Friday, May 31, 2013

ಹಳ್ಳಕ್ಕೆ ಬಿದ್ದ ವಾಹನ, ಅಪಾಯದಿಂದ ಇಬ್ಬರ ಪಾರು:
ರಾತ್ರಿವೇಳೆ  ಚಲಿಸುತ್ತಿದ್ದ ಟೊಯೆಟೋ ಪಾರ್ಚುನರ್‌ ವಾಹನ ರಸ್ತೆಬದಿಯ ಹಳ್ಳಕ್ಕೆ ಬಿದ್ದು ವಾಹನದಲ್ಲಿದ್ದವರು  ಯಾವುದೇ ಅಪಾಯದಿಂದ ಪಾರಾದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಇಬ್ನಿವಳವಾಡಿ ಗ್ರಾಮದಿಂದ ವರದಿಯಾಗಿದೆ.  ನಿನ್ನೆ ದಿನ ರಾತ್ರಿ 10-00 ಗಂಟೆಯ ಸಮಯದಲ್ಲಿ   ಎನ್‌.ಕೆ. ಶಿವಕುಮಾರ್‌ ಎಂಬವರು ಎಪಿ-16-ಬಿಕ್ಯೂ-1899 ರ ಟೊಯೆಟೋ ಪಾರ್ಚುನರ್‌ ವಾಹನದಲ್ಲಿ ಚಾಲಕ ಕಿರಣ್‌ಕುಮಾರ್‌ರವರೊಂದಿಗೆ ಬೆಂಗಳೂರಿನಿಂದ ಮಡಿಕೇರಿ ಕಡೆಗೆ ಬರುತ್ತಿರುವಾಗ ಮಡಿಕೇರಿ ಸಮೀಪದ ಇಬ್ನಿವಳವಾಡಿ ಗ್ರಾಮದ ಸ್ಯಾಂಡಲ್‌ಕಾಡ್‌ ಎಸ್ಟೇಟ್‌ ಹಾಗು ಸಿಂಕೋನ ಎಸ್ಟೇಟ್‌ ತಿರುವಿನಲ್ಲಿ  ಚಾಲಕ ಕಿರಣ್‌ ಕುಮಾರ್‌ರವರು ಕಾರನ್ನು ಅತೀ ವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಆತನ ನಿಯಂತ್ರಣ ತಪ್ಪಿ ಕಾರು ರಸ್ತೆ ಬಲಬದಿಯ ಹಳ್ಳಕ್ಕೆ ಉರುಳಿದ್ದು ವಾಹನದಲ್ಲಿದ್ದ ಶಿವಕುಮಾರ್‌, ಸುಮಂತ್‌ ಮತ್ತು ಚಾಲಕ ಕಿರಣ್‌ಕುಮಾರ್‌ರವರು ವಾಹನದಿಂದ ಕೆಳಗೆ ಹಾರಿ ಯಾವುದೇ ಅಪಾಯದಿಂದ ಪಾರಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.  
ಹಳೇ ದ್ವೇಷದಿಂದ ವ್ಯಕ್ತಿಯ ದಾರಿತಡೆದು ಹಲ್ಲೆ:

ಹಳೇ ದ್ವೇಷವನ್ನಿಟ್ಟುಕೊಂಡು ವ್ಯಕ್ತಿಯ ದಾರಿ ತಡೆದು ಹಲ್ಲೆನಡೆಸಿದ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ  ಮಾಕುಟ್ಟದಿಂದ ವರದಿಯಾಗಿದೆ. ದಿನಾಂಕ 29-05-13ರಂದು  ಸಮಯ 3-30ಪಿ.ಎಂ.ಗೆ ಇರಿಟ್ಟಿಯ ವಾಸಿ ರಾಮಚಂದ್ರನ್‌ ಎಂಬವರು ವಿರಾಜಪೇಟೆ ಕಡೆಯಿಂದ  ಇರಿಟ್ಟಿ ಕಡೆಗೆ ತಮ್ಮ ಸ್ನೇಹಿತರ ವಾಹನದಲ್ಲಿ ಹೋಗುತ್ತಿರುವಾಗ   ಮಾಕುಟ್ಟ ರಸ್ತೆಯ ಬಳಿ  ಮೋರಿಯ ಸಮೀಪ ತಲುಪಿದಾಗ ಹಿಂಭಾಗದಿಂದ ಕಮಾಂಡರ್ ಜೀಪ್ ನಂ. ಕೆಎಲ್.05.8663 ರಲ್ಲಿ  ಶಿಯೋಜ್ ಮತ್ತು ಇತರ 5 ಜನ ಇರಿಟ್ಟಿ ನಿವಾಸಿಗಳು ಬಂದು ರಾಮಚಂದ್ರನ್‌ಯವರ ಕಾರನ್ನು ತಡೆದು ನಿಲ್ಲಿಸಿ, ಅವರನ್ನು ಕಾರಿನಿಂದ ಎಳೆದು ಹಾಕಿ ಶಿಯೋಜ್ ಎಂಬುವವನು  ಕೈಯಿಂದ ಹಾಗೂ ರಾಡಿನಿಂದ ಮುಖಕ್ಕೆ, ತಲೆ ಭಾಗಕ್ಕೆ ಹೊಡೆದಿರುವುದಲ್ಲದೆ,  ಅವನ ಜೊತೆಗಿದ್ದವರೆಲ್ಲರೂ ಸೇರಿ "ಇವನಿಗೆ ಬಾರಿ ಸೊಕ್ಕು, ಅಹಂಕಾರ ಆಡುತ್ತಾನೆ, ಕೊಲ್ಲದೆ ಬಿಡಬಾರದು" ಎಂದು ಹೇಳಿ, ಸೂರಜ್, ವಿಬಿನ್, ವಿಜೇಶ್, ಪ್ರಜೀಶ್ ಹಾಗೂ ಶೈಜೀತ್ ರವರು ಸೇರಿ ಹೊಟ್ಟೆಗೆ, ತಲೆಗೆ, ಮುಖಕ್ಕೆ, ಕೈಯಿಂದ ಗುದ್ದಿ, ಕಾಲಿನಿಂದ ತುಳಿದು ಗಾಯಪಡಿಸಿ ಚಿಕಿತ್ಸೆಗಾಗಿ  ಇರಿಟ್ಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ಜೀವನದಲ್ಲಿ ಜಿಗುಪ್ಸೆಗೊಂಡು ಮಹಿಳೆಯ ಆತ್ಮಹತ್ಯೆ:

ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಂಡಂಗಾಲ ಗ್ರಾಮದ ಮಲಚೀರ ಮೀನಾ ಎಂಬವರ ಲೈನು ಮನೆಯಲ್ಲಿ ನೆಲೆಸಿ ಕೂಲಿ ಕೆಲಸ ಮಾಡಿಕೊಂಡಿದ್ದ 50 ವರ್ಷ ಪ್ರಾಯದ ಕಾಳಿ ಎಂಬ ಮಹಿಳೆ ತನ್ನ ಗಂಡ ಮೃತಪಟ್ಟ  ವಿಚಾರದಲ್ಲಿ ಬೇಸರಗೊಂಡು ಸುಮಾರು 15 ದಿನಗಳ ಹಿಂದೆ ಕಾಣೆಯಾಗಿದ್ದು, ದಿನಾಂಕ 30-5-2013 ರಂದು ಆಕೆಯ ಮೃತದೇಹ  ರುದ್ರಗೊಪ್ಪೆ ಗ್ರಾಮದ ಹೊಳೆಯಲ್ಲಿ  ಪತ್ತೆಯಾಗಿದ್ದು, ಈಕೆ ತನ್ನ ಗಂಡನನ್ನು ಕಳೆದುಕೊಂಡ ಬೇಸರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಮೃತಪಟ್ಟಿರಬಹುದೆಂದು ನಂಬಲಾಗಿದ್ದು, ವಿರಾಜಪೇಟೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಇನಾವೋ ಕಾರಿಗೆ ಲಾರಿ ಡಿಕ್ಕಿ, ಕಾರು ಜಖಂ:


ದಿನಾಂಕ 30-5-2013 ರಂದು ಸಿದ್ದಾಪುರ ಠಾಣಾ ವ್ಯಾಪ್ತಿಯ ಮಾಲ್ದಾರೆ ಗ್ರಾಮದ ವಾಸಿ ಸಮೀರ್‌ ಎಂಬವರು ಸ್ನೇಹಿತನೊಂದಿಗೆ  ತಮ್ಮ ಬಾಪ್ತು ಇನೋವಾ ಕಾರು ನಂ ಕೆಎ-12 ಎನ್ 3502 ರಲ್ಲಿ  ಹೋಗುತ್ತಿರುವಾಗ್ಗೆ    ಸಮಯ 16.30 ಗಂಟೆಗೆ ಸಿದ್ದಾಪುರ ನಗರದ ಮಡಿಕೇರಿ ರಸ್ತೆಯ ಪೆಟ್ರೋಲ್ ಬಂಕ್ ಹತ್ತಿರ ತಲುಪುವಾಗ್ಗೆ  ನೆಲ್ಲಿಹುದಿಕೇರಿ ಕಡೆಯಿಂದ ಸಿದ್ದಾಪುರದ ಕಡೆಗೆ ಒಂದು ಲಾರಿಯನ್ನು ಅದರ ಚಾಲಕ  ಅತೀ ವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು  ಇನೋವಾ ಕಾರಿಗೆ  ಡಿಕ್ಕಿ ಪಡಿಸಿದ ಪರಿಣಾಮ ಕಾರು ಜಖಂಗೊಂಡಿದ್ದು ಸಿದ್ದಾಪುರ ಪೊಲೀಸರು ಸಮೀರ್‌ರವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಮುಂದಿ ಕ್ರಮ ಕೈಗೊಂಡಿರುತ್ತಾರೆ. 

66 ವರ್ಷದ ವೃದ್ಧ ಕಾಣೆ, ಪ್ರಕರಣ ದಾಖಲು:
ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಳ್ಳುಮಾಡು ಗ್ರಾಮದ ಮಾತಂಡ ರಮೇಶ್‌ರವರ ಲೈನು ಮನೆಯಲ್ಲಿ ನೆಲೆಸಿ ಕೂಲಿ ಕೆಲಸ ಮಾಡಿಕೊಂಡಿದ್ದ 66 ವರ್ಷ ಪ್ರಾಯದ ವಯೋವೃದ್ಧ ಎರವರ ಮೊಣ್ಣ ಎಂಬ ವ್ಯಕ್ತಿ ಕಾಣೆಯಾದ ಬಗ್ಗೆ ವರದಿಯಾಗಿದೆ.  ದಿನಾಂಕ 16-5-2013 ರಂದು  ಊಟದ  ವಿಚಾರದಲ್ಲಿ ಜಗಳ ಮಾಡಿ ಕೋಪಗೊಂಡು ಪತ್ನಿಗೆ ತಿಳಿಸದೇ  ಮೊಣ್ಣರವರು ಮನೆ ಬಿಟ್ಟು ಹೋದವರು ಕಾಣೆಯಾಗಿರುತ್ತಾರೆಂದು ತಿಳಿದುಬಂದಿದೆ. ಕಾಣೆಯಾದ ವ್ಯಕ್ತಿಯ ಪತ್ನಿ ನೀಡಿದ ದೂರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.  
ಅಕ್ರಮ ಗಾಂಜಾ ಮಾರಾಟ ಪತ್ತೆ, ವ್ಯಕ್ತಿಯ ಬಂಧನ:
ವಿರಾಜಪೇಟೆ ನಗರ ಪೊಲೀಸರು ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು  ಪತ್ತೆ ಹಚ್ದಿ ಆರೋಪಿಯನ್ನು ಬಂಧಿಸಿರುತ್ತಾರೆ.  ದಿನಾಂಕ 30-5-2013 ರಂದು ವಿರಾಜಪೇಟೆ ನಗರದ ಶಿವಾಸ್‌ ಜಂಕ್ಷನ್‌ ಬಳಿ ಹೆಚ್‌,ಎಂ, ಉದಯ @ ಉಮ್ಮರ್‌ ಎಂಬ ವ್ಯಕ್ತಿ  ಸರಕಾರದ ಪರವಾನಗಿ ಇಲ್ಲದೇ ಅಕ್ರಮವಾಗಿ ಗಾಂಜಾ ಮಾದಕ ಪದಾರ್ಥವನ್ನು ಮಾರಾಟ ಮಡುತ್ತಿದ್ದುದನ್ನು ಶ್ರೀ ಸುರೇಶ್‌ ಬೋಪಣ್ಣ, ಪಿಎಸ್‌ಐ ವಿರಾಜಪೇಟೆ ನಗರ ಠಾಣೆ ಇವರು ಸಿಬ್ಬಂದಿಯವರೊಂದಿಗೆ ಪತ್ತೆಹಚ್ದಿ  ಆರೋಪಿಯನ್ನು ಹಾಗೂ ಆತನಲ್ಲಿದ್ದ 270 ಗ್ರಾಂ 600 ಮಿಲಿ ಗಾಂಜಾ ಮಾದಕ ಪದಾರ್ಥವನ್ನು ವಶಪಡಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Thursday, May 30, 2013

 • ಮೋಟಾರ್‌ ಸೈಕಲ್‌ಗೆ ಮಾರುತಿ ಓಮಿನಿ ಡಿಕ್ಕಿ, ಇಬ್ಬರಿಗೆ ಗಾಯ 
ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಓಮಿನಿ ರಸ್ತೆಬದಿಯ ಕಾಂಪೌಂಡಿ‌ಗೆ ಡಿಕ್ಕಿಯಾಗಿ ಚಲಿಸುತ್ತಿದ್ದ ಮೋಟಾರ್‌ ಸೈಕಲ್‌ಗೆ ಡಿಕ್ಕಿಯಾಗಿ ಇಬ್ಬರಿಗೆ ಗಾಯಗಳಾಧ ಘಟನೆ ನಾಪೋಕ್ಲು ಠಾಣಾ ಸರಹದ್ದಿನ ಚೋನಕೆರೆ-ನಾಪೋಕ್ಲು ಗ್ರಾಮದಿಂದ ವರದಿಯಾಗಿದೆ.  ದಿನಾಂಕ 29-05-13 ರಂದು ಸಮಯ 5-30 ಪಿಎಂಗೆ ಪಿರ್ಯಾದಿ ಗಿರೀಶ್‌ ಹಾಗು ಕಾಳಪ್ಪ ಎಂಬವರು ಪಿರ್ಯಾದಿಗೆ ಸೇರಿದ ಮೋಟಾರ್‌ ಸೈಕಲ್‌ ಕೆಎ-09 ಇಡಿ-3514ರಲ್ಲಿ ಬಲ್ಲಮಾವಟಿ ಕಡೆಯಿಂದ ನಾಪೋಕ್ಲು ಕಡೆ ಬರುತ್ತಿರುವಾಗ್ಗೆ ಚೋನಕೆರೆಯ ಬಳಿ ಮುಂದುಗಡೆಯಿಂದ ಒಂದು ಮಾರುತಿ ಓಮಿನಿ ಸಂಖ್ಯೆ ಕೆಎ 02-ಎಂ-5380ರ ಚಾಲಕ ಸದರಿ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಎದುರುಗಡೆಯಿದ್ದ ಕಲ್ಲುಗೋಡೆಗೆ ಡಿಕ್ಕಿಪಡಿಸಿ ಬಂದು ಫಿರ್ಯಾದಿಯ ಬೈಕ್‌ಗೆ ಡಿಕ್ಕಿಪಡಿಸಿದ ಪರಿಣಾಮ  ಫಿರ್ಯಾದಿ ಗಿರೀಶ್‌ ತಲೆಗೆ, ಎಡಕೈಗೆ, ಎಡ ಕಾಲಿಗೆ, ಹಾಗೂ ಹಿಂಬದಿ ಸವಾರ ಕಾಳಪ್ಪರವರ ತಲೆಗೆ, ಕಾಲಿಗೆ ಗಾಯಗಳಾಗಿದ್ದು, ನಾಪೋಕ್ಲು ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.   
 • ಕ್ಲುಲ್ಲಕ ಕಾರಣಕ್ಕೆ ಮದುವೆ ಸಮಾರಂಭದಲ್ಲಿ ವ್ಯಕ್ತಿಗಳಿಂದ ಹಲ್ಲೆ:
ಮದುವೆ ಸಮಾರಂಭಕ್ಕೆ ಆಮಂತ್ರಣ ನೀಡದ ವಿಚಾರದಲ್ಲಿ ಕೆಲ ವ್ಯಕ್ತಿಗಳು ಸಮಾರಂಭಕ್ಕೆ ಬಂದು ಗಲಾಟೆ ಮಾಡಿ ಕೆಲವು ಜನ್ರ ಮೇಲೆ ಹಲ್ಲೆ ನಡೆಸಿದ ಘಟನೆ ನಾಪೋಕ್ಲು ಠಾಣಾ ಸರಹದ್ದಿನ ಪಾರಾಣೆ ಗ್ರಾಮದಿಂದ ವರದಿಯಾಗಿದೆ.  ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಬಾವಲಿ ಗ್ರಾಮದ ಫಿರ್ಯಾದಿ ಶ್ರೀಮತಿ ಕಮಲ ಎಂಬವರು ಅವರ ಮಗಳ  ಮಧುವೆಯ ಚಪ್ಪರ ಕಾರ್ಯಕ್ರಮವನ್ನು   ಪಾರಾಣೆಯ ಗೌಡ ಸಮಾಜದಲ್ಲಿ ದಿನಾಂಕ; 29-05-13 ರಂದು  ಏರ್ಪಡಿಸಿದ್ದು , ಸದ್ರಿ ಸಮಾರಂಭಕ್ಕೆ ಊರಿನ ಜನರು  ಬಂಧುಮಿತ್ರರು  ಎಲ್ಲಾರಿಗೂ ಆಮಂತ್ರಣ ಪತ್ರವನ್ನು ಕೊಟ್ಟು  ಸಮಾರಂಭವನ್ನು ನಡೆಸಲಾಗುತ್ತಿರುವ ವೇಳೆ  ಮೂಕಂಡ ಬಾಣೆಯ ಕಾಲೋನಿಯ  ನಿವಾಸಿ  ಚಾಮರಾಜ್ ಮತ್ತು ಅವರ ಮಕ್ಕಳಾದ ಕುಮಾರ ಆನಂದ ಸುನಿ  ಎಂಬುವರಿಗೆ  ಮಧುವೆಗೆ ಆಮಂತ್ರಣ ಇಲ್ಲದಿದ್ದರೂ ಸದ್ರಿಯವರುಗಳು ಮಧುವೆಯಲ್ಲಿ ಗಲಾಟೆ ಮಾಡುವ ಉದ್ದೇಶದಿಂದ ವಿನಾಃ ಕಾರಣ ಜಗಳ ತೆಗೆದು ಫಿರ್ಯಾದಿಯ ನೆಂಟರಿಷ್ಟರ ಜೊತೆ ಸೌದೆ ಮತ್ತು ಕುರ್ಚಿಯಿಂದ ಹೊಡೆದಾಡಿ ಮಧುವೆ ಸಮಾರಂಭಕ್ಕೆ ತೊಂದರೆ ಉಂಟುಮಾಡಿದ್ದು ಫಿರ್ಯಾದಿಯವರ ದೂರಿನ ಮೇರೆ ನಾಪೋಕ್ಲು ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ. 
 • ರಾಜಕೀಯ ವಿಚಾರದಲ್ಲಿ ವ್ಯಕ್ತಿಗಳ ಮೇಲೆ ಹಲ್ಲೆನಡೆಸಿ ಕೊಲೆಗೆ ಯತ್ನ:
ಮದುವೆ ಸಮಾರಂಭದಲ್ಲಿ  ರಾಜಕೀಯ ದ್ವೇಷದಿಂದ ಜಗಳ ಮಾಡಿ ಇಬ್ಬರು ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿ ಕೊಲೆಗೆ ಪ್ರಯತ್ನಿಸಿದ ಘಟನೆ ನಾಪೋಕ್ಲು ಠಾಣ ವ್ಯಾಪ್ತಿಯ  ಗೌಡಸಮಾಜದಿಂದ  ವರದಿಯಾಗಿದೆ.  ದಿನಾಂಕ 29/05/2013 ರಂದು ಫಿರ್ಯಾದಿ ಬಾವಲಿಗ್ರಾಮದ ಮೂಕಂಡ ಪೈಸಾರಿಯ ವಾಸಿ ಸಿ,ಕೆ, ಕುಮಾರ ಎಂಬವರು  ಪಾರಣೆ ಗ್ರಾಮದ ಗೌಡ ಸಮಾಜಕ್ಕೆ  ಮದುವೆಗೆ ಹೋಗಿದ್ದು, ಸುಮಾರು 10.30 ಪಿಎಂಗೆ ಊಟಮಾಡುತ್ತಿದ್ದಾಗ ಆರೋಪಿಗಳಾದ  ಕಾದಿರ ಉಮೇಶ, ಪಾರಣೆ ಗ್ರಾಮ, ಅಪ್ಪನೆರವಂಡ ರಾಜೇಶ್, ಯತೀಶ್‌, ರಾಜ, ಕಿರಂದಾಡು ಗ್ರಾಮ, ಬೈಲ್ಕುಮುದೀರ ವಿನು, ಚೋಟೇರ ದರ್ಶನ್‌, ಕೋಣಂಜಗೇರಿ ಮತ್ತು ಮಣಿಕಂಠ ಮೂಕಂಡ ಬಾಣೆ ಇವರುಗಳು ಸೇರಿ ಫಿರ್ಯಾದಿಯ ಬಳಿ ಏಕಾಏಕಿ ಬಂದು ನೀನು ಕಾಂಗ್ರೇಸ್‌‌ಗೆ ಚುನಾವಣೆಯಲ್ಲಿ ಸಪೋರ್ಟ್ ಮಾಡಿದ್ದೀಯ ಎಂದು ಜಗಳ ತೆಗೆದು ಕೈಯಿಂದ ಫಿರ್ಯಾದಿಯ ಮೈಖಕ್ಕೆ ಹೊಡೆದಿದ್ದು ತಮ್ಮ  ಬಳಿಯಿದ್ದ ದೊಣ್ಣಿಯಿಂದ ಕೆನ್ನೆಗೆ ತುಟಿಗೆ ಹೊಡೆದು ಗಾಯಪಡಿಸಿರುತ್ತಾರೆ.  ಹಲ್ಲೆಯನ್ನು ತಡೆಯಲು ಫಿರ್ಯಾದಿಯ ತಮ್ಮ ಮುಂದಾಗಿದ್ದು ಅವನಿಗೂ ಸಹಹಲ್ಲೆ ಮಾಡಿರುವ ಬಗ್ಗೆ ಫಿರ್ಯಾದಿಯ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.   
 • ಮರದಿಂದ ಕಾಲುಜಾರಿ ಬಿದ್ದು ತೀವ್ರ ಗಾಯಗೊಂಡ ವ್ಯಕ್ತಿಯ ಸಾವು:
ಹಲಸಿನ ಹಣ್ಣನ್ನು ಕುಯ್ಯಲು ಮರವೇರಿದ  ವ್ಯಕ್ತಿಯೋರ್ವ ಆಕಸ್ಮಿಕವಾಗಿ ಕಾಲುಜಾರಿ ನೆಲಕ್ಕೆ ಬಿದ್ದು ತೀವ್ರ ಗಾಯಗಳಾಗಿ ಚಿಕಿತ್ಸೆ ವೇಳೆ ಮೃತಪಟ್ಟ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ  ವಾಲ್ನೂರು ಗ್ರಾಮದಿಂದ ವರದಿಯಾಗಿದೆ.  ಪಣಿ ಎರವರ  ಅರ್ಜುನ ಎಂಬವರು  ದಿನಾಂಕ 25.05.2013 ರಂದು ಸಮಯ 17.00 ಗಂಟೆಗೆ   ವಾಲ್ನೂರು ತ್ಯಾಗತ್ತೂರು ಗ್ರಾಮದ ಸಿ.ಎಸ್ ಪೂವಯ್ಯರವರ ಕಾಫಿ ತೋಟದಲ್ಲಿ  ಹಲಸಿನ ಮರದಿಂದ ಹಲಸಿನ  ಹಣ್ಣನ್ನು  ಕುಯ್ಯಲು ಮರವನ್ನು ಹತ್ತಿದಾಗ  ಕಾಲುಚಾರಿ  ಕೆಳಗೆ ಬಿದ್ದು ಕುತ್ತಿಗೆಯ ಹಿಂಭಾಗ  ಬೆನ್ನಿಗೆ  ತೀರ್ವ ಪೆಟ್ಟಾಗಿ  ಚಿಕಿತ್ಸೆಯ ಬಗ್ಗೆ ಮಡಿಕೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಪಡಿಸಿ  ನಂತರ ಹೆಚ್ಚಿನ  ಚಿಕಿತ್ಸೆಯ ಬಗ್ಗೆ  ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಗೆ ದಾಖಲು ಪಡಿಸಿ ಚಿಕಿತ್ಸೆ ಫಲಕಾರಿಯಾಗದೇ   ಈ ದಿನ ಬೆಳಿಗ್ಗೆ  08.00 ಗಂಟೆಗೆ  ಕೆ.ಎಂ.ಸಿ ಆಸ್ಪತ್ರೆ ಮಂಗಳೂರಿನಲ್ಲಿ ಮೃತ ಪಟ್ಟಿದ್ದು  ಮೃತ ವ್ಯಕ್ತಿಯ ಅಣ್ಣ ಅಯ್ಯಪ್ಪರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಮೊಕದ್ದಮೆ ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.
 • ಮಹಿಳೆಯ ದಾರಿತಡೆದು ಅವಾಚ್ಯಶಬ್ದಗಳಿಂದ ನಿಂದಿಸಿ ಹಲ್ಲೆ:
ಮಹಿಳೆಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ತಡೆದು ಅವಾಚ್ಯವಾಗಿ ಬೈದು ಹಲ್ಲೆನಡೆಸಿದ ಬಗ್ಗೆ ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ 7ನೇ ಹೊಸಕೋಟೆ ಗ್ರಾಮದಿಂದ ವರದಿಯಾಗಿದೆ.  ದಿನಾಂಕ 29-5-2013 ರಂದು ಫಿರ್ಯಾದಿ ಶ್ರೀಮತಿ ಕೆ.ಆರ್‌. ಮಂಜುಳಾ ಎಂಬವರು ತಮ್ಮ ಮನೆಯ ಹತ್ತಿರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯದಲ್ಲಿ  ಆರೋಪಿಗಳಾದ ನಂದ, ನವೀನ್‌, ರವಿ, ಸುಧೀರ್‌, ಪೂರ್ಣಿಮ ಹಾಗೂ ಸರ್ವಮ್ಮ ಎಂಬವರು ಏಕಾಎಕಿ ಫಿರ್ಯಾದಿಯ ದಾರಿ ತಡೆದು ವಾಹನ ತೊಳೆಯುವ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದು, ಸುಂಟಿಕೊಪ್ಪ ಪೊಲೀಸರು ಮೊಕದ್ದಮೆಯನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
 • ಕೌಟುಂಬಿಕ ಜಗಳ ಅಳಿಯನಿಂದ ಅತ್ತೆಯ ಮೇಲೆ ಕತ್ತಿಯಿಂದ ಹಲ್ಲೆ: 
ಕುಟ್ಟ ಪೊಲೀಸ್‌ ಠಾಣ ವ್ಯಾಪ್ತಿಯ ನಾಲ್ಕೇರಿ ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ  ಸುಮತಿರವರು ದಿನಾಂಕ 29-5-2013 ರಂದು  ಸಂಜೆ 8-45 ಗಂಟೆಗೆ ಮನೆಯಲ್ಲಿರುವಾಗ್ಗೆ ಆರೋಪಿ ಫಿರ್ಯಾದಿಯ ಅಳಿಯ  ಕೊಟ್ಟ್ರೇರಿ ನಿಡುಗಂಬ ಗ್ರಾಮದ ವಾಸಿ ಮಂಜು ಎಂಬಾತನು  ಬಂದು ತನ್ನ ಹೆಂಡತಿಯನ್ನು ಕಳುಹಿಸಿಕೊಡುವ ವಿಚಾರದಲ್ಲಿ ಜಗಳವಾಡಿ ಕೈಯಲ್ಲಿದ್ದ ಕತ್ತಿಯಿಂದ ಫಿರ್ಯಾದಿಯ ಬಲ ತೋಳಿಗೆ ಕಡಿದು ಗಾಯಪಡಿಸಿದ್ದು, ಫಿರ್ಯಾದಿಯ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 • ·        ಸಾಲದ ಹೊರೆಯಿಂದ ಬೇಸತ್ತು ವ್ಯಕ್ತಿಯ ಆತ್ಮಹತ್ಯೆ: 
ವ್ಯಕ್ತಿಯೋರ್ವ ನಾನಾಕಡೆಯಿಂದ ಸಾಲಪಡೆದು ಮರುಪಾವತಿಸಲು ಸಾದ್ಯವಾದದೇ ಜೀವನದಲ್ಲಿ ಜಿಗುಪ್ಸೆಗೊಂಡು  ವಿಷಪದಾರ್ಥ ಸೇವಿಸಿ ಆತ್ಮಹತ್ಯೆಮಾಡಿಕೊಂಡ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ನೆಲ್ಲಿಹುದಿಕೇರಿ ಗ್ರಾಮದಿಂದ ವರದಿಯಾಗಿದೆ. ನೆಲ್ಲಿಹುದಿಕೇರಿ ಗ್ರಾಮದ ನಿವಾಸಿಯಾದ ಶ್ರೀಮತಿ ಸುಚಿತ್ರರವರ ಗಂಡ ಪ್ರಕಾಶ್‌ ಎಂಬಾತ ವಿಪರೀತ ಸಾಲವನ್ನು ಮಾಡಿದ್ದು ಸದರಿ ಸಾಲವನ್ನು ಮರು ಪಾವತಿಸಲು ಸಾದ್ಯವಾಗದೇ ಇದ್ದುದರಿಂದ ದಿನಾಂಕ 28.05.2013 ರಂದು ಕೆಲಸಕ್ಕೆಂದು ಹೊರಟು ಹೋಗಿ   ಮಧ್ಯಾಹ್ನ   ಸಮಯ 12.00 ಗಂಟೆಗೆ ಮನೆಗೆ  ಬಂದು ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥಗೊಂಡಿದ್ದು ಅವ್ರ ಪತ್ನಿ ಶ್ರೀಮತಿ ಸುಚಿತ್ರರವರು ಚಿಕಿತ್ಸೆಯ ಬಗ್ಗೆ  ಸಿದ್ದಾಪುರ  ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ನಂತರ ಮಡಿಕೇರಿ ಸರಕಾರಿ ಆಸ್ಪತ್ದೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಮೈಸೂರಿಗೆ ಕರೆದುಕೊಂಡು ಹೋಗುವಂತೆ ವೈದ್ಯರು ತಿಳಿಸಿದ ಮೇರೆಗೆ ಪ್ರಕಾಶರವರನ್ನು ಮೈಸೂರಿನ ಕಾಮಾಕ್ಷಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 29.05.2013 ರಂದು ಸಮಯ 19.45 ಗಂಟೆಗೆ  ಮೃತ ಪಟ್ಟಿದ್ದು, ಸಿದ್ದಾಪುರ ಪೊಲೀಸರು ಮುಂದಿನ ಕ್ರಮ ಜರುಗಿಸಿರುತ್ತಾರೆ.

Wednesday, May 29, 2013

 • ಕ್ಷುಲ್ಲಕ ಕಾರಣಕ್ಕೆ ಪತಿಯಿಂದ ಪತ್ನಿಯ ಮೇಲೆ ಹಲ್ಲೆ:
ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ವ್ಯಕ್ತಿಯೋರ್ವ ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿ ಕೊಲೆಮಾಡುವುದಾಗಿ ಬೆದರಿಕೆ ಹಾಕಿರುವ ಘಟನೆ ಕುಶಾಲನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಮಾದಾಪಟ್ನ ಗ್ರಾಮದಿಂದ ವರದಿಯಾಗಿದೆ.  ದಿನಾಂಕ 28-5-2013 ರಂದು ಪಿರ್ಯಾದಿ ಶ್ರೀಮತಿ ದೇವಕ್ಕಿ ರವರ ಗಂಡ ಸುಬ್ರಮಣಿ ಎಂಬವರು ಪ್ರತಿನಿತ್ಯ ಮದ್ಯಪಾನ ಮಾಡಿ ಮನೆಗೆ ಬಂದು ಗಲಾಟೆ ಮಾಡುತ್ತಿದ್ದುದಿನಾಂಕ 28/5/2013 ರಂದು ಸಮಯ 9 ಪಿ.ಎಂ.ಗೆ ಎಂದಿನಂತೆ ಕುಡಿದು ಬಂದು ಮನೆಯ ಒಳಗೆ ಮೂತ್ರ ವಿಸರ್ಜನೆ ಮಾಡುತ್ತಿದ್ದ ಬಗ್ಗೆ  ಪಿರ್ಯಾದಿಯವರು ಆಕ್ಷೇಪಣೆ ಮಾಡಿದಕ್ಕೆ ಆರೋಪಿ ಸುಬ್ರಮಣಿಯು ಪಿರ್ಯಾದಿಯವರ ಕೆನ್ನೆಗೆ ಕೈಯಿಂದ ಹೊಡೆದು, ಅವಾಚ್ಯ ಶಬ್ದಗಳಿಂದ ಬೈದು ನಂತರ ಮನೆಯೊಳಗೆ ಇದ್ದ ಮಜ್ಜಿಗೆ ಕಡೆಯುವ ದೊಣ್ಣೆಯಿಂದ ಹೊಡೆದು ಕೊಲೆ ಬೆದರಿಕೆ ಹಾಕಿದ್ದು  ಫಿರ್ಯಾದಿಯವರ ದೂರಿನ ಮೇರೆ ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
 • ಬೆಂಗಳೂರಿನಿಂದ ಪ್ರವಾಸಕ್ಕೆಂದು ಬಂದ ಕಾರಿಗೆ ಬೈಕ್‌ ಡಿಕ್ಕಿ, ಇಬ್ಬರಿಗೆ ಗಾಯ:
ಪಿರ್ಯಾದಿ ಮಹೇಶ್‌ ಕುಮಾರ್‌, ಕೆಂಗೇರಿ, ಬೆಂಗಳೂರು ಇವ್ರು ತಮ್ಮ ಬಾಪ್ತು ಕಾರು ಸಂಖ್ಯೆ ಕೆಎ-05-ಸಿ-9250 ರಲ್ಲಿ ಪ್ರವಾಸಕ್ಕೆಂದು ತಲಕಾವೇರಿಗೆ ಈ ದಿನ ದಿನಾಂಕ 28-05-2013 ರಂದು ಹೋಗಿ ನಂತರ ತಲಕಾವೇರಿಯಿಂದ ಮಡಿಕೇರಿಗೆ ಬರುತ್ತಿರುವಾಗ್ಗೆ ಸಮಯ ಸುಮಾರು 5-00 ಪಿ.ಎಂ.ಗೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಟ್ಟಗೇರಿ ತಲುಪುವಾಗ್ಗೆ ಸಾರ್ವಜನಿಕ ಥಾರು ರಸ್ತೆಯಲ್ಲಿ ಎದುರುಗಡೆಯಿಂದ ಮಡಿಕೇರಿ ಕಡೆಯಿಂದ ಬರುತ್ತಿದ್ದ ಕೆಎ-12-ಜೆ-863 ರ ಮೋಟಾರು ಸೈಕಲನ್ನು ಅದರ ಸವಾರ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಮೋಟಾರು ಸೈಕಲ್ ಸವಾರ ಹಾಗೂ ಮೋಟಾರು ಸೈಕಲಿನ ಹಿಂದುಗಡೆ ಕುಳಿತ್ತಿದ್ದ ಇನ್ನೊಬ್ಬ ಕೆಳಗೆ ಬಿದ್ದು ಗಾಯಗೊಂಡಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.
 • ಮನುಷ್ಯ ಕಾಣೆ, ಪ್ರಕರಣ ದಾಖಲು:
ನಾಲ್ಕುಮಂದಿ ಮಕ್ಕಳ ತಂದೆಯೋರ್ವ  ನೆರೆಮನೆ ಯುವತಿಯೊಂದಿಗೆ  ನಾಪತ್ತೆಯಾದ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ವಾಲ್ನೂರು ತ್ಯಾಗತ್ತೂರು ಗ್ರಾಮದಿಂದ ವರದಿಯಾಗಿದೆ.  ವಾಲ್ನೂರು-ತ್ಯಾಗತ್ತೂರು ಗ್ರಾಮದಲ್ಲಿ ವಾಸವಾಗಿದ್ದ ಮುಸ್ತಾಫ ಎಂಬಾತನು ಹೊಸಕೋಟೆ ಗ್ರಾಮದ ಉಮೈಬಾಳನ್ನು ಮದುವೆಯಾಗಿ ನಾಲ್ಕು ಮಕ್ಕಳಿದ್ದುಪಕ್ಕದ ಮನೆಯ ವಾಸಿ  ಮೊಹಿದ್ದೀನ್‌ ಕುಟ್ಟಿ ಎಂಬವರ ಮಗಳಾದ 18 ವರ್ಷ ಪ್ರಾಯದ ಮುಸೀರಾಳೊಂದಿಗೆ ಸಂಬಂಧವನ್ನಿಟ್ಟುಕೊಂಡಿದ್ದು ದಿನಾಂಕ 2-5-2013 ರಂದು ಆಕೆಯೊಂದಿಗೆ ನಾಪತ್ತೆಯಾಗಿದ್ದುಕಾಣೆಯಾದ ವ್ಯಕ್ತಿಯ ತಂದೆ ಪಿ.ಕೆ. ಎರ್ಮುರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. ಕಾಣೆಯಾದ ವ್ಯಕ್ತಿಯ ಬಾವಚಿತ್ರ ಈಕೆಳಗಿನಂತಿದ್ದು, ಎಲ್ಲಿಯಾದರು ಪತ್ತೆಯಾದಲ್ಲಿ ಕೆಳಗಿನ ದೂರವಾಣಿ ಮೂಲಕ ಮಾಹಿತಿ ನೀಡಲು ಕೋರಿದೆ.     
           ಕಾಣಿಯಾದ ವ್ಯಕ್ತಿ ಯ ಹೆಸರು : ಮುಸ್ತಾಫ,
           ಪ್ರಾಯ  : 30 ವರ್ಷ,
          ದೂರವಾಣಿ ಸಂಖ್ಯೆಗಳು:
        08274-258333- ಪಿಎಸ್‌ಐ ಸಿದ್ದಾಪುರ  
        08272-229149 ಸಿಪಿಐ, ಮಡಿಕೇರಿ
        08272-228725 ಡಿ.ಎಸ್‌.ಪಿ. ಮಡಿಕೇರಿ
        08272-229000- ಎಸ್‌ಪಿ ಕೊಡಗು.

 • ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚಿಸಿ ವ್ಯಕ್ತಿಗೆ ಜೀವ ಬೆದರಿಕೆ:
ವ್ಯಕ್ತಿಯೊಬ್ಬ ಪೊಲೀಸ್‌ ಕೆಲಸ ಕೊಡಿಸುವುದಾಗಿ ಹಣ ಪಡೆದುಕೊಂಡು ವಂಚಿಸಿ ನೀಡಿದ ಹಣವನ್ನು ಕೇಳಲು ಹೋದವರಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣ ಕುಶಾಲನಗರ ಠಾಣಾ ಸರಹದ್ದಿನ ಹೆಬ್ಬಾಲೆ ಗ್ರಾಮದಿಂದ ವರದಿಯಾಗಿದೆ.  ಸುಮಾರು ಮೂರು ವರ್ಷಗಳ ಹಿಂದೆ ಆರೋಪಿ ರಮೇಶ ಎಂಬಾತ ಫಿರ್ಯಾದಿ ಟಿ.ಆರ್‌. ನಾಗರಾಜುರವರ ಮಗ ಎ.ಎನ್‌. ಪ್ರಸನ್ನನಿಗೆ ಪೊಲೀಸ್‌ ಕೆಲಸ ಕೊಡಿಸುವುದಾಗಿ   ಫಿರ್ಯಾದಿಯವರಿಂದ ಒಟ್ಟು 2,50,000/- ರೂ ಗಳನ್ನು ಕೇಳಿದ್ದು, ಫಿರ್ಯಾದಿಯವರು 1, 85,000/- ಹಣವನ್ನು ಮೂರು ಕಂತುಗಳಲ್ಲಿ ನೀಡಿದ್ದು, ಉಳಿದ ಹಣ 65,000/- ವನ್ನು ಕೆಲಸಕ್ಕೆ ಸೇರಿದ ನಂತರ ಕೊಡುವುದಾಗಿ ಮಾತುಕತೆ ನಡೆದಿದ್ದು, ಮೂರು ವರ್ಷ ಕಳೆದರೂ ಮಗನಿಗೆ ಕೆಲಸ ಸಿಗದಿದ್ದರಿಂದ ಫಿರ್ಯಾದಿಯವರು ಹಣವನ್ನು ವಾಪಾಸು ನೀಡುವಂತೆ ಕೇಳಲು ಹೋದಾಗ  ರಮೇಶ, ಶಶಿಧರ, ಸೋಮಣ್ಣ, ರಮೇಶನ ಹೆಂಡತಿ ಹಾಗೂ ರಮೇಶನ ತಾಯಿಯವರು ಈ ವಿಷಯವನ್ನು ಯಾರಿಗಾದರೂ ಹೇಳಿದ ಪಕ್ಷದಲ್ಲಿ ಮತ್ತು ಹಣ ಕೇಳಲು ಮನೆ ಬಳಿ ಬಂದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವುದಲ್ಲದೆ ಅವಾಚ್ಯ ಶಬ್ಧಗಳಿಂದ ಬೈದಿರುತ್ತಾರೆ. ಆದ್ದರಿಂದ ಹಣ ಪಡೆದು ಮೋಸ ಮಾಡಿ ಕೇಳಲು ಹೋದ ಫಿರ್ಯಾದಿ ಮತ್ತು ಅವರ ಸ್ನೇಹಿತರಿಗೆ ಅವಾಚ್ಯ ಶಬ್ಧಗಳಿಂದ ಬೈದು ಕೊಲೆ ಬೆದರಿಕೆ ಹಾಕಿದ ವಿಚಾರದಲ್ಲಿ ಫಿರ್ಯಾದಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Tuesday, May 28, 2013

ಕ್ಷುಲ್ಲಕ ವಿಚಾರಕ್ಕೆ ಕತ್ತಿಯಿಂದ ಕಡಿದು ಹಲ್ಲೆ 
       ಕ್ಷುಲ್ಲಕ ವಿಚಾರಕ್ಕೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿರುವ ಘಟನೆ ಕೊಡ್ಲಿಪೇಟೆಯ ಕಲ್ಲುಕೋರೆ ಎಂಬಲ್ಲಿ ನಡೆದಿದೆ. ದಿನಾಂಕ
27-05-2013 ರಂದು ಕೊಡ್ಲಿಪೇಟೆಯ ಕಲ್ಲುಕೋರೆ ನಿವಾಸಿ ಮಹಮದ್ ರಫೀಕ್ ಎಂಬವರು ತಮ್ಮ ತಾಯಿಯವರೊಂದಿಗೆ ಮಾತನಾಡಿಕೊಂಡಿರುವಾಗ  ಅಲ್ಲಿಗೆ ಬಂದ ಆರೋಪಿಗಳಾದ ಆದಂ ಹಾಗೂ ಆರಿಫ್ ಎಂಬವರು ಮಹಮದ್ ರಫೀಕ್‌ರವರೊಂದಿಗೆ ಜಗಳ ತೆಗೆದು ತಮ್ಮ ಕೈಯಲ್ಲಿದ್ದ ಕತ್ತಿಯಿಂದ ಮಹಮದ್ ರಫೀಕ್‌ರವರಿಗೆ ಕಡಿದು ಗಾಯಗೊಳಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ  ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಲ್ಲಿನಿಂದ ಹೊಡೆದು ಹಲ್ಲೆ 
       ಆಟೋ ರಿಕ್ಷಾದಲ್ಇಲ ಪ್ರಯಾಣಿಕರನ್ನು ಸಾಗಿಸುವ ವಿಚಾರದಲ್ಲಿ ಜಗಳವಾಡಿ ವ್ಯಕ್ತಿಯೊಬ್ಬರಿಗೆ ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿರುವ ಘಟನೆ ಸಿದ್ದಾಪುರ ನಗರದಲ್ಲಿ ನಡೆದಿದೆ. ದಿನಾಂಕ 27.05.2013 ರಂದು ನೆಲ್ಲಿಹುದಿಕೇರಿಯ ಅಂತೋಣಿ ಪ್ರದೀಪ್ ಎಂಬವರು ಸಿದ್ದಾಪುರ ನಗರದ ಆಟೋ ನಿಲ್ದಾಣದಲ್ಲಿ ತನ್ನ ರಿಕ್ಷಾಕ್ಕೆ ಜನರನ್ನು ಹತ್ತಿಸುತ್ತಿರುವಾಗ್ಗೆ  ಜನರನ್ನು ಹತ್ತಿಸುವ ವಿಷಯದಲ್ಲಿ ಬೇರೆ ಆಟೋ ಚಾಲಕರಾದ ಸಲೀಮ್ ಮತ್ತು ಜಲೀಲ್ ರವರು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ  ಕಲ್ಲಿನಿಂದ ಅಂತೋಣಿ ಪ್ರದೀಪ್‌ರವರ ತಲೆಗೆ ಹೊಡೆದು  ಗಾಯ ಪಡಿಸಿ  ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಕೈಗೊಂಡಿದ್ದಾರೆ. 

ಕಾರು ಡಿಕ್ಕಿ, ಕಾರು ಜಖಂ 
       ಚಾಲಕನ ಅಜಾಗರೂಕತೆಯಿಂದಾಗಿ ಕಾರೊಂದು ರಸ್ತೆ ಬದಿಯ ಮೋರಿಗೆ ಡಿಕ್ಕಿಯಾಗಿ ಜಖಂಗೊಂಡಿರುವ ಘಟನೆ ಬಿಟ್ಟಂಗಾಲ ಗ್ರಾಮದಲ್ಲಿ ನಡೆದಿದೆ. ದಿನಾಂಕ 27-05-2013 ರಂದು ಗೋಣಿಕೊಪ್ಪದ ನಿವಾಸಿ ಎನ್‌.ಎಂ.ಜಕ್ರಿಯಾ ಎಂಬವರು ತಮ್ಮ ಕೆಎ-12-ಎನ್-8893 ರ ಟಯೋಟಾ ಫಾರ್ಚೂನರ್‌ ಕಾರಿನಲ್ಲಿ ಮಡಿಕೇರಿಗೆ ಹೋಗಿ ವಾಪಾಸ್ಸು ಬರುತ್ತಿವಾಗ್ಗೆ ಕಾರನ್ನು ಅವರ ಜೊತೆಗಾರರಾದ ಅಬ್ದುಲ್ ಸಲಾಂರವರು ಚಾಲಿಸುತ್ತಿದ್ದು, ಬಿಟ್ಟಂಗಾಲ ಗ್ರಾಮದ ರಾಕ್ ಲಿಂಕ್ಸ್‌ ಹಾಲೋ ಬ್ರಿಕ್ಸ್‌ ಹತ್ತಿರ  ಕಾರಿನ ಚಾಲಕ ಅಬ್ದುಲ್ ಸಲಾಂ ಕಾರನ್ನು ನಿರ್ಲಕ್ಷ್ಯತನದಿಂದ ಓಡಿಸಿದ ಪರಿಣಾಮ ಕಾರು ರಸ್ತೆಯ ಎಡಬದಿಯಲ್ಲಿದ್ದ ಮೋರಿಗೆ ಡಿಕ್ಕಿಯಾಗಿ ಕಾರಿನ ಮುಂಭಾಗ, ಎಡಭಾಗ ಹಾಗೂ ಹಿಂಭಾಗ ಪೂರ್ಣವಾಗಿ ಜಖಂಗೊಂಡಿದ್ದು, ವಾಹನದಲ್ಲಿದ್ದವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ ಎಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಮಡಿದ್ದಾರೆ. 

ಮದುವೆ ಸಮಾರಂಭಕ್ಕೆ ತೆರಳಿದ ಯುವತಿ ಕಾಣೆ 
       ಮದುವೆ ಸಮಾರಂಭಕ್ಕೆಂದು ಹೋದ ಯುವತಿಯೊಬ್ಬಳು ನಾಪತ್ತೆಯಾದ ಘಟನೆ ಚೇಲಾವರ ಗ್ರಾಮದಲ್ಲಿ ನಡೆದಿದೆ. ದಿನಾಂಕ 26/05/2013ರಂದು ಚೇಲಾವರ ಗ್ರಾಮದ ಕೆ.ಎಂ.ಮೊಣ್ಣಪ್ಪ ಎಂಬವರ ಮಗಳು 19 ವರ್ಷ ಪ್ರಾಯದ ಜೇಖನಾ ಎಂಬವಳು ವಿರಾಜಪೇಟೆಯಲ್ಲಿ ಮದುವೆ ಸಮಾರಂಭಕ್ಕೆಂದು ಹೋಗಿದ್ದು, ಮದುವೆ ಮಂಟಪದಲ್ಲಿ ಅವಳ ಅಕ್ಕ ರೇಷ್ಮಳಿಗೆ ಉಡುಗೊರೆ ತರುವಂತೆ ಹೇಳಿ ಜಳುಹಿಸಿದ್ದು, ಅಕ್ಕ ವಾಪಾಸು ಮದುವೆ ಮಂಟಪಕ್ಕೆ ಬಂದು ನೋಡಿದಾಗ ಯುವತಿ ಜೇಖನಾ ಕಾಣೆಯಾಗಿದ್ದು, ಬಂದು ಮಿತ್ರರ ಮತ್ತು ಪರಿಚಯಸ್ಥರ ಮನೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮನೆಯ ಹಂಚು ತೆಗೆದು ನುಗ್ಗಿ ಮನೆ ಕಳವು 
       ಮನೆಯ ಮಾಡಿನ ಹೆಂಚು ತೆಗೆದು ಮನೆಯೊಳಗೆ ನುಗ್ಗಿ ಕಳವು ಮಾಡಿದ ಪ್ರಕರಣ ಪೊನ್ನಂಪೇಟೆಯಲ್ಲಿ ನಡೆದಿದೆ. ದಿನಾಂಕ 26/05/13 ರಂದು ಪೊನ್ನಂಪೇಟೆ ನಗರದ ಕಾಟ್ರಕೊಲ್ಲಿ ರಸ್ತೆಯಲ್ಲಿರುವ ತೀತಿರ ಸನ್ನು ಎಂಬವರ ಬಾಡಿಗೆ ಮನೆಯಲ್ಲಿ ವಾಸಿವಿರುವ ಎಂ.ಕೆ.ಅಣ್ಣಪ್ಪ ಎಂಬವರು ತಮ್ಮ ಸ್ವಂತ ಊರು ಚನ್ನಯ್ಯನ ಕೋಟೆಯಲ್ಲಿ ಮನೆ ದೇವರ ಪೂಜೆ ಸಂಬಂಧ  ಮನೆಗೆ ಬೀಗವನ್ನು ಹಾಕಿಕೊಂಡು ಹೆಂಡತಿ ಮಕ್ಕಳೊಂದಿಗೆ ಹೋಗಿ ನಂತರ ದಿನಾಂಕ 27/05/2013ರಂದು ಸಂಜೆ ವಾಪಸ್ಸು ಪೊನ್ನಂಪೇಟೆಯ ಮನೆಗೆ ಬಂದು ಬೀಗವನ್ನು ತೆಗೆದು ನೋಡಿದಾಗ ಮನೆಯ ಒಳಗೆ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು. ಅಡುಗೆ ಮನೆಯ ಹಂಚನ್ನು ತೆಗೆದಿರುವುದು ಕಂಡು ಬಂತು. ಮತ್ತು ಗ್ರಾಡ್ರೇಜ್ ನಲ್ಲಿ ಮಗಳ ವಿದ್ಯಾಭ್ಯಾಸಕ್ಕೆ ಇಟ್ಟಿದ್ದ ಹಣ ರೂ 15,000/- ವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಎಂದು ನೀಡಿದ ದುರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.