ್ತಿದ್ದ  ಕೆಎ-02 ಎಂಬಿ- 237 ರ ಕಾರನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ವಿಜಯರವರು ಚಾಲನೆ ಮಾಡುತ್ತಿದ್ದ ಮೋಟಾರ್‌ ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮ ಅವರ ಬಲಕಾಲಿನ ಮಂಡಿ ಹಾಗೂ ಮಣಿಗಂಟಿಗೆ ಮತ್ತು ಹಿಂಭಾಗದಲ್ಲಿ ಕುಳಿತ್ತಿದ್ದ ಹರೀಶ್‌ರವರ ಬಲಕಾಲು ತೊಡೆ, ಬಲಮೊಣಕಾಲು ಮತ್ತು ಬಲಹಿಮ್ಮಡಿಗೆ  ಗಾಯಗಳಾಗಿರುವ ಬಗ್ಗೆ ನೀಡಲಾದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

 

Thursday, April 25, 2013

ಶೀಲ ಶಂಕಿಸಿ ಕತ್ತಿಯಿಂದ ಕಡಿದು ಪತ್ನಿಯ ಕೊಲೆ 
       ಶೀಲ ಶಂಕಿಸಿ ಪತ್ನಿಯನ್ನೇ ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ಬಿ.ಶೆಟ್ಟಿಗೇರಿ ಸಮೀಪದ ಕೊಂಗಣ ಗ್ರಾಮದಲ್ಲಿ ನಡೆದಿದೆ. ಕೊಂಗಣ ಗ್ರಾಮದ ತೀತಮಾಡ ಸದನ್ ಎಂಬವರ ತೋಟದಲ್ಲಿ ಕೆಲಸ ಮಾಡಿಕೊಂಡು ಅವರ ಲೈನು ಮನೆಯಲ್ಲಿ ವಾಸವಿದ್ದ ಪಣಿ ಎರವರ ಭೋಜ ಎಂಬಾತನು ತನ್ನ ಪತ್ನಿ ನಂಜಿ ಎಂಬಾಕೆಯ ಶೀಲವನ್ನು ಶಂಕಿಸಿ ದಿನಾಂಕ 24/04/2013ರ ರಾತ್ರ ವೇಳೆ ನಂಜಿಯ ಮೇಲೆ ಕತ್ತಿಯಿಂದ ತೀವ್ರತರವಾಗಿ ಕಡಿದು ಹಲ್ಲೆ ಮಾಡಿದ ಪರಿಣಾಮ ತೀವ್ರವಾಗಿ ಗಾಯಗೊಂಡ ನಂಜಿ ಮೃತಳಾಗಿರುವುದಾಗಿ ತೀತಮಾಡ ಸದನ್‌ರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯೊಬ್ಬರ ಅಸ್ವಾಭಾವಿಕ ಸಾವು
        ತೋಟ ಪಹರೆಗಾರರೊಬ್ಬರು ಅಸ್ವಾಭಾವಿಕವಾಗಿ ಮೃತನಾದ ಘಟನೆ ಸೋಮವಾರಪೇಟೆಯ ಬೇಳೂರು ಬಾಣೆಯಲ್ಲಿ ನಡೆದಿದೆ. ಗೋಣಿಕೊಪ್ಪ ಸಮೀಪದ ದೇವರಪುರ ಗ್ರಾಮದ ಹ್ಯಾರಿಸ್ ಎಂಬವರು ಬೇಳೂರು ಬಾಣೆಯ ತೋಟವೊಂದರಲ್ಲಿ ಕರಿಮೆಣಸನ್ನು ಗುತ್ತಿಗೆ ಆಧಾರದಲ್ಲಿ ಖರೀದಿಸಿದ್ದು, ಆ ತೋಟದಲ್ಲಿ ಪಹರಗಾರನ ಕೆಲಸ ಮಾಡಿಕೊಂಡಿದ್ದ ಜಾನ್ ಎಂಬವರು ದಿನಾಂಕ 23.04.2013 ರಂದು ಕೆಲಸ ಮುಗಿಸಿ ಸಂಬಳ ಪಡೆದುಕೊಂಡು ಊರಿಗೆ ಹೋಗುತ್ತೇನೆಂದು ಹೇಳಿ ಹೋಗಿದ್ದನೆನ್ನಲಾಗಿದೆ. ನಂತರ ದಿನಾಂಕ 22/04/2013ರಂದು ಸಂಜೆ ಹ್ಯಾರಿಸ್‌ರವರ ಅಕ್ಕನ ಮಗ ಹ್ಯಾರಿಸ್‌ರವರಿಗೆ  ಪೋನ್‌ ಮಾಡಿ  ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಜಾನ್‌ ಎಂಬುವನು ಚಿಕ್ಕಣ್ಣ ಎಂಬವರ ತೋಟದ ಪಕ್ಕದಲ್ಲಿ ಮೃತ ಪಟ್ಟಿರುತ್ತಾರೆ ಎಂದು ತಿಳಿಸಿದ ಮೇರೆಗೆ ಹ್ಯಾರಿಸ್‌ರವರು ಸ್ಥಳಕ್ಕೆ  ಹೋಗಿ ನೋಡಿದಾಗ ಜಾನ್‌ ಮೃತ ಪಟ್ಟಿರುವುದು ಕಂಡು ಬಂದಿದ್ದು, ಹ್ಯಾರಿಸ್‌ರವರು ಘಟನೆ ಬಗ್ಗೆ ನೀಡಿದ ದೂರಿನ ಮೇರೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕಿಗೆ ಜೀಪು ಡಿಕ್ಕಿ, ಬೈಕ್ ಸವಾರರಿಗೆ ಗಾಯ 
       ಮೋಟಾರು ಬೈಕೊಂದಕ್ಕೆ ಜೀಪು ಡಿಕ್ಕಿಯಾದ ಪರಿಣಾಮ ಮೋಟಾರು ಬೈಕ್ ಸವಾರರು ಗಾಯಗೊಂಡ ಘಟನೆ ಕುಶಾಲನಗರ ಸಮೀಪದ ಸಿದ್ದಲಿಂಗಪುರ ಗ್ರಾಮದಲ್ಲಿ ನಡೆದಿದೆ. ದಿನಾಂಕ 24/04/2013ರಂದು ಸಿದ್ದಲಿಂಗಪುರ ಗ್ರಾಮದ ಮುತ್ತಪ್ಪರವರ ಮನೆಯ ಹತ್ತಿರ ದಿಲೀಪ್ ಮತ್ತು ಅಂಥೋನಿರಾಜ್ ಎಂಬವರು ಅವರ ಬಾಪ್ತು ಬೈಕ್ ನಂ ಕೆಎ-13-ಎಸ್-9160ರಲ್ಲಿ ಅಳುವಾರದಿಂದ ಮರಿಯಾನಗರದ ಕಡೆಗೆ ಹೋಗುತ್ತಿರುವಾಗ ಬಾಣಾವಾರ ಕಡೆಯಿಂದ ಜೀಪ್ ನಂ ಕೆಎ-12-ಎನ್-8192 ಅನ್ನು ಅದರ ಚಾಲಕ ರಾಜಶೇಖರರವರು   ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರು ಬೈಕ್ ಸವಾರರಾದ ದಿಲೀಪ್ ಮತ್ತು ಅಂಥೋನಿರಾಜ್ ರವರುಗಳು ಕೆಳಗೆ ಬಿದ್ದು ಗಾಯಗಳಾಗಿದ್ದು, ಅಲ್ಲೇ ಪಕ್ಕದಲ್ಲಿ ನಿಂತಿದ್ದ ಮರಿಯಾನಗರ ನಿವಾಸಿ ಅರುಣ್ ಕುಮಾರ್ ಎಂಬವರು ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸಂಬಂಧ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಆಟೋ ರಿಕ್ಷಾಕ್ಕೆ ಟ್ರ್ಯಾಕ್ಟರ್ ಡಿಕ್ಕಿ : ಇಬ್ಬರಿಗೆ ಗಾಯ 
       ಆಟೋ ರಿಕ್ಷಾವೊಂದಕ್ಕೆ ಟ್ರ್ಯಾಕ್ಟರ್ ಡಿಕ್ಕಿಯಾದ ಪರಿಣಾಮ ಇಬ್ಬರಿಗೆ ಗಾಯಗಳಾದ ಘಟನೆ ಮಡಿಕೇರಿ ಸಮೀಪದ ಬೆಟ್ಟಗೇರಿ ನಗರದಲ್ಲಿ ನಡೆದಿದೆ. ದಿನಾಂಕ 24/04/2013ರಂದು ರಾತ್ರಿ ವೇಳೆ ಕಡಿಯತ್ತೂರು ಗ್ರಾಮದ ನಿವಾಸಿ ಕೆ.ಬಿ.ತಿಲಕ್ ಎಂಬವರು ಮಡಿಕೇರಿಯಲ್ಲಿ ಅವರ ಸಂಬಂಧಿಕರ ಮದುವೆ ಸಮಾರಂಭಕ್ಕೆ ಅಣ್ಣ ಜೀವನ್‌ ಹಾಗೂ ವಿಜು ಎಂಬುವವರೊಂದಿಗೆ ಕಾರುಗುಂದ ಗ್ರಾಮದ ಭರತ್‌ ಎಂಬವರ ಕೆಎ-12-ಎ-7825 ರ ಆಟೋ ರಿಕ್ಷಾದಲ್ಲಿ ಮಡಿಕೇರಿಗೆ ಬರುತ್ತಿರುವಾಗ ಬೆಟ್ಟಗೇರಿ ಬಳಿ ಎದುರುಗಡೆಯಿಂದ ಕೆಎ-12-ಟಿ-5540 ರ  ರ  ಟ್ರ್ಯಾಕ್ಟರ್ ಅನ್ನು ಅದರ ಚಾಲಕ ರಾಮಯ್ಯ ಎಂಬಾತನು  ಅತಿವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಆಟೋ ರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ತಿಲಕ್ ಹಾಗೂ ಆಟೋ ಚಾಲಕ ಭರತ್‌ರವರಿಗೆ  ಗಾಯಗಳಾಗಿದ್ದು ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮನೆ ಮುರಿದು ಚಿನ್ನಾಭರಣ, ನಗದು ಕಳವು 
       ಮನೆ ಮುರಿದು ಭಾರೀ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿದ ಘಟನೆ ಕುಶಾಲನಗರ ಸಮೀಪದ ಮುಳ್ಳುಸೋಗೆ ಎಂಬಲ್ಲಿ ನಡೆದಿದೆ. ಮುಳ್ಳುಸೋಗೆಯ ಬಸವೇಶ್ವರ ಬಡಾವಣೆಯ ನಿವಾಸಿ ಯು.ಆರ್.ಉಮೇಶ್ ಎಂಬವರು ಸಂಸಾರ ಸಮೇತ ದಿನಾಂಕ 23/04/2013 ರಂದು ಸ್ವಂತ ಕೆಲಸದ ನಿಮಿತ್ತ  ಸ್ವಂತ ಊರಾದ  ಸಕಲೇಶಪುರದ ಉಚ್ಚಂಗಿ ಗ್ರಾಮಕ್ಕೆ ಹೋಗಿದ್ದು ದಿನಾಂಕ 24/04/2013 ರಂದು  ಅವರ ಮನೆಯ ಮುಂದಿನ ಮನೆಯ ವಾಸಿಗಳಾದ ಸುಬ್ಬಯ್ಯನವರು ದೂರವಾಣಿ ಮೂಲಕ ಉಮೇಶ್‌‌ರವರ ಮನೆಯ ಹಿಂಬಾಗಿಲನ್ನು ಒಡೆದು ಯಾರೋ ಕಳ್ಳರು  ಒಳ ನುಗ್ಗಿರುತ್ತಾರೆ  ಎಂದು ತಿಳಿಸಿದ ಮೇರೆ ಅವರು ತಕ್ಷಣ ಊರಿನಿಂದ ಹೊರಟು ಸಂಜೆ ವೇಳೆ ಮನೆಗೆ ಬಂದು ನೋಡಿದಾಗ ಮನೆಯ ಹಿಂಬಾಗಿಲು ಒಡೆದಿದ್ದು ಒಳಗೆ ಹೋಗಿ ನೋಡಿದಾಗ ಮಲಗು ಕೋಣೆಯ ವಾರ್ಡ್ ರೋಬ್ ನಲ್ಲಿದ್ದಂತಹ 50 ಗ್ರಾಂ ಚಿನ್ನಾಭರಣ ಮತ್ತು 30,000 ರೂ ನಗದನ್ನು ಯಾರೋ ಕಳವು ಮಾಡಿರುವುದು ಕಂಡು ಬಂದಿರುವುದಾಗಿ ಅವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

Wednesday, April 24, 2013

 ಸ್ನಾನ ಮಾಡಲು ಹೋದ ವ್ಯಕ್ತಿ ನೀರುಪಾಲು 
       ಸ್ನಾನ ಮಾಡಲೆಂದು ಹೋದ ವ್ಯಕ್ತಿಯೋರ್ವ ಕೆರೆಯಲ್ಲಿ ಮುಳುಗಿ ಸಾವಿಗೀಡಾದ ಘಟನೆ ಮೂರ್ನಾಡು ಸಮೀಪದ ಹೊದ್ದೂರು ಗ್ರಾಮದಲ್ಲಿ ನಡೆದಿದೆ. ಹೊದ್ದೂರು ಗ್ರಾಮದ ಎನ್‌.ಸಿ.ಜಗದೀಶ್ ಎಂಬವರ ತೋಟದಲ್ಲಿ ಕೂಲಿ ಕಾರ್ಮಿಕನಾಘಿ ಕೆಲಸ ಮಾಡುತ್ತಿದ್ದ 62 ವರ್ಷ ಪ್ರಾಯದ ಸುಬ್ಬನಾಯ್ಕ ಎಂಬವರು ದಿನಾಂಕ 23/04/2013ರಂದು ಎಂದಿನಂತೆ ಕೆಲಸ ಮುಗಿಸಿ ನೆರೆಮನೆಯ ಚೌರಿರ ಬಿದ್ದಪ್ಪ ಎಂಬವರ ಕೆರೆಯಲ್ಲಿ ಸ್ನಾನ ಮಾಡಿ ಬರುವುದಾಗಿ ಹೇಳಿ ಹೋಗಿದ್ದು, ಎಷ್ಟು ಹೊತ್ತಾದರೂ ಮನೆಗೆ ಕಾರಣ ಜಗದೀಶ್‌ರವರು ಹುಡುಕಲು ತೊಡಗಿದಾಗ ಚೌರಿರ ಬಿದ್ದಪ್ಪನವರ ಕೆರೆಯ ಬಳಿ ಸುಬ್ಬ ನಾಯ್ಕರವರ ಬಟ್ಟೆಗಳು ಕಂಡು ಬಂದಿದ್ದು, ನಂತರ ಪಿ.ಕೆ.ಮುತ್ತ ಎಂಬವರ ಸಹಾಯದಿಂದ ಕೆರೆಯಲ್ಲಿ ಸಹಾ ಹುಡುಕಾಡಿದಾಗ ಈ ದಿನ 24/04/2013 ರಂದು ಬೆಳಿಗ್ಗೆ ಸುಬ್ಬ ನಾಯ್ಕರವರ ಮೃತ ದೇಹವು ಕೆರೆಯಲ್ಲಿ ಪತ್ತೆಯಾಗಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
  
ಪಾದಚಾರಿಗೆ ಲಾರಿ ಡಿಕ್ಕಿ: ಗಾಯ 
       ಲಾರಿ ಡಿಕ್ಕಿಯಾದ ಪರಿಣಾಮ  ಪಾದಚಾರಿಯೊಬ್ಬರಿಗೆ ಗಾಯಗಳಾದ ಘಟನೆ ಪೊನ್ನಂಪೇಟೆ ಸಮೀಪದಭದ್ರಗೊಳ ಗ್ರಾಮದಲ್ಲಿ ನಡೆದಿದೆ. ದಿನಾಂಕ 23/04/2013ರ ರಾತ್ರಿ ವೇಳೆ ಭದ್ರಗೊಳ ಗ್ರಾಮದ ನಿವಾಸಿ ಹೆಚ್‌.ಆರ್.ಮಲ್ಲಿಗೆ ಎಂಬವರು ಅವರ ಮಗಳಾದ ಆಶಾರವರ ಮನೆಗೆ ಹೋಗಿ ಸಂಜೆ ಸಮಯ ಸುಮಾರು 07.00 ಗಂಟೆ ಹೊತ್ತಿಗೆ ವಾಪಾಸು ಅವರ ಮನೆಗೆ  ಗೋಣಿಕೊಪ್ಪಲು ಮೈಸೂರು ಮುಖ್ಯ ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಭದ್ರಗೋಳದ ಪೋಡಮಾಡ ಸತೀಶ್ ರವರ ಮನೆಯ ಹತ್ತಿರ ತಲುಪುವಾಗ  ಗೋಣಿಕೊಪ್ಪ ಕಡೆಯಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಎಂಪಿ-02-ಎಕ್ಸ್-9595ರ ಲಾರಿಯ ಚಾಲಕ ರಾಮಮೋಹನ್ ಎಂಬಾತನು ಲಾರಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹಿಂಬದಿಯಿಂದ ಮಲ್ಲಿಗೆರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರಿಗೆ ತೀವ್ರತರದ ಗಾಯಗಳಾಗಿದ್ದು,   ವಿಚಾರ ತಿಳಿದ ಅವರ ತಂಗಿ ರತ್ನ ಹಾಗೂ ತಂಗಿಯ ಮಗ ಸಂತೋಷ್ ರವರು ಸೇರಿ ತಿತಿಮತಿ ಆಸ್ಪತ್ರೆಯ ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲು ಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮದ್ಯ ಮಾರಾಟ, ಓರ್ವನ ಬಂಧನ 
       ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ವಿರಾಜಪೇಟೆ ನಗರ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ವಿರಾಜಪೇಟೆ ನಗರದ ಕೆಎಸ್‌ಆರ್‌ಟಿಸಿ ಗಲ್ಲಿಯಲ್ಲಿ ಓರ್ವ ವ್ಯಕ್ತಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ವಿರಾಜಪೇಟೆ ನಗರ ಠಾಣಾ ಎಎಸ್‌ಐ ಡಿ.ಎ.ಕಾರ್ಯಪ್ಪನವರು ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದಾಗ ನಗರದ ಕೆ.ಎಸ್‌.ಆರ್.ಟಿ.ಸಿ. ಗಲ್ಲಿಯಲ್ಲಿ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯ ಶಾಂತಕುಮಾರ್ ಎಂಬಾತನು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದುದು ಕಂಡು ಬಂದಿದ್ದು, ಆತನನ್ನು ಬಂಧಿಸಿದ ಪೊಲೀಸರು ಆತನಿಂದ ರೂ.900/- ಮೌಲ್ಯದ 18 ಕ್ವಾರ್ಟರ್ ಬಾಟಲಿ ಮದ್ಯ ಹಾಗೂ ನಗದು ರೂ.600/- ಗಳನ್ನು ಮಹಜರು ಮೂಲಕ ಅಮಾನತು ಪಡಿಸಿಕೊಂಡು ಕ್ರಮ ಜರುಗಿಸಿದ್ದಾರೆ. 

ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ 
       ಹಲವು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಸುಂಟಿಕೊಪ್ಪ ಪೊಲೀಸರು ಪತ್ತೆ ಹಚ್ಚಿದ್ದಾರೆ. ಸುಂಟಿಕೊಪ್ಪ ಠಾಣೆಯ ಮೊಕದ್ದಮೆ ಸಂಖ್ಯೆ 07/2008ರ ಹೊಡೆದಾಟದ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಸುಮಾರು ನಾಲ್ಕೈದು ವರ್ಷಗಳಿಮದ ತಲೆಮರೆಸಿಕೊಂಡಿದ್ದ ಗುರುವ ಎಂಬ ಆರೋಪಿಯನ್ನು ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ತಾಲೂಕಿನ ದೇವದಾನ ಗ್ರಾಮದಲ್ಲಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯ ಎಎಸ್‌ಐ ಪಾರ್ಥ ಹಾಗೂ ಸಿಬ್ಬಂದಿ ಪುಂಡರೀಕಾಕ್ಷ ಇವರುಗಳು ದಿನಾಂಕ 23/04/2013ರಂದು  ಆತನನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. 

Tuesday, April 23, 2013

ಕಾಡಾನೆ ಧಾಳಿ, ಗಾಯಾಳು ಸಾವು 
       ಕಾಡಾನೆ ಧಾಳಿಯಿಂದ ಗಾಯಗೊಂಡ ವ್ಯಕ್ತಿ ಮೃತ ಪಟ್ಟಿರುವ ಘಟನೆ ಸೋಮವಾರಪೇಟೆ ಬಳಿಯ ಅಡಿನಾಡೂರು ಗ್ರಾಮದಲ್ಲಿ ನಡೆದಿದೆ.  ದಿನಾಂಕ 19.04.2013 ರಂದು ರಾತ್ರಿ 07:30 ಪಿ.ಎಂ.ಗೆ ಅರಣ್ಯ ರಕ್ಷಕ ಪರಮೇಶ್‌ರವರೊಂದಿಗೆ ಅರಣ್ಯ ವೀಕ್ಷಕರಾದ ಕುಟ್ಟಪ್ಪರವರು ಬಾಣವಾರ ಶಾಖೆಯ ಅರಣ್ಯದಲ್ಲಿ  ಆಡಿನಾಡೂರು ಕೂಡು ರಸ್ತೆಯ ಗಸ್ತಿನಲ್ಲಿ ಗಸ್ತು ಕರ್ತವ್ಯ ಮಾಡಿಕೊಂಡಿರುವಾಗ್ಗೆ ಎದುರಿನಿಂದ ಬಂದ ಒಂದು ಕಾಡಾನೆಯು ಕುಟ್ಟಪ್ಪ ಮತ್ತು ಪರಮೇಶರವರನ್ನು ಕಂಡು ಅಟ್ಟಿಸಿಕೊಂಡು ಬಂದಾಗ ಕುಟ್ಟಪ್ಪನವರು ಜೀವ ರಕ್ಷಣೆಗಾಗಿ ಮರವನ್ನು ಹತ್ತಲು ಪ್ರಯತ್ನಿಸಿದ್ದು, ಅವರ ಪ್ರಯತ್ನ ಸಫಲವಾಗದೆ ಕಾಡಾನೆ ಅವರ ಬಳಿ ಬಂದು ಸೊಂಡಿಲಿನಿಂದ ಹಿಡಿದು ಎಳೆದು ನೆಲಕ್ಕೆ ಅಪ್ಪಳಿಸಿದ ಪರಿಣಾಮ ಅವರ ಎದೆಯ ಭಾಗ ಹಾಗೂ ಶರೀರದ ಕೆಲವು ಭಾಗಗಳು ಜಖಂಗೊಂಡಿದ್ದು  ಸೋಮವಾರಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಹಾಸನದ ಮಂಗಳ ಆಸ್ಪತ್ರೆಗೆ ದಾಖಲು ಪಡಿಸಿ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುವ ಬಗ್ಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬಾಲಕಿಯ ಮೇಲೆ ದೊಣ್ಣೆಯಿಂದ ಹಲ್ಲೆ 
       ಬಾಲಕಿಯೊಬ್ಬರ ಮೇಲೆ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿದ ಘಟನೆ ಮೂರ್ನಾಡು ಸಮೀಪದ ಕೋಡಂಬೂರು ಗ್ರಾಮದಲ್ಲಿ ನಡೆದಿದೆ.  ಕೋಡಂಬೂರು ಗ್ರಾಮದ ವಾಸು ಎಂಬವರ 14 ವರ್ಷ ಪ್ರಾಯದ ಮಗಳು ಮೇಘ ಎಂಬಾಕೆಯು  ದಿನಾಂಕ 22-04-2013 ರಂದು ತಂದೆ ತಾಯಿ, ಬೇಬಿ, ಅಕ್ಕಾ ವೀಣಾ ಹಾಗೂ ಚಿಕ್ಕಪ್ಪನ ಮಗಳಾದ ರೀನಾರವರ ಜೊತೆ ಚೆಯ್ಯಂಡಾಣೆ ಗ್ರಾಮಕ್ಕೆ ಊರ ಹಬ್ಬ ಅಯ್ಯಪ್ಪ ದೇವಸ್ಥಾನಕ್ಕೆ ಹೋಗಿದ್ದು ಅಲ್ಲಿ ಊರಿನವರಾದ ಹಾಗೂ ನೆರೆಮನೆಯವರಾದ ಪ್ರಮೋದ್, ಪ್ರಸನ್ನ ಮತ್ತು ಕಿಶೋರ್‌ರವರು ಬಂದಿದ್ದು  ಸಾಯಂಕಾಲ ಪ್ರಮೋದ್ ಎಂಬಾತನು ಆತನ ಮೊಬೈಲ್‌ನಿಂದ ಮೇಘರವರ ಹಾಗೂ ಅವರ ಅಕ್ಕ ವೀಣಾ, ಮತ್ತು ರೀನಾರವರ ಫೋಟೋವನ್ನು ತೆಗೆದುಕೊಂಡಿರುವುದು ನೋಡಿ ಹಬ್ಬ ಮುಗಿಸಿ ಮನೆಗೆ ಬಂದು ಮನೆಯ ಅಂಗಳದಲ್ಲಿ ಇರುವಾಗ್ಗೆ ಪ್ರಮೋದ್, ಪ್ರಸನ್ನ ಮತ್ತು ಕಿಶೋರ್‌ರವರು ಬಂದಾಗ ಮೇಘರವರು ಅವರ  ಫೋಟೋವನ್ನು ಪ್ರಮೋದ್ ನ  ಮೊಬೈಲ್‌ನಲ್ಲಿ ತೆಗೆದ ಬಗ್ಗೆ ಆಕ್ಷೇಪಿಸಿದ್ದು, ಆಗ ಪ್ರಮೋದ್ ಹಾಗೂ ಇತರರು ಅಶ್ಲೀಲ ಪದಗಳಿಂದ ಆಕೆಯನ್ನು ನಿಂದಿಸಿ ಪ್ರಮೋದ್‌ನು ಅಲ್ಲೇ ಇದ್ದ ಮರದ ದೊಣ್ಣೆಯಿಂದ ಮೇಘರವರ ತಲೆಯ ಮುಂಭಾಗಕ್ಕೆ ಹೊಡೆದು ನೋವುಪಡಿಸಿದ್ದು, ಆಕೆಯು ಬೊಬ್ಬೆ ಹಾಕಿದಾಗ ತಂದೆ ವಾಸು ಹಾಗು ಚಿಕ್ಕಪ್ಪನವರಾದ ಮಾದಪ್ಪನವರು ಬಂದಾಗ ಆರೋಪಿಗಳು ದೊಣ್ಣೆಯನ್ನು ಅಲ್ಲೇ ಬಿಸಾಡಿ ಈ ಬಗ್ಗೆ ಪೊಲೀಸರಿಗೆ ಹೇಳಿದರೆ ಕೊಲೆ ಮಾಡದೇ ಬಿಡುವುದಿಲ್ಲ ಎಂದು ಬೆದರಿಕೆಯನ್ನು ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮನೆ ಮುರಿದು ಚಿನ್ನಾಭರಣ ಹಾಗೂ ಕರಿಮೆಣಸು ಕಳವು 
       ಮನೆಯ ಬೀಗ ಮುರಿದು ಪ್ರವೇಶಿಸಿ ರೂ. 39,000/- ಮೌಲ್ಯದ ಚಿನ್ನಾಭರಣ ಹಾಗೂ  ಕರಿಮೆಣಸನ್ನು ಕಳವು ಮಾಡಿದ ಪ್ರಕರಣ ನಾಪೋಕ್ಲು ಸಮೀಪದ ಕಲ್ಲುಮೊಟ್ಟೆ ಎಂಬಲ್ಲಿ ನಡೆದಿದೆ. ನಾಪೋಕ್ಲಿನ ಕಲ್ಲುಮೊಟ್ಟೆ ನಿವಾಸಿ ಎಂ.ಪಿ.ಪದ್ಮನಾಭ ಎಂಬವರು ದಿನಾಂಕ 17/04/2013ರಂದು ಕಾಶರಗೋಡಿನಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದು, ದಿನಾಂಕ 22/04/2013ರ ಸಂಜೆ ಮನೆಗೆ ವಾಪಾಸು ಬಂದಾಗ ಯಾರೋ ಅಪರಿಚಿತ ಕಳ್ಳರು ಮನೆಯ ಹಿಂಭಾಗದ ಬೀಗ ಮುರಿದು ಒಳಗೆ ಪ್ರವೇಶಿಸಿ ಮನೆಯ ಮಲಗುವ ಕೋಣೆಯ ಅಲ್ಮೈರಾವನ್ನು ಒಡೆದು ಅದರೊಳಗಿದ್ದ ಚಿನ್ನದ ನೆಕ್ಲೇಸ್ ಹಾಗೂ ಮನೆಯಲ್ಲಿದ್ದ 30 ಕೆ.ಜಿ.ಕರಿಮೆಣಸನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ 
        ಜೀವನದಲ್ಲಿ ಜುಗುಪ್ಸೆಗೊಂಡ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರಪೇಟೆ ಸಮೀಪದ ಬಿಳಿಗೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 22/04/2013ರಂದು ಬಿಳಿಗೇರಿ ಗ್ರಾಮದ ನಿವಾಸಿ ದೇಜಪ್ಪ ಎಂಬವರ ಪತ್ನಿ ಶಾರದ ಎಂಬಾಕೆಯು ಮಾದಾಪುರ ಗ್ರಾಮಕ್ಕೆ ಹೋಗಿದ್ದು ವಾಪಾಸು ಮನೆಗೆ ಬಂದು ನೋಡುವಾಗ ಆಕೆಯ ಪತಿ ದೇಜಪ್ಪನು ಯಾವುದೋ ವಿಷ ಸೇವಿಸಿ ವಾಂತಿ ಮಾಡಿಕೊಂಡಿರುವುದನ್ನು ನೋಡಿ ಕೂಡಲೇ ಮಾದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯಾಧಿಕಾರಿಯವರು ದೇಜಪ್ಪ ಮೃತನಾಗಿರುವುದಾಗಿ ತಿಳಿಸಿದ್ದು, ದೇಜಪ್ಪನವರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಾರದರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮನೆ ಮುರಿದು ಒಳ ಪ್ರವೇಶಿಸಿ ಚಿನ್ನಾಭರಣ ಕಳವು 
       ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆ ಮುರಿದು ಒಳ ಪ್ರವೇಶಿಸಿ ಭಾರೀ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ.ದಿನಾಂಕ 13-4-2013 ವಿರಾಜಪೇಟೆಯ ನೆಹರುನಗರದ ನಿವಾಸಿ ಮೋಹನ್ ಎಂಬವರು ತನ್ನ ಹೆಂಡತಿ ಮಕ್ಕಳೊಂದಿಗೆ ಹೆಂಡತಿಯ ಊರು ಕೇರಳದ ಕೊಳಿತಟ್ಟು ಎಂಬಲ್ಲಿಗೆ ಹೋಗಿದ್ದು ದಿನಾಂಕ 22-4-2013 ವಾಪಾಸು ಮನೆಗೆ ಬಂದು ನೋಡುವಾಗ್ಗೆ ಯಾರೋ ಕಳ್ಳರು ಮನೆಯ ಹಿಂಭಾಗದ ಬೀಗ ಮುರಿದು ಒಳ ಪ್ರವೇಶಿಸಿ ಮನೆಯೊಳಗೆ ಮಲಗುವ ಕೋಣೆಯ ಬೀರುವಿನಲ್ಲಿಟ್ಟಿದ್ದ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ  ಚಿನ್ನಾಭರಣ ಹಾಗೂ ಇತರ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬಸ್ ರಿಕ್ಷಾ ಡಿಕ್ಕಿ, ರಿಕ್ಷಾ ಪ್ರಯಾಣಿಕನ ಸಾವು 
      ಆಟೋ ರಿಕ್ಷಾಕ್ಕೆ ಬಸ್ ಡಿಕ್ಕಿಯಾಗಿ ರಿಕ್ಷಾ ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟ ಘಟನೆ ಗೋಣಿಕೊಪ್ಪ ಸಮೀಪದ ಬಾಳಾಜಿ ಗ್ರಾಮದ ಚೆನ್ನಂಗೊಲ್ಲಿಯಲ್ಲಿ ನಡೆದಿದೆ. ದಿನಾಂಕ 22/04/2013ರಂದು ಗೋಣಿಕೊಪ್ಪದ ಅರ್ವತೊಕ್ಲು ಗ್ರಾಮದ ಶಹಜಾನ್ ಎಂಬವರು ತಮ್ಮ ಆಟೋ ರಿಕ್ಷಾ ಸಂಖ್ಯೆ ಕೆಎ-12-6597 ರಲ್ಲಿ ಚೆನ್ನಂಗೊಲ್ಲಿ ಪೈಸಾರಿಯಲ್ಲಿ ಪ್ರಯಾಣಿಕರನ್ನು ಬಿಟ್ಟು ವಾಪಾಸ್ಸು ಬರುತ್ತಿರುವಾಗ್ಗೆ ಪರಿಚಯವಿರುವ ಕೇರಳದ ಕೂತುಪರಂಬುವಿನ ಸಲೀಂನು ಆಟೋರಿಕ್ಷಾದಲ್ಲಿ ಹತ್ತಿ ಚೆನ್ನಂಗೊಲ್ಲಿ ಪೈಸಾರಿಯಿಂದ ಗೋಣಿಕೊಪ್ಪ ಮೈಸೂರು ಮುಖ್ಯ ತಾರು ರಸ್ತೆಯಲ್ಲಿ ಬರುವಾಗ ಮೈಸೂರು ಕಡೆಯಿಂದ ಬರುತ್ತಿದ್ದ ಕೆಎ-01-ಎಬಿ-1782 ರ ಖಾಸಗಿ ಬಸ್ಸು ಚಾಲಕನು ಬಸ್ಸನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಆಟೋರಿಕ್ಷಾಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಶಹಜಾನ್ ರವರು ರಸ್ತೆಗೆ ಹಾರಿ ಗಾಯವಾಗಿರುವುದಲ್ಲದೆ, ಆಟೋರಿಕ್ಷಾದಲ್ಲಿದ್ದ ಪ್ರಯಾಣಿಕ ಸಲೀಂನು ಆಟೋ ರಿಕ್ಷಾವು ಬಸ್ಸಿನ ಮುಂಭಾಗದ ಒಳಭಾಗಕ್ಕೆ ಸೇರಿದ ಕಾರಣ ಸ್ಥಳದಲ್ಲೆ ಮೃತ ಪಟ್ಟಿರುವುದಾಗಿ  ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ
 

Monday, April 22, 2013

ನೀರಿನಲ್ಲಿ ಮುಳುಗಿ ವ್ಯಕ್ತಿಯ ದುರ್ಮರಣ:
  • ವ್ಯಕ್ತಿಯೋರ್ವ ಹೊಳೆಯಲ್ಲಿ ಸ್ನಾನ ಮಾಡಲು ಹೋದ ಸಂದರ್ಬ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕುಶಾಲನಗರ ಠಾಣಾ ವ್ಯಾಪ್ತಿಯ ಕೂಡ್ಲೂರು ಗ್ರಾಮದಿಂದ ವರದಿಯಾಗಿದೆ.   ಯೊಗೇಶ (ಪ್ರಾಯ 30 ವರ್ಷ) ಎಂಬ ವ್ಯಕ್ತಿ  ಕೂಡ್ಲೂರು ಗ್ರಾಮದಲ್ಲಿ ವಾಸವಿದ್ದು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ದಿನಾಂಕ 20-4-2013 ರಂದು ಮದ್ಯಾಹ್ನ 15:00 ಗಂಟೆಯ ಸಮಯದಲ್ಲಿ ಕಾವೇರಿ ಹೊಳೆಯಲ್ಲಿ ಸ್ನಾನ ಮಾಡಲು ಹೋಗಿದ್ದು, ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಈ ವಿಷಯವನ್ನು ದಿನಾಂಕ 21-4-2013 ರಂದು  ಬೆಳಿಗ್ಗೆ 07:00 ಗಂಟೆಗೆ ಯಾರೋ ದೂರವಾಣಿ ಮೂಲಕ ಫಿರ್ಯಾದಿ ಶ್ರೀಮತಿ ಮಂಜುಳ, ಗಂಡ ಶಿವಣ್ಣ, ಸೀಗೆಹೊಸೂರು ಗ್ರಾಮ, ಕುಶಾಲನಗರ  ಇವರಿಗೆ  ತಿಳಿಸಿದ್ದು, ಅವರ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
 ಜೀಪು ಮೋಟಾರ್‌ ಸೈಕಲ್‌ಗೆ ಡಿಕ್ಕಿ, ಬೈಕ್‌ ಸವಾರನ ದುರ್ಮರಣ:
  • ಮೋಟಾರ್‌ ಸೈಕಲ್‌ಗೆ ಜೀಪು ಡಿಕ್ಕಿಯಾಗಿ ವ್ಯಕ್ತಿಯೋರ್ವ ತೀವ್ರ ಗಾಯಗೊಂಡು ಆಸ್ಪತ್ತೆಯಲ್ಲಿ ಮೃತಪಟ್ಟಿರುವ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮದೆನಾಡು ಗ್ರಾಮದಿಂದ ವರದಿಯಾಗಿದೆ.  ದಿನಾಂಕ 21-04-2013 ರಂದು  ಸಮಯ ಸುಮಾರು 3-30 ಪಿ.ಎಂ.ಗೆ ಮದೆನಾಡು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಕುಡಿಯರ ಉದಯಕುಮಾರ್‌ ಎಂಬವರು ತಮ್ಮ ಬಾಪ್ತು ಮೋಟಾರ್‌ ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದಾಗ  ಎದುರುಗಡೆಯಿಂದ ಆರೋಪಿ ಜೀಪು ಚಾಲಕ ಚಂದ್ರಶೇಖರ ಎಂಬವರು ಜೀಪು ಸಂಖ್ಯೆ:ಕೆಎ-50-ಎಂ-396 ನ್ನು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮೋಟಾರ್‌ ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮ  ಮೋಟಾರ್‌ ಸೈಕಲ್‌ ಸವಾರ ಉದಯಕುಮಾರ್‌ರವರಿಗೆ ತೀವ್ರ ಗಾಯಗಳಾಗಿ ಅವರನ್ನು   ಸುಳ್ಯದ ಕೆ ವಿ ಜಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೆ ಸಮಯ 4-15 ಪಿ.ಎಂ.ಗೆ ಮೃತಪಟ್ಟಿದ್ದು, ಫಿರ್ಯಾದಿ ಶ್ರೀಮತಿ ಪೊನ್ನಮ್ಮ (ಮೃತರ ಪತ್ನಿ) ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಆಸ್ತಿಕಬಳಿಗೆ ಉದ್ದೇಶದಿಂದ ಜಾಗಕ್ಕೆ ಅಕ್ರಮ ಪ್ರವೇಶಿಸಿ ಬೆಳೆನಾಶ, ಪ್ರಕರಣ ದಾಖಲು:
  • ಆಸ್ತಿ ಕಬಳಿಸುವ ಉದ್ದೇಶದಿಂದ  ತಂದೆ ಹಾಗೂ ಮಗ ಸೇರಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಬೆಳೆ ನಾಶಪಡಿಸಿದ ಘಟನೆ ಪೊನ್ನಂಪೇಟೆ ಪೊಲೀಸ್‌ ಠಾಣಾ ನೋಕ್ಯ-ತಿತಿಮತಿ ಗ್ರಾಮದಿಂದ ವರದಿಯಾಗಿದೆ.  ದಿನಾಂಕ 18-4-2013 ರಂದು ಪಿರ್ಯಾದಿ ಶ್ರೀಮತಿ ಎಂ.ಎಸ್.ಹೇಮಾವತಿ ಗಂಡ ಕಾಂತರಾಜ್ ಪ್ರಾಯ 34 ವರ್ಷ, ವಾಸ ಬಿಳುಗುಂದ ಗ್ರಾಮ ವಿರಾಜಪೇಟೆ ಇವರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಅವರ ಬಾಪ್ತು ನೋಕ್ಯ ಗ್ರಾಮದ ಸ.ನಂ.44 ರಲ್ಲಿ ನಿವೇಶನ ಸಂಖ್ಯೆ 2 ರಲ್ಲಿ 1.200 ಚದರ ಅಡಿ ವಿಸ್ತೀರ್ಣವುಳ್ಳ ಮನೆ ನಿವೇಶನದಲ್ಲಿ ಅವರ ಸಂಭಂದಿಕರಾದ ಆರೋಪಿ ಎಂ.ಜಿ.ಕೃಷ್ಣ ರವರು ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ   ಫಿರ್ಯಾದಿಯ ಆಸ್ತಿಯೊಳಗೆ ಅಕ್ರಮ ಪ್ರವೇಶ ಮಾಡಿ  ಮೂರು ಫಲನೀಡುವ ಸುಮಾರು ಮೂವತ್ತು ವರ್ಷ ಹಳೇಯದಾರ ತೆಂಗಿನಮರ ಮತ್ತು ಸುಮಾರು ಹತ್ತು ವರ್ಷ ಹಳೆಯ ಸಿಲ್ವರ್ ಮರಗಳನ್ನು ಕಡಿದು ನಾಶಪಡಿಸಿದ್ದು,  ಸುಮಾರು 50,000/- ರೂಪಾಯಿ ನಷ್ಟವುಂಟುಮಾಡಿದ್ದು,  ಈ ಕೃತ್ಯದಲ್ಲಿ ಆರೋಪಿಯ ಮಗ ಚೇತನ್ ಹಾಗೂ ಅಳಿಯನೂ ಭಾಗಿಯಾಗಿದ್ದು,  ಫಿರ್ಯಾದಿಯವರ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಜೀವನದಲ್ಲಿ ಜಿಗುಪ್ಸೆ, ವ್ಯಕ್ತಿ ನೇಣಿಗೆ ಶರಣು:
  • 55 ವರ್ಷ ಪ್ರಾಯದ  ರಾಜು @ ರಾಚಯ್ಯ ಎಂಬವರು  ಸುಮಾರು 4 ವರ್ಷಗಳಿಂದ ಸೋಮವಾರಪೇಟೆ ಪಟ್ಟಣದ ಆನೆಕೆರೆ ರಸ್ತೆಯಲ್ಲಿರುವ ಶಶಿಧರರವರ ಲೈನ್‌ ಮನೆಯಲ್ಲಿ ವಾಸವಾಗಿದ್ದು ಅವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಸದರಿಯವರಿಗೆ  ವಿಪರೀತ ಮದ್ಯ ಸೇವಿಸುವ ಅಭ್ಯಾಸವಿದ್ದು,  ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 21-4-2013 ರಂದು ಬೆಳಿಗ್ಗೆ 8-30 ಗಂಟೆಗೆ ಅವರು   ವಾಸವಾಗಿದ್ದ ಲೈನ್‌ ಮನೆಯ ಪಕ್ಕದ ತೋಟದಲ್ಲಿ ಕಿತ್ತಳೆ ಮರಕ್ಕೆ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃರರ ಮಗ ಸ್ವಾಮಿ @ ಕೃಷ್ಣ, ಜೌಡ್ಲು ಗ್ರಾಮ ಇವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಮಹಿಳೆಯ ಮನೆಗೆ ಅಕ್ರಮ ಪ್ರವೇಶ, ಕೊಲೆ ಬೆದರಿಕೆ ಮತ್ತು ಮಾನಭಂಗಕ್ಕೆ ಪ್ರಯತ್ನ, ಪ್ರಕರಣ ದಾಖಲು:
  • ಆಸ್ತಿ ವಿಚಾರದಲ್ಲಿ ವ್ಯಕ್ತಿಯೋರ್ವ ಮಹಿಳೆಯ ಮನೆಗೆ ಅಕ್ರಮ ಪ್ರವೇಶ ಮಾಡಿ, ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಮಾಡುವುದಾಗಿ ಬೆದರಿಸಿ ಕೈಹಿಡಿದು ಮಾನಭಂಗಕ್ಕೆ ಯತ್ನಿಸಿದ ಘಟನೆ ಕುಶಾಲನಗರ ಠಾಣಾ ವ್ಯಾಪ್ತಿಯ ಮಾದಾಪಟ್ನ ಗ್ರಾಮದಿಂದ ವರದಿಯಾಗಿದೆ.  ದಿನಾಂಕ 07-04-2013 ರಂದು ಸಮಯ 07.00 ಎ.ಎಂ.ಗೆ ಕುಶಾಲನಗರ ಠಾಣಾ ಸರಹದ್ದಿನ ಮಾದಾಪಟ್ಟಣ ಗ್ರಾಮದಲ್ಲಿರುವ  ಫಿರ್ಯಾದಿ ಶ್ರೀಮತಿ ಚಿಕ್ಕಮ್ಮ, ಗಂಡ ಅಣ್ಣಾಜಿರವ್ರ  ಮನೆಗೆ ಆರೋಪಿ ಜಗದೀಶ ಎಂಬಾತನು  ಅಕ್ರಮ ಪ್ರವೇಶ ಮಾಡಿ, " ನನ್ನ ಜಮೀನಿನ ಮೇಲೆ ನಿಮ್ಮ ಕುಟುಂಬದವರು ಬಂದು ಹೋದರೆ ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ" ಎಂದು ಅವಾಚ್ಯ ಶಬ್ಧಗಳಿಂದ ಬೈದು ಅಸಭ್ಯವಾಗಿ ವರ್ತಿಸಿ, ಕೈ ಹಿಡಿದು ಎಳೆದಾಡಿ  ಮಾನಭಂಗಕ್ಕೆ ಪ್ರಯತ್ನಿಸಿರುವ ಬಗ್ಗೆ ಫಿರ್ಯಾದಿಯವರ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಕೊಂಡು ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 

Sunday, April 21, 2013

ಜೀಪು ಕಾರು ಡಿಕ್ಕಿ, ಕಾರಿಗೆ ಜಖಂ 
       ಅಜಾಗರೂಕತೆಯಿಂದ ಜೀಪನ್ನು ಚಾಲಿಸಿ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರು ಜಖಂಗೊಂಡ ಘಟನೆ ಮಡಿಕೇರಿ ನಗರದ ಉಕ್ಕಡ ರಸ್ತೆಯಲ್ಲಿ ನಡೆದಿದೆ. ದಿನಾಂಕ 20/04/2013ರ ಸಂಜೆ ನಗರದ ಗದ್ದಿಗೆ ಬಳಿಯ ನಿವಾಸಿ ಟಿ.ಎಂ.ದೇಚಮ್ಮ ಎಂಬವರು ಅವರ ಕಾರು ಸಂ.ಕೆಎ-12-ಪಿ-5501ರಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿಯಿಂದ ಮನೆಗೆ ಹೋಗುತ್ತಿರುವಾಗ ಉಕ್ಕಡ ಕಡೆಯಿಂದ ಒಂದು ಜೀಪು ಕೆಎ-19-ಎಂಎಫ್-4999ನ್ನು ಅದರ ಚಾಲಕ ಇಸಾಕ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ದೇಚಮ್ಮನವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿಗೆ ಜಖಂ ಉಂಟಾದ ಬಗ್ಗೆ ನೀಡಿದ ದೂರಿನೆ ಮೇರೆಗೆ ಮಡಿಕೇರಿ ನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಆಟೋ ರಿಕ್ಷಾ ಮತ್ತು ಮೋಟಾರು ಬೈಕ್ ಡಿಕ್ಕಿ, ಬೈಕ್ ಸವಾರನ ಮೃತ್ಯು. 
       ಆಟೋ ರಿಕ್ಷಾ ಹಾಗೂ ಮೋಟಾರು ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸಾವಿಗೀಡಾದ ಘಟನೆ ಸುಂಟಿಕೊಪ್ಪ ಬಳಿಯ ಗರಗಂದೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 20/04/2013ರ ರಾತ್ರಿ ವೇಳೆ ಗರಗಂದೂರು ಬಳಿಯ ಹೊಸತೋಟದ ನಿವಾಸಿ ಶಿವರಾಂ ಎಂಬವರು ತಮ್ಮ ಪತ್ನಿ ಸರೋಜರೊಂದಿಗೆ ಆಸಿಫ್ ಎಂಬವರ ಆಟೋ ರಿಕ್ಷಾ ಸಂಖ್ಯೆ ಕೆಎ-12-ಎ-6400ರ ಆಟೋ ರಿಕ್ಷಾದಲ್ಲಿ ಕುಶಾಲನಗರಕ್ಕೆ ಹೋಗಿ ಮರಳಿ ಬರುತ್ತಿರುವಾಗ ಗರಗಂದೂರು ಗ್ರಾಮದ ಶಾಲೆಯ ಬಳಿ ಆಟೋ ಚಾಲಕ ಆಸಿಫ್ ತನ್ನ ಆಟೋ ರಿಕ್ಷಾವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಮದ ಚಾಲಿಸಿಕೊಂಡು ಹೋಗಿ ಮಾದಾಪುರ ಕಡೆಯಿಂದ ಬರುತ್ತಿದ್ದ ಕೆಎ-12-ಎ-7864ರ ಮೋಟಾರು ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮ ರಿಕ್ಷಾದಲ್ಲಿದ್ದ ಶಿವರಾಂ, ಸರೋಜ ಹಾಗೂ ರಿಕ್ಷಾ ಚಾಲಕ ಆಸಿಫ್‌ರವರಿಗೆ ಗಾಯಗಳಾಗಿದ್ದು, ಮೋಟಾರು ಸೈಕಲ್ ಚಾಲಕ ಶಂಕರ್‌ ಮತ್ತು ಹಿಂಬದಿ ಸವಾರ ಪುರುಷೋತ್ತಮ್‌ರವರಿಗೆ ಸಹಾ ಗಾಯಗಳಾಗಿದ್ದು, ಚಿಕಿತ್ಸೆ ಬಗ್ಗೆ ಮಾದಾಪುರ ಆಸ್ಪತ್ರೆಗೆ ಸಾಗಿಸಿದಾಗ ಆಸ್ಪತ್ರೆಯ ವೈದ್ಯರು ಮೋಟಾರು ಬೈಕ್ ಸವಾರ ಶಂಕರ್ ಸಾವಿಗೀಡಾಗಿರುವುದಾಗಿ ತಿಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಆಟೋ ಚಾಲಕ ಆಸಿಫ್ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾಲು ಜಾರಿ ಬಿದ್ದು ವ್ಯಕ್ತಿಯ ಸಾವು 
   ಮನೆಯಲ್ಲಿ ಆಕಸ್ಮಿಕವಾಗಿ ವ್ಯಕ್ತಿಯೊಬ್ಬರು ಕಾಲು ಜಾರಿ ಬಿದ್ದು ಸಾವಿಗೀಡಾದ ಘಟನೆ ಸೋಮವಾರಪೇಟೆಯ ರೇಂಜರ್ ಬ್ಲಾಕಿನಲ್ಲಿ ನಡೆದಿದೆ. ದಿನಾಂಕ 20/04/2013ರಂದು ಸೋಮವಾರಪೇಟೆ ನಗರದ ರೇಂಜರ್ ಬ್ಲಾಕ್ ನಿವಾಸಿ ರೇಣುಕಾ ಎಂಬವರ ಗಂಡ  ಮಂಜುನಾಥ ಎಂಬವರು  ಬೆಳಿಗ್ಗೆ ಮನೆಯಿಂದ ಸೋಮವಾರಪೇಟೆ ಪಟ್ಟಣಕ್ಕೆ ಹೋಗಿ ವಾಪಾಸ್ಸು ಮನೆಗೆ ಬಂದು ಶೌಚಾಲಯಕ್ಕೆ ಹೋಗಿ ಬರುವಾಗ ಆಯತಪ್ಪಿ ಮಕಾಡೆ ಬಿದ್ದಿದ್ದು ಅವರನ್ನು ಚಿಕಿತ್ಸೆಗಾಗಿ ಸೋಮವಾರಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಮಂಜುನಾಥರವರನ್ನು ಪರಿಶೀಲಿಸಿದ ವೈದ್ಯರು ಮಂಜುನಾಥ್ ಮೃತ ಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಫಘಾತ ಮಾರುತಿ ವ್ಯಾನ್ ಚಾಲಕನಿಗೆ ಗಾಯ 
      ಅಜಾಗರೂಕತೆಯಿಂದ ಮಾರುತಿ ವ್ಯಾನನ್ನು ಚಾಲಿಸಿದ ಪರಿಣಾಮ ವ್ಯಾನ್ ರಸ್ತೆ ಬದಿಯ ತಡೆಗೋಡೆಗೆ ಗುದ್ದಿ, ಚಾಲಕನಿಗೆ ಗಾಯಗಳಾದ ಘಟನೆ ಮಡಿಕೇರಿ ಸಮೀಪದ ದೇವರಕೊಲ್ಲಿ ಎಂಬಲ್ಲಿ ನಡೆದಿದೆ. ದಿನಾಂಕ 20-04-2013 ರಂದು ಮದೆನಾಡು ಗ್ರಾಮದ ಇ.ಹೆಚ್.ಹುಸೇನ್ ಎಂಬವರು ತಮ್ಮ ಹೊಟೇಲ್‌ಗೆ ಸಾಮಗ್ರಿಗಳನ್ನು ತೆಗೆದುಕೊಂಡು ಬರಲು ಅವರ ಮಾರುತಿ ವ್ಯಾನ್‌ ಸಂಖ್ಯೆ ಕೆಎ-21-ಎನ್‌-0620 ರಲ್ಲಿ ಕಲ್ಲುಗುಂಡಿಗೆ ತಮ್ಮ ಮಗ ನೌಷಾದ್‌ರವರೊಂದಿಗೆ ಹೋಗಿ ಸಾಮಾನುಗಳನ್ನು ತೆಗೆದುಕೊಂಡು ವಾಪಾಸು ಮನೆಗೆ ಬರುತ್ತಿರುವಾಗ್ಗೆ ಸಂಪಾಜೆ-ಮಡಿಕೇರಿ ಮುಖ್ಯ ರಸ್ತೆಯಲ್ಲಿ ಮಗ ನೌಷಾದ್‌ನು ವ್ಯಾನನ್ನು ಅತಿವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆಯ ಎಡ ಬದಿಯಲ್ಲಿದ್ದ ಕಬ್ಬಿಣದ ತಡೆಗೋಡೆಗೆ ಡಿಕ್ಕಿಪಡಿಸಿದ ಪರಿಣಾಮ ನೌಷಾದ್‌ನ ಎಡಕಾಲಿನ ಮಂಡಿಯ ಹತ್ತಿರ ಗಾಯವಾಗಿದ್ದು,  ಚಿಕಿತ್ಸೆಯ ಬಗ್ಗೆ ನೌಷಾದ್‌ನನ್ನು ಕುಂಞ ಮಹಮ್ಮದ್‌ ಮತ್ತು ಸಜೀರ್‌ ಎಂಬವರ ಸಹಾಯದಿಂದ ಸಂಪಾಜೆ ಕಡೆಗೆ ಹೋಗುತ್ತಿದ್ದ ಯಾವುದೋ ಒಂದು ವಾಹನದಲ್ಲಿ ಸಂಪಾಜೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, April 20, 2013

ಕಾಣೆಯಾದ ಹುಡುಗಿ ಪತ್ತೆ, ಅತ್ಯಾಚಾರ ಪ್ರಕರಣ ದಾಖಲು 
       ಪೊನ್ನಂಪೇಟೆ ಸಮೀಪದ ಬೇಗೂರು ಸಮೀಪದಿಂದ 27/03/2013ರಂದು ಕಾಣೆಯಾಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ತಮಿಳುನಾಡಿನಲ್ಲಿ ಪತ್ತೆಯಾಗಿದ್ದು, ಆಕೆಯನ್ನು ಕರೆದುಕೊಂಡು ಹೋಗಿದ್ದ ಯುವಕನ ವಿರುದ್ದ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. 
       ದಿನಾಂಕ 27/03/2013ರಂದು ಬೇಗೂರು ನಿವಾಸಿ ಆಲೀರ ಮೂಸಾ ಎಂಬವರ 17 ವರ್ಷ ಪ್ರಾಯದ ಮಗಳು ಜುಮೇರಿಯಾ ಎಂಬಾಕೆಯು ಕಾಣೆಯಾಗಿದ್ದು, ಪೊನ್ನಂಪೇಟೆಯ ಶಿವ ಕಾಲೋನಿ ನಿವಾಸಿ ಅಯ್ಯಪ್ಪ ಎಂಬವನು ಜುಮೇರಿಯಾಳನ್ನು ಕರೆದುಕೊಂಡು ಹೋಗಿರಬಹುದಾಗಿ ಸಂಶಯಿಸಿ ಮೂಸಾರವರು ದಿನಾಂಕ 01/04/2013ರಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಆರೋಪಿತ ಅಯ್ಯಪ್ಪನ ವಿರುದ್ದ ಅಪಹರಣ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಅಪಹರಣಕ್ಕೊಳಗಾದ ಬಾಲಕಿಯ ಪತ್ತೆಯ ಬಗ್ಗೆ ಪೊಲೀಸರು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಸಂದೇಶ ಕಳುಹಿಸಿ, ಹುಡುಗಿಯ ಪಾಲಕರ ಒಪ್ಪಿಗೆಯ ಮೇರೆಗೆ ಕಾಣೆಯಾದ ಹುಡುಗಿಯ ವಿವರಗಳನ್ನು ಟಿ.ವಿ. ಮಾದ್ಯಮ ಮತ್ತು ರೇಡಿಯೋಗಳಲ್ಲಿ ಸಹಾ ಪ್ರಸಾರ ಮಾಡಿ ಪೊಲೀಸರು ಆಕೆಯ ಪತ್ತೆಗೆ ಕ್ರಮ ಕೈಗೊಂಡಿದ್ದರು. ಈ ಬಗ್ಗೆ ಕರ್ನಾಟಕದ ಘನ ಉಚ್ಚ ನ್ಯಾಯಾಲಯದಲ್ಲಿಯೂ ಸಹಾ ಹುಡುಗಿಯ ಪಾಲಕರು ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಹಾ ಸಲ್ಲಿಸಿದ್ದರು. 
         ಅಪಹೃತ ಬಾಲಕಿಯ ಪತ್ತೆಯ ಬಗ್ಗೆ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಬಾಲಕಿ ಜುಮೇರಿಯಾ ಹಾಗೂ ಆಕೆಯನ್ನು ಕರೆದುಕೊಂಡು ಹೋಗಿದ್ದ ಅಯ್ಯಪ್ಪ ಇಬ್ಬರೂ ತಮಿಳು ನಾಡಿನ ವೆಳಕಲ್ ನಾಥಂ ಗ್ರಾಮದ ಶ್ರೀನಿವಾಸ್ ಎಂಬವರ ಮನೆಯಲ್ಲಿರುವುದಾಗಿ ಸುಳಿವು ದೊರೆತಿದ್ದು, ಪೊನ್ನಂಪೇಟೆ ಠಾಣಾಧಿಕಾರಿ ಜಿ.ಕೆ.ಸುಬ್ರಮಣ್ಯರವರು ತಮ್ಮ ಸಿಬ್ಬಂದಿಗಳು ಹಾಗೂ ಜುಮೇರಿಯಾಳ ಅಣ್ನ ಶೌಕತ್ ಆಲಿ ಎಂಬಾತನ್ನು ಕರೆದುಕೊಂಡು ದಿನಾಂಕ 19/04/2013ರಂದು ತಮಿಳುನಾಡಿನ ವೆಳಕಲ್ ನಾಥಂ ಗ್ರಾಮದ ಶ್ರೀನಿವಾಸ್‌ರವರ ಮನೆಗೆ ಹೋಗಿ ವಿಚಾರಿಸಿದಾಗ ಅವರ ಮನೆಯಲ್ಲಿ ಅಪಹರಣಕ್ಕೊಳಗಾದ ಬಾಲಕಿ ಜುಮೇರಿಯಾ ಹಾಗೂ ಅಯ್ಯಪ್ಪ ಇಬ್ಬರೂ ಪತ್ತೆಯಾಗಿರುತ್ತಾರೆ. 
        ಪಿಎಸ್‌ಐ ಸುಬ್ರಮಣ್ಯರವರು ಅವರಿಬ್ಬರನ್ನು  ವಿಚಾರಣೆ ನಡೆಸಿದ್ದು, ದಿನಾಂಕ 29/04/2013ರಂದು ಕೃಷ್ಣಗಿರಿಯ ವೆಳಕನಾಥಂನ ಗಣಪತಿ ದೇವಾಲಯದಲ್ಲಿ ತಾವಿಬ್ಬರೂ ಮದುವೆಯಾಗಿರುವುದಾಗಿ ತಿಳಿಸಿರುತ್ತಾರೆ. ನಂತರ ಬಾಲಕಿ ಜುಮೇರಿಯಾಳನ್ನು ವಿಚಾರಿಸಿದ್ದು, ಆಕೆಯು ತಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು ಮನೆಯಲ್ಲಿ ತಮ್ಮ ಮದುವೆಗೆ ಒಪ್ಪಿಗೆ ನೀಡದ ಕಾರಣ ತಾವಿಬ್ಬರೂ ಮನೆ ಬಿಟ್ಟು ತಮಿಳುನಾಡಿಗೆ ಬಂದಿದ್ದು, ಮದುವೆಯಾಗಿರುವುದಾಗಿ ತಿಳಿಸಿರುತ್ತಾಳೆ. ಅಲ್ಲದೆ ತಾವಿಬ್ಬರೂ ಸತಿ ಪತಿಯರಾಗಿ ಜೀವನ ನಡೆಸುತ್ತಿದ್ದು, ಲೈಂಗಿಕ ಸಂಪರ್ಕವನ್ನೂ ಸಹ ಹೊಂದಿರುವುದಾಗಿಯೂ ಆಕೆಯು ತಿಳಿಸಿದ್ದು, ಪಿಎಸ್‌ಐ ಸುಬ್ರಮಣ್ಯರವರು ಆಕೆ ಮತ್ತು ಆರೋಪಿ ಅಯ್ಯಪ್ಪನನ್ನು ಕರೆದುಕೊಂಡು ವಾಪಾಸು ಪೊನ್ನಂಪೇಟೆ ಠಾಣೆಗೆ ಬಂದು 17 ವರ್ಷ ಪ್ರಾಯದ ಅಪ್ರಾಪ್ತ ಬಾಲಕಿ ಜುಮೇರಿಯಾಳನ್ನು ಪುಸಲಾಯಿಸಿ ಅಪಹರಿಸಿ ಮದುವೆಯಾಗಿ ಲೈಂಗಿಕ ಸಂಪರ್ಕ ನಡೆಸಿದ ಅಯ್ಯಪ್ಪನ ವಿರುದ್ದ ಅತ್ಯಾಚಾರ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದಾರೆ. 

ಅಕ್ರಮ ಮದ್ಯ ಮಾರಾಟ, ಓರ್ವನ ಬಂಧನ 
       ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ನಾಪೋಕ್ಲು ಪೊಲೀಸರು ಓರ್ವನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ನಾಪೋಕ್ಲು ಸಮೀಪದ ನೆಲಜಿ ಗ್ರಾಮದ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ನಾಪೋಕ್ಲು ಠಾಣಾ ಪಿಎಸ್‌ಐ ಷಣ್ಮುಗಂರವರು ನೆಲಜಿ ಗ್ರಾಮದ ಚೀಯಕ್‌ಪೂವಂಡ ಅಪ್ಪಚ್ಚು ಎಂಬವರ ಅಂಗಡಿಗೆ ತೆರಳಿ ಪರಿಶೀಲಿಸಿದಾಗ ಆರೋಪಿ ಅಪ್ಪಚ್ಚುರವರು ಕಾನೂನು ಬಾಹಿರವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಅವರ ಅಂಗಡಿಯಿಂದ ರೂ. 1,000/- ಬೆಲೆಯ 30 ಬಾಟಲಿ ಜಾನ್‌ ಬುಲ್‌ ವಿಸ್ಕಿಯನ್ನು ಮಹಜರು ಮೂಲಕ ಅಮಾನತುಪಡಿಸಿಕೊಂಡು ಆರೋಪಿ ಅಪ್ಪಚ್ಚುರವರನ್ನು ಬಂಧಿಸಿ ಕ್ರಮ ಕೈಗೊಮಡಿದ್ದಾರೆ. 

12,500/- ರೂ ಮೌಲ್ಯದ ಕರಿಮೆಣಸು ಕಳವು 
       ದಾಸ್ತಾನು ಕೊಠಡಿಯ ಬೀಗ ಮುರಿದು ಪ್ರವೇಶಿಸಿ ಕರಿಮೆಣಸು ಕಳವು ಮಾಡಿದ ಪ್ರಕರಣ ನಾಪೋಕ್ಲು ಸಮೀಪದ ನೆಲಜಿ ಗ್ರಾಮದಲ್ಲಿ ನಡೆದಿದೆ. ನೆಲಜಿ ಗ್ರಾಮದ ನಿವಾಸಿ ಎಂ.ಎನ್.ಚಾಮಯ್ಯ ಯಾನೆ ಅಶೋಕ್ ಎಂಬವರು ದಿನಾಂಕ 17/04/2013ರಂದು ತಮ್ಮ ಪತ್ನಿ ಹಾಗೂ ಮಕ್ಕಳನ್ನು ನೋಡಿ ಬರಲೆಂದು ಕೂಡಿಗೆಗೆ ಹೋಗಿದ್ದು, ದಿನಾಂಕ 18/04/2013ರಂದು ಮರಳಿ ಮನೆಗೆ ಬಂದಾಗ ಅವರ ಕಾಫಿ ಶೇಖರಿಸಿಡುವ ದಾಸ್ತಾನು ಕೊಠಡಿಯ ಬೀಗ ಮುರಿದಿದ್ದು, ಕೊಠಡಿಯೊಳಗಿದ್ದ ಕರಿಮೆಣಸು ಚೀಲಗಳನ್ನು ಯಾರೋ ಕಳ್ಳರು ತೆರೆದು ಸುಮಾರು 40 ಕೆ.ಜಿ.ಯಷ್ಟು ಕರಿಮೆಣಸನ್ನು ಕಳವು ಮಾಡಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, April 19, 2013

 ಮೋಟಾರು ಬೈಕ್‌ ಅಫಘಾತ, ಓರ್ವನ ಸಾವು ಮೂವರಿಗೆ ಗಾಯ 
       ಎರಡು ಮೋಟಾರು ಬೈಕ್‌ಗಳು ಪರಸ್ಪರ ಡಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರಿಗೆ ಗಾಯಗಳಾದ ಘಟನೆ ಕುಶಾಲನಗರ ಸಮೀಪದ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 18-04-2013 ರಂದು ಸಮಯ ರಾತ್ರಿ 08.30 ಗಂಟೆಗೆ ಮಡಿಕೇರಿ ಕಡೆಯಿಂದ ಬರುತ್ತಿದ್ದ ಯಮಹಾ ಎಂಟೈಸರ್‌ ಮೋಟಾರು ಬೈಕ್ ನಂ KA-22-S-9793 ರ ಚಾಲಕ ರಫೀಕ್‌ ಹಾಗೂ ಅವನ ಸ್ನೇಹಿತನೊಂದಿಗೆ ಮೋಟಾರು ಸೈಕಲ್‌ನ್ನು ಅತೀವೇಗ ಹಾಗೂ ದುಡುಕಿನಿಂದ ಓಡಿಸಿಕೊಂಡು ಬಂದು ಬಸವನಹಳ್ಳಿ ರಮೇಶ್‌ರವರ ಮನೆಯ ಮುಂದಿನ ಥಾರು ರಸ್ತೆಯಲ್ಲಿ  ಕುಶಾಲನಗರದ ಕಡೆಯಿಂದ ಕೆಎ-12-ಜೆ-4761 ರ ಪಲ್ಸರ್‌ ಮೋಟಾರ್‌ ಬೈಕಿನಲ್ಲಿ ಬರುತ್ತಿದ್ದ ಸುಧಾಕರ ಎಂಬವರ ಮೋಟಾರು ಬೈಕಿಗೆ ಮುಖಾ ಮುಖಿ ಡಿಕ್ಕಿ ಪಡಿಸಿದ ಪರಿಣಾಮ ಸುಧಾಕರ ಸ್ಥಳದಲ್ಲೇ ಮೃತಪಟ್ಟಿದ್ದು ಅವರ ಹಿಂಬದಿಯಲ್ಲಿ ಕುಳಿತಿದ್ದ ಹೊಸಕೋಟೆಯ ವಿಶ್ವ ಎಂಬವರಿಗೆ ಮತ್ತು ಆರೋಪಿ ರಫೀಕ್‌ ಹಾಗೂ ಆತನ ಸ್ನೇಹಿತನಿಗೆ ತೀವ್ರ ತರಹದ ಗಾಯವಾಗಿದ್ದು ಎರಡೂ ಮೋಟಾರು ಬೈಕ್‌ ಸಂಪೂರ್ಣ ಜಖಂಗೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 
ಬಸ್ಸಿನಲ್ಲಿ ಅಪರಿಚಿತ ಶವ ಪತ್ತೆ 
       ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಅಪರಿಚಿತ ಯುವಕನ ಶವವೊಂದು ಪತ್ತೆಯಾಗಿದೆ. ದಿನಾಂಕ 18-4-2013 ರಂದು ತುಮಕೂರಿನಿಂದ ಬೆಂಗಳೂರು ಮಾರ್ಗವಾಗಿ ವಿರಾಜಪೇಟೆಗೆ ಬರುವ ಕೆಎಸ್ಆರ್‌ಟಿಸಿ ಬಸ್ ಸಂ. ಕೆಎ-06-ಎಫ್-0712 ನ್ನು ಅದರ ಚಾಲಕ ಜೀತೇಂದ್ರಬಾಬು ರವರು ಬೆಂಗಳೂರಿನಿಂದ ವಿರಾಜಪೇಟೆಗೆ ಹೊರಟಿದ್ದು ಬೆಂಗಳೂರಿನಲ್ಲಿ ಸುಮಾರು 30 ವರ್ಷ ಪ್ರಾಯದ ವ್ಯಕ್ತಿಯೊಬ್ಬ ಬಸ್ ಹತ್ತಿ ವಿರಾಜಪೇಟೆಗೆ ಟಿಕೆಟ್ ಪಡೆದಿದ್ದು  ರಾತ್ರಿ 8-00 ಪಿ.ಎಂ ಗೆ  ವಿರಾಜಪೇಟೆ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ತಲುಪಿದಾಗ ಬಸ್ ನಲ್ಲಿದ್ದ ಎಲ್ಲಾ ಪ್ರಯಾಣಿಕರು ಇಳಿದರೂ ಸಹ ಕೊನೆಯ ಸೀಟಿನಲ್ಲಿ ಕುಳಿತ್ತಿದ್ದ ವ್ಯಕ್ತಿ ಇಳಿಯದ ಕಾರಣ ನಿರ್ವಾಹಕ ರಾಜೇಶ್ ಹಾಗೂ ಚಾಲಕ ಜಿತೇಂಧ್ರಬಾಬುರವರು  ಆತನನ್ನು ಎಬ್ಬಿಸಿ ಇಳಿಸಲು ಪ್ರಯತ್ನಿಸಿದ್ದು ಆತ ಯಾವುದೇ ರೀತಿ ಸ್ಪಂದಿಸದ ಕಾರಣ ಸ್ಟಾಂಡ್ ನ ಟಿ.ಸಿರವರಿಗೆ ವಿಷಯ ತಿಳಿಸಿ ಅವರ ಸೂಚನೆಯಂತೆ ಸದರಿ ವ್ಯಕ್ತಿಯನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಅದೇ ಬಸ್ಸಿನಲ್ಲಿ ತಂದಿದ್ದು ವೈದ್ಯಾದಿಕಾರಿಯವರು ಸದರಿ ವ್ಯಕ್ತಿಯನ್ನು ಪರೀಕ್ಷಿಸಿ ಆತ ಮೃತತಪಟ್ಟಿರುವುದಾಗಿ ತಿಳಿಸಿದ್ದು , ಮೃತ ವ್ಯಕ್ತಿಯ ಹೆಸರು ವಿಳಾಸ ತಿಳಿದಿರುವುದಿಲ್ಲ ಎಂಬುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹೋಟೆಲ್‌ನಲ್ಲಿ ಅಕ್ರಮ ಮದ್ಯಪಾನಕ್ಕೆ ಅನುವು, ಪ್ರಕರಣ ದಾಖಲು 
       ಹೋಟೆಲ್‌ವೊಂದರಲ್ಲಿ ಅಕ್ರಮವಾಗಿ ಮದ್ಯಪಾನಕ್ಕೆ ಅವಕಾಶ ಮಾಡಿಕೊಡುತ್ತಿದ್ದ ಪ್ರಕರಣವನ್ನು ಸೋಮವಾಪೇಟೆ ವೃತ್ತ ನಿರೀಕ್ಷಕರು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ್ದಾರೆ. ದಿನಾಂಕ 18/04/2013ಎ ರಾತ್ರಿ ಸೋಮವಾರಪೇಟೆ ವೃತ್ತ ನಿರೀಕ್ಷಕರಾದ ಹೆಚ್‌.ಎನ್.ಸಿದ್ದಯ್ಯನವರು ಗಸ್ತು ಕರ್ತವ್ಯದಲ್ಲಿದ್ದಾಗ ಸೋಮವಾರಪೇಟೆ ನಗರದ ರೂಪಶ್ರೀ ಹೋಟೆಲ್‌ನಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ನೀಡುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ಸಿಪಿಐರವರು ಸದ್ರಿ ಹೋಟೆಲ್‌ಗೆ ಭೇಟಿ ನೀಡಿದಾಗ ಹೋಟೆಲ್‌ನಲ್ಲಿ ಸುಮಾರು ಐದಾರು ಜನರು ಮದ್ಯಪಾನ ಮಾಡುತ್ತಿದ್ದು, ಪೊಲೀಸರನ್ನು ಕಂಡು ಓಡಿ ಹೋಗಿರುವುದಾಗಿದೆ. ನಂತರ ಸಿಪಿಐ ಹೆಚ್‌.ಎನ್.ಸಿದ್ದಯ್ಯನವರು ಓಡಿ ಹೋದವರು ಬಿಟ್ಟು ಹೋದ ಲೋಟ ಹಾಗೂ ಮದ್ಯದ ಬಾಟಲಿಗಳನ್ನು ಮಹಜರು ಮುಲಕ ವಶಪಡಿಸಿಕೊಂಡು ಕ್ಯಾಷ್ ಟೇಬಲ್ ಬಳಿ ಕುಳಿತಿದ್ದ ಸೋಮವಾರಪೇಟೆ ನಗರದ ರತ್ನಕುಮಾರ್ ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ. 

 

Thursday, April 18, 2013

ಲಾರಿ ಮಗುಚಿ ಅಫಘಾತ, ವ್ಯಕ್ತಿಗೆ ಗಾಯ 
       ಚಾಲಕನ ಅಜಾಗರೂಕತೆಯಿಂದ ಲಾರಿಯೊಂದು ಮಗುಚಿ ಅಫಘಾತಕ್ಕೀಡಾದ ಘಟನೆ ಮಡಿಕೇರಿ ಸಮೀಪದ ಮದೆನಾಡು ಗ್ರಾಮದಲ್ಲಿ ನಡೆದಿದೆ. ಬನ್ನೂರಿನಿಂದ ಸುಳ್ಯ ಹಾಗೂ ಕಾಸರಗೋಡಿಗೆ ಅಕ್ಕಿ ಹಾಗೂ ಬೆಲ್ಲ ಸಾಗಿಸುತ್ತಿದ್ದ ಕೆಎಲ್-08-ಎಕೆ-7273 ರ ಈಚರ್ ಮಿನಿ ಲಾರಿಯನ್ನು ಅದರ ಚಾಲಕ ಅಸ್‌ಫರ್ ಆಲಿಖಾನ್‌ರವರು ಚಾಲಿಸಿಕೊಂಡು ಮಡಿಕೇರಿ ಮಾರ್ಗವಾಗಿ ಸುಳ್ಯ ಕಾಞಂಗಾಡಿಗೆ ಹೋಗುತ್ತಿರುವಾಗ ಈ ದಿನ 18-04-2013 ರಂದು ಬೆಳಗಿನ ಸಮಯ 08-00 ಎ ಎಂ ಗೆ ಮದೆನಾಡು ಎಂಬಲ್ಲಿ ಸದರಿ ಲಾರಿಯನ್ನು ಅದರ ಚಾಲಕ ಅಸ್‌ಫರ್ ಆಲಿಖಾನ್‌ರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ಬದಿಯ ಮೋರಿಗೆ ಡಿಕ್ಕಿ ಪಡಿಸಿದ ಪರಿಣಾಮ ಲಾರಿ ಮಗುಚಿ ಬಿದ್ದಿದ್ದು ಲಾರಿಯ ಕ್ಲೀನರ್ ಮಂಡ್ಯ ಜಿಲ್ಲೆಯ ಬನ್ನೂರು ನಗರದ ನಿವಾಸಿ ಮುಕ್ತಾರ್ ಪಾಷಾ ಎಂಬವರ ಎದೆಗೆ, ಎಡಕಾಲಿನ ತೊಡೆ, ಎಡಕಾಲಿನ ಮಂಡಿ, ಎಡ ಕಾಳಿನ ಮಣಿಗಂಟಿನ ಮೇಲ್ಭಾಗಕ್ಕೆ ಗಾಯ ನೋವುಂಟಾಗಿದ್ದು ಲಾರಿ ಚಾಲಕ ಅಸ್‌ಫರ್ ಆಲಿ ಖಾನ್‌ರವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು  ನೀಡಿದ ದೂರಿಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 
ಬ್ಯಾಂಕ್ ಕಳವಿಗೆ ವಿಫಲ ಯತ್ನ 
       ಬ್ಯಾಂಕೊಂದನ್ನು ಕಳವು ಮಾಡಲು ಯಾರೋ ಕಳ್ಳರು ವಿಫಲ ಯತ್ನ ನಡೆಸಿದ ಘಟನೆ ಮಡಿಕೇರಿ ಸಮೀಪದ ಮಕ್ಕಂದೂರು ಗ್ರಾಮದಲ್ಲಿ ನಡೆದಿದೆ. ಈ ದಿನ ದಿನಾಂಕ 18-04-2013 ರಂದು ಬೆಳಿಗ್ಗೆ 9-00 ಗಂಟೆಗೆ ಮಕ್ಕಂದೂರಿನ ಕೆನರಾ ಬ್ಯಾಂಕ್ ಮ್ಯಾನೇಜರ್ ಡಿ.ಟಿ.ದೇವಿಕಲಾರವರು ಬ್ಯಾಂಕಿಗೆ ಬಂದು ಬೀಗ ತೆಗೆದು ಒಳಗಡೆ ಹೋಗಿ ಸೈರನ್‌ ಆಫ್ ಮಾಡಿ ಒಳಗೆ ಹೋದಾಗ ಫೈಲ್‌ನ್ನು ಇಡುವ ರಾಕ್ ಪಕ್ಕಕ್ಕೆ ತಳ್ಳಿದಂತಿದ್ದು, ಕ್ಯಾಷ್‌ ರೂಂನ್ನು ನೋಡಲಾಗಿ ಕ್ಯಾಶ್‌ ರೂಂನ ಹಿಂದುಗಡೆಯ ಗೋಡೆಯನ್ನು ಕೊರೆದಿದ್ದು ನಂತರ ಹಿಂದುಗಡೆಯ ಬಾಗಿಲು ತೆರೆದಿರುವುದು ಕಂಡು ಬಂದಿರುತ್ತದೆ. ದಿನಾಂಕ 17-04-2013 ರ ರಾತ್ರಿ ಯಾರೋ ಕಳ್ಳರು ಹಿಂದುಗಡೆಯ ಗೋಡೆಯನ್ನು ಕೊರೆದು ಕಳ್ಳತನ ಮಾಡಲು ಪ್ರಯತ್ನಿಸಿದ್ದು ಹಣವಾಗಲೀ, ಕಂಪ್ಯೂಟರ್‌ ಮತ್ತು ಇತರ ದಾಖಲಾತಿಗಳು ಕಳುವಾಗದೇ ಇದ್ದು ಈ ಬಗ್ಗೆ ಕಳ್ಳತನ ಮಾಡಲು ಪಯತ್ನ ಪಟ್ಟ ಕಳ್ಳರನ್ನು ಪತ್ತೆ ಹಚ್ಚುವ ಬಗ್ಗೆ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 
ಮನೆಯಲ್ಲಿಟ್ಟಿದ್ದ ಹಣ, ಆಭರಣ ಕಳವು 
       ಮನೆಯಲ್ಲಿಟ್ಟಿದ್ದ ಹಣ ಹಾಗೂ ಆಭರಣ ಕಳುವಾದ ಘಟನೆ ಮಡಿಕೇರಿ ಸಮೀಪದ ಮದೆನಾಡು ಗ್ರಾಮದಲ್ಲಿ ನಡೆದಿದೆ. ಮದೆನಾಡು ಗ್ರಾಮದ ಬಿ.ಕೆ.ರಾಜೇಶ್ ಎಂಬವರು ತಮ್ಮ ತಾಯಿಯವರೊಂದಿಗೆ ವಾಸ ಮಾಡಿಕೊಂಡಿದ್ದು ದಿನಾಂಕ 05-04-2012 ರಂದು ಹಂದಿ ಮರಿಗಳನ್ನು ಮಾರಿದ ಹಣ ರೂ. 25,000=00 ಮತ್ತು ದಿನಾಂಕ 12-03-2013 ರಂದು 10 ಗ್ರಾಂ ಚಿನ್ನದ ಸರವನ್ನು ಮನೆಯ ಕಬ್ಬಿಣದ ಪೆಟ್ಟಿಗೆಯಲ್ಲಿ ಇಟ್ಟಿದ್ದು ದಿನಾಂಕ 17-03-2013 ರಂದು ಪೆಟ್ಟಿಗೆ ತೆರೆದು ನೋಡಿದಾಗ ಹಣವಾಗಲೀ, ಚಿನ್ನವಾಗಲೀ ಇರಲಿಲ್ಲವೆನ್ನಲಾಗಿದೆ. ಹಣ ಹಾಗೂ ಆಭರಣ ಸೇರಿ ಕಳುವಾದ ಮಾಲಿನ ಬೆಲೆ ಸುಮಾರು ರೂ. 45,000=00 ಆಗಿದ್ದು,  ಕಳವು ಮಾಲನ್ನು ಪತ್ತೆ ಹಚ್ಚಿ ಕೊಡಬೇಕೇಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.   

ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿಯ ಸಾವು 
       ಸ್ನಾನ ಮಾಡುತ್ತಿದ್ದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಸಾವಿಗೀಡಾದ ಘಟನೆ ವಿರಾಜಪೇಟೆ ಸಮೀಪದ ಕಂಡಂಗಾಲ ಗ್ರಾಮದ 1ನೇ ರುದ್ರಗುಪ್ಪೆಯಲ್ಲಿ ನಡೆದಿದೆ. ದಿನಾಂಕ: 17-04-13 ರಂದು 1ನೇ ರುದ್ರಗುಪ್ಪೆಯ ನಿವಾಸಿ ಪಣಿಎರವರ ಮೊಣ್ಣ ರವರು  ಮದ್ಯಾಹ್ನ ಸಮಯ 1-00ಗಂಟೆಗೆ ಮನೆಯ  ಹತ್ತಿರವಿರುವ ಕೆರೆಗೆ ಹೋಗಿ ಸ್ನಾನ ಮಾಡಿಕೊಂಡು ಬರುವುದಾಗಿ ಹೇಳಿ ಮನೆಯಿಂದ ಹೋದವನು ಮನೆಗೆ ಬಾರದೆ ಇದ್ದು ಅಪರಾಹ್ನ  ವೇಳೆಗೆ ಕೆರೆಯ ಅಕ್ಕಪಕ್ಕದಲ್ಲಿ ಆಟವಾಡುತ್ತಿದ್ದ ಮಕ್ಕಳು ಬಂದು ಮೊಣ್ಣರವರ ತಾಯಿ ಮಲ್ಲಿಗೆಯವರೊಂದಿಗೆ ಮೊಣ್ಣ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿರುವುದಾಗಿ ವಿಷಯ ತಿಳಿಸಿದ್ದು ಕೂಡಲೇ ಮೊಣ್ಣನನ್ನು ನೀರಿನಿಂದ ಹೊರಗೆ ತೆಗೆದು ಆತನನ್ನು ಚಿಕಿತ್ಸೆ ಬಗ್ಗೆ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲುಪಡಿಸಿ, ನಂತರ ವೈದ್ಯರ ಸಲಹೆ ಮೇರೆ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲುಪಡಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೊಣ್ಣ ಸಂಜೆ ಸಮಯ 6-30 ಗಂಟೆಗೆ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 
ಪತಿಯಿಂದ ದೈಹಿಕ ಕಿರುಕುಳ, ಪ್ರಕರಣ ದಾಖಲು 
       ಪತ್ನಿಗೆ ಪತಿಯು ವಿನಾ ಕಾರಣ ದೈಹಿಕ ಕಿರುಕುಳ ನೀಡುತ್ತಿರುವ ಪ್ರಕರಣ ಮಡಿಕೇರಿ ನಗರದ ಚಾಮುಂಡೇಶ್ವರಿ ನಗರದಿಂದ ವರದಿಯಾಗಿದೆ. ನಗರದ ಅರುಣ ಸ್ಟೋರ್ಸ್ ನಲ್ಲಿ ಉದ್ಯೋಗಿಯಾಗಿರುವ ಚಾಮುಂಡೇಶ್ವರಿ ನಗರದ ನಿವಾಸಿ ರತ್ನ ಕುಮಾರಿ ಎಂಬವರು ಕುಮಾರ ಎಂಬವರನ್ನು 22 ವರ್ಷಗಳ ಹಿಂದೆ ಮದುವೆಯಾಗಿದ್ದು, ಈಗ್ಗೆ 2 ವರ್ಷಗಳಿಂದ ಪತಿ ಕುಮಾರನು ಮದ್ಯಪಾನ ಮಾಡಿಕೊಂಡು ಬಂದು  ಪತ್ನಿ ರತ್ನಕುಮಾರಿಗೂ ಮತ್ತು ಮಕ್ಕಳಿಗೂ ದೈಹಿಕವಾಗಿ ಹಾಗೂ ಮಾನಸಿಕವಾಗಿ ತೊಂದರೆ ಕೊಡುತ್ತಿದ್ದರುದಿನಾಂಕ 17/04/2013 ರಂದು ರತ್ನಕುಮಾರಿಯವರು ಮನೆಯಲ್ಲಿಲ್ಲದ ಸಮಯದಲ್ಲಿ ಅವರ ಬಟ್ಟೆಗಳನ್ನು ಎಳೆದು ಹೊರಗೆ ಹಾಕಿ, ಕೇಳಿದಾಗ ರತ್ನಕುಮಾರಿಯವರ ಜುಟ್ಟನ್ನು ಹಿಡಿದು ಎಳೆದು ನೋವು ಪಡಿಸಿ ದೈಹಿಕ  ಹಿಂಸೆ ನೀಡಿರುವುದಾಗಿ ನೀಡಿದದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕಿಗೆ ಕಾರು ಡಿಕ್ಕಿ, ಬೈಕ್ ಸವಾರನಿಗೆ  ಗಾಯ 
     ಮೋಟಾರು ಬೈಕಿಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಾಯಗಳಾದ ಘಟನೆ ಮಡಿಕೇರಿ ನಗರದ ಅರಣ್ಯ ಭವನದ ಬಳಿ ನಡೆದಿದೆ. ದಿನಾಂಕ 17/04/2013ರಂದು ಸುಂಟಿಕೊಪ್ಪದ ಗದ್ದೆಹಳ್ಳ ಬಳಿಯ ನಿವಾಸಿ ಹಮೀದ್ ಎಂಬವರು ವುಡ್‌ ಪಾಲಿಷ್ ಕೆಲಸ ಮುಗಿಸಿಕೊಂಡು ಅವರ ಸಹಾಯಕ ನೌಫೆಲ್ ಎಂಬಾತನೊಂದಿಗೆ ಅವರ ಮೋಟಾರು ಸೈಕಲ್ ಸಂಖ್ಯೆ ಕೆಎ-12-ಕೆ-32ರಲ್ಲಿ ಸುಂಟಿಕೊಪ್ಪದ ಕಡೆಗೆ ಹೋಗುತ್ತಿರುವಾಗ ನರದ ಮೈಸೂರು ರಸ್ತೆಯ ಅರಣ್ಯ ಭವನದ ಬಳಿ ಸುಂಟಿಕೊಪ್ಪ ಕಡೆಯಿಂದ ಒಂದು ಮಾರುತಿ ಓಮ್ನಿ ವ್ಯಾನು ಸಂ.ಕೆಎ-02-ಎಂ-2758ನ್ನು ಅದರ ಚಾಲಕ ಸಯಾನಂದ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹಮೀದ್‌ರವರ ಮೋಟಾರು ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಹಮೀದ್‌ರವರಿಗೆ ಗಾಯಗಳಾದ ಬಗ್ಗೆ ನೀಡಿದ ದೂರಿನೆ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಾನಸಿಕ ಕಿರುಕುಳ,ವ್ಯಕ್ತಿಯ ಆತ್ಮಹತ್ಯೆ 
       ಎಸ್ಟೇಟ್ ಉದ್ಯೋಗಿಯೊಬ್ಬರು ನೇಣು ಬಿಗಿದುಕೊಂಡು ಆತ್ನಹತ್ಯೆ ಮಾಡಿಕೊಂಡ ಘಟನೆ ಕುಟ್ಟ ಬಳಿಯ ನಾಲ್ಕೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 17/04/2013ರಂದು ಕುಟ್ಟದ ನಾಲ್ಕೇರಿ ಗ್ರಾಮದ ಎನ್ & ಎನ್ ಎಸ್ಟೇಟಿನಲ್ಲಿ ಮ್ಯಾನೇಜರ್ ಕೆಲಸ ಮಾಡಿಕೊಂಡಿದ್ದ ಮತ್ರಂಡ ಎ ಮಾಚಯ್ಯ ಎಂಬವರು ತಮ್ಮ ಮನೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅದೇ ಎಸ್ಟೇಟಿನಲ್ಲಿ ವಿಸಿಟಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ ಕೊಳುವಂಡ ಕಾರ್ಯಪ್ಪ ಎಂಬವರು ನೀಡುತ್ತಿದ್ದ ಮಾನಸಿಕ ಹಿಂಸೆಯಿಂದಾಗಿ ಬೇಸರಗೊಂಡು ಮಾಚಯ್ಯನವರು ಆತ್ಮಹತ್ಯೆ ಮಾಡಿಕೊಂಡಿದ್ದು ತಂದೆಯ ಸಾವಿಗೆ ಕಾರ್ಯಪ್ಪನವರೇ ಕಾರಣ ಎಂಬುದಾಗಿ ಮಾಚಯ್ಯನವರ ಮಗಳು ಡೆರಿನ್ ದೇವಯ್ಯ ಎಂಬವರು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆಗೆ ಕಿರುಕುಳ, ಪ್ರಕರಣ ದಾಖಲು 
       ವಿವಾಹಿತ ಮಹಿಳೆಯೊಬ್ಬರಿಗೆ ಪತಿ ಹಾಗೂ ಆತನ ಕುಟುಂಬದವರು ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ನಾಪೋಕ್ಲು ಸಮೀಪದ ಬಲ್ಲಮಾವಟಿ ಗ್ರಾಮದ ಅಮ್ಮಂಡ ಕಾವ್ಯ ಎಂಬವರು ದಿನಾಂಕ 17-05-2012 ರಂದು ಅಮ್ಮಂಡ ಪ್ರಸಾದ್‌ಕುಮಾರ್ ಯಾನೆ ಪ್ರಸಾದ್ ರವರನ್ನು ತಂದೆ ತಾಯಿ ಮತ್ತು ಸಂಬಂಧಿಕರ ಸಮ್ಮುಖದಲ್ಲಿ ಮದುವೆಯಾಗಿದ್ದು, ಮದುವೆಯಾಗಿ 15 ದಿನಗಳ ಕಾಲ ಇಬ್ಬರೂ  ಅನ್ಯೋನ್ಯವಾಗಿದ್ದು, ನಂತರದಿಂದ ಗಂಡ ಪ್ರಸಾದ್, ಮಾವ ಪೊನ್ನಪ್ಪ ಹಾಗೂ ಅತ್ತೆ ಚೋಂದಕ್ಕಿ ರವರು ಕಾವ್ಯರವರೊಂದಿಗೆ ವಿನಾಃ ಕಾರಣ ಜಗಳವಾಡುತ್ತಿದ್ದರು ಹಾಗೂ ಹೊಡೆದು ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದರೆನ್ನಲಾಗಿದೆ. ದಿನಾಂಕ 16-04-2013 ರಂದು  ಸಂಜೆ  ಗಂಡ ಪ್ರಸಾದ್  ಕಾವ್ಯರವರೊಂದಿಗೆ ಜಗಳ ತೆಗೆದು ಮನೆಯಿಂದ ಹೋಗುವಂತೆ ಒತ್ತಾಯಿಸಿ ಅವರ ತಂದೆ ತಾಯಿಯವರ ಮಾತನ್ನು ಕೇಳಿ  ಆಕೆಗೆ ಕೈಯಿಂದ ಬೆನ್ನಿಗೆ ಹೊಡದು, ಎರಡೂ ಕೈಗಳನ್ನು ತಿರುಗಿಸಿ ಕಾಲಿನಿಂದ ಒದ್ದು ನೋವುಂಟು ಮಾಡಿದ್ದು ಈ ರೀತಿಯ ಮಾನಸಿಕ ಮತ್ತು ದೈಹಿಕವಾಗಿ ಕೊಡುವ  ಹಿಂಸೆಯನ್ನು ತಾಳಲಾರದೆ ದಿನಾಂಕ 17/04/2013ರ ಬೆಳಗ್ಗೆ ಆಕೆ ಸ್ವಲ್ಪ ವಿಷದ ಔಷಧಿಯನ್ನು ಸೇವಿಸಿದರೆನ್ನಲಾಗಿದೆ. ಕಾವ್ಯರವರಿಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡಿದ ಗಂಡ, ಮಾವ ಮತ್ತು ಅತ್ತೆ ಯವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ  ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕಳವು 
       ಮನೆಯ ಮುಂದೆ ನಿಲ್ಲಿಸಿದ್ದ ಮೋಟಾರು ಬೈಕ್ ಕಳುವಾದ ಪ್ರಕರಣ ಮಡಿಕೇರಿ ನಗರದ ಗೌಳಿ ಬೀದಿಯಲ್ಲಿ ನಡೆದಿದೆ. ಮಡಿಕೇರಿ ನಗರದ ಗೌಳಿ ಬೀದಿ ನಿವಾಸಿ ಐತಪ್ಪ ನಾಯ್ಕ ಎಂಬವರು ದಿನಾಂಕ 16-4-2013 ರಂದು ಸಮಯ ರಾತ್ರಿ 9.00 ಗಂಟೆಗೆ ಅವರ ವಾಸದ ಮನೆಯ ಮುಂದೆ ಅವರ ಬಾಪ್ತು ಕಪ್ಪು ಬಣ್ಣದ ಕೆಎ-12-ಜೆ-2341 ರ ಬಜಾಜ್ ಪಲ್ಸರ್ ಬೈಕನ್ನು ನಿಲ್ಲಿಸಿದ್ದು, ದಿ: 17-4-2013 ರಂದು ಬೆಳಿಗ್ಗೆ 6.30 ಗಂಟೆಗೆ ನೋಡುವಾಗ ಬೈಕು ಕಾಣೆಯಾಗಿದ್ದು, ಯಾರೋ ಕಳ್ಳರು ನಿಲ್ಲಿಸಿದ್ದ ಬೈಕನ್ನು ಕಳವು ಮಾಡಿಕೊಂಡು ಹೋಗಿದ್ದು, ಇದರ ಅಂದಾಜು ಬೆಲೆ 40000-00 ರೂ ಆಗಿದ್ದು, ಪತ್ತೆ ಮಾಡಿಕೊಡಬೇಕೆಂದು ನೀಡಿದ  ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

Wednesday, April 17, 2013


 ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ,ಎರಡು ವಾಹನ ಜಫ್ತಿ 
       ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇರೆಗೆ ಮಡಿಕೇರಿ ನಗರದಲ್ಲಿ ಎರಡು ವಾಹನಗಳನ್ನು ಜಫ್ತಿ ಮಾಡಲಾಗಿದೆ. ದಿನಾಂಕ 16/04/2013ರಂದು  ಹಾಲಿ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಕೆ.ಜೆ.ಪಿ ಪಕ್ಷದ ಅಭ್ಯರ್ಥಿಯಾದ ಶ್ರೀ ಎನ್.ಎನ್ ಶಂಭುಲಿಂಗಯ್ಯ ಇವರು ನಾಮಪತ್ರ ಸಲ್ಲಿಸಲು ಆಯೋಜಿಸಿದ್ದ ಮೆರವಣಿಗೆಯಲ್ಲಿ ಚುನಾವಣಾಧಿಕಾರಿಗಳ ಪೂರ್ವಾನುಮತಿ ಪಡೆಯದೆ ಕೆಎ-12-ಎ-1601ರ ಜೀಪು ಮತ್ತು ಕೆಎ-02-ಎನ್-5826 ರ ಟಾಟಾ ಸುಮೋ ವಾಹನದಲ್ಲಿ ಬೆಂಬಲಿಗರನ್ನು ತುಂಬಿಕೊಂಡು ಬಂದು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿರುವ ಬಗ್ಗೆ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳಾದ ಶ್ರೀ ಹಬೀಬುಲ್ಲಾ ಖಾನ್‌ರವರು ಈ ವಾಹನಗಳನ್ನು  ಪ್ರಜಾಪ್ರತಿನಿಧಿ ನಿಯಮ ಕಾಯ್ದೆ 1951 ನಿಯಮ 133 ರ ಅಡಿಯಲ್ಲಿ ಜಪ್ತಿ ಮಾಡಿಕೊಂಡು ಮುಂದಿನ ಕ್ರಮಕ್ಕಾಗಿ ಠಾಣೆಗೆ ಹಾಜರುಪಡಿಸಿ ನೀಡಿದ ಲಿಖಿತ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಈ ದೂರಿನ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವ ಬಗ್ಗೆ ನ್ಯಾಯಾಲಯದಿಂದ  ಅನುಮತಿ ಪಡೆದು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 
ಬಾಗಿಲು ಬೀಗ ಒಡೆದು ಕಾಫಿ ಕಳವು 
       ಮನೆಯ ಬಾಗಿಲಿನ ಬೀಗ ಒಡೆದು 5 ಚೀಲ ಕಾಫಿಯನ್ನು ಕಳವು ಮಾಡಿದ ಪ್ರಕರಣ ನಾಪೋಕ್ಲು ಸಮೀಪದ ಕುಂಬಳದಾಳು ಗ್ರಾಮದಲ್ಲಿ ನಡೆದಿದೆ.  ಕುಂಬಳದಾಳು ಗ್ರಾಮದ ಪಿ.ಪಿ.ವಸಂತಕುಮಾರ್ ಎಂಬವರು ದಿನಾಂಕ 16/04/2013ರಂದು ಸಂಬಂಧಿಕರ ಮದುವೆಗೆಂದು ನಾಪೋಕ್ಲಿಗೆ ಹೋಗಿದ್ದು, ಸಂಜೆ ವೇಳೆ ಅವರ ಪಕ್ಕದ ಮನೆಯ ರಾಮಯ್ಯನವರು ದೂರವಾಣಿ ಕರೆ ಮಾಡಿ ರಾಮಯ್ಯನವರು ವಸಂತಕುಮಾರ್‌ರವರನ್ನು ಕಾಣಲೆಂದು ಅವರ ಮನೆಯ ಬಳಿ ಹೋಗಿದ್ದಾಗ ವಸಂತಕುಮಾರ್‌ರವರ ಕಾಫಿ ಇಡುವ ಹಳೆಯ ಮನೆಯ ಬಾಗಿಲಿನ ಬೀಗ ಒಡೆದಿರುವುದು ಕಂಡು ಬಂದಿರುವುದಾಗಿ ತಿಳಿಸಿದ್ದು, ಒಡನೆ ವಸಂತಕುಮಾರ್‌ರವರು ಮನೆಗೆ ಹೋಗಿ ನೋಡುವಾಗ ಅವರ ಮನೆಯ ಪಕ್ಕದ ಹಳೆ ಮನೆಯಲ್ಲಿ ಕುಯ್ಲು ಮಾಡಿದ ಕಾಫಿಯನ್ನು ಚೀಲಗಳಲ್ಲಿ ತುಂಬಿಸಿ ಇಟ್ಟಿದ್ದು, ಯಾರೋ ಕಳ್ಳರು ಮನೆಯ ಬಾಗಿಲನ್ನು ಒಡೆದು ಒಳ ಪ್ರವೇಶಿಸಿ ಒಳಗಿಟ್ಟಿದ್ದ 9 ಚೀಲ ಕಾಫಿಯ ಪೈಕಿ 5 ಚೀಲ ಕಾಫಿಯನ್ನು ಕಳವು ಮಾಡಿದ್ದು, ಕಳುವಾದ ಕಾಫಿಯ ಬೆಲೆ ಅಂದಾಜು ರೂ. 16,000/- ಗಳಾಗಬಹುದೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕಿಗೆ ಜೀಪು ಡಿಕ್ಕಿ, ಸವಾರರಿಗೆ ಗಾಯ 
       ಮೋಟಾರು ಬೈಕೊಂದಕ್ಕೆ ಜೀಪು ಡಿಕ್ಕಿಯಾಗಿ ಬೈಕ್ ಸವಾರರು ಗಾಯಗೊಂಡಿರುವ ಘಟನೆ ಪಾಲಿಬೆಟ್ಟ ನಗರದಲ್ಲಿ ನಡೆದಿದೆ.ದಿನಾಂಕ 16/04/12013ರಂದು ಪಾಲಿಬೆಟ್ಟದ ಟಾಟಾ ಕಾಫಿ ಕಂಪೆನಿ ಕಾರ್ಮಿಕ ಲಕ್ಷ್ಮಣ ಹಾಗೂ ಆತನ  ಸಹೋದರ ಸಂಬಂಧಿ  ಹೆಚ್.ಎಂ. ರಾಜು ಎಂಬವರು ವಿರಾಜಪೇಟೆಯ ಚೈಯಂಡಾಣೆ  ಗ್ರಾಮದಲ್ಲಿ ಬೀಗರ ಊಟಕ್ಕೆ ಲಕ್ಷ್ಮಣರವರ ಬಾಪ್ತು ಮೋಟಾರು ಸೈಕಲ್ ಕೆಎ-12-ಕೆ-5811 ರಲ್ಲಿ  ಹೋಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ   ವಾಪಾಸು ಲಕ್ಷ್ಮಣರವರು ಬೈಕು  ಚಾಲನೆ ಮಾಡಿಕೊಂಡು ರಾಜುರವರನ್ನು ಬೈಕಿನ ಹಿಂಭಾಗದಲ್ಲಿ ಕೂರಿಸಿಕೊಂಡು ವಾಪಾಸ್ಸು ಮನೆಗೆ   ಬರುವಾಗ್ಗೆ  ಪಾಲಿಬೆಟ್ಟದ ನಗರದ ಬಸ್ಸ್ ನಿಲ್ದಾಣದ ಬಳಿ  ಗೋಣಿಕೊಪ್ಪ ರಸ್ತೆಯ ಕಡೆಯಿಂದ  ಕೆಎ-37-ಎಂ-716 ರ ಜೀಪಿನ  ಚಾಲಕ ಶಿವಣ್ಣ ಎಂಬಾತನು ಜೀಪನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಲಕ್ಷ್ಮಣರವರು ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರ ಎರಡು ಕಾಲುಗಳಿಗೆ ಹಾಗೂ ರಾಜುವಿನ ಬಲ  ಕಾಲಿನ ಮಂಡಿ ಮತ್ತು ಹಿಮ್ಮಡಿಗೆ ಗಾಯಗಳಾಗಿದ್ದು, ಬೈಕಿನ ಮುಂಭಾಗಕ್ಕೆ ಜಖಂ ಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ 
       ಅತಿಯಾದ ಮದ್ಯಪಾನ ಮಾಡಿದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿ ಸಮೀಪದ ಹೊದ್ದೂರು ಗ್ರಾಮದಲ್ಲಿ ನಡೆದಿದೆ. ಹೊದ್ದೂರು ಗ್ರಾಮದ ಎ.ಜೆ.ಕಾರ್ಯಪ್ಪ ಎಂಬವರ ಮಗ ಶರತ್ ಎಂಬಾತನಿಗೆ ತುಂಬಾ ಮದ್ಯಪಾನ ಮಾಡುವ ಅಭ್ಯಾಸವಿದ್ದು ಮದ್ಯಪಾನ ಮಾಡಿದಾಗಲೆಲ್ಲ ಮಂಕಾಗಿ ಇರುತ್ತಿದ್ದು ದಿನಾಂಕ 14-04-2013  ರಂದು ಮಡಿಕೇರಿಗೆ ಮದುವೆಗೆಂದು ಹೋಗಿ ವಾಪಾಸು ಸಮಯ ಸುಮಾರು 5-00 ಪಿ.ಎಂ ವೇಳೆಯಲ್ಲಿ ಮನೆಗೆ ಬಂದಿದ್ದು ತುಂಬಾ ಮದ್ಯಪಾನ ಮಾಡಿದ್ದು ನಂತರ ಅದೇ ವೇಳೆಯಲ್ಲಿ ಮನೆಯಿಂದ ಹೋದವನು ವಾಪಾಸು  ಮನೆಗೆ ಬಾರದೇ ಇದ್ದು ಹುಡುಕಾಡಿದಾಗ ದಿನಾಂಕ 16-4-2013 ರಂದು ಕೂಡಂಡ ಗಿರೀಶ್‌ರವರ ಕಾಫಿ  ತೋಟದ ಒಳಗೆ  ಇರುವ  ಒಂದು ಬೀಟೆ ಮರದ ಅಡ್ಡಲಾಗಿ ಬಂದ ಕೊಂಬೆಗೆ ನೈಲಾನ್‌ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಎ.ಜೆ.ಕಾರ್ಯಪ್ಪನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕ್ರಮ ಕೈಗೊಂಡಿದ್ದಾರೆ. 

ವಿವಾಹಿತ ಮಹಿಳೆಗೆ ದೈಹಿಕ ಹಿಂಸೆ 
       ವಿವಾಹಿತ ಮಹಿಳೆಯೋರ್ವರಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ ಬಗ್ಗೆ ಪ್ರಕರಣ ದಾಖಲಾಗಿದೆ. ನಾಪೋಕ್ಲು ಸಮೀಪದ ಎಮ್ಮೆಮಾಡುವಿನ ಪಡಿಯಾಣಿ ನಿವಾಸಿ ಎಂ.ಎಂ.ಫರೀದಾ ಎಂಬಾಕೆಯು ಪಾಲಿಬೆಟ್ಟದ ತಾರಿಕಟ್ಟೆ ನಿವಾಸಿ ಇಬ್ರಾಹಿಂರವರನ್ನು ದಿನಾಂಕ 14-11-2012 ರಂದು ಎರಡನೇ ಮದುವೆಯಾಗಿ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದು ಈಗ ಒಂದು ತಿಂಗಳಿನಿಂದ ಇಬ್ರಾಹಿಂ ರವರು ಫರೀದಾರವರಿಗೆ ವಿನಾಃ ಕಾರಣ ಹೊಡೆದು, ಬಡಿದು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದರು. ಈ ವಿಷಯವನ್ನು ಫರೀದಾರವರು ಅವರ ತಂದೆ ತಾಯಿಯವರಿಗೆ ತಿಳಿಸಿದ್ದು. ಈಗ 15 ದಿನಗಳ ಹಿಂದೆ ಫರೀದಾರ ಗಂಡ ಇಬ್ರಾಹಿಂ ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ವಾಪಾಸು ಬಂದಿರುವುದಿಲ್ಲ ಎಂಬುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮನೆಯಲ್ಲಿದ್ದ ಹುಡುಗಿ ಕಾಣೆ 
       ಮನೆಯಲ್ಲಿದ್ದ ಹುಡುಗಿಯೊಬ್ಬಳು ಕಾಣೆಯಾಗಿರುವ ಘಟನೆ ವಿರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದ ನಿರ್ಮಲಗಿರಿಯಲ್ಲಿ ನಡೆದಿದೆ. ಹೆಗ್ಗಳ ಗ್ರಾಮದ ನಿರ್ಮಲಗಿರಿ ನಿವಾಸಿ ಪದ್ಮ ಎಂಬಾಕೆಯ ಮಗಳು  18 ವರ್ಷ ಪ್ರಾಯದ ಪಲ್ಲವಿಯು 9 ನೇ ತರಗತಿಯಲ್ಲಿ ಅನುತ್ತೀರ್ಣಳಾಗಿ ಮನೆಯಲ್ಲಿಯೇ ಇದ್ದು, ದಿನಾಂಕ 15-04-2013 ರಂದು ಬೆಳಿಗ್ಗೆ 09:00 ಗಂಟೆಗೆ ವಿರಾಜಪೇಟೆಯಲ್ಲಿರುವ ನೆಂಟರ ಮನೆಗೆ ಹೋಗಿ ಬರುವುದಾಗಿ ಹೇಳಿ  ಮನೆಯಿಂದ ಹೋಗಿದ್ದು, ಪದ್ಮ ಮತ್ತು ಆಕೆಯ ಗಂಡ ಕೂಲಿ ಕೆಲಸಕ್ಕೆ ಹೋಗಿ ಸಂಜೆ 05:30 ಗಂಟೆಗೆ ವಾಪಾಸ್ಸು ಬಂದು ನೋಡುವಾಗ್ಗೆ  ಪಲ್ಲವಿಯು  ಮನೆಯಲ್ಲಿ ಇಲ್ಲದೆ ಇದ್ದು, ಈ ಬಗ್ಗೆ ಅಕ್ಕಪಕ್ಕದಲ್ಲಿ, ವಿರಾಜಪೇಟೆಯಲ್ಲಿ ಹಾಗೂ ನೆಂಟರ ಮನೆಯಲ್ಲಿ ಹುಡುಕಾಡಿದ್ದು ಪತ್ತೆಯಾಗದ ಕಾರಣ ಆಕೆಯನ್ನು ಪತ್ತೆಹಚ್ಚಿ ಕೊಡುವಂತೆ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಕಾಣೆಯಾದ ಹುಡುಗಿಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.