Monday, April 22, 2013

ನೀರಿನಲ್ಲಿ ಮುಳುಗಿ ವ್ಯಕ್ತಿಯ ದುರ್ಮರಣ:
  • ವ್ಯಕ್ತಿಯೋರ್ವ ಹೊಳೆಯಲ್ಲಿ ಸ್ನಾನ ಮಾಡಲು ಹೋದ ಸಂದರ್ಬ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕುಶಾಲನಗರ ಠಾಣಾ ವ್ಯಾಪ್ತಿಯ ಕೂಡ್ಲೂರು ಗ್ರಾಮದಿಂದ ವರದಿಯಾಗಿದೆ.   ಯೊಗೇಶ (ಪ್ರಾಯ 30 ವರ್ಷ) ಎಂಬ ವ್ಯಕ್ತಿ  ಕೂಡ್ಲೂರು ಗ್ರಾಮದಲ್ಲಿ ವಾಸವಿದ್ದು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ದಿನಾಂಕ 20-4-2013 ರಂದು ಮದ್ಯಾಹ್ನ 15:00 ಗಂಟೆಯ ಸಮಯದಲ್ಲಿ ಕಾವೇರಿ ಹೊಳೆಯಲ್ಲಿ ಸ್ನಾನ ಮಾಡಲು ಹೋಗಿದ್ದು, ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಈ ವಿಷಯವನ್ನು ದಿನಾಂಕ 21-4-2013 ರಂದು  ಬೆಳಿಗ್ಗೆ 07:00 ಗಂಟೆಗೆ ಯಾರೋ ದೂರವಾಣಿ ಮೂಲಕ ಫಿರ್ಯಾದಿ ಶ್ರೀಮತಿ ಮಂಜುಳ, ಗಂಡ ಶಿವಣ್ಣ, ಸೀಗೆಹೊಸೂರು ಗ್ರಾಮ, ಕುಶಾಲನಗರ  ಇವರಿಗೆ  ತಿಳಿಸಿದ್ದು, ಅವರ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
 ಜೀಪು ಮೋಟಾರ್‌ ಸೈಕಲ್‌ಗೆ ಡಿಕ್ಕಿ, ಬೈಕ್‌ ಸವಾರನ ದುರ್ಮರಣ:
  • ಮೋಟಾರ್‌ ಸೈಕಲ್‌ಗೆ ಜೀಪು ಡಿಕ್ಕಿಯಾಗಿ ವ್ಯಕ್ತಿಯೋರ್ವ ತೀವ್ರ ಗಾಯಗೊಂಡು ಆಸ್ಪತ್ತೆಯಲ್ಲಿ ಮೃತಪಟ್ಟಿರುವ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮದೆನಾಡು ಗ್ರಾಮದಿಂದ ವರದಿಯಾಗಿದೆ.  ದಿನಾಂಕ 21-04-2013 ರಂದು  ಸಮಯ ಸುಮಾರು 3-30 ಪಿ.ಎಂ.ಗೆ ಮದೆನಾಡು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಕುಡಿಯರ ಉದಯಕುಮಾರ್‌ ಎಂಬವರು ತಮ್ಮ ಬಾಪ್ತು ಮೋಟಾರ್‌ ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದಾಗ  ಎದುರುಗಡೆಯಿಂದ ಆರೋಪಿ ಜೀಪು ಚಾಲಕ ಚಂದ್ರಶೇಖರ ಎಂಬವರು ಜೀಪು ಸಂಖ್ಯೆ:ಕೆಎ-50-ಎಂ-396 ನ್ನು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮೋಟಾರ್‌ ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮ  ಮೋಟಾರ್‌ ಸೈಕಲ್‌ ಸವಾರ ಉದಯಕುಮಾರ್‌ರವರಿಗೆ ತೀವ್ರ ಗಾಯಗಳಾಗಿ ಅವರನ್ನು   ಸುಳ್ಯದ ಕೆ ವಿ ಜಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೆ ಸಮಯ 4-15 ಪಿ.ಎಂ.ಗೆ ಮೃತಪಟ್ಟಿದ್ದು, ಫಿರ್ಯಾದಿ ಶ್ರೀಮತಿ ಪೊನ್ನಮ್ಮ (ಮೃತರ ಪತ್ನಿ) ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಆಸ್ತಿಕಬಳಿಗೆ ಉದ್ದೇಶದಿಂದ ಜಾಗಕ್ಕೆ ಅಕ್ರಮ ಪ್ರವೇಶಿಸಿ ಬೆಳೆನಾಶ, ಪ್ರಕರಣ ದಾಖಲು:
  • ಆಸ್ತಿ ಕಬಳಿಸುವ ಉದ್ದೇಶದಿಂದ  ತಂದೆ ಹಾಗೂ ಮಗ ಸೇರಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಬೆಳೆ ನಾಶಪಡಿಸಿದ ಘಟನೆ ಪೊನ್ನಂಪೇಟೆ ಪೊಲೀಸ್‌ ಠಾಣಾ ನೋಕ್ಯ-ತಿತಿಮತಿ ಗ್ರಾಮದಿಂದ ವರದಿಯಾಗಿದೆ.  ದಿನಾಂಕ 18-4-2013 ರಂದು ಪಿರ್ಯಾದಿ ಶ್ರೀಮತಿ ಎಂ.ಎಸ್.ಹೇಮಾವತಿ ಗಂಡ ಕಾಂತರಾಜ್ ಪ್ರಾಯ 34 ವರ್ಷ, ವಾಸ ಬಿಳುಗುಂದ ಗ್ರಾಮ ವಿರಾಜಪೇಟೆ ಇವರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಅವರ ಬಾಪ್ತು ನೋಕ್ಯ ಗ್ರಾಮದ ಸ.ನಂ.44 ರಲ್ಲಿ ನಿವೇಶನ ಸಂಖ್ಯೆ 2 ರಲ್ಲಿ 1.200 ಚದರ ಅಡಿ ವಿಸ್ತೀರ್ಣವುಳ್ಳ ಮನೆ ನಿವೇಶನದಲ್ಲಿ ಅವರ ಸಂಭಂದಿಕರಾದ ಆರೋಪಿ ಎಂ.ಜಿ.ಕೃಷ್ಣ ರವರು ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ   ಫಿರ್ಯಾದಿಯ ಆಸ್ತಿಯೊಳಗೆ ಅಕ್ರಮ ಪ್ರವೇಶ ಮಾಡಿ  ಮೂರು ಫಲನೀಡುವ ಸುಮಾರು ಮೂವತ್ತು ವರ್ಷ ಹಳೇಯದಾರ ತೆಂಗಿನಮರ ಮತ್ತು ಸುಮಾರು ಹತ್ತು ವರ್ಷ ಹಳೆಯ ಸಿಲ್ವರ್ ಮರಗಳನ್ನು ಕಡಿದು ನಾಶಪಡಿಸಿದ್ದು,  ಸುಮಾರು 50,000/- ರೂಪಾಯಿ ನಷ್ಟವುಂಟುಮಾಡಿದ್ದು,  ಈ ಕೃತ್ಯದಲ್ಲಿ ಆರೋಪಿಯ ಮಗ ಚೇತನ್ ಹಾಗೂ ಅಳಿಯನೂ ಭಾಗಿಯಾಗಿದ್ದು,  ಫಿರ್ಯಾದಿಯವರ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಜೀವನದಲ್ಲಿ ಜಿಗುಪ್ಸೆ, ವ್ಯಕ್ತಿ ನೇಣಿಗೆ ಶರಣು:
  • 55 ವರ್ಷ ಪ್ರಾಯದ  ರಾಜು @ ರಾಚಯ್ಯ ಎಂಬವರು  ಸುಮಾರು 4 ವರ್ಷಗಳಿಂದ ಸೋಮವಾರಪೇಟೆ ಪಟ್ಟಣದ ಆನೆಕೆರೆ ರಸ್ತೆಯಲ್ಲಿರುವ ಶಶಿಧರರವರ ಲೈನ್‌ ಮನೆಯಲ್ಲಿ ವಾಸವಾಗಿದ್ದು ಅವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಸದರಿಯವರಿಗೆ  ವಿಪರೀತ ಮದ್ಯ ಸೇವಿಸುವ ಅಭ್ಯಾಸವಿದ್ದು,  ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 21-4-2013 ರಂದು ಬೆಳಿಗ್ಗೆ 8-30 ಗಂಟೆಗೆ ಅವರು   ವಾಸವಾಗಿದ್ದ ಲೈನ್‌ ಮನೆಯ ಪಕ್ಕದ ತೋಟದಲ್ಲಿ ಕಿತ್ತಳೆ ಮರಕ್ಕೆ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃರರ ಮಗ ಸ್ವಾಮಿ @ ಕೃಷ್ಣ, ಜೌಡ್ಲು ಗ್ರಾಮ ಇವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಮಹಿಳೆಯ ಮನೆಗೆ ಅಕ್ರಮ ಪ್ರವೇಶ, ಕೊಲೆ ಬೆದರಿಕೆ ಮತ್ತು ಮಾನಭಂಗಕ್ಕೆ ಪ್ರಯತ್ನ, ಪ್ರಕರಣ ದಾಖಲು:
  • ಆಸ್ತಿ ವಿಚಾರದಲ್ಲಿ ವ್ಯಕ್ತಿಯೋರ್ವ ಮಹಿಳೆಯ ಮನೆಗೆ ಅಕ್ರಮ ಪ್ರವೇಶ ಮಾಡಿ, ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಮಾಡುವುದಾಗಿ ಬೆದರಿಸಿ ಕೈಹಿಡಿದು ಮಾನಭಂಗಕ್ಕೆ ಯತ್ನಿಸಿದ ಘಟನೆ ಕುಶಾಲನಗರ ಠಾಣಾ ವ್ಯಾಪ್ತಿಯ ಮಾದಾಪಟ್ನ ಗ್ರಾಮದಿಂದ ವರದಿಯಾಗಿದೆ.  ದಿನಾಂಕ 07-04-2013 ರಂದು ಸಮಯ 07.00 ಎ.ಎಂ.ಗೆ ಕುಶಾಲನಗರ ಠಾಣಾ ಸರಹದ್ದಿನ ಮಾದಾಪಟ್ಟಣ ಗ್ರಾಮದಲ್ಲಿರುವ  ಫಿರ್ಯಾದಿ ಶ್ರೀಮತಿ ಚಿಕ್ಕಮ್ಮ, ಗಂಡ ಅಣ್ಣಾಜಿರವ್ರ  ಮನೆಗೆ ಆರೋಪಿ ಜಗದೀಶ ಎಂಬಾತನು  ಅಕ್ರಮ ಪ್ರವೇಶ ಮಾಡಿ, " ನನ್ನ ಜಮೀನಿನ ಮೇಲೆ ನಿಮ್ಮ ಕುಟುಂಬದವರು ಬಂದು ಹೋದರೆ ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ" ಎಂದು ಅವಾಚ್ಯ ಶಬ್ಧಗಳಿಂದ ಬೈದು ಅಸಭ್ಯವಾಗಿ ವರ್ತಿಸಿ, ಕೈ ಹಿಡಿದು ಎಳೆದಾಡಿ  ಮಾನಭಂಗಕ್ಕೆ ಪ್ರಯತ್ನಿಸಿರುವ ಬಗ್ಗೆ ಫಿರ್ಯಾದಿಯವರ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಕೊಂಡು ಮುಂದಿನ ತನಿಖೆ ಕೈಗೊಂಡಿರುತ್ತಾರೆ.