ಜೀಪು ಕಾರು ಡಿಕ್ಕಿ, ಕಾರಿಗೆ ಜಖಂ
ಅಜಾಗರೂಕತೆಯಿಂದ ಜೀಪನ್ನು ಚಾಲಿಸಿ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರು ಜಖಂಗೊಂಡ ಘಟನೆ ಮಡಿಕೇರಿ ನಗರದ ಉಕ್ಕಡ ರಸ್ತೆಯಲ್ಲಿ ನಡೆದಿದೆ. ದಿನಾಂಕ 20/04/2013ರ ಸಂಜೆ ನಗರದ ಗದ್ದಿಗೆ ಬಳಿಯ ನಿವಾಸಿ ಟಿ.ಎಂ.ದೇಚಮ್ಮ ಎಂಬವರು ಅವರ ಕಾರು ಸಂ.ಕೆಎ-12-ಪಿ-5501ರಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿಯಿಂದ ಮನೆಗೆ ಹೋಗುತ್ತಿರುವಾಗ ಉಕ್ಕಡ ಕಡೆಯಿಂದ ಒಂದು ಜೀಪು ಕೆಎ-19-ಎಂಎಫ್-4999ನ್ನು ಅದರ ಚಾಲಕ ಇಸಾಕ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ದೇಚಮ್ಮನವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿಗೆ ಜಖಂ ಉಂಟಾದ ಬಗ್ಗೆ ನೀಡಿದ ದೂರಿನೆ ಮೇರೆಗೆ ಮಡಿಕೇರಿ ನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಆಟೋ ರಿಕ್ಷಾ ಮತ್ತು ಮೋಟಾರು ಬೈಕ್ ಡಿಕ್ಕಿ, ಬೈಕ್ ಸವಾರನ ಮೃತ್ಯು.
ಆಟೋ ರಿಕ್ಷಾ ಹಾಗೂ ಮೋಟಾರು ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸಾವಿಗೀಡಾದ ಘಟನೆ ಸುಂಟಿಕೊಪ್ಪ ಬಳಿಯ ಗರಗಂದೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 20/04/2013ರ ರಾತ್ರಿ ವೇಳೆ ಗರಗಂದೂರು ಬಳಿಯ ಹೊಸತೋಟದ ನಿವಾಸಿ ಶಿವರಾಂ ಎಂಬವರು ತಮ್ಮ ಪತ್ನಿ ಸರೋಜರೊಂದಿಗೆ ಆಸಿಫ್ ಎಂಬವರ ಆಟೋ ರಿಕ್ಷಾ ಸಂಖ್ಯೆ ಕೆಎ-12-ಎ-6400ರ ಆಟೋ ರಿಕ್ಷಾದಲ್ಲಿ ಕುಶಾಲನಗರಕ್ಕೆ ಹೋಗಿ ಮರಳಿ ಬರುತ್ತಿರುವಾಗ ಗರಗಂದೂರು ಗ್ರಾಮದ ಶಾಲೆಯ ಬಳಿ ಆಟೋ ಚಾಲಕ ಆಸಿಫ್ ತನ್ನ ಆಟೋ ರಿಕ್ಷಾವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಮದ ಚಾಲಿಸಿಕೊಂಡು ಹೋಗಿ ಮಾದಾಪುರ ಕಡೆಯಿಂದ ಬರುತ್ತಿದ್ದ ಕೆಎ-12-ಎ-7864ರ ಮೋಟಾರು ಸೈಕಲ್ಗೆ ಡಿಕ್ಕಿಪಡಿಸಿದ ಪರಿಣಾಮ ರಿಕ್ಷಾದಲ್ಲಿದ್ದ ಶಿವರಾಂ, ಸರೋಜ ಹಾಗೂ ರಿಕ್ಷಾ ಚಾಲಕ ಆಸಿಫ್ರವರಿಗೆ ಗಾಯಗಳಾಗಿದ್ದು, ಮೋಟಾರು ಸೈಕಲ್ ಚಾಲಕ ಶಂಕರ್ ಮತ್ತು ಹಿಂಬದಿ ಸವಾರ ಪುರುಷೋತ್ತಮ್ರವರಿಗೆ ಸಹಾ ಗಾಯಗಳಾಗಿದ್ದು, ಚಿಕಿತ್ಸೆ ಬಗ್ಗೆ ಮಾದಾಪುರ ಆಸ್ಪತ್ರೆಗೆ ಸಾಗಿಸಿದಾಗ ಆಸ್ಪತ್ರೆಯ ವೈದ್ಯರು ಮೋಟಾರು ಬೈಕ್ ಸವಾರ ಶಂಕರ್ ಸಾವಿಗೀಡಾಗಿರುವುದಾಗಿ ತಿಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಆಟೋ ಚಾಲಕ ಆಸಿಫ್ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕಾಲು ಜಾರಿ ಬಿದ್ದು ವ್ಯಕ್ತಿಯ ಸಾವು
ಮನೆಯಲ್ಲಿ ಆಕಸ್ಮಿಕವಾಗಿ ವ್ಯಕ್ತಿಯೊಬ್ಬರು ಕಾಲು ಜಾರಿ ಬಿದ್ದು ಸಾವಿಗೀಡಾದ ಘಟನೆ ಸೋಮವಾರಪೇಟೆಯ ರೇಂಜರ್ ಬ್ಲಾಕಿನಲ್ಲಿ ನಡೆದಿದೆ. ದಿನಾಂಕ 20/04/2013ರಂದು ಸೋಮವಾರಪೇಟೆ ನಗರದ ರೇಂಜರ್ ಬ್ಲಾಕ್ ನಿವಾಸಿ ರೇಣುಕಾ ಎಂಬವರ ಗಂಡ ಮಂಜುನಾಥ ಎಂಬವರು ಬೆಳಿಗ್ಗೆ
ಮನೆಯಿಂದ ಸೋಮವಾರಪೇಟೆ
ಪಟ್ಟಣಕ್ಕೆ ಹೋಗಿ
ವಾಪಾಸ್ಸು ಮನೆಗೆ ಬಂದು ಶೌಚಾಲಯಕ್ಕೆ ಹೋಗಿ ಬರುವಾಗ ಆಯತಪ್ಪಿ ಮಕಾಡೆ ಬಿದ್ದಿದ್ದು ಅವರನ್ನು ಚಿಕಿತ್ಸೆಗಾಗಿ ಸೋಮವಾರಪೇಟೆ ಸರಕಾರಿ
ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಮಂಜುನಾಥರವರನ್ನು ಪರಿಶೀಲಿಸಿದ ವೈದ್ಯರು ಮಂಜುನಾಥ್ ಮೃತ
ಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ರಸ್ತೆ ಅಫಘಾತ ಮಾರುತಿ ವ್ಯಾನ್ ಚಾಲಕನಿಗೆ ಗಾಯ
ಅಜಾಗರೂಕತೆಯಿಂದ ಮಾರುತಿ ವ್ಯಾನನ್ನು ಚಾಲಿಸಿದ ಪರಿಣಾಮ ವ್ಯಾನ್ ರಸ್ತೆ ಬದಿಯ ತಡೆಗೋಡೆಗೆ ಗುದ್ದಿ, ಚಾಲಕನಿಗೆ ಗಾಯಗಳಾದ ಘಟನೆ ಮಡಿಕೇರಿ ಸಮೀಪದ ದೇವರಕೊಲ್ಲಿ ಎಂಬಲ್ಲಿ ನಡೆದಿದೆ. ದಿನಾಂಕ 20-04-2013 ರಂದು ಮದೆನಾಡು ಗ್ರಾಮದ ಇ.ಹೆಚ್.ಹುಸೇನ್ ಎಂಬವರು ತಮ್ಮ
ಹೊಟೇಲ್ಗೆ ಸಾಮಗ್ರಿಗಳನ್ನು ತೆಗೆದುಕೊಂಡು
ಬರಲು ಅವರ ಮಾರುತಿ
ವ್ಯಾನ್ ಸಂಖ್ಯೆ ಕೆಎ-21-ಎನ್-0620
ರಲ್ಲಿ ಕಲ್ಲುಗುಂಡಿಗೆ
ತಮ್ಮ ಮಗ
ನೌಷಾದ್ರವರೊಂದಿಗೆ
ಹೋಗಿ
ಸಾಮಾನುಗಳನ್ನು
ತೆಗೆದುಕೊಂಡು
ವಾಪಾಸು ಮನೆಗೆ
ಬರುತ್ತಿರುವಾಗ್ಗೆ ಸಂಪಾಜೆ-ಮಡಿಕೇರಿ
ಮುಖ್ಯ
ರಸ್ತೆಯಲ್ಲಿ
ಮಗ ನೌಷಾದ್ನು
ವ್ಯಾನನ್ನು
ಅತಿವೇಗ ಹಾಗು
ಅಜಾಗರೂಕತೆಯಿಂದ
ಚಾಲನೆ
ಮಾಡಿಕೊಂಡು
ಹೋಗಿ ರಸ್ತೆಯ
ಎಡ
ಬದಿಯಲ್ಲಿದ್ದ ಕಬ್ಬಿಣದ
ತಡೆಗೋಡೆಗೆ
ಡಿಕ್ಕಿಪಡಿಸಿದ
ಪರಿಣಾಮ ನೌಷಾದ್ನ
ಎಡಕಾಲಿನ
ಮಂಡಿಯ ಹತ್ತಿರ
ಗಾಯವಾಗಿದ್ದು,
ಚಿಕಿತ್ಸೆಯ
ಬಗ್ಗೆ ನೌಷಾದ್ನನ್ನು
ಕುಂಞ ಮಹಮ್ಮದ್
ಮತ್ತು ಸಜೀರ್ ಎಂಬವರ
ಸಹಾಯದಿಂದ
ಸಂಪಾಜೆ ಕಡೆಗೆ
ಹೋಗುತ್ತಿದ್ದ
ಯಾವುದೋ ಒಂದು
ವಾಹನದಲ್ಲಿ
ಸಂಪಾಜೆ
ಸರ್ಕಾರಿ
ಆಸ್ಪತ್ರೆಗೆ
ದಾಖಲಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.