Sunday, October 20, 2013

ಕ್ಷುಲ್ಲಕ ಕಾರಣಕ್ಕೆ ಪತಿಯಿಂದ ಪತ್ನಿಯ ಮೇಲೆ ಹಲ್ಲೆ. 
      ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಮೇಲೆ ಪತಿಯು  ಹಲ್ಲೆ ಮಾಡಿದ ಘಟನೆ ಮಡಿಕೇರಿ ನಗರದ ಮಂಗಳೂರು ರಸ್ತೆಯಲ್ಲಿ ನಡೆದಿದೆ. ದಿನಾಂಕ 19/10/2013ರ ರಾತ್ರಿ ವೇಳೆ ಮಡಿಕೇರಿ ನಗರದ ಮಂಗಳೂರು ರಸ್ತೆಯ ಬಳಿ ವಾಸವಿರುವ ಪ್ರೇಮಾವತಿ ಎಂಬವರ ಗಂಡ ಲೋಕೇಶ ಎಂಬಾತನು ತನ್ನ ಪತ್ನಿ ಪ್ರೇಮಾವತಿಯ ಮೇಲೆ ಕ್ಷುಲ್ಲಕ ಕಾರಣಕ್ಕೆ ಟಾರ್ಚ್‌ ಲೈಟಿನಿಂದ ತಲೆಗೆ ಹೊಡೆದು ಗಾಯಗೊಳಿಸಿರುವುದಾಗಿ ನೀಡಿದ ದೂರನಿ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ವಿವಾದ, ವ್ಯಕ್ತಿಯೊಬ್ಬರ ಮೇಲೆ ಗುಂಪು ಹಲ್ಲೆ 
       ರಸ್ತೆ ವಿವಾದದಲ್ಲಿ ವ್ಯಕ್ತಿಯೊಬ್ಬರ ಮೇಲೆ ಗುಂಪು ಹಲ್ಲೆ ಮಾಡಿದ ಘಟನೆ ಸೋಮವಾರಪೇಟೆ ತಾಲೂಕಿನ ತಲ್ತರೆ ಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ. ತಲ್ತರೆ ಶೆಟ್ಟಳ್ಳಿ ಗ್ರಾಮದ ನಿವಾಸಿ ವಿಶ್ವನಾಥ ಹಾಗೂ ಅದೇ ಗ್ರಾಮದ ನಿವಾಸಿ ಪ್ರಕಾಶ ಹಾಗೂ ಸೋದರರ ನಡುವೆ ರಸ್ತೆ ವಿಚಾರದಲ್ಲಿ ವಿವಾದವಿದ್ದು, ದಿನಾಂಕ 19/10/2013ರಂದು ಶಾಂತಳ್ಳಿಯ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲೇ ಸ್ಥಳದಲ್ಲಿದ್ದ ಆರೋಪಿಗಳಾದ ಪ್ರಕಾಶ, ರಾಜಪ್ಪ, ನಾಗರಾಜು, ನೂತನ್, ಭರತ್, ಭುವನ, ಕವನ ಮುಂತಾದವರು ದೊಣ್ಣೆ, ಕತ್ತಿಗಳಿಂದ ವಿಶ್ವನಾಥರವರ ಮೇಲೆ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೇಣು ಬಿಗಿದುಕೊಂಡು ವ್ಯಕ್ತಿಯ ಸಾವು. 
       ಮನೆಯಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಟ್ಟ ಬಳಿಯ ಪೂಜೆಕಲ್ ಎಂಬಲ್ಲಿ ನಡೆದಿದೆ. ದಿನಾಂಕ 19/10/2013ರ ಬೆಳಗಿನ ಜಾವ ಸಮಯದಲ್ಲಿ ಪೂಜೆಕಲ್ ನಿವಾಸಿ ಕುಂಞಿಮೋನು ಎಂಬವರ ಮಗ 32 ವರ್ಷ ಪ್ರಾಯದ ವಿನು ಎಂಬಾತನು ಮನೆಯಲ್ಲಿ ಮನೆಯ ಮಾಡಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದಿರುವುದಿಲ್ಲ ಎಂದು ಕುಂಞಿಮೋನುರವರು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬಸ್ ಡಿಕ್ಕಿ, ವ್ಯಕ್ತಿಯೊಬ್ಬರ ಸಾವು 
      ನಿಂತಿದ್ದ ವ್ಯಕ್ತಿಯೊಬ್ಬರಿಗೆ ಬಸ್ ಡಿಕ್ಕಿಯಾಗಿ ಸಾವಿಗೀಡಾದ ಘಟನೆ ಗೋಣಿಕೊಪ್ಪ ನಗರದ ಪೊನ್ನಂಪೇಟೆ ಜಂಕ್ಷನ್ ಬಳಿ ನಡೆದಿದೆ.  ದಿನಾಂಕ 19/10/2013ರ ಸಂಜೆ ವೇಳೆ ಪೊನ್ನಂಪೇಟೆಯ ಮತ್ತೂರು ಗ್ರಾಮದ ನಿವಾಸಿಸಿ ಕೆ.ಕೆ.ಲೋಕೇಶ ಮತ್ತು ಕಾಕೇರ ಗಣೇಶ ಎಂಬವರುಗಳು ಸ್ವಂತ ಕೆಲಸದ ಸಂಬಂಧ ಗೋಣಿಕೊಪ್ಪ ನಗರಕ್ಕೆ ಬಂದು ಕೆಲಸ ಮುಗಿಸಿಕೊಂಡು ವಾಪಾಸು ಹೋಗಲು ನಗರದ ಪೊನ್ನಂಪೇಟೆ ಜಂಕ್ಷನ್ ಬಳಿ ಕೋಳಿ ಮಾಂಸದ ಅಂಗಡಿಯೊಂದರ ಬಳಿ ನಿಂತುಕೊಂಡಿರುವಾಗ ಶ್ರೀ ಇಗ್ಗುತಪ್ಪ ಎಂಬ ಹೆಸರಿನ ಖಾಸಗಿ ಬಸ್ ಸಂಖ್ಯೆ ಕೆಎ-12-ಎ-909 ರನ್ನು ಅದರ ಚಾಲಕ ಜಯ ಎಂಬವರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಪರಿಣಾಮ ಗಣೇಶ್ ರವರಿಗೆ ಬಸ್ಸಿನ ಮುಂದಿನ ಪುಟ್ ಬೋರ್ಡ್ ತಗುಲಿ ರಸ್ತೆಗೆ ಬಿದ್ದು ಬಸ್ಸಿನ ಹಿಂಭಾಗದ ಟೈಯರ್ ತಲೆಯ ಮೇಲೆ ಹರಿದು ತೀವೃ ಸ್ವರೂಪದ ಗಾಯ ಉಂಟಾಗಿ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.