Friday, January 31, 2014

ಅಕ್ರಮ ಗಾಂಜಾ ಪತ್ತೆ:

      ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷರಾದ  ಕರೀಂ ರಾವ್‌ತರ್‌ ರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ  ದಿನಾಂಕ  30-01-2014 ರಂದು ಸಮಯ 7-35 ಪಿ.ಎಂ.ಗೆ ಮಡಿಕೇರಿ ಗ್ರಾಮಾಂತರ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಯವರೊಂದಿಗೆ ಹಾಕತ್ತೂರು ಗ್ರಾಮದ ಕುಮಾರನ್ ಎಂಬುವವರ ಕಾಫಿ ತೋಟದಲ್ಲಿ ದಾಳಿ ಮಾಡಿ  ಅಕ್ರಮವಾಗಿ ಬೆಳೆಸಿದ ಗಾಂಜಾ ಗಿಡಗಳನ್ನು ಪತ್ತೆಹಚ್ಚಿ  6 ಕೆ.ಜಿ. 300 ಗ್ರಾಂ ತೂಕದ 3 ಗಾಂಜಾ ಗಿಡಗಳನ್ನು  ಅಮಾನತ್ತು ಪಡಿಸಿಕೊಂಡು ಆರೋಪಿ ಬಂಧಿಸಿದ್ದು ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
ಜೀವನದಲ್ಲಿ ಜಿಗುಪ್ಸೆ ವ್ಯಕ್ತಿಯ ಆತ್ಮಹತ್ಯೆ:
ಮಡಿಕೇರಿ ತಾಲೋಕು, ಮೂರ್ನಾಡುವಿನ ವೆಂಕಟೇಶ್ವ್ರ ಕಾಲೋನಿಯಲ್ಲಿ ವಾಸವಾಗಿದ್ದ  ಹೆಚ್‌.ಬಿ. ರಮೇಶ (38) ಇವರು ಜೀವನದಲ್ಲಿ ಜಿಗುಪ್ಸೆಗೊಂಡು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು  ಹೆಚ್‌.ಬಿ. ಸರೇಶರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

Friday, January 24, 2014

ಕಾಫಿತೋಟಕ್ಕೆ ಅಕ್ರಮ ಪ್ರವೇಶ, 28 ಸಾವಿರ ಮೌಲ್ಯದ ಕಾಫಿ ಕಳ್ಳತನ:

       ಮಲ್ಲೇಂಗಡ ಸಿ ದೇವಯ್ಯ, ವಿರಾಜಪೇಟೆ ತಾಲೋಕಿನ ತಿತಿಮತಿ-ನೋಕ್ಯ ಗ್ರಾಮದಲ್ಲಿ ತನ್ನ ತಂದೆ ತಾಯಿಯವರೊಂದಿಗೆ ಮತ್ತು ಹೆಂಡತಿ ಮಕ್ಕಳೊಂದಿಗೆ ಒಟ್ಟಿಗೆ ಸುಮಾರು 30 ವರ್ಷದಿಂದ ವಾಸಿಸುತ್ತಿದ್ದು ತಮ್ಮ ಸ್ವಾಧೀನದಲ್ಲಿರುವ ಸರ್ವೇ.ನಂ.159/2ಎ ಕಾಫಿ ತೋಟಕ್ಕೆ ಪಕ್ಕದ ತೋಟದ ಹೆಚ್.ಟಿ.ಸುಂದರ್ ರವರ ಮಗ ಹೆಚ್.ಎಸ್.ಸುಂದರ್ ಸುಮಾರು ಹತ್ತು ಮಂದಿಯನ್ನು ಕರೆತಂದು ಅತಿಕ್ರಮಣ ಪ್ರವೇಶ ಮಾಡಿ ಕೊಲೆಬೆದರಿಕೆ ಹಾಕಿ ಕಾಫಿ ತೋಟದಲ್ಲಿ ಬೆಳೆದು ನಿಂತಿರುವ ಕಾಫಿ ಫಸಲನ್ನು ಕಳವು ಮಾಡಿದ್ದು ಅದರ ಬೆಲೆ ಅಂದಾಜು 28,000/- ರೂ.ಗಳು ಆಗಿರುತ್ತದೆ. ಈ ಘಟನೆಯು . ದಿನಾಂಕ 11/01/2014 ರಂದು ನಡೆದಿದ್ದು, ದೇವಯ್ಯನವರ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ,

ವ್ಯಕ್ತಿಯಿಂದ ಕಾಫಿ ತೋಟಕ್ಕೆ ಬೆಂಕಿ, 20 ಸಾವಿರ ಮೌಲ್ಯದ ಕಾಫಿ ಗಿಡಗಳ ನಾಶ:

        ನಾಪೋಕ್ಲು ಠಾಣಾ ವ್ಯಾಪ್ತಿಯ ಪೇರೂರು ಗ್ರಾಮದ ವಾಸಿ ರವೀಂದ್ರ ಎಂಬುವವರು ಸಾಗರ್‌ ಕಾಫಿ ತೋಟದಲ್ಲಿ ರೈಟರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದುನಿರ್ವಹಿಸುತ್ತಿದ್ದುದಿನಾಂಕ 23-1-2014 ರಂದು ಅದೇ ಗ್ರಾಮದಸನ್ನು ದೇವಯ್ಯ ಎಂಬುವವರು ಯಾವುದೋ ಕಾರಣದಿಂದ ಸಾಗರ್‌ ಕಾಫಿ ತೋಟಕ್ಕೆ ಬೆಂಕಿ ಹಚ್ಚಿದ್ದು, ಸುಮಾರು 20000 ರೂ ಬೆಲೆಯ ಕಾಫಿ ಗಿಡಗಳು ಸುಟ್ಟುಹೋಗಿದ್ದು, ನಾಪೋಕ್ಲು ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಸಾಲದ ಹಿನ್ನೆಲೆಯಲ್ಲಿ ವ್ಯಕ್ತಿ ಯೋರ್ವ ಕೆರೆಗೆ ಹಾರಿ ಆತ್ಮಹತ್ಯೆ:

      ಸಾಲ ನೀಡುವ ಸಮಯದಲ್ಲಿ ಪಡೆದ ಖಾಲಿ ಚಿಕ್ಕುಗಳನ್ನು ವಾಪಾಸ್ಸು ನೀಡದೆ ವಂಚಿಸಿದ್ದರಿಂದ ವ್ಯಕ್ತಿಯೊಬ್ಬರು ಮನನೊಂದು ಕೆರೆಗೆ ಹಾರಿಪ್ರಾಣಬಿಟ್ಟ ಘಟನೆ ಪೊನ್ನಂಪೇಟೆ ಪೊಲೀಸ್‌‌ ಠಾಣಾ ಬೆಮ್ಮತ್ತಿ ಧನುಗಾಲ ಗ್ರಾಮದಲ್ಲಿ ನ ಡೆದಿದೆ. ಧನುಗಾಲ ಗ್ರಾಮದ ನಿವಾಸಿ ಶ್ರೀಮತಿ ಸರ್ವಮಂಗಳ ಎಂಬುವವರ ಪತಿ ರಾಜಶೇಖರ(48) ಇವರು ಅದೇ ಗ್ರಾಮದ ಆಲಿ ಎಂಬುವವರಿಂದ ದಿನಾಂಕ 24-5-2010 ರಂದು 2 ಲಕ್ಷ ಹಣವನ್ನು ಕೃಷಿಕೆಲಸಕ್ಕೆಂದು ಪಡೆದುಕೊಂಡಿದ್ದು ಆಸಮಯದಲ್ಲಿ 2 ಖಾಲಿ ಚೆಕ್ಗಳನ್ನು ನೀಡಿದ್ದುನೀಡಿದ್ದು ಈ ಸಂಬಂಧ ಹಣದ ವ್ಯವಹಾರವನ್ನು ಮಾತಿನ ಮೂಲಕ ಮುಗಿಸಿದ್ದು, ತದನಂತರ ಆಲಿ ರವರು ಮೃತಪಟ್ಟದ್ದು, ಆರೋಪಿಗಳಾದಅವರ ಮಗ ರಹೀಂ ಹಾಗು ಪಿ.ಈ.ಮೈಮುಟ್ಟಿ, ಪಿ.ಈ.ಸೈದಲವಿ, ಅಬ್ಬುಟ್ಟಿ ಮತ್ತು ಶ್ರೀಮತಿ ಥಾಣಿ ಇವರುಗಳು ಸೇರಿ ಸಾಲದ ಸಮಯದಲ್ಲಿ ನೀಡಿದ ಖಾಲಿ ಚೆಕ್ಕನ್ನು ಬ್ಯಾಂಕಿಗೆ ಹಾಕಿ ಕೇಸನ್ನು ದಾಖಲು ಮಾಡುವ ಬಗ್ಗೆ ಲಾಯರ್‌ ನೋಟೀಸ್‌ನ್ನು ರಾಜಶೇಖರನವರಿಗೆ ನೀಡಿದ್ದು, ಅಲ್ಲದೆ ಮೇಲಿನ ಆರೋಪಿಗಳುದೂರವಾಣಿ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಚಾರವಾಗಿ ರಾಜಶೇಖರ ಮನನೊಂದು ದಿನಾಂಕ 23-1-2014 ರಂದು ರಾತ್ರಿ ಮನೆಯ ಹತ್ತಿರ ವಿರುವ ಕೆರೆಗೆ ಹಾರಿ ಪ್ರಾಣವನ್ನು ಬಿಟ್ಟಿದ್ದು, ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿ ಸಿಮುಂದಿನ ಕ್ರಮ ಕೈಗೊಂಡಿರುತ್ತಾರೆ.

Thursday, January 23, 2014

ಜೀವನದಲ್ಲಿ ಜಿಗುಪ್ಸೆ ವೃದ್ದೆಯ ಆತ್ಮಹತ್ಯೆ:


     ಕ್ಯಾನ್ಸ್‌ರ್‌ ಕಾಯಿಲೆಯಿಲೆಯಿಂದ ಬಳಲುತ್ತಿದ್ದ   ವೃದ್ದೆಯೊಬ್ಬರು ಕೆರೆಗೆ ಹಾಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಬಿಳುಗುಂದ ಗ್ರಾಮದಲ್ಲಿ ನಡೆದಿದೆ.   ಶ್ರೀಮತಿ ಗೌರಮ್ಮ (60) ಇವರು ವಿರಾಜಪೇಟೆ ತಾಲೋಕಿನ ಬಿಳುಗುಂದ ಗ್ರಾಮದಲ್ಲಿ ನೆಲೆಸಿದ್ದು,  ಕ್ಯಾನ್ಸ್‌ರ್‌ ಕಾಯಿಲೆಗೆ ತುತ್ತಾಗಿದ್ದು  ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 22-1-2014 ರಂದು  ಮನೆಯ ಪಕ್ಕದಲ್ಲಿ ಇದ್ದ ಕೆರೆಗೆ ಹಾರಿ  ಆತ್ಮಹತ್ಯೆ ಮಾಡಿಕೊಂಡಿದ್ದು  ಶ್ರೀಮತಿ ಯಮುನಾ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ. 


ಶಾಲೆಗೆ ಹೋದ ಇಬ್ಬರು ಹುಡುಗರ ಕಾಣೆ:

     ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ  ಅಮ್ಮತ್ತಿಯಲ್ಲಿರುವ  ಗುಡ್‌ಶಪಡ್‌ ಎಂಬ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಕೆ.ಪಿ. ಕ್ರುಂಬಯ್ಯ, 14 ವರ್ಷ, ತಂದೆ ಕೆ.ಯು. ಪೂಣಚ್ಚ, ಕಣ್ಣಂಗಾಲ ವಾಸ  ಹಾಗೂ ಅಬ್ದುಲ್‌ ರಿಹಾನ್‌, 15 ವರ್ಷ, ತಂದೆ ಅಬ್ದುಲ್‌ಬ್ದುಲ್‌ರೆಹಮಾನ್‌, ಬಿಳುಗುಂದ ಗ್ರಾಮದಲ್ಲಿ ವಾಸ ಇವರು ದಿನಾಂಕ 22-1-2014 ರಂದು ಎಂದಿನಂತೆ ಬೆಳಿಗ್ಗೆ ಶಾಲೆಗೆ ಹೋಗಿದ್ದು, ನಂತರ ಮನೆಗೆ ಬಾರದೆ ಕಾಣೆಯಾಗಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 

ನೇಣುಬಿಗಿದು ಕೊಂಡು  ವ್ಯಕ್ತಿಯ ಸಾವು:

     ಹುಣಸೂರು ತಾಲೋಕು, ಚಿಕ್ಕಬೀಚನಹಳ್ಳಿ ಗ್ರಾಮದ ನಿವಾಸಿ  ಮದೇಗೌಡ ಎಂಬುವವರ ಮಗ ಮಹೇಶ (26)ನು ದಿನಾಂಕ 18-1-2014 ರಂದು ಸಂಗಡಿಗರೊಂದಿಗೆ ಕೊಡಗು ಜಿಲ್ಲೆಯ ಮುರ್ನಾಡು- ಹೊದ್ದೂರು ಗ್ರಾಮದಲ್ಲಿ ನೆಲೆಸಿರುವರು ಮಂಡೇಪಂಡ ರಮೇಶ್‌ ಎಂಬುವವರ ಕಾಫಿತೋಟದಲ್ಲಿ ಕಾಫಿ ಕುಯ್ಯುವ ಕೆಲಸಕ್ಕೆ ಬಂದಿದ್ದು, 22-1-2014 ರಂದು ತಾನು ವಾಸವಾಗಿದ್ದ ಲೈನು ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆಯ್ಮಹತ್ಯೆ ಮಾಡಿಕೊಂಡಿದ್ದು,  ಮೃತನ ತಂದೆ ಮಾದೇಗೌಡ ರವರು ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರಿಗೆ ದೂರನ್ನು ನೀಡಿ  ತನಗೆ ತನ್ನ ಮಗ ಸತ್ತಿರುವ ಬಗ್ಗೆ ಸಂಶಯವಿರುವುದಾಗಿ ತಿಳಿಸಿದ್ದು,  ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಜೀವನದಲ್ಲಿ ಜಿಗುಪ್ಸೆ ಯುವಕನ ಆತ್ಮಹತ್ಯೆ:

     ಪೊನ್ನಂಪೇಟೆ ಠಾಣಾ ಸರಹದ್ದಿನ ತೊರೆಬೀದಿಯಲ್ಲಿ ವಾಸವಾಗಿರುವ ಟಿ. ಕೃಷ್ಣ ಎಂಬುವವರ ಮಗ ಉಮೇಶ್‌ ಎಂಬಾತನು ಜೀವದಲ್ಲಿ ಜಿಗುಪ್ಸೆಗೊಂಡು ಯಾವುದೊ ಕ್ರಿಮಿನಾಶಕವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

Wednesday, January 22, 2014

ಹಣದ ವಿಚಾರ , ವ್ಯಕ್ತಿಯ ದಾರಿ ತಡೆದು ಹಲ್ಲೆ:


     ಹಣದ ವ್ಯವಹಾರದಲ್ಲಿ  ವ್ಯಕ್ತಿಯೊಬ್ಬರರನ್ನು ಮೂರು ಜನರು ಸೇರಿ ದಾರಿ ತಡೆದು ಹಲ್ಲೆ ನಡೆಸಿದ ಘಟನೆ ಭಾಗಮಂಡಲ ಠಾಣಾ ಸರಹದ್ದಿನ ಚೇರಂಗಾಲ ಗ್ರಾಮದಲ್ಲಿ ನಡೆದಿದೆ.   ಕೆಂಪುರಾಶಿಕೋಟೆ -ಚೇರಂಗಾಲದ ನಿವಾಸಿ ಹೆಚ್‌.ಎ. ರಾಜ  ಇವರು ದಿನಾಂಕ 19-1-2014 ರಂದು ರಾತ್ರಿ 8-00 ಗಂಟೆಯ ಸಮಯದಲ್ಲಿ ತನ್ನ ಮನೆಯ ಕಡೆ ನಡೆದುಕೊಂಡು ಹೋಗುತ್ತಿರುವ ವೇಳೆ ಅದೇ ಗ್ರಾಮದ  ಪ್ರಕಾಶ, ಬೋಜ ಹಾಗೂ ಉಮೇಶ ಎಂಬುವವರುಗಳು ಸೇರಿ  ರಾಜರವರ ರಾರಿ ತಡೆದು  ಹಣದ ವಿಚಾರದಲ್ಲಿ ಜಗಳ ಮಾಡಿ ಕೈ ಹಾಗು ಕತ್ತಿಯಿಂದ ಹಲ್ಲೆ ನಡೆಸಿದ್ದು,  ಹೆಚ್‌.ಎ. ರಾಜ ರವರ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿರುತ್ತಾರೆ

ಪಾದಾಚಾರಿಗೆ  ಸ್ಕೂಟರ್‌ ಡಿಕ್ಕಿ:

     ನಡೆದುಕೊಂಡು ಹೋಗುತ್ತಿದ್ದ  ಮಹಿಳೆಯೊಬ್ಬರಿಗೆ  ಸ್ಕೂಟರ್‌ ಡಿಕ್ಕಿಯಾದ ಪರಿಣಾಮ ಗಾಯಗಳಾಗಿ ಆಸ್ಪತ್ರೆಗೆ ದಾಖಲಾದ ಘಟನೆ ವಿರಾಜಪೇಟೆ ನಗರದ  ಮುಖ್ಯ ರಸ್ತೆಯಲ್ಲಿ ನಡೆದಿದೆ.  ದಿನಾಂಕ 21-1-2014 ರಂದು ಬೆಳಿಗ್ಗೆ 9-45 ಗಂಟೆಗೆ  ಶ್ರೀಮತಿ  ಸಿ.ರೋಸಮ್ಮ,(58) ಹಣ್ಣಿನ ವ್ಯಾಪಾರಿ, ವಿದ್ಯಾನಗರ- ವಿರಾಜಪೇಟೆ ನಿವಾಸಿ ಇವರು   ವಿರಾಜಪೇಟೆ  ನಗರದ ಶ್ರೀ ಧುರ್ಗಾ ಮೆಡಿಕಲ್ಸ್‌ ಮುಂಡುಗದೆ  ರಸ್ತೆಯಲ್ಲಿ ನಡೆದುಹೊಂಡು ಹೋಗುತ್ತಿರುವಾಗ  ಕೆಎ-12-ಕೆ-ಕೆಎ-12-ಕೆ-9389ಕೆಎ-12-ಕೆ-9389 ರ ಆ್ಯಕ್ವಿವ್‌ ಹೋಂಡಾ ರ ಸವಾರ ಸಚಿನ್‌ ಎಂಬಾತನು ಸ್ಕೂಟರ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ರೋಸಮ್ಮನವರಿಗೆ ಡಿಕ್ಕಿ ಪಡಿಸಿದ್ದು , ರೋಸಮ್ಮನವರ  ಎದೆ  ಮತ್ತು ಕಾಲಿಗೆ ಗಾಯವಾಗಿದ್ದು, ವಿರಾಜಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ.  ಈ ಬಗ್ಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ಮೋಟಾರ್‌ ಸೈಕಲ್‌ಗೆ ಜೀಪು ಡಿಕ್ಕಿ ಸವಾರನಿಗೆ ಗಾಯ:

     ಈ ದಿನ  ಬೆಳಿಗ್ಗೆ 8-45 ಗಂಟೆಯ ಸಮಯದಲ್ಲಿ  ಆನಂದಪುರ ಪುಲಿಯೇರಿ ಗ್ರಾಮದ ನಿವಾಸಿಯಾದ ಜಿ ಮಹೇಂದ್ರ ತಂದೆ ಶೇಖರ್  ಪ್ರಾಯ 24 ವರ್ಷ, ರವರು  ತಮ್ಮ ಬಾಪ್ತು ಮೋಟಾರ್ ಬೈಕ್ ನಂ ಕೆಎ-51  ಎಲ್ -5847ರಲ್ಲಿ ಸಿದ್ದಾಪುರ ನಗರಕ್ಕೆ ಹೋಗುತ್ತಿರುವಾಗ್ಗೆ  ಪಳ್ಳಕೆರೆಗೆ ಹೋಗುವ ಸಾರ್ವಜನಿಕ ರಸ್ತೆಗೆ ಸಮಯ 08.50 ಗಂಟೆಗೆ ತಲುಪಿದಾಗ ಎದುರುಗಡೆಯಿಂದ ಕೆಎ-10  ಎಂ 1116ರ ಜೀಪಿನ ಚಾಲಕನು  ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮೊಟಾರ್ ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ  ಜಿ. ಮಹೇಂದ್ರರವರ  ಬಲ ಕಾಲಿಗೆ ಮತ್ತು ಮುಖಕ್ಕೆ ಗಾಯವಾಗಿದ್ದು  ಸಿದ್ದಾಪುರ ಪೊಲೀಸರು  ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 

Tuesday, January 21, 2014


ಮೆನಗೆ ಅಕ್ರಮ ಪ್ರವೇಶ ಮಾಡಿ ಹುಡುಗಿಯ ಮಾನಭಂಗಕ್ಕೆ ಯತ್ನ:

ಕು: ಎನ್‌.ಕೆ ಮಿಶ್ರಿಯಾ ಪ್ರಾಯ 17 ವರ್ಷ, ಇವರು ಸಿದ್ದಾಪುರ ಠಾಣಾ ವ್ಯಾಪ್ತಿಯ ಚೆನ್ನನಕೋಟೆ ಗ್ರಾಮಲ್ಲಿ ವಾಸವಾಗಿದ್ದು   ದಿನಾಂಕ 18.01.2014ರಂದು ಆಕೆಯ ತಂದೆ ಬಟ್ಟೆ  ವ್ಯಾಪಾರಕ್ಕಾಗಿ ಮೈಸೂರಿಗೆ ಹೋಗಿದ್ದು ಮನೆಯಲ್ಲಿ ಅವರ  ತಾಯಿ, ಅಣ್ಣ ಮತ್ತು ತಂಗಿಯವರು ಮನೆಯಲ್ಲಿದ್ದು ರಾತ್ರಿ ಊಟ ಮಾಡಿ ಮಲಗಿಕೊಂಡಿದ್ದು  ಆಕೆಯು ಮನೆಯ  ಮುಂಭಾಗದ ಹಾಲ್ ನಲ್ಲಿ  ಮಲಗಿಕೊಂಡಿದ್ದು ಸಮಯ 12.30 ಗಂಟೆಗೆ ಯಾರೋ ಅವರ  ಮನೆಯ  ಬಾಗಿಲು ತಟ್ಟಿದ್ದ ಶಬ್ದ ಕೇಳಿ  ಅವರ ತಂದೆ ಬಂದಿರ ಬಹುದು ಎಂದು  ಬಾಗಿಲು ತೆರೆಯುವಾಗ ಅವರುಗಳಿಗೆ  ಪರಿಚಯವಿದ್ದ ಕೊಂಡಂಗೇರಿ ನಿವಾಸಿಯಾದ ಜಮಲ್ ಮತ್ತು ಅವನ ಸ್ನೇಹಿತನಾದ ಸಂಷೀರ್  ಇದ್ದು ಏನು ಎಂದು ಕೇಳುವಷ್ಠರಲ್ಲಿ ಜಮಲನು ಆಕೆಯ ಕೈಯನ್ನು ಹಿಡಿದು ಬಲತ್ಕಾರವಾಗಿ ಎಳೆದು ಕೊಂಡು  ಮನೆಯ ಪಕ್ಕದ ಕಾಫಿ ತೋಟಕ್ಕೆ ಹೋಗಿ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದು ಆಕೆ ಬೊಬ್ಬೆ  ಹಾಕಿದಾಗ ಆಕೆಯ  ತಾಯಿ ಅಣ್ಣ ತಮ್ಮಂದಿರು  ಮತ್ತು ಪಕ್ಕದ ಮನೆಯ ನಿವಾಸಿಯಾದ ಲಕ್ಷ್ಮಣ  ರವರು ಸ್ಥಳಕ್ಕೆ ಬಂದಿದ್ದು  ಜಮಲ್  ಮತ್ತು ಅವನ ಸ್ನೇಹಿತ ಸಂಶೀರ್ ಸ್ಥಳದಿಂದ  ಓಡಿ ಹೋಗಿರುವ ಕುರಿತಯ ಎನ್‌.ಕೆ. ಮಿಶ್ರಿಯಾ ಸಿದ್ದಾಪುರ  ಪೊಲೀಸರಿಗೆ ದೂರನ್ನು ನೀಡಿದ್ದು ಅದರಂತೆ ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
Monday, January 20, 2014


ಅಪರಿಚಿತ ವ್ಯಕ್ತಿಯ ಶವ ಪತ್ತೆ, ಪ್ರಕರಣ ದಾಖಲು:

     ಅಪರಿಚಿತ ವ್ಯಕ್ತಿಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕಾಟಕೇರಿ ಗ್ರಾಮದಿಂದ ವರದಿಯಾಗಿದೆ.  ಕಾಟಕೇರಿ ಗ್ರಾಮದ ನಿವಾಸಿ ಚೆಟ್ಟೋಳಿರ ನಂದಕುಮಾರ್‌ ಈ ದಿನ ಸಮಯ ಬೆಳಿಗ್ಗೆ 08-15 ಗಂಟೆಗೆ ಮನೆಯಲ್ಲಿರುವಾಗ ಗ್ರಾಮದವರಾದ ಅರೆಯಡ ರಘುರವರು ಫೋನ್ ಮಾಡಿ ತಮಗೆ ಸೇರಿದ ಕಾಡು ಜಾಗದಲ್ಲಿ ಯಾರೋ ಅಪರಿಚಿತ ವ್ಯಕ್ತಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟಿರುವುದಾಗಿ ತಿಳಿಸಿದ ಮೇರೆಗೆ ಹೋಗಿ ನೋಡಲಾಗಿ ಅವರ ಬಾಪ್ತು ಕಾಡು ಜಾಗದಲ್ಲಿ ಒಂದು ಕಾಡು ಮರದ ಕೊಂಬೆಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಯಾವುದೋ ಅಪರಿಚಿತ ಅಂದಾಜು 30 ವರ್ಷದ ಗಂಡಸಿನ ಮೃತ ಶರೀರ ಇರುವುದು ಕಂಡುಬಂದಿದ್ದುಈ ಸಂಬಂಧ ಸದರಿಯವರ ಮಾಹಿತಿ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

 

ದುಡುಕಿನ ಚಾಲನೆ ವಾಹನದಿಂದ ಬಿದ್ದು ವ್ಯಕ್ತಿಗೆ ಗಾಯ: 

     ದಿನಾಂಕ 19-01-2014 ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕೊಯನಾಡುವಿನಲ್ಲಿ  ಇಬ್ರಾಹಿಂರವರು ಮ್ಯಾಕ್ಸಿಕ್ಯಾಬ್‌ ವ್ಯಾನ್‌ ನಂಬರ್‌ ಕೆಎ-21-5666 ರಲ್ಲಿ ಬಂದು ವ್ಯಾನಿನಿಂದ ಕೆಳಗೆ ಇಳಿಯುತ್ತಿರುವಾಗ್ಗೆ ಸದರಿ ವ್ಯಾನಿನ ಚಾಲಕ ಕೆ.ಎಸ್‌‌.ಬಾಲರಾಜುರವರು ವ್ಯಾನನ್ನು ನಿರ್ಲಕ್ಷ್ಯತನದಿಂದ ಚಾಲನೆ ಮಾಡಿದ ಪರಿಣಾಮ ವ್ಯಾನಿನಿಂದ ಕೆಳಗೆ ಇಳಿಯುತ್ತಿದ್ದ ಇಬ್ರಾಹಿಂರವರು ರಸ್ತೆಗೆ ಬಿದ್ದು ಇಬ್ರಾಹಿಂರವರ ತಲೆಗೆ, ಬಲಕೈಗೆ ಗಾಯ ನೋವುಂಟಾಗಿದ್ದು ಇಬ್ರಾಹಿಂರವರನ್ನು ಚಿಕಿತ್ಸೆಯ ಬಗ್ಗೆ ಸಂಪಾಜೆ, ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಗೆ ದಾಖಲಿಸಿದ್ದು  ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸರುಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 

 

ಪಾದಾಚಾರಿಗೆ ಬೈಕ್‌ ಡಿಕ್ಕಿ : 

     ತಿತಿಮತಿ ಗ್ರಾಮದ ನಿವಾಸಿ ಜೇನುಕುರುಬರ ರವಿ ಎಂಬುವವರು ದಿನಾಂಕ 19-1-2014 ರಂದು ಕಲ್ಲಳ್ಳ ಗ್ರಾಮದ ಕೃಷ್ಣಾ ಎಂಬುವರ ಅಂಗಡಿ ಮುಂದೆ ಸಾರ್ವಜನಿಕ ರಸ್ತೆಯಲ್ಲಿ  ನಡೆದುಕೊಂಡು ಹೋಗುತ್ತಿರುವಾಗ  ತಿತಿಮತಿ ಕಡೆಯಿಂದ ಕೆಎ-41 ಎಸ್‌-5685ರ ಮೋಟಾರ್‌ ಸೈಕಲ್‌ ಚಾಲಕ  ಮೋಟಾರ್‌ ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ರವಿಯವರಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿಯವರು ಗಾಯಗೊಂಡಿದ್ದು  ಗೋಣಿಕೊಪ್ಪಸರ್ಕಾರಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,  ಪೊನ್ನಂಪೇಟೆ ಪೊಲೀಸರು ಪ್ತಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.    

 

ಕ್ಷುಲ್ಲಕ ಕಾರಣಕ್ಕೆ  ಪರಸ್ಪರ ಹಲ್ಲೆ :

     ಈ ದಿನಾಂಕ 19-01-2014 ರಂದು ಚೆಂಬು ಗ್ರಾಮದಲ್ಲಿ  ಚೆಂಬು ಗ್ರಾಮದ ನಿವಾಸಿ ಎಸ್‌.ಎನ್‌. ದಿನೇಶ್‌ ರವರು  ಕ್ರಿಕೆಟ್ ಪಂದ್ಯಾಟಕ್ಕೆ ಹೋಗಿದ್ದು ಅವರ ಟೀಮಿಗೂ ಹಾಗೂ ಅದೇ ಗ್ರಾಮದ ನಿವಾಸಿ ಅಬ್ದುಲ್ ವಾಜಿದ್‌ ಟೀಮಿಗೂ ಆಟ ಇದ್ದಿದ್ದು ಅಬ್ದುಲ್ ವಾಜಿದ್‌ರವರ ಟೀಮಿನವರು ಆಟದ ವಿಚಾರದಲ್ಲಿ ಜಗಳವಾಗಿದ್ದು, ಆಟ ಮುಗಿಸಿ ಅಪರಾಹ್ನ 3-30 ಗಂಟೆಯ ಸಮಯದಲ್ಲಿ  ಎರಡೂ ಗುಂಪಿನವರು ಪರಸ್ಪರ ಹೊಡೆದಾಡಿಕೊಂಡಿದ್ದು ಮಡಿಕೇರಿ ಗ್ರಾಮಾಂತರ  ಪೊಲೀಸರು  ಪ್ರತ್ಯೇಕ ಎರಡು ಪ್ರಕರಣಗಳನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂರುತ್ತಾರೆ. 


ಸ್ಕೂಟರ್‌ಗೆ  ಕಾರು ದಿಕ್ಕಿ ಒಬ್ಬನಿಗೆ ಗಾಯ:

     ದಿನಾಂಕ 19-1-2014 ರಂದು  ಬಿ.ಎಸ್‌. ಹರೀಶ್‌ ಎಂಬುವವರು  ಸ್ಕೂಟರ್‌ನಲ್ಲಿ  ಹೊಸೂರು ಬೆಟ್ಟಗೇರಿ ಮಾರ್ಗವಾಗಿ  ಗೋನಿಕೊಪ್ಪಕ್ಕೆ ಹೋಗುತ್ತಿರುವಾಗ  ಬಿ.ಸಿ. ಸುಗಂಧ ಎಂಬುವವರು ತಮ್ಮ ಬಾಪ್ತು  ಕೆಎ-02-ಪಿ-7553ರ ಕಾರನ್ನು ಅತೀ ವೇಗ ಹಾಗು ಅಜಾಗ್ರೂಕತೆಯಿಂದ  ಓಡಿಸಿಕೊಂಡು ಬಂದು  ಹರೀಶ್‌ರವರ ಸ್ಕೂಟರ್‌ಗೆ  ಡಿಕ್ಕಿಪಡಿಸಿದ ಪರಿಣಾಮ  ಹರೀಶ್‌ರವರು ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

 

Saturday, January 18, 2014


ಹುಡುಗ ಕಾಣೆ:

     ಕಾಲೇಜಿಗೆ ಹೋದ ಹುಡಗನೊಬ್ಬ ಮನೆಗೆ ಬಾರದೆ ಕಾಣೆಯಾಗಿರುವ ಘಟನೆ ವಿರಾಜಪೇಟೆ ತಾಲೋಕಿನ ಕಳತ್ಮಾಡು ಗ್ರಾಮದಲ್ಲಿ ನಡೆದಿದೆ.   ಸಿದ್ದಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯ  ಕಳತ್ಮಾಡು ಗ್ರಾಮದ ನಿವಾಸಿ ಕೆ. ಈಶ್ವರ ಎಂಬುವವರ ಮಗ 18 ವರ್ಷ ಪ್ರಾಯದ ಮುತ್ತುಕುಮಾರ್‌ ದಿನಾಂಕ 16-1-2014 ರಂದು ಎಂದಿನಂತೆ ಕಾಲೇಜಿಗೆ ಹೋಗಿಬರುವುದಾಗಿ ತಾನು ವ್ಯಾಸಂಗ ಮಾಡುತ್ತಿರುವ ಗೋಣಿಕೊಪ್ಪಲಿನ ಕಾವೇರಿ ಕಾಲೇಜಿಗೆ ಹೋಗಿದ್ದು ತದನಂತರ ಮನೆಗೆ ಮರಳಿ ಬಾರದೆ ಕಾಣೆಯಾಗಿರುತ್ತಾರೆ.   ಈ ಸಂಬಂಧ  ಕಾಣೆಯಾದ ಹುಡುಗನ ತಂದೆ ಕೆ.ಈಶ್ವರ ರವರು ನೀಡಿದ ದೂರಿನ ಮೇರೆಗೆ  ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನಕ್ರಮ ಕೈಗೊಂಡಿರುತ್ತಾರೆ. 

ವೈದ್ಯರ ಮೇಲೆ  ಹಲ್ಲೆ, ಕ್ಲೀನಿಕ್‌ಮುಚ್ಚಿಸುವ ಬೆದರಿಕೆ:

     ಬಾಲಕಿಗೆ ಒಬ್ಬಳಿಗೆ  ಚಿಕಿತ್ಸೆ ನೀಡಿದ ವಿಚಾರದಲ್ಲಿಕೆಲವು  ವ್ಯಕ್ತಿಗಳು ಖಾಸಗಿ ಕ್ಲೀನಿಕ್‌ಗೆ ನುಗ್ಗಿ ವೈದ್ಯರ ಮೇಲೆ ಹಲ್ಲೆ ನಡೆಸಿ ಕ್ಲೀನಿಕ್‌ನ್ನು ಮುಚ್ಚುವ ಬೆದರಿಕೆ ಹಾಕಿರುವ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಬಾಳೆಲೆಯಲ್ಲಿ ನಡೆದಿದೆ.  ಡಾ||.ಶ್ರೀಪತಿಭಟ್, ಎಂಬುವವರು ಬಾಳೆಲೆ ಟೌನ್‌ನಲ್ಲಿ  ಶ್ರೀದುರ್ಗಾ ಕ್ಲಿನಿಕ್‌ನ್ನು ಕಳೆದ 13 ನಡೆಸುತ್ತಿದ್ದು ದಿನಾಂಕ 06/01/2014 ರಂದು ಸಂಜೆ ಪ್ರಾಯ 14 ವರ್ಷದ ಕು.ರೇಚಲ ಎಂಬ ಬಾಲಕಿಗೆ  ತಲೆನೋವು, ಜ್ವರ, ಮೈಕೈ ನೋವಿಗಾಗಿ  ಮಾತ್ರೆಗಳನ್ನು ಎರಡು ದಿನಕ್ಕೆ ಕೊಟ್ಟಿದ್ದು  ಆ ನಂತರ ಅವರು ಪೊನ್ನಂಪೇಟೆ ಆಸ್ಪತ್ರೆ ಮತ್ತು ಗೋಣಿಕೊಪ್ಪ ಲೈಫ್‌ಲೈನ್ ಆಸ್ಪತ್ರೆಗಳಲ್ಲಿ ಎರಡು ದಿವಸ ಚಿಕಿತ್ಸೆ ಪಡೆದು ನಂತರ ಬೆಂಗಳೂರು ಮಣಿಪಾಲ ಆಸ್ಪತ್ರೆಗೆ ದಿನಾಂಕ 13/01/2014 ರಂದು ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ.. ಈ ವಿಚಾರವಾಗಿ ದಿನಾಂಕ 14/01/2014 ರಂದು ಸಮಯ ಸುಮಾರು 4.45 ಕ್ಕೆ ರಾಜಪುರ ಬಾಳೆಲೆಯ ವಾಸಿಗಳಾದ ರಂಜನ್ ಚಂಗಪ್ಪ, ಪಾರುವಂಗಡ ಕಿಶನ್, ಆದೇಂಗಡ ಪ್ರಶಾಂತ್ ಎಂಬವರು ಡಾ||.ಶ್ರೀಪತಿಭಟ್ ರವರ   ಚಿಕಿತ್ಸಾಲಯಕ್ಕೆ ಬಂದು ತಕರಾರು ಎಬ್ಬಿಸಿ ದೈಹಿಕವಾಗಿ ಎಳೆದಾಡಿ ಚಿಕಿತ್ಸಾಲಯದಿಂದ ಹೊರಗೆ ಎಳೆದು ಹಾಕಿ ತಲೆಗೆ, ಕುತ್ತಿಗೆ, ಕಾಲಿಗೆ ಹೊಡೆದು ಕು.ರೇಚಲಳ ಖರ್ಚು ವೆಚ್ಚ 1 ಲಕ್ಷವನ್ನು ಭರಿಸಬೇಕು, ಇಲ್ಲವಾದಲ್ಲಿ ಬಾಳೆಲೆಯಲ್ಲಿ ಚಿಕಿತ್ಸಾಲಯವನ್ನು ಮುಂದುವರಿಸಲು ಬಿಡುವುದಿಲ್ಲ. ಬಾಳೆಲೆಯಲ್ಲಿ ನಿಮ್ಮನ್ನು ಮೆರವಣಿಗೆ ಮಾಡುತ್ತೇವೆ ಎಂದು ಡಾ||.ಶ್ರೀಪತಿಭಟ್ ರವರಿಗೆಬೆದರಿಕೆ ಹಾಕಿದ್ದು ಈ ಸಂಬಂಧ ಡಾ||.ಶ್ರೀಪತಿಭಟ್ ರವರು ನೀಡಿದ ದೂರಿನಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ತೆಂಗಿನ ಮರದಿಂದ ಬಿದ್ದು ವ್ಯಕ್ತಿಯ ದುರ್ಮರಣ:
     ಎಳೆನೀರು ಕುಯ್ಯುವ  ಸಂದರ್ಭದಲ್ಲಿ ವ್ಯಕ್ತಿಯೊಬ್ಬರು  ಆಕಸ್ಮಿಕವಾಗಿ ಜಾರಿ ತೆಂಗಿನ ಮರದಿಂದ ಬಿದ್ದು ಮೃತಪಟ್ಟಿರುವ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮದೆನಾಡು ಗ್ರಾಮದ ಜೋಡುಪಾಲ ಎಂಬಲ್ಲಿ ನಡೆದಿದೆ.   ಮಡಿಕೇರಿ ತಾಲೋಕಿನ  ಮದೆನಾಡು ಗ್ರಾಮದಲ್ಲಿ ವಾಸವಾಗಿರುವ ಶ್ರೀ ಮತಿ ಭಾಗ್ಯಲಕ್ಷ್ಮಿ ಎಂಬುವವರ ಪತಿ ವಿಶ್ವನಾಥ(30) ರವರು ದಿನಾಂಕ 17-1-2014 ರಂದು  ತೆಂಗಿನ ಮರದಿಂದ ಎಳೆನೀರು ತೆಗೆಯಲೆಂದು ಮರಕ್ಕೆ ಹತ್ತಿ  ಆಕಸ್ಮಿಕವಾಗಿ ಕಾಲು ಜಾರಿ  ಮರದಿಂದ ಕೆಳಗೆ ಬಿದ್ದು ತೀವ್ರಸ್ವರೂಪದ ಗಾಯಗಳಾಗಿ ಚಿಕಿತ್ಸೆಯ ಸಮಯದಲ್ಲಿ ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಯಲ್ಲಿ ದಿನಾಂಕ 17-1-2014 ರಂದು ಮೃತಪಟ್ಟಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು  ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ  ಜರುಗಿಸಿರುತ್ತಾರೆ. 

Friday, January 17, 2014


ಕೌಟುಂಬಿಕ ಕಲಹ  ದಂಪತಿ ಮೇಲೆ ಹಲ್ಲೆ:
     ಮಡಿಕೇರಿ ಗ್ರಾಮಾಂತರ ಠಾಣಾವ್ಯಾಪ್ತಿಯ  ಕಟ್ಟೆಮಾಡು ಗ್ರಾಮದಲ್ಲಿ ವಾಸವಾಗಿರುವ  ಸಾದೆರ  ಡಿ. ಚಿಣ್ಣಪ್ಪ ಹಾಗು ಸದರಿಯವರ ಪತ್ನಿ ಶ್ರೀಮತಿ ಡೀನಾ  ಇವರು ದಿನಾಂಕ 16-01-2014 ರಂದು ಸಮಯ ಸುಮಾರು 05-30 ಪಿ ಎಂ ಅವರ ಮನೆಯಲ್ಲಿರುವಾಗ  ಅಲ್ಲಿಗೆ ಸಾದೆರ ತಿಮ್ಮಯ್ಯ @ ಜಂಶಿ, ನಿಸಾರ್‌, ಸಾದೇರ ಜೋಯಪ್ಪ  ಹಾಗೂಸಾದೇರ ಲಕ್ಷ್ಮಣ  ಬಂದು ಡೀನಾರವರ  ಕೈ ಹಿಡಿದು ಎಳೆದಾಡಿ  ಹಲ್ಲೆನಡೆಸಿದ್ದು ಅಲ್ಲದೆ  ಕತ್ತಿನಲ್ಲಿದ್ದ  ಸುಮಾರು 12 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಕಸಿದುಕೊಂಡಿದ್ದು ಅಲ್ಲದೆ ಡಿ.ಚಿಣ್ಣಪ್ಪನವರ ಮೇಲೂ ಹಲ್ಲೆ ನಡೆಸಿದ್ದು ಮಡಿಕೇರಿ ಗ್ರಾಮಾಂತರ ಪೊಲೀಸರು  ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
ಆಸ್ತಿ ವಿವಾದ ಗೃಹಿಣಿ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನ:
     ಆಸ್ತಿ ವಿವಾದದ ಹಿನ್ನೆಲೆಯಲ್ಲಿ  ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಪೊನ್ನಂಪೇಟೆ ಠಾಣೆ ವ್ಯಾಪ್ತಿಯ ಕಾನೂರು ಗ್ರಾಮದಲ್ಲಿ ನಡೆದಿದೆ.  ಕಾನೂರು ಗ್ರಾಮದ ನಿವಾಸಿ ಶ್ರೀಮತಿ ಮರಾಠಿಗ್ರ ಎ. ಅನುಜ ಎಂಬವರಿಗೆ ಹಾಗೂ ಅವರ ನೆರೆಯ ಚೆರಿಯಂಡ ನಾಣಯ್ಯ ರವರ ಮಗ ರವಿಂದ್ರ ರವರಿಗೂ  ಆಸ್ತಿ ವಿಚಾರದಲ್ಲಿಸುಮಾರು ವರ್ಷಗಳಿಂದ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿರುವುದಾಗಿದೆ. ದಿನಾಂಕ 17/01/2014 ರಂದು ಶ್ರೀಮತಿ ಅನುಜರವರು ಹಾಗೂ ಅವರ ನಾದಿನಿ ಸುನೀತ ಅವರ ಗಂಡ ಚಂದ್ರಶೇಖರ, ಮೈದುನನ ಹೆಂಡತಿ ವಾಣಿರವರು ಸೇರಿ ತಕರಾರಿರುವ ತೋಟದಲ್ಲಿ ಕಾಫಿ ಹಣ್ಣನ್ನು ಕುಯ್ಯುತ್ತಿದ್ದ ಸಮಯ ಬೆಳಿಗ್ಗೆ 11.00 ಗಂಟೆಗೆ ಚೆರಿಯಂಡ ರವೀಂದ್ರ ರವರು ತಕರಾರಿರುವ ಕಾಫಿ ತೋಟಕ್ಕೆ ಬಂದು ಜಗಳ ಮಾಡಿ ಅವರ ಕೈಯಲ್ಲಿದ್ದ ಬಂದೂಕಿನಿಂದ ಏಕಾಏಕಿ ಗುಂಡು ಹಾರಿಸಿದ್ದು  ಈ ಘಟನೆಯಲ್ಲಿ ಶ್ರೀಮತಿ ಅನುಜರವ್ರ ಬಲಗೈ, ಬಲತೊಡೆ, ಬೆನ್ನಿನ ಭಾಗಕ್ಕೆ, ಎಡರಟ್ಟೆಗೆ ಗಾಯವಾಗಿದ್ದು  ಗೋಣಿಕೊಪ್ಪ ಆಸ್ತತ್ರೆಯಲ್ಲಿ ಚಿಕಿತ್ಸೆಗೆದಾಖಲಾಗಿದ್ದು, ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
ಅಪಘಾತ ಪ್ರಕರಣ  ಇಬ್ಬರಿಗೆ ಗಾಯ:
ದಿನಾಂಕ: 17.01.2014 ರಂದು   ತೊರೆನೂರು ಗ್ರಾಮ, ಕುಶಾಲನಗರ ಗ್ರಾಮದ  ನಿವಾಸಿ ಟಿ.ಜೆ. ಸಣ್ಣಸ್ವಾಮಿ ಮತ್ತು ಅವರ ಸ್ನೇಹಿತ ಅಶೋಕ, ಕೆಎ-12-ಕೆ-3288 ರ ಮೋಟಾರ್ ಸೈಕಲ್‌ನಲ್ಲಿ ಸ್ವಂತ ಕೆಲಸದ ನಿಮಿತ್ತ  ಕುಶಾಲನಗರದಿಂದ ಮಡಿಕೇರಿಗೆ ಹೋಗುತ್ತಿದ್ದಾಗ ಸುಂಟಿಕೊಪ್ಪದ ಕೆದಕಲ್ ಗ್ರಾಮದ 7 ನೇ ಮೈಲಿನ ಬಳಿ ರಸ್ತೆಯಲ್ಲಿ ಹೋಗುತ್ತಿದ್ದು,ಕೆಎಸ್ಆರ್‌ಟಿಸಿ ಬಸ್‌ನ್ನು ಓವರ್‌ಟೇಕ್  ಮಾಡಿಕೊಂಡು ಮುಂದೆ ಹೋಗುವಷ್ಟರಲ್ಲಿ, ಹಿಂದಿನಿಂದ ಕೆಎ-45-ಎಸ್-1105 ಮೋಟಾರ್ ಸೈಕಲ್‌‌ನ್ನು ಅದರ ಚಾಲಕನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು  ಬಂದು  ಸಣ್ಣಸ್ವಾಮಿರವರ ಬೈಕ್‌ಗೆ ಡಿಕ್ಕಿಪಡಿಸಿದ ಪರಿಣಾಮ ಸದ್ರಿರವರು  ಮತ್ತು ಅವರ ಜೊತೆ ಇದ್ದ ಅಶೋಕ ಬೈಕ್ ಸಮೇತ  ಕೆಎಸ್ಆರ್‌ಟಿಸಿ ಬಸ್‌ನ ಮುಂಭಾಗದ ಬಲ ಟಯರ್‌ನ ಬಳಿ ಬಿದ್ದು  ಅಷ್ಟರಲ್ಲಿ ಬಸ್‌ನ ಟಯರ್ ಅಶೋಕನ ಎರಡೂ ಕಾಲುಗಳ ಮೇಲೆ ಹರಿದು, ಎರಡೂ ಕಾಲು ಮುರಿದುಹೋಗಿದ್ದಲ್ಲದೇ,  ಸಣ್ಣಸ್ವಾಮಿಯವರಿಗೆ ಸಣ್ಣಪುಟ್ಟ ಗಾಯಗಳಾಗದ್ದು, ಸುಂಟಿಕೊಪ್ಪ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿಮುಂದಿನ ತನಿಖೆಕೈಗೊಂಡಿರುತ್ತಾರೆ. 
 

Thursday, January 16, 2014ಹಳೇ ದ್ವೇಷ ವ್ಯಕ್ತಿಯ ಮೇಲೆ ಹಲ್ಲೆಗೆ ಯತ್ನ ಕೊಲೆ ಬೆದರಿಕೆ:
      ದಿನಾಂಕ:  14.01.2014 ರಂದು ಕೆ.ಎಂ.ಹಂಸ, ತಂದೆ: ಪೌತಿ ಮಹಮ್ಮದ್ ಬ್ಯಾರಿ,  ಇವರು  ಈದ್‌ಮಿಲಾದ್‌ ಹಬ್ಬದ ಪ್ರಯುಕ್ತ ಪ್ರಾರ್ಥನೆಗೆಂದು ಮನೆಯಿಂದ 7 ನೇ ಹೊಸಕೋಟೆ ಮಸೀದಿಗೆ ನಡೆದುಕೊಂಡು ಹೋಗುತ್ತಿದ್ದಾಗ, ಪದ್ಮಾವತಿ ಎಸ್ಟೇಟ್‌ನ ಕೆರೆ ಬಳಿ ರಸ್ತೆಯಲ್ಲಿ ಸಮಯ ಬೆಳಿಗ್ಗೆ 8.30 ಗಂಟೆಗೆ ಅವರ ಪರಿಚಯದ ಗುರುವ ಎಂಬುವರೊಂದಿಗೆ, ಮಾತಾನಾಡಿಕೊಂಡಿರುವಾಗ್ಗೆ, ಅಲ್ಲಿಗೆ ಕಾರಿನಲ್ಲಿ ಬಂದ ಆರೋಪಿ ಅಬೂಬಕ್ಕರ್ ಎಂಬಾತನು, ಕೆ.ಎಂ.ಹಂಸ,ರವರ  ದಾರಿ ತಡೆದು ನಿಲ್ಲಿಸಿ, ಹಳೇ ದ್ವೇಷದಿಂದ ಹಲ್ಲೆ ಮಾಡಲು ಯತ್ನಿಸಿ, ಕೈಯಿಂದ ತಳ್ಳಿ, ಅವಾಚ್ಯ ಶಬ್ದಗಳಿಂದ ಬೈಯ್ದು, ಕೊಲೆ ಬೆದರಿಕೆ ಹಾಕಿರುವುದಾಗಿಯೂ,  ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 


Wednesday, January 15, 2014

ಚಾಲಕನ ನಿಯಂತ್ರಣ ಕಳೆದು ರಸ್ತೆಯಲ್ಲಿ ಮಗುಚಿದ ವಾಹನ, ಒಬ್ಬರಿಗೆ ಗಾಯ:


     ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಚಾಲಕ ನಿಯಂತ್ರಣ ಕಳೆದುಕೊಂಡು ರಸ್ತೆಗೆ ವಾಹನ ಮಗುಚಿ ಬಿದ್ದು ಒಬ್ಬನಿಗೆ ಗಾಯಗಳಾದ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ದೇವರ ಕೊಲ್ಲಿ ಸಾರ್ವಜನಿಕ ರಸ್ತೆಯಲ್ಲಿ ನಡೆದಿದೆ. ಶ್ರೀಮತಿ ಶಾಂತಮ್ಮ,(50)  ಗಂಡ ಅಣ್ಣೇಗೌಡ, ತರಕಾರಿ ವ್ಯಾಪಾರ, ವಾಸ ಬಸವಪಟ್ಟಣ, ಅರಕಲಗೋಡು ತಾಲೋಕು, ಹಾಸನ ಇವರು ಪುತ್ತೂರಿನಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದು , ದಿನಾಂಕ 14-1-2014 ರಂದು ಕುಶಾಲನಗರದಿಂದ ಕೆಎ-12-8013್ರ ಟಾಟಾ ಏಸ್‌ ಏಸ್‌ವಾಹನದಲ್ಲಿ  ತರಕಾರಿ ತರಕಾರಿ ತುಂಬಿಸಿಕೊಂಡು ಕುಶಾಲನಗರದಿಂದ  ಪುತ್ತೂರು ಕಡೆಗೆ  ಹೋಗುತ್ತಿರುವಾಗ ಸಮಯ ಸಂಜೆ 7-45 ಗಂಟೆಗೆ ದೇವರಕೊಲ್ಲಿ ತಲುಪುಗಾಗ ಚಾಲಕ ಲಕ್ಷ್ಮಣ ಎಂಬಾತನು ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿ  ವಾಹನದ ನಿಯಂತ್ರಣ ಕಳೆದುಕೊಂಡು ವಾಹನ ರಸ್ತೆಯ ಮೇಲೆ ಮಗುಚಿ ಬಿದ್ದ  ಪರಿಣಾಮ ಶ್ರೀಮತಿ ಶಾಂತಮ್ಮರವರ ಬಲದ ಕೈ, ಹಣೆ ಗಾಯಗಳಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ

ವಿಪರೀತ ಮದ್ಯ ಸೇವನೆ ವ್ಯಕ್ತಿಯ ಸಾವು:

     ಸಿದ್ದಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಹೊಸೂರು ಬೆಟ್ಟಗೇರಿ ಗ್ರಾಮದ ನಿವಾಸಿ ಅರುಣ್‌ ಚೆಂಬಪ್ಪ ಎಂಬುವವರ ಲೈನ್‌ ಮನೆಯಲ್ಲಿ ವಾಸವಾಗಿರುವ  ನಂಜನಗೂಡು  ಮೂಲಕ ವ್ಯಕ್ತಿ  27 ವರ್ಷ ಪ್ರಾಯದ ಪುಟ್ಟಸ್ವಾಮಿ ಎಂಬಾತ  ವಿಪರೀತ ಮದ್ಯ ಸೇವನೆ ಮಾಡುತ್ತಿದ್ದು, ದಿನಾಂಕ 10-1-2014 ರಂದು  ತುಂಬಾ ಮದ್ಯವನ್ನು ಸೇವಿಸಿ ಅಸ್ವಸ್ಥನಾಗಿದ್ದು  ಗೋಣಿಕೊಪ್ಪ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ದಿನಾಂಕ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 14-1-2014 ರಂದು ಮೃತಪಟ್ಟಿದ್ದು ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ. 

ತಾಯಿಯ ಮೇಲೆ ಮನನಿಂದ ಹಲ್ಲೆ:

     ಮಗನೇ ತನ್ನ ತಾಯಿಯ ಮೇಲೆ ಹಲ್ಲೆ ಹಲ್ಲೆನಡೆಸಿದ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಬಾಡಗ ಗಾಣಂಗಾಲ ಗ್ರಾಮದ ಕಾಡಾಂಗಡಿ ಪೈಸಾರಿಯಲ್ಲಿ ನಡೆದಿದೆ.  ದಿನಾಂಕ 13-1-2014 ರಂದು ಶ್ರೀಮತಿ ಲಕ್ಷ್ಮಿ, (40) ಇವರು ತನ್ನ ವಾಸದ ಮನೆಯಲ್ಲಿರುವಾಗ ಅವರ ಮಗ ರವಿ ಎಂಬಾತ ತಾಯಿ ಲಕ್ಷ್ಮಿಯೊಂದಿಗೆ ಜಗಳ ಮಾಡಿ ಏಕೆ ನನಗೆ ಬೈದೆ ಎಂದು ಹೇಳಿ ಕಾಲಿನಿಂದ ಎದೆಗೆ ಒದ್ದು, ಬೀರ್‌ ಬಾಟಲಿಯಿಂದ ತಲೆಗೆ ಹೊಡೆದು ನೋವನ್ನುಂಟು ಮಾಡಿದ್ದು, ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

Tuesday, January 14, 2014

ಮರದಿಂದ ಕಾಲು ಜಾರಿ ಬಿದ್ದು ವ್ಯಕ್ತಿಯ ಸಾವು 
      ತೆಂಗಿನ ಕಾಯಿ ಕುಯ್ಯಲೆಂದು ಮರ ಹತ್ತಿದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತನಾದ ಘಟನೆ ಪೊನ್ನಂಪೇಟೆ ಬಳಿಯ ಮತ್ತೂರು ಗ್ರಾಮದಲ್ಲಿ ನಡೆದಿದೆ. ಕೇರಳ ರಾಜ್ಯದ ಕೋಯಿಕ್ಕೋಡ್ ಜಿಲ್ಲೆಯ ನಿವಾಸಿ ಪಿ.ಎಸ್.ದಿವಾಕರ ಎಂಬವರು ಜಿಲ್ಲೆಯ ವಿವಿದೆಡೆ ಹಣ್ಣು, ತೆಂಗಿನ ಕಾಯಿ ಇತ್ಯಾದಿಗಳನ್ನು ಖರೀದಿಸುವ ವ್ಯಾಪಾರ ಮಾಡುತ್ತಿದ್ದು, ಅದರಂತೆ ದಿನಾಂಕ 13/01/2014ರಂದು ಪೊನ್ನಂಪೇಟೆಯ ಮತ್ತೂರು ಗ್ರಾಮದ ನಿವಾಸಿ ಮನೆಯಪಂಡ ತಿಮ್ಮಯ್ಯ ಎಂಬವರ ತೋಟದಲ್ಲಿ ತೆಂಗಿನ ಕಾಯಿ ಖರೀದಿಸಿದ್ದು ಅವುಗಳನ್ನು ಕುಯ್ಯುವ ಸಲುವಾಗಿ ಕೇರಳದ ಕೋಯಿಕ್ಕೋಡ್ ನಿವಾಸಿ ರಜಿ ಎಂಬಾತನು ಮರ ಹತ್ತಿದ್ದು, ಆಕಸ್ಮಿಕವಾಗಿ ಕಾಲು ಜಾರಿ ಮರದಿಂದ ಕೆಳಬಿದ್ದು ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದಲ್ಲಿ ವೈದ್ಯರು ಆತನು ಮೃತಪಟ್ಟಿರುವುದಾಗಿ ತಿಳಿಸಿದ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, January 13, 2014

ಪಾದಾಚಾರಿಗೆ ಕಾರ್‌ ಡಿಕ್ಕಿ:


       ಮಡಿಕೇರಿ ನಗರದ ಪುಟಾಣಿ ನಗರದ ನಿವಾಸಿ ಎ.ಪಿ. ಪ್ರಶಾಂತ್‌ (31) ಇವರು ದಿನಾಂಕ 12-1-2014 ರಂದು ಮಡಿಕೇರಿ ನಗರದ ಜಿ.ಟಿ. ವೃತ್ತದ ಬಳಿ ನಿಂತಿರುವಾಗ ಮೈಸೂರು ಕಡೆಯಿಂದ ಬಂದ ಕೆಎ-12 ಕೆಎ-12 ಎನ್‌-6276 ಸಂಖ್ಯೆಯ ಕಾರನ್ನು ಅದರ ಚಾಲಕ ಅತೀ ವೇಗ ಹಾಗು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು  ಪ್ರಶಾಂತ್‌ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾಲಿಗೆ ಗಾಯವಾಗಿದ್ದು ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು,  ಮಡಿಕೇರಿ ಟ್ರಾಫಿಕ್‌ ಪೊಲೀಸರು  ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ:

ದಿನಾಂಕ 10.01.2014ರಂದು ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ ಇಂಜಲಗೇರೆ ಪುಲಿಯೇರಿ ಗ್ರಾಮದ ನಿವಾಸಿ ರೋಶಿತ್ ಎಂಬುವವರು ಕೊಡಗು ಬಂದ್ ಇದ್ದುದರಿಂದ ಸಮಯ 18.00 ಗಂಟೆಗೆ ಸ್ನೇಹಿತರಾದ ನಿತೀಶ್ , ಉಣ್ಣಿ ಕೃಷ್ಣ, ಧನೀಶ್ ರವರು ಪುಲಿಯೇರಿ ಗ್ರಾಮದಲ್ಲಿರುವ ಅಂಗಡಿಯ ಹತ್ತಿರ ನಿಂತುಕೊಂಡು ಮಾತನಾಡಿಕೊಂಡಿರುವಾಗ್ಗೆ ಅವರಿಗೆ ಪರಿಚಯವಿರುವ ಜಿತೇಶ್, ಹರೀಶ್ ಎಂಬುವವರು  ಪಲ್ಸರ್ ಬೈಕ್ ನಂ ಕೆಎ -12  ಹೆಚ್ -9728ರಲ್ಲಿ ಅಲ್ಲಿಗೆ ಬಂದಿದ್ದು,  ಅದೇ  ಸಮಯಕ್ಕೆ   ಫಾಜಿಲ್, ಅಮೀರ್, ಅನೀಶ್ , ಸಫೀರ್ ರವರುಗಳು ಸಫೀರ್ ರವರ ಬಾಪ್ತು ಸ್ವರಾಜ್ ಮಾಜ್ದಾ  ವ್ಯಾನ್ ಕೆಎಲ್ -59 -574ರಲ್ಲಿ ಅಲ್ಲಿಗೆ ಬಂದು   ಅವರ ಪೈಕಿ  ಜಿತೇಶ್‌ ಎಂಬಾತನು ರೋಶಿತ್‌ನನ್ನು ಕುರಿತು ನೀವುಗಳೆಲ್ಲರು ಸೇರಿಕೊಂಡು ಬಸ್ಸ್ ನಿಲ್ದಾಣಕ್ಕೆ ಬರುವ ಹುಡುಗಿಯವರನ್ನು ಚುಡಾಯಿಸಲು ಬಂದಿದ್ದೀರಾ ಸುಮ್ಮನೆ ನಾವುಗಳು ಹುಡುಗಿಯನ್ನು ಚುಡಾಯಿಸುತ್ತಾರೆ ಎಂದು ಪಂಚಾಯ್ತಿಗೆ ಪುಕಾರು ನೀಡಿರುತ್ತೀರಿ ಎಂದುಹೇಳಿ ಬೈಕ್ ನಲ್ಲಿದ್ದ ಕಬ್ಬಿಣದ ರಾಡನ್ನು ತೆಗೆದು ರೋಶಿತ್‌ನ ಬಲ ಕಾಲಿಗೆ ಮತ್ತು ಸೊಂಟಕ್ಕೆ ಹೊಡೆದಿದ್ದು, ಅಲ್ಲದೆ ಅವರ ಜೊತೆಯಲ್ಲಿದ್ದವರ ಮೇಲೂ ಹಲ್ಲೆ ನಡೆಸಿದ್ದು, ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 
ಕ್ಷುಲ್ಲಕ ಕಾರಣಕ್ಕೆ ಮಹಿಳೆ ಮೇಲೆ ಹಲ್ಲೆ:
ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಅಮ್ಮತ್ತಿ- ಒಂಟಿಯಂಗಡಿಯಲ್ಲಿ ವಾಸವಾಗಿರುವ ಶ್ರೀಮತಿ ವಿ.ಜಿ. ಜಯಮ್ಮರವರು ದಿನಾಂಕ: 12-01-14ರಂದು ಸಮಯ 16-00ಗಂಟೆಯ ಸಮಯದಲ್ಲಿ  ಕಾಫಿ ತೋಟದ ಕೆಲಸಕ್ಕೆ ಹೋಗಿ ವಾಪಾಸ್ಸು ಮನೆಗೆ ಬಂದಾಗ ಮನೆಯ ಮುಂದಿಟ್ಟಿದ್ದ ಹೂವಿನ ಕುಂಡವನ್ನು ಒಡೆದು ಹಾಕಿರುವುದನ್ನು ಕಂಡು ಆರೋಪಿಗಳಾದ ಶಶಿಕಲಾ ಎಂಬವರೊಂದಿಗೆ  ಏಕೆ ಹೂವಿನ ಕುಂಡವನ್ನು ಒಡೆದು ಹಾಕಿರುವುದು ಎಂದು ಕೇಳಿದ್ದು ಈ ವಿಚಾರವಾಗಿ ಅವರಿಬ್ಬರ ಮಡುವೆ ಜಗಳವಾಗಿದ್ದು ಇದನ್ನು ಕೇಳಿದ ಶಶಿಕಲಾರವರ ಗಂಡ ಮನೋಜ್‌ ಮನೆಯಿಂದ ಹೊರಗೆ ಬಂದು ಏಕಾಏಕಿ ಜಯಮ್ಮನವರ ಬಲದ ಕೆನ್ನೆಗೆ ಕೈಯಿಂದ ಹೊಡೆದು ದೂಡಿ ಕೆಳಗೆ ಬೀಳಿಸಿದಾಗ ಶಶಿಕಲಾ ಅಲ್ಲೇ ಇದ್ದ ಒಂದು ಕಾಡು ಮರದ ದೊಣ್ಣೆಯಿಂದ ಜಯಮ್ಮನವರ ತಲೆಯ ಹಿಂಭಾಗಕ್ಕೆ  ಹೊಡೆದು ರಕ್ತ ಗಾಯಪಡಿಸಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 

Saturday, January 11, 2014

ಹಲ್ಲೆ ಪ್ರಕರಣಗಳು:


   
      ಮಡಿಕೇರಿ ನಗರದ ಇಂದಿರಾನಗರದ ನಿವಾಸಿ ವಿನಯ್‌ಕುಮಾರ್‌ ಎಂಬುವವರು ದಿನಾಂಕ 10-1-2014 ರಂದು ಮಡಿಕೇರಿ ನಗರದ ಜಿ.ಟಿ. ವೃತ್ತದಲ್ಲಿ  ಇರುವಾಗ್ಗೆ ಕೆಎ-12-ಎಂ.ಎಂ.6866ರ ಕಾರಿನಲ್ಲಿ ಬಂದು  ವಿನಯ್‌ಕುಮಾರ್‌ ಮೇಲ್ ಹಲ್ಲೆ ಗೆ ಯತ್ನಿಸಿದ್ದು ನಂತರ ಅವರ ಕಾಲಿನ ಪಾದದ ಮೇಲೆ ಕಾರನ್ನು ಚಲಾಯಿಸಿ ಗಾಯಪಡಿಸಿದ್ದು, ಅಲ್ಲದೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದು, ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
 

     ದಿನಾಂಕ 10-01-2014 ರಂದು ಮಡಿಕೇರಿ ನಗರದ ತ್ಯಾಗ್ರಾಜ ಕಾಲೋನಿ ನಿವಾಸಿಯಾದ  ತಮ್ಲಿಕ್‌ ತಮ್ಲಿಕ್‌ದಾರ್ಮಿ ಎಂಬವವರು  ತನ್ನ ಸ್ನೇಹಿತರಾದ ಇಮ್ರಾನ್ ಖಾನ್, ಸಿದ್ದಿಕ್, ಮತ್ತು ಬಷೀರ್‌ರವರೊಂದಿಗೆ ಕಾರಿನಲ್ಲಿ ಬಂದು ಜಿ.ಟಿ ವೃತ್ತದಲ್ಲಿ ಸುಮಾರು ಜನರು ರಸ್ತೆ ತಡೆ ಮಾಡುತ್ತಿದ್ದುದರಿಂದ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ನಡೆದು ಕೊಂಡು ಹೋಗುತ್ತಿರುವಾಗ್ಗೆ ಸಮಯ 15.45 ಗಂಟೆಗೆ ಜಿ,ಟಿ ವೃತ್ತದ ಹತ್ತಿರ ತಲುಪುವಾಗ್ಗೆ ಅಲ್ಲಿ ನೆರೆದಿದ್ದ ಸುಮಾರು 20 ರಿಂದ 25 ಜನರು ಬಂದು ಕೈಯಿಂದ ಹೊಡೆದು ಕಾಲಿನಿಂದ ಒದ್ದು, ನೋವುಂಟು ಮಾಡಿ, ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿದ್ದು   ಹಲ್ಲೆ ಮಾಡಿದವರಲ್ಲಿ ಅಜಿತ್ ಕುಮಾರ್, ಅರುಣ್ ಶೆಟ್ಟಿ ಸುಕುಮಾರ್, ಗುರು, ಕುಶ, ಗಣೇಶ, ಸುನಿಲ್, ಸತ್ಯ ಮತ್ತು ಇತರರು ಇದ್ದು ಇವರ ವಿರುಧ್ದ  ಮಡಿಕೇರಿ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ  ಕ್ರಮ ಕೈಗೊಂಡಿರುತ್ತಾರೆ. 


ಜೀವನದಲ್ಲಿ ಜಿಗುಪ್ಸೆ, ವೃದ್ದರೊಬ್ಬರ ಆತ್ಮಹತ್ಯೆ:
      ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಹೊಸ್ಕೇರಿ ಗ್ರಾಮದ ನಿವಾಸಿ ಕೆ.ಸಿ. ಪೊನ್ನಪ್ಪ (60) ಇವರು ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರವನ್ನು ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ. 
Thursday, January 9, 2014

ಪತಿಯಿಂದ ಪತ್ನಿಯ ಮೇಲೆ ದೌರ್ಜನ್ಯ:


        ವ್ಯಕ್ತಿಯೋರ್ವ ತನ್ನ ಪತ್ನಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿ ಹಲ್ಲೆ ನಡೆಸಿದ ಬಗ್ಗೆ ಭಾಗಮಂಡಲ ಠಾಣಾ ವ್ಯಾಪ್ತಿಯ ಬೇಂಗೂರು ಗ್ರಾಮದಲ್ಲಿ ನಡೆದಿದೆ.  ಬೇಂಗೂರು ಗ್ರಾಮದಲ್ಲಿ ವಾಸಮಾಡಿಕೊಂಡಿರುವ ಮಂಜು ಎಂಬುವವರು  ತನ್ನ ಪತ್ನಿ  ಜೇನುಕುರುಬರ ಕಾವ್ಯಾ ಎಂಬುವವರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು ದಿನಾಂಕ 8-1-2013 ರಂದು  ಮನೆಮನೆಯಿಂದ ಹಣ ತಂದುಕೊಡು ಎಂದು  ಹೇಳಿ  ಕೈಗಳಿಂದ ಹಲ್ಲೆ ನಡೆಸಿ ಬಲ ಕಣ್ಣಿಗೆ ಗಾಯಪಡಿಸಿದ್ದು, ಭಾಗಮಂಡಲ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.


ಸ್ಕೂಟರ್‌ಗೆ ಜೀಪು ಡಿಕ್ಕಿ,ಡಿಕ್ಕಿ,ಒಬ್ಬರಿಗೆ ಗಾಯ:


     ಸ್ಕೂಟರ್‌ನಟರ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪಿಕ್‌ಅಪ್‌ ಜೀಪೊಂದು ಡಿಕ್ಕಿಯಾಗಿ ವ್ಯಕ್ತಿಯೊಬ್ಬ ಗಾಯಗೊಂಡ ಘಟನೆ ನಡೆದಿದೆ.  ಟಿ.ಎ. ಟಿಮ್ಸನ್‌ ಎಂಬುವವರು  ದಿನಾಂಕ 08-01-2014 ರಂದು ತಮ್ಮ ಅಜ್ಜಿ ತೀರಿಕೊಂಡಿದ್ದರಿಂದ ತಮ್ಮ ಮಾವ ದಿನೇಶ್‌‌ರವರ ಬಾಪ್ತು ಕೆಎ-12-ಕೆ-8436 ರ ಹೋಂಡಾ ಆಕ್ಟೀವಾ ಸ್ಕೂಟರ್‌‌ನಲ್ಲಿ ದಿನೇಶ್‌‌‌ರವರು ಚಾಲನೆ ಮಾಡಿಕೊಂಡು ಮೂರ್ನಾಡು ಕಡೆಗೆ ಹೋಗುತ್ತಿರುವಾಗ್ಗೆ ಸಮಯ 1-00 ಪಿ.ಎಂ.ಗೆ ಮೇಕೇರಿ ಗ್ರಾಮದ ಮಡಿಕೇರಿ-ಮೂರ್ನಾಡು ಮುಖ್ಯ ರಸ್ತೆಯಲ್ಲಿ ಎದುರುಗಡೆಯಿಂದ ಬಂದ ಕೆಎ-12-ಎ-6812 ರ ಪಿಕ್‌ಆಪ್‌ ಜೀಪಿನ ಚಾಲಕ ದೇವಯ್ಯ ಎಂಬುವವರು ಜೀಪನ್ನು ಅತಿವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಟಿ.ಎ. ಟಿಮ್ಸನ್‌ರವರ ಬಲಕಾಲಿನ ಮಂಡಿಯ ಕೆಳಭಾಗಕ್ಕೆ ಗಾಯ ನೋವುಂಟಾಗಿದ್ದು  ಚಿಕಿತ್ಸೆಯ ಬಗ್ಗೆ ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು,  ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿರುತ್ತಾರೆ. 
ಅಕ್ರಮ ಮರಗಳ ಸಾಗಾಟ,  ಮಾಲು ಸಮೇತ ಆರೋಪಿಗಳ ಬಂಧನ:


    ಕುಟ್ಟ ಪೊಲೀಸ್‌ ಠಾಣಾಧಿಕಾರಿ ಕೆ.ಪಿ. ಹರಿಶ್ಚಂದ್ರ ರವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ  ದಿನಾಂಕ 08-01-2014 ರಂದು ಸಮಯ ಬೆಳಿಗ್ಗೆ 05.30 ಗಂಟೆಗೆ  ಅವರು ಸಿಬ್ಬಂದಿಯವರೊಂದಿಗೆ ಠಾಣಾ ಸರಹದ್ದಿನ ಕೋತೂರು ಗ್ರಾಮದ ಮಹದೇಶ್ವರ ದೇವಸ್ತಾನದ ಬಳಿ ಸಾರ್ವಜನಿಕ ರಸ್ತೆಯಲ್ಲಿ  ಆರೋಪಿಗಳಾದ  ಗೋಣಿಕೊಪ್ಪ ವಾಸಿಗಳಾದ ಕೆ.ಟಿ..ಶಿಯಾಬ್‌, ಎ.ಬಿ. ಸಾಜನ್‌ ಹಾಗು ಪಿ.ಕೆ. ನೈಜು ಎಂಬುವವರು  ಕೆ.ಎ-12-2043 ರ ಸ್ವರಾಜ್ ಮಜ್ದಾ ವಾಹನದಲ್ಲಿ ಸರ್ಕಾರದ ಯಾವುದೇ ಪರವಾನಿಗೆ ಇಲ್ಲದೆ ರೂ. 50,000=00 ಬೆಲೆಯ ನಂದಿ ಮರದ 14 ಧಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ವಾಹನ ಹಾಗೂ ಮರಗಳನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

Monday, January 6, 2014

ವಿಪರೀತ ಮದ್ಯಪಾನ ಸೇವನೆ ವ್ಯಕ್ತಿಯ ಸಾವು:

      ಪೊನ್ನಂಪೇಟೆ ಪೊಲೀಸ್‌‌ ಠಾಣಾ ಸರಹದ್ದಿನ ದೇವರಪುರ ಗ್ರಾಮದ ವಾಸಿ  ಕುಮಾರರವರಿಗೆ ((48) ಎಂಬುವವರಿಗೆ ವಿಪರೀತ ಕುಡಿಯುವ ಚಟವಿದ್ದು ದಿನಾಂಕ 04/01/2014  ರಾತ್ರಿ ಮನೆಗೆ ಬರದೇ ಇದ್ದು ವಿಪರೀತ  ಮದ್ಯಪಾನ ಮಾಡಿದ್ದು  ದಿನಾಂಕ 05/01/2014 ರಂದು ಬೆಳಿಗ್ಗೆ ಎಸ್ಟೇಟ್‌ನ ಆಪೀಸ್ ಪಕ್ಕ ಕಾಫಿ ತೋಟದ ಬಳಿ ವಾಂತಿ ಮಾಡುತ್ತಾ ಪ್ರಜ್ಞೆ ಇಲ್ಲದೆ ಬಿದ್ದಿರುವುದು ಕಂಡುಬಂದಿದ್ದು ಆತನನ್ನು  ಗೋಣಿಕೊಪ್ಪಲು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ 11.30 ಗಂಟೆಗೆ ಮೃತಪಟ್ಟಿದ್ದು  ಪೊನ್ನಂಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ