Monday, September 23, 2013

ವ್ಯಕ್ತಿಯ ನಾಪತ್ತೆ, ಪ್ರಕರಣ ದಾಖಲು:

      ಸಿದ್ದಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಗುಹ್ಯ ಗ್ರಾಮದ ವಾಸಿ ಪಿ.ಎಸ್‌. ದೇವಯ್ಯನವರ ಮಗನಾದ 33 ವರ್ಷ ಪ್ರಾಯದ ಅನಿಲ್‌ ಎಂಬ ವ್ಯಕ್ತಿ ದಿನಾಂಕ 22-9-2013 ರಿಂದ ಕಾಣೆಯಾಗಿದ್ದು, ಈತ ದಿನಾಂಕ 21-9-2013 ರಂದು ರಾತ್ರಿ ಗುಹ್ಯ ಗ್ರಾಮದಲ್ಲಿರುವ ತನ್ನ ತಂದೆ ಮನೆಗೆ ಹೋಗಿ ಊಟ ಮುಗಿಸಿ ಪಕ್ಕದಲ್ಲೇ ಆತ ವಾಸವಾಗಿರುವ ಬಾಡಿಗೆ ಮನೆಗೆ ಹೋಗಿದ್ದು ಮಾರನೇ ದಿನ ಮುಂಜಾನೆಯಿಂದ ಕಾಣೆಯಾಗಿದ್ದು, ಆತನ ಅಣ್ಣನಾದ ಪಿ.ಡಿ. ಸುನಿಲ್‌ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ
 
 
ಅಂಗಡಿ ಮಳಿಗೆಗೆ  ಅಕ್ರಮ ಪ್ರವೇಶ, ಆಸ್ತಿ ನಷ್ಟ:
 
     ರಾತ್ರಿವೇಳೆಯಲ್ಲಿ ವ್ಯಕ್ತಿಯೋರ್ವರ ಮನೆಗೆ ಅಕ್ರಮ ಪ್ರವೇಶ ಮಾಡಿ ಆಸ್ತಿ ನಷ್ಟಪಡಿಸಿದ ಘಟನೆ ಸೋಮವಾರಪೇಟೆ ನಗರದಲ್ಲಿ ನಡೆದಿದೆ.  ಸೋಮವಾರಪೇಟೆ ನಗರದ ಖಾಸಗಿ ಬಸ್ಸು ನಿಲ್ಲಾಣದ ಹತ್ತಿರ ಜುಬೈದಾ ಸ್ಟೋರ್ಸ್‌ನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ ವ್ಯಕ್ತಿ  ಟಿ.ಕೆ. ಮುಸ್ತಫಾ ಎಂಬವರ ಅಂಗಡಿ ಮಳಿಗೆಗೆ ಆರೋಪಿಗಳಾದ ದಿನೇಶ, ಸತೀಶ, ಉದಯಶಂಕರ್‌ ಹಾಗು ಇತರರು ಸೇರಿ ದಿನಾಂಕ 18-9-2013 ರಂದು ರಾತ್ರಿ ಸುಮಾರು 12-00 ಗಂಟೆಗೆ ಅಕ್ರಮ ಪ್ರವೇಶ ಮಾಡಿ ಗೋದೆ ಬೀಳಿಸಿ, ಮೇಲ್ಛಾವಣಿಯ ಹೆಂಚುಗಳನ್ನು ಒಡೆದು ಹಾಕಿ ಟಾರ್ಪಲ್‌ನ್ನು ಸುಟ್ಟು ಹಾಕಿರುವ ಬಗ್ಗೆ ಆರೋಪಿಸಿ ಟಿ.ಕೆ. ಮುಸ್ತಫಾ ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 
ಮನೆಯ ಬೀಗ ಮುರಿದು ಚಿನ್ನಾಭರಣ ಕಳವು:
 
     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮುರ್ನಾಡುವಿನ ಶಾಸ್ತ್ರಿನಗದಲ್ಲಿರುವ ಬುಡುವಂಡ ಅರುಣ ಎಂಬವರ ಲೈನ್‌ ಮನೆಯಲ್ಲಿ ವಾಸವಿರುವ  ಶ್ರೀಮತಿ ವನಜಾ ಎಂಬವರು ದಿನಾಂಕ 22-9-2013 ರಂದು ಬೆಳಿಗ್ಗೆ ತನ್ನ ಗಂಡನನೊಂದಿಗೆ  ಮನೆಗೆ ಬೀಗ ಹಾಕಿ ಕೂಲಿಕೆಲಸಕ್ಕೆ  ಹೋಗಿದ್ದು, ಸಂಜೆ ಮನೆಗೆ ಬಂದು ನೋಡುವಾಗ್ಗೆ ಯಾರೋ ಕಳ್ಳರು ಮನೆಯ ಬೀಗವನ್ನು ಮುರಿದು ಒಳಪ್ರವೇಶಿಸಿ ಸುಮಾರು 31300 ರೂ ಮೌಲ್ಯದ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ
 
ಕ್ಷುಲ್ಲಕ ಕಾರಣಕ್ಕೆ ಮಹಿಳೆಗೆ ಕೊಲೆ ಬೆದರಿಕೆ:
 
     ಕುಶಾಲನಗರ ಠಾಣಾ ಸರಹದ್ದಿನ ರಂಗಸಮುದ್ರ ಗ್ರಾಮದ ವಾಸಿ ಶ್ರೀಮತಿ ನೀಲಮ್ಮ ಎಂಬವರು  ದಿನಾಂಕ 22/09/2013 ರಂದು ಸಮಯ 4.30 ಪಿಎಂಗೆ ಕೆಲಸ ಮುಗಿಸಿ ಅವರ ಮನೆಯ ಗೇಟಿನ ಹತ್ತಿರ ನಿಂತಿದ್ದು,   ಅದೇ ಗ್ರಾಮದವರಾದ ನಾಗರಾಜು ಎಂಬುವರು ಬಂದು ನೀವು ಏಕೆ ಸ್ತ್ರೀ ಶಕ್ತಿ ಸಂಘದಿಂದ ನನ್ನ ಹೆಂಡತಿಗೆ ಸಾಲ ಕೊಟ್ಟಿದ್ದಿರ ? ಎಂದು ಅವಾಚ್ಯವಾಗಿ ಬೈದು ,ನೀಲಮ್ಮನವರ ಕೈಯನ್ನು ಹಿಡಿದು ಎಳೆದಾಡಿ ತನ್ನ ಕೈಯಲ್ಲಿದ್ದ ಕತ್ತಿಯನ್ನು ತೊರಿಸಿ ಕೊಲೆಬೆದರಿಕೆ ಹಾಕಿ ಹೋದ ಕುರಿತು ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.   

Saturday, September 21, 2013

ನಿಲ್ಲಿಸಿದ್ದ ವಾಹನದ ವಾಹನದ ಟಯರ್‌ ಕಳ್ಳವು:

      ವ್ಯಕ್ತಿಯೊಬ್ಬರು  ಮನೆಯ ಹತ್ತಿರ ನಿಲ್ಲಿಸಿದ ವಾಹನದ ಟಯರ್‌ಗಳನ್ನು ಯಾರೋ ಕಳವು ಮಾಡಿದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹ್ದಿನ ಹೆರವನಾಡು ಗ್ರಾಮದಲ್ಲಿ ನಡೆದಿದೆ.   ಮಡಿಕೇರಿ ತಾಲೋಕು ಅಪ್ಪಂಗಳ ಗ್ರಾಮದ ನಿವಾಸಿ ಸಮೃತ್‌ರಾಜ್‌ ಎಂಬವರು ತಮ್ಮ ಬಾಪ್ತು ಟಾಟಾ ಏಸ್‌ ವಾಹನವನ್ನು ನಿನ್ನೆದಿನ ಸಂಜೆ  ಮನೆಯ ಪಕ್ಕದಲ್ಲಿ ನಿಲ್ಲಿಸಿ ಹೋಗಿದ್ದು ಇಂದು ಬೆಳಿಗ್ಗೆ ನೋಡುವಾಗ್ಗೆ ಸದರಿ ವಾಹನದ ಹಿಂದಿನ 2 ಟಯರ್‌ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂ ದಿನ ಕ್ರಮ ಕೈಗೊಂಡಿರುತ್ತಾರೆ

ಆಸ್ತಿ ವಿಚಾರದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ, ಕೊಲೆ ಬೆದರಿಕೆ:

     ಮಡಿಕೇರಿ  ತಾಲೋಕು, ಚೇರಂಬಾಣೆ ಗ್ರಾಮದ ನಿವಾಸಿ ಕೆ.ಎನ್‌. ಮನೋಜ್ ರವರೊಂದಿಗೆ ಅವರ ತಮ್ಮ ಚೇತನ್‌, ತಂದೆ ನಂಜಪ್ಪ ಹಾಗೂ ತಾಯಿ ತಾಯಿ ಸುಶೀಲಾ ರವರು ಆಸ್ತಿ ವಿಚಾರದಲ್ಲಿ ಜಗಳ ಮಾಡಿ  ಕತ್ತಿಯಿಂದ ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದು, ಮನೋಜ್‌ರವರು ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 

Friday, September 20, 2013

ಅಕ್ರಮ ಜಾನುವಾರುಗಳ ಸಾಗಾಟ:

 
      ಶ್ರೀ ಕೆ.ಪಿ. ಹರಿಶ್ಚಂದ್ರ, ಪಿ.ಎಸ್‌.ಐ. ಕುಟ್ಟ ಠಾಣೆ ಇವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ದಿನಾಂಕ 20-09-2013 ರಂದು ಬೆಳಿಗ್ಗೆ 05.30 ಗಂಟೆಗೆ ವಿರಾಜಪೇಟೆ ತಾಲೋಕು ಕುಟ್ಟ ಗ್ರಾಮದ ಫೈತ್ ಎಸ್ಟೇಟ್ ಪಕ್ಕದ ಚೆಪ್ಪುಡೀರ ಕಾವೇರಪ್ಪರವರ ಮನೆಗೆ ಹೋಗುವ ಜಂಕ್ಷನ್‌ನಲ್ಲಿ ಕೆ.ಎಲ್-12 ಎಫ್-2899 ರ ಟೆಂಪೋದ ಮಾಲೀಕ, ಚಾಲಕ ಮತ್ತು ಇತರರು ಎಲ್ಲಿದಂಲೋ ಕಳ್ಳತನ ಮಾಡಿಕೊಂಡು ಬಂದಿದ್ದ ಏಳು ಜಾನುವಾರುಗಳುನ್ನು ಸರ್ಕಾರದ ಪರವಾನಿಗೆ ಇಲ್ಲದೆ ಕೇರಳದ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದುದನ್ನು  ಸಿಬ್ಬಂದಿಯೊಂದಿಗೆ ಪತ್ತೆ ಹಚ್ಚಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Wednesday, September 18, 2013

ಕೂಲಿ ಕಾರ್ಮಿಕನ ಆತ್ಮಹತ್ಯೆ:

     ಕೂಲಿ ಕಾರ್ಮಿಕನೊಬ್ಬ ಜೀವದಲ್ಲಿ ಜಿಗುಪ್ಸೆಗೊಂಡು ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ.   ವಿರಾಜಪೇಟೆ ನಗರದ ಮಾರ್ಕೆಟ್‌ನಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಅಂದಾಜು 45 ವರ್ಷ ಪ್ರಾಯದ ರಾಜು @ ಪೈಕುಂಜಿ ಎಂಬವರು  ದಿನಾಂಕ 17-9-2013 ರಂದು ರಾತ್ರಿ ಸಮಯದಲ್ಲಿ  ರಾಜು ಜಗನ್ನಾಥ್ ರವರ ಅಂಗಡಿ ಮಳಿಗೆಗೆ ಅಳವಡಿಸಿದ ರಾಡಿಗೆ ತನ್ನ ಪಂಚೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿದ್ದು, ಈತ ವಿಪರೀತ ಮದ್ಯ ಸೇವನೆ ಮಾಡುತ್ತಿದ್ದು ವಾರಸುದಾರರು ಯಾರು ಇಲ್ಲದೇ ಇರುವ ಕಾರಣದಿಂದ  ಜೀವನದಲ್ಲಿ ಜಿಗುಪ್ಸಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ಹೇಳಲಾಗಿದ್ದು ವಿರಾಜಪೇಟೆ ಪೊಲೀಸರು ಪ್ರಕರವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
 
ವಯೋವೃದ್ದನ ಮೇಲೆ ಸೊಸೆಯಿಂದ ಹಲ್ಲೆ:
 
    ಆಸ್ತಿಯ ವಿಚಾರದಲ್ಲಿ  ವಯೋವೃದ್ದರೊಬ್ಬರ ಮೇಲೆ ತನ್ನ ಮಗನ ಪತ್ನಿಯೇ ಹಲ್ಲೆ ನಡೆಸಿ ಗಾಯಪಡಿಸಿದ ಘಟನೆ ಮಕ್ಕಂದೂರು ಗ್ರಾಮದಲ್ಲಿ ನಡೆದಿದೆ.  ಎಂ.ಎಂ. ಅಬ್ದುಲ್‌ ಖಾದರ್‌‌(62) ಎಂಬವರು ತನ್ನ ಸಂಸಾರದೊಂದಿಗೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮಕ್ಕಂದೂರು ಗ್ರಾಮದಲ್ಲಿ ವಾಸವಾಗಿದ್ದು  ವೈವಾಸ್ ಆಸ್ಪತ್ರೆಯ ಪಕ್ಕದಲ್ಲಿ ಟೀ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರವನ್ನು ಮಾಡಿಕೊಂಡಿರುತ್ತಾರೆ.  ದಿನಾಂಕ 17-9-2013 ರಂದು ರಾತ್ರಿ  7-30 ಪಿ.ಎಂ.ಗೆ ಮನೆಯಲ್ಲಿರುವಾಗ್ಗೆ ಮಗ ನಿಜಾಮುದ್ದೀನ್‌ನ ಹೆಂಡತಿ ಫಾತಿಮಾಳು ಆಸ್ತಿಯಲ್ಲಿ ಪಾಲು ಕೊಡಲಿಲ್ಲ ಎಂಬ ವಿಚಾರದಲ್ಲಿ ಅವರೊಂದಿಗೆ ಜಗಳ ಮಾಡಿ ಆಸ್ತಿಯನ್ನು ಮಾರಿ 20 ಲಕ್ಷ ಹಣವನ್ನು ಕೊಡು ಎಂದು ಹೇಳಿ ತನ್ನ ಕೈಯಲ್ಲಿದ್ದ ಕತ್ತಿಯಿದ ಪಿರ್ಯಾದಿಯವರ ತಲೆಯ ಭಾಗಕ್ಕೆ ಕಡಿದು ರಕ್ತ ಗಾಯ ಪಡಿಸಿದ್ದು ಈ ಬಗ್ಗೆ ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು  ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

Monday, September 16, 2013

1.5 ಲಕ್ಷ ಮೌಲ್ಯದ ಶ್ರೀಗಂಧ ವಶ, ಆರೋಪಿಯ ಬಂಧನ:

    ಶ್ರೀಗಂಧದ ಮರದ ತುಂಡುಗಳನ್ನು ಅಕ್ರಮವಾಗಿ ಸಾಗಿಸಲು ತಯಾರಿ ನಡೆಸಿದವರ ಮೇಲೆ ಪೊಲೀಸರು ದಾಳಿ ನಡೆಸಿ ಮಾಲನ್ನು ವಶಪಡಿಸಿ ಆರೋಪಿಯನ್ನು ಬಂಧಿಸಿದ ಘಟನೆ ನಡೆದಿದೆ.  ನಿನ್ನೆ  ದಿನ ಬೆಳಿಗ್ಗೆ ಸಮಯ 04.30 ಗಂಟೆಗೆ ಸೋಮವಾರಪೇಟೆ ವೃತ್ತ ನಿರೀಕ್ಷಕರಿಗೆ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ  ಸದರಿಯವರ ನಿರ್ದೇಶನದಂತೆ ಸೋಮವಾರಪೇಟೆ ಠಾಣಾ ಪಿ.ಎಸ್‌.ಐ. ಹಾಗೂ ಸಿಬ್ಬಂದಿಯವರು ಸೋಮವಾರಪೇಟೆ ಠಾಣಾ ಸರಹದ್ದಿಗೆ ಸೇರಿದ ಊರುಗುತ್ತಿ ಗ್ರಾಮದ ವೆಂಕಟೇಶ ಎಂಬವರ ಜಾಗದಲ್ಲಿ ದಾಳಿ ನಡೆಸಿ ಆರೋಪಿಗಳಾದ  ಕೊಡ್ಲಿಪೇಟೆಯ ದೊಡ್ಡಕುಂದ ಗ್ರಾಮದ  ಎನ್‌.ಎ. ಹಸೈನಾರ್‌ ಹಾಗೂ  ಬ್ಯಾಡಗೊಟ್ಟ ಗ್ರಾಮದ ಮಜೀದ್‌ ಎಂಬವರು ಅಕ್ರಮವಾಗಿ ಸರಕಾರದ ಪರವಾನಗಿ ಇಲ್ಲದೆ  ಸಾಗಿಸಲು ತಯಾರಿ ನಡೆಸಿದ ಸುಮಾರು 51 ಕೆ.ಜಿ ತೂಕದ 6 ಶ್ರೀಗಂದದ ತುಂಡುಗಳನ್ನು ವಶಪಡಿಸಿಕೊಂಡು  ಆರೋಪಿ ಎನ್‌.ಎ. ಹಸೈನಾರ್‌ನನ್ನು ಬಂಧಿಸಿದ್ದು, ವಶಪಡಿಸಿಕೊಂಡ ಶ್ರೀಗಂಧದ ಮೌಲ್ಯ 150000 ಆಗಿದ್ದು, ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 
ಹುಡುಗಿಯ ಮಾನಭಂಗಕ್ಕೆ ಯತ್ನ, ಕೊಲೆ ಬೆದರಿಕೆ:
     ಮನೆಯೊಂದಕ್ಕೆ ವ್ಯಕ್ತಿಗಳಿಬ್ಬರು ಅಕ್ರಮ ಪ್ರವೇಶಿಸಿ ಹುಡುಗಿಯೊಬ್ಬಳ ಮಾನಭಂಗಕ್ಕೆ ಯತ್ನಿಸಿ ಕೊಲೆ ಬೆದರಿಕೆ ಹಾಕಿದ ಘಟನೆ ಬೆಟ್ಟಗೇರಿ ಗ್ರಾಮದಲ್ಲಿ ನಡೆದಿದೆ.  ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಬೆಟ್ಟಗೇರಿ ಗ್ರಾಮದಲ್ಲಿ ಅಬ್ದುಲ್ಲಾ ಎಂಬವರು ತನ್ನ ಪತ್ನಿ ಝಹುರಾ, ಮಗ ಸಮೀರ್‌ ಹಾಗು ಮಗಳಾದ ಫಾತೀಮ ರವರೊಂದಿಗೆ ವಾಸವಾಗಿದ್ದು  ಅಬ್ದುಲ್ಲಾರವರು ಈಗ್ಗೆ 15 ದಿವಸಗಳ ಹಿಂದೆ ಕೆಲಸದ ನಿಮಿತ್ತ ಸೌದಿಗೆ ಹೋಗಿದ್ದು,   ಮನೆಯಲ್ಲಿ ಪತ್ನಿ ಹಾಗು ಮಕ್ಕಳು ಇದ್ದು  ದಿನಾಂಕ 14-09-2013 ರಂದು ಸಮೀರ್‌ ಕೆಲಸದ ನಿಮಿತ್ತ ಮಂಗಳೂರಿಗೆ ಹೋಗಿದ್ದು,   ಮನೆಯಲ್ಲಿ ಝಹುರಾ ಮತ್ತು ಫಾತೀಮ ಇರುವಾಗ್ಗೆ ಸಮಯ 12-00 ಗಂಟೆಗೆ ಅದೇ ಗ್ರಾಮದವರಾದ ಅಬ್ದುಲ್ಲಾ ಎಂಬವರ  ಮಗ ರಾಸಿಕ್‌ ಎಂಬಾತನು  ಇನ್ನೊಬ್ಬನೊಂದಿಗೆ  ಮನೆಗೆ ಬಂದು  ಝಹುರಾರನ್ನು ಕುರಿತು ನಿಮ್ಮ ಮಗಳನ್ನು ಯಾರು ಮದುವೆಯಾಗುತ್ತಾರೆ ನೋಡುವಾ ಎಂದು ಹೇಳಿ ಫಾತೀಮಳ ಕೈ ಹಿಡಿದು ಎಳೆದಾಡಿ ಧರಿಸಿದ್ದ ನೈಟಿಯನ್ನು ಹಿಡಿದು ಎಳೆದು ಕೊಲೆ ಬೆದರಿಕೆಹಾಕಿರುತ್ತಾರೆಂದು ಫಾತೀಮರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಮೊಕದ್ದಮೆಯನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ಹಳೆ ದ್ವೇಷ, ವ್ಯಕ್ತಿಯ ಮೇಲೆ ಹಲ್ಲೆ:

     ಹಳೇ ವೈಮನಸ್ಸಿನಿಂದ ವ್ಯಕ್ತಿಯೊಬ್ಬರ ಮೇಲೆ ರೇಜರ್‌ ಬ್ಲೇಡಿನಿಂದ ಹಲ್ಲೆ ನಡೆಸಿದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಬೆಟ್ಟಗೇರಿ ಗ್ರಾಮದಲ್ಲಿ ನಡೆದಿದೆ.  ಬೆಟ್ಟಗೇರಿ ಗ್ರಾಮದ ರಾಶಿಕ್‌ ಎಂಬವರು ದಿನಾಂಕ 15-09-2013 ರಂದು ಸದರಿಯವರ ಹಾಗು ಹ್ಯಾರೀಸ್‌ ಎಂಬವರ ಮೇಲೆ ನಜೀರ್‌ ಎಂಬ ವ್ಯಕ್ತಿ ದೂರನ್ನು ದಾಖಲಿಸಿದ ಹಿನ್ನೆಲೆಯಲ್ಲಿ ನಾಪೋಕ್ಲು ಪೊಲೀಸ್‌ ಠಾಣೆಗೆ  ಹೋಗುವ ಬಗ್ಗೆ ಬಸ್ಸಿಗಾಗಿ ಬೆಟ್ಟಗೇರಿ ಜಂಕ್ಷನ್‌ನಲ್ಲಿ ನಿಂತಿರುವಾಗ್ಗೆ  ಸಮಯ 3-00 ಪಿ.ಎಂ.ಗೆ ನಜೀರ್‌ ಮಾರುತಿ ಓಮಿನಿ ವ್ಯಾನಿನಲ್ಲಿ ಬಂದು ಜಗಳ ತೆಗೆದು ತನ್ನ ಕೈಯಲ್ಲಿದ್ದ ರೇಜರ್‌ ಬ್ಲೇಡ್‌ನಿಂದ  ಬಲಕೈಗೆ, ಬಲ ಎದೆಗೆ ಗೀರಿ ಗಾಯಪಡಿಸಿದ್ದು ಈ ಕುರಿತು ದೂರನ್ನು ನೀಡಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 

 

                                                                   
 

Saturday, September 14, 2013

ಜೀವನದಲ್ಲಿ ಜುಗುಪ್ಸೆ, ಮಹಿಳೆಯ ಆತ್ಮಹತ್ಯೆ 
        ಜೀವನದಲ್ಲಿ ಜುಗುಪ್ಸೆಗೊಂಡ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ಸಮೀಪದ ಆರ್ಜಿ ಗ್ರಾಮದಲ್ಲಿ ನಡೆದಿದೆ. ಆರ್ಜಿ ಗ್ರಾಮದ ಸೈನುದ್ದೀನ್ ಎಂಬವರ ಮಗಳು 23 ವರ್ಷ ಪ್ರಾಯದ ರುಬೀನಾ ಎಂಬಾಕೆಯು ಅಶ್ವತ್ ಎಂಬವರನ್ನು ಮದುವೆಯಾಗಿದ್ದು, 2 ವರ್ಷಗಳಿಂದ ಯಾವುದೇ ಪತಿಯೊಂದಿಗೆ ಯಾವುದೇ ಸಂಬಂಧವನ್ನಿಟ್ಟುಕೊಳ್ಳದೆ ಇದ್ದು, ಜೀವನದಲ್ಲಿ ಜುಗುಪ್ಸೆಗೊಂಡು ಮನೆಯಲ್ಲಿ ಯಾರೂ ಇಲ್ಲದ ವೇಳೆ ಚೂಡಿದಾರದ ವೇಲ್‌ನಿಂದ ಮನೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬಂಧಿತ ಆರೋಪಿ ಅತ್ಮಹತ್ಯೆಗೆ ಯತ್ನ 
        ಪ್ರಕರಣದಲ್ಲಿ ಬಂಧಿತನಾದ ಆರೋಪಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಶನಿವಾರಸಂತೆಶನಿವಾರಸಂತೆ ನಗರದ ವಲಯ ಅರಣ್ಯ ಕಚೇರಿಯಲ್ಲಿ ನಡೆದಿದೆ. ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಅಚ್ಚಯ್ಯ ಎಂಬವರು ಅರಣ್ಯ ಇಲಾಖೆಯ ಪ್ರಕರಣವೊಂದರಲ್ಲಿ ಬಂಧಿಸಿ ಕಚೇರಿಯಲ್ಲಿಟ್ಟಿದ್ದ ಅಪ್ಪಶೆಟ್ಟಹಳ್ಳಿ ಗ್ರಾಮದ ಸುನಿಲ್ ಎಂಬಾತನು ದಿನಾಂಕ 12/09/2013ರಂದು ಸಂಜೆ ವೇಳೆ ಯಾವುದೋ ವಿಷವನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಕೂಡಲೇ ಆತನನ್ನು ಚಿಕಿತ್ಸೆ ಬಗ್ಗೆ ಹಾಸನದ ಆಸ್ಪತ್ರೆಗೆ ದಾಖಲಿದಾಖಲಿಸಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, September 13, 2013

ಪತಿಯಿಂದ ಪತ್ನಿಗೆ ಕಿರುಕುಳ, ಪ್ರಕರಣ ದಾಖಲು:
    

       ಪತಿಯು ಪತ್ನಿಗೆ ತವರು ಮನೆಯಿಂದ ಹಣ ತರುವಂತೆ ಕಿರುಕುಳ ನೀಡುತ್ತಿರುವ ಘಟನೆ ವಿರಾಜಪೇಟೆ ನಗರ ಠಾಣಾ ಸರಹದ್ದಿನ ತೆಲುಗರ ಬೀದಿಯಲ್ಲಿ ನಡೆದಿದೆ.  ಶ್ರೀಮತಿ ಪ್ರಭಾವತಿ (25) ಇವರು 2 ವರ್ಷಗಳ ಹಿಂದೆ ವಿರಾಜಪೇಟೆ ನಗರದ ತೆಲುಗರ ಬೀದಿಯ ವಾಸಿ ಯಂ.ಯು. ಲೋಕೇಶ್‌ ಎಂಬವರನ್ನು ಮದುವೆಯಾಗಿದ್ದು, ಇತ್ತಿಚಿನ ದಿನಗಳಿಂದ ಸಣ್ಣ ಪುಟ್ಟ ವಿಷಯಗಳಿಗೆ  ಪತ್ನಿ ಪ್ರಭಾವತಿಯೊಂದಿಗೆ ಜಗಳ ಮಾಡುತ್ತಿದ್ದು  ದಿನಾಂಕ 11-9-2013 ರಂದು ಲೊಕೇಶ ಮತ್ತು ಮಾಯಮ್ಮ ರವರು ತವರು ಮನೆಯಿಂದ ಹಣ ತರುವಂತೆ ಒತ್ತಾಯಿಸಿ  ಹಲ್ಲೆ ನಡೆಸಿದ್ದು ನಡೆಸಿದ್ದು ಅಲ್ಲದೆ ಸೀಮೆಣ್ನೆ ಸುರಿದು ಬೆಂಕಿಹಚ್ಚಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಪ್ರಭಾವತಿಯವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 
ಪಾದಾಚಾರಿಗೆ ಟಾಟಾ ಸುಮೋ ಡಿಕ್ಕಿ ಗಾಯ:
 
    ಪಾದಾಚಾರಿಯೊಬ್ಬರಿಗೆ ಟಾಟಾ ಸುಮೋ ವಾಹನ ಡಿಕ್ಕಿಯಾಗಿ ಗಾಯಗಳಾದ ಘಟೆನೆ ಮಡಿಕೇರಿ ನಗರದಲ್ಲಿ ನಡೆದಿದೆ.  ದಿನಾಂಕ 12-9-2013 ರಂದು ಸಂಜೆ ಎಂ.ಎಂ. ಅನಂತ ಎಂಬವರು ಮಡಿಕೇರಿ ನಗರದ ಹೋಟೇಲ್‌ ಇಂಟರ್‌ ನೇಷನಲ್‌ ಬಳಿ ನಡೆದುಕೊಂಡು ಹೋಗುತ್ತಿದ್ದಾಗ  ಟಾಟಾ ಸುಮೋ ಚಾಲಕ ಮಣಿಕಂಠ ಎಂಬವರು ಸದರಿ ವಾಹನವನ್ನು  ಅಜಾಗರೂಕತೆಯಿಂದ ಓಡಿಸಿ ದಿಕ್ಕಿಪಡಿಸಿದ ಪರಿಣಾಮ ಅನಂತರವರಿಗೆ ಗಾಯಗಳಾಗಿದ್ದು, ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Wednesday, September 11, 2013

ಜೀವನದಲ್ಲಿ ಜಿಗುಪ್ಸೆ ವ್ಯಕ್ತಿಯ ಆತ್ಮಹತ್ಯೆ:

     ಮಡಿಕೇರಿ ನಗರದನಗರದ, ಡೈರಿ ಫಾರಂ ಬಳಿ ವಾಸವಾಗಿದ್ದ 45 ವರ್ಷ ಪ್ರಾಯದ ಶೇಖರ ಎಂಬ ವ್ಯಕ್ತಿಗೆ ವಿಪರೀತ ಮದ್ಯಪಾನ ಮಾಡುವ ಅಭ್ಯಾಸ ವಿದ್ದು  ದಿನಾಂಕ 8-9-2013 ರಂದು ವಿಪರೀತ ಮದ್ಯಸೇವಿಸಿ ಮನೆಗೆ ಬಂದು ಪುನ: ಮೆಯಿಂದ ಹೋದ ವ್ಯಕ್ತಿ  ಮನೆಯ ಪಕ್ಕದಲ್ಲಿ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ದಿನಾಂಕ 11-9-2013 ರಂದು ಸದರಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಮೃತನ ಪತ್ನಿ ಶ್ರೀ,ಮತಿ ಲಕ್ಷಿಯವರ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ
 
ಮಹಿಳೆಯ ಮನಭಂಗ, ಪ್ರಕರಣ ದಾಖಲು:
 ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಗರ್ವಾಲೆ ಗ್ರಾಮದಲ್ಲಿ  ಜಿ.ಎಸ್‌. ರಾಮಪ್ಪ ಹಾಗು ಅವರ  ಪತ್ನಿ ವಸಂತಿ ಎಂಬವರು ವಾಸವಾಗಿದ್ದು, ರಾಮಪ್ಪನವರು ಮಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕಳೆದ ಜುಲೈ ತಿಂಗಳಿನಿಂದ ಗರ್ವಾಲೆ ಗ್ರಾಮದ ಅಧ್ಯಕ್ಷರು ಹಾಗು ವಿ.ಎಸ್.ಎಸ್.ಎನ್‌ ಬ್ಯಾಂಕ್‌ನ ನಿರ್ದೆಶಕರು ಆಗಿರುವ ಗಿಜಿಗಂಡ ಎಂ.ಕುಶಾಲಪ್ಪನವರ ಮಗನಾದ ಜಿ.ಕೆ ಲೋಕೇಶ್‌ರವರು   ರಾತ್ರಿ ಸಮಯದಲ್ಲಿ ರಾಮಪ್ಪನವರ ಮನೆಗೆ ಬಂದು  ಪತ್ನಿ ವಸಂತಿಯವರಿಗೆ ಕೋವಿಯನ್ನು ತೋರಿಸಿ ಹೆದರಿಸಿ ಬಲ್ತತ್ಕಾರ  ಮಾಡಿದ್ದು ಅಲ್ಲದೆ  ನಾನು ಹೇಳಿದ ಹಾಗೆ ಕೇಳದಿದ್ದರೆ ಕೊಲೆ ಮಾಡುತ್ತೇನೆಂದು ಹೆದರಿಸಿರುತ್ತಾನೆ. ಈ ಬಗ್ಗೆ ವಸಂತಿಯವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ  ತನಿಖೆ ಕೈಗೊಂಡಿರುತ್ತಾರೆ. 

Tuesday, September 10, 2013

ಹಳೇ ದ್ವೇಷದ ಹಿನ್ನಲೆ ಇಬ್ಬರ ಮೇಲೆ ಹಲ್ಲೆ:

     ಮಡಿಕೇರಿ ತಾಲೋಕು, ಕಟ್ಟೆಮಾಡು ಗ್ರಾಮದ ನಿವಾಸಿಯಾದ ಸಾದೇರ ಬಿಜು ಎಂಬವರು ನಿನ್ನೆ ದಿನ
ಮರಗೋಡು ಗ್ರಾಮದಲ್ಲಿ ಗಣೇಶ ವಿರ್ಸಜನೋತ್ಸವಕ್ಕೆ ತಮಗೆ ಪರಿಚಯವಿರುವ ಅಣ್ಣಯ್ಯ @ ಅಣ್ಣಿ ಎಂಬುವವರೊಂದಿಗೆ ಹೋಗಿದ್ದು ಸಮಯ 11-00 ಪಿ.ಎಂ.ಗೆ ಅಲ್ಲೇ ಇದ್ದ ವಿಠಲ ಎಂಬುವವನು ಅಣ್ಣಯ್ಯನನ್ನು ಕುರಿತು ನೀನು ಏಕೆ ಇಲ್ಲಿಗೆ ಬಂದೆ ಎಂದು ಹೇಳಿ ಜಗಳ ತೆಗೆದು ಅವ್ಯಾಚ ಶಬ್ದಗಳಿಂದ ಬೈದು ಅಣ್ಣಯ್ಯನ ಬಲ ಕಣ್ಣಿನ ಹತ್ತಿರ ಕಲ್ಲಿನಿಂದ ಗುದ್ದಿ, ಕಾಲಿನಿಂದ ಹೊಟ್ಟೆಯ ಎಡಭಾಗಕ್ಕೆ ಒದ್ದು ನೋವು ಪಡಿಸಿ ತಡೆಯಲು ಹೋದ ಸಾದೇರ ಬಿಜುವಿನ ಮೇಲೂ  ವಿಠಲನು ಹಾಗು ತನ್ನ ಜೊತೆಯಲ್ಲಿದ್ದ ಬಿದ್ರುಪಣೆ ಚಿದು, ಚೇತನ್‌, ಮನು, ಅಯ್ಯಪ್ಪ ಎಂಬುವವರೊಂದಿಗೆ ಸೇರಿ ಹಲ್ಲೆ ನಡೆಸಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ. 
ಕ್ಯಾಂಟರ್‌ ಲಾರಿಗೆ  ಪಿಕ್‌ಅಪ್‌ ಗೂಡ್ಸ್‌ ಡಿಕ್ಕಿ:
    ದಿನಾಂಕ 7-8-2013 ರಂದು ಪಿರಿಯಾಪಟ್ಟಣದ ನಿವಾಸಿ ಅಬ್ದುಲ್‌ ಎಂಬವರು  ಅವರ ಬಾಪ್ತು ಕೆಎ-09-ಸಿ- 8379 ರ ಕ್ಯಾಂಟರ್ ವಾಹನದಲ್ಲಿ ಪಿರಿಯಾಪಟ್ಟಣಕ್ಕೆ ಹೋಗುತ್ತ್ರಿದ್ದು ಅಮ್ಮತ್ತಿ ರಸ್ತೆಯ  ಬಿಳುಗುಂದ ಗ್ರಾಮದ ಚೆರಿಕಲ್ಲು ಎಂಬಲ್ಲಿ ತಲುಪುವಾಗ್ಗೆ   ಮಧ್ಯಾಹ್ನ ಸುಮಾರು 02:15 ಗಂಟೆಗೆ  ಎದುರುಗಡೆಯಿಂದ  ಎಂದರೆ ಅಮ್ಮತ್ತಿ ಕಡೆಯಿಂದ  ಕೆಎ-45-5174 ರ ಪಿಕ್ ಆಪ್ ಗೂಡ್ಸ್  ವಾಹನವನ್ನು ಅದರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ  ಓಡಿಸಿಕೊಂಡು ಬಂದು ಕ್ಯಾಂಟರ್ ವಾಹನಕ್ಕೆ  ಡಿಕ್ಕಿಪಡಿಸಿದ ಪರಿಣಾಮ ಕ್ಯಾಂಟರ್ ವಾಹನ ಜಖಂಗೊಂಡು ಚಾಲಕ ಅಬ್ದುಲ್‌ರವರ  ಬಲ ಕಾಲು ಮುಂಗಾಲು,ತೊಡೆಯ ಭಾಗ ಹಾಗು ಸೊಂಟಕ್ಕೆ  ಪೆಟ್ಟಾಗಿದ್ದು, ನಂತರ ಚಿಕಿತ್ಸೆ ಬಗ್ಗೆ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ  ಚಿಕಿತ್ಸೆ  ಮೈಸೂರಿನ ಅಲ್ –ಅನ್ಸರ್  ಆಸ್ಪತ್ರೆಯಲ್ಲಿ  ಚಿಕಿತ್ಸೆಯನ್ನು ಪಡೆದುಕೊಂಡಿದ್ದು, ಅವರ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ  ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 

Saturday, September 7, 2013

ಕೌಟುಂಬಿಕ ಕಲಹ, ವ್ಯಕ್ತಿಯ ಆತ್ಮಹತ್ಯೆ:
 
ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮೂರ್ನಾಡು ಕಾಂತೂರು ಗ್ರಾಮದಲ್ಲಿ   ಹರೀಶ್‌ ಎಂಬವರ ಲೈನು ಮನೆಯಲ್ಲಿ ವಾಸವಾಗಿದ್ದ ಗೋಪಾಲ ಎಂಬ ವ್ಯಕ್ತಿ ಕೌಟುಂಬಿಕ ಕಾರಣದಿಂದ  ಇಂದು ಬೆಳಿಗ್ಗೆ ಮನೆಯ ಸ್ವಲ್ಪ ದೂರದಲ್ಲಿರುವ ವಿ.ವಿ ಆಶೋಕ್‌ರವರ ಕಾಫಿ ತೋಟದಲ್ಲಿರುವ ಕಾಫಿ ಮರಕ್ಕೆ ಕುತ್ತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮಕೈಗೊಂಡಿರುತ್ತಾರೆ.
ಕ್ಷುಲ್ಲಕ ಕಾರಣ ವ್ಯಕ್ತಿಯ ಮೇಲೆ ಹಲ್ಲೆ:
ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಬೇಳೂರು ರಸ್ತೆಯ ನಿವಾಸಿ ಕೆ.ಜಿ. ಕೀರ್ತಿಕುಮಾರ್‌ ರವರ ಮನೆಯ ಅಂಗಳದಲ್ಲಿ ಸದರಿಯವರು ವಾಸಿಸುವ ಮನೆಯ ಮನೆಯ ಮಾಲೀಕರ ಮಗ ರಘು @ ಪೊನ್ನಪ್ಪನವರು ಟ್ರ್ಯಾಕ್ಟರ್‌ನಲ್ಲಿ ಜಲ್ಲಿ ಕಲ್ಲನ್ನು ತಂದು ಮನೆಯ ಎದುರುಗಡೆ ನಡೆದಾಡಲು ಸಾಧ್ಯವಾಗದ ರೀತಿಯಲ್ಲಿ  ಹಾಕಿದ್ದು ಇದನ್ನು ವಿಚಾರಿಸಿದ ಕ್ಷುಲ್ಲಕ ಕಾರಣಕ್ಕೆ   ಸದರಿ ರಘುರವರು ಕೀರ್ತಿಕುಮಾರ್‌ ರವರ ಮೇಲೆ ಹಲ್ಲೆ ನಡೆಸಿದ್ದು ಈ ಸಂಬಂಧ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ..
ಆಸ್ತಿ ಕಲಹ ವ್ಯಕ್ತಿಯ ಮೇಲೆ ಹಲ್ಲೆ:
ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕಂಡಂಗಾಲ ಗ್ರಾಮದ ನಿವಾಸಿ ಕೊಟ್ರಂಡ ಕೆ. ದೇವಯ್ಯನವರು ನಿನ್ನೆದಿನ ಮನೆಗೆ ಹೋಗುತ್ತಿದ್ದ ವೇಳೆಯಲ್ಲಿ ಆರೋಪಿಗಳಾದ ಅದೇ ಗ್ರಾಮದ ಕುಟ್ಟಪ್ಪ ಹಾಗೂ ರೋಹಿಣಿ ಎಂಬವರು ಅವರನ್ನು ತಡೆದು ಕೈಯಲ್ಲಿದ್ದ ಕೋವಿನ ಬಟ್‌ನಿಂದ ಗುದ್ದಿ ನೋವನ್ನುಂಟುಮಾಡಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವ ಬಗ್ಗೆ  ವಿರಾಜಪೇಟೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಂಡಿರುತ್ತಾರೆ. 

Friday, September 6, 2013

ದಾರಿ ತಡೆದು ವ್ಯಕ್ತಿಯ ಮೇಲೆ ಹಲ್ಲೆ:

     ವಿನಾಕಾರಣ ವ್ಯಕ್ತಿಯ ದಾರಿ ತಡೆದು ಹಲ್ಲೆನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಭಾಗಮಂಡ ಠಾಣಾ ಸರಹದ್ದಿನ ಕರಿಕೆಯಲ್ಲಿ ನಡೆದಿದೆ.  ಬಾಳೆಬೀಳುಪು - ಕರಿಕೆ ಗ್ರಾಮದ ನಿವಾಸಿ ಕೂಲಿ ಕಾರ್ಮಿಕ ಮಾಧವನಾಯ್ಕ ಎಂಬ ವ್ಯಕ್ತಿ ದಿನಾಂಕ 5-9-2013 ರಂದು ಸಂಜೆ 8-00 ಗಂಟೆಯ ಹೊತ್ತಿಗೆ ತನ್ನ ಮನೆಯಕಡೆಗೆ ನಡೆದುಕೊಂಡು ಕರಿಕೆ ಗ್ರಾಮದ ನಿವಾಸಿ ಸುರೇಶ ರವರ ಮನೆಯ ಹತ್ತಿರ ತಲುಪುವಾಗ್ಗೆ ಸುರೇಶ ಹಾಗು ಆತನ ಪತ್ನಿ ಅನು ಎಂಬವರು ಮಾಧವನಾಯ್ಕರವರನ್ನು ತಡೆದು  ನಮ್ಮ ಮನೆಗೆ ಕಳ್ಳತನ ಮಾಡಲು ಬಂದಿರುವೆ ಎಂದು ಕತ್ತಿಯಿಂದ ಹಲ್ಲೆನಡೆಸಿ ಗಾಯಪಡಿಸಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿದ್ದು, ಮಾಧವನಾಯ್ಕರವರು ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ:
 
    ಟೆಂಪೋ  ವಾಹನಕ್ಕೆ ದಾರಿ ಬಿಡುವ ವಿಚಾರದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆನಡೆಸಿದ ಘಟನೆ ಮಡಿಕೇರಿಯ ಗದ್ದಿಗೆಯ ಬಳಿ ನಡೆದಿದೆ.  ದಿನಾಂಕ 5-9-2013 ರಂದು ಸಂಜೆ 5-30 ಗಂಟೆಗೆ ಎಂ.ಎ. ಮೊಹಮ್ಮದ್‌ ಮುಸ್ತಾಫ ತಮ್ಮ ಟೆಂಪೋ ವಾಹನದಲ್ಲಿ ಕುಳಿತುಕೊಂಡಿರುವಾಗ ಎಂ.ಹೆಚ್‌. ಹಬೀಬ್‌ ಎಂಬ ವ್ಯಕ್ತಿ ಅಲ್ಲಿಗೆ ಬಂದು  ವಾಹನಕ್ಕೆ ದಾರಿ ಬಿಡುವ ವಿಚಾರದಲ್ಲಿ ಜಗಳ ಮಾಡಿ ಕೈಯಿಂದ ಹಲ್ಲೆನಡೆಸಿದ್ದು ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಮೊಹಮ್ಮದ್‌ ಮುಸ್ತಾಫ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ. 
 
 
 

Thursday, September 5, 2013

ಹಲ್ಲೆಗೊಳಗಾದ ವ್ಯಕ್ತಿಯ ಸಾವು, ಕೊಲೆ ಪ್ರಕರಣ ದಾಖಲು:

     ಮದುವೆಯ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಹಲ್ಲೆಗೊಳಾದ ವ್ಯಕ್ತಿ ಚಿಕಿತ್ಸೆವೇಳೆ ಮೃತಪಟ್ಟ ಘಟನೆ ಮಡಿಕೇರಿ ಸಮೀಪದ ಮುರ್ನಾಡುವಿನಲ್ಲಿ ನಡೆದಿದೆ.  ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮುರ್ನಾಡುವಿನ ವಾಸಿ ಸೋಮಶೇಖರ್‌ರವರ ಮಗ ದೇವಿಪ್ರಸಾದ್‌ ಎಂಬ ವ್ಯಕ್ತಿಗೂ ಬೆಂಗಳೂರಿನ ನಿವಾಸಿ ವೇಣುಗೋಪಾಲ್‌ರವರ ಮಗಳಾದ ರಮ್ಯಾ ಎಂಬಾಕೆ ಪೇಸ್‌ಬುಕ್‌ನಲ್ಲಿ ಸಂಪರ್ಕ ಬೆಳೆಸಿ ನಂತರ ಇಬ್ಬರು ಮದುವೆಯಾಗಿದ್ದು, ಈ ಮದುವೆಯ ವಿಚಾರವಾಗಿ ರಮ್ಯಾಳ ತಂದೆ ವೆಣುಗೋಪಾಲ, ನವೀನ, ಶಶಿ (ಎಲ್ಲರೂ ಬೆಂಗಳೂರಿನ ನಿವಾಸಿಗಳು) ಹಾಗು ಇತರೆ 8 ಮಂದಿಯವರು ಸೇರಿ  ದಿನಾಂಕ 02-09-2013  ರಂದು ಸಮಯ ಬೆಳಿಗ್ಗೆ 03-30 ಗಂಟೆಗೆ ಶ್ರೀಮತಿ ಸುನಂದ, ಗಂಡ ಸೋಮಶೇಖರ , ಮುರ್ನಾಡು, ಮಡಿಕೇರಿ ತಾಲೋಕು ಇವರು ಹಾಗೂ  ತಮ್ಮ ಪತಿ ಸೋಮಶೇಖರ, ಮಗ ದೇವಿ ಪ್ರಸಾದ್‌, ಮಗಳು ವಾಣಿ ಮತ್ತು ಅಳಿಯ ಶಂಕರನಾರಾಯಣರವರು ಮನೆಯಲ್ಲಿರುವಾಗ್ಗೆ ಏಕಾಏಕಿ ಮನೆಗೆ ನುಗ್ಗಿ ನಾವು ಪೊಲೀಸರು, ದೇವಿಪ್ರಸಾದ್‌ನನ್ನು ಅರೆಸ್ಟ್‌ ಮಾಡಬೇಕಾಗಿದೆ ಎಂದು ಹೇಳಿ ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ತಡೆಯಲು ಬಂದ ಸೋಮಶೇಖರ್‌ರವರಿಗೆ ಆರೋಪಿಗಳಲ್ಲಿ ಒಬ್ಬ ಅವ್ಯಾಚ ಶಬ್ದಗಳಿಂದ ಬೈದು ಹಲ್ಲೆಯನ್ನು ನಡೆಸಿ ಮನೆಯಲ್ಲಿದ್ದ ಇತರರ ಮೇಲೂ ಹಲ್ಲೆ ನಡೆಸಿ ಮನೆಯಲ್ಲಿದ್ದ ಬೀರು ತೆಗೆದು ಚಿನ್ನದ ಸರ, ಬಳೆ, ಮತ್ತು ಸುಮಾರು 26,000=00 ನಗದು ಹಣವನ್ನು ದೋಚಿಕೊಂಡು ಹೋಗಿದ್ದು, ಈ ಘಟನೆಯಲ್ಲಿ ಹಲ್ಲೆಗೊಳಗಾದ ಸೋಮಶೇಖರ್‌ರವರು ದಿನಾಂಕ 3-9-2013 ರಂದು ರಾತ್ರಿ ಮೃತಪಟ್ಟಿದ್ದು, ಶ್ರೀಮತಿ ಸುನಂದಾರವರ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 
ಇಸ್ಪೀಟ್‌ ಜೂಜಾಟದ ಮೇಲೆ ಪೊಲೀಸ್‌ ದಾಳಿ:
       ಸೋಮವಾರಪೇಟೆ ಸಿಪಿಐ ರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಪಿಎಸ್‌ಐ ಸೋಮವಾರಪೇಟೆ ಠಾಣೆ ಹಾಗೂ ಸಿಬ್ಬಂದಿಯೊಂದಿಗೆ ದಿನಾಂಕ 04.09.2013 ರಂದು ಸಮಯ 23:45 ಗಂಟೆಗೆ  ಕೂತಿ ಗ್ರಾಮದ ನಗರಳ್ಳಿ  - ಸಕಲೇಶಪುರ ಜಂಕ್ಷನ್‌ನಲ್ಲಿರುವ ಬಸ್‌ ನಿಲ್ದಾಣದ ಹತ್ತಿರ ಅಂದರ್‌ ಬಾಹರ್‌ ಜೂಜಾಟವನ್ನು  ಆಡುತ್ತಿದ್ದುದನ್ನು ಪತ್ತೆ ಹಚ್ಚಿ  12 ಮಂದಿಯನ್ನು ಮತ್ತು ಆಟವಾಡಲು ಬಳಸುತ್ತಿದ್ದ 52 ಇಸ್ಪೀಟ್‌ ಹಾಳೆಗಳು ಹಾಗೂ ಜೂಜಾಡಲು ಇಟ್ಟುಕೊಂಡಿದ್ದ 10.600/- ರೂ ಹಣವನ್ನು ಅಮಾನತ್ತು ಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯ ಆತ್ಮಹತ್ಯೆ:
     ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರಪೇಟೆ ಠಾಣಾ ಸರಹದ್ದಿನ ಹೊಸಬೀಡು ಗ್ರಾಮದಲ್ಲಿ ನಡೆದಿದೆ.  ಹೊಸಬೀಡು ಗ್ರಾಮದ ನಿವಾಸಿ ನಾಡಪ್ಪ ಎಂಬ ವ್ಯಕ್ತಿ  ಹಲವು ಖಾಯಿಲೆ ಹಾಗೂ ಹೊಟ್ಟೆನೋವಿನಿಂದ ಬಳಲುತ್ತಿದ್ದು  ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದರೂ ಖಾಯಿಲೆ ಗುಣಮುಖವಾಗದ್ದರಿಂದ ದಿನಾಂಕ 04-09-2013 ರಂದು ಸಮಯ ಮದ್ಯಾಹ್ನ 03:00 ಗಂಟೆಗೆ ಹೊಟ್ಟೆ ನೋವು ಜಾಸ್ತಿಯಾದ ಕಾರಣ ತೋಟಕ್ಕೆ ಸಿಂಪಡಿಸಲು ತಂದಿದ್ದ ಕೀಟನಾಶಕವನ್ನುಸೇವಿಸಿದ್ದು ಚಿಕಿತ್ಸೆ ಬಗ್ಗೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ಧಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

Wednesday, September 4, 2013

ಕ್ಷುಲ್ಲಕ ಕಾರಣಕ್ಕೆ  ಮಹಿಳೆಯ  ಮೇಲೆ ಹಲ್ಲೆ:

      ದಿನಾಂಕ 03-09-13ರಂದು ಸಮಯ ಸಂಜೆ 7-00ಗಂಟೆಗೆ ವಿರಾಜಪೇಟೆ ಗ್ರಾಮಾಂತ್ರ ಠಾಣಾ ಸರಹದ್ದಿನ ನಲ್ವತ್ತೊಕ್ಲು ಗ್ರಾಮದಲ್ಲಿ  ಬೊಳಚಿ ಮತ್ತು ಮಗ ಸುಬ್ರ ಮಣಿ ಎಂಬವರು ತಮ್ಮ  ಮನೆಯ ಅಂಗಳದಲ್ಲಿ ನಿಂತು ಮಾತನಾಡಿ ಕೊಂಡಿರುವಾಗ್ಗೆ ಆರೋಪಿ ಮಣಿಯು ಬಂದು ಬೊಳಚಿಯೊಂದಿಗೆ ನನಗೆ ಸಾರಾಯಿ ಕುಡಿಯಲು ಹಣ ಕೊಡು ಎಂದು ಕೇಳಿದಾಗ ನನ್ನ ಬಳಿ ಹಣ ಇಲ್ಲ ಎಂದು ಹೇಳಿದ್ದಕ್ಕೆ ಜಗಳ ತೆಗೆದು ಕೈಯಲ್ಲಿದ್ದ ಕತ್ತಿಯಿಂದ ಬೊಳಚಿ ಹಾಗೂ  ಸುಬ್ರಮಣಿರವರ ಮೇಲೆ ಹಲ್ಲೆ ನಡೆಸಿದ್ದು, ವಿರಾಜಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಮೋಟಾರ್‌ ಸೈಕಲ್‌ ಕಳವು:
     ದಿನಾಂಕ 20-8-2013 ರಂದು ಸಮಯ ಸಂಜೆ 7.30 ಗಂಟೆಗೆ ಮಡಿಕೇರಿ ನಗರದ ಹೊಸ ಬಡಾವಣೆಯಲ್ಲಿ ವಾಸವಾಗಿರುವ ಎಂ ವೇಣು ಗೋಪಾಲ ಹೆಬ್ಬಾರ್‌ ಎಂಬವರು ಅವರ ಬಾಪ್ತು ಸೂಪರ್ ಸ್ಲ್ಪೆಂಡರ್ ಹೀರೋ ಹೋಂಡಾ ಮೋಟಾರ್ ಸೈಕಲ್ ನೊಂದಣಿ ಸಂಖ್ಯೆ ಕೆಎ-04 ಇಕ್ಯು 3220 ರಲ್ಲಿ ಚೌಡೇಶ್ವರಿ ದೇವಸ್ಥಾನಕ್ಕೆ ಹೋಗಿ ದೇವಸ್ಥಾನದ ಗೇಟಿನ ಒಳಗಡೆ ನಿಲ್ಲಿಸಿ ಪೂಜೆ ಮುಗಿಸಿ ವಾಪಾಸ್ಸು ರಾತ್ರಿ 8.30 ಗಂಟೆಗೆ ಬಂದು ನೋಡುವಾಗ ಮೋಟಾರ್ ಸೈಕಲ್ ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ಮೋಟಾರ್ ಸೈಕಲ್ ನ ಇಂಜಿನ್ ನಂಬರ್ 06EACE 164114 ಆಗಿದ್ದು, ಚಾಸಿಸ್ ನಂಬರ್ 06EACE 16619 ಆಗಿರುತ್ತದೆ. ಇದರ ಅಂದಾಜು ಬೆಲೆ ರೂ.25,000/- ಆಗಬಹುದು. ಈವರೆಗೆ ಎಲ್ಲಾ ಕಡೆ ಹುಡುಕಾಡಿದರು ಪತ್ತೆಯಾಗದ ಕಾರಣ ಪುಕಾರು ಕೊಡಲು ತಡವಾಗಿರುತ್ತದೆ. ಆದ್ದರಿಂದ ಕಳ್ಳತನವಾಗಿರುವ ಮೋಟಾರ್ ಸೈಕಲ್ ನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿಯವರು ನೀಡಿದ ದೂರಿಗೆ ತಯಾರಿಸಿದ ಪ್ರ.ವ.ವರದಿ

 

Tuesday, September 3, 2013

ಜೀವನದಲ್ಲಿ ಜಿಗುಪ್ಸೆ ವ್ಯಕ್ತಿಯ ಆತ್ಮಹತ್ಯೆ:
 
     ತನ್ನ ಹೆಂಡತಿ ಮಕ್ಕಳು ಬಿಟ್ಟುಹೋದ ವಿಚಾರದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವ ಕುತ್ತಿಗೆಗೆ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.  ಪೊನ್ನಂಪೇಟೆ ಠಾಣಾ ವ್ಯಾಪ್ತಿಯ  ರುದ್ರಬೀಡು ಗ್ರಾಮದಲ್ಲಿ ವಾಸವಾಗಿರುವ  ಅಂಡಮಾಡ ಜಿ ವಿಠಲ ನವರ ಲೈನ್ ಮನೆಯಲ್ಲಿ ನೆಲೆಸಿರುವ  35 ವರ್ಷ ಪ್ರಾಯದ ಕಾಳ ಎಂಬ ವ್ಯಕ್ತಿ ತನ್ನ ಹೆಂಡತಿ ಮಕ್ಕಳು ಮನೆ ಬಿಟ್ಟು ಹೋದ ಹಿನ್ನೆಲೆಯಲ್ಲಿ ಬೇಸರಗೊಂಡು  ದಿನಾಂಕ  31-08-2013 ರಂದು ತಾನು ವಾಸವಾಗಿರುವ ಲೈನು ಮನೆಯಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
ವಿನಾಕಾರಣ ವ್ಯಕ್ತಿಯ ಮೇಲೆ ಹಲ್ಲೆ:
     ಪೊನ್ನಂಪೇಟೆ ಠಾಣಾ ಸರಹದ್ದಿನ ಕಿರಗೂರು ಗ್ರಾಮದಲ್ಲಿ ಲೈನ್‌ಮನೆಯೊಂದರಲ್ಲಿ ವಾಸವಾಗಿರುವ ಮಣಿ ಎಂಬವರು ಹಾಗೂ ಆತನ ಸಂಬಂಧಿ ಸುರೇಶ ನಿನ್ನೆ ದಿನ ಬೆಳಿಗ್ಗೆ ಮನೆಯಲ್ಲಿರುವ  ಸಮಯದಲ್ಲಿ ಆರೋಪಿ ಅಲೇಮಾಡ ದಯಾ ಎಂಬವನು ಅಲ್ಲಿಗೆ ಬಂದು ವಿನಾಕಾರಣ ಸುರೇಶನ ಮೇಲೆ ಕಾಡುದೊಣ್ಣೆಯಿಂದ ಹಲ್ಲೆ ನಡೆಸಿದ್ದು, ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 
ಸಹಕಾರ ಸಂಘದ ಚುನಾವಣೆಯಲ್ಲಿ ಗೆದ್ದ ಮಹಿಳೆಯ ನಿಂದನೆ, ಹಲ್ಲೆ, ಪ್ರಕರಣ ದಾಖಲು:
     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಬೆಟ್ಟಗೇರಿ  ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ದಿನಾಂಕ 1-9-2013 ರಂದು ಮತದಾನ ನಡೆದು ಶ್ರಿಮತಿ ಕಮಲ ಎಂಬವರು ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದ್ದು ಇದನ್ನು ಸಹಿಸದ ತಳೂರು ಕಿಶೋರ್‌ ಎಂಬ ವ್ಯಕ್ತಿ ಅವರ ಕಡೆಯವರಾದ ರತನ್‌ ರೈ, ನಾಪಂಡ ರ್ಯಾಲಿ ಮಾದಯ್ಯ, ಚಳಿಯಂಡ ಯತೀಶ, ಚಳಿಯಂಡ ಹರೀಶ್‌, ಕೆ.ಎ. ನಾಣಯ್ಯ, ಚಳಿಯಂಡ ದಿನೇಶ್‌‌, ತೋರೇರ ಸತೀಶ್‌, ಚಳಿಯಂಡ ನಂದಕುಮಾರ್‌‌ರವರುಗಳು ಮನಮೋಹನ ರೈರವರೊಂದಿಗೆ  ಸೇರಿಕೊಂಡು   ಶ್ರೀಮತಿ ಕಮಲರವರನ್ನು ಕುರಿತು ನೀನೇನು ದೊಡ್ಡ ಸಂಗತಿಯಾ, ಎಲೆಕ್ಷೆನ್‌ನಲ್ಲಿ ಗೆದ್ದು ಬಿಟ್ಟೆ ಎಂದು ಬೀಗ ಬೇಡ ಎಂಬುದಾಗಿ ಹೇಳುತ್ತಾ   ಅವ್ಯಾಚ ಶಬ್ದಗಳಿಂದ ಬೈದು   ಕಮಲರವರನ್ನು ತಡೆದು ನಿಲ್ಲಿಸಿ ಎಲ್ಲರೂ ಕೈಗಳಿಂದ, ಮುಖ, ಎದೆ ಸೇರಿದಂತೆ ಶರೀರದ ಭಾಗಗಳಿಗೆ ಹೊಡೆದು ಮನಮೋಹನ ರೈ ಮತ್ತು ರತನ್‌ ರೈ ಪಿರ್ಯಾದಿಯವರ ಕರಿಮಣಿ ಸರವನ್ನು ಕಿತ್ತುಕೊಂಡಿದ್ದು ಚಳಿಯಂಡ ಯತೀಶ್‌ನು ಬಲಕಿವಿಯ ಓಲೆಯನ್ನು, ಚಳಿಯಂಡ ಹರೀಶ್‌ ಮತ್ತು ಚಳಿಯಂಡ ದಿನೇಶ್‌ ವಾಚು ಮತ್ತು ಉಂಗುರವನ್ನು ಕಿತ್ತುಕೊಂಡಿದ್ದು ಅಲ್ಲದೆ   ಕಮಲರವರ ಮಗ ರಂಜನ್‌ ಮತ್ತು ಪತಿ ಚಳಿಯಂಡ ಉತ್ತಯ್ಯನವರಿಗೆ   ಸದ್ರಿ ವ್ಯಕ್ತಿಗಳು ಹಲ್ಲೆ ನಡೆಸಿದ್ದು, ಅಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದು  ಶ್ರೀಮತಿ ಕಮಲ ರವರ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 
 

Monday, September 2, 2013

ಕಸಾಯಿಖಾನೆಗೆ ಅಕ್ರಮ ಗೋವುಗಳ ಸಾಗಾಟ, ಪ್ರಕರಣ ದಾಖಲು:

     ಇಂದು ಬೆಳಗಿನ ಜಾವ ಪಿಎಸ್‌ಐ, ಶನಿವಾರಸಂತೆರವರು ಕರ್ತವ್ಯದಲ್ಲಿರುವ ವೇಳೆ ಶನಿವಾರಸಂತೆ ಪೊಲೀಸ್‌ ಠಾಣಾ ವ್ಯಾಪ್ತಿಯ ಚಿಕ್ಕಕುಂದ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಒಂದು ವಾಹನದಲ್ಲಿ  ಸರಕಾರದ ಪರವಾನಗಿ ಇಲ್ಲದೆ ಸುಮಾರು 8 ಗೋವುಗಳನ್ನು ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದುದನ್ನು ತಡೆದು ಶನಿವಾರಸಂತೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ, ಪ್ರಕರಣ ದಾಖಲು:

      ದಿನಾಂಕ: 31-08-13ರಂದು ಸಮಯ 5-30ಗಂಟೆಗೆ ಪಿಎಸ್‌ಐ ವಿರಾಜಪೇಟೆ ಗ್ರಾಮಾಂತರ ಠಾಣೆ ಯವರಿಗೆ ಸಿಕ್ಕಿದ ಖಚಿತ ವರ್ತಮಾನದ ಮೇರೆ ಸದ್ರಿಯವರು ಹಾಗೂ ಪ್ರೋ. ಡಿ.ವೈ.ಎಸ್.ಪಿ.  ಮತ್ತು ಸಿಬ್ಬಂದಿಗಳೊಂದಿಗೆ ಕಂಡಂಗಾಲ ರುದ್ರ ಗುಪ್ಪೆ ಗ್ರಾಮದ ಮಾಂಗೇರ ಚಂಗಪ್ಪ ರವರ ಅಂಗಡಿಯ ಮುಂದಿನ ಜಗಲಿಯಲ್ಲಿ ದಾಳಿ ಮಾಡಿದಲ್ಲು, ಆರೋಪಿ ಚಂಗಪ್ಪ, ನವರು ಸರ ಕಾರದ ಪರವಾನಿಗೆ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಮದ್ಯ ವನ್ನು  ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿ ಕೊಡುತ್ತಿದ್ದು, ಈ ಸಮ್ಮಂದ ದಾಳಿ ಮಾಡಿದಲ್ಲು ಅಂದಾಜು 451-00 ಬೆಲೆಯ 11 BOSS PREMIUM XXX RUM 180 ML ಕ್ವಾಟರ್ ಬಾಟಲಿಗಳನ್ನು ಅಮಾನತ್ತುಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.