Sunday, June 30, 2013

ಪರಸ್ಪರ ಹಲ್ಲೆ ಪ್ರತ್ಯೇಕ ಪ್ರಕರಣ ದಾಖಲು

               ಔಷಧಿ ಅಂಗಡಿಯೊಂದಕ್ಕೆ ವ್ಯಕ್ತಿಯೊಬ್ಬ ಅಕ್ರಮವಾಗಿ ಪ್ರವೇಶಿಸಿ ಔಷಧಿಗಳಿಗೆ ಹಾನಿಯುಂಟು ಮಾಡಿದ ಘಟನೆ ಕುಶಾಲನಗರ ಪಟ್ಟಣದಲ್ಲಿ ನಡೆದಿದೆ. ದಿನಾಂಕ 30-06-2013 ರಂದು ಬೆಳಿಗ್ಗೆ 09.15 ಗಂಟೆಗೆ ಕುಶಾಲನಗರ ಸರ್ಕಾರಿ ಆಸ್ಪತ್ರೆ ಮುಂಭಾಗವಿರುವ ಶರೀಫ್ ಇಬ್ರಾಹಿಂ ಎಂಬವರ  ಮೆಡಿಕಲ್ ಶಾಪ್‌ಗೆ ಮಹೇಶ ಎಂಬುವರು ಅಕ್ರಮ ಪ್ರವೇಶ ಮಾಡಿ, ಮೆಡಿಕಲ್‌ ಶಾಪ್‌ನ ಒಳಗೆ ಇದ್ದ ಔಷಧಿಗಳನ್ನು ತೆಗೆದು ಹೊರಕ್ಕೆ ಎಸೆದು, ಶಾಪ್‌ನ ಗ್ಲಾಸ್‌‌ಗಳನ್ನು ಕೈಯಿಂದ ಒಡೆದು, ಗ್ಲಾಸಿನ ಚೂರಿನಿಂದ ಫಿರ್ಯಾದಿಯವರ ಬಲಕೈ ಕಿರುಬೆರಳಿಗೆ ಚುಚ್ಚಿ ಗಾಯಪಡಿಸಿದ್ದು, ಸುಮಾರು 3 ಲಕ್ಷ ರೂಗಳು ನಷ್ಟಪಡಿಸಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದು,  ಇದೇ ಘಟನೆಗೆ ಸಂಬಂಧಿಸಿದಂತೆ ಶರೀಫ್ ಮತ್ತು ಇತರರು ತನ್ನ ಮೇಲೆ ಹಲ್ಲೆ ಮಾಡಿರುವುದಾಗಿ ಕುಶಾಲನಗರದ 4ನೇ ಬ್ಲಾಕ್ ನಿವಾಸಿ ವಿ.ಎನ್.ಮಹೇಶ್‌ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಎರಡೂ ಕಡೆಯವರ ದೂರಿನ ಮೇರೆಗೆ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಕಾಣೆ ಪ್ರಕರಣ ದಾಖಲು 
            ವ್ಯಕ್ತಿಯೊಬ್ಬರು ಬೆಳಗಿನ ವಾಕಿಂಗ್‌ಗೆಂದು ಹೋಗಿ ವಾಪಾಸು ಬಾರದೆ ಕಾಣೆಯಾದ ಪ್ರಕರಣ ಮಡಿಕೇರಿ ಸಮೀಪದ ಇಬ್ನಿವಳವಾಡಿ ಗ್ರಾಮದಲ್ಲಿ ನಡೆದಿದೆ. ಇಬ್ನಿವಳವಾಡಿ ಗ್ರಾಮದ ಅಂಜಪರವಂಡ ಚಂಪಾಕ್ಷಿ ಎಂಬವರ ಪತಿ 50 ವರ್ಷ ಪ್ರಾಯದ ಗಣೇಶ ಎಂಬವರು ದಿನಾಂಕ 27-06-2013 ರಂದು  ಬೆಳಿಗ್ಗೆ 08-00 ಗಂಟೆಗೆ ವಾಕಿಂಗ್ ಹೋಗಿ ಬರುತ್ತೇನೆಂದು ಹೇಳಿ ಹೋದವರು ಮದ್ಯಾಹ್ನವಾದರೂ ವಾಪಾಸ್ಸು ಮನೆಗೆ ಬಾರದೇ ಇದ್ದು ನಂತರ ಸಮಯ 1-45 ಗಂಟೆಗೆ ಮೊಬೈಲ್‌ಗೆ ಫೊನ್ ಮಾಡಿ ಸ್ವಲ್ಪ ತಡವಾಗಿ ಬರುತ್ತೇನೆಂದು ತಿಳಿಸಿದ್ದು  ರಾತ್ರಿಯಾದರೂ ಮನೆಗೆ ಬಂದಿರುವುದಿಲ್ಲ. ನಂತರ ದಿನಾಂಕ 29/06/2013ರಂದು  ಬೆಳಿಗ್ಗೆ ಚಂಪಾಕ್ಷಿಯವರ ಹೆಸರಿಗೆ ಒಂದು ಅಂಚೆ ಪತ್ರ ಬಂದಿದ್ದು ಅದನ್ನು ಒಡೆದು ನೋಡಿದಾಗ ಆ ಪತ್ರ ಗಂಡ ಗಣೇಶರವರು ಬರೆದಿದ್ದು ಅವರ ಮನಸ್ಸಿಗೆ ಬೇಸರ ಆದ ಕಾರಣ ತಾನು ಕುಶಾಲನಗರದಲ್ಲಿ ಹೊಳೆಗೆ ಬಿದ್ದಿರುತ್ತೇನೆಂದು ಬರೆದಿರುತ್ತಾರೆ. ಎಂಬುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಕಾಣೆಯಾದ ವ್ಯಕ್ತಿಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.  
 

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ
         14 ವರ್ಷ ಪ್ರಾಯದ ಅಪ್ರಾಪ್ತ ಬಾಲಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ ಘಟನೆ ಮೂರ್ನಾಡು ಸಮೀಪದ ಐಕೊಳ ಗ್ರಾಮದಲ್ಲಿ ನಡೆದಿದೆ. ದಿನಾಂಕ 28/06/2013ರಂದು ಐಕೊಳ ಗ್ರಾಮದ ಮುಕ್ಕಾಟಿರ ರಾಬಿನ್ ಎಂಬವರ ಲೈನ್ ಮನೆಯಲ್ಲಿ ವಾಸವಿರುವ ಜೇನುಕುರುಬರ ಲಕ್ಷ್ಮಿ ಎಂಬಾಕೆಯ ಮಗಳು 14 ವರ್ಷ ಪ್ರಾಯದ ಗೀತಾ ಎಂಬವಳು ಲಕ್ಷ್ಮಿಯ ತಮ್ಮ ಗೋಪಾಲ ಮನೆಗೆ ಬಂದಿದ್ದ ಕಾರಣ ಶಾಲೆಗೆ ಹೋಗದೆ ಮನೆಯ ಹೊರಗೆ ಆಟವಾಡಿಕೊಂಡಿದ್ದು, ಮನೆಯಲ್ಲಿ ಲಕ್ಷ್ಮಿ ಹಾಗೂ ಆಕೆಯ ತಮ್ಮ ಗೋಪಾಲ ಮಾತನಾಡಿಕೊಂಡಿರುವಾಗ ಪಕ್ಕದ ಮನೆಯ ರಮೇಶ ಎಂಬಾತನ ಲೈನ್ ಮನೆಯಿಂದ ಗೀತಾ ಕಿರುಚಿಕೊಂಡ ಶಬ್ದ ಕೇಳಿಬಂದಿದ್ದು, ಗೋಪಾಲ ಹಾಗೂ ಲಕ್ಷ್ಮಿ ರಮೇಶನ ಮನೆಗೆ ಹೋದಾಗ ಬಾಗಿಲು ಹಾಕಿದ್ದು ಬಾಗಿಲನ್ನು ತಟ್ಟಿದಾಗ ಸ್ವಲ್ಪ ಹೊತ್ತಿನ ಬಳಿಕ ಬಾಗಿಲು ತೆರೆದ ರಮೇಶನು ಇಲ್ಲಿ ನಡೆದ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದು, ನಂತರ ಗೀತಾಲನ್ನು ಮನೆಗೆ ಕರೆದುಕೊಂಡು ಬಂದು ವಿಚಾರಿಸಿದಾಗ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿಯನ್ನು ರಮೇಶನು ತನ್ನ ಮನೆಗೆ ಎತ್ತಿಕೊಂಡು ಹೋಗಿ ಮನೆಯೊಳಗೆ ಅತ್ಯಾಚಾರ ಮಾಡಿರುವುದು ತಿಳಿದು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬುದ್ದಿ ಮಾಂದ್ಯ ಯುವತಿಯ ಮೇಲೆ ಅತ್ಯಾಚಾರ, ಆರೋಪಿಯ ಬಂಧನ
            ಬುದ್ದಿ ಮಾಂದ್ಯ ಯುವತಿಯ ಮೇಲೆ ಅತ್ಯಾಚಾರ ನಡೆಸಿ ಆಕೆ ಗರ್ಭಿಣಿಯಾಗಲು ಕಾರಣನಾದ ಯುವಕನನ್ನು ಬಂಧಿಸಿರುವ ಘಟನೆ ಭಾಗಮಂಡಲದ ಕೋರಂಗಾಲ ಎಂಬಲ್ಲಿ ನಡೆದಿದೆ. ಕೋರಂಗಾಲ ಗ್ರಾಮದ ನಿವಾಸಿ ಮೀನಾಕ್ಷಿ ಎಂಬವರು ತಮ್ಮ ಬುದ್ದಿಮಾಂದ್ಯ ಮಗಳು ಪವಿತ್ರ ಹಾಗೂ ಮಗ ಹರ್ಷಿತ್‌ನೊಂದಿಗೆ ವಾಸಿಸುತ್ತಿದ್ದು ಅವರು ಭಾಗಮಂಡಲದ ಲಕ್ಕಿ ಸ್ಟಾರ್ ಹೋಟೆಲ್‌ನಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವುದಾಗಿದೆ. ಇತ್ತೀಚೆಗೆ ಮೀನಾಕ್ಷಿರವರು ಕೆಲಸ ಮುಗಿಸಿ ಮನೆಗೆ ಬರುವಾಗ ಆಕೆಯ ಮೈದುನ ಸಂಬಂಧಿ ಪೊನ್ನಪ್ಪ ಎಂಬವರ ಮಗ ಗುರುರಾಜ್ ಯಾನೆ ಕುಂಞಿ ಎಂಬಾತನು ಮನೆಯಿಂದ ಹೋಗುತ್ತಿದ್ದುದನ್ನು ಕಂಡಿದ್ದು ಮನೆಗೆ ಹೋದಾಗ ಮಗಳು ಮೀನಾಕ್ಷಿ ಹೊಟ್ಟೆಯನ್ನು ಹಿಡಿದುಕೊಂಡು ಕುಂಞಿ ಎಂಬುದಾಗಿ ಕನವರಿಸುತ್ತಾ ಅಳುತ್ತಿದ್ದುದನ್ನು ಕಂಡು ಸಂಶಯಗೊಂಡು ಭಾಗಮಂಡಲ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಆಕೆಯು 7 ತಿಂಗಳ ಗರ್ಭಿಣಿಯಾಗಿರುವುದು ತಿಳಿದಿದ್ದು, ಮೀನಾಕ್ಷಿರವರು ಕೆಲಸಕ್ಕೆ ಹೋದ ಸಮಯದಲ್ಲಿ ಗುರುರಾಜನು ತನ್ನ ಮಗಳು ಪವಿತ್ರಳ ಮೇಲೆ ಅತ್ಯಾಚಾರ ಮಾಡಿರಬಹುದಾಗಿ ಮೀನಾಕ್ಷಿರವರು ನೀಡಿದ ದೂರಿನ ಮೇರೆಗೆ ಭಾಗಮಂಡಲ ಠಾಣಾಧಿಕಾರಿ ಅಯ್ಯನಗೌಡರವರು ಮೊಕದ್ದಮೆ ದಾಖಲಿಸಿ ಆರೋಪಿ ಗುರುರಾಜನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ನೇಣು ಬಿಗಿದುಕೊಂಡು ಯುವತಿಯ ಆತ್ಮಹತ್ಯೆ
           ಯುವತಿಯೊಬ್ಬಳು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆಯ ಬಿಟ್ಟಂಗಾಲ ಗ್ರಾಮದ ಪೆಗ್ಗೆರೆ ಕಾಡು ಪೈಸಾರಿಯಲ್ಲಿ ನಡೆದಿದೆ. ಪೆಗ್ಗೆರೆಕಾಡು ಪೈಸಾರಿ ನಿವಾಸಿ ಪ್ರೇಮಾ ಎಂಬಾಕೆಯ ಮಗಳು 21 ವರ್ಷ ಪ್ರಾಯದ ಪ್ರಿಯಾ ಎಂಬಾಕೆಯು ವಿರಾಜಪೇಟೆ ನಗರದ ಮಾರ್ಜಿನ್‌ ಫ್ರೀ ಮಳಿಗೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಸುಮಾರು 2 ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಕೂಡಿದ್ದು ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದ ಕಾರಣ ತಾನು ಬದುಕಿದ್ದರೂ ಪ್ರಯೋಜನವಿಲ್ಲವೆಂದು ಹೇಳುತ್ತಿದ್ದು, ದಿನಾಂಕ 29/06/2013ರಂದು ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಮಧ್ಯ ಕೋಣೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆಯ ತಾಯಿ ಪ್ರೇಮಾ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಚೆಸ್ಕಾಂ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿ.
          ಕರ್ತವ್ಯ  ನಿರತ ಚೆಸ್ಕಾಂ ಸಿಬ್ಬಂದಿಗಳ ಮೇಲೆ ಮೂವರು ಕರ್ತವ್ಯಕ್ಕೆ ಅಡ್ಡಿಪಡಿಸಿ ಅಶ್ಲೀಲ ಶಬ್ದಗಳಿಂದ ನಿಂದಿಸಿರುವ ಘಟನೆ ಕುಟ್ಟ ಸಮೀಪ್ ನಾಲ್ಕೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 29/06/2013ರಂದು ಶ್ರೀಮಂಗಲದ ಚೆಸ್ಕಾಂ ಸಂಸ್ಥೆಯ ಕಿರಿಯ ಅಭಿಯಂತರ ತ್ಯಾಗರಾಜುರವರು ತಮ್ಮೊಂದಿಗೆ ವಿದ್ಯುತ್ ಮಾರ್ಗದಾಳು ಕೃಷ್ಣ ಎಂಬವರನ್ನು ಕರೆದುಕೊಂಡು ನಾಲ್ಕೇರಿ ಗ್ರಾಮದ ಗಣಪತಿ ಎಂಬವರ ಮನೆಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸುತ್ತಿದ್ದಾಗ, ಅದೇ ಗ್ರಾಮದ ಪೂಣಚ್ಚ ಮತ್ತು ಮಲ್ಲಿಗೆ ಎಂಬವರು ಬಂದು ತ್ಯಾಗರಾಜುರವರ ಕೆಲಸಕ್ಕೆ ಅಡ್ಡಿ ಪಡಿಸಿ ಗಣಪತಿರವರಿಗೆ ವಿದ್ಯುತ್ ಸಂಪರ್ಕ ನೀಡಕೂಡದು ಎಂದು ಹೇಳಿ ಅಶ್ಲೀಲ ಶಬ್ದಗಳಿಂದ ಬೈದಿರುವುದಾಗಿ ತ್ಯಾಗರಾಜುರವರು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, June 29, 2013

ಎಸ್ಟೇಟ್‌ ಗೋಡೌನಿಂದ ಕರಿಮೆಣಸು ಕಳ್ಳತನ:

ಗೋಡೌನ್‌ನಲ್ಲಿ ಶೇಖರಿಸಿಟ್ಟಿದ್ದ ಸುಮಾರು 6 ಚೀಲ ಕರಿಮೆಣಸು ಕಳ್ಳತನವಾದ ಘಟನೆ ಕೆ.ಚೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ. ಸೋಮವಾರಪೇಟೆ ತಾಲೋಕು, ಕೆ.ಚೆಟ್ಟಳ್ಳಿ ಗ್ರಾಮದಲ್ಲಿ ವಾಸವಾಗಿರುವ ಐ.ಕೆ. ಅನಿಲ್‌ ಎಂಬುವವರು ತಮ್ಮ ಬಾಪ್ತು ಎಸ್ಟೇಟ್‌ ಗೋಡೌನಿನಲ್ಲಿ ಸುಮಾರು 6 ಚೀಲ ಕರಿಮೆಣಸನ್ನು ಇಟ್ಟಿದ್ದು, ಅಂದಾಜು ರೂ.120,000/- ಮೌಲ್ಯದ ಕರಿಮೆಣಸನ್ನು ದಿನಾಂಕ 23-6-2013 ರಂದು ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ಗೋಡೌನಿಗೆ ಹಾಕಿದ ಬೀಗವನ್ನು ಮುರಿದು ಒಳಪ್ರವೇಶಿಸಿ  ಕಳ್ಳತನ ಮಾಡಿಕೊಂಡು ಹೋಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಅಕ್ರಮವಾಗಿ ಇಟ್ಟಿದ್ದ ನಾಡ ಪಿಸ್ತೂಲ್‌ ವಶ:
ಬಾಡಿಗೆಗೆ ಇದ್ದ   ವ್ಯಕ್ತಿಯೊಬ್ಬರ ಮನೆಯಲ್ಲಿ ಅಕ್ರಮವಾಗಿ ಇಟ್ಟಿದ್ದ ಹಳೆಯ ಪಿಸ್ತುಲ್‌ ಪತ್ತೆಯಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ನಾಪೋಕ್ಲು ಠಾಣಾ ವ್ಯಾಪ್ತಿಗೆ ಸೇರಿದ ಬೇತು ಗ್ರಾಮದಲ್ಲಿ ಎಂ,ಹೆಚ್‌, ಹಂಸ ಎಂಬ ವ್ಯಕ್ತಿಗೆ ಸೇರಿದ ಮನೆಯಲ್ಲಿ ಬಾಡಿಗೆಗೆ  47 ವರ್ಷದ ಅಬೂಬಕರ್‌ ಎಂಬ ವ್ಯಕ್ತಿಯು ವಾಸವಾಗಿದ್ದು, ಸದರಿ ಬಾಡಿಗೆ ಮನೆಯನ್ನು ಮಾಲಿಕ ಹಂಸರವರು ಖಾಲಿ ಮಾಡುವ ಸಮಯದಲ್ಲಿ  ಹಳೆಯದಾದ ತುಕ್ಕು ಹಿಡಿದ ಒಂದು ನಾಡ ಪಿಸ್ತೂಲ್‌ ಪತ್ತೆಯಾಗಿದ್ದು, ಸದರಿ ಪಿಸ್ತೂಲ್‌ನ್ನು ಅಬೂಬಕರ್‌ರವರು ಯಾವುದೇ ಪರವಾನಗಿ ಇಲ್ಲದೆ ಇಟ್ಟುಕೊಂಡಿದ್ದು, ನಾಪೋಕ್ಲು  ಪೊಲೀಸರು ಅದನ್ನು ವಶಕ್ಕೆ ಪಡೆದು ಪ್ರಕರಣವನ್ನು ದಾಖಲಿಸಿ  ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 

Friday, June 28, 2013

ಕಾಡಾನೆ ದಾಳಿ,  ಮಹಿಳೆಯ ಸಾವು:
 
     ಕೂಲಿಕೆಲಸಕ್ಕೆ ಹೋದ ಮಹಿಳೆಯೊಬ್ಬರು ಕಾಡಾನೆ ದಾಳಿಗೆ ಬಲಿಯಾದ ಘಟನೆ ಪೊನ್ನಂಪೇಟೆ ದೇವರಪುರ ಗ್ರಾಮದ ಎಸ್ಟೇಟ್‌ವೊಂದರಲ್ಲಿ ಸಂಭವಿಸಿದೆ.   ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ದೇವರಪುರ ಗ್ರಾಮದಲ್ಲಿ ವಾಸವಾಗಿದ್ದ  ಮಹಿಳೆ  ಯೊಬ್ಬರು  ದೇವರಪುರದಲ್ಲಿರುವ ಅಂಬುಕೋಟೆ ಎಸ್ಟೇಟ್‌ಗೆ ದಿನಾಂಕ 27-6-2013 ರಂದು ಬೆಳಿಗ್ಗೆ ಕೂಲಿ ಕೆಲಸಕ್ಕೆ ಹೋಗಿದ್ದ   ಸಂದರ್ಭದಲ್ಲಿ ಕಾಡಾನೆಯೊಂದು ಅವರ ಮೇಲೆ ದಾಳಿ ನಡೆಸಿದ್ದು,  ಅವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.  ಈ ಸಂಬಂಧ ಮೋಹನ್‌ ಕುಮಾರ್‌ ಎಂಬವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

Thursday, June 27, 2013

ರಸ್ತೆ ಬದಿಯಲ್ಲಿ ನಿಂತಿದ್ದ ಕಾರಿಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ:
 
     ದಿನಾಂಕ 26-06-2013 ರಂದು ಸಮಯ 08.15 ಪಿ.ಎಂ.ಗೆ ಕುಶಾಲನಗರ ಠಾಣಾ ಸರಹದ್ದಿಗೆ ಸೇರಿದ ರಥಬೀದಿಯಲ್ಲಿರುವ ವಾಸವಿ ಮಹಲ್‌ ಮುಂದೆ ರಸ್ತೆಯಲ್ಲಿ ಎಂ.ವೈ. ಮುಕ್ರಂಬೇಗ್ ಎಂಬುವವರು ತಮ್ಮ ಬಾಪ್ತು ನಂ. ಕೆಎ 12 ಪಿ 4892 ರ ಸ್ವಿಫ್ಟ್‌ ಕಾರನ್ನು ನಿಲ್ಲಿಸಿ  ಮಕ್ಕಳಿಗೆ ಬಟ್ಟೆ ಖರೀದಿಸಲೆಂದು ಬಟ್ಟೆ ಅಂಗಿಗೆ ಹೋಗಿದ್ದಾಗ, ಕುಶಾಲನಗರ ಟೌನ್ ಕಡೆಯಿಂದ ನಂ. ಕೆಎ 13 ಎಫ್ 1897 ರ ಕೆ.ಎಸ್.ಆರ್.ಟಿ.ಸಿ. ಬಸ್ಸನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕಾರಿಗೆ ಡಿಕ್ಕಿಪಡಿಸಿ  ಜಖಂಪಡಿಸಿದ್ದು, ಕುಶಾಲನಗರ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
ಸ್ಕೂಟರ್‌ಗೆ ಟಿಲ್ಲರ್‌ ಡಿಕ್ಕಿ, ಸವಾರನಿಗೆ ಗಾಯ:
 
     ಸ್ಕೂಟರ್‌ಗೆ ಟಿಲ್ಲರ್‌ ಡಿಕ್ಕಿಯಾಗಿ ಸವಾರನಿಗೆ ಗಾಯಗಳಾದ  ಘಟನೆ ಪೊನ್ನಂಪೇಟೆ ಠಾಣಾ ಸರಹದ್ದಿನ ಸುಳುಗೋಡು ಗ್ರಾಮದಲ್ಲಿ ನಡೆದಿದೆ.  ದಿನಾಂಕ 13/06/2013 ರಂದು ಸಾಯಂಕಾಲ 04.00 ಗಂಟೆ ಸಮಯದಲ್ಲಿ  ಕಾಂಡೇರ ಸುರೇಶ್‌ ಎಂಬವರು  ತಮ್ಮ ಬಾಪ್ತು ಕೆಎ 12 ಕೆ 9021 ರ ಯಮಾಹ ರೇ ಸ್ಕೂಟರ್ ನಲ್ಲಿ  ಮಗನನ್ನು ಶಾಲೆಯಿಂದ ಕರೆದುಕೊಂಡು ಸುಳುಗೋಡು ಗ್ರಾಮದ ಮುಖ್ಯ ರಸ್ತೆಯಲ್ಲಿ ಹೋಗುತ್ತಿರುವಾಗ್ಗೆ ಎದುರುಗಡೆಯಿಂದ ಅತೀ ವೇಗ ಮತ್ತು ಅಜಾಗರುಕತೆಯಿಂದ ಒಂದು ಟಿಲ್ಲರನ್ನು ಓಡಿಸಿಕೊಂಡು ಬಂದ ವ್ಯಕ್ತಿ ಸುರೇಶ್‌ರವರ  ಬೈಕ್ ಗೆ ಡಿಕ್ಕಿಪಡಿಸಿ ಸ್ಥಳದಿಂದ ಪರಾರಿಯಾಗಿದ್ದು,  ಈ ಅಪಘಾತದಿಂದ ಸುರೇಶ್‌ರವರ  ಬಲ ಕೈ ಜಖಂಗೊಂಡಿದ್ದು, ಒಂದು ಕಿರುಬೆರಳು ತುಂಡಾಗಿದ್ದು, ಪೊನ್ನಂಪೇಟೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ
 
ಹಳೇ ದ್ವೇಷ, ವ್ಯಕ್ತಿಯಿಂದ ಹಲ್ಲೆ, ಕೊಲೆ ಬೆದರಿಕೆ:
 
   ಹಳೇ ದ್ವೇಷದಿಂದ ವ್ಯಕ್ತಿಯೊಬ್ಬರ ಮನೆಗೆ ಅಕ್ರಮ ಪ್ರವೇಶ ಮಾಡಿ, ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ,  ಶನಿವಾರಸಂತೆ ಠಾಣಾ ವ್ಯಾಪ್ತಿಯ ಒಡೆಯನಪುರ ಗ್ರಾಮದಲ್ಲಿ ದಿನಾಂಕ 25-06-2013 ರಂದು  ಎಂ.ಹೆಚ್‌.. ಇಬ್ರಾಹಿಂ ಎಂಬವರು  ತಮ್ಮ ಮನೆಯಲ್ಲಿರುವಾಗ್ಗೆ, ಆರೋಪಿಗಳಾದ 1) ಇಸ್ಮಾಯಿಲ್‌ 2). ಶಾಫಿ, 3). ನೌಶಾದ್‌, 4). ಮೋನು, ಮತ್ತು 5). ಮೊಯಿದೀನ್‌ ರವರುಗಳು ಇಬ್ರಾಹಿಂರವರ  ಮನೆಗೆ ಅಕ್ರಮ ಪ್ರವೇಶ ಮಾಡಿ   ಅವ್ಯಾಚ್ಯ ಶಬ್ದಗಳಿಂದ  ಬೈಯ್ದು 'ನನ್ನ ತಮ್ಮನಾದ ಇಬ್ರಾಹಿಂ ನನ್ನು ಜೈಲಿಗೆ ಕಳುಹಿಸಲು ನೀನೇ ಕಾರಣ' ಎಂದು ಕೈಯಿಂದ  ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದು, ಇಬ್ರಾಹಿಂ ರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ

Wednesday, June 26, 2013

ಆಕಸ್ಮಿಕ ವಿದ್ಯುತ್‌ ಸ್ಪರ್ಶ ವ್ಯಕ್ತಿಯ ದುರ್ಮರಣ:
 
       ವಿದ್ಯುತ್‌ ಸಂಪರ್ಕ ಸರಿಪಡಿಸುವ ವೇಳೇ ಆಕಸ್ಮಿಕವಾಗಿ ವಿದ್ಯುತ್‌  ಸ್ಪರ್ಶಗೊಂಡು ಲೇನ್‌ಮನ್‌ ಒಬ್ಬರು ಮೃತಪಟ್ಟ ಘಟನೆ ನಡೆದಿದೆ.  ದಿನಾಂಕ  25-06-2013 ರಂದು ಕೊಡ್ಲಿಪೇಟೆ, ಗಣಪತಿ ದೇವಸ್ಥಾನದ ಪರಿಸರದಲ್ಲಿ ವಿದ್ಯತ್ ಸಂಪರ್ಕ ಕಡಿತಗೊಂಡಿದ್ದು  ಅದನ್ನು ಸರಿಪಡಿಸಲು ಕೊಡ್ಲಿಪೇಟೆ ಚೆಸ್ಕಾಂನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ಮಾರ್ಗದಾಳು ಗುರುಸ್ವಾಮಿ ಎಂಬವರು ವಿದ್ಯುತ್‌ ಕಂಬವನ್ನೇರಿ ದುರಸ್ತಿ ಪಡಿಸುವ ಸಮಯದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಗೊಂಡು ಸ್ಥಳದಲ್ಲಿ ಮೃತಪಟ್ಟಿರುತ್ತಾರೆ.  ಈ ಸಂಬಂಧ  ಕೊಡ್ಲಿಪೇಟೆ ಚೆಸ್ಕಾಂನ ಕಿರಿಯ ಅಭಿಯಂತರರಾದ ಕೆ.ಇ. ಬಸವರಾಜರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Monday, June 24, 2013

ಆಸ್ತಿವಿಚಾರ, ಇಬ್ಬರ ಮೇಲೆ ಹಲ್ಲೆ:

      ಜಾಗದ ವಿಚಾರದಲ್ಲಿ ಜಗಳವಾಗಿ ಗಂಡ, ಹೆಂಡತಿ ಮತ್ತು ಅತ್ತೆಯ ಮೇಲೆ ಹಲ್ಲೆ ನಡೆಸಿದ ಘಟನೆ ತಾಕೇರಿ ಗ್ರಾಮದಲ್ಲಿ ನಡೆದಿದೆ.  ಸೋಮವಾರಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ತಾಕೇರಿ ಗ್ರಾಮದ ವಾಸಿ ಶ್ರೀಮತಿ ಪುಷ್ಪಲತ, ಆಕೆಯ ಗಂಡ ಹಾಗು ಅತ್ತೆಯವರು ದಿನಾಂಕ 23/06/2013 ರಂದು   ಸಂಜೆ 05:00 ಗಂಟೆ ಸಮಯದಲ್ಲಿ ಮನೆಯಲ್ಲಿದ್ದು ಅದೇ ಗ್ರಾಮದವರೇ ಆದ ಮುದ್ದಪ್ಪ ಹಾಗೂ ಅವರ ಪತ್ನಿ ಶಮ್ಮಿರವರು ಬೇಲಿ ಹಾಗೂ ಜಾಗವನ್ನು ಶುಚಿಗೊಳಿಸುತ್ತಿದ್ದು  ಜಾಗದ ವಿಚಾರದಲ್ಲಿ ಜಗಳವಾಗಿ  ಆರೋಪಿ ಮುದ್ದಪ್ಪ ತನ್ನ ಕೈಯಲ್ಲಿದ್ದ ಕತ್ತಿಯಿಂದ ಪುಷ್ಪಲತರವರ ಎಡಕೈ ಬೆರಳಿಗೆ ಕಡಿದು ಗಾಯಪಡಿಸಿರುವುದಲ್ಲದೇ ಕಾಡು ಮರದ ದೊಣ್ಣೆಯಿಂದ   ಪುಷ್ಪಲತರವರ ಗಂಡ ಜೋಯಪ್ಪ ಹಾಗೂ ಅತ್ತೆ ಗಂಗಮ್ಮರವರ ಮೇಲೆ ಹಲ್ಲೆ ನಡೆಸಿದ್ದು, ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.            

ಹಣದ ವಿಚಾರದಲ್ಲಿ ಜಗಳ ಪತಿಯಿಂದ ಪತ್ನಿಗೆ ಹಲ್ಲೆ:

ಹಣದ ವಿಚಾರದಲ್ಲಿ ಜಗಳವಾಗಿ ಪತಿ ಪತ್ನಿಯ ಮೇಲೆ ಹಲ್ಲೆನಡೆಸಿದ ಘಟನೆ ನಡೆದಿದೆ.  ಮೊನ್ನಂಪೇಟೆ ಠಾಣೆ ಸರಹದ್ದಿನ ಸುಳುಗೋಡು ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ಪಣಿಎರವರ ಪಾಲಿ ಹಾಗು ಆಕೆಯ ಗಂಡ ಚಾಂಡರವರ ನಡುವೆ ಹಣದ ವಿಚಾರದಲ್ಲಿ ಜಗಳವಾಗಿ ಚಾಂಡಾ ತನ್ನ ಪತ್ನಿ ಪಣಿಎರವರ ಪಾಲಿಯ ಮೇಲೆ ದೊಣ್ಣೆಯಿಂದ ಹಲ್ಲೆನಡೆಸಿದ್ದು, ಪಣಿಎರವರ ಪಾಲಿಯ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಬಾಲಕಿಯ ಮಾನಭಂಗಕ್ಕೆ ಯತ್ನ:

ಮನೆಗೆ ಅಕ್ರಮ ಪ್ರವೇಶಿಸಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಮಾನಭಂಗಕ್ಕೆ ಯತ್ನಿಸಿದ ಘಟನೆ ಕುಶಾಲನಗರ ಠಾಣಾ ಸರಹದ್ದಿನ ನಂಜರಾಯಪಟ್ಟಣ ಗ್ರಾಮದಲ್ಲಿ ನಡೆದಿದೆ.  ಕುಶಾಲನಗರದ ನಂಜರಾಯಪಟ್ಟಣ ಪೈಸಾರಿಯಲ್ಲಿ ವಾಸವಾಗಿರುವ ಪಿ.ಕೆ. ಗೋಪಾಲ ಎಂಬವರು  ದಿನಾಂಕ 23-6-2013 ರಂದು  ತನ್ನ ಮಗಳಾದ ಸುಮಿತ್ರ ಹಾಗೂ ಉಳಿದ  ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೊರಗಡೆಹೋಗಿದ್ದು ಅಂದಾಜು 3-30 ಗಂಟೆಗೆ ಮನೆಗೆ ಬಂದಾಗ  ಹುಣಸೂರಿನ ವಾಸಿ ಸುನಿಲ್‌ ಎಂಬ ವ್ಯಕ್ತಿ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಸುಮಿತ್ರಾಳ ಮಾನಭಂಗಕ್ಕೆ ಯತ್ನಿಸಿದ್ದು, ಪಿ.ಕೆ. ಗೋಪಾಲ ಹಾಗೂ ಊರಿನವರು ಸೇರಿ ಸುನಿಲ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ವರದಕ್ಷಿಣ ಕಿರುಕುಳ ಪ್ರಕರಣ ದಾಖಲು:

     ಪತ್ನಿಯ ತವರು ಮೆನಯಿಂದ ವರದಕ್ಷಿಣೆ ತರುವಂತೆ ಪತಿ ಹಾಗೂ ಅತ್ತೆ-ಮಾವರವರು ಹಲ್ಲೆನಡೆಸಿ ಕೊಲೆಬೆದರಿಕೆ ಹಾಕಿರುವ ಘಟನೆ ನಡೆದಿದೆ.  ಸೋಮವಾರಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಕಿಬ್ಬೆಟ್ಟ ಗ್ರಾಮದಲ್ಲಿ ನೆಲಸಿರುವ ಶ್ರೀಮತಿ ಕೆ.ಸಿ. ಕಾಂತಿ ಎಂಬವರಿಗೆ ತನ್ನ ಪತಿ ಚೇತನ್, ಅತ್ತೆ ಪದ್ಮ  ಮತ್ತು ಮಾವ ಚಂದ್ರಪ್ಪನವರು   ತವರು ಮನೆಯಿಂದ ವರದಕ್ಷಿಣೆ ತರುವಂತೆ ಮಾನಸಿಕ ಕಿರುಕುಳ ನೀಡಿದ್ದು,   ಕೈಯಿಂದ ಹೊಡೆದು ಈ ವಿಚಾರವನ್ನು ಯಾರಿಗಾದರೂ   ತಿಳಿಸಿದರೆ ಕೊಲೆ ಮಾಡುತ್ತೇವೆಂದು ಬೆದರಿಸಿರುವುದಾಗಿ   ಕಾಂತಿಯವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 

ಹಲ್ಲೆಗೊಳಗಾದ ವ್ಯಕ್ತಿಯ ಸಾವು: 

ಹಲ್ಲೆಗೊಳಗಾದ ವ್ಯಕ್ತಿ ಗುಣಮುಖವಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ  ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ  ಬಾಳೆಲೆ ಗ್ರಾಮದಲ್ಲಿ ನಡೆದಿದೆ.  ದಿನಾಂಕ 21-6-2013 ರಂದು ಬಾಳೆಲೆ ಗ್ರಾಮದಲ್ಲಿರುವ ಜೇಮ್ಸ್‌ ಎಂಬವರ  ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸತೀಶ ಎಂಬ ವ್ಯಕ್ತಿಯ ಮೇಲೆ  ಅದೇ ಗ್ರಾಮದ  ಹೆಚ್‌.ಸಿ. ಚಂದ್ರು ಎಂಬವರು ತನ್ನ ಹೆಂಡತಿಯ ಜೊತೆ ಮಾತನಾಡಿದ ವಿಚಾರದಲ್ಲಿ ಹಲ್ಲೆ ನಡೆಸಿದ್ದು, ಗಾಯಗೊಂಡ ಸತೀಶನನ್ನು ಗೋಣಿಕೊಪ್ಪ ಸರಕಾರಿ ಆಸ್ಪತ್ತೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಸದರಿ ಸತೀಶನು ಚಿಕಿತ್ಸೆಪಡೆಯುತ್ತಿರುವ  ವೇಳೆ ದಿನಾಂಕ  23-6-2013 ರಂದು ಮೃತಪಟ್ಟಿದ್ದು, ಪೊನ್ನಂಪೇಟೆ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.   

ಕ್ಷುಲ್ಲಕ ಕಾರಣದಕ್ಕೆ ವ್ಯಕ್ತಿಯಿಂದ ಹಲ್ಲೆ:

ಬಸ್ಸಿನ ಸೀಟಿನ ವಿಚಾರದಲ್ಲಿ ಜಗಳವಾಗಿ ವ್ಯಕ್ತಿಯೊಬ್ಬರಿಗೆ ಮತ್ತೊಬ್ಬ ವ್ಯಕ್ತಿ ಹಲ್ಲೆ ಮಾಡಿದ ಬಗ್ಗೆ ವರದಿಯಾಗಿದೆ.   ಕೊಡಗು ಜಿಲ್ಲಾ ಪಂಚಾಯ್ತಿ ಕಛೇರಿಯಲ್ಲಿ 'ಡಿ' ಗ್ರೂಪ್‌ ನೌಕರರಾಗಿರುವ  ಎ.ಎ. ರಘುಪತಿ ಎಂಬುವವರು  ಈ ದಿನ ಬೆಳಗ್ಗೆ ಎಂದಿನಂತೆ ನಾಪೋಕ್ಲುವಿನಿಂದ ಮಡಿಕೇರಿಗೆ ಬಸ್ಸಿನಲ್ಲಿ ಪ್ರಯಾಣಿಸಲು ಬಸ್ಸಿಗೆ ಹತ್ತುವ ಸಮಯದಲ್ಲಿ , ಬಸ್ಸಿನ ಆಸನದ ವಿಚಾರದಲ್ಲಿ  ಎಂ.ಎಂ. ಕುಶಾಲಪ್ಪ ಎಂಬವರು ಜಗಳ ಮಾಡಿ ಕೈಯಿಂದ ಎ.ಎ. ರಘುಪತಿಯವರ ಮೇಲೆ ಹಲ್ಲೆ ನಡೆಸಿದ್ದು, ಈ ಸಂಬಂಧ ನಾಪೋಕ್ಲು ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ

Saturday, June 22, 2013

ಜಿಲ್ಲಾ ಕಾರಾಗೃಹಕ್ಕೆ ಪೊಲೀಸರ ದಾಳಿ, ಹಣ, ಮೊಬೈಲ್‌ ವಶ: 


ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಎನ್.ಅನುಚೇತ್‌ರವರಿಗೆ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಅಕ್ರಮವಾಗಿ ಹಣ, ಮೊಬೈಲ್‌ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಕೈದಿಗಳು ಹೊಂದಿರುವ ಬಗ್ಗೆ  ದೊರೆತ ಖಚಿತ ವರ್ತಮಾನದ ಮೇರೆಗೆ  ಅವರ ನಿರ್ದೇಶನದಂತೆ  ಈ ದಿನ ಬೆಳಗಿನ ಜಾವ 6-00 ಗಂಟೆಯ ಸಮಯದಲ್ಲಿ ಮಡಿಕೇರಿ ಪೊಲೀಸ್‌‌ ಉಪಾಧೀಕ್ಷಕ ಎಂ. ರಾಜೀವ್‌ರವರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಕಾರಾಗೃಹದಲ್ಲಿದ್ದ 230 ಕೈದಿಗಳನ್ನು ಪರಿಶೀಲನೆ ನಡೆಸಿ  ಕೈದಿಗಳು ಅಕ್ರಮವಾಗಿ ಇಟ್ಟುಕೊಂಡಿದ್ದ ರೂ.31677/- ನಗದು, 3 ಮೊಬೈಲ್‌ಸೆಟ್ಸ್‌, 3 ಚಾಕು, 1 ರೇಝರ್‌ ಬ್ಲೇಡ್‌, 2 ಎ.ಟಿ.ಎಂ. ಕಾರ್ಡ್‌ ಮತ್ತು ಒಂದು ಪಾನ್‌ ಕಾರ್ಡ್‌ ಗಳನ್ನು ವಶಕ್ಕೆ ತೆಗೆದುಕೊಂಡು  ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಕ್ಷುಲ್ಲಕ ಕಾರಣ ವ್ಯಕ್ತಿಯ ಮೇಲೆ ಹಲ್ಲೆ:
     ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯ ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ನಡೆದಿದೆ.  ಪೊನ್ನಂಪೇಟೆ ಠಾಣೆ ಸರಹದ್ದಿನ ಬಾಳೆಲೆ ನಗರದ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹೆಚ್‌.ಎನ್‌.ಸತೀಶ ಎಂದಿನಂತೆ ದಿನಾಂಕ 21-6-2013 ರಂದು ಕೆಲಸ ನಿರ್ವಹಿಸಿಕೊಂಡಿರುವಾಗ್ಗೆ ಆತನ  ಮನೆಯ ಪಕ್ಕದ ವಾಸಿ ಹೆಚ್‌.ಸಿ.ಚಂದ್ರುರವರು ಅಂಗಡಿಗೆ ಬಂದು, ‘’ನನ್ನ ಹೆಂಡತಿ ಜೊತೆ ಏಕೆ ಮಾತನಾಡುತ್ತೀಯ ‘’ ಎಂದು ಹೇಳಿ ಆತನ ಕೈಯ್ಯಲ್ಲಿದ್ದ ಕಬ್ಬಿಣದ ಪೈಪ್‌ನ ರಾಡ್‌ನಿಂದ ಸತೀಶನ ತಲೆಗೆ ಮತ್ತು ಬಲ ಕಿವಿಯ ಕೆಳಭಾಗಕ್ಕೆ ಹೊಡೆದು ರಕ್ತಗಾಯಪಡಿಸಿದ್ದು ಪೊನ್ನಂಪೇಟೆ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ

ವಿಎಸ್‌ಎಸ್‌ಎನ್‌ ಮಾರಾಟ ಅಂಗಡಿಯಿಂದ ಕಳವು:
ದಿನಾಂಕ 21-6-2013 ರಂದು ಸಿದ್ದಾಪುರ ಠಾಣಾ ಸರಹದ್ದಿನ ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ಇರುವ ವಿಎಸ್‌ಎಸ್‌ಎನ್‌ ನಂ.2763ರ ಮಾರಾಟ ಮಳಿಗೆಗೆ ಯಾರೋ ಕಳ್ಳರು ಬಾಗಿಲಿನ ಬೀಗವನ್ನು ಮುರಿದು ಒಳಗೆ ನುಗ್ಗಿ ಸುಮಾರು 18300/- ರೂ ಮೌಲ್ಯದ ಸಾಮಾಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿದ್ದು  ಬಿ.ಕೆ. ರಾಮಚಂದ್ರ ಎಂಬುವವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.  

ಕಸಾಯಿ ಖಾನೆಗೆ ಅಕ್ರಮವಾಗಿ ಗೋವುಗಳ ಸಾಗಾಟ, ಆರೋಪಿ ವಶ:
ದಿನಾಂಕ: 20/06/2013 ರಂದು ಸಂಜೆ  06.00 ಗಂಟೆಗೆ ಪೊನ್ನಂಪೇಟೆ ಪೊಲೀಸರಿಗೆ ಅಕ್ರಮವಾಗಿ ಗೋವುಗಳನ್ನು ವಾಹನದಲ್ಲಿ ಸಾಗಿಸುತ್ತಿರುವುದಾಗಿ ದೊರೆತ ಖಚಿತ ವರ್ತಮಾನದ ಮೇರೆಗೆ ಅಧಿಕಾರಿ ಮತ್ತು ಸಿಬ್ಬಂದಿಯವರು  ಪೊನ್ನಂಪೇಟೆ ಠಾಣಾ ವ್ಯಾಪ್ತಿಯ  ಬೇಗೂರು ಗ್ರಾಮದ ಬಸ್‌ ಶೆಲ್ಟರ್‌ ಬಳಿ ಹೋಗಿ ಸಮಯ 07.10  ಗಂಟೆಯ ವೇಳೆಗೆ ಬಿಳಿಬಣ್ಣದ ಪಿಕ್ ಅಫ್ ವಾಹನ ಸಂ ಕೆಎ-45-1312ರಲ್ಲಿ  ನಾಲ್ಕು ಜಾನುವಾರುಗಳನ್ನು ಅಕ್ರಮವಾಗಿ ಸರ್ಕಾರದ ಪರವಾನಗಿ ಇಲ್ಲದೆ  ಸಾಗಾಟ ಮಾಡುತ್ತಿದ್ದುದ್ದನ್ನು ತಡೆದು  ಚಾನುವಾರುಗಳನ್ನು ಮತ್ತು ವಾಹನವನ್ನು ವಶಕ್ಕೆ ತೆಗೆದುಕೊಂಡು  ಚಾಲಕ, ಅಂತರಸಂತೆ,ಹೆಚ್‌.ಡಿ.ಕೋಟೆ ತಾಲ್ಲೂಕು.ಮೈಸೂರು ಜಿಲ್ಲೆ ಮತ್ತು . ಲೊಕೇಶ ತಂದೆ: ಸಿದ್ಧಲಿಂಗಪ್ಪ ಪ್ರಾಯ 35 ವರ್ಷ, ಸೋಗೆಹಳ್ಳಿ, ಹೆಚ್‌.ಡಿ.ಕೋಟೆ ತಾಲ್ಲೂಕು ಮೈಸೂರು ಜಿಲ್ಲೆ ಇವರನ್ನು ವಶಕ್ಕೆ ತೆಗೆದುಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಹಣದ ವಿಚಾರದಲ್ಲಿ ವ್ಯಕ್ತಿಯ ಮೇಲೆ  ಹಲ್ಲೆ:
ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ  ಮಲ್ಲಂಬಟ್ಟಿ ಗ್ರಾಮದಲ್ಲಿ ವಿರಾಜಪೇಟೆ ನಗರದ ವಾಸಿಗಳಾದ ಕಟ್ಟಡ ಸೆಂಟ್ರಿಂಗ್‌ ಕೆಲಸ ಮಾಡುವ  ಸಿ.ಹೆಚ್‌. ಚಂದ್ರ ಹಾಗೂ  ವರ್ಗಿಸ್‌ ಎಂಬ ವ್ಯಕ್ತಿಯ ನಡುವೆ ಕಟ್ಟಡದ ಸೆಂಟ್ರಿಂಗ್‌ ಕೆಲಸ ಮಾಡಿದ ಹಣದ ವಿಚಾರದಲ್ಲಿ ಜಗಳವಾಗಿ ವರ್ಗಿಸ್‌ ಎಂಬುವವರು ಸಿ.ಹೆಚ್‌. ಚಂದ್ರರವರಿಗೆ ಕಬ್ಬಿಣದ ರಾಢಿನಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದು ಅಲ್ಲದೆ  ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವ ಬಗ್ಗೆ  ಚಂದ್ರರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 

Friday, June 21, 2013

ಔಷಧಿ ಬದಲು ಮೆಲಾತಿನ್‌ ಕುಡಿದು ಮಹಿಳೆಯ ಸಾವು:

ವಿಪರೀತ ಗ್ಯಾಸ್ಟಿಕ್ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಔಷದಿಯ ಬದಲು ಮೆಲಾತಿನ್‌ ಕುಡಿದು ಸಾವಿಗೀಡಾದ ಘಟನೆ ನಡೆದಿದೆ. ದಿನಾಂಕ 20-06-2013 ರಂದು ಸಂಜೆ  ಕುಶಾಲನಗರ ಠಾಣಾ ಸರಹದ್ದಿನ ರಂಗಸಮುದ್ರ ಗ್ರಾಮದ ವಿರೂಪಾಕ್ಷಪುರದಲ್ಲಿ ನೆಲಿಸಿರುವ ಸರೋಜ ಎಂಬವರ ಮಗಳು 39 ವರ್ಷಪ್ರಾಯದ ಭಾಗ್ಯ ಇವರಿಗೆ ವಿಪರೀತ ಗ್ಯಾಸ್ಟಿಕ್ ಹೊಟ್ಟೆನೋವು ಇದ್ದುದರಿಂದ ತಡೆಯಲಾಗದೆ ಮನೆಯಲ್ಲಿದ್ದ ಔಷಧಿಯನ್ನು ಸೇವಿಸಲೆಂದು ಹೋಗಿ ಕೈತಪ್ಪಿನಿಂದ   ಇರುವೆಗೆಂದು ತಂದಿಟ್ಟಿದ್ದ ಮೆಲಾತಿನ್ ಔಷಧಿ ಕುಡಿದು ಅಸ್ವಸ್ಥಗೊಂಡು   ಚಿಕಿತ್ಸೆ ಬಗ್ಗೆ ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ  ದಾಖಲಿಸಿ ಚಿಕಿತ್ಸೆ ವೇಳೆ ಸದರಿ ಮಹಿಳೆ  ಮೃತಪಟ್ಟಿರುತ್ತಾರೆ.  ಈ ಸಂಬಂಧ ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
 
ಮಾರಾಟ ಮಾಡಿದ ವಾಹನದ ಹಣವನ್ನು ನೀಡದೆ ವಂಚನೆ:
 
ಸಿದ್ದಾಪುರ ಠಾಣಾ ವ್ಯಾಪ್ತಿಯ ಪಾಲಿಬೆಟ್ಟ ಮೇಕೂರು ಗ್ರಾಮದ ವಾಸಿ ಎಂ.ಎಂ. ಕಾಳಪ್ಪ ಎಂಬುವವರು ಚೆನ್ನಪಟ್ಟಣ ತಾಲೋಕು (ಬೆಂಗಳೂರು) ವಾಸಿ ಶಶಿಕುಮಾರ್‌ ಎಂಬವರಿಗೆ ಕಳೆದ ಜನವರಿ ತಿಂಗಳಲ್ಲಿ ಬಸ್ಸನ್ನು ಮಾರಾಟ ಮಾಡಿದ್ದು ಅದರ ಬಾಪ್ತು ಹಣ ರೂ.ರೂ.2,35,000/- ಗಳನ್ನು ಒಪ್ಪಂದದ ಮೇರೆ ಎಂ.ಎಂ. ಕಾಳಪ್ಪನವರಿಗೆ ಪಾವತಿಸಬೇಕಾಗಿದ್ದು, ಸದರಿ ಹಣವನ್ನು ಶಶಿಕುಮಾರ್‌ರವರು ಪಾವತಿಸಿದ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಖೆ ಕೈಗೊಂಡಿರುತ್ತಾರೆ.