Friday, November 29, 2013

ವಿನಾಕಾರಣ ಪತಿಯಿಂದ ಪತ್ನಿಯ ಮೇಲೆ ಹಲ್ಲೆ:

     ಮಡಿಕೇರಿ ತಾಲೋಕಿನ ಹಾಕತ್ತೂರು ಗ್ರಾಮದಲ್ಲಿ  ಸುಬ್ರಮಣಿ ಎಂಬವರು ತನ್ನ ಪತ್ನಿಯೊಂದಿಗೆ  ದಂಬೆಕೋಡಿ ನಾಗೇಶ್‌ರವರ ಮನೆಯಲ್ಲಿ ವಾಸವಾಗಿದ್ದು,  ದಿನಾಂಕ 28-11-2013 ರಂದು ರಾತ್ರಿ ಸುಬ್ರಮಣಿ ಮದ್ಯಪಾನ ಮಾಡಿಕೊಂಡು ಬಂದು ಪತ್ನಿ ಶ್ರೀಮತಿ ಗೀತಾರವರಿಗೆ  ವಿನಾ ಕಾರಣ ಹಲ್ಲೆ ನಡೆಸಿದ್ದು  ಅಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದು, ಈ ಸಂಬಂಧ ಶ್ರೀಮತಿ ಗೀತಾರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತ್ರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ  ಕ್ರಮ ಕೈಗೊಂಡಿರುತ್ತಾರೆ. 
 
ಅಪರಿಚಿತ ವ್ಯಕ್ತಿಯ ಮೃತದೇಹ ಮೃತದೇಹಪತ್ತೆ:
 
      ಶನಿವಾರಸಂತೆ ಪೊಲೀಸ್‌ ಠಾಣಾ ವ್ಯಾಪ್ತಿಯ  ಕೊಡ್ಲಿಪೇಟೆ ಗ್ರಾಮದ ಬಸವನಾಲೆ ನ್ಯಾಯದನ್ಯಾಯದಹಳ್ಳ ಹೊಳೆಯಲ್ಲಿ ಸುಮಾರು 40-45 ವರ್ಷ ಪ್ರಾಯದ ಗಂಡಸಿನ ಮೃತದೇಹ ಪತ್ತೆಯಾಗಿದ್ದು  ಈ ಮೃತದೇಮೃತದೇಹದ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ.  ಈ ಬಗ್ಗೆ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 
 

Thursday, November 28, 2013

ವಿನಾಕಾರಣ ವ್ಯಕ್ತಿಯ ದಾರಿ ತಡೆದು ಕೊಲೆ ಬೆದರಿಕೆ:

      ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಹೊಸ್ಕೇರಿ ಗ್ರಾಮವ ವಾಸಿ ಬೊಳ್ಳೂರು ಉದಯಕುಮಾರ್‌ ಎಂಬವರು ದಿನಾಂಕ 27-11-2013 ರಂದು  ತಮ್ಮ ಬಾಪ್ಸು ಪಿಕ್‌ಅಪ್‌ ಜೀಪಿನಲ್ಲಿ  ತಮ್ಮ ಮನೆಯ ಕಡೆಗೆ ಹೋಗುತ್ತಿದ್ದು ಹೊಸ್ಕೇರಿ ಬಸ್ಸು ತಂಗುದಾಣದ ಹತ್ತಿರ ಅದೇ ಗ್ರಾಮದ ವಾಸಿ ಮಂಡೀರ ದೇವಯ್ಯ ಎಂಬವರು  ಜೀಪನ್ನು ಅಡ್ಡಗಟ್ಟಿ ವಿನಾಕಾರಣ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 
      ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡೀರ ದೇವಯ್ಯನವರು ಸಹ ಮಡಿಕೇರಿ ಗ್ರಾಮಾಂತರ  ಪೊಲೀಸರು ದೂರನ್ನು ನೀಡಿದ್ದು  ತಾನು ಹೊಸ್ಕೇರಿ ಗ್ರಾಮದ ಬಸ್ಸು ತಂಗುದಾಣದ ಹತ್ತಿದ ನಿಂತುಕೊಂಡಿರುವಾಗ  ಬೊಳ್ಳೂರು ಉದಯ ಕುಮಾರ್‌ ರವರು ಅಲ್ಲಿದೆ ಪಿಕ್‌ಅಪ್‌ ಜೀಪಿನಲ್ಲಿ ಬಂದು  ದೇವಯ್ಯನವರಿಗೆ ಅವಾಚ್ಯ ಶಬ್ದಗಳಿಂದ  ಬೈದು, ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ತತನಿಖೆ ಕೈಗೊಂಡಿರುತ್ತಾರೆ. 
 
ಮಸೀದಿ ವಿವಾದ, ಪರಸ್ಪರ ಹಲ್ಲೆ:
 
       ಶನಿವಾರಸಂತೆ ಪೊಲೀಸ್‌ ಠಾಣಾ ವ್ಯಾಪ್ತಿಯ ಕೊಡ್ಲಿಪೇಟೆ ಯಲ್ಲಿರುವ ಜಾಮಿಯಾ ಮಸೀದಿಯಲ್ಲಿ ದಿನಾಂಕ 27-11-2013 ರಂದು ಸಂಜೆ 6-00 ಗಂಟೆಯ ಸಮಯದಲ್ಲಿ  ಮಸೀದಿ ಸದಸ್ಯರಾದ ಅನೀಫ್‌, ಅಲ್ತಾಫ್‌, ಅಮಾನ್‌, ಅಕ್ಬರ್‌, ಜಮೀಲ್‌ ರವರುಗಳು ಇರುವಾಗ್ಗೆ,  ಆರೋಪಿಗಳಾದ (1)C§Äݯï gɺÀªÀiÁ£ï @ ¥Á¥ÀÄ (2) ¥ÉÃ¥Àgï gÀ¦üÃPï (3) C£Àìgï(4) AiÀÄÆ£À¸ï  (5) EªÀiÁæ£ï (6) ±À¦ü (7), ªÀÄÄQÛAiÀiÁgï (8). £ÁAiÀÄgï (9) C§ÄÝ¯ï £À¹Ãgï (10) £À¦üøï (11) R°Ã¯ï (12) E¥sÁð£ï (13) CPÀä¯ï (14) ºÀ¯Á¯ï (15) ¸ÀÀPÉèöÊ£ï ºÁUÀÆ EvÀgÀರು ಸೇರಿ ಕೆಎ-17, 9347 ರ ಕಾರು, ಕೆಎ-19 ಎನ್‌-9936 ರ ಕಾರು, ಕೆಎ-12 ಎನ್‌-6945 ರ ವಾಹನ ಹಾಗೂ ಕೆಎ-05, ಎಂ.ಡಿ- 9017 ರ ವಾಹನಗಳಲ್ಲಿ ಬಂದು ಮಸೀದಿಯಲ್ಲಿದ್ದ ಸದಸ್ಯರುಗಳ ಮೇಲೆ ಕತ್ತಿ, ದೊಣ್ಣೆ ಹಾಗೂ ಇನ್ನಿತರ ವಸ್ತುಗಳಿಂದ ಹಲ್ಲೆ ನಡೆಸಿದ್ದು, ಈ ಸಂಬಂಧ ಜಾಮಿಯಾ ಮಸೀದಿಯ ಅಧ್ಯಕ್ಷರಾದ ಮಹಮ್ಮದ್‌ ಉಸ್ಮಾನ್‌ ರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 
ಅಕ್ರಮ ಜೂಜಾಟ ಆರೋಪಿಗಳಆರೋಪಿಗಳು ಪೊಲೀಸ್‌ ವಶಕ್ಕೆ:
 
     ದಿನಾಂಕ 27-11-2013 ರಂದು ಕುಶಾಲನಗರ ಠಾಣಾಧಿಕಾರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಠಾಣಾಧಿಕಾರಿ ಚಿಕ್ಕಸ್ವಾಮಿಯವರು ಸಿಬ್ಬಂದಿಯೊಂದಿಗೆ  ಕುಶಾಲನಗರ ಠಾಣಾ ವ್ಯಾಪ್ತಿಯ ಶಿರಂಗಾಲ ಗ್ರಾಮದ  ನಾಮದಾರಿ ಗೌಡರ ಸಮುದಾಯ ಭವನದ ಹಿಂಭಾಗದಲ್ಲಿರುವ ಹುಣಸೆ ಮರದ ಕೆಳಗೆ ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಡುತ್ತಿದ್ದವರ ಮೇಲೆ ದಾಳಿ ನಡೆಸಿದ್ದು 4 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ, ಆಟವಾಡಲು ಸ್ಥಳದಲ್ಲಿ ಇಟ್ಟಿದ್ದ  ಒಟ್ಟು ನಗದು ಹಣ ರೂ.5430/-ಗಳನ್ನು ವಶಪಡಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Wednesday, November 27, 2013

ಚಾಲಕನ ನಿಯಂತ್ರಣ ತಪ್ಪಿ ಬರೆಗೆ ಡಿಕ್ಕಿಯಾದ ಬಸ್‌:

ದಿನಾಂಕ:24-11-13ರಂದು ಸಮಯ 21-25 ಗಂಟೆಗೆ ಕಣ್ಣನೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ವಿರಾಜಪೇಟೆಯ ಮಾಕುಟ್ಟದ ಭಗವತಿ ದೇವಸ್ಥಾನದ ಬಳಿ ಸ್ವಲ್ಪ ಮುಂದಕ್ಕೆ ವಿರಾಜಪೇಟೆ ಕಡೆಗೆ ಸಮಯ ರಾತ್ರಿ 23-45ಗಂಟೆಗೆ ಬರುತ್ತಿರುವಾಗ್ಗೆ,  ಬಸ್ಸಿನ  ಚಾಲಕನು ಎದುರುಗಡೆಯಿಂದ ಬಂದ ಕಾರಿಗೆ ಸೈಡ್ ಕೊಡವ  ಸಂದರ್ಬದಲ್ಲಿ  ವೇಗವಾಗಿದ್ದ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡ ಭಾಗದ ಬರೆ ದಿಬ್ಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಮುಂಭಾಗದ ಗ್ಲಾಸ್, ಎಡ ಭಾಗದ ಬಾಗಿಲು, ಪುಟ್ ಬೋಡ್ ಹಾಗೂ ವಾಹನದ ಮುಂದಿನ ಎಡ ಭಾಗವು ಪೂರ್ತಿ ಜಖಂ ಆಗಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
 
ಕಾಫಿ ತೋಟಕ್ಕೆ ಅಳವಡಿಸಿದ ಕೆಮರಾಗಳ ಕಳವು: 
 
ಕಾಫಿ ತೋಟಕ್ಕೆ ಆನೆಗಳ ಚಲನವಲನಗಳನ್ನು ವೀಕ್ಷಿಸಲು ಅಳವಡಿಸಿದ ಕೆಮರಾಗಳನ್ನು ಕಳವು ಮಾಡಿದ ಘಟನೆ  ಬಾಳಿಮನಿ ಟಾಟಾ ಕಾಫಿ ಎಸ್ಟೇಟ್‌ನಲ್ಲಿ ನಡೆದಿದೆ.  ಪೊನ್ನಂಪೇಟೆ ಠಾಣಾ ಸರಹದ್ದಿನ ತಿತಿಮತಿ ಗ್ರಾಮದಲ್ಲಿರುವ ಬಾಳುಮನಿ ಟಾಟಾ ಎಸ್ಟೇಟ್‌ನಲ್ಲಿ ಆನೆಗಳ ಚಲನವಲನವನ್ನು ವೀಕ್ಷಿಸುವ ಸಲುವಾಗಿ  ಅಳವಡಿಸಿದ್ದ ರೂ.  38,000 ಬೆಲೆಬಾಳುವ  2 Spy point IR camera ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಸದರಿ ಕ್ಯಾಮಾರಗಳನ್ನು ಎಸ್ಟೇಟ್‌ನ  ಹಿಟಾಚಿ ಚಾಲಕ ರಾಜು ಮತ್ತು ಕ್ಲೀನರ್ ಗಣೇಶ ಎಂಬುವವರಿಗೆ ಗೊತ್ತಿದ್ದು, ಸದರಿಯವರುಗಳೇ ಕಳ್ಳತನ ಮಾಡಿರಬಹುದೆಂದು ಸಂಶಯವಿರುವುದಾಗಿ ಸದರಿ ಎಸ್ಟೇಟಿನ ವೈಲ್ಡ್‌ಲೈಫ್‌ ಕೋ ಆರ್ಡಿನೇಟರ್‌ ಆದ ಕಾರ್ತಿಕ್‌ ಕೃಷ್ಣನ್‌ರವರು ನೀಡಿದ  ದೂರಿನ ಮೇರೆ ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 

 
 

Tuesday, November 26, 2013

ಮನೆಗೆ ನುಗ್ಗಿ ಚಿನ್ನ ಹಾಗು ನಗದು ಕಳ್ಳತನ:

ಮನೆಯ ಮೇಲ್ಛಾವಣಿ ಹಂಚನ್ನು ತೆಗೆದು  ಮನೆಯೊಳಗೆ ನುಗ್ಗಿ ಕಳ್ಳತನ ಮಾಡಿದ ಘಟನೆ ಮಡಿಕೇರಿ ತಾಲೋಕಿನ ಹೊದ್ದೂರಿನಲ್ಲಿ ನಡೆದಿದೆ. ಕೆ.ಬಿ. ರಮೇಶ್‌ ಎಂಬುವವರ ಮನೆಯು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಹೊದ್ದೂರು ಗ್ರಾಮದ ವಾಟೆಕಾಡು ಎಂಬಲ್ಲಿ ಇದ್ದು  ದಿನಾಂಕ 25-11-2013 ರಂದು ಬೆಳಿಗ್ಗೆ ಎಂದಿನಂತೆ ಸಮಯ 08-30 ಎ ಎಂ ಗೆ ಮನೆಗೆ ಬೀಗ ಹಾಕಿ ತನ್ನ ಪತ್ನಿ ಅನಿತ ಕೆ ಆರ್‌ ರವರೊಂದಿಗೆ ಕೂಲಿ ಕೆಲಸಕ್ಕೆ ಹೋಗಿದ್ದು, ಮಗಳು ಕಾಲೇಜಿಗೆ ಹೋಗಿದ್ದು   ಸಮಯ 01-45 ಪಿ ಎಂ ಗೆ ಮನೆಗೆ ಬಂದು ನೋಡಿದಾಗ ಮನೆಯ ಮೇಲ್ಛಾವಣಿಯ ಹಂಚನ್ನು ಯಾರೋ ಕಳ್ಳರು ತೆಗೆದು ಮನೆಯೊಳಗಡೆ ಇಳಿದು 2 ಗ್ರಾಂ ಚಿನ್ನದ ಸರ ಅಂದಾಜು ಮೌಲ್ಯ ರೂ 6000, ಮಂಚದ ಹಾಸಿಗೆಯ ಅಡಿಯಲ್ಲಿ ಇಟ್ಟಿದ್ದ 800 ರೂ ನಗದು ಹಾಗೂ  ಹಳೆಯ ನೋಕಿಯಾ ಮೊಬೈಲ್ ಅಂದಾಜು ಮೌಲ್ಯ 500 ರೂ ಇವುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡುಹೋಗಿದ್ದು ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
ಕ್ಷುಲ್ಲಕ ಕಾರಣಕ್ಕೆ ಮಹಿಳೆಗೆ ಹಲ್ಲೆ:
   ಹಿಂದೆ ಕೊಟ್ಟಿದ್ದ ಕಾಲು ಚೈನನ್ನು ಹಿಂತಿರುಗಿಸುವಂತೆ ಕೇಳಿದ ವಿಚಾರದಲ್ಲಿ ಮಹಿಳೆಯರಿಬ್ಬರು ಸೇರಿ ಮಹಿಳೆಯ ಮೇಲೆ ಹಲ್ಲೆನಡೆಸಿದ ಘಟನೆ ಗೋಣಿಕೊಪ್ಪ ಠಾಣಾ ಸರಹದ್ದಿನ ಸೀಗೆತೋಡು ಎಂಬಲ್ಲಿ ನಡೆದಿದೆ.  ಸೀಗೆತೋಡುವಿನಲ್ಲಿ ವಾಸವಾಗಿರುವ ಶಾಂತಿ ಎಂಬವರು  ದಿನಾಂಕ 24/11/2013 ರಂದು  ಸಾಯಂಕಾಲ  ಗಣೇಶ್ ಎಂಬುವವರ  ಅಂಗಡಿ ಮನೆಗೆ   ಹೋಗಿ ಗಣೇಶ್ ರವರ ಮಗಳು ಸುನೀತಾಳ ಬಳಿ  ಈ ಹಿಂದೆ ತಾನು  ಬೆಳ್ಳಿ ಕಾಲು ಚೈನ್ ಅನ್ನು  ಕೊಟ್ಟಿದ್ದು ಅದನ್ನು ಹಿಂತಿರುಗಿಸುವಂತೆ ಕೇಳಿಕೊಂಡಾಗ ಸುನೀತಾಳು ನಿನಗೆ  ಯಾವ ಕಾಲು ಚೈನ್ ಕೊಡಲು ಇಲ್ಲ ಎಂದು ಹೇಳಿ ಏಕಾಏಕಿ  ಜಗಳ ತೆಗೆದು ಅಲ್ಲೇ ಬಿದ್ದಿದ್ದ ಒಂದು ಕಬ್ಬಿಣದ ರಾಡಿನಿಂದ ಶಾಂತಿಯ  ತಲೆಯ ಭಾಗಕ್ಕೆ ಹಲ್ಲೆ ಮಾಡಿ ರಕ್ತಗಾಯ ಪಡಿಸಿದ್ದು ಅಲ್ಲದೆ ಸ್ಥಳಕ್ಕೆ ಬಂದ ಸುನೀತಾಳ ತಾಯಿ  ಏಕಾ ಏಕಿ  ಕೈಯಿಂದ  ಮುಖಕ್ಕೆ  ಮತ್ತು ಶರೀರದ ಭಾಗಕ್ಕೆ ನೋವನ್ನುಂಟು ಮಾಡಿದ್ದು ಈ ಸಂಬಂಧ ಗೋಣಿಕೊಪ್ಪ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 

Monday, November 25, 2013

ಕೌಟುಂಬಿಕ ಕಲಹ, ಪತ್ನಿಯನ್ನು ಕೊಂದು  ಪತಿಯು ಆತ್ಮಹತ್ಯೆಗೆ ಶರಣು:
 
ಕೌಟುಂಬಿಕ ಕಲಹದಿಂದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕಟ್ಟಿಗೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿ ನಂತರ ನಂತರತ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ  ನಾಪೋಕ್ಲು  ಠಾಣಾ ಸರಹದ್ದಿಗೆ ಸೇರಿದ ಹೊದವಾಡ ಗ್ರಾಮದಲ್ಲಿ ನಡೆದಿದೆ.   ಎನ್‌.ಸಿ. ಸೋಮಯ್ಯ ಎಂಬವರು ತನ್ನ ಪತ್ನಿ  ಹಾಗು ಮಗನ ಜೊತೆಯಲ್ಲಿ ವಾಸವಾಗಿದ್ದು ದಿನಾಂಕ  23-11-2013 ರಂದು  ರಾತ್ರಿ  ಕೌಟುಂಬಿಕ ಕಲಹ  ವಾಗಿ  ಸೋಮಯ್ಯ ನವರು ತನ್ನ ಪತ್ನಿಯನ್ನು ಕಟ್ಟಿಗೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದು ಅಲ್ಲದೆ ತಾನೂ  ವಿಷವನ್ನು ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದು, ನಾಪೋಕ್ಲು ಪೊಲೀಸರು  ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 
ವ್ಯಕ್ತಿಗೆ  ಪತ್ನಿ ಹಾಗು ಪ್ರಿಯಕರನಿಂದ ಹಲ್ಲೆ, ಮನೆಯಿಂದ ಸ್ವತ್ತುಗಳ ಕಳವು:
 
ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕಡಂಗ ಗ್ರಾಮದಲ್ಲಿ ವಾಸವಾಗಿರುವ  ಉಮೇಶ್‌ ಎಂಬ ವ್ಯಕ್ತಿಯ ಪತ್ನಿ ಶ್ರೀಮತಿ ರಾಣ್ಯ ಹಾಗೂ ಆಕೆಯ ಪ್ರಿಯಕರ  ಐವನ್‌  ನಡುವೆ ಅನೈತಿಕ ಸಂಬಂಧ ಇದ್ದು  ಈ ಬಗ್ಗೆ ಕೆಲದಿನಗಳ ಹಿಂದೆ ಉಮೇಶ್‌ರವರು ವಿಚಾರಿಸಿದ ಕಾರಣಕ್ಕೆ  ಅವರನ್ನು ಅವ್ಯಾಚ್ಯವಾಗಿ ಬೈದು ಹಲ್ಲೆ ನಡೆಸಿರುತ್ತಾರೆ.  ಉಮೇಶ್‌ರವರು ಹಾಲಿ ಮಂಗಳೂರಿನಲ್ಲಿ ವಾಸವಾಗಿದ್ದು ದಿ;09-10-2013 ರಂದು   ಕಡಂಗದ ಬಾಡಿಗೆಯ ವಾಸದ ಮನೆಗೆ ಬಂದು  ಬಾಗಿಲು ತೆರೆದು ನೋಡಲಾಗಿ  ಅವರಿಗೆ  ಸೇರಿದ ಕೆಎ-19 ಎ-7772ರ ಸ್ಕೂಟರ್, ಟಿ.ವಿ ಮತ್ತು ಸ್ಟೆಪ್ ಲೈಸರ್, ಪ್ರೀಜ್, ಮಿಕ್ಸಿ, ಟೈಲ್ಸ್ ಕಟ್ಟಿಂಗ್ ಹೋಂ ತಿಯೇಟರ್ ಮಕ್ಕಳ ಶಾಲಾ ಮತ್ತು ಜನನ ಪ್ರಮಾಣ ಪತ್ರದ  ದಾಖಲೆ ಪುಸ್ತಕಗಳು ಹಾಗೂ ಬೆಲೆ ಬಾಳುವ ಗಾರೆ  ಕೆಲಸಕ್ಕೆ ಉಪಯೋಗಿಸುವ ಸಾಮಾಗ್ರಿಗಳು  ಕಾಣೆಯಾಗಿದ್ದು ಇವುಗಳನ್ನು  ಉಮೇಶ್‌ರವರ ಪತ್ನಿ ಹಾಗು ಆಕೆಯ ಪ್ರಿಯಕರ ಐವನ್‌ರವರು     ಕಳವು ಮಾಡಿಕೊಂಡು  ನಾಪತ್ತೆಯಾಗಿರುವುದು ಕಂಡು ಬಂದಿದ್ದು ಉಮೇಶ್‌ರವರು ನೀಡಿದ ದೂರಿನ  ಆದಾರದ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 
ಜೆ.ಸಿ.ಬಿ ವಾಹನ ಕಳವು ಪ್ರಕರಣ ದಾಖಲು:
 
ನಿಲ್ಲಿಸಿದ್ದ ಜೆ.ಸಿ.ಬಿ.ಯೊಂದನ್ನು  ಕಳವು ಮಾಡಿದ  ಘಟನೆ ಮಡಿಕೇರಿ ನಗರದಿಂದ ವರದಿಯಾಗಿದೆ.  ದಿನಾಂಕ 20/11/2013 ರಂದು ರಾತ್ರಿ 11.30 ಗಂಟೆಗೆ ಮಡಿಕೇರಿ ನಗರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಕೊಹಿನೂರ್ ರಸ್ತೆಯಲ್ಲಿರುವ ಪಾಪ್ಯುಲರ್ ಹೋಟೇಲ್ ಪಕ್ಕದ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಈ ಪ್ರಕರಣದ ಫಿರ್ಯಾದಿ ಎಂ.ರವಿಚಂದ್ರನ್ ಎಂಬವರ ಬಾಪ್ತು ಟಿ.ಎನ್-52 ಎಕ್ಸ್-3766 ರ ನಂಬರಿನ ಲೆಕ್ಸೆಲ್ ಕಂಪೆನಿಯ ಜೇ.ಸಿ.ಬಿ ಯಂತ್ರವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಇದರ ಅಂದಾಜು ಬೆಲೆ ರೂ.18,00,000/- ಆಗಬಹುದಾಗಿದ್ದು, ರವಿಚಂದ್ರನ್‌ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ  ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Saturday, November 23, 2013

ಪ್ರೀತಿಸಿ ಮದುವೆಯಾಗದೆ ವಂಚನೆ, ಪ್ರಕರಣ ದಾಖಲು:

ವ್ಯಕ್ತಿಯೊಬ್ಬ ಹುಡುಗಿಯನ್ನು ಪ್ರೀತಿಸಿ ದೈಹಿಕ  ಸಂಪರ್ಕವನ್ನಿಟ್ಟುಕೊಂಡು ಮದುವೆಯಾಗಲು ನಿರಾಕರಿಸಿ ವಂಚಿಸಿದ ಘಟನೆ ಕುಟ್ಟ ಪೊಲೀಸ್‌ ಠಾಣಾ ಸರಹದ್ದಿನ ಕೋತುರು ಗ್ರಾಮದಲ್ಲಿ ನಡೆದಿದೆ. ಕೋತೂರು ಗ್ರಾಮದ ಒಕ್ಕಲಿಗರ ಈ ಕೀರ್ತಿ ಹಾಗೂ ಅದೇ ಗ್ರಾಮದ ನಿವಾಸಿ ಕು: ಪಣಿಎರವರ ಸಂಜು ಎಂಬವರು ಈಗ್ಗೆ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದು,  ಇಬ್ಬರ ನಡುವೆ ಪರಸ್ಪರ ಒಪ್ಪಿಗೆಯ ಮೇರೆ ದೈಹಿಕ ಸಂಪರ್ಕ ನಡೆದು, ಅದರ ಪರಿಣಾಮವಾಗಿ ಸಂಜು  ಗರ್ಭಿಣಿಯಾಗಿದ್ದು, ಕೀರ್ತಿ ಆಕೆಯನ್ನು ದೂಷಿಸಿ ಮದುವೆಯಾಗಲು ನಿರಾಕರಿಸುತ್ತಿದ್ದು ವಂಚಿಸಿರುದಾಗಿ ಕು:  ಸಂಜು ನೀಡಿದ ದೂರಿನ ಮೇರೆಗೆ ಕುಟ್ಟ ಕುಟ್ಟಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ಜೀವನದಲ್ಲಿ ಜಿಗುಪ್ಸೆ ವ್ಯಕ್ತಿಯ ಆತ್ಮಹತ್ಯೆ:
   ವ್ಯಕ್ತಿಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮ ಮನೆಯಲ್ಲಿ  ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ  ಕಳತ್ಮಾಡು ಗ್ರಾಮದಲ್ಲಿ ನಡೆದಿದೆ.  ದಿನಾಂಕ  21-11-2013 ರಂದು ಕಳತ್ಮಾಡು ಗ್ರಾಮದಲ್ಲಿ ವಾಸವಾಗಿದ್ದ  55 ವರ್ಷ ಪ್ರಾಯದ ಚಿಕ್ಕಣ್ಣ ಎಂಬ ವ್ಯಕ್ತಿ ವಿಪರೀತ ಮದ್ಯಪಾನ ಮಾಡಿ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಸಿದ್ದಾಪುರ ಪೊಲೀಸರು ಪ್ರಕರಣವ ನ್ನು ದಾಖಲಿಸಿ ಮುಂದಿನ ಕ್ರಮ ಜಾರುಗಿಸಿರುತ್ತಾರೆ. 
 

Thursday, November 21, 2013

ಬೆಳೆ ಗಿಡ ಕಡಿದು ನಷ್ಟ, ಪ್ರಕರಣ ದಾಖಲು 
     ವಿವಾದದಲ್ಲಿರುವ ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ ಗಿಡಗಳನ್ನು ಕಡಿದು ನಷ್ಟ ಪಡಿಸಿರುವ ಬಗ್ಗೆ ಪ್ರಕರಣ ಸಿದ್ದಾಪುರ ಠಾಣೆಯಲ್ಲಿ ದಾಖಲಾಗಿದೆ. ವಿರಾಜಪೇಟೆ ತಾಲೂಕಿನ ಬೆಟ್ಟಗೇರಿ ಗ್ರಾಮದಲ್ಲಿರುವ ಕನ್ನಡ ಮಠದ ವಶದಲ್ಲಿರುವ 197 ಏಕರೆ ಜಾಗಕ್ಕೆ ಸಂಬಂಧಿಸಿದಂತೆ ಮಠಾಧೀಶರಾದ ಚನ್ನಬಸವ ದೇಶಿಕೇಂದ್ರ ಸ್ವಾಮಿಗಳು ಹಾಗೂ ಕಾವೇರಮ್ಮ ಎಂಬವರುಗಳಿಗೆ ವಿವಾದವಿದ್ದು, ಇತ್ತೀಚೆಗೆ ಕಾವೇರಮ್ಮ, ಯಶೀಲಾ, ಹೇಮಾವತಿ ಎಂಬವರುಗಳು ಸೇರಿ ಮಾನ್ಯ ಉಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಮಘಿಸಿ ಜಾಗಕ್ಕೆ ಪ್ರವೇಶಿಸಿ ಅಲ್ಲಿದ್ದ ಕಾಫಿ ಗಿಡ, ಅಡಿಕೆ ಮರಗಳನ್ನು ಕಡಿದು ಮಠಾಧೀಶರ ಪ್ರತಿನಿಧಿಗೆ ಕೊಲೆ ಬೆದರಿಕೆ ಹಾಕಿರುವುದಾಗಿ ಮಠಾಧೀಶರಾದ ಚನ್ನಬಸವ ದೇಶಿಕೇಂದ್ರ ಸ್ವಾಮಿಗಳು ನ್ಯಾಯಾಲಯಕ್ಕೆ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೀರಿನಲ್ಲಿ ಮುಳುಗಿ ಯುಕ ಸಾವು, ಕೊಲೆ ಶಂಕೆ 
    ನೀರಿನಲ್ಲಿ ಮುಳುಗಿ ಯುವಕಯುವಕನೋರ್ವ ಸಾವಿಗೀಡಾಗಿರುವ ಘಟನೆ ದುಬಾರೆ ಬಳಿ ನಡೆದಿದೆ. ದಿನಾಂಕ 19/11/2013ರಂದು ಮೈಸೂರಿನ ವರುಣಾ ಹೋಬಳಿಯಹೋಬಳಿಯ ಜಂತಗಳ್ಳಿಯ ನಿವಾಸಿ ಜಗದೀಶ ಎಂಬಾತನು ತನ್ನ ಸ್ನೇಹಿತರೊಂದಿಗೆ ಕೊಡಗಿಗೆ ಪ್ರವಾಸಕ್ಕೆಂದು ಬಂದಿದ್ದು, ಸಂಜೆ ವೇಳೆ ದುಬಾರೆಯ ಕಾವೇರಿ ಹೊಳೆಯಲ್ಲಿ ಮುಳುಗಿ ಸಾವಿಗೀಡಾಗಿದ್ದು, ತನ್ನ ಅಣ್ಣನ ಮಗ ಹಾಗೂ ಅವನೊಂದಿಗೆ ಬಂದಿದ್ದ ಸ್ನೇಹಿತರಿಗೆ ವೈಷಮ್ಯವಿದ್ದು ಅವರೇ ಆತನನ್ನು ಹೊಳೆಗೆ ತಳ್ಳಿ ಕೊಲೆ ಮಾಡಿರ ಬಹುದಾಗಿ ಮೃತ ಜಗದೀಶನ ಸಂಬಂಧಿ ನಿಂಗರಾಜು ಎಂಬವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರುಸುಮಾರು 13 ಮಂದಿಯ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


Wednesday, November 20, 2013

ಬಾಗಿಲು ಮುರಿದು, ಹಣ ಆಭರಣ ಕಳವು 
      ಮನೆಯೊಂದರ ಬಾಗಿಲು ಮುರಿದು ಒಳ ಪ್ರವೇಶಿಸಿದ ಕಳ್ಳರು ಹಣ ಮತ್ತು ಆಭರಣಗಳನ್ನು ಕಳವು ಮಾಡಿದ ಪ್ರಕರಣ ಕೊಡ್ಲಿಪೇಟೆ ಬಳಿಯ ಶಿವರಳ್ಳಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 19/11/2013ರಂದು ಶಿವರಳ್ಳಿ ಗ್ರಾಮದ ನಿವಾಸಿ ಮಲ್ಲೇಶ್ ಎಂಬವರು ಕೆಲಸಕ್ಕೆಂದು ತೋಟಕ್ಕೆ ಹೋಗಿದ್ದು ಸಂಜೆ ಮನೆಗೆ ಬರುವಾಗ ಯಾರೋ ಕಳ್ಳರು ಮನೆಯ ಬಾಗಿಲನ್ನು ಮೀಟಿ ತೆರೆದು ಒಳ ಪ್ರವೇಶಿಸಿ ಮನೆಯಲ್ಲಿದ್ದ ರೂ 21,000/- ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ 
    ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ನೆಲ್ಲಿಹುದಿಕೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 17/11/2013ರಂದು ವಾಲ್ನೂರು ತ್ಯಾಗತ್ತೂರು ನಿವಾಸಿ ಶಿವಪ್ಪ ಎಂಬವರು ತಮ್ಮ ಅತ್ತೆಯ ಮನೆಗೆ ಪತ್ನಿ ಹಾಗೂ ಮಕ್ಕಳನ್ನು ನೋಡಲು ಬಂದಿದ್ದು ತನ್ನ ಪತ್ನಿಯನ್ನು ವಾಪಾಸು ಕರೆದುಕೊಂಡು ಹೋಗಲು ಮಾರನೆ ದಿನ ಬೆಳಿಗ್ಗೆ ಹೋದಾಗ ಶಿವಪ್ಪನವರ ಪತ್ನಿಯ ಅಕ್ಕನ ಗಂಡ ಪುಟ್ಟ ಎಂಬಾತನು ಶಿವಪ್ಪನವರೊಂದಿಗೆ ವಿನಾ ಕಾರಣ ಜಗಳವಾಡಿ ಕಲ್ಲಿನಿಂದ ಹೊಡೆದು ಗಾಯಗೊಳಿಸಿರುವುದಾಗಿ ನೀಡಿದ ದುರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, November 19, 2013

ಸ್ಕೂಟರ್ ಅಫಘಾತ, ಮಹಿಳೆಗೆ ಗಾಯ 
     ಸ್ಕೂಟರ್ ಅಫಘಾತವೊಂದರಲ್ಲಿ ಮಹಿಳೆಯೊಬ್ಬರು ಗಾಯಗೊಂಡಿರುವ ಘಟನೆ ನಾಪೋಕ್ಲು ಸಮೀಪದ ಬೇತು ಗ್ರಾಮದಲ್ಲಿ ನಡೆದಿದೆ. ದಿನಾಂಕ 18/11/2013ರಂದು ಬೇತು ಗ್ರಾಮದ ನಿವಾಸಿ ಗೀತಾ ಎಂಬಾಕೆಯು ನಾಪೋಕ್ಲು ಸಂತೆಗೆಂದು ಬಂದಿದ್ದು, ನಂತರ ಮನೆಗೆ ಹೋಗುವಾಗ ತನಗೆ ಪರಿಚಯವಿರುವ ಗಿರೀಶ್ ಎಂಬವರ ಜೊತೆ ಗಿರೀಶ್‌ರವರ ಸ್ಕೂಟರ್ ಸಂಖ್ಯೆ ಕೆಎ-06-ಜೆ-3452ರಲ್ಲಿ ಹೋಗುತ್ತಿರುವಾಗ ಗಿರೀಶ್ ಬೇತು ಗ್ರಾಮದ ಕಾರೆ ಕಾಡು ಎಂಬಲ್ಲಿ ಸ್ಕೂಟರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಮದ ಚಾಲಿಸಿದ ಪರಿಣಾಮ ಗೀತಾರವರು ನಿಯಂತ್ರಣ ತಪ್ಪಿ ಸ್ಕೂಟರಿನಿಂದ ಬಿದ್ದು ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ 
       ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮರಗೋಡು ಗ್ರಾಮದಲ್ಲಿ ನಡೆದಿದೆ. ದಿನಾಂಕ 17/11/2013ರಂದು ಮರಗೋಡು ಗ್ರಾಮದ ಐಮಂಡ ಮಹೇಶ ಎಂಬವರಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವ ಜೇನು ಕುರುಬರ ಮುತ್ತಣ್ಣ ಎಂಬಾತನು ಮಹೇಶರವರ ತೋಟದ ಕಾಫಿ ಗಿಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ಮೂಲತಃ ಪಿರಿಯಾಪಟ್ಟಣ ತಾಲೂಕಿನ ಲಕ್ಷ್ಮಿಪುರ ನಿವಾಸಿಯಾಗಿರುವ ಮುತ್ತಣ್ಣ ವಿಪರೀತ ಮದ್ಯ ಸೇವನೆಯ ಅಭ್ಯಾಸವಿದ್ದು, ಮದ್ಯ ಸೇವಿಸಿದ ಅಮಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಮೃತನ ತಂದೆ ಅಣ್ಣಯ್ಯ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 

Monday, November 18, 2013

ಅಂಗಡಿ ಮುಂದುಗಡೆ ನಿಲ್ಲಿಸಿದ್ದ ಸ್ಟೂಟರ್‌ ಕಳವು:


ಮಡಿಕೇರಿ ನಗರ ಠಾಣಾ ಸರಹದ್ದಿನ ಮಹದೇವಪೇಟೆಯಲ್ಲಿ ಟಿ.ಕಿ. ಜಯನಂದ ಎಂಬವರು ತಮ್ಮ ಬಾಪ್ತು ಮುಂಕಾಂಬಿಕ ಜುವೆಲರ್ಸ್‌ ಅಂಗಡಿಯ ಮುಂದುಗಡೆ ದಿನಾಂಕ 17-11-2013 ರಂದು ಸಮಯ 19.00 ಗಂಟೆಗೆ ತಮ್ಮ ಕೆಎ-19-ಹೆಚ್‌-2927 ರ ಕೈನೆಟಿಕ್ ಹೊಂಡಾ ಸ್ಕೂಟರನ್ನು ನಿಲ್ಲಿಸಿ ಒಳಗೆ ಹೋಗಿ  ಸಮಯ 19.15 ಗಂಟೆಗೆ ಹೊರೆಗೆ ಬಂದು ನೋಡುವಾಗ್ಗೆ ವಾಹನವು ಕಾಣೆಯಾಗಿದ್ದು, ಯಾರೋ ಕಳ್ಳರು  ಕೈನೆಟಿಕ್ ಹೋಂಢಾ ವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಅಂದಾಜು 7000-00 ಆಗಿರುತ್ತದೆ. ಈ ಬಗ್ಗೆ ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 

ಕ್ಷುಲ್ಲಕ ಕಾರಣ ಟಿಪ್ಪರ್‌ ಲಾರಿ ಚಾಲಕ ಹಾಗು ಕ್ಲೀನರ್‌ ಮೇಲೆ ಹಲ್ಲೆ:
 
ಮೊಹಮ್ಮದ್‌ ಇಮ್ತಿಯಾಜ್‌ ಇಂಬವರು ಟಿಪ್ಪರ್‌ ಲಾರಿ ನಂಬರ್‌ ಕೆಎ-43-1146 ರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದು ದಿನಾಂಕ 17-11-2013 ರಂದು ಸದರಿ ಟಿಪ್ಪರ್‌ ಲಾರಿಯಲ್ಲಿ ಕ್ಲೀನರ್‌‌ ಶ್ರೀಧರ ಎಂಬುವವರೊಂದಿಗೆ ಹಿಟಾಚಿ ಯಂತ್ರವನ್ನು ತೆಗೆದುಕೊಂಡು ಮಡಿಕೇರಿಗೆ ಬಂದು ಮಡಿಕೇರಿಯಿಂದ ಅಬ್ಬಿಫಾಲ್ಸ್‌ ಮಾರ್ಗವಾಗಿ ಮಾಂದಲ್‌ಪಟ್ಟಿಗೆ ಹೋಗುತ್ತಿರುವಾಗ್ಗೆ ಸಮಯ  5-00 ಪಿ.ಎಂ.ಗೆ ಸದರಿ ಲಾರಿಯ ಹಿಂದುಗಡೆಯಿಂದ ಬಂದ ಕಪ್ಪು ಬಣ್ಣದ ಮಾರುತಿ ಸ್ವಿಪ್ಟ್‌ ಕಾರಿನ ಚಾಲಕನಿಗೆ ಸೈಡ್‌ ಕೊಟ್ಟಾಗ ಮುಂದೆ ಬಂದ ಕಾರಿನ ಚಾಲಕನು ಕಾರನ್ನು ಲಾರಿಗೆ ಅಡ್ಡಲಾಗಿ ನಿಲ್ಲಿಸಿ ಕಾರಿನ ಚಾಲಕನೊಂದಿಗೆ ಇತರ ಮೂವರು ಕಾರಿನಿಂದ ಕೆಳಗೆ ಇಳಿದು ಬಂದು ಅವ್ಯಾಚ ಶಬ್ದಗಳಿಂದ ಬೈದು ಇಬ್ಬರನ್ನು ಲಾರಿಯಿಂದ ಕೆಳಗೆ ಎಳೆದು ಹಾಕಿ ಒಬ್ಬನು ಡಿಸೇಲ್‌ ಚೆಕ್‌ ಮಾಡುವ ಗೇಜ್‌ನ ಸ್ಟೀಲ್‌ನಂತಿರುವ ವಸ್ತುವನ್ನು  ಕೈಗೆ ಸುತ್ತಿಕೊಂಡು  ಹಲ್ಲೆ ನಡೆಸಿದ್ದು ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
 
ಚಾಲಕನ ನಿಯಂತ್ರಣ ತಪ್ಪಿ ಮಗುಚಿದ ವಾಹನ ಇಬ್ಬರಿಗೆ ಗಾಯ:

 ದಿನಾಂಕ 17/11/2013 ರಂದು   ಕೋಳೇರ ನಾಣಯ್ಯ ಎಂಬವರು ತನ್ನ ಬಾಪ್ತು  ಮಾರುತಿ ಓಮ್ನಿ  ಕಾರು ಸಂಖ್ಯೆ   ಕೆ.  02- ಜೆಡ್ 6067 ರಲ್ಲಿ  ಚಾಲಕ  ಸೂರಪ್ಪನವರು  ಹಾಗೂ ತನ್ನ  ಪತ್ನಿ ಶಾರದ ರೊಂದಿಗೆ ಪ್ರಯಾಣಿಸುತ್ತಿದ್ದಾಗ  ಅರುವತ್ಲೋಕ್ಲು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ  ವಾಹನವನ್ನು ಚಾಲಕ ಸೂರಪ್ಪನವರು ಅತೀ ವೇಗ ಹಾಗೂ ಅಜಾಗ್ರೂಕತೆಯಿಂದ ಓಡಿಸಿದ ಪರಿಣಾಮವಾಗಿ ಚಾಲಕನ ನಿಯಂತ್ರಣ ತಪ್ಪಿ ಟೆಲಿಪೋನ್  ಕಂಬಕ್ಕೆ ಡಿಕ್ಕಿ ಪಡಿಸಿ ಮಾರುತಿ ವ್ಯಾನ್ ಮಗುಚಿಕೊಂಡು ವ್ಯಾನಿನಲ್ಲಿ ಪ್ರಯಾಣಿಸುತ್ತಿದ್ದ  ಕೋಳೇರ ನಾಣಯ್ಯ ಹಾಗು ಅವರ  ಪತ್ನಿ  ಶಾರದರವರಿಗೆ ಗಾಗಗೊಂಡಿದ್ದು ಅಲ್ಲದೆ  ಚಾಲಕ ಸೂರಪ್ಪ  ನವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಗೋಣಿಕೊಪ್ಪ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.