Wednesday, October 30, 2013

ಕಾರು ಅಫಘಾತ, ಇಬ್ಬರಿಗೆ ಗಾಯ 
     ಚಾಲಕನ ಅಜಾಗರೂಕತೆಯಿಂದ ಕಾರೊಂದು ತೋಡಿಗೆ ಬಿದ್ದ ಪರಿಣಾಮ ಇಬ್ಬರಿಗೆ ಗಾಯಗಳಾದ ಘಟನೆ ಮಡಿಕೇರಿ ನಗರದ ಮೂರ್ನಾಡು ರಸ್ತೆಯಲ್ಲಿ ಸಂಭವಿಸಿದೆ. ದಿನಾಂಕ 29/10/2013ರಂದು ಸಂಜೆ ವೇಳೆ ಬೆಂಗಳೂರಿನ ಬನಶಂಕರಿ ನಿವಾಸಿ ವರುಣ ಎಂಬವರ ಕಾರು ಸಂಖ್ಯೆ ಕೆಎ-03-ಎಂಎಸ್-1002 ನ್ನು ಅದರ ಚಾಲಕ ಮಾಲತೇಶ್ ಎಂಬವರು ಚಾಲಿಸಿಕೊಂಡು ವಿರಾಜಪೇಟೆ ಕಡೆಯಿಂದ ಮಡಿಕೇರಿಗೆ ಬರುತ್ತಿರುವಾಗ ನಗರದ ಮೂರ್ನಾಡು ರಸ್ತೆಯ ಬಳಿ ಸರ್ಕಾರಿ ಆಸ್ಪತ್ರೆಯ ಶವಾಗಾರದ ಮುಂಭಾಗದ ತಿರುವಿನ ಬಳಿ ಕಾರು ಮಾಲತೇಶ್‌ರವರ ಅಜಾಗರೂಕತೆಯ ಚಾಲನೆಯ ಪರಿಣಾಮ ರಸ್ತೆ ಬದಿಯಲ್ಲಿರುವ ತೋಡಿಗೆ ಬಿದ್ದ ಪರಿಣಾಮ ಕಾರು ಜಖಂಗೊಂಡಿದ್ದು, ಕಾರಿನಲ್ಲಿದ್ದ ವರುಣರವರ ತಂದೆ ಗಜೇಂದ್ರ ಹಾಗೂ ಚಾಲಕ ಮಾಲತೇಶ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಠಾಣಾ ಪಿಎಸ್‌ಐ ಭರತ್‌ರವರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.