Tuesday, July 30, 2013

ಪೊಲೀಸ್‌ ಸಿಬ್ಬಂದಿಗಳಿಗೆ ಉಚಿತ ಕಣ್ಣು ಪರೀಕ್ಷೆ 
         ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಮತ್ತು ನಗರದ ವಾಸನ್ ಐ ಕೇರ್ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ಕೊಡಗು ಜಿಲ್ಲಾ ಪೊಲೀಸ್‌ ಸಿಬ್ಬಂದಿಗಳಿಗೆ ಉಚಿತ ನೇತ್ರ ಪರೀಕ್ಷಾ ಶಿಬಿರವನ್ನು ಇಂದು ನಗರದ ಮೈತ್ರಿ ಪೊಲೀಸ್ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿತ್ತು. ಶಿಬಿರವನ್ನು ಜಿಲ್ಲಾ ಪೊಲೀಸ್ ಉನ್ನತಾಧಿಕಾರಿಗಳಾದ ಎಂ.ಎನ್.ಅನುಚೇತ್, ಐಪಿಎಸ್‌ ರವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಶಿಬಿರದಲ್ಲಿ ನಗರದ ವಾಸನ್ ಐ ಕೇರ್ ಆಸ್ಪತ್ರೆಯ ಮುಖ್ಯಸ್ಥ ಶ್ರೀ ಮುಕುಂದ್, ಮಾರ್ಕೆಟಿಂಗ್ ಮ್ಯಾನೇಜರ್ ರೋಷನ್ ತಿಮ್ಮಯ್ಯ ಮತ್ತು ವೈದ್ಯರುಗಳಾದ ಝಾಕಿರ್, ಶಿವಕುಮಾರ್ ಮತ್ತು ತಾಂತ್ರಿಕ ಸಿಬ್ಬಂದಿ ಸುನಿತಾ ರವರುಗಳು ಪಾಲ್ಗೊಂಡು ಪೊಲೀಸ್ ಸಿಬ್ಬಂದಿಗಳ ನೇತ್ರ ಪರೀಕ್ಷೆ ನಡೆಸಿ ಸೂಕ್ತ ಸಲಹೆಗಳನ್ನು ನೀಡಿದರು. ಪೊಲೀಸ್‌ ಸಿಬ್ಬಂದಿಗಳ ಕುಟುಂಬದವರಿಗೆ ಸಹಾ ನಗರದ ವಾಸನ್ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತ ನೇತ್ರ ಪರೀಕ್ಷೆಯನ್ನು ನಡೆಸುವುದಾಗಿ ಆಸ್ಪತ್ರೆ ಮುಖ್ಯಸ್ಥ ಶ್ರೀ ಮುಕುಂದ್‌ರವರು ಈ ಸಂದರ್ಭದಲ್ಲಿ ಹೇಳಿದರು. ಶಿಬಿರದಲ್ಲಿ ಸುಮಾರು ನೂರೈವತ್ತು ಪೊಲೀಸ್‌ ಸಿಬ್ಬಂದಿಗಳಿಗೆ ಉಚಿತ ನೇತ್ರ ಪರೀಕ್ಷೆ ನಡೆಸಲಾಯಿತು.

ಬೀಗ ಮುರಿದು ಅಂಗಡಿ ಕಳವು 
         ಬೀಗ ಮುರಿದು ಅಂಗಡಿ ಪ್ರವೇಶಿಸಿದ ಕಳ್ಳರು ನಗದು ಹಾಗೂ ಸಿಗರೇಟು ಪ್ಯಾಕೆಟುಗಳನ್ನು ಕಳವು ಮಾಡಿರುವ ಘಟನೆ ಮಡಿಕೇರಿ ನಗರದ ವಾರ್ತಾಭವನದ ಬಳಿ ನಡೆದಿದೆ. ಮಡಿಕೇರಿ ನಗರದ ಚಾಮುಂಡೇಶ್ವರಿ ನಗರದ ನಿವಾಶಿ ಪ್ರಭಾಕರ ಎಂಬವರು ದಿನಾಂಕ 28/07/2013ರಂದು ನಗರದ ವಾರ್ತಾಭವನದ ಬಳಿ ಇರುವ ತಮ್ಮ ಗೂಡಂಗಡಿಗೆ ಬೀಗ ಹಾಕಿ ಸ್ವಂತ ಊರಾದ ಬೆಟ್ಟತ್ತೂರಿಗೆ ಹೋಗಿದ್ದು, ದಿನಾಂಕ 29/07/2013ರ ಸಂಜೆ ವೇಳೆ ಬಂದು ನೋಡುವಾಗ ಯಾರೋ ಕಳ್ಳರು ಅಂಗಡಿಯ ಬೀಗ ಮುರಿದು ಒಳಗೆ ಪ್ರವೇಶಿಸಿ ಸುಮಾರು ರೂ. 200/- ರಷ್ಟು ನಗದು ಹಾಗೂ ರೂ.250/- ಬೆಲೆಯ ಸಿಗರೇಟು ಪ್ಯಾಕೆಟುಗಳನ್ನು ಕಳವು ಮಾಡಿರುವುದು ತಿಳಿದುಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮ ಹತ್ಯೆ 
          ಜೀವನದಲ್ಲಿ ಜುಗುಪ್ಸೆಗೊಂಡ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮೂರ್ನಾಡು ಸಮೀಪದ ಎಂ.ಬಾಡಗ ಗ್ರಾಮದಲ್ಲಿ ನಡೆದಿದೆ. ದಿನಾಂಕ 29/07/2013ರಂದು ಮಡಿಕೇರಿ ನಗರದ ಕಾವೇರಿ ಬಡಾವಣೆ ನಿವಾಸಿ ಕೆ.ಎನ್‌.ನಾಣಯ್ಯ ಎಂಬವರಿಗೆ ಸೇರಿದ ಎಂ.ಬಾಡಗ ಗ್ರಾಮದಲ್ಲಿರುವ ತೋಟದಲ್ಲಿ ಕೆಲಸ ಮಾಡಿಕೊಂಡಿರುವ ಭವಾನಿ ಎಂಬವರು ತೋಟದ ಕಿತ್ತಳೆ ಮರದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ದೂರವಾಣಿ ಮೂಲಕ ತಿಳಿಸಿದ್ದು ಕೂಡಲೇ ನಾಣಯ್ಯನವರು ಸ್ಥಳಕ್ಕೆ ಹೋದಾಗ ಮೂರ್ನಾಡು ನಗರದ ನಿವಾಸಿ ಸುರೇಶ ಯಾನೆ ಕಂದ ಎಂಬ ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿ ಆತನ ಅಣ್ಣ ಚಂಗಪ್ಪ ಎಂಬವರಿಗೆ ವಿಷಯ ತಿಳಿಸಿ ನಂತರ ಪೊಲೀಸರಿಗೆ ನೀಡಿದ ದೂರಿನ ಮೇಲೆ ಮಡಿಕೇರಿ ಗ್ರಾಮಾಂರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Monday, July 29, 2013

ಅಕ್ರಮ ಮರ ಸಾಗಾಟ ಮೂವರ ಬಂಧನ 
             ಅಕ್ರಮವಾಗಿ ಸರ್ಕಾರದ ಪರವಾನಗಿ ಇಲ್ಲದೆ ಮರ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ವಿರಾಜಪೇಟೆ ನಗರ ಪೊಲೀಸರು ಮೂವರನ್ನು ಬಂಧಿಸಿ ಮರ ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ. 28-7-2013 ರಂದು ಸಂಜೆ ಸಮಯ  ವಿರಾಜಪೇಟೆ ನಗರದ ಆರ್ಜಿಯ  ಗ್ಯಾಸ್ ಗೋಡಾನ್ ಹತ್ತಿರ  ಈಚರ್ ಲಾರಿ ಸಂಖ್ಯೆ ಕೆಎ-21-5278 ರಲ್ಲಿ ಸುಮಾರು 25,000 ರೂ ಬೆಲೆಬಾಳುವ ನೀಲಿ ಮತ್ತು ಗೇರು ಮರದ  ತುಂಡುಗಳನ್ನು  ವಿರಾಜಪೇಟೆ ಬಳಿಯ ಪೆರುಂಬಾಡಿಯ ನಿವಾಸಿಗಳಾದ ಹಂಸ , ಅಬ್ದುಲ್ ರೆಹಮಾನ್, ಅಸ್ಗರ್  ಎಂಬವರು  ಸರ್ಕಾರದ  ಪರವಾನಗಿ ಇಲ್ಲದೇ ಅಕ್ರಮವಾಗಿ ಸಾಗಾಟ  ಮಾಡುತ್ತಿದ್ದುದ್ದನ್ನು ವಿರಾಜಪೇಟೆ ನಗರ ಠಾಣೆ ಪಿಎಸ್‌ಐ ಸುರೇಶ್‌ ಬೋಪಣ್ಣನವರು  ಸಿಬ್ಬಂದಿಯವರ ಸಮೇತ ಪತ್ತೆ ಹಚ್ಚಿ ಮೂವರು ಆರೋಪಿಗಳನ್ನೂ ಬಂಧಿಸಿ ಸುಮಾರು ರೂ 25,000/- ಮೌಲ್ಯದ ಮರದ ತುಂಡುಗಳು ಹಾಗೂ ಲಾರಿಯನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೀಗ ಮುರಿದು ಅಂಗಡಿ ಕಳವು 
           ಅಂಗಿಡಯ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ಸುಮಾರು ರೂ. 20,000/- ಮೌಲ್ಯದ ಬಟ್ಟೆಗಳನ್ನು ಕಳವು ಮಾಡಿದ ಪ್ರಕರಣ ಮಡಿಕೇರಿ ನಗರದಲ್ಲಿ ನಡೆದಿದೆ. ಮಡಿಕೇರಿ ನಗರದ ಗಣಪತಿ ಬೀದಿ ನಿವಾಸಿ ಕೆ.ಪಿ.ಹರೀಶ್‌ರವರು ನಗರದ ಇಂದಿರಾ ಗಾಂದಿ ವೃತ್ತದಲ್ಲಿರುವ ತಮ್ಮ ಬಟ್ಟೆ ಅಂಗಡಿಗೆ ದಿನಾಂಕ 27/07/2013ರಂದು ರಾತ್ರಿ ಎಂದಿನಂತೆ ಬೀಗ ಹಾಕಿ ಮನೆಗೆ ಹೋಗಿದ್ದು, ದಿನಾಂಕ 28/07/2013ರಂದು ಬೆಳಿಗ್ಗೆ ಅವರು ಮನೆಯಲ್ಲಿರುವಾಗ ಅವರಿಗೆ ಪರಿಚಯವಿರುವ ಬಾಲು ಎಂಬವರು ದೂರವಾಣಿ ಮೂಲಕ ಅವರ ಅಂಗಡಿಯಲ್ಲಿ ಕಳ್ಳತನವಾಗಿರುವ ಬಗ್ಗೆ ತಿಳಿಸಿದ್ದು, ಹರೀಶ್‌ರವರು ಒಡನೆ ಹೋಗಿ ನೋಡಿದಾಗ ಯಾರೋ ಕಳ್ಳರು ರಾತ್ರಿ ವೇಳೆ ಅಂಗಡಿಗೆ ಪ್ರವೇಶಿಸಿ ಅಂಗಡಿಯಲ್ಲಿದ್ದ ಸುಮಾರು ರೂ.20,000/- ಮೌಲ್ಯದ ಬಟ್ಟೆ ಬರೆಗಳನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿದ್ದು, ಈ ಬಗ್ಗೆ ಅವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆಯೊಂದಿಗೆ ಅಸಭ್ಯ ವರ್ತನೆ 
        ಅಂಗಡಿಯಲ್ಲಿದ್ದ ಮಹಿಳೆಯೊಂದಿಗೆ ವ್ಯಕ್ತಿಯೋರ್ವ ಅಸಭ್ಯವಾಗಿ ವರ್ತಿಸಿರುವ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ದಿನಾಂಕ 27/07/2013ರಂದು ಮಡಿಕೇರಿ ನಗರದ ಹಿಲ್‌ ರಸ್ತೆ ನಿವಾಸಿ ನಸೀಮಾ ಎಂಬವರು ಕೊಹಿನೂರು ರಸ್ತೆಯಲ್ಲಿರುವ ತಮ್ಮ  ಆಸೀಫ್ ಟ್ರೇಡರ್ಸ್ ಅಂಗಡಿಯಲ್ಲಿರುವಾಗ್ಗೆ ಮೈಸೂರಿನ ರಾಜೀವ್‌ ನಗರದ ನಿವಾಸಿ ಆಯೂಬ್ ಆಲಿ ಖಾನ್ ಎಂಬಾತನು ಅಂಗಡಿಗೆ ಬಂದು ನಸೀಮಾರೊಂದಿಗೆ ಕೆಟ್ಟ ಕೆಟ್ಟ ಮಾತುಗಳಾನ್ನಾಡಿ  ಕೈಹಿಡಿದು ಎಳೆದು, ಮೈ ಮೇಲೆ ಕೈ ಹಾಕಿ ಧರಿಸಿದ ಸೀರೆ ರವಿಕೆಯನ್ನು ಎಳೆದು ಹರಿದು ಹಾಕಿ ಮಾನಭಂಗ ಮಾಡಲು ಪ್ರಯತ್ನ ಮಾಡಿರುತ್ತಾರೆಂದು ನಸೀಮಾರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Sunday, July 28, 2013

ಅವೈಜ್ಞಾನಿಕ ರಸ್ತೆ ನಿರ್ಮಾಣ, ಭೂಕುಸಿತ
          ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿದ ಪರಿಣಾಮ ಭೂಕುಸಿತ ಉಂಟಾದ ಬಗ್ಗೆಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಚೆಟ್ಟಳ್ಳಿ-ಸಿದ್ದಾಪುರ-ಗೋಣಿಕೊಪ್ಪ-ಕುಟ್ಟಕ್ಕೆ ಹೋಗುವ ರಾಜ್ಯ ಹೆದ್ದಾರಿ ಸಂಖ್ಯೆ 89 ರಲ್ಲಿ ಕತ್ತಲೆಕಾಡು ಎಂಬಲ್ಲಿ ಥಾಮಸನ್‌ ಎಸ್ಟೇಟ್‌ನ ಮಾಲಿಕರಾದ ಆಶೋಕ್‌ ಕೋರಿಯನ್‌ ಮತ್ತು ಅವರ ತೋಟದಲ್ಲಿ ವ್ಯವಸ್ಥಾಪಕರಾಗಿರುವ ನಂಜಪ್ಪ ಹಾಗು ತೋಟದ ರೈಟರ್‌ ಚಂದ್ರ ಹಾಗು ಇತರರು ತೋಟದ ಒಳಗಡೆ ಅವೈಜ್ಞಾನಿಕವಾಗಿ ರಸ್ತೆ ಮಾಡಿದ ಪರಿಣಾಮ ಸದರಿ ಮೇಲ್ಕಂಡ ರಾಜ್ಯ ಹೆದ್ದಾರಿಯ ಬದಿಯಲ್ಲಿ ಸುಮಾರು 75 ಮೀಟರ್‌ಗಳಷ್ಟು ಭೂಕುಸಿತ ಉಂಟಾಗಿದ್ದು ಮತ್ತು 45 ಮೀಟರ್‌ನಷ್ಟು ಭೂಕುಸಿತ ಉಂಟಾಗುವ ಸಾಧ್ಯತೆ ಇದ್ದು ಸದರಿ ತೋಟದ ಮಾಲಿಕರು ಯಾವುದೇ ಅನುಮತಿಯನ್ನು ಪಡೆಯದೇ ರಸ್ತೆಯನ್ನು ನಿರ್ಮಿಸಿದ್ದು ಸರ್ಕಾರಕ್ಕೆ ಸುಮರು 220 ಲಕ್ಷಗಳಷ್ಟು ನಷ್ಟ ಉಂಟಾಗಿರುವುದಾಗಿ ಮಡಿಕೇರಿ 1ನೇ ಉಪವಿಭಾಗದ ಲೋಕೋಪಯೋಗಿ ಇಲಾಖೆ ಅಭಿಯಂತರ ತಿಮ್ಮಯ್ಯನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮೋಟಾರು ಬೈಕ್ ಅಫಘಾತ ಇಬ್ಬರಿಗೆ ಗಾಯ
          ಮೋಟಾರು ಬೈಕ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬೈಕ್ ಅಫಘಾತಗೊಂಡು ಸವಾರರಿಬ್ಬರು ಗಾಯಗೊಂಡ ಘಟನೆ ಮಡಿಕೇರಿ ಸಮೀಪದ ದೇವರಕೊಲ್ಲಿ ಎಂಬಲ್ಲಿ ನಡೆದಿದೆ. ದಿನಾಂಕ 26-07-2013 ರಂದು ಕೆ.ಸಿ.ಕೇಶವ ಎಂಬವರು ಕೆಲಸದ ನಿಮಿತ್ತ ಕಲ್ಲುಗುಂಡಿಗೆ ಹೋಗಿದ್ದು ಬಸ್ಸಿಗಾಗಿ ಕಾಯುತ್ತಿರುವಾಗ್ಗೆ ಸ್ನೇಹಿತ ಎಂ.ಡಿ. ಶ್ರೀಧರ್‌ರವರು ತಾನು ಮಡಿಕೇರಿಗೆ ಹೋಗುತ್ತಿದ್ದು ಬರುವಂತೆ ಕರೆದ ಮೇರೆಗೆ ಶ್ರೀಧರ್‌ರವರ ಮೋಟಾರು ಬೈಕ್‌ ನಂಬರ್‌ ಕೆಎ-21-ಜೆ-5106 ರಲ್ಲಿ ಮಡಿಕೇರಿ ಕಡೆಗೆ ಬರುತ್ತಿರುವಾಗ್ಗೆ ಸಮಯ 7-00 ಪಿ.ಎಂ.ಗೆ ದೇವರಕೊಲ್ಲಿ ಎಂಬಲ್ಲಿ ಶ್ರೀಧರ್‌ರವರು ಬೈಕನ್ನು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿ ಇಬ್ಬರೂ ಬೈಕಿನಿಂದ ರಸ್ತೆಗೆ ಬಿದ್ದು ಕೇಶವರವರಿಗೆ ಮಂಕು ಕವಿದಂತಾಗಿ ಮತ್ತು ಶ್ರೀಧರ್‌ರವರ ತಲೆಯ ಹಿಂಭಾಗಕ್ಕೆ ಪೆಟ್ಟಾಗಿ ಅಸ್ವಸ್ಥರಾಗಿದ್ದು ಯಾರೋ ಪ್ರಯಾಣಿಕರು ಶ್ರೀಧರ್‌ರವರನ್ನು ಕರೆದುಕೊಂಡು ಚಿಕಿತ್ಸೆಯ ಬಗ್ಗೆ ಸಂಪಾಜೆ ಕಡೆಗೆ ತೆರಳಿದ್ದು ನಂತರ ಕೇಶವರವರು ಚೇತರಿಸಿಕೊಂಡು ಮಡಿಕೇರಿಗೆ ಬಂದು ಶ್ರೀಧರ್‌ರವರ ಸಂಬಂಧಿಕರಾದ ಪ್ರಸನ್ನ ಕುಮಾರ್‌ ಎಂಬುವವರಿಗೆ ದೂರವಾಣಿ ಮುಖಾಂತರ ವಿಷಯ ತಿಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 

Saturday, July 27, 2013

ಮಹಿಳೆ ಮೇಲೆ ದೌರ್ಜನ್ಯ, ಪ್ರಕರಣ ದಾಖಲು:

ಶ್ರೀಮತಿ ಟೀನಾ ಎಂಬವರು  ದಿನಾಂಕ 17-11-2009 ರಂದು ಕುಕ್ಲೂರು ಗ್ರಾಮದ ಆರೋಪಿತ ಮಾಳೇಟೀರ ಕಾಳಪ್ಪ ರವರನ್ನು ರಿಜಿಸ್ಟರ್ ಮದುವೆಯಾಗಿ  9-5-2010 ರಂದು  ವಿರಾಜಪೇಟೆ ನಗರದ ಸಮುದಾಯ ಭವನದಲ್ಲಿ ಸಂಪ್ರದಾಯಿಕವಾಗಿ ಮದುವೆಯಾಗಿ ಪತಿಯೊಂದಿಗೆ ಆರ್ಜಿ ಗ್ರಾಮದ ಚಂದಪಂಡ ಕುಟುಂಬಸ್ಥರೊಬ್ಬರ ಬಾಡಿಗೆ ಮನೆಯಲ್ಲಿ ವಾಸವಿದ್ದು ಈತನು ಪ್ರತಿ ದಿವಸ ವಿಪರೀತ ಮದ್ಯಪಾನ ಮಾಡಿ ಕುಡಿತದ ಅಮಲಿನಲ್ಲಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು ದಾಂಪತ್ಯದ ಪಲವಾಗಿ  ಒಂದು ಗಂಡು ಮಗುವಿದ್ದು ಈತನ ಹಿಂಸೆ ತಾಳಲಾರದೇ 23-10-2012 ರಿಂದ ಆತನಿಂದ ಬೇರೆಯಾಗಿ ವಾಸವಾಗಿದ್ದು ದಿನಾಂಕ 26-7-2013 ರಂದು ಮಾಳೇಟಿರ ಕಾಳಪ್ಪನು ತಾನು ಇಲ್ಲದ ವೇಳೆ ತನ್ನ ತಾಯಿಯೊಂದಿಗೆ ಮಗುವನ್ನು ಕೊಲ್ಲುವುದಾಗಿಯು ಬೆದರಿಕೆ ಒಡ್ಡಿ , ಹೆಂಡತಿಯನ್ನು ಆತನೊಂದಿಗೆ ವಾಸಿಸಬೇಕೆಂದು  ಹೆದರಿಸಿ ಟೀನಾಳ ಜೀವ ಸಹಿತ ಬಿಡುವುದಿಲ್ಲವೆಂದು ತಾಯಿಯೊಂದಿಗೆ ಹೇಳಿಹೋಗಿದ್ದು, ಈ ಬಗ್ಗೆ ಶ್ರೀಮತಿ ಟೀನಾರವರ ದೂರಿನ ಮೇರೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.  
 

Friday, July 26, 2013

ಬೈಕ್‌ಗೆ ಬಸ್‌ಡಿಕ್ಕಿ ಸವಾರನಿಗೆ ಗಾಯ:

ಈ ದಿನ ಬೆಳಿಗ್ಗೆ ಬೆಳಿಗ್ಗೆ ನೆಲ್ಲಿಹುದಿಕೇರಿ ನಿವಾಸಿ ಮುನಿಸ್ವಾಮಿ  ಎಂಬವರು ತಮ್ಮ ಬಾಪ್ತು ಕೆಎ-12-ಹೆಚ್-1033 ರ ಬಜಾಜ್ ಬೈಕಿನ್ನಲ್ಲಿ ಎಂದಿನಂತೆ ಬಟ್ಟೆ ವ್ಯಾಪಾರಕ್ಕೆಂದು ಸಿದ್ದಾಪುರ ಕಡೆಯಿಂದ ಚೆಟ್ಟಳ್ಳಿ ಕಡೆಗೆ ಬೈಕನ್ನು ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ್ಗೆ ಸಮಯ ಬೆಳಿಗ್ಗೆ 7.00 ಗಂಟೆಗೆ ಅಭ್ಯತ್ ಮಂಗಲ ಗ್ರಾಮದ ಗ್ರೀನ್ ಫೀಲ್ಡ್ ಎಸ್ಟೇಟ್ ಗೆ ಹೋಗುವ ಗೇಟಿನ ಮುಂಭಾಗದ ಸಿದ್ದಾಪುರ- ಮಡಿಕೇರಿ ಮುಖ್ಯ ರಸ್ತೆಯಲ್ಲಿ ಚೆಟ್ಟಳ್ಳಿ ಕಡೆಯಿಂದ ಸಿದ್ದಾಪುರ ಕಡೆಗೆ ಹೋಗುತ್ತಿದ್ದ ಕೆಎ-19-ಎಫ್-2981 ರ ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸವಾರ ಗಾಯಗೊಂಡಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
ಖಾಸಗಿ-ಕೆಎಸ್‌ಆರ್‌ಟಿಸಿ ಬಸ್ಸುಗಳ ಮುಖಾಮುಖಿ ಡಿಕ್ಕಿಡಿಕ್ಕಿ, ಚಾಲಕ ಸೇರಿದಂತೆ ಪ್ರಯಾಣಿಕರಿಗೆ ಗಾಯ:
 ಖಾಸಗಿ ಬಸ್ಸಿಗೆ ಕೆ.ಎಸ್‌.ಆರ್‌.ಟಿ.ಸಿ ಬಸ್ಸು ಡಿಕ್ಕಿಯಾಗಿ  ಚಾಲಕ ಸೇರಿದಂತೆ  ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾದ ಘಟನೆ ಮಡಿಕೇರಿ ನಗರದ  ಮಂಗಳೂರು ರಸ್ತೆಯಲ್ಲಿ ನಡೆದಿದೆ.   ಈ ದಿನ ಬೆಳಿಗ್ಗೆ 7-00 ಗಂಟೆಗೆ  ಅನ್ನಚಂಡ ಜೋಯಪ್ಪ ಎಂಬವರು ಖಾಸಗಿ ಬಸ್ಸು ಸಂಖ್ಯೆ ಕೆಎ-12 ಎ..246ನ್ನು ಚಾಲನೆ ಮಾಡಿಕೊಂಡು ಮಂಗಳೂರು ರಸ್ತೆಯಲ್ಲಿ ಹೋಗುತ್ತಿರುವ ಸಮಯ ಎದುರುಗಡೆಯಿಂದ  ಬಂದ ಕೆ.ಎಸ್‌.ಆರ್‌.ಟಿ.ಸಿ. ಬಸ್ಸನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಎರಡೂ ಬಸ್ಸಿನ ಚಾಲಕರು ಗಾಯಗೊಂಡಿದ್ದು ಅಲ್ಲದೆ ಕೆಲವು ಪ್ರಯಾಣಿಕರಿಗೂ ಸಹ ಗಾಯಗಳಾಗಿದ್ದು, ಮಡಿಕೇರಿ ಟ್ರಾಫಿಕ್‌ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
ಅಕ್ರಮವಾಗಿ ಇಟ್ಟಿದ್ದ ಸ್ಫೋಟಕ ವಸ್ತುಗಳ ವಶ:
ವ್ಯಕ್ತಿಯೊಬ್ಬರು ತನ್ನ ಮನೆಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ ಸ್ಫೋಟಕ ವಸ್ತುಗಳನ್ನು ನಗರ ಪೊಲೀಸರು  ದಾಳಿ ನಡೆಸಿ ವಶಪಡಿಸಿಕೊಂಡಿರುತ್ತಾರೆ.  ದಿನಾಂಕ  25-7-2013 ರಂದು  ಮಡಿಕೇರಿ ನಗರ ಪೊಲೀಸ್‌ ಉಪ ನಿರೀಕ್ಷಕರಿಗೆ ದೊರೆತ ಖಚಿತ ವರ್ತಮಾನದ ಮೇರೆ  ಸಿಬ್ಬಂದಿ ಸಮೇತ  ನಗರದ ತ್ಯಾಗರಾಜ ಕಾಲೋನಿಯ ನಿವಾಸಿ ಸಬಾಸ್ಟಿನ್‌ ಡಿ'ಸೋಜ ರವರ ಮನೆಗೆ ದಾಳಿ ಮಾಡಿ ಅಕ್ರಮವಾಗಿ ಸರ್ಕಾರದ ಯಾವುದೇ ಪರವಾನಗಿ ಇಲ್ಲದೆ ಮನೆಯಲ್ಲಿ ಇಟ್ಟುಕೊಂಡಿದ್ದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿರುತ್ತಾರೆ.  ಈ ಸಂಬಂಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಆಕಸ್ಮಿಕ ಬೆಂಕಿ ತಗುಲಿ ಮಹಿಳೆಯ ದುರ್ಮರಣ:
ವಿರಾಜಪೇಟೆ ನಗರ ಠಾಣಾ ಸರಹದ್ದಿಗೆ ಸೇರಿದ ಮೋಗರಗಲ್ಲಿಯಲ್ಲಿ ಪವಿತ್ರನ್‌ ಎಂಬವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದ (ಸ್ವಂತ ಊರು ದೊಲ್ ಬರಾಸ್ತಿ ಗ್ರಾಮ, ಸಿನ್ ಚಾರ್ ಜಿಲ್ಲೆ, ಅಸ್ಸಾಂ ರಾಜ್ಯ) 21 ವರ್ಷ್ ಪ್ರಾಯದ ವಿವಾಹಿತ ಮಹಿಳೆ  ಶ್ರೀಮತಿ ಸಾವಿತ್ರಿ  ಇವರು ದಿನಾಂಕ 21-7-2013 ರಂದು ಮನೆಯಲ್ಲಿ ಅಡುಗೆ ಕೆಲಸ ಮಾಡುವ ವೇಳೆ ಆಕಸ್ಮಿಕವಾಗಿ  ಧರಿಸಿದ ಬಟ್ಟೆಗೆ ಬೆಂಕಿ ತಗುಲಿ ಸುಟ್ಟ ಗಾಯಗಾಳಾಗಿ ಮೈಸೂರಿನ ಕೆ.ಆರ್‌. ಆಸ್ಪತ್ತೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು ದಿನಾಂಕ 25-7-2013 ರಂದು ಚಿಕಿತ್ಸೆ ಫಲಕಾರಿಯಾಗದೆ  ಮೃತಪಟ್ಟಿದ್ದು, ವಿರಾಜಪೇಟೆ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

Thursday, July 25, 2013

ಆಸ್ತಿ ಮಾರಾಟದಲ್ಲಿ ವ್ಯಕ್ತಿಗೆ ವಂಚನೆ:
 
ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ನಲ್ವತ್ತೊಕ್ಲು ಗ್ರಾಮದ ನಿವಾಸಿ ಪುದಿಯಂಡ ಎ.ಮೊಹಮ್ಮದ್‌ ‌ ಎಂಬವರಿಗೆ ಮೈಸೂರಿನ ನಿವಾಸಿ ಚೋವಂಡ ಕೆ. ಮಾದಪ್ಪ ಎಂಬವರು ಆಸ್ತಿಯನ್ನು ಮಾರಾಟ ಮಾಡಿದ್ದು, ಅದೇ ಆಸ್ತಿಯನ್ನು ಮತ್ತೆ ಬೇರೆಯವರಿಗೆ ಮಾರಾಟಮಾಡಿ ವಂಚಿಸಿದ್ದು,  ಈ ಬಗ್ಗೆ ಎ.ಮೊಹಮ್ಮದ್‌ ರವರು ಈ ರೀತಿ ಮಾಡಿರುವ ಬಗ್ಗೆ ವಿಚಾರಿಸಿದ ಕಾರಣ ಕೆ. ಮಾದಪ್ಪನವರು ಅವಾಚ್ಯ ಶಬ್ದಗಳಿಂದ ಬೈದು, ಕೊಲೆಮಾಡುವುದಾಗಿ ಬೆದರಿಸಿದ್ದು, ಎ.ಮೊಹಮ್ಮದ್‌ ರವರ ದೂರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 
ದಾರಿ ತಡೆದು ವ್ಯಕ್ತಿಯ ಮೇಲೆ ಹಲ್ಲೆ:
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ದಾರಿ ತಡೆದು ಹಲ್ಲೆ ಮಾಡಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿಗ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ.  ದಿನಾಂಕ  24-7-2013 ರಂದು ಸಮಯ 9-30 ಪಿ.ಎಂ ಗೆ ಶ್ರೀ.ಸಕ್ಲೇನ್ ಎಂಬವರು  ಸ್ನೇಹಿತರೊಂದಿಗೆ  ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಮುಂಬಾಗ ನಡೆದುಕೊಂಡು  ತಮ್ಮ ಯುನಿವರ್ಸಲ್  ಮೊಬೈಲ್ ಅಂಗಡಿಗೆ ಹೋಗುತ್ತಿರುವಾಗ್ಗೆ  ವಿರಾಜಪೇಟೆ ನಿವಾಸಿಗಳಾದ ಭಗತ್‌ಸಿಂಗ್‌ ಹಾಗೂ ಸರವಣ್‌ಸಿಂಗ್‌ ಎಂಬ ವ್ಯಕ್ತಿಗಳು ತಮ್ಮ ಬಾಪ್ತು ಬೊಲೆರೊ ವಾಹನ ಸಂಖ್ಯೆ ಕೆ ಎ 09 ಟಿ ಝಡ್ 4182 ರಲ್ಲಿ ಬಂದು ಶ್ರೀ.ಸಕ್ಲೇನ್‌ರವರ  ದಾರಿ ತಡೆದು, ನೀನು ಅಂಗಡಿಯಲ್ಲಿ ಮೊಬೈಲ್ ಮತ್ತು ಸರ್ವಿಸ್ ಗೆ ನಮ್ಮಿಂದ ಹೆಚ್ಚಿಗೆ ಹಣ ತೆಗೆದುಕೊಂಡಿದ್ದೀಯಾ ಎಂದು ಹೇಳಿ   ಕೈಯಿಂದ ಹೊಡೆದು ನೋವು ಪಡಿಸಿದ್ದು ಅಲ್ಲದೇ ಜಗಳ ಮಾಡಿದ ಬಗ್ಗೆ ಪೊಲೀಸರಿಗೆ ಪುಕಾರು ಕೊಟ್ಟರೆ ಬೊಲೆರೊ ವಾಹನವನ್ನು ನಿನ್ನ ಮೇಲೆ ಹತ್ತಿಸಿ ಕೊಲೆ ಮಾಡುವುದಾಗಿ ಕೊಲೆ  ಬೆದರಿಕೆ ಹಾಕಿದ್ದು, ವಿರಾಜಪೇಟೆ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 

Wednesday, July 24, 2013

ಓಮಿನಿಗೆ ಸ್ವಿಪ್ಟ್‌ ಕಾರ್‌ ಡಿಕ್ಕಿ ಒಬ್ಬನಿಗೆ ಗಾಯ:

     ಕೆ.ಬಷೀರ್‌ ಎಂಬವರು ಕೆಎ-21-ಎಂ-9685 ರ ಮಾರುತಿ ಓಮಿನಿ ವ್ಯಾನಿನಲ್ಲಿ ಚಾಲಕನಾಗಿದ್ದು ದಿನಾಂಕ 23-07-2013 ರಂದು ಕಲ್ಲಡ್ಕದಿಂದ ಬೇಕರಿ ತಿಂಡಿಗಳನ್ನು ಮಡಿಕೇರಿ ಹಾಗು ಇತರೆ ಕಡೆಗಳಿಗೆ ವಿತರಿಸಲೆಂದು ಮೂರ್ನಾಡಿಗೆ ಹೋಗಿ ವಾಪಾಸು ಮಡಿಕೇರಿ ಕಡೆಗೆ ಬರುತ್ತಿರುವಾಗ್ಗೆ ಸಮಯ 6-45 ಪಿ.ಎಂ.ಗೆ ಮಡಿಕೇರಿ ಕಡೆಯಿಂದ ಬಂದ ಕೆಎ-12-ಪಿ-1702 ರ ಮಾರುತಿ ಸ್ವಿಪ್ಟ್‌ ಕಾರನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು  ಮಾರುತಿ ವ್ಯಾನಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ಕಾರುಗಳು ಜಖಂಗೊಂಡು ಬಷೀರ್‌ರವರ ಬಲಕಾಲಿನ ಮಂಡಿಗೆ, ತಲೆಯ ಹಿಂಭಾಗಕ್ಕೆ ರಕ್ತಗಾಯವಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಆರ್ಥಿಕ ಮುಗ್ಗಟ್ಟು, ವ್ಯಕ್ತಿಯ ಆತ್ಮಹತ್ಯೆ.
     ಆರ್ಥಿಕವಾಗಿ ನಷ್ಟ ಉಂಟಾಗಿದ್ದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಜಿಗುಪ್ಸೆಗೊಂಡು ಆತ್ಮಹತ್ಯೆಮಾಡಿಕೊಂಡ ಘಟನೆ ನಡೆದಿದೆ. ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಹಳ್ಳಿಗಟ್ಟು ಗ್ರಾಮದಲ್ಲಿ ವಾಸವಾಗಿದ್ದ  ಪ್ರವೀಣ ಎಂಬ ವ್ಯಕ್ತಿ ಆರ್ಥಿಕ ಮುಗ್ಗಟ್ಟಿನಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 23-7-2013 ರಂದು ತಾನು ವಾಸವಾಗಿದ್ದ ಬಾಡಿದೆ ಮನೆಯಲ್ಲಿ ಕುತ್ತಿಗೆಗೆ ನೇಣನ್ನು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅವ್ರ ಪತ್ನಿ ಶ್ರೀಮತಿ ಚಿತ್ರಾರವರು ನೀಡಿದ ದೂರಿನ ಮೇರೆಗೆ  ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 
ಲಾರಿಯಲ್ಲಿ ಅಕ್ರಮ ಮರ ಸಾಗಾಟ:
     ದಿನಾಂಕ 24-7-2013 ರಂದು ಸಮಯ 8-00 ಎ.ಎಂ ಗೆ ವಿರಾಜಪೇಟೆ ನಗರದ ಆರ್ಜಿ ಪೆರಂಬಾಡಿ ರಸ್ತೆಯಲ್ಲಿ ಸ್ವರಾಜ್ ಮಜ್ದಾ ವಾಹನ ಸಂಖ್ಯೆ ಕೆ ಎ 11  3943 ರಲ್ಲಿ ಸುಮಾರು 25,000 ರೂ ಬೆಲೆಬಾಳುವ 5 ನೊಗ ಮರದ ತುಂಡುಗಳನ್ನು  ಆರೋಪಿತರಾದ ಸುಮನ್ , ಮಹಮ್ಮದ್ ಆಲಿ , ಸುರೇಶ್ ಎಂಬವರು  ಅಕ್ರಮವಾಗಿ ಸರ್ಕಾರದ  ಪರವಾನಗೆ ಇಲ್ಲದೇ ಸಾಗಾಟ  ಮಾಡುತ್ತಿದ್ದುದ್ದನ್ನು ವಿರಾಜಪೇಟೆ ನಗರ ಪಿ.ಎಸ್‌.ಐ ರವರಾದ  ಸುರೇಶ್‌ ಬೋಪಣ್ಣ ಹಾಗೂ ಸಿಬ್ಬಂದಿಯವರು ಪತ್ತೆಹಚ್ಚಿ  ಆರೋಪಿ ಯನ್ನು ಬಂಧಿಸಿ ಮಾಲನ್ನು ವಶಕ್ಕೆ ತೆಗೆದುಕೊಂಡು ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
 
ಕ್ಲುಲ್ಲಕ ಕಾರಣ ವ್ಯಕ್ತಿಗೆ ಕೊಲೆ ಬೆದರಿಕೆ:
     ಶ್ರೀ.ಹೆಚ್.ಎನ್,ರಕ್ಷಿತ್ ಎಂಬವರ ದೊಡ್ಡಪ್ಪನ ಮಗಳಾದ ಸುಚಿತ್ರ ಎಂಬವಳು ಈ ಹಿಂದೆ ವಿರಾಜಪೇಟೆ ಕಾವೇರಿ ಮಹಿಳಾ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ವೇಳೆ ಹಾಸ್ಟೆಲ್ ನಲ್ಲಿ ತಂಗಿದ್ದ ಸಮಯದಲ್ಲಿ ಪಕ್ಕದ ಮನೆಯಲ್ಲಿ ವಾಸವಿದ್ದ ವಿರಾಜಪೇಟೆ ನಗರದ ಚಿಕ್ಕಪೇಟೆಯಲ್ಲಿ ವಾಸವಾಗಿರುವ ನವೀನ್‌ ಎಂಬ ವ್ಯಕ್ತಿ  ಸುಚಿತ್ರಳೊಂದಿಗೆ ಪರಿಚಯವಾಗಿ ಪೋನ್ ಕರೆಗಳನ್ನು  ಮಾಡುತ್ತಿದ್ದು ಹಾಲಿ ಸುಚಿತ್ರಳು ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದು ಅಲ್ಲಿಗೂ ಸಹ ಆತ ದೂರವಾಣಿ ಕರೆ ಮಾಡಿ ತೊಂದ್ರೆ ಕೊಡುತ್ತಿದ್ದು ಈ ವಿಚಾರದ ಬಗ್ಗೆ  ರಕ್ಷಿತ್‌  ದಿನಾಂಕ 21-7-2013 ರಂದು ರಾತ್ರಿ 9-30 ಪಿ.ಎಂ ಗೆ ನವೀನ್‌ ದೂರವಾಣಿಗೆ ಕರೆಮಾಡಿ  ಇನ್ನು ಮುಂದೆ ಸುಚಿತ್ರಳೊಂದಿಗೆ ಪೋನ್ ನಲ್ಲಿ ಮಾತನಾಡಬೇಡ ಎಂದು ಹೇಳಿದಾಗ ನವೀನನು ನಾನು ಸುಚಿತ್ರಳನ್ನು 3 ವರ್ಷದಿಂದ ಪ್ರೀತಿಸುತ್ತಿದ್ದು  ನಮ್ಮ ಪ್ರೀತಿಗೆ ನೀನು ಅಡ್ಡ ಬರಬೇಡ, ಅಡ್ಡ ಬಂದರೆ ನಿನ್ನನ್ನು ಕೊಲೆ ಮಾಡುವುದಾಗಿ ದೂರವಾಣಿಯಲ್ಲಿ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ವಿರಾಜಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 

Tuesday, July 23, 2013

ಸ್ಕೂಟರ್‌ಗೆ ಕಾರು ದಿಕ್ಕಿ ಒಬ್ಬನ ದುರ್ಮರಣ, ಮತ್ತೊಬ್ಬನಿಗೆ ಗಾಯ:

ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಕಾರು ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿ ಸ್ಕೂಟರ್‌ ಚಾಲಕ ದುರ್ಮರಣಗೊಂಡು ಹಿಂಬದಿ ಸವಾರನಿಗೆ ಗಾಯಗಳಾದ ಘಟನೆ ಬಾಳೆಲೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 22/07/2013 ರಂದು ಸಮಯ 04.00 ಗಂಟೆ ಸಮಯದಲ್ಲಿ ಪಾನಿಮುಟ್ಟಿರ ಬೆಳ್ಳಿಯಪ್ಪ ನವರು ವಿರೂಪಾಕ್ಷ ಎಂಬವರೊಂದಿಗೆ ಬಾಳೆಲೆಗೆ ಸ್ಕೂಟಿಯಲ್ಲಿ ಬಾಳೆಲೆ ಕಡೆಗೆ ಹೋಗುತ್ತಿದ್ದು ಪೊನ್ನಪ್ಪಸಂತೆ ಬೈರಮಂಡ್‌ ಮುಖ್ಯ ರಸ್ತೆ ತಲುಪಿದಾಗ ಎದುರುಗಡೆಯಿಂದ ಅಂದರೆ ಬಾಳೆಲೆ ಕಡೆಯಿಂದ ಕೆಎ-05 ಎಂಎ-328 ರ ಎಸ್ಟೀಮ್‌ ಕಾರನ್ನು ಅದರ ಚಾಲಕ ಚೆಪ್ಪುಡೀರ ಚೇತನ್‌ರವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಸ್ಕೂಟಿಗೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟಿಯ ಚಾಲಕ ಬೆಳ್ಳಿಯಪ್ಪನವರ ಎಡಕಾಲಿಗೆ ತೀವ್ರ ಸ್ವರೂಪದ ಗಾಯವಾಗಿ ವಿರೂಪಾಕ್ಷರವರಿಗೆ ಸಹಾ ಗಾಯಗಳಾಗಿ ಅವರನ್ನು ಚಿಕಿತ್ಸೆಗಾಗಿ ಗೋಣಿಕೊಪ್ಪ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ವೇಳೆ ಪಾನಿಕುಟ್ಟೀರ ಬೆಳ್ಳಿಯಪ್ಪನವರು ಮೃತಪಟ್ಟಿದ್ದು ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ಹೆಂಗಸು ಕಾಣೆ, ಪ್ರಕರಣ ದಾಖಲು:
ಆಸ್ಪತ್ರೆಗೆ ಹೋಗಿಬರುವುದಾಗಿ ತಿಳಿಸಿ ಮನೆಯಿಂದ ಹೋದ ಮಹಿಳೆಯೊಬ್ಬರು ಮರಳಿ ಮನೆಗೆ ಬಾರದೆ ಕಾಣೆಯಾಗಿರುವ ಘಟನೆ ವಿರಾಜಪೇಟೆ ಸಮೀಪದ ಕಡಂಗಮರೂರು ಗ್ರಾಮದಲ್ಲಿ ನಡೆದಿದೆ. ಶ್ರೀಮತಿ ಗೀತಾ, ಪ್ರಾಯ 25 ವರ್ಷ, ಗಂಡ ದಿನೇಶ್, ವಾಸ ಕಡಂಗ ಮರೂರು ಗ್ರಾಮ ಇವರು ದಿನಾಂಕ 21-7-2013 ರಂದು ಬೆಳಿಗ್ಗೆ 10-00 ಗಂಟೆಯ ಸಮಯದಲ್ಲಿ ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದು ಮರಳಿ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಈ ಸಂಬಂಧ ಕಾಣೆಯಾದ ಮಹಿಳೆಯ ಪತಿ ದಿನೇಶ್‌ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

Monday, July 22, 2013

ಅಪರಿಚಿತ ವ್ಯಕ್ತಿಯ  ಮೃತದೇಹ ಪತ್ತೆ:
 
     ಅಪರಿಚಿತ ವ್ಯಕ್ತಿಯ ಮೃತದೇಹವೊಂದು ಹೊಳೆಯಲ್ಲಿ ಪತ್ತೆಯಾದ ಘಟನೆ  ಕಾನೂನು ಗ್ರಾಮದಲ್ಲಿ ನಡೆದಿದೆ.  ಸುಮಾರು 30 ರಿಂದ 40 ವರ್ಷ ವಯಸ್ಸಿನ  ವ್ಯಕ್ತಿಯೊಬ್ಬರ  ಮೃತದೇಹವು  ಪೊನ್ನಂಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಕಾನೂರು ಗ್ರಾಮದ ಲಕ್ಷ್ಮಣತೀರ್ಥ ಹೊಳೆಯಲ್ಲಿ ಪತ್ತೆಯಾಗಿದ್ದು ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ
 

Sunday, July 21, 2013

ರಿಕ್ಷಾ ಮತ್ತುಬೈಕ್ ಡಿಕ್ಕಿ, ಬೈಕ್ ಸವಾರರಿಬ್ಬರಿಗೆ  ಗಾಯಾಳು 
           ರಿಕ್ಷಾ ಮತ್ತು ಬೈಕ್ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರಿಗೆ ಗಾಯಗಳಾದ ಘಟನೆ ಕೊಡ್ಲಿಪೇಟೆಯಲ್ಲಿ ನಡೆದಿದೆ. ದಿನಾಂಕ 18-07-2013 ರಂದು ಕುಶಾಲನಗರದ ಆದಿ ಶಂಕರಾಚಾರ್ಯ ಬಡಾವಣೆ ನಿವಾಸಿ ಮುತ್ತುಸ್ವಾಮಿ ಎಂಬವರ ಮಗ ಶಶಿಧರನ್‌ ಹಾಗೂ ಅವರ ಸ್ನೇಹಿತ ರವಿ  ಎಂಬವರು ಕೆಲಸ ಮುಗಿಸಿಕೊಂಡು ಕೆಎ-12-ಕೆ-9743 ರ ಮೋಟಾರು ಬೈಕಿನಲ್ಲಿ ಕೊಡ್ಲಿಪೇಟೆಯ ಅಂಚೆ ಕಛೇರಿ ಮುಂಭಾಗಕ್ಕಾಗಿ ಬರುತ್ತಿರುವಾಗ ಎದುರುಗಡೆಯಿಂದ ಕೆಎ-12-ಎ-5008 ರ ಆಟೋ ಚಾಲಕ ಆಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಶಶಿಧರನ್‌ರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕಿನಲ್ಲಿದ್ದ ಶಶೀಧರನ್‌ ಹಾಗೂ ರವಿ ರವರುಗಳಿಗೆ ಗಾಯಗಳಾಗಿದ್ದು, ಚಿಕಿತ್ಸೆ ಬಗ್ಗೆ ಅವರನ್ನು ಕೊಯಂಬತ್ತೂರಿನ ಗಂಗಾ ಆಸ್ಪತ್ರೆಗೆ ದಾಖಲು ಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಸಾವು 
        ಕ್ಷುಲ್ಲಕ ಕಾರಣಕ್ಕೆ ಮೈಗೆ ಸೀಮೆಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆಯತ್ನಿಸಿದ್ದ ವ್ಯಕ್ತಿ ಸಾವಿಗೀಡಾದ ಘಟನೆ ಕೊಡ್ಲಿಪೇಟೆ ಸಮೀಪದ ಬೆಂಬಳೂರು ಗ್ರಾಮದಲ್ಲಿ ನಡೆದಿದೆ.ದಿನಾಂಕ 01/06/2013ರಂದು ಬೆಂಬಳೂರು ಗ್ರಾಮದ ಅಕ್ಕಮ್ಮ ರವರ ಮಗ ವೆಂಕಟೇಶ ಊಟವನ್ನು ಮಾಡದೆ ಮದ್ಯಪಾನವನ್ನು ಮಾಡಿಕೊಂಡು ಹಾಗೆ ಮನೆಗೆ ಬಂದು ಮಲಗಿದ್ದು, ಊಟಕ್ಕೆ ಒತ್ತಾಯಿಸಿದಾಗ ಒತ್ತಾಯ ಮಾಡಿದರೆ ಆತ್ಮಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಮನೆಯವರು ಏನಾದರೂ ಮಾಡಿಕೋ ಎಂದು ಹೇಳಿದ್ದು ನಂತರ ತೋಟದ ಹತ್ತಿರ ಹೋಗಿ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿದ್ದು, ಚಿಕಿತ್ಸೆ ಬಗ್ಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲುಪಡಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ : 01-06-2013 ರಂದು ಮೃತಪಟ್ಟಿದ್ದು, ವಿಕ್ಟೋರಿಯಾ ಆಸ್ಪತ್ರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಈ ದಿನ ಠಾಣೆಗೆ ವರ್ಗಾಯಿಸಿ ಕೊಟ್ಟಿದ್ದನ್ನು ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, July 20, 2013

ಪೊಲೀಸ್‌ ದಾಳಿ ಅಕ್ರಮ ಗಾಂಜಾ ವಶ:

     ದಿನಾಂಕ 18/07/2013 ರಂದು ಸಮಯ ರಾತ್ರಿ 08.00 ಗಂಟೆಗೆ ಮಡಿಕೇರಿ ನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಶೌಚಾಲಯದ ಹತ್ತಿರ  ಅಬ್ದುಲ್‌ ರಹಿಮಾನ್‌, ಪಿ.ಎಂ. ಷಾಜಿ, ಪಿ. ಮರ್ಕರ ಹಾಗೂ ಕೆ. ಸಂತೋಷ್‌  ಎಂಬ ವ್ಯಕ್ತಿಗಳು ಸರ್ಕಾರದ ಯಾವುದೇ ಪರವಾನಗೆ ಇಲ್ಲದೆ ಅಕ್ರಮವಾಗಿ 400 ಗ್ರಾಂ ಗಾಂಜಾ ಆಯಿಲ್(ಅಂಟಿನಂತಿರುವ)ಯನ್ನು ತಮ್ಮ ವಶದಲ್ಲಿ ಇಟ್ಟುಕೊಂಡು ಮಾರಾಟ ಮಾಡಲು ತೊಡಗಿದವರನ್ನು  ಮಡಿಕೇರಿ ನಗರ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ದಸ್ತಗಿರಿ ಮಾಡಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
 
ಅಕ್ರಮ ಜೂಜಾಟ, ಆರೋಪಿಗಳು ಪೊಲೀಸ್‌ ವಶಕ್ಕೆ:
 
ಖಚಿತ ವರ್ತಮಾನದ ಮೇರೆ ವಿರಾಜಪೇಟೆ ನಗರ ಠಾಣಾ ಪಿ.ಎಸ್‌.ಐ. ಶ್ರೀ ಸುರೇಶ್‌ ಬೋಪಣ್ಣ ರವರು ಸಿಬ್ಬಂದಿಯೊಂದಿಗೆ
ದಿನಾಂಕ 19-7-2013 ರಂದು ಸಮಯ 10-00 ಎ.ಎಂ ಗೆ ವಿರಾಜಪೇಟೆ ನಗರದ ತೆಲುಗರ ಬೀದಿಯ ಮಾರಿಯಮ್ಮ ದೇವಸ್ಥಾನದ ಎದುರು ಸ್ಮಶಾನದ ದಾರಿಯಲ್ಲಿ ಕೆಲ ವ್ಯಕ್ತಿಗಳು ಸರ್ಕಾರದ ಪರವಾನಗೆ ಇಲ್ಲದೇ ಅಕ್ರಮವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದು, ಅವರ  ಮೇಲೆ ದಾಳಿ ನಡೆಸಿ ಜೂಜಾಟದಲ್ಲಿ ಬಳಸಿದ ರೂ 3,460/- ಹಣವನ್ನು ಮತ್ತು 52 ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿಗಳಾದ ಜೆ.ರಮೇಶ ತಂದೆ ಆಂತೋಣಿ,ಪ್ರಾಯ 33 ವರ್ಷ, ಆಟೋ ಚಾಲಕ, ವಾಸ ತೆಲುಗರ ಬೀದಿ, (2)ಬಿ.ಕೆ.ದಾಮೋದರ ತಂದೆ ಪೌತಿ ಕುಂಞಿರಾಮ,ಪ್ರಾಯ 43 ವರ್ಷ, ವಾಸ ಅರಸುನಗರ, ವಿರಾಜಪೇಟೆ  (3)ಎ.ಕೆ.ಸುಬಾಷ್ ತಂದೆ ಪೌತಿ ಕುಂಞಿರಾನ್,ಪ್ರಾಯ 33 ವರ್ಷ, ವಾಸ ಅರಸುನಗರ, ವಿರಾಜಪೇಟೆ (4)ಹೆಚ್.ವಿ.ರಾಕೇಶ್ ತಂದೆ ವೆಂಕಟೇಶ್,ಪ್ರಾಯ 20 ವರ್ಷ, ವಾಸ ಶಿವಕೇರಿ,ವಿರಾಜಪೇಟೆ.ಮತ್ತು (5) ಕೆ.ಆರ್.ಪ್ರದೀಪ್ ತಂದೆ ರಾಜೇಗೌಡ,ಪ್ರಾಯ 28 ವರ್ಷ, ವಾಸ ಜೈನರಬೀದಿ,ವಿರಾಜಪೇಟೆ ಇವರುಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
 
ರಸ್ತೆ ಅಪಘಾತದಲ್ಲಿ ಚಾಲಕನ ದುರ್ಮರಣ:
ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್‌ ವಾಹನವೊಂದು ರಸ್ತೆಯಲ್ಲಿ ಮಗುಚಿದ ಪರಿಣಾಮ ಚಾಲಕ ತೀವ್ರವಾಗಿ ಗಾಯಗೊಂಡು ದುರ್ಮರಣಗೊಂಡ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಎಂ.ಬಾಡಗ ಮಡಿಕೇರಿ-ವಿರಾಜಪೇಟೆ ಸಾರ್ವಜನಿಕ ರಸ್ತೆಯಲ್ಲಿ  ನಡೆದಿದೆ.  ದಿನಾಂಕ 19-07-2013 ರಂದು ಬೆಳಿಗ್ಗೆ ಕೆ.ಎ. ಸುದೀಪ್‌ ಎಂಬ ವ್ಯಕ್ತಿ ತನ್ನ ಬಾಪ್ತು ಕೆ.ಎ-12, ಎ-5646ರ ಟಾಟಾ ಏಸ್‌ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಓಡಿಸಿ ತನ್ನ ನಿಯಂತ್ರಣ ಕಳೆದುಕೊಂಡು  ರಸ್ತೆಯಲ್ಲಿ ಮಗುಚಿಕೊಂಡ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮದ್ಯೆ ಮೃತಪಟ್ಟಿರುತ್ತಾರೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Thursday, July 18, 2013

ಲಾರಿ ಕಳವು ಪ್ರಕರಣ ದಾಖಲು:

     ಮಡಿಕೇರಿ ನಗರದಲ್ಲಿ ನಿಲ್ಲಿಸಿದ್ದ ಸ್ವರಾಜ್‌ ಮಜ್ದಾ ಲಾರಿಯನ್ನು ಕಳವು ಮಾಡಿದ ಘಟನೆ ನಡೆದಿದೆ.   ದಿನಾಂಕ 16-7-2013 ರಂದು  ಎಸ್‌. ಡೇನಿಯಲ್‌,  ಆಗ್ರೋ ಶಕ್ತಿ ಎಂಟರ್‌ಪ್ರೈಸೆನ್‌  ಮಾಲಿಕ ಇವರು ತಮಗೆ ಸೇರಿದ ಲಾರಿ ಸಂಖ್ಯೆ ಕೆಎ-12 ಎ-1988 ನ್ನು ಮಡಿಕೇರಿ ನಗರದ ಕಾಲೇಜು ರಸ್ತೆಯ ಆಗ್ರೋ ಶಕ್ತಿ ಎಂಟರ್ ಪ್ರೈಸೆಸ್‌ ಕಟ್ಟಡದ ಮುಂದು ನಿಲ್ಲಿಸಿದ್ದು ಅದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ
ತನಿಖೆ ಕೈಗೊಂಡಿರುತ್ತಾರೆ. 


ಮನುಷ್ಯ ಕಾಣೆ, ಪ್ರಕರಣ ದಾಖಲು:

     ಸ್ವಂತಕೆಲಸಕ್ಕೆಂದು ಮನೆಯಿಂದ ಹೋದ ವ್ಯಕ್ತಿಯೊಬ್ಬರು ಮರಳಿ ಮನೆಗೆ ಬಾರದೆ ಕಾಣೆಯಾಗಿರುವ ಘಟನೆ ಸಿದ್ದಾಪುರ ಹತ್ತಿರದ ನೆಲ್ಲಿಹುದಿಕೇರಿ ಗ್ರಾಮದಿಂದ ವರದಿಯಾಗಿದೆ.   ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ, ನೆಲ್ಲಿಹುದಿಕೇರಿ ಗ್ರಾಮ ಪಂಚಾಯ್ತಿ ಸದಸ್ಯರಾಗಿರುವ 42 ವರ್ಷ ಪ್ರಾಯದ ಎ.ಕೆ. ರಘು ಎಂಬವರು ದಿನಾಂಕ 17-7-2013 ರಂದು ಇವರು ವಾಸವಾಗಿರುವ ನೆಲ್ಲಿಹುದಿಕೇರಿ ಗ್ರಾಮದಿಂದ ಸೋಮವಾರಪೇಟೆ ತಾಲೋಕು ಕಛೇರಿಗೆ ತಮ್ಮ ಬಾಪ್ಸು ಕಾರಿನಲ್ಲಿ ಹೋದವರು ಮರಳಿ ಮನೆಗೆ ಬಾರದೆ ಕಾಣಿಯಾಗಿದ್ದು, ಮೇದಪ್ಪ ಎಂಬವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 
ಆಸ್ತಿ ವಿವಾದ ವ್ಯಕ್ತಿಯ ಮೇಲೆ ಹಲ್ಲೆ:
 
ಮಡಿಕೇರಿ ತಾಲೋಕಿನ ಕಾಲೂರು ಗ್ರಾಮದ ವಾಸಿ ಚೆನ್ನಪಂಡ ಸಾಗರ್‌ರವರಿಗೂ ಮತ್ತು ನಂದಲಪಂಡ ಪೂವಯ್ಯನವರಿಗೂ ಗದ್ದೆಯ ಏರಿಯ ವಿಚಾರದಲ್ಲಿ ಜಗಳವಾಗುತ್ತಿದ್ದು ಈ ಬಗ್ಗೆ ಚೆನ್ನಪಂಡ ಸಾಗರ್‌ ಪಂಚಾಯಿತಿಗೆ ಪುಕಾರು ನೀಡಿದ್ದು ಈ ದಿನ ಸಮಯ ಸುಮಾರು 12-50 ಗಂಟೆಗೆ ಗ್ರಾಮ ಪಂಚಾಯಿತಿ ಅದ್ಯಕ್ಷ ಸುಭಾಷ್, ಸದಸ್ಯ ಸೋಮಯ್ಯ, ಟಿ ಕೆ ಬೋಪಣ್ಣ ಮತ್ತು ಸದಸ್ಯೆ ದಮಯಂತಿ ಸದರಿ ಸ್ಥಳಕ್ಕೆ ಬಂದಿದ್ದು ಪಿರ್ಯಾದಿಯರು ಅವರ ತಂದೆ ಗಣಪತಿ ಮತ್ತು ಚೆನ್ನಪಂಡ ಹೆಂಡತಿ ಸವಿತಾ ಗದ್ದೆಯ ಏರಿಯ ಹತ್ತಿರ ಹೋದಾಗ ಅಲ್ಲಿ ಪೂವಯ್ಯ ಮತ್ತು ಅವರ ಹೆಂಡತಿ ಲೀಲಾವತಿಯವರು ಇದ್ದು ಸಾಗರ್‌ರವರನ್ನು ಕಂಡು ಪೂವಯ್ಯನವರು ನೀನು ಪಂಚಾಯಿತಿಯವರನ್ನು ಕರೆತಂದು ಏನು ಮಾಡುತ್ತೀಯಾ ಎಂದು ಹೇಳಿ ಅಲ್ಲೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ಎದೆಯ ಮುಳೆಯ ಜಾಗಕ್ಕೆ ಗುದ್ದಿ ನೋವು ಪಡಿಸಿದ್ದು  ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 

Wednesday, July 17, 2013

ಠೇವಣಿ ಹಣವನ್ನು ನೀಡದೆ ವಂಚನೆ, ಪ್ರಕರಣ ದಾಖಲು:

     ಮೈಸೂರಿನ ನಿವಾಸಿಗಳಾದ  ರವೀಂದ್ರನಾಥ್‌ ಹಾಗೂ ಗಾಯತ್ರಿ ಎಂಬವರು ವಿರಾಜಪೇಟೆ ನಗರದಲ್ಲಿ ಗ್ರೀನ್ ಬಡ್ಸ್ ಆಗ್ರೋ ಲಿಮಿಟೆಡ್ ಕಂಪೆನಿಯ ಶಾಖೆ ತೆರೆದು ಸದರಿ ಕಂಪೆನಿಯಲ್ಲಿ ವಿರಾಜಪೇಟೆ ತಾಲೋಕಿನ ಹೆಗ್ಗಳ ಗ್ರಾಮದ ನಿವಾಸಿ ಶ್ರೀಮತಿ ಜೆಸ್ಸಿ ಎಂಬವರನ್ನು ಹೆಚ್ಚಿನ ಕಮಿಷನ್‌ ಹಣ ಕೊಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಡಿಪಾಸಿಟ್‌, ಪಿಗ್ಮಿ ಮತ್ತು ಆರ್‌ಡಿ ರೂಪದಲ್ಲಿ ಹಣ ಸಂಗ್ರಹಿಸುವ ಏಜಂಟ್‌ ಆಗಿ ನೇಮಕ ಮಾಡಿದ್ದು, ಅದರಂತೆ ಜೆಸ್ಸಿರವರು  ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿದ್ದು ಅಲ್ಲದೆ ಅವರೂ ಸಹ ಎರಡು ಲಕ್ಷ ರೂ. ಹಣವನ್ನು ತೊಡಗಿಸಿದ್ದು, ಸದರಿ ಹಣವನ್ನು ಕಂಪೆನಿಯ ವ್ಯವಸ್ಥಾಪಕರಾದ ಶ್ರೀಮತಿ ಗಾಯತ್ರಿರವರು ಮತ್ತು ರವೀಂದ್ರರವರು ವಂಚಿಸಿ ಸಾರ್ವಜನಿಕರಿಗೆ ಹಣವನ್ನು ಮರುಪಾವತಿಸದೇ ತಲೆಮರೆಸಿಕೊಂಡಿದ್ದು, ವಿರಾಜಪೇಟೆ ಪೊಲೀಸರು ಪ್ರಕರನವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
 
ಕಾಣೆಯಾದ ವ್ಯಕ್ತಿಯ ಆತ್ಮಹತ್ಯೆ
 
     ದಿನಾಂಕ 6-7-2013 ರಂದು  ವಿರಾಜಪೇಟೆ ಗ್ರಾಮಾಂತರ  ಪೊಲೀಸ್‌ ಠಾಣಾ ವ್ಯಾಪ್ತಿಯ ಹೆಗ್ಗಳ ಗ್ರಾಮದ ನಿವಾಸಿ 60 ವರ್ಷ ಪ್ರಾಯದ ಸೋಮಯ್ಯ ಎಂಬವರು ಕಾಣೆಯಾಗಿದ್ದು,  ಅದೇ ಗ್ರಾಮದ ನಿವಾಸಿ ಗಿರಿಧರ ಎಂಬವರ ತೋಟದ ಬಾವಿಯಲ್ಲಿ ಸದ್ರಿ ಸೋಮಯ್ಯನವರ ಮೃತದೇಹ ಪತ್ತೆಯಾಗಿದ್ದು, ಸದರಿಯವರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿರುತ್ತದೆ.  ಈ ಬಗ್ಗೆ  ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Tuesday, July 16, 2013

ಪಾದಾಚಾರಿಗೆ ಕಾರು ದಿಕ್ಕಿ, ಆಸ್ಪತ್ರೆಗೆ ದಾಖಲು:
 
     ಕಾರೊಂದನ್ನು  ಚಾಲಕ ಅಜಾಗರೂಕತೆಯಿಂದ ಓಡಿಸಿ  ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಡಿಕ್ಕಿಪಡಿಸಿದ ಘಟನೆ ಪೊನ್ನಂಪೇಟೆ ಬಳಿಯ ಜೋಡುಬಟ್ಟಿಯಲ್ಲಿ ನಡೆದಿದೆ.  ದಿನಾಂಕ14/07/2013 ರಂದು ಸಮಯ ರಾತ್ರಿ 8.45 ಗಂಟೆಗೆ  ಗಣೇಶ ಎಂಬವರು  ಹಳ್ಳಿಗಟ್ಟು ಗ್ರಾಮದ ತಮ್ಮ ವಾಸದ ಮನೆಯ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ  ನಡೆದಾಡುತ್ತಿದ್ದಾಗ ಪೊನ್ನಂಪೇಟೆ ಕಡೆಯಿಂದ ಗೋಣಿಕೊಪ್ಪ ಕಡೆಗೆ ಬರುತ್ತಿದ್ದ ಕಾರು ನಂ ಕೆಎ 12 ಎನ್ 6983ರ ಚಾಲಕನು ತನ್ನ ಕಾರನ್ನು ಅತೀ ವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಗಣೀಶರವರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರಿಗೆ ರಕ್ತಗಾಯಗಳಾಗಿ ಪ್ರಥಮ ಚಿಕಿತ್ಸೆ ಬಗ್ಗೆ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮೈಸೂರಿನ ಕಾವೇರಿ ಆಸ್ಪತ್ರೆಗೆ ದಾಖಲು ಮಾಡಿದ್ದು  ಗಾಯಾಳುವಿನ ಪತ್ನಿ ಶ್ರೀಮತಿ ಅಶ್ವಿನಿರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
 
ಮನೆಯಿಂದ 1.5 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು:
 
     ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಗೆ ಹಾಕಿದ ಬೀಗವನ್ನು ತೆರೆದು ಮನೆಯಿಂದ ಸುಮಾರು 1,50000/- ರೂ; ಬೆಲೆಬಾಳುವ ಚಿನ್ನಾಭರಣವನ್ನು ಕಳವು ಮಾಡಿರುವ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ನಡೆದಿದೆ.  ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ವಾಸವಾಗಿರುವ ಕೆ.ಇ. ನವೀನ್‌ ಎಂಬವರ ಮನೆಗೆ ಬೀಗ ಜಡಿದು ಎಂದಿನಂತೆ ಬೀಗದ ಕೀಯನ್ನು ಮನೆಯ ಹೊರಗಡೆ ಒಂದು ಜಾಗದಲ್ಲಿ ಇಟ್ಟು ಹೋಗಿದ್ದು, ಯಾರೋ ಕಳ್ಳರು ಸದರಿ ಕೀಯನ್ನು ಬಳಸಿ ಮನೆಯ ಒಳಗೆ ಪ್ರವೇಶಿಸಿ ಬೀರುವಿನಲ್ಲಿಟ್ಟದ್ದ ಸುಮಾರು 1,50,000/- ರೂ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಸದರಿ ಮನೆಯ ಪಕ್ಕದ ನಿವಾಸಿ ನೀತಿ ಕುಮಾರ್‌ ಎಂಬ ವ್ಯಕ್ತಿ ಈ ಕಳ್ಳತನವನ್ನು ಮಾಡಿರಬಹುದೆಂದು ಕೆ.ಇ. ನವೀನ್‌ರವರು ಶಂಕೆ ವ್ಯಕ್ತಪಡಿಸಿದ್ದು, ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 

ರಸ್ತೆಬದಿಯಲ್ಲಿ ನಿಂತ ವ್ಯಕ್ತಿಗೆ ಜೀಪು ದಿಕ್ಕಿ:

     ರಸ್ತೆಬದಿಯಲ್ಲಿ ನಿಂದಿದ್ದ ವ್ಯಕ್ತಿಯೊಬ್ಬರಿಗೆ ಜೀಪೊಂದು ಡಿಕ್ಕಿಯಾದ ಘಟನೆ ಭಾಗಮಂಡಲನಗರದಲ್ಲಿ ನಡೆದಿದೆ.  ದಿನಾಂಕ 15-7-2013 ರಂದು ತಲಕಾವೇರಿ ನಿವಾಸಿ ಹೆಚ್‌,ಬಿ ಪ್ರಕಾಶ್‌ ಎಂಬವರು ಭಾಗಮಂಡಲ ಟೌನ್‌ನಲ್ಲಿ ರಸ್ತೆಬದಯಲ್ಲಿ ನಿಂತುಕೊಂಡು ಇರುವ ಸಂದರ್ಭದಲ್ಲಿ  ಜೀಪು ಚಾಲಕನೊಬ್ಬ ತನ್ನ ಬಾಪ್ತು ಜೀಪು ಸಂ.ಸಂ.ಕೆಎ-21 ಎಂ.1244 ನ್ನು ಅಜಾಗೂಕತೆಯಿಂದ ಓಡಿಸಿಕೊಂಡು ಬಂದು ಹೆಚ್‌.ಬಿ. ಪ್ರಕಾಶ್‌ರವರಿಗೆ ಡಿಕ್ಕಿಪಡಿಸಿ ಜೀಪನ್ನು ನಿಲ್ಲಿಸದೇ ಹೋಗಿದ್ದು, ಈ ಅಪಘಾತದಲ್ಲಿ ಪ್ರಕಾಶ್‌ರವರ ತೊಡೆಯ ಭಾಗಕ್ಕೆ ನೋವುಂಟಾಗಿದ್ದು, ಸದರಿರವರು ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

 

Monday, July 15, 2013

ಕಾರಿಗೆ ಜೀಪು ಡಿಕ್ಕಿ, ಕಾರು ಜಖಂ:
     ಕಾರು ಹಾಗೂ ಜೀಪಿನ ನಡುವೆ ಅಪಘಾತ ಸಂಭವಿಸಿ ಕಾರು ಜಖಂಗೊಂಡ ಘಟನೆ ವಿರಾಜಪೇಟೆ ಬಳಿಯ ಮಗ್ಗುಲ ಗ್ರಾಮದಲ್ಲಿ ನಡೆದಿದೆ.  ದಿನಾಂಕ 14-7-2013 ರಂದು ಸಮಯ 6-30 ಪಿ.ಎಂ ಗೆ ವಿರಾಜಪೇಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಗ್ಗುಲ ಗ್ರಾಮದಲ್ಲಿರುವ ಗಣಪತಿ ದೇವಸ್ಥಾನದ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ  ವಿರಾಜಪೇಟೆ ಕಡೆಯಿಂದ ಅಮ್ಮತ್ತಿ ಕಡೆಗೆ ಜಯರಾಮ ಎಂಬವರು ಕೆ ಎ 12 ಪಿ 6392 ರ ಟಾಟಾ ಇಂಡಿಕಾ ಕಾರಿನಲ್ಲಿ ಹೋಗುತ್ತಿದ್ದಾಗ ಅಮ್ಮತ್ತಿ ಕಡೆಯಿಂದ ಬರುತ್ತಿದ್ದ ಕೆಎಲ್ 37 1925 ಜೀಪು ಚಾಲಕ ಜೀಪನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಜಯರಾಮರವರ ಕಾರಿಗೆ ಡಿಕ್ಕಿಪಡಿಸಿದ್ದು,  ಕಾರು ಜಖಂ ಗೊಂಡಿದ್ದು ವಿರಾಜಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
 
ಅಪ್ರಾಪ್ತ ಹುಡುಗಿಯ ಅಪಹರಣ, ಪ್ರಕರಣ ದಾಖಲು:
    ಕಂಪ್ಯೂಟರ್‌ ತರಗತಿಗೆ ಹೋಗಿದ್ದ ಅಪ್ರಾಪ್ತ ಹುಡುಗಿಯೊಬ್ಬಳನ್ನು ಅಪಹರಿಸಿಕೊಂಡು ಹೋದ ಘಟನೆ ಸಿದ್ದಾಪುರ ನಗರದಲ್ಲಿ ನಡೆದಿದೆ.  ಹಾಕತ್ತೂತು ಗ್ರಾಮದ ನಿವಾಸಿ ರಮೇಶ್‌ ಎಂಬವರ ಮಗಳಾದ ರೂಪಶ್ರೀ ಎಂಬಾಕೆ ದಿನಾಂಕ 8-7-2013 ರಂದು ಎಂದಿನಂತೆ ಬೆಳಿಗ್ಗೆ ಅನುರಾಧ ಬಸ್ಸಿನಲ್ಲಿ ಸಿದ್ದಾಪುರ ನಗರಕ್ಕೆ ಗಣಕ ತರಗತಿಗೆ ಹೋಗಿದ್ದು  ಮರಳಿ ಮನೆಗೆ ಬಾರದೆ  ಕಾಣೆಯಾಗಿದ್ದು,  ಎಲ್ಲಾ ಕಡೆ ಹುಡುಕಿ, ವಿಚಾರಿಸಿ ನೋಡಿದಾಗ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಸಫೀಕ್‌ ಎಂಬ ವ್ಯಕ್ತಿ ರೂಪಶ್ರೀಯನ್ನು ಅಪಹರಿಸಿಕೊಂಡು ಹೋದ ಬಗ್ಗೆ ತಿಳಿದು ಬಂದ ಕಾರಣ ರಮೇಶ್‌ ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿರುತ್ತಾರೆ

Sunday, July 14, 2013

ಬಸ್ಸಿನ ಚಕ್ರ ಕಳಚಿ ಪಾದಾಚಾರಿಗೆ ತಗುಲಿ ಗಾಯ:

     ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿಯೊಬ್ಬಳಿಗೆ ಚಲಿಸುತ್ತಿದ್ದ ಬಸ್ಸಿನ ಚಕ್ರ ಕಳಚಿಕೊಂಡು ಬಂದು ದಿಕ್ಕಿಯಾಗಿ ಗಾಯಗೊಂಡ ಘಟನೆ ಕೊಡ್ಲಿಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 13-07-2013 ರಂದು ಶಾಂತಪುರ ಗ್ರಾಮದ ವಾಸಿ ಉಮ್ಮರಬಿ ಎಂಬವರ ಮಗಳಾದ ಕಸ್ಲೀಮಳು  ಕಾಲೇಜಿನಿಂದ ವಾಪಾಸ್ಸು ಬರುತ್ತಿರುವಾಗ್ಗೆ, ಚಲಿಸುತ್ತಿದ್ದ ಕೆ.ಎಸ್‌.ಆರ್‌.ಟಿ.ಸಿ ಬಸ್ಸಿನ ( ಕೆಎ-13, ಎಫ್‌-1531) ಚಕ್ರವು ಕಳಚಿಕೊಂಡು ಬಂದು ಗುದ್ದಿದ ಪರಿಣಾಮ ಆಕೆಗೆ ರಕ್ತಗಾಯಗಳಾಗಿದ್ದು ಕೊಟ್ಲಿಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಸಂಬಂಧ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 
ವ್ಯಕ್ತಿ ಕಾಣೆ ಪ್ರಕರಣ ದಾಖಲು:
 
     ವ್ಯಕ್ತಿಯೊಬ್ಬರು ವಿರಾಜಪೇಟೆ ನಗರಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಮತ್ತೆ ಮನೆಗೆ ಬಾರದೆ ಕಾಣೆಯಾದ ಘಟನೆ ವಿರಾಜಪೇಟೆ ಹತ್ತಿರದ ಹೆಗ್ಗಳ ಗ್ರಾಮದಲ್ಲಿ ನಡೆದಿದೆ.  ದಿನಾಂಕ 6-7-2013 ರಂದು ಹೆಗ್ಗಳ ಗ್ರಾಮದಲ್ಲಿ ವಾಸವಾಗಿದ್ದ 60 ವರ್ಷ ಪ್ರಾಯದ ತಂಬಂಢ ಸೋಮಯ್ಯ (ನಿವೃತ್ತ ಸರ್ಕಾರಿ ನೌಕರ) ಎಂಬವರು ಮನೆಯಿಂದ ವಿರಾಜಪೇಟೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ.  ಈ ಸಂಬಂಧ ಕಾಣೆಯಾದ ವ್ಯಕ್ತಿಯ ಪತ್ನಿ ಶ್ರೀಮತಿ ತಂಬಂಡ ಎಸ್‌. ಸಾವಿತ್ರಿಯವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ                                ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ
 


ಪತಿಯ ಹಿಂಸೆ ತಾಳಲಾರದೆ ಸೀಮೆಣ್ಣೆ ಸುರಿದು ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಪತ್ನಿಯ ಯತ್ನ:
 
       ಪತಿಯು ನೀಡುತ್ತಿದ್ದ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ತಾಳಲಾರದೆ ಪತ್ನಿ ಮೈಗೆ ಸೀಮೆಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.  ಅಮಲ ಮೆನೆಜಸ್ ಎಂಬವರು ಹಿಲ್ರೆಡ್ ಮೆನೆಜಸ್ ಎಂಬವರನ್ನು ಮದುವೆಯಾಗಿ 11 ವರ್ಷವಾಗಿದ್ದು 10 ವರ್ಷದ ಗಂಡು ಮಗು ಹಾಗೂ 8 ವರ್ಷದ ಹೆಣ್ಣು ಮಗು ಇದ್ದು , ಹಿಲ್ ರೆಡ್ ಮೆನೆಜಸ್ ವಿರಾಜಪೇಟೆ ಸೆಂಟ್ ಆನ್ಸ್ ಡಿಗ್ರಿ ಕಾಲೇಜಿನಲ್ಲಿ ಗ್ರಂಥಪಾಲಕರಾಗಿದ್ದು  ಅಮಲ ಮೆನೆಜಸ್‌ರವರು ವಿರಾಜಪೇಟೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ.ವ್ಯಾಸಂಗ ಮಾಡುತ್ತಿದ್ದು , ‘’ ನೀನು ಮನೆಯಲ್ಲಿ ಕೂತು ತಿನ್ನುತ್ತೀಯಾ ಎಂದು  ಹಿಲ್ರೆಡ್ ಮೆನೆಜಸ್  ಹಿಯಾಳಿಸುತ್ತಾ ಆಗಾಗ್ಗೆ ಹೊಡೆದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದುದಲ್ಲದೇ ಜಗಳ ತೆಗೆದು ಮುಖಕ್ಕೆ ಹೊಡೆದು ನಿನ್ನಿಂದ ಸಂಸಾರ ಹಾಳಾಯಿತು.ನೀನು ಮನೆ ಬಿಟ್ಟು ಹೋಗು ಎಂದು ಬೈಯುತ್ತಿದ್ದು ದಿನಾಂಕ 13-7-2013 ರಂದು ಸಮಯ 00-30 ಗಂಟೆಗೆ ಅಮಲ ಮೆನೆಜಸ್ ತನ್ನ ಗಂಡನ ಕಿರುಕುಳ ತಾಳಲಾರದೇ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು ಸುಟ್ಟ ಗಾಯಗಳಾಗಿ ಚಿಕಿತ್ಸೆಗೆ ವಿರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಸರಕಾರಿ ಆಸ್ಪತ್ರೆಗೆ ದಾಕಲು ಪಡಿಸಲಾಗಿದ್ದು, ಅಮಲ ಮೆನೆಜಸ್‌ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 

ಪಾದಾಚಾರಿಗೆ ಬೈಕ್‌ ಡಿಕ್ಕಿ ಗಾಯ:

     ಪಾದಾಚಾರಿಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗ ಬೈಕೊಂಡು ಡಿಕ್ಕಿಯಾಗಿ ಗಾಯಗಳಾದ ಘಟನೆ  ವಿರಾಜಪೇಟೆಯ ತೆಲುಗರ ಬೀದಿಯಲ್ಲಿ ನಡೆದಿದೆ.  ದಿನಾಂಕ 12-7-2013 ರಂದು ರಾತ್ರಿ 8-00 ಗಂಟೆಗೆ  ತುಕಾರಾಮ್ ಶೆಟ್ಟಿ ಎಂಬ ವ್ಯಕ್ತಿ  ತೆಲುಗರ ಬೀದಿಯಲ್ಲಿರುವ ರುಕೇಶ ಎಂಬವರ ಅಂಗಡಿಗೆ ಹೋಗಿ ಸಾಮಾನುಗಳನ್ನು ತೆಗೆದುಕೊಂಡು ಅಂಗಡಿಯ ಮುಂಭಾಗ ಮಗಳ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಬಂಗಾಳಿಬೀದಿಯಿಂದ ಸಿದ್ದಾಫುರ ಕಡೆಗೆ ಕೆ ಎ 12 ಕೆ 5460 ರ ಮೋಟಾರ್ ಸೈಕಲ್ ಸವಾರ ಶಿವಕುಮಾರ್ ಎಂಬ ವ್ಯಕ್ತಿ ತನ್ನ  ಮೋಟಾರ್ ಸೈಕಲನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು   ಡಿಕ್ಕಿಪಡಿಸಿದ ಪರಿಣಾಮ ತುಕಾರಾಮ್ ಶೆಟ್ಟಿರವರ  ತಲೆಗೆ ಮತ್ತು ಹಣೆಗೆ  ರಕ್ತ ಗಾಯವಾಗಿ ಚಿಕಿತ್ಸೆ ಬಗ್ಗೆ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮೈಸೂರು ಅಪೊಲೊ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯ ಬಗ್ಗೆ ದಾಖಲು ಮಾಡಿದ್ದು, ವಿರಾಜಪೇಟೆ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.  
 

Saturday, July 13, 2013

ಪತ್ನಿಯ ಮೇಲೆ ದೈಹಿಕ ಹಲ್ಲೆ 
             ಪತ್ನಿಯ ಮೇಲೆ ವಿನಾ ಕಾರಣ ದೈಹಿಕ ಹಲ್ಲೆ ನಡೆಸಿರುವ ಪ್ರಕರಣ ವಿರಾಜಪೇಟೆ ಸಮೀಪದ ಕೆ.ಬೋಯಿಕೇರಿ ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ಸಮೀಪದ ಕೆ.ಬೋಯಿಕೇರಿಯ ನಿವಾಸಿ ಶಿವಮ್ಮ ಎಂಬವರ ಪತಿ ವೈಲೇಶ್ ಎಂಬವರು ತನ್ನ ಪತ್ನಿಗೆ ಆಗಾಗ್ಗೆ ಕ್ಷುಲ್ಲಕ ಕಾರಣಕ್ಕಾಗಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದು ದಿನಾಂಕ 12/07/2013ರಂದು ಶಿವಮ್ಮನವರು ಬ್ರಾಂಸಿಯನ್ನು ಕುಡಿದಿರುವುದಾಗಿ ಆರೋಪಿಸಿ ಕೈಯಿಂದ ಹೊಡೆದು ಕಾಲಿನಿಂದ ಹೊಟ್ಟೆಗೆ ಒದ್ದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಜೀಪಿಗೆ ಮೋಟಾರು ಬೈಕ್ ಡಿಕ್ಕಿ ಇಬ್ಬರಿಗೆ ಗಾಯ 
            ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ಜೀಪಿಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರು ಸೈಕಲಿನ ಸವಾರರಿಬ್ಬರಿಗೆ  ಗಾಯಗೊಂಡಿರುವ ಘಟನೆ ಮಡಿಕೇರಿ ಸಮೀಪದ ಮಕ್ಕಂದೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 12/07/2013ರ ರಾತ್ರಿ ವೇಳೆ ಕೆದಕಲ್ ಗ್ರಾಮದ ನಿವಾಸಿ ವಿನೋದ್ ಎಂಬವರು ಅವರ ಪರಿಚಯದ ಗೋಪಾಲ ಎಂಬವರೊಂದಿಗೆ ಗೋಪಾಲರವರ ಮೋಟಾರು ಸೈಕಲ್ ಸಂಖ್ಯೆ ಕೆಎ-12-ಕೆ-5049ರಲ್ಲಿ ಕೆದಕಲ್ ಗ್ರಾಮದಿಂದ ಹಾಲೇರಿ ಎಸ್ಟೇಟ್ ಕಡೆಗೆ ಹೋಗುತ್ತಿರುವಾಗ ಮಕ್ಕಂದೂರು ಗ್ರಾಮದ ಹಾಲೇರಿ ಎಸ್ಟೇಟಿನ ಬಳಿ ರಸ್ತೆಯಲ್ಲಿ ಚಾಲಕ ಗೋಪಾಲ ಮೋಟಾರು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಎದುರುಗಡೆಯಿಂದ ಬರುತ್ತಿದ್ದ ಕೆಎ-12-ಪಿ-6605ರ ಜೀಪಿಗೆ ಡಿಕ್ಕಿ ಪಡಿಸಿದ ಪರಿಣಾಮ ಜೀಪಿಗೆ ಜಖಂ ಉಂಟಾಗಿದ್ದು ಚಾಲಕ ಗೋಪಾಲ ಹಾಗೂ ಹಿಂಬರದಿ ಸವಾರ ವಿನೋದ್‌ರವರಿಗೆ ಗಾಯಗಳಾದ ಬಗ್ಗೆ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಿಷ ಸೇವಿಸಿ ಯುವತಿ ಆತ್ಮಹತ್ಯೆ 
          ಜೀವನದಲ್ಲಿ ಜುಗುಪ್ಸೆಗೊಂಡ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪೊನ್ನಂಪೇಟೆ ತಿತಿಮತಿಯ ವಿನಾಯಕ ನಗರದಲ್ಲಿ ನಡೆದಿದೆ. ವಿನಾಯಕನಗರದ ನಿವಾಸಿ ಸುಶೀಲ ಎಂಬವರ ಮಗಳು ಶೋಭಾ ಎಂಬಾಕೆಯು ಸುಮಾರು ಎರಡು ತಿಂಗಳ ಹಿಂದೆ ಸುಧೀರ್ ಎಂಬವರನ್ನು ಮದುವೆಯಾಗಿದ್ದು, ಈಗ್ಗೆ 6 ದಿನಗಳ ಹಿಂದೆ ಸುಧೀರ್‌ರವರು ರಸ್ತೆ ಅಫಘಾತವೊಂದರಲ್ಲಿ ಮೃತಪಟ್ಟಿದ್ದು ಈ ಸಂಬಂಧ ಪತ್ನಿ ಶೋಭಾರವರು ಜೀವನದಲ್ಲಿ ಜುಗುಪ್ಸೆ ಹೊಂದಿ ದಿನಾಂಕ 11/07/2013ರಂದು ಮನೆಯಲ್ಲಿ ವಿಷ ಸೇವಿಸಿದ್ದು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ವೇಳೆ ಮೃತ ಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ. 


Thursday, July 11, 2013

ಕೊಡಗು ಜಿಲ್ಲಾ ಪೊಲೀಸ್ - ದೈನಂದಿನ ಅಪರಾಧ ಸುದ್ದಿಗಳು

ಬೈಕ್ ಡಿಕ್ಕಿ ಪಾದಚಾರಿ ಸಾವು

            ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಯೊಬ್ಬರಿಗೆ ಬೈಕ್ ಡಿಕ್ಕಿಯಾಗಿ ಸಾವಿಗೀಡಾದ ಘಟನೆ ಕೊಡ್ಲಿಪೇಟೆ ನಗರದಲ್ಲಿ ನಡೆದಿದೆ. ದಿನಾಂಕ : 10-07-2013 ರಂದು ಶನಿವಾರಸಂತೆ ನಿವಾಸಿ  ಪುಟ್ಟಸ್ವಾಮಿ ಎಂಬವರು ಸ್ವಂತ ಕೆಲಸದ ಮೇಲೆ ಕೊಡ್ಲಿಪೇಟೆಗೆ ಹೋಗಿದ್ದು ನಗರದ ಗಣೇಶ್‌ ರವರ ವರ್ಕ್‌ಶಾಪ್‌ನ ಮುಂದುಗಡೆ ನಡೆದುಕೊಂಡು ಹೋಗುತ್ತಿರುವಾಗ್ಗೆ, ಹಿಂಬದಿಯಿಂದ ಕೆ.ಎ-03, ಇಎಲ್‌-9392 ರ ಪಲ್ಸರ್‌ ಬೈಕ್‌ ನ ಸವಾರ ಬೈಕನ್ನು ಅತಿವೇಗ ಮತ್ತು ಅಜಾಗರಕತೆಯಿಂದ ಬೈಕನ್ನು ಚಾಲಿಸಿಕೊಂಡು ಬಂದು ಪುಟ್ಟಸ್ವಾಮಿಯವರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರ ತಲೆ ಹಾಗೂ ಶರೀರದ ಭಾಗಕ್ಕೆ ತೀವ್ರ ಗಾಯವಾಗಿದ್ದು, ಪುಟ್ಟಸ್ವಾಮಿಯವರನ್ನು ಚಿಕಿತ್ಸೆ ಬಗ್ಗೆ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲುಪಡಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಈ ದಿನ ಮೃತ ಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕ್ಷುಲ್ಲಕ ಕಾರಣಕ್ಕೆ ಹಲ್ಲೆ 
              ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ರಾಡಿನಿಂದ ಹಲ್ಲೆ ಮಾಡಿದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ.ದಿನಾಂಕ 10-7-2013 ರಂದು ರಾತ್ರಿ 9.30 ಗಂಟೆಗೆ  ನಗರದ ರಾಜ್ ದರ್ಶನ್ ಹೋಟೆಲ್‌ನ ಉದ್ಯೋಗಿ ಯೇಸುದಾಸ್ ಎಂಬವರು ಹೋಟೆಲಿನಲ್ಲಿರುವಾಗ ಹೋಟೆಲ್ ಗ್ರಾಹಕರಿಗೆ ಊಟ ಕೊಡುವ ವಿಚಾರದಲ್ಲಿ ಚರಣ್ ಎಂಬಾತನು ಯೇಸುದಾಸ್‌ರವರೊಂದಿಗೆ ಜಗಳ ತೆಗೆದು,  ತಂದೂರಿ ಚಿಕನ್ ಮಾಡುವ ರಾಡಿನಿಂದ ಯೇಸುದಾಸ್‌ರವರ ಕಿವಿಯ ಭಾಗಕ್ಕೆ  ಹೊಡೆದು ನೋವುಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಯುವತಿ ಕಾಣೆ, ಪ್ರಕರಣ ದಾಖಲು 
       ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದ ಯುವತಿಯೊಬ್ಬಳು ವಾಪಾಸು ಬಾರದೆ ಕಾಣೆಯಾದ ಘಟನೆ ವಿರಾಜಪೇಟೆ ಬಳಿಯ ಬಿಟ್ಟಂಗಾಲ ಗ್ರಾಮದಲ್ಲಿ ನಡೆದಿದೆ. ದಿನಾಂಕ: 05-07-13ರಂದು ಬಿಟ್ಟಂಗಾಲ ಗ್ರಾಮದ ನಿವಾಸಿ ಹೆಚ್‌.ಸಿ.ಬೆಳ್ಳಿಯಪ್ಪ ಎಂಬವರ ಮಗಳು ವಿಂದ್ಯಾಳು ಬೆಳಿಗ್ಗೆ 8-00ಗಂಟೆಗೆ ಗೋಣಿ ಕೊಪ್ಪದಲ್ಲಿರುವ ಮೊಬೈಲ್ ಶಾಪ್ ಗೆ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವಳು ಸಂಜೆಯಾದರೂ ವಾಪಾಸ್ಸು ಮನೆಗೆ ಬಂದಿರುವುದಿಲ್ಲ.ಮಾರನೇ ದಿವಸ ವಿಂದ್ಯಾಳು ಕೆಲಸ ಮಾಡುವ ಶಾಪ್ ಗೆ ಹೋಗಿ ವಿಂದ್ಯಾಳನ್ನು ವಿಚಾರಿಸಿದ್ದು ಅವಳು ದಿನಾಂಕ: 05-07-13ರಂದು ಕೆಲಸಕ್ಕೆ ರಜೆ ಹಾಕಿರುವು ದಾಗಿ ತಿಳಿಸಿದ್ದು,  ವಿಂದ್ಯಾಳನ್ನು ನೆಂಟರಿಷ್ಟರ ಮನೆ ಮತ್ತು ಅಕ್ಕಪಕ್ಕದಲ್ಲಿ ಎಲ್ಲಾ ಕಡೆ ಹುಡುಕಾಡಿ ಪತ್ತೆಯಾಗದ ಕಾರಣ ವಿಂದ್ಯಾಳನ್ನು ಪತ್ತೆ ಮಾಡಿ ಕೊಡಬೇಕೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, July 10, 2013

ಕೊಡಗು ಜಿಲ್ಲಾ ಪೊಲೀಸ್ - ದೈನಂದಿನ ಅಪರಾಧ ಸುದ್ದಿಗಳು

ರಸ್ತೆ ಅಫಘಾತ, ಇಬ್ಬರಿಗೆ ಗಾಯ 
         ಕಾರು ಹಾಗೂ ಸರಕು ಸಾಗಣೆ ವಾಹನವೆರಡು ಪರಸ್ಪರ ಡಿಕ್ಕಿಯಾಧ ಪರಿಣಾಮ ಕಾರು ಪ್ರಯಾಣಿಕರಿಬ್ಬರಿಗೆ ಗಾಯಗಳಾದ ಘಟನೆ ಮಡಿಕೇರಿ ಸಮೀಪದ ಇಬ್ನಿವಳವಾಡಿ ಗ್ರಾಮದಲ್ಲಿ ನಡೆದಿದೆ. ಮಡಿಕೇರಿ ನಗರದ ಮಲ್ಲಿಕಾರ್ಜುನ ನಗರದ ನಿವಾಸಿ ಜಗದೀಶ್ ಎಂಬವರು ಬೆಂಗಳೂರಿನ ಜೇಮ್ಸ್ ಡಯಾಲಿನ್‌ ಎಂಬವರಲ್ಲಿ  ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 09-07-2013 ರಂದು ಸಂಜೆ ವೇಳೆ ಜೇಮ್ಸ್ ಡಯಾಲಿನ್‌ರವರೊಂದಿಗೆ ಅವರ ಸ್ನೇಹಿತರ ಬಾಪ್ತು ಕೆಎ-41-ಎನ್-6842 ರ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಮಡಿಕೇರಿಯಿಂದ ಬೆಂಗಳೂರಿಗೆ ಹೋಗುತ್ತಿರುವಾಗ ಇಬ್ನಿವಳವಾಡಿ ಗ್ರಾಮದ ಸಿಂಕೋನ ಎಸ್ಟೇಟ್ ನಿಂದ ಮುಂದೆ ತಿರುವು ರಸ್ತೆಯ ಬಳಿ ಎದುರುಗಡೆಯಿಂದ ಮೈಸೂರು ಕಡೆಯಿಂದ ಮಡಿಕೇರಿ ಕಡೆಗೆ ಕೆಎ-12-ಎ-645 ರ ಟಾಟಾ 207 ಜೀಪನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ಚಾಲಕ ಜಗದೀಶ್ ಹಾಗೂ ಜೇಮ್ಸ್ ಡಯಾಲಿನ್‌ರವರಿಗೆ ಗಾಯಗಳಾದ ಬಗ್ಗೆ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ 
         ಮನೆಯ ಮಾಡಿಗೆ ನೇಣು ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಶಾಲನಗರದ ದುಬಾರೆ ಸಾಕಾನೆ ಶಿಬಿರದಲ್ಲಿ ನಡೆದಿದೆ. ದಿನಾಂಕ 08/07/2013ರಂದು ರಾತ್ರಿ ದುಬಾರೆ ಸಾಕಾನೆ ಶಿಬಿರದ ಸಣ್ಣಪ್ಪ ಹಾಗೂ ಆತನ ಪತ್ನಿ ಮನೆಯಲ್ಲಿ ಮಲಗಿದ್ದಾಗ ರಾಥ್ರಿ 2 ಗಂಟೆ ಸುಮಾರಿಗೆ ಒಲೆಯಲ್ಲಿದ್ದ ಬೆಂಕಿ ಆಕಸ್ಮಿಕವಾಗಿ ಸಣ್ಣಪ್ಪನ ಪತ್ನಿಯ ಸೀರೆಗೆ ಹತ್ತಿಕೊಂಡಿದ್ದು ಆಕೆಯ ಬೊಬ್ಬೆ ಕೇಳಿದ ಪಕ್ಕದ ಮನೆಯ ಮಂಜೇಶ್ ಎಂಬವರು ಮತ್ತಿತರರು ಬೆಂಕಿಯನ್ನು ಆರಿಸಿದ್ದು, ಪತ್ನಿಗೆ ಬೆಂಕಿ ಹತ್ತಿಕೊಂಡಿದ್ದನ್ನು ಕಂಡು ಆಘಾತಕ್ಕೊಳಗಾದ ಸಣ್ಣಪ್ಪ ಪತ್ನಿಯ ಸೀರೆಯಿಂದ ಮನೆಯ ಮಾಡಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿರುವುದಾಗಿ ಸಣ್ಣಪ್ಪನ ಮಗ ಸಂತೋಷ್ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Tuesday, July 9, 2013

ಕೊಡಗು ಜಿಲ್ಲಾ ಪೊಲೀಸ್‌ ಅಪರಾದ ಸುದ್ದಿಗಳು

ಹಳೇ ದ್ವೇಷದಿಂದ  ವ್ಯಕ್ತಿಯ ಮೇಲೆ ಹಲ್ಲೆ:

     ಹಳೇ ದ್ವೇಷವನ್ನಿಟ್ಟುಕೊಂಡು ವ್ಯಕ್ತಿಯೊಬ್ಬರ ಮೇಲೆ ನಾಲ್ಕು ಮಂದಿ ಹಲ್ಲೆ ನಡೆಸಿದ ಘಟನೆ ವಿರಾಜಪೇಟೆ ನಗರ ಠಾಣಾ ವ್ಯಾಪ್ತಿಯ ಬೆಟೋಳಿ ಗ್ರಾಮದಲ್ಲಿ ನಡೆದಿದೆ.  ದಿನಾಂಕ 8-7-2013 ರಂದು ಕೆ.ಎಸ್‌. ಅಶ್ರಫ್‌ ಎಂಬವರು ಬೇಟೋಳಿ ಗ್ರಾಮದಲ್ಲಿ ಅಬ್ದುಲ್ ಸಲಾಂ ರವರ ಮನೆಯಲ್ಲಿ ಪೂಜಾ ಕಾರ್ಯಕ್ರಮಕ್ಕೆ ಹೋಗಿ ವಾಪಾಸು  10-00 ಪಿ.ಎಂ ಗೆ ಅವರ ಮನೆಯ ಪಕ್ಕ ತಲುಪುವಾಗ್ಗೆ ಅದೇ ಗ್ರಾಮದ ಹ್ಯಾರೀಸ್‌, ಲತೀಫ್‌, ನೌಷದ್‌  ಮತ್ತು ಮುಸ್ತಫಾ ಎಂಬವರುಗಳು  ಹಳೇ ದ್ವೇಷವನ್ನಿಟ್ಟುಕೊಂಡು ಕೆ.ಎಸ್‌. ಅಶ್ರಫ್‌ರವರ ದಾರಿ ತಡೆದು ಅವಾಚ್ಯವಾಗಿ ಬೈದು, ನಮ್ಮ ವೈರಿಯಾದ ಅಬ್ದುಲ್ ಸಲಾಂ ರವರ ಮನೆಗೆ  ಏಕೆ ಹೋಗಿದ್ದೀಯಾ ಎಂದು ಹೇಳಿ ಕತ್ತಿಯಿಂದ ಹಲ್ಲೆನಡೆಸಿ ಗಾಯಪಡಿಸಿ, ಕೊಲೆ ಮಾಡುವುದಾಗಿ ಜೀವಬೆದರಿಕೆ ಹಾಕಿದ್ದು ವಿರಾಜಪೇಟೆ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 

Monday, July 8, 2013

ಕೊಡಗು ಜಿಲ್ಲಾ ಪೊಲೀಸ್‌ ಅಪರಾಧ ಸುದ್ದಿಗಳು

ಸಾಲ ಬಾದೆಯಿಂದ ಮಹಿಳೆಯ ಅತ್ಮಹತ್ಯೆ:
 
ಸಾಲವನ್ನು ಮರುಪಾವತಿಸಲು ಆಗದೇ ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.  ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ವಿ. ಬಾಡಗ ಗ್ರಾಮದ ವಾಸಿ 51 ವರ್ಷ ಪ್ರಾಯದ ಶ್ರೀಮತಿ ತೀತಿಮಾಡ ಎ. ಲೀಲಾವತಿ ಯವರು ಪೈನಾನ್ಸ್‌ವೊಂದರಿಂದ ವಾಹನ ಖರೀದಿಸಲು ಹಣವನ್ನು ಸಾಲ ಪಡೆದುಕೊಂಡಿದ್ದು ಅದನ್ನು ಮರುಪಾವತಿಸಲು ಸಾದ್ಯವಾಗದೇ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 8-7-2013 ರಂದು ವಿಷ ಕುಡಿದು ಅಸ್ವಸ್ಥಗೊಂಡ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದುಕೊಂಡು ಹೋಗುವ ಸಮಯದಲ್ಲಿ ದಾರಿ ಮದ್ಯೆ ಮೃತಪಟ್ಟಿದ್ದು, ವಿರಾಜಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
 
ಕ್ಷುಲ್ಲಕ ಕಾರಣ ಮಹಿಳೆ ಮೇಲೆ ಹಲ್ಲೆ:
 
ದನಗಳನ್ನು ಮೇಯಿಸುವ ವಿಚಾರದಲ್ಲಿ ಜಗಳ ಮಾಡಿ ವ್ಯಕ್ತಿಯೊರ್ವರು ಮಹಿಳೆಗೆ  ದೊಣ್ಣೆಯಿಂದ ಹಲ್ಲೆ ಮಾಡಿ ಗಾಯಗೊಳಿಸಿದ ಘಟನೆ ನಡೆದಿದೆ. ಪೊನ್ನಂಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಕಾರೆಹಡ್ಲು  ಹೆಬ್ಬಾಲೆ ಭದ್ರಗೊಳಗ್ರಾಮದಲ್ಲಿ  ಹೆಚ್.ಜೆ. ಪುಷ್ಪಾ ಎಂಬವರು ದನಗಳನ್ನು ಹೊಡೆದುಕೊಂಡು ಕೊಟ್ಟಿಗೆಗೆ ಸೇರಿಸಲು ಹೋಗುತ್ತಿದ್ದಾಗ ಅದೇ ಗ್ರಾಮದ ರಾಮಯ್ಯ ಎಂಬ ವ್ಯಕ್ತಿ ಜಗಳವಾಡಿ ದೊಣ್ಣೆಯಿಂದ ಪುಷ್ಪಾರವರ ಮೇಲೆ ಹಲ್ಲೆನಡೆಸಿ ಗಾಯಪಡಿಸಿ, ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವ ಕುರಿತು ಪುಷ್ಪಾರವರು ನೀಡಿದ ದೂರಿನ ಮೇರೆಗೆ  ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 
ಆಲ್ಟೋಕಾರಿಗೆ ಫೋರ್ಡ್‌ಕಾರು ಡಿಕ್ಕಿ ಮೂವರಿಗೆ ಗಾಯ:
 
ಪೋರ್ಡ್‌ಕಾರೊಂದು ಆಲ್ಟೋ ಕಾರಿಗೆ ಡಿಕ್ಕಿಯಾಗಿ ಮೂವರಿಗೆ ಗಾಯಗಳಾದ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕೊಯನಾಡು ಸಾರ್ವಜನಿಕ ರಸ್ತಯಲ್ಲಿ ನಡೆದಿದೆ.  ದಿನಾಂಕ 7-7-2013 ರಂದು ಪಿ.ಎಸ್‌. ಗಣರಾಜ್‌ ಎಂಬವರು ತನ್ನ ಸಂಸಾರದೊಂದಿಗೆ ಆಲ್ಟೋ ಕಾರಿನಲ್ಲಿ ಮಡಿಕೇರಿ ಕಡೆಗೆ ಬರುತ್ತಿರುವಾಗ ಕೊಯನಾಡು ಎಂಬಲ್ಲಿ ಎದುರುಗಡೆಯಿಂದ ಪೋರ್ಡ್‌ಕಾರನ್ನು ಅದರ ಚಾಲಕ ಗುರುಮೂರ್ತಿರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಆಲ್ಟೋಕಾರಿನಲ್ಲಿದ್ದ ಪಿ.ಎಸ್‌. ಗಣರಾಜ್ ಅವರ ಪತ್ನಿ ಸೌಮ್ಯ ಮತ್ತು ಮಗಳು ಅಹನಿ ಎಂಬವರಿಗೆ ಗಾಯಗಳಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 
ಕಾರಿಗೆ ಬೈಕ್‌ ಡಿಕ್ಕಿ ಸವಾರಿಬ್ಬರಿಗೆ ಗಾಯ:
 
ಟಿ.ಜೆ. ರಾಜೇಶ್‌, ಬೆಂಗಳೂರು ರವರು ದಿನಾಂಕ 7-7-2013 ರಂದು ಬೆಳಿಗ್ಗೆ ಬಾಡಗ ಬಾಣಂಗಾಲ ಗ್ರಾಮದಲ್ಲಿರುವ  ತನ್ನ ಅಕ್ಕನ ಮನೆಗೆ ಹೋಗಿ ಬೆಂಗಳೂರಿಗೆ  ಕಾರಿನಲ್ಲಿ ಪ್ರಯಾಣಿಸಿತ್ತಿದ್ದಾಗ ಮಾಲ್ದಾರೆ ಚೆಕ್‌ಪೋಷ್ಟ್‌  ಬಳಿ ಮಂಡ್ಯಜಿಲ್ಲೆಯ ಪಾಂಡವಪುರದ ವಾಸಿ ಕಾರ್ತಿಕ್‌ ಎಂಬವರು ಕೆ.ಎ.12-ಹೆಚ್‌-6146ರ ಮೋಟಾರ್‌ ಸೈಕಲ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು  ಡಿಕ್ಕಿಪಡಿಸಿದ ಪರಿಣಾಮವಾಗಿ ಕಾರು ಜಖಂಗೊಂಡು ಬೈಕ್‌ನಲ್ಲಿದ್ದ ಸವಾರ ಕಾರ್ತಿಕ್‌ ಹಾಗೂ ಹಿಂಬದಿ ಸವಾರನಿಗೂ ಗಾಯಗಳಾಗಿರುತ್ತದೆ.  ಈ ಸಂಬಂಧ ಸಿದ್ದಾಪುರ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

Sunday, July 7, 2013

ಕೊಡಗು ಜಿಲ್ಲಾ ಪೊಲೀಸ್ - ದೈನಂದಿನ ಅಪರಾಧ ಸುದ್ದಿಗಳು

ಕ್ಷುಲ್ಲಕ ಕಾರಣಕ್ಕೆ ವಾಹನ ತಡೆದು ವ್ಯಕ್ತಿಯ ಮೇಲೆ ಹಲ್ಲೆ 
          ಕ್ಷುಲ್ಲಕ ಕಾರಣಕ್ಕೆ ವಾಹನ ತಡೆದು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ ಸಿದ್ದಾಪುರ ಸಮೀಪ ನಲ್ವತ್ತೇಕ್ರೆ ಎಂಬಲ್ಲಿ ನಡೆದಿದೆ.ದಿನಾಂಕ 06.07.2013 ರಂದು ಸಿದ್ದಾಪುರ ಸಮೀಪದ ನೆಲ್ಲಿ ಹುದಿಕೇರಿ ನಿವಾಸಿಯಾದ ಪಿ.ಎಂ ಹರ್ಷಲ್ ಎಂಬವರು ರಾತ್ರಿ  ಸಮಯ 10.30 ಗಂಟೆಗೆ ತನ್ನ ಅಜ್ಜಿಯನ್ನು ನಲ್ವತ್ತೇಕ್ರೆಯಿಂದ  ಮನೆಗೆ ಕರೆದುಕೊಂಡು ಬರಲು  ತಮ್ಮ ಬಾಪ್ತು  ಮ್ಯಾಕ್ಸಿಮ್ ಗೂಡ್ಸ್ ವ್ಯಾನು ನಂ ಕೆಎ-16-ಬಿ-3328 ರಲ್ಲಿ ಹೋಗುತ್ತಿರುವಾಗ್ಗೆ  ನಲ್ವತ್ತೇಕ್ರೆಯ ಪಳ್ಳಿಯ ಹತ್ತಿರ ಅವರಿಗೆ ಪರಿಚಯವಿರುವ ನಲ್ವತ್ತೇಕ್ರೆಯ ನಿವಾಸಿಗಳಾದ  ಅನಿಲ್ ಮತ್ತು ಪಾಪುರವರ ಜೀಪನ್ನು ತಡೆದು ನಿಲ್ಲಿಸಿ ರಾತ್ರಿ ವೇಳೆ ಆ ದಾರಿಗಾಘಿ ಬಂದ ವಿಚಾರದಲ್ಲಿ ಜಗಳ ತೆಗೆದು ಹರ್ಷಲ್‌ರವರ ಮೇಲೆ ಕಾಡುಮರದ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕುಸಿದು ಬಿದ್ದು ವ್ಯಕ್ತಿಯ ಸಾವು 
          ಅತಿಯಾದ ಮದ್ಯ ಸೇವನೆಯಿಂದಕುಸಿದು ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಕುಟ್ಟ ನಗರದ ಡಿ.ಸಿ.ಸಿ ಬ್ಯಾಂಕ್ ಮುಂಭಾಗದಲ್ಲಿ ನಡೆದಿದೆ. ತಮಿಳು ನಾಡಿನ ತಿರುಚ್ಚಿ ಜಿಲ್ಲೆಯ ಕೃಷ್ಣಪುರಂ ಗ್ರಾಮದ ನಿವಾಸಿ ರಂಜಿತಾ ಎಂಬವರ ತಂದೆ ರಾಮರ್ ಎಂಬವರು ಕುಟ್ಟದ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ 'ಡಿ' ದರ್ಜೆಯ ನೌಕರರಾಗಿ ಕೆಲಸ ಮಾಡುತ್ತಿದ್ದವರು ದಿನಾಂಕ 05/07/2013ರ ಸಂಜೆ ವೇಳೆ ಅತಿಯಾಗಿ ಮದ್ಯ ಪಾನ ಮಾಡಿ ಕುಟ್ಟ ನಗರದ ಡಿ.ಸಿ.ಸಿ ಬ್ಯಾಂಕಿನ ಮುಂಭಾಗದ ಮೆಟ್ಟಿಲ ಮೇಲೆ ಮಲಗಿದ್ದವರು ಅತಿಯಾಗಿ ನಿತ್ರಾಣಗೊಂಡು ಕುಸಿದು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ತಂದೆಯ ಅತಿಯಾದ ಮದ್ಯ ಸೇವನೆಯೇ ಸಾವಿಗೆ ಕಾರಣವಾಗಿರಬಹುದಾಗಿ ರಂಜಿತಾರವರು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ವಿನಾ ಕಾರಣ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ 
           ವಿನಾ ಕಾರಣ ವ್ಯಕ್ತಿಯೊಬ್ಬರ ಮೇಲೆ ಮೂವರು ಹಲ್ಲೆ ನಡೆಸಿದ ಪ್ರಕರಣ ಮಡಿಕೇರಿ ನಗರದ ಕಾಲೇಜು ರಸ್ತೆಯ ಸೀತಾಪತಿ ಲಾಡ್ಜ್ ಬಳಿ ನಡೆದಿದೆ. ದಿನಾಂಕ 04/07/2013ರಂದು ರಾತ್ರಿ ವೇಳೆ ಗಾಳಿಬೀಡು ಸಮೀಪದ ಮಹೀಂದ್ರ ರೆಸಾರ್ಟಿನಲ್ಲಿ ತರಬೇತಿ ಪಡೆಯುತ್ತಿರುವ ಕೇರಳ ರಾಜ್ಯದ ಕ್ಯಾಲಿಕಟ್ ಜಿಲ್ಲೆಯ ಅರಿಕೇಳ ಗ್ರಾಮದ ನಿವಾಸಿ ಜಿತಿನ್ ಎಂಬವರು ತಮ್ಮ ಮೊಬೈಲ್‌ಗೆ ಕರೆನ್ಸಿ ಹಾಕುವ ಸಲುವಾಗಿ ನಗರದ ಕಾಲೇಜು ರಸ್ತೆಯ ಸೀತಾಪತಿ ಲಾಡ್ಜ್‌ನ ಬಳಿ ಇದ್ದಾಗ ಕೆ.ನಿಡುಗಣೆ ಗ್ರಾಮದ ನಿವಾಸಿ ಉದಿಯಂಡ ನೀರಜ್ ಯಾನೆ ಬೋಪಣ್ಣ ಹಾಗೂ ಇತರ ಇಬ್ಬರು ಜಿತಿನ್‌ರವರೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿದ್ದು, ಜಿತಿನ್‌ರವರು ಈ ಬಗ್ಗೆ ಮಹೇಂದ್ರ ರೆಸಾರ್ಟಿನ ಉದ್ಯೋಗಿ ಬೋಪಯ್ಯ ಎಂಬವರಿಗೆ ತಿಳಿಸಿದ್ದು, ಅವರು ಜಿತಿನ್‌ರವರಿಗೆ ಹೊಡೆದವರು ಯಾರು ಎಂಬ ಬಗ್ಗೆ ತಿಳಿದು ನಂತರ ದೂರು ಕೊಡುವಂತೆ ತಿಳಿಸಿದ ಮೇರೆಗೆ ಹಲ್ಲೆ ನಡೆಸಿದವರ ಹೆಸರನ್ನು ತಿಳಿದುಕೊಂಡು ತಡವಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಬದಿ ನಿಲ್ಲಿಸಿದ್ದ ಮೋಟಾರು ಬೈಕ್ ಕಳವು 
           ರಸ್ತೆ ಬದಿ ನಿಲ್ಲಿಸಿದ್ದ ಮೋಟಾರು ಸೈಕಲನ್ನು ಯಾರೋ ಕಳವು ಮಾಡಿರುವ ಘಟನೆ ಸೋಮವಾರಪೇಟೆ ನಗರದಲ್ಲಿ ನಡೆದಿದೆ. ಸೋಮವಾರಪೇಟೆ ನಗರದ ಕ್ಲಬ್ ರಸ್ತಯಲ್ಲಿರುವ ಅಯ್ಯಂಗಾರ್ ಬೇಕರಿಯಲ್ಲಿ ಕೆಲಸ ಮಾಡುತ್ತಿರುವ ಹಾನಗಲ್ಲು ಗ್ರಾಮದ ನಿವಾಸಿ ಚರಣ್ ಕುಮಾರ್ ಎಂಬವರು ದಿನಾಂಕ 05/07/2013ರಂದು ಸಂಜೆ ತಮ್ಮ ಮೋಟಾರು ಸೈಕಲ್ ಸಂಖ್ಯೆ ಕೆಎ-12-ಜೆ-6628 ನ್ನುಅವರು ಕೆಲಸ ಮಾಡುತ್ತಿದ್ದ ಬೇಕರಿಯ ಬದಿಯ ರಸ್ತೆಯಲ್ಲಿ ನಿಲ್ಲಿಸಿ ಅವರ ಮಾಲೀಕರ ಕಾರಿನಲ್ಲಿ ಮನೆಗೆ ಹೋಗಿದ್ದು, ಮಾರನೇ ದಿನ ದಿನಾಂಕ 06/07/2013ರಂದು ಬಂದು ನೋಡುವಾಗ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣಾ ಪಿಎಸ್‌ಐ ರವಿಕಿರಣ್‌ರವರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.