Thursday, August 29, 2013

ಹಳೇ ದ್ವೇಷ, ವ್ಯಕ್ತಿಯ ಕೊಲೆ:
 
     ಹಳೇ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ.  ದಿನಾಂಕ 28-8-2013 ರಂದು 3.45 ಪಿ.ಎಂ.ಗೆ  ಕುಕ್ಲೂರು ಗ್ರಾಮದ ವಾಸಿ ಮಾಳೇಟಿರ ಕಾಳಪ್ಪ (35) ಎಂಬವರು ವಿರಾಜಪೇಟೆ ನಗರದ ಕಿಡವ ಸಮಾಜದ ಬಳಿ ಇರುವ ತ್ರಿವೇಣಿ ಶಾಲೆಗೆ ಮಕ್ಕಳನ್ನು ಕ್ರೆದುಕೊಂಡು ಹೋಗುವ ಸಲುವಾಗಿ ಮೋಟಾರ್‌ ಸೈಕಲ್‌ನಲ್ಲಿ ಹೋಗುತ್ತಿರುವ ವೇಳೆ ಕೆಲ ದುಷ್ಕರ್ಮಿಗಳು ಅವರ ದಾರಿ ತಡೆದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದು, ವಿರಾಜಪೇಟೆ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
 
ಮಹಿಳೆ ಕಾಣೆ, ಪ್ರಕರಣ ದಾಖಲು:
 
    ಮನೆಯಲ್ಲಿದ್ದ ಮಹಿಳೆಯೊಬ್ಬಳು ಕಾಣೆಯಾದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮುರ್ನಾಡುವಿನಲ್ಲಿ ನಡೆದಿದೆ.  ಮುರ್ನಾಡುವಿನಲ್ಲಿ ವಾಸವಾಗಿರುವ ದೇವಿಪ್ರಸಾದ್‌ ಎಂಬವರ ಪತ್ನಿ ರಮ್ಯಾ ಎಂಬವರು  ದಿನಾಂಕ 28-08-2013 ರಂದು ಬೆಳಿಗ್ಗೆ ತಿಂಡಿ ತಿಂದು ಮನೆಯಲ್ಲಿ  ಟಿವಿಯನ್ನು ನೋಡುತ್ತಿದ್ದು ಹೊರಗೆ ಅಂಗಳದಲ್ಲಿ ಅಕ್ಕಿಯನ್ನು ಬಿಸಿಲಿಗೆ ಹಾಕಿದ್ದು ನೋಡಿ ಬರುತ್ತೇನೆಂದು ಪತಿ ದೇವಿಪ್ರಸಾದ್‌ರವರಿಗೆ ಹೇಳಿ ಹೋದವಳು ತುಂಬಾ ಹೊತ್ತಾದರೂ ಮನೆಯೊಳಗೆ ಬಾರದ್ದರಿಂದ ಮನೆಯಿಂದ ಹೊರಗೆ ಹೋಗಿ ಸುತ್ತ ಮುತ್ತ ಹುಡುಕಾಡಿದರೂ ಪತ್ತೆ ಯಾಗದೆ ಕಾಣೆಯಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Wednesday, August 28, 2013

ಮೋಟಾರ್‌ ಸೈಕಲ್‌ ಕಳವು:

ಪಾರ್ಕಿಂಗ್‌ ಜಾಗದಲ್ಲಿ ನಿಲ್ಲಿಸಿದ್ದ ಮೋಟಾರ್‌ ಸೈಕಲ್‌ ಕಳುವಾದ ಘಟನೆ ನಡೆದಿದೆ. ದಿನಾಂಕ 20-8-2013ರಂದು ಸಮಯ 5-00 ಪಿ.ಎಂ ಗೆ ಟಿ.ಕೆ.ವಿಷ್ಣು ಎಂಬವರು ಎಪ್.ಎಂ.ಸಿ.ರಸ್ತೆಯಲ್ಲಿರುವ ತಮ್ಮ ಬಾಫ್ತು ವಿಘ್ನೇಶ್ವರ ಝೆರಾಕ್ಸ್ ಅಂಗಡಿಯ ಮುಂದುಗಡೆ ಮೋಟಾರ್ ಬೈಕ್ ನಂ ಕೆ ಎ 18 1298ರನ್ನು ನಿಲ್ಲಿಸಿ ಹೋಗಿದ್ದು ಸಮಯ 6-30 ಪಿ.ಎಂ ಗೆ ನೋಡಲಾಗಿ ಮೋಟಾರ್ ಬೈಕ್ ಕಾಣೆಯಾಗಿದ್ದು ಇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ವಿರಾಜಪೇಟೆ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ಪ್ರೇಮದ ವಿಚಾರದಲ್ಲಿ ಜಿಗುಪ್ಸೆಗೊಂಡು ಯುವಕ ಆತ್ಮಹತ್ಯೆ:
ವಿರಾಜಪೇಟೆ ಗ್ರಾಮಾಂತ್ರ ಠಾಣ ವ್ಯಾಪ್ತಿಯ ಅರಮೇರಿ ಗ್ರಾಮದ ವಾಸಿ 32 ವರ್ಷ ಪ್ರಾಯದ ಕುಶಾಲಪ್ಪ ಯಾನೆ ಸತೀಶ ಎಂಬವರು 2 ವರ್ಷಗಳಿಂದ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದು, ಈ ವಿಚಾರದಲ್ಲಿ ಮನಸ್ಸಿಗೆ ಬೇಸರಗೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಕದನೂರು ಹೊಳೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು ವಿರಜಪೇಟೆ ಗ್ರಾಮಾಮತ್ರ ಪೊಲೀಸರು ಪ್ರಕರನವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ಅಪ್ರಾಪ್ತ ಹುಡುಗಿ ಕಾಣೆ, ಅಪಹರಣದ ಶಂಕೆ:
ಅಪ್ರಾಪ್ತ ವಯಸ್ಸಿನ ಹುಡುಗಿಯೊಬ್ಬಳು ಮನೆಯಿಂದ ಕಾಣೆಯಾಗಿರುವ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಪೆರುಂಬುಕೊಲ್ಲಿಯಲ್ಲಿ ನಡೆದಿದೆ. ಸೋಮವಾರಪೇಟೆ, ಕೂಡ್ಲೂರು ಶೆಟ್ಟಳ್ಳಿ ಗ್ರಾಮದ ವಾಸಿ ಯೂಸುಫ್‌ ಎಂಬವರ ಮಗಳು 17 ವರ್ಷ ಪ್ರಾಯದ ಮುಬಷಿರಳು ದಿನಾಂಕ 27-08-2013 ರಂದು ಮಡಿಕೇರಿ ತಾಲೋಕಿನ ಪೆರಂಬುಕೊಲ್ಲಿಯ ತೋಟದ ಲೈನ್ ಮನೆಯಲ್ಲಿರುವ ಅಜ್ಜಿಯ ಮನೆಯಲ್ಲಿ ಇದ್ದು ಅಲ್ಲಿಂದ ಆಕೆ ಕಾಣೆಯಾಗಿದ್ದು ಈಕೆಯನ್ನು ಯಾರೋ ಅಪಹರಿಸಿಕೊಂಡು ಹೋಗಿರಬಹುದಾಗಿ ಸಂಶಯ ಇದ್ದು ಮಡಿಕೇರಿ ಗ್ರಾಮಾಂತ್ರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

Monday, August 26, 2013

ಬಸ್ಸ ಡಿಕ್ಕಿ, ಪಾದಾಚಾರಿ ಆಸ್ಪತ್ರೆಗೆ.

          ಪಾದಾಚಾರಿಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುವ ಸಂದರ್ಭ ಖಾಸಗಿ ಬಸ್ಸೊಂದು ಡಿಕ್ಕಿಯಾದ ಘಟನೆ ನಡೆದಿದೆ. ಇಂದು ಬೆಳಿಗ್ಗೆ  9-00 ಗಂಟೆಗೆ  ವಿರಾಜಪೇಟೆ ನಗರ ಪೊಲೀಸ್ ಠಾಣಾ  ಸರಹದ್ದು ಎಪ್.ಎಂ.ಸಿ ರಸ್ತೆಯ ಸರಸ್ವತಿ ಸ್ಟೋರ್ ಮುಂಭಾಗ ಶ್ರೀಮತಿ ಆಸಿಯಾಬಿ (ಶಿಕ್ಷಕಿ) ರವರು ನಡೆದುಕೊಂಡು ಹೋಗುತ್ತಿರುವಾಗ  ಪಶುಪತಿ ಹೆಸರಿನ ಖಾಸಗಿ ಬಸ್ ಸಂಖ್ಯೆ ಕೆಎ-54-2222 ರನ್ನು ಅದರ ಚಾಲಕ ನಿರ್ಲಕ್ಷತನದಿಂದ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಆಸಿಯಾಬಿರವರಿಗೆ  ಬಸ್ ತಗುಲಿ ಹೊಟ್ಟೆಗೆ ಸೊಂಟಕ್ಕೆ ಗಾಯಗಳಾಗಿ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಬಗ್ಗೆ ದಾಖಲಾಗಿದ್ದು, ವಿರಾಜಪೇಟೆ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಮಗುವಿಗೆ ವ್ಯಾನ್‌ ಡಿಕ್ಕಿ ಪ್ರಕರಣ ದಾಖಲು

     ರಸ್ತೆಯಲ್ಲಿ ನಡೆದುಕೊಂಡು ಹೋತ್ತಿದ್ದ ಮಗುವಿಗೆ ಓಮ್ನಿಯೊಂದು ಡಿಕ್ಕಿಯಾದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ.  ದಿನಾಂಕ 25-8-2013 ರಂದು ಸಂಜೆ ಗಣಪತಿ ಬೀದಿಯಲ್ಲಿ ವಾಸವಾಗಿರುವ ನೌಷಾದ್‌ ಎಂಬವರು ತನ್ನ ಮಗಳ ಕೈಹಿಡಿದುಕೊಂಡು ಹೋಗುತ್ತಿರುವಾಗ ಮಾರು ಓಮ್ನಿಯೊಂದರ ಚಾಲಕ ವಾಹನವನ್ನು ಅತೀ ವೇಗ ಹಾಗು ಅಜಾಗರೂಕತೆಯಿಂದ ಓಡಿಸಿ ಡಿಕ್ಕಿಪಡಿಸಿ ವಾಹನವನ್ನು ನಿಲ್ಲಿಸದೇ ಹೋಗಿದ್ದು, ನೌಷಾದ್‌ ರವರ ದೂರಿನ ಮೇರೆಗೆ ಮಡಿಕೇರಿ ಟ್ರಾಫಿಕ್‌ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ

Thursday, August 22, 2013

ಮೊಬೈಲ್‌ ಮೂಲಕ ಜೂಜಾಟ, ಪೊಲೀಸರ ದಾಳಿ:

      ಜಿಲ್ಲಾ ಅಪರಾಧ ಪತ್ತೆ ದಳದ  ನಿರೀಕ್ಷಕರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ  ಮುರ್ನಾಡು ಪಟ್ಟಣದಲ್ಲಿ ಕೆ ಪಿ ಅಬ್ದುಲ್, ತಂದೆ ಅಬುಬಕರ್, ಪ್ರಾಯ 42 ವರ್ಷ ಈತ ಕೇರಳ ರಾಜ್ಯದಿಂದ ಅದೃಷ್ಟದ ಸಂಖ್ಯೆಗಳನ್ನು ಮೊಬೈಲ್ ಫೊನ್ ಮುಖಾಂತರ ಪಡೆದುಕೊಂಡು ಸದರಿ ಅದೃಷ್ಟದ ಸಂಖ್ಯೆಗಳನ್ನು ಸಾರ್ವಜನಿಕರಿಗೆ ಖುದ್ದಾಗಿ ಹಾಗೂ ತನ್ನ ಮೊಬೈಲ್ ಮುಲಕ ತಿಳಿಸಿ ಸಾರ್ವಜನಿಕರು ತಾವು ಆಯ್ಕೆ ಮಾಡುವ ಸಂಖ್ಯೆಗಳನ್ನು ಕೇರಳ ರಾಜ್ಯದ ವ್ಯಕ್ತಿಗೆ ತಿಳಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿಕೊಂಡು ಸದರಿ ಅದೃಷ್ಟದ ಸಂಖ್ಯೆಗಳಲ್ಲಿ ವಿಜೇತ ಸಂಖ್ಯೆಗಳನ್ನು ಸಹಾ ತರಿಸಿಕೊಂಡು ವಿಜೇತ ಜೂಜಾಟದ ಸಂಖ್ಯೆಗಳನ್ನು ಆಯ್ಕೆ ಮಾಡಿದವರಿಗೆ ಅದೃಷ್ಟದ ಜೂಜಾಟದ ಬಹಮಾನದ ಮೊತ್ತವನ್ನು ನೀಡುತ್ತಿದ್ದುದನ್ನು ಪತ್ತೆಹಚ್ಚಿ ಆತನ ಕೈಯಲ್ಲಿದ್ದ ಒಂದು ನೋಕಿಯಾ ಮೊಬೈಲ್ ಫೊನ್, ಅದೃಷ್ಟದ ಸಂಖ್ಯೆಗಳು ಹಾಗೂ ವಿಜೇತ ಸಂಖ್ಯೆಗಳನ್ನು ಕೈಬರಹದಲ್ಲಿ ಬರೆದಿರುವ ಒಂದು ಪೇಪರ್ ಹಾಳೆಯನ್ನು, ನಗದು ಹಣ ರೂ 7,080=00 ಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿಯನ್ನು ಬಂಧಿಸಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
ಮೋಟಾರ್‌ ಸೈಕಲ್‌ಗೆ ಜೀಪು ಡಿಕ್ಕಿ, ದಂಪತಿಗೆ ಗಾಯ:
     ಮೋಟಾರ್‌ ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಜೀಪೊಂದು ಡಿಕ್ಕಿಯಾಗಿ ಗಾಯಗಳಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.  ದಿನಾಂಕ 21-8-2013 ರಂದು ಮಡಿಕೇರಿ ತಾಲೋಕು ತಾಳತ್‌ಮನೆ ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ದಿವ್ಯಾ ಮತ್ತು ಅವರ ಪತಿ ಶಿವಪ್ರಸಾದ್‌ ಎಂಬವರು ಮೋಟಾರ್‌ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಮಂಗಳೂರು ಕಡೆಯಿಂದ ಸಿಎನ್‌ಜೆಡ್‌-ಡ್‌-1374ನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಮೋಟಾರ್‌ ಸೈಕಲ್‌ಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ದಿವ್ಯಾ ಹಾಗೂ ಶಿವಪ್ರಸಾದ್‌ ರವಗಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು  ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾಗಿದ್ದು, ಮಡಿಕೇರಿ ಸಂಚಾರಿ ಪೊಲೀಸರು ಪ್ರಕರನವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ
ಅರಣ್ಯ ಅಧಿಕಾರಿಯ ಕರ್ತವ್ಯಕ್ಕೆ ತಡೆ, ಪ್ರಕರಣ ದಾಖಲು:
     ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಅಧಿಕಾರಿಯವರನ್ನು ವ್ಯಕ್ತಿಯೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ವಿರಾಜಪೇಟೆಯ ಉಪ ಅರಣ್ಯಸಂರಕ್ಷಣಾಧಿಕಾರಿ ಕಛೇರಿಯಲ್ಲಿ ನಡೆದಿದೆ.  ದಿನಾಂಕ 21-8-2013 ರಂದು ಅಪರಾಹ್ನ ಡಾ: ಮಾಲತಿ ಪ್ರಿಯ, ಉಪ ಅರಣ್ಯಸಂರಕ್ಷಣಾಧಿಕಾರಿ ಇವರು ವಿರಾಜಪೇಟೆ, ಗಾಂಧೀನಗರದಲ್ಲಿರುವ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಅಮತ್ತಿ ವಾಸಿ ಕೆ.ಎ. ಕುಶಾಲಪ್ಪ ಎಂಬವರು ಕಛೇರಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು, ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಕುರಿತು ಡಾ: ಮಾಲತಿ ಪ್ರಿಯರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ

Tuesday, August 20, 2013

ಅಪ್ರಾಪ್ತ ಹುಡುಗಿಯ ನಾಪತ್ತೆ, ಅಪಹರಣದ ಶಂಕೆ:

     ಕಾಲೇಜು ವಿದ್ಯಾರ್ಥಿನಿಯೊಬ್ಬಳು ಕಾಲೇಜಿಗೆ ಹೋದವಳು ಮತ್ತೆ ಮನೆಗೆ ಬಾರದೆ ಕಾಣೆಯಾಗಿದ್ದು ಆಕೆಯನ್ನು ವ್ಯಕ್ತಿಯೊಬ್ಬ ಅಪಹರಣ ಮಾಡಿರಬಹುದಾದ ಘಟನೆ ನಡೆದಿದೆ.  ಮಡಿಕೇರಿ ಗ್ರಾಮದ ತೊಂಭತ್ತುಮನೆ ಗ್ರಾಮದ ನಿವಾಸಿ ಆರ್‌ ರಮೇಶ ಎಂಬವರ ಮಗಳು ಪ್ರಾಯ 16ರ ಪೂಜಾ ಎಂಬುವವಳು ಮಡಿಕೇರಿ ನಗರದ ಜೂನಿಯರ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ದಿನಾಂಕ 19-8-2013 ರಂದು ಸಂಜೆ ಶಾಲೆಯಿಂದ ಮನೆಗೆ ಬಾರದ್ದರಿಂದ ಆಕೆಯ ಸ್ನೇಹಿತೆ ವಿದ್ಯಾ ಎಂಬುವವಳನ್ನು ವಿಚಾರಿಸಿದಾಗ ಪೂಜಾಳು ಸಮಯ 3.30 ಗಂಟೆಗೆ ಬಿಳಿಗೇರಿ ಗ್ರಾಮ ಲೋಹಿತ್ ರೈ ಎಂಬುವವನೊಂದಿಗೆ ಅವನ ಆಟೋ ದಲ್ಲಿ ಹೋಗಿರುತ್ತಾಳೆಂದು ತಿಳಿಸಿದ್ದು, ಪಿರ್ಯಾದಿಯವರು ಲೋಹಿತ ರೈ ಮನೆಯಲ್ಲಿ ವಿಚಾರಿಸಿದಾಗ ಮಗಳು ಅಲ್ಲಿರಲಿಲ್ಲ.  ಪೂಜಾಳನ್ನು ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗದೇ ಇದ್ದು ಲೋಹಿತ್ ರೈ ಎಂಬುವವನು ಪೂಜಾಳನ್ನು ಅಪಹರಿಸಿರ ಬಹುದೆಂದು ಶಂಕೆ ವ್ಯಕ್ತಪಡಿಸಿ ರಮೇಶ್‌ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ಕಳ್ಳತನಮಾಡಿದ ವ್ಯಕ್ತಿಯೋರ್ವ ಭಯಗೊಂಡು ಆತ್ಮಹತ್ಯೆ:
      ಕಳ್ಳತನ ಮಾಡಿದ ವ್ಯಕ್ತಿಯೊಬ್ಬ ತನ್ನ ಮೇಲೆ ಪೊಲೀಸ್‌ ದೂರು ನೀಡಬಹುದೆಂದು ಹೆದರಿ ನೇಣಿಗೆ ಶರಣಾದ ಘಟನೆ ನಡೆದಿದೆ.  ವಿರಾಜಪೇಟೆ ತಾಲೋಕು ಮಂಚಳ್ಳಿ ಗ್ರಾಮದ ನಿವಾಸಿ ಎಂ.ಎಂ. ಶರ್ಮಿನ್‌ ಎಂಬವರ ಲೈನ್‌ ಮನೆಯಲ್ಲಿ ವಾಸವಾಗಿದ್ದ ಶ್ರೀಮತಿ ಗಂಗಿ ಎಂಬವರ ಮಗ ದಿನಾಂಕ 17-8-2013 ರಂದು ತನ್ನ ಸಾಹುಕಾರರ ಮನೆಯಿಂದ ಹಣವನ್ನು ಕಳ್ಳತನ ಮಾಡಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತಾರೆಂದು ಹೆದರಿ ದಿನಾಂಕ 19-8-2013 ರಂದು ಕಾಫಿ ತೋಟದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟ್ಟ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

Monday, August 19, 2013

ವ್ಯಕ್ತಿಯ ಮೇಲೆ ಹಲ್ಲೆ ಹಣ ಹಾಗೂ ಎಟಿಎಂ ಕಾರ್ಡ್‌ ದರೋಡೆ;

ವ್ಯಕ್ತಿಯೊಬ್ಬರನ್ನು ನಂಬಿಸಿ ಕರಿಮೆಣಸಿನ ಹುಡಿಹೊಡುವುದಾಗಿ ಹೇಳಿ ಕರೆದುಕೊಂಡು ಹೋಗಿ ಆತನ ಮೇಲೆ ಹಲ್ಲೆ ನಡೆಸಿ ಹಣ, ಮೊಬೈಲ್‌ ಹಾಗೂ ಎಟಿಎಂ ದೋಚಿರುವ ಘಟನೆ ನಡೆದಿದೆ.  ದಿನಾಂಕ 16-8-2013 ರಂದು ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯಲ್ಲಿ ವಾಸವಾಗಿರುವ 63 ವರ್ಷ ಪ್ರಾಯದ ಜೋಯಿವರ್ಗೀಸ್‌ ಎಂಬವರಿಗೆ  ಒಬ್ಬ ಅಪರಿಚಿತ ವ್ಯಕ್ತಿಯು ಕರಿಮೆಣಸಿನ ಹುಡಿಯನ್ನು ಕೊಡುವುದಾಗಿ ನಂಬಿಸಿ  ಅಮ್ಮತ್ತಿಯವರೆಗೆ ಬಸ್ಸಿನಲ್ಲಿ ಕರೆದುಕೊಂಡು ಹೋಗಿ ನಂತರ ಅಲ್ಲಿಂದ ಒಂದು ಆಟೋದಲ್ಲಿ ಕರೆದುಕೊಂಡು ಕಳತ್ಮಾಡು ಗ್ರಾಮದತ್ತ ಕರೆದುಕೊಂಡು ಹೋಗಿ ಜೋಯಿ ವರ್ಗೀಸ್‌ ರವರ ಮೇಲೆ ಹಲ್ಲೆ ನಡೆಸಿ ಆತನಿಂದ 8500 ನಗದು ಹಾಗೂ ಒಂದು ಮೊಬೈಲ್‌ ಪೋನ್‌ ಮತ್ತು ಎಟಿಎಂ ಕಾರ್ಡ್‌ನ್ನು ದೋಚಿ ಪರಾರಿಯಾಗಿದ್ದು, ಸಿದ್ದಾಪುಅರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 

Friday, August 16, 2013

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಗಳ ಮೇಲೆ ಹಲ್ಲೆ:

     ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗಳಿಬ್ಬ್ರ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆನಡೆಸಿದ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಅಮ್ಮತ್ತಿ ಗ್ರಾಮದಲ್ಲಿ ನಡೆದಿದೆ.  ದಿನಾಂಕ 14-8-2013 ರಂದು ಸಂಜೆ ಅಮ್ಮತ್ತಿ ನಗರದ ಚೌಡೇಶ್ವರಿ ಕಾಲೋನಿ ವಾಸಿ ಹೆಚ್‌.ಸಿ. ಲೋಹಿತ್‌ ಹಾಗೂ ರಾಜು ಎಂಬವರು ಚೌಡೇಶ್ವರಿ ಕಾಲೋನಿಯ ರಸ್ತೆಯಲ್ಲಿ ನಡೆದುಕೊಂಡುಮ ಹೋಗುತ್ತಿರುವಾಗ ಆರೋಪಿಗಳಾದ ಅದೇ ಗ್ರಾಮದ ವಾಸಿಗಳಾದ ಅರುಣ, ನರಸಯ್ಯ ಹಾಗೂ ಕಿರಣ್‌ ಎಂಬವರುಗಳು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗಬಾರದೇ ಎಂಬುದಾಗಿ ಜಗಳ ತೆಗೆದು ಹಲ್ಲೆ ನಡೆಸಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
 
ವಿನಾಕಾರಣ ಆಟೋ ಚಾಲಕನ ಮೇಲೆ ಹಲ್ಲೆ, ಕೊಲೆ ಬೆದರಿಕೆ:
 
     ದಿನಾಂಕ 14-8-2013 ರಂದು ಪೆರುಂಬಾಡಿ ಗ್ರಾಮದ ವಾಸಿ ಟಿ.ಆರ್‌ ಕೃಷ್ಣ ಎಂಬಾತನ ಆಟೋ ರಿಕ್ಷಾವನ್ನು ವಿರಾಜಪೇಟೆ ತಾಲೋಕು ಚಿಟ್ಟಡೆ ಗ್ರಾಮದ ರಜಾಕ್‌ ಹಾಗೂ ಲತೀಫ್‌ ಎಂಬವರು ಬಾಡಿಗೆಗೆ ಪಡೆದು ದಾರಿಮದ್ಯೆ ನಿಲ್ಲಿಸಲು ತಿಳಿಸಿ  ಆಟೋ ಚಾಲಕ ಕೃಷ್ಣರವರ ಮೇಲೆ ಹಲ್ಲೆ ನಡೆಸಿ ಪೊಲೀಸರಿಗೆ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದು ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 

Wednesday, August 14, 2013

ಕ್ಷುಲ್ಲಕ ಕಾರಣ ವ್ಯಕ್ತಿಯ ಮೇಲೆ ಹಲ್ಲೆ:
 
           ಬಸ್ಸಿನಲ್ಲಿ ರಿಯಾಯಿತಿ ನೀಡದೇ ಇರುವುದಕ್ಕೆ ಖಾಸಗಿ ಬಸ್ಸ್ ನಿರ್ವಾಹಕನನ್ನು ಅವಾಚ್ಯವಾಗಿ ಬೈದು ಹಲ್ಲೆನಡೆಸಿದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮರಗೋಡು ಗ್ರಾಮದಲ್ಲಿ ನಡೆದಿದೆ.  ದಿನಾಂಕ 12-8-2013 ರಂದು ಖಾಸಗಿ ಬಸ್ಸಿನ ನಿರ್ವಾಹಕ ಎಂ.ಬಿ. ಮೊಹಮ್ಮದ್‌ ಫರ್ವಿನ್‌ ಎಂಬವರು ಎಂದಿನಂತೆ ಮಡಿಕೇರಿಯಿಂದ ಮರಗೋಡು ಮಾರ್ಗವಾಗಿ ಸಿದ್ದಾಪುರಕ್ಕೆ ಬಸ್ಸಿನಲ್ಲಿ ಹೋಗುತ್ತಿದ್ದಾದ ಸ್ವಾತಿ ಎಂಬ ಮಹಿಳೆ ಬಸ್ಸಿನಲ್ಲಿ ಪ್ರಯಾಣಿಸಲು ರಿಯಾಯಿತಿ ದರವನ್ನು ಕೇಳಿದ್ದು ಅದಕ್ಕೆ ಒಪ್ಪದೇ ಇದ್ದುದರಿಂದ ಸದರಿ ಮಹಿಳೆಯು ನಿರ್ವಾಹಕನಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು ಅಲ್ಲದೆ ಬಸ್ಸು ಮರಗೋಡು ಜಂಕ್ಷನ್‌ ಬಳಿ ತಲುಪುವಾಗ ಮೂರು ಜನ ವ್ಯಕ್ತಿಗಳು ಬಸ್ಸನ್ನು ತಡೆದು ಅವಾಚ್ಯವಾಗಿ  ನಿಂದಿಸಿ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
 
ಹಳೇ ದ್ವೇಷದ ಹಿನ್ನೆಲೆ, ವ್ಯಕ್ತಿಯ ಮೇಲೆ ಹಲ್ಲೆ:
 
         ಹಳೇ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನಿಗೆ ಮೂರು ಜನರು ಸೇರಿ ಹಲ್ಲೆನಡೆಸಿ ಗಾಯಗೊಳಿಸಿದ ಘಟನೆ ನಡೆದಿದೆ.  ದಿನಾಂಕ 13-08-2013 ರಂದು ಸಮಯ 17.30 ಗಂಟೆಗೆ ವಿರಾಜಪೇಟೆ ತಾಲ್ಲೂಕು ಕೋತೂರು ಗ್ರಾಮದ ಲಕ್ಕುಂಧದಲ್ಲಿ   ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಕೋತೂರು ಗ್ರಾಮದ ವಿ.ಎಸ್‌. ಪರಮೇಶ್ವರ, ಗಾಣಂಗಡ ತಮ್ಮಯ್ಯ ಹಾಗೂ ಜನಕರಾಜ ಎಂಬ ವ್ಯಕ್ತಿಗಳು  ಅದೇ ಗ್ರಾಮದ ಬಿ.ಜಿ.ಜಿ.ಗಣೇಶ್‌ ಕುಮಾರ್‌ ಎಂಬವರ ಮೇಲೆ ಕೈಗಳಿಂದ ಹಾಗೂ ಸೌದೆ ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು,  ಕುಟ್ಟ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
 

Tuesday, August 13, 2013

ಆಕಸ್ಮಿಕ ನೀರಿನಲ್ಲಿ ಮುಳುಗಿ ವ್ಯಕ್ತಿಯ ಸಾವು:

     ಕೆರೆಯಲ್ಲಿ ಈಜಲು ಹೋದ ವ್ಯಕ್ತಿಯೋರ್ವ ಆಕಸ್ಮಿಕವಾಗಿ ಮುಳುಗಿ ಸಾವನಪ್ಪಿದ ಘಟನೆ ನಡೆದಿದೆ. ಕೇರಳದ  ಸುಲ್ತಾನ್‌ ಬತ್ತೆರಿವಾಸಿ ರಾಘವ ಎಂಬವರು  ವಿರಾಜಪೇಟೆ ತಾಲೋಕಿನ ಸುಳುಗೋಡು ಗ್ರಾಮದಲ್ಲಿ  ಕೂಲಿ ಕೆಲಸ ಮಾಡುತ್ತಿದ್ದು ದಿನಾಂಕ 12-8-2013 ರಂದು ಸಂಜೆ  ಕೆರೆಗೆ ಸ್ನಾನ ಮಾಡಲು ಹೋಗಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಪುನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಗಾರೆ. 

ಪರಸ್ಪರ ಮೋಟಾರ್‌ ಬೈಕ್‌ಗಳ ಡಿಕ್ಕಿ ಒಬ್ಬನಿಗೆ ಗಾಯ:

     ಮೋಟಾರ್‌ ಸೈಕಲ್‌ ಸವಾರನಿಗೆ  ಬೇರೊಂದು ಮೋಟಾರ್‌ ಬೈಕ್‌ ದಿಕ್ಕಿಯಾಗಿ  ಗಾಯಗಳಾದ ಘಟನೆ ನಡೆದಿದೆ.  ಶನಿವಾರಸಂತೆ ಪೊಲೀಸ್‌ ಠಾಣಾ ವ್ಯಾಪ್ತಿಗೆ ಸೇರಿದ ಕೊಡ್ಲಿಪೇಟೆ ಬೆಸೂರು ಗ್ರಾಮದ ನ್ಯಾಯದಹಳ್ಳ ಎಂಬಲ್ಲಿ  ಪ್ರಜ್ವಲ್‌ ಕುಮಾರ್‌ ಎಂಬಾತನು ತನ್ನ ಸ್ನೇಹಿತನ ಬಾಪ್ತು ಕೆಎ-22, ವಿ-3466 ರ ಮೋಟಾರು ಬೈಕಿನಲ್ಲಿ ಸ್ವಂತ ಕೆಲಸದ ನಿಮಿತ್ತ ಬೆಸೂರಿನ ನ್ಯಾಯದ ಹಳ್ಳ ಸರ್ಕಾರಿ ಶಾಲೆಯ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಿರುವಾಗ್ಗೆ, ಎದುರುಗಡೆಯಿಂದ ಕೆಎ-12, ಕೆ-8392 ರ ಮೋಟಾರು ಬೈಕನ್ನು ಅದರ ಸವಾರ ಅತಿ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಪ್ರಜ್ವಲ್‌ ಕುಮಾರ್‌ಗೆ ರಕ್ತಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ  ದಾಖಲುಪಡಿಸಿದ್ದು, ಗಾಯಾಳುವಿನ ತಾಯಿ ಶ್ರೀಮತಿ ಸುಶೀಲರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 

Monday, August 12, 2013

ಅಪ್ರಾಪ್ತ ಹೆಣ್ಣು ಮಕ್ಕಳ ಅಪಹರಣ ಶಂಕೆ, ಪ್ರಕರಣ ದಾಖಲು:

     ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳು ಕಾಣೆಯಾದ ಘಟನೆ ಮಡಿಕೇರಿ ತಾಲೋಕಿನ ಕಾಂತೂರು-ಮೂನಾಡು ಗ್ರಾಮದಲ್ಲಿ ನಡೆದಿದ್ದು  ಅವರನ್ನು ಯಾರೋ ಅಪಹರಿಸಿರುವ ಶಂಕೆ ಇದೆ. ಇದೆ.ಮಡಿಕೇರಿ ತಾಲೋಕಿನ ಕಾಂತೂರು-ಮೂರ್ನಾಡಯ ಗ್ರಾಮದಲ್ಲಿ ವಾಸವಿರುವ ಎರವರ  ಕರಿಯ  ಎಂಬವರ 18 ವರ್ಷ ಪ್ರಾಯದ  ಮಗಳು ನೀಲಿ ಎಂಬುವವಳು ಕೂಲಿ ಕೆಲಸ ಮಾಡಿಕೊಂಡು ಕುಟ್ಟದಲ್ಲಿರುವ ತಂಗಿಯ ಮನೆಗೆ ಆಗಾಗ್ಗೆ ಹೋಗಿ ಬರುತ್ತಿದ್ದು ದಿನಾಂಕ 29-07-2013 ಸಮಯ 10-00 ಗಂಟೆಗೆ ನೀಲಿಯು ಕುಟ್ಟದಿಂದ ಬಂದು ತನ್ನ ತಂದೆ ಕರಿಯರವರನ್ನು ಮಾತನಾಡಿಸಿ ಸದರಿಯವರ  13 ವರ್ಷ ಪ್ರಾಯದ ಪುಟ್ಟಿ ಎಂಬಾಕೆಯನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದು  ಯಾರೋ ಯಾವುದೋ ಕಾರಣಕ್ಕೆ ಇವರುಗಳನ್ನು ಅಪಹರಿಸಿಕೊಂಡು ಹೋಗಿರುವ ಕುರಿತು ಅನುಮಾನ ವಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
ಅಪರಿಚಿತ ವ್ಯಕ್ತಿಯ ಸಾವು:
     ಅಪರಿಚಿತ ವ್ಯಕ್ತಿಯೊಬ್ಬ ವಿಪರೀತ ಮದ್ಯಪಾನ ಮಾಡಿ  ಪ್ರಜ್ಞಾಹೀನ ಸ್ಥಿತಿಯಲ್ಲಿ  ಬಿದ್ದುಕೊಂಡಿರುವುದು ಕಂಡುಬಂದಿದ್ದು, ಆತ ಆಸ್ಪತ್ರೆಯಲ್ಲಿ ಚಿಕಿತ್ಸೆವೇಳೆ ಮೃತಪಟ್ಟಿರುವ ಘಟನೆ ನಡೆದಿದೆ . ಪೊನ್ನಂಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯ  ಜೂನಿಯರ್‌ ಕಾಲೇಜು ಜಂಕ್ಷನ್‌ ಬಳಿ ಅಂದಾಜು 40 ರಿಂದ 50 ವರ್ಷ ಪ್ರಾಯದ ವ್ಯಕ್ತಿಯೊಬ್ಬ ವಿಪರೀತವಾಗಿ ಮದ್ಯಪಾನ ಮಾಡಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡುಬಂದಿದ್ದು ಆತನನ್ನು ಗೋಣಿಕೊಪ್ಪ ಸರಕಾರಿ ಆಸ್ಪತ್ರೆಗೆ  ಚಿಕಿತ್ಸೆಗೆ ದಾಖಲಿಸಿದ್ದು  ದಿನಾಂಕ 11-8-2013 ರಂದು ಸಂಜೆ ಆತ ಮೃತಪಟ್ಟಿದ್ದು, ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ  ಕ್ರಮ ಕೈಗೊಂಡಿರುತ್ತಾರೆ
ಸಂಶಯಾಸ್ಪದವಾಗಿ ವ್ಯಕ್ತಿಯ ಸಾವು, ಕೊಲೆ ಪ್ರಕರಣ ದಾಖಲು:
     ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಯಾರೋ ವ್ಯಕ್ತಿಗಳು ಕೊಲೆಗೈದಿರುವ ಬಗ್ಗೆ ದೊರೆತ ಪುರಾವೆ ಆದಾರದ ಮೇರೆ  ಪೊಲೀಸರು  ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿ ಪತ್ತೆಗಾಗಿ ತನಿಖೆ ಕೈಕೊಂಡಿರುತ್ತಾರೆ.  ದಿನಾಂಕ 6-8-2013 ರಂದು ದೇವಂಗೋಡಿ ಕುಮಾರ @ ರವಿ ಎಂಬವರು ಅನುಮಾನಸ್ಪದವಾಗಿ ಮೃತಪಟ್ಟಿದ್ದು ಮಡಿಕೇರಿ ಗ್ರಾಮಾಂತರ  ಪೊಲೀಸರು  ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಸದರಿ ವ್ಯಕ್ತಿಯನ್ನು ಯಾರೋ ಕೊಲೆಗೈದಿರುವ ಬಗ್ಗೆ ಕಂಡು ಬಂದ ಹಿನ್ನೆಲೆಯಲ್ಲಿ  ಮಡಿಕೇರಿ ಗ್ರಾಮಾಂತರ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿತ್ತಾರೆ. 
 
 

Saturday, August 10, 2013

ಕ್ಷುಲ್ಲಕ ಕಾರಣಕ್ಕೆ ದಾರಿ ತಡೆದು ಹಲ್ಲೆ 
        ಕ್ಷುಲ್ಲಕ ಕಾರಣಕ್ಕೆ ದಾರಿ ತಡೆದು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ವಿರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದ ರಾಮನಗರದಲ್ಲಿ ನಡೆದಿದೆ. ದಿನಾಂಕ: 09-08-13ರಂದು ಹೆಗ್ಗಳ ಗ್ರಾಮದ ರಾಮನಗರ ನಿವಾಶಿ ಟಿ.ಎಸ್.ಮುರುಗೇಶ್ ಎಂಬವರು  ಗಾರೆ ಕೆಲಸ ಮುಗಿಸಿ ಸಂಜೆ ಮನೆಗೆ ಹೋಗಲು ಜೋಸ್ ಎಂಬವರ ತೋಟದ  ಪಕ್ಕದ  ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಪ್ರಸಾದ್ ಎಂಬವರು ಹಾಗೂ ಇತೆರ ಮೂವರು ಮುರುಗೇಶ್ ರವರನ್ನು ದಾರಿ ತಡೆದು ನಿಲ್ಲಿಸಿ ವಿನಾ ಕಾರಣ ಕೈಯಿಂದ ಹಾಗೂ ಆಟೋದಲ್ಲಿದ್ದ ಕಬ್ಬಿಣದ ರಾಡ್ ನಿಂದ ಹಾಗೂ ಕತ್ತಿಯಿಂದ ಕೊಲೆ ಮಾಡುವ ಉದ್ದೇಶದಿಂದ ಹೊಡೆದು ಗಾಯಗೊಳಿಸಿರುವುದಾಗಿ ಮುರುಗೇಶ್‌ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಿಷ ಸೇವಿಸಿ ಯುವಕನ ಆತ್ಮಹತ್ಯೆ 
      ಜೀವನದಲ್ಲಿ ಜುಗುಪ್ಸೆಗೊಂಡ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂರ್ನಾಡು ಸಮೀಪದ ಹೊದ್ದೂರು ಪಾಲೆಮಾಡು ಪೈಸಾರಿಯಲ್ಲಿ ನಡೆದಿದೆ. ದಿನಾಂಕ 08/08/2013ರಂದು ಹೊದ್ದೂರು ಪಾಲೆ ಮಾಡು ಪೈಸಾರಿ ನಿವಾಸಿ ಜಿ.ಸ್ವಾಮಿ ಎಂಬವರ ಮಗ 19 ವರ್ಷ ಪ್ರಾಯದ ಅಶೋಕ ಎಂಬಾತನು ವಾಹನದ ದುರಸ್ತಿಗೆಂದು ತನ್ನ ಟಾಟಾ ಮ್ಯಾಜಿಕ್ ವಾಹನವನ್ನು ತೆಗೆದುಕೊಂಡು ಹೋಗಿದ್ದು ಸಂಜೆ ಮನೆಗೆ ಬಂದವನು ರಾತ್ರಿ ವೇಳೆಯಲ್ಲಿ ಅಸ್ವಸ್ಥನಾಗಿದ್ದು ಆತನ ಬಾಯಿಯಿಂದ ಯಾವುದೋ ವಿಷ ಪದಾರ್ಥದ ವಾಸನೆ ಬರುತ್ತಿದ್ದ ಕಾರಣ ಕೂಡಲೇ ಆತನನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಅಶೋಕನು ಮೃತಪಟ್ಟಿರುವುದಾಗಿ ನೀಡಿದ ದೂರಿ ಮೇರೆಗೆ ಮಡಿಕೇರಿಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಅಶೋಕನು ಅತಿಯಾದ ಮೋಜು ಹಾಗೂ ದುಂದು ವೆಚ್ಚ ಮಾಡುತ್ತಿದ್ದು ವಾಹನದ ಸಾಲ ತೀರಿಸಲು ಹಣದ ಅಭಾವವಿದ್ದುದೇ ಆತ್ಮಹತ್ಯೆಗೆ ಕಾರಣಕಾರಣವೆನ್ನಲಾಗಿದೆ. 

ಕೆರೆಗೆ ಬಿದ್ದು ವ್ಯಕ್ತಿಯ ಆಕಸ್ಮಿಕ ಸಾವು 
        ಕೆರೆಗೆ ಬಿದ್ದು ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಸಾವಿಗೀಡಾದ ಘಟನೆ ಕುಟ್ಟ ಬಳಿಯ ಮಂಚಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಚಳ್ಳಿ ಗ್ರಾಮದ ಎಂ.ಎಂ.ಕಾರ್ಯಪ್ಪ ಎಂಬವರ ತೋಟದ ಲೈನು ಮನೆಯಲ್ಲಿ ವಾಸವಿರುವ ಗಣೇಶ ಎಂಬಾತನು ದಿನಾಂಕ 07/08/2013ರ ರಾತ್ರಿ ವೇಳೆ ಬಹಿರ್ದಸೆಗೆಂದು ಹೊರಗಡೆ ಹೋದವನು ಮನೆಗೆ ಬಾರದೆ ಇದ್ದು, ದಿನಾಂಕ 09/08/2013ರಂದು ಆತನ ಶವವು ಮನೆಯ ಹಿಂದಿರುವ ಕೆರೆಯಲ್ಲಿ ತೇಲುತ್ತಿದ್ದುದನ್ನು ಕಂಡು ಆತನ ಪತ್ನಿ ಕಾಳಿಯು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಅತಿಯಾದ ಮದ್ಯ ಸೇವನೆ ಹಾಗೂ ಮೂರ್ಚೆ ರೋಗವಿದ್ದ ಗಣೇಶನು ಬಹಿರ್ದೆಸೆಗೆ ಹೋದವನು ಆಕಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಸಾವಿಗೀಡಾಗಿರಬಹುದೆಂದು ಶಂಕಿಸಲಾಗಿದೆ.

Wednesday, August 7, 2013

ಅಕ್ರಮ ಜೂಜು ಪೊಲೀಸ್‌ ದಾಳಿ:

       ಅಕ್ರಮವಾಗಿ ಇಸ್ಟೇಟ್‌ ಆಟದ ಮೂಲಕ ಜೂಜಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.  ಮಡಿಕೇರಿ ಗ್ರಾಮಾಂತರ ಠಾಣಾ ಅಪರಾಧ ವಿಭಾಗದ ಪೊಲೀಸ್‌ ಉಪ ನಿರೀಕ್ಷಕ ಶ್ರೀ ನಂದೀಶ್‌ ಕುಮಾರ್‌ರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ  ಸಿಬ್ಬಂದಿಯೊಂದಿಗೆ  ಮೇಕೇರಿ ಗ್ರಾಮದ  ಹನೀಫ ಎಂಬವರ ಅಂಗಡಿಯ ಪಕ್ಕದಲ್ಲಿ  ದಾಳಿ ನಡೆಸಿ ಅಕ್ರಮವಾಗಿ ಇಸ್ಪೀಟ್‌ ಎಲೆಗಳನ್ನು ಬಳಸಿ ಜೂಜಾಡುತ್ತಿದ್ದ   ಒಟ್ಟು 9 ಜನ ಆರೋಪಿಗಳ ಪೈಕಿ ಮೂರು ಜನರನ್ನು ವಶಕ್ಕೆ ತೆದುಕೊಂಡು ಜೂಜಾಟದಲ್ಲಿ ಬಳಸಿದ ಹಣ ರೂ.ರೂ.2630/-ಗಳನ್ನು ವಶಕ್ಕೆ ತೆಗದುಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 
ವ್ಯಕ್ತಿಯ ಅಸ್ವಾಭಾವಿಕ  ಮರಣ ಪ್ರಕರಣ ದಾಖಲು:
 
     ತಮ್ಮ ಮನೆಯಿಂದ ಮಡಿಕೇರಿ ನಗರದ ಕಡೆಗೆ ಹೋದ ವ್ಯಕ್ತಿಯೊಬ್ಬರ ಮೃತದೇಹ  2 ದಿನಗಳ ಬಳಿಕ ದೊರೆತ ಘಟನೆ ವರದಿಯಾಗಿದೆ.   ಮಡಿಕೇರಿ ತಾಲೋಕು, ಮೇಕೇರಿ ಗ್ರಾಮದ ವಾಸಿ  ಕುಮಾರ @ ರವಿಯವರು ದಿನಾಂಕ 04-08-2013 ರಂದು ಸಮಯ ಸುಮಾರು 2-30 ಪಿ ಎಂ ಗೆ ಮಡಿಕೇರಿ ಕಡೆ ಹೋದವರು ವಾಪಾಸ್ಸು ಮನೆಗೆ ಬಾರದೇ ಇದ್ದು ದಿನಾಂಕ 06-08-2013 ರಂದು  ಕೋಳಿ ಬೈಲು ಸಿದ್ದಾರ್ಥನವರ ಲೈನ್ ಮನೆಯ ಹಿಂದಿನ ಸೌದೆ ಇಡುವ ಜಾಗದಲ್ಲಿ ಕುಮಾರರವರ ಮೃತದೇಹ ಪತ್ತೆಯಾಗಿದ್ದು  ಅವರ  ಎರಡೂ ಕಾಲಿನ ತೊಡೆಯ ಹಿಂಭಾಗ ಹಾಗೂ ಬೆನ್ನಿನಲ್ಲಿ ಕಂದಿದ ಗಾಯಗಳಾಗಿದ್ದು ಅವರ ಮರಣದ ಬಗ್ಗೆ ಸಂಶಯವಿರುವುದಾಗಿ ಮೃತರ ಮಗ ದೇವಂಗೋಡಿ ಸತೀಶ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತ್ರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ವಿನಾಕಾರಣದ ವ್ಯಕ್ತಿಯನ್ನು ನಿಂದಿಸಿ ಹಲ್ಲೆ:

     ವಿನಾಕಾರಣ ವ್ಯಕ್ತಿಯೊಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ ಕೊಲೆಬೆದರಿಕೆ ಹಾಕಿರುವ ಘಟನೆ ನಡೆದಿದೆ.  ದಿನಾಂಕ 6-8-2013 ರಂದು  ಅರೆದಾಡು ಗ್ರಾಮದ ವಾಸಿ ಬಿ.ಕೆ. ರವಿಚಂದ್ರ ಎಂಬವರು ನೇತಾಜಿನಗರದ ಮುತ್ತು ಎಂಬವರ ಮನೆಯ ಮುಂದೆ ನಿಂತಿರುವಾಗಿ ಅದೇ ಗ್ರಾಮದ ವಾಸಿಗಳಾದ ಪ್ರಭುಶೇಖರ್‌ ಮತ್ತು ವಿನು ಬೆಳ್ಯಪ್ಪ ಎಂಬವರು ಅಲ್ಲಿಗೆ ಬಂದು ವಿನಾಕಾರಣ ಜಗಳ ಮಾಡಿ ಅವಾಚ್ಯಶಬ್ದಗಳಿಂದ ನಿಂದಿಸಿ ಕೈಯಿಂದ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದು, ಬಿ.ಕೆ. ರವಿಚಂದ್ರರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಪ್ರಕರಣ ದಾಖಲು:

     ತರಕಾರಿ ಹಣ ಕೇಳಿದ ಕಾರಣ ವ್ಯಕ್ತಿಯೊಬ್ಬ ಅವಾಚ್ಯವಾಗಿ ನಿಂದಿಸಿ ಕೊಲೆಮಾಡುವುದಾಗಿ ಬೆದರಿಕೆ ಹಾಕಿದ ಘಟನೆ ನಡೆದಿದೆ.  ದಿನಾಂಕ 05-8-2013 ರಂದು  ಕೊಡ್ಲಿಪೇಟೆ-ಕೆರಗನಹಳ್ಳಿ ಗ್ರಾಮದ ನಿವಾಸಿ ಕೆ.ಕೆ. ಮಲ್ಲೇಶ್‌ ಎಂಬವರು ಅದೇ ಗ್ರಾಮದ ಸುಂದರೇಶ್‌ ರವರಿಂದ  ತರಕಾರಿ ತೆಗೆದುಕೊಂಡ ಹಣವನ್ನು ಕೇಳಿದಾಗ ಆತ ನಿನಗೆ ಯಾವ ಹಣವನ್ನು ಕೊಡಬೇಕು ಎಂದು ಬೈದು  ಬೀಯರ್ ಬಾಟಲಿಯಿಂದ  ತಲೆಯ ಹಿಂಭಾಗಕ್ಕೆ ಹೊಡೆದು ಗಾಯಗೊಳಿಸಿದ್ದು,  ಈ ಬಗ್ಗೆ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.
 

Tuesday, August 6, 2013

ಅಪ್ರಾಪ್ತ ವಯಸ್ಸಿನ ಬಾಲಕ ಕಾಣೆ:

     
ಶಾಲೆಗೆ ಹೋದ ಬಾಲಕನೊಬ್ಬ ಮನೆಗೆ ಬಾರದೆ ಕಾಣೆಯಾಗಿರುವ ಘಟನೆ  ಐಕೊಳ ಗ್ರಾಮದಲ್ಲಿ ನಡೆದಿದೆ.  ಮಡಿಕೇರಿ ತಾಲೋಕಿನ ಐಕೊಳ ಗ್ರಾಮದ ನಿವಾಸಿ ಶ್ರೀಮತಿ ಜಮುನ ಎಂಬವರ ಮಗ 114 ವರ್ಷ ಪ್ರಾಯದ ಕೆ.ಪಿ. ಮಂಜು  ಎಂಬಾತ ದಿನಾಂಕ 1-8-2013 ರಂದು ಶಾಲೆಗೆ ಹೋಗಿ ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು ಶ್ರೀಮತಿ ಜಮುನರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ
 
 
 
 
ಆರೋಗ್ಯ ಸಮಸ್ಯೆಯಿಂದ ಬೇಸತ್ತ ವ್ಯಕ್ತಿಯ ಆತ್ಮಹತ್ಯೆ:
 
ಹೊಟ್ಟೆನೋವು ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.  ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೊಳ್ತೋಡು ಬೈಗೋಡು ಗ್ರಾಮದಲ್ಲಿ ವಾಸವಾಗಿರುವ ಪಣೆ ಎರವರ ಪೊನ್ನು ಎಂಬವರ ಪತಿ 40 ವರ್ಷ ಪ್ರಾಯದ ಮಣಿ ಎಂಬವರು ಹೊಟ್ಟೆನೋವು ಕಾಯಿಲೆಯಿಂದ ಬಳಲುತ್ತಿದ್ದು ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ಮನೆಯಲ್ಲಿ ನೀಣುಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 
ಕೇರಳ ಮೂಲದ ವ್ಯಕ್ತಿಯ ಆತ್ಮಹತ್ಯೆ, ಪ್ರಕರಣ ದಾಖಲು:
 
     ಕುಲುಮೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಕೇರಳ ಮೂಲಕ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.  ಕುಟ್ಟ ನಗರದ ಕೆ.ವಾಸು ಎಂಬವರ ಕುಲುಮೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ  ಕೇರಳ ರಾಜ್ಯದ, ಪಾಲೆಕಾಡು ಜಿಲ್ಲೆಯ ಕಾವಶ್ರೀ ಗ್ರಾಮದಲ್ಲಿ ವಾಸವಾಗಿದ್ದ ಮಾಣಿಕ್ಯನ್‌ @ ಮಣಿ ಎಂಬ ವ್ಯಕ್ತಿ  ದಿನಾಂಕ 5-8-2013 ರಂದು ತಾನು ಕೆಲಸ ಮಾಡಿಕೊಂಡಿದ್ದ ಕುಲುಮೆ ಅಂಗಡಿಯ ಸ್ಟೋರ್‌ ರೂಂ ನಲ್ಲಿ ಕಿಟಕಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿದ್ದು, ಕುಟ್ಟ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ
 
ಹಣದ ವಿಚಾರದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ:
 
     ಸಾಲದ ಹಣ ಮರಳಿ  ಕೊಡುವಂತೆ ಕೇಳಿದ ವ್ಯಕ್ತಿಯ ಮೇಲೆ ಹಲ್ಲೆನಡೆಸಿದ ಬಗ್ಗೆ  ಪೊನ್ನಂಪೇಟೆ, ದೇವರಪುರ ಗ್ರಾಮದಲ್ಲಿ ನಡೆದಿದೆ.  ದೇವರಪುರ ಗ್ರಾಮದ ನಿವಾಸಿ ಫಿರ್ಯಾದಿ ಮನು  ಎಂಬ ವ್ಯಕ್ತಿ ಅದೇ ಗ್ರಾಮದ ಮನು ಎಂಬಾತನಿಗೆ ಹಣವನ್ನು ಸಾಲದ ರೂಪದಲ್ಲಿ ನೀಡಿದ್ದು ಅದನ್ನು ವಾಪಾಸು ಕೊಡುವಂತೆ ಕೇಳಿದ ಕಾರಣಕ್ಕೆ  ಫಿರ್ಯಾದಿಗೆ ಆರೋಪಿತ ಮನು ಹಲ್ಲೆನಡೆಸಿದ್ದು ಪೊನ್ನಂಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 
 

Monday, August 5, 2013

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ದಾರಿ ತಡೆದು ಹಲ್ಲೆ:

ವಿದ್ಯುತ್‌ ಲೈನ್‌ ವಿಚಾರದಲ್ಲಿ ಜಗಳವಾಗಿ ಮೂರು ಜನರು ಸೇರಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಬಗ್ಗೆ ಪೊನ್ನಂಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ನಿಟ್ಟೂರು ಗ್ರಾಮದಲ್ಲಿ ನಡೆದಿದೆ.  ದಿನಾಂಕ 4-8-2013 ರಂದು ನಿಟ್ಟೂರು ಗ್ರಾಮದ ನಿವಾಸಿಗಳಾದ ಚಲನ್‌, ಕೊಟ್ಟಂಗಡ ಮಂದಣ್ಣ ಹಾಗೂ ಕೊಟ್ಟಂಗಡ ದಿನೀಶ್‌  ಎಂಬವರುಗಳು ಅದೇ ಗ್ರಾಮದ  ಚೀರಂಡ ಪಿ. ಮೇದಪ್ಪ ರವರ ದಾರಿ ತಡೆದು  ವಿದ್ಯುತ್‌ ಲೈನ್‌ ಬಗ್ಗೆ  ಜಗಳವಾಡಿ ದೊಣ್ಣಯಿಂದ ಹಲ್ಲೆನಡೆಸಿದ್ದು, ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 
ಜೀವನದಲ್ಲಿ ಜಿಗುಪ್ಸೆ ವ್ಯಕ್ತಿಯ ಆತ್ಮಹತ್ಯೆ:
 
ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಡಂಗ ಅರಪಟ್ಟು ಗ್ರಾಮದಲ್ಲಿ ವಾಸವಾಗಿದ್ದ 41 ವರ್ಷ ಪ್ರಾಯದ ಮಾರ @ ಕುಮಾರ ಎಂಬಾತ ಜೀವನದಲ್ಲಿ ಜಗುಪ್ಸೆಗೊಂಡು ದಿನಾಂಕ 30-7-2013 ರಂದು ಕೆಲಸಕ್ಕೆಂದು ಮನೆಯಿಂದ ಹೋಗಿ ಅದೇ ಗ್ರಾಮದ ಕೋಡಿರ ಮಂದಣ್ಣ ಎಂಬವರಿಗೆ ಸೇರಿದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತ ವ್ಯಕ್ತಿಯ ಪತ್ನಿ ಶ್ರೀಮತಿ ಜಾನಕಿರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 
ಹುಡುಗಿ ಕಾಣೆ, ಪ್ರಕರಣ ದಾಖಲು:
 
ಕೆಲಸಕ್ಕೆಂದು ಹೋದ 18 ವರ್ಷ ಪ್ರಾಯದ ಹುಡುಗಿಯೊಬ್ಬಳು ಮನೆಗೆ ಬಾರದೆ ಕಾಣೆಯಾಗಿರುವ ಘಟನೆ ನಡೆದಿದೆ.  ಮಡಿಕೇರಿ ನಗರದ ವಾಸಿ ಸ್ವಾಮಿ ಎಂಬವರ ಮಗಳು ರಾಜೇಶ್ವರಿ (18) ದಿನಾಂಕ 30-7-2013 ರಂದು ಕೂಲಿ ಕೆಲಸಕ್ಕೆ ಹೋಗಿದ್ದು ಮದ್ಯಾಹ್ನ ಮನೆಗೆ ಬಂದು ಪುನ: ಕೆಲಸಕ್ಕೆಂದು ಹೋದಾಕೆ ಮತ್ತೆ ಮನೆಗೆ ಬಾರದೆ ಕಾಣೆಯಾಗಿದ್ದು, ಶ್ರೀಮತಿ ಕಮಲ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 

Sunday, August 4, 2013

ಅಕ್ರಮ ಮದ್ಯ ವಶ, ಆರೋಪಿ ಬಂಧನ 
        ಮಾರಾಟ ಮಾಡುವ ಸಲುವಾಗಿ ಅಕ್ರಮವಾಗಿ ಮದ್ಯವನ್ನು ಇಟ್ಟುಕೊಂಡಿದ್ದ ಓರ್ವ ವ್ಯಕ್ತಿಯನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ. ದಿನಾಂಕ 04/08/2013ರಂದು ಸಂಜೆ ವೇಳೆ ಬೇಗೂರು ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಸುಳಿವು ದೊರೆತ ಪೊನ್ನಂಪೇಟೆ ಠಾಣಾಧಿಕಾರಿ ಜಿ.ಕೆ.ಸುಬ್ರಮಣ್ಯರವರು ಸಿಬ್ಬಂದಿಗಳೊಂದಿಗೆ ಬೇಗೂರು ಗ್ರಾಮಕ್ಕೆ ತೆರಳಿ ಬೇಗೂರು ಗ್ರಾಮದ ಚೋಡುಮಾಡ ಕುಶಾಲಪ್ಪ ಎಂಬವರ ಮನೆಯ ಬಳಿ ಕಾಫಿ ತೋಟದಲ್ಲಿ ಚೋಡುಮಾಡ ಕುಶಾಲಪ್ಪನವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಆತನಿಂದ ಸುಮರು ರೂ.1,500/- ಬೆಲೆಯ 180 ಎಂಎಲ್‌ನ 29 ಬಾಟಲಿಗಳಷ್ಟು ಅಕ್ರಮ ಮದ್ಯವನ್ನು ವಶಪಡಿಸಿಕೊಂಡು ಕುಶಾಲಪ್ಪನವರನ್ನು ಬಂಧಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪರಿಚಿತ ಶವ ಪತ್ತೆ 
        ಅಪರಿಚಿತ ಗಂಡಸಿನ ಶವವೊಂದು ಮಡಿಕೇರಿ ಸಮೀಪದ ಹೆಬ್ಬೆಟ್ಟಗೇರಿ ಗ್ರಾಮದಲ್ಲಿ ಪತ್ತೆಯಾಗಿದೆ. ದಿನಾಂಕ 02/08/2013ರಂದು ರಾತ್ರಿ ಹೆಬ್ಬಟ್ಟಗೇರಿ ಗ್ರಾಮದ ಕಾಲೂರು ಜಂಕ್ಷನ್ ಬಳಿ ಸುಮಾರು 45 ವರ್ಷ ಪ್ರಾಯದ ಗಂಡಸಿನ ಶವವೊಂದು ಮಣ್ಣು ರಸ್ತೆಯಲ್ಲಿ ಬಿದ್ದಿರುವುದಾಗಿ ಹೆಬ್ಬೆಟ್ಟಗೇರಿ ನಿವಾಸಿ ನಾರಾಯಣ ಎಂಬವರು ಕೆ.ನಿಡುಗಣೆ ಗ್ರಾಮ ಪಂಚಾಯಿತಿ ಪಿಡಿಓ ರವರಿಗೆ ತಿಳಿಸಿದ್ದು ಈ ಬಗ್ಗೆ ಪಿಡಿಓರವರು ಪಂಚಾಯಿತಿ ಬಿಲ್ ಕಲೆಕ್ಟರ್ ಸುಕುಮಾರ್‌ರವರಿಗೆ ಸ್ಥಳಕ್ಕೆ ಹೋಗುವಂತೆ ಸೂಚಿಸಿದ್ದು ಸುಕುಮಾರ್‌ರವರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಕಾಲೂರು ಜಂಕ್ಷನ್‌ನ ಮಣ್ಣು ರಸ್ತೆಯಲ್ಲಿ ಯಾರೋ ಅಪರಿಚಿತ ಗಂಡಸಿನ ಶವ ಬಿದ್ದಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Thursday, August 1, 2013

ಆಕಸ್ಮಿಕ ವಿಷ ಸೇವನೆ ಮಹಿಳೆಯ ಸಾವು 
       ಆಕಸ್ಮಿಕವಾಗಿ ಔಷಧಿ ಎಂದು ತಿಳಿದು ವಿಷ ಸೇವಿಸಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ವಿರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮದ ಕೊಟ್ಟಾಚಿ ಎಂಬಲ್ಲಿ ನಡೆದಿದೆ. ಕೆದಮುಳ್ಳೂರು ಗ್ರಾಮದ ಕೊಟ್ಟಾಚಿಯ ನಿವಾಸಿ ಎಂ.ಪಿ.ವಸಂತ ಎಂಬವರ ತಾಯಿ ಸುಶೀಲಾ ಎಂಬಾಕೆ ಸುಮಾರು 15 ವರ್ಷಗಳಿಂದ ಮಂಡಿ ಹಾಗೂ ಸೊಂಟ ನೋವು ಕಾಯಿಲೆಯಿಂದ ಬಳಲುತ್ತಿದ್ದು ದಿನಾಂಕ 27/07/2013ರಂದು ಮನೆಯಲ್ಲಿ ಆಕೆಯ ಔಸಧಿಗಳ ಜೊತೆಯಲ್ಲಿಟ್ಟಿದ್ದ ಕ್ರಿಮಿ ಕೀಟಗಳಿಗೆ ಸಿಂಪಡಿಸುವ ಯಾವುದೋ ಕೀಟನಾಶಕ ಔಷಧೀಯನ್ನು ಕೈತಪ್ಪಿನಿಂದ ಆಕಸ್ಮಿಕವಾಗಿ ಸೇವಿಸಿದ್ದು ಆಕೆಯನ್ನು ಕೂಡಲೇ ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 31/07/2013ರಂದು ಆಕೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ವಸಂತರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮವಾಗಿ ಕಡಿದ  ಮರ ವಶ 
        ಸಾಗಾಟದ ಸಲುವಾಗಿ ಅಕ್ರಮವಾಗಿ ಮರ ಕಡಿದು ಬೀಳಿಸುದದನ್ನು ಪತ್ತೆ ಹಚ್ಚಿ ಪ್ರಕರಣ ಕುಟ್ಟ ಬಳಿಯ ಕೋತೂರು ಗ್ರಾಮದ ಲಕ್ಕುಂದ ಎಂಬಲ್ಲಿ ನಡೆದಿದೆ. ಕೋತೂರು ಗ್ರಾಮದ ಲಕ್ಕುಂದ ಪೈಸಾರಿಯ ನಿವಾಸಿ ಪರಮೇಶ್ವರ ಎಂಬವರು ಅವರ ತೋಟದಲ್ಲಿ ಸುಮಾರು ರೂ.20,000/- ಮೌಲ್ಯದ ಒಂದು ಹೆಬ್ಬಲು ಮರವನ್ನು ಸರ್ಕಾರದ ಯಾವುದೇ ಪರವಾನಗಿ ಇಲ್ಲದೆ ಕಡಿದು ಬೀಳಿಸಿದ್ದುದನ್ನು ಕುಟ್ಟ ಠಾಣಾಧಿಕಾರಿ ಹರಿಶ್ಚಂದ್ರರವರು ದಿನಾಂಕ 31/07/2013ರಂದು ಪತ್ತೆ ಹಚ್ಚಿ ಅಕ್ರಮವಾಗಿ ಕಡಿದು ಬೀಳಿಸಿದ ಮರವನ್ನು ಅಮಾನತುಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಮೇಲೆ ಹಲ್ಲೆ, ಪರಸ್ಪರ ದೂರು ದಾಖಲು 
        ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆ ಅಮ್ಮತ್ತಿ ನಗರದಲ್ಲಿ ನಡೆದಿದೆ. ದಿನಾಂಕ 31-07-13ರಂದು ಅಮ್ಮತ್ತಿ ನಗರದ ನಿವಾಸಿ ಸಂಗೀತಾ ಮುರಳೀಧರನ್ ಎಂಬವರು ಕೆಲಸದ ನಿಮಿತ್ತ ವಿರಾಜಪೇಟೆಗೆ ಬರುವ ಸಲುವಾಗಿ ಅಮ್ಮತ್ತಿ ನಗರ ದಲ್ಲಿ ನಡೆದುಕೊಂಡು ಬರುತ್ತಿರುವಾಗ್ಗೆ, ಅಲ್ಲೇ ನಿಂತಿದ್ದ ಅಮ್ಮತ್ತಿ ನಗರದ ನಿವಾಸಿಗಳಾದ ರಶ್ಮಿ ಮತ್ತು ಸತೀಶ್ ಎಂಬವರು  ಸಂಗೀತಾರವರನ್ನು ದಾರಿ ತಡೆದು ನಿಲ್ಲಿಸಿಕ್ಷುಲ್ಲಕ ಕಾರಣಕ್ಕೆ  ಎಂದು ಹೇಳಿ ಕೊಡೆಯಿಂದ ಸಂಗೀತಾರವರ ತಲೆಗೆ ಮತ್ತು ಮುಖಕ್ಕೆ ಹೊಡೆದು ನೋವುಪಡಿಸಿದ್ದು,  ಕೊಲೆ ಮಾಡುವು ದಾಗಿ ಬೆದರಿಕೆ ಹಾಕಿರುವ ಬಗ್ಗೆ ಸಂಗೀತಾರವರು ನೀಡಿದ ದೂರು ಹಾಗೂ ಸಂಗೀತಾ ಮತ್ತು ಇತರರು ಹಲ್ಲೆ ಮಾಡಿರುವುದಾಗಿ ರಶ್ಮಿಯವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಎರಡೂ ಕಡೆಯವರ ಮೇಲೆ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.