Saturday, October 19, 2013

ಮನೆಯ ಬೀಗ ಮುರಿದು ಜಿನ್ನಾಭರಣ ಕಳವು:

 
     ದಿನಾಂಕ 8-10-2013 ರಂದು ಸಮಯ 17-00 ಗಂಟೆಗೆ ಶ್ರೀ.ಮುಕ್ತಾರ್ ಅಹಮ್ಮದ್ ತಂದೆ ಮಹಮ್ಮದ್ ಇಸಾಕ್ , ಪ್ರಾಯ 49 ವರ್ಷ, ವಾಸ ಮನೆ ನಂ 189, 5 ನೇ ಬ್ಲಾಕ್, ಮುಖ್ಯ ರಸ್ತೆ, ವಿರಾಜಪೇಟೆ ಇವರು ಸಂಸಾರ ಸಮೇತ ತಮ್ಮ ಮನೆಗೆ ಬೀಗ ಹಾಕಿ ತನ್ನ ಅಕ್ಕನ ಮಗನ ಮದುವೆಗೆಂದು ಹುಣಸೂರಿಗೆ ಹೋಗಿದ್ದು ಮದುವೆ ಮುಗಿಸಿ ನಿನ್ನೆ  ದಿನ ದಿನಾಂಕ 18-10-2013 ರಂದು ಬೆಳಿಗ್ಗೆ 9-45 ಗಂಟೆಗೆ ಮನೆಗೆ ಬಂದು ಬಾಗಿಲನ್ನು ತೆರೆಯಲು ಹೋದಾಗ  ಮನೆಯ ಮುಂಭಾಗಿಲಿನ ಚಿಲಕವು ನೇತಾಡುತ್ತಿದ್ದು ಬಾಗಿಲು ತೆಗೆದು ಒಳ ಹೋಗಿ ನೋಡಿದಾಗ ಮನೆಯ ಒಳಬಾಗಿಲಿನ ಡೋರ್ ಲಾಕ್  ಮತ್ತು ಬೀಗವನ್ನು ಯಾರೋ ಕಳ್ಳರು ಮುರಿದು  ಮನೆಯ ಒಳಗೆ ಇಟ್ಟಿದ್ದ ಎರಡು ಗಾಡ್ರೇಜ್ ಬೀರುವಿನ ಬಾಗಿಲು ತೆರೆದಿದ್ದು ಗಾಡ್ರೇಜ್ ಒಳಗೆ ಇಟ್ಟಿದ್ದ ಒಟ್ಟು 50 ಗ್ರಾಂನ  ಚಿನ್ನದ ವಾಲೆ, ಚಿನ್ನದ ನಾಣ್ಯ , ಚಿನ್ನದ ಉಂಗುರ, ಚಿನ್ನದ ಪೆಂಡೆಂಟ್ ಇವುಗಳು ಹಾಗೂ ಒಟ್ಟು 750 ಗ್ರಾಂ ನ ಬೆಳ್ಳಿಯ ಕಾಲು ಚೈನು, ಕೀ ಬಂಚ್ ಕಳ್ಳತನವಾಗಿದ್ದು, ಅಲ್ಲದೇ ಗಾಡ್ರೇಜ್ ಒಳಗೆ ಇಟ್ಟಿದ್ದ  ಡಬಲ್ ಸೀಮ್ ಇರುವ ಸ್ಯಾಮ್ ಸಂಗ್ ಮೊಬೈಲ್  ಹಾಗೂ ನಗದು ಹಣ  1,500/- ರೂ ಕಳ್ಳತನವಾಗಿದ್ದು   ಇವುಗಳ ಒಟ್ಟು ಮೌಲ್ಯ 1,40,000/- ಆಗಿರುತ್ತದೆ. ಈ ಬಗ್ಗೆ ಮುಕ್ತಾರ್‌ ಅಹಮ್ಮದ್‌ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
 
ಆಕಸ್ಮಿಕ ನೀರಿಗೆ ಬಿದ್ದು ವ್ಯಕ್ತಿಯ ದುರ್ಮರಣ:
 
     ಆಕಸ್ಮಿಕವಾಗಿ ನೀರಿಗೆ ಬಿದ್ದು ವ್ಯಕ್ತಿಯೊಬ್ಬರು ಸಾವನಪ್ಪಿದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಪೆರಾಜೆ ಗ್ರಾಮದಲ್ಲಿ ನಡೆದಿದೆ.  ಪೆರಾಜೆ ಗ್ರಾಮದ ನಿವಾಸಿ ಶ್ರೀಮತಿ ಪಿ.ಡಿ. ಲೀಲಾವತಿ ಎಂಬವರ ಪತಿ ಧನಂಜಯ ಎಂಬವರು ದಿನಾಂಕ 18-10-2013 ರಂದು ಮನೆಯ ಹತ್ತಿರವಿರುವ  ಕುಂಡಾಡು ಹೊಳೆಯಲ್ಲಿ  ಆಕಸ್ಮಕವಾಗಿ ಬಿದ್ದು ಸಾವನಪ್ಪಿದು ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
   
ಮಹಿಳೆಗೆ ಪತಿಯಿಂದ ವರದಕ್ಷಿಣೆ ಕಿರುಕುಳ, ಕೊಲೆಗೆ ಯತ್ನ:   
 
     ಶ್ರೀಮತಿ ಹೆಚ್‌,ಎಂ, ಕೋಮಲ ಎಂಬವರು ಸುಮಾರು 2 ವರ್ಷಗಳ ಹಿಂದೆ ಕಿತ್ತೂರು ಗ್ರಾಮದ ಕಾಂತಿರಂಗ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದು, ಮದುವೆಯ ಸಮಯದಲ್ಲಿ ಕಾಂತಿರಂಗರವರು ವರಧಕ್ಷಿಣೆ ರೂಪದಲ್ಲಿ 7 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದು, 2011 ನೇ ಸಾಲಿನ ಜೂನ್ ತಿಂಗಳಲ್ಲಿ ಕಾಂತಿರಂಗ ಹಾಗು ಅತ್ತೆ ಗೌರಮ್ಮ ರವರು ಕೋಮಲರವರಿಗೆ   ಮದುವೆಯ ಸಮಯದಲ್ಲಿ ನೀಡಿದ ಚಿನ್ನಾಭರಣಗಳು ಸಾಲುವುದಿಲ್ಲ ಇನ್ನೂ 5 ಲಕ್ಷ ರೂಪಾಯಿ ವರಧಕ್ಷಿಣೆ ಬೇಕು ಎಂದು ಮಾನಸಿಕ ಹಿಂಸೆ ನೀಡಿದ್ದು, ಇದನ್ನು ತಿಳಿದ ಕೋಮಲರ  ತಂದೆ ಮಲ್ಲಯ್ಯರವರು 2011ನೇ ಸಾಲಿನ ಜೂನ್ ತಿಂಗಳಲ್ಲಿ  50,000 ರೂ ಹಣವನ್ನು ಮತ್ತು 2012 ನೇ ಸಾಲಿನ ಅಕ್ಟೋಬರ್ ತಿಂಗಳಿನಲ್ಲಿ 50,000 ನಗದು ಹಣವನ್ನು ವರಧಕ್ಷಿಣೆ ರೂಪದಲ್ಲಿ ನೀಡಿದ್ದು, ದಿನಾಂಕ: 14-10-2013 ರಂದು ಕೋಮಲರವರು ತನ್ನ ತವರು ಮನೆ ಸಕಲೇಶಪುರದಿಂದ ಕಿತ್ತೂರು ಗ್ರಾಮಕ್ಕೆ ಗಂಡನ ಮನೆಗೆ ಬಂದಾಗ ಆರೋಪಿ ಕಾಂತಿರಂಗನು 4 ಲಕ್ಷ ರೂಪಾಯಿ ತಂದಿದ್ದೀಯಾ ಎಂದು ಕೇಳಿ ಜಗಳವಾಡಿ ಕೈಗಳಿಂದ ಹೊಡೆದು ನೋವುಂಟು ಪಡಿಸಿರುವುದಲ್ಲದೆ,  ಕುತ್ತಿಗೆ ಹಿಸುಕಿ ತಾಯಿಯ ಪ್ರಚೋದನೆಯಿಂದ ಕೊಲೆ ಮಾಡಲು ಪ್ರಯತ್ನಿಸಿದ್ದು, ಈ ಬಗ್ಗೆ  ಸಕಲೇಶಪುರದ ಕಾಪರ್ಡ್‌ ಆಸ್ಪತ್ರೆಗೆ  ಚಿಕಿತ್ಸೆ ಬಗ್ಗೆ ದಾಖಲಿಸಿದ್ದು ಹೆಚ್‌,ಎಂ. ಕೋಮಲರ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಜಮೀನು ವಿವಾದ ವ್ಯಕ್ತಿಗಳಿಂದ ಹಲ್ಲೆ:
      ದಿನಾಂಕ 18-10-2013 ರಂದು ಮದ್ಯಾಹ್ನ ಕೂಡಿಗೆ ಗ್ರಾಮದ ನಿವಾಸಿ ಸೋಮಶೇಖರ ತಮ್ಮ ಸತೀಶ ಹಾಗೂ  ಪತ್ನಿ ವೇದಾವತಿಯವರು ತಮ್ಮ ಜಮೀನಿನಲ್ಲಿ ತಡುಗುಣಿ ಕಾಳನ್ನು ಬಿತ್ತನೆ ಮಾಡುತ್ತಿದ್ದಾಗ ಅದೇ ಗ್ರಾಮದ  ತಿಮ್ಮಪ್ಪ ಕೆ.ಸಿ, ಹಾಗೂ ಕೆ.ಸಿ. ಮೋಹನ ಎಂಬುವರು ಸೋಮಶೇಖರರವರಿಗೆ  ಅವಾಚ್ಯ ಶಬ್ದಗಳಿಂದ ಬೈದು, ವೇದಾವತಿಯವರಿಗೆ ಹೊಡೆಯಲು ಬಂದಿದ್ದು ಅದನ್ನು ತಡೆಯಲು ಹೋದ ಸತೀಶರವರಿಗೆ ಮೋಹನ ಹಾಗೂ ತಿಮ್ಮಪ್ಪ ರವರು ನೆಲಕ್ಕೆ ಕೆಡವಿ ಬಲಕೈಯಿಂದ  ಗುದ್ದಿ ಕತ್ತು ಹಿಸುಕಿ ಕೊಲೆ ಮಾಡಲು ಪ್ರಯತ್ನ  ಮಾಡಿದ್ದು, ಸೋಮಶೇಖರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ  ಕೈಗೊಂಡಿರುತ್ತಾರೆ.